Tag: NIA

  • Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

    Mumbai | ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌ ಸಹೋದರನನ್ನು ಭಾರತಕ್ಕೆ ಕರೆತರಲು ತಯಾರಿ ಶುರು

    – ಸಿದ್ದಿಕಿ ಹತ್ಯೆಗೆ ಟರ್ಕಿ ನಿರ್ಮಿತ ಟಿಟಾಸ್‌ ಪಿಸ್ತೂಲ್‌ ಪೂರೈಸಿದ್ದ ಅನ್ಮೋಲ್‌

    ಮುಂಬೈ: ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆ ಹಾಗೂ ನಟ ಸಲ್ಮಾನ್‌ ಖಾನ್‌ ಅವರ ಬಾಂದ್ರಾ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಲಾರೆನ್ಸ್‌ ಬಿಷ್ಣೋಯ್‌ ಸಹೋದರ ಅನ್ಮೋಲ್ ಬಿಷ್ಣೋಯ್‌ನನ್ನ (Anmol Bishnoi) ಅಮೆರಿಕದಿಂದ ಕರೆತರಲು ಮುಂಬೈ ಪೊಲೀಸ್ ಕ್ರೈಂ ಬ್ರಾಂಚ್ (Mumbai Crime Branch) ವಿಭಾಗವು ಹಸ್ತಾಂತರ ಪ್ರಕ್ರಿಯೆ ಪ್ರಾರಂಭಿಸಿದೆ.

    ಮಹಾರಾಷ್ಟ್ರದ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (MCOCA) ಪ್ರಕರಣಗಳ ವಿಶೇಷ ನ್ಯಾಯಾಲಯವು ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ಆದ್ರೆ ಔಪಚಾರಿಕವಾಗಿ ಪ್ರಕ್ರಿಯೆ ಪೂರ್ಣಗೊಳಿಸಲು ನ್ಯಾಯಾಲಯದ ಕೆಲವು ದಾಖಲೆಗಳಿಗಾಗಿ ನಾವು ಕಾಯುತ್ತಿದ್ದೇವೆ. ನಂತರ ಮುಂದಿನ ಕ್ರಮಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂದು ಮುಂಬೈ ಪೊಲೀಸ್ ಮೂಲಗಳು ತಿಳಿಸಿವೆ.

    ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ದಾಖಲಿಸಿದ ಎರಡು ಪ್ರಕರಣಗಳು ಮತ್ತು ಇತರ 18 ಪ್ರಕರಣಗಳಲ್ಲಿ ಕ್ರಿಮಿನಲ್‌ ಆರೋಪ ಎದುರಿಸುತ್ತಿದ್ದಾನೆ. ಇತ್ತೀಚೆಗಷ್ಟೇ ಎನ್‌ಐಎ ಅನ್ಮೋಲ್ ಬಿಷ್ಣೋಯ್ ಬಂಧನಕ್ಕೆ ಸಹಕಾರಿಯಾಗುವ ಮಾಹಿತಿ ನೀಡಿದವರಿಗೆ 10 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಇದನ್ನೂ ಓದಿ: ಸ್ನೇಹಿತ ಅಂತ ನಂಬಿ ಮೊಬೈಲ್‌ ಕೊಟ್ಟ ಮಹಿಳೆ – ಆಕೆಯ ಬೆತ್ತಲೆ ವೀಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್‌

    ಮುಂಬೈ ಪೊಲೀಸ್‌ ಮೂಲಗಳ ಪ್ರಕಾರ, ಅನ್ಮೋಲ್‌ ಬಿಷ್ಣೋಯ್‌ ಅಮೆರಿಕದಲ್ಲಿ ಇರುವುದಾಗಿ ತನಿಖಾ ಏಜೆನ್ಸಿ ಅಧಿಕಾರಿಗಳು ಭಾರತೀಯ ಅಧಿಕಾರಿಗಳಿಗೆ ಖಚಿತಪಡಿಸಿದ್ದಾರೆ. ಈ ನಡುವೆ ಅನ್ಮೋಲ್‌ ಕೆನಡಾದಲ್ಲಿ ನೆಲೆಸಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: US Election 2024 | ಮತ ಎಣಿಕೆ ಯಾವಾಗ? ಸಂಖ್ಯೆ 270ಕ್ಕೆ ಯಾಕೆ ಮಹತ್ವ?

    ಸಿಧು ಮೂಸೆವಾಲಾ ಹತ್ಯೆ ಹಿಂದಿದ್ದ ಅನ್ಮೋಲ್‌:
    18 ಪ್ರಕರಣಗಳಲ್ಲಿ ಆರೋಪಿ ಆಗಿರುವ ಅನ್ಮೋಲ್‌ ಸಿಧು ಮೂಸೆವಾಲಾ ಹತ್ಯೆ ಕೇಸ್‌ನಲ್ಲೂ ಭಾಗಿಯಾಗಿದ್ದಾನೆ ಎನ್ನಲಾಗಿದೆ. ಈತ ಮೂಸೆವಾಲಾ ಹತ್ಯೆಗೆ ಆಮದು ಮಾಡಿಕೊಂಡ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದ. ಅಲ್ಲದೇ ಬಾಬಾ ಸಿದ್ದಿಕಿ ಹತ್ಯೆಗೆ ಬಳಸಲಾಗಿದ್ದ ಟರ್ಕಿ ನಿರ್ಮಿತ ಟಿಟಾಸ್‌ ಪಿಸ್ತೂಲ್‌ ಮತ್ತು ಗ್ಲೋಕ್‌ ಬಂದೂಕು ಒದಗಿಸಿದ್ದೂ ಇವನೇ ಎಂಬ ಆರೋಪ ಇದೆ.

  • ಪಾಕ್‌ನ ಐಎಸ್‌ಐ ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು – ಅಪರಾಧಿಗೆ 6 ವರ್ಷಗಳ ಕಠಿಣ ಶಿಕ್ಷೆ

    ಪಾಕ್‌ನ ಐಎಸ್‌ಐ ಜೊತೆ ಸೇರಿ ಭಯೋತ್ಪಾದಕ ಕೃತ್ಯಕ್ಕೆ ಸಂಚು – ಅಪರಾಧಿಗೆ 6 ವರ್ಷಗಳ ಕಠಿಣ ಶಿಕ್ಷೆ

    ಲಕ್ನೋ: ಪಾಕಿಸ್ತಾನದ (Pakistan) ಐಎಸ್‌ಐ (ISI) ಏಜೆಂಟ್‌ಗಳೊಂದಿಗೆ ಸೇರಿ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿದ್ದ ಗುಜರಾತ್‌ನ (Gujarat) ವ್ಯಕ್ತಿಯೊಬ್ಬನನ್ನು ಇಲ್ಲಿನ ವಿಶೇಷ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ.

    ರಾಜಕ್‌ಭಾಯ್ ಕುಂಬಾರ್ ಶಿಕ್ಷೆಗೊಳಗಾದ ಅಪರಾಧಿಯಾಗಿದ್ದಾನೆ. ಈತ ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಐಎಸ್‌ಐ ಏಜೆಂಟ್‌ಗಳೊಂದಿಗೆ ಸಂಚು ರೂಪಿಸಿದ್ದ. ಈ ತನ ವಿರುದ್ಧ 2020 ರಲ್ಲಿ ಎನ್‌ಐಎ ಪ್ರಕರಣ ದಾಖಲಿಸಿತ್ತು. ಸುದೀರ್ಘ ವಿಚಾರಣೆ ನಡೆಸಿದ ವಿಶೇಷ ಎನ್‌ಐಎ ನ್ಯಾಯಾಲಯವು 6 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ.

    ಈ ಪ್ರಕರಣದ ಮೊದಲನೇ ಅಪರಾಧಿ ಉತ್ತರ ಪ್ರದೇಶದ ರಶೀದ್‌ಗೆ ಎನ್‌ಐಎ ವಿಶೇಷ ನ್ಯಾಯಾಲಯವು ಈಗಾಗಲೇ ಶಿಕ್ಷೆ ವಿಧಿಸಿತ್ತು. ಇಬ್ಬರೂ ಸೇರಿ ಪಾಕಿಸ್ತಾನಿ ಏಜೆಂಟ್‌ಗಳಿಗೆ ಭಾರತದಲ್ಲಿನ ಸೂಕ್ಷ್ಮ, ಯುದ್ಧತಂತ್ರದ ಮತ್ತು ಆಯಕಟ್ಟಿನ ಪ್ರಮುಖ ಸ್ಥಳಗಳ ಮಾಹಿತಿ ಕೊಟ್ಟಿದ್ದರು. ಅಲ್ಲದೇ ಭಾರತೀಯ ಸೇನೆಯ ಚಲನವಲನಗಳ ಫೋಟೋಗಳನ್ನು ಒದಗಿಸಿದ್ದರು ಎಂದು ಎನ್‌ಐಎ ಆರೋಪಿಸಿತ್ತು. ಈ ಛಾಯಾಚಿತ್ರಗಳನ್ನು ಅವರ ಮೊಬೈಲ್ ಫೋನ್ ಬಳಸಿ ತೆಗೆಯಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ರಶೀದ್ ಐಎಸ್‌ಐ ಏಜೆಂಟ್‌ಗಳಿಗೆ ಕಳುಹಿಸಿದ್ದ ಸೂಕ್ಷ್ಮ ಛಾಯಾಚಿತ್ರಗಳಿಗೆ ಕುಂಬಾರ್ ಹಣ ಒದಗಿಸಿದ್ದ. ಅಲ್ಲದೇ ಇಬ್ಬರೂ ಸೇರಿ ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಳೆ ಬಯಲಿಗೆ ಬಂದಿತ್ತು.

    ಏಪ್ರಿಲ್ 2020 ರಲ್ಲಿ ಪ್ರಕರಣವನ್ನು ಕೈಗೆತ್ತಿಕೊಂಡಿದ್ದ ಎನ್‌ಐಎ, ಜುಲೈ 2020 ರಲ್ಲಿ ರಶೀದ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಫೆಬ್ರವರಿ 2021 ರಲ್ಲಿ ಕುಂಬಾರ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿತ್ತು.

  • ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

    ಭಯೋತ್ಪಾದನೆ ಆರೋಪದಿಂದ ಕುಟುಂಬ ರಕ್ಷಿಸಲು 2.5 ಕೋಟಿ ಲಂಚಕ್ಕೆ ಬೇಡಿಕೆ – NIA ಅಧಿಕಾರಿಯನ್ನೇ ಬಂಧಿಸಿದ ಸಿಬಿಐ

    ನವದೆಹಲಿ: ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ಕುಟುಂಬವೊಂದನ್ನು ರಕ್ಷಿಸಲು ವ್ಯಕ್ತಿಯೊಬ್ಬರಿಂದ 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಎನ್‌ಐಎ ಅಧಿಕಾರಿಯೊಬ್ಬರನ್ನು (NIA Officer) ಕೇಂದ್ರೀಯ ತನಿಖಾ ದಳ (CBI) ಬಂಧಿಸಿದೆ.

    ಭಯೋತ್ಪಾದನೆ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ಸಿಲುಕಿಸುವುದಾಗಿ ಬೆದರಿಸಿ, 2.5 ಕೋಟಿ ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದಾರೆಂದು ಆರೋಪಿಸಿ ಪಾಟ್ನಾ ಎನ್‌ಐಎ ಘಟಕದ ಉಪ ಎಸ್ಪಿ ಅಜಯ್ ಪ್ರತಾಪ್ ಸಿಂಗ್ ವಿರುದ್ಧ ರಾಮಯ್ಯ ಕನ್‌ಸ್ಟ್ರಕ್ಷನ್ ಮಾಲೀಕ ರಾಕಿ ಯಾದವ್ ಸಿಬಿಐಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಎನ್‌ಐಎ ಅಧಿಕಾರಿಯನ್ನ ಸಿಬಿಐ ಬಂಧಿಸಿದೆ. ಇದನ್ನೂ ಓದಿ: ದರ್ಶನ್‌ಗೆ ಇವತ್ತೂ ಸಿಗಲಿಲ್ಲ ಬೇಲ್‌ – ಜಾಮೀನು ಅರ್ಜಿ ವಿಚಾರಣೆ ಶನಿವಾರಕ್ಕೆ ಮುಂದೂಡಿಕೆ

    ಏನಿದು ಪ್ರಕರಣ?
    ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಳೆದ ಸೆಪ್ಟೆಂಬರ್ 19 ರಂದು ರಾಕಿ ಯಾದವ್‌ಗೆ ಸಂಬಂಧಿಸಿದ ಸ್ಥಳದಲ್ಲಿ ಶೋಧ ನಡೆಸಿತ್ತು. ಬಳಿಕ ಪ್ರಕರಣದ ತನಿಖಾಧಿಕಾರಿಯಾಗಿದ್ದ ಪ್ರತಾಪ್‌ ಸಿಂಹ್‌ ಸೆ.26ರಂದು ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದರು. ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ ಪ್ರಕರಣದಲ್ಲಿ ತಮ್ಮ ಕುಟುಂಬವನ್ನು ರಕ್ಷಿಸಬೇಕಾದ್ರೆ 2.5 ಕೋಟಿ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು. ಕುಟುಂಬದ ಸಲುವಾಗಿ ಒಪ್ಪಿಕೊಂಡಿದ್ದೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಆರೋಪಿ ಪ್ರತಾಪ್‌ ಸಿಂಗ್‌ ಸೆಪ್ಟೆಂಬರ್ 26 ರಂದು 25 ಲಕ್ಷ ರೂ. ಮುಂಗಡ ಹಣ ಪಾವತಿಸಲು ಯಾದವ್‌ಗೆ ಹೇಳಿದ್ದರು. ಮಧ್ಯವರ್ತಿಯೊಬ್ಬರ ಮೊಬೈಲ್ ಸಂಖ್ಯೆ ಹೊಂದಿರುವ ಕೈಬರಹದ ಟಿಪ್ಪಣಿಯನ್ನು ಅವರಿಗೆ ನೀಡಿದರು. ನಂತರ ಬಿಹಾರದ ಔರಂಗಾಬಾದ್‌ಗೆ ತಲುಪಿ ಮಧ್ಯವರ್ತಿ ಮೂಲಕ ಹಣ ತಲುಪಿಸಿದ್ದರು. ಇದಾದ ಮೇಲೆ ಅಕ್ಟೋಬರ್ 1 ರಂದು ಸಿಂಗ್ ಮತ್ತೆ ಯಾದವ್ ಅವರನ್ನು ಕರೆಸಿ, 70 ಲಕ್ಷ ರೂ.ಗೆ ಬೇಡಿಕೆ ಇಡಲಾಗಿತ್ತು ಎಂದು ಸಿಬಿಐಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: Chhattisgarh | ಭದ್ರತಾ ಪಡೆಗಳಿಂದ ಎನ್‌ಕೌಂಟರ್‌ – 7 ನಕ್ಸಲರು ಬಲಿ

    ದೂರುದಾರ ಯಾದವ್‌ರಿಂದ ಅಕ್ರಮವಾಗಿ 20 ಲಕ್ಷ ರೂ. ವಸೂಲಿ ಮಾಡುತ್ತಿದ್ದಾಗ ಆರೋಪಿ ತನಿಖಾ ಅಧಿಕಾರಿ ಹಾಗೂ ಅವರ ಇಬ್ಬರು ಏಜೆಂಟರು ಸಿಬಿಐ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಇಬ್ಬರು ಮಧ್ಯವರ್ತಿ ಆರೋಪಿ ಹಿಮಾಂಶು ಮತ್ತು ರಿತಿಕ್ ಕುಮಾರ್ ಸಿಂಗ್ ಬಂಧಿತರು. ಇದಾದ ಬಳಿಕ ಗಯಾ, ಪಾಟ್ನಾ ಮತ್ತು ವಾರಣಾಸಿಯ ಹಲವು ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, 20 ಲಕ್ಷ ರೂ. ಲಂಚದ ಹಣ ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಹೇಳಿದೆ. ಇದನ್ನೂ ಓದಿ: ಮೂರು ಜಿಲ್ಲೆಗಳ ಕಾಡಾನೆ ಹಾವಳಿ ತಡೆಗೆ ಭದ್ರಾ ಅಭಯಾರಣ್ಯದಲ್ಲಿ ಆನೆ ಶಿಬಿರ ಸ್ಥಾಪನೆ: ಈಶ್ವರ್ ಖಂಡ್ರೆ

  • ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್‌

    ನಕಲಿ ದಾಖಲೆ ಸೃಷ್ಟಿಸಿ ಪಾಸ್‌ಪೋರ್ಟ್‌ – ದಾವಣಗೆರೆಯ ಪಾಕ್ ಸೊಸೆ ಚೆನ್ನೈನಲ್ಲಿ ಅರೆಸ್ಟ್‌

    – ದಾವಣಗೆರೆ ಮೂಲದ ವ್ಯಕ್ತಿಯಿಂದಲೇ ಪಾಕ್ ಮೂಲದವರಿಗೆ ಆಶ್ರಯ

    ದಾವಣಗೆರೆ: ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಿಂದ ಬಂದು, ಹಿಂದೂಗಳ (Hindu) ಹೆಸರಿಟ್ಟುಕೊಂಡು ಅಕ್ರಮವಾಗಿ ನೆಲೆಸಿದ್ದ ಪಾಕ್‌ ಮೂಲದ ಮಹಿಳೆ ಹಾಗೂ ದಾವಣಗೆರೆ (Davanagere) ಮೂಲದ ವ್ಯಕ್ತಿ ಚೆನ್ನೈನಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

    ಇವರು ಮೆಹೆದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಘಟನೆ ಸದಸ್ಯರಾಗಿದ್ದರು. ಇಸ್ಲಾಂ ಧರ್ಮ ಪ್ರಸಾರಕ್ಕಾಗಿ ಆರಂಭವಾದ ಬಾಂಗ್ಲಾದ (Bangladesh) ವಾಹಿನಿಯೊಂದರಲ್ಲಿ ಬರುವ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವಂತೆ ಸ್ಥಳೀಯ ಮುಸ್ಲಿಂ ಸಮಾಜದವರಿಗೆ ಪ್ರೇರೇಪಿಸುತ್ತಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ –  ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಮಂಗಳವಾರ ಬೆಂಗಳೂರಿನ ಆನೇಕಲ್ ತಾಲೂಕಿನ ಜಿಗಣಿ ಠಾಣೆಯ ಪೊಲೀಸರು ನಾಲ್ವರನ್ನ ಬಂಧಿಸಿದ್ದರು. ಇವರು ಜಿಗಣಿ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಜಾಪೂರ ಗ್ರಾಮದಲ್ಲಿ ವಾಸವಿದ್ದರು. ಈ ಪ್ರಕರಣ ಹೊರ ಬಿದ್ದ ಬೆನ್ನಲ್ಲೇ ನಕಲಿ ದಾಖಲೆ ಸೃಷ್ಠಿಸಿ ನೆಲೆಸಿದ್ದ ದಾವಣಗೆರೆ ಮೂಲದ ಅಲ್ತಾಫ್‌ ಹಾಗೂ ಆತನ ಹೆಂಡತಿ ಪಾಕ್‌ ಮೂಲದ ಫಾತಿಮಾ ಚೆನ್ನೈನಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಹಿಂದೆ ಹೋಗು ಎಂದಿದ್ದಕ್ಕೆ ಬಿಎಂಟಿಸಿ ಕಂಡಕ್ಟರ್‌ ಹೊಟ್ಟೆಗೆ ಚಾಕು ಇರಿದ ಯುವಕ

    ಅಲ್ತಾಫ್‌ ತಂದೆ ಖಲಂದರಸಾಬ್ ಆರೋಗ್ಯ ಇಲಾಖೆಯಲ್ಲಿ ಆರೋಗ್ಯ ನಿರೀಕ್ಷಕರಾಗಿದ್ದರು. ದಾವಣಗೆರೆ ನಗರದ ಶಿವಕುಮಾರ ಬಡಾವಣೆಯಲ್ಲಿ ಜೆಕೆ ಮಂಜಿಲ್ ಎಂಬಲ್ಲಿ ಸ್ವಂತ ಮನೆ ಹೊಂದಿದ್ದಾರೆ. ಖಲಂದರ ಸಾಬ್ ಬೆಂಗಳೂರಿಗೆ ವರ್ಗಾವಣೆ ಆದ ಬಳಿಕ ಕುಟುಂಬ ಬೆಂಗಳೂರಿನಲ್ಲಿದೆ. ಅವರ ಮೂರು ಜನ ಮಕ್ಕಳಲ್ಲಿ ಈಗ ಚೆನ್ನೈನಲ್ಲಿ ಬಂಧನಕ್ಕೊಳಗಾದ ಅಲ್ತಾಫ್‌ ಕೂಡ ಒಬ್ಬ ಎಂಬುದು ಆಘಾತಕಾರಿ ವಿಚಾರ. ಇತ್ತ ಫಾತಿಮಾ ಎಂಬ ಪಾಕ್ ಮೂಲಕ ಯುವತಿಯನ್ನ ಮದ್ವೆ ಆಗಿದ್ದಾನೆ. ಬಾಂಗ್ಲಾ ದೇಶಕ್ಕೆ ಹೋಗಿ ವಾಪಸ್‌ ಬರುವಾಗ ಈತ ಚೆನ್ನೈ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಇವರಿಬ್ಬರು ಇಸ್ಲಾಂ ಧರ್ಮದ ಬಗ್ಗೆ ಪ್ರಚಾರ ಮಾಡುವ ಮೆಹೆದಿ ಫೌಂಡೇಷನ್ ಇಂಟರ್ ನ್ಯಾಷನಲ್ ಸಂಸ್ಥೆಗಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಫಾತಿಮಾಳನ್ನು ಮದುವೆಯಾದ ಬಳಿಕ ಅವಳ ತಂದೆ, ತಾಯಿ, ಅಣ್ಣ ಅತ್ತಿಗೆಯನ್ನ ಪಾಕ್ ಮತ್ತು ಬಾಂಗ್ಲಾದಿಂದ ಮೊದಲು ದೆಹಲಿ ನಂತರ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಅಲ್ಲದೇ ಪಾಕ್ ಮೂಲದ ಮಹಿಳೆಗೆ ದಾವಣಗೆರೆಯ ನಿವಾಸದ ವಿಳಾಸದಲ್ಲೇ ಪಾಸ್‌ಪೋರ್ಟ್‌ ದಾಖಲೆಗಳನ್ನು ಮಾಡಿಸಿಕೊಟ್ಟಿದ್ದರು ಎಂಬ ರಹಸ್ಯವೂ ತನಿಖೆಯಲ್ಲಿ ಬಯಲಾಗಿದೆ.

    ಪಾಕ್‌ ಮೂಲದ ಪ್ರಜೆಗಳು 2018ರಲ್ಲಿ ಬೆಂಗಳೂರಿಗೆ ಬಂದಿದ್ದಾರೆ. ದೆಹಲಿಯಲ್ಲಿ ನಕಲಿ ಆಧಾರ್‌ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಯಾರಿಗೂ ಸಂಶಯ ಬಾರದಿರಲಿ ಎಂದು ಹಿಂದೂಗಳ ಹೆಸರಿಟ್ಟುಕೊಂಡು ಜೀವನ ನಡೆಸುತ್ತಿದ್ದರು. ರಶೀದ್ ಅಲಿ ಸಿದ್ದೀಕಿ ಅಲಿಯಾಸ್ ಶಂಕರ್ ಶರ್ಮಾ, ಪಾಕಿಸ್ತಾನದ ಕರಾಚಿ ಮೂಲದವರು. ಆಯೆಷಾ ಅಲಿಯಾಸ್ ಆಶಾರಾಣಿ, ಹನೀಫ್ ಮೊಹಮ್ಮದ್‌ ಅಲಿಯಾಸ್ ರಾಮ್ ಬಾಬು ಶರ್ಮಾ, ರುಬೀನಾ ಅಲಿಯಾಸ್ ರಾಣಿ ಶರ್ಮಾ ಲಾಹೋರ್‌ ಮೂಲದವರು. ಈ ನಾಲ್ವರನ್ನ ಜಿಗಣಿ ಪೊಲೀಸರು ಬಂಧಿಸಿದ್ದರು.

    ಅಲ್ತಾಫ್‌ ಮತ್ತು ಫಾತಿಮಾ ದಂಪತಿ ಇಲ್ಲಿನ ಮುಸ್ಲಿಂ ಸಮಾಜದವರಿಗೆ ಮುಸ್ಲಿಂ ಪ್ರಚಾರ ಕಾರ್ಯಕ್ರಮಗಳನ್ನು ನೋಡುವಂತೆ ಪ್ರೇರೇಪಿಸುತ್ತಿದ್ದರು. ಈ ಕೆಲಸಕ್ಕಾಗಿ ಇವರಿಗೆ ಫಂಡಿಂಗ್‌ ಕೂಡ ಬರುತ್ತಿತ್ತು. ಸದ್ಯ ಇಬ್ಬರನ್ನು ಬಂಧಿಸಿರುವ ತನಿಖಾ ಸಂಸ್ಥೆಗಳು ಅಲ್ತಾಫ್‌ ಮನೆಯಲ್ಲಿ ಪರಿಶೀಲನೆ ನಡೆಸಿವೆ. ದಾವಣಗೆರೆ ಪೊಲೀಸರು ಕೂಡ ಅಲರ್ಟ್‌ ಆಗಿದ್ದು, ನಕಲಿ ಪಾಸ್‌ಪೋರ್ಟ್‌ಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಈ ಸಂಬಂಧ ತನಿಖೆ ಮುಂದುವರಿದಿದೆ.

  • ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    ಬೆಂಗ್ಳೂರಲ್ಲಿ ಬಂಧನವಾಗಿದ್ದ ಶಂಕಿತ ಉಗ್ರನಿಂದ ರಹಸ್ಯ ಸ್ಫೋಟ – ಆ.15ರಂದು ಸ್ಫೋಟಿಸಲು ಇರಿಸಿದ್ದ ಜೀವಂತ IED ವಶ

    – ನಾಲ್ವರು ಪಾಕ್ ಪ್ರಜೆಗಳು ಅರೆಸ್ಟ್; ತನಿಖೆ ತೀವ್ರ

    ಬೆಂಗಳೂರು: ಅಸ್ಸಾಂ ಎನ್‌ಐಎ ಅಧಿಕಾರಿಗಳಿಂದ ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಬಂಧಿತನಾಗಿದ್ದ ಉಲ್ಫಾ ಉಗ್ರನಿಂದ ಸ್ಫೋಟಕ ರಹಸ್ಯವೊಂದು ಬಯಲಾಗಿದೆ. ಶಂಕಿತ ಉಗ್ರನ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿರುವ ಎನ್‌ಐಎ (NIA) ಅಧಿಕಾರಿಗಳು ಮಂಗಳವಾರ ಅಸ್ಸಾಂನ (Assam) ಉತ್ತರ ಲಖೀಂಪುರದಲ್ಲಿ ಜೀವಂತ ಐಇಡಿಗಳನ್ನ (ಸುಧಾರಿತ ಸ್ಫೋಟಕ ಸಾಧನ) ವಶಕ್ಕೆ ಪಡೆದಿದ್ದಾರೆ.

    ಎನ್‌ಐಎ ಅಧಿಕಾರಿಗಳ ವಿಚಾರಣೆ ವೇಳೆ ಶಂಕಿತ (Suspected Terrorist) ಉಗ್ರ ಗಿರಿಸ್ ಬೋರಾ ಅಲಿಯಾಸ್‌ ಗೌತಮ್, ಅಸ್ಸಾಂನಲ್ಲಿ ಐಇಡಿ ಇಟ್ಟ ಸ್ಫೋಟಕ ವಿಚಾರ ಬಾಯ್ಬಿಟ್ಟಿದ್ದಾನೆ. ಅಲ್ಲದೇ ಉಲ್ಫಾ(I) ಸಂಘಟನೆಯ ನಾಯಕರು ಹೇಳಿದಂತೆ ಐಇಡಿಗಳನ್ನ ಇಟ್ಟಿದ್ದೆ. ಆಗಸ್ಟ್‌ 15ರಂದು ಸ್ಫೋಟಿಸಲು ಸಂಜು ರೂಪಿಸಲಾಗಿತ್ತು ಎಂದೂ ಸಹ ಒಪ್ಪಿಕೊಂಡಿದ್ದಾನೆ. ಶಂಕಿತ ಉಗ್ರನ ಮಾಹಿತಿ ಮೇರೆಗೆ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳು ಲಖೀಂಪುರ ಜಿಲ್ಲೆಯಲ್ಲಿ ಇಟ್ಟಿದ್ದ ಕೆಲವು ಜೀವಂತ ಐಇಡಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ತನಿಖೆಯನ್ನೂ ಮುಂದುವರಿಸಿದ್ದಾರೆ. ಇದನ್ನೂ ಓದಿ: ರಸ್ತೆ, ರೈಲು ಹಳಿಗಳನ್ನು ಅತಿಕ್ರಮಿಸುವ ಯಾವುದೇ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಬೇಕು: ಸುಪ್ರೀಂ

    ನಾಲ್ವರು ಪಾಕ್ ಪ್ರಜೆಗಳು ಅರೆಸ್ಟ್; ತನಿಖೆ ತೀವ್ರ
    ಪಾಕಿಸ್ತಾನಿ ನ್ಯಾಷನಲಾಟಿ ಗುಮಾನಿ ಮೇಲೆ ನಾಲ್ವರು ಪಾಕ್ ಪ್ರಜೆಗಳು ಅರೆಸ್ಟ್ ಪ್ರಕರಣದ ತನಿಖೆ ದಿನ ಕಳೆದಂತೆ ತೀವ್ರಗೊಳ್ಳುತ್ತಿದೆ. IB, NIA ಮತ್ತು ಆನೇಕಲ್ ಉಪವಿಭಾಗದ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆರ್ ಹಿತೇಂದ್ರ ಭೇಟಿ ನೀಡಿ ತನಿಖೆ ಬಗ್ಗೆ ಚರ್ಚೆ ನಡೆಸಿದ್ದು, ಒಂದಷ್ಟು ಸಲಹೆ ಸೂಚನೆ ನೀಡಿದೆ. ಇದನ್ನೂ ಓದಿ: ಪ್ರವಾದಿ ಮೊಹಮ್ಮದ್‌ರ ವಿರುದ್ಧ ಅವಹೇಳನಕಾರಿ ಹೇಳಿಕೆ – ಧಾರ್ಮಿಕ ಮುಖಂಡ ಮಹಂತ್ ರಾಮಗಿರಿ ಮಹಾರಾಜ್ ವಿರುದ್ಧ 67 FIR

    ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ರಶೀದ್ ಆಲಿ ಸಿದ್ಧಕಿ ಕುಟುಂಬದ ತನಿಖೆ ಮುಂದುವರಿದಿದೆ. IB, NIA ಮತ್ತು ಆನೇಕಲ್ ಉಪವಿಭಾಗದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಗಳ ಹಿನ್ನೆಲೆ ಭಾರತಕ್ಕೆ ಅಕ್ರಮವಾಗಿ ಎಂಟ್ರಿ ಕೊಟ್ಟ ಉದ್ದೇಶ ಮತ್ತು ಭಾಗ ದಾಖಲೆಗಳ ಸೃಷ್ಟಿ ಬಗ್ಗೆ ತನಿಖೆಯನ್ನು ಕೇಂದ್ರಿಕರಿಸಲಾಗಿದೆ. ಆರೋಪಿಗಳು ಮೆಹದಿ ಫೌಂಡೇಷನ್ ನ ಪರ್ವೇಜ್ ಭಾರತಕ್ಕೆ ಬರುವಂತೆ ಹೇಳಿ ದಾಖಲೆಗಳು ಸೇರಿದಂತೆ ಅಗತ್ಯ ಸೌಲಭ್ಯ ವ್ಯವಸ್ಥೆ ಕಲ್ಲಿಸಿದನು. ಯೂನಸ್ ಅಲ್ಗೋರ್ ಧರ್ಮ ಗುರುಗಳ ಪ್ರವಚನ ಪ್ರಚಾರಕ್ಕೆ ಹಣ ನೀಡುತ್ತಿದ್ದರು. ಜೀವನಕ್ಕಾಗಿ ಬಿರಿಯಾನಿ ಹೊಟೇಲ್ ವ್ಯವಹಾರ ಮಾಡುತ್ತಿದ್ದೆವು ಎನ್ನುತ್ತಿದ್ದಾರೆ. ಆದ್ರೆ ಆರೋಪಿಗಳ ಹೇಳಿಕೆ ನಂಬಲು ಸಾಧ್ಯವಿಲ್ಲ ಎಂಬ ವಿಚಾರಗಳು ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿದೆ. ಇದನ್ನೂ ಓದಿ: ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬಳಕೆದಾರರಿಗೆ ದರ ಏರಿಕೆ ಬಿಸಿ – ಇಂದಿನಿಂದಲೇ ಹೊಸ ದರ ಅನ್ವಯ

    ಬಂಧಿತ ಪಾಕ್ ಪ್ರಜೆಗಳಾದ ರಶೀದ್ ಅಲಿ ಸಿದ್ಧಕಿ ಮತ್ತು ಆತನ ಪತ್ನಿ ಆಯೇಷಾ ಹನೀಫ್‌ಳನ್ನು IB ಮತ್ತು NIA ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಬಾಂಗ್ಲಾದೇಶ ದೇಶದ ಗಲಭೆಯಲ್ಲಿ ಜೈಲಿನಿಂದ ಪರಾರಿಯಾದ ಖೈದಿಗಳ ಸಂಪರ್ಕ. ಪಾಕಿಸ್ತಾನಿ ಉಗ್ರ ಸಂಘಟನೆಗಳ ಲಿಂಕ್ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಆರೋಪಿಗಳ ವಾಸವಿದ್ದ ಮನೆಯಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಕೆಲ ಎಲೆಕ್ಟ್ರಾನಿಕ್ ವಸ್ತುಗಳು ದೊರೆತ್ತಿದ್ದು, ಅವುಗಳನ್ನು FSLಗೆ ರವಾನಿಸಲಾಗಿದೆ. ಧರ್ಮ ಪ್ರಚಾರದ ಜೊತೆ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಉದ್ದೇಶದ ಬಗ್ಗೆ ಯಾವುದೇ ಪುರಾವೆ ಇಲ್ಲಿಯವರೆಗೆ ಸಿಕ್ಕಿಲ್ಲ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಬಂಧಿತ ಮೊಹಮ್ಮದ್ ಹನೀಫ್ ಮಗಳಾದ ಫಾತಿಮಾ ಪತಿ ಅಲ್ತಾಫ್‌ ದಾವಣಗೆರೆ ಮೂಲದವನಾಗಿದ್ದು, ಚೆನ್ನೈನಲ್ಲಿ ಬಂಧಿಸಲಾಗಿದೆ. ಚೆನ್ನೈ NIA ಅಧಿಕಾರಿಗಳ ಜೊತೆಯು ಸಂಪರ್ಕದಲ್ಲಿದ್ದು, ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಎಡಿಜಿಪಿ ಅರ್‌. ಹಿತೇಂದ್ರ ತಿಳಿಸಿದ್ದಾರೆ.

    ಪಾಕ್ ಪ್ರಜೆಗಳ ಬಂಧನದ ಪ್ರಕರಣದ ಜಾಡು ಮುಂಬೈ ಮತ್ತು ದೆಹಲಿವರೆಗೆ ವ್ಯಾಪಿಸಿದ್ದು, ಬಂಧಿತರ ಜೊತೆ ನೂರಕ್ಕೂ ಅಧಿಕ ಮಂದಿ ನಿರಂತರ ಸಂಪರ್ಕದಲ್ಲಿರುವುದು ತನಿಖೆ ವೇಳೆ ಪತ್ತೆಯಾಗಿದ್ದು, ಅವರೆಲ್ಲರೂ ಪಾಕಿಸ್ತಾನ ಮೂಲದವರ ಎಂಬುದು ಪೊಲೀಸರ ತನಿಖೆಯಿಂದ ದೃಢವಾಗಬೇಕಿದೆ.

  • ಎನ್‌ಐಎಯಿಂದ ಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್‌

    ಎನ್‌ಐಎಯಿಂದ ಬೆಂಗಳೂರಿನಲ್ಲಿ ಶಂಕಿತ ಉಗ್ರ ಅರೆಸ್ಟ್‌

    ಬೆಂಗಳೂರು: ಶಂಕಿತ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.

    ಗಿರಿಸ್ ಬೋರಾ ಅಲಿಯಾಸ್‌ ಗೌತಮ್ ಬಂಧಿತ ಶಂಕಿತ ಉಗ್ರ. ಅಸ್ಸಾಂ (Assam) ಎನ್ಐಎ ಅಧಿಕಾರಿಗಳು ಅನೇಕಲ್ ಬಳಿಯ ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಸಿಬಿಐ ಮುಕ್ತ ತನಿಖೆ ಅಧಿಕಾರಕ್ಕೆ ಬ್ರೇಕ್‌

    ಉಲ್ಫಾ (United Liberation Front of Asom -ULFA) ಸಂಘಟನೆಗೆ ಸೇರಿದ್ದ ಗಿರಿಸ್‌ ಬೋರಾ ಅಸ್ಸಾಂ ಗುವಾಹಟಿಯಲ್ಲಿ ಐಇಡಿ ಇಟ್ಟು ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದ. ಖಾಸಗಿ ಕಂಪನಿಯಲ್ಲಿ ಗೌತಮ್‌ ಹೆಸರಿನಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದ.

    ಈತನ ಬಗ್ಗೆ ಖಚಿತ ಮಾಹಿತಿಯನ್ನು ಸಂಗ್ರಹಿಸಿದ್ದ ಎನ್‌ಐಎ ಇಂದು ಬಂಧಿಸಿದೆ.

     

  • ಕರ್ನಾಟಕಕ್ಕೆ ಯೋಧರನ್ನು ಹೊತ್ತುಕೊಂಡು ಬರುತ್ತಿದ್ದ ರೈಲು ಸ್ಫೋಟಕ್ಕೆ ಸಂಚು, ಸಿಬ್ಬಂದಿ ವಶ

    ಕರ್ನಾಟಕಕ್ಕೆ ಯೋಧರನ್ನು ಹೊತ್ತುಕೊಂಡು ಬರುತ್ತಿದ್ದ ರೈಲು ಸ್ಫೋಟಕ್ಕೆ ಸಂಚು, ಸಿಬ್ಬಂದಿ ವಶ

    ಭೋಪಾಲ್: ಜಮ್ಮು ಮತ್ತು ಕಾಶ್ಮೀರದಿಂದ (Jammu And Kashmir) ಕರ್ನಾಟಕಕ್ಕೆ (Karnataka) ಯೋಧರನ್ನು ಕರೆದೊಯ್ಯುತ್ತಿದ್ದ ರೈಲನ್ನು ಸ್ಫೋಟಿಸಲು ಯತ್ನಿಸಲಾಗಿತ್ತು. ಇದೀಗ ಡಿಟೋನೇಟರ್‌ಗಳು ಕದ್ದಿದ್ದಕ್ಕಾಗಿ ಓರ್ವ ರೈಲ್ವೆ ಸಿಬ್ಬಂದಿಯನ್ನು ವಶಕ್ಕೆ ಪಡೆಯಲಾಗಿದೆ.

    ರೈಲ್ವೆ ಸಿಬ್ಬಂದಿ ಶಬೀರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.

    ಮಧ್ಯಪ್ರದೇಶದ (Madhyapradesh) ಬುರ್ಹಾನ್‌ಪುರ (Burhanpur) ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿತ್ತು. ಡಿಟೋನೇಟರ್‌ಗಳು ಕದ್ದಿದ್ದಕ್ಕಾಗಿ ಓರ್ವ ರೈಲ್ವೆ ಸಿಬ್ಬಂದಿಯನ್ನು ರೈಲ್ವೆ ರಕ್ಷಣಾ ಪಡೆ (Railway Protection Force) ವಶಕ್ಕೆ ಪಡೆದುಕೊಂಡಿದ್ದಾರೆ.ಇದನ್ನೂ ಓದಿ: ಬೆಂಗಳೂರಿನಲ್ಲಿ ರಾತ್ರಿ ಭಾರೀ ಮಳೆ

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದ್ದವು. ವಶಕ್ಕೆ ಪಡೆದ ಶಬೀರ್ ವಿರುದ್ಧ ರೈಲಿನ ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಕದ್ದಿದ್ದಕ್ಕಾಗಿ ಕೇಸ್ ದಾಖಲಿಸಲಾಗಿದೆ.

    ಏನಿದು ಘಟನೆ?
    ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿತ್ತು. ಸೇನೆಯ ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿತ್ತು.

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.

    ರೈಲು ಡಿಟೋನೇಟರ್‌ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದರು. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ. ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.ಇದನ್ನೂ ಓದಿ: ಬದ್ಲಾಪುರ ಶಾಲೆಯಲ್ಲಿ ದೌರ್ಜನ್ಯ – ಕಾಮುಕನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

  • ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ವಿಶೇಷ ರೈಲನ್ನು ಸ್ಫೋಟಿಸಲು ಯತ್ನ

    ಭೋಪಾಲ್: ಮಧ್ಯಪ್ರದೇಶದ (Madhya Pradesh) ಬುರ್ಹಾನ್‍ಪುರ ಜಿಲ್ಲೆಯಲ್ಲಿ ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ವಿಶೇಷ ರೈಲನ್ನು ಸ್ಫೋಟಿಸಲು ಯತ್ನಿಸಿರುವ ಘಟನೆ ನಡೆದಿದೆ. ಸೇನೆಯ (Indian Army) ವಿಶೇಷ ರೈಲು ಜಮ್ಮು-ಕಾಶ್ಮೀರದಿಂದ ಕರ್ನಾಟಕಕ್ಕೆ ತೆರಳುತ್ತಿದ್ದಾಗ ಸಗ್ಫಾಟ ರೈಲು ನಿಲ್ದಾಣದ ಬಳಿ ಸ್ಫೋಟಕ್ಕೆ ಯತ್ನ ನಡೆದಿದೆ.

    ಮಧ್ಯಪ್ರದೇಶದ ರೈಲ್ವೆ ಹಳಿಯಲ್ಲಿ ಕನಿಷ್ಠ 10 ಡಿಟೋನೇಟರ್‌ಗಳು ಹಾಗೂ ಗ್ಯಾಸ್ ಸಿಲಿಂಡರ್ ಪತ್ತೆಯಾಗಿವೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು ಪ್ರಕರಣ; ಕಾರ್ಮಿಕ ಸಚಿವಾಲದಿಂದ ವರದಿ ಕೇಳಿದ ಮಾನವ ಹಕ್ಕುಗಳ ಆಯೋಗ

    ರೈಲು ಡಿಟೋನೇಟರ್‍ಗಳ ಮೇಲೆ ಹಾದು ಹೋಗುತ್ತಿದ್ದಂತೆ ಸ್ಫೋಟದಿಂದ ಲೋಕೋ ಪೈಲಟ್ ರೈಲನ್ನು ತಕ್ಷಣವೇ ನಿಲ್ಲಿಸಿದ್ದಾರೆ. ನಂತರ ಠಾಣಾಧಿಕಾರಿಗೆ ಮಾಹಿತಿ ನೀಡಿದರು. ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ.

    ಭಯೋತ್ಪಾದನಾ ನಿಗ್ರಹ ದಳ (ATS), ರಾಷ್ಟ್ರೀಯ ತನಿಖಾ ಸಂಸ್ಥೆ (NIA), ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಘಟನೆಯ ಕುರಿತು ತನಿಖೆ ನಡೆಸುತ್ತಿದ್ದಾರೆ.

    ಇನ್ನೂ, ಉತ್ತರ ಪ್ರದೇಶದ ಕಾನ್ಪುರದ ಪ್ರೇಂಪುರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಭಾನುವಾರ ಖಾಲಿ ಗ್ಯಾಸ್ ಸಿಲಿಂಡರ್‌ಗಳು ಪತ್ತೆಯಾಗಿವೆ. ಗೂಡ್ಸ್ ರೈಲು ಲೋಕೋ ಪೈಲಟ್ ರೈಲು ನಿಲ್ಲಿಸಲು ತುರ್ತು ಬ್ರೇಕ್ ಹಾಕಿ ನಿಲ್ಲಿಸಿದ್ದಾರೆ.

    ರೈಲು ಕಾನ್ಪುರದಿಂದ ಪ್ರಯಾಗ್‍ರಾಜ್‍ಗೆ ತೆರಳುತ್ತಿದ್ದಾಗ ಬೆಳಗ್ಗೆ 8:10ಕ್ಕೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎರಡನೇ ಪ್ರಕರಣ ಇದಾಗಿದೆ. ಸೆಪ್ಟೆಂಬರ್ 8 ರಂದು, ಪ್ರಯಾಗರಾಜ್‍ನಿಂದ ಭಿವಾನಿ ಕಡೆಗೆ ಹೋಗುತ್ತಿದ್ದ ಕಾಳಿಂದಿ ಎಕ್ಸ್‍ಪ್ರೆಸ್‍ನ್ನು ಹಳಿಗಳ ಮೇಲೆ ಎಲ್‍ಪಿಜಿ ಸಿಲಿಂಡರ್ ಇರಿಸುವ ಮೂಲಕ ಹಳಿತಪ್ಪಿಸಲು ಪ್ರಯತ್ನಿಸಲಾಗಿತ್ತು. ಇದನ್ನೂ ಓದಿ: ಈ ಬಾರಿ ದಸರಾದಲ್ಲಿ ಗಂಗಾರತಿಯಂತೆ ಕಾವೇರಿ ಆರತಿ ಮಾಡಬೇಕೆಂಬ ಆಸೆ: ಚಲುವರಾಯಸ್ವಾಮಿ

  • ನಾಗಮಂಗಲ ಗಲಭೆಗೆ ಪೊಲೀಸರ ವೈಫಲ್ಯ ಕಾರಣ: NIA ತನಿಖೆಗೆ ಆಗ್ರಹಿಸಿದ ಅಶ್ವಥ್ ನಾರಾಯಣ

    ನಾಗಮಂಗಲ ಗಲಭೆಗೆ ಪೊಲೀಸರ ವೈಫಲ್ಯ ಕಾರಣ: NIA ತನಿಖೆಗೆ ಆಗ್ರಹಿಸಿದ ಅಶ್ವಥ್ ನಾರಾಯಣ

    ಬೆಂಗಳೂರು: ನಾಗಮಂಗಲ ಗಲಭೆಗೆ (Nagamangala Violence) ಪೊಲೀಸ್ ಇಲಾಖೆಯ ವೈಫಲ್ಯವೇ ಕಾರಣ. ಇದೊಂದು ಪ್ರೀ ಪ್ಲ್ಯಾನ್. ಪಿಎಫ್‌ಐ (PFI) ಸಂಘಟನೆ ನಾಗಮಂಗಲದಲ್ಲಿ ಚಟುವಟಿಕೆ ನಡೆಸುತ್ತಿದೆ ಎಂದು ಮಾಜಿ ಡಿಸಿಎಂ ಅಶ್ವಥ್ ನಾರಾಯಣ (Ashwath Narayan) ಆರೋಪ ಮಾಡಿದ್ದಾರೆ.

    ಅಶ್ವಥ್ ನಾರಾಯಣ ನೇತೃತ್ವದಲ್ಲಿ ರಚನೆ ಮಾಡಿದ್ದ ಸತ್ಯಶೋಧನಾ ಸಮಿತಿ ಇಂದು ರಾಜ್ಯಾಧ್ಯಕ್ಷ ವಿಜಯೇಂದ್ರಗೆ ವರದಿ ಸಲ್ಲಿಕೆ ಮಾಡಿತು. ವರದಿ ಸಲ್ಲಿಕೆ ಬಳಿಕ ಮಾತನಾಡಿದ ಅಶ್ವಥ್ ನಾರಾಯಣ, ರಾಜಕೀಯ ತುಷ್ಟೀಕರಣವೇ ಇಂತಹ ಘಟನೆಗೆ ಕಾರಣ. ವಿಭಜನೆ ರಾಜಕೀಯಕ್ಕಾಗಿ ಇಂತಹ ಘಟನೆ ನಡೆದಿದೆ. ಪೊಲೀಸರ ವೈಫಲ್ಯ ಇಲ್ಲಿ ಇದೆ. ಪೊಲೀಸರ ಕೈಯನ್ನು ಈ‌ ಸರ್ಕಾರ ಕಟ್ಟಿ ಹಾಕಿದೆ ಅಂತ ಆರೋಪ ಮಾಡಿದರು.

    ಮೆರವಣಿಗೆಯಲ್ಲಿ ಭಾಗಿಯಾದವರು 25-30 ಜನ ಮಾತ್ರ. ಕಳೆದ ವರ್ಷವೂ ಇದೇ ರೀತಿ ಘಟನೆ ಆಗಿದೆ. ಆದರೂ ಈ ವರ್ಷ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಪ್ರೀ ಪ್ಲ್ಯಾನ್ ಮಾಡಿ ಬೆಂಕಿ ಹಾಕಿದ್ದಾರೆ, ಮಾಸ್ಕ್ ಹಾಕಿಕೊಂಡು ಪೆಟ್ರೋಲ್ ಬಾಂಬ್ ಎಸೆದಿದ್ದಾರೆ. ನಾಗಮಂಗಲ ಪಿಎಫ್‌ಐ ಕಾರ್ಯಚಟುವಟಿಕೆಗೆ ನೆಲೆಯಾಗಿದೆ. ಕೇರಳ ಭಾಗದ ವ್ಯಕ್ತಿಗಳು ಭಾಗಿಯಾಗಿದ್ದಾರೆ ಅಂತ ಗೃಹಸಚಿವರು ಹೇಳಿದ್ದಾರೆ.‌ ಬಾಂಗ್ಲಾದೇಶದವರು ನಾಗಮಂಗಲದಲ್ಲಿ ಕೆಲಸ ಮಾಡುತ್ತಿದ್ದಾರೆ. ಪಿಎಫ್‌ಐ ನಿಷೇಧ ಆಗಿರುವ ಸಂಸ್ಥೆಯಾದರೂ ಇಲ್ಲಿ ಚಟುವಟಿಕೆಗಳನ್ನು ಹೇಗೆ ಮಾಡುತ್ತಿದ್ದಾರೆ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ಬಟ್ಟೆ ಬಿಚ್ಚಿ ಹಲ್ಲೆ ಮಾಡಿದ್ರು; ಒಡಿಶಾ ಠಾಣೆಯಲ್ಲಿ ಅನುಭವಿಸಿದ ಯಾತನೆಯ ಕತೆ ಹೇಳಿದ ಸೇನಾಧಿಕಾರಿಯ ಭಾವಿ ಪತ್ನಿ

    ಘಟನೆ ಸಂಬಂಧ UAPA ಕೇಸ್ ಯಾರ ಮೇಲೂ ಹಾಕಿಲ್ಲ. ಇಂಟಲಿಜೆನ್ಸ್ ಸಂಪೂರ್ಣ ಫೇಲ್ ಆಗಿದೆ. ನಮ್ಮ ಕಾಲದಲ್ಲಿ ಇಂತಹ ಘಟನೆ ಆಗಿರಲಿಲ್ಲ.ಈ ಸರ್ಕಾರದಲ್ಲಿ 8-10 ಕಡೆ ಇಂತಹ ಘಟನೆಗಳು ನಡೆದಿವೆ. ಈ ಸರ್ಕಾರದಲ್ಲಿ ಏನ್ ಆಗುತ್ತಿದೆ ಎಂದು ಪ್ರಶ್ನೆ ಮಾಡಿದರು. ಬಾಂಗ್ಲಾದೇಶದಲ್ಲಿ ಆದಂತೆ ನಾವು ನುಗ್ಗುತ್ತೇವೆ ಅಂತಾರೆ‌. ಅವರ ಮೇಲೆ ಕೇಸ್ ಹಾಕಲ್ಲ. ಇಲ್ಲಿ ದ್ವೇಷದ ರಾಜಕೀಯ ನಡೆಯುತ್ತಿದ್ದು ವಿಪಕ್ಷಗಳ ಮೇಲೆ ಕೇಸ್ ಹಾಕೋ ಕೆಲಸ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕೃತ್ಯ ಮಾಡಿದವರನ್ನು ಬಿಟ್ಟು ನಿರಾಪರಾಧಿಗಳ ಮೇಲೆ ಕೇಸ್‌ ಹಾಕಿದ್ದಾರೆ. ಪೊಲೀಸರ ಮೇಲೆ ಹಲ್ಲೆ ನಡೆದರೂ ಅವರ ಮೇಲೆ ಕೇಸ್ ಆಗಿಲ್ಲ. ನಾಗಮಂಗಲ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳದಿಂದ (NIA) ತನಿಖೆ ನಡೆಸಬೇಕು. ಹಿಂದೂ ಸಮಾಜದ ವಿರೋಧಿ ಶಕ್ತಿಗಳಿಗೆ ಕಡಿವಾಣ ಹಾಕುವ ಕೆಲಸ ಆಗಿಲ್ಲ. ಹಿಂದೂಗಳ ವಿರೋಧಿ, ಹಿಂದೂ ಸಂಸ್ಕೃತಿ ವಿರೋಧಿಗಳಿಗೆ ತುಷ್ಟೀಕರಣ ಮಾಡುವ ಕೆಲಸ ಮಾಡುತ್ತಿದೆ. ಸರ್ಕಾರ ಘಟನೆಯಲ್ಲಿ ಭಾಗಿಯಾಗಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು. 100% ನಷ್ಟ ಆದವರಿಗೆ ಪರಿಹಾರ ಸರ್ಕಾರ ಕೊಡಬೇಕು. ಮುಂದೆ ಸರ್ಕಾರದ ವಿರುದ್ದ ಹೇಗೆ ಪ್ರತಿಭಟನೆ ಮಾಡಬೇಕು ಅಂತ ಹಿರಿಯರು ಕೂತು ನಿರ್ಧಾರ ಮಾಡುತ್ತೇವೆ ಎಂದರು.

     

  • Nagamangala Violence | ಪಿಎಫ್‌ಐ ಸಂಘಟನೆಯವರು ಮಾತ್ರವಲ್ಲ, ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ – ಸುರೇಶ್‌ಗೌಡ

    Nagamangala Violence | ಪಿಎಫ್‌ಐ ಸಂಘಟನೆಯವರು ಮಾತ್ರವಲ್ಲ, ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ – ಸುರೇಶ್‌ಗೌಡ

    ಮಂಡ್ಯ: ಕಳೆದ ಬುಧವಾರ ನಾಗಮಂಗಲದಲ್ಲಿ (Nagamangala) ನಡೆದ ಗಲಭೆಯಲ್ಲಿ ಬಾಂಗ್ಲಾದೇಶ ಲಿಂಕ್ ಇದೆ ಎಂದು ಅನುಮಾನ ವ್ಯಕ್ತಪಡಿಸಿ ಜೆಡಿಎಸ್‌ನ ಮಾಜಿ ಶಾಸಕ ಸುರೇಶ್‌ಗೌಡ (Suresh Gowda) ಹೇಳಿಕೆ ನೀಡಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಳೆದ ಬುಧವಾರ ನಾಗಮಂಗಲದಲ್ಲಿ ನಡೆದ ಗಲಭೆಯಲ್ಲಿ ಕೇರಳ ಹಾಗೂ ನಿಷೇಧಿತ ಪಿಎಫ್‌ಐ ಸಂಘಟನೆ ಲಿಂಕ್ ಇದೆ ಎಂಬ ಅನುಮಾನಗಳು ವ್ಯಕ್ತವಾಗಿದೆ. ಜೊತೆಗೆ ಈ ಕೃತ್ಯದಲ್ಲಿ ಬಾಂಗ್ಲಾದೇಶ (Bangladesh) ಲಿಂಕ್ ಸಹ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್‌- ಇಂದು ಸುಪ್ರೀಂನಲ್ಲಿ ವಿಚಾರಣೆ

    ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ವೇಳೆ ದುಷ್ಕರ್ಮಿಗಳು ಎಸಗಿರುವ ಕೃತ್ಯದಿಂದ ಇಡೀ ಪಟ್ಟಣದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಗಲಭೆ ನಡೆದ ಬಳಿಕ ಇದಕ್ಕೆ ಯಾರು ಕಾರಣ ಎಂದು ಪೊಲೀಸ್ ಇಲಾಖೆ ತನಿಖೆ ನಡೆಸಿತ್ತು. ಈ ಸಂಬಂಧ ಈಗಾಗಲೇ 55 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಪೈಕಿ ಕೇರಳದ ಮಲ್ಲಪುರಂ ಮೂಲದ ಯೂಸುಫ್ ಹಾಗೂ ನಾಸೀರ್ ಎಂಬುವವರು ಇದ್ದು, ಇವರು ನಿಷೇಧಿತ ಸಂಘಟನೆಯಾದ ಪಿಎಫ್‌ಐನಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಇದೀಗ ಗಲಭೆಯಲ್ಲಿ ಕೇವಲ ಕೇರಳ ಮೂಲದ ಪಿಎಫ್‌ಐ (PFI) ಸಂಘಟನೆಯವರು ಮಾತ್ರವಲ್ಲ. ಬಾಂಗ್ಲಾದೇಶದಿಂದ ಆಕ್ರಮವಾಗಿ ಬಂದು ನಾಗಮಂಗಲ ತಾಲೂಕಿನಲ್ಲಿ ನೆಲಸಿರುವವರು ಸಹ ಭಾಗಿಯಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

    ಕೇವಲ ಕೇರಳ ಮೂಲದವರ ಕೈವಾಡವಿಲ್ಲ. ಅಕ್ರಮವಾಗಿ ನಾಗಮಂಗಲದಲ್ಲಿ ನೆಲೆಸಿರುವ ಬಾಂಗ್ಲಾದೇಶದ ಪ್ರಜೆಗಳ ಕೈವಾಡ ಸಹ ಇದೆ ಎಂಬಂತೆ ಕಾಣುತ್ತಿದೆ. ನಾಗಮಂಗಲ ತಾಲೂಕಿನ ಹಲವೆಡೆ ತೋಟದ ಮನೆಗಳಲ್ಲಿ ಅಕ್ರಮವಾಗಿ ಬಾಂಗ್ಲಾದೇಶದ ಹಲವರು ನೆಲೆಸಿದ್ದಾರೆ. ನಾನು ಶಾಸಕನಾಗಿದ್ದ ವೇಳೆ ಪೊಲೀಸ್ ಇಲಾಖೆಗೆ ಹಾಗೂ ಆಗಿನ ಗೃಹ ಸಚಿವರಿಗೂ ಮಾಹಿತಿ ನೀಡಿದ್ದೇನೆ. ಆದರೆ ಅವರನ್ನು ಪತ್ತೆ ಹಚ್ಚುವ ಕೆಲಸ ಮಾಡಿಲ್ಲ. ಈ ತನಿಖೆಯನ್ನು ಎನ್‌ಐಎಗೆ ನೀಡಿದರೆ ಎಲ್ಲಾ ಸತ್ಯಗಳು ಹೊರಗೆ ಬರುತ್ತವೆ. ಹೀಗಾಗಿ ನಾಗಮಂಗಲ ಗಲಭೆ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಎನ್‌ಐಎಗೆ (NIA) ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ರಾತ್ರೋರಾತ್ರಿ ಸ್ಮಶಾನ ಒಡೆದು ಇಂದಿರಾ ಕ್ಯಾಂಟೀನ್ ನಿರ್ಮಾಣ – ಸ್ಥಳೀಯರಿಂದ ಆಕ್ರೋಶ

    ನಾಗಮಂಗಲದ ಗಲಭೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಬಾಂಗ್ಲಾದೇಶದವರ ಕೈವಾಡದ ಬಗ್ಗೆ ಗಂಭೀರ ಆರೋಪಗಳು ಕೇಳಿ ಬರುತ್ತಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ತನಿಖೆಯ ಜವಾಬ್ದಾರಿಯನ್ನು ಎನ್‌ಐಎಗೆ ಒಪ್ಪಿಸುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ ಎಂದಿದ್ದಾರೆ.