Tag: NIA

  • ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್‌: ಆರೋಪಿಗಳ ಕೆಲಸ ಏನು?

    ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್‌: ಆರೋಪಿಗಳ ಕೆಲಸ ಏನು?

    ಬೆಂಗಳೂರು: ಭರ್ಜರಿ ತಯಾರಿ ನಡೆಸಿದ ಬಳಿಕ ಪಿಎಫ್‌ಐ(PFI) ಮುಖಂಡರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಿ ಕರ್ನಾಟಕದಲ್ಲಿ(Karnataka) 7 ಮಂದಿಯನ್ನು ಬಂಧಿಸಿದ್ದಾರೆ.

    ಪಿಎಫ್​ಐನ ಪ್ರತಿ ಮುಖಂಡ, ಕಾರ್ಯಕರ್ತರು, ಪ್ರಮುಖರ ಮಾಹಿತಿ ಕಲೆ ಹಾಕಲಾಗಿತ್ತು. ಯಾವ ಸಮಯದಲ್ಲಿ ಮನೆಯಲ್ಲಿ ಇರುತ್ತಾರೆ, ಹೊರಗಡೆ ಹೋಗುತ್ತಾರೆ ಎಂಬುದನ್ನು ಮೊದಲೇ ತಿಳಿದುಕೊಳ್ಳಲಾಗಿತ್ತು.

    ಎನ್‌ಐಎ ದಾಳಿ ಮೊದಲೇ ನಡೆಯಬೇಕಿತ್ತು. ಆದರೆ ಕೇರಳದಲ್ಲಿ ಪಿಎಫ್‌ಐ ದೊಡ್ಡ ಮಟ್ಟದ ಕಾರ್ಯಕ್ರಮ, ಸಭೆ ಆಯೋಜನೆ ಮಾಡಿತ್ತು. ಈ ಕಾರ್ಯಕ್ರಮದಲ್ಲಿ ನಾಯಕರು ಭಾಗವಹಿಸಿದ್ದ ಹಿನ್ನೆಲೆಯಲ್ಲಿ ತಡವಾಗಿ ದಾಳಿ ನಡೆಸಲಾಗಿದೆ.

    ಆಡುಗೋಡಿಯ ಟೆಕ್ನಿಕಲ್ ಸೆಂಟರ್ ನಲ್ಲಿ ಶಂಕಿತ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ನಗದಿನ ಮೂಲ, ಧರ್ಮ ಸಂಬಂಧ ಪುಸ್ತಕಗಳು, ಪೆನ್ ಡ್ರೈವ್ , ಲ್ಯಾಪ್ ಟಾಪ್, ಮೊಬೈಲ್, ಎಲೆಕ್ಟ್ರಾನಿಕ್ ಸಾಧನಗಳ ಒಳಗಡೆ ಏನಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಬಂಧನಕ್ಕೆ ಒಳಗಾದ 7 ಮಂದಿ ಯಾರು?
    1 ಅನೀಸ್ ಅಹಮದ್
    ಬೆಂಗಳೂರು ಮೂಲದವನಾದ ಅನೀಸ್​ ಅಹ್ಮದ್​ ಖಾಸಗಿ ಕಂಪನಿಯಲ್ಲಿ ಸಾಫ್ಟ್​ವೇರ್ ಎಂಜಿನಿಯರ್ ಆಗಿದ್ದು ಪಿಎಫ್​ಐ ರಾಜ್ಯಮಟ್ಟದ ನಾಯಕನಾಗಿದ್ದ. ಈತ ಕಳೆದ 10 ದಿನಗಳಿಂದ ಮಲಬಾರ್ ಕಾನ್ಫರೆನ್ಸ್ ಹೆಸರಿನ​ ಸಭೆಯಲ್ಲಿ ಭಾಗವಹಿಸಿದ್ದ.

    2 ಅಫ್ಸರ್ ಪಾಷಾ
    ರಾಜ್ಯಮಟ್ಟದ ನಾಯಕನಾಗಿರುವ ಈತನ ಮೇಲೆ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಆಗ ಮನೆಯಲ್ಲಿ ಜಗಳ ಮಾಡಿಕೊಂಡಿದ್ದ ಪಾಷಾ ಪಾದರಾಯನಪುರದ ಟೆಲಿಕಾಂ ಲೇಔಟ್​ನ ಬಾಡಿಗೆ ಮನೆಗೆ ತೆರಳಿದ್ದ. ಪ್ರಸ್ತುತ ವಿಜಯನಗರದಲ್ಲಿ ಲಸ್ಸಿ ಶಾಪ್ ನಡೆಸುತ್ತಿದ್ದ.

    3 ಅಬ್ದುಲ್ ವಹೀದ್​
    ತಮಿಳುನಾಡು ಮೂಲದ ಈತ ಜಯಮಹಲ್ ಪ್ಯಾಲೇಸ್ ಹತ್ತಿರ ವಾಸವಿದ್ದ. ಪಿಎಫ್‌ಐ ರಾಜ್ಯ ಕಾರ್ಯಕಾರಿ ಸಮಿತಿಯ ಕಾರ್ಯದರ್ಶಿಯಾಗಿದ್ದಾನೆ.

    4 ಯಾಸಿರ್ ಹಸನ್​​
    ಮೂಲತಃ ಮಂಗಳೂರಿನವನಾದ ಯಾಸಿರ್​ ಅರಾಫತ್​ ಬೆಂಗಳೂರಲ್ಲಿ ಪಿಎಫ್‌ಐ ಕಾರ್ಯಚಟುವಟಿಕೆ ನೋಡಿಕೊಳ್ಳುತ್ತಿದ್ದ. ಕಾವಲಬೈರಸಂದ್ರದಲ್ಲಿ ಮನೆ ಮಾಡಿಕೊಂಡಿದ್ದ ಈತನಿಂದಲೇ ಬಹುತೇಕ ಪಿಎಫ್‌ಐ ಕಚೇರಿ ಕೆಲಸಗಳ ನಿರ್ವಹಣೆ ನಡೆಯುತ್ತಿತ್ತು.

    5 ಮೊಹಮ್ಮದ್ ಶಕೀಬ್
    ಮೂಲತಃ ತಮಿಳುನಾಡಿನ ಮೊಹಮ್ಮದ್ ಶಾಕಿಬ್ ರಿಚ್ಮಂಡ್​ ಟೌನ್​ನ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದಾನೆ.

    6 ಶಾಹಿದ್ ನಸೀರ್​
    ಬೆಂಗಳೂರು ಮೂಲದ ಶಾಹಿದ್​ ನಸೀರ್ ಸ್ಟೇಟ್​ ಸೋಷಿಯಲ್ ಮೀಡಿಯಾ ಇನ್​ಚಾರ್ಜ್ ಆಗಿದ್ದು ಪಿಎಫ್​​ಐನಲ್ಲಿ ಸಕ್ರಿಯ ಸದಸ್ಯನಾಗಿ ಗುರುತಿಸಿಕೊಂಡಿದ್ದಾನೆ.

    7. ಮೊಹಮ್ಮದ್‌ ಫಾರೂಖ್‌
    ಬೆಂಗಳೂರು ಮೂಲದ ಈತ ಪಿಎಫ್‌ಐ ಸಕ್ರಿಯ ಮುಖಂಡನಾಗಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಬೆಂಗಳೂರು: ಕರ್ನಾಟಕ (Karnataka) ಸೇರಿದಂತೆ ದೇಶಾದ್ಯಂತ 15 ರಾಜ್ಯಗಳಲ್ಲಿ ಬೆಳ್ಳಂಬೆಳಿಗ್ಗೆಯಿಂದಲೇ 93 ಕಡೆ ಎನ್‌ಐಎ (NIA), ಇಡಿ ದಾಳಿ ನಡೆಸಿದ್ದು, ರಾಜ್ಯದ ಪೊಲೀಸರ (Karnataka Police) ನೆರವಿನೊಂದಿಗೆ ಪಿಎಫ್‌ಐ (PFI) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ 110ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿದೆ.

    ಎನ್‌ಐಎ ತಡರಾತ್ರಿ ನಡೆಸಿದ ಕಾರ್ಯಾಚರಣೆ ವೇಳೆ ಮೋಸ್ಟ್ ವಾಂಟೆಡ್ (Most Wanted) ಶಂಕಿತ ಉಗ್ರ ಯಾಸಿರ್‌ ಅರಾಫತ್‌ ನನ್ನೂ ಬಂಧಿಸಿದೆ. ಇದನ್ನೂ ಓದಿ: ರಾಜ್ಯದ ಜನರಿಗೆ ಶುಲ್ಕದ ಬರೆ – ಅಕ್ಟೋಬರ್‌ನಿಂದ ವಿದ್ಯುತ್ ದರ ಏರಿಕೆ

    ಹೇಗಿತ್ತು ಆಪರೇಷನ್?
    ಬರೋಬ್ಬರಿ 200ಕ್ಕೂ ಹೆಚ್ಚು ಪೊಲೀಸ್ (Police) ಅಧಿಕಾರಿಗಳ ಪಡೆ ಆರ್.ಟಿ.ನಗರದ ಭೀಮಣ್ಣ ಗಾರ್ಡನ್ 4ನೇ ಕ್ರಾಸ್‌ನಲ್ಲಿ ಸುತ್ತುವರಿದಿತ್ತು. ಶಂಕಿತ ಉಗ್ರ ಯಾಸಿರ್ ಗಾಢ ನಿದ್ರೆಯಲ್ಲಿದ್ದಾಗ ಮನೆಗೆ ನುಗ್ಗಿದ ಎನ್‌ಐಎ ಟೀಂ ಸತತ 2 ಗಂಟೆ ಕಾರ್ಯಚರಣೆ ನಡೆಸಿ ಮುಂಜಾನೆ 3 ಗಂಟೆ ವೇಳೆಗೆ ಶಂಕಿತ ಯಾಸಿರ್‌ನನ್ನು ಬಂಧಿಸಿದೆ. ಇದನ್ನೂ ಓದಿ: ಸೆ.26ರಿಂದ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನೆ

    ಬೆಂಗಳೂರಿನಲ್ಲಿ ಅಡಗಿದ್ದ ಶಂಕಿತ ಉಗ್ರ 5 ವರ್ಷಗಳಿಂದ ಕೋಟಿ ಕೋಟಿ ಅವ್ಯವಹಾರ ನಡೆಸುತ್ತಿದ್ದ. ಹಣ (Money) ಪಡೆದು ಐಸಿಸ್‌ಗೆ ಯುವಕರನ್ನ ಭಯೋತ್ಪಾದಕ ಚಟುವಟಿಕೆಗಳಿಗೆ ರವಾನೆ ಮಾಡ್ತಿದ್ದ. ಕಳೆದ 5 ವರ್ಷಗಳಿಂದ ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ. ವಿದೇಶದಿಂದ ಸಾಕಷ್ಟು ಹಣ ಈತನ ಖಾತೆಗೆ ಜಮೆಯಾಗಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

    ಯಾಸಿರ್ ಮೇಲಿನ ಆರೋಪಗಳೇನು?

    • ವಿದೇಶಗಳಿಂದ ಪಿಎಫ್‌ಐ ಸಂಘಟನೆಗೆ ಹಣ,
    • ಈ ಹಣ ಬಳಸಿಕೊಂಡು ಯುವಕರನ್ನು ಪಿಎಫ್‌ಐಗೆ ಆಕರ್ಷಣೆ
    • ಕರ್ನಾಟಕ, ಕೇರಳ, ತಮಿಳುನಾಡು, ದೆಹಲಿಯಲ್ಲಿ ಉಗ್ರ ದಾಳಿಗೆ ಸಂಚು
    • ಐಸಿಸ್ ರೀತಿಯಲ್ಲಿ ಯುವಕರಿಗೆ ಟ್ರೈನಿಂಗ್‌
    • ಟ್ರೈನಿಂಗ್‌ ಪಡೆದ ಬಳಿಕ ಯುವಕರನ್ನು ದಾಳಿಗೆ ಬಿಡೋ ಉದ್ದೇಶ
    • ಆಯುಧಗಳ ಮೂಲಕ ಸಾರ್ವಜನಿಕರ ಮೇಲೆ ದಾಳಿ ಟಾರ್ಗೆಟ್
    • ಗುಂಪು ಮಾಡಿಕೊಂಡು ಕೋಮುದಳ್ಳುರಿಗೆ‌ ಪ್ಲ್ಯಾನ್‌
    • ಸಾಮಾಜಿಕ ಜಾಲತಾಣದ ಮೂಲಕ ಕೋಮು ದ್ವೇಷಕ್ಕೆ ಕುಮ್ಮಕ್ಕು

    Live Tv
    [brid partner=56869869 player=32851 video=960834 autoplay=true]

  • ಎನ್‌ಐಎ ದಾಳಿ- ಅಪರಾಧಗಳ ಹಿನ್ನೆಲೆ ಮಾತ್ರ ಗಣನೆ, ಧರ್ಮ ಅಲ್ಲ: ಆರಗ ಜ್ಞಾನೇಂದ್ರ

    ಎನ್‌ಐಎ ದಾಳಿ- ಅಪರಾಧಗಳ ಹಿನ್ನೆಲೆ ಮಾತ್ರ ಗಣನೆ, ಧರ್ಮ ಅಲ್ಲ: ಆರಗ ಜ್ಞಾನೇಂದ್ರ

    ಬೆಂಗಳೂರು: ಪೊಲೀಸರು ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳುವ ಮುನ್ನ ಕೇವಲ ಅಪರಾಧಗಳ ಹಿನ್ನೆಲೆ ಮಾತ್ರ ಪರಿಗಣಿಸುತ್ತಾರೆಯೇ ವಿನಃ ಅಲ್ಪಸಂಖ್ಯಾತ, ಬಹು ಸಂಖ್ಯಾತರು, ಜಾತಿ ಅಥವಾ ಧರ್ಮವನ್ನು ನೋಡಿ ಅಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra) ತಿಳಿಸಿದ್ದಾರೆ.

    ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಸೌಹಾರ್ದತೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಸಿಬ್ಬಂದಿಯೊಂದಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.

    ಕಾನೂನನ್ನು ಕೈಗೆ ತೆಗೆದುಕೊಳ್ಳುವ ಯಾರ ವಿರುದ್ಧವೇ ಆಗಲಿ, ಕ್ರಮ ಜರಗಿಸಲಾಗುತ್ತದೆ. ಖಚಿತ ಮಾಹಿತಿ ಮೇರೆಗೆ ಎನ್‌ಐಎ (NIA) ಅಧಿಕಾರಿಗಳು ಹಲವು ಕಡೆ ಶೋಧ ನಡೆಸಿದ್ದಾರೆ. ಶಿವಮೊಗ್ಗ ಪೊಲೀಸರು (Shivamogga Police) ಇಬ್ಬರು ವ್ಯಕ್ತಿಗಳು ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿ ಮೇರೆಗೆ ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ ಎಂದರು. ಇದನ್ನೂ ಓದಿ: ಕನ್ನಡ ಭಾಷಾ ಕಡ್ಡಾಯ ಬಳಕೆಗೆ ವಿಧಾನಸಭೆಯಲ್ಲಿ ವಿಧೇಯಕ ಮಂಡನೆ – ದಂಡ ವಿಧಿಸಲು ಅವಕಾಶ

    ತನಿಖೆಯನ್ನು ಚುರುಕಿನಿಂದ ನಡೆಸಿರುವ ಶಿವಮೊಗ್ಗ ಪೊಲೀಸರ ಕಾರ್ಯ ಕ್ಷಮತೆಯ ಬಗ್ಗೆ ಅಭಿನಂದಿಸುತ್ತೇನೆ ಎಂದು ಸಚಿವರು ಹೇಳಿದರು.

    ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪೇ ಸಿಎಂ ಅಭಿಯಾನದ ಬಗ್ಗೆ ಕಟುವಾಗಿ ಪ್ರತಿಕ್ರಿಯಿಸಿದ ಸಚಿವರು, ಜನರು ಪಕ್ಷದಿಂದ ದೂರವಾಗುತ್ತಿದ್ದು, ಇದರಿಂದ ಹತಾಶರಾದ ಕಾಂಗ್ರೆಸ್ ನಾಯಕರು ಇಂತಹ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರೂ ಮಾಜಿ ವಿಧಾನ ಸಭಾ ಸ್ಪೀಕರ್ ಸಹ ಆಗಿದ್ದ ಕಾಂಗ್ರೆಸ್ ನಾಯಕರ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಈಗಾಗಲೇ ಹೇಳಿದ್ದು, ಕಾಂಗ್ರೆಸ್ ನಾಯಕರ ಬಣ್ಣ ಬಯಲು ಮಾಡಿದೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: 2026ಕ್ಕೆ ಭಾರತದಲ್ಲಿ ಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚಳ!

    Live Tv
    [brid partner=56869869 player=32851 video=960834 autoplay=true]

  • NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ

    NIA ದಾಳಿಗೆ ಹೆದರಿ ಪರಾರಿ – ಹೊರ ಜಿಲ್ಲೆಯ PFI ನಾಯಕನಿಗೆ ಉಡುಪಿಯಲ್ಲಿ ಹುಡುಕಾಟ

    ಉಡುಪಿ: ಹೊರಜಿಲ್ಲೆಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ನಾಯಕನಿಗೆ ಉಡುಪಿಯಲ್ಲಿ(Udupi) ಹುಡುಕಾಟ ಆರಂಭವಾಗಿದೆ.

    ಇಂದು ಕರ್ನಾಟಕದ ಹಲವು ಭಾಗದಲ್ಲಿ ಪಿಎಫ್‌ಐ ಕಚೇರಿ, ನಾಯಕರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ದಾಳಿ ನಡೆಸಿದೆ. ಈ ದಾಳಿಯ ಸಂದರ್ಭದಲ್ಲಿ ಓರ್ವ ನಾಯಕ ಮನೆಯಲ್ಲಿ ಇರಲಿಲ್ಲ. ಇದನ್ನೂ ಓದಿ: 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ದಾಳಿ ವಿಚಾರ ತಿಳಿದು ಆತ ಈಗ ತನ್ನ ಜಿಲ್ಲೆಯಿಂದ ಪರಾರಿಯಾಗಿದ್ದಾನೆ. ಎನ್ಐಎ ದಾಳಿಗೆ ಹೆದರಿ ತಲೆಮರೆಸಿಕೊಂಡಿರುವ ಪಿಎಫ್ಐ ಮುಖಂಡ ಉಡುಪಿಗೆ ಬಂದಿದ್ದಾನೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ಕಾಪು, ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಬೈಲ್‌ ನಂಬರ್ ಲೊಕೇಶನ್‌ ಪತ್ತೆಯಾದ ಹಿನ್ನೆಲೆಯಲ್ಲಿ ತಲೆಮರೆಸಿಕೊಂಡಿರುವ ಮುಖಂಡನಿಗೆ ಈಗ ಹುಡುಕಾಟ ಆರಂಭವಾಗಿದೆ.

    Live Tv
    [brid partner=56869869 player=32851 video=960834 autoplay=true]

  • 3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    3 ದಿನಗಳ ಹಿಂದೆ ಸಭೆ – 6 ಕಂಟ್ರೋಲ್‌ ರೂಂ ಓಪನ್‌ – PFI, SDPI ಮೇಲೆ NIA, ED ದಾಳಿಯ ಇನ್‌ಸೈಡ್‌ ನ್ಯೂಸ್‌

    ನವದೆಹಲಿ: ಕಳೆದ ಮೂರು ದಿನಗಳಿಂದ ಗೃಹ ಸಚಿವಾಲಯದ (MHA) ಅಧಿಕಾರಿಗಳು ಸಭೆ ನಡೆಸಿ ಪ್ರತ್ಯೇಕ ಕಂಟ್ರೋಲ್‌ ರೂಮ್‌ (Control Room) ತೆರೆದು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಪಿಎಫ್‌ಐ ಮೇಲೆ ದಾಳಿ ನಡೆಸಿದೆ. ಇಲ್ಲಿಯವರೆಗೆ ಕೆಲ ಜಾಗಗಳಲ್ಲಿ ಎನ್‌ಐಎ (NIA) ದಾಳಿ ನಡೆಸಿದ್ದರೆ, ಮೊದಲ ಬಾರಿ ದೊಡ್ಡ ಮಟ್ಟದಲ್ಲಿ ಇಡಿ ಜೊತೆ ಸೇರಿ ದೇಶದ 11 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.

    ದೇಶ ವಿರೋಧಿ ಚಟುವಟಿಕೆಗಳಲ್ಲಿ ಪಿಎಫ್‌ಐ (PFI) ಭಾಗಿಯಾಗಿದೆ ಎಂಬ ಆರೋಪ ಈ ಕೇಳಿ ಬಂದಿತ್ತು. ಬಿಜೆಪಿ (BJP) ಮತ್ತು ಕಾಂಗ್ರೆಸ್‌ (Congress) ಪಕ್ಷಗಳು ಎಸ್‌ಡಿಪಿಐ (SDPI), ಪಿಎಫ್‌ಐ ನಿಷೇಧಿಸುವಂತೆ ಆಗ್ರಹಿಸಿದ್ದವು. ಇಲ್ಲಿಯವರೆಗೆ ಕೇಂದ್ರ ಸರ್ಕಾರ (Central Government) ಯಾವುದೇ ಕಠಿಣ ಕ್ರಮವನ್ನು ಕೈಗೊಂಡಿರಲಿಲ್ಲ. ಹತ್ಯೆಯಾದ ಸಂದರ್ಭದಲ್ಲಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಸರಿಯಾದ ಪ್ಲ್ಯಾನ್‌ ಮಾಡಿಕೊಂಡೇ ದೇಶಾದ್ಯಂತ ಪಿಎಫ್‌ಐ ನಾಯಕರ ಮೇಲೆ ದಾಳಿ ನಡೆಸಿ ಶಾಕ್‌ ಕೊಟ್ಟಿದೆ. ಇದನ್ನೂ ಓದಿ: SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ಏನಿದು ಸಭೆಯ ರಹಸ್ಯ?
    ಮೂರು ದಿನಗಳ ಹಿಂದೆಯಷ್ಟೇ ಇಡಿ, ಎನ್‌ಐಎ ಹಾಗೂ ಗುಪ್ತಚರ ಇಲಾಖೆ (Intelligence Bureau) ಅಧಿಕಾರಿಗಳೊಂದಿಗೆ ಗೃಹ ಸಚಿವಾಲಯವು ಸಭೆ ನಡೆಸಿದೆ. ಇಲ್ಲಿಯವರೆಗೆ ಯಾವೆಲ್ಲ ಪ್ರಕರಣ ದಾಖಲಾಗಿದೆ? ಈ ಸಂಘಟನೆಗೆ ಹಣ ಎಲ್ಲಿಂದ ಬರುತ್ತಿದೆ ಈ ಎಲ್ಲಾ ವಿಚಾರಗಳನ್ನು ಮಾಹಿತಿ ಕಲೆ ಹಾಕಿ ಚರ್ಚೆ ನಡೆಸಲಾಗಿತ್ತು. ಅದಕ್ಕಾಗಿ 6 ಕಂಟ್ರೋಲ್‌ ರೂಂಗಳನ್ನು ತೆರಲಾಗಿತ್ತು. ಪ್ರತಿ ರಾಜ್ಯದಲ್ಲಿರುವ ನಾಯಕರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಸಭೆ ನಡೆದ ತಡರಾತ್ರಿಯಿಂದಲೇ ಕಾರ್ಯಾಚರಣೆ ಆರಂಭವಾಗಿತ್ತು. ಪಿಎಫ್‌ಐ ಕಾರ್ಯಕರ್ತರು (PFI Workers) ಗಲಾಟೆ ಮಾಡಬಹುದು ಎಂಬ ಕಾರಣಕ್ಕೆ ಬಹುತೇಕ ಕಡೆ ರಾತ್ರಿಯೇ ಕಾರ್ಯಚರಣೆ ನಡೆಸಿ ನಾಯಕರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    ಆರೋಪ ಏನು?
    ಪಶ್ಚಿಮ ಏಷ್ಯಾದ ದೇಶಗಳಾದ ಕತಾರ್‌, ಕುವೈತ್‌, ಸೌದಿ ಅರೇಬಿಯಾ, ಟರ್ಕಿಯಿಂದ ಈ ಸಂಘಟನೆಗಳಿಗೆ ಅಕ್ರಮವಾಗಿ ಹಣ ಬರುತ್ತಿದೆ ಎನ್ನವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ. ಭಾರತದಲ್ಲಿ ಯುವಕರ ತಲೆ ಕೆಡಿಸಿ ಭಯೋತ್ಪಾದಕ ಕೃತ್ಯ ಎಸಗಲು ಈ ಸಂಘಟನೆಗಳು ಪ್ರೋತ್ಸಾಹ ನೀಡುತ್ತಿವೆ. ವಿದೇಶದಿಂದ ಬಂದ ನಿಧಿಯನ್ನು ದೇಶಾದ್ಯಂತ ಭಯೋತ್ಪಾದಕ ಚಟುವಟಿಕೆಗಳಿಗೆ ಮಾತ್ರವಲ್ಲದೆ ಯುವಕರಲ್ಲಿ ಮತಾಂಧತೆಯನ್ನು ಬೆಳೆಸಲು ಬಳಸಲಾಗುತ್ತಿದೆ. ಈ ಸಂಘಟನೆಯು ಮುಸ್ಲಿಂ ಸಹೋದರತ್ವ ಹೊಂದಿರುವಂತಹ ಪ್ಯಾನ್-ಇಸ್ಲಾಮಿಸ್ಟ್ ಸಂಘಟನೆಯೊಂದಿಗೆ ಸಂಪರ್ಕವನ್ನು ಹೊಂದಿದೆ.

    ಈ ಕುರಿತು ಮಾತನಾಡಿರುವ ಉತ್ತರ ಪ್ರದೇಶದ ಮಾಜಿ ಡಿಜಿಪಿ (DGP) ಬ್ರಿಜ್‌ಲಾಲ್, ಪಿಎಫ್‌ಐ ಅಪಾಯಕಾರಿ ಸಂಘಟನೆಯಾಗಿದ್ದು, ದೇಶದ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಜೊತೆಗೆ ನೇರವಾಗಿ ಪಾಕಿಸ್ತಾನದೊಂದಿಗೆ ಸಂಬಂಧ ಹೊಂದಿದೆ. ಈ ಸಂಘಟನೆಯ ಸದಸ್ಯರು ಭಾರತೀಯ ಮುಜಾಹಿದ್ದೀನ್‌ನೊಂದಿಗೆ ನೇರ ಸಂಪರ್ಕ ಹೊಂದಿದ್ದಾರೆ. ದೇಶದಲ್ಲಿ ಅನೇಕ ದೊಡ್ಡ ಸ್ಫೋಟಗಳನ್ನು ನಡೆಸಲು ಇವರೇ ಮುಖ್ಯ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಸ್ಟುಡೆಂಟ್ಸ್‌ ಇಸ್ಲಾಮಿಕ್‌ ಮೂವ್‌ಮೆಂಟ್‌ ಆಫ್‌ ಇಂಡಿಯಾ(SIMI) ನಾಯಕರೇ ಪಿಎಫ್‌ಐ- ಎಸ್‌ಡಿಪಿಐ ಸಂಘಟನೆಯ ಪ್ರಮುಖ ನಾಯಕರಾಗಿದ್ದಾರೆ. ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಬೇಕು ಎನ್ನುವುದೇ ಇವರ ಮುಖ್ಯ ಉದ್ದೇಶ.

    ಸದ್ಯ ಭಾರತದಲ್ಲಿರುವ ಶಿಯಾ, ಸುನ್ನಿ, ಸೂಫಿ, ದಿಯೋಬಂದ್‌ ಪಂಗಡದ ನಾಯಕರು ಪಿಎಫ್‌ಐ ಹಾಗೂ ಎಸ್‌ಡಿಪಿಐನಲ್ಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    SDPI, PFI ಮೇಲೆ NIA, ED ದಾಳಿ – ಕರ್ನಾಟಕದಲ್ಲಿ 20, ದೇಶಾದ್ಯಂತ 106 ಮಂದಿ ಅರೆಸ್ಟ್‌

    ನವದೆಹಲಿ: ಉಗ್ರ ಚಟುವಟಿಕೆಗೆ ಹಣಕಾಸಿನ ನೆರವು ನೀಡಿದ ಆರೋಪದ ಮೇಲೆ ದೇಶದಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಪ್ಯಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಮತ್ತು ಸೋಷಿಯಲ್‌ ಡೆಮೆಕ್ರಾಟಿಕ್‌ ಪಾರ್ಟಿ ಆಫ್‌ ಇಂಡಿಯಾ(SDPI) ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸಿವೆ.

    ದೇಶಾದ್ಯಂತ ಒಟ್ಟು 11 ರಾಜ್ಯಗಳಲ್ಲಿ ಎನ್‌ಐಎ(NIA), ಇಡಿ(ED), ರಾಜ್ಯಗಳ ಪೊಲೀಸ್‌ ಪಿಎಫ್‌ಐ, ಎಸ್‌ಡಿಪಿಐ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿವೆ. ಇದನ್ನೂ ಓದಿ: SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು

    ಕರ್ನಾಟಕದಿಂದ(Karnataka) 20 ಮಂದಿ ಮತ್ತು ದೇಶಾದ್ಯಂತ ಒಟ್ಟು 106 ಮಂದಿಯನ್ನು ಬಂಧಿಸಿದೆ. ಕರ್ನಾಟಕದಲ್ಲಿ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಕೊಪ್ಪಳ, ಕಾರವಾರ, ಕಲಬುರಗಿಯಲ್ಲಿ ದಾಳಿ ನಡೆದಿದ್ದು ದಾಖಲೆಗಳನ್ನು ವಶ ಪಡಿಸಿಕೊಂಡಿದ್ದಾರೆ.

    ಯಾವ ರಾಜ್ಯದಿಂದ ಎಷ್ಟು?
    ಆಂಧ್ರಪ್ರದೇಶ 5, ಅಸ್ಸಾಂ 9, ದೆಹಲಿ, 3, ಕರ್ನಾಟಕ 20, ಕೇರಳ 22, ಮಧ್ಯಪ್ರದೇಶ 4, ಮಹಾರಾಷ್ಟ್ರ 20, ಪುದುಚ್ಚೇರಿ 3, ರಾಜಸ್ಥಾನ 2, ತಮಿಳುನಾಡು 10, ಉತ್ತರ ಪ್ರದೇಶದ 8 ಸೇರಿ ಒಟ್ಟು 106 ಮಂದಿಯನ್ನು ಬಂಧಿಸಲಾಗಿದೆ.

    ದಾಳಿ ಯಾಕೆ?
    ಭಯೋತ್ಪಾದನೆಗೆ ಧನಸಹಾಯ, ನಿಷೇಧಿತ ಸಂಸ್ಥೆಗಳ ಜೊತೆ ಸಂಪರ್ಕ, ದೇಶದಲ್ಲಿ ಗಲಭೆ ನಡೆಸಲು ಪ್ರಚೋದನೆ, ಮೂಲಭೂತವಾದಿ ವ್ಯಕ್ತಿಗಳಿಗೆ ತಮ್ಮ ಸಂಸ್ಥೆಯಲ್ಲಿ ಆಶ್ರಯ ಇತ್ಯಾದಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಎನ್‌ಐಎ ದೇಶಾದ್ಯಂತ ದಾಳಿ ನಡೆಸಿದೆ.

    Live Tv
    [brid partner=56869869 player=32851 video=960834 autoplay=true]

  • ಉಗ್ರ ಸಂಘಟನೆಯೊಂದಿಗೆ ಸಂಪರ್ಕ – ಕಾರವಾರದ SDPI ಮುಖಂಡ ವಶಕ್ಕೆ

    ಉಗ್ರ ಸಂಘಟನೆಯೊಂದಿಗೆ ಸಂಪರ್ಕ – ಕಾರವಾರದ SDPI ಮುಖಂಡ ವಶಕ್ಕೆ

    ಕಾರವಾರ: ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ ಉಗ್ರರ (Terrorist) ಕಾರ್ಯ ಬಯಲಾಗುತಿದ್ದಂತೆ  ಇದರ ಬೇರು ಶಿರಸಿಗೂ ತಾಕಿದೆ. ಇಂದು ಮುಂಜಾನೆ ಶಿರಸಿಯ ಟಿಪ್ಪು ನಗರದಲ್ಲಿರುವ ಎಸ್‌ಡಿಪಿಐ (SDPI) ಮುಖಂಡನ ಮನೆಯ ಮೇಲೆ ರಾಷ್ಟ್ರೀಯ ತನಿಖಾ ದಳದ (NIA) ಅಧಿಕಾರಿಗಳು ದಾಳಿ ನಡೆಸಿದ್ದು, ಎಸ್‌ಡಿಪಿಐ ಮುಖಂಡ ಅಜೂಜ್ ಅಬ್ದುಲ್ ಶುಕುರ್ ಹೊನ್ನಾವರ್‌ನನ್ನು(45) ವಶಕ್ಕೆ ಪಡೆದಿದ್ದಾರೆ.

    ಈತನ ಸಹೋದರ ಪಿಎಫ್‌ಐ (PFI) ನಲ್ಲಿ ಪ್ರಾಂತೀಯ ಅಧ್ಯಕ್ಷನಾಗಿದ್ದು ಮೌಸಿನ್ ಅಬ್ದುಲ್ ಶಕೂರ್ ಎಂಬಾತನ ಮನೆಯ ಮೇಲೂ ದಾಳಿ ನಡೆದಿದೆ. ಆದರೆ ಈತ ಮನೆಯಲ್ಲಿ ಇರದ ಕಾರಣ ಅಧಿಕಾರಿಗಳು ಮರಳಿದ್ದಾರೆ. ಬಂಧಿತ ಅಜೂಜ್ ಅಬ್ದುಲ್ ಶುಕುರ್ ನಿಂದ ಒಂದು ಲ್ಯಾಪ್ ಟಾಪ್ (Laptop), ಎರಡು ಮೊಬೈಲ್ (Mobile), ಒಂದು ಪುಸ್ತಕ ಹಾಗೂ ಒಂದು ಸಿಡಿ ಜಪ್ತಿ ಮಾಡಿಕೊಳ್ಳಲಾಗಿದ್ದು ಬಿಗಿ ಪೊಲೀಸ್ (Police) ಬಂದೋಬಸ್ತ್ ನಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

    ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಬಂಧಿತ ಪಿಐಫ್‌ಐ (PFI) ಸದಸ್ಯರು ಹಾಗೂ ಉಗ್ರನ ಬಂಧಿಸಿದ ವೇಳೆ ಶಿರಸಿಯ ಪಿಎಫ್‌ಐ ಮುಖಂಡರ ಹೆಸರು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಸ್ಥಳೀಯ ಪೊಲೀಸರ ಸಹಾಯದಿಂದ ಕೇಂದ್ರ ಗುಪ್ತದಳ ವಿಭಾಗದ ಅಧಿಕಾರಿಗಳು, ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಇಂದು ಮುಂಜಾನೆ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು

    SDPI ಕಚೇರಿಯ ಬಾಗಿಲು ಧ್ವಂಸ ಮಾಡಿ ನುಗ್ಗಿದ NIA ಅಧಿಕಾರಿಗಳು

    ಮಂಗಳೂರು: ಎನ್‍ಐಎ ಅಧಿಕಾರಿಗಳು ಇಂದು ಎಸ್‍ಡಿಪಿಐ ಕಚೇರಿಯ ಬಾಗಿಲು ಧ್ವಂಸ ಮಾಡಿ ಕಚೇರಿಯ ಒಳಗೆ ನುಗ್ಗಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.

    ಎನ್‍ಐಎ (NIA) ಅಧಿಕಾರಿಗಳು ಎಸ್‍ಡಿಪಿಐ (SDPI) ಕಚೇರಿಯ ಬೀಗವನ್ನು ಬ್ಲೇಡ್‍ನಿಂದ ಕಟ್ ಮಾಡಿ ಕಚೇರಿಯ ಶಟರ್ ಒಪನ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅಧಿಕಾರಿಗಳು ಒಳಭಾಗದ ಡೋರ್‌ನ ಗಾಜನ್ನು ಪುಡಿ ಮಾಡಿದ್ದಾರೆ. ಮಂಗಳೂರಿನ ಕಚೇರಿಯೊಳಗೆ ನುಗ್ಗಿದ ಎನ್‍ಐಎ ಅಧಿಕಾರಿಗಳು ಅಲ್ಲಿ ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಕಂಪ್ಯೂಟರ್ ಸಿಪಿಯುನ ಹಾರ್ಡ್‍ಡಿಸ್ಕ್‌ನ್ನು ವಶಕ್ಕೆ ಪಡೆದಿದ್ದಾರೆ.

    ಈ ಬಗ್ಗೆ ಎಸ್‍ಡಿಪಿಐ ರಾಜ್ಯ ಮುಖಂಡ ಮಾತನಾಡಿ, ದಾಳಿ ಮಾಡುವ ಸಂದರ್ಭದಲ್ಲಿ ಕಚೇರಿಯಲ್ಲಿ ಸಿಬ್ಬಂದಿಯಿದ್ದ. ಆತ ಎನ್‍ಐಎ ಅಧಿಕಾರಿಗಳ ಬಳಿ ಪ್ರಶ್ನಿಸುವ ಮೊದಲೇ ಕಚೇರಿಯ ಬೀಗವನ್ನು ಒಡೆದು ನುಗ್ಗಿದ್ದಾರೆ. ಒಂದು ರೀತಿಯ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಈ ರೀತಿಯ ಘಟನೆಯನ್ನು ಎಸ್‍ಡಿಪಿಐ ಖಂಡಿಸುತ್ತೇವೆ ಎಂದರು. ಇದನ್ನೂ ಓದಿ: ಕೊಪ್ಪಳದಲ್ಲಿ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಬಂಧನ

    ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿದೆ. ಕರ್ನಾಟಕ, ಉತ್ತರ ಪ್ರದೇಶ, ತೆಲಂಗಾಣ, ಉತ್ತರ ಪ್ರದೇಶ, ಕೇರಳ, ತಮಿಳುನಾಡು ಸೇರಿದಂತೆ 10 ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ. ಎನ್‍ಐಐ ಇತಿಹಾಸದಲ್ಲಿ ಅತಿ ದೊಡ್ಡ ದಾಳಿ ಇದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    Live Tv
    [brid partner=56869869 player=32851 video=960834 autoplay=true]

  • NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    NIA ದಾಳಿ: ದೇಶದಲ್ಲಿ ಟೆರರಿಸ್ಟ್‌ಗಳನ್ನ ಹುಟ್ಟುಹಾಕಿದ್ದೇ ಕಾಂಗ್ರೆಸ್ – ಆರಗ ಜ್ಞಾನೇಂದ್ರ

    ಬೆಂಗಳೂರು: ದೇಶದಲ್ಲಿ ಟೆರರಿಸ್ಟ್‌ಗಳನ್ನ (Terrorist) ಹುಟ್ಟುಹಾಕಿದ್ದೇ ಕಾಂಗ್ರೆಸ್ (Congress), ಟೆರಸ್ಸ್‌ಗಳು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra)  ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

    ಕರ್ನಾಟಕದ (Karnataka) ವಿವಿಧ ಜಿಲ್ಲೆಗಳು ಸೇರಿದಂತೆ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ (NIA) ತನ್ನ ದಾಳಿ ಮುಂದುವರಿಸಿವೆ. ದೇಶಾದ್ಯಂತ ಇಂದು ಬೆಳ್ಳಂಬೆಳಿಗ್ಗೆಯಿಂದಲೇ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‌ಐಎ, ಇಡಿ (ED) ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ (Police) ನೆರವಿನೊಂದಿಗೆ ಪಿಎಫ್‌ಐ (PFI) ಹಾಗೂ ಎಸ್‌ಡಿಪಿಐ (SDPI) ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದೆ. ಇದನ್ನೂ ಓದಿ: 50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್- ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ

    ಈ ಕುರಿತು ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra), ಖಚಿತ ಮಾಹಿತಿ ಮೇರೆಗೆ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳ ಮೇಲೆ ಎನ್‌ಐಎ ಹಾಗೂ ಪೊಲೀಸರು ದಾಳಿ ನಡೆಸಿದ್ದಾರೆ. ಏಕತೆ, ಸಮಗ್ರತೆ ಹಾಳು ಮಾಡೋ, ಜೀವಹಾನಿ ಮಾಡುವ ಸಂಘಟನೆಗಳು ಹಲವು ಕೃತ್ಯಗಳ ಹಿಂದೆ ಇವೆ. ಆದ್ದರಿಂದ ಮಾಹಿತಿಯ ಮೇರೆಗೆ ರೇಡ್ ಆಗಿದೆ. ಸಂಘಟನೆಯ ಕೆಲ ಮುಖಂಡರನ್ನು ಈಗ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

    ನಾನು ಶಿವಮೊಗ್ಗ ಪೊಲೀಸರಿಗೆ ಅಭಿನಂದನೆ ಸಲ್ಲಿಸ್ತೇನೆ. ಶಿವಮೊಗ್ಗ ಪ್ರಕರಣದಲ್ಲಿ ಬಾಂಬ್ (Bomb) ತಯಾರು ಮಾಡಲಾಗಿತ್ತು. ಅದನ್ನು ಟ್ರಯಲ್ ಕೂಡ ಮಾಡಿದ್ದಾರೆ. ಅವರ ಬಂಧನದಿಂದ ರಕ್ತಹಾನಿ ಜೀವಹಾನಿ ತಡೆಗಟ್ಟಲಾಗಿದೆ. ಇದನ್ನೂ ಓದಿ: ಮೊಸಳೆಯನ್ನು ಹಿಡಿದು ಕ್ಲಾಸ್‌ ರೂಮಿನಲ್ಲಿ ಕೂಡಿ ಹಾಕಿದ ಗ್ರಾಮಸ್ಥರು

    ಪಿಎಫ್‌ಐ ಕಾರ್ಯಕರ್ತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಇಂತಹ ಸಂದರ್ಭದಲ್ಲಿ ಪ್ರತಿಭಟನೆ ಮಾಡೋದು ಸರಿಯಲ್ಲ. ದೇಶದಲ್ಲಿ ಎಲ್ಲರೂ ಕಾನೂನು ಪಾಲಿಸಬೇಕು. ತಪ್ಪಿತಸ್ಥರು ಅಲ್ಪಸಂಖ್ಯಾತರೋ ಇಲ್ವೋ ಅಂತ ಪೊಲೀಸರು ಕೆಲಸ ಮಾಡೋಕೆ ಆಗಲ್ಲ. ಟೆರರಿಸ್ಟ್ಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್, ಟೆರರಿಸ್ಟ್ಗಳನ್ನು ತಪ್ಪಿಸಿಕೊಳ್ಳಲು ಅವಕಾಶ ಕೊಟ್ಟಿದ್ದೇ ಕಾಂಗ್ರೆಸ್ ಅವರು ದೇಶದ ದೃಷ್ಟಿಯಿಂದ ಯೋಚನೆ ಮಾಡಬೇಕು ಎಂದು ಕಿಡಿ ಕಾರಿದ್ದಾರೆ.

    ಸಂಘಟನೆ ಬ್ಯಾನ್ ಆದ್ರೆ ವ್ಯಕ್ತಿಗಳ ರಾಕ್ಷಸ ಮನೋಭಾವ ಬದಲಾಗೋದಿಲ್ಲ. ಶಿವಮೊಗ್ಗದ ಶಾರಿಕ್ ಸ್ಯಾಟಲೈಟ್ ಫೋನ್‌ (Satellite Phone) ನಲ್ಲಿ ಮಾತನಾಡಿದ್ದಾನೆ. ತಲೆಮರೆಸಿಕೊಂಡಿರೋ ಆತನನ್ನು ಪತ್ತೆಮಾಡಲಾಗುತ್ತಿದೆ. ಶಿವಮೊಗ್ಗ ಪೊಲೀಸರಿಗೆ ಹೇಗೆ ಹ್ಯಾಟ್ಸ್ ಆಫ್ ಸಲ್ಲಿಸಬೇಕೋ ಗೊತ್ತಾಗ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊಪ್ಪಳದಲ್ಲಿ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಬಂಧನ

    ಕೊಪ್ಪಳದಲ್ಲಿ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಬಂಧನ

    ಕೊಪ್ಪಳ: ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ (NIA) ಮತ್ತು ಜಾರಿ ನಿರ್ದೇಶನಾಲಯ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಕಚೇರಿ ಮತ್ತು ನಾಯಕರ ನಿವಾಸದ ಮೇಲೆ ದಾಳಿ ನಡೆಸಿದೆ. ಈ ನಡುವೆ ಕರ್ನಾಟಕದ ಕೊಪ್ಪಳ (Koppala) ಜಿಲ್ಲೆಯ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷನನ್ನು ಅಧಿಕಾರಿಗಳು ಬಂಧಿಸಿದ್ದಾರೆ.

    ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಪೊಲೀಸರು ಗಂಗಾವತಿ ನಗರದಲ್ಲಿರುವ ಪಿಎಫ್‍ಐ ಸಂಘಟನೆಯ ಜಿಲ್ಲಾಧ್ಯಕ್ಷ ಅಬ್ದುಲ್ ಫೈಯಾಜ್‍ನನ್ನು ಬಂಧಿಸಿದ್ದಾರೆ. ಎಸ್‍ಪಿ ನೇತೃತ್ವದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಅಬ್ದುಲ್ ಫೈಯಾಜ್‍ನನ್ನು (Abdul Fayyaz) ಬಂಧಿಸಿ ನಂತರ ಗಂಗಾವತಿಯಿಂದ ಬೆಂಗಳೂರಿನ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದನ್ನೂ ಓದಿ: ಮಂಗಳೂರಿನ PFI, SDPI ಕಚೇರಿ ಮೇಲೆ NIA ದಾಳಿ

    ಗುರುವಾರ ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ರಾಜ್ಯಗಳಲ್ಲಿ ಎನ್‍ಐಎ, ಇಡಿ ದಾಳಿ ಮುಂದುವರಿಸಿದ್ದು ರಾಜ್ಯದ ಪೊಲೀಸರ ನೆರವಿನೊಂದಿಗೆ ಪಿಎಫ್‍ಐ ಸಂಘಟನೆಯ 100ಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ಸಂಪರ್ಕ-10 ರಾಜ್ಯಗಳ SDPI, PFI ಕಚೇರಿ, ನಾಯಕರ ಮನೆ ಮೇಲೆ NIA ದಾಳಿ

    ಭಯೋತ್ಪಾದನೆಗೆ ಧನಸಹಾಯ, ತರಬೇತಿ ಶಿಬಿರಗಳನ್ನು ಆಯೋಜಿಸುವುದು ಮತ್ತು ನಿಷೇಧಿತ ಸಂಸ್ಥೆಗಳಿಗೆ ಸೇರಲು ಜನರನ್ನು ಮೂಲಭೂತವಾಗಿ ರೂಪಿಸುವ ವ್ಯಕ್ತಿಗಳ ವಸತಿ ಮತ್ತು ಅಧಿಕೃತ ಆವರಣದಲ್ಲಿ ಈ ಹುಡುಕಾಟಗಳನ್ನು ನಡೆಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]