Tag: NIA

  • ಆಯ್ಕೆ ಮಾಡಿದ್ದು 4, ಟಾರ್ಗೆಟ್‌ 1 – ದಾಳಿಗೆ ಪಕ್ಕಾ ಪ್ಲ್ಯಾನ್‌ ಮಾಡಿದ್ದ ಉಗ್ರರು

    ಆಯ್ಕೆ ಮಾಡಿದ್ದು 4, ಟಾರ್ಗೆಟ್‌ 1 – ದಾಳಿಗೆ ಪಕ್ಕಾ ಪ್ಲ್ಯಾನ್‌ ಮಾಡಿದ್ದ ಉಗ್ರರು

    – ಪಹಲ್ಗಾಮ್‌ ಜೊತೆಗೆ ನಾಲ್ಕು ತಾಣಗಳಲ್ಲಿ ದಾಳಿಗೆ ಹೊಂಚು ಹಾಕಿದ್ದ ಭಯೋತ್ಪಾದಕರು

    ನವದೆಹಲಿ: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ (Pahalgam Terror Attack) ತನಿಖೆಗಿಳಿದಿರುವ ತನಿಖಾ ಸಂಸ್ಥೆಗಳು ಹಲವಾರು ಅಚ್ಚರಿದಾಯಕ ಅಂಶಗಳನ್ನು ಬಹಿರಂಗಪಡಿಸಿವೆ. ಭಯೋತ್ಪಾದಕರು ಪಹಲ್ಗಾಮ್‌ ಜೊತೆ ಇನ್ನೂ ಮೂರು ತಾಣಗಳನ್ನು ಟಾರ್ಗೆಟ್‌ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ.

    ಏಪ್ರಿಲ್ 22 ರಂದು 26 ಜನರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯನ್ನು ನಡೆಸಿದ ಭಯೋತ್ಪಾದಕರು ಘಟನೆಗೆ ಎರಡು ದಿನಗಳ ಮೊದಲೇ ಬೈಸರನ್ ಕಣಿವೆಯಲ್ಲಿ ಇದ್ದರು ಎಂದು ಮೂಲಗಳು ತಿಳಿಸಿವೆ. ಬೈಸರನ್‌ ವ್ಯಾಲಿಯಲ್ಲಿ ದಾಳಿಗೂ ಮುನ್ನ ಉಗ್ರರು ಪರಿಶೀಲನೆ ನಡೆಸಿದ್ದರು. ದಾಳಿಗೆ ಪಕ್ಕಾ ಪ್ಲ್ಯಾನ್‌ ಮಾಡಿದ್ದರು ಎಂಬ ವಿಚಾರವನ್ನು ದಾಳಿಗೆ ಸಂಬಂಧಿಸಿದಂತೆ ಬಂಧಿತ ಓವರ್ ಗ್ರೌಂಡ್ ವರ್ಕರ್ (OGW) ಗಳಲ್ಲಿ ಒಬ್ಬನಾದ ಸ್ಥಳೀಯ ವ್ಯಕ್ತಿ ಬಾಯ್ಬಿಟ್ಟಿದ್ದಾನೆ. ಈತ ಉಗ್ರರಿಗೆ ಸಹಾಯ ಮಾಡಿದ್ದ. ಇದನ್ನೂ ಓದಿ: ಐಎಸ್ಐ ಮುಖ್ಯಸ್ಥನನ್ನು ನೂತನ ರಾಷ್ಟ್ರೀಯ ಭದ್ರತಾ ಸಲಹೆಗಾರನಾಗಿ ನೇಮಿಸಿದ ಪಾಕ್‌

    ಆಯ್ಕೆ 4, ಟಾರ್ಗೆಟ್ 1
    ಉಗ್ರರು ಪಹಲ್ಗಾಮ್ ಬೈಸರನ್ ವ್ಯಾಲಿ ಜೊತೆಗೆ ಅರು ವ್ಯಾಲಿ, ಸ್ಥಳೀಯ ಅಮ್ಯೂಸ್ ಮೆಂಟ್ ಪಾರ್ಕ್, ಬೇತಾಬ್ ವ್ಯಾಲಿ (ಪುಣೆ ವ್ಯಕ್ತಿಯ ಮಗಳು ರೀಲ್ಸ್ ಮಾಡಿದ್ದ ಜಾಗ)ಯನ್ನೂ ದಾಳಿಗೆ ಗುರಿಯಾಗಿಸಿದ್ದರು. ಆದರೆ, ಕೊನೆಗೆ ಪಹಲ್ಗಾಮ್‌ನಲ್ಲಿ ದಾಳಿ ನಡೆಸಿದ್ದಾರೆ.

    ಪಹಲ್ಗಾಮ್ ಹೊರತುಪಡಿಸಿ ಉಳಿದ ಎಲ್ಲ ಕಡೆ ಬಿಗಿ ಭದ್ರತೆ ಇತ್ತು. ಹೀಗಾಗಿ, ಕೊನೆಗೆ ಬೈಸರನ್ ವ್ಯಾಲಿಯಲ್ಲಿ ದಾಳಿ ನಡೆಸುವ ಪ್ಲ್ಯಾನ್ ಅನ್ನು ಉಗ್ರರು ಫೈನಲ್‌ ಮಾಡಿದ್ದರು. ನಾಲ್ವರು ಸ್ಥಳೀಯರಿಂದ (Over Ground Workers or OGWs) ಉಗ್ರರಿಗೆ ಸಹಾಯ ಸಿಕ್ಕಿತ್ತು. ಲಾಜಿಸ್ಟಿಕ್ ವ್ಯವಸ್ಥೆ ಮಾಡಿಕೊಡಲಾಗಿತ್ತು. ಇದನ್ನೂ ಓದಿ: ಪಹಲ್ಗಾಮ್ ದಾಳಿ ಹಿಂದಿನ ‘ನೀನು ಹಿಂದೂನಾ’ ಅಂತ ಒಬ್ಬ ನನಗೆ ಕೇಳಿದ್ದ – ಉಗ್ರನ ಬಗ್ಗೆ ಪ್ರವಾಸಿಗರೊಬ್ಬರ ಸ್ಫೋಟಕ ಹೇಳಿಕೆ

    ಸ್ಥಳೀಯ 20 ಮಂದಿಯು ಉಗ್ರರಿಗೆ ಸಹಾಯ ಮಾಡಿದ್ದಾರೆ. ಇವರಲ್ಲಿ ಕೆಲವರನ್ನು ಬಂಧಿಸಿರುವ ಎನ್‌ಐಎ ಇನ್ನೂ ಕೆಲ ಶಂಕಿತರ ಮೇಲೆ ಕಣ್ಗಾವಲು ಇರಿಸಿದೆ. ದಾಳಿಗೂ ಮುನ್ನ ಈ ಏರಿಯಾದಲ್ಲಿ ಮೂರು ಸ್ಯಾಟಲೈಟ್ ಫೋನ್‌ಗಳ ಬಳಕೆಯಾಗಿವೆ. ಇದರಲ್ಲಿ 2 ಫೋನ್‌ಗಳ ಸಿಗ್ನಲ್‌ ಟ್ರೇಸ್ ಮಾಡುವಲ್ಲಿ ತನಿಖಾ ತಂಡ ಯಶಸ್ವಿಯಾಗಿದೆ.

    ಇದುವರೆಗೆ 2,500 ಜನರ ವಿಚಾರಣೆ ನಡೆಸಲಾಗಿದೆ. 186 ಮಂದಿಯನ್ನು ತನಿಖಾ ತಂಡ ವಶಕ್ಕೆ ತೆಗೆದುಕೊಂಡಿದೆ. ಇದನ್ನೂ ಓದಿ: ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ – LOCಯಲ್ಲಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ

  • ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಏ.20ರಂದೇ ನಡೆಯಬೇಕಿದ್ದ ಪಹಲ್ಗಾಮ್ ದಾಳಿ 2 ದಿನ ತಡವಾಗಿದ್ದೇಕೆ? – NIA ತನಿಖೆಯಲ್ಲಿ ರೋಚಕ ಅಂಶ

    ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ಭಯೋತ್ಪಾದಕ ದಾಳಿಯ ಕುರಿತು ಬೆಚ್ಚಿ ಬೀಳಿಸುವ ಅಂಶವೊಂದು ಎನ್‌ಐಎ (NIA) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಏ.22 ರಂದು ಪಹಲ್ಗಾಮ್‌ನ ಬೈಸರನ್ ವ್ಯಾಲಿಯಲ್ಲಿ ನಡೆದ ಹಿಂದೂಗಳ ನರಮೇಧ, ಅದಕ್ಕೂ ಎರಡು ದಿನಗಳ ಹಿಂದೆಯೇ ನಡೆಯಬೇಕಿತ್ತು. ಏ.20ರಂದು ಭಯೋತ್ಪಾದಕರು ದಾಳಿಯ ಸಂಚು ರೂಪಿಸಿಕೊಂಡು ಸ್ಥಳಕ್ಕೆ ಬಂದಿದ್ದರು. ಆದರೆ ಅಂದು ಹವಾಮಾನದಲ್ಲಿ ತೀವ್ರ ಬದಲಾವಣೆ, ತೀವ್ರವಾದ ಮಳೆ ಮತ್ತು ಮಂಜು ಮುಸುಕಿದಂತಹ ವಾತಾವರಣವಿದ್ದ ಕಾರಣದಿಂದ ಯೋಜನೆಯನ್ನು ಮುಂದೂಡಿದ್ದರು ಎಂಬುದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.ಇದನ್ನೂ ಓದಿ: ಐಪಿಎಲ್‌ಗಾಗಿ ಮಟನ್‌, ಪಿಜ್ಜಾ ತ್ಯಜಿಸಿದ್ದ ವೈಭವ್‌ – ಡಯಟ್‌ ಸೀಕ್ರೆಟ್‌ ರಿವೀಲ್‌ ಮಾಡಿದ ಕೋಚ್‌

    ದಾಳಿ ಸಂಚು ರೂಪಿಸಿದ್ದ ಭಯೋತ್ಪಾದಕರ ಟಾರ್ಗೆಟ್ ಬಹುದೊಡ್ಡದಾಗಿತ್ತು. ದೊಡ್ಡ ಬೇಟೆಗಾಗಿ ಕಾದು ಬಂದಿದ್ದ ಉಗ್ರರಿಗೆ ಅಂದು ಹವಾಮಾನ ಕೈಕೊಟ್ಟಿತ್ತು. ವಾತಾವರಣದಲ್ಲಿ ಹಠಾತ್ ಬದಲಾವಣೆಯಿಂದಾಗಿ ಬೈಸರನ್ ವ್ಯಾಲಿಯಲ್ಲಿ ಜನರ ಸಂಖ್ಯೆ ಕಡಿಮೆಯಾಗಿತ್ತು. ಹೀಗಾಗಿ ಹೆಚ್ಚು ಜನರನ್ನು ಹತ್ಯೆ ಮಾಡುವ ಉದ್ದೇಶದಿಂದಲೇ ದಾಳಿ ಮಾಡುವ ಯೋಜನೆಯನ್ನು ಮುಂದೂಡಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಏ.22ರಂದು ನಡೆದಿದ್ದೇನು?
    ಹತ್ಯೆಯಾದ ದಿನ ಉಗ್ರರು ಸುತ್ತಮುತ್ತಲಿನ ಕಾಡು ಬೆಟ್ಟದಂತಿರುವ ಪ್ರದೇಶದಿಂದ ನುಗ್ಗಿ ಬಂದು ಗುಂಡು ಹಾರಿಸಿದ್ದರು ಎಂದು ಅಂದಾಜಿಸಲಾಗಿತ್ತು. ಎನ್‌ಐಎ ತನಿಖೆಯಲ್ಲಿ ವಿಷಯ ಬೆಳಕಿಗೆ ಬಂದಿದೆ. ಉಗ್ರರು ಏ.22 ರಂದು ಮಧ್ಯಾಹ್ನ 2:30ಕ್ಕೆ ಫುಡ್ ಸ್ಟಾಲ್ ಹಿಂಭಾಗದಲ್ಲಿ ಪ್ರವಾಸಿಗರಿಗಾಗಿ ಕಾದು ಕುಳಿತಿದ್ದರು. ಜನ ಸಮೂಹ ದೊಡ್ಡಗಾಗಿ ಸೇರುತ್ತಿದ್ದಂತೆ ಎದ್ದು ನಿಂತು ಹೆಸರು, ಧರ್ಮ ಕೇಳಿ ಏಕಾಏಕಿ ಗುಂಡಿನ ದಾಳಿ ಆರಂಭಿಸಿದ್ದರು ಎಂದು ತಿಳಿದು ಬಂದಿದೆ.ಇದನ್ನೂ ಓದಿ: ಕಾಶ್ಮೀರದಲ್ಲಿ 48 ಪ್ರವಾಸಿ ತಾಣಗಳು ಬಂದ್‌ – ಉಗ್ರರ ಸಂಭಾವ್ಯ ದಾಳಿಯ ಎಚ್ಚರಿಕೆ ಕೊಟ್ಟ ಗುಪ್ತಚರ

  • Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ

    Pahalgam Terror Attack – ಮೃತ ಭರತ್ ಭೂಷಣ್ ಪತ್ನಿ ಹೇಳಿಕೆ ದಾಖಲಿಸಿಕೊಂಡ ಎನ್‌ಐಎ

    ಬೆಂಗಳೂರು: ಪೆಹಲ್ಗಾಮ್‌ನಲ್ಲಿ ಉಗ್ರರ ದಾಳಿಯ (Pahalgam Terrorist Attack) ತನಿಖೆಯನ್ನ ಎನ್‌ಐಎ (National Investigation Agency) ವಹಿಸಿಕೊಂಡಿದೆ. ಅಧಿಕೃತ ತನಿಖೆಯ ಆದೇಶಕ್ಕೂ ಮೊದಲು ಎನ್‌ಐಎ ಫೀಲ್ಡ್‌ಗಡ ಇಳಿದು ತನಿಖೆ ಆರಂಭಿಸಿದೆ. ಕಳೆದ ಶುಕ್ರವಾರ ಮೃತ ಭರತ್ ಭೂಷಣ್‌ರ (Bharath Bhushan) ಮನೆಗೆ ತೆರಳಿದ್ದ ಎನ್‌ಐಎ, ಸುಧೀರ್ಘ 8 ಗಂಟೆಗಳ ಕಾಲ ಪತ್ನಿ ಡಾ.ಸುಜಾತಾರ ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದೆ.

    ನೀವೂ ಕಾಶ್ಮೀರಕ್ಕೆ (Kashimir) ಯಾವಾಗ ಹೋಗಿದ್ರಿ, ಎಷ್ಟೋತ್ತಿಗೆ ತಲುಪಿದ್ರಿ? ಉಗ್ರರು ಬಂದಾಗ ನೀವು ಎಲ್ಲಿ ಇದ್ರಿ, ಭರತ್ ಭೂಷಣ್ ಎಲ್ಲಿದ್ರು? ಉಗ್ರರು ಬಂದಾಗ ಯಾವ ಭಾಷೆ ಮಾತಾಡಿದ್ರು. ಅವರ ಮುಖದ ಮೇಲೆ ಏನಾದ್ರು ಮಾರ್ಕ್ ಇತ್ತಾ. ಅವರ ಮುಖ ಚಹರೆ, ವೇಷ ಭೂಷಣ ಇವೆಲ್ಲದರ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಪಾಕ್‌ ಮೇಲೆ ಡಿಜಿಟಲ್‌ ಸ್ಟ್ರೈಕ್‌ – ಬಿಬಿಸಿಗೂ ಬಿಸಿ ಮುಟ್ಟಿಸಿದ ಸರ್ಕಾರ

    ಅಲ್ಲದೇ ಉಗ್ರರ ಸ್ಕೆಚ್ ತೋರಿಸಿ ಕೂಡ ಮಾಹಿತಿ ಪಡೆದಿರುವ ಎನ್‌ಐಎ, ಅವರ ಬಳಿಯಿದ್ದ ಗನ್ ನೋಡಿದ್ರಾ? ಅದು ಯಾವ ರೀತಿ ಇತ್ತು. ಅವರು ನಿಮ್ಮ ಬಳಿ ಏನಾದ್ರು ಮಾತಾಡಿದ್ರಾ? ನೀವು ಅವರಿಗೆ ಏನಾದ್ರು ಉತ್ತರ ಕೊಟ್ರಾ ಹೀಗೆ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಿರುವ ಎನ್‌ಐಎ ಭರತ್ ಭೂಷಣ್ ಅವರ ಪತ್ನಿ ಹೇಳಿಕೆಯನ್ನು ದಾಖಲು ಮಾಡಿಕೊಂಡು ಹೋಗಿದೆ.

  • ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ ಹಿಡಿದಿದ್ದ ರೀಲ್ಸ್‌ ವಿಡಿಯೋಗ್ರಾಫರ್‌ ಎನ್‌ಐಎಗೆ ಪ್ರಮುಖ ಸಾಕ್ಷಿ

    ಶ್ರೀನಗರ: ಪಹಲ್ಗಾಮ್‌ ಭಯೋತ್ಪಾದಕ ದಾಳಿಯ (Pahalgam Terrorist Attack) ಕುರಿತು ತನಿಖೆ ಶುರು ಮಾಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ಪ್ರಮುಖ ಸಾಕ್ಷಿ ಸಿಕ್ಕಿದೆ. ದಾಳಿ ನಡೆಯುವ ವೇಳೆ ಬೈಸರನ್‌ನಲ್ಲಿ (Baisaran) ಪ್ರವಾಸಿಗರಿಗಾಗಿ ರೀಲ್ಸ್‌ ಚಿತ್ರೀಕರಿಸುತ್ತಿದ್ದ ಸ್ಥಳೀಯ ವಿಡಿಯೋ ಗ್ರಾಫರ್‌ ಪ್ರಮುಖ ಸಾಕ್ಷಿದಾರನಾಗಿ ಮುಂದೆ ಬಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಹೌದು. ಕೇಂದ್ರ ಗೃಹಸಚಿವಾಲಯ ನೀಡಿದ ನಿರ್ದೇಶದ ಮೇರೆಗೆ ಏ.22ರಂದು ಪಹಲ್ಗಾಮ್‌ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿದೆ. ವಿಧಿವಿಜ್ಞಾನ ಪ್ರಯೋಗಾಲಯ ಅಧಿಕಾರಿಗಳ ತಂಡದೊಂದಿಗೆ ಘಟನಾ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ ಸಾಕ್ಷ್ಯ ಹುಡುಕಾಟವನ್ನು ತೀವ್ರಗೊಳಿಸಿದೆ. ಈ ಮಧ್ಯೆ ಪ್ರಮುಖ ಸಾಕ್ಷಿಯೊಂದು ಎನ್‌ಐಎಗೆ ಸಿಕ್ಕಿದೆ. ಇದನ್ನೂ ಓದಿ: ಭಾರತದಲ್ಲಿ ಪಟಾಕಿ ಸಿಡಿದರೂ, ಪಾಕಿಸ್ತಾನವನ್ನೇ ದೂಷಿಸುತ್ತಾರೆ: ಶಾಹಿದ್‌ ಅಫ್ರಿದಿ

    ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ಮಳೆಗರೆಯುತ್ತಿದ್ದಂತೆ ಭಯಕ್ಕೆ ಮರ ಏರಿದ್ದ ರೀಲ್ಸ್‌ ವಿಡಿಯೋ ಗ್ರಾಫರ್‌ ಇಡೀ ಕೃತ್ಯವನ್ನು ಮರದ ಮೇಲೆ ಕುಳಿತುಕೊಂಡೆ ಸೆರೆ ಹಿಡಿಯುತ್ತಿದ್ದರು. ಇದೀಗ ಎನ್‌ಐಎಗೆ ಆ ವಿಡಿಯೋ ಗ್ರಾಫರ್‌ (Reels Videographer) ಪ್ರಮುಖ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ: ಮೋದಿ, ಅಮಿತ್‌ ಶಾ ಇರ್ತಾರೆ ಹೋಗ್ತಾರೆ, ಆದ್ರೆ ನಮ್ಗೆ ದೇಶ ರಕ್ಷಣೆ ಮುಖ್ಯ: ಮಲ್ಲಿಕಾರ್ಜುನ ಖರ್ಗೆ

    ಮರದ ಮೇಲೆ ಕುಳಿತು ಇಡೀ ಕೃತ್ಯ ಸೆರೆ:
    ಸದ್ಯ ಲಭ್ಯವಾಗಿರುವ ವಿಡಿಯೋ ಪ್ರಕಾರ, ನಾಲ್ವರು ಉಗ್ರರು ಎರಡು ಗುಂಪುಗಳಾಗಿ ಬೇರ್ಪಟ್ಟಿದ್ದರು. ಇಬ್ಬರು ಹುಲ್ಲುಗಾವಲು ಪ್ರದೇಶದ ಎರಡೂ ಬದಿ ಅವಿತುಕೊಂಡಿದ್ದರೆ, ಮತ್ತಿಬ್ಬರು ಅಲ್ಲೇ ಇದ್ದ ತಿಂಡಿ ಅಂಗಡಿ ಬಳಿ ಅವಿತಿದ್ದರು. ಮಧ್ಯಾಹ್ನ 2.30ರ ಸುಮಾರಿಗೆ, ಅಂಗಡಿಗಳ ಹಿಂದೆ ಅಡಗಿಕೊಂಡಿದ್ದ ಇಬ್ಬರು ಭಯೋತ್ಪಾದಕರು ಹೊರಬಂದರು. ಆಗ ಅಲ್ಲಿ ತಿಂಡಿ ತಿನ್ನುತ್ತಿದ್ದ ಸ್ಥಳೀಯರಲ್ಲದವರನ್ನ ಧರ್ಮದ ಬಗ್ಗೆ ಕೇಳುತ್ತಾ ಬಂದವರು. ಕೆಲವರು ತಪ್ಪಿಸಿಕೊಳ್ಳು ತಾನು ಮುಸ್ಲಿಂ ಎಂದು ಹೇಳಿದಾಗ ಕಲಿಮಾ ಪಠಿಸಲು ಹೇಳಲಾಯಿತು. ಬಳಿಕ ಕಲಿಮಾ ಪಠಿಸಲು ಸಾಧ್ಯವಾಗದವರನ್ನ ಪಾಯಿಂಟ್‌ ಬ್ಲಾಕ್‌ನಲ್ಲಿ ಶೂಟ್‌ ಮಾಡುತ್ತಾ ಬಂದರು. ಗುಂಡು ಹಾರಿಸುತ್ತಿದ್ದಂತೆ ಇಡೀ ಪ್ರದೇಶದಲ್ಲಿ ಭೀತಿ ಉಂಟಾಗಿ ಕೆಲವರು ದಿಕ್ಕಾಪಾಲಾಗಿ ಓಡಿದರು. ಈ ಸಂದರ್ಭದಲ್ಲಿ ಹುಲ್ಲುಗಾವಲಿನ ಜಿಪ್‌ಲೈನ್‌ನಲ್ಲಿ ಅವಿತಿದ್ದವರೂ ಗುಂಡು ಹಾರಿಸಲು ಶುರು ಮಾಡಿದ್ರು. ಈ ಎಲ್ಲಾ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ವರದಿಗಳು ತಿಳಿಸಿವೆ.

    ಪ್ರತ್ಯಕ್ಷದರ್ಶಿಗಳ ವಿಚಾರಣೆ
    ಸದ್ಯ ಸ್ಥಳದಲ್ಲಿ ಬೀಡುಬಿಟ್ಟಿರುವ ಎನ್‌ಐಎ ತಂಡ ಘಟನೆಯನ್ನು ಕಣ್ಣಾರೆ ಕಂಡ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಸುತ್ತಿದೆ. ಜೊತೆಗೆ ಉಗ್ರರ ಕ್ರಿಯಾಯೋಜನೆಯ ಬಗ್ಗೆ ಸುಳಿವು ಪಡೆಯಲು ಎಂಟ್ರಿ, ಎಕ್ಸಿಟ್‌ ಸ್ಥಳಗಳನ್ನ ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಶಿಫ್ಟ್ ಆಗೋದು ಒಳ್ಳೆದು: ಜಗದೀಶ್ ಶೆಟ್ಟರ್

  • ಪಹಲ್ಗಾಮ್‌ ಉಗ್ರರ ದಾಳಿ – NIA ಹೆಗಲಿಗೆ ತನಿಖೆಯ ಹೊಣೆ

    ಪಹಲ್ಗಾಮ್‌ ಉಗ್ರರ ದಾಳಿ – NIA ಹೆಗಲಿಗೆ ತನಿಖೆಯ ಹೊಣೆ

    ಶ್ರೀನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯ (Pahalgam Terrorist Attack) ತನಿಖೆಯ ಹೊಣೆಯನ್ನು ಕೇಂದ್ರ ಗೃಹಸಚಿವಾಲಯ ಎನ್‌ಐಎ ಹೆಗಲಿಗೆ ವಹಿಸಿದೆ.

    ಈ ದಾಳಿಯ ತನಿಖೆಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ವಹಿಸಿದ್ದು, ಪ್ರಕರಣ ದಾಖಲಿಸಿಕೊಂಡು ಅಧಿಕೃತವಾಗಿ ತನಿಖೆ ಶುರುಮಾಡಲಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ತಡೆಯಲು ಸಾಧ್ಯನಾ? – ಜಲತಜ್ಞ ರಾಜಾರಾವ್ ಹೇಳಿದ್ದೇನು?

    ಮೂಲಗಳ ಪ್ರಕಾರ, ತನಿಖೆಗೆ ನಿಯೋಜಿಲ್ಪಟ್ಟ ಎನ್‌ಐಎ ತಂಡ ಈಗಾಗಲೇ ಪಹಲ್ಗಾಮ್‌ ತಲುಪಿದೆ, ದಾಳಿ ನಡೆದ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತಿದೆ. ಜೊತೆಗೆ ತನಿಖಾ ಏಜೆನ್ಸಿಯ ವಿಧಿವಿಜ್ಞಾನ ಪ್ರಯೋಗಾಲಯ ತಂಡವು ಸ್ಥಳದಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುವಲ್ಲಿ ನಿರತವಾಗಿದೆ. ಮತ್ತೊಂದೆಡೆ ಸ್ಥಳೀಯ ಪೊಲೀಸರಿಂದ ಪ್ರಕರಣದ ಡೈರಿ, ಎಫ್‌ಐಆರ್ ಮತ್ತು ಈ ವಿಷಯಕ್ಕೆ ಸಂಬಂಧಿಸಿದ ಇತರ ಪ್ರಮುಖ ದಾಖಲೆಗಳನ್ನ ಸುಪರ್ಧಿಗೆ ಪಡೆದುಕೊಳ್ಳಲು NIA ಮುಂದಾಗಿದೆ. ಇದನ್ನೂ ಓದಿ: ಪಹಲ್ಗಾಮ್‌ ದಾಳಿಯಲ್ಲಿ ಮೃತಪಟ್ಟ ನೌಕಾಪಡೆ ಅಧಿಕಾರಿಯ ಕುಟುಂಬಕ್ಕೆ 50 ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ಘೋಷಣೆ

    ಉಗ್ರರ ದಾಳಿಗೆ 26 ಮಂದಿ ಬಲಿ
    ಜಮ್ಮು-ಕಾಶ್ಮೀರದ ಅನಂತ್‌ನಾಗ್‌ ಜಿಲ್ಲೆಯ ಜನಪ್ರಿಯ ಪ್ರವಾಸಿತಾಣ ಪಹಲ್ಗಾಮ್‌ನಲ್ಲಿ ಏ.22ರಂದು ಉಗ್ರರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ಕನ್ನಡಿಗರು, ವಿದೇಶಿಯರು ಸೇರಿ 26 ಮಂದಿ ಬಲಿಯಾಗಿದ್ದಾರೆ. 2019ರಲ್ಲಿ 40 ಮಂದಿ ಯೋಧರನ್ನು ಬಲಿ ಪಡೆದ ಪುಲ್ವಾಮಾ ದಾಳಿಯ ಬಳಿಕ ಉಗ್ರರು ಕಣಿವೆಯಲ್ಲಿನಡೆಸಿದ ಭೀಕರ ದಾಳಿ ಇದಾಗಿದೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧಕ್ಕೆ ಸಿದ್ಧ – ಬುಸುಗುಟ್ಟಿದ ಪಾಕ್‌ ಗೃಹ ಸಚಿವ 

  • ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    ಪತಿಗೆ ಉಗ್ರರ ಸಂಪರ್ಕ ಇದೆ, ನನ್ನ ಮೇಲೆ ವಿಷಪ್ರಾಶನ ಮಾಡಲಾಗಿದೆ: ಓಂ ಪ್ರಕಾಶ್‌ ಪತ್ನಿ

    – ವಾರದ ಹಿಂದೆ ವಾಟ್ಸಪ್‌ನಲ್ಲಿ ಪಲ್ಲವಿ ಮೆಸೇಜ್‌
    – ಪತಿ ವಿರುದ್ಧ ಗ್ರೂಪಿನಲ್ಲಿ ಗಂಭೀರ ಆರೋಪ

    ಬೆಂಗಳೂರು: ಓಂ ಪ್ರಕಾಶ್‌ (Om Prakash) ಅವರಿಗೆ ಉಗ್ರರ ಸಂಪರ್ಕ ಇದ್ದು, ಅವರ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಕೇಸ್‌ ದಾಖಲಿಸಬೇಕು. ನಮಗೆ ಕೇಂದ್ರ ಸರ್ಕಾರದಿಂದ ಸಹಾಯ ಬೇಕಿದೆ ಎಂದು ಪತ್ನಿ ಪಲ್ಲವಿ (Pallavi) ಅವರು ಈ ಹಿಂದೆ ವಾಟ್ಸಪ್‌ನಲ್ಲಿ ಮೆಸೇಜ್‌ ಮಾಡಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ.

    ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಓಂ ಪ್ರಕಾಶ್ ಪತ್ನಿ ಪಲ್ಲವಿ ಒಂದು ವಾರದ ಹಿಂದಿನ ವಾಟ್ಸಪ್‌ ಚಾಟ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಪೊಲೀಸ್ ಆಫೀಸರ್ಸ್ ವೈಫ್ ಅಸೋಸಿಯೇಷನ್ ಗ್ರೂಪ್‌ನಲ್ಲಿ ಪತಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆರೋಪ ಮಾಡಿದ ಬಳಿಕ ಆ ಗ್ರೂಪ್‌ನಿಂದ ಪಲ್ಲವಿ ಹೊರ ನಡೆದಿದ್ದರು. ಇದನ್ನೂ ಓದಿ: ಚೀನಾದಲ್ಲಿ ಬಂತು 10ಜಿ – ಜಸ್ಟ್ 1 ನಿಮಿಷದಲ್ಲಿ 2 ಗಂಟೆ ಫಿಲ್ಮ್ ಡೌನ್‌ಲೋಡ್

     

    ಪಲ್ಲವಿ ಆರೋಪ ಏನು?
    ನನ್ನ ಗಂಡನ ಡಿಜಿಪಿ ಹುದ್ದೆಯ ಕೊನೆಯ ಕೆಲವು ತಿಂಗಳುಗಳಲ್ಲಿ ಹತ್ತು ಹದಿನೈದು ದಿನಗಳಿಗೊಮ್ಮೆ ಅಧಿಕಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಎಲ್ಲಾ ಪ್ರಕರಣಗಳನ್ನು ಮಾನಸಿಕ ಅಸ್ಥಿರತೆಯ ಕಾರಣಗಳನ್ನು ನೀಡಲಾಗುತ್ತಿತ್ತು.

    ಓಂಪ್ರಕಾಶ್ ರಿವಾಲ್ವರ್ ಹೊಂದಿದ್ದು ಅದನ್ನು ತಕ್ಷಣವೇ ವಶಪಡಿಸಿಕೊಳ್ಳಬೇಕು. ನಮ್ಮ ಮೊಬೈಲ್‌ ಹ್ಯಾಕ್‌ ಆಗುವ ಮೊದಲು ಈ ಸಂದೇಶವನ್ನು ಉಳಿಸಿಕೊಳ್ಳಿ. ನನ್ನನ್ನು ಒತ್ತೆಯಾಳುವಿನಂತೆ ನೋಡಲಾಗುತ್ತಿದೆ. ನಾನು ಎಲ್ಲಿಗೆ ಹೋದರೂ ಓಂಪ್ರಕಾಶ್ ಅವರ ಏಜೆಂಟ್‌ಗಳ ಕಣ್ಗಾವಲಿನಲ್ಲಿರುತ್ತೇನೆ. ಇದನ್ನೂ ಓದಿ: ಕರುನಾಡಲ್ಲಿ ಮುಂದಿನ ಒಂದು ವಾರ ಮಳೆ ಮುನ್ಸೂಚನೆ

    ನಾನು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸಲು ಕೇಳುತ್ತಾ ಬಂದಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ನನ್ನ ಮೇಲೆ ಮತ್ತು ಮಗಳ ಮೇಲೆ ವಿಷಪ್ರಾಶನ ಮಾಡಲಾಗಿದ್ದು ನಾವಿಬ್ಬರೂ ಅನಾರೋಗ್ಯದಿಂದ ಬಳಲುತ್ತಿದ್ದೇವೆ.

     

    ಓಂಪ್ರಕಾಶ್ ಗೆ ಮಸ್ತಾನ್ ಎಂಬ ಉಗ್ರನ ಸಂಪರ್ಕ ಇದ್ದು, ಪತಿ ಎನ್‌ಐಎ ಪ್ರಕರಣವನ್ನು ದಾಖಲಿಸಿಕೊಳ್ಳಬೇಕು. ಓಂ ಪ್ರಕಾಶ್‌ಗೆ ಹಣ ಬರುತ್ತಿದೆ. ರನ್ಯಾ ರಾವ್‌ಗಿಂತಲೂ ದೊಡ್ಡ ಪ್ರಕರಣ ಇದಾಗಿದ್ದು ಮುಂದೆ ನಾನು ಅಜಿತ್ ದೋವಲ್ ಅವರ ಗಮನಕ್ಕೆ ತರುತ್ತೇನೆ. ನನ್ನ ಮಗಳು ಮತ್ತು ನನಗೆ ಏನಾದರೂ ಸಂಭವಿಸಿದರೆ ಅದಕ್ಕೆ ಪತಿಯೇ ಹೊಣೆಯಾಗುತ್ತಾರೆ.

    ಈ ಗುಂಪಿನಲ್ಲಿರುವ ಅಧಿಕಾರಿಗಳು ಮತ್ತು ಇತರರು ದಯವಿಟ್ಟು ಈ ಸಂದೇಶವನ್ನು ಸಾಧ್ಯವಾದಷ್ಟು ಎಲ್ಲರಿಗೆ ಕಳುಹಿಸಿ. ನಾನು ನನ್ನ ಪತಿಯ ಬಗ್ಗೆ ಹೇಳಿದ ಎಲ್ಲಾ ವಿಚಾರಗಳು ಸರಿಯಾಗಿದೆ.

  • Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    Mumbai Attack | ರಾಣಾ ವಿರುದ್ಧ ಸಾಕ್ಷಿಗಾಗಿ ನಿಗೂಢ ಮಹಿಳೆಯ ಹಿಂದೆ ಬಿದ್ದ ಎನ್‌ಐಎ

    – ತಹವ್ವೂರ್‌ ರಾಣಾಗೆ ಎನ್‌ಐಎ ಕೇಳಿದ ಆ 18 ಪ್ರಶ್ನೆಗಳು ಯಾವುವು?
    – ಭಾರತ ಹಸ್ತಾಂತರ ತಡೆಯಲು 32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ ಪರ ವಕೀಲ

    ನವದೆಹಲಿ: 2008ರ ಮುಂಬೈ ದಾಳಿ (Mumbai Attack) ಪ್ರಕರಣದ ಉಗ್ರ ತಹವ್ವೂರ್ ಹುಸೇನ್ ರಾಣಾ (Tahawwur Hussain Rana) ವಿಚಾರಣೆ ಆರಂಭಿಸಿರುವ ರಾಷ್ಟ್ರೀಯ ತನಿಖಾ ದಳ (NIA) ಸಾಕ್ಷ್ಯ ಕಲೆಹಾಕಲು ನಿಗೂಢ ಮಹಿಳೆಯ ಹಿಂದೆ ಬಿದ್ದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

    ರಾಣಾ ಭಾರತದಲ್ಲಿದ್ದ ವೇಳೆ ಆತನ ಜೊತೆಗಿದ್ದ ಮಹಿಳೆಯನ್ನು ಪತ್ತೆಹಚ್ಚಲು ಎನ್‌ಐಎ ತನಿಖಾಧಿಕಾರಿಗಳ ತಂಡ ಮುಂದಾಗಿದೆ. ಆಕೆಯ ಗುರುತು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಈ ಮಹಿಳೆ ರಾಣಾ ನಡೆಸಿದ ಪಿತೂರಿಯ ಭಾಗವಾಗಿರಬಹುದು ಅಥವಾ ರಾಣಾ ಸಂಪರ್ಕದ ಬಗ್ಗೆ ಪ್ರಮುಖ ಮಾಹಿತಿಯನ್ನೂ ಹೊಂದಿರಬಹುದು ಶಂಕಿಸಲಾಗಿದೆ. ಆ ಮಹಿಳೆ ರಾಣಾ ಭಾರತದಲ್ಲಿ ಇದ್ದಷ್ಟು ದಿನ ಅವನ ಪತ್ನಿ ಎಂದೇ ಹೇಳಿಕೊಂಡಿದ್ದಳು. ಈಕೆಯನ್ನ ಪತ್ತೆಹಚ್ಚಿದ್ರೆ, ಇನ್ನಷ್ಟು ರಹಸ್ಯಗಳನ್ನ ಬಯಲಿಗೆಳೆಯಬಹುದು ಎಂದು ಅಧಿಕಾರಿಗಳು ಮಹಿಳೆಯ ಹುಡುಕಾಟಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

    ರಾಣಾಗೆ 18ರ ಕಂಟಕ
    ಈಗಾಗಲೇ ಮೊದಲ ಸುತ್ತಿನ ವಿಚಾರಣೆ ನಡೆಸಿರುವ ಎನ್‌ಐಎ ರಾಣಾಗೆ 18 ಪ್ರಮುಖ ಪ್ರಶ್ನೆಗಳನ್ನ ಕೇಳಿದೆ. ವಿಚಾರಣೆ ವೇಳೆ ಪಾಕ್‌ ಗುಪ್ತಚರ ಸಂಸ್ಥೆ ಐಎಸ್‌ಐ ಹಾಗೂ ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಬಗ್ಗೆ ಹಲವು ರಹಸ್ಯಗಳನ್ನ ಬಾಯ್ಬಿಟ್ಟಿದ್ದಾನೆ. ಈ ಪ್ರಶ್ನೆಗಳು ಮಾಧ್ಯಮಗಳಿಗೆ‌ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಎನ್‌ಐಎ ಕೇಳಿದ 18 ಪ್ರಶ್ನೆಗಳು ಯಾವುದು ಅಂತ ನೋಡೋದಾದ್ರೆ..

    1. 2008ರ ನವೆಂಬರ್‌ 26ರಂದು ನೀವು ಎಲ್ಲಿದ್ರಿ?
    2. ನೀವು ಭಾರತದಲ್ಲಿದ್ದ ಸಮಯದಲ್ಲಿ ಯಾರ‍್ಯಾರನ್ನ ಎಲ್ಲೆಲ್ಲಿ ಭೇಟಿ ಮಾಡಿದ್ದೀರಿ?
    3. ಡೇವಿಡ್ ಕೋಲ್ಮನ್ ಹೆಡ್ಲಿ ನಿಮಗೆ ಎಷ್ಟು ದಿನಗಳಿಂದ ಗೊತ್ತು? ನಕಲಿ ವೀಸಾ ನೀಡಿ ಭಾರತಕ್ಕೆ ಕಳುಹಿಸಿದ್ದು ಏಕೆ?
    4. ಹೆಡ್ಲಿಯನ್ನ ಭಾರತದಲ್ಲಿ ಭೇಟಿ ನೀಡಿದ ಸ್ಥಳಗಳ ಬಗ್ಗೆ ನಿಮಗೆ ಏನು ಹೇಳಿದರು?
    5. ಮುಂಬೈ ದಾಳಿಯಲ್ಲಿ ನಿಮ್ಮ ಮತ್ತು ಹೆಡ್ಲಿಯ ಪಾತ್ರವೇನು?
    6. ಡೇವಿಡ್ ಕೋಲ್ಮನ್ ಹೆಡ್ಲಿಗೆ ಭಾರತೀಯ ವೀಸಾ ಪಡೆಯಲು ನೀವು ಹೇಗೆ ಸಹಾಯ ಮಾಡಿದ್ದೀರಿ?
    7. ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ನಿಮಗೆ ಹೇಗೆ ಗೊತ್ತು? ನೀವು ಯಾವಾಗ ಮತ್ತು ಎಲ್ಲಿ ಅವನನ್ನ ಮೊದಲ ಬಾರಿಗೆ ಭೇಟಿ ಮಾಡಿದ್ರಿ?
    8. ಹಫೀಜ್ ಸಯೀದ್ ಜೊತೆಗೆ ನಿಮ್ಮ ನಂಟೇನು?
    9. ಲಷ್ಕರ್-ಎ-ತೈಬಾಗೆ ನೀವು ಹೇಗೆ ಸಹಾಯ ಮಾಡಿದ್ದೀರಿ? ನಿನ್ನ ಸಹಾಯಕ್ಕೆ ಪ್ರತಿಯಾಗಿ ಲಷ್ಕರ್ ನಿನಗೆ ಏನು ಕೊಟ್ಟನು?
    10. ಲಷ್ಕರ್-ಎ-ತೊಯ್ಬಾದಲ್ಲಿ ಎಷ್ಟು ಜನರಿದ್ದಾರೆ? ಅದರ ರಚನೆ ಹೇಗಿದೆ? ನೇಮಕಾತಿ ಹೇಗೆ ನಡೆಯುತ್ತದೆ? ಯಾರು ಮಾಡುತ್ತಾರೆ?
    11. ಲಷ್ಕರ್ ನಡೆಸಲು ನಿಧಿ ಎಲ್ಲಿಂದ ಬರುತ್ತದೆ? ಹೆಚ್ಚು ನಿಧಿ ಸಂಗ್ರಹ ಮಾಡುವವರು ಯಾರು?
    12. ಶಸ್ತ್ರಾಸ್ತ್ರಗಳನ್ನು ಯಾರು ಪೂರೈಸುತ್ತಾರೆ? ನೀವು ಯಾವ ದೇಶಗಳಿಂದ ಶಸ್ತ್ರಾಸ್ತ್ರಗಳನ್ನು ಪಡೆಯುತ್ತೀರಿ?
    13. ಪಾಕಿಸ್ತಾನಿ ಸೇನೆ ಮತ್ತು ISI ನಿಮಗೆ ಹೇಗೆ ಸಹಾಯ ಮಾಡುತ್ತದೆ?
    14. ದಾಳಿ ಮಾಡಲು ನೀವು ಗುರಿಗಳನ್ನು ಹೇಗೆ ಆರಿಸುತ್ತೀರಿ? ಗುರಿಯ ಮೇಲೆ ದಾಳಿ ಮಾಡಲು ISI ನಿಮಗೆ ಸೂಚನೆಗಳನ್ನು ನೀಡುತ್ತದೆಯೇ?
    15. ISIಯ ಯೋಜನೆ ಏನು? ಭಾರತದ ನಿಮ್ಮ ಗುರಿ ಸಾಧಿಸಲು ಸಾಧ್ಯವಾಗಲಿಲ್ಲವೇ?
    16. ಐಎಸ್‌ಐ ಹೊರತಾಗಿ ಪಾಕಿಸ್ತಾನ ಸರ್ಕಾರಕ್ಕೂ ಭಯೋತ್ಪಾದಕ ದಾಳಿಯ ಮಾಹಿತಿ ಸಿಗುತ್ತದೆಯೇ?
    17. ದಾಳಿಯ ಸಮಯದಲ್ಲಿ ಭಯೋತ್ಪಾದಕರಿಗೆ ಯಾರು ಸೂಚನೆಗಳನ್ನು ನೀಡುತ್ತಾರೆ?
    18. ಆತ್ಮಹತ್ಯಾ ದಾಳಿಗಳಿಗೆ ಹುಡುಗರನ್ನು ಹೇಗೆ ಸಿದ್ಧಪಡಿಸ್ತಾರೆ, ಅವರಿಗೆ ಏನು ಉಪದೇಶ ಕೊಡ್ತಾರೆ?

    32 ಆರೋಗ್ಯ ಸಮಸ್ಯೆ ಕಾರಣ ನೀಡಿದ್ದ ರಾಣಾ:
    ಇನ್ನೂ ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಎಲ್ಲಾ ರೀತಿಯ ಪ್ರಯತ್ನಗಳನ್ನೂ ಮಾಡಿದ್ದ ಅನ್ನೋ ಹೊಸ ವಿಚಾರ ಸಹ ಬೆಳಕಿಗೆ ಬಂದಿದೆ. ಈ ಮಾಹಿತಿಯು ಅಮೆರಿಕ ತನಿಖಾ ಏಜೆನ್ಸಿಗಳಿಗೆ ನೀಡಿದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

    ರಾಣಾನನ್ನ ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ರಾಣಾ ಪರ ವಕೀಲ ಅಮೆರಿಕದ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ 32 ಆರೋಗ್ಯ ಸಮಸ್ಯೆಗಳನ್ನು ಉಲ್ಲೇಖಿಸಿದ್ದರು. ಅಲ್ಲದೇ ತನ್ನ ಕಕ್ಷಿಗಾರನಿಗೆ ಭಾರತದ ಜೈಲುಗಳಲ್ಲಿ ಚಿತ್ರಹಿಂಸೆ ನೀಡಬಹುದು, ಇದರಿಂದ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರಾಣಾ ಜೀವನ ಬೇಗ ಅಂತ್ಯವಾಗಲಿದೆ. ಆದ್ದರಿಂದ ಭಾರತಕ್ಕೆ ಹಸ್ತಾಂತರಿಸದಂತೆ ಕೋರ್ಟ್‌ಗೆ ಮನವಿ ಮಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

  • ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ

    ರಾಣಾ ಇರೋ ಸೆಲ್‌ಗೆ 12 ಅಧಿಕಾರಿಗಳಿಗೆ ಮಾತ್ರ ಪ್ರವೇಶ – ಕೋಟೆಯಾಗಿ ಬದಲಾದ NIA ಕಚೇರಿ

    ನವದೆಹಲಿ: ವಿಶೇಷ ನ್ಯಾಯಾಲಯ 18 ದಿನಗಳ ಕಾಲ ಕಸ್ಟಡಿಗೆ ನೀಡಿದ ಬಳಿಕ ಮುಂಬೈ ದಾಳಿ (Mumbai Attack) ಪ್ರಕರಣ ಆರೋಪಿ ಉಗ್ರ ತಹವ್ವೂರ್ ಹುಸೇನ್ ರಾಣಾನನ್ನು (Tahawwur Rana) ದೆಹಲಿಯಲ್ಲಿರುವ ರಾಷ್ಟ್ರೀಯ ತನಿಖಾ ದಳದ (NIA) ಪ್ರಧಾನ ಕಚೇರಿಯಲ್ಲಿ ಬಂಧಿಸಿ ಇಡಲಾಗಿದೆ.

    ಎನ್‌ಐಎ ಕಟ್ಟಡದ ನೆಲ ಮಹಡಿಯಲ್ಲಿರುವ 14*14 ಅಡಿ ಅಳತೆಯ ಕೋಣೆಗೆ ಸಿಸಿಟಿವಿ (CCTV) ಹಾಕಲಾಗಿದ್ದು ಪ್ರತಿಯೊಂದು ಚಲನವಲನಗಳನ್ನು ಗಮನಿಸಲಾಗುತ್ತದೆ. ಈ ಕೊಠಡಿಯಲ್ಲೇ ಎಲ್ಲಾ ತನಿಖಾ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲಿವೆ.

    ರಾಣಾ ಆಗಮನದ ನಂತರ ಎನ್‌ಐಎ ಪ್ರಧಾನ ಕಚೇರಿ ಕೋಟೆಯಾಗಿ ಬದಲಾಗಿದೆ. ಹೆಚ್ಚುವರಿ ದೆಹಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಹೊರಗಡೆ ಭದ್ರತೆಗೆ ನಿಯೋಜಿಸಲಾಗಿದೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

     

    ಪ್ರತಿ ಇಂಚಿನಲ್ಲೂ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು 12 ಎನ್‌ಐಎ ಅಧಿಕಾರಿಗಳಿಗೆ ಮಾತ್ರ ಈ ಕೊಠಡಿ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ.

    ನೆಲದ ಮೇಲೆ ಹಾಸಿಗೆ ಹಾಸಲಾಗಿದೆ. ಸೆಲ್‌ ಒಳಗಡೆಯೇ ಸ್ನಾನ ಗೃಹ ಮತ್ತು ಶೌಚಾಲಯವಿದೆ. ಊಟ, ಕುಡಿಯುವ ನೀರು, ವೈದ್ಯಕೀಯ ಸರಬರಾಜು ಎಲ್ಲವನ್ನೂ ಒಳಗಡೆಗೆ ತಲುಪಿಸಲಾಗುತ್ತದೆ. ಇದನ್ನೂ ಓದಿ: ಅಮೆರಿಕದಲ್ಲಿ ಕಾಲಿಗೆ, ಸೊಂಟಕ್ಕೆ ಚೈನ್‌ – ಭಾರತದಲ್ಲಿ ರಾಣಾನಿಗೆ ಕಟ್ಟಿದ್ದ ಚೈನ್‌ ತೆಗೆದಿದ್ದು ಯಾಕೆ?

    ಮೂಲಗಳ ಪ್ರಕಾರ ಶುಕ್ರವಾರ ವಿಚಾರಣೆ ಆರಂಭವಾಗಿದ್ದು ಇಂದಿನಿಂದ ರಾಣಾನನ್ನು ತೀವ್ರವಾಗಿ ವಿಚಾರಣೆ ನಡೆಸಲಾಗುತ್ತದೆ. ಡ್ಯುಯಲ್ ಕ್ಯಾಮೆರಾ ಕಣ್ಗಾವಲಿನಲ್ಲಿ ಬಂಧಿಯಾಗಿರುವ ಕೊಠಡಿಯಲ್ಲೇ ವಿಚಾರಣೆ ನಡೆಯಲಿದೆ. ಎಂಟು ಕೇಂದ್ರ ತನಿಖಾ ಮತ್ತು ಗುಪ್ತಚರ ಸಂಸ್ಥೆಗಳು ರಾಣಾನನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಕೋರಿವೆ ಎಂದು ವರದಿಯಾಗಿದೆ.

    ಅಮೆರಿಕದಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆ ತಂದ ನಂತರ ರಾಣಾನನ್ನು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ನೀಡಿದ ಬಳಿಕ ರಾಣಾನನ್ನು ಈ ವಿಶೇಷ ಸೆಲ್‌ನಲ್ಲಿ ಬಂಧಿಸಿ ಇಡಲಾಗಿದೆ.

  • ರಾಣಾಗೆ 14×14 ಅಡಿಯ ಸೆಲ್ – ದಿನದ 24 ಗಂಟೆಯೂ ನಿಗಾ; ಸೆಲ್‌ನಲ್ಲೇ ಊಟ

    ರಾಣಾಗೆ 14×14 ಅಡಿಯ ಸೆಲ್ – ದಿನದ 24 ಗಂಟೆಯೂ ನಿಗಾ; ಸೆಲ್‌ನಲ್ಲೇ ಊಟ

    – ನೆಲದಲ್ಲೇ 1 ಬೆಡ್, ಬಾತ್ ರೂಂ

    ನವದೆಹಲಿ: 2008ರ ಮುಂಬೈ ದಾಳಿಯ (Mumbai Attack) ಸಂಚುಕೋರ ತಹವ್ವೂರ್‌ ರಾಣಾನನ್ನ (Tahawwur Rana) 18 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ಶುರು ಮಾಡಿದೆ. ಸದ್ಯ ಎನ್‌ಐಎ ಮುಖ್ಯಕಚೇರಿಯ ಪ್ರತ್ಯೇಕ ಸೆಲ್‌ನಲ್ಲಿ ರಾಣಾನನ್ನು ಸದಾನಂದ ದಾತೆ ನೇತೃತ್ವದ 12 ಅಧಿಕಾರಿಗಳ ಸ್ಪೆಷಲ್ ಟೀಂ ವಿಚಾರಣೆಗೆ ಒಳಪಡಿಸಿದೆ. ಅದರಂತೆ ರಾಣಾನನ್ನ ದೇಶದ ವಿವಿಧ ಭಾಗಗಳಿಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.

    ದಿನದ 24 ಗಂಟೆಯೂ ನಿಗಾ
    ಸದ್ಯ ರಾಣಾನನ್ನ ಸುರಕ್ಷಿತವಾಗಿಡಲು 14*14 ಅಡಿಯ ಸೆಲ್‌ ವ್ಯವಸ್ಥೆ ಮಾಡಲಾಗಿದೆ. ಈ ಸೆಲ್ ಸಿಜಿಒ ಕಾಂಪ್ಲೆಕ್ಸ್‌ನಲ್ಲಿರುವ (CGO Complex) ಎನ್‌ಐಎ (NIA) ಕಚೇರಿಯ ಗ್ರೌಂಡ್‌ಫ್ಲೋರ್‌ನಲ್ಲಿ ಇದೆ. ಜೊತೆಗೆ ರಾತ್ರಿ ವೇಳೆಯೂ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ ದೆಹಲಿ ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿಯನ್ನ ಹೊರಾಂಗಣದಲ್ಲಿ ನಿಯೋಜಿಸಲಾಗಿದೆ. ರಾಣಾ ಕೊಠಡಿ ಪ್ರವೇಶಿಸಲು ಮೂರ್ನಾಲ್ಕು ಹಂತಗಳಲ್ಲಿ ಡಿಜಿಟಲ್‌ ಸುರಕ್ಷತಾ ಪದರಗಳ ವ್ಯವಸ್ಥೆ ಮಾಡಲಾಗಿದೆ. ದಿನದ 24 ಗಂಟೆಯೂ ನಿಗಾ ವಹಿಸಲು ಇಂಚಿಂಚಿಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 12 ಅಧಿಕಾರಿಗಳ ಸ್ಪೆಷಲ್‌ ಟೀಂಗೆ ಹೊರತುಪಡಿಸಿ ಉಳಿದವರು ಯಾರಿಗೂ ಇಲ್ಲಿ ಪ್ರವೇಸಿಸಲು ಅವಕಾಶ ಇಲ್ಲ ಎಂದು ಎನ್‌ಐಎ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

    ನೆಲದ ಮೇಲೆಯೇ ಬಾತ್‌ ರೂಂ
    ಇನ್ನೂ ರಾಣಾಗೆ ವ್ಯವಸ್ಥೆ ಮಾಡಲಾದ ಈ ಸೆಲ್‌ (Speical Cell) ಒಂದು ಭದ್ರಕೋಟೆಯಂತಿದೆ. ನೆಲದ ಮೇಲೆಯೇ ಮಲಗಲು ರಾಣಾಗೆ ಒಂದು ಹಾಸಿಗೆ ಹಾಗೂ ಸ್ನಾನ ಗೃಹದ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಊಟ, ಕುಡಿಯುವ ನೀರು, ವೈದ್ಯಕೀಯ ತಪಾಸಣೆ ಎಲ್ಲದಕ್ಕೂ ಆ 14*14 ಅಡಿಯ ಸೆಲ್‌ನಲ್ಲೇ ವ್ಯವಸ್ಥೆ ಮಾಡಲಾಗಿದೆ.

    2008ರ ಮುಂಬೈ ದಾಳಿಯ ಉಗ್ರ ತಹವ್ವೂರ್‌ ರಾಣಾನನ್ನ ಗುರುವಾರ ವಿಶೇಷ ವಿಮಾನದ ಮೂಲಕ ಅಮೆರಿಕದಿಂದ ಭಾರತಕ್ಕೆ ಕರೆತರಲಾಯಿತು. ದೆಹಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆ ರಾಣಾನನ್ನ ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ಬಳಿಕ ಪಟಿಯಾಲ ಕೋರ್ಟ್‌ಗೆ ಹಾಜರುಪಡಿಸಿ ಆತನನ್ನ 18 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿತು.

    ಸತ್ತ 9 ಲಷ್ಕರ್ ಉಗ್ರರಿಗೆ ಪಾಕ್ ಅವಾರ್ಡ್ ಕೊಡಬೇಕಿತ್ತು:
    ಎನ್‌ಐಎ ಅಧಿಕಾರಿಗಳ ತಂಡ ರಾಣಾ ವಿಚಾರಣೆ ನಡೆಸುತ್ತಿರುವ ಹೊತ್ತಿನಲ್ಲೇ ರಾಣಾ ಹಿಂದೆ ನೀಡಿದ್ದ ಹೇಳಿಕೆಯೊಂದು ಬೆಳಕಿಗೆ ಬಂದಿದೆ. ʻʻಮುಂಬೈನಲ್ಲಿ ನರಮೇಧ ನಡೆಸಿ, ಭಾರತೀಯ ಪಡೆಗಳ ಗುಂಡಿಗೆ ಬಲಿಯಾದ 9 ಲಷ್ಕರ್ ಉಗ್ರರಿಗೆ ಪಾಕ್‌ ಸೈನಿಕರಿಗೆ ನೀಡುವ ʻನಿಶಾನ್ ಎ ಹೈದರ್ʼ ಪ್ರಶಸ್ತಿ ನೀಡಬೇಕುʼʼ ಎಂದು ದಾಳಿಯ ಮಾಸ್ಟರ್‌ಮೈಂಡ್ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆ ತಹಾವೂರ್ ರಾಣಾ ಹೇಳಿದ್ದ ಎಂಬ ವಿಚಾರ ಈಗ ಬಯಲಾಗಿದೆ.

    ಅಷ್ಟೇ ಅಲ್ಲ, ದಾಳಿಯಿಂದಾದ ಅನಾಹುತಗಳ ಬಗ್ಗೆ ಹೆಡ್ಲಿ ಪ್ರಸ್ತಾಪ ಮಾಡಿದಾಗ, ಭಾರತೀಯರಿಗೆ ಹಾಗೇ ಆಗಬೇಕಿತ್ತು ಎಂದು ರಾಣಾ ನಾಲಗೆ ಹರಿಬಿಟ್ಟಿದ್ದ. ಹಸ್ತಾಂತರದ ವೇಳೆ ಅಮೆರಿಕ ಕಾನೂನು ವಿಭಾಗ ನೀಡಿದ ಪ್ರಕಟಣೆಯಲ್ಲಿ ಈ ಎಲ್ಲಾ ವಿಚಾರ ಅಡಕವಾಗಿದೆ ಎಂದು ತಿಳಿದುಬಂದಿದೆ.

  • ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

    ಬಿಹಾರ ಚುನಾವಣೆ ವೇಳೆ ಕೇಂದ್ರ ಸರ್ಕಾರ ಉಗ್ರ ರಾಣಾನನ್ನ ಗಲ್ಲಿಗೇರಿಸಲಿದೆ: ಸಂಜಯ್ ರಾವತ್‌

    – ರಾಣಾ ಹಸ್ತಾಂತರ ಪ್ರಕ್ರಿಯೆ ಕಾಂಗ್ರೆಸ್‌ ಆಡಳಿತದಲ್ಲೇ ನಡೆದಿತ್ತು: ರಾವತ್‌
    – ಜನರ ಗಮನ ಬೇರೆಡೆ ಸೆಳೆಯುವ ಬಿಜೆಪಿ ಕುತಂತ್ರ: ಕನ್ಹಯ್ಯಾ

    ಪಾಟ್ನಾ: 2008ರ ಮುಂಬೈ ದಾಳಿಯ (Mumbai Attack) ಪ್ರಮುಖ ಸೂತ್ರಧಾರಿ ಲಷ್ಕರ್ ಉಗ್ರ ತಹವ್ವೂರ್‌ ರಾಣಾನನ್ನು (Tahawwur Rana) ಕೊನೆಗೂ ಭಾರತಕ್ಕೆ ಕರೆತರಲಾಗಿದೆ. ಈಗಾಗಲೇ ರಾಣಾನನ್ನ ಕೋರ್ಟ್‌ 18 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳದ (NIA) ಕಸ್ಟಡಿಗೆ ನೀಡಿದ್ದು, ಎನ್‌ಐಎ ಮುಂದಿನ ವಿಚಾರಣೆ ಕೈಗೊಂಡಿದೆ. ದೇಶದ ಹಲವು ಭಾಗಗಳಿಗೆ ರಾಣಾನನ್ನ ಕರೆದೊಯ್ಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜಕೀಯ ಜಟಾಪಟಿಯೂ ನಡೆದಿದೆ.

    ರಾಣಾ ಹಸ್ತಾಂತರ ವಿಚಾರ ಕುರಿತು ಮಾತನಾಡಿರುವ ಶಿವಸೇನಾ (UTB) ಸಂಸದ ಸಂಜಯ್‌ ರಾವತ್‌ (Sanjay Rawat), ರಾಣಾನನ್ನ ತಕ್ಷಣವೇ ಗಲ್ಲಿಗೇರಿಸಬೇಕು. ಆದ್ರೆ ಬಿಹಾರ ಚುನಾವಣೆ (Bihar Election) ಸಂದರ್ಭದಲ್ಲಿ ಕೇಂದ್ರ ಸರ್ಕಾರ ಗಲ್ಲಿಗೇರಿಸಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೈಟೆಕ್‌ ವಿಮಾನ, ಬುಕಾರೆಸ್ಟ್‌ನಿಂದ 11 ಗಂಟೆ ಪ್ರಯಾಣ – ಉಗ್ರ ರಾಣಾನನ್ನ ಅಮೆರಿಕದಿಂದ ಭಾರತಕ್ಕೆ ಕರೆತಂದಿದ್ದು ಹೇಗೆ?

    ಕ್ರೆಡಿಟ್‌ ತೆಗೆದುಕೊಳ್ಳುವ ಅಗತ್ಯವಿಲ್ಲ
    ರಾಣಾನನ್ನು ಭಾರತಕ್ಕೆ ಕರೆತರಲು 16 ವರ್ಷ ಬೇಕಾಯಿತು. ಆದ್ರೆ ಅವನನ್ನು ಹಸ್ತಾಂತರಿಸುವ ಪ್ರಕ್ರಿಯೆ ಕಾಂಗ್ರೆಸ್‌ ಆಡಳಿತದಲ್ಲೇ ಪ್ರಾರಂಭವಾಯಿತು. ಆದ್ದರಿಂದ ಅವನನ್ನು ಮರಳಿ ಕರೆತಂದ ಕ್ರೆಡಿಟ್‌ ದೇಶಕ್ಕೆ ಸಲ್ಲುತ್ತದೆ. ಯಾರೂ ವೈಯಕ್ತಿಕವಾಗಿ ಕ್ರೆಡಿಟ್‌ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಅಲ್ಲದೇ ತಹವ್ವೂರ್‌ ರಾಣಾ ಭಾರತಕ್ಕೆ ಹಸ್ತಾಂತರಿಸಲಾದ ಮೊದಲ ಆರೋಪಿಯಲ್ಲ. ಇದಕ್ಕೂ ಮುನ್ನ 1993ರ ಸರಣಿ ಸ್ಫೋಟದ ಆರೋಪಿ ಅಬು ಸಲೇಂನನ್ನು ಕೂಡ ಭಾರತಕ್ಕೆ ಹಸ್ತಾಂತರಿಸಲಾಗಿತ್ತು ಎಂದು ನುಡಿದಿದ್ದಾರೆ.  ಇದನ್ನೂ ಓದಿ:  18 ದಿನಗಳ ಕಾಲ NIA ಕಸ್ಟಡಿಗೆ ರಾಣಾ – ಮಧ್ಯರಾತ್ರಿ ಕೋರ್ಟ್‌ನಲ್ಲಿ ವಾದ ಏನಿತ್ತು?

    ಇದೇ ವೇಳೆ ಕಾಂಗ್ರೆಸ್‌ ನಾಯಕ ಕನ್ಹಯ್ಯಾ ಕುಮಾರ್ ಮಾತನಾಡಿ, ತಹವ್ವೂರ್‌ ರಾಣಾ ಹಸ್ತಾಂತರ ರಾಜತಾಂತ್ರಿಕ ಯಶಸ್ಸಲ್ಲ. ಸಾರ್ವಜನಿಕ ಸಮಸ್ಯೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಬಿಜೆಪಿಯ ಕುತಂತ್ರವಾಗಿದೆ ಎಂದು ಲೇವಡಿ ಮಾಡಿದ್ದಾರೆ.  ಇದನ್ನೂ ಓದಿ: ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ತಹವ್ವೂರ್‌ ರಾಣಾ ಅರೆಸ್ಟ್‌