Tag: nice road

  • ಬೆಂಗಳೂರು ಮಹಾಮಳೆಗೆ ಮತ್ತೊಂದು ಬಲಿ

    ಬೆಂಗಳೂರು ಮಹಾಮಳೆಗೆ ಮತ್ತೊಂದು ಬಲಿ

    ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದಿರುವ ಭಾರೀ ಮಳೆಗೆ (Rain) ಮತ್ತೊಂದು ಬಲಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಸೋಮವಾರ ಬಿದ್ದಿರುವ ಭಾರೀ ಮಳೆಗೆ ಫಕ್ರುದ್ದೀನ್ ಸಾವನ್ನಪ್ಪಿದ್ದಾರೆ. ಘಟನೆ ನೈಸ್ ರಸ್ತೆಯ (NICE Road) ಕಾಚೋಹಳ್ಳಿಯ ಅಂಡರ್ ಪಾಸ್ ಬಳಿ ನಡೆದಿದೆ.

    ಸೋಮವಾರ ಕೆಲಸ ಮುಗಿಸಿಕೊಂಡು ರಾಮನಗರ ಕಡೆಗೆ ಬೈಕ್‌ನಲ್ಲಿ ಫಕ್ರುದ್ದೀನ್ ತೆರಳುತ್ತಿದ್ದರು. ಈ ವೇಳೆ ಕಾಚೋಹಳ್ಳಿ ಅಂಡರ್ ಪಾಸ್ ಮೇಲಿನ ನೈಸ್ ರೋಡ್ ಮೇಲೆ ಸಂಚರಿಸುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ನೈಸ್ ರಸ್ತೆಯಲ್ಲಿ ಬಿದ್ದಿದ್ದರು. ಇದನ್ನೂ ಓದಿ: ಇನ್ನೂ ಮೂರು ದಿನ ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ

    ಫ್ರಕ್ರುದ್ದೀನ್‌ನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಇದಕ್ಕೂ ಮುನ್ನ ಭಾನುವಾರ ನಗರದಲ್ಲಿ ಸುರಿದಿದ್ದ ಮಹಾಮಳೆಗೆ ಕೆಪಿ ಅಗ್ರಹಾರದ ಬಳಿ ಯುವಕನೊಬ್ಬ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ. ಕೆಆರ್ ಸರ್ಕಲ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಯುವತಿಯೊಬ್ಬರ ಸಾವೂ ಆಗಿತ್ತು. ಇದನ್ನೂ ಓದಿ: ಆರ್‌ವಿ ರಸ್ತೆ, ಬೊಮ್ಮಸಂದ್ರ ಪ್ರಯಾಣಿಕರಿಗೆ ಗುಡ್ ನ್ಯೂಸ್ – ವರ್ಷಾಂತ್ಯಕ್ಕೆ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭ

  • ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್

    ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್

    ನೆಲಮಂಗಲ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ಮಾಡುವುದನ್ನು ವಾಪಸ್ ಪಡೆಯಲಾಗಿದೆ.

    ಜುಲೈ 1 ರಿಂದ ಶುಲ್ಕ ಹೆಚ್ಚಳ ಮಾಡಿವುದಗಿ ನೈಸ್ ಟೋಲ್ ಕಂಪನಿ ಹೇಳಿತ್ತು. ಹೊಸೂರು ರಸ್ತೆಯಿಂದ ತುಮಕೂರು ರಸ್ತೆಯವರಿಗಿನ ನೈಸ್ ಟೋಲ್ ರಸ್ತೆ, ಮಾಗಡಿ ರಸ್ತೆ, ಮೈಸೂರು ರಸ್ತೆ, ಕನಕಪುರ ರಸ್ತೆ, ಬನ್ನೇರುಘಟ್ಟ ರಸ್ತೆಯ ಟೋಲ್ ಗೆ ಅನುಗುಣವಾಗಿ ಟೋಲ್ ಶುಲ್ಕ ಹೆಚ್ಚಿಳ ಮಾಡುವುದಾಗಿ ಪ್ರಕಟಣೆ ಹೊರಡಿಸಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಕಾರಣದಿಂದ ಶುಲ್ಕ ಏರಿಕೆಯನ್ನ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

    NICE Road

    ಈ ಮೂಲಕ ಹೊಸ ದರ ಪಟ್ಟಿಯನ್ನು ನೈಸ್ ಸಂಸ್ಥೆ ತಾತ್ಕಾಲಿಕವಾಗಿ ತಡೆಹಿಡಿದಿದ್ದು, ವಾಹನ ಸವಾರರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಮುಂದಿನ ವಾರದಲ್ಲಿ ಮತ್ತೆ ಏರಿಕೆ ಸಾಧ್ಯತೆ ಇದೆ. ಇದನ್ನೂ ಓದಿ: ಅಧಿಕಾರಕ್ಕಾಗಿ ಶಿವಸೇನೆ ಹುಟ್ಟಿಲ್ಲ, ಶಿವಸೇನೆಗಾಗಿ ಅಧಿಕಾರ ಹುಟ್ಟಿದೆ: ಸಂಜಯ್ ರಾವತ್

    ಟೋಲ್ ದರ:
    ಹೊಸೂರು ಟು ಬನ್ನೇರುಘಟ್ಟ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 125, ಟ್ರಕ್: 85, ಎಲ್‍ಸಿವಿ: 45, ಎಂಎವಿ: 90 ರೂ.

    ಬನ್ನೇರುಘಟ್ಟ ಟು ಕನಕಪುರ ರಸ್ತೆ: ದ್ವಿಚಕ್ರ: 12, ಕಾರು: 35, ಬಸ್: 100, ಟ್ರಕ್: 65, ಎಲ್‍ಸಿವಿ: 35, ಎಂಎವಿ: 70 ರೂ.

    ಕನಕಪುರ ರಸ್ತೆ ಟು CLOVER LEAF: ದ್ವಿಚಕ್ರ: 8, ಕಾರು: 25, ಬಸ್: 65, ಟ್ರಕ್: 40, ಎಲ್‍ಸಿವಿ: 25, ಎಂಎವಿ: 40 ರೂ.

    ಕ್ಲವರ್ ಲೀಫ್ ಟು ಮೈಸೂರು ರಸ್ತೆ: ದ್ವಿಚಕ್ರ: 8, ಕಾರು: 20, ಬಸ್: 55, ಟ್ರಕ್: 35, ಎಲ್‍ಸಿವಿ: 25, ಎಂಎವಿ: 40 ರೂ.

    ಮೈಸೂರು ರಸ್ತೆ ಟು ಮಾಗಡಿ ರಸ್ತೆ: ದ್ವಿಚಕ್ರ: 20, ಕಾರು: 45, ಬಸ್: 135, ಟ್ರಕ್: 90, ಎಲ್‍ಸಿವಿ: 55, ಎಂಎವಿ: 95 ರೂ.

    ಮಾಗಡಿ ರಸ್ತೆ ಟು ತುಮಕೂರು ರಸ್ತೆ: ದ್ವಿಚಕ್ರ: 12, ಕಾರು: 40, ಬಸ್: 105, ಟ್ರಕ್: 70, ಎಲ್‍ಸಿವಿ: 40, ಎಂಎವಿ: 75 ರೂ.

    ಲಿಂಕ್ ರಸ್ತೆ: ದ್ವಿಚಕ್ರ: 18, ಕಾರು: 50, ಬಸ್: 130, ಟ್ರಕ್: 90, ಎಲ್‍ಸಿವಿ: 50, ಎಂಎವಿ: 105 ರೂ.

    Live Tv

  • ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

    ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು

    ಬೆಂಗಳೂರು: ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನೈಸ್ ರಸ್ತೆಯಲ್ಲಿ ನಡೆದಿದೆ.

    ಸುಮುಖ್ (22), ಲೀನಾ ನಾಯ್ಡು (19) ಮೃತ ದುರ್ದೈವಿಗಳು. ಸುಮುಖ್ ಸಂಜೆ 5 ಗಂಟೆ ಸುಮಾರು ಲೀನಾರ ಜೊತೆಗೆ ಕಾರಿನಲ್ಲಿ ಪಿಇಎಸ್ ಕಾಲೇಜು ಕಡೆಯಿಂದ ನೈಸ್ ರೋಡ್ ಮುಖಾಂತರ ಸೋಂಪುರ ಕಡೆ ಅತಿವೇಗವಾಗಿ ಕಾರು ಚಲಾಯಿಸಿದ್ದಾನೆ. ಈ ವೇಳೆ ನೈಸ್ ರಸ್ತೆಯ ಬಿಡಿಎ ಟೋಲ್ ಬಳಿ ಕಾರು ನಿಯಂತ್ರಣ ತಪ್ಪಿ ಪಕ್ಕದ ರಸ್ತೆಯಲ್ಲಿ ಬರುತ್ತಿದ್ದ ಬಸ್‍ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ಪರಿಣಾಮ ಹಿಂದೆ ಇದ್ದ ಬರುತ್ತಿದ್ದ ಮತ್ತೊಂದು ಕಾರು ಕೂಡಾ ಪಲ್ಟಿಯಾಗಿದೆ.

    ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಿನಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿ ಹೋಗಿದ್ದು ಬಸ್ ಚಾಲಕನ ಎರಡು ಕಾಲುಗಳು ತುಂಡಾಗಿದೆ. ಬೇರೊಂದು ಕಾರಿನಲ್ಲಿದ್ದ ಮೂವರಿಗೆ ಗಂಭೀರ ಗಾಯಗಳಾಗಿವೆ. ಹೋಂಡಾ ಸಿಟಿ ಕಾರ್‍ನಲ್ಲಿದ್ದ ಸುಮುಖ್, ಲೀನಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

    ಇಬ್ಬರು ಬೇರೆ ಬೇರೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಲೀನಾ ಪಿಇಎಸ್ ಕಾಲೇಜ್‍ನಲ್ಲಿ ಬಿಸಿಎ, ಸುಮುಖ್ ರಾಮಯ್ಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದರು. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್ – ಆರ್.ಅಶೋಕ್

    ನೈಸ್ ಯೋಜನೆಗೆ ನೀಡಿದ್ದ 543 ಎಕರೆ ಭೂಮಿ ವಾಪಸ್ – ಆರ್.ಅಶೋಕ್

    ಬೆಂಗಳೂರು: ನೈಸ್ ಯೋಜನೆಗೆ ನೀಡಲಾಗಿರುವ 543 ಎಕರೆ ಹೆಚ್ಚುವರಿ ಭೂಮಿಯನ್ನು ಹಿಂಪಡೆಯುವ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು.

    ಸಭೆಯಲ್ಲಿ ಮಾತನಾಡಿದ ಸಚಿವ ಆರ್.ಅಶೋಕ್, ನೈಸ್ ರಸ್ತೆ ದೊಡ್ಡ ಸಮಸ್ಯೆಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರದಲ್ಲಿ ನೈಸ್ ರಸ್ತೆಗೆ ಬೇಕಾದ ಎಲ್ಲ ಮಂಜೂರಾತಿ ಮಾಡಲಾಗಿತ್ತು. ಅದು ಅವರ ಪಾಪದ ಕೂಸು. ಈಗ ಅದರಿಂದ ಯಾವುದೇ ಉಪಯೋಗ ಆಗ್ತಿಲ್ಲ. ಬೆಂಗಳೂರು ಜನತೆಗೆ ದೊಡ್ಡ ಹೊರೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸ್ಪೇನ್‍ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಕೃಷಿ ವಸ್ತುಪ್ರದರ್ಶನ ಮೇಳಕ್ಕೆ ಎಸ್.ಟಿ.ಸೋಮಶೇಖರ್ ಪ್ರವಾಸ

    NICE Road

    ಬೆಂಗಳೂರಿನಲ್ಲಿ ಕಾಂಕ್ರಿಟ್ ರಸ್ತೆ ಆಗಬೇಕಿತ್ತು. ಈವರೆಗೂ ಮಾಡಿಲ್ಲ. ಕ್ರಾಸ್ ರೋಡ್ ಪಾಸ್ ಆಗುವ ಬ್ರಿಡ್ಜ್ ಮಾಡುವುದರಲ್ಲೂ ನಿಯಮ ಉಲ್ಲಂಘನೆ ಆಗಿದೆ. ಹಾಗಾಗಿ, ನೈಸ್‌ಗೆ ಈ ಹಿಂದೆ ನಿಗದಿ ಮಾಡಿದ್ದ ಹೆಚ್ಚುವರಿ ಭೂಮಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಲು ಚರ್ಚೆಯಾಗಿದೆ. ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲು ಸಂಪುಟ ಉಪಸಮಿತಿ ತೀರ್ಮಾನ ಮಾಡಿದೆ ಎಂದು ಅಶೋಕ್ ಸ್ಪಷ್ಟಪಡಿಸಿದರು. ಇದನ್ನೂ ಓದಿ: ಜಗತ್ತನ್ನು ನೋಡಲು ಅವಕಾಶ ಕಲ್ಪಿಸುವ ಶ್ರೇಷ್ಠ ಕಾರ್ಯವೇ ನೇತ್ರದಾನ: ಬಿ.ಸಿ.ನಾಗೇಶ್

    NICE Road 1

    ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಮಾತನಾಡಿ, ನೈಸ್‌ಗೆ 543 ಎಕರೆ ಹೆಚ್ಚುವರಿ ಭೂಮಿ ಕೊಡಲಾಗಿದೆ. ಅದನ್ನು ಹಿಂಪಡೆಯುವ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗುವುದಿಲ್ಲ. 15 ದಿನಗಳಲ್ಲಿ ಇನ್ನೊಂದು ವರದಿ ನೀಡುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದೇವೆ. ಆ ವರದಿ ಬಂದ ಬಳಿಕ ಇನ್ನೊಂದು ಸಭೆಯಲ್ಲಿ ನೈಸ್‌ಗೆ ಸಂಬಂಧಪಟ್ಟಂತೆ ಕೆಲ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ತನಿಖೆಗೆ ಸಹಕರಿಸದ ಪ್ರಿಯಾಂಕ್‌ ಖರ್ಗೆಯಿಂದ ಪಲಾಯನವಾದ: ಅರಗ ಜ್ಞಾನೇಂದ್ರ ಕಿಡಿ

    ಸಭೆಯಲ್ಲಿ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಉಪಸ್ಥಿತರಿದ್ದರು.

  • ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನಿಷೇಧ

    ಬೆಂಗಳೂರು: ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ ಸಂಚಾರಕ್ಕೆ ನೈಸ್ ಸಂಸ್ಥೆ ನಿರ್ಬಂಧ ಹೇರಲಾಗಿದೆ.

    ನೈಸ್ ಸಂಸ್ಥೆ ಈ ಕುರಿತು ಮಾಧ್ಯಮ ಪ್ರಕಟಣೆ ಮಾಡಿದ್ದು, ಸುರಕ್ಷತಾ ಕಾರಣಗಳಿಂದಾಗಿ ರಾತ್ರಿ ಸಮಯದಲ್ಲಿ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಪಾದಯಾತ್ರೆ ಕೈ ಬಿಡುವಂತೆ ಸಿದ್ದರಾಮಯ್ಯ, ಡಿಕೆಶಿಗೆ ಸಿಎಂ ಬೊಮ್ಮಾಯಿ ಪತ್ರ

    ನೈಸ್ ಆಡಳಿತ ಮಂಡಳಿಯು, ಬೆಂಗಳೂರು ನಗರ ಸಂಚಾರ ಜಂಟಿ ಆಯುಕ್ತರ ಸೂಚನೆ ಮೇರೆಗೆ ಹಾಗೂ ಪ್ರಯಾಣಿಕರ ಸುರಕ್ಷತೆಯ ದೃಷ್ಠಿಯಿಂದ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ನಿರ್ಬಂಧ ಹೇರಲಾಗಿದೆ.

     

    ಜನವರಿ 16ರಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ ಪ್ರತಿನಿತ್ಯ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ:  ಯುಪಿಯಲ್ಲಿ 50-100 ಕ್ಷೇತ್ರಗಳಲ್ಲಿ ಶಿವಸೇನೆ ಸ್ಪರ್ಧೆ- ಮೈತ್ರಿ ಮಾಡಲ್ಲ ಎಂದ ರಾವತ್

  • ನೈಸ್ ರಸ್ತೆಯಲ್ಲಿ ಭೀಕರ ಅಪಘಾತ – ರಾಗಿ ಕಣ ಮಾಡ್ತಿದ್ದ ಇಬ್ಬರು ದುರ್ಮರಣ

    ನೈಸ್ ರಸ್ತೆಯಲ್ಲಿ ಭೀಕರ ಅಪಘಾತ – ರಾಗಿ ಕಣ ಮಾಡ್ತಿದ್ದ ಇಬ್ಬರು ದುರ್ಮರಣ

    ಬೆಂಗಳೂರು: ಸಿಲಿಕಾನ್ ಸಿಟಿಯ ನೈಸ್ ರಸ್ತೆಯಲ್ಲಿ ಭೀಕರ ಕಾರು ಅಪಘಾತಕ್ಕೆ ಸ್ಥಳದಲ್ಲೇ ಇಬ್ಬರು ದಾರುಣವಾಗಿ ಸಾವಪ್ಪಿರುವ ಘಟನೆ ಕಳೆದ ರಾತ್ರಿ ಸಂಭವಿಸಿದೆ.

    ಹೊಸಕೆರೆಹಳ್ಳಿ ಹಾಗೂ ನೈಸ್ ರೋಡ್ ಜಂಕ್ಷನ್ ಬಳಿ ರಾಗಿ ಕಣ ಮಾಡುತ್ತಿದ್ದ ಬಿಂದು ಹಾಗೂ ಹೊನ್ನಮ್ಮ ಮೃತಪಟ್ಟಿದ್ದಾರೆ. ರಾತ್ರಿ ಬೈಕ್ ಅಡ್ಡ ನಿಲ್ಲಿಸಿ ಊಟ ಮಾಡುತ್ತಿದ್ದ ವೇಳೆ ವೇಗವಾಗಿ ಬಂದ ಕಾರು ಬೈಕ್‍ಗೆ ಡಿಕ್ಕಿ ಹೊಡೆದುಕೊಂಡು ಊಟ ಮಾಡುತ್ತಿದ್ದವರ ಮೈಮೇಲೆ ಹರಿದಿದೆ.

    ಈ ವೇಳೆ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಡಿಸಿಪಿ ಕುಲ್‍ದೀಪ್ ಕುಮಾರ್ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪತ್ನಿಯ ಕೊಂದು ಜನರಿಗೆ ಲಾಂಗ್ ಬೀಸಿದ ಪತಿ- ಇಬ್ಬರ ಸ್ಥಿತಿ ಗಂಭೀರ

  • ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ನೈಸ್ ರಸ್ತೆಯಲ್ಲಿ ಕಾರು ಪಲ್ಟಿ – ಪಾರ್ಟಿಯಿಂದ ಬರುವಾಗ ಅಪಘಾತ?

    ಬೆಂಗಳೂರು: ನೈಸ್ ರಸ್ತೆಯಲ್ಲಿ ಟಾಟಾ ನೆಕ್ಸಾನ್ ಕಾರು ಪಲ್ಟಿಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಯುವಕ-ಯುವತಿಯರು ಪಾರ್ಟಿ ಮುಗಿಸಿಕೊಂಡು ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ನೈಸ್ ರೋಡ್ ಬಳಿ ಬಂದಿದ್ದರು. ಈ ವೇಳೆ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರಬಹುದು ಶಂಕೆ ಎದ್ದಿದೆ. ಇದನ್ನೂ ಓದಿ:  ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಭೇಟಿ ನೀಡಬಹುದು – ಜಿಲ್ಲಾಡಳಿತದಿಂದ ನಿರ್ಬಂಧ ತೆರವು

    ಘಟನೆ ನಡೆದ ಪರಿಣಾಮ ಕಾರಿನಲ್ಲಿದ್ದ ನಾಲ್ವರು ಯುವಕ-ಯುವತಿಯರು ಕಾರನ್ನೆ ಬಿಟ್ಟು ಪರಾರಿಯಾದ ಪ್ರಾಥಮಿಕ ಮಾಹಿತಿ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದು, ಗಾಯಾಳುಗಳು ಯಾವ ಆಸ್ಪತ್ರೆಯಲ್ಲಿದ್ದಾರೆ? ಕಾರು ಯಾರಿಗೆ ಸೇರಿದ್ದು? ಎನ್ನುವ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ. ಇದನ್ನೂ ಓದಿ:  ರಾಜ್ಯದಲ್ಲೂ ಗುಜರಾತ್ ಮಾದರಿ ಸಂಪುಟ ರಚನೆಯಾದರೆ ಒಳ್ಳೆಯದು: ವಿಜಯೇಂದ್ರ

    ಪ್ರಸ್ತುತ ತನಿಖೆ ಮೂಲಕ ಈ ಕಾರು ಆಶ್ವಿನಿ ನಟರಾಜನ್ ಎನ್ನುವವರ ಹೆಸರಲ್ಲಿ ಇರುವುದು ಎಂದು ಪತ್ತೆಯಾಗಿದೆ. ಕಳೆದ ಅಕ್ಟೋಬರ್ ನಲ್ಲಿ ಕಾರಿನ ಇನ್ಯುರೆನ್ಸ್ ಮುಗಿದಿದೆ ಎಂದು ತಿಳಿದುಬಂದಿದೆ.

  • ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರು ಅರೆಸ್ಟ್

    ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರು ಅರೆಸ್ಟ್

    ಬೆಂಗಳೂರು: ನೈಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಚಂದನ್, ಸುಮಂತ್, ಲಿಖಿತ್ ಮತ್ತು ವಿನಯ್ ಎಂದು ಗುರುತಿಸಲಾಗಿದೆ. ಈ ಯುವಕರನ್ನು ಬ್ಯಾಟರಾಯನಪುರ ಸಂಚಾರಿ ಪೊಲೀಸರು ಬಂಧಿಸಿದ್ದಾರೆ. ಬ್ಯಾಟರಾಯನಪುರ ಸಂಚಾರಿ ಠಾಣಾ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಈ ನಾಲ್ವರು ಯುವಕರು ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದರು.

    ಅಲ್ಲದೇ ಒಬ್ಬ ಬೈಕ್ ಓಡಿಸುತ್ತಿದ್ದರೆ ಹಿಂದೆ ಕುಳಿತಿದ್ದವ ವ್ಹೀಲಿಂಗ್ ಮಾಡುತ್ತಿರುವುದನ್ನು ತನ್ನ ಮೊಬೈಲಿನಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನು. ಇದೀಗ ಪೊಲೀಸರು ಯುವಕರು ವ್ಹೀಲಿಂಗ್ ಮಾಡಲು ಬಳಸುತ್ತಿದ್ದ ಎರಡು ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಬಂಧಿತ ಆರೋಪಿಗಳ ವಿರುದ್ಧ ಬ್ಯಾಟರಾಯನಪುರ ಸಂಚಾರಿ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‍ಐಆರ್ ದಾಖಲಾಗಿದೆ.

  • ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್

    ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್

    ಬೆಂಗಳೂರು: ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಸಮಯ ಮುಗಿಯುತ್ತಿದ್ದಂತೆ ಪೊಲೀಸರು ಎಲ್ಲಾ ಅಂಗಡಿ, ರಸ್ತೆಗಳನ್ನು ಕ್ಲೋಸ್ ಮಾಡಿಸುತ್ತಿದ್ದಾರೆ. ಇದೀಗ ಬೆಂಗಳೂರು ಸಂಪರ್ಕಿಸುವ ನೈಸ್ ರೋಡ್ ಬಂದ್ ಮಾಡಲಾಗಿದೆ.

    ಬೆಂಗಳೂರಿಗೆ ಬರುತ್ತಿದ್ದವರು ಮತ್ತು ಬೆಂಗಳೂರಿನಿಂದ ಹೊರಟವರನ್ನು ಪೊಲೀಸರು ವಾಪಸ್ ಕಳುಹಿಸುತ್ತಿದ್ದಾರೆ. ಯಾವ ಕಡೆಯಿಂದ ಬರುತ್ತಾರೋ ಅದೇ ಮಾರ್ಗದಲ್ಲಿ ವಾಹನ ಸವಾರರನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಲ್ಲದೇ ಕೆಂಗೇರಿ ಚೆಕ್‍ಪೋಸ್ಟ್ ಬಳಿ ನೈಸ್ ರೋಡ್‍ಗೆ ಜೆಸಿಪಿ ಮೂಲಕ ಮಣ್ಣಿನ ರಾಶಿ ಹಾಕಿ ರಸ್ತೆಯನ್ನು ನಿರ್ಮಿಸುತ್ತಿದ್ದಾರೆ.

    ಕೆಂಗೇರಿಯ ನೈಸ್ ರಸ್ತೆಯ ಚೆಕ್ ಪೋಸ್ಟ್ ಬಳಿ ಬೆಂಗಳೂರಿನಿಂದ ಒಳ ಬರುವ ಮತ್ತು ಹೊರ ಹೋಗುವ ವಾಹನ ಸಂಖ್ಯೆ ಹೆಚ್ಚಳವಾಗಿತ್ತು. ಲಾಕ್‍ಡೌನ್‍ನಲ್ಲೂ ನೂರಾರು ಸಂಖ್ಯೆಯಲ್ಲಿ ವಾಹನಗಳು ಓಡಾಡುತ್ತಿದ್ದವು. ವಿವಿಧ ಕಾರಣಗಳನ್ನು ನೆಪ ಮಾಡಿಕೊಂಡು ಜನರು ಸುಮ್ಮನೆ ಓಡಾಡುತ್ತಿದ್ದರು. ಈ ವೇಳೆ ಎರಡು ಕಡೆಗಳಲ್ಲೂ ಎಲ್ಲಾ ವಾಹನಗಳನ್ನು ತಡೆದು ಪೊಲೀಸರು ಪರಿಶೀಲನೆ ನಡೆಸುತ್ತಿದ್ದರು.

    ಆದರೆ ಅನಾವಶ್ಯಕ ವಾಹನ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನಗಳನ್ನು ವಾಪಸ್ ಕಳಿಸುತ್ತಿದ್ದಾರೆ. ಪೊಲೀಸರು ಜೆಸಿಪಿಯಲ್ಲಿ ಮಣ್ಣಿನ ರಾಶಿ ಹಾಕಿ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಯೂಟರ್ನ್ ಮಾಡುವುದಕ್ಕೆ ರಸ್ತೆ ಮಾಡುವ ಮೂಲಕ ಅನಗತ್ಯವಾಗಿ ಬರುವವರನ್ನು ಅದೇ ಮಾರ್ಗವಾಗಿ ವಾಪಸ್ ಕಳುಹಿಸುತ್ತಿದ್ದಾರೆ.

  • ಅಂಬುಲೆನ್ಸ್ ಸಿಗದೇ ನೈಸ್ ರಸ್ತೆಯಲ್ಲೇ ಒದ್ದಾಡಿದ ಗಾಯಾಳುಗಳು!

    ಅಂಬುಲೆನ್ಸ್ ಸಿಗದೇ ನೈಸ್ ರಸ್ತೆಯಲ್ಲೇ ಒದ್ದಾಡಿದ ಗಾಯಾಳುಗಳು!

    ಬೆಂಗಳೂರು: ರಾಜ್ಯದಲ್ಲಿ ಅಂಬುಲೆನ್ಸ್ ಗಳ ಕೊರತೆ ಇಲ್ಲ ಅಂತ ಸರ್ಕಾರ ಹೇಳುತ್ತಿದೆ. ಆದರೆ ಕೊರೊನಾ ರೋಗಿಗಳ ಶಿಫ್ಟ್‍ಗೆ ಅಂಬುಲೆನ್ಸ್ ಬರದೇ ಒದ್ದಾಡಿದ್ದನ್ನು ನೋಡಿದ್ರಿ. ಇದೀಗ ಅಪಘಾತವಾಗಿ ರೋಗಿಗಳಿಗೂ ಅಂಬುಲೆನ್ಸ್ ಸಿಗುತ್ತಿಲ್ಲ.

    ಹೌದು. ನಿನ್ನೆ ನೈಸ್ ರಸ್ತೆಯಲ್ಲಿ ಬೈಕ್ ಸೆಲ್ಫ್ ಆಕ್ಸಿಡೆಂಟ್ ಆಗಿ ಬಂಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ನಲ್ಲಿದ್ದ ಮೂವರು ಯುವಕರಿಗೆ ಗಂಭೀರ ಗಾಯವಾಗಿ ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ನೈಸ್ ಸಿಬ್ಬಂದಿ 108 ಗೆ ಕರೆ ಮಾಡಿದ್ದಾರೆ. ಆದರೆ ಕರೆ ಮಾಡಿ ಒಂದು ಗಂಟೆ ಕಳೆದ್ರೂ ಅಂಬುಲೆನ್ಸ್ ಸ್ಥಳಕ್ಕೆ ಬಂದಿಲ್ಲ. ಕೊನೆಗೆ ಸ್ವಲ್ಪ ಹಣ ಕೊಟ್ಟು ಸಿಬ್ಬಂದಿ ಖಾಸಗಿ ಅಂಬುಲೆನ್ಸ್ ನಲ್ಲಿ ಕಳಿಸಿದ್ದಾರೆ.

    ಸದ್ಯ ಗಂಭೀರವಾಗಿ ಗಾಯಗೊಂಡ ಸತೀಸ್, ವಿನಯ್, ಕುಶಾಲ್ ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನೈಸ್ ಸಿಬ್ಬಂದಿ ಮೊದಲು ಆರ್.ಆರ್ ಆಸ್ಪತ್ರೆಗೆ ಸೇರಿಸಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ಯಲು 108ಗೆ ಕರೆ ಮಾಡಿದರೂ ಸ್ಥಳಕ್ಕೆ ಬಾರದೆ ಸಿಬ್ಬಂದಿ ಬೇರೆ ಬೇರೆ ದಾರಿ ಕಾಣದೆ ಆರ್.ಆರ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ.