Tag: NIA

  • NIA ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ, ಅರೆಸ್ಟ್ ಮಾಡ್ಕೊಂಡು ಹೋಗ್ತಾರೆ- ಡಿಸಿಎಂ

    NIA ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ, ಅರೆಸ್ಟ್ ಮಾಡ್ಕೊಂಡು ಹೋಗ್ತಾರೆ- ಡಿಸಿಎಂ

    ಹುಬ್ಬಳ್ಳಿ: ಎನ್‍ಐಎ ಅನೇಕ ವಿಚಾರಗಳನ್ನು ನಮಗೆ ಹೇಳಲ್ಲ. ಅಧಿಕಾರಿಗಳು ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ತಿಳಿಸಿದ್ದಾರೆ.

    ಬೌದ್ಧ ಧರ್ಮಗುರು, ದಲೈಲಾಮಾ ಕೊಲೆಗೆ ಉಗ್ರರು ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎನ್‍ಐಎ ಅವರು ಅನೇಕ ವಿಚಾರಗಳನ್ನು ನಮಗೆ ಹೇಳೋದೇ ಇಲ್ಲ. ಇಂತಹ ಸಂದರ್ಭಗಳಲ್ಲಿ ಅವರೇ ಬಂದು ಅರೆಸ್ಟ್ ಮಾಡಿಕೊಂಡು ಹೋಗುತ್ತಾರೆ. ಅನೇಕ ಉದಾಹರಣೆಗಳು ಇವೆ. ಉಗ್ರ ಚಟುವಟಿಕೆಯಲ್ಲಿರುವಂತವರನ್ನು ಅವರೇ ಬಂದು ಬಂಧಿಸಿಕೊಂಡು ಹೋಗುತ್ತಾರೆ. ಮಾಹಿತಿ ಜಾಲ (information Network) ನಲ್ಲಿ ಅವರು ನಮಗೂ ಕೂಡ ಮಾಹಿತಿ ಕೊಡಬೇಕು. ಆದ್ರೆ ಕೊಡುತ್ತಿಲ್ಲ ಅಂದ್ರು.

     

    ಇಂಟೆಲಿಜೆನ್ಸ್(ಗುಪ್ತಚರ ಇಲಾಖೆ) ಅವರು ಅವರಿಗಿರುವ ಇಂಟೆಲಿಜೆನ್ಸ್ ಮೂಲಕ ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ಮಾಹಿತಿಗಳನ್ನು ಸಂಗ್ರಹಿಸುತ್ತಾರೆ. ಕಳೆದ 3 ದಿನಗಳ ಹಿಂದೆ ದಕ್ಷಿಣ ರಾಜ್ಯದ ಡಿಜಿಗಳ ಕಾನ್ಫರೆನ್ಸ್ ಮಾಡಿದ್ದೆ. ಅದರಲ್ಲಿ ಒಂದು ವಿಷಯ ಇಂಟೆಲಿಜೆನ್ಸ್ ಶೇರಿಂಗ್ ಆಗಿದೆ. ಅವರಿಗೇನಾದ್ರೂ ಗೊತ್ತಾದ್ರೆ ಅವರು ನಮಗೆ ಹೇಳುತ್ತಾರೆ. ನಮಗೆ ಏನಾದ್ರೂ ಗೊತ್ತಾದ್ರೆ ಅವರಿಗೆ ಹೇಳುತ್ತೀವಿ. ಇದೊಂದು ಇಲಾಖೆಯ ಭಾಗವಾಗಿದೆ ಅಂದ್ರು.

    ಈ ವೇಳೆ ರಾಜ್ಯದ ಗುಪ್ತಚರ ಇಲಾಖೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಬಂದಿದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಡಿಸಿಎಂ, ಈ ಬಗ್ಗೆ ನನಗೆ ಗೊತ್ತಿಲ್ಲ ಅಂತ ಹೇಳಿದ್ರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.youtube.com/watch?v=XBYQ_jQcHJ4

  • 2 ಬಾಂಬ್ ಸ್ಫೋಟಗಳಿಂದ ಬಚಾವಾಯ್ತು ಬೆಂಗಳೂರು!

    2 ಬಾಂಬ್ ಸ್ಫೋಟಗಳಿಂದ ಬಚಾವಾಯ್ತು ಬೆಂಗಳೂರು!

    – ಬಾಂಗ್ಲಾದಲ್ಲಿ 95 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಉಗ್ರ

    ಬೆಂಗಳೂರು: 2 ಬಾಂಬ್ ಸ್ಫೋಟಗಳಿಂದ ಸಿಲಿಕಾನ್ ಸಿಟಿ ಬಚಾವಾಗಿದ್ದು, ಮುನೀರ್ ಬಂಧನದಿಂದ ಬಾಂಬ್ ಸ್ಫೋಟದ ಸಂಚು ವಿಫಲವಾಗಿದೆ. ರಾಮನಗರದಲ್ಲಿ ಬಂಧಿತನಾಗಿರುವ ಉಗ್ರ ಜಹೀದುಲ್ ಇಸ್ಲಾಂ ಅಲಿಯಾಸ್ ಮುನೀರ್ ಶೇಖ್ ವಿಚಾರಣೆ ವೇಳೆ ಈ ಸ್ಫೋಟಕ ಮಾಹಿತಿ ಬಯಲಾಗಿದೆ.

    ಬೋದ್‍ಗಯಾ ಬ್ಲಾಸ್ಟ್ ಬಳಿಕ ಬೆಂಗಳೂರಿನಲ್ಲಿ ಸ್ಫೋಟ ನಡೆಸಲು ಮುನೀರ್ ಸ್ಕೆಚ್ ರೂಪಿಸಿದ್ದ. ಆರಂಭದಲ್ಲಿ ಬೆಂಗಳೂರಿನ ಕೆ.ಆರ್ ಪುರಂ, ವೈಟ್ ಫೀಲ್ಡ್ ಅಲ್ಲಿ ವಾಸವಾಗಿದ್ದ ಮುನೀರ್ ರಾಮನಗರಕ್ಕೆ ಬಳಿಕ ರಾಮನಗರಕ್ಕೆ ಶಿಫ್ಟ್ ಆಗಿದ್ದನು.

    ಈತ 2018 ಮೇ ಅಲ್ಲಿ ಬೆಂಗಳೂರಿಗೆ ಬಂದಿದ್ದು,  ಬೆಂಗಳೂರಿನ ಎರಡು ಜನನಿಬಿಡ ಜಾಗದಲ್ಲಿ ಬ್ಲಾಸ್ಟ್ ಮಾಡಲು ಹೊಂಚು ಹಾಕಿದ್ದನು. ರಾಮನಗರದಿಂದ ಬೆಂಗಳೂರಿಗೆ ದಿನ ಬೆಳಗ್ಗೆ ಬಂದು ಬೆಂಗಳೂರಿನ ಬೀದಿ ಬೀದಿಯಲ್ಲಿ ಬಟ್ಟೆ ಮಾರಾಟ ಮಾಡುತ್ತಿದ್ದ ಮುನೀರ್ ಪ್ರಾಯೋಗಿಕವಾಗಿ ಕಚ್ಚಾ ಬಾಂಬ್ ಬ್ಲಾಸ್ಟ್ ಮಾಡಲು ದಿನಗಣನೆ ಮಾಡಿದ್ದನು. ಈತ ಕೆಲಸ ಮುಗಿಸಿ ಡಿಸೆಂಬರ್ ಅಲ್ಲಿ ವಾಪಸ್ ಹೋಗಲು ಸ್ಕೆಚ್ ಹಾಕಿದ್ದನು ಎಂದು ತಿಳಿದು ಬಂದಿದೆ.

    ರಾಮನಗರದಲ್ಲಿ ಸಿಕ್ಕಿದ್ದು ಹೇಗೆ?
    ಬಿಹಾರದ ಬೋದ್‍ಗಯಾ ಚಾಲಚಕ್ರ ಮೈದಾನದಲ್ಲಿ 2018 ಜುಲೈ 19ರಂದು ಐಇಡಿ ಪ್ಲಾಂಟ್ ಮಾಡಲಾಗಿತ್ತು. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದರು. ನಂತರ ಆಗಸ್ಟ್ 3ರಂದು ಬಾಂಗ್ಲಾದೇಶದ ಅಬ್ದುಲ್ ಕರೀಂ ಮತ್ತು ಮುಸ್ತಾಫಿಜುರ್ ರೆಹಮಾನ್‍ನನ್ನು ಪೊಲೀಸರು ಬಂಧಿಸಿದ್ದರು. ಇವರು ಕೇರಳದ ಮಲಪ್ಪುರಂನಲ್ಲಿರುವ ಬಂಗಾಳಿ ಮಾತನಾಡುವ ಕಾರ್ಮಿಕರ ಕ್ಯಾಂಪ್‍ನಲ್ಲಿ ತಲೆಮರೆಸಿಕೊಂಡಿದ್ದನು. ನಂತರ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಬಂಧಿಸಿದ್ದಾರೆ.

    ಪೊಲೀಸರು ಬಂಧಿತ ಆರೋಪಿಗಳಿಂದ ಬೋದ್‍ಗಯಾದಲ್ಲೇ ಬಾಂಬ್ ಸ್ಫೋಟಿಸಲು ಇಟ್ಟುಕೊಂಡಿದ್ದ ಸರ್ಕೂಯಟ್ ಡಿಸೈನ್ ಮತ್ತೊಮ್ಮೆ ವಶಪಡಿಸಿಕೊಳ್ಳಗಾಗಿತ್ತು. ನಂತರ ಈ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಆರೋಪಿ ಜಹೀದುಲ್ ಇಸ್ಲಾಂ ಮತ್ತು ಆದಿಲ್‍ನನ್ನು ಬಂಧಿಸಲಾಗಿದೆ ಎಂದು ಎನ್‍ಐಎ ತಿಳಿಸಿದೆ.

    95 ವರ್ಷ ಜೈಲು ಶಿಕ್ಷೆ:
    ಬೋದಗಯಾ ಸ್ಫೋಟ ಮತ್ತಿತರ ಪ್ರಕರಣದಲ್ಲಿ ಮುನೀರ್ ಪ್ರಮುಖ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಮತ್ತು ಲುಕ್ ಔಟ್ ಸರ್ಕುಯಲರ್ ಹೊರಡಿಸಲಾಗಿತ್ತು. ಅಷ್ಟೇ ಅಲ್ಲದೇ ಬಾಂಗ್ಲಾದೇಶದಲ್ಲಿ ಸರಣಿ ಸ್ಫೋಟ ಪ್ರಕರಣಗಳಲ್ಲಿ ಜಹೀದುಲ್ ಮೋಸ್ಟ್ ವಾಂಟೆಡ್ ಆಗಿದ್ದಾನೆ. ಉಗ್ರ ಚಟುವಟಿಕೆ ಪ್ರಕರಣವೊಂದರಲ್ಲಿ ಈತನಿಗೆ ಒಟ್ಟು 95 ವರ್ಷ ಜೈಲು ಶಿಕ್ಷೆಯಾಗಿದೆ. ಒಂದು ಕೊಲೆ ಪ್ರಕರಣದ ವಿಚಾರಣೆ ಬಾಕಿ ಇದೆ. 2014ರಲ್ಲಿ ಬಾಂಗ್ಲಾದೇಶದ ಪೊಲೀಸರ ವಶದಲ್ಲಿದ್ದಾಗ ತಪ್ಪಿಸಿಕೊಂಡು ಭಾರತಕ್ಕೆ ನುಸುಳಿದ್ದನು. ರಾಮನಗರದಲ್ಲಿ ಜಹೀದುಲ್ ಇಸ್ಲಾಂ ಮನೆಯಲ್ಲಿ ಸ್ಫೋಟಕದ ಕೆಲವು ಸಾಮಾಗ್ರಿ ಜೊತೆಗೆ ಎಲೆಕ್ಟ್ರಾನಿಕ್ ಉಪಕರಣಗಳು ಪತ್ತೆಯಾಗಿವೆ ಎಂದು ಎನ್‍ಐಎ ಮಾಹಿತಿ ನೀಡಿದೆ.

    ದಕ್ಷಿಣ ಭಾರತದ ರಾಜ್ಯಗಳು ಅಡಗುತಾಣ
    ಬೆಂಗಳೂರು, ರಾಮನಗರ ಮತ್ತು ತುಮಕೂರಿನಲ್ಲಿ ಉಗ್ರರು ತಲೆ ಬಚ್ಚಿಕೊಂಡು ಜನ ಸಾಮಾನ್ಯರಂತೆ ಜೀವನ ನಡೆಸುತ್ತಿದ್ದರು. ಉತ್ತರ ಭಾರತ ಸೇರಿದಂತೆ ವಿವಿಧೆಡೆ ಉಗ್ರ ಚಟುವಟಿಕೆ ನಡೆಸಿ, ಯಾರ ಕೈಗೂ ಸಿಗದಂತೆ ಗೌಪ್ಯವಾಗಿ ಅವಿತುಕೊಳ್ಳಲು ಉಗ್ರರ ಪಾಲಿಗೆ ದಕ್ಷಿಣ ಭಾರತದ ರಾಜ್ಯಗಳು ಸುರಕ್ಷಿತ ಸ್ಥಳಗಳಾಗಿವೆ. ಚರ್ಚ್‍ಸ್ಟ್ರೀಟ್ ಸ್ಫೋಟ ಪ್ರಕರಣದಲ್ಲಿ ಆರೋಪಿಯೊಬ್ಬ ಕೃತ್ಯ ನಡೆಸಿದ ನಂತರ ಹೊಸೂರು ರಸ್ತೆ ಪರಪ್ಪನ ಅಗ್ರಹಾರ ಬಳಿ 2 ವರ್ಷಗಳ ಕಾಲ ಕೂಲಿ ಕೆಲಸ ಮಾಡಿಕೊಂಡಿದ್ದನು. ಅದೇ ರೀತಿ, ಚಿನ್ನಸ್ವಾಮಿ ಕ್ರೀಡಾಂಗಣ ಸ್ಫೋಟ ಪ್ರಕರಣದ ಕೆಲ ಆರೋಪಿಗಳು, ತುಮಕೂರಿನಲ್ಲಿ ಬಾಡಿಗೆ ಮನೆಯೊಂದರಲ್ಲಿ ಸಾಮಾನ್ಯರಂತೆ ಇದ್ದರು.

  • ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳ ಖುಲಾಸೆ

    ಹೈದರಾಬಾದ್ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣ: ಸ್ವಾಮಿ ಅಸೀಮಾನಂದ ಸೇರಿ ಎಲ್ಲಾ ಆರೋಪಿಗಳ ಖುಲಾಸೆ

    ಹೈದರಾಬಾದ್: 2007 ರಲ್ಲಿ ನಡೆದ ಹೈದರಾಬಾದ್ ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 10 ಮಂದಿ ಆರೋಪಿಗಳನ್ನು ಎನ್‍ಐಎ ವಿಶೇಷ ನ್ಯಾಯಾಲಯ ಸೋಮವಾರ ಖುಲಾಸೆಗೊಳಿಸಿದೆ.

    ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ತನಿಖಾ ಸಂಸ್ಥೆ ವಿಶೇಷ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳನ್ನು ಖುಲಾಸೆಗೊಳಿಸಿದೆ. ನಬಕುಮಾರ್ ಶ್ರೀಕರ್ ಅಲಿಯಾಸ್ ಸ್ವಾಮಿ ಅಸೀಮಾನಂದ, ದೇವೇಂದ್ರ ಗುಪ್ತಾ, ಲೋಕೇಶ್ ಶರ್ಮಾ ಅಲಿಯಾಸ್ ಅಜಯ್ ತಿವಾರಿ, ಲಕ್ಷ್ಮಣ್ ದಾಸ್ ಮಹಾರಾಜ್, ಮೋಹನ್ ಲಾಲ್ ರಾತೇಶ್ವರ್ ಮತ್ತು ರಾಜೇಂದ್ರ ಚೌಧರಿ ಪ್ರಕರಣದಲ್ಲಿ ಖುಲಾಸೆಗೊಂಡ ಪ್ರಮುಖ ಆರೋಪಿಗಳಾಗಿದ್ದಾರೆ. ಇವರೆಲ್ಲರೂ ಅಭಿನವ್ ಭಾರತ ರತ್ನ ಸಂಘಟನೆಯ ಸದಸ್ಯರಾಗಿದ್ದರು.

    ಕಳೆದ 11 ವರ್ಷಗಳ ಹಿಂದೆ 2007 ರ ಮೇ 18ರ ಶುಕ್ರವಾರದಂದು ಮೆಕ್ಕಾ ಮಸೀದಿಯಲ್ಲಿ ಪ್ರಬಲ ಬಾಂಬ್ ಸ್ಫೋಟಗೊಳಿಸಲಾಗಿತ್ತು. ದಾಳಿಯಲ್ಲಿ 9 ಮಂದಿ ಸಾವನ್ನಪ್ಪಿ, 58ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು.

    ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಸಿಬಿಐ ಗೆ ವಹಿಸಲಾಗಿತ್ತು. 2011 ರಲ್ಲಿ ಎನ್‍ಐಎಗೆ ಘಟನೆಯ ವಿಚಾರಣೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪ್ರಕರಣದ 10 ಮಂದಿ ಆರೋಪಿಗಳ ಪೈಕಿ ಐವರನ್ನು ಮಾತ್ರ ಪೊಲೀಸರು ಬಂಧಿಸಿದ್ದರು. ಪ್ರಮುಖ ಆರೋಪಿಗಳಾದ ಸಂದೀಪ್ ವಿ. ದಂಗೆ ಮತ್ತು ರಾಮಚಂದ್ರ ಕಲ್ಸಂಗ್ರಾ ಪ್ರಕರಣದ ತನಿಖೆ ಆರಂಭದಿಂದಲೂ ತಲೆಮರೆಸಿಕೊಂಡಿದ್ದಾರೆ. ಮತ್ತೊಬ್ಬ ಆರೋಪಿ ಸುನೀಲ್ ಜೋಷಿಯನ್ನು ಹತ್ಯೆ ಮಾಡಲಾಗಿದೆ.

    ಪ್ರಕರಣದಲ್ಲಿ ಒಟ್ಟು 226 ವ್ಯಕ್ತಿಗಳನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿತ್ತು. ಅಲ್ಲದೇ 411 ದಾಖಲೆಗಳನ್ನು ಸಾಕ್ಷ್ಯಾಧಾರಗಳನ್ನಾಗಿ ನ್ಯಾಯಾಲಯ ವಿಚಾರಣೆ ನಡೆಸಿದೆ. ಇನ್ನು ಅಜ್ಮೀರ್ ದರ್ಗಾ ಸ್ಫೋಟದ ಪ್ರಕರಣದಲ್ಲಿ 2017 ರಲ್ಲಿ ರಾಜಸ್ಥಾನದ ನ್ಯಾಯಾಲಯ ಆರೋಪಿ ಗುಪ್ತಾ ಗೆ ಜೈಲು ಶಿಕ್ಷೆ ನೀಡಿದೆ.

  • 2008ರ ಗುಜರಾತ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಅರೆಸ್ಟ್

    2008ರ ಗುಜರಾತ್ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಅರೆಸ್ಟ್

    ನವದೆಹಲಿ: ಭಾರತದ ಮೋಸ್ಟ್ ವಾಂಟೆಂಡ್ ಉಗ್ರರ ಪಟ್ಟಿಯಲ್ಲಿದ್ದ 2008 ರ ಗುಜರಾತ್ ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ದೆಹಲಿಯ ವಿಶೇಷ ತನಿಖಾ ದಳದ ಪೊಲೀಸರು ಉಗ್ರನನ್ನು ಬಂಧಿಸಿದ್ದು, ಈ ವೇಳೆ ಖುರೇಷಿ ಹಾಗೂ ಪೊಲೀಸ್ ಅಧಿಕಾರಗಳ ನಡುವೆ ಫೈರಿಂಗ್ ಸಹ ನಡೆದಿದೆ. ನಂತರ ಈತನನ್ನು ಬಂಧಿಸಿ ಕೋರ್ಟ್‍ಗೆ ಹಾಜರು ಪಡಿಸಲಾಗಿದ್ದು, 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ.

    ಕಳೆದ ಕೆಲ ವರ್ಷಗಳಿಂದ ಭೂಗತಗೊಂಡಿದ್ದ ಖುರೇಷಿ, ಭಾರತದಲ್ಲಿ ಮತ್ತೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯನ್ನು ಬಲ ಪಡಿಸಲು ಭಾರತಕ್ಕೆ ವಾಪಸ್ ಆಗಿದ್ದ. ಇಷ್ಟು ದಿನ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೇಪಾಳದಲ್ಲಿ ನೆಲೆಸಿದ್ದ ಎಂದು ಡಿಸಿಪಿ ಪ್ರಮೋದ್ ಕುಶ್ವಾಹ ಸೋಮವಾರ ತಿಳಿಸಿದ್ದಾರೆ.

    ಅಹಮದಾಬಾದ್ ನಲ್ಲಿ ನಡೆದ 21 ಬಾಂಬ್ ಸ್ಫೋಟದ ಘಟನೆಯಲ್ಲಿ ಈತನ ಹೆಸರು ಮೊದಲ ಬಾರಿ ಕೇಳಿ ಬಂದಿತ್ತು. ನಂತರ ಇಂಡಿಯಾನ್ ಮುಜಾಹಿದ್ದೀನ್ `ಅಲ್-ಅರಬಿ’ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಎಂಬ ಅನುಮಾನದ ಮೇಲೆ ಖುರೇಷಿ ಹೆಸರನ್ನು ಉಗ್ರರ ಪಟ್ಟಿಯಲ್ಲಿ ಘೋಷಣೆ ಮಾಡಿಲಾಗಿತ್ತು.

    ಕೇವಲ ಗುಜರಾತ್ ಮಾತ್ರವಲ್ಲದೇ ದೆಹಲಿ, ಬೆಂಗಳೂರು ಹಾಗೂ 2006 ರ ಮುಂಬೈ ಸ್ಥಳೀಯ ರೈಲು ಸ್ಫೋಟಕ್ಕೆ ಸಂಬಂಧಿಸಿದಂತೆ ಉಗ್ರ ಖುರೇಷಿ ಯನ್ನು ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಹುಡುಕಾಟ ನಡೆಸುತ್ತಿತ್ತು. ಈ ಸಂಬಂಧ ಅಹಮದಾಬಾದ್ ಪೊಲೀಸರು ದೆಹಲಿಯ ವಿಶೇಷ ತನಿಖಾ ದಳದೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರು.

    ಭಾರತದ ಬಿನ್ ಲಾಡೆನ್ ಎಂದೇ ಹೆಸರು ಪಡೆದಿದ್ದ ಖುರೇಷಿ ತನ್ನ ಗುರುತನ್ನು ಬದಲಾಯಿಸಿ ತಪ್ಪಿಸಿಕೊಳ್ಳುವಲ್ಲಿ ಪರಿಣಿತನಾಗಿದ್ದ. ಇದೇ ತಂತ್ರವನ್ನು ಬಳಸಿ ಹಲವು ಬಾರಿ ಪೊಲೀಸರ ಕಣ್ಣು ತಪ್ಪಿಸಿ ಪರಾರಿಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.

    ಖುರೇಷಿ ಬಾಂಬ್ ತಯಾರಿಕೆಯಲ್ಲಿ ಹೆಚ್ಚು ಪರಿಣಿತಿ ಹೊಂದಿದ್ದು, ಬೆಂಗಳೂರು ಮತ್ತು ಹೈದರಾಬಾದ್ ನ ಹಲವು ಐಟಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದ. ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂಮ್ಮೆಂಟ್ ಆಫ್ ಇಂಡಿಯಾ) ಸಂಘಟನೆ ಈತನನ್ನು ಮೊದಲ ಬಾರಿಗೆ 1998 ರಲ್ಲಿ ಉಗ್ರನಾಗಿ ಆಯ್ಕೆ ಮಾಡಿಕೊಂಡಿತ್ತು, ನಂತರ ಈತ ಇಂಡಿಯಾನ್ ಮುಜಾಹಿದೀನ್ ಎಂಬ ಉಗ್ರ ಸಂಘಟನೆಯನ್ನು ಬಲಪಡಿಸಲು ಮುಂದಾಗಿದ್ದ.

    2008 ರ ಜುಲೈ 26 ರಂದು ಅಹಮದಾಬಾದ್ ನಲ್ಲಿ 21 ಬಾಂಬ್ ಸ್ಫೋಟಗೊಂಡಿತ್ತು. ಈ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ 56 ಮಂದಿ ಮೃತಪಟ್ಟು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

  • ಹಿಂದೂ, ಹಿಂದೂ ಸಂಘಟನೆ ಅಂದ್ರೆ ಸಿಎಂಗೆ ಅಲರ್ಜಿ: ಸಿಟಿ ರವಿ

    ಹಿಂದೂ, ಹಿಂದೂ ಸಂಘಟನೆ ಅಂದ್ರೆ ಸಿಎಂಗೆ ಅಲರ್ಜಿ: ಸಿಟಿ ರವಿ

    ರಾಯಚೂರು: ಪರೇಶ್ ಮೆಸ್ತಾ ನಿಗೂಢ ಹತ್ಯೆಯ ಅರೋಪಿಗಳನ್ನು ಕೂಡಲೇ ಬಂಧಿಸಬೇಕು. ಹಾಗೂ ತನಿಖೆಯನ್ನ ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‍ಐಎ) ಒಪ್ಪಿಸಬೇಕು ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸಿಟಿ ರವಿ ಆಗ್ರಹಿಸಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಹಿಂದೂ, ಹಿಂದೂ ಸಂಘಟನೆ ಅಂದ್ರೆ ಅಲರ್ಜಿ. ಗಲಾಟೆಗಳಿಗೆಲ್ಲಾ ಸಿದ್ದರಾಮಯ್ಯನವರೇ ಕಾರಣ. ಹನುಮಜಯಂತಿಗೆ ಅನುಮತಿ ಕೊಟ್ಟಿದ್ರೆ ಗಲಾಟೆಯೇ ನಡೆಯುತ್ತಿರಲಿಲ್ಲ. ಸಂಸದ ಪ್ರತಾಪ್ ಸಿಂಹ ಅವರನ್ನು ಬಂಧಿಸುವ ಪ್ರಮೆಯವೇ ಬರುತ್ತಿಲ್ಲ ಎಂದರು.

    ರಾಮಲಿಂಗಾರೆಡ್ಡಿ ಗೃಹ ಇಲಾಖೆ ಎಷ್ಟು ಗಂಭೀರವಾಗಿ ನಿರ್ವಹಿಸುತ್ತಿದ್ದಾರೋ ಗೊತ್ತಿಲ್ಲ. ರಿಯಲ್ ಎಸ್ಟೇಟ್ ತರಹ ಗೃಹ ಇಲಾಖೆ ನಡೆಸುತ್ತಿದ್ದಾರೆ. ಇಲಾಖೆ ಮೇಲೆ ಸಚಿವರಿಗೆ ಹಿಡಿತವಿಲ್ಲ. ಸರ್ಕಾರ ಪರೇಶ್ ಮೆಸ್ತಾ ಪ್ರಕರಣ ತನಿಖೆ ದಿಕ್ಕನ್ನ ತಪ್ಪಿಸುತ್ತಿದೆ ಅಂತ ಆರೋಪಿಸಿದರು.

    ಎರಡೂವರೆ ವರ್ಷದಲ್ಲಿ 20 ಕ್ಕೂ ಹೆಚ್ಚು ಜನ ನಮ್ಮ ಕಾರ್ಯಕರ್ತರ ಕೊಲೆಯಾಗಿವೆ. ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಕಾರ್ಯಕರ್ತರ ಕೊಲೆಯಾಗುತ್ತಿವೆ. ತಮಿಳುನಾಡು, ಕೇರಳದಲ್ಲಿ ಈ ಮಾದರಿ ಕೊಲೆ ಮಾಡುವ ಜಾಲ ಇದೆ. ಆ ಜಾಲ ಕರ್ನಾಟಕಕ್ಕೆ ವಿಸ್ತರಿಸಿ ಹತ್ಯೆಗಳನ್ನ ಮಾಡುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಸೇರಿ ಗಲಭೆಗೆ ಕಾರಣವಾದ ಸಂಘಟನೆಗಳನ್ನ ನಿಷೇಧ ಮಾಡಿ ಅಂತ ಸರ್ಕಾರಕ್ಕೆ ಒತ್ತಾಯಿಸಿದರು.

     

     

     

     

     

     

  • ಜಮ್ಮು ಕಾಶ್ಮೀರದಲ್ಲಿ 36,34,78,500 ರೂ. ಮೌಲ್ಯದ ಹಳೆ ನೋಟು ಜಪ್ತಿ

    ಜಮ್ಮು ಕಾಶ್ಮೀರದಲ್ಲಿ 36,34,78,500 ರೂ. ಮೌಲ್ಯದ ಹಳೆ ನೋಟು ಜಪ್ತಿ

    ಶ್ರೀನಗರ: ನೋಟ್ ಬ್ಯಾನ್ ಗೆ ಒಂದು ವರ್ಷ ಪೂರ್ಣಗೊಳ್ಳುವ ಮುನ್ನ ದಿನವೇ ಜಮ್ಮು ಕಾಶ್ಮೀರದಲ್ಲಿ 36.34 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಪತ್ತೆಯಾಗಿದೆ.

    ರಾಷ್ಟ್ರೀಯ ತನಿಖಾ ದಳ(ಎನ್‍ಐಎ) 36,34,78,500 ಕೋಟಿ ರೂ. ಹಳೆಯ ನೋಟುಗಳನ್ನು ವಶ ಪಡಿಸಿಕೊಂಡಿಸಿ 9 ಮಂದಿಯನ್ನು ಬಂಧಿಸಿದ್ದಾರೆ.

    ಕಾಶ್ಮೀರಲ್ಲಿ ಉಗ್ರ ಚಟುವಟಿಕೆಗಳಿಗೆ ಆರ್ಥಿಕ ಸಹಕಾರ ನೀಡುತ್ತಿದ್ದ ವ್ಯಕ್ತಿಗಳನ್ನು ಬಂಧಿಸಿದಾಗ ಈ ಹಣ ಪತ್ತೆಯಾಗಿದೆ ಎಂದು ಎನ್‍ಐಎ ತಿಳಿಸಿದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ.

    ಪ್ರದೀಪ್ ಚೌಹಾಣ್, ಭಗವಾನ್ ಸಿಂಗ್, ವಿನೋದ್ ಶೆಟ್ಟಿ, ಶಹನವಾಜ್ ಮೀರ್, ದೀಪಕ್, ಮಜೀದ್ ಸೂಫಿ, ಇಜಲ್ ಹಸನ್, ಜಸ್ವಿಂದರ್ ಸಿಂಗ್, ಉಮೈರ್ ದಾರ್ ಬಂಧಿತ ಆರೋಪಿಗಳು.

    ಕೆಲ ದಿನಗಳ ಹಿಂದೆ ಉಗ್ರರಿಗೆ ಹಣಕಾಸು ಪೂರೈಕೆ ಮಾಡುತ್ತಿದ್ದ ಆರೋಪದಡಿ ಜಮ್ಮು ಕಾಶ್ಮೀರದ ಉದ್ಯಮಿಯನ್ನು ಬಂಧಿಸಿ ತಿಹಾರ್ ಜೈಲಿಗೆ ಅಟ್ಟಲಾಗಿತ್ತು. ಹೀಗಾಗಿ ಪತ್ತೆಯಾಗಿರುವ ಹಣ ಈ ವ್ಯಕ್ತಿಗೆ ಸೇರಿದ್ದಾ ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಸಿಕ್ಕಿಲ್ಲ.

    ಸೋಮವಾರ ಜಮ್ಮು ಜಿಲ್ಲೆಯಲ್ಲಿ ಮೂವರನ್ನು ಬಂಧಿಸಿ 44 ಸಾವಿರ ರೂ. ಮೌಲ್ಯದ ನಕಲಿ ನೋಟುಗಳನ್ನು ವಶ ಪಡಿಸಲಾಗಿತ್ತು.

    ಪ್ರಧಾನಿ ನರೇಂದ್ರ ಮೋದಿಯವರು ಕಳೆದ ವರ್ಷದ ನವೆಂಬರ್ 8ರಂದು ನೋಟ್ ಬ್ಯಾನ್ ಭಾಷಣದಲ್ಲಿ, ಕಪ್ಪು ಹಣ ಮತ್ತು ಭಯೋತ್ಪಾದನೆಯನ್ನು ನಿರ್ಮೂಲನೆಗೊಳಿಸಲು 500, 1 ಸಾವಿರ ರೂ. ನೋಟುಗಳನ್ನು ನಿಷೇಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದರು. ನೋಟ್ ಬ್ಯಾನ್ ಬಳಿಕ ಜಮ್ಮು ಕಾಶ್ಮೀರದಲ್ಲಿ ಕಲ್ಲುತೂರಾಟ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

     

     

  • ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಕೇಸ್: ಎನ್‍ಐಎಯಿಂದ ಚಾರ್ಜ್ ಶೀಟ್ ಸಲ್ಲಿಕೆ

    ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಕೇಸ್: ಎನ್‍ಐಎಯಿಂದ ಚಾರ್ಜ್ ಶೀಟ್ ಸಲ್ಲಿಕೆ

    ಬೆಂಗಳೂರು: ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ ಪ್ರಕರಣ ಸಂಬಂಧ ಎನ್‍ಐಎ ಅಧಿಕಾರಿಗಳು ಬೆಂಗಳೂರಿನ ಎನ್‍ಐಎ ವಿಶೇಷ ಕೋರ್ಟ್‍ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.

    ಆರೋಪಿಗಳಾದ ಇರ್ಫಾನ್ ಪಾಷಾ, ವಸೀಮ್ ಅಹ್ಮದ್, ಮಹ್ಮದ್ ಸಾದಿಕ್, ಮಹ್ಮದ್ ಮುಜೀಬುಲ್ಲ, ಆಸೀಮ್ ಷರೀಫ್ ವಿರುದ್ಧ  ಎನ್‍ಐಎ ಚಾರ್ಜ್ ಶೀಟ್ ಸಲ್ಲಿಸಿದೆ.

    ಚಾರ್ಜ್ ಶೀಟ್ ನಲ್ಲಿ ಏನಿದೆ?
    ಆರೋಪಿಗಳು ಪಿಎಫ್‍ಐ ಸಂಘಟನೆಯ ಸದಸ್ಯರು ಎಂದು ಚಾರ್ಜ್ ಶೀಟ್ ನಲ್ಲಿ ಸ್ಪಷ್ಟಪಡಿಸಿದ ಎನ್‍ಐಎ, ಮೃತ ರುದ್ರೇಶ್ ಮೇಲೆ ಈ ಐವರಿಗೆ ಯಾವುದೇ ವೈಯಕ್ತಿಕ ದ್ವೇಷ ಇರಲಿಲ್ಲ. ಆದರೆ ಅಂದು ಯಾರಾದರೂ ಇಬ್ಬರು ಆರ್‍ಎಸ್‍ಎಸ್ ಮುಖಂಡರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು. ಆದ್ರೆ ಯಾರನ್ನು ಕೊಲೆ ಮಾಡಬೇಕು ಅನ್ನೋ ಸ್ಪಷ್ಟ ಚಿತ್ರಣ ಇರಲಿಲ್ಲ. ಕೊಲೆ ಮಾಡುವ ಮುನ್ನ ಎಲ್ಲರೂ ಇಲ್ಲಿನ ಆಸ್ಕಾ, ಹಾಗೂ ಚೋಟಾ ಚಾರ್ಮಿನಾರ್ ಮಸೀದಿಯ ಬಳಿ ಗುಪ್ತ ಮಾತುಕತೆ ನಡೆಸಿದ್ರು ಅಂತಾ ಖಚಿತ ಪಡಿಸಿದೆ.

    ಸಮವಸ್ತ್ರದಲ್ಲಿ ಮುಖಂಡನ ಕೊಲೆ ನಡೆದರೆ ಆರ್ ಎಸ್ ಎಸ್ ಸಂಘಟನೆಗೆ ಸೇರಲು ಜನ ಹೆದರುತ್ತಾರೆ ಎಂಬ ಉದ್ದೇಶವೂ ಇತ್ತು ಮತ್ತು ಮುಸ್ಲಿಮ್ ಹಾಗೂ ಜಿಹಾದಿಯ ಪರಮ ವಿರೋಧಿಯನ್ನು ಕೊಲೆಗೈಯುವುದೇ ಆಗಿತ್ತು. ಪಿಎಫ್‍ಐ ಸಭೆ ಕರೆದು ಮುಸ್ಲಿಂ ವಿರುದ್ಧ ಮಾತನಾಡುತ್ತಿದ್ದವರ ವಿಡಿಯೋ ಸಿಡಿ ಪ್ಲೇ ಮಾಡುತ್ತಿದ್ದರು. ಅದನ್ನ ನೋಡಿ ಪ್ರಚೋದನೆಯಾಗುತ್ತಿದ್ದ ವ್ಯಕ್ತಿಗಳನ್ನು ಕೃತ್ಯ ಎಸಗಲು ಆಯ್ಕೆ ಮಾಡುತ್ತಿದ್ದರು ಎಂದು ಎನ್‍ಐಎ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ.

    ಏನಿದು ಪ್ರಕರಣ?
    2016ರ ಅಕ್ಟೋಬರ್ 16 ರಂದು ಬೆಳಗ್ಗೆ ಪಥ ಸಂಚಲನ ಮುಗಿಸಿ ಮನೆಗೆ ಬರುತ್ತಿರುವಾಗ 35 ವರ್ಷದ ರುದ್ರೇಶ್ ಅವರು ಶಿವಾಜಿನಗರದಲ್ಲಿರುವ ಕಾಮರಾಜ ರಸ್ತೆಯಲ್ಲಿರುವ ಶ್ರೀನಿವಾಸ ಮೆಡಿಕಲ್ ಸ್ಟೋರ್ ಎದುರು ಸ್ನೇಹಿತರ ಜತೆ ನಿಂತಿದ್ದಾಗ ಬಳಿ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದರು. ಪ್ರಕರಣ ಸಂಬಂಧ ಆರು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆರನೇ ಆರೋಪಿ ಈಗಲೂ ತಲೆಮರೆಸಿಕೊಂಡಿದ್ದಾನೆ.

  • ಬೆಂಗಳೂರಿಗೆ ಬಾಂಬ್ ಬೆದರಿಕೆ ಕರೆ: ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಗಿ ಭದ್ರತೆ

    ಬೆಂಗಳೂರಿಗೆ ಬಾಂಬ್ ಬೆದರಿಕೆ ಕರೆ: ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಗಿ ಭದ್ರತೆ

    ಬೆಂಗಳೂರು: ಸಿಲಿಕಾನ್ ಸಿಟಿಗೆ ಶನಿವಾರ ರಾತ್ರಿ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಕರೆ ಮಾಡಿದ ವ್ಯಕ್ತಿ `ಬೆಂಗಳೂರು ಮೆಟ್ರೋ ಬಾಂಬ್’ ಎಂದು ಅರೆಬಿಕ್ ಭಾಷೆಯಲ್ಲಿ ಹೇಳಿದ್ದು, ಈ ಬಗ್ಗೆ ರಾಷ್ಟ್ರೀಯ ತನಿಖಾ ದಳದವರು ಬೆಂಗಳೂರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

    ಕರೆ ಬಂದಿರುವ ಹಿನ್ನೆಲೆಯಲ್ಲಿ ಶನಿವಾರ ಇಡೀ ದಿನ ಮೆಟ್ರೋ ಸ್ಟೇಷನ್‍ನಲ್ಲಿ ತಪಾಸಣೆ ನಡೆಸಲಾಗಿತ್ತು. ಮಾತ್ರವಲ್ಲದೇ ಇಂದು ಕೂಡ ಬೆಂಗಳೂರು ಪೊಲೀಸರು ತಪಾಸಣೆ ಮುಂದುವರೆಸಿದ್ದಾರೆ.

    ಮೆಟ್ರೋ ಸ್ಟೇಷನ್ ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಕಬ್ಬನ್ ಪಾರ್ಕ್, ಎಂಜಿ ರಸ್ತೆ ಸೇರಿದಂತೆ ಪ್ರಮುಖ ಮೆಟ್ರೋ ಸ್ಟೇಷನ್‍ಗಳಲ್ಲಿ ಬಿಗಿಭದ್ರತೆ ಏರ್ಪಡಿಸಲಾಗಿದೆ.