Tag: NIA

  • ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್‌ ಲಿಂಕ್‌?

    ಉದಯ್‌ಪುರ ಬರ್ಬರ ಹತ್ಯೆ ಎನ್‌ಐಎ ಹೆಗಲಿಗೆ – ಪಾತಕಿಗಳಿಗೆ ಐಸಿಸ್‌ ಲಿಂಕ್‌?

    ನವದೆಹಲಿ: ಉದಯ್‌ಪುರದ ಟೈಲರ್‌ ಕನ್ಹಯ್ಯ ಲಾಲ್‌ ಬರ್ಬರ ಹತ್ಯೆ ಪ್ರಕರಣದ ತನಿಖೆಯನ್ನು ಎನ್‌ಐಎಗೆ(ರಾಷ್ಟ್ರೀಯ ತನಿಖಾ ದಳ) ವಹಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಪ್ರಕಟಿಸಿದೆ.

    ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ ಮತ್ತು ಐಪಿಸಿ ವಿವಿಧ ಸೆಕ್ಷನ್‌ ಅಡಿಯಲ್ಲಿ ಎನ್‌ಐಎ ಈಗ ಪ್ರಕರಣ ದಾಖಲಿಸಿಕೊಂಡಿದೆ. ಈ ಕೃತ್ಯದ ಹಿಂದೆ ಸಂಘಟನೆ ಮತ್ತು ಅಂತಾರಾಷ್ಟ್ರೀಯ ಕೈವಾಡ ಇರಬಹುದು ಎಂಬ ಅನುಮಾನದ ಹಿನ್ನೆಲೆಯಲ್ಲಿ ಎನ್‌ಐಎ ತನಿಖೆಗೆ ಆದೇಶಿಸಲಾಗಿದೆ.

    ಅನುಮಾನ ಯಾಕೆ?
    ಇತ್ತಿಚೆಗೆ ಐಸಿಸ್ ಜೊತೆಗೆ ನಂಟು ಹೊಂದಿದ್ದ ಮುಜೀಬ್‍ ಎಂಬಾತನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿತ್ತು. ಈಗ ಹತ್ಯೆ ರೀತಿಯನ್ನು ಕಂಡು ಮುಹಮ್ಮದ್ ರಿಯಾಜ್ ಅಟ್ಟಾರಿ, ಮುಹಮ್ಮದ್ ಗೌಸ್ ಮುಜೀಬ್ ಗುಂಪಿನ ಸದಸ್ಯರು ಆಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.  ಇದನ್ನೂ ಓದಿ: ಹತ್ಯೆಯಾದ ಟೈಲರ್‌ಗೆ 10 ದಿನಗಳ ಹಿಂದೆಯೇ ಬಂದಿತ್ತು ಬೆದರಿಕೆ ಕರೆ!

    ಬರೇಲ್ವಿ ಮೂಲಕ ಮುಹಮ್ಮದ್ ರಿಯಾಜ್ ತನ್ನ ಫೇಸ್‍ಬುಕ್ ನಲ್ಲಿ ವಿವಾದಿತ ಇಸ್ಲಾಮಿಕ್ ಸ್ಟೇಟ್ ಪೇಜ್‍ಗಳನ್ನು ಫಾಲೋ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಐಸಿಸ್‌ ಪರವಾಗಿದ್ದ ಬರಹಗಳನ್ನು ಪೋಸ್ಟ್‌ ಮಾಡುತ್ತಿದ್ದ.

    ಹತ್ಯೆ ಬಳಿಕ ಮಾಡಿರುವ ವಿಡಿಯೋದಲ್ಲಿ ಐಸಿಸ್‌ ಉಗ್ರರು ಬಳಸುವ ವಿಶಿಷ್ಟವಾದ ಬೆರಳಿನ ಸಿಗ್ನಲ್ ತೋರಿಸಿದ್ದಾನೆ. ಈ ಹಿಂದೆ ಐಸಿಸ್‌ ಉಗ್ರರು ಕತ್ತು ಸೀಳಿ ಹತ್ಯೆ ಮಾಡುತ್ತಿದ್ದರು. ಅದೇ ರೀತಿಯಾಗಿ ಈ ಕೃತ್ಯ ಮಾಡಿರುವುದರಿಂದ ಉಗ್ರ ಸಂಘಟನೆಯ ನಂಟಿನ ಬಗ್ಗೆ ಅನುಮಾನ ಎದ್ದಿದೆ.

    ಆರೋಪಿಗಳು ಖಂಜಿಪೀರ್‌ನ ವೆಲ್ಡಿಂಗ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಭಿಲ್ವಾರಾ ಮೂಲದ ರಿಯಾಜ್, ಉದಯಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಗೌಸ್ ಮೊಹಮ್ಮದ್ ರಾಜಸ್ಮಾಂಡ್‍ನ ಭೀಮಾದವನು. ಈ ಇಬ್ಬರೂ ಆರೋಪಿಗಳು ಪಾಕಿಸ್ತಾನ ಮೂಲದ ತೀವ್ರ ಮುಸ್ಲಿಂ ಮೂಲಭೂತವಾದಿ ಸಂಘಟನೆಯಾದ ದಾವತ್-ಎ-ಇಸ್ಲಾಮಿಯೊಂದಿಗೆ ಸಂಬಂಧ ಹೊಂದಿದ್ದರು ಎಂಬ ಆರೋಪ ಬಂದಿದೆ.

    Live Tv

  • ಯಾಸಿನ್ ಮಲಿಕ್ ಮರಣದಂಡನೆ ನೀಡಿ – ನ್ಯಾಯಾಯಲಕ್ಕೆ ಎನ್‌ಐಎ ಮನವಿ

    ಯಾಸಿನ್ ಮಲಿಕ್ ಮರಣದಂಡನೆ ನೀಡಿ – ನ್ಯಾಯಾಯಲಕ್ಕೆ ಎನ್‌ಐಎ ಮನವಿ

    ನವದೆಹಲಿ: ಭಯೋತ್ಪಾದನಾ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ದೋಷಿಯಾಗಿರುವ ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟಗಾರ ಯಾಸೀನ್ ಮಲಿಕ್‌ಗೆ ಮರಣ ದಂಡನೆ ವಿಧಿಸಬೇಕೆಂದು ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಮನವಿ ಮಾಡಿದೆ.

    ಬುರ್ಹಾನ್‌ವಾನಿ ಎನ್‌ಕೌಂಟರ್ ಆದ 30 ನಿಮಿಷಗಳಲ್ಲಿ ನನ್ನನ್ನು ಬಂಧಿಸಲಾಯಿತು. ಅಟಲ್ ಬಿಹಾರಿ ವಾಜಪೇಯಿ ಅವರು ನನಗೆ ಪಾಸ್‌ಪೋರ್ಟ್ ಮಂಜೂರು ಮಾಡಿದ್ದರು ಹಾಗೂ ನಾನು ಅಪರಾಧಿ ಅಲ್ಲ ಎಂಬ ಕಾರಣಕ್ಕೆ ನನಗೆ ಹೇಳಿಕೆ ನೀಡಲು ಭಾರತ ಅವಕಾಶ ಮಾಡಿಕೊಟ್ಟಿತು ಎಂದು ಯಾಸಿನ್ ಮಲಿಕ್ ನ್ಯಾಯಾಲಯದಲ್ಲಿ ಹೇಳಿದ್ದಾನೆ. ಇದನ್ನೂ ಓದಿ: ಬರಾಮುಲ್ಲಾದಲ್ಲಿ ಎನ್‌ಕೌಂಟರ್ – 3 ಭಯೋತ್ಪಾದಕರ ಹತ್ಯೆ, ಪೊಲೀಸ್ ಹುತಾತ್ಮ,

    1994ರಲ್ಲಿ ನಾನು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಗಾಂಧಿಯವರ ತತ್ವಗಳನ್ನು ಅನುಸರಿಸುತ್ತಿದ್ದೆ. ನಾನು ಕಾಶ್ಮೀರದಲ್ಲಿ ಅಹಿಂಸಾತ್ಮಕ ರಾಜಕೀಯ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಾನೆ.

    ನಾನು ಈ ಹಿಂದೆ 7 ಪ್ರಧಾನಿಗಳೊಂದಿಗೆ ಕೆಲಸ ಮಾಡಿದ್ದೇನೆ. ಕಳೆದ 24 ವರ್ಷಗಳಲ್ಲಿ ಯಾವುದೇ ಭಯೋತ್ಪಾದನಾ ಚಟುವಟಿಕೆ ಅಥವಾ ಹಿಂಸಾಚಾರಗಳಲ್ಲಿ ಭಾಗಿಯಾಗಿದ್ದರೆ ಅದನ್ನು ಸಾಬೀತುಪಡಿಸಲಿ ಎಂದು ಭಾರತೀಯ ಗುಪ್ತಚರ ಇಲಾಖೆಗೆ ಸವಾಲು ಹಾಕಿದ್ದಾನೆ. ಇದನ್ನೂ ಓದಿ: ಶೂಟೌಟ್‍ಗೂ ಮೊದಲೇ ಇನ್‍ಸ್ಟಾಗ್ರಾಮ್‍ನಲ್ಲಿ ಗನ್‍ಗಳ ಚಿತ್ರ ಪೋಸ್ಟ್ ಮಾಡಿದ್ದ ಆರೋಪಿ

    ನಾನು ರಾಜಕೀಯದಿಂದ ನಿವೃತ್ತಿ ಹೊಂದಿ, ಮರಣದಂಡನೆಯನ್ನು ಸ್ವೀಕರಿಸುತ್ತೇನೆ ಎಂದು ಮಲಿಕ್ ಹೇಳಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ನೀಡುತ್ತಿದ್ದ ಪ್ರಕರಣದಲ್ಲಿ ಯಾಸಿನ್ ಮಲಿಕ್ ತಪ್ಪೊಪ್ಪಿಕೊಂಡ ಹಿನ್ನೆಲೆ ಎನ್‌ಐಎ ಕೋಟ್ ಅವರನ್ನು ದೋಷಿ ಎಂದು ಘೋಷಿಸಿದೆ. ಕಠಿಣ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ಸೇರಿದಂತೆ ವಿವಿಧ ಪ್ರಕರಣಗಳ ಮೇಲೆ 2017ರಲ್ಲಿ ಮಲಿಕ್ ವಿರುದ್ಧ ದೂರು ದಾಖಲಿಸಿ ಬಂಧಿಸಲಾಗಿತ್ತು.

  • ಹುಬ್ಬಳ್ಳಿಯಲ್ಲಿ ಪುಂಡರಿಂದ ದಾಂಧಲೆ – ಎನ್‍ಐಎ ಎಂಟ್ರಿ ಸಾಧ್ಯತೆ

    ಹುಬ್ಬಳ್ಳಿಯಲ್ಲಿ ಪುಂಡರಿಂದ ದಾಂಧಲೆ – ಎನ್‍ಐಎ ಎಂಟ್ರಿ ಸಾಧ್ಯತೆ

    ಬೆಂಗಳೂರು: ಹುಬ್ಬಳ್ಳಿಯಲ್ಲಿ ನಡೆದ ಹಿಂಸಾಚಾರದಲ್ಲಿ ಉಗ್ರ ಸಂಘಟನೆಯ ಸದಸ್ಯರು ಭಾಗಿಯಾಗಿದ್ದಾರಾ ಎಂಬ ಅನುಮಾನ ಈಗ ವ್ಯಕ್ತವಾಗಿದೆ.

    ಘಟನೆ ನಡೆದ ಸಮಯದಲ್ಲಿ ಹೊರ ರಾಜ್ಯ ಮತ್ತು ಹೊರ ದೇಶಗಳಿಗೆ ಕರೆ ಮತ್ತು ಮಾಹಿತಿಗಳು ರವಾನೆಯಾದ ಹಿನ್ನೆಲೆಯಲ್ಲಿ ಈ ಅನುಮಾನ ಹುಟ್ಟು ಹಾಕಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ- ಸಮಾಜ ಘಾತುಕ ಕೆಲಸ ಮಾಡಿಲ್ಲ: ಅಲ್ತಾಫ್

    Hubballi Riot

    ಸದ್ಯ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಊಹೆಗಿಂತಲೂ ದೊಡ್ಡ ಲಿಂಕ್ ಇರುವುದು ಕಾಣಿಸಿದೆ. ಬಂಧನಕ್ಕೆ ಒಳಗಾದವರ ವಿಚಾರಣೆ ವೇಳೆ ಬೇರೆ ರಾಜ್ಯದ ವ್ಯಕ್ತಿಗಳ ಜೊತೆ ಸಂಬಂಧ ಇರುವುದು ಗೊತ್ತಾಗಿದೆ.

    ಬೆಂಗಳೂರಿನ ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯ ವೇಳೆ ಬೇರೆ ರಾಜ್ಯದ ಲಿಂಕ್‍ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ನೀಡಲಾಗಿತ್ತು. ಈ ಕಾರಣಕ್ಕೆ ಈ ಪ್ರಕರಣವನ್ನು ಸರ್ಕಾರ ಎನ್‍ಐಎಗೆ ನೀಡುತ್ತಾ ಎಂಬ ಪ್ರಶ್ನೆ ಎದ್ದಿದೆ.  ಇದನ್ನೂ ಓದಿ: ದಿವ್ಯ ಹಾಗರಗಿಗು ಬಿಜೆಪಿಗೂ ಸಂಬಂಧ ಇಲ್ಲ: ಆರ್. ಅಶೋಕ್

    ಸದ್ಯಕ್ಕೆ ಹುಬ್ಬಳ್ಳಿ ಸ್ಥಳೀಯ ಪೊಲೀಸರಿಂದ ತನಿಖೆಗೆ ನಡೆಯುತ್ತಿದ್ದು, ಕೆಲ ದಿನಗಳಲ್ಲಿ ಸರ್ಕಾರ ಪ್ರಕರಣವನ್ನು ಎನ್‍ಐಗೆ ವರ್ಗಾಯಿಸುವ ಸಾಧ್ಯತೆಯಿದೆ.

  • ಜೈಲಿನಲ್ಲಿ ಶಿವಮೊಗ್ಗ ಹರ್ಷ ಕೊಲೆ ಕೇಸ್ ಆರೋಪಿಗಳ ಹುಚ್ಚಾಟ – ಬ್ಯಾರಕ್‍ನಲ್ಲಿ ಪುಂಡಾಟ

    ಜೈಲಿನಲ್ಲಿ ಶಿವಮೊಗ್ಗ ಹರ್ಷ ಕೊಲೆ ಕೇಸ್ ಆರೋಪಿಗಳ ಹುಚ್ಚಾಟ – ಬ್ಯಾರಕ್‍ನಲ್ಲಿ ಪುಂಡಾಟ

    ಶಿವಮೊಗ್ಗ: ಹಿಂದೂ ಸಮಘಟನೆಯ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ಆರೋಪಿಗಳು ಸೆಂಟ್ರಲ್ ಜೈಲಿನಲ್ಲಿ ಪುಂಡಾಟಿಕೆ ಮಾಡಿದ್ದಾರೆ.

    ಸೆಂಟ್ರಲ್ ಜೈಲಿನಲ್ಲಿದ್ರೂ ಬ್ಯಾರಕ್‍ನಲ್ಲಿ ಪುಂಡಾಟಿಕೆ ನಡೆಸುತ್ತಿರುವ ಆರೋಪಿಗಳು ಜೈಲಿನ ಭದ್ರತಾ ಸಿಬ್ಬಂದಿಗಳಿಗೇ ಅವಾಜ್ ಹಾಕತ್ತಿದ್ದಾರೆ. ಈ ಮೊದಲು ಬೆಂಗಳೂರು, ಧಾರವಾಡ, ಬೆಳಗಾವಿ ಮತ್ತು ತುಮಕೂರು ಜೈಲಿನಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು ಆ ಬಳಿಕ ಇತ್ತೀಚೆಗಷ್ಟೇ ಹತ್ತು ಮಂದಿ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಇದೀಗ ಹತ್ತು ಮಂದಿ ಆರೋಪಿಗಳು ಒಂದೇ ಬ್ಯಾರಕ್‍ನಲ್ಲಿದ್ದು, ಕ್ವಾರಂಟೈನ್ ಸೆಲ್‍ನಿಂದ ಸೆಂಟ್ರಲ್ ಜೈಲಿನ ಒಳಗೆ ಕಳುಹಿಸುವಂತೆ ಆರೋಪಿಗಳು ಜೈಲಾಧಿಕಾರಿಗಳಿಗೆ ಅವಾಜ್ ಹಾಕುತ್ತಿರುವ ಬಗ್ಗೆ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹರ್ಷ ಕೊಲೆಯ ಪ್ರತೀಕಾರಕ್ಕೆ ನಡೆಯಿತಾ ಸಂಚು – ಪೊಲೀಸ್ ಕಾರ್ಯಾಚರಣೆಯಿಂದ ಸಂಚು ವಿಫಲ

    jail

    ಜೈಲಿನ ನಿಯಮಾವಳಿಯಂತೆ 14 ದಿನ ಕ್ವಾರಂಟೈನ್ ಕಡ್ಡಾಯಕ್ಕೆ ಆರೋಪಿಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ನಮಗೇನು ಕೊರೊನಾ ಇದೆಯಾ? ಒಳಗೆ ಕಳುಹಿಸಿ ಎಂದು ಜೈಲಾಧಿಕಾರಿಗಳನ್ನು ಪ್ರಶ್ನಿಸುತ್ತಿದ್ದಾರೆ. ಅಲ್ಲದೆ ಜೈಲಿನಲ್ಲಿರುವ ಟೈಲ್ಸ್ ಕಲ್ಲನ್ನು ಒಡೆದು ಕಲ್ಲಿನ ಚೂರ್‌ನಿಂದ ಕೈ ಕೊಯ್ದುಕೊಂಡು ಹುಚ್ಚಾಟ ನಡೆಸುತ್ತಿದ್ದಾರೆ. ಆರು ಮಂದಿ ಆರೋಪಿಗಳು ಪರಸ್ಪರ ತಮ್ಮಷ್ಟಕ್ಕೆ ಟೈಲ್ಸ್ ಚೂರ್‌ನಿಂದ ಮೈ, ಕೈ ರಕ್ತ ಬರುವಂತೆ ಕೊಯ್ದುಕೊಂಡು ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

    ಪ್ರಮುಖ ಆರೋಪಿ ಮಹಮ್ಮದ್ ಖಾಸಿಫ್, ಅಬ್ದುಲ್ ರೋಷನ್ ಸೇರಿ ಆರು ಮಂದಿ ಆರೋಪಿಗಳು ಮೈ, ಕೈ ಕೊಯ್ದುಕೊಂಡು ಹುಚ್ಚಾಟ ನಡೆಸುತ್ತಿದ್ದಂತೆ ಕೂಡಲೇ ಜೈಲಿನ ಆಸ್ಪತ್ರೆ ಸಿಬ್ಬಂದಿಯಿಂದ ಆರು ಮಂದಿ ಆರೋಪಿಗಳಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಮೂವರು ಆರೋಪಿಗಳನ್ನು ಜೈಲಿನ ಒಳಗೆ ಬ್ಯಾರಕ್‍ಗೆ ಶಿಫ್ಟ್ ಮಾಡಲಾಗಿದ್ದು, ಉಳಿದವರನ್ನು ಪ್ರತ್ಯೇಕವಾಗಿ ಬೇರೆ ಬೇರೆ ಕ್ವಾರಂಟೈನ್ ಸೆಲ್‍ಗೆ ಶಿಫ್ಟ್ ಮಾಡಲಾಗಿದೆ.

    ಈ ಘಟನೆ ಬಳಿಕ ಜೈಲಾಧಿಕಾರಿಗಳು ಕೂಡಲೇ ಪರಪ್ಪನ ಅಗ್ರಹಾರ ಪೊಲೀಸ್ ಸ್ಟೇಷನ್‍ಗೆ ಪ್ರಾಥಮಿಕ ರಿಪೋರ್ಟ್ ನೀಡಿದ್ದಾರೆ. ಹರ್ಷ ಕೊಲೆ ಕೇಸ್ ಆರೋಪಿಗಳದ್ದೇ ಇದೀಗ ಜೈಲಾಧಿಕಾರಿಗಳಿಗೆ ತಲೆನೋವಾಗಿದ್ದು, ಸದ್ಯ ಎನ್‍ಐಎ ಟೀಂ ತನಿಖೆ ನಡೆಸ್ತಿದೆ. ಆರೋಪಿಗಳನ್ನು ವಿಚಾರಣೆ ಮಾಡಲು ಸಿದ್ಧತೆ ನಡೆಸುತ್ತಿದೆ. ಈ ಘಟನೆ ಬಳಿಕ ಆರೋಪಿಗಳ ಭದ್ರತೆಗೆ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಲಾಗಿದ್ದು ಯಾವುದೇ ವಸ್ತು ಸಿಗದಂತೆ ಭದ್ರತಾ ಸಿಬ್ಬಂದಿ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆ. ಕಾರಾಗೃಹ ಇಲಾಖೆಗೂ ಆರೋಪಿಗಳ ನಡವಳಿಕೆ ಮತ್ತು ಘಟನೆ ಬಗ್ಗೆ ಮಾಹಿತಿ ರವಾನೆಯಾಗಿದೆ.

  • ಐಸಿಸ್‌ಗೆ ಉಗ್ರರ ಸೇರ್ಪಡೆ – ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

    ಐಸಿಸ್‌ಗೆ ಉಗ್ರರ ಸೇರ್ಪಡೆ – ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ಐಸಿಸ್ ಉಗ್ರ ಸಂಘಟನೆಗೆ ಯುವಕರ ನೇಮಕಾತಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ರಾಜ್ಯದ ಮೂವರ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

    ವಿಶೇಷ ಕೋರ್ಟ್‌ಗೆ ಬೆಂಗಳೂರಿನ ಮೊಹಮ್ಮದ್ ತೌಕಿರ್, ಜೊಹೈಬ್ ಮನ್ನಾ ಮತ್ತು ಭಟ್ಕಳದ ಮೊಹಮ್ಮದ್ ಶಿಹಾಬ್ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ. ಇದನ್ನೂ ಓದಿ: ಜಾನುವಾರು ರಕ್ಷಣೆ ವೇಳೆ ಪೊಲೀಸರಿಗೆ ಬುರ್ಕಾಧಾರಿ ಮಹಿಳೆಯರಿಂದ ಅಡ್ಡಿ

    BRIBE

    ಆರೋಪ ಏನು?
    ತೌಕಿರ್‌ ಮತ್ತು ಮನ್ನಾ ಕುರಾನ್ ಸರ್ಕಲ್ ಗುಂಪಿನ ಮೂಲಕ ಮುಸ್ಲಿಂ ಯುವಕರನ್ನು ಐಸಿಸ್‌ಗೆ ಸೇರಿಸುತ್ತಿದ್ದರು. ಸಿರಿಯಾದಂತಹ ಐಸಿಸ್ ಪ್ರದೇಶಗಳಿಗೆ ಬೆಂಗಳೂರು ಮತ್ತು ಕರ್ನಾಟಕದಿಂದ ಮುಸ್ಲಿಂ ಯುವಕರನ್ನು ಕಳುಹಿಸುತ್ತಿದ್ದರು. ಇದನ್ನೂ ಓದಿ: ದೆಹಲಿಯಲ್ಲಿ ಹನುಮಜಯಂತಿ ಶೋಭಾಯಾತ್ರೆ ವೇಳೆ ಕಲ್ಲು ತೂರಾಟ, ಹಿಂಸಾಚಾರ

    ಈ ಮೂವರು ಉಗ್ರರಿಗಾಗಿ ಹಣವನ್ನು ಸಂಗ್ರಹಿಸುತ್ತಿದ್ದರು. ಮಹಮ್ಮದ್‌ ತೌಕಿರ್‌ ಮತ್ತು ಶಿಹಾಬ್ ಈ ಹಿಂದೆ ಐಸಿಸ್ ಭಯೋತ್ಪಾದಕರೊಂದಿಗೆ ಸಂಪರ್ಕ ಸಾಧಿಸಲು ಅಕ್ರಮವಾಗಿ ಸಿರಿಯಾಕ್ಕೆ ಭೇಟಿ ನೀಡಿದ್ದಾರೆ ಎಂಬ ಆರೋಪ ಇದೆ.

  • ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಕುಟುಂಬದ ವಿರುದ್ಧ ದೂರು

    ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ಕುಟುಂಬದ ವಿರುದ್ಧ ದೂರು

    ಮಂಡ್ಯ: ಮಂಡ್ಯದ ಪದವಿ ಪೂರ್ವ ಕಾಲೇಜಿನಲ್ಲಿ ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿ ಮುಸ್ಕಾನ್ ಮತ್ತು ಕುಟುಂಬದ ವಿರುದ್ಧ NIA  (ಕೇಂದ್ರೀಯ ತನಿಖಾ ದಳ) ತನಿಖೆ ನಡೆಸುವಂತೆ ಒತ್ತಾಯಿಸಿ ಅನಂತ ಕುಮಾರ್ ಅಭಿಮಾನಿಗಳ ಸಂಘವು ಒತ್ತಾಯಿಸಿದೆ.

    ಭಾರತದ ಆತಂರಿಕ ಭದ್ರತೆಗೆ ಅಪಾಯವಿದ್ದು, ಮುಸ್ಕಾನ್ ಕುಟುಂಬದ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಸಂಘದ ಅನಿಲ್ ಮಂಡ್ಯ ಜಿಲ್ಲೆಯ ಎಸ್‌ಪಿಗೆ ದೂರು ನೀಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ

    ALKHAIDA

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್, ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಮುಸ್ಕಾನ್ ವಿದ್ಯಾರ್ಥಿನಿಗೆ ಹಲವಾರು ಮುಸ್ಲಿಂ ಮುಖಂಡರು ಹಣ, ಹುಡುಗೊರೆ ನೀಡಿ ವಿದ್ಯಾರ್ಥಿನಿಯನ್ನು ಬೆಂಬಲಿಸಿದ್ದಾರೆ. ಹೊರ ರಾಜ್ಯದವರೂ ಶಹಬ್ಬಾಸ್ ಗಿರಿ ನೀಡಿದ್ದಾರೆ. ಈ ನಡುವೆ ಆಲ್‌ಖೈದಾ ಸಹ ಬೆಂಬಲ ವ್ಯಕ್ತಪಡಿಸಿದ್ದು, ಇದರ ಹಿಂದೆ ಉಗ್ರ ಸಂಘಟನೆಗಳ ಕೈವಾಡವಿದೆ ಎನ್ನುವ ಆತಂಕ ಶುರುವಾಗಿದೆ. ಇದನ್ನು ತನಿಖೆ ಮೂಲಕ ಪತ್ತೆಹಚ್ಚಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ACಯ ವಿಷಾನಿಲ ಸೋರಿಕೆ- ಒಂದೇ ಕುಟುಂಬದ ನಾಲ್ವರು ಸಾವು

    ಈಚೆಗಷ್ಟೇ ಹೈಕೋರ್ಟ್ ನ್ಯಾಯಾಧೀಶರು ಸಹ ಆಲ್‌ಖೈದಾ ಪ್ರಸಂಶೆಯ ಹಿಂದೆ ದೊಡ್ಡ ಷಡ್ಯಂತರ ಇರಬಹುದು ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಇದು ದೇಶದ ಆಂತರಿಕ ಭದ್ರತೆಯ ವಿಚಾರ ಆಗಿರುವುದರಿಂದ ಇದನ್ನು ಎನ್‌ಐಎ ತನಿಖೆಗೆ ಒಳಪಡಿಸಬೇಕು. ಮುಸ್ಕಾನ್ ಕುಟುಂಬದವರ ಪಾಸ್‌ ಪೋರ್ಟ್‌ ಇದ್ದಲ್ಲಿ ವಶಪಡಿಸಿಕೊಂಡು ಅವರು ದೇಶದಿಂದ ಹೊರ ಹೋಗದಂತೆ ನೋಡಿಕೊಳ್ಳಬೇಕು. ಜೊತೆಗೆ ಅವರನ್ನು ಪ್ರಸಂಶಿಸಿದ ಮುಖಂಡರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

  • ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ: ಸಿಟಿ ರವಿ

    ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ: ಸಿಟಿ ರವಿ

    ಚಿಕ್ಕಮಗಳೂರು: ಶಿವಮೊಗ್ಗದ ಸಿಗೇಹಟ್ಟಿಯಲ್ಲಿ ಆದ ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದಲ್ಲ ಎಂದು ಎನ್‌ಐಎ ದೃಢೀಕರಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿದರು.

    ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಹರ್ಷನ ಕೊಲೆ ಪ್ರಕರಣದ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಶಿವಮೊಗ್ಗಕ್ಕೆ ಆಗಮಿಸಿರುವ ಎನ್‌ಐಎ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ. ಹರ್ಷನ ಕೊಲೆ ಹಿಂದೆ ಕೋಮು ದಳ್ಳುರಿಯ ಉದ್ದೇಶವಿದೆ ಎನ್ನುವ ಅಂಶ ಬಹಿರಂಗವಾಗಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹರ್ಷನ ಕೊಲೆ ಹಿಂದೆ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿರುವ ಸಾಧ್ಯತೆ ಇದೆ ಎಂದು ಅನುಮಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಬಿಜೆಪಿಯ ಹಿಂದುತ್ವದ ಅಸ್ತ್ರಗಳನ್ನು ಮುಲಾಜಿಲ್ಲದೇ ಖಂಡಿಸಲು ಮುಂದಾದ ಕಾಂಗ್ರೆಸ್ ನಾಯಕರು

    ಹರ್ಷನ ಕೊಲೆ ವೈಯಕ್ತಿಕ ಕಾರಣಗಳಿಂದ ಆಗಿಲ್ಲ ಎಂದು ಅಂದೇ ಮೇಲ್ನೋಟಕ್ಕೆ ಕಾಣಿಸಿತ್ತು. ಹರ್ಷನ ಕೊಲೆ ಹರ್ಷನಿಗಾಗಲಿ-ಆಪಾದಿತರಿಗಾಗಲಿ ಇದ್ದ ಹಳೇ ವೈಷಮ್ಯದಿಂದ ಅಲ್ಲ ಎಂಬುದನ್ನ ಎನ್‌ಐಎ ದೃಢೀಕರಿಸಿದೆ. ಈ ಕಾರಣಕ್ಕಾಗಿ ಸರ್ಕಾರ ಸಮಗ್ರ ತನಿಖೆಗೆ ಆದೇಶ ಮಾಡಿತ್ತು. ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿಸಬೇಕೆಂಬ ಸಂಚಿನಲ್ಲೇ ಹತ್ಯೆ ಮಾಡಿದ್ದು, ಇದು ಯಾರೋ ವೈಯಕ್ತಿಕವಾಗಿ ತೆಗೆದುಕೊಂಡ ನಿರ್ಧಾರ ಅಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದರು. ಇದನ್ನೂ ಓದಿ: ನೇಪಾಳದ ಪ್ರಧಾನಿಗೆ ವಿಶಿಷ್ಟ ಉಡುಗೊರೆ ನೀಡಿದ ಪ್ರಧಾನಿ ಮೋದಿ

    ನಿನ್ನೆ ಪರೇಶ್ ಮೇಸ್ತಾ, ಇಂದು ಹರ್ಷ, ನಾಳೆ ಮತ್ತೊಬ್ಬರು ಎಂಬ ಪರಿಸ್ಥಿತಿ ಬರಬಾರದು. ಅದೇ ಕಾರಣಕ್ಕೆ ಸರ್ಕಾರ ಎನ್‌ಐಎ ತನಿಖೆಗೆ ಕೇಸ್ ಒಪ್ಪಿಸಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಿ ಸತ್ಯಾಂಶ ಹೊರಬರಲಿ ಎಂದಿದ್ದಾರೆ. ಈ ಕೊಲೆ ಹಿಂದೆ ವ್ಯವಸ್ಥಿತಿ ಜಾಲ ಕೆಲಸ ಮಾಡಿರುವ ಸಾಧ್ಯತೆ ಇದೆ. ಈ ಹತ್ಯೆಗೆ ಫೈನಾನ್ಸ್ ಮಾಡುವವರು ಯಾರು? ಪ್ರಚೋದನೆ ಕೊಟ್ಟವರು ಯಾರು? ಹಣದ ವ್ಯವಸ್ಥೆ ಮಾಡುವವರು ಯಾರು? ನ್ಯಾಯಾಲಯದಲ್ಲಿ ಬೆಂಬಲ ಕೊಡುವವರು ಯಾರು ಎಂಬುದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದರು.

    ಈ ಹತ್ಯೆಯ ಹಿಂದೆ ಯಾವ ನೆಟ್ವರ್ಕ್ ಇದೆ ಎನ್ನುವುದನ್ನು ನೋಡಬೇಕು. ಅದು ರಾಜ್ಯದ್ದೋ ಅಥವ ಹೊರರಾಜ್ಯದ್ದೋ ಗೊತ್ತಾಗಲಿ ಎಂದು ಹೇಳಿದರು.

  • ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

    ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ- ಎನ್‌ಐಎ ವರದಿಯಲ್ಲಿ ಸ್ಫೋಟಕ ಮಾಹಿತಿ

    ಬೆಂಗಳೂರು: ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ರಾಜ್ಯಾದ್ಯಂತ ಕೋಮುಗಲಭೆ ಸೃಷ್ಟಿಸಲು ಹರ್ಷನ ಹತ್ಯೆ ಮಾಡಲಾಗಿದೆ ಎಂದು ಎನ್‌ಐಎ (ರಾಷ್ಟ್ರೀಯ ತನಿಖಾ ದಳ) ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಶಿವಮೊಗ್ಗದಲ್ಲಿ ಕೋಮುಗಲಭೆ ಎಬ್ಬಿಸುವ ಉದ್ದೇಶದಿಂದ ಹತ್ಯೆ ನಡೆದಿದೆ. ಜನರಿಗೆ ಭಯವುಂಟು ಮಾಡೋದು ಆರೋಪಿಗಳ ಯೋಜನೆಯಾಗಿತ್ತು ಎಂದು ಎಫ್‌ಐಆರ್‌ನ ಸಾರಾಂಶದಲ್ಲಿ ಎನ್‌ಐಎ ಉಲ್ಲೇಖಿಸಿದೆ. ಇದನ್ನೂ ಓದಿ: ಕುರಿದೊಡ್ಡಿಗೆ ನುಗ್ಗಿ 30 ಕುರಿಗಳನ್ನು ಕದ್ದೊಯ್ದ ಖದೀಮರು – ಕುರಿಗಾಯಿ ಕಣ್ಣೀರು

    ಶಿವಮೊಗ್ಗ ಹರ್ಷನ ಹತ್ಯೆ ಪ್ರಕರಣದಲ್ಲಿ 11 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಕೊಲೆಯ ಉದ್ದೇಶ ಸಮಾಜದಲ್ಲಿ ಭಯವನ್ನುಂಟು ಮಾಡೋದಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಮೂಲಕ ಕೋಮುಗಲಭೆ ಎಬ್ಬಿಸುವ ಉದ್ದೇಶ ಆಗಿತ್ತು. ಮಾರಕಾಸ್ತ್ರವನ್ನು ಬಳಸಿ ಜನರಿಗೆ ಭಯ ಉಂಟು ಮಾಡುವ ಉದ್ದೇಶವನ್ನು 11 ಮಂದಿ ಆರೋಪಿಗಳು ಹೊಂದಿದ್ದರು. ಈ ವಿಚಾರ ಕೇಂದ್ರ ಸರ್ಕಾರ ಸೂಚನೆಯ ಮೇರೆಗೆ ಎಫ್‌ಐಆರ್ ದಾಖಲು ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ ತನಿಖೆ ಕೈಗೆತ್ತಿಕೊಂಡಿದೆ. ಇದನ್ನೂ ಓದಿ: 3 ತಿಂಗಳ ನಂತರ ಕಾಳಿಚರಣ್ ಮಹಾರಾಜ್‍ಗೆ ಸಿಕ್ತು ಜಾಮೀನು

  • 20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

    20 ಕಡೆ ದಾಳಿ, ಸಾವಿರಾರು ಜನರ ಹತ್ಯೆ – ಮೋದಿಗೆ ಕೊಲೆ ಬೆದರಿಕೆ

    ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಕೊಲೆ ಬೆದರಿಕೆ ಒಡ್ಡಿ ಇ-ಮೇಲ್‌ವೊಂದನ್ನು ಕಳುಹಿಸಲಾಗಿದೆ. ತನ್ನ ಬಳಿ 20 ಕೆ.ಜಿ. ತೂಕದ ಆರ್‌ಡಿಎಕ್ಸ್ ಇದ್ದು, ಇದರಿಂದ ಸಾವಿರಾರು ಜನರನ್ನು ಕೊಲ್ಲಬಹುದು ಎಂದು ಮೇಲ್‌ನಲ್ಲಿ ಬೆದರಿಕೆ ಸಂದೇಶ ಕಳುಹಿಸಲಾಗಿದೆ.

    ಬೆದರಿಕೆ ಸಂದೇಶದಲ್ಲೇನಿದೆ?
    ನಾನು ದೇಶದಾದ್ಯಂತ 20 ದಾಳಿಗಳನ್ನು ನಡೆಸಲು ಯೋಜಿಸಿದ್ದೇನೆ. ಮೋದಿ ಅವರಿಂದ ನನ್ನ ಜೀವನ ಹಾಳಾಗಿದೆ. ಹೀಗಾಗಿ ಸಾಧ್ಯವಾದಷ್ಟು ಬೇಗ ಅವರನ್ನು ಕೊಲ್ಲುತ್ತೇನೆ. ಇದನ್ನೂ ಓದಿ: ಪರೀಕ್ಷೆಯ ಒತ್ತಡ ನಿಭಾಯಿಸುವುದು ಹೇಗೆ- ವಿದ್ಯಾರ್ಥಿಗಳಿಗೆ ಮೋದಿ ಟಿಪ್ಸ್‌

    ನನ್ನ ಬಳಿ ಇರುವ 20 ಆರ್‌ಡಿಎಕ್ಸ್‌ಗಳನ್ನು ದೇಶದ ಪ್ರಮುಖ ನಗರಗಳಲ್ಲಿ ಸ್ಫೋಟಿಸಲಿದ್ದೇನೆ. ಈ ಕೆಲಸವನ್ನು ಮಾಡಬಲ್ಲ ಜನರೊಂದಿಗೆ ಸಂಪರ್ಕದಲ್ಲಿದ್ದೇನೆ. ಈ ದೇಶಕ್ಕೆ ದೊಡ್ಡ ದುರಂತ ತಂದೊಡ್ಡಲಾಗುವುದು. ನಾನು ಫೆಬ್ರವರಿ 28 ರಂದು ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸಿದ್ದೇನೆ.

    ಸುಮಾರು 2 ಕೋಟಿ ಜನರನ್ನು ಕೊಲ್ಲುತ್ತೇನೆ. ನನ್ನ ಬಾಂಬ್‌ಗಳಿಗೆ ಜನರು ಬಲಿಯಾಗುತ್ತಾರೆ. ನಾನು ಕೆಲವು ಉಗ್ರರನ್ನು ಸಂಪರ್ಕಿಸಿದ್ದೇನೆ. ಅವರು ಸಹ ನನಗೆ ಸಹಾಯ ಮಾಡಲಿದ್ದಾರೆ. ಸುಲಭವಾಗಿ ಬಾಂಬ್‌ಗಳು ನನಗೆ ಸಿಕ್ಕಿರುವುದಕ್ಕೆ ಖುಷಿಯಾಗಿದೆ. ಎಲ್ಲಾ ಕಡೆ ಅದನ್ನು ಸ್ಫೋಟಿಸಲಿದ್ದೇನೆ. ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅನುಮತಿ ನೀಡದಂತೆ ಮೋದಿಗೆ ಸ್ಟಾಲಿನ್ ಮನವಿ

    ನಿಮ್ಮಿಂದ ನನ್ನನ್ನು ತಡೆಯಲು ಸಾಧ್ಯವೇ? ತಡೆಯಲು ಪ್ರಯತ್ನಿಸಿ. ಆದರೆ ದಾಳಿ ಮಾಡುವ ಯೋಜನೆ ರೂಪಿಸಿದ್ದೇನೆ.

    ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮುಂಬೈ ಶಾಖೆಗೆ ಈ ಇ-ಮೇಲ್ ರವಾನೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ತನಿಖೆ ಆರಂಭಿಸಿದೆ. ಮೇಲ್ ಐಡಿ ಯಾರದು, ಬೆದರಿಕೆ ಸಂದೇಶವನ್ನು ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಅಸಂಖ್ಯಾತ ಜನರ ಹೃದಯದಲ್ಲಿ ಅಮರರಾಗಿದ್ದಾರೆ: ಮೋದಿ

  • ಹರ್ಷ ಕೊಲೆ ಪ್ರಕರಣದ ತನಿಖೆಯ ಸತ್ಯಾಸತ್ಯತೆ ನೋಡಿಕೊಂಡು ಮುಂದಿನ ತೀರ್ಮಾನ: ಬೊಮ್ಮಾಯಿ

    ಹರ್ಷ ಕೊಲೆ ಪ್ರಕರಣದ ತನಿಖೆಯ ಸತ್ಯಾಸತ್ಯತೆ ನೋಡಿಕೊಂಡು ಮುಂದಿನ ತೀರ್ಮಾನ: ಬೊಮ್ಮಾಯಿ

    ಬೆಂಗಳೂರು: ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನ ಆಗಿದೆ. ಮೊದಲು ತನಿಖೆ ನಡೆಯಲಿ. ತನಿಖೆಯಲ್ಲಿ ಏನು ಸತ್ಯ ಗೊತ್ತಾಗುತ್ತೆ ಎಂದು ನೋಡಿಕೊಂಡು ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

    ಹರ್ಷ ಕೊಲೆ ಪ್ರಕರಣವನ್ನು ಎನ್‍ಐಎಗೆ ಕೊಡಲು ಒತ್ತಾಯದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಪೊಲೀಸ್ ತನಿಖೆಯಿಂದ ಬರುವ ಮಾಹಿತಿ ಆಧರಿಸಿ ಮುಂದೆ ಯಾವ ಸಂಸ್ಥೆಯಿಂದ ತನಿಖೆ ಮಾಡಿಸಬೇಕು ಎನ್ನುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಶಿವಮೊಗ್ಗ ಶಾಂತಿಯುತ ಆಗಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಬೇಕಿದೆ ಎಂದು ಹೇಳಿದರು.

    ಶಿವಮೊಗ್ಗದಲ್ಲಿ ನಡೆದ ಮೆರವಣಿಗೆಯಲ್ಲಿ 144 ಸೆಕ್ಷನ್ ಉಲ್ಲಂಘನೆ ವಿಚಾರವಾಗಿ ಕಾಂಗ್ರೆಸ್ ಸರ್ಕಾರಿ ಪ್ರಾಯೋಜಕತ್ವದ ಮೆರವಣಿಗೆ ಎಂದು ಆರೋಪಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಅವರು ಹಿಂದೆ ಸರ್ಕಾರಿ ಪ್ರಾಯೋಜಕತ್ವದಲ್ಲಿ ಇಂಥವೆಲ್ಲ ಮಾಡಿದ್ದಾರೆ. ಅವರು ಅವರ ಹಿಂದಿನ ಅನುಭವದಿಂದ ಈ ಆರೋಪ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಮೆಲಾನಿಯಾ ಟ್ರಂಪ್, ಕೇಜ್ರಿವಾಲ್ ಶಾಲೆಯನ್ನು ಮಾತ್ರ ನೋಡಬೇಕೆಂದಿದ್ದರು: ದೆಹಲಿ ಸಿಎಂ

    ಇದೇ ವೇಳೆ ದೆಹಲಿ ಭೇಟಿ ವಿಚಾರ ಅಲ್ಲಗಳೆದ ಅವರು, ಸದ್ಯ ದೆಹಲಿಗೆ ಹೋಗುವ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಶಿವಮೊಗ್ಗ ಪ್ರಕರಣ ಎರಡು ಪೊಲೀಸ್ ಠಾಣೆ ಮೇಲೆ ಕ್ರೈಂ ಆಡಿಟ್‌ಗೆ ಆದೇಶ: ಆರಗ ಜ್ಞಾನೇಂದ್ರ