Tag: NIA

  • ತಿಂಗಳಿಗೆ ಒಂದೂವರೆ ಲಕ್ಷ ಸಂಬಳ – ಒಂದು ಸುಳಿವಿನಿಂದ ಸಿಕ್ಕಿಬಿದ್ದ ಶಂಕಿತ ಉಗ್ರ

    ತಿಂಗಳಿಗೆ ಒಂದೂವರೆ ಲಕ್ಷ ಸಂಬಳ – ಒಂದು ಸುಳಿವಿನಿಂದ ಸಿಕ್ಕಿಬಿದ್ದ ಶಂಕಿತ ಉಗ್ರ

    ಬೆಂಗಳೂರು: ಎನ್‌ಐಎ (NIA) ಹಾಗೂ ಐಎಸ್‌ಡಿ (ISD) ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಿನಲ್ಲಿ ಬಂಧನಕ್ಕೊಳಗಾದ ಶಂಕಿತ ಉಗ್ರ ಆರೀಫ್‌ನನ್ನು (Arif) ಎನ್‌ಐಎ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸಾಫ್ಟ್‌ವೇರ್ ಉದ್ಯೋಗಿ ಸೋಗಿನಲ್ಲಿ ಉಗ್ರ ಸಂಘಟನೆ ಸೇರಲು ಆರೀಫ್ ಮಾಡುತ್ತಿದ್ದ ಇಂಚಿಂಚು ರಹಸ್ಯವೂ ಬಯಲಾಗಿದೆ.

    ಉತ್ತರ ಪ್ರದೇಶದ ಅಲಿಗಢ ಮೂಲದ ಆರೀಫ್ ಕುಟುಂಬ ಆರ್ಥಿಕವಾಗಿ ಸದೃಢವಾಗಿದೆ. ಯಾವುದೇ ಆರ್ಥಿಕ ಸಮಸ್ಯೆಗಳಿರದ ಆರೀಫ್ ಉತ್ತಮ ವ್ಯಾಸಂಗ ಮಾಡಿದ್ದು, ಪ್ರತಿ ತಿಂಗಳು ಒಂದೂವರೆ ಲಕ್ಷ ರೂ. ಸಂಬಂಳ ಪಡೆಯುತ್ತಿದ್ದ. ಬಳಿಕ ಔಟ್ ಸೋರ್ಸಿಂಗ್ ಕೆಲಸ ಮಾಡುತ್ತಿದ್ದ. ಹೆಂಡತಿ, ಮಕ್ಕಳೊಂದಿಗೆ ಸುಖ ಜೀವನ ಸಾಗಿಸಬೇಕಿದ್ದ ಆರೀಫ್ ಧರ್ಮದ ಹುಚ್ಚನ್ನು ಮೈಗೂಡಿಸಿಕೊಂಡಿದ್ದ. ಅದು ಎಷ್ಟರ ಮಟ್ಟಿಗೆ ಎಂದರೆ ಕುಟುಂಬವನ್ನೇ ಬಿಟ್ಟು ಉಗ್ರ ಸಂಘಟನೆಗೆ ಸೇರುವಷ್ಟು ಹುಚ್ಚು ಬೆಳೆಸಿಕೊಂಡಿದ್ದ.

    ಕಳೆದ 3 ವರ್ಷಗಳಿಂದಲೂ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯನಾಗಿದ್ದ ಆರೀಫ್, ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡುತ್ತಿದ್ದ. ಆದರೆ ಅದನ್ನು ಟ್ವಿಟ್ಟರ್ ಸಂಸ್ಥೆ ಡಿಲೀಟ್ ಮಾಡಿ, ಆತನ ಅಕೌಂಟ್ ಅನ್ನು ಬ್ಲಾಕ್ ಮಾಡಿತ್ತು. ಇದರಿಂದ ಆತ ಅಲರ್ಟ್ ಆಗಿದ್ದು, ಆತನ ಖಾತೆ ಒಂದೂವರೆ ವರ್ಷ ಸ್ಥಗಿತವಾಗಿತ್ತು. ಬಳಿಕ ಮತ್ತೆ ಅದರಲ್ಲಿ ಸಕ್ರಿಯನಾಗಿದ್ದ. ಟೆಲಿಗ್ರಾಂ ಹಾಗೂ ಡಾರ್ಕ್ ವೆಬ್ ಮೂಲಕ ಅಲ್ ಖೈದಾ ಸಂಪರ್ಕದಲ್ಲಿದ್ದ ಆರೀಫ್ ಮಾರ್ಚ್ 10 ರಂದು ಇತರ 4 ಶಂಕಿತ ಉಗ್ರರೊಂದಿಗೆ ದೆಹಲಿ, ಉತ್ತರ ಪ್ರದೇಶ, ಬಿಹಾರ ಬಳಿಕ ಅಲ್ಲಿಂದ ಸಿರಿಯಾಗೆ ಹೋಗುವ ಪ್ಲಾನ್ ಮಾಡಿದ್ದ. ಇದಕ್ಕಾಗಿ ವಿಮಾನದ ಟಿಕೆಟ್ ಖರೀದಿಸಿಟ್ಟಿದ್ದ.

    ಆರೀಫ್ ಸಾಮಾಜಿಕ ಮಾಧ್ಯಮಗಳಲ್ಲಿ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕದಲ್ಲಿದ್ದಾನೆ ಎನ್ನುವ ಮಾಹಿತಿ ಪಡೆದ ಕೇಂದ್ರ ತನಿಖಾ ಸಂಸ್ಥೆ ಕಳೆದ 3 ತಿಂಗಳಿಂದ ಆತನ ಮೇಲೆ ನಿಗಾ ಇಟ್ಟಿತ್ತು. ಅಧಿಕಾರಿಗಳು ಆತನ ಮನೆ ಬಳಿ ಮಾರುವೇಷದಲ್ಲಿ ಬಂದು ಆತನ ಪ್ರತಿ ಚಲನವಲನಗಳನ್ನು ಗಮನಿಸುತ್ತಿದ್ದರು. ಕಳೆದ ಕೆಲ ತಿಂಗಳಿನಿಂದ ಮುಸ್ಲಿಮರಂತೆ ವೇಷ ಹಾಕಿ ತಳ್ಳು ಗಾಡಿಯಲ್ಲಿ ಆತನ ಮನೆ ಮುಂದೆಯೇ ವ್ಯಾಪಾರ ಮಾಡುತ್ತಿದ್ದರು. ಇದನ್ನೂ ಓದಿ: ಜೆಮಿಮಾ, ರಿಚಾ ಭರ್ಜರಿ ಬ್ಯಾಟಿಂಗ್‌ – ಪಾಕ್‌ ವಿರುದ್ಧ 7 ವಿಕೆಟ್‌ಗಳ ಜಯ

    ಆರೀಫ್ ತನ್ನ ಹಿರಿಯ ಮಗನನ್ನು ಮಾತ್ರ ಶುಕ್ರವಾರದಂದು ನಮಾಜ್‌ಗೆ ಕರೆದೊಯ್ಯುತ್ತಿದ್ದ. ಉಳಿದಂತೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ. ಅಲ್ಲದೇ ಯಾರು ಕೂಡಾ ಮನೆಯಿಂದ ಹೊರಗೆ ಬರುತ್ತಿರಲಿಲ್ಲ. ಇತ್ತ ಅದರ ಅರಿವಿಲ್ಲದ ಆರೀಫ್ ಸಿರಿಯಾಗೆ ಹಾರಲು ಪ್ಲಾನ್ ಮಾಡಿ ಫೈಟ್ ಟಿಕೆಟ್ ಬುಕ್ ಮಾಡಿದ್ದ. ಆದರೆ ಆತ ಒನ್ ಸೈಡ್ ಟಿಕೆಟ್ ಬುಕ್ ಮಾಡಿದ್ದರಿಂದ ಆತನ ಮೇಲೆ ನಿಗಾ ಇಟ್ಟಿದ್ದ ಅಧಿಕಾರಿಗಳಿಗೆ ಇದ್ದ ಅನುಮಾನ ಕನ್ಫರ್ಮ್ ಆಗಿತ್ತು. ಅದರ ಜೊತೆಗೆ ಮಾನೆ ಖಾಲಿ ಮಾಡಿ ಕುಟುಂಬವನ್ನು ಉತ್ತರ ಪ್ರದೇಶದ ಅಲಿಗಢಕ್ಕೆ ಕಳುಹಿಸಲು ಎಲ್ಲಾ ಸಿದ್ಧತೆ ಮಾಡಿದ್ದ. ಹೀಗಾಗಿ ಮನೆಯಲ್ಲಿರುವ ಪೀಠೋಪಕರಣಗಳನ್ನು ಒಎಲ್ಎಕ್ಸ್‌ನಲ್ಲಿ ಮಾರಾಟಕ್ಕೆ ಪೋಸ್ಟ್ ಮಾಡಿದ್ದ. ಈ ವಿಚಾರವನ್ನು ತನ್ನ ಕುಟುಂಬಸ್ಥರಿಗೆ ತಿಳಿಸಿದ್ದು, ಎಲ್ಲರೂ ಅದಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ ಕುಟುಂಬಸ್ಥರಿಗೆ ಆರೀಫ್ ಸಿರಿಯಾಗೆ ಹೋಗುವ ಬಗ್ಗೆ ಯಾರಿಗೂ ಮಾಹಿತಿ ಇರಲಿಲ್ಲ.

    ಯಾವಾಗ ಸದ್ದಿಲ್ಲದೆ ಬೆಂಗಳೂರಿನ ಮನೆ ಖಾಲಿ ಮಾಡಲು ಆರೀಫ್ ತಯಾರಾಗಿದ್ದನೋ ಆಗಲೇ ಐಎಸ್‌ಡಿ ಹಾಗೂ ಎನ್‌ಐಎ ಟೀಂಗಳು ದಾಳಿ ಮಾಡಲು ನಿರ್ಧಾರ ಮಾಡಿದ್ದವು. ಸದ್ಯ ಶಂಕಿತ ಉಗ್ರ ಆರೀಫ್‌ನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದ್ದು, ಆತನ ಸಂಪರ್ಕದಲ್ಲಿ ಇನ್ನೂ ಯಾರುಜ ಇದ್ದಾರೆ ಎನ್ನುವುದನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ದಲಿತಪರ ಸಂಘಟನೆಯಿಂದ ಜೈನ್ ವಿವಿ ಬೋರ್ಡ್‌ಗೆ ಮಸಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • NIAಗೆ ತಾಲಿಬಾನ್ ಹೆಸರಲ್ಲಿ ಭಯೋತ್ಪಾದನಾ ದಾಳಿ ಸಂದೇಶ – ದೇಶಾದ್ಯಂತ ಹೈಅಲರ್ಟ್ ಘೋಷಣೆ

    NIAಗೆ ತಾಲಿಬಾನ್ ಹೆಸರಲ್ಲಿ ಭಯೋತ್ಪಾದನಾ ದಾಳಿ ಸಂದೇಶ – ದೇಶಾದ್ಯಂತ ಹೈಅಲರ್ಟ್ ಘೋಷಣೆ

    ಮುಂಬೈ: ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ತಾಲಿಬಾನ್ (Taliban) ಹೆಸರಲ್ಲಿ ಇಮೇಲ್ (EMail)  ಬಂದಿದ್ದು, ಇಮೇಲ್‍ನಲ್ಲಿ ಮುಂಬೈ (Mumbai) ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಭಯೋತ್ಪಾದನಾ ದಾಳಿ (Terror Attack) ಕುರಿತು ಎಚ್ಚರಿಕೆ ನೀಡಲಾಗಿದೆ. ಹಾಗಾಗಿ ದೇಶಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ.

    ತಾಲಿಬಾನ್ ಮುಖ್ಯಸ್ಥ ಸಿರಾಜುದ್ದೀನ್ ಹಕ್ಕಾನಿ ಆದೇಶದಂತೆ ಇಮೇಲ್ ಕಳುಹಿಸುತ್ತಿರುವುದಾಗಿ ಉಲ್ಲೇಖಿಸಲಾಗಿದೆ. ಇಮೇಲ್ ಕುರಿತು ಎನ್‍ಐಎ ತನಿಖೆ ಆರಂಭಿಸಿದೆ. ಈಗಾಗಲೇ ಇಮೇಲ್ ಮೂಲಕ ತಾಲಿಬಾನ್ ದಾಳಿ ಎಚ್ಚರಿಕೆ ನೀಡಿರುವ ಕಾರಣ ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಹೈಅಲರ್ಟ್ ಘೋಷಿಸಿದೆ. ಇದನ್ನೂ ಓದಿ: ಪಕ್ಷ ವಿರೋಧಿ ಚಟುವಟಿಕೆ – ಪಂಜಾಬ್ ಮಾಜಿ ಸಿಎಂ ಅಮರಿಂದರ್ ಸಿಂಗ್ ಪತ್ನಿಯನ್ನು ಅಮಾನತುಗೊಳಿಸಿದ ಕಾಂಗ್ರೆಸ್

    NIA ಪ್ರಾಥಮಿಕ ತನಿಖೆ ಪ್ರಕಾರ ತಾಲಿಬಾನ್ ಹೆಸರಲ್ಲಿ ಕಿಡಿಗೇಡಿಗಳು ಇಮೇಲ್ ಕಳುಹಿಸಿರುವ ಸಾಧ್ಯತೆ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಭಾರತದ ಜೊತೆ ಆಫ್ಘಾನಿಸ್ತಾನ (Afghanistan) ತಾಲಿಬಾನ್ ಉತ್ತಮ ಸಂಬಂಧ ಹೊಂದಿದೆ. ಹೀಗಾಗಿ ಹಕ್ಕಾನಿ ಹೆಸರಿನಲ್ಲಿ ಕಿಡಿಗೇಡಿಗಳು ಅಥವಾ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸುತ್ತಿರುವ ಗುಂಪು ಈ ಸಂದೇಶ ಕಳುಹಿಸಿರುವ ಸಾಧ್ಯತೆ ಇದೆ. ಈ ಬಗ್ಗೆ ಎನ್‍ಐಎ ಎಚ್ಚರಿಕೆ ವಹಿಸಿದೆ. ಈಗಾಗಲೇ ಬಂದಿರುವ ಇಮೇಲ್ ಸಂದೇಶವನ್ನು ಟ್ರೆಸಿಂಗ್‌ ಮಾಡಲಾಗಿದ್ದು ಪಾಕಿಸ್ತಾನದಿಂದ (Pakistan) ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: BBC ಸಾಕ್ಷ್ಯಚಿತ್ರ ನಿಷೇಧ – ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

    ದಾಳಿಯ ಬೆದರಿಕೆ ಸಂದೇಶ ಬಂದಿರುವ ಕಾರಣ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈಗಾಗಲೇ ನಗರ ಹಾಗೂ ಗಡಿ ಪ್ರದೇಶದಲ್ಲಿ ಅಲರ್ಟ್ ಘೋಷಿಸಲಾಗಿದೆ. NIA ಅಧಿಕಾರಿಗಳು ಮುಂಬೈ ಪೊಲೀಸರಿಗೆ ಉಗ್ರರ ದಾಳಿ ಕುರಿತು ಮಾಹಿತಿ ಹಂಚಿಕೊಂಡಿದೆ. ಮುಂಬೈನ ಕೊಲಾಬಾ ಸೇರಿದಂತೆ ಎಲ್ಲಾ ಜಲ ಮಾರ್ಗದಲ್ಲಿ ಭದ್ರತಾ ಪಡೆ ಹದ್ದಿನ ಕಣ್ಣಿಟ್ಟಿದೆ.

    ರೈಲು ನಿಲ್ದಾಣ, ವಿಮಾನ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿದ್ದಾರೆ. ಇದೇ ವೇಳೆ ಎನ್‍ಐಎ ಅಧಿಕಾರಿಗಳು ಇತರ ನಗರಕ್ಕೂ ಹೈಅಲರ್ಟ್ ಸೂಚಿಸಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ

    ಗೋರಖನಾಥ ದೇವಸ್ಥಾನದ ಮೇಲೆ ದಾಳಿ : ಐಐಟಿಯಲ್ಲಿ ಓದಿದ ಉಗ್ರನಿಗೆ ಗಲ್ಲು ಶಿಕ್ಷೆ

    ಲಕ್ನೋ: ಗೋರಖನಾಥ ದೇವಸ್ಥಾನದ (Gorakhnath Temple) ಮೇಲೆ ದಾಳಿ ನಡೆಸಿದ ಉಗ್ರನಿಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ವಿಶೇಷ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

    ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸ್ವಕ್ಷೇತ್ರ ಗೋರಖನಾಥ ದೇವಸ್ಥಾನದ ಮೇಲೆ ಅಹ್ಮದ್ ಮುರ್ತಜಾ ಅಬ್ಬಾಸಿ (Ahmed Murtaza Abbasi) 2022ರ ಏಪ್ರಿಲ್‌ 3 ರಂದು ದಾಳಿ ನಡೆಸಿದ್ದ. ಈ ವೇಳೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಉತ್ತರ ಪ್ರದೇಶ ಪ್ರಾಂತೀಯ ಪೊಲೀಸರ ಮೇಲೆ ಅಹ್ಮದ್‌ ಕುಡುಗೋಲಿನಿಂದ ಹಲ್ಲೆ ನಡೆಸಿದ್ದ. ದಾಳಿ ಬಳಿಕ ಆತನನ್ನು ಪೊಲೀಸರು ಬೆನ್ನಟ್ಟಿ ಬಂಧಿಸಿದ್ದರು.

    ಪ್ರಕರಣದ ವಿಚಾರಣೆ ನಡೆಸಿದ್ದ ಎನ್‌ಐಎ ನ್ಯಾಯಾಲಯ (NIA Special Court) ಮುರ್ತಜಾ ಅಬ್ಬಾಸಿ ದೋಷಿ ಎಂದು ತೀರ್ಪು ನೀಡಿ ಸೋಮವಾರ ಗಲ್ಲು ಶಿಕ್ಷೆಯನ್ನು (Death Sentence) ವಿಧಿಸಿದೆ. ಇದನ್ನೂ ಓದಿ: ಬೇರೊಬ್ಬನ ಜೊತೆ ಮೊಬೈಲ್‍ನಲ್ಲಿ ಮಾತನಾಡಿದ್ದಕ್ಕೆ ಪ್ರಿಯತಮೆಯ ಮೇಲೆ ಶೂಟೌಟ್!

    ಯಾರು ಈ ಮುರ್ತಜಾ?
    ಮುರ್ತಜಾ ಮುಂಬೈ ಐಐಟಿಯಲ್ಲಿ ರಾಸಾಯನಿಕ ಎಂಜಿನಿಯರ್ ಪದವಿ ಪಡೆದಿದ್ದ. 2016 ರಲ್ಲಿ ಭಾರತದಿಂದ ಪಲಾಯನ ಮಾಡಿರುವ ವಿವಾದಿತ ಇಸ್ಲಾಮಿಕ್ ಧರ್ಮಗುರು ಝಾಕಿರ್ ನಾಯ್ಕ್‌ನಿಂದ ಮುರ್ತಜಾ ಸ್ಫೂರ್ತಿ ಪಡೆದಿದ್ದ. ತನಿಖೆಯ ಸಮಯದಲ್ಲಿ ಪೊಲೀಸರು ಆತನ ಲ್ಯಾಪ್‌ಟಾಪ್ ಮತ್ತು ಪೆನ್ ಡ್ರೈವ್‌ನಲ್ಲಿ ಜಿಹಾದ್‌ಗೆ ಸಂಬಂಧಿಸಿದ ವೀಡಿಯೊಗಳು ಸೇರಿದಂತೆ ಅನುಮಾನಾಸ್ಪದ ವಸ್ತುಗಳನ್ನು ವಶಪಡಿಸಿಕೊಂಡಿದ್ದರು.

    ಈತ ಗೋರಖ್‌ಪುರ ನಿವಾಸಿಯಾಗಿದ್ದರೂ ಆಧಾರ್‌ ಕಾರ್ಡ್‌ ಮುಂಬೈನಲ್ಲಿ ಮಾಡಲಾಗಿತ್ತು.  ಮಾಧ್ಯಮಗಳ ಜೊತೆ  ಮಾತನಾಡಿದ್ದ ತಂದೆ ಮಗ ಮಾನಸಿಕ ಅಸ್ವಸ್ಥ ಎಂದು ಹೇಳಿಕೆ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Praveen Nettaru Case: ಹತ್ಯೆಯ ಪ್ರಮುಖ ಆರೋಪಿಗಳು ಸೌದಿಯಲ್ಲಿ ಭೂಗತ – ತನಿಖೆಯಲ್ಲಿ ಮಹತ್ವದ ಪ್ರಗತಿ

    Praveen Nettaru Case: ಹತ್ಯೆಯ ಪ್ರಮುಖ ಆರೋಪಿಗಳು ಸೌದಿಯಲ್ಲಿ ಭೂಗತ – ತನಿಖೆಯಲ್ಲಿ ಮಹತ್ವದ ಪ್ರಗತಿ

    ಮಂಗಳೂರು: ಪ್ರವೀಣ್ ಕುಮಾರ್‌ ನೆಟ್ಟಾರು (Praveen Kumar Nettar) ಹತ್ಯೆ ಪ್ರಕರಣದ ಆರೋಪಿಗಳ ಬೆನ್ನು ಬಿದ್ದಿರುವ (National Investigation Agency) ಎನ್‍ಐಎಗೆ ಮಹತ್ವದ ಸುಳಿವು ಸಿಕ್ಕಿದೆ. ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿ ಎನ್‍ಐಎ ವಿದೇಶದತ್ತ ತೆರಳಲು ತಯಾರಿ ನಡೆಸಿದೆ.

    2022ರ ಜುಲೈ 27 ರಂದು ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ (Bellare) ಬಿಜೆಪಿ (BJP) ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಿಎಫ್‍ಐ ಸಂಘಟನೆ ನಡೆಸಿದ ಈ ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಈ ಹತ್ಯೆ ಪ್ರಕರಣವನ್ನು ಎನ್‍ಐಎಗೆ ಹಸ್ತಾಂತರಿಸಿದ ಬಳಿಕ ತೀವ್ರಗತಿಯಲ್ಲಿ ತನಿಖೆ ನಡೆದಿದ್ದು ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದ ಹತ್ತು ಮಂದಿಯನ್ನು ಬಂಧಿಸಿ ಜೈಲಿಗಟ್ಟಲಾಗಿದೆ. ಆದ್ರೆ ಹತ್ಯೆಯ ಮಾಸ್ಟರ್ ಪ್ಲಾನ್ ಮಾಡಿದವರು, ಹಣಕಾಸು ಹಾಗೂ ಆಶ್ರಯ ನೀಡಿದ ಪ್ರಮುಖ ಆರೋಪಿಗಳು ಇನ್ನೂ ತಲೆಮರೆಸಿಕೊಂಡಿದ್ದಾರೆ. ಇವರ ಬಂಧನ ತಲೆನೋವಾಗಿದ್ದ ಎನ್‍ಐಎ ಆರೋಪಿಗಳ ಪತ್ತೆಗೆ ಬಹುಮಾನ ಘೋಷಿಸಿತ್ತು. ಒಟ್ಟು ಆರು ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ಒಟ್ಟು 22 ಲಕ್ಷ ಬಹುಮಾನ ಘೋಷಿಸಿತ್ತು. ಇದರ ಫಲವಾಗಿಯೇ ಇದೀಗ ಇಬ್ಬರು ಪ್ರಮುಖ ಆರೋಪಿಗಳ ಸುಳಿವು ಸಿಕ್ಕಿದ್ದು ಬಂಧನಕ್ಕೆ ಎನ್‍ಐಎ ಬಲೆ ಬೀಸಿದೆ. ಇದನ್ನೂ ಓದಿ: Praveen Nettaru murder case: 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್‌ ಸಲ್ಲಿಸಿದ NIA

    ಮೊದಲಿಗೆ ನಾಲ್ಕು ಆರೋಪಿಗಳ ಬಂಧನಕ್ಕೆ ಎನ್‍ಐಎ ಬಹುಮಾನ ಘೋಷಿಸಿದ್ದು ಬಳಿಕ ಜನವರಿ 22 ರಂದು ಬಂಟ್ವಾಳದ ಕೋಡಾಜೆ ನಿವಾಸಿ ಮಹಮ್ಮದ್ ಶರೀಫ್ ಹಾಗೂ ನೆಕ್ಕಿಲಾಡಿ ಅಗ್ನಾಡಿ ಹೌಸ್ ನಿವಾಸಿ ಕೆ.ಎ.ಮಸೂದ್ ಪತ್ತೆಗೆ ಒಟ್ಟು ಹತ್ತು ಲಕ್ಷ ಬಹುಮಾನ ಘೋಷಿಸಿತ್ತು. ಈ ಬಹುಮಾನ ಘೋಷಣೆಯ ಕೆಲವೇ ದಿನಗಳಲ್ಲಿ ಎನ್‍ಐಎ ಅಧಿಕಾರಿಗಳಿಗೆ ಅನಾಮಿಕ ವ್ಯಕ್ತಿ ಮಾಹಿತಿ ನೀಡಿದ್ದು ಆರೋಪಿಗಳಿಬ್ಬರೂ ಸೌದಿ ಅರೇಬಿಯಾದಲ್ಲಿ ಇರುವ ಸುಳಿವು ನೀಡಿದ್ದಾನೆ. ಹೀಗಾಗಿ ಎನ್‍ಐಎ ಅಧಿಕಾರಿಗಳು ಈ ಇಬ್ಬರನ್ನೂ ಸೌದಿ ಅರೇಬಿಯಾದಿಂದ ಬಂಧಿಸಿ ತರಲು ತಯಾರಿ ನಡೆಸಿದ್ದಾರೆ. ಇವರ ಬಂಧನಕ್ಕೆ ಬೇಕಾದ ಸಹಾಯಕ್ಕೆ ಸೌದಿ ಅರೇಬಿಯಾ ಸರ್ಕಾರದ ಜೊತೆ ಉನ್ನತ ಅಧಿಕಾರಿಗಳು ಈಗಾಗಲೇ ಮಾತುಕತೆ ನಡೆಸಿದ್ದು, ಕೆಲವೇ ದಿನಗಳಲ್ಲಿ ಬಂಧಿಸಿ ಕರೆ ತರುವ ಸಾಧ್ಯತೆ ಹೆಚ್ಚಿದೆ. ಇದನ್ನೂ ಓದಿ: ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸದಂತೆ ತೀರ್ಮಾನ ಮಾಡಿದ್ದೇನೆ: ಬಿಎಸ್‌ವೈ

    ಈ ಹತ್ಯೆ ಪ್ರಕರಣದಲ್ಲಿ ಇನ್ನೂ ನಾಲ್ವರು ಪ್ರಮುಖ ಆರೋಪಿಗಳಿದ್ದು ಅವರ ಬಂಧನಕ್ಕೆ ಮೊದಲ ಹಂತದಲ್ಲಿ 12 ಲಕ್ಷ ರೂ. ಬಹುಮಾನ ಘೋಷಿಸಿದೆ. ಆರೋಪಿಗಳಾದ ಸುಳ್ಯದ ಬೆಳ್ಳಾರೆ ಬೂಡುಮನೆ ನಿವಾಸಿ ಮೊಹಮ್ಮದ್ ಮುಸ್ತಾಫಗೆ 5 ಲಕ್ಷ ರೂ., ಮಡಿಕೇರಿಯ ಗದ್ದಿಗೆ ನಿವಾಸಿ ತುಫೈಲ್ ಎಚ್.ಎಂಗೆ 5 ಲಕ್ಷ ರೂ., ಸುಳ್ಯದ ಕಲ್ಲುಮುಟ್ಲು ನಿವಾಸಿ ಉಮ್ಮರ್ ಫಾರೂಕ್‍ಗೆ 2 ಲಕ್ಷ ರೂ. ಹಾಗೂ ಸುಳ್ಯದ ಬೆಳ್ಳಾರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಪತ್ತೆಗೆ 2 ಲಕ್ಷ ರೂ. ಬಹುಮಾನ ಈ ಹಿಂದೆಯೇ ಎನ್‍ಐಎ ಘೋಷಿಸಿತ್ತು. ಒಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಹತ್ಯೆ ಕೇಸನ್ನು ಗಂಭೀರವಾಗಿ ಪರಿಗಣಿಸಿರುವ ಎನ್ಐಎ ಎಲ್ಲಾ ಆರೋಪಿಗಳನ್ನು ಬಂಧಿಸುವವರೆಗೂ ವಿರಮಿಸುವ ಲಕ್ಷಣ ಕಾಣಿಸುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • Praveen Nettaru murder case: 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್‌ ಸಲ್ಲಿಸಿದ NIA

    Praveen Nettaru murder case: 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್‌ ಸಲ್ಲಿಸಿದ NIA

    ಮಂಗಳೂರು: ಬಿಜೆಪಿ (BJP) ಮುಖಂಡ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (NIA), ಸುದೀರ್ಘ ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ.

    ಬೆಂಗಳೂರಿನಲ್ಲಿರುವ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ 1,500 ಪುಟಗಳ ಸುದೀರ್ಘ ಚಾರ್ಜ್‌ಶೀಟ್‌ನ್ನು ಎನ್‌ಐಎ ಸಲ್ಲಿಸಿದೆ. ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿದಾರರ ಹೇಳಿಕೆ ಇದೆ. ಒಟ್ಟು 20 ಆರೋಪಿಗಳ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಈವರೆಗೆ 14 ಮಂದಿ ಬಂಧನವಾಗಿದ್ದು, 6 ಮಂದಿಯ ವಾಂಟೆಡ್ ಲಿಸ್ಟ್‌ ಇದೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ- ಮತ್ತಿಬ್ಬರ ಪತ್ತೆಗೆ 10 ಲಕ್ಷ ಬಹುಮಾನ ಘೋಷಣೆ

    ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಮತ್ತಿಬ್ಬರು ಅರೋಪಿಗಳ ಪತ್ತೆಗೆ ಈಗಾಗಲೇ ಬಹುಮಾನ ಘೋಷಣೆ ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಕೊಡಾಜೆಯ ಕೊಡಾಜೆ ಅದ್ದ ಎಂಬವರ ಮಗ ಮೊಹಮ್ಮದ್ ಷರೀಫ್(53)- 5 ಲಕ್ಷ ಹಾಗೂ ನೆಕ್ಕಿಲಾಡಿಯ ಅಗ್ನಾಡಿ ಹೌಸ್ ನ ಅಬೂಬಕರ್ ಮಗ ಮಸೂದ್ ಕೆ.ಎ (40)-5 ಲಕ್ಷ ಒಟ್ಟು 10 ಲಕ್ಷ ಬಹುಮಾನವನ್ನು ಎನ್‍ಐಎ ಘೋಷಿಸಿದೆ.

    ಹತ್ಯೆ ಪ್ರಕರಣ: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ (Sullia) ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಹೆಸರಿನ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು (31), ಜುಲೈ 26ರ ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ಹಂತಕರಿಂದ ಹತ್ಯೆಗೀಡಾದ ಜಲೀಲ್ ಕುಟುಂಬಕ್ಕೆ 1 ಲಕ್ಷ ರೂ. ಚೆಕ್ ವಿತರಿಸಿದ ಪ್ರಿಯಾಂಕ್ ಖರ್ಗೆ

    ತಕ್ಷಣವೇ ಪುತ್ತೂರು ಆಸ್ಪತ್ರೆಗೆ ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದಿದ್ದ ಕಾರಣ ಪ್ರವೀಣ್ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೂ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್‌ಶೀಟ್‌ ಸಲ್ಲಿಕೆ

    ಉಗ್ರರ ಜೊತೆ ಸಂಪರ್ಕ, ಭಾರತದಲ್ಲಿ ಶಾಂತಿ ಕದಡಲು ಸಂಚು- ಬೆಂಗಳೂರಿನ ಇಬ್ಬರ ವಿರುದ್ಧ NIA ಚಾರ್ಜ್‌ಶೀಟ್‌ ಸಲ್ಲಿಕೆ

    ಬೆಂಗಳೂರು: ತಿಲಕ್‌ ನಗರದಲ್ಲಿ ಇಬ್ಬರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(NIA) ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ.

    ಅಖ್ತರ್ ಹುಸೇನ್, ಅಬ್ದುಲ್ ಅಲಿಮ್ ಮಂಡಲ್ ವಿರುದ್ದ ಎನ್‍ಐಎ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದೆ. ತಿಲಕ್ ನಗರದಲ್ಲಿ ಡೆಲಿವರಿ ಬಾಯ್ ಆಗಿದ್ದುಕೊಂಡು ಭಯೋತ್ಪಾದನೆ ಸಂಘಟನೆ ಜತೆ ಸಂರ್ಪಕದಲ್ಲಿದ್ದ  ಇವರು  ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಚಟುವಟಿಕೆಗೆ ಸ್ಥಳೀಯ ಯುವಕರನ್ನು ಪ್ರೇರೇಪಣೆ ಮಾಡುತ್ತಿದ್ದರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

    ಆರೋಪಿಗಳು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಅಲ್-ಖೈದಾದೊಂದಿಗೆ ಸಂಬಂಧ ಹೊಂದಿದ್ದರು. ಭಾರತದಲ್ಲಿ ಕೋಮುಗಲಭೆಯನ್ನು ಪ್ರಚೋದಿಸಲು ಆರೋಪಿಗಳು ಯುವಕರನ್ನು ಮತ್ತಷ್ಟು ಪ್ರಚೋದಿಸಿದ್ದರು. ಆರೋಪಿಗಳು ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಕಮ್ಯುನಿಕೇಷನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಎನ್‌ಐಎ ಹೇಳಿದೆ. ಇದನ್ನೂ ಓದಿ: BREAKING:ರಮ್ಯಾ ನಿರ್ಮಾಣದ `ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಕಾನೂನು ಸಂಕಷ್ಟ

    ದಾಳಿ ವೇಳೆ ಜಿಹಾದಿ ದಾಖಲೆ ಪತ್ರಗಳು, ಎಲೆಕ್ಟ್ರಾನಿಕ್ ಡಿವೈಸ್‍ಗಳು ಪತ್ತೆಯಾಗಿದ್ದು ಆಲ್ ಖೈದಾ ಸಂಘಟನೆಗೆ ಸೇರಲು ಉಗ್ರರಿಗೆ ಟ್ರೈನಿಂಗ್ ನೀಡಿ ಭಾರತದಲ್ಲಿ ಶಾಂತಿ ಕದಡಲು ಇವರು ಸಂಚು ರೂಪಿಸಿದ್ದರು ಎಂದು ಉಲ್ಲೇಖಿಸಿದೆ.

    ಡೆಲಿವರಿ ಬಾಯ್‍ಗಳಂತೆ ತಿಲಕ್‍ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರ ಬಗ್ಗೆ ಗುಪ್ತಚರ ಇಲಾಖೆ ನೀಡಿದ್ದ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿತ್ತು. ಕಳೆದ ವರ್ಷ ಜುಲೈ 24 ರಂದು ಬೆಂಗಳೂರಿನ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ನಂತರ ನಂತರ ಆಗಸ್ಟ್‌ 30 ರಂದು ಈ ಪ್ರಕರಣ ಎನ್‌ಐಎಗೆ ವರ್ಗಾವಣೆಯಾಗಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 2ನೇ ಮದುವೆಯಾದ ದಾವೂದ್ ಇಬ್ರಾಹಿಂ

    2ನೇ ಮದುವೆಯಾದ ದಾವೂದ್ ಇಬ್ರಾಹಿಂ

    ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ಕರಾಚಿಯಲ್ಲಿ ತಲೆಮರೆಸಿಕೊಂಡಿರುವ ಮುಂಬೈ ಸರಣಿ ಸ್ಫೋಟದ ರೂವಾರಿ, ಭೂಗತ ಪಾತಕಿ 67 ವರ್ಷದ ದಾವೂದ್ ಇಬ್ರಾಹಿಂ (Dawood Ibrahim) ಇನ್ನೊಂದು ಮದ್ವೆ ಮಾಡ್ಕೊಂಡಿದ್ದಾರೆ.

    ಈ ಬಗ್ಗೆ ಹಸೀನಾ ಪಾರ್ಕರ್ ಪುತ್ರ ಮತ್ತು ದಾವೂದ್ ಇಬ್ರಾಹಿಂ ಅವರ ಸೋದರಳಿಯ ಅಲಿಶಾ ಪಾರ್ಕರ್ ರಾಷ್ಟ್ರೀಯ ತನಿಖೆ ಸಂಸ್ಥೆ (NIA) ಮುಂದೆ ಈ ಬಗ್ಗೆ ಮಾಹಿತಿ ನೀಡಿದ್ದಾನೆ. ಮೊದಲ ಪತ್ನಿ ಮೈಜಾಬಿನ್ ಜೊತೆ ಪಾಕಿಸ್ತಾನಿ ಪಠಾಣ್ ಮಹಿಳೆಯನ್ನು ಮರುಮದುವೆ ಮಾಡಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ದಾವೂದ್ ಇಬ್ರಾಹಿಂನ ಮೊದಲ ಪತ್ನಿ ಮೈಜಾಬಿನ್, ವಾಟ್ಸಾಪ್ ಕರೆಗಳ ಮುಖಾಂತರ ಜನರೊಂದಿಗೆ ಸಂಪರ್ಕದಲ್ಲಿದ್ದಾಳೆ ಎಂದು ಮಾಹಿತಿ ನೀಡಿದರು.

    ದಾವೂದ್ ಇಬ್ರಾಹಿಂ 2ನೇ ಮದುವೆ ಆಗಲು ತನ್ನ ಮೊದಲ ಪತ್ನಿ ಮೈಜಾಬಿನ್‍ಗೆ ವಿಚ್ಛೇದನ ನೀಡಿದ್ದ ಎಂಬ ಸುದ್ದಿ ಹರಡಿತ್ತು. ಆದರೆ ಈ ಸುದ್ದಿ ನಿಜವಲ್ಲ. ಇದಲ್ಲದೇ ದಾವೂದ್ ಇಬ್ರಾಹಿಂ ತನ್ನ ವಿಳಾಸವನ್ನು ಬದಲಿಸಿದ್ದು, ಪ್ರಸ್ತುತ ಕರಾಚಿಯಲ್ಲಿರುವ ಅಬ್ದುಲ್ಲಾಗಾಜಿ ಬಾಬಾ ದರ್ಗಾದ ಹಿಂದೆ ರಹೀಮ್ ಫಕಿ ಬಳಿ ವಾಸಿಸುತ್ತಾನೆ ಎಂದು ತಿಳಿಸಿದ್ದಾನೆ.

    ದಾವೂದ್ ಪತ್ನಿ ಮೈಜಾಬಿನ್ ಹಬ್ಬ ಹರಿದಿನಗಳಲ್ಲೂ ನನ್ನ ಪತ್ನಿಗೆ ಕರೆ ಮಾಡುತ್ತಾಳೆ. ವಾಟ್ಸಾಪ್ ಕರೆಗಳ ಮೂಲಕ ನನ್ನ ಪತ್ನಿಯೊಂದಿಗೆ ಮಾತನಾಡುತ್ತಾಳೆ. ದಾವೂದ್ ಇಬ್ರಾಹಿಂನ ಪತ್ನಿ ಮೈಜಾಬಿನ್ ಅವರನ್ನು ಕೆಲವು ತಿಂಗಳ ಹಿಂದೆ ಜುಲೈ 2022ರಲ್ಲಿ ದುಬೈನಲ್ಲಿ ಭೇಟಿಯಾಗಿದ್ದೆ. ಈ ವೇಳೆ ದುಬೈನಲ್ಲಿರುವ ಜೈತೂನ್ ಹಮೀದ್ ಅಂತುಲೆ ಎಂಬುವವರ ಮನೆಯಲ್ಲಿ ತಂಗಿರುವುದಾಗಿ ಆತ ಹೇಳಿಕೊಂಡಿದ್ದಾನೆ.

    ಭೂಗತ ಪಾತಕಿ ದಾವುದ್ ಇಬ್ರಾಹಿಂ ಪಾಕ್ ಭದ್ರತಾ ಪಡೆಗಳ ನೆರಳಿನಲ್ಲಿ ಹಾಯಾಗಿ ಆಶ್ರಯ ಪಡೆದಿದ್ದಾನೆ ಎನ್ನಲಾಗಿದೆ. ಅತ್ತ ಪಾಕಿಸ್ತಾನ ಉಗ್ರ ಸಂಘಟನೆ ಲಷ್ಕರ್-ಇ-ತೊಯ್ಬಾದ ಉಪ ಮುಖ್ಯಸ್ಥ ಅಬ್ದುಲ್ ಮಕ್ಕಿಯನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಘೋಷಿಸಿದೆ. ಜಮ್ಮುಕಾಶ್ಮೀರದಲ್ಲಿ ನಡೆಯೋ ಭಯೋತ್ಪಾದಕ ದಾಳಿಗಳ ಹಿಂದೆ ಅಬ್ದುಲ್ ಮಕ್ಕಿಯ ಪ್ಲಾನ್ ಇದೆ. ಅಲ್ಲದೇ ಈ ದಾಳಿಗಳಿಗೆ ಅಗತ್ಯವಿರುವ ನಿಧಿ ಸಂಗ್ರಹದಲ್ಲಿಯೂ ಮಕ್ಕಿ ಕೈವಾಡವಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆಗಳ ಶೋಧ – ಕಿಮ್ಮನೆ ಬಳಿಯೂ ಮಾಹಿತಿ ಸಂಗ್ರಹ

    ತೀರ್ಥಹಳ್ಳಿಯಲ್ಲಿ ಶಂಕಿತ ಉಗ್ರರ ಮನೆಗಳ ಶೋಧ – ಕಿಮ್ಮನೆ ಬಳಿಯೂ ಮಾಹಿತಿ ಸಂಗ್ರಹ

    ಶಿವಮೊಗ್ಗ: ಮಂಗಳೂರು ಸ್ಫೋಟ (Mangaluru Blast) ಪ್ರಕರಣ ಸಂಬಂಧ ರಾಜ್ಯದಲ್ಲಿ ಎನ್‍ಐಎ (NIA) ದಾಳಿ ಮುಂದುವರೆದಿದೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ (Thirthahalli) ಇಂದು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ ಎನ್‍ಐಎ ಅಧಿಕಾರಿಗಳು, ಮೂವರು ಶಂಕಿತ ಉಗ್ರರ ಮನೆ ಮತ್ತು ಅವರಿಗೆ ಸಂಬಂಧಿಸಿದ ಸ್ಥಳಗಳನ್ನು ಜಾಲಾಡಿದ್ದಾರೆ.

    ಮಾಜ್, ಮತಿನ್ ಮತ್ತು ಶಾರೀಕ್ ಮನೆ ಸೇರಿ ಅಕ್ಕಪಕ್ಕದ ಮನೆಗಳಿಗೂ ತೆರಳಿದ ಎನ್‍ಐಎ ಅಧಿಕಾರಿಗಳು, ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿಸಿ, ಫೋಟೋ, ವಿಡಿಯೋ ಮಾಡುವುದನ್ನು ನಿರ್ಬಂಧಿಸಿ, ಶಂಕಿತ ಉಗ್ರರ ಹಣಕಾಸು ಮೂಲ, ಹಿನ್ನೆಲೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಇದನ್ನೂ ಓದಿ: ಬಿಜೆಪಿಯ ಹಿಂದುತ್ವ, ಧರ್ಮ, ದೇವರುಗಳನ್ನ ನಂಬಬೇಡಿ – ಜನತೆಗೆ ಸಿದ್ದರಾಮಯ್ಯ ಮನವಿ

    ಇದೇ ವೇಳೆ, ಮಾಜಿ ಮಂತ್ರಿ ಕಿಮ್ಮನೆ ರತ್ನಾಕರ್ (Kimmane Ratnakar) ಕಚೇರಿ ಇರುವ ಕಟ್ಟಡದ ಮೇಲೆಯೂ ಎನ್‍ಐಎ ದಾಳಿ ಮಾಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಿಮ್ಮನೆ ರತ್ನಾಕರ್, ಕಚೇರಿ ಕಟ್ಟಡ ಬಾಡಿಗೆ ಪಡೆದಿರುವ ಬಗ್ಗೆ ಎನ್‍ಐಎ ಅಧಿಕಾರಿಗಳು ಮಾಹಿತಿ ಕೇಳಿದ್ದರು. ಈ ಕಟ್ಟಡ ಹಾಸಿಂ ಎನ್ನುವವರಿಗೆ ಸೇರಿದ್ದು ಈ ಬಗ್ಗೆ ವಿವರ ನೀಡಿದ್ದೇನೆ. ಆದರೆ ಬಿಜೆಪಿಯವರು ನನ್ನ ಮನೆ ಮೇಲೆ ಎನ್‍ಐಎ ದಾಳಿ ನಡೆದಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ಕೇಸ್‌ – ಐಸಿಸ್‌ ಸಂಪರ್ಕಿತರಿಂದ ಹಣ, ಇಬ್ಬರು ಅರೆಸ್ಟ್‌

    ತುಂಗಾ ತೀರದಲ್ಲಿ ಟ್ರಯಲ್‌ ಬ್ಲಾಸ್ಟ್‌ ಕೇಸ್‌ – ಐಸಿಸ್‌ ಸಂಪರ್ಕಿತರಿಂದ ಹಣ, ಇಬ್ಬರು ಅರೆಸ್ಟ್‌

    ಬೆಂಗಳೂರು: ಶಿವಮೊಗ್ಗದ ತುಂಗಾ ತೀರದಲ್ಲಿ ನಡೆದಿದ್ದ ಬಾಂಬ್ ಟ್ರಯಲ್ ಬ್ಲ್ಯಾಸ್ಟ್‌ ಪ್ರಕರಣಕ್ಕೆ (Shivamogga Trial Blast Case) ರೋಚಕ ಟ್ವಿಸ್ಟ್ ಸಿಕ್ಕಿದೆ. ಮತ್ತಿಬ್ಬರು ಶಂಕಿತ ಉಗ್ರರನ್ನು ರಾಷ್ಟ್ರೀತ ತಿನಿಖಾ ದಳ(NIA) ಬಂಧಿಸಿದೆ.

    ಟ್ರಯಲ್ ಬ್ಲಾಸ್ಟ್ ಸಂಬಂಧ ರಾಜ್ಯದ ಶಿವಮೊಗ್ಗ, ದಾವಣಗೆರೆ, ದಕ್ಷಿಣ ಕನ್ನಡ ಮತ್ತು ಬೆಂಗಳೂರು ಸೇರಿದಂತೆ 6 ಕಡೆ ಎನ್ಐಎ ದಾಳಿ ನಡೆಸಿದೆ. ದಾಳಿ ವೇಳೆ ಇಬ್ಬರು ಐಸಿಸ್ ಸಕ್ರಿಯ ಸದಸ್ಯರಾದ ಉಡುಪಿ ಬ್ರಹ್ಮಾವರದ ವರಂಬಳ್ಳಿ ರೇಶಾನ್ ತಾಜೂದ್ದೀನ್ ಶೇಕ್ ಮತ್ತು ಶಿವಮೊಗ್ಗದ ಟಿಪ್ಪು ಸುಲ್ತಾನ್ ನಗರದ ಹುಝೇರ್ ಪಾರ್ಹನ್ ಬೇಗ್‌ನನ್ನು ಬಂಧನ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ

    ಪ್ರಕರಣದ ಎ2 ಆರೋಪಿಯಾಗಿದ್ದ ಮಾಜ್ ವಿಚಾರಣೆ ವೇಳೆ ಇಬ್ಬರ ಹೆಸರು ಬೆಳಕಿಗೆ ಬಂದಿತ್ತು. ಆರೋಪಿ ಮಾಜ್ ಗೆ ರೇಶಾನ್ ತಾಜೂದ್ದೀನ್ ಸಹಪಾಠಿಯಾಗಿದ್ದ. ಇಬ್ಬರು ಆರೋಪಿಗಳು ಐಸಿಸ್ ಸಂಪರ್ಕಿತರಿಂದ ಕ್ರಿಪ್ಟೋ ವ್ಯಾಲೆಟ್‌ ಹಣ ಪಡೆದು ದೊಡ್ಡ ಮಟ್ಟದ ದುಷ್ಕೃತ್ಯ ಮತ್ತು ಚಟುವಟಿಕೆ ನಡೆಸುವವರಿಗೆ ಹಣ ಒದಗಿಸಿದ ಆರೋಪ ಕೇಳಿ ಬಂದಿದೆ.

    ದಾಳಿ ವೇಳೆ ಡಿಜಿಟಲ್ ಸಾಧನ ಮತ್ತು ಹಲವು ದಾಖಲೆಗಳು ಸಿಕ್ಕಿದ್ದು, ದೊಡ್ಡ ದೊಡ್ಡ ಲಿಕ್ಕರ್ ಶಾಪ್, ಗೋಡಾನ್ ಹಾಗೂ ಟ್ರಾನ್ಸ್ ಫರ್ಮರ್‌ಗಳಿಗೆ ಬೆಂಕಿ ಹಚ್ಚಲು ಟಾರ್ಗೆಟ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.

    ದೇಶದ ಏಕತೆ, ಸಾರ್ವಭೌಮತೆ ಮತ್ತು ಭದ್ರತೆಗೆ ದಕ್ಕೆ ಉಂಟು ಮಾಡಲು ಸಂಚು ರೂಪಿಸಿದ ಆರೋಪಿಗಳನ್ನ ಸದ್ಯ ಎನ್‌ಐಎ ಬಂಧಿಸಿ ವಿಚಾರಣೆ ನಡೆಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕುಕ್ಕರ್ ಸ್ಫೋಟ ಕೇಸ್ – ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ, ಓರ್ವ ವಶ

    ಕುಕ್ಕರ್ ಸ್ಫೋಟ ಕೇಸ್ – ಮಂಗಳೂರಿನ ಎಂಜಿನಿಯರಿಂಗ್ ಕಾಲೇಜ್ ಮೇಲೆ NIA ದಾಳಿ, ಓರ್ವ ವಶ

    ಮಂಗಳೂರು: ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣದ ತನಿಖೆ ಚುರಕುಕೊಂಡಿದ್ದು, ಎನ್‍ಎಐ (NIA) ಅಧಿಕಾರಿಗಳು ಗುರುವಾರ ಮಂಗಳೂರು (Mangaluru) ಹೊರವಲಯದ ಕೊಣಾಜೆ ಬಳಿಯಿರುವ ಪಿ.ಎ. ಎಂಜಿನಿಯರಿಂಗ್ ಕಾಲೇಜಿನ (PA Engineering College) ಮೇಲೆ ದಾಳಿ ನಡೆಸಿದ್ದಾರೆ.

    ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವ ಶಂಕಿತ ಉಗ್ರ ಶಾರೀಕ್‍ನನ್ನು (Shariq) ವಿಚಾರಣೆಗೆ ಒಳಪಡಿಸಿದ್ದ ವೇಳೆ ಸಾಕಷ್ಟು ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪಿಎ ಎಂಜಿನಿಯರಿಂಗ್ ಕಾಲೇಜ್ ಮೇಲೆ 7 ಮಂದಿ ಎನ್‍ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

    ದಾಳಿಯ ಬಳಿಕ ಅಂತಿಮ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯನ್ನು ಎನ್‍ಐಎ ವಶಕ್ಕೆ ಪಡೆದುಕೊಂಡಿದೆ. ಈ ವೇಳೆ ವಶಕ್ಕೆ ಪಡೆದ ವಿದ್ಯಾರ್ಥಿಯನ್ನು ಉಡುಪಿ ಮೂಲದ ರಿಹಾನ್ ಶೇಖ್ ಎಂದು ಗುರುತಿಸಲಾಗಿದೆ.

    ದಾಳಿ ಯಾಕೆ?: ಈ ಕಾಲೇಜಿನಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನ ಆರೋಪಿ ಮಾಝ್ ಮುನೀರ್ ಶಿಕ್ಷಣ ಪಡೆದಿದ್ದು, ಈ ವೇಳೆ ಕಾಲೇಜಿನಲ್ಲಿ ಉಗ್ರ ಚಟುವಟಿಕೆಯ ಪ್ಲಾನ್ ನಡೆಸಿರುವ ಮಾಹಿತಿ ದೊರೆತಿದೆ. ಶಂಕಿತ ಉಗ್ರ ಮಾಝ್ ಮುನೀರ್ ಮಂಗಳೂರು ನಗರದ ಬಲ್ಮಠದಲ್ಲಿ ವಾಸವಾಗಿದ್ದುಕೊಂಡು ಪಿ.ಎ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮಾಡುತ್ತಿದ್ದ. ಇದನ್ನೂ ಓದಿ: ನನ್ನನ್ನ `ಟಗರು’ ಅಂತಾರೆ, ನಾನು ಯಾರಿಗೆ ಗುಮ್ಮಿದ್ದೇನೆ – ಸಿದ್ದು ಪ್ರಶ್ನೆ

    ಮಾಝ್ ಜೊತೆ ಉಗ್ರ ಚಟುವಟಿಕೆಯಲ್ಲಿ ರಿಹಾನ್ ಶೇಖ್ ಕೂಡ ಭಾಗಿಯಾಗಿದ್ದರ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟಕ್ಕೂ ನಂಟು ಸಾಧ್ಯತೆಯಿದ್ದು, ಸದ್ಯ ಶಿವಮೊಗ್ಗ ಕೇಸ್ ಸಂಬಂಧಿಸಿದಂತೆ ಪಿ.ಎ ಕಾಲೇಜಿನಲ್ಲಿ ತನಿಖೆ ನಡೆಯುತ್ತಿದೆ. ಇದನ್ನೂ ಓದಿ: ಜೋಶಿಮಠದಲ್ಲಿ ಬಿರುಕು ಬಿಟ್ಟ 500ಕ್ಕೂ ಹೆಚ್ಚು ಮನೆಗಳು – ನಗರ ಮುಳುಗುವ ಆತಂಕದಲ್ಲಿ ಜನರು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k