Tag: NIA

  • ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ರೆಡ್ ಅಲರ್ಟ್ – ಗುಪ್ತಚರ ಇಲಾಖೆ ಸೂಚನೆ ಏನು?

    ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ ರೆಡ್ ಅಲರ್ಟ್ – ಗುಪ್ತಚರ ಇಲಾಖೆ ಸೂಚನೆ ಏನು?

    ಬೆಂಗಳೂರು: ದೇಶದಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI) ಸಂಘಟನೆಯನ್ನು 5 ವರ್ಷ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡ ಬೆನ್ನಲ್ಲೇ ಕರ್ನಾಟಕ ಸೇರಿ 6 ಜಿಲ್ಲೆಗಳಿಗೆ ಕೇಂದ್ರ ಗುಪ್ತಚರ ಇಲಾಖೆಯಿಂದ ರೆಡ್ ಅಲರ್ಟ್ ಸೂಚನೆ ನೀಡಲಾಗಿದೆ.

    ಪಿಎಫ್‍ಐ ಪ್ರಬಲವಾಗಿರುವ ರಾಜ್ಯಗಳಿಗೆ ಕೇಂದ್ರ ಗುಪ್ತಚರ ಇಲಾಖೆ ಅಲರ್ಟ್ ಮೆಸೇಜ್ ನೀಡಿದ್ದು, ಕೇರಳ (Kerala), ಕರ್ನಾಟಕ (Karanataka), ತಮಿಳುನಾಡು (Tamilnadu), ಆಂದ್ರಪ್ರದೇಶ (Andhra Pradesh), ಮಹಾರಾಷ್ಟ್ರ (Maharashtra), ತೆಲಂಗಾಣಕ್ಕೆ (Telangana) ರೆಡ್ ಅಲರ್ಟ್ ನೀಡಿದೆ. ಪ್ರತಿಭಟನೆಗೆ ಅವಕಾಶ ನೀಡಬೇಡಿ, ಗುಂಪು ಸೇರಲು ಅವಕಾಶ ನೀಡದಂತೆ, ಯಾವುದೇ ರೀತಿಯ ಗಲಭೆ ಸೃಷ್ಟಿ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಇದನ್ನೂ ಓದಿ: ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಪಿಎಫ್‍ಐ ಸಂಘಟನೆ ಬ್ಯಾನ್ ಹಿನ್ನೆಲೆ ಕರ್ನಾಟಕ (Karanataka) ರಾಜ್ಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಬೆಂಗಳೂರಿನ (Bengaluru) ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮಾಡಿಕೊಳ್ಳಲಾಗಿದೆ. ಸೂಕ್ಷ್ಮ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಗಸ್ತು, ಅನುಮಾನಸ್ಪದ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮಗಳನ್ನು ಕೈಗೊಂಡಿದ್ದೇವೆ. ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳು ನಿಗಾವಹಿಸಲಿದ್ದಾರೆ. ಸದ್ಯಕ್ಕೆ ಯಾವುದೇ ಪ್ರತಿಭಟನೆ, ರ್‍ಯಾಲಿ ಸಂಬಂಧ ಮಾಹಿತಿ ಲಭ್ಯವಾಗಿಲ್ಲ ಎಂದು ಪಬ್ಲಿಕ್ ಟಿವಿ ಜೊತೆ ನಗರ ಪೊಲೀಸ್ ಅಯುಕ್ತ ಪ್ರತಾಪ್ ರೆಡ್ಡಿ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಶಾಂತಿ ಭಂಗ, ಅಕ್ರಮಕೂಟ ಆರೋಪದಡಿ 7 ಮಂದಿ PFI ಮುಖಂಡರು ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

    ಪಿಎಫ್‍ಐ ಬ್ಯಾನ್ ಕುರಿತಾಗಿ ಎರಡು ದಿನದ ಹಿಂದೆಯೇ ರಾಜ್ಯಗಳಿಗೆ ಸೂಚನೆ ಬಂದಿತ್ತು. ಕೇಂದ್ರ ಗೃಹ ಇಲಾಖೆ ದಕ್ಷಿಣ ಭಾರತದ ರಾಜ್ಯಗಳಿಗೆ ಸಂದೇಶ ರವಾನೆ ಮಾಡಿತ್ತು. ಪಿಎಫ್‍ಐ ಸಂಘಟನೆಯ ನಿಯಂತ್ರಣ ಜವಾಬ್ದಾರಿಯನ್ನು ರಾಜ್ಯ ಸರ್ಕಾರಕ್ಕೆ ಕೇಂದ್ರ ಗೃಹ ಇಲಾಖೆ ನೀಡಿತ್ತು. ಅದರಂತೆ ನಿನ್ನೆಯೇ ಮುಂಜಾಗ್ರತಾ ಕ್ರಮವಾಗಿ ಹಲವು ಪಿಎಫ್‍ಐ ನಾಯಕರನ್ನು ಅರೆಸ್ಟ್ ಮಾಡಲಾಗಿತ್ತು. 100ಕ್ಕೂ ಹೆಚ್ಚು ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ಉಗ್ರ ಸಂಘಟನೆಗಳ ಜೊತೆ ಲಿಂಕ್‌ – ಈ ಕ್ಷಣದಿಂದಲೇ PFI, 8 ಅಂಗ ಸಂಸ್ಥೆಗಳು ಬ್ಯಾನ್‌

    ನವದೆಹಲಿ: ದೇಶಾದ್ಯಂತ ಹಲವು ರಾಜ್ಯಗಳಲ್ಲಿ ದಾಳಿ ನಡೆದ ಬಳಿಕ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ಸಂಘಟನೆಯನ್ನು ಕೇಂದ್ರ ಸರ್ಕಾರ ಈ ಕ್ಷಣದಿಂದಲೇ ನಿಷೇಧ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದೆ.

    ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ನಿಷೇಧ ಮಾಡಿ ಗೃಹ ಸಚಿವಾಲಯ(Ministry of Home Affairs) ಆದೇಶ ಪ್ರಕಟಿಸಿದೆ.

    ಕಾನೂನುಬಾಹಿರ ಚಟುವಟಿಕೆಗಳ (ನಿರ್ಬಂಧ) ಕಾಯ್ದೆಯ ಅಡಿ ಪಿಎಫ್‌ಐ ಅಂಗ ಸಂಸ್ಥೆಗಳಾದ ರಿಹಬ್ ಇಂಡಿಯಾ ಫೌಂಡೇಶನ್ (RIF), ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (CFI), ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ (AIIC), ನ್ಯಾಷನಲ್ ಕಾನ್ಫೆಡರೇಶನ್ ಆಫ್ ಹ್ಯೂಮನ್ ರೈಟ್ಸ್ ಆರ್ಗನೈಸೇಶನ್ (NCHRO), ನ್ಯಾಷನಲ್ ವುಮೆನ್ಸ್ ಫ್ರಂಟ್, ಜೂನಿಯರ್ ಫ್ರಂಟ್, ಎಂಪವರ್ ಇಂಡಿಯಾ ಫೌಂಡೇಶನ್ ಮತ್ತು ರಿಹ್ಯಾಬ್ ಫೌಂಡೇಶನ್ ಕೇರಳವನ್ನು ನಿಷೇಧಿಸಲಾಗಿದೆ.

    ಸೆಪ್ಟೆಂಬರ್ 22 ಮತ್ತು ಸೆಪ್ಟೆಂಬರ್ 27 ರಂದು ರಾಷ್ಟ್ರೀಯ ತನಿಖಾ ಸಂಸ್ಥೆ (NIA), ಜಾರಿ ನಿರ್ದೇಶನಾಲಯ (ED) ಮತ್ತು ರಾಜ್ಯ ಪೊಲೀಸರು PFI ಮೇಲೆ ದಾಳಿ ನಡೆಸಿತ್ತು. ಮೊದಲ ಸುತ್ತಿನ ದಾಳಿಯಲ್ಲಿ ಪಿಎಫ್‌ಐಗೆ ಸೇರಿದ 106 ಮಂದಿಯನ್ನು ಬಂಧಿಸಲಾಗಿದ್ದರೆ ಎರಡನೇ ಸುತ್ತಿನ ದಾಳಿ 247 ಮಂದಿಯನ್ನು ಬಂಧಿಸಿತ್ತು. ಇದನ್ನೂ ಓದಿ: ಶಾಂತಿ ಭಂಗ, ಅಕ್ರಮಕೂಟ ಆರೋಪದಡಿ 7 ಮಂದಿ PFI ಮುಖಂಡರು ಅರೆಸ್ಟ್ – 14 ದಿನ ನ್ಯಾಯಾಂಗ ಬಂಧನ

     

    ನಿಷೇಧಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆಗಳಿಗೆ ಸಾಕಷ್ಟು ಪುರಾವೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

    ವಿದೇಶಗಳಿಂದ ಅಕ್ರಮ ದೇಣಿಗೆ, ಸಾರ್ವಜನಿಕರ ಶಾಂತಿಗೆ ಭಂಗ, ಕಾನೂನು ಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದ ಮೇಲೆ ಪಿಎಫ್‌ಐ ಕಚೇರಿಗಳು ಹಾಗೂ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್

    ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ: ಖಾದರ್

    ಮಂಗಳೂರು: ನಮ್ಮ ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ಯಾವುದೇ ಧಾರ್ಮಿಕ ಗುರುಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿದ್ದಾರಾ ಎಂದು ವಿಪಕ್ಷ ಉಪ ನಾಯಕ ಯು.ಟಿ.ಖಾದರ್ (U>T Khader) ಪ್ರಶ್ನಿಸಿದರು.

    ರಾಜ್ಯಾದ್ಯಂತ ಪಿಎಫ್ ಐ (PFI) ಕಾರ್ಯಕರ್ತರ ಬಂಧನ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಮಾಜದಲ್ಲಿ ಅಶಾಂತಿ ಮತ್ತು ದ್ವೇಷ ಸೃಷ್ಟಿಸಿದ್ರೆ ಕ್ರಮ ಆಗಬೇಕು. ಅಂತಹ ಯಾವುದೇ ಸಂಘಟನೆ ವಿರುದ್ಧ ಕ್ರಮಕ್ಕೆ ಎಲ್ಲಾ ಧರ್ಮದ ಸಹಮತ ಇದೆ. ಕಾನೂನು ಕೈಗೆತ್ತಿಕೊಳ್ಳುವವರನ್ನ ಹದ್ದುಬಸ್ತಿನಲ್ಲಿಡೋದು ಸರ್ಕಾರದ ಜವಾಬ್ದಾರಿ. ಶಾಂತಿ ಸೌಹಾರ್ದದ ವಾತಾವರಣ ಸರ್ಕಾರ ನಿರ್ಮಾಣ ಮಾಡಬೇಕು. ಯಾವುದೇ ತಾರತಮ್ಯ ಮಾಡದೇ ಸರ್ಕಾರ ಕ್ರಮ ತೆಗೆದುಕೊಳ್ಳಲಿ ಎಂದರು. ಇದನ್ನೂ ಓದಿ: PFI ಮೇಲೆ ದಾಳಿ – ಸಿದ್ದು ಸರ್ಕಾರದಿಂದ ಕೇಸ್‌ ವಾಪಸ್‌, ಬಿಜೆಪಿಗೆ ಸಿಕ್ತು ಹೊಸ ಅಸ್ತ್ರ  

    ಎಲ್ಲರಿಗೂ ಒಂದೇ ರೀತಿಯ ನ್ಯಾಯ ಕೊಟ್ಟರೆ ಎಲ್ಲರೂ ಬೆಂಬಲಿಸುತ್ತಾರೆ. ನಿರಪರಾಧಿಗಳಿಗೆ ಅನ್ಯಾಯ ಆಗದಿದ್ರೆ ಸರ್ಕಾರವನ್ನ ಎಲ್ಲರೂ ಬೆಂಬಲಿಸುತ್ತಾರೆ. ನಮ್ಮ ರಾಜ್ಯದಲ್ಲಿ ಧಾರ್ಮಿಕ ಗುರುಗಳು, ಉಲೇಮಾಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿಲ್ಲ. ಯಾವುದೇ ಧಾರ್ಮಿಕ ಗುರುಗಳು ಈ ದಾಳಿ ಬಗ್ಗೆ ಅಪಸ್ವರ ಎತ್ತಿದ್ದಾರಾ ಎಂದು ಪ್ರಶ್ನಿಸಿದರು. ಇದನ್ನೂ ಓದಿ: PFI ಕಾರ್ಯಕರ್ತರ ಮೇಲೆ FIR ಇಲ್ಲ – ಏನಿದು PAR? ವಶಕ್ಕೆ ಪಡೆದದ್ದು ಯಾಕೆ?

    ನಮ್ಮ ಧರ್ಮದ ಜೊತೆ ಎಲ್ಲಾ ಧರ್ಮ ನ್ಯಾಯಯುತ ತನಿಖೆಗೆ ಬೆಂಬಲ ಕೊಡುತ್ತದೆ. ತಾರತಮ್ಯ ಮತ್ತು ಅನ್ಯಾಯ ಯಾರಿಗೂ ಆಗದಂತೆ ಸರ್ಕಾರ ನೋಡಿಕೊಳ್ಳಬೇಕು. ಅದು ಬಿಟ್ಟು ಈವರೆಗೆ ಯಾರೂ ಈ ಬಗ್ಗೆ ಅಪಸ್ವರ ಎತ್ತಿಲ್ಲ. ಯಾವ ಸಂಸ್ಥೆ ಬ್ಯಾನ್ ಮಾಡಬೇಕು ಅನ್ನೋದು ತನಿಖೆಯಲ್ಲಿ ಗೊತ್ತಾಗುತ್ತೆ. ಆದರೆ ಎಲ್ಲಾ ಸಂಘಟನೆಗೆ ಸಮಾನತೆಯ ಕಾನೂನು ತನ್ನಿ. ದ್ವೇಷಾಧರಿತ ಮತ್ತು ಗಲಭೆ ಸೃಷ್ಟಿಸುವ ಕೆಲಸ ಆಗಿದ್ದರೆ ಎಲ್ಲಾ ಸಂಘಟನೆಗಳಿಗೂ ಒಂದೇ ಕಾನೂನು ತನ್ನಿ ಎಂದು ಖಾದರ್ ಆಗ್ರಹಿಸಿದರು. 

    Live Tv
    [brid partner=56869869 player=32851 video=960834 autoplay=true]

  • ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    ದಸರಾ ವೇಳೆ RSS, BJP ನಾಯಕರ ಮೇಲೆ ದಾಳಿಗೆ PFI ಸಂಚು

    ಮುಂಬೈ/ಚೆನ್ನೈ: ದಸರಾ(Dasara) ಸಮಯದಲ್ಲಿ ಆರ್‌ಎಸ್‌ಎಸ್‌(RSS) ಮತ್ತು ಬಿಜೆಪಿ(BJP) ನಾಯಕರ ಮೇಲೆ ದಾಳಿ ನಡೆಸಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಚು ರೂಪಿಸಿದ್ದ ಸ್ಫೋಟಕ ವಿಚಾರ ಈಗ ಬೆಳಕಿಗೆ ಬಂದಿದೆ.

    ನಾಗ್ಪುರದಲ್ಲಿರುವ(Nagpur) ಆರ್‌ಎಸ್‌ಎಸ್‌ನ ಕೇಂದ್ರ ಕಚೇರಿ, ಹಲವು ಹಿರಿಯ ಆರ್‌ಎಸ್‌ಎಸ್‌ ನಾಯಕರು ಹಾಗೂ ಬಿಜೆಪಿ ನಾಯಕರ ಮೇಲೆ ದಾಳಿಗೆ ಪಿಎಫ್‌ಐ ಯೋಜನೆ ರೂಪಿಸಿತ್ತು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ(ATS) ಮೂಲಗಳನ್ನು ಆಧಾರಿಸಿ ವರದಿಯಾಗಿದೆ.

    ದಸರಾ ಸಮಯದಲ್ಲಿ ಆರ್‌ಎಸ್‌ಎಸ್‌ ಕಚೇರಿಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಈ ಸಮಯದಲ್ಲಿ ಆರ್‌ಎಸ್‌ಎಸ್‌ ನಾಯಕರು ಭಾಗಿಯಾಗುತ್ತಾರೆ. ಈ ಸಮಯವನ್ನು ನೋಡಿಕೊಂಡು ಅವರ ಮೇಲೆ ದಾಳಿ ನಡೆಸಲು ಪಿಎಫ್‌ಐ ಪ್ಲ್ಯಾನ್‌ ಮಾಡಿತ್ತು ಎಂದು ಎಟಿಎಸ್‌ ಹೇಳಿದೆ.

    ಕಳೆದ ವಾರ ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ(NIA) ದಾಳಿಯ ಜೊತೆ ಮಹಾರಾಷ್ಟ್ರದಲ್ಲಿ ಎಟಿಎಸ್‌ ದಾಳಿ ನಡೆಸಿ 10 ಮಂದಿಯನ್ನು ಬಂಧಿಸಿತ್ತು.

    14 ಮಂದಿ ಅರೆಸ್ಟ್‌:
    ಪಿಎಫ್‌ಐ ಮೇಲೆ ಎನ್‌ಐಎ ದಾಳಿ ಬಳಿಕ ತಮಿಳುನಾಡಿನಲ್ಲಿ(Tamilnadu) ಆರ್‌ಎಸ್‌ಎಸ್‌ ಕಚೇರಿ, ಹಿಂದೂ ಸಂಘಟನೆಗಳ ನಾಯಕರ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿ ಸಂಬಂಧ ಪಿಎಫ್‌ಐ ಮತ್ತು ಎಸ್ ಡಿಪಿಐನ 14 ಕಾರ್ಯಕರ್ತರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.

    ಸೇಲಂ, ಈರೋಡ್‌, ಕೊಯಮತ್ತೂರು, ದಿಂಡಿಗಲ್, ತೂತ್ತುಕುಡಿ, ಕನ್ಯಾಕುಮಾರಿ, ಮದುರೈ ಸೇರಿ ಹಲವು ಕಡೆ ದಾಳಿ ನಡೆಸಿದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Training To Be Organised – ಪಿಎಫ್‌ಐ ಪತ್ರ, ಪೊಲೀಸ್‌ ತನಿಖೆ ಚುರುಕು

    Training To Be Organised – ಪಿಎಫ್‌ಐ ಪತ್ರ, ಪೊಲೀಸ್‌ ತನಿಖೆ ಚುರುಕು

    ಬೆಂಗಳೂರು: ದೇಶಾದ್ಯಂತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ(PFI) ಮೇಲೆ ದಾಳಿ ನಡೆಸಿರುವ ರಾಷ್ಟ್ರೀಯ ತನಿಖಾ ದಳ(NIA), ಜಾರಿ ನಿರ್ದೇಶನಾಲಯ(ED) ಮತ್ತು ಬೆಂಗಳೂರು ಪೊಲೀಸರು(Bengaluru Police) ಬಂಧಿತ ಆರೋಪಿಗಳನ್ನ ತೀವ್ರ ವಿಚಾರಣೆಗೆ ಒಳಪಡಿಸುತ್ತಿದ್ದಾರೆ.

    ಈ ಮಧ್ಯೆ ಬೆಂಗಳೂರು ಪೊಲೀಸರು ಬಂಧಿಸಿರುವ ಹದಿನೈದು ಶಂಕಿತರ ಬಳಿ ಟ್ರೈನಿಂಗ್ ಟು ಬಿ ಅರ್ಗನೈಸ್ಡ್ (Training To Be Organised) ಎಂಬ ಒನ್ ಲೈನ್ ಲೆಟರ್ ಸಿಕ್ಕಿದ್ದು ತನಿಖೆ ಚುರುಕಾಗುತ್ತಿದೆ.  ಇದನ್ನೂ ಓದಿ: ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್‌: ಆರೋಪಿಗಳ ಕೆಲಸ ಏನು?

    ಯಾವ ತರಬೇತಿ? ಏತಕ್ಕಾಗಿ ಎಂಬೆಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೊತೆಗೆ ದೆಹಲಿಯಲ್ಲಿ ಮಂಗಳೂರು ಮೂಲದ ಮಹಮ್ಮದ್ ಆಶ್ರಫ್‍ನನ್ನು ಪೊಲೀಸರು ಬಂಧಿಸಿದ್ದರು. ಈತ ಸಂಘಟನೆಯೊಂದರ ರಾಷ್ಟ್ರೀಯ ಕಾರ್ಯದರ್ಶಿ ಎನ್ನಲಾಗಿದ್ದು, ಕರ್ನಾಟಕ, ಜಾರ್ಖಂಡ್, ಒಡಿಶಾ ರಾಜ್ಯಗಳ ಇನ್‍ಚಾರ್ಜ್ ಆಗಿದ್ದ ಎನ್ನುವುದು ಪೊಲೀಸರ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

    ಶಂಕಿತರ ಬಳಿ ಪತ್ತೆಯಾಗಿರುವ `ಟ್ರೈನಿಂಗ್ ಟು ಬಿ ಅರ್ಗನೈಸ್ಡ್` ಪತ್ರಕ್ಕೂ ಮೊಹಮ್ಮದ್ ಆಶ್ರಫ್‍ಗೂ ಲಿಂಕ್ ಇರೋ ಬಗ್ಗೆ ಬೆಂಗಳೂರು ಪೊಲೀಸರಿಗೆ ಬಲವಾದ ಅನುಮಾನ ಮೂಡಿದೆ. ಸದ್ಯ ಈತ ನ್ಯಾಯಾಂಗ ಬಂಧನದಲ್ಲಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್

    PFI ಶಂಕಿತರ ಮೊಬೈಲ್‌ನಲ್ಲಿತ್ತು ಸಾಕ್ಷಿಗಳನ್ನೇ ನಾಶ ಮಾಡುವ ಆಪ್

    ಬೆಂಗಳೂರು: ಶಂಕಿತ ಆರೋಪಿಗಳನ್ನು ಬಂಧಿಸಿರುವ ಬೆಂಗಳೂರು ಪೊಲೀಸರ (Bengaluru Police) ತನಿಖೆ ವೇಳೆ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದ್ದು, ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಬಂಧಿತ ಎಲ್ಲರ ಮೊಬೈಲ್‌ನಲ್ಲೂ (Mobile) ತಾವೇ ಸಿದ್ಧಪಡಿಸಿದ ಐ-ರೀಡರ್ ಆಪ್ (Eye Reader App) ಪತ್ತೆಯಾಗಿದೆ.

    ಹೌದು, ಎನ್‌ಐಎ (NIA) ಮತ್ತು ಬೆಂಗಳೂರು ಪೊಲೀಸರು (Bengaluru Police) ವಿವಿಧ ಅಯಾಮಗಳಲ್ಲಿ ತನಿಖೆ (Investigation) ಮುಂದುವರಿಸಿದ್ದಾರೆ. ಇದರಲ್ಲಿ ಬೆಂಗಳೂರು ಪೊಲೀಸರಿಗೆ ಶಾಕಿಂಗ್ ಮಾಹಿತಿಯೊಂದು ಲಭ್ಯವಾಗಿದೆ. ದಾಳಿ ವೇಳೆ ಬಂಧಿತ ಹದಿನೈದು ಜನರ ಮೊಬೈಲ್ ನಲ್ಲಿ ಐ-ರೀಡರ್ ಆಪ್ ಇರುವುದು ಪತ್ತೆಯಾಗಿದೆ. ಇದ್ಯಾವುದು ಹೊಸ ಆಪ್ ಅಂತಾ ಚೆಕ್ ಮಾಡಿದ ಪೊಲೀಸರಿಗೆ ಆಶ್ವರ್ಯ ಕಾದಿತ್ತು. ಅದೇನಂತರೆ ಈ ಅಪ್ ಪ್ಲೇ-ಸ್ಟೋರ್ ನಲ್ಲಿ ಸಿಗಲ್ಲ. ಬದಲಾಗಿ ವಿದ್ವಂಸಕ ಕೃತ್ಯವೆಸಗಲು ಶಂಕಿತ ವ್ಯಕ್ತಿಗಳೇ ಇಂಥದ್ದೊAದು ಹೊಸ ಆಪ್ ಸೃಷ್ಟಿ ಮಾಡಿಕೊಂಡಿದ್ದಾರೆ. ಅದನ್ನು ಎಲ್ಲರೂ ತಮ್ಮ ತಮ್ಮ ಮೊಬೈಲ್ ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡಿದ್ದಾರೆ. ಆ ಮೂಲಕ ಪೊಲೀಸರಿಗೆ ಸಿಕ್ಕಿಬೀಳದಂತೆ ಎಚ್ಚರಿಕೆ ವಹಿಸಿದ್ದಾರೆ.

    ಹೇಗೆ ಕೆಲಸ ಮಾಡುತ್ತೆ EYE ರೀಡರ್ (Eye Reader): ಉಗ್ರಚಟುವಟಿಗಳ ಬಳಕೆಗಾಗಿ ಆಗಂತುಕರು ಈ ಐ ರೀಡರ್ ಅಂತಾ ಆಪ್‌ಗಳನ್ನು ತಾವೇ ತಯಾರು ಮಾಡಿಕೊಂಡಿದ್ದಾರೆ. ಈ ಆಪ್‌ಗಳನ್ನು ಇನ್ಸ್ಟಾಲ್‌ ಮಾಡಿಕೊಳ್ಳುವಾಗಲೇ ಮೊಬೈಲ್‌ನ (Moblie) ಇತರೆ ಆಪ್‌ಗಳಿಗೆ ಆಕ್ಸೆಸ್ ಕೇಳುತ್ತೆ. ಗ್ಯಾಲರಿ, ಕಂಟ್ಯಾಕ್ಟ್ ಲಿಸ್ಟ್, ಮೆಸೇಜ್‌ಗಳು, ದಾಖಲೆಗಳು, ಕಾಲ್ ಲಿಸ್ಟ್ ಸೇರಿದಂತೆ ಬಹುತೇಕ ಎಲ್ಲದನ್ನು ಈ ಆಪ್ ಆಕ್ಸೆಸ್ ಕೇಳುತ್ತೆ. ಒಂದು ಸಾರಿ ಎಲ್ಲಕ್ಕೂ ಆಕ್ಸೆಸ್ ಕೊಟ್ಟು ಇನ್ಸ್ಟಾಲ್‌ ಮಾಡಿಕೊಂಡಿದ್ರೆ ಮುಗೀತು. ಪೊಲೀಸರು ದಾಳಿ ಸೂಚನೆ ಸಿಕ್ಕ ತಕ್ಷಣ ಈ ಆಪ್‌ಗೆ ಹೋಗಿ ಸ್ಟಾರ್ಟ್ ಅನ್ನೋ ಬಟನ್ ಒತ್ತಿದ್ರೆ ಸಾಕು, ಇಡೀ ಮೊಬೈಲ್ ನಲ್ಲಿ ಸಣ್ಣ ಸಾಕ್ಷ್ಯವೂ ಸಿಗದಂತೆ ಸಂಪೂರ್ಣವಾಗಿ ಡಿಲೀಟ್ ಮಾಡಿಬಿಡುತ್ತೆ. ಪೊಲೀಸರು ಎಷ್ಟೇ ಪ್ರಯತ್ನಿಸಿದ್ರು ಡಿಲೀಟ್ ಆಗಿರೋ ಮಾಹಿತಿ ರಿಟ್ರಿವ್ ಮಾಡಲು ಸಾಧ್ಯವಾಗೋದಿಲ್ವಂತೆ.

    ಸದ್ಯ ಮೊಬೈಲ್‌ಗಳು, ಲ್ಯಾಪ್ ಟಾಪ್‌ಗಳು (Mobile, Laptop) ಸೇರಿದಂತೆ ಎಲ್ಲವನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ನ್ಯಾಯಾಲಯದ ಗಮನಕ್ಕೆ ತಂದು ರಿಟ್ರೀವ್ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪನೆಗೆ ಯುವಕರು ಉಗ್ರ ಸಂಘಟನೆ ಸೇರಲು PFIನಿಂದ ಪ್ರೋತ್ಸಾಹ – NIA

    ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ ಸ್ಥಾಪನೆಗೆ ಯುವಕರು ಉಗ್ರ ಸಂಘಟನೆ ಸೇರಲು PFIನಿಂದ ಪ್ರೋತ್ಸಾಹ – NIA

    ನವದೆಹಲಿ: ಭಾರತದಲ್ಲಿ ಇಸ್ಲಾಮಿಕ್‌ ಆಡಳಿತ (Islamic Rule) ತರಲು ದುರ್ಬಲ ವರ್ಗಗಳ ಯುವಕರು ಎಲ್‌ಇಟಿ, ಐಸಿಸ್‌, ಅಲ್‌ ಖೈದಾದಂತಹ ಉಗ್ರ ಸಂಘಟನೆಗಳನ್ನು ಸೇರಲು ಪಿಎಫ್‌ಐ ಪ್ರೋತ್ಸಾಹಿಸುತ್ತಿದೆ ಎಂದು ಎನ್‌ಐಎ ಮಾಹಿತಿ ಬಹಿರಂಗಪಡಿಸಿದೆ.

    ಕೇರಳದ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ರಿಮಾಂಡ್ ಪ್ರತಿಯನ್ನು ಸಲ್ಲಿಸಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಕೇರಳದಲ್ಲಿರುವ ಪದಾಧಿಕಾರಿಗಳು, ಸದಸ್ಯರು ಮತ್ತು ಅಂಗಸಂಸ್ಥೆಗಳು ಲಷ್ಕರ್-ಎ-ತೈಬಾ (LET), ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ISIS) ಅಥವಾ ದಾಯೆಶ್ ಮತ್ತು ಅಲ್ ಖೈದಾದಂತಹ ಭಯೋತ್ಪಾದಕ ಸಂಘಟನೆಗಳಿಗೆ ಸೇರಲು ದುರ್ಬಲ ವರ್ಗದ ಯುವಕರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಭಯೋತ್ಪಾದಕ ಕೃತ್ಯ ಎಸಗುವ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ಸಂಚು ರೂಪಿಸಲಾಗಿದೆ ಎಂದು ಅದರಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    ಕೇರಳದಿಂದ ಕಾರ್ಯನಿರ್ವಹಿಸುತ್ತಿರುವ ಪಿಎಫ್‌ಐ ಸದಸ್ಯರು, ಕಾರ್ಯಕರ್ತರು ವಿವಿಧ ಧರ್ಮಗಳು ಮತ್ತು ಗುಂಪುಗಳ ಜನರ ನಡುವೆ ದ್ವೇಷವನ್ನು ಸೃಷ್ಟಿಸುವ ಮೂಲಕ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಂಚು ರೂಪಿಸುತ್ತಿದ್ದಾರೆ. ಸಾವರ್ಜನಿಕರ ನೆಮ್ಮದಿಗೆ ಭಂಗ ತರುವ, ಭಾರತದ ವಿರುದ್ಧ ಅಸಮಾಧಾನ ಉಂಟು ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಎನ್‌ಐಎ ಆರೋಪಿಸಿದೆ.

    ಆರೋಪಿಗಳಾದ ಪಿಎಫ್‌ಐನ ಶಿಕ್ಷಣ ವಿಭಾಗದ ರಾಷ್ಟ್ರೀಯ ಉಸ್ತುವಾರಿ ಕರಮನ ಅಶ್ರಫ್ ಮೌಲವಿ ಮತ್ತು ಇತರರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲು ಸಲ್ಲಿಸಿದ ಅರ್ಜಿಯಲ್ಲಿ ಈ ವಿಷಯ ಬಹಿರಂಗವಾಗಿದೆ. ಪ್ರಕರಣದ ತನಿಖೆಯನ್ನು ಎನ್‌ಐಎ ಕೊಚ್ಚಿ ಶಾಖೆ ನಡೆಸುತ್ತಿದೆ. ಇದನ್ನೂ ಓದಿ: PFI ನಾಯಕನ ಮನೆಯಲ್ಲಿ ಸಾವರ್ಕರ್‌ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ

    ಇಂತಹ ಅಪರಾಧ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸಿ, ಗೃಹ ಸಚಿವಾಲಯದ ಭಯೋತ್ಪಾದನೆ ನಿಗ್ರಹ ಮತ್ತು ಮೂಲಭೂತವಾದ (ಸಿಟಿಸಿಆರ್) ವಿಭಾಗವು ಸೆಪ್ಟೆಂಬರ್ 16 ರಂದು ಈ ಬಗ್ಗೆ ತನಿಖೆ ನಡೆಸುವಂತೆ ಎನ್‌ಐಎಗೆ ಆದೇಶ ಹೊರಡಿಸಿತ್ತು.

    Live Tv
    [brid partner=56869869 player=32851 video=960834 autoplay=true]

  • ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್

    ಭಾರತ ಎಂದಿಗೂ ಹಿಂದೂರಾಷ್ಟ್ರ – ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ: ಸುನಿಲ್ ಕುಮಾರ್

    ಉಡುಪಿ: ಭಾರತ ಎಂದಿಗೂ ಹಿಂದೂರಾಷ್ಟ್ರವೇ (Hindu Nation) ಹೊರತು ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ ಎಂದು ಸಚಿವ ವಿ. ಸುನಿಲ್ ಕುಮಾರ್ (V SunilKumar) ಹೇಳಿದ್ದಾರೆ.

    ದೇಶಾದ್ಯಂತ ನಡೆದ ಎನ್‌ಐಎ (NIA) ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತವನ್ನು (India)  ಮುಸ್ಲಿಂ ರಾಷ್ಟ್ರವಾಗಿಸಲು ಸಾಧ್ಯವಿಲ್ಲ. ಭಾರತ ಎಂದಿಗೂ ಹಿಂದೂರಾಷ್ಟ್ರ, ಹಿಂದೂ ಸಂಸ್ಕೃತಿಯ (Hindu Culture) ಆಧಾರದಲ್ಲೇ ರಾಷ್ಟ್ರವನ್ನು ಮತ್ತಷ್ಟು ಬಲಗೊಳಿಸುತ್ತೇವೆ. ಜನರು ಕೂಡ ಇದಕ್ಕೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದ್ದಾರೆ.

    ಪಿಎಫ್‌ಐ (PFI) ಅನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು (Karnataka Government) ಬಗ್ಗು ಬಡಿಯುತ್ತವೆ. ಭಾರತವನ್ನು ದುರ್ಬಲಗೊಳಿಸುವ ಪ್ರಯತ್ನ ಯಾರೂ ಮಾಡಬಾರದು. ಬಂಧಿತ ವ್ಯಕ್ತಿಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಕನಸು ಕಂಡಿದ್ದರು. ಜಗತ್ತಿನ ಯಾವುದೇ ರಾಷ್ಟ್ರಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದಾರೆ.

    ಪ್ರವೀಣ್ ನೆಟ್ಟಾರು (Praveen Nettaru) ಹತ್ಯೆಯಾದಾಗ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಾಗಿ ಹೇಳಿದ್ದೆವು. ಕಾರ್ಯಕರ್ತರಿಗೆ ನ್ಯಾಯ ಕೊಡುವ ಭರವಸೆಯನ್ನೂ ನೀಡಿದ್ದೆವು. ಪ್ರಕರಣವನ್ನು ಎನ್‌ಐಎಗೆ ಕೊಟ್ಟು ಸರ್ಕಾರ ಕೈಕಟ್ಟಿ ಕುಳಿತಿಲ್ಲ, ತನ್ನ ಜವಾಬ್ದಾರಿಯನ್ನ ನಿರ್ವಹಿಸುತ್ತಿದೆ ಎಂದು ಬೀಗಿದ್ದಾರೆ.

    ಸಿದ್ದು ಕಾಲದಲ್ಲಿ ಹಿಂದೂಗಳ ಹತ್ಯೆಯಾಗಿತ್ತು: 
    ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಕಾಲದಲ್ಲಿ ಎಸ್‌ಡಿಪಿಐ (SDPI), ಪಿಎಫ್‌ಐ (PFI) ಸಂಘಟನೆಗಳನ್ನು ಪೋಷಿಸಿದ್ದರು. ಅವರ ಕಾಲದಲ್ಲೇ 18 ಹಿಂದೂಗಳ ಹತ್ಯೆಯಾಗಿತ್ತು. ಆರೋಪಿಗಳ ಕೇಸನ್ನು ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿತ್ತು. ಅಶಾಂತಿ ಸೃಷ್ಟಿಸಿರುವವರ ವಿರುದ್ಧ ಕಾಂಗ್ರೆಸ್ ಸ್ನೇಹ ಬೆಳೆಸಿತ್ತು ಎಂದು ಕಿಡಿಕಾರಿದ್ದಾರೆ.

    ಕಾಂಗ್ರೆಸ್‌ನಿಂದ ಪೇ ಸಿಎಂ (PayCM) ಅಭಿಯಾನ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಆಧಾರ ರಹಿತ ಆರೋಪ ಮಾಡುತ್ತಿದೆ. ಪೇ ಸಿಎಂ ಎಂಬುದು ಕಾಂಗ್ರೆಸ್‌ನ ಸುಳ್ಳಿನ ಸುರಿಮಳೆ. ಅರ್ಕಾವತಿ ಇಂದಿರಾ ಕ್ಯಾಂಟೀನ್ ಹಾಸಿಗೆಯಲ್ಲಿ ಹಣ ನುಂಗಿದವರು ಕಾಂಗ್ರೆಸ್ಸಿಗರೇ ಅಲ್ಲವೇ? ಈಗ ಪೇ ಸಿಎಂ ಪೋಸ್ಟರ್ ಅಂಟಿಸಲು ಯಾವ ನೈತಿಕತೆ ಇದೆ? ಪೋಸ್ಟರ್ ಅಂಟಿಸಿದ ಡಿಕೆಶಿ (DK Shivakumar), ಇಡಿ (ED) ಕಚೇರಿಗೆ ಹೋಗಿದ್ದು ಯಾಕೆ? ಈ ಪ್ರಶ್ನೆಗೆ ಸಿದ್ದರಾಮಯ್ಯ ಉತ್ತರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.

    ಭ್ರಷ್ಟಾಚಾರವನ್ನು ಉತ್ತುಂಗಕ್ಕೆ ಏರಿಸಿದ ಕಾಂಗ್ರೆಸ್ಸಿಗರು ನಮ್ಮ ಕಾಮನ್ ಸಿಎಂ ಬಗ್ಗೆ ಮಾತನಾಡುತ್ತಾರೆ. ಭ್ರಷ್ಟಾಚಾರ ನಡೆದಿದ್ದರೆ ಮುಖ್ಯಮಂತ್ರಿಗಳ ವಿರುದ್ಧ ನ್ಯಾಯಾಲಯ, ಲೋಕಾಯುಕ್ತಕ್ಕೆ ದೂರು ಕೊಡಲಿ. 10 ದಿನದ ಅಧಿವೇಶನದಲ್ಲಿ ಭ್ರಷ್ಟಾಚಾರದ ಬಗ್ಗೆ ಒಂದು ದಿನವೂ ಚರ್ಚೆ ನಡೆದಿಲ್ಲ. ನೀವು ಭ್ರಷ್ಟಾಚಾರದ ಆರೋಪ ಮಾಡಿಕೊಂಡಿರಿ, ನಾವು ನಮ್ಮ ಕಾರ್ಯಕ್ರಮ ಮುಂದಿಟ್ಟುಕೊಂಡು ಚುನಾವಣೆಗೆ ಹೋಗುತ್ತೇವೆ ಎಂದು ಕಾಂಗ್ರೆಸ್‌ನ ಭ್ರಷ್ಟಾಚಾರದ ಆರೋಪವನ್ನು ತಳ್ಳಿಹಾಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    ಕರಾಟೆ ಕ್ಲಾಸ್‌ನಲ್ಲಿ ನಡೀತಿತ್ತು PFI ಉಗ್ರ ಚಟುವಟಿಕೆಯ ರಣತಂತ್ರ – NIA ದಾಳಿಗೂ ಅದೇ ಕಾರಣ

    ಬೆಂಗಳೂರು: ದೇಶಾದ್ಯಂತ ಪಿಎಫ್‌ಐ (PFI) ವಿರುದ್ಧ ನಡೆದ ಎನ್‌ಐಎ (NIA) ದಾಳಿಗೆ ತೆಲಂಗಾಣದ ಆಟೋನಗರ್‌ನಲ್ಲಿ ನಡೆಯುತ್ತಿದ್ದ ಕರಾಟೆ ಕ್ಲಾಸ್ (Karate Class) ಕಾರಣ ಎನ್ನುವ ಸ್ಫೋಟಕ ಸತ್ಯ ಬಯಲಾಗಿದೆ.

    ತೆಲಾಂಗಣದ (Talangana) ಆಟೋನಗರ್ ನಲ್ಲಿ ಅಬ್ದುಲ್ ಖಾದರ್ ಎಂಬಾತ ನಡೆಸುತ್ತಿದ್ದ ಕರಾಟೆ ಕ್ಲಾಸ್ (Karate Class) ಇದಕ್ಕೆಲ್ಲಾ ಕಾರಣ. ಕರಾಟೆ ಕ್ಲಾಸ್ ನೆಪದಲ್ಲಿ ಪಿಎಫ್‌ಐ ಸದಸ್ಯರಿಗೆ ಇಲ್ಲಿ ಉಗ್ರ ಚಟುವಟಿಕೆಯ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಈ ಬಗ್ಗೆ ಹೈದರಾಬಾದ್‌ನ (Hyderabad) ಎನ್‌ಐಎನಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ.

    ಹೈದರಾಬಾದ್ ಎನ್‌ಐಎನಲ್ಲಿ ಆರೋಪಿ ಅಬ್ದುಲ್ ಖಾದರ್ ಸೇರಿ 27 ಜನರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಇದರಲ್ಲಿ ಹಲವರನ್ನು ಎನ್ಐ‌ಎ ಧಿಕಾರಿಗಳು (NIA Officers) ಬಂಧಿಸಿದ್ದರು. ಕರಾಟೆ ಕ್ಲಾಸ್‌ನಲ್ಲಿದ್ದವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ ವಿಧ್ವಂಸಕ ಕೃತ್ಯಗಳ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಆರೋಪಿಗಳು ದೇಶಾದ್ಯಂತ ಇದೇ ರೀತಿ ಸಂಚು ಮಾಡುತ್ತಿರುವುದರ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟಿದ್ದಾರೆ.

    ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಎನ್‌ಐಎ ಅಧಿಕಾರಿಗಳ ತಂಡ ಏಕಕಾಲಕ್ಕೆ ದೇಶದ 15 ರಾಜ್ಯಗಳಲ್ಲಿ 93 ಕಡೆ ದಾಳಿ ಮಾಡಿದೆ ಎಂದು ಹೈದರಾಬಾದ್ ಎನ್‌ಐಎ ಅಧಿಕಾರಿಗಳು ದಾಖಲಿಸಿದ್ದ ಎಫ್‌ಐಆರ್ ಮಾಹಿತಿ ಬಹಿರಂಗಗೊಂಡಿದೆ.

    Live Tv
    [brid partner=56869869 player=32851 video=960834 autoplay=true]

  • PFI ನಾಯಕನ ಮನೆಯಲ್ಲಿ ಸಾವರ್ಕರ್‌ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ

    PFI ನಾಯಕನ ಮನೆಯಲ್ಲಿ ಸಾವರ್ಕರ್‌ ಪುಸ್ತಕ – ಶಿವಮೊಗ್ಗದಲ್ಲಿ 19 ಲಕ್ಷ ಪತ್ತೆ

    ಬೆಂಗಳೂರು: ಗುರುವಾರ ರಾಜ್ಯಾದ್ಯಂತ ಪಿಎಫ್‌ಐ(PFI) ನಾಯಕರ ಮನೆ ಮೇಲೆ ರಾಷ್ಟ್ರೀಯ ತನಿಖಾ ದಳ(NIA) ಮತ್ತು ರಾಜ್ಯ ಪೊಲೀಸ್‌ ದಾಳಿ ನಡೆಸಿತ್ತು. ದಾಳಿ ಸಂದರ್ಭದಲ್ಲಿ ಪಿಎಫ್‌ಐ ನಾಯಕನ ಮನೆಯಲ್ಲಿ ಸಾವರ್ಕರ್‌(Savarkar) ಕುರಿತ ಪುಸ್ತಕ ಲಭ್ಯವಾಗಿದೆ.

    ಸದ್ಯ ಈ ಪುಸ್ತಕ, ಧರ್ಮ ಸಂಬಂಧಿ ಪುಸ್ತಕಗಳು ಮೊಬೈಲ್‌ಗಳು, ಬ್ಯಾಂಕ್ ಪಾಸ್ ಬುಕ್‌, ಹೀಗೆ ಎಲ್ಲವುಗಳನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಟೆಕ್ಕಿ ಸೇರಿ 7 ಮಂದಿ ಪಿಎಫ್‌ಐ ನಾಯಕರು ಅರೆಸ್ಟ್‌: ಆರೋಪಿಗಳ ಕೆಲಸ ಏನು?

    ಕಲಬುರಗಿಯ ಶೇಖ್ ಇಲಿಯಾಜ್ ಅಲಿ ಮನೆಯಲ್ಲಿ 14.3 ಲಕ್ಷ ರೂ. ನಗದು ಹಾಗೂ ಶಿವಮೊಗ್ಗದಲ್ಲಿ ಸೆರೆಸಿಕ್ಕ ಶಾಹಿದ್ ಮನೆಯಲ್ಲಿ 19 ಲಕ್ಷ ರೂ. ನಗದು ಪತ್ತೆಯಾಗಿದೆ. ನಗದಿನ ಮೂಲ, ಹಣಕಾಸು ವ್ಯವಹಾರದ ಬಗ್ಗೆ ತನಿಖೆ ಆರಂಭವಾಗಿದೆ. ಎಲೆಕ್ಟ್ರಾನಿಕ್ ಡಿವೈಸ್‌ಗಳ ಡಿಕೋಡಿಂಗ್ ಆರಂಭವಾಗಿದೆ. ಇದನ್ನೂ ಓದಿ: ಭಾರತ ಇಸ್ಲಾಮಿಕ್ ರಾಷ್ಟ್ರವಾಗಬೇಕು, ಪೂರ್ಣ ಸ್ವಾತಂತ್ರ್ಯಕ್ಕೆ ಬಾಂಬ್‌ ತಯಾರಿ: ಶಿವಮೊಗ್ಗ ಆರೋಪಿಗಳಿಗಿದೆ ಐಸಿಸ್‌ ಲಿಂಕ್‌

    Live Tv
    [brid partner=56869869 player=32851 video=960834 autoplay=true]