Tag: NIA

  • ಜೈಲಲ್ಲಿರೊ ಉಗ್ರ ನಾಸೀರ್‌ಗೆ ಮನೋವೈದ್ಯನಿಂದ ಮೊಬೈಲ್ ಸಪ್ಲೈ – ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ

    ಜೈಲಲ್ಲಿರೊ ಉಗ್ರ ನಾಸೀರ್‌ಗೆ ಮನೋವೈದ್ಯನಿಂದ ಮೊಬೈಲ್ ಸಪ್ಲೈ – ಶಂಕಿತ ಉಗ್ರರು 6 ದಿನ ಎನ್ಐಎ ಕಸ್ಟಡಿಗೆ

    ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಲ್ಲಿರುವ ಎಲ್‌ಇಟಿ ಯ (LeT) ನಟೋರಿಯಸ್ ಉಗ್ರನಿಗೆ ನೆರವು ನೀಡಿದ ಜೈಲಿನ ಮನೋವೈದ್ಯ ಸೇರಿ ಮೂವರನ್ನು 6 ದಿನಗಳ ಕಾಲ ಎನ್‌ಐಎ ಕಸ್ಟಡಿಗೆ ವಹಿಸಲಾಗಿದೆ.

    ಜೀವಾವಧಿ ಶಿಕ್ಷೆಗೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲಲ್ಲಿರುವ ಲಷ್ಕರ್ ತೊಯ್ಬಾ ಉಗ್ರ ಸಂಘಟನೆಯ ಟಿ‌.‌ನಾಸೀರ್‌ಗೆ ಜೈಲಿನಲ್ಲಿ ನೆರವು ನೀಡಿದ ಆರೋಪದ ಮೇಲೆ ಎನ್ಐಎ (NIA) ಅಧಿಕಾರಿಗಳು ಮೂವರನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳಲ್ಲಿ ಜೈಲಿನ ಮನೋವೈದ್ಯ ನಾಗರಾಜ್, ಸಿಎಆರ್‌ ಸಬ್‌ ಇನ್‌ಸ್ಪೆಕ್ಟರ್ ಚಾಂದ್ ಪಾಷಾ ಹಾಗೂ ಗ್ರೆನೇಡ್ ದಾಳಿಯ ಸಂಚುಕೋರರಲ್ಲಿ ಒಬ್ಬನಾದ ಜುನೈದ್‌ನ ತಾಯಿ ಅನೀಸ್ ಫಾತಿಮಾ ಆಗಿದ್ದಾರೆ. ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

    ಈ ಮೂವರು ಶಂಕಿತರು ಕೇರಳ ಮೂಲದ ಎಲ್ಇಟಿ ಉಗ್ರ ಟಿ.ನಾಸೀರ್ ಜೊತೆ ನೇರ ಸಂಪರ್ಕ ಹೊಂದಿದ್ದು, ಜೈಲಿನಲ್ಲಿ ಮೊಬೈಲ್ ಪೋನ್, ಹಣಕಾಸು ಸೇರಿ ಇತರ ವಿಚಾರಗಳ ಬಗ್ಗೆ ನೆರವು ನೀಡಿದ್ದರು. ನಿನ್ನೆ ಈ ಬಗ್ಗೆ ಬೆಂಗಳೂರಿನ ಮೂರು ಹಾಗೂ ಕೋಲಾರದ ಐದು ಕಡೆ ದಾಳಿ ನಡೆಸಿದ ಎನ್ಐಎ ಅಧಿಕಾರಿಗಳು ಮೂವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಳಿಕ ಇಂದು ಮೂವರು ಆರೋಪಿಗಳನ್ನ ಎನ್ಐಎ ಸ್ಪೆಷಲ್ ಕೋರ್ಟ್‌ಗೆ ಹಾಜರುಪಡಿಸಿದ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೆ ಕಸ್ಟಡಿ ನೀಡುವಂತೆ ಮನವಿ ಮಾಡಿದರು. ಎನ್ಐಎ ಅಧಿಕಾರಿಗಳ ಮನವಿ ಪುರಸ್ಕರಿಸಿದ ಕೋರ್ಟ್ ಆರು ದಿನಗಳ ಕಸ್ಟಡಿಗೆ ನೀಡಿ ಆದೇಶಿಸಿದೆ.

    ಬಂಧಿತ ಮೂವರು ಆರೋಪಿಗಳಲ್ಲಿ ಡಾ.ನಾಗರಾಜ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಮನೋವೈದ್ಯನಾಗಿ ಕೆಲಸ ಮಾಡುತ್ತಿದ್ದ. ಪ್ರತಿದಿನ ಈತ ಜೈಲಿನಲ್ಲಿ ಎಲ್ಲಾ ಖೈದಿಗಳನ್ನ ಭೇಟಿಯಾಗ್ತಿದ್ದ. ಹೀಗೆ 2022 -2023 ರ ಅವಧಿಯಲ್ಲಿ ಉಗ್ರ ನಾಸೀರ್ ಬ್ಯಾರಕ್‌ಗೆ ತೆರಳಿ ಕೌನ್ಸೆಲಿಂಗ್ ಮಾಡಿದ್ದನಂತೆ. ಈ ವೇಳೆ ನಾಸೀರ್‌ಗೆ ಮೊಬೈಲ್ ಫೋನ್ ಕೊಟ್ಟು ಸಹಕಾರ ನೀಡಿದ್ದನಂತೆ. ಬಳಿಕ ಉಗ್ರ ನಾಸೀರ್, ನಾಗರಾಜ್ ಬ್ರೈನ್ ವಾಶ್ ಮಾಡಿದ್ದನಂತೆ. ಮತ್ತೊಬ್ಬ ಆರೋಪಿ ಅನೀಸ್ ಫಾತೀಮಾ ಶಂಕಿತ ಉಗ್ರ ಜುನೈದ್ ತಾಯಿ. 2023ರಲ್ಲಿ ಜುನೈದ್ ಮೇಲೆ ಕೇಸ್ ಆಗ್ತಿದ್ದಂತೆ ಆಸಾಮಿ ನಾಪತ್ತೆಯಾಗಿದ್ದ. ಟಿ.ನಾಸೀರ್ ಮತ್ತು ಜುನೈದ್ ನಡುವಿನ ಹಣದ ವ್ಯವಹಾರಕ್ಕೆ ಸಹಾಯ ಮಾಡ್ತಿದ್ದಳು ಅಂತಾ ಗೊತ್ತಾಗಿದೆ. ಜೊತೆ ಜೈಲಿನಲ್ಲಿ ಭೇಟಿಯ ವಿಚಾರಗಳನ್ನ ತನ್ನ ಮಗನಿಗೆ ಫಾತೀಮಾ ತಲುಪಿಸುತ್ತಿದ್ದಳು ಅಂತಾ ಗೊತ್ತಾಗಿದೆ. ಮೂರನೇ ಆರೋಪಿಯಾದ ಎಎಸ್ಐ ಚಾಂದ್ ಪಾಷಾ ನಗರದ ಸಿಎಆರ್‌ನಲ್ಲಿ ಕೆಲಸ ಮಾಡುತ್ತಿದ್ದ. ಜೈಲಿನಿಂದ ಖೈದಿಗಳನ್ನು ಬೇರೆ ಜೈಲಿಗೆ ಮತ್ತು ನ್ಯಾಯಾಲಯಕ್ಕೆ ಕರೆತರುವ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗ್ತಿತ್ತು. ಈ ವೇಳೆ ಉಗ್ರ ನಾಸೀರ್ ಪರಿಚಯ ಮಾಡಿಕೊಂಡಿದ್ದ ಚಾಂದ್ ಪಾಷಾ, ಬೇರೆ ಬೇರೆ ಕಡೆ ಪ್ರಯಾಣ ಮಾಡುವಾಗ ಸಹಾಯ ಮಾಡುವುದು, ನಾಸೀರ್‌ಗೆ ಬೇಕಿದ್ದ ಮಾಹಿತಿಗಳನ್ನು ವಿನಿಮಯ ಮಾಡ್ತಿದ್ದನಂತೆ. ಹೀಗೆ ಮೂರು‌ ಜನ ಆರೋಪಿಗಳು ನೇರವಾಗಿ ನಾಸೀರ್‌ಗೆ ಲಿಂಕ್ ಇರೋದು ಎನ್‌ಐಎ ತನಿಖೆಯಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    ಎನ್ಐಎ ಅಧಿಕಾರಿಗಳ ವಿಚಾರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿವೆ. ಬಂಧಿತ ಮೂವರು ಆರೋಪಿಗಳ ಮೊಬೈಲ್ ಫೋನ್ ವಶಕ್ಕೆ ಪಡೆದು ಅವರ ಸಂಪರ್ಕ ಜಾಲವನ್ನ ತನಿಖೆ ನಡೆಸಿದ್ದಾರೆ. ಈ ವೇಳೆ ಕೆಲವು ಮಹತ್ವದ ಆಡಿಯೋ ಕ್ಲಿಪ್‌ಗಳು ಪತ್ತೆಯಾಗಿದ್ದು, ಅದರಲ್ಲಿ ಉಗ್ರ ನಾಸೀರ್ ಜೊತೆಗಿನ ಸಂಚು ಮತ್ತು ಸಂಪರ್ಕದ ವಿಚಾರ ಕಂಡುಬಂದಿದೆ. ಹೀಗಾಗಿ, ಬಂಧಿತರ ಆಡಿಯೋ ಸ್ಯಾಂಪಲ್ ಸಂಗ್ರಹಿಸಲು ಎನ್ಐಎ ಮುಂದಾಗಿದ್ದು, ನಾಳೆ ಕೋರ್ಟ್‌ಗೆ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ, ಈಗ ಪತ್ತೆಯಾದ ಆಡಿಯೋ ಕ್ಲಿಪ್‌ಗಳನ್ನು ಕೋರ್ಟ್ ಅನುಮತಿ ಪಡೆದು ಎಫ್ಎಸ್ಎಲ್‌ಗೆ ರವಾನೆ ಮಾಡಿ ಪರೀಕ್ಷೆಗೆ ಒಳಪಡಿಸಲು ಮುಂದಾಗಿದ್ದಾರೆ.

    ಜೈಲಿನಲ್ಲಿ ಮನೋವೈದ್ಯ ನಾಗರಾಜ್ ಉಗ್ರ ನಾಸಿರ್ ಅಲ್ಲದೇ ಇತರ ಖೈದಿಗಳಿಗೂ ಮೊಬೈಲ್ ಕೊಟ್ಟಿರುವ ವರದಿಯಾಗಿದೆ. ಮೂರ್ನಾಲ್ಕು ಸಾವಿರದ ಮೊಬೈಲ್‌ಗಳನ್ನ 50,000 ಮಾರಾಟ ಮಾಡಿದ್ದಾನಂತೆ. ಇದಕ್ಕಾಗಿ ತನ್ನ ಆಪ್ತೆ ಪವಿತ್ರಾಳನ್ನ ಬಳಸಿಕೊಂಡು ನೂರಾರು ಮೊಬೈಲ್, ಸಿಮ್‌ಗಳನ್ನ ಖರೀದಿ ಮಾಡಿ ಜೈಲಲ್ಲಿ ಮಾರಾಟ ಮಾಡಿರೋದು ಬೆಳಕಿದೆ ಬಂದಿದೆ. ಇನ್ನು ಸಿಮ್ ಪಡೆಯಲು ಕೋಲಾರದ ಸತೀಶ್ ಗೌಡನ ಐಡಿ ಪ್ರೂಫ್ ಬಳಕೆಯಾಗಿದ್ದು, ಸತೀಶ್ ಗೌಡ ಅಬ್ ಸ್ಕ್ಯಾಂಡ್ ಆಗಿದ್ದಾನೆ. ಸತೀಶ್ ಪತ್ನಿ ಮತ್ತೆ ಅತ್ತೆ ಇವತ್ತು ಎನ್‌ಐಎ ವಿಚಾರಣೆಗೆ ಹಾಜರಾಗಿದ್ದಾರೆ.

  • ಎನ್‌ಐಎ ನೊಟೀಸ್ ನೀಡಿರುವುದು ನಿಜ, ವಿಚಾರಣೆಗೆ ಹಾಜರಾಗುತ್ತೇವೆ: ಸತೀಶ್ ಗೌಡ ಪತ್ನಿ

    ಎನ್‌ಐಎ ನೊಟೀಸ್ ನೀಡಿರುವುದು ನಿಜ, ವಿಚಾರಣೆಗೆ ಹಾಜರಾಗುತ್ತೇವೆ: ಸತೀಶ್ ಗೌಡ ಪತ್ನಿ

    ಕೋಲಾರ: ಎನ್‌ಐಎ (NIA) ನೊಟೀಸ್ ನೀಡಿರುವುದು ನಿಜ. ವಿಚಾರಣೆಗೆ ಹಾಜರಾಗುತ್ತೇವೆ ಎಂದು ಸತೀಶ್ ಗೌಡ ಅವರ ಪತ್ನಿ ಹೇಮಲತಾ ತಿಳಿಸಿದ್ದಾರೆ.

    ಕೋಲಾರದಲ್ಲಿ (Kolar) ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು. ಎನ್‌ಐಎಯಿಂದ ನೊಟೀಸ್ ಬಂದಿರುವುದು ನಿಜ. ಮೂರು ವರ್ಷದ ಹಿಂದೆ ನನ್ನ ಪತಿ ಏರ್‌ಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ಸಿಮ್ ಕಾರ್ಡ್ ನೀಡಿರುವ ಕಾರಣ ವಿಚಾರಣೆಗೆ ಕರೆದಿದ್ದಾರೆ. ಈ ಹಿಂದೆ 2023ರಲ್ಲಿ ವಿಚಾರಣೆಗೆ ಕರೆದಿದ್ದರು. ಆಗ ಆಂಟಿಸಿಪೇಟರಿ ಬೇಲ್ ಪಡೆಯಲಾಗಿತ್ತು. ಈಗ ಮತ್ತೆ ವಿಚಾರಣೆಗೆ ಕರೆದಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸಿಎಂ, ಡಿಸಿಎಂ ಹೆಸ್ರಲ್ಲಿ ಕೋಟಿ ಕೋಟಿ ವಂಚನೆ – 20ಕ್ಕೂ ಹೆಚ್ಚು ಮಂದಿಗೆ ಪಂಗನಾಮ ಹಾಕಿದ್ದ ಮಹಿಳೆ ಅರೆಸ್ಟ್‌

    10.30ಕ್ಕೆ ಬೆಂಗಳೂರಿನ ಕಚೇರಿಗೆ ವಿಚಾರಣೆಗೆ ಕರೆದಿದ್ದಾರೆ. ನಾನು, ನನ್ನ ಪತಿ ವಿಚಾರಣೆಗೆ ತೆರಳುತ್ತೇವೆ. ಅವರು ಕಳೆದ ಮೂರು ವರ್ಷಗಳಿಂದ ಕೆಲಸ ಇಲ್ಲದೆ ಮನೆಯಲ್ಲೇ ಇದ್ದಾರೆ. ಮಂಗಳವಾರ ಎನ್‌ಐಎ ಅಧಿಕಾರಿಗಳು, ಪೊಲೀಸರು ಮನೆಗೆ ಬಂದು ನೊಟೀಸ್ ನೀಡಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಹಳಸಿದ ದಾಲ್ ಬಡಿಸಿದ್ದಕ್ಕೆ ಕ್ಯಾಂಟೀನ್ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಶಾಸಕ

    ಪೊಲೀಸರ ಭೇಟಿ ಹಿನ್ನೆಲೆ ಮಂಗಳವಾರದಿಂದ ನಾಪತ್ತೆಯಾಗಿರುವ ಸತೀಶ್ ಗೌಡ ಬದಲಿಗೆ ಪತ್ನಿಗೆ ನೊಟೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ಎನ್‌ಐಎ ಅಧಿಕಾರಿಗಳು ತೆರಳಿದ್ದಾರೆ. ಇದೀಗ ಸತೀಶ್ ಗೌಡ ಅವರ ಪತ್ನಿ ಹೇಮಾವತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಇದನ್ನೂ ಓದಿ: ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    ಸತೀಶ್ ಗೌಡ ಅವರು ಮೂಲತಃ ಕೋಲಾರ ತಾಲೂಕಿನ ವಾನರಾಶಿ ಮೂಲದವರು. ಕಳೆದ ಹಲವು ವರ್ಷಗಳಿಂದ ಅಂದರೆ ಮದುವೆಗೂ ಮುನ್ನ ಬೆಂಗಳೂರಿನಲ್ಲೇ ವಾಸವಿದ್ದರು. ಮದುವೆ ಬಳಿಕ ಅತ್ತೆ ಮನೆ ಭಟ್ರಹಳ್ಳಿಯಲ್ಲಿ ವಾಸವಿದ್ದಾರೆ.

  • ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    ಮೂವರು ಶಂಕಿತ ಉಗ್ರರ ಬಂಧನ ಕೇಸ್‌ – ಬೆಂಗ್ಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಉಗ್ರ ನಾಸೀರ್

    – ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದಲ್ಲೂ ನಾಸೀರ್‌ ಕೈವಾಡ
    – ಶಂಕಿತರಿಗೆ ಸಿಮ್‌ ಕಾರ್ಡ್‌ ನೀಡಿದ್ದ ಆರೋಪ; ಏರ್‌ಟೆಲ್‌ ಮಾಜಿ ಉದ್ಯೋಗಿಗೆ ನೋಟಿಸ್‌

    ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ದೇಶದ ವಿವಿಧೆಡೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು (Bengaluru) ಮತ್ತು ಕೋಲಾರದ (Kolara) 5 ಕಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ (NIA) ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಿಎಆರ್‌ ಪೊಲೀಸ್‌ ಅಧಿಕಾರಿ ಸೇರಿ ಮೂವರು ಶಂಕಿತ ಉಗ್ರರರನ್ನ ಬಂಧಿಸಿದೆ.

    ಶಂಕಿತ ಉಗ್ರರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಿರುವ ಎನ್‌ಐಎ ಅಧಿಕಾರಿಗಳ ತಂಡ, 14 ದಿನಗಳ ಕಾಲ ಕಸ್ಟಡಿಗೆ ಪಡೆಯಲು ಮುಂದಾಗಿದೆ. ಈ ಮಧ್ಯೆ ಉಗ್ರ ಟಿ.ನಾಸೀರ್ ಕುರಿತು ಹಲವು ಸ್ಫೋಟಕ ವಿಚಾರಗಳನ್ನು ಬಯಲಿಗೆಳೆದಿದೆ. ಇದನ್ನೂ ಓದಿ: ಪತ್ನಿಯೊಂದಿಗೆ ಅನೈತಿಕ ಸಂಬಂಧ- ಬೆಂಗಳೂರಿನಿಂದ ಕಲಬುರಗಿಗೆ ಕರೆತಂದು ಪ್ರಾಣಸ್ನೇಹಿತನ ಹತ್ಯೆ

    ಜೈಲಿನಲ್ಲಿದ್ದುಕೊಂಡೇ ಉಗ್ರ ಕೃತ್ಯಕ್ಕೆ ಸಂಚು
    2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್‌ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್‌ನನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್‌ ಜೈಲಿನಲ್ಲಿದ್ದಾನೆ. ಭಯೋತ್ಪಾದನೆ ಬಗ್ಗೆ ಯುವಜನರ ಮೈಂಡ್‌ ವಾಶ್‌ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ ನಾಸೀರ್‌, ಹಲವು ಯುವಜನರನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ ಎಂದೂ ಸಹ ಎನ್‌ಐಎ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ

    ಅಲ್ಲದೇ ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲ್ಯಾನ್‌ ಮಾಡಿದ್ದ. 2008ರ ಸರಣಿ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳಲ್ಲಿ ನಾಸೀರ್‌ ಕೈವಾಡ ಇದೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್‌ ಮಾಡಿದ್ದ ಅನ್ನೋದು ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ.

    ಇನ್ನೂ ಉಗ್ರ ಕೃತ್ಯಕ್ಕೆ ನಾಸೀರ್‌ ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಎಂಬ ಯುವಕರ ತಂಡವನ್ನೂ ರೆಡಿ ಮಾಡಿದ್ದ. ಆದ್ರೆ ಜೀವಂತ ಗ್ರೆನೇಡ್‌ಗಳು, ಪಿಸ್ತೂಲ್‌ಗಳು, ಸ್ಫೋಟಕ ವಸ್ತುಗಳ ಸಮೇತ ತಂಡ ಸಿಕ್ಕಿಬಿದ್ದಿತ್ತು. ಈ ಐವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಎನ್‌ಐಎ ಈ ಪ್ರಕರಣದ ಹೊಣೆ ವಹಿಸಿಕೊಂಡಿತು. ಸದ್ಯ ಮೂವರನ್ನು ಬಂಧಿಸಿರುವ ಎನ್‌ಐಎ, ಬಂಧಿತರಿಂದ ಒಂದಷ್ಟು ಹಣ, ಸಂವಹನಕ್ಕೆ ಬಳಸುತ್ತಿದ್ದ ವಾಕಿಟಾಕಿ ಸೇರಿ ಹಲವು ವಸ್ತುಗಳು ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಆಟಗಾರ ಯಶ್ ದಯಾಳ್ ವಿರುದ್ಧ FIR – ಸಂತ್ರಸ್ತೆ ಹೇಳಿಕೆ ದಾಖಲಿಸಿಕೊಂಡ ಬಳಿಕ ಪೊಲೀಸರ ಕ್ರಮ

    ಏರ್‌ಟೆಲ್‌ ಮಾಜಿ ಉದ್ಯೋಗಿಗೆ ನೋಟಿಸ್‌
    ಇನ್ನೂ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬಾತನಿಗೆ ಎನ್‌ಐಎ ನೋಟಿಸ್‌ ನೀಡಿದೆ. ಶಂಕಿತರಿಗೆ ಸಿಮ್‌ ಕಾರ್ಡ್‌ ನೀಡಿದ ಆರೋಪದ ಮೇಲೆ ಸತೀಶ್‌ ಗೌಡಗೆ ನೋಟಿಸ್‌ ನೀಡಲಾಗಿದೆ. ಸತೀಶ್‌ ಮನೆಯಲ್ಲಿ ಇಲ್ಲದ ಕಾರಣ ಕಾರಣ ಕುಟುಂಬಸ್ಥರಿಗೆ ನೋಟೀಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಅಧಿಕಾರಿಗಳು. ಮೂರು ವರ್ಷಗಳ ಹಿಂದೆ ಸತೀಶ್‌ಗೌಡ ಏರ್‌ಟೆಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಕೆಲಸ ಮಾಡಿರುವುದಾಗಿ ಸಂಶಯ ವ್ಯಕ್ತವಾಗಿದೆ.

  • ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

    ಪರಪ್ಪನ ಅಗ್ರಹಾರ ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರು ಶಂಕಿತ ಉಗ್ರರ ಬಂಧನ

    * ಬೆಂಗಳೂರು, ಕೋಲಾರದಲ್ಲಿ ಎನ್‌ಐಎ ಬೇಟೆ
    * 2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್‌ ಪತ್ತೆ ಪ್ರಕರಣದಲ್ಲಿ ನಡೆದಿತ್ತು ಶೋಧ

    ಬೆಂಗಳೂರು: ಎಲ್‌ಇಟಿ ಭಯೋತ್ಪಾದಕ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು, ಕೋಲಾರದಲ್ಲಿ ಕಾರ್ಯಾಚರಣೆ ನಡೆಸಿದ ಎನ್‌ಐಎ, ಜೈಲು ಎಎಸ್‌ಐ, ಮನೋವೈದ್ಯ ಸೇರಿ ಮೂವರನ್ನು ಬಂಧಿಸಿದೆ.

    ಬೆಂಗಳೂರಿನ ಪರಪ್ಪನ ಅಗ್ರಹಾರದ ಮನೋವೈದ್ಯ ಡಾ. ನಾಗರಾಜ್, ಸಹಾಯಕ ಸಬ್-ಇನ್ಸ್‌ಪೆಕ್ಟರ್ (ಎಎಸ್‌ಐ) ಚಾನ್ ಪಾಷಾ ಮತ್ತು ತಲೆಮರೆಸಿಕೊಂಡಿರುವ ಆರೋಪಿಯ ತಾಯಿ ಅನೀಸ್ ಫಾತಿಮಾರನ್ನು ಬಂಧಿಸಲಾಗಿದೆ. ಶೋಧನಾ ಸಮಯದಲ್ಲಿ, ಬಂಧಿತ ಆರೋಪಿಗಳು ಮತ್ತು ಇತರ ಶಂಕಿತರ ಮನೆಗಳಿಂದ ವಿವಿಧ ಡಿಜಿಟಲ್ ಸಾಧನಗಳು, ನಗದು, ಚಿನ್ನ ಮತ್ತು ಅಪರಾಧ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.

    2023 ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೈಡ್‌ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್‌ನನ್ನು ವಶಕ್ಕೆ ಪಡೆದು ಎನ್‌ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್‌ ಜೈಲಿನಲ್ಲಿದ್ದಾನೆ.

    ಕೋರ್ಟ್‌ಗಳಲ್ಲಿ ಹಣ ಎಕ್ಸ್‌ಚೇಂಜ್ ಮಾಡಲು‌ ಎಎಸ್‌ಐ ಚಾನ್‌ ಪಾಷಾ ಸಹಾಯ ಮಾಡಿದ್ದ. ನಾಸೀರ್ ವೈದ್ಯರಿಂದ ಮೊಬೈಲ್‌ ಪಡೆಯುತ್ತಿದ್ದ. ಜೀವಂತ ಗ್ರೆನೇಡ್‌ ಕೇಸ್‌ನಲ್ಲಿ ಜುನೈದ್‌ ಎಸ್ಕೇಪ್‌ ಆಗಿದ್ದಾನೆ.

  • ನಾನು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ – ಮುಂಬೈ ದಾಳಿಯ ಸಂಚುಕೋರ ರಾಣಾ ತಪ್ಪೊಪ್ಪಿಗೆ

    ನಾನು ಪಾಕಿಸ್ತಾನಿ ಸೇನೆಯ ವಿಶ್ವಾಸಾರ್ಹ ಏಜೆಂಟ್ – ಮುಂಬೈ ದಾಳಿಯ ಸಂಚುಕೋರ ರಾಣಾ ತಪ್ಪೊಪ್ಪಿಗೆ

    ನವದೆಹಲಿ: ಮುಂಬೈ ದಾಳಿಯ (Mumbai Attack) ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ತಹವ್ವೂರ್ ಹುಸೇನ್ ರಾಣಾ (Tahawwur Rana) 2008 ರ ಕೃತ್ಯದಲ್ಲಿ ತನ್ನ ಪಾತ್ರವನ್ನು ಒಪ್ಪಿಕೊಂಡಿದ್ದಾನೆ ಮತ್ತು ತಾನು ಪಾಕಿಸ್ತಾನಿ ಸೇನೆಯ (Pakistan Army) ವಿಶ್ವಾಸಾರ್ಹ ಏಜೆಂಟ್ ಎಂದು ಹೇಳಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

    ದೆಹಲಿಯ ತಿಹಾರ್ ಜೈಲಿನಲ್ಲಿ (Tihar Jail) ರಾಷ್ಟ್ರೀಯ ತನಿಖಾ ದಳದ (NIA) ವಶದಲ್ಲಿರುವ ರಾಣಾನನ್ನು ಮುಂಬೈ ಕ್ರೈಂ ಬ್ರ್ಯಾಂಚ್‌ ವಿಚಾರಣೆಯ ಸಂದರ್ಭದಲ್ಲಿ ತಾನು ಮತ್ತು ತನ್ನ ಸ್ನೇಹಿತ ಮತ್ತು ಸಹಾಯಕ ಡೇವಿಡ್ ಕೋಲ್ಮನ್ ಹೆಡ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ( Lashkar-e-Taiba) ಜೊತೆ ಹಲವಾರು ತರಬೇತಿ ಕಾರ್ಯ ನಡೆಸಿದ್ದೇವೆ ಎಂದು ತಿಳಿಸಿದ್ದಾನೆ. ಇದನ್ನೂ ಓದಿ: Mumbai Attack| ರಾಣಾ ವಿರುದ್ಧ ಸಾಕ್ಷಿ ನುಡಿಯಲಿದ್ದಾರೆ ನಿಗೂಢ ವ್ಯಕ್ತಿಗಳು!

     

    ವಿಚಾರಣೆ ವೇಳೆ ಮುಂಬೈನಲ್ಲಿ ತನ್ನ ಸಂಸ್ಥೆಯ ವಲಸೆ ಕೇಂದ್ರವನ್ನು ತೆರೆಯುವ ಆಲೋಚನೆ ಇತ್ತು. ಮುಂಬೈ ದಾಳಿಯ ಸಮಯದಲ್ಲಿ ತಾನು ಮುಂಬೈನಲ್ಲಿದ್ದೆ ಮತ್ತು ಅದು ಭಯೋತ್ಪಾದಕರ ಯೋಜನೆಯ ಭಾಗವಾಗಿತ್ತು ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಣಾ ಕರೆತಂದ ವಿಮಾನಕ್ಕೆ ನೀಡಲಾಗಿತ್ತು ಡಮ್ಮಿ ಕೋಡ್‌, ಮಧ್ಯೆ 11 ಗಂಟೆ ಪಿಟ್‌ ಸ್ಟಾಪ್‌!

    ದಾಳಿಗೂ ಮೊದಲು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಂತಹ ಸ್ಥಳಗಳನ್ನು ಪರಿಶೀಲಿಸಿದ್ದೆ. ಮುಂಬೈ  ದಾಳಿಯನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ರಾಣಾ ಒಪ್ಪಿಕೊಂಡಿದ್ದಾನೆ.

    ಗಲ್ಫ್‌ ಯುದ್ಧದ ಸಮಯದಲ್ಲಿ ಪಾಕಿಸ್ತಾನಿ ಸೇನೆಯು ತನ್ನನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿತ್ತು ಎಂದು 64 ವರ್ಷದ ರಾಣಾ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

  • ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್‌

    ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ – ಕತಾರ್‌ನಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಅರೆಸ್ಟ್‌

    ಮಂಗಳೂರು/ಮಡಿಕೇರಿ: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.

    ಅಬ್ದುಲ್ ರೆಹಮಾನ್ ಬಂಧಿತ ಆರೋಪಿ. ಕತಾರ್‌ನಿಂದ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಅಬ್ದುಲ್‌ ರೆಹಮಾನ್‌ ನನ್ನ ಬಂಧಿಸಿದ್ದಾರೆ.

    2022ರ ಜುಲೈ 26ರಂದು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯರು ಕರ್ನಾಟಕದ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬೆಳ್ಳಾರೆ ಗ್ರಾಮದಲ್ಲಿ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ್ದರು. ದೆಹಲಿ ಕಚೇರಿಯಲ್ಲಿ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದ ಎನ್‌ಐಎ ಓರ್ವ ಪ್ರಮುಖ ಆರೋಪಿ ಅತೀಖ್‌ ಅಹ್ಮದ್‌ ಸೇರಿ 22 ಆರೋಪಿಗಳನ್ನ ಬಂಧಿಸಿತ್ತು. ಒಟ್ಟು 28 ಆರೋಪಿಗಳ ವಿರುದ್ಧ ಜಾರ್ಜ್‌ ಶೀಟ್‌ ಸಲ್ಲಿಸಿದ್ದ ಎನ್‌ಐಎ ಉಳಿದ 6 ಆರೋಪಿಗಳಿಗೆ ತೀವ್ರ ಹುಡುಕಾಟ ನಡೆಸಿತ್ತು.

    ನಿಷೇಧಿತ ಸಂಘಟನೆ ಪಿಎಫ್‌ಐ ಸೂಚನೆಯಂತೆ ಹತ್ಯೆ ನಡೆದಿತ್ತು. ಪ್ರಕರಣದ ಇತರ ಆರೋಪಿಗಳು ಸಿಕ್ಕಿಬೀಳುತ್ತಿದ್ದಂತೆ ವಿದೇಶಕ್ಕೆ ಹಾರಿದ್ದ ಅಬ್ದುಲ್‌ ರಹಿಮಾನ್‌ ಇಂದು ಬಂಧನವಾಗಿದ್ದಾನೆ.

    ಹಂತಕರಿಗೆ ಕೊಡಗಿನಲ್ಲಿ ಆಶ್ರಯ
    ಬಂಧಿತನಾಗಿರುವ ಅಬ್ದುಲ್‌ ರೆಹಮಾನ್‌ ಕೊಡಗಿನ ಸೋಮವಾರಪೇಟೆ ತಾಲೂಕಿನ ಕಲ್ಕಂದೂರು ಗ್ರಾಮದವನಾಗಿದ್ದು, ಪ್ರವೀಣ್‌ ನೆಟ್ಟಾರು ಹತ್ಯೆ ಮಾಡಿದ್ದ ಹಂತಕರಿಗೆ ಆಶ್ರಯ ನೀಡಿದ್ದ. ನೆಟ್ಟಾರು ಹತ್ಯೆ ಬಳಿಕ ವಿದೇಶಕ್ಕೆ ಹಾರಿದ್ದ ರೆಹಮಾನ್‌ ಕತಾರ್‌ನ ದೋಹಾದಲ್ಲಿ ತಲೆಮರೆಸಿಕೊಂಡಿದ್ದ. ಹೀಗಾಗಿ ರೆಹಮಾನ್‌ ಸೇರಿದಂತೆ ಉಳಿದ 6 ಆರೋಪಿಗಳ ಸುಳಿವು ಕೊಟ್ಟವರಿಗೆ ಎನ್‌ಐಎ ಬಹುಮಾನ ಘೋಷಿಸಿತ್ತು. ಸದ್ಯ ರೆಹಮಾನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಬೆಂಗಳೂರಿನ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಮುಂದಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಿದ್ದಾರೆ. ಜೊತೆಗೆ ಉಳಿದ ಆರೋಪಿಗಳಿಗೂ ಎನ್‌ಐಎ ತಂಡ ಬಲೆ ಬೀಸಿದೆ.

  • ಮಂಗಳೂರು | ಸುಹಾಸ್ ಶೆಟ್ಟಿ ಕೇಸ್‌ಗೆ ಟ್ವಿಸ್ಟ್ – ಹಂತಕರಿಗೆ ವಿದೇಶದಿಂದ ಲಕ್ಷ ಲಕ್ಷ ಫಂಡಿಂಗ್

    ಮಂಗಳೂರು | ಸುಹಾಸ್ ಶೆಟ್ಟಿ ಕೇಸ್‌ಗೆ ಟ್ವಿಸ್ಟ್ – ಹಂತಕರಿಗೆ ವಿದೇಶದಿಂದ ಲಕ್ಷ ಲಕ್ಷ ಫಂಡಿಂಗ್

    – ಹತ್ಯೆಯಲ್ಲಿ ನಿಷೇಧಿತ ಪಿಎಫ್‌ಐ ಸಂಘಟನೆಯ ನಂಟು

    ಮಂಗಳೂರು: ಹಿಂದೂ ಕಾರ್ಯಕರ್ತರ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ (Suhas Shetty Murder Case) ಹೊಸ ತಿರುವು ಪಡೆದುಕೊಂಡಿದೆ. ಎನ್‌ಐಎ ತನಿಖೆ ಆರಂಭಿಸುತ್ತಿದ್ದಂತೆ ಹತ್ಯೆಯಲ್ಲಿ ಪಿಎಫ್‌ಐ ನಂಟು ಇರೋದು ಬೆಳಕಿಗೆ ಬಂದಿದೆ. ಜೊತೆಗೆ ಹತ್ಯೆಗೆ ವಿದೇಶದಿಂದ ಫಂಡಿಂಗ್ (Foreign Funding) ಆಗಿದೆ ಅನ್ನೋ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

    ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಹತ್ಯೆ ನಡೆಸಿದ ಹಾಗೂ ಸಹಕರಿಸಿದ 12 ಮಂದಿಯನ್ನ ಬಜಪೆ ಪೊಲೀಸರು ಬಂಧಿಸಿದ್ದರು. ಬಳಿಕ ಕೇಂದ್ರ ಗೃಹ ಇಲಾಖೆ ಈ ಪ್ರಕರಣವನ್ನ ಎನ್‌ಐಎಗೆ (NIA) ವಹಿಸಿದ್ದು ಎಲ್ಲಾ ಆರೋಪಿಗಳನ್ನ ವಶಕ್ಕೆ ಪಡೆದಿದೆ. ಈ ಹತ್ಯೆ ಆದ ದಿನದಿಂದ ಹಿಂದೂ ಮುಖಂಡರು, ಬಿಜೆಪಿ ಮುಖಂಡರು ಈ ಪ್ರಕರಣವನ್ನು ಎನ್‌ಐಎಗೆ ನೀಡಲು ಒತ್ತಾಯಿಸುತ್ತಲೇ ಇದ್ದರು. ಈ ಹತ್ಯೆಯಲ್ಲಿ ನಿಷೇಧಿತ ಪಿಎಫ್‌ಐ (PFI) ಸಂಘಟನೆ ನೇರವಾಗಿ ಭಾಗಿಯಾಗಿದೆ, ಜೊತೆಗೆ ಹತ್ಯೆಗೆ ವಿದೇಶದಿಂದಲೂ ಹಣದ ಹೊಳೆ ಹರಿದುಬಂದಿದೆ ಎಂದು ಆರೋಪಿಸಿದ್ದರು. ಇದೀಗ ಎನ್‌ಐಎ ತನಿಖೆಯ ವೇಳೆಯೂ ಈ ವಿಚಾರ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಕೆಲವರಿಗೆ ಸಿಎಂ ಆಗ್ಬೇಕು ಅಂತಿರುತ್ತೆ, ಅಂಥವರೇ ಬದಲಾವಣೆಯ ಊಹಾಪೋಹಗಳನ್ನು ಹಬ್ಬಿಸ್ತಿದ್ದಾರೆ: ಯತೀಂದ್ರ

    ಈ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕವೇ ತನಿಖೆ ನಡೆಸಲು ಆರಂಭಿಸಿದ್ದು ಎನ್‌ಐಎಗೆ ಕೊಡೋ ಅಗತ್ಯವಿಲ್ಲ ಎಂದಿತ್ತು. ಸುಹಾಸ್ ಶೆಟ್ಟಿ ಹೆತ್ತವರೂ ಎನ್‌ಐಎ ತನಿಖೆ ಮೂಲಕ ಮಾತ್ರ ತಮ್ಮ ಮಗನ ಸಾವಿಗೆ ನ್ಯಾಯ ಸಿಗುತ್ತೇ ಎಂದು ಒತ್ರಾಯಿಸಿದ್ರು. ಈ ನಡುವೆ ಸುಹಾಸ್ ಶೆಟ್ಟಿ ಹೆತ್ತವರು ರಾಜ್ಯಪಾಲರ ಮೂಲಕ ಪ್ರಕರಣವನ್ನು ಎನ್‌ಐಎಗೆ ನೀಡಲು ಒತ್ತಾಯಿಸಿದ್ದು, ಜಿಲ್ಲೆಯ ಸಂಸದ, ಶಾಸಕರು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ಈ ಹತ್ಯೆಯ ಹಿಂದಿರುವ ಶಕ್ತಿಗಳ ಬಗ್ಗೆ ತಂದಿದ್ದರು. ಇದನ್ನೂ ಓದಿ: 8 ವರ್ಷಗಳಿಂದ ವಿತರಿಸದೇ ಇದ್ದ 1 ಲಕ್ಷಕ್ಕೂ ಹೆಚ್ಚು ಸ್ಯಾನಿಟರಿ ಪ್ಯಾಡ್‌ಗಳಿಗೆ ಬೆಂಕಿ

    ಈ ಹಿನ್ನಲೆಯಲ್ಲಿ ಕೇಂದ್ರ ಗೃಹ ಇಲಾಖೆಯೇ ಸುಹಾಸ್ ಹತ್ಯೆ ಪ್ರಕರಣವನ್ನು ಎನ್ ಐಎಗೆ ವಹಿಸಿತ್ತು. ಇದೀಗ ಆರೋಪಿಗಳನ್ನ ವಶಕ್ಕೆ ಪಡೆದ ಎನ್‌ಐಎ ಎಲ್ಲಾ 12 ಆರೋಪಿಗಳ ವಿಚಾರಣೆ ನಡೆಸಿದ್ದು, ಹೆಚ್ಚಿನ ಆರೋಪಿಗಳಿಗೆ ನಿಷೇಧಿತ ಪಿಎಫ್‌ಐ ಸಂಘಟನೆಯ ಜೊತೆ ನಂಟು ಇರೋದು ಬೆಳಕಿಗೆ ಬಂದಿದೆ. ಮಾತ್ರವಲ್ಲ ಎಲ್ಲ ಆರೋಪಿಗಳ ಬ್ಯಾಂಕ್ ಖಾತೆಯ ವಿವರ ಸಂಗ್ರಹಿಸಿದ ಎನ್‌ಐಎ ಅಧಿಕಾರಿಗಳಿಗೆ ವಿದೇಶದಿಂದ ಫಂಡಿಗ್ ಆಗಿರೋ ಆಘಾತಕಾರಿ ವಿಚಾರ ಗೊತ್ತಾಗಿದೆ. ದುಬೈ,ಸೌದಿ ಅರೇಬಿಯಾ ಸೇರಿದಂತೆ ರಾಜ್ಯದ ಕರಾವಳಿಯ ಕೆಲ ಸ್ಥಳೀಯರ ಬ್ಯಾಂಕ್ ಖಾತೆಗಳಿಂದಲೂ ಆರೋಪಿಗಳ ಖಾತೆಗೆ ಹಣ ವರ್ಗಾವಣೆ ಆಗಿರೋ ವಿವರ ಬಹಿರಂಗಗೊಂಡಿದೆ. ಇದನ್ನೂ ಓದಿ: ಪಾಕಿಸ್ತಾನ | ಪ್ರವಾಹದಲ್ಲಿ ಕೊಚ್ಚಿ ಹೋದ 9 ಜನ – 18 ಸದ್ಯಸರ ಕುಟುಂಬದ ದುರಂತ ಪ್ರವಾಸ 

    ಎನ್‌ಐಎ ಡಿಜಿಪಿ ರಾಹುಲ್ ಹಾಗೂ ಎಸ್ಪಿ ಶಿವಕುಮಾರ್ ಈ ಹತ್ಯೆ ಪ್ರಕರಣದ ಸಂಪೂರ್ಣ ಮಾಹಿತಿ ಪಡೆದಿದ್ದು ಸದ್ಯ ಎನ್‌ಐಎ ಡಿಎಸ್‌ಪಿ ಪವನ್ ಕುಮಾರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ. ಈ ಹತ್ಯೆ ಪ್ರಕರಣದಲ್ಲಿ ಇನ್ನೆಷ್ಟು ಮಂದಿ ಭಾಗಿಯಾಗಿದ್ದಾರೆ. ಯಾರೆಲ್ಲ ಫಂಡಿಂಗ್ ಮಾಡಿದ್ದಾರೆ ಅನ್ನೋ ವಿಚಾರ ಮುಂದಿನ ತನಿಖೆಯಲ್ಲಿ ಬಹಿರಂಗಗೊಳ್ಳಲಿದ್ದು ಇನ್ನೊಂದಷ್ಟು ಮಂದಿ ಬಂಧನವಾಗೋ ಸಾಧ್ಯತೆ ಇದೆ. ಇದನ್ನೂ ಓದಿ:  ಅಕ್ರಮ ಸಂಬಂಧ ಆರೋಪ – ಮಹಿಳೆಯ ವಿವಸ್ತ್ರಗೊಳಿಸಿ, ತಲೆ ಬೋಳಿಸಿ ಚಿತ್ರಹಿಂಸೆ

  • Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

    Pahalgam Attack | ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್‌

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ (Pahalgam Attack) ನಡೆಸಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ (NIA) ಅಧಿಕಾರಿಗಳು ಬಂಧಿಸಿದ್ದಾರೆ.

    ಬಂಧಿತರನ್ನು ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂದು ಗುರುತಿಸಲಾಗಿದೆ. ಇಬ್ಬರು ಪಹಲ್ಗಾಮ್ ನಿವಾಸಿಗಳಾಗಿದ್ದು, ನಿಷೇಧಿತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (LeT) ಸಂಘಟನೆಗೆ ಸೇರಿದ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು. ಇನ್ನೂ ತನಿಖೆ ವೇಳೆ, ಬಂಧಿತರು ದಾಳಿಕೋರರ ಗುರುತುಗಳನ್ನು ಬಹಿರಂಗಪಡಿಸಿದ್ದು, ಉಗ್ರರು ಪಾಕಿಸ್ತಾನಿ (Pakistan) ಪ್ರಜೆಗಳು ಎಂದು ದೃಢಪಟ್ಟಿದೆ. ಇದನ್ನೂ ಓದಿ: Pahalgam Terror Attack – ತನಗೇ ಗೊತ್ತಿಲ್ಲದೆ ಪ್ರವಾಸಿಗನ ಮೊಬೈಲ್‌ನಲ್ಲಿ ಸೆರೆಯಾಯ್ತು ಭೀಕರ ಉಗ್ರ ಕೃತ್ಯ

    ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ.

    ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು. ಇದಾದ ಬಳಿಕ ಭಾರತ ಹಾಗೂ ಪಾಕ್‌ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಭಾರತೀಯ ಸೇನೆ, ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಹಲವಾರು ಉಗ್ರರನ್ನು ಹೊಡೆದು ಹಾಕಿತ್ತು. ಇದನ್ನೂ ಓದಿ: Pahalgam Terror Attack | ಮರದಿಂದ ಕೆಳಗಿಳಿದು ಉಗ್ರರ ದಾಳಿ

  • ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಮಂಗಳೂರಿಗೆ ಆಗಮಿಸಿದ ಎನ್‍ಐಎ ತಂಡ

    ಸುಹಾಸ್ ಶೆಟ್ಟಿ ಹತ್ಯೆ ಕೇಸ್ – ಮಂಗಳೂರಿಗೆ ಆಗಮಿಸಿದ ಎನ್‍ಐಎ ತಂಡ

    ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ (Suhas Shetty) ಹತ್ಯೆ ಪ್ರಕರಣದ ತನಿಖೆಯನ್ನ ಎನ್‍ಐಎಗೆ (NIA) ಕೇಂದ್ರ ಗೃಹ ಇಲಾಖೆ ವಹಿಸಿದ್ದು, ಇದೀಗ ಎನ್‍ಐಎ ಅಧಿಕಾರಿಗಳ ತಂಡ ಅಖಾಡಕ್ಕಿಳಿದಿದೆ.

    ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ಎನ್‍ಐಎ ಅಧಿಕಾರಿಗಳು ಇಂದು (ಜೂ.14) ಮಂಗಳೂರಿಗೆ (Mangaluru) ಆಗಮಿಸಿದ್ದಾರೆ. ಡಿಎಸ್‍ಪಿ ಪವನ್ ಕುಮಾರ್ ನೇತೃತ್ವದ ತಂಡ ಮಂಗಳೂರು ಸಿಸಿಬಿ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ನಿಷೇಧಿತ ಸಂಘಟನೆ ಪಿಎಫ್‍ಐ ಕಾರ್ಯಕರ್ತರು ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಇದರಿಂದಾಗಿ ಈ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಇಲಾಖೆ ಎನ್‍ಐಎ ತನಿಖೆಗೆ ವಹಿಸಿತ್ತು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಯಂತೆಯೇ ಅಶ್ರಫ್, ರಹಿಮಾನ್ ಹತ್ಯೆಯನ್ನೂ ಎನ್‌ಐಎಗೆ ವಹಿಸಿ: ಮಂಜುನಾಥ ಭಂಡಾರಿ

    ಮೇ 1 ರಂದು ಫಾಜಿಲ್ ಹತ್ಯೆಯ ಆರೋಪಿ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ದೇಶ, ವಿದೇಶಗಳಿಂದ ಫಂಡಿಂಗ್ ಆಗಿದೆ. ರಾಜ್ಯದ ಪೊಲೀಸ್ ಇಲಾಖೆಯಿಂದ ನಿಸ್ಪಕ್ಷಪಾತವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ಎನ್‍ಐಎಗೆ ಒಪ್ಪಿಸಬೇಕೆಂದು ಆಗ್ರಹಿಸಿ ಬಿಜೆಪಿ, ಸೇರಿದಂತೆ ಹಿಂದೂಪರ ಕಾರ್ಯರ್ತರು ಆಗ್ರಹಿಸಿದ್ದರು.

    ಸುಹಾಸ್ ಶೆಟ್ಟಿ ಹತ್ಯೆ ಕೇಸ್‍ನಲ್ಲಿ ಈಗಾಗಲೇ ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಸುಹಾಸ್‌ ಶೆಟ್ಟಿ ಹತ್ಯೆ ಕೇಸ್‌ NIA ಹೆಗಲಿಗೆ

  • ಸುಹಾಸ್ ಶೆಟ್ಟಿ ಹತ್ಯೆಯಂತೆಯೇ ಅಶ್ರಫ್, ರಹಿಮಾನ್ ಹತ್ಯೆಯನ್ನೂ ಎನ್‌ಐಎಗೆ ವಹಿಸಿ: ಮಂಜುನಾಥ ಭಂಡಾರಿ

    ಸುಹಾಸ್ ಶೆಟ್ಟಿ ಹತ್ಯೆಯಂತೆಯೇ ಅಶ್ರಫ್, ರಹಿಮಾನ್ ಹತ್ಯೆಯನ್ನೂ ಎನ್‌ಐಎಗೆ ವಹಿಸಿ: ಮಂಜುನಾಥ ಭಂಡಾರಿ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೂವರೆ ತಿಂಗಳಿನಿಂದೀಚೆಗೆ ನಡೆದಿರುವ ಮೂರು ಕೊಲೆ ಪ್ರಕರಣಗಳು (Murder) ಇಡೀ ಕರಾವಳಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಕೊಲೆಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಮೂರು ಪ್ರಕರಣಗಳನ್ನು ಕೂಡ ರಾಷ್ಟ್ರೀಯ ತನಿಖಾ ದಳ (NIA) ತನಿಖೆಗೆ ವಹಿಸಿದರೆ ದುಷ್ಜೃತ್ಯದ ಹಿಂದಿನ ಸತ್ಯ ಬಯಲಿಗೆ ಬರಲಿದೆ ಎಂದು ವಿಧಾನ ಪರಿಷತ್ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ (Manjunath Bhandari) ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

    ಕೇಂದ್ರ ಗೃಹ ಇಲಾಖೆಯು ಬಜಪೆ ಕಿನ್ನಿಪದವಿನಲ್ಲಿ ನಡೆದ ಸುಹಾಸ್ ಶೆಟ್ಟಿ (Suhas Shetty) ಕೊಲೆ ಪ್ರಕರಣವನ್ನು ಎನ್‌ಐಎಗೆ ವಹಿಸಿದೆ. ಇದೇ ಮಾದರಿಯಲ್ಲಿ ಕುಡುಪುವಿನಲ್ಲಿ ಏ.27ರಂದು ಅಶ್ರಫ್ (Ashraf) ಎಂಬಾತನನ್ನು ಗುಂಪು ಹತ್ಯೆ ಮಾಡಲಾಗಿದೆ. ಇದಾದ ಬಳಿಕ ಬಜಪೆ ಕಿನ್ನಿಪದವಿನಲ್ಲಿ ಮೇ 1ರಂದು ಸುಹಾಸ್ ಶೆಟ್ಟಿ ಕೊಲೆ ನಡೆದರೆ, ಈ ಘಟನೆ ನಡೆದ ಕೆಲವೇ ದಿನದ ಬಳಿಕ ಮೇ 27ರಂದು ಕುರಿಯಾಳ ಕಾಂಬೋಡಿ ಬಳಿ ಅಬ್ದುಲ್ ರಹಿಮಾನ್ (Abdul Rahiman) ಕೊಲೆಯಾಗಿದೆ ಎಂದು ಹೇಳಿದ್ದಾರೆ.

    ಈ ಮೂರು ಪ್ರಕರಣಗಳು ಒಂದಕ್ಕೊಂದು ಪ್ರತೀಕಾರದ ಕೊಲೆಯಾಗಿರುವ ಸಾಧ್ಯತೆಯಿದ್ದು, ಈ ಹಿನ್ನಲೆಯಲ್ಲಿ ಕೇಂದ್ರ ಸರಕಾರ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಬಳಿಯುವ ಬದಲು ಮೂರು ಪ್ರಕರಣಗಳನ್ನು ಎನ್‌ಐಎಗೆ ವಹಿಸಲಿ. ಆಗ ಇಡೀ ಕರಾವಳಿಯ ಕೋಮು ಸಂಘರ್ಷದ ಜಾಲ ಬಯಲಾಗಲಿದೆ. ನಾಗರಿಕರಿಗೂ ಇದರ ಹಿಂದಿರುವ ಸತ್ಯವನ್ನು ಅರಿಯಬಹುದಾಗಿದೆ. ಈ ಕಾರಣದಿಂದ ಕೇಂದ್ರ ಸರಕಾರ ಮೂರು ಪ್ರಕರಣವನ್ನು ಎನ್‌ಐಎಗೆ ವಹಿಸಬೇಕಾದ ಅಗತ್ಯವಿದೆ ಆಗ್ರಹಿಸಿದ್ದಾರೆ.