Tag: NIA

  • ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    – ಉಗ್ರನನ್ನು ಕರೆತರಲು ಬಹಳ ಎಚ್ಚರಿಕೆ ವಹಿಸಿದ್ದ ಭಾರತ
    – ವಿಮಾನದ ಮಧ್ಯದಲ್ಲಿ ಕುಳಿತಿದ್ದ ರಾಣಾ

    ನವದೆಹಲಿ: ಮುಂಬೈ ದಾಳಿಕೋರ ತಹಾವ್ವೂರ್‌ ರಾಣಾನನ್ನು ಅಮೆರಿಕದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ (Tahawwur Rana) ಕರೆತರಲಾಗಿದೆ. ಈ ಕರೆ ತರುವ ಪ್ರಕ್ರಿಯೆ ಬಹಳ ರಹಸ್ಯವಾಗಿತ್ತು. ಈ ಕರೆ ತರುವ ಕಾರ್ಯಾಚರಣೆಗೆ ಬಳಸಲಾದ ವಿಮಾನಕ್ಕೆ ಡಮ್ಮಿ ಕೋಡ್‌ (Dummy Code) ನೀಡಲಾಗಿತ್ತು ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.

    ಹೌದು. ವಿಮಾನವು ಪಾಲಂ ವಿಮಾನ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಇಳಿಯುವವರೆಗೂ ವಿಧ್ವಂಸಕ ಕೃತ್ಯಗಳು ನಡೆಯವ ಸಾಧ್ಯತೆ ಇದ್ದ ಕಾರಣ ಹಸ್ತಾಂತರ ಪ್ರಕ್ರಿಯೆ ಬಹಳ ಸವಾಲಿನಿಂದ ಕೂಡಿತ್ತು. ಗೃಹ ಸಚಿವಾಲಯ, NSA ಕಚೇರಿ, ಗುಪ್ತಚರ ಇಲಾಖೆ ರಾಣಾನನ್ನು ಕರೆದುಕೊಂಡು ಬರುವ ವಿಮಾನವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಿತ್ತು. ಇದನ್ನೂ ಓದಿ: 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    ರಾಣಾನನ್ನು ಕರೆತಂದ ಗಲ್ಫ್‌ಸ್ಟ್ರೀಮ್ G550 (Gulfstream) ವಿಮಾನ ಸಾರ್ವಜನಿಕ ವಿಮಾನ ಟ್ರ್ಯಾಕರ್‌ಗಳಲ್ಲಿ ಪತ್ತೆಯಾಗುವುದನ್ನು ತಪ್ಪಿಸಲು ಮತ್ತು ಯಾವುದೇ ದಾಳಿ ಆಗದೇ ಇರಲು ಈ ಚಾರ್ಟರ್ಡ್ ವಿಮಾನಕ್ಕೆ ನಕಲಿ ಕೋಡ್ ನೀಡಲಾಗಿತ್ತು. ಹೀಗಾಗಿ ಯಾವ ವಿಮಾನದಲ್ಲಿ ರಾಣಾನನ್ನು ಕರೆತರಲಾಗುತ್ತಿದೆ? ಎಷ್ಟು ಗಂಟೆಗೆ ದೆಹಲಿಗೆ ವಿಮಾನ ಲ್ಯಾಂಡ್‌ ಆಗುತ್ತಿದೆ ಎಂಬ ವಿಚಾರ ಯಾರಿಗೂ ತಿಳಿದಿರಲಿಲ್ಲ.

    ಇನ್ನೊಂದು ಮುಖ್ಯವಾದ ವಿಚಾರ ಏನೆಂದರೆ ಅಮೆರಿಕದ ಸುಪ್ರೀಂ ಕೋರ್ಟ್‌ ರಾಣಾನನ್ನು ಗಡಿಪಾರು ಮಾಡುವಾಗ ಹಲವಾರು ಷರತ್ತುಗಳನ್ನು ವಿಧಿಸಿತ್ತು. ಒಂದು ವೇಳೆ ರಾಣಾ ಕರೆತರುವಾಗ ಏನಾದರೂ ಹೆಚ್ಚು ಕಡಿಮೆಯಾದರೂ ಭಾರತದ ರಕ್ಷಣಾ ಸಂಸ್ಥೆಗಳಿಗೆ ಕಪ್ಪು ಚುಕ್ಕೆ ಬರುತ್ತಿತ್ತು. ಅಷ್ಟೇ ಅಲ್ಲದೇ ಭವಿಷ್ಯದಲ್ಲಿ ಬೇರೆ ದೇಶದಿಂದ ಉಗ್ರರನ್ನು ಕರೆ ತರುವ ಕಾರ್ಯಾಚರಣೆಗೂ ಅಡ್ಡಿಯಾಗುತ್ತಿತ್ತು. ಈ ಕಾರಣಕ್ಕೆ ಬಹಳ ಎಚ್ಚರಿಕೆ ವಹಿಸಿ ವಿಶೇಷ ವಿಮಾನದ ಮೂಲಕ ರಾಣಾನನ್ನು ಭಾರತಕ್ಕೆ ಕರೆತರಲಾಗಿದೆ.

    ವಿಮಾನವು ಬುಧವಾರ ನಸುಕಿನ ಜಾವ ಅಮೆರಿಕದ ಲಾಸ್‌ ಏಂಜಲೀಸ್‌ನಿಂದ ಹೊರಟು ರೊಮೇನಿಯಾದಲ್ಲಿ ಪಿಟ್ ಸ್ಟಾಪ್ ನಂತರ ಸಂಜೆ 6 ಗಂಟೆ ಸುಮಾರಿಗೆ ದೆಹಲಿಯಲ್ಲಿ ಲ್ಯಾಂಡ್‌ ಆಯ್ತು. ವಿಮಾನವು ಸುಮಾರು 11 ಗಂಟೆಗಳ ಕಾಲ ರೊಮೇನಿಯನ್ ರಾಜಧಾನಿಯಲ್ಲಿ ನಿಂತಿತ್ತು. ಇದನ್ನೂ ಓದಿ: ಹೈಟೆಕ್‌ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    ಭಾರತಕ್ಕೆ ಹಿಂದಿರುಗುವ ವಿಮಾನದಲ್ಲಿ, ರಾಣಾ ಮಧ್ಯದಲ್ಲಿ ಕುಳಿತಿದ್ದ ಮತ್ತು ಆತನ ಸುತ್ತಲಿನ ಎಲ್ಲಾ ಆಸನಗಳಲ್ಲಿ NSG ಕಮಾಂಡೋಗಳು ಇದ್ದರು. ನಂತರ ಹಿರಿಯ NIA ಅಧಿಕಾರಿಗಳು ಇದ್ದರು.

     

    ವಿಮಾನದಲ್ಲಿ ಇರುತ್ತೆ ಟ್ರಾನ್ಸ್‌ಪಾಂಡರ್‌ ಕೋಡ್‌
    ಆಕಾಶದಲ್ಲಿ ಹಾರಾಡುವ ಪ್ರತಿ ವಿಮಾನಕ್ಕೆ ಟ್ರಾನ್ಸ್‌ಪಾಂಡರ್‌ ಕೋಡ್‌ ಇರುತ್ತದೆ. ಟ್ರಾನ್ಸ್‌ಪಾಂಡರ್ ಕೋಡ್‌ ಮೂಲಕ ವಿಮಾನವನ್ನು ಗುರುತಿಸಲಾಗುತ್ತದೆ ಮತ್ತು ಟ್ರ್ಯಾಕ್ ಮಾಡಲಾಗುತ್ತದೆ. ಹಲವಾರು ಸಂಸ್ಥೆಗಳು ಈ ಕೋಡ್‌ ಬಳಸಿಕೊಂಡು ಆ ವಿಮಾನ ಸದ್ಯ ಯಾವ ಸ್ಥಳದಲ್ಲಿ ಹಾರಾಡುತ್ತಿದೆ ಎಂಬ ಕ್ಷಣ ಕ್ಷಣದ ಮಾಹಿತಿಯನ್ನು ಅಪ್‌ಡೇಟ್‌ ಮಾಡುತ್ತಿರುತ್ತದೆ.

    ಈ ಕೋಡ್‌ಗಳನ್ನು ವಾಯು ಸಂಚಾರ ನಿಯಂತ್ರಣದಿಂದ (ATC) ವಿಮಾನಗಳಿಗೆ ನಿಯೋಜಿಸಲಾಗುತ್ತದೆ. ಅವುಗಳನ್ನು ವಿಮಾನದ ಟ್ರಾನ್ಸ್‌ಪಾಂಡರ್‌ನೊಂದಿಗೆ ಬಳಸಲಾಗುತ್ತದೆ. ಈ ಕೋಡ್‌ ಮೂಲಕವೇ ನಿರ್ದಿಷ್ಟ ವಿಮಾನವನ್ನು ಗುರುತಿಸಲು, ಅದರ ಹಾರಾಟದ ಮಾರ್ಗ, ಎತ್ತರ ಮತ್ತು ಇತರ ಸಂಬಂಧಿತ ಮಾಹಿತಿಯನ್ನು ಟ್ರ್ಯಾಕ್ ಮಾಡಲಾಗುತ್ತದೆ.

    ವಿಮಾನ ತರಬೇತಿ ಸಮಯ ಅಥವಾ ರಾಡಾರ್ ವ್ಯವಸ್ಥೆಗಳನ್ನು ಪರೀಕ್ಷಿಸಲು ಡಮ್ಮಿ ಕೋಡ್‌ಗಳನ್ನು ಬಳಸಲಾಗುತ್ತದೆ. ಆದರೆ ಅವುಗಳನ್ನು ನೈಜ ಹಾರಾಟ ಕಾರ್ಯಾಚರಣೆಗಳಿಗೆ ಬಳಸಲಾಗುವುದಿಲ್ಲ.

  • 18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    ನವದೆಹಲಿ: 2008ರ ಮುಂಬೈ ದಾಳಿಯ (Mumbai Attack) ಪ್ರಮುಖ ಸೂತ್ರಧಾರಿ ಲಷ್ಕರ್ ಉಗ್ರ ತಹಾವ್ವೂರ್‌ ರಾಣಾನನ್ನು (Tahawwur Rana) ಕೋರ್ಟ್‌ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (NIA) ಕಸ್ಟಡಿಗೆ ನೀಡಿದೆ.

    ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ (Delhi) ಕರೆತಂದ ಬಳಿಕ ಎನ್‌ಐಎ ಬಂಧಿಸಿತು. ಬಂಧನದ ಬಳಿಕ ತಡರಾತ್ರಿ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.  ಇದನ್ನೂ ಓದಿ: ಹೈಟೆಕ್‌ ವಿಮಾನ, 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    ಈ ವೇಳೆ ಎನ್‌ಐಎ ಪರ ವಕೀಲರು, ಮುಂಬೈ ದಾಳಿಯ ಪಿತೂರಿಗ ಸಂಬಂಧಿಸಿದಂತೆ ಉಗ್ರ ಹೆಡ್ಲಿ (David Headley) ಮತ್ತು ರಾಣಾ ನಡುವಿನ ಇಮೇಲ್‌ ಪುರಾವೆಗಳನ್ನು ಉಲ್ಲೇಖಿಸಿದರು. ಕ್ರಿಮಿನಲ್ ಪಿತೂರಿಯ ಭಾಗವಾಗಿ ಡೇವಿಡ್ ಹೆಡ್ಲಿ ಭಾರತಕ್ಕೆ ಭೇಟಿ ನೀಡುವ ಮೊದಲು ತಹವ್ವೂರ್ ರಾಣಾನ ಜೊತೆ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಚರ್ಚಿಸಿದ್ದ. ಹೀಗಾಗಿ ಆತನನ್ನು ಕಸ್ಟಡಿಗೆ ನೀಡುವಂತೆ ಮನವಿ ಮಾಡಿದರು. ಈ ವಾದವನ್ನು ಪುರಸ್ಕರಿಸಿದ ಕೋರ್ಟ್‌ 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿತು.

    ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ನಡೆಸುವುದು, ಕೊಲೆ ಮತ್ತು ನಕಲಿ ದಾಖಲೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (UAPA) ಕಾಯ್ದೆಯಡಿಯಲ್ಲಿ ರಾಣಾ ಮೇಲೆ ಆರೋಪ ಹೊರಿಸಲಾಗಿದೆ. 64 ವರ್ಷದ ತಹವ್ವೂರ್ ರಾಣಾನನ್ನು ವಿಚಾರಣೆ ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ.

    ಮಧ್ಯರಾತ್ರಿವರೆಗೂ ನಡೆದ ವಿಚಾರಣೆ ವೇಳೆ ಎನ್‌ಐಎ ಕಚೇರಿ ಸುತ್ತಮುತ್ತ ಭಾರೀ ಪೊಲೀಸ್‌ ಭದ್ರತೆಯನ್ನು ನಿಯೋಜಿಸಲಾಗಿತ್ತು. ಇದನ್ನೂ ಓದಿ: ಬಾಂಬ್‌ ದಾಳಿಗೂ ಜಗ್ಗಲ್ಲ – ಮುಂಬೈ ದಾಳಿಕೋರನನ್ನ ಕರೆತರಲು ಸಿದ್ಧವಾಯ್ತು NIA ಬುಲೆಟ್ ಪ್ರೂಫ್ ಕಾರು

    ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದರ್ ಮಾನ್ ಎನ್‌ಐಎ ಪರ ವಾದಿಸಿದರು. ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ವಕೀಲ ಪಿಯೂಷ್ ಸಚ್‌ದೇವ ತಹವ್ವೂರ್ ರಾಣಾ ಪರ ವಾದಿಸಿದರು.

    ತಹವ್ವೂರ್ ರಾಣಾನ ಯಶಸ್ವಿ ಹಸ್ತಾಂತರದ ಬಗ್ಗೆ ಮಾತನಾಡಿದ ಅಮೆರಿಕದ ವಕ್ತಾರ ಟ್ಯಾಮಿ ಬ್ರೂಸ್, ಜಾಗತಿಕ ಭಯೋತ್ಪಾದನೆಯನ್ನು ಎದುರಿಸಲು ಎರಡೂ ದೇಶಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತಿರುವುದರಿಂದ ಅವುಗಳ ನಡುವಿನ ಕ್ರಿಯಾಶೀಲತೆಯ ಬಗ್ಗೆ ಯುಎಸ್ ಹೆಮ್ಮೆಪಡುತ್ತದೆ ಎಂದು ಹೇಳಿದರು.

  • 64 ವಯಸ್ಸಿನ ಉಗ್ರ ರಾಣಾ ಫೋಟೊ ರಿಲೀಸ್‌

    64 ವಯಸ್ಸಿನ ಉಗ್ರ ರಾಣಾ ಫೋಟೊ ರಿಲೀಸ್‌

    ನವದೆಹಲಿ: ಮುಂಬೈ ದಾಳಿಯ (Mumbai Attack) ಸಂಚುಕೋರ, 64 ವರ್ಷ ವಯಸ್ಸಿನ ತಹವ್ವೂರ್‌ ರಾಣಾನ (Tahawwur Rana) ಫೋಟೊ ರಿಲೀಸ್‌ ಆಗಿದೆ. ಎನ್‌ಐಎ ಅಧಿಕಾರಿಗಳ ಜೊತೆ ರಾಣಾ ಇರುವ ಫೋಟೊ ಬಹಿರಂಗಗೊಂಡಿದೆ.

    ತಹವ್ವೂರ್ ಹುಸೇನ್ ರಾಣಾನನ್ನು ಎನ್‌ಐಎ ಅಧಿಕಾರಿಗಳು ಔಪಚಾರಿಕ ಬಂಧನ ಮಾಡಿದ್ದಾರೆ. ಪಾಲಂ ಏರ್‌ಬೇಸ್‌ನಲ್ಲಿ ಇಂದು ಸಂಜೆ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ರಾಣಾನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಹೈಟೆಕ್‌ ವಿಮಾನ, ಬುಕಾರೆಸ್ಟ್‌ನಿಂದ 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    26/11 ಭಯೋತ್ಪಾದಕ ದಾಳಿಯ ಸಂಚುಕೋರ, ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ತಹವ್ವೂರ್ ಹುಸೇನ್ ರಾಣಾನನ್ನು ಗುರುವಾರ ದೆಹಲಿಯ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಬುಧವಾರ ವಿಶೇಷ ವಿಮಾನದಲ್ಲಿ ಅಮೆರಿಕದಿಂದ ಆತನನ್ನು ಗಡೀಪಾರು ಮಾಡಲಾಗಿತ್ತು.

    ಭಯೋತ್ಪಾದಕ ರಾಣಾನನ್ನು ದೆಹಲಿಯ ಹೆಚ್ಚಿನ ಭದ್ರತೆ ಕಲ್ಪಿಸಲಾಗಿರುವ ತಿಹಾರ್ ಜೈಲಿನಲ್ಲಿ ಇರಿಸಬಹುದು. ಅಂತಿಮವಾಗಿ ವಿಚಾರಣೆಯನ್ನು ಎದುರಿಸಲು ಮುಂಬೈಗೆ ಸ್ಥಳಾಂತರಿಸಬಹುದು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ ಅರೆಸ್ಟ್‌

    ಉಗ್ರನ ಮೇಲೆ ಕ್ರಿಮಿನಲ್ ಪಿತೂರಿ, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರುವುದು, ಕೊಲೆ ಮತ್ತು ನಕಲಿ ದಾಖಲೆ ಸೃಷ್ಟಿ, ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

  • ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ

    ಪೊಲೀಸ್‌ ಜೀಪನ್ನೇ ಪಲ್ಟಿ ಮಾಡಿದ್ದ ಹುಬ್ಬಳ್ಳಿ ಗಲಭೆಕೋರರು ಅಮಾಯಕರೇ? – ಕೇಸ್ ವಾಪಸ್‌ಗೆ ಸರ್ಕಾರದ ಅರ್ಜಿ

    – ಮತಾಂಧರ ಮೇಲ್ಯಾಕೆ ಪ್ರೀತಿ : ಬಿಜೆಪಿ ಆಕ್ರೋಶ

    ಬೆಂಗಳೂರು: ಹುಬ್ಬಳ್ಳಿ ಗಲಭೆ (Hubballi Violence) ಪ್ರಕರಣ ಸೇರಿ 43 ಕೇಸ್‌ಗಳನ್ನು ಹಿಂಪಡೆಯಲು ರಾಜ್ಯ ಸರ್ಕಾರ (Karnataka Government) ಮುಂದಾಗಿದೆ. ಹುಬ್ಬಳ್ಳಿ ಗಲಭೆಗೆ ಸಂಬಂಧಿಸಿದ 7 ಪ್ರಕರಣಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಸರ್ಕಾರ ಆರಂಭಿಸಿದೆ.

    ರಾಷ್ಟ್ರೀಯ ತನಿಖಾ ದಳದ (NIA) ನ್ಯಾಯಾಲಯಕ್ಕೆ ಕೇಸ್‌ ವಾಪಸಾತಿ ಅರ್ಜಿಯನ್ನು ಎಸ್‌ಪಿಪಿ ಮೂಲಕ ಸಲ್ಲಿಸಿದೆ. ಪ್ರಕರಣದ ವಿಚಾರಣೆ ಏಪ್ರಿಲ್ 7ಕ್ಕೆ ಮುಂದೂಡಿಕೆಯಾಗಿದೆ. ಕೇಸ್ ಹಿಂಪಡೆಯುವ ಸರ್ಕಾರದ ತೀರ್ಮಾನ ಆಕ್ಷೇಪಿಸಿ ಇಬ್ಬರು ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಗಳ ವಿಚಾರಣೆ ಮಾರ್ಚ್ 17ರಂದು ನಡೆಯಲಿದೆ.

    ಸರ್ಕಾರದ ನಡೆಯನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಹುಬ್ಬಳ್ಳಿ ಠಾಣೆ ಮೇಲೆ ದಾಳಿ ಮಾಡಿರುವವರು ದೇಶ ಪ್ರೇಮಿಗಳಾ? ಇವರಿಗೆ ಯಾವುದರಲ್ಲಿ ಹೊಡಿಯಬೇಕು ಎಂದು ಸಿಟಿ ರವಿ ಸಿಟ್ಟಾಗಿದ್ದಾರೆ.

    Hubballi Riot
    ಹುಬ್ಬಳ್ಳಿ ಗಲಭೆಯಲ್ಲಿ ಕಲ್ಲು ತೂರುತ್ತಿರುವ ಕಿಡಿಗೇಡಿಗಳು

    ಸರ್ಕಾರದ ಕಾರಣ ಏನು?
    ಸುಳ್ಳು ಕೇಸ್ ಹಾಕಿದ್ರೆ ಪರಿಶೀಲಿಸಿ ವಾಪಸ್ ಪಡೆಯಲು ಸರ್ಕಾರಕ್ಕೆ ಅವಕಾಶ ಇದೆ. ಅಷ್ಟೊಂದು ಜನರ ಮೇಲೆ ಹಾಕುವ ಅಗತ್ಯವಿಲ್ಲ ಎಂದು ಸಂಪುಟ ಉಪಸಮಿತಿ ಅಭಿಪ್ರಾಯಪಟ್ಟಿದೆ.

    ಈ ಪ್ರಕರಣದಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ, ವಿದ್ಯಾರ್ಥಿಗಳು, ರೈತರು ಇದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಹಲವು ಕೇಸ್ ವಾಪಸ್ ಪಡೆದಿತ್ತು. ಉತ್ತರ ಪ್ರದೇಶದಲ್ಲೂ ಅಲ್ಲಿನ ಸಿಎಂ ವಿರುದ್ಧದ ಹಲವು ಕೇಸ್ ಹಿಂಪಡೆಯಲಾಗಿದೆ.  ಇದನ್ನೂ ಓದಿ: ಕರ್ನಾಟಕ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮ – ಬೆನ್ನು ತಟ್ಟಿಕೊಂಡ ಪರಮೇಶ್ವರ್

    ಏನಿದು ಪ್ರಕರಣ?
    ಏಪ್ರಿಲ್ 16, 202 ರಂದು ಯುವಕನೊಬ್ಬ ವಿವಾದಾತ್ಮಕ ಪೋಸ್ಟ್ ಒಂದನ್ನು ಹಾಕಿದ್ದ. ಈ ವಿಚಾರಕ್ಕೆ ಸಂಬಂಧಿಸಿ ಗಲಭೆ ನಡೆದು ಉದ್ರಿಕ್ತರು ಹಳೆ ಹುಬ್ಬಳ್ಳಿ ಠಾಣೆ ಎದುರು ಪೊಲೀಸರು ಹಾಗೂ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಈ ಸಂಬಂಧ 11 ಎಫ್‌ಐಆರ್‌ ದಾಖಲಾಗಿ 155 ಮಂದಿ ಮೇಲೆ ಕೇಸ್‌ ದಾಖಲಾಗಿತ್ತು. ಈ ಘಟನೆಯಲ್ಲಿ 10ಕ್ಕೂ ಹೆಚ್ಚು ಪೊಲೀಸ್‌ ವಾಹನಗಳಿಗೆ ಹಾನಿಯಾಗಿದ್ದರೆ ಇಬ್ಬರು ಪೊಲೀಸ್‌ ಸಿಬ್ಬಂದಿ ಗಂಭೀರ ಗಾಯಗೊಂಡಿದ್ದರು.

    ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಳೇ ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಕೈಬಿಡುವಂತೆ ಡಿಸಿಎಂ ಡಿಕೆ ಶಿವಕುಮಾರ್‌ ಗೃಹ ಇಲಾಖೆಗೆ ಪತ್ರ ಬರೆದಿದ್ದರು. ಡಿಕೆಶಿ ಅವರ ಪತ್ರ ಆಧರಿಸಿ ಪ್ರಕರಣದ ಮಾಹಿತಿಯನ್ನು ಸಲ್ಲಿಸುವಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್‌ ಆಯುಕ್ತರಿಗೆ ಎಡಿಜಿಪಿ ಸೂಚಿಸಿದ್ದರು.   2023 ಸೆಪ್ಟೆಂಬರ್‌ನಲ್ಲಿ ಎಲ್ಲಾ ಜಿಲ್ಲೆಗಳ ಎಸ್ಪಿ, ಕಮೀಷನರ್ ಗಳಿಗೆ ಡಿಜಿ-ಐಜಿ ಪತ್ರ ಬರೆದು ನಿಮ್ಮ ಜಿಲ್ಲೆಗಳಲ್ಲಿ ಕೇಸ್ ವಾಪಸ್ ಪಡೆಯುವ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು.

  • ಪಾಕ್‌ ಬೆಡಗಿಗೆ ಕಾರವಾರ ನೌಕಾನೆಲೆಯ ಮಾಹಿತಿ, ಪ್ರತಿ ತಿಂಗಳು 5,000 ಜಮೆ -‌ ಎನ್‌ಐಎಯಿಂದ ಇಬ್ಬರು ಅರೆಸ್ಟ್

    ಪಾಕ್‌ ಬೆಡಗಿಗೆ ಕಾರವಾರ ನೌಕಾನೆಲೆಯ ಮಾಹಿತಿ, ಪ್ರತಿ ತಿಂಗಳು 5,000 ಜಮೆ -‌ ಎನ್‌ಐಎಯಿಂದ ಇಬ್ಬರು ಅರೆಸ್ಟ್

    ಕಾರವಾರ: ಐಎನ್ಎಸ್ ಕದಂಬ ನೌಕಾ ನೆಲೆಯ (Karwar Naval Base) ಮಾಹಿತಿಗಳನ್ನು ಪಾಕಿಸ್ತಾನದ (Pakistan) ಏಜೆಂಟ್‌ ಜೊತೆ ಹಂಚಿಕೊಂಡ ಆರೋಪದ ಮೇಲೆ ಹೈದರಾಬಾದ್‌ನ ರಾಷ್ಟ್ರೀಯ ತನಿಖಾ ದಳ (NIA) ತಂಡ ಇಬ್ಬರು ಆರೋಪಿಗಳನ್ನು ಕಾರವಾರದಲ್ಲಿ ಬಂಧಿಸಿದೆ.

    ಬಂಧಿತ ಆರೋಪಿಗಳನ್ನು ಕಾರವಾರ ತಾಲೂಕಿನ ಮುದುಗಾದ ವೇತನ್ ತಾಂಡೇಲ್, ಹಳವಳ್ಳಿಯ ಅಕ್ಷಯ್ ನಾಯ್ಕ್‌ ಎಂದು ಗುರುತಿಸಲಾಗಿದೆ. ಆರೋಪಿಗಳು 2023ರಲ್ಲಿ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಪಾಕ್‌ನ ಏಜೆಂಟ್ ಮಹಿಳೆ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಆಕೆ ತಾನು ನೌಕಾದಳದ ಅಧಿಕಾರಿ ಎಂದು ಪರಿಚಯ ಮಾಡಿಕೊಂಡು ನೌಕಾದಳದ ನೌಕೆಗಳು, ಅದರ ಚಲನವಲನ, ನೌಕೆಗಳ ಚಿತ್ರಗಳು, ಕದಂಬ ನೌಕಾದಳದ ಸ್ಥಳಗಳ ಮಾಹಿತಿ ಪಡೆದಿದ್ದಳು ಎಂದು ತಿಳಿದು ಬಂದಿದೆ.

    ಇದಕ್ಕಾಗಿ ಪ್ರತಿ ತಿಂಗಳು 5,000 ರೂ. ನಂತೆ ಎಂಟು ತಿಂಗಳ ಕಾಲ ಮೂವರ ಖಾತೆಗೆ ದೀಪಕ್ ಎನ್ನುವ ಹೆಸರಿನ ಖಾತೆಯಿಂದ ಹಣ ಕಳುಹಿಸಲಾಗುತ್ತಿತ್ತು. 2023 ರಲ್ಲಿ ಎನ್ಐಎ ತಂಡ ದೀಪಕ್ ಹಾಗೂ ಆತನ ತಂಡವನ್ನು ಬಂಧಿಸಿದಾಗ ಕಾರವಾರದ ಮೂವರು ಮಾಹಿತಿ ನೀಡುತ್ತಿದ್ದ ಹಾಗೂ ನೌಕಾದಳದ ಅಧಿಕಾರಿಗಳು ಹನಿಟ್ರ್ಯಾಪ್‌ಗೆ ಒಳಗಾದ ಕುರಿತು ಮಾಹಿತಿ ದೊರೆತಿತ್ತು.

    ತಕ್ಷಣ 2023ರ ಆಗಷ್ಟ್ 28 ರಂದು ಕಾರವಾರದಲ್ಲಿ ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ ಈ ಮೂವರನ್ನು ವಶಕ್ಕೆ ಪಡೆದು, ಇವರ ಬಳಿ ಇದ್ದ ಎಲೆಕ್ಟ್ರಾನಿಕ್ ಉಪಕರಣ, ಮೊಬೈಲ್ ವಶಕ್ಕೆ ಪಡೆದು ತನಿಖೆಗೆ ಹಾಜರಾಗುವಂತೆ ಎನ್‌ಐಎ ನೋಟಿಸ್‌ ಜಾರಿ ಮಾಡಿತ್ತು.

    ಇದರ ನಂತರ ಇದೇ ಪ್ರಕರಣದಲ್ಲಿ ತನಿಖೆ ಮುಂದುವರೆಸಿದ್ದ ಹೈದರಾಬಾದ್ ಹಾಗೂ ಬೆಂಗಳೂರು ಎನ್ಐಎ ತಂಡ ಇದೀಗ ಇಬ್ಬರನ್ನು ಬಂಧಿಸಿದೆ. ಆರೋಪಿಗಳನ್ನು ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಲಯಕ್ಕೆ ಹಾಜುರು ಪಡಿಸಿ ಹೆಚ್ಚಿನ ತನಿಖೆಗಾಗಿ ಹೈದರಾಬಾದ್ ಅಥವಾ ದೆಹಲಿಗೆ ಕರೆದೊಯ್ಯುವ ಸಾಧ್ಯತೆಗಳಿವೆ.

    ಮೂರು ಜನರ ಮೇಲೆ ಇರುವ ಆರೋಪ ಏನು?: ಕಾರವಾರದ ಚೆಂಡಿಯಾದಲ್ಲಿ ಇರುವ ಮರ್ಕ್ಯುರಿ ಹಾಗೂ ಅಲ್ಟ್ರಾ ಮರೈನ್ ಕಂಪನಿಯಲ್ಲಿ ವೇತನ್ ಹಾಗೂ ಅಕ್ಷಯ್ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ಕಂಪನಿ ಕದಂಬ ನೌಕಾನೆಲೆಯಲ್ಲಿ ಯುದ್ದ ನೌಕೆಗಳ ರಿಪೇರಿ ಕಾರ್ಯವನ್ನು ನಡೆಸುತ್ತದೆ. ತೋಡೂರಿನ ಸುನಿಲ್, ಕದಂಬ ನೌಕಾನೆಲೆಯ ನೇವಿ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತಿದ್ದು, ನಂತರ ಚಾಲಕ ವೃತ್ತಿ ಮಾಡುತಿದ್ದ.

    2023 ರಲ್ಲಿ ಪಾಕಿಸ್ತಾನದ ಮಹಿಳಾ ಏಜೆಂಟ್ ಫೇಸ್‌ಬುಕ್‌ನಲ್ಲಿ ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿದ ನಂತರ, ಮುದುಗಾದ ವೇತನ್ ತಾಂಡೇಲ್, ತೋಡೂರಿನ ಸುನೀಲ್ ಹಾಗೂ ಹಳವಳ್ಳಿಯ ಅಕ್ಷಯ್ ನಾಯ್ಕ್‌ ಈ ಮಹಿಳೆಗೆ ಹತ್ತಿರವಾಗಿದ್ದರು.

    ಈ ಮಹಿಳೆ ದೀಪಕ್ ಎಂಬುವವನನ್ನು ಮಧ್ಯವರ್ತಿಯಾಗಿ ಬಳಸಿಕೊಂಡು ಇವರಿಗೆ ಮಾಹಿತಿ ನೀಡುವುದಕ್ಕಾಗಿ ತಲಾ 5 ಸಾವಿರ ರೂ. ಹಣ ಸಂದಾಯ ಮಾಡುತಿದ್ದಳು. ದೀಪಕ್ ಬಂಧನವಾಗುತಿದ್ದಂತೆ ಸುನಿಲ್ ಮೂರು ವರ್ಷಗಳ ಹಿಂದೆ ನೌಕಾ ನೆಲೆಯಲ್ಲಿ ತನ್ನ ಕೆಲಸವನ್ನು ಬಿಟ್ಟು ಗೋವಾದ ರೆಸ್ಟೋರೆಂಟ್‌ಗೆ ಸೇರಿಕೊಂಡಿದ್ದ. ಇನ್ನೂ ವೇತನ್ ತಾಂಡೇಲ್ ಕೆಲಸ ಬಿಟ್ಟರೂ ನೌಕಾ ನೆಲೆಯಲ್ಲಿ ಕೆಲಸ ಮಾಡುವ ತನ್ನ ಸ್ನೇಹಿತರು ಮತ್ತು ಸಂಬಂಧಿಕರಿಂದ ನೌಕಾನೆಲೆಯ ಮಾಹಿತಿ ಪಡೆದು ಪಾಕಿಸ್ತಾನದ ಏಜೆಂಟ್‌ಗೆ ಕಳುಹಿಸುತಿದ್ದ.

    ಮೊಬೈಲ್, ಎಲಕ್ಟಾನಿಕ್ ಗ್ಯಾಜೆಟ್‌ನಲ್ಲಿತ್ತು ಮಾಹಿತಿ: ವಶಪಡಿಸಿಕೊಂಡ ಮೊಬೈಲ್, ಎಲೆಕ್ಟ್ರಾನಿಕ್‌ ಉಪಕರಣಗಳ ಶೋಧ ನಡೆಸಿದ ಎನ್ಐಎ ತಂಡಕ್ಕೆ ನೌಕಾದಳದ ಅಧಿಕಾರಿಗಳು, ನೌಕಾನೆಲೆಯ ನೌಕೆಯಲ್ಲಿ ತಾಂತ್ರಿಕ ತಜ್ಞರಾಗಿ ಕಾರ್ಯನಿರ್ವಹಿಸುವ ಗುತ್ತಿಗೆ ನೌಕರರ ಸಂಪರ್ಕ ಹೊಂದಿದ್ದ ಮಾಹಿತಿ ಹೊರಬಿದ್ದಿದೆ. ಇದಲ್ಲದೇ ನೌಕಾದಳದ ಅಧಿಕಾರಿಗಳು ಹನಿಟ್ರ್ಯಾಪ್ ಆಗಿರುವ ಸಾಧ್ಯತೆಗಳಿದ್ದು ಈ ಬಗ್ಗೆ ಸಹ ತನಿಖೆ ಕೈಗೊಳ್ಳಲಾಗಿದೆ.

  • ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ

    ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಬಂಧನ

    ನವದೆಹಲಿ/ಮಂಗಳೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.

    ಅತೀಖ್‌ ಅಹ್ಮದ್‌ ಬಂಧಿತ ಆರೋಪಿ. ಪ್ರಕರಣದಲ್ಲಿ ಇದುವರೆಗೆ 21 ಆರೋಪಿಗಳನ್ನು ಅರೆಸ್ಟ್‌ ಮಾಡಲಾಗಿದೆ. 2022 ರ ಜುಲೈನಲ್ಲಿ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸದಸ್ಯರು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ಉಳಿದ ಆರು ಆರೋಪಿಗಳನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದ್ದು, ಅವರ ತಲೆಗೆ ಇನಾಮು ಘೋಷಿಸಿದೆ.

    ಪಿಎಫ್‌ಐ ನಾಯಕತ್ವದ ಮಾರ್ಗದರ್ಶನದಲ್ಲಿ ಅತೀಖ್, ಪ್ರಕರಣದ ಪ್ರಮುಖ ಸಂಚುಕೋರ ಎಂದು ಗುರುತಿಸಲ್ಪಟ್ಟ ಮುಸ್ತಫಾ ಪೈಚಾರ್‌ಗೆ ಆಶ್ರಯ ನೀಡಿ ಸಹಾಯ ಮಾಡಿದ್ದ. ಜನರಲ್ಲಿ ಭಯ ಮತ್ತು ಕೋಮು ಅಶಾಂತಿಯನ್ನು ಹುಟ್ಟುಹಾಕಲು ಪಿಎಫ್‌ಐ ಕಾರ್ಯಸೂಚಿಯ ಭಾಗವಾಗಿ ಮುಸ್ತಫಾ ಕೊಲೆಯನ್ನು ಯೋಜಿಸಿ ಕಾರ್ಯಗತಗೊಳಿಸಿದ್ದ.

    ಪ್ರವೀಣ್‌ ನೆಟ್ಟಾರು ಹತ್ಯೆ ಬಳಿಕ ಮುಸ್ತಫಾ ಪರಾರಿಯಾಗಿದ್ದ. ಅತೀಖ್ ಆತ ಎಸ್ಕೇಪ್‌ ಆಗಲು ಅನುಕೂಲ ಮಾಡಿಕೊಟ್ಟಿದ್ದ. ಮೇ 2024 ರಲ್ಲಿ ಮುಸ್ತಫಾ ಬಂಧನವಾಗುವವರೆಗೂ ಕಾನೂನು ಜಾರಿ ಸಂಸ್ಥೆಗಳಿಂದ ತಪ್ಪಿಸಿಕೊಳ್ಳಲು ಅತೀಕ್ ಸಹಾಯ ಮಾಡಿದ್ದ.

    2022 ರ ಆಗಸ್ಟ್‌ನಲ್ಲಿ ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ವಹಿಸಿಕೊಂಡಿದ್ದ NIA ತನಿಖೆಯ ಸಂದರ್ಭದಲ್ಲಿ, ‘PFI “PFI ಸೇವಾ ತಂಡಗಳು” ಎಂದು ಕರೆಯಲ್ಪಡುವ ರಹಸ್ಯ ತಂಡಗಳನ್ನು ರಚಿಸಿದೆ. ನೆಟ್ಟಾರು ಥರದವರನ್ನು ಗುರಿಯಾಗಿಸಿ ಹತ್ಯೆಗಳನ್ನು ನಡೆಸಲು ಶಸ್ತ್ರಾಸ್ತ್ರ ಮತ್ತು ಕಣ್ಗಾವಲು ತರಬೇತಿ ಪಡೆದಿದೆ’ ಎಂದು ತಿಳಿಸಿತ್ತು.

  • ಶಿವಮೊಗ್ಗ ಹರ್ಷ ಕೊಲೆ ಕೇಸ್‌| ಸಾಕ್ಷಿಗೆ ಬೆದರಿಕೆ ಹಾಕಿದ ಯುವಕನ ಮೇಲೆ ಎಫ್‌ಐಆರ್‌

    ಶಿವಮೊಗ್ಗ ಹರ್ಷ ಕೊಲೆ ಕೇಸ್‌| ಸಾಕ್ಷಿಗೆ ಬೆದರಿಕೆ ಹಾಕಿದ ಯುವಕನ ಮೇಲೆ ಎಫ್‌ಐಆರ್‌

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ (Harsha Murder Case) ಸಂಬಂಧಿಸಿಂತೆ ಸಾಕ್ಷಿಗೆ (Witness) ಬೆದರಿಕೆ ಹಾಕಿದ ಯುವಕನ ವಿರುದ್ಧ ಕೇಸ್‌ ದಾಖಲಾಗಿದೆ.

    ಎನ್‌ಐಎ ನ್ಯಾಯಾಲಯದ ಸೂಚನೆ ಮೇರೆಗೆ ಶಿವಮೊಗ್ಗದ (Shivamogga) ತುಂಗಾನಗರ ಠಾಣೆಯಲ್ಲಿ ಅನಾಮಿಕ ವ್ಯಕ್ತಿಯ ಮೇಲೆ ಸಾಕ್ಷಿಯೊಬ್ಬರು ದೂರು ನೀಡಿದ ನಂತರ ಎಫ್‌ಐಆರ್‌ (FIR) ದಾಖಲಾಗಿದೆ.

    ಏನಿದು ಪ್ರಕರಣ?
    ಶಿವಮೊಗ್ಗದ ಸೀಗೆಹಟ್ಟಿ ಬಳಿ ಎರಡು ವರ್ಷದ ಹಿಂದೆ ಹರ್ಷ ಹತ್ಯೆ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೆಟ್ರೋಲ್‌ ಬಂಕ್‌ ಉದ್ಯೋಗಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷಿಯಾಗಿ ಪರಿಗಣಿಸಿತ್ತು.  ಇದನ್ನೂ ಓದಿ: ಇವಿಎಂ ದೂರೋದನ್ನು ನಿಲ್ಲಿಸಿ, ಫಲಿತಾಂಶವನ್ನು ಸ್ವೀಕರಿಸಿ – ಕಾಂಗ್ರೆಸ್‌ಗೆ ಉಮರ್ ಅಬ್ದುಲ್ಲಾ ಕಿವಿಮಾತು

    ಈಗ ಆತನಿಗೆ ಅಪರಿಚಿತನೊಬ್ಬ ಬೆದರಿಕೆ ಒಡ್ಡಿರುವ ಆರೋಪ ಕೇಳಿ ಬಂದಿದೆ. ಹಿಂದೂ ಹರ್ಷ ಹತ್ಯೆಯಾದ ದಿನ ಆರೋಪಿಗಳು ಶಿವಮೊಗ್ಗದ ಪೆಟ್ರೋಲ್‌ ಬಂಕ್‌ನಲ್ಲಿ ತಮ್ಮ ಕಾರಿಗೆ ಇಂಧನ ಭರ್ತಿ ಮಾಡಿಸಿಕೊಂಡಿದ್ದರು. ಪೆಟ್ರೋಲ್‌ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಪೆಟ್ರೋಲ್‌ ಭರ್ತಿ ಮಾಡಿದ್ದ. ಈ ಕಾರಣಕ್ಕೆ ಆತನನ್ನು ಸಾಕ್ಷಿಯಾಗಿ ಪರಿಗಣಿಸಲಾಗಿತ್ತು.

    ಸದ್ಯ ಆ ಯುವಕ ಪೆಟ್ರೋಲ್‌ ಬಂಕ್‌ ತೊರೆದು ಬೇರೆ ಕೆಲಸ ಮಾಡುತ್ತಿದ್ದಾನೆ. ಕೆಲ ದಿನಗಳ ಹಿಂದೆ ಪೆಟ್ರೋಲ್‌ ಬಂಕ್‌ಗೆ ಸ್ಕೂಟಿಯಲ್ಲಿ ತೆರಳಿದ್ದ ವ್ಯಕ್ತಿಯೊಬ್ಬ ಆ ಯುವಕ ಯಾರು ಎಂದು ವಿಚಾರಿಸಿದ್ದ. ಆತ ಕೆಲಸ ಬಿಟ್ಟಿರುವುದಾಗಿ ತಿಳಿಸಿದಾಗ, ‘ಕೋರ್ಟ್‌ಗೆ ಹೋಗುವುದು ಬೇಡ ಎಂದು ಹೇಳಿ’ ಎಂದು ಬಂಕ್‌ ಸಿಬ್ಬಂದಿಗೆ ತಿಳಿಸಿ ಹೋಗಿದ್ದ ಎಂದು ಆರೋಪಿಸಲಾಗಿದೆ.

    ಈ ವಿಷಯ ಸ್ನೇಹಿತರಿಂದ ಯುವಕನಿಗೆ ಗೊತ್ತಾಗಿದೆ. ಡಿ.12ರಂದು ಎನ್‌ಐಎ ನ್ಯಾಯಾಲಯದಲ್ಲಿ ಯುವಕ ಸಾಕ್ಷಿ ನುಡಿದಿದ್ದಾನೆ. ಮರುದಿನ ಕೋರ್ಟ್‌ ಸೂಚನೆ ಮೇರೆಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

     

  • ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – NIAಯಿಂದ 16 ಕಡೆ ದಾಳಿ

    ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – NIAಯಿಂದ 16 ಕಡೆ ದಾಳಿ

    ನವದೆಹಲಿ: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಕರ್ನಾಟಕದ 16 ಸ್ಥಳಗಳಲ್ಲಿ ದಾಳಿ ನಡೆಸಿದೆ.

    ಬೆಂಗಳೂರು, ಕೊಡಗು, ಚೆನ್ನೈ, ಎರ್ನಾಕುಲಂ ಸೇರಿದಂತೆ 16 ಕಡೆ ದಾಳಿ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಚಿಕ್ಕೋಡಿ| ಪ್ರೀತಿಗೆ ವಿರೋಧ; ಪ್ರಿಯಕರನಿಂದ ಡಬಲ್ ಮರ್ಡರ್

    ಕೊಡಗಿನ 4 ಕಡೆ ದಾಳಿ:
    ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಗುರುವಾರ ಕರ್ನಾಟಕದ 16 ಸ್ಥಳಗಳಲ್ಲಿ ದಾಳಿ ನಡೆಸಿದೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ಮಡಿಕೇರಿ ಹಾಗೂ ಸುಂಟಿಕೊಪ್ಪದಲ್ಲಿ ಪರಿಶೀಲನೆ ನಡೆಸಿದೆ. ಇಂದು ಬೆಳಿಗ್ಗೆ ನಸುಕಿನ ಸಮಯದಲ್ಲಿ ಮಡಿಕೇರಿಯ ಮುಸ್ತಾಫಾ, ಹೊಸತೋಟದ ನಿವಾಸಿ ಜುನೈದ್ ಸೋಮವಾರಪೇಟೆ ತಾಲ್ಲೂಕಿನ ಚೌಡ್ಲು ಗ್ರಾಮದ ತೌಶಿಕ್, ಸುಂಟಿಕೊಪ್ಪದ ಹನೀಫ್ ಎಂಬುವರ ಮನೆ ಮೇಲೆ ಏಕಾ‌ಕಾಲದಲ್ಲಿ ದಾಳಿ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ ದಾಖಲಾತಿಗಳನ್ನು ಪರಿಶೀಲನೆ ನಡೆಸಿ, ಮನೆಯವರ ವಿಚಾರಣೆ ನಡೆಸಿ ತೆರಳಿದೆ. ಸದ್ಯಕ್ಕೆ ಯಾವುದೇ ವ್ಯಕ್ತಿಯನ್ನೂ ಬಂಧಿಸಿಲ್ಲ ಎಂದು ಮೂಲಗಳು ತಿಳಿಸಿವೆ.

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಪ್ರವೀಣ್ ನೆಟ್ಟಾರು ಅವರನ್ನು 2022ರ ಜುಲೈನಲ್ಲಿ ದ್ವಿಚಕ್ರವಾಹನದಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೊಂದಿದ್ದರು. ಆರೋಪಿಗಳು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಎನ್ನಲಾಗಿದೆ.

    ಆ.4 ರಂದು ತನಿಖೆಯನ್ನು ಕೈಗೆತ್ತಿಕೊಂಡ ಎನ್ಐಎ ಇದುವರೆಗೆ 19 ಜನರನ್ನು ಬಂಧಿಸಿದೆ. 21 ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಪರಾರಿಯಾಗಿರುವ ಇತರರನ್ನು ಪತ್ತೆಹಚ್ಚಲು ಸಂಸ್ಥೆ ತನ್ನ ಶೋಧವನ್ನು ಮುಂದುವರೆಸಿದೆ. ಇದನ್ನೂ ಓದಿ: ದೆಹಲಿಯಲ್ಲಿ ಅಪ್ಪ-ಅಮ್ಮ, ಸಹೋದರಿ ಹತ್ಯೆ ಪ್ರಕರಣ – ಮಗನಿಂದಲೇ ಕೃತ್ಯ

    ಕೊಡಗು ಜಿಲ್ಲೆಯ ನಿವಾಸಿಯಾದ ತುಫೈಲ್, ಪಿಎಫ್‌ಐ ‘ಸೇವಾ ತಂಡ’ಗಳ ಉಸ್ತುವಾರಿ ಮತ್ತು ನಿಷೇಧಿತ ಸಂಘಟನೆಯ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ಸುಧಾರಿತ ತರಬೇತಿಯನ್ನು ನಿಯಮಿತವಾಗಿ ನೀಡುವ ‘ಪಿಎಫ್‌ಐ ಮಾಸ್ಟರ್ ಟ್ರೈನರ್’ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ. ಈತ ಕರ್ನಾಟಕದ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನೆಟ್ಟಾರುವಿನ ಮೂವರು ದಾಳಿಕೋರರಿಗೆ ಆಶ್ರಯ ನೀಡಿದ್ದ ಎಂದು ಎನ್‌ಐಎ ತಿಳಿಸಿದೆ.

  • ಬೆಂಗ್ಳೂರು ಜೈಲಿನಲ್ಲಿ ಉಗ್ರ ಕೃತ್ಯ ಎಸಗಿ ಪರಾರಿ – ರುವಾಂಡದಲ್ಲಿ ಸೆರೆ

    ಬೆಂಗ್ಳೂರು ಜೈಲಿನಲ್ಲಿ ಉಗ್ರ ಕೃತ್ಯ ಎಸಗಿ ಪರಾರಿ – ರುವಾಂಡದಲ್ಲಿ ಸೆರೆ

    – ರುವಾಂಡದ ರಾಜಧಾನಿ ಕಿಗಾಲಿಯಲ್ಲಿ ಸಲ್ಮಾನ್‌ ಬಂಧನ
    – ಈ ವರ್ಷದ ಜನವರಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಿದ್ದ ಎನ್‌ಐಎ

    ನವದೆಹಲಿ: ಬೆಂಗಳೂರು ಜೈಲಿನಲ್ಲಿ (Bengaluru Jail) ಉಗ್ರ ಕೃತ್ಯ ಎಸಗಿ ರುವಾಂಡಕ್ಕೆ (Rwanda) ಪರಾರಿಯಾಗಿದ್ದ ಲಷ್ಕರ್‌ ಉಗ್ರನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.

    ಸಲ್ಮಾನ್‌ ಖಾನ್ ಬಂಧಿತ ಉಗ್ರ. ರುವಾಂಡಾ ತನಿಖಾ ಬ್ಯೂರೋ (RIB), ಇಂಟರ್‌ಪೋಲ್ ಮತ್ತು ರಾಷ್ಟ್ರೀಯ ಕೇಂದ್ರ ಬ್ಯೂರೋಗಳ (NCBs) ಸಹಯೋಗದೊಂದಿಗೆ ಬುಧವಾರ ರುವಾಂಡಾದ ರಾಜಧಾನಿ ಕಿಗಾಲಿಯಲ್ಲಿ ಬಂಧನ ಮಾಡಲಾಗಿದೆ. ಇಂದು ರುವಾಂಡ ಉಗ್ರನನ್ನು ಭಾರತಕ್ಕೆ ಹಸ್ತಾಂತರಿಸಿದೆ.

    ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದಲ್ಲಿ ಸಲ್ಮಾನ್ ಆರೋಪಿಯಾಗಿದ್ದಾನೆ. ಈತ ಉಗ್ರರಿಗೆ ಸ್ಫೋಟಕಗಳನ್ನು ಪೂರೈಸುವ ಮೂಲಕ ದುಷ್ಕೃತ್ಯಗಳಿಗೆ ಸಹಕಾರ ನೀಡುತ್ತಿದ್ದ.

    ಪೋಸ್ಕೋ ಕೃತ್ಯ ಎಸಗಿ ಸಲ್ಮಾನ್‌ ಬೆಂಗಳೂರು ಜೈಲು ಸೇರಿದ್ದ. 2018 ಮತ್ತು 2022 ರ ಜೈಲುವಾಸದ ಅವಧಿಯಲ್ಲಿ ಜಿವಾವಾಧಿ ಶಿಕ್ಷೆಗೆ ಒಳಗಾಗಿದ್ದ ಉಗ್ರ ನಾಸೀರ್ (Naseer) ಸಂಪರ್ಕಕ್ಕೆ ಈತ ಬಂದಿದ್ದ. ಈತನ ಮಾತಿಗೆ ಮರುಳಾಗಿ ಮೂಲಭೂತವಾದ ಕಡೆಗೆ ಆಕರ್ಷಿತನಾಗಿದ್ದ. ಅಷ್ಟೇ ಅಲ್ಲದೇ ಸಹ ಕೈದಿಗಳನ್ನು ಸೆಳೆದು ಅವರನ್ನು ಉಗ್ರರನ್ನಾಗಿ ರೂಪಿಸುತ್ತಿದ್ದ.‌

     

     

     

    ಜೈಲಿನಿಂದ ಬಿಡುಗಡೆಯಾದ ಬಳಿಕ ಆತ ಉಗ್ರರ ಸಂಪರ್ಕ ಸಾಧಿಸಿ ಅವರಿಗೆ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಸಂಗ್ರಹಣೆ ಮತ್ತು ವಿತರಣೆ ಮಾಡುವ ಮೂಲಕ ಸಹಕಾರ ನೀಡುತ್ತಿದ್ದ. ಭಯೋತ್ಪಾದನಾ ಕೃತ್ಯದಲ್ಲಿ ತನ್ನ ಹೆಸರು ಬೆಳಕಿಗೆ ಬರುತ್ತಿದ್ದಂತೆ ಸಲ್ಮಾನ್‌ ಭಾರತದಿಂದ ಪರಾರಿಯಾಗಿದ್ದ.

    ಕಳೆದ ವರ್ಷದ ಅಕ್ಟೋಬರ್ 25 ರಂದು ಬೆಂಗಳೂರು ಜೈಲಿನಲ್ಲಿದ್ದುಕೊಂಡೇ ಸಹ ಕೈದಿಗಳನ್ನು ಸೆಳೆದು ಉಗ್ರ ಚಟುವಟಿಕೆಗೆ ಬಳಕೆ ಮಾಡಿದ ಪ್ರಕರಣದ ತನಿಖೆಯನ್ನು ಸಿಸಿಬಿಯಿಂದ ಎನ್‌ಐಎ ವಹಿಸಿಕೊಂಡಿತ್ತು. ಸಲ್ಮಾನ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು.

     

    ಈ ವರ್ಷ ಆಗಸ್ಟ್ 2 ರಂದು ಎನ್ಐಎ ಕೋರಿಕೆಯ ಮೇರೆಗೆ ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಜಾರಿ ಮಾಡಿತ್ತು. ಈ ನೋಟಿಸ್‌ ಹಿನ್ನೆಲೆಯಲ್ಲಿ ರುವಾಂಡಾದ ಅಧಿಕಾರಿಗಳು ಸಲ್ಮಾನ್‌ನನ್ನು ಬಂಧಿಸಿ ಭಾರತೀಯ ತನಿಖಾ ಸಂಸ್ಥೆಗೆ ಹಸ್ತಾಂತರಿಸಿದ್ದಾರೆ.

    2024 ರಲ್ಲಿ ಇಂಟರ್‌ಪೋಲ್ ಒಳಗೊಂಡಂತೆ ಸಂಘಟಿತ ಪ್ರಯತ್ನದ ಮೂಲಕ ದೇಶ ಬಿಟ್ಟು ಪರಾರಿಯಾಗಿದ್ದ 26 ಮಂದಿಯನ್ನು ಭಾರತಕ್ಕೆ ತನಿಖಾ ಸಂಸ್ಥೆಗಳು ಕರೆತಂದಿವೆ.

    ಏನಿದು ಪ್ರಕರಣ?
    2023ರ ಜುಲೈನಲ್ಲಿ ಆರ್‌ಟಿ ನಗರದ ಮನೆ ಮೇಲೆ ದಾಳಿ ಮಾಡಿದ ಬೆಂಗಳೂರು ಸಿಸಿಬಿ ಪೊಲೀಸರು (CCB Police) ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ ಜೀವಂತ ಗ್ರೆನೇಡ್‌ ಪತ್ತೆಯಾಗಿತ್ತು. ಈ ಪ್ರಕರಣದ ಆರೋಪಿಗಳ ಜೊತೆ ಜೈಲಿನಲ್ಲಿದ್ದ ಉಗ್ರ ಟಿ.ನಾಸೀರ್ (T Naseer) ಸಂಪರ್ಕ ಬೆಳೆಸಿದ್ದ ವಿಚಾರ ತನಿಖೆಯಿಂದ ಬಯಲಾಗಿತ್ತು. ನಂತರ ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು

    ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು
    ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು

    ಈ ವರ್ಷದ ಜನವರಿ 12 ರಂದು ಎನ್‌ಐಎ ಈ ಪ್ರಕರಣದ ಸಂಬಂಧ 8 ಮಂದಿ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿತ್ತು. ಚಾರ್ಜ್‌ಶೀಟ್ ಮಾಡಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರು ಜಿಲ್ಲೆಯ ಟಿ ನಾಸೀರ್ 2013 ರಿಂದ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಉಳಿದ ಇಬ್ಬರು ಆರೋಪಿಗಳಾದ ಜುನೈದ್ ಅಹ್ಮದ್ ಅಲಿಯಾಸ್ ಜೆಡಿ ಮತ್ತು ಸಲ್ಮಾನ್ ಖಾನ್ ವಿದೇಶಕ್ಕೆ ಪರಾರಿಯಾಗಿದ್ದ ವಿಚಾರವನ್ನು ಎನ್‌ಐಎ ಉಲ್ಲೇಖಿಸಿತ್ತು.

    ಚಾರ್ಜ್‌ಶೀಟ್‌ನಲ್ಲಿ ಏನಿತ್ತು?
    ಆರ್‌ಟಿ ನಗರ ಮನೆಯಲ್ಲಿ ಶೋಧ ಕಾರ್ಯದ ವೇಳೆ ಆರೋಪಿಗಳ ಬಳಿ 7 ನಾಡ ಪಿಸ್ತೂಲ್, 45 ಜೀವಂತ ಗುಂಡು, ಗ್ರೆನೇಡ್ ಹಾಗೂ ವಾಕಿಟಾಕಿಗಳು ಸಿಕ್ಕಿದ್ದವು. ವಿಚಾರಣೆ ಸಂದರ್ಭದಲ್ಲಿ ಆರೋಪಿಗಳು ಬೆಂಗಳೂರಿನಲ್ಲಿ ಸರಣಿ ಬಾಂಬ್‌ ಸ್ಫೋಟ ನಡೆಸಲು ಮುಂದಾಗಿದ್ದರು ಎಂಬ ವಿಚಾರ ತನಿಖೆಯಿಂದ ಬಯಲಾಗಿತ್ತು.

    ಬೆಂಗಳೂರು ದಾಳಿಯ ವೇಳೆ ಉಗ್ರರ ಮನೆಯಲ್ಲಿ ಪತ್ತೆಯಾಗಿದ್ದ ಗ್ರೆನೇಡ್‌ಗಳು ಪೌಡರ್ ರೂಪದ ಕೆಮಿಕಲ್ ಬಳಸಿ ಪೆಟ್ಟಿಗೆಯೊಂದರಲ್ಲಿ ಆರೋಪಿಗಳು ಅಡಗಿಸಿಟ್ಟಿದ್ದರು. ಈ ಬಗ್ಗೆ ಮಾಹಿತಿ ಪಡೆದ ನಂತರ ತನಿಖಾಧಿಕಾರಿಗಳು ಬಾಂಬ್ ನಿಷ್ಟ್ರೀಯ ದಳ (BDDS) ಮತ್ತು FSL ಅಧಿಕಾರಿಗಳ ಜೊತೆಯಲ್ಲಿ ಕಾರ್ಯಾಚರಣೆ ನಡೆಸಿ ಸಜೀವ ಗ್ರೇನೆಡ್‌ಗಳನ್ನ ಪತ್ತೆಮಾಡಿ ವಶಪಡಿಸಿಕೊಳ್ಳಲಾಗಿತ್ತು. ಗ್ರೆನೇಡ್ (Grenade) ಮೇಲಿದ್ದ ಮೇಡ್ ಇನ್ ವಿವರವನ್ನೇ ಆರೋಪಿಗಳು ಅಳಿಸಿ ಹಾಕಿದ್ದರು.

     

    ಸೆರೆ ಸಿಕ್ಕ ಶಂಕಿತರ ಉಗ್ರರ ಹಿಂದೆ ಬ್ಯಾಕ್ ಬೋನ್ ಆಗಿದ್ದ ಮಾಸ್ಟರ್ ಮೈಂಡ್ ಜುನೈದ್ ವಿದೇಶದಲ್ಲಿದ್ದುಕೊಂಡೇ ಬೆಂಗಳೂರಿನಲ್ಲಿ ಬಂಧನಕ್ಕೆ ಒಳಗಾದವರನ್ನು ಸಾಕುತ್ತಿದ್ದ, ಬೆಂಗಳೂರಿನಲ್ಲಿದ್ದವರಿಗೆ ಲಕ್ಷ ಲಕ್ಷ ರೂ. ಫಂಡಿಂಗ್ ಮಾಡ್ತಿದ್ದ. ಜೊತೆಗೆ ಏನೇನು ಮಾಡಬೇಕು ಅಂತಾ ಟ್ರೈನಿಂಗ್ ಕೊಡ್ತಿದ್ದ. ಅದಕ್ಕಾಗಿ ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೃತ್ಯ ಎಸಬೇಕು ಅನ್ನೋದರ ನೀಲನಕ್ಷೆಯನ್ನೂ (ಬ್ಲೂ ಪ್ರಿಂಟ್) ಸಿದ್ಧ ಮಾಡಿಕೊಂಡಿದ್ದ.

    ಜುನೈದ್ ಕೊಡುವ ಮಾರ್ಗದರ್ಶನದಂತೆ ಸಿಲಿಕಾನ್ ಸಿಟಿಯಲ್ಲಿ ಶಂಕಿತರು ಸ್ಫೋಟಕ್ಕೆ ಸಂಚು ರೂಪಿಸುತ್ತಿದ್ದರು. ನಗರದಲ್ಲಿ 10ಕ್ಕೂ ಹೆಚ್ಚು ಸ್ಥಳಗಳನ್ನು ಗುರುತಿಸಿಕೊಂಡಿದ್ದರು ವಿಚಾರ ಅಂಶ ಚಾರ್ಜ್‌ಶೀಟ್‌ನಲ್ಲಿತ್ತು.

     

  • Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್‌ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್‌ ಮೈಂಡ್‌

    Exclusive | ರಾಮೇಶ್ವರಂ ಕೆಫೆ ಬ್ಲಾಸ್ಟ್ ಕೇಸ್: ಬಾಂಬ್‌ ಇಟ್ಟ ಬಳಿಕ ಮಸೀದಿಯಲ್ಲಿ ಪ್ರಾರ್ಥನೆ ಮಾಡಿದ್ದ ಮಾಸ್ಟರ್‌ ಮೈಂಡ್‌

    ಬೆಂಗಳೂರು: ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast Case) ಪ್ರಕರಣವನ್ನು ಈಗಾಗಲೇ ಎನ್‌ಐಎ ತನಿಖೆ (NIA Investigation) ನಡೆಸುತ್ತಿದೆ. ಈ ನಡುವೆ ಸ್ಫೋಟಕ ವಿಚಾರವೊಂದು ಬೆಳಿಕಿಗೆ ಬಂದಿದೆ.

    ಸ್ಫೋಟಕ್ಕೆ ಬಾಂಬ್‌ ತಯಾರಿನಿಂದ ಹಿಡಿದು ಆರೋಪಿ ಮಸಾವೀರ್ ಎಸ್ಕೇಪ್‌ (Mussavir Hussain) ಆಗುವವರೆಗಿನ ಇಂಚಿಂಚೂ ಸ್ಟೋರಿ ʻಪಬ್ಲಿಕ್‌ ಟಿವಿʼಗೆ (Public TV) ಲಭ್ಯವಾಗಿದೆ. ಹೆಜ್ಜೆ ಹೆಜ್ಜೆಗೂ ಬಾಂಬರ್‌ಗಳ ಖತರ್ನಾಕ್‌ ಕೆಲಸ ಫೋಟೋಗಳಲ್ಲಿ ಅನಾವರಣಗೊಂಡಿದೆ. ಇದನ್ನೂ ಓದಿ: ಕಲಬುರಗಿ ಸೆಂಟ್ರಲ್ ಜೈಲ್ ಅಧೀಕ್ಷಕಿ ಕಾರು ಸ್ಫೋಟಿಸುವುದಾಗಿ ಬೆದರಿಕೆ – ದುಷ್ಕರ್ಮಿಯಿಂದ ಆಡಿಯೋ ಸಂದೇಶ

    ಶಂಕಿತ ಉಗ್ರ ಮಾಡಿದ್ದೇನು?
    ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇಟ್ಟ ಬಳಿಕ ಆರೋಪಿ ಮುಸಾವೀರ್‌ ಮಸೀದಿಗೆ ಹೋಗಿ ಪ್ರಾರ್ಥನೆ ಮಾಡಿದ್ದ. ನಂತರ ಅಲ್ಲಿಂದ ಕೋಲ್ಕತ್ತಾದಲ್ಲಿ ತಲೆ ಮರೆಸಿಕೊಂಡಿದ್ದ, ಅದಕ್ಕಾಗಿ ಹಿಂದೂ ಹೆಸರು ಬಳಕೆ ಮಾಡಿದ್ದ. ಕ್ರಿಪ್ಟೋ ಕರೆನ್ಸಿಯನ್ನ ರೂಪಾಯಿ ಮಾಡಲು ಪ್ರಯತ್ನ ಸಹ ಮಾಡಿದ್ದ ಅನ್ನೋ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ.

    ಈಗಾಗಲೇ ಬಾಂಬರ್‌ ಸೇರಿ ಹಲವು ಶಂಕಿತ ಉಗ್ರರನ್ನು ಬಂಧಿಸಿರುವ ಎನ್‌ಐಎ ಸ್ಥಳ ಮಹಜರು ಕೂಡ ನಡೆಸಿದೆ. ಇದನ್ನೂ ಓದಿ: ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವು – ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆ: ಜನಾಕ್ರೋಶ