Tag: NIA

  • ಹರ್ಷ ಕೊಲೆ ಪ್ರಕರಣದ 10ನೇ ಆರೋಪಿಗೆ ಜಾಮೀನು ಮಂಜೂರು

    ಹರ್ಷ ಕೊಲೆ ಪ್ರಕರಣದ 10ನೇ ಆರೋಪಿಗೆ ಜಾಮೀನು ಮಂಜೂರು

    ಶಿವಮೊಗ್ಗ: ಶಿವಮೊಗ್ಗ (Shivamogga) ನಗರದಲ್ಲಿ ಫೆ.20 ರಂದು ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ (Harsha) ಹತ್ಯೆ ಪ್ರಕರಣದ ಆರೋಪಿ ಜಾಫರ್ ಸಾಧಿಕ್ (52) ಎಂಬಾತನಿಗೆ ಎನ್‍ಐಎ (NIA) ವಿಶೇಷ ನ್ಯಾಯಾಲಯವು ಷರತ್ತು ಬದ್ಧ ಜಾಮೀನು (Bail) ನೀಡಿದೆ.

    ಸೆಕೆಂಡ್ ಹ್ಯಾಂಡ್ ಕಾರ್ (Car) ಡೀಲರ್ ಆಗಿರುವ ಸಾಧಿಕ್‍ನನ್ನು ಫೆ. 24 ರಂದು ಪೊಲೀಸರು (Police) ಬಂಧಿಸಿದ್ದರು. ಹರ್ಷ ಕೊಲೆ ಪ್ರಕರಣದಲ್ಲಿ 10ನೇ ಆರೋಪಿಯಾಗಿರುವ ಈತ, ಪ್ರಕರಣದ 6ನೇ ಆರೋಪಿ ಜಿಲಾನ್‍ನ ತಂದೆ. ಸಾಧಿಕ್, ಜಾಮೀನು ಕೋರಿ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಸಾಧಿಕ್ ಪರ ವಕೀಲರು, ಕಕ್ಷಿದಾರರು ಹರ್ಷ ಕೊಲೆ ಪ್ರಕರಣದ ಆರೋಪಿಯಾದ ತಮ್ಮ ಮಗ ಜಿಲಾನ್‍ಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದರು. ಅದನ್ನು ಹೊರತುಪಡಿಸಿದರೆ ಕಕ್ಷಿದಾರರ ವಿರುದ್ಧ ಬೇರೆ ಯಾವುದೇ ಆರೋಪವಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ಹೇಳಿದ್ದರು. ಇದನ್ನೂ ಓದಿ: ನಮಾಜ್ ಮಾಡುತ್ತಿದ್ದವರ ಮೇಲೆ ಹಲ್ಲೆ, ಮಸೀದಿ ಧ್ವಂಸ- 10ಕ್ಕೂ ಹೆಚ್ಚು ಜನರ ವಿರುದ್ಧ ಪ್ರಕರಣ

    ಎನ್‍ಐಎ ಪರ ವಾದ ಮಂಡಿಸಿದ ವಕೀಲರು, ಸಾದಿಕ್ ಖರೀದಿಸಿದ್ದ ಕಾರುಗಳನ್ನು ಇತರೆ ಆರೋಪಿಗಳು ಅಪರಾಧ ಕೃತ್ಯ ಎಸಗಲು ಮತ್ತು ಕೃತ್ಯದ ಬಳಿಕ ಸ್ಥಳದಿಂದ ತಪ್ಪಿಸಿಕೊಳ್ಳಲು ಬಳಕೆ ಮಾಡಿದ್ದಾರೆ. ಜೊತೆಗೆ ಸಾಧಿಕ್, ತಮ್ಮ ಮಗನಿಗೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾನೆ ಮತ್ತು ಸ್ನೇಹಿತನ ಮನೆಯಲ್ಲಿ ಆಶ್ರಯ ಕೊಡಿಸಿದ್ದಾನೆ. ಹೀಗಾಗಿ, ಇತರೆ ಆರೋಪಿಗಳ ಅಪರಾಧ ಕೃತ್ಯವು ಸಾಧಿಕ್‍ಗೆ ಚೆನ್ನಾಗಿ ತಿಳಿದಿತ್ತು. ಈ ಕಾರಣಕ್ಕೆ ಸಾಧಿಕ್‍ಗೆ ಜಾಮೀನು ನೀಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಕೇರಳ ನರಬಲಿ ಪ್ರಕರಣ – ನರಭಕ್ಷಕರ ಜಾಡು ಹಿಡಿದಿದ್ದು ಹೀಗೆ

    ಅರ್ಜಿಯ ವಿಚಾರಣೆ ನಡೆಸಿದ ಎನ್‍ಐಎ ವಿಶೇಷ ನ್ಯಾಯಾಲಯ ಆರೋಪಿಯು 50 ಸಾವಿರ ರೂ. ವೈಯಕ್ತಿಕ ಬಾಂಡ್ ಮತ್ತು ಶ್ಯೂರಿಟಿ ನೀಡಬೇಕು. ನ್ಯಾಯಾಲಯ ವಿನಾಯಿತಿ ನೀಡದ ಹೊರತು ಪ್ರತಿಬಾರಿ ಪ್ರಕರಣದ ವಿಚಾರಣೆಗೆ ತಪ್ಪದೇ ಹಾಜರಾಗಬೇಕು. ಪ್ರಕರಣದ ಸಾಕ್ಷಿಗಳಿಗೆ ಬೆದರಿಕೆ ಹಾಕಬಾರದು ಮತ್ತು ಸಾಕ್ಷ್ಯ ನಾಶ ಮಾಡಬಾರದು. ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಬಾರದು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮಂಗಳೂರಿನ SDPI, PFI ನಾಯಕರ ಮನೆ ಮೇಲೆ ದಾಳಿ – ಐವರು ಅರೆಸ್ಟ್‌

    ಮಂಗಳೂರಿನ SDPI, PFI ನಾಯಕರ ಮನೆ ಮೇಲೆ ದಾಳಿ – ಐವರು ಅರೆಸ್ಟ್‌

    ಮಂಗಳೂರು: ಎಸ್‌ಡಿಪಿಐ(SDPI) ಮತ್ತು ನಿಷೇಧಿತ ಪಿಎಫ್‌ಐ(PFI) ಸಂಘಟನೆಯ ಮುಖಂಡರು, ಕಾರ್ಯಕರ್ತರ ಮನೆ ಮೇಲೆ ಪೊಲೀಸ್‌(Police) ದಾಳಿ ನಡೆದಿದೆ.

    ಈ ಹಿಂದೆ ನಡೆದ ದಾಳಿಯ ಮುಂದುವರಿದ ಭಾಗವಾಗಿ ಮಂಗಳೂರಿನ ಪಣಂಬೂರು, ಸುರತ್ಕಲ್, ಉಳ್ಳಾಲ, ಮಂಗಳೂರು ಗ್ರಾಮಾಂತರ ಸೇರಿ ಎಂಟು ಕಡೆ ದಾಳಿ ನಡೆಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ನೇತೃತ್ವದಲ್ಲಿ ದಾಳಿ ನಡೆದಿದೆ.
    ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ

    ಈ ಹಿಂದೆ ದಾಳಿ ನಡೆಸಿದ ಸಂದರ್ಭದಲ್ಲಿ ಈ ವ್ಯಕ್ತಿಗಳು ತಲೆ ಮರೆಸಿಕೊಂಡಿದ್ದರು. ಈಗ ಖಚಿತ ಮಾಹಿತಿಯ ಆಧಾರದ ಮೇಲೆ ದಾಳಿ ನಡೆಸಿ 5 ಮಂದಿ ಪಿಎಫ್‌ಐ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಎಸ್‌ಡಿಪಿಐ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿ ಪಿಎಫ್‌ಐ ಜೊತೆಗಿನ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಯುತ್ತಿದೆ.

    ಈಗಾಗಲೇ ಬಂಧನಕ್ಕೆ ಒಳಗಾದ ಮಂಗಳೂರಿನ ಪ್ರಮುಖ ಮೂವರು ಪಿಎಫ್‌ಐ ಮುಖಂಡರನ್ನು ರಾಷ್ಟ್ರೀಯ ತನಿಖಾ ದಳ(NIA) ಎನ್‌ಐಎ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಉಗ್ರ ಸಂಘಟನೆಗೆ ಬೆಂಬಲ ಆರೋಪ – ಪ್ರೊಫೆಸರ್ ಮನೆ ಮೇಲೆ NIA ದಾಳಿ

    ಉಗ್ರ ಸಂಘಟನೆಗೆ ಬೆಂಬಲ ಆರೋಪ – ಪ್ರೊಫೆಸರ್ ಮನೆ ಮೇಲೆ NIA ದಾಳಿ

    ಶ್ರೀನಗರ: ಭಯೋತ್ಪಾದನಾ ಚಟುವಟಿಕೆಗಳಿಗೆ ನಿಧಿ (Terror Funding) ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA) ತಂಡ ಮಂಗಳವಾರ ಬೆಳ್ಳಂಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir)ದಾಳಿ ನಡೆಸಿದೆ.

    ಬೆಳಗ್ಗೆಯೇ ಕಾರ್ಯಾಚರಣೆ ಶುರು ಮಾಡಿರುವ ಎನ್‌ಐಎ (NIA) ಪೂಂಚ್, ರಜೌರಿ, ಪುಲ್ವಾಮಾ, ಶೋಪಿಯಾನ್, ಶ್ರೀನಗರ, ಬುದ್ಗಾಮ್ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಪೊಲೀಸರು (Police) ಮತ್ತು ಅರೆಸೈನಿಕ ಸಿಬ್ಬಂದಿಯ ನೆರವಿನೊಂದಿಗೆ ದಾಳಿ ನಡೆಸಿದೆ. ಇದನ್ನೂ ಓದಿ: 856 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಉಜ್ಜಯಿನಿ ದೇಗುಲ ಇಂದು ಲೋಕಾರ್ಪಣೆ

    ಇದೇ ವೇಳೆ ಧಾರ್ಮಿಕ ಮುಖಂಡರಾದ (Religious Leader) ದಾರುಲ್ ಉಲೂಮ್ ರಹೀಮಿಯಾ ಬಂಡಿಪೋರಾ, ಮೌಲಾನಾ ರೆಹಮತ್ ಉಲ್ಲಾ ಖಾಸ್ಮಿ ಹಾಗೂ ಎನ್‌ಐಟಿ ಶ್ರೀನಗರದ ಪ್ರೊಫೆಸರ್ (Professor) ಸಮಮ್ ಅಹ್ಮದ್ ಲೋನ್ ಅವರ ಮನೆಗಳ ಮೇಲೆ ನಡೆಸಿದೆ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಪುಟಿನ್ ಕನಸಿನ ಸೇತುವೆ ಧ್ವಂಸಗೊಳಿಸಿದ್ದಕ್ಕೆ ಕೆರಳಿದ ರಷ್ಯಾ – ಉಕ್ರೇನ್ ಮೇಲೆ ಮತ್ತಷ್ಟು ತೀವ್ರ ದಾಳಿ

    ಇತ್ತೀಚೆಗೆ ದೇಶದ 15 ರಾಜ್ಯಗಳಲ್ಲಿ 93 ಕಡೆ ದಾಳಿ ನಡೆಸಿ ನೂರಾರು ಪಿಎಫ್‌ಐ ಕಾರ್ಯಕರ್ತರು, ಮುಖ್ಯಸ್ಥರನ್ನು ಬಂಧಿಸಿದ್ದ ಎನ್‌ಐಎ ತಂಡ ಇದೀಗ ಮತ್ತೆ ತನ್ನ ಅಬ್ಬರ ಶುರು ಮಾಡಿದೆ.

    Live Tv
    [brid partner=56869869 player=32851 video=960834 autoplay=true]

  • ವಿದೇಶ ಪ್ರಯಾಣದ ಹೆಸರಿನಲ್ಲಿ ಶಂಕಿತ PFI ನಾಯಕರು ಪರಾರಿ?

    ವಿದೇಶ ಪ್ರಯಾಣದ ಹೆಸರಿನಲ್ಲಿ ಶಂಕಿತ PFI ನಾಯಕರು ಪರಾರಿ?

    ಬೆಂಗಳೂರು: ರಾಷ್ಟ್ರೀಯ ತನಿಖಾ ದಳ(NIA) ದಾಳಿಯಿಂದ ಎಚ್ಚೆತ್ತ ನೂರಕ್ಕೂ ಹೆಚ್ಚಿನ ಶಂಕಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ನಾಯಕರು ವಿದೇಶಿ ಪ್ರಯಾಣದ ಹೆಸರಿನಲ್ಲಿ ಪರಾರಿಯಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    ದಾಳಿಗೂ ಮೊದಲು ಒಂದು ವಾರ, ಹದಿನೈದು ದಿನಕ್ಕೆ ಪ್ರವಾಸ ಹೋಗಿದ್ದ ನಾಯಕರು ಮತ್ತಷ್ಟು ದಿನ ಟ್ರಿಪ್ ಮುಂದುವರಿಸಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಬಂಧನಕ್ಕೆ ಒಳಗಾದ 15 ಆರೋಪಿಗಳಿಗೆ ನವೆಂಬರ್ 3ರವರೆಗೆ ಎನ್‍ಐಎ ವಿಶೇಷ ನ್ಯಾಯಾಲಯದ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.

    ಮೆಟಲ್‌ ಡಿಟೆಕ್ಟರ್‌ ಪತ್ತೆ:
    ಉಗ್ರ ಸಂಘಟನೆಗಳಿಗೆ ಕುಮ್ಮಕ್ಕಿನ ಮೇಲೆ ಪಿಎಫ್‍ಐ ಸಂಘಟನೆಗಳ ಮೇಲೆ ರೇಡ್ ಮಾಡಿದ್ದ ಎನ್‍ಐಎಗೆ ದಿನಕ್ಕೊಂದು ಸ್ಫೋಟಕ ಮಾಹಿತಿ ಸಿಗುತ್ತಿದೆ. ಬೆಂಗಳೂರಿನ ಎಸ್‍ಕೆ ಗಾರ್ಡನ್ ಬಳಿಯ ಪಿಎಫ್‍ಐ ಕಚೇರಿಯಲ್ಲಿ 2 ಹ್ಯಾಂಡ್ ಮೆಟಲ್ ಡಿಟೆಕ್ಟರ್(Metal Detector) ಪತ್ತೆಯಾಗಿತ್ತು. ಈ ಬಗ್ಗೆ ಬಂಧಿತರ ಬಾಯಿಬಿಡಿಸಿದಾಗ ಎನ್‍ಐಎಗೆ ಆಘಾತಕಾರಿ ಸತ್ಯ ತಿಳಿದು ಬಂದಿದೆ. ಇದನ್ನೂ ಓದಿ: PFI ಮೊಬೈಲ್‌ ರಿಟ್ರೀವ್‌ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್‍

    ಯಾವ ವಸ್ತುವನ್ನು ತೆಗೆದುಕೊಂಡು ಹೋದರೆ ಡಿಟೆಕ್ಟರ್ ಪತ್ತೆ ಮಾಡುತ್ತದೆ? ಯಾವ ವಸ್ತುಗಳನ್ನು ತೆಗೆದುಕೊಂಡು ಹೋದರೆ ಪತ್ತೆ ಮಾಡುವುದಿಲ್ಲ ಎಂಬುದರ ಬಗ್ಗೆ ಪ್ರಯೋಗಗಳು ನಡೆಯುತ್ತಿದ್ದವು ಎಂಬುದರ ಬಗ್ಗೆ ಬಂಧಿತರು ಬಾಯ್ಬಿಟ್ಟಿದ್ದಾರೆ. ಹೀಗಾಗಿ ಈ ಪ್ರಯೋಗ ನಡೆಸುತ್ತಿದ್ದ ಉದ್ದೇಶವೇನು? ಮತ್ತೆ ಯಾರೆಲ್ಲಾ ಈ ಟ್ರೈನಿಂಗ್ ಮಾಡುತ್ತಿದ್ದರು ಎಂಬ ವಿಷಯದ ಬಗ್ಗೆ ತನಿಖೆ ಮುಂದುವರಿದಿದೆ.

    Live Tv
    [brid partner=56869869 player=32851 video=960834 autoplay=true]

  • 873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: NIA

    873 ಪೊಲೀಸ್‌ ಅಧಿಕಾರಿಗಳಿಗೆ PFI ಜೊತೆ ನಂಟು: NIA

    ತಿರುವನಂತಪುರಂ: ಕನಿಷ್ಠ 873 ಪೊಲೀಸ್‌ ಅಧಿಕಾರಿಗಳು ನಿಷೇಧಿತ ಪಿಎಫ್‌ಐ(PFI) ಸಂಘಟನೆಯ ಜೊತೆ ಸಂಬಂಧ ಹೊಂದಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ(NIA) ಕೇರಳ ರಾಜ್ಯ ಪೊಲೀಸ್‌ ಮುಖ್ಯಸ್ಥರಿಗೆ ತಿಳಿಸಿದ ವರದಿಯಲ್ಲಿ ಹೇಳಿದೆ.

    ಸಬ್‌ ಇನ್ಸ್‌ಪೆಕ್ಟರ್‌, ಸ್ಟೇಷನ್‌ ಹೆಡ್‌ ಆಫೀಸ್‌ ಶ್ರೇಣಿ ಮತ್ತು ಸಿವಿಲ್‌ ಪೊಲೀಸರ ಮೇಲೆ ಈಗ ಎನ್‌ಐಎ ಕಣ್ಣಿಟ್ಟಿದೆ. ಪಿಎಫ್‌ಐ ಬಗ್ಗೆ ತನಿಖೆ ನಡೆಸುತ್ತಿರುವ ಎನ್‌ಐಎಗೆ ಅಧಿಕಾರಿಗಳು ಹಣಕಾಸಿನ ವ್ಯವಹಾರ ನಡೆಸಿದ ಮಾಹಿತಿ ಲಭ್ಯವಾದ ಬೆನ್ನಲ್ಲೇ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಇದನ್ನೂ ಓದಿ: PFI ಮೊಬೈಲ್‌ ರಿಟ್ರೀವ್‌ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್‍

    ಸ್ಪೆಷಲ್‌ ಬ್ರ್ಯಾಂಚ್‌, ಗುಪ್ತಚರ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಅಧಿಕಾರಿಗಳ ಜೊತೆ ಪಿಎಫ್‌ಐಗೆ ನಂಟಿತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮಾಹಿತಿ ಸೋರಿಕೆ ಮಾಡಿದ ಆರೋಪ ಈ ಪೊಲೀಸರ ಮೇಲಿದೆ.  ಪಿಎಫ್‌ಐ ಮೇಲೆ ದಾಳಿಗೂ ಮೊದಲೇ  ದಾಳಿ ನಡೆಸುವ ವಿಚಾರ ಸೋರಿಕೆಯಾಗಿತ್ತು ಎನ್ನುವುದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI

    ಕಳೆದ ಫೆಬ್ರವರಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಾಯಕರ ವಿವರವನ್ನು ಪಿಎಫ್‌ಐಗೆ ಸೋರಿಕೆ ಮಾಡಿದ ಹಿನ್ನೆಲೆಯಲ್ಲಿ ಇಡುಕ್ಕಿಯ ತೊಡುಪುಳದ ಸಿವಿಲ್‌ ಪೊಲೀಸ್‌ ಅಧಿಕಾರಿಯನ್ನು ಸೇವೆಯಿಂದಲೇ ವಜಾಗೊಳಿಸಲಾಗಿತ್ತು. ಇದೇ ರೀತಿಯ ಆರೋಪದ ಹಿನ್ನೆಲೆಯಲ್ಲಿ ಮುನ್ನಾರ್‌ ಪೊಲೀಸ್‌ ಠಾಣೆಯ ಎಸ್‌ಐ ಸೇರಿದಂತೆ ಮೂವರನ್ನು ವರ್ಗಾವಣೆ ಮಾಡಲಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್‌ ಖರೀದಿಸಿ, ದಾನ

    ಪಿಎಫ್‌ಐ ಕಾರ್ಯಕರ್ತರಿಗೆ 3 ಹಂತದ ತರಬೇತಿ – ಹಿಂದೂ ಹೆಸರಿನಲ್ಲಿ ಹಾಲ್‌ ಖರೀದಿಸಿ, ದಾನ

    – ಭಾರತವನ್ನು ಮೊದಲು ಮುಸ್ಲಿಂ ರಾಜರೇ ಆಳುತ್ತಿದ್ದರು
    – ಮತ್ತೆ ಭಾರತ ನಮ್ಮ ಕೈ ಸೇರಬೇಕು
    – ಕಾರ್ಯಕರ್ತರಿಗೆ ತಿರುಚಿತ ಪಠ್ಯ ಬೋಧನೆ

    ಬೆಂಗಳೂರು: ದಕ್ಷಿಣ ಕನ್ನಡದ ಮಿತ್ತೂರು ಅಲ್ಲದೇ ಸತ್ಯಮಂಗಲ ಕಾಡಿನಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(PFI) ತರಬೇತಿ ನೀಡುತ್ತಿದ್ದ ಸ್ಫೋಟಕ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    ಬೆಂಗಳೂರು ಪೊಲೀಸರು(Bengaluru Police) ಬಂಧನಕ್ಕೆ ಒಳಗಾದ ಆರೋಪಿಗಳನ್ನು ಸತ್ಯಮಂಗಲ(Sathyamangalam) ಅರಣ್ಯದಲ್ಲಿ ಸ್ಥಳ ಮಹಜರ್ ಮಾಡಿಸಿದ್ದಾರೆ. ಎ1 ಆರೋಪಿ ಸೇರಿದಂತೆ ನಾಲ್ವರನ್ನು ಕರೆದೊಯ್ದು ಸ್ಪಾಟ್ ಮಹಜರು ನಡೆಸಲಾಗಿದೆ. ಅರಣ್ಯದ ಬಳಿ ಇರುವ ರೆಸಾರ್ಟ್‌ನಲ್ಲಿ ಕಾರ್ಯಕರ್ತರು ಉಳಿದುಕೊಳ್ಳುತ್ತಿದ್ದರು. ಹೀಗಾಗಿ ಆ ರೆಸಾರ್ಟ್‌ ಅನ್ನು ಸಹ ಮಹಜರ್ ಮಾಡಲಾಗಿದೆ.

    ಮೂರು ಹಂತದಲ್ಲಿ ತರಬೇತಿ
    ಪುತ್ತೂರಿನ ಮಿತ್ತೂರು ತರಬೇತಿ ರಹಸ್ಯವನ್ನು ಬೇಧಿಸಿರುವ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಪಿಎಫ್‌ಐ ಆರ್‌ಎಸ್‌ಎಸ್‌ ಅನ್ನೇ ಟಾರ್ಗೆಟ್‌ ಮಾಡಿ ಮೂರು ಹಂತದಲ್ಲಿ ತರಬೇತಿ ನೀಡುತ್ತಿತ್ತು. ಮಾರ್ಷಲ್ ಆರ್ಟ್ಸ್, ಡಿಫೆನ್ಸಿವ್ ಹಾಗೂ ಅಟ್ಯಾಕಿಂಗ್ ಟ್ಯಾಕ್ಟಿಕ್ಸ್ ಹೀಗೆ ಮೂರು ರೀತಿ ತರಬೇತಿಯನ್ನು ಕಾರ್ಯಕರ್ತರಿಗೆ ನೀಡಲಾಗುತ್ತಿತ್ತು ಎಂಬ ವಿಚಾರ ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

    ವ್ಯಕ್ತಿಗಳನ್ನು ಹತ್ಯೆ ಮಾಡುವವರಿಗೆ ಮಾತ್ರ ಅಟ್ಯಾಕಿಂಗ್ ಟ್ಯಾಕ್ಟಿಕ್ಸ್ ತರಬೇತಿ ನೀಡಲಾಗುತ್ತಿತ್ತು. ಡಿಫೆನ್ಸಿವ್ ಹಾಗೂ ಮಾರ್ಷಲ್ ಆರ್ಟ್ಸ್ ಕೋಮು ಗಲಭೆ ಸೃಷ್ಟಿಸುವಂತಹ ಕೇಡರ್‌ಗಳಿಗೆ ಟ್ರೈನಿಂಗ್ ನೀಡಲಾಗುತ್ತಿತ್ತು.

    ಹಲವು ಬ್ಯಾಚ್‌ಗಳಿಗೆ ಈಗಾಗಲೇ ಟ್ರೈನಿಂಗ್ ನೀಡಿರುವುದು ಗೊತ್ತಾಗಿದೆ. ಹಿಂದೂವೊಬ್ಬರ ಹೆಸರಲ್ಲಿ ಕಮ್ಯುನಿಟಿ ಹಾಲ್ ಖರೀದಿ ಮಾಡಿ ನಂತರ ರಿಹಾಬ್ ಇಂಡಿಯಾ ಫೌಂಡೇಷನ್‌ಗೆ ದಾನ ಪತ್ರ ಮಾಡಲಾಗಿದೆ. ಕಳೆದ 14 ವರ್ಷದಿಂದ ಟ್ರೈನಿಂಗ್ ಕ್ಯಾಂಪ್ ನಡೆಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.

    ತರಬೇತಿಯಲ್ಲಿ ಬೋಧನೆ ಏನಿತ್ತು?
    ಇರಾನ್‌ನಿಂದ ಅಫ್ಘಾನಿಸ್ತಾನ, ಭಾರತದವರೆಗೆ ಮುಸ್ಲಿಂ ರಾಜರೇ ಆಡಳಿತ ನಡೆಸುತ್ತಿದ್ದರು. ಈಗ ದೇಶ ನಮ್ಮ ಕೈ ತಪ್ಪಿ ಹೋಗಿದೆ. ಮತ್ತೆ ನಾವು ಭಾರತವನ್ನು ವಶಕ್ಕೆ ಪಡೆಯಬೇಕು ಎಂದು ಇತಿಹಾಸದ ಬಗ್ಗೆ ಯುವಕರಿಗೆ ತಿರುಚಿದ ಪಠ್ಯವನ್ನು ಬೋಧಿಸಲಾಗುತ್ತಿತ್ತು. ಹಿಂದೆ ಭಾರತವನ್ನು ನಮ್ಮವರೇ ಆಳಿದ್ದು, ಮುಂದೆ ನಾವೇ ಆಳಬೇಕು. ಇತಿಹಾಸಲ್ಲಿ ನಮ್ಮ ರಾಜರು ಮಾಡಿದ್ದನ್ನು ನಾವು ಪುನರಾವರ್ತಿಸಬೇಕು ಎಂದು ತರಬೇತಿಯಲ್ಲಿ ಪಾಠ ಮಾಡಲಾಗುತ್ತಿತ್ತು.

    ಮೊಬೈಲ್‌ ಸಾಕ್ಷ್ಯ:
    ಕೆಜಿ ಹಳ್ಳಿ ಪೊಲೀಸರಿಂದ ಬಂಧಿತರಾದ 15 ಮಂದಿಯ ಮೊಬೈಲ್ ಡೇಟಾ ರಿಟ್ರೀವ್ ಮಾಡಲಾಗಿದ್ದು, 1 ಸಾವಿರ ಜಿಬಿಯಷ್ಟು ಡೇಟಾ ಸಿಕ್ಕಿದೆ. ಮೊಬೈಲ್‌ನಲ್ಲಿ ಮಂಗಳೂರು, ಕೇರಳದಲ್ಲಿ ನಡೆದ ಕೇಡರ್ ಟ್ರೈನಿಂಗ್ ಫೋಟೋಗಳು ಲಭ್ಯವಾಗಿದೆ.

    20 ಮಂದಿ ಬ್ಯಾಚಗಳನ್ನು ಮಾಡಿ ಟ್ರೈನಿಂಗ್ ಕೊಡಲಾಗಿದೆ. ಸಂಘಟನೆಯ ಗೌಪ್ಯ ವಿಚಾರಗಳು ಟ್ರೈನಿಂಗ್, ಹೀಗೆ ಎಲ್ಲವೂ ವಾಟ್ಸಾಪ್ ಚಾಟ್ ನಲ್ಲಿ ಚರ್ಚೆ ಮಾಡಲಾಗುತ್ತಿತ್ತು. ಹಿಜಬ್‌ ವಿವಾದದ ಬಳಿಕ ಈ ರೀತಿಯ ಚರ್ಚೆಗಳು ಹೆಚ್ಚು ನಡೆಯುತ್ತಿತ್ತು. ಎಲ್ಲಾ ಚರ್ಚೆಗಳು ಮುಗಿದ ಬಳಿಕ ಐ ಶ್ರೇಡರ್ ಆ್ಯಪ್ ಮೂಲಕ ಎಲ್ಲಾ ಚಾಟ್‌ಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಇದನ್ನೂ ಓದಿ: ಮುಂದಿನ 24 ಗಂಟೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

    ಬಂಧಿತರ ಮೊಬೈಲ್‌ನಲ್ಲಿ ಆರ್‌ಎಸ್ಎಸ್ ಹಾಗೂ ಕಟ್ಟರ್‌ ಹಿಂದೂ ಮುಖಂಡರ ಭಾಷಣಗಳು ಲಭ್ಯವಾಗಿದೆ. 11 ಹಿಂದೂ ಮುಖಂಡರ ವೀಡಿಯೊಗಳನ್ನ ಶೇರ್ ಕೂಡ ಮಾಡಿದ್ದರು. ಇಸ್ಲಾಂ ಧರ್ಮದ ಬಗ್ಗೆ ಪ್ರಚೋದನಕಾರಿ ಭಾಷಣದ ವೀಡಿಯೋಗಳನ್ನು ಮಾರ್ಕ್ ಮಾಡಿ ಎಂಟು ಮಂದಿ ಶೇರ್ ಮಾಡಿದ್ದರು.

    ದಿನದಿಂದ ದಿನಕ್ಕೆ ತನಿಖೆಯಲ್ಲಿ ಸ್ಫೋಟಕ ವಿಚಾರಗಳು ಹೊರ ಬರುತ್ತಲೇ ಇದೆ. ಪೊಲೀಸ್ ಕಸ್ಟಡಿ ಮುಗಿಯುವ ಒಳಗಡೆ ಮತ್ತೊಂದಿಷ್ಟು ಭಯಾನಕ ಸಂಗತಿಗಳು ಹೊರಬಂದರೂ ಆಶ್ಚರ್ಯ ಪಡಬೇಕಿಲ್ಲ.

    Live Tv
    [brid partner=56869869 player=32851 video=960834 autoplay=true]

  • PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ

    PFIನಿಂದ ಬೆದರಿಕೆ – ಐವರು RSS ನಾಯಕರಿಗೆ Y ಭದ್ರತೆ

    ತಿರುವನಂತಪುರಂ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ (PFI) ಕೇರಳದ (Kerala) ಐವರು ಆರ್‌ಎಸ್‌ಎಸ್ (RSS) ನಾಯಕರಿಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಅವರಿಗೆ Y ವರ್ಗದ ಭದ್ರತೆಯನ್ನು ನೀಡಿದೆ.

    ಇತ್ತೀಚೆಗೆ ಪಿಎಫ್‌ಐ ಕಾರ್ಯಕರ್ತರ ಮನೆ, ಕಚೇರಿ ಮೇಲೆ ಎನ್‌ಐಎ (NIA) ನಡೆಸಿತ್ತು. ಈ ಸಮಯದಲ್ಲಿ ಕೇರಳದ ಪಿಎಫ್‌ಐ ಸದಸ್ಯ ಮೊಹಮ್ಮದ್ ಬಶೀರ್ ಮನೆ ಮೇಲೂ ದಾಳಿ ನಡೆಸಿತ್ತು. ಈ ವೇಳೆ ಬಶೀರ್ ಮನೆಯಿಂದ ಐವರು ಆರ್‌ಎಸ್‌ಎಸ್ ನಾಯಕರ ಹೆಸರುಗಳ ಪಟ್ಟಿಯು ಪಿಎಫ್‌ಐ ರಾಡಾರ್‌ನಲ್ಲಿ ಪತ್ತೆ ಆಗಿತ್ತು.

    ಈ ಹಿನ್ನೆಲೆಯಲ್ಲಿ ಕೇರಳದ ಆರ್‌ಎಸ್‌ಎಸ್ ನಾಯಕರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗೃಹ ಸಚಿವಾಲಯ (ಎಂಎಚ್)ಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದ ಮೇರೆಗೆ ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್‌ಎ) ಶನಿವಾರ ಐವರು ಆರ್‌ಎಸ್‌ಎಸ್ ನಾಯಕರಿಗೆ ಭದ್ರತೆಯನ್ನು ನೀಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದನ್ನೂ ಓದಿ: ಹಿಂದೂ ಕಾರ್ಯಕರ್ತರ ಹತ್ಯೆ, ಗಲಭೆಗೆ ತರಬೇತಿ ನಡೆಯುತ್ತಿದ್ದ ಹಾಲ್‍ಗೆ ಬೀಗ ಮುದ್ರೆ

    ಎನ್‌ಐಎ, ಇಂಟೆಲಿಜೆನ್ಸ್ ಬ್ಯೂರೋದ ವರದಿಯ ಆಧಾರದ ಮೇಲೆ ಕೇರಳದ ಐದು ಆರ್‌ಎಸ್ಎಸ್ ನಾಯಕರಿಗೆ ವೈ ವರ್ಗದ ಭದ್ರತೆಯನ್ನು ನೀಡಲಾಗುವುದು. ಆರ್‌ಎಸ್‌ಎಸ್ ನಾಯಕರ ಭದ್ರತೆಗೆ ಅರೆಸೇನಾ ಪಡೆಗಳ ಕಮಾಂಡೋಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದೆ.

    ಉಗ್ರ ಸಂಘಟನೆಗಳ ಜೊತೆ ನೇರವಾದ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಪಿಎಫ್‌ಐ ಮತ್ತು ಅದರ ಅಂಗಸಂಸ್ಥೆಗಳು ಕಾನೂನುಬಾಹಿರ ಸಂಘ ಎಂದು ಘೋಷಿಸಿ ತಕ್ಷಣದಿಂದ ಜಾರಿಗೆ ಬರುವಂತೆ 5 ವರ್ಷಗಳ ಅವಧಿಗೆ ನಿಷೇಧ ಮಾಡಿ ಗೃಹ ಸಚಿವಾಲಯ(Ministry of Home Affairs) ಗುರುವಾರ ಆದೇಶ ಪ್ರಕಟಿಸಿತ್ತು. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI

    Live Tv
    [brid partner=56869869 player=32851 video=960834 autoplay=true]

  • PFI ಬ್ಯಾನ್: ಹಳೇ ಕೇಸ್, ಹೊಸ ಆಟ – ಇದು ಬಿಜೆಪಿ ಗೇಮ್!

    PFI ಬ್ಯಾನ್: ಹಳೇ ಕೇಸ್, ಹೊಸ ಆಟ – ಇದು ಬಿಜೆಪಿ ಗೇಮ್!

    ಬೆಂಗಳೂರು: ದೇಶಾದ್ಯಂತ ಪಿಎಫ್‍ಐ (PFI) 5 ವರ್ಷ ಬ್ಯಾನ್ ಮಾಡಲಾಗಿದ್ದು. ಸದ್ಯ ಪಿಎಫ್‍ಐಗೆ ಮುಂದೆ ನಿಂತು ಹೋರಾಟ ಮಾಡುವವರು ಯಾರೂ ಇಲ್ಲ. ಈಗಾಗಲೇ ಎನ್‍ಐಎ (NIA) ಮೊದಲ ಹಾಗೂ ದ್ವಿತೀಯ ಹಂತದ ನಾಯಕರನ್ನು ಬಂಧಿಸಿಟ್ಟಿದೆ.

    bjP

    ಕೆಲ ಸದಸ್ಯರು ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಕೆಲ ದಿನಗಳ ಬಳಿಕ ಅಜ್ಞಾತವಾಗಿದ್ದುಕೊಂಡೇ ಬೇರೆ ಹೆಸರಲ್ಲಿ ಸಂಘಟನೆ ಸಕ್ರಿಯಗೊಳಿಸೋಕೆ ಮಾಸ್ಟರ್ ಪ್ಲಾನ್ ಮಾಡಲಾಗಿದೆ ಎನ್ನಲಾಗುತ್ತಿದೆ. ಇದಕ್ಕೆ ಮಾಸ್ಟರ್ ಸ್ಟ್ರೋಕ್ ಕೊಡೋಕೆ ಕೇಂದ್ರ ತನಿಖಾ ಸಂಸ್ಥೆಗಳು ರೆಡಿ ಆಗಿದೆ. ವಿದೇಶದಲ್ಲಿರುವ ಪಿಎಫ್‍ಐ ಸಂಘಟನೆಯವರ ಮೇಲೆ ಕಣ್ಣಿಡಲು ಸಿದ್ಧತೆ ನಡೆಸಿದೆ. ಅಲ್ಲದೇ ಪಿಎಫ್‍ಐನ ಎಲ್ಲ ಸದಸ್ಯರ ಆಧಾರ್, ಪ್ಯಾನ್, ಭಾವಚಿತ್ರಗಳ ಮಾಹಿತಿ ಸಂಗ್ರಹಿಸುತ್ತಿದೆ. ಯಾರದ್ದೇ ಹೆಸರಲ್ಲಿ ಹೊಸ ಸಂಘಟನೆ ಸ್ಥಾಪನೆಗೆ ಅರ್ಜಿ ಬಂದ್ರೆ ಪರಿಶೀಲನೆ ನಡೆಸಲಾಗುತ್ತಿದೆ. ಅಲ್ಲದೆ ಈ ಹಿಂದೆ ಇವರೆಲ್ಲ ನಿಷೇಧಿತ ಸಂಘಟನೆ ಸದಸ್ಯರಾಗಿದ್ರು ಅಂತಾ ಪ್ರೂವ್ ಮಾಡಲು ಸಿದ್ಧತೆ ಕೂಡ ಮಾಡಲಾಗಿದ್ದು, ತಲೆ ಮರೆಸಿಕೊಂಡಿರುವ ಸಂಘಟನೆ ಸದಸ್ಯರ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಇದನ್ನೂ ಓದಿ: ಪಿಎಸ್‍ಐ ಮರು ಪರೀಕ್ಷೆಗೆ ಹೈಕೋರ್ಟ್ ತಡೆ

    ಈ ನಡುವೆ ದೇಶದಲ್ಲಿ ಪಿಎಫ್‍ಐ ಬ್ಯಾನ್ ಮಾಡಿದ ಕೇಂದ್ರ ಬಿಜೆಪಿ ಸರ್ಕಾರದ ಹೊಸ ಗೇಮ್ ಎಂಬ ಮಾತು ಕೇಳಿಬರುತ್ತಿದೆ. ದೇಶಾದ್ಯಂತ 5 ವರ್ಷ ಪಿಎಫ್‍ಐ ಚಟುವಟಿಕೆಗೆ ಗೃಹ ಇಲಾಖೆ ನಿರ್ಬಂಧ ಹೇರಿರುವ ಬೆನ್ನಲ್ಲೇ ಕೇಂದ್ರ ಸರ್ಕಾರದ ಈ ನಿರ್ಧಾರದ ಹಿಂದಿನ ಸೀಕ್ರೆಟ್ ಏನು ಎಂಬ ಪ್ರಶ್ನೆ ಕಾಡತೊಡಗಿದೆ. ಪಿಎಫ್‍ಐ ನಿಷೇಧದ ಹಿಂದೆ ರಾಜಕೀಯ ರಹಸ್ಯ ಕೂಡ ಅಡಗಿದೆ. ಇದೀಗ ಪಿಎಫ್‍ಐ ನಿಷೇಧಕ್ಕೆ ಕಾರಣವಾಯ್ತಾ ಕರ್ನಾಟಕ ಎಂಬ ಅನುಮಾನವು ಎದ್ದಿದೆ. ಪ್ರವೀಣ್ ಕುಮಾರ್ ನೆಟ್ಟಾರು (Praveen Kumar Nettar) ಹತ್ಯೆ ಬಳಿಕ ಪಕ್ಷದ ವಿರುದ್ಧವೇ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದರು. ಕೇಂದ್ರ, ರಾಜ್ಯ ನಾಯಕರ ವಿರುದ್ಧ ಹಿಂದೂಪರ ಕಾರ್ಯಕರ್ತರು ಸಿಡಿದೆದ್ದಿದ್ದರು. ಮತ್ತೊಂದ್ಕಡೆ ದೇಶದಲ್ಲಿ ನಡೆಯಲಿರುವ ಸರಣಿ ಚುನಾವಣೆ ಕೂಡ ಪಿಎಫ್‍ಐ ನಿಷೇಧಕ್ಕೆ ಅಸ್ತ್ರವಾಯಿತೇ ಎಂಬ ಅನುಮಾನ ಮೂಡಿದೆ. ಹಿಮಾಚಲಪ್ರದೇಶ, ಗುಜರಾತ್, ಕರ್ನಾಟಕ ಚುನಾವಣೆಗೆ ಕೌಂಟ್‍ಡೌನ್ ಶುರುವಾಗಿದೆ. ಹೀಗಾಗಿಯೇ ಕೇಂದ್ರ ಪಿಎಫ್‍ಐ ನಿಷೇಧಕ್ಕೆ ಗಟ್ಟಿ ನಿರ್ಧಾರ ಮಾಡಿದೆ. ಈ ಮೂಲಕ ಹಿಂದೂಪರ ನಾಯಕರಿಗೆ ಸಂದೇಶ ರವಾನಿಸಿದ್ರಾ ಅಮಿತ್ ಶಾ (Amit Shah) ಎಂಬ ಪ್ರಶ್ನೆಯೊಂದು ಎದ್ದಿದೆ. ಇದರೊಂದಿಗೆ ಸಿದ್ದರಾಮಯ್ಯ ಅವಧಿಯಲ್ಲಿ ಪಿಎಫ್‌ಐ ಮೇಲಿದ್ದ ಒಟ್ಟು 176 ಕೇಸ್ ವಾಪಸ್ ಮಾಡಲಾಗಿತ್ತು. 175 ಪ್ರಕರಣಗಳಲ್ಲಿ 1,764 ಜನರ ಮೇಲಿನ ಕೇಸ್ ವಾಪಸ್ ಪಡೆಯಲಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್- ತುಮಕೂರಿನಲ್ಲಿ ಕೊನೆಗೂ ರಸ್ತೆಗಿಳಿದ ಕಸ ಸಾಗಿಸುವ ಆಟೋಗಳು!

    Live Tv
    [brid partner=56869869 player=32851 video=960834 autoplay=true]

  • PFI ನಿಂದ 5.06 ಕೋಟಿ ಪರಿಹಾರ ಕೇಳಿದ KSRTC

    PFI ನಿಂದ 5.06 ಕೋಟಿ ಪರಿಹಾರ ಕೇಳಿದ KSRTC

    ತಿರುವನಂತಪುರಂ: ರಾಷ್ಟ್ರೀಯ ತನಿಖಾ ದಳ (NIA) ದಾಳಿ ವಿರೋಧಿಸಿ ಪಿಎಫ್‌ಐ (PFI) ಸಂಘಟನೆಯ ಕಾರ್ಯಕರ್ತರು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ಸುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ಭಾರೀ ನಷ್ಟವಾಗಿದ್ದು ಕೇರಳ ಸಾರಿಗೆ ಸಂಸ್ಥೆಯು ಪಿಎಫ್‌ಐನಿಂದ 5.06 ಕೋಟಿ ಪರಿಹಾರ ಕೇಳಿ ಹೈಕೋರ್ಟ್‌ಗೆ (Kerala HighCourt) ಅರ್ಜಿ ಸಲ್ಲಿಸಿದೆ.

    ಕಳೆದ ಸೆಪ್ಟೆಂಬರ್‌ 23ರಂದು ಎನ್‌ಐಎ 15 ರಾಜ್ಯಗಳಲ್ಲಿ 93 ಕಡೆ ನಡೆಸಿದ ದಾಳಿಯಲ್ಲಿ ನೂರಾರು ಪಿಎಫ್‌ಐ (PFI) ಕಾರ್ಯಕರ್ತರನ್ನು ವಶಕ್ಕೆ ಪಡೆದು, ಹಲವರನ್ನು ಬಂಧಿಸುವ ಕೆಲಸ ಮಾಡಿತ್ತು. ಇದನ್ನು ಖಂಡಿಸಿದ ಪಿಎಫ್‌ಐ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗೆ ಮುಂದಾಗಿ ತಿರುವನಂತಪುರಂ, ಕೊಲ್ಲಂ, ಕೋಝಿಕ್ಕೋಡ್, ವಯನಾಡ್ ಮತ್ತು ಅಲಪ್ಪುಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿ ಸಾಕಷ್ಟು ಬಸ್‌ಗಳನ್ನ ಜಖಂಗೊಳಿಸಿದ್ದರು.

    70ಕ್ಕೂ ಹೆಚ್ಚು ಬಸ್‌ಗಳು (BUS) ಜಖಂ:
    ಪಿಎಫ್‌ಐ ಕಾರ್ಯಕರ್ತರು ನಡೆಸಿದ 12 ಗಂಟೆಗಳ ಪ್ರತಿಭಟನೆಯಲ್ಲಿ 70ಕ್ಕೂ ಹೆಚ್ಚು ಬಸ್ಸುಗಳು ಹಾನಿಯಾಗಿವೆ. ಅಲ್ಲದೇ ಬಸ್‌ ಚಾಲಕರು, ಪ್ರಯಾಣಿಕರೂ ಗಾಯಗೊಂಡಿದ್ದಾರೆ ಸಾರಿಗೆ ಸಚಿವ ಎ. ರಾಜು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಹಿಂಸಾಚಾರ – PFI ವಿರುದ್ಧ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಕೇಸ್‌

    ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು, ಟ್ರಕ್‌ಗಳು ಮತ್ತು ಖಾಸಗಿ ವಾಹನಗಳ ಮೇಲೆ ಮುಂಜಾನೆ ಕಲ್ಲು ತೂರಾಟ ನಡೆದಿತ್ತು. ಕಲ್ಲು ತೂರಾಟದಿಂದ ಹಲವು ಬಸ್ ಚಾಲಕರು ಗಾಯಗೊಂಡಿದ್ದರು. ಕಣ್ಣೂರಿನಲ್ಲಿ ದ್ವಿಚಕ್ರ ವಾಹನದ ಮೇಲೆ ಕಚ್ಚಾ ಬಾಂಬ್ ಎಸೆಯಲಾಗಿತ್ತು. ಕೊಲ್ಲಂನಲ್ಲಿ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸುವ ಸಮಯದಲ್ಲಿ ಇಬ್ಬರು ಪೊಲೀಸರಿಗೆ ಬೈಕ್ ಡಿಕ್ಕಿ ಹೊಡೆದಿತ್ತು. ಇದನ್ನೂ ಓದಿ: NIA ಮಿಡ್‌ನೈಟ್ ಆಪರೇಷನ್- ಬೆಂಗ್ಳೂರಿನಲ್ಲಿ ಶಂಕಿತ ಉಗ್ರ ಯಾಸಿರ್ ಅರೆಸ್ಟ್

    ಯಾವುದೇ ಅನುಮತಿ ಪಡೆಯದೇ ಬಂದ್‌ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್‌ ಪಿಎಫ್‌ಐ ನಾಯಕರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿತು. ಮುಷ್ಕರ ಬೆಂಬಲಿಸದ ನಾಗರಿಕರು, ಸಾರ್ವಜನಿಕ ಮತ್ತು ಖಾಸಗಿ ಆಸ್ತಿಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಸರ್ಕಾರಕ್ಕೆ ಸೂಚನೆ ನೀಡಿತ್ತು.

    Live Tv
    [brid partner=56869869 player=32851 video=960834 autoplay=true]

  • ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

    ಮೋದಿ ಸರ್ಕಾರದಿಂದ ಮಾತ್ರ ಕಠಿಣ ಕ್ರಮ ಸಾಧ್ಯ – NIAಗೆ ಯಶ್‍ಪಾಲ್ ಸುವರ್ಣ ಧನ್ಯವಾದ

    ಉಡುಪಿ: ದೇಶಾದ್ಯಂತ ಕಾರ್ಯಾಚರಣೆ ಮಾಡಿದ ಎನ್‍ಐಎ ಗೆ ಧನ್ಯವಾದ. ಎನ್‍ಐಎ (NIA) ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ. ಮಾತಾಂಧ ಶಕ್ತಿಗಳನ್ನು ದೇಶದಲ್ಲಿ ನಿಷೇಧ ಮಾಡಿರುವುದು ಸಂಭ್ರಮಿಸಬೇಕಾದ ವಿಚಾರ ಎಂದು ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ (YashPal Suvarna) ಹೇಳಿದ್ದಾರೆ.

    ದೇಶದಲ್ಲಿ ಕಠಿಣ ಕ್ರಮ ಮೋದಿ ಸರ್ಕಾರದಿಂದ ಮಾತ್ರ ಸಾಧ್ಯ. ನವರಾತ್ರಿ (Navratri) ಸಂದರ್ಭ ದೇಶಕ್ಕೆ ಶುಭಸುದ್ದಿ ಕೊಟ್ಟ ಅಮಿತ್ ಶಾ (AmitShah) ಗೆ ಅಭಿನಂದನೆ ಎಂದು ಉಡುಪಿ (Udupi) ಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಅವರು ಹೇಳಿದರು. ನವರಾತ್ರಿ ಸಂದರ್ಭ ದೇಶದ್ರೋಹಿಗಳನ್ನು ಮಟ್ಟ ಹಾಕುವ ನಿರ್ಧಾರ ಮಾಡಲಾಗಿದೆ. ಇದು ಇಡೀ ದೇಶದ ಜನ ಸಿಹಿ ಹಂಚುವ ಕ್ಷಣ ಎಂದರು.

    ಎನ್ ಐಎ ತನಿಖೆ ಸಂದರ್ಭ ಹಲವಾರು ವಿಚಾರ ಬೆಳಕಿಗೆ ಬಂದಿದೆ. ಕರಾವಳಿ ಭಾಗದಲ್ಲಿ ಇಂತಹ ಚಟುವಟಿಕೆಗಳು ಯಾವ ಮಟ್ಟದಲ್ಲಿ ನಡೆಯುತ್ತದೆ ಎಂಬ ಬಗ್ಗೆ ಕೂಡ ಮಾಹಿತಿಗಳನ್ನ ಅಧಿಕಾರಿಗಳು ಕಲೆಹಾಕಿದ್ದಾರೆ. ಸ್ಲೀಪರ್ ಸೆಲ್ ರೀತಿಯ ಅಡಗುದಾಣಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದೆ. ಹಿಜಬ್‍ನ ಬೆನ್ನೆಲುಬು ಸಂಘಟನೆಯನ್ನು ಬ್ಯಾನ್ ಮಾಡಲಾಗಿದೆ. ಕರಾವಳಿ ಭಾಗ ಶಾಂತಿಯುತವಾಗಿರಲು ಎನ್‍ಐಎಗೆ ಬೆಂಬಲಿಸುತ್ತೇವೆ. ಅಮಿತ್ ಶಾ ಸೂಕ್ತ ದಾಖಲೆಗಳನ್ನು ಪಡೆದು ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪಿಎಫ್‌ಐ ನಂತೆಯೇ RSSನ್ನೂ ಬ್ಯಾನ್‌ ಮಾಡಿ: ಕೇರಳ ವಿಪಕ್ಷಗಳ ಒತ್ತಾಯ

    ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗೆ ದೇಶದಲ್ಲಿ ಅವಕಾಶ ಇಲ್ಲ ಎಂದು ಹೇಳಿದರು. ವಿದೇಶಿ ಹಣ ವರ್ಗಾವಣೆ, ಹಿಂಸೆ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಸರ್ಕಾರ ಪಿಎಫ್‍ಐ (PFI) ಗೆ ಬೆಂಬಲವಾಗಿ ನಿಂತಿತ್ತು. ದುಷ್ಕೃತ್ಯ, ದೇಶದ್ರೋಹಿ ಚಟುವಟಿಕೆಗೆ ಕಾಂಗ್ರೆಸ್ ಕಾರಣ. ಸಿದ್ದರಾಮಯ್ಯ ಸರ್ಕಾರ 150 ಜನರ ಕೇಸು ವಾಪಸ್ ತೆಗೆದಿತ್ತು. ಇದನ್ನೂ ಓದಿ: ಪಿಎಫ್‌ಐ ಬ್ಯಾನ್ – ರಾಷ್ಟ್ರೀಯ ಸುರಕ್ಷತೆ ನಮ್ಮ ಸರ್ಕಾರದ ಮೊದಲ ಆದ್ಯತೆ: ಪ್ರಹ್ಲಾದ್ ಜೋಶಿ

    ಎಸ್ ಡಿಪಿಐ ಒಂದು ರಾಜಕೀಯ ಪಕ್ಷ ಆಗಿರುವ ಕಾರಣ ಕಾನೂನು ಬಾಹಿರ ಚಟುವಟಿಕೆ ಮಾಡುವ ಸಂಘನೆಗಳನ್ನು ಬ್ಯಾನ್ ಮಾಡಲಾಗಿದೆ. ಪಿಎಫ್‍ಐ ದೇಶದ ಪರ, ಸಮಾಜದ ಉದ್ಧಾರಕ್ಕೆ ಎಂದೂ ಕೆಲಸ ಮಾಡಿಲ್ಲ. ಗಲಭೆ ಸೃಷ್ಟಿಸೋದೇ ಪಿಎಫ್‍ಐ ಕೆಲಸವಾಗಿತ್ತು. ದೇಶವಿರೋಧಿ ಚಟುವಟಿಕೆಯಲ್ಲಿ SDPI ಶಾಮೀಲಾಗಿದ್ದರೆ ಕೇಂದ್ರ ಬ್ಯಾನ್ ಮಾಡಲಿದೆ ಎಂದು ಯಶ್ ಪಾಲ್ ಹೇಳಿದರು.

    Live Tv
    [brid partner=56869869 player=32851 video=960834 autoplay=true]