Tag: NIA

  • ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    ನವದೆಹಲಿ: ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ(NIA) ಸೋಷಿಯಲ್‌ ಡೆಮಾಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ(SDPI) ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿದೆ.

    ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ. ಎನ್‌ಐಐ ಇತಿಹಾಸದಲ್ಲಿ ಅತಿ ದೊಡ್ಡ ದಾಳಿ ಇದಾಗಿದೆ. ಎಂದು ವರದಿಯಾಗಿದೆ.

    ದೇಶದ ಹಲವು ಭಾಗಗಗಳಲ್ಲಿ ಎಸ್‌ಡಿಪಿಐ, ಪಿಎಫ್‌ಐ ರಾಜ್ಯ ಮತ್ತು ಜಿಲ್ಲಾ ಮಟ್ಟದ ನಾಯಕರ ಮನೆ ಮೇಲೆ ದಾಳಿ ನಡೆದಿದೆ. ಇದನ್ನೂ ಓದಿ: ಮಂಗಳೂರಿನ PFI, SDPI ಕಚೇರಿ ಮೇಲೆ NIA ದಾಳಿ

    ದಾಳಿ ಯಾಕೆ?
    ಭಯೋತ್ಪಾದನೆಗೆ ಧನಸಹಾಯ, ನಿಷೇಧಿತ ಸಂಸ್ಥೆಗಳ ಜೊತೆ ಸಂಪರ್ಕ, ದೇಶದಲ್ಲಿ ಗಲಭೆ ನಡೆಸಲು ಪ್ರಚೋದನೆ, ಮೂಲಭೂತವಾದಿ ವ್ಯಕ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿ ಆಶ್ರಯ ಇತ್ಯಾದಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‌ಐಎ ದೇಶಾದ್ಯಂತ ದಾಳಿ ನಡೆಸಿದೆ.

    ಎಲ್ಲೆಲ್ಲಿ ದಾಳಿ?
    ಕೇರಳದ ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ ಮನೆ ಸೇರಿದಂತೆ ಪಿಎಫ್‌ಐ ರಾಜ್ಯ, ಜಿಲ್ಲಾ ಮಟ್ಟದ ನಾಯಕರ ಮನೆ ಮತ್ತು ಪಿಎಫ್‌ಐ ಕಚೇರಿ ಮೇಲೆ ದಾಳಿ ನಡೆದಿದೆ.

    ತಮಿಳುನಾಡಿನ ಕೊಯಮತ್ತೂರು, ಕಡಲೂರು, ರಾಮನಾಡ್, ದಿಂಡುಗಲ್, ತೇಣಿ ಮತ್ತು ತೆಂಕಾಸಿ ಸೇರಿದಂತೆ ಹಲವು ಸ್ಥಳಗಳಲ್ಲಿ ಪಿಎಫ್‌ಐ ಪದಾಧಿಕಾರಿಗಳ ಮನೆಗಳನ್ನು ಎನ್‌ಐಎ ಶೋಧಿಸುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ PFI, SDPI ಕಚೇರಿ ಮೇಲೆ NIA ದಾಳಿ

    ಮಂಗಳೂರಿನ PFI, SDPI ಕಚೇರಿ ಮೇಲೆ NIA ದಾಳಿ

    ಮಂಗಳೂರು: ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಮತ್ತು ಸೋಷಿಯಲ್‌ ಡೆಮಾಕ್ರೆಟಿಕ್‌ ಪಾರ್ಟಿ ಆಫ್‌ ಇಂಡಿಯಾ(SDPI) ಕಚೇರಿ ಮತ್ತು ನಾಯಕರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಿದೆ.

    ಎಂಟು ಕಡೆಗಳಲ್ಲಿ ಬೆಳಗ್ಗಿನ‌ ಜಾವ ಸುಮಾರು 3:30ರ ವೇಳೆಗೆ ದಾಳಿ ನಡೆದಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಇದನ್ನೂ ಓದಿ: ಇರಾನ್‍ ಹಿಜಬ್ ಹೋರಾಟ – ಪೊಲೀಸರ ಗುಂಡಿಗೆ 8 ಮಂದಿ ಬಲಿ

    ಎನ್‌ಐಎ ದಾಳಿ ಖಂಡಿಸಿ ಪಿಎಫ್‌ಐ ಕಾರ್ಯಕರ್ತರಿಂದ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ನೆಲ್ಲಿಕಾಯಿ ರಸ್ತೆಯನ್ನು ಪೊಲೀಸರು ಬಂದ್‌ ಮಾಡಿದ್ದಾರೆ. ಅರೆಮೀಸಲು ಪಡೆಯಿಂದ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.

    ಸೆ.8 ರಂದು ಎನ್‌ಐಎ ಬಿಹಾರದ ಪ್ರಕರಣವೊಂದರ ಸಲುವಾಗಿ ಎಸ್‌ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಜ್‌ ಪರಂಗಿಪೇಟೆ ಅವರ ಬಿ.ಸಿ.ರೋಡ್‌ ಬಳಿ ಇರುವ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಆಂಧ್ರ, ತೆಲಂಗಾಣದ 23 ಸ್ಥಳಗಳಲ್ಲಿ NIA ರೇಡ್ – PFI ಸದಸ್ಯರ ವಿಚಾರಣೆ

    ಆಂಧ್ರ, ತೆಲಂಗಾಣದ 23 ಸ್ಥಳಗಳಲ್ಲಿ NIA ರೇಡ್ – PFI ಸದಸ್ಯರ ವಿಚಾರಣೆ

    ಅಮರಾವತಿ: ರಾಷ್ಟ್ರೀಯ ತನಿಖಾ ದಳ(NIA) ಅಧಿಕಾರಿಗಳು ಭಾನುವಾರ ಆಂಧ್ರಪ್ರದೇಶದ(Andhra Pradesh) ವಿವಿಧ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

    ತೆಲಂಗಾಣದ(Telangana) ನಿಜಾಮಾಬಾದ್ ಜಿಲ್ಲೆಯ ಮನೆಯೊಂದರ ಮೇಲೆಯೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಸೋಮವಾರ ಹೈದರಾಬಾದ್‌ನಲ್ಲಿರುವ ಎನ್‌ಐಎ ಕಚೇರಿಗೆ ಭೇಟಿ ನೀಡುವಂತೆ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ಹಾಸ್ಟೆಲ್ ವಿದ್ಯಾರ್ಥಿನಿಯರ ಖಾಸಗಿ ವೀಡಿಯೋ ಲೀಕ್ – ವಿಶ್ವವಿದ್ಯಾಲಯದಲ್ಲಿ ಭುಗಿಲೆದ್ದ ಪ್ರತಿಭಟನೆ

    ಎನ್‌ಐಎ ಅಧಿಕಾರಿಗಳ 23 ತಂಡಗಳು ನಿಜಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ. ಭಯೋತ್ಪಾದನಾ ಚಟುವಟಿಕೆಗಳ ಮಾಹಿತಿಗೆ ಸಂಬಂಧಿಸಿದಂತೆ ದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.

    ಶೋಧದ ವೇಳೆ ಅಧಿಕಾರಿಗಳು ಈಗಾಗಲೇ ಪಿಎಫ್‌ಐ ಜಿಲ್ಲಾ ಸಂಚಾಲಕ ಶಾದುಲ್ಲಾ ಮತ್ತು ಸದಸ್ಯರಾದ ಮೊಹಮ್ಮದ್ ಇಮ್ರಾನ್ ಮತ್ತು ಮೊಹಮ್ಮದ್ ಅಬ್ದುಲ್ ಮೊಬಿನ್ ಅವರನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಕರಾಟೆ ಕಲಿಸುವ ನೆಪದಲ್ಲಿ ಹಿಂಸಾಚಾರ ಮತ್ತು ಕಾನೂನುಬಾಹಿರ ತರಬೇತಿಗೆ ಪ್ರಚೋದನೆ ನೀಡಿರುವ ಮಾಹಿತಿಯ ಮೇರೆಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಇದನ್ನೂ ಓದಿ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಯುಪಿ ಸಚಿವರಿಗೆ 500 ರೂ. ದಂಡ

    Live Tv
    [brid partner=56869869 player=32851 video=960834 autoplay=true]

  • ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ಸಿಧು ಹತ್ಯಾ ಪ್ರಕರಣ – ಉತ್ತರ ಭಾರತದಾದ್ಯಂತ 50 ಕಡೆಗಳಲ್ಲಿ ಎನ್‌ಐಎ ದಾಳಿ

    ನವದೆಹಲಿ: ರೌಡಿಶೀಟರ್‌ಗಳ(Gangsters) ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಇಂದು ಉತ್ತರ ಭಾರತದಾದ್ಯಂತ ಸುಮಾರು 50ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿದೆ.

    ಹರಿಯಾಣ, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ಅಕ್ಕಪಕ್ಕದ ಪ್ರದೇಶಗಳಲ್ಲಿನ ವಿವಿಧ ರೌಡಿಶೀಟರ್‌ಗಳೊಂದಿಗೆ ಸಂಪರ್ಕ ಹೊಂದಿದ ಸ್ಥಳಗಳಲ್ಲಿ ಸ್ಥಳೀಯ ಪೊಲೀಸ್ ಪಡೆಗಳ ಸಮನ್ವಯದಲ್ಲಿ ದಾಳಿಗಳನ್ನು ನಡೆಸಲಾಗುತ್ತಿದೆ.

    ರೌಡಿಶೀಟರ್‌ಗಳು ಮತ್ತು ಭಯೋತ್ಪಾದಕರ(Terrorist) ನಡುವೆ ಸಂಬಂಧಗಳಿರುವುದನ್ನು ಬಹಿರಂಗಪಡಿಸಲಾಗಿದೆ. ಭಾರತ ಮತ್ತು ವಿದೇಶಗಳಿಂದ ಕಾರ್ಯನಿರ್ವಹಿಸುತ್ತಿರುವ ಗ್ಯಾಂಗ್‌ಸ್ಟರ್ ಭಯೋತ್ಪಾದನಾ ವಿರೋಧಿ ಏಜೆನ್ಸಿಗಳಿಂದಲೂ ಈ ಬಗ್ಗೆ ಮಾಹಿತಿ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ(Sidhu Moosewala) ಹತ್ಯೆಯ ಪ್ರಮುಖ ಶಂಕಿತ ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ಕೆಲವು ಆರೋಪಿಗಳು ಜೈಲಿನಿಂದಲೂ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.

    ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಬಳಿಕ ಭಯೋತ್ಪಾದಕರು ಮತ್ತು ರೌಟಿಶೀಟರ್‌ಗಳ ನಡುವೆ ನಂಟು ಬೆಳೆಯುತ್ತಿರುವುದು ಬಹಿರಂಗವಾಗಿದೆ. ಕೇಂದ್ರ ಈ ಬಗ್ಗೆ 2 ತಿಂಗಳಿನಿAದ ಪಂಜಾಬ್ ಪೊಲೀಸರಿಗೆ ಎಚ್ಚರಿಕೆ ನೀಡುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಟ್ರಾಫಿಕ್‍ನಲ್ಲಿ ಸಿಲುಕಿದ್ದ ಕಾರನ್ನು ಅಲ್ಲೇ ಬಿಟ್ಟರು – 3 ಕಿ.ಮೀ ಓಡಿ ಶಸ್ತ್ರಚಿಕಿತ್ಸೆ ಮಾಡಿ ರೋಗಿಯ ಪ್ರಾಣ ಉಳಿಸಿದ ಡಾಕ್ಟರ್

    ಕೇಂದ್ರ ಗೃಹ ಸಚಿವಾಲಯ ಭಾರತದಾದ್ಯಂತ ಈ ರೌಡಿಶೀಟರ್‌ಗಳ ವಿರುದ್ಧ ಗುಪ್ತಚರ ನೇತೃತ್ವದ ಸಂಘಟಿತ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಮತ್ತು ಅವರ ಅಂತಾರಾಷ್ಟ್ರೀಯ ಸಂಪರ್ಕಗಳ ಬಗ್ಗೆ ತನಿಖೆ ನಡೆಸಲು ಎನ್‌ಐಎ ಗೆ ಕೇಳಿಕೊಂಡಿದೆ ಎಂದು ಮೂಲಗಳು ತಿಳಿಸಿವೆ.

    ಜೂನ್ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯ ಮೂಸಾ ಗ್ರಾಮದ ಬಳಿ ಸಿಧು ಮೂಸೆ ವಾಲಾ ಅವರನ್ನು ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದಾಗ ಗುಂಡು ಹಾರಿಸಲಾಗಿತ್ತು. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು 2ಕಿ.ಮೀ.ವರೆಗೂ ಎಳೆದೊಯ್ದ ಕಂಟೈನರ್ ಟ್ರಕ್

    Live Tv
    [brid partner=56869869 player=32851 video=960834 autoplay=true]

  • ಬೆಂಗಳೂರಿನಲ್ಲಿ ಶಂಕಿತ ಇಬ್ಬರು ಉಗ್ರರ ಅರೆಸ್ಟ್‌ ಕೇಸ್‌ ಎನ್‌ಐಎಗೆ ವರ್ಗಾವಣೆ

    ಬೆಂಗಳೂರಿನಲ್ಲಿ ಶಂಕಿತ ಇಬ್ಬರು ಉಗ್ರರ ಅರೆಸ್ಟ್‌ ಕೇಸ್‌ ಎನ್‌ಐಎಗೆ ವರ್ಗಾವಣೆ

    ಬೆಂಗಳೂರು: ತಿಲಕ್‌ ನಗರದಲ್ಲಿ ಬಂಧನಕ್ಕೆ ಒಳಗಾದ ಇಬ್ಬರು ಶಂಕಿತ ಉಗ್ರರ ಪ್ರಕರಣ ರಾಷ್ಟ್ರೀಯ ತನಿಖಾ ದಳಕ್ಕೆ(NIA) ವರ್ಗಾವಣೆಯಾಗಿದೆ.

    ಜುಲೈನಲ್ಲಿ ಸಿಸಿಬಿ(CCB) ಪೊಲೀಸರು ಅನುಮಾನದ ಮೇರೆಗೆ ಇಬ್ಬರು ಡೆಲಿವರಿ ಹುಡುಗರನ್ನು ಬಂಧಿಸಿದ್ದರು. ಬಂಧಿತ ಅಕ್ತರ್‌ ಮತ್ತು ಜುಬಾ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(UAPA) ಅಡಿ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಹಿಂದೂಗಳಿಂದ ನೆಮ್ಮದಿ ಹಾಳಾಗಿದ್ದಕ್ಕೆ ಉಗ್ರ ಸಂಘಟನೆ ಸೇರಲು ಮುಂದಾಗಿದ್ದೆ: ಶಂಕಿತ ಉಗ್ರ

    ಸಿಸಿಬಿ ಎಸಿಪಿ ನೀಡಿದ ದೂರಿನ ಆಧಾರದ ಪ್ರಕರಣ ದಾಖಲಿಸಿಕೊಂಡು ತಡರಾತ್ರಿ‌ ದಾಳಿ ಮಾಡಿದ್ದ ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.

    ವಿಚಾರಣೆಯ ಸಮಯದಲ್ಲಿ ಶಂಕಿತರು ಬೇರೆ ಬೇರೆ ರಾಜ್ಯಗಳ ವ್ಯಕ್ತಿಗಳ ಜೊತೆ ಸಂಪರ್ಕ ಇರುವ ಬಗ್ಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪ್ರಕರಣ ಸಿಸಿಬಿಯಿಂದ ಈಗ ಎನ್‌ಐಎಗೆ ಅಧಿಕೃತವಾಗಿ ವರ್ಗಾವಣೆಯಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮೋದಿ ಹತ್ಯೆ ಸಂಚು ಪ್ರಕರಣದ ಬೆನ್ನತ್ತಿದ NIA

    ಮೋದಿ ಹತ್ಯೆ ಸಂಚು ಪ್ರಕರಣದ ಬೆನ್ನತ್ತಿದ NIA

    ನವದೆಹಲಿ: ಬಿಹಾರದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಹತ್ಯೆಗೆ ಸಂಚು ರೂಪಿಸಿದ್ದ ಪ್ರಕರಣದ ತನಿಖೆ ಮಂಗಳೂರಿಗೂ ವಿಸ್ತರಿಸಿದೆ. ಎಸ್‌ಡಿಪಿಐ (SDPI) ಪಕ್ಷದ ರಾಷ್ಟ್ರೀಯ ನಾಯಕ ರಿಯಾಜ್ ಫರಂಗಿಪೇಟೆಗೆ ಸೇರಿದ ಪರ್ಲಿಯಾ ನಿವಾಸದ ಮೇಲೆ ಎನ್‌ಐಎ (NIA) ಅಧಿಕಾರಿಗಳು ದಾಳಿ ಮಾಡಿದ್ದಾರೆ.

    ರಿಯಾಜ್ ಮತ್ತು ಅವರ ಕುಟುಂಬಸ್ಥರನ್ನು 8 ಗಂಟೆ ವಿಚಾರಣೆಗೆ ಒಳಪಡಿಸಿದ್ದಾರೆ. ಬಂಧಿತರ ಜೊತೆ ರಿಯಾಜ್ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಮಗ್ರ ವಿಚಾರಣೆ ನಡೆಸಿದ್ದಾರೆ. ರಿಯಾಜ್ ಮತ್ತು ಅವರ ಪತ್ನಿಯ ಮೊಬೈಲ್ ಸೇರಿ ಹಲವು ದಾಖಲೆ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಇಂಡಿಯಾ ಗೇಟ್‌ನಲ್ಲಿ ಸುಭಾಷ್‌ ಚಂದ್ರ ಬೋಸ್ ಪ್ರತಿಮೆ ಅನಾವರಣ; ಕರ್ತವ್ಯ ಪಥ ಉದ್ಘಾಟಿಸಿದ ಪ್ರಧಾನಿ ಮೋದಿ

    ಎನ್‌ಐಎ ರೇಡ್ ಸುದ್ದಿ ತಿಳಿಯುತ್ತಲೇ ರಿಯಾಜ್ ಮನೆ ಮುಂದೆ ಜಮಾಯಿಸಿದ ಎಸ್‌ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಎನ್‌ಐಎ ಅಧಿಕಾರಿಗಳು ನಿರ್ಗಮಿಸಿದ ಬಳಿಕ ಮಾತನಾಡಿದ ರಿಯಾಜ್ ಫರಂಗಿಪೇಟೆ, ಇದು ರಾಜಕೀಯ ಪ್ರೇರಿತ ದಾಳಿ ಎಂದು ಆರೋಪಿಸಿದ್ದಾರೆ.

    ಅತ್ತ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಅವರು ಮುಂಬೈ ಭೇಟಿ ವೇಳೆ ಭದ್ರತಾ ಲೋಪವಾಗಿದೆ. ಗೃಹ ಸಚಿವಾಲಯದ ಅಧಿಕಾರಿ ಸೋಗಿನಲ್ಲಿದ್ದ ಹೇಮಂತ್ ಎಂಬಾತನನ್ನು ಅರೆಸ್ಟ್ ಮಾಡಿ, 5 ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಬಂಧಿತ ಆಂಧ್ರಪ್ರದೇಶದ ಸಂಸದರೊಬ್ಬರ ಖಾಸಗಿ ಭದ್ರತಾ ಸಿಬ್ಬಂದಿ ಅಂತಲೂ ಹೇಳಿಕೊಂಡಿದ್ದ. ಇದನ್ನೂ ಓದಿ: ಮೋದಿ ಉತ್ತಮ ವ್ಯಕ್ತಿ; ಅದ್ಭುತ ಕೆಲಸಗಳನ್ನು ಮಾಡುತ್ತಿದ್ದಾರೆ – ಟ್ರಂಪ್‌ ಬಣ್ಣನೆ

    Live Tv
    [brid partner=56869869 player=32851 video=960834 autoplay=true]

  • ‘ತಾಂಟ್ರೆ ನೀ ಬಾ ತಾಂಟ್’ ಖ್ಯಾತಿಯ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ

    ‘ತಾಂಟ್ರೆ ನೀ ಬಾ ತಾಂಟ್’ ಖ್ಯಾತಿಯ ರಿಯಾಝ್ ಫರಂಗಿಪೇಟೆ ಮನೆಗೆ NIA ದಾಳಿ

    ಮಂಗಳೂರು: ‘ತಾಂಟ್ರೆ ನೀ ಬಾ ತಾಂಟ್’ ಖ್ಯಾತಿಯ ರಿಯಾಝ್ ಫರಂಗಿಪೇಟೆ (Riyaz Farangipete) ಮನೆಗೆ ಇಂದು ಬೆಳಗ್ಗೆ ಎನ್‍ಐಎ (NIA) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಬೆಳ್ಳಾರೆಯ ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆ ಕೇಸ್‍ನಲ್ಲಿ ಅಧಿಕಾರಿಗಳು ದಾಳಿ ಮುಂದುವರಿಸಿದ್ದು, ಈಗಾಗಲೇ 33 ಕಡೆ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಅಂತೆಯೇ ಇಂದು ಅಧಿಕಾರಿಗಳು ಎಸ್‍ಡಿಪಿಐ (SDPI) ರಾಷ್ಟ್ರೀಯ ಕಾರ್ಯದರ್ಶಿ ಮನೆಗೆ ದಾಳಿ ನಡೆಸಿದ್ದಾರೆ.

     

    ರಿಯಾಜ್ ಮನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿ ರೋಡ್ ಬಳಿಯ ಪರ್ಲಿಯಾ ಎಂಬಲ್ಲಿದೆ. ಬಂಟ್ವಾಳ (Bantwala) ಪೊಲೀಸರ ನೆರವು ಪಡೆದು ಎನ್.ಐ.ಎ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿ ವೇಳೆ ರಿಯಾಜ್ ಮೊಬೈಲ್ ವಶಕ್ಕೆ ಪಡೆದು ತಂಡ ಮನೆಯಲ್ಲಿ ಪರಿಶೀಲನೆ ನಡೆಸುತ್ತಿದೆ.

    ಅಧಿಕಾರಿಗಳು ದಾಳಿ ನಡೆಸಿದ ಸುದ್ದಿ ತಿಳಿದು ಮನೆಯ ಎದುರು ಎಸ್.ಡಿ.ಪಿ.ಐ. ಪಕ್ಷದ ಕಾರ್ಯಕರ್ತರು ಜಮಾಯಿಸಿ ಅಧಿಕಾರಿಗಳ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ವಾಸಕ್ಕೆ ಯೋಗ್ಯವಲ್ಲ ಎನ್ನುವವರು ಬೆಂಗಳೂರಿಗೆ ಬರಬೇಡಿ: ಮುನಿರತ್ನ

    ಕೆಲವು ತಿಂಗಳ ಹಿಂದೆ ಭಾಷಣ ಮಾಡುವಾಗ ರಿಯಾಜ್ ಫರಂಗಿಪೇಟೆ ‘ನೀ ತಾಂಟ್ರೆ ಬಾ ತಾಂಟ್’ ಎಂದು ಹೇಳಿದ್ದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿತ್ತು. ಗ್ರಾಮ ಪಂಚಾಯತ್ ನಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಾ, ನೀ ತಾಂಟ್ರೆ ಬಾ ತಾಂಟ್ ಅಂತ ಹೇಳಿದ್ದರು. ಬಿಜೆಪಿ (BJP) ಮುಖಂಡರಾದ ನಳೀನ್ ಕುಮಾರ್ ಕಟೀಲ್, ಸಿ.ಟಿ. ರವಿ ಮತ್ತು ಹರೀಶ್ ಪೂಂಜಾ ಕುರಿತು ಈ ವಾಕ್ಯವನ್ನು ಹೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್‌ ಹತ್ಯೆಯನ್ನು ಭಯೋತ್ಪಾದನಾ ಘಟನೆಯೆಂದು ತಿರುಚಲು ಎನ್‌ಐಎಗೆ ಸೂಚನೆ: ಪಿಎಫ್‌ಐ

    ಪ್ರವೀಣ್‌ ಹತ್ಯೆಯನ್ನು ಭಯೋತ್ಪಾದನಾ ಘಟನೆಯೆಂದು ತಿರುಚಲು ಎನ್‌ಐಎಗೆ ಸೂಚನೆ: ಪಿಎಫ್‌ಐ

    ಮಂಗಳೂರು: ಬೆಳ್ಳಾರೆಯಲ್ಲಿ ಹತ್ಯೆಯಾದ ಪ್ರವೀಣ್‌ ನೆಟ್ಟಾರು (Praveen Nettaru) ಪ್ರಕರಣವನ್ನು ಭಯೋತ್ಪಾದನಾ ಘಟನೆ ಎಂದು ತಿರುಚಲು ರಾಷ್ಟ್ರೀಯ ತನಿಖಾ ದಳಕ್ಕೆ (NIA) ಸೂಚಿಸಲಾಗಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಗಂಭೀರ ಆರೋಪ ಮಾಡಿದೆ.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್, ಎನ್‌ಐಎ ದಾಳಿ ವೇಳೆ ಭಯೋತ್ಪಾದಕರನ್ನು ಹಿಡಿಯುವ ರೀತಿ ವಾತಾವರಣ ಸೃಷ್ಟಿಸಲಾಗಿದೆ. ಪ್ರವೀಣ್ ಕೇಸ್ ಅಂತಾರಾಜ್ಯ ನಂಟಿನ ಕೇಸ್ ಅಂತ ಗೃಹ ಸಚಿವರು ಹೇಳಿದ್ದರು. ಆದರೆ ಆರೋಪಿಗಳ ಬಂಧನ ಆದ ನಂತರ ಅದು ಸ್ಥಳೀಯರು ಅಂತ ಗೊತ್ತಾಗಿದೆ. ಈ ಪ್ರಕರಣವನ್ನು ನಾವು ಕಾನೂನಾತ್ಮಕವಾಗಿ ಎದುರಿಸಲಿದ್ದೇವೆ ಎಂದರು. ಇದನ್ನೂ ಓದಿ: 2024ರ ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ ಹೇಗಿದೆ?- 144 ಕ್ಷೇತ್ರಗಳ ಮೇಲೆ ಮೋದಿ ಕಣ್ಣು

    ಪ್ರವೀಣ್‌ ಹತ್ಯೆಗೆ ಪ್ರತೀಕಾರವಾಗಿ ಮಸೂದ್ ಹತ್ಯೆ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಪ್ರವೀಣ್ ‌ನೆಟ್ಟಾರು ಪ್ರಕರಣ ಸ್ಥಳೀಯ ಮಟ್ಟದ ಪ್ರತೀಕಾರದ ಪ್ರಕರಣವಾಗಿದ್ದು ಸ್ಥಳೀಯ ಪೊಲೀಸರೇ ಆರೋಪಿಗಳನ್ನು ಬಂಧಿಸಿದ್ದಾರೆ. ಸರ್ಕಾರಕ್ಕೆ ಪ್ರವೀಣ್ ಕೇಸಲ್ಲಿ ಮಾತ್ರ ಯಾಕೆ ಆಸಕ್ತಿ? ಮಸೂದ್ ಮತ್ತು ಫಾಜಿಲ್ ಕೇಸ್‌ನಲ್ಲಿ ಆಸಕ್ತಿ ಯಾಕಿಲ್ಲ ಎಂದು ಪ್ರಶ್ನಿಸಿದರು.

    ಮಂಗಳವಾರ 30ಕ್ಕೂ ಹೆಚ್ಚು ಕಡೆ ದಾಳಿ ನಡೆದಿದೆ. ನಮ್ಮ ತಾಲೂಕು ಘಟಕದ ಕೆಲ ನಾಯಕರ ಮನೆಗಳಿಗೆ ದಾಳಿ ನಡೆಸಿ ಕೆಲ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಎನ್‌ಐಎ ಹೇಳಿದೆ. ಶಸ್ತ್ರಾಸ್ತ್ರಗಳನ್ನು ಬೆಂಗಳೂರಿನಿಂದ ತಂದಿದ್ದಾರಾ? ದೆಹಲಿಯಿಂದ ತಂದಿದ್ದಾರಾ ಎಂಬುದನ್ನು ಎನ್‌ಐಎ ಹೇಳಬೇಕು ಎಂದರು.

    ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ಹಾಲ್‌ಗಳಲ್ಲಿ ನಮ್ಮ ಸಭೆಗಳು ನಡೆಯುತ್ತದೆ. ಅದೇ ರೀತಿ ಪೊಲೀಸರಿಗೆ ‌ಮಾಹಿತಿ ನೀಡಿ ಮಿತ್ತೂರಿನ ಕಮ್ಯುನಿಟಿ ಹಾಲ್‌ನಲ್ಲೂ ಸಭೆ ಮಾಡಿದ್ದೇವೆ. ಪ್ರವೀಣ್ ಕೊಲೆ ಕೇಸ್ ನೆಪದಲ್ಲಿ ಬಿಜೆಪಿ ‌ಎನ್‌ಐಎಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಫಸ್ಟ್ ಟೈಂ ಪೆಟ್ಟಿಗೆಯಲ್ಲಿ ಹೂಳುವ ಸಂಪ್ರದಾಯ ಕೈಬಿಟ್ಟ ಕೇರಳ ಚರ್ಚ್

    ಪಿಎಫ್ಐ ನಾಯಕರು ಎಂಬ ಕಾರಣಕ್ಕೆ ಮುಸ್ಲಿಂ ಮುಖಂಡರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಶಿವಮೊಗ್ಗದ ಹರ್ಷ ‌ಮತ್ತು ಪ್ರವೀಣ್ ಕೇಸ್ ಎನ್ಐಎಗೆ ವಹಿಸಲಾಗಿದೆ. ಬೆಳಗಾವಿಯ ಅರ್ಬಾಝ್, ಶಮೀರ್ ಕೇಸ್ ನಲ್ಲಿ ಸಂಘಪರಿವಾರ ಇದೆ. ಆದರೆ ಇದನ್ನು ಯಾಕೆ ಸರ್ಕಾರ ಎನ್‌ಐಎಗೆ ವಹಿಸಿಲ್ಲ? ಇದರಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸ್ತಿದೆ ಎಂದು ಅಶ್ರಫ್‌ ದೂರಿದರು.

    ಸರ್ಕಾರ ಬಿಜೆಪಿ ಕಾರ್ಯಕರ್ತರನ್ನು ಸಮಾಧಾನ ಮಾಡಲು ಎ‌ನ್ಐಎಗೆ ನೀಡಿದೆ. ಕೆಲ ಪಿಎಫ್ ಐ ಕಾರ್ಯಕರ್ತರು ಮತ್ತು ನಾಯಕರ ಮನೆಗಳ ಜೊತೆ ಮುಸ್ಲಿಂ ಯುವಕರ ಮನೆಗಳಿಗೆ ದಾಳಿ‌ ನಡೆಸಲಾಗಿದೆ. ವಿಧಾನಸಭಾ ಚುನಾವಣೆ ಮುಂದಿಟ್ಟು ಈ ಕೆಲಸ ಮಾಡಲಾಗಿದೆ. ಬಿಜೆಪಿ ಸರ್ಕಾರ ವೈಫಲ್ಯತೆ‌ ಮುಚ್ಚಿ ಹಾಕಲು ಈ ಕೆಲಸ ‌ಮಾಡಿದೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ- ಪುತ್ತೂರು ಮತ್ತು ಸುಳ್ಯದ 32 ಕಡೆ NIA ದಾಳಿ

    ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣ- ಪುತ್ತೂರು ಮತ್ತು ಸುಳ್ಯದ 32 ಕಡೆ NIA ದಾಳಿ

    ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ‌ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮತ್ತು ಸುಳ್ಯದ 32 ಕಡೆಗಳಲ್ಲಿ ಎನ್ಐಎ ದಾಳಿ ನಡೆಸಿದೆ.

    ಎರಡು ತಿಂಗಳ ಹಿಂದೆ ದುಷ್ಕರ್ಮಿಗಳ ದಾಳಿಗೆ ಬಲಿಯಾಗಿದ್ದ ಪ್ರವೀಣ್‌ ನೆಟ್ಟಾರು ಹತ್ಯೆ ತನಿಖೆಯನ್ನು ಎನ್‌ಐಎ ತಂಡ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲವು ಮಾಹಿತಿಯನ್ನಾಧರಿಸಿ 32 ಕಡೆ ಮನೆ ಹಾಗೂ ಕೆಲ‌ ಖಾಸಗಿ ಕಟ್ಟಡಗಳ ಮೇಲೆ ಎನ್ಐಎ ದಾಳಿ ನಡೆಸಿದೆ. ಘಟನೆಗೆ ಸಂಬಂಧಿಸಿ ಆರೋಪಿಗಳು ಮತ್ತು ಆರೋಪಿಗಳಿಗೆ ಸಹಕರಿಸಿದವರ ವಿಚಾರಣೆಗೆ ಒಳಪಡಿಸಿದೆ. ಎನ್ಐಎ ಅಧಿಕಾರಿಗಳ ತಂಡಕ್ಕೆ ರಾಜ್ಯ ಪೊಲೀಸರು ಸಾಥ್ ನೀಡಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26 ರಂದು ರಾತ್ರಿ 8 ಗಂಟೆ ಸುಮಾರಿಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಇದನ್ನೂ ಓದಿ: ವಾರದ ಹಿಂದೆಯೇ ಪ್ರವೀಣ್‌ ಹತ್ಯೆಗೆ ಸ್ಕೆಚ್‌ – ಕೇರಳದ 7 ಕಡೆ ಆಶ್ರಯ, ಹಂತಕರು ಕೊನೆಗೂ ಅಂದರ್‌

    ಪ್ರವೀಣ್‌ ನೆಟ್ಟಾರು ಹತ್ಯೆಯಿಂದ ದಕ್ಷಿಣ ಕನ್ನಡದಲ್ಲೂ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲೂ ಕ್ಷೋಭೆ ಭುಗಿಲೆದ್ದಿತ್ತು, ತನಿಖೆಯಲ್ಲಿ ಸರ್ಕಾರ ವಿಫಲವಾಗಿದೆ. ಕಾರ್ಯಕರ್ತರ ಹಿತ ಕಾಯಲು ಪಕ್ಷ ವಿಫಲವಾಗಿದೆ ಎಂದು ಆರೋಪಿಸಿ ಹಲವಾರು ಬಿಜೆಪಿ ಪದಾಧಿಕಾರಿಗಳು ರಾಜೀನಾಮೆ ನೀಡಿದ್ದರು. ಇದರಿಂದಾಗಿ ಪಕ್ಷ ಹಾಗೂ ಸರ್ಕಾರವು ಮುಜುಗರ ಅನುಭವಿಸಬೇಕಾದ ಪರಿಸ್ಥಿತಿಯೂ ಉಂಟಾಯಿತು. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಪ್ರಮುಖ ಮೂವರು ಆರೋಪಿಗಳ ಬಂಧನ

    Live Tv
    [brid partner=56869869 player=32851 video=960834 autoplay=true]

  • ಶಿವಮೊಗ್ಗ ಹರ್ಷ ಕೊಲೆ ಸಂಚು ಬಹಿರಂಗ- ಹಿಂದೂ ಸಂಘಟನೆಗಳ ಸದ್ದಡಗಿಸಲು ಮರ್ಡರ್

    ಶಿವಮೊಗ್ಗ ಹರ್ಷ ಕೊಲೆ ಸಂಚು ಬಹಿರಂಗ- ಹಿಂದೂ ಸಂಘಟನೆಗಳ ಸದ್ದಡಗಿಸಲು ಮರ್ಡರ್

    – ಸಾವಿರ ಪುಟಗಳ ಚಾರ್ಜ್‍ಶೀಟ್‍ನಲ್ಲಿ ಅಚ್ಚರಿ ಸಂಗತಿ

    ಶಿವಮೊಗ್ಗ: ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ಹತ್ಯೆ ಹಿಂದಿನ ಸ್ಫೋಟಕ ರಹಸ್ಯ ಬಟಾಬಯಲಾಗಿದೆ. ಕೊಲೆ ಸಂಬಂಧ ತನಿಖೆ ನಡೆಸಿದ ಎನ್‍ಐಎ 10 ಆರೋಪಿಗಳ ಮೇಲೆ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ ಮಾಡಿದೆ. ಸಾವಿರ ಪುಟದ ಚಾರ್ಜ್‍ಶೀಟ್‍ನಲ್ಲಿ ಹತ್ಯೆ ಹಿಂದಿನ ಒಳಸಂಚು ಬಯಲಾಗಿದೆ.

    ಹೌದು, ಹರ್ಷ ಹತ್ಯೆ ಹಂತಕರ ಉದ್ದೇಶ ಹಿಂದೂ ಸಂಘಟನೆಯ ಒಬ್ಬರನ್ನ ಹತ್ಯೆ ಮಾಡಿ ಹಿಂದೂ ಸಂಘಟನೆಗಳನ್ನು ಬೆದರಿಸುವುದು. ಹಿಂದೂ ಸಂಘಟನೆಗಳ ಉಪಟಳಕ್ಕೆ ಬ್ರೇಕ್ ಹಾಕಬೇಕು ಅನ್ನೋ ಕಾರಣಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತನ ಹತ್ಯೆ ಮಾಡೋದು ಉದ್ದೇಶ ಆಗಿತ್ತಂತೆ. ಆಗ ಹತ್ಯೆಗೆ ಸ್ಕೆಚ್ ಹಾಕಿದ್ದಾಗ ಕಣ್ಣಿಗೆ ಬಿದ್ದದ್ದು ಹರ್ಷ. ಇದನ್ನೂ ಓದಿ: ಖ್ಯಾತ ವೈದ್ಯ, ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಗುರುರಾಜ್ ಹೆಬ್ಬಾರ್ ನಿಧನ

    ಹಳೆಯ ದ್ವೇಷ ಇಟ್ಟುಕೊಂಡಿದ್ದ ಹರ್ಷನನ್ನ ಮುಗಿಸೋಕೆ ಪ್ಲಾನ್ ಮಾಡಿಕೊಂಡಿದ್ದ ಹಂತಕರು, 15 ದಿನಗಳ ಕಾಲ ಹೊಂಚು ಹಾಕಿ ಕೂತಿದ್ರು. ಹರ್ಷನ ಹಿಂದೆ ಹಿಂದೆ ಸುತ್ತಿ ಕೊನೆಗೆ ಹತ್ಯೆ ಮಾಡಿಮುಗಿಸಿದ್ದಾರೆಂದು ಎನ್‍ಐಎ ನ್ಯಾಯಾಲಯಕ್ಕೆ ಸಲ್ಲಿಸಿರೋ ದೋಷಾರೋಪ ಪಟ್ಟಿ ನಮೂದಿಸಲಾಗಿದೆ. ಹರ್ಷ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. ಹೀಗಾಗಿ ಹರ್ಷನನ್ನು ಕೊಲೆ ಮಾಡಿದ್ರೆ ಹಿಂದೂ ಸಂಘಟನೆಯವರೆಲ್ಲಾ ಹೆದರಿ ತಣ್ಣಗಾಗ್ತಾರೆ ಅನ್ನೋದು ಹಂತಕರ ಉದ್ದೇಶ ಅಂತ ತನಿಖೆ ವೇಳೆ ಬೆಳಕಿಗೆ ಬಂದಿದೆ.

    ಮಾಜಿ ಸಚಿವ ಈಶ್ವರಪ್ಪ ಮಾತನಾಡಿ, ಹೇಡಿ ಕೊಲೆಗಾರರು ಹಿಂದೂ ಹುಲಿಗಳ ಕೊಂದರೆ ಹಿಂದುತ್ವ ನಾಶ ಆಗಲ್ಲ. ಇದೇ ಆಟ ಮುಂದುವರಿಸಿದರೆ ಅದಕ್ಕೆ ಸರಿಯಾದ ಬೆಲೆ ತೆತ್ತಬೇಕು ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಸದ್ಯ ಎನ್‍ಐಎ ಅಧಿಕಾರಿಗಳು ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. 10 ಆರೋಪಿಗಳ ಹೇಳಿಕೆ ತಾಂತ್ರಿಕ ಸಾಕ್ಷ್ಯಗಳ ಜೊತೆಗೆ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]