Tag: NIA

  • ದಾವೂದ್ ಇಬ್ರಾಹಿಂನ ತಲೆಗೆ 25 ಲಕ್ಷ ನಗದನ್ನು ಘೋಷಿಸಿದ ಎನ್‍ಐಎ

    ದಾವೂದ್ ಇಬ್ರಾಹಿಂನ ತಲೆಗೆ 25 ಲಕ್ಷ ನಗದನ್ನು ಘೋಷಿಸಿದ ಎನ್‍ಐಎ

    ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸುಳಿವು ಕೊಟ್ಟವರಿಗೆ 25 ಲಕ್ಷ ರೂ. ನಗದನ್ನು ಬಹುಮಾನವಾಗಿ ನೀಡುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‍ಐಎ) ಘೋಷಿಸಿದೆ.

    ಭೂಗತ ಪಾತಕಿ ದಾವೂದ್ ಹಾಗೂ ಆತನ ಸಹಚರರು ಭಾರತದಲ್ಲಿ ನಕಲಿ ಹಣ ಮಾರಾಟ ಹಾಗೂ ಡ್ರಗ್ಸ್, ಶಸ್ತ್ರಾಸ್ತ್ರಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದಾರೆ. ಇದರ ಜೊತೆಗೆ ಪಾಕ್ ಏಜೆನ್ಸಿಗಳು ಹಾಗೂ ಭಯೋತ್ಪಾದಕ ಸಂಘಟನೆಗಳೊಂದಿಗೆ ಸೇರಿ ಆತ ಹಾಗೂ ಆತನ ಸಹಚರರು ಭಾರತದ ಮೇಲೆ ದಾಳಿಗಳನ್ನು ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಹಿನ್ನೆಲೆಯಲ್ಲಿ ಎನ್‍ಐಎ ಸಂಸ್ಥೆಯಿಂದ ಇಬ್ರಾಹಿಂ, ಇಬ್ರಾಹಿಂನ ಸಹೋದರ ಅನೀಸ್ ಇಬ್ರಾಹಿಂ ಅಲಿಯಾಸ್ ಹಾಜಿ ಅನೀಸ್ ಹಾಗೂ ಆತನ ಸಹಾಯಕರಾದ ಛೋಟಾ ಶಕೀಲ್, ಜಾವೇದ್ ಪಟೇಲ್ ಅಲಿಯಾಸ್ ಜಾವೇದ್ ಚಿಕ್ನಾ, ಇಬ್ರಾಹಿಂ ಮುಷ್ತಾಕ್ ಅಬ್ದುಲ್ ರಜಾಕ್ ಮೆಮನ್ ಅಲಿಯಾಸ್ ಟೈಗರ್ ಮೆಮನ್‍ನ ಸುಳಿವು ನೀಡಿದವರಿಗೆ ಬಹುಮಾನವನ್ನು ಘೋಷಿಸಿದೆ. ಇಬ್ರಾಹಿಂ ತಲೆಗೆ 25 ಲಕ್ಷ, ಛೋಟಾ ಶಕೀಲ್ ಸುಳಿವು ನೀಡಿದವರಿಗೆ 20 ಲಕ್ಷ, ಅನೀಸ್, ಚಿಕ್ನಾ ಹಾಗೂ ಮೆಮನ್ ಸುಳಿವು ನೀಡಿದವರಿಗೆ ತಲಾ 15 ಲಕ್ಷ ನಗದನ್ನು ಸಂಸ್ಥೆ ಘೋಷಿಸಿದೆ. ಇದನ್ನೂ ಓದಿ: ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ 91.50 ರೂ. ಇಳಿಕೆ

    ಪಾಕಿಸ್ತಾನದ ಕರಾಚಿಯಲ್ಲಿ ನೆಲೆಸಿರುವ ಮತ್ತು 1993ರ ಮುಂಬೈ ಸರಣಿ ಸ್ಫೋಟ ಸೇರಿದಂತೆ ಭಾರತದಲ್ಲಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ದಾವೂದ್ ಇಬ್ರಾಹಿಂ ತೊಡಗಿದ್ದ. ಈಗಾಗಲೇ 2003ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಆತನ ತಲೆಗೆ 25 ಮಿಲಿಯನ್ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಭಾರತದ ಮೋಸ್ಟ್ ವಾಂಟೆಡ್ ವ್ಯಕ್ತಿಗಳಲ್ಲಿ ಒಬ್ಬನಾದ ಆತ, ಲಷ್ಕರ್-ಎ-ತೊಯ್ಬಾ (ಎಲ್‍ಇಟಿ) ಮುಖ್ಯಸ್ಥ ಹಫೀಜ್ ಸಯೀದ್, ಜೈಶ್-ಎ-ಮೊಹಮ್ಮದ್ (ಜೆಇಎಂ) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಹಿಜ್ಬುಲ್ ಮುಜಾಹಿದೀನ್ ಸಂಸ್ಥಾಪಕ ಸೈಯದ್ ಸಲಾಹುದ್ದೀನ್ ಮತ್ತು ಆತನ ಆಪ್ತ ಸಹಾಯಕ ಅಬ್ದುಲ್ ರೌಫ್ ಅಸ್ಗರ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಇದನ್ನೂ ಓದಿ: ಗರ್ಭಿಣಿ ಹಸುವಿನ ಮೇಲೆ ರೇಪ್ – ವಿಕೃತ ಕಾಮಿ ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – FIR ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದ ಎನ್ಐಎ

    ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – FIR ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದ ಎನ್ಐಎ

    ಮಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ಕುಮಾರ್‌ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‌ಐಎ ತಂಡ ದೆಹಲಿ ಕಚೇರಿಯಲ್ಲಿ ಎಫ್‌ಐಆರ್‌ ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದೆ.

    ಈಗಾಗಲೇ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಬಂಧಿಸಿದ ಆರೋಪಿಗಳು ಸೇರಿ ನಾಪತ್ತೆಯಾದವರ ಮೇಲೂ ಎನ್‌ಐಎ ತಂಡ ಎಫ್‌ಐಆರ್‌ ದಾಖಲಿಸಿದೆ. ಜೊತೆಗೆ ಈ ಎಫ್‌ಐಆರ್‌ ಪ್ರತಿಯನ್ನು ಕೋರ್ಟ್‌ಗೆ ಸಲ್ಲಿಸಿದ್ದು, ಐಪಿಸಿ 302, 34 ಸೇರಿ ಹಲವು ಕಲಂಗಳ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

    ಪ್ರವೀಣ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎನ್‌ಐಎ ತಂಡ ತನಿಖೆಯನ್ನು ಪ್ರಾರಂಭಿಸಿದ್ದು, ಈಗಾಗಲೇ ಸುಳ್ಯ, ಪುತ್ತೂರಿನಲ್ಲಿ ಬೀಡು ಬಿಟ್ಟಿದೆ. ಅಷ್ಟೇ ಅಲ್ಲದೇ ತನಿಖೆಯನ್ನು ಚುರುಕುಗೊಳಿಸಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗೆ ಶೋಧ ಕಾಯವನ್ನು ಆರಂಭಿಸಿದೆ. ಬೆಳ್ಳಾರೆ ಪೊಲೀಸರಿಂದ ಕೇಸ್ ಫೈಲ್ ಪಡೆದು ತನಿಖೆ ಆರಂಭಿಸಿರುವ ಎನ್‌ಐಎ ತಂಡ ಕುಟುಂಬದವರ ಹೇಳಿಕೆ, ದೂರುದಾರನ ಹೇಳಿಕೆಗಳು ಹಾಗೂ ಪೊಲೀಸರು ಸಂಗ್ರಹಿಸಿದ ಸಿಸಿಟಿವಿಗಳನ್ನು ಪರಿಶೀಲಿಸಿದೆ. ಪ್ರವೀಣ್ ನೆಟ್ಟಾರು ಹತ್ಯೆ ಸಂಬಂಧ ಕೂಲಂಕುಷವಾಗಿ ಮಾಹಿತಿ ಕಲೆ ಹಾಕಿದ್ದು, ಬಂಧಿತ ಆರೋಪಿಗಳನ್ನ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಅಧಿಕೃತ ಆದೇಶಕ್ಕೆ ಮೊದ್ಲೇ NIA ತನಿಖೆ

    ನಿನ್ನೆ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಸುಳ್ಯದ ನಾವೂರ್ ನಿವಾಸಿ ಅಬಿದ್ (22), ಬೆಳ್ಳಾರೆಯ ಗೌರಿಹೊಳೆ ನಿವಾಸಿ ನೌಫಲ್(28) ಬಂಧಿತ ಆರೋಪಿಗಳಾಗಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಈವರೆಗೆ 6 ಆರೋಪಿಗಳನ್ನು ಬಂಧಿಸಲಾಗಿದೆ. ಇದನ್ನೂ ಓದಿ: BJP ಮುಖಂಡ ಪ್ರವೀಣ್ ಹತ್ಯೆ ಕೇಸ್ – ಮತ್ತಿಬ್ಬರು ಅರೆಸ್ಟ್

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್‌ ಕೇಸ್‌ – ಅಪರಾಧ ಎಸಗಿದವರಿಗೆ ಕಠಿಣ ಕ್ರಮ: ಶಾ ಭರವಸೆ

    ಪ್ರವೀಣ್‌ ಕೇಸ್‌ – ಅಪರಾಧ ಎಸಗಿದವರಿಗೆ ಕಠಿಣ ಕ್ರಮ: ಶಾ ಭರವಸೆ

    ನವದೆಹಲಿ: ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

    ಇತ್ತೀಚೆಗೆ ಹತ್ಯೆಗೊಳಗಾದ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರು ಅವರ ಪ್ರಕರಣದ ತನಿಖೆಯನ್ನು ಎನ್‌ಐಗೆ ಒಪ್ಪಿಸಿರುವುದಕ್ಕೆ ಅವರು ಧನ್ಯವಾದ ಸಮರ್ಪಿಸಿದರು. ಅಲ್ಲದೆ ಈ ಪ್ರಕರಣದ ತನಿಖೆಯಲ್ಲಿ ವಿಶೇಷ ಕಾಳಜಿ ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುವಂತೆ ನಳಿನ್ ಕುಮಾರ್ ಕಟೀಲ್ ಅವರು ವಿನಂತಿಸಿದರು. ಇದನ್ನೂ ಓದಿ: ಪ್ರವೀಣ್ ಕೇಸ್: NIA ವಿಚಾರಣೆ ಎದುರಿಸಿ ಬಂದ PFI ಕಾರ್ಯದರ್ಶಿಗೆ ಅದ್ಧೂರಿ ಸ್ವಾಗತ

    ಈ ಸಂದರ್ಭದಲ್ಲಿ ಗೃಹ ಸಚಿವರು ರಾಜ್ಯದಲ್ಲಿ ಎನ್ಐಗೆ ವಹಿಸಿರುವ ಪ್ರಕರಣಗಳ ತನಿಖೆಯನ್ನು ಶೀಘ್ರವಾಗಿ ಕೈಗೊಂಡು ಅಪರಾಧ ಕೃತ್ಯ ಎಸಗುವವರಿಗೆ ಕಠಿಣ ಕ್ರಮಗಳನ್ನು ನೀಡಲಾಗುವುದು ಮತ್ತು ಎನ್‌ಐಐ ಅಧಿಕಾರಿಗಳಿಗೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • NIA ಕಚೇರಿ ವ್ಯಾಪ್ತಿ ಬೆಂಗಳೂರಿಗೆ ವಿಸ್ತರಿಸಲು ಶೋಭಾ ಕರಂದ್ಲಾಜೆ ಮನವಿ

    NIA ಕಚೇರಿ ವ್ಯಾಪ್ತಿ ಬೆಂಗಳೂರಿಗೆ ವಿಸ್ತರಿಸಲು ಶೋಭಾ ಕರಂದ್ಲಾಜೆ ಮನವಿ

    ನವದೆಹಲಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಿದಕ್ಕಾಗಿ ಕೇಂದ್ರ ಕೃಷಿ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಅವರು ಗೃಹ ಸಚಿವ ಅಮಿತ್ ಶಾಗೆ ಅಭಿನಂದನೆ ಸಲ್ಲಿಸಿದ್ದಾರೆ.

    ಇಂದು ದೆಹಲಿಯಲ್ಲಿ ಭೇಟಿ ಮಾಡಿದ ಅವರು ಹತ್ಯೆಯ ಬಗ್ಗೆ ತನಿಖೆ ತೀವ್ರಗೊಳ್ಳಬೇಕು ಎಂದು ಮನವಿ ಮಾಡಿದರು. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹೆಚ್ಚುತ್ತಿದೆ. ಎಲ್ಲ ಹತ್ಯೆಗಳು ಒಂದೇ ಮಾದರಿಯಲ್ಲಿದೆ. ನೆರೆಯ ಕೇರಳದಿಂದಲೂ ಹಂತಕರು ಬರುತ್ತಿರುವ ಅನುಮಾನಗಳಿವೆ. ಈ ಹಿನ್ನಲೆಯಲ್ಲಿ ತನಿಖೆ ತೀವ್ರಗೊಳ್ಳಬೇಕು. ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವ ಮೂಲಕ ಅಪರಾಧಿಗಳನ್ನು ಶೀಘ್ರದಲ್ಲಿ ಪತ್ತೆ ಹೆಚ್ಚಬೇಕು ಎಂದು ಅಮಿತ್ ಶಾಗೆ ಮನವಿ ಮಾಡಿದರು.

    ಇನ್ನು ಇದೇ ವೇಳೆ ರಾಜ್ಯದಲ್ಲಿ ವಿದ್ವಂಸಕ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆ ಎನ್‍ಐಎ ಕಚೇರಿ ವ್ಯಾಪ್ತಿಯನ್ನು ಬೆಂಗಳೂರಿಗೆ ವಿಸ್ತರಿಸುವಂತೆ ಮನವಿ ಮಾಡಿದರು. ಎನ್‍ಐಎಯಿಂದ ರಾಜ್ಯದಲ್ಲಿ ಅಪರಾಧ ಪ್ರಕರಣಗಳನ್ನು ನಿಯಂತ್ರಣಕ್ಕೆ ಬರಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ – ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್

    ಅಮಿತ್ ಶಾ ಭೇಟಿಗೂ ಮುನ್ನ ಶೋಭಾ ಕರಂದ್ಲಾಜೆ ಅವರು ಅಮಿತ್ ಶಾಗೆ ಪತ್ರ ಬರೆದು ಪ್ರವೀಣ್ ಹತ್ಯೆಯನ್ನು ಎನ್‍ಐಎ ತನಿಖೆಗೆ ವಹಿಸಬೇಕು ಎಂದು ಮನವಿ ಮಾಡಿದ್ದರು. ಇದಾದ ಬಳಿಕ ರಾಜ್ಯ ಸರ್ಕಾರವೂ ಎನ್‍ಐಎಗೆ ಪ್ರಕರಣವನ್ನು ಹಸ್ತಾಂತರ ಮಾಡಿತ್ತು. ಈ ಮನವಿಗಳ ಹಿನ್ನಲೆ ಸದ್ಯ ಪ್ರಕರಣ ಎನ್‍ಐಎಗೆ ವರ್ಗಾವಣೆಯಾಗಿದೆ. ಇದನ್ನೂ ಓದಿ: ಕೋವಿಡ್-19 ಲಸಿಕಾಕರಣದ ಬಳಿಕ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ: ಅಮಿತ್ ಶಾ

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಅಧಿಕೃತ ಆದೇಶಕ್ಕೆ ಮೊದ್ಲೇ NIA ತನಿಖೆ

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಅಧಿಕೃತ ಆದೇಶಕ್ಕೆ ಮೊದ್ಲೇ NIA ತನಿಖೆ

    ಮಂಗಳೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಗಳ ತನಿಖೆಯನ್ನು ಹಸ್ತಾಂತರಿಸುವ ಮೊದಲೇ ಎನ್‍ಐಎಗೆ ತನಿಖೆಯನ್ನು ಪ್ರಾರಂಭಿಸಿದ್ದು, ಕೆಲವು ಮಾಹಿತಿಗಳನ್ನು ಸಂಗ್ರಹಿಸಿದೆ.

    ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎನ್‍ಐಎ ಟೀಂ ಬೆಳ್ಳಾರೆಗೆ ಭೇಟಿ ನೀಡಿ ಸಹ ಕೆಲ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ಆದರೆ, ಇನ್ನೂ ಅಧಿಕೃತವಾಗಿ ಪ್ರಕರಣ ಎನ್‍ಐಎ ವರ್ಗವಾಗಿಲ್ಲ. ಸದ್ಯದಲ್ಲೇ ಹಸ್ತಾಂತರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

    ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ಚುರುಕಾಗಿದ್ದು, ಹೊಸ ಹೊಸ ವಿಚಾರಗಳು ಬಯಲಾಗುತ್ತಿವೆ. ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ಬೆಂಗಳೂರಲ್ಲಿ ಇಬ್ಬರನ್ನು, ಕೇರಳದಲ್ಲಿ ಒಬ್ಬರನ್ನು ಪೊಲೀಸರು ಹೆಡೆ ಮುರಿಕಟ್ಟಿದ್ದಾರೆ. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಸುಳ್ಯ ಮೂಲದ ಅಲ್ತಾಫ್ ಮತ್ತು ಇರ್ಫಾನ್‍ನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇವರು ಪ್ರವೀಣ್ ಹತ್ಯೆಯ ದಿನ ಬೆಳ್ಳಾರೆಯಲ್ಲಿಯೇ ಇದ್ದರು ಎಂಬುದು ತಿಳಿದುಬಂದಿದೆ. ಪ್ರವೀಣ್ ಕೊಲೆಯಲ್ಲಿ ಇವರ ಪಾತ್ರ ಏನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಝಾಕೀರ್ ವಿರುದ್ಧ ಕೊಲೆಗಡುಕರಿಗೆ 2 ದಿನ ಆಶ್ರಯ ನೀಡಿ, ಬಿರಿಯಾನಿ ಪೂರೈಸಿದ್ದ ಆರೋಪವಿದೆ.

    ಇನ್ನೂ ಫಾಝಿಲ್ ಹತ್ಯೆ ಪ್ರಕರಣದಲ್ಲಿ ಹಂತಕರ ಸುಳಿವು ಪೊಲೀಸರಿಗೆ ಲಭ್ಯವಾಗಿದೆ.  ಮಂಗಳೂರಲ್ಲಿ ಡಿಜಿಪಿ ಪ್ರವೀಣ್ ಸೂದ್ ಉನ್ನತ ಮಟ್ಟದ ಸಭೆ ನಡೆಸಿ, ಹಲವು ಸೂಚನೆ ನೀಡಿದ್ದಾರೆ. ಆರೋಪಿಗಳು ಯಾವುದೇ ಧರ್ಮೀಯರಾಗಿದ್ರೂ ಬಿಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಸುರತ್ಕಲ್‌ನಲ್ಲಿ ಬೀಚ್‌ನಲ್ಲಿ ಭಿನ್ನ ಕೋಮಿನ ಯುವಕನ ಜೊತೆ ಬಂದ ಯುವತಿ ಮೇಲೆ ರೇಪ್‌

    ಸುಹಾಸ್, ಮೋಹನ್, ಗಿರಿ ಮತ್ತು ಅಮಿತ್ ಎಂಬ ಪಾತಕಿಗಳು ಫಾಝಿಲ್ ಕೊಲೆಯಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗಿದ್ದು, ಯಾವುದೇ ಕ್ಷಣದಲ್ಲಿ ಈ ನಾಲ್ವರನ್ನು ಬಂಧಿಸುವ ಸಂಭವ ಇದೆ. ಈ ಹಿಂದೆ ಹಲವು ಕೃತ್ಯಗಳಲ್ಲಿ ಪಾಲ್ಗೊಂಡಿದ್ದ ಸುಹಾಸ್ ಇದರಲ್ಲೂ ಪ್ರಮುಖ ಆರೋಪಿ ಎನ್ನಲಾಗಿದೆ. ಅಮಿತ್ ಕಾರು ಚಾಲಕ ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಇದನ್ನೂ ಓದಿ: ಕಸದ ಜೊತೆ ಡಂಪಿಂಗ್ ಯಾರ್ಡ್‍ಗೆ ಡಂಪ್ ಆದ ಗಾರ್ಬೇಜ್ ಆಟೋ – ಚಾಲಕ ಅಪಾಯದಿಂದ ಪಾರು

    Live Tv
    [brid partner=56869869 player=32851 video=960834 autoplay=true]

  • ISIS ನಂಟು – ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ

    ISIS ನಂಟು – ಭಟ್ಕಳದಲ್ಲಿ ಶಂಕಿತ ಉಗ್ರ ವಶಕ್ಕೆ

    ಕಾರವಾರ: ಐಎಸ್‍ಐಎಸ್ ನಂಟು ಹೊಂದಿರುವ ಶಂಕೆ ಹಿನ್ನೆಲೆ ಎನ್ಐಎ ತಂಡದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಓರ್ವನನ್ನು ವಶಕ್ಕೆ ಪಡೆಯಲಾಗಿದೆ.

    ಆರೋಪಿ ಅಬ್ದುಲ್ ಮಸ್ತಿರ್‌ (30) ಎಂಬಾತನನ್ನು ಎನ್ಐಎ ತಂಡ ಇಂದು ವಶಕ್ಕೆ ಪಡೆದಿದೆ. ಐಎಸ್‍ಐಎಸ್ ಬರಹಗಳನ್ನು ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಕಾರಣಕ್ಕಾಗಿ ಅಬ್ದುಲ್ ಮಸ್ತಿರನನ್ನು ಭಟ್ಕಳ ನಗರದ ಅರ್ಬನ್ ಬ್ಯಾಂಕ್ ಬಳಿ ಇರುವ ಆತನ ಮನೆಯಿಂದ ಎನ್‍ಐಎ ತಂಡ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಆರೋಪಿಗಳೊಂದಿಗೆ ಅಜಿತ್‍ಗೆ ಸಂಪರ್ಕವಿದೆ – ಆದಷ್ಟು ಬೇಗ ಇತರ ಆರೋಪಿಗಳನ್ನು ಬಂಧಿಸುತ್ತೇವೆ: ಶಶಿಕುಮಾರ್

    ಪ್ರಾಥಮಿಕ ಮಾಹಿತಿಯಂತೆ ಈತ ಭಟ್ಕಳ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಐಎಸ್‍ಐಎಸ್‍ನ ಬರಹಗಳನ್ನು ಭಾರತೀಯ ಭಾಷೆಗಳಿಗೆ ಈತ ಭಾಷಾಂತರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದ ಎಂಬ ಆರೋಪದಡಿ ಈತನನ್ನು ವಶಕ್ಕೆ ಪಡೆಯಲಾಗಿದ್ದು, ಭಟ್ಕಳದಲ್ಲೇ ತನಿಖೆ ಕೈಗೊಳ್ಳಲಾಗಿದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಮನೆಗೆ ಶೋಭಾ ಕರಂದ್ಲಾಜೆ ಭೇಟಿ- ಕುಟುಂಬಸ್ಥರಿಗೆ ಸಾಂತ್ವನ, 5 ಲಕ್ಷ ಪರಿಹಾರ

    Live Tv
    [brid partner=56869869 player=32851 video=960834 autoplay=true]

  • ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು ಈಗ ಅವರು ಭೂಮಿ ಮೇಲೆ ಇದ್ದಾರಾ ಗೊತ್ತಿಲ್ಲ: ಪೋಸ್ಟರ್ ವೈರಲ್

    ಮಂಗಳೂರು: ನಮ್ಮೂರಿನಲ್ಲಿ ಡಿ.ವಿ ಸದಾನಂದ ಗೌಡ ಅಂತ ಒಬ್ರು ಇದ್ರು. ಈಗ ಅವರು ಭೂಮಿ ಮೇಲೆ ಇದ್ದಾರಾ ಯಾರಿಗಾದ್ರು ಗೊತ್ತಾ? ಯಾಕಂದ್ರೆ ಅವರ ಊರಿನಲ್ಲೇ ಒಂದು ಕೊಲೆಯಾಗಿದೆ. ಈ ಬಗ್ಗೆ ತಿಳಿಸಬೇಕಿತ್ತು ಅವರ ಫೋನ್ ನಂಬರ್ ಯಾರಲ್ಲಾದರೂ ಇದ್ರೆ ಕೊಡಿ, ನಾನಾದರು ಫೋನ್ ಮಾಡಿ ಹೇಳುತ್ತೇನೆ ಎನ್ನುವ ಆಕ್ರೋಶದ ಪೋಸ್ಟರ್‌ಗಳು ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಮಾಜಿ ಸಿಎಂ ಸದಾನಂದ ಗೌಡರ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    ಪೋಸ್ಟರ್‌ನಲ್ಲಿ ಏನಿದೆ?:
    ಅವರ ಬಗ್ಗೆ ನಿಮಗೆ ಈಗ ಮರೆತಿರಬಹುದು. ಅವರು ಒಂದು ಕಾಲದ ಮಹಾನ್ ಹೋರಾಟಗಾರ, ಪುತ್ತೂರಿನಲ್ಲಿ ತನ್ನ ಜಾಥಾದ ಮೂಲಕವೇ ಬಿಜೆಪಿ ಪಕ್ಷದಲ್ಲಿ ಮುಂಚೂಣಿಯಾಗಿ ಕಾಣಿಸಿಕೊಂಡ ವ್ಯಕ್ತಿ. ಹುಟ್ಟೂರು ಸುಳ್ಯದ ಮಂಡೆಕೋಲು ಗ್ರಾಮಸ್ಥ, ಮಡಿಕೇರಿಯ ಕಡೆಯಿಂದ ಮದುವೆಯಾದ ಗೃಹಸ್ಥ. ಇದನ್ನೂ ಓದಿ: ಆರಗ ಮನೆಗೆ ನುಗ್ಗಿದ ABVP ಕಾರ್ಯಕರ್ತರಿಗೆ ಲಾಠಿ ಏಟು

    ಗೊತ್ತಾಗಿಲ್ಲಾ, ಪರ್ವಾಗಿಲ್ಲ. ಇನ್ನೊಂದು ಸುಳಿವು ನಿಮಗೆ ಕೊಡುತ್ತೇವೆ. ಈ ಸುಳಿವು ಮಾತ್ರ ಖಂಡಿತಾ ಆತ ಯಾರೆಂದು ನಿಮಗೆ ಮಾತ್ರವಲ್ಲ, ಇಡೀ ರಾಜ್ಯಕ್ಕೆ, ಜೊತೆಗೇ ದೇಶಕ್ಕೆ ಅವರ ವ್ಯಕ್ತಿತ್ವವನ್ನು ಜನರ ಮುಂದು ಇಟ್ಟು, ಬಿಡಿಸಿ, ಅವರ ವ್ಯಕ್ತಿತ್ವದ ಘನತೆಯನ್ನು ತೆರೆದುಬಿಡುತ್ತದೆ ಎಂದು ಬರೆದಿರುವ ಪೋಸ್ಟರ್‌ಗಳು ಕರಾವಳಿಯಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಚುನಾವಣೆ ವರ್ಷ ನೆತ್ತರಧಾರೆ ಹರಿದಷ್ಟೂ ಭರ್ಜರಿ ಮತಧಾರೆ: ಎಚ್‍ಡಿಕೆ

    ಪ್ರವೀಣ್ ನೆಟ್ಟಾರು ಹತ್ಯೆಯ ಬಳಿಕ ಅವರ ಮನೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಸಚಿವರು, ಶಾಸಕರು ಹಾಗೂ ಕೆಲ ಸಂಘಟನೆಯ ಮುಖ್ಯಸ್ಥರು, ಕಾರ್ಯಕರ್ತರು ಭೇಟಿ ನೀಡಿ ಸಾಂತ್ವನ ಹೇಳಿದ್ದು, ಪರಿಹಾರವನ್ನೂ ನೀಡಿದ್ದಾರೆ. ಆದರೆ ಬೆಳ್ಳಾರೆಯಿಂದ ಕೆಲವೇ ಕಿಲೋ ಮೀಟರ್‌ಗಳ ಅಂತರದ ಊರಿನವರಾದ ಸುಳ್ಯ ತಾಲೂಕಿನ, ಮಂಡೆಕೋಲು ಗ್ರಾಮದ ದೇವರಗುಂಡದ ಸದಾನಂದ ಗೌಡರು ಬಾರದೇ ಇರುವುದು ಮತ ನೀಡಿ ಗೆಲ್ಲಿಸಿದ್ದ ಸ್ಥಳೀಯ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.

    ಈಗಾಗಲೇ ಕರಾವಳಿಯಲ್ಲಿ ಕ್ಷೇತ್ರದ ಶಾಸಕರಾದ ಎಸ್. ಅಂಗಾರ ಮತ್ತು ಸಂಸದ, ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ವಿರುದ್ಧ ತೀವ್ರ ಆಕ್ರೋಶದ ಮಾತುಗಳು ಕೇಳಿಬರುತ್ತಿದೆ. ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆಯ ಬಳಿಕ ಬೆಳ್ಳಾರೆಗೆ ಅಂತಿಮ ದರ್ಶನಕ್ಕೆ ತೆರಳಿದ ನಳಿನ್ ಕುಮಾರ್ ಕಟೀಲ್ ಸಚಿವರಾದ ಸುನಿಲ್ ಕುಮಾರ್, ಎಸ್. ಅಂಗಾರ ಸೇರಿದಂತೆ ಇತರ ಸಚಿವರಿಗೆ ಘೇರಾವ್, ಕಾರನ್ನೇ ಪಲ್ಟಿ ಹಾಕುವಷ್ಟರ ಮಟ್ಟಿಗೆ ಕಾರ್ಯಕರ್ತರು ಕುಪಿತಗೊಂಡಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ NIA ಹೆಗಲಿಗೆ

    ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್‌ NIA ಹೆಗಲಿಗೆ

    ಬೆಂಗಳೂರು: ಬೆಳ್ಳಾರೆಯ ಪ್ರವೀಣ್‌ ನೆಟ್ಟಾರು ಹತ್ಯೆಯ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ(ಎನ್‌ಐಎ) ವಹಿಸಲಾಗಿದೆ.

    ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬೊಮ್ಮಾಯಿ, ಪೊಲೀಸ್‌ ಮಹಾನಿರ್ದೇಶಕರ ಜೊತೆ ಚರ್ಚಿಸಿದ್ದೇನೆ. ಇದು ಅಂತರಾಜ್ಯ ಪ್ರಕರಣವಾದ ಕಾರಣ ಎನ್‌ಐಎಗೆ ವಹಿಸಲಾಗುವುದು ಎಂದು ತಿಳಿಸಿದರು.

    ಕರ್ನಾಟಕ ಮತ್ತು ಕೇರಳದ ಗಡಿಯಲ್ಲಿ ಸಿಸಿಟಿವಿಯನ್ನು ಅಳವಡಿಸಬೇಕು. ಈ ಸಂಬಂಧ ಕೇಂದ್ರಕ್ಕೆ ಪತ್ರ ಬರೆಯಲು ಗೃಹ ಇಲಾಖೆಗೆ ಸೂಚನೆ ಕೊಡುತ್ತೇನೆ ಎಂದು ಹೇಳಿದರು.

    ಸುರತ್ಕಲ್ ಫಾಝಿಲ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಬಂಧನಕ್ಕೆ ತಂಡಗಳನ್ನು ರಚಿಸಲಾಗಿದೆ. ಮಂಗಳೂರಲ್ಲಿ ಹೆಚ್ಚುವರಿ ಪೊಲೀಸ್ ನಿಯೋಜನೆ ಮಾಡಲಾಗಿದೆ ಎಂದರು.

    ದೇಶದ ಭದ್ರತೆಗೆ ಧಕ್ಕೆ ತರುವ ಭಯೋತ್ಪಾದನಾ ಇತ್ಯಾದಿ ರೀತಿ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗುತ್ತದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಎನ್‌ಐಎಗೆ ಈ ಹಿಂದೆ ಶಿವಮೊಗ್ಗ ಹರ್ಷ ಕೊಲೆಯ ಪ್ರಕರಣವನ್ನು ವಹಿಸಲಾಗಿದ್ದು ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ ತನಿಖೆ ಚುರುಕು

    ಹರ್ಷ ಕೊಲೆ ಪ್ರಕರಣಕ್ಕೆ ತಿರುವು – ಉಗ್ರ ಸಂಘಟನೆಯೊಂದರ ಕೈವಾಡ: ಎನ್‍ಐಎ ತನಿಖೆ ಚುರುಕು

    ಬೆಂಗಳೂರು: ಕೆಲ ತಿಂಗಳ ಹಿಂದೆ ಶಿವಮೊಗ್ಗದಲ್ಲಿ ನಡೆದ ಹಿಂದೂ ಕಾರ್ಯಕರ್ತ ಹರ್ಷ ಕೊಲೆ ರಾಜ್ಯವನ್ನು ದಂಗಾಗಿಸಿತ್ತು. ಇದೀಗ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.

    ಹರ್ಷನ ಕೊಲೆ ಕೇವಲ ರಸ್ತೆ ಜಗಳ, ವೈಯಕ್ತಿಕ ದ್ವೇಷದಿಂದಾಗಿ ಆಗಿದ್ದಲ್ಲ. ಬದಲಿಗೆ ಉಗ್ರ ಸಂಘಟನೆಯೊಂದರ ಕೈವಾಡ ಇರುವುದಾಗಿ  (ರಾಷ್ಟ್ರೀಯ ತನಿಖಾ ದಳ) ಎನ್‍ಐಎ ತನಿಖೆ ವೇಳೆ ತಿಳಿದುಬಂದಿದೆ. ಹರ್ಷ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‍ಐಎ ಆರೋಪಿಗಳ ಮನೆ ಮೇಲೆ ದಾಳಿ ನಡೆಸಿದಾಗ ಕೆಲವೊಂದು ಎಲೆಕ್ಟ್ರಾನಿಕ್ ವಸ್ತುಗಳಿಂದ ತಾಂತ್ರಿಕ ಸಾಕ್ಷ್ಯ ಲಭ್ಯವಾಗಿದೆ. ಆರೋಪಿಗಳ ಹೇಳಿಕೆ ಮತ್ತು ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ಶೀಘ್ರದಲ್ಲೇ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಲು ಎನ್‍ಇಎ ಸಿದ್ಧತೆ ನಡೆಸಿದೆ. ದೋಷಾರೋಪ ಪಟ್ಟಿಯಲ್ಲಿ ಹರ್ಷನ ಹತ್ಯೆಗೆ ಪ್ರಚೋದನೆ ನೀಡಿದ ಉಗ್ರ ಸಂಘಟನೆಯ ಹೆಸರನ್ನೂ ಉಲ್ಲೇಖಿಸಲಿದೆ ಎಂದು ಮೂಲಗಳು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ – ಶಾಲಾ, ಕಾಲೇಜುಗಳಿಗೆ ರಜೆ

    ಹರ್ಷ ಕೊಲೆ:
    ಫೆಬ್ರವರಿ 20ರಂದು ರಾತ್ರಿ ಕ್ಯಾಂಟೀನ್ ಬಳಿ ಟೀ ಕುಡಿಯುತ್ತಾ ನಿಂತಿದ್ದ ವೇಳೆ ಕಾರಿನಲ್ಲಿ ಬಂದ ಯುವಕರ ಗುಂಪು ಏಕಾಏಕಿ ಹರ್ಷನ ಮೇಲೆ ದಾಳಿ ನಡೆಸಿತ್ತು. ನಂತರ ದಾಳಿ ನಡೆಸಿದ ತಂಡ ಸ್ಥಳದಿಂದ ಪರಾರಿಯಾಗಿತ್ತು. ಈ ವೇಳೆ ದಾಳಿಗೆ ಒಳಗಾದ ಹರ್ಷ ಸ್ಥಳದಲ್ಲೇ ಕುಸಿದು ಬಿದ್ದಿದ್ದ. ಕೂಡಲೇ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಹರ್ಷ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಬಳಿಕ ಹತ್ಯೆಗೆ ಸಂಬಂಧಿಸಿದಂತೆ 11 ಮಂದಿ ಆರೋಪಿಗಳು ಜೈಲಿನಲ್ಲಿದ್ದಾರೆ. ಈ ನಡುವೆ ಪ್ರಕರಣವನ್ನು ಸರ್ಕಾರ ಎನ್‍ಐಎಗೆ ತನಿಖೆಗೆ ವರ್ಗಾಹಿಸಿತ್ತು. ಎನ್‍ಐಎ ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಈವರೆಗೆ ಒಟ್ಟು 450 ಹೆಚ್ಚು ಮಂದಿಯನ್ನು ಎನ್‍ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ಹತ್ಯೆ ಕೇಸ್ – ತಪ್ಪು ಮಾಹಿತಿಯಿಂದ ನಡೀತಾ ಕೊಲೆ?

    Live Tv
    [brid partner=56869869 player=32851 video=960834 autoplay=true]

  • ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಹರ್ಷ ಕೊಲೆ ಪ್ರಕರಣ – ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆ 13 ಕಡೆ ಎನ್‌ಐಎ ಅಧಿಕಾರಿಗಳ ದಾಳಿ

    ಶಿವಮೊಗ್ಗ: ಭಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಜಿಲ್ಲೆ ಹಲವೆಡೆ ಕ್ಷಿಪ್ರ ದಾಳಿ ನಡೆಸಿದ್ದಾರೆ.

    ಶಿವಮೊಗ್ಗಕ್ಕೆ ಎನ್‌ಐಎ ಅಧಿಕಾರಿಗಳು ನಿನ್ನೆ ರಾತ್ರಿ ಬಂದಿಳಿದಿದ್ದರು. ನಾಲ್ಕು ರಾಜ್ಯಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ತಂಡ ಜಿಲ್ಲೆಗೆ ಆಗಮಿಸಿದೆ. ಜಿಲ್ಲೆಯ ಅಧಿಕಾರಿಗಳನ್ನೂ ಸೇರಿ ಒಟ್ಟು 90 ಅಧಿಕಾರಿಗಳಿಂದ ದಾಳಿ ನಡೆದಿದೆ. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಟೋಲ್ ಶುಲ್ಕ ಹೆಚ್ಚಳ ವಾಪಸ್

    ಇಂದು ಬೆಳಗ್ಗೆ ಐದು ಗಂಟೆಗೆ ದಾಳಿ ಆರಂಭವಾಯಿತು. ಶಿವಮೊಗ್ಗ ಜಿಲ್ಲೆಯಲ್ಲಿ 13 ಕಡೆ ದಾಳಿ ನಡೆಸಿ ವಿಚಾರಣೆ ಮಾಡಲಾಯಿತು. ಬೆಳಗ್ಗೆ 10 ಗಂಟೆಯೊಳಗೆ ವಿಚಾರಣೆ ಮುಗಿಸಿ ವಾಪಸ್ ಆಗಿದ್ದಾರೆ. ಹರ್ಷ ಕೊಲೆ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಆರೋಪಿಗಳು ಹಾಗೂ ಅವರ ಸಂಬಂಧಿಕರ ವಿಚಾರಣೆ ನಡೆಸಿದ್ದಾರೆ.

    ವಿಚಾರಣೆ ವೇಳೆ ಅಧಿಕಾರಿಗಳು ಮಹತ್ವದ ಮಾಹಿತಿ ಕಲೆ ಹಾಕಿದ್ದಾರೆ. ಇದುವರೆಗೆ ಒಟ್ಟು 450 ಮಂದಿಯನ್ನು ಎನ್‌ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ನನಗೆ ಸಿಎಂ ಆಗೋ ಎಲ್ಲಾ ಅರ್ಹತೆಯಿದೆ: ಉಮೇಶ್ ಕತ್ತಿ

    Live Tv