[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]
Tag: NIA
-

ಪ್ರವೀಣ್ ನೆಟ್ಟಾರು ಕೇಸ್ – ದಕ್ಷಿಣ ಕನ್ನಡ, ಕೊಡಗಿನಲ್ಲಿ PFI ಕಾರ್ಯಕರ್ತರ ಮನೆ ಮೇಲೆ NIA ದಾಳಿ
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]
ಮಂಗಳೂರು/ ಮಡಿಕೇರಿ: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (Praveen Nettar) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯಲ್ಲಿರುವ ನಿಷೇಧಿತ ಪಿಎಫ್ಐ (PFI) ಸಂಘಟನೆ ಕಾರ್ಯಕರ್ತರ ಮನೆಗಳ ಮೇಲೆ ರಾಷ್ಟ್ರೀಯ ತನಿಖಾ ದಳ (NIA) ಇಂದು ದಾಳಿ ನಡೆಸಿದೆ.
ಇಂದು ಬೆಳಗ್ಗೆ ಏಕಕಾಲಕ್ಕೆ 6 ಕಡೆಗಳಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು, ಎಲೆಕ್ಟ್ರಾನಿಕ್ ಡಿವೈಸ್ಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕನ್ವೆಂಟ್ ಬಾಣೆ ಹಾಗೂ ಕಲ್ಕಂದೂರು ಗ್ರಾಮಕ್ಕೆ ಆಗಮಿಸಿ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ. ಬಾಣೆಯ ಅಬ್ದುಲ್ ನಾಸೀರ್ ಕಲ್ಕಂದೂರು ನಿವಾಸಿ ಅಬ್ದುಲ್ ರೆಹಮಾನ್ ಮನೆಗೆ ಅಧಿಕಾರಿಗಳು ಆಗಮಿಸಿದ್ದಾರೆ. ಈ ವೇಳೆ ಅಬ್ದುಲ್ ನಜೀರ್, ಅಬ್ದುಲ್ ರೆಹಮಾನ್ ಇಬ್ಬರು ದುಬೈನಲ್ಲಿರುವ ಬಗ್ಗೆ ಎನ್‌ಐಎ ಅಧಿಕಾರಿಗಳಿಗೆ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: Expressway- ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ರೆ ಡಿಎಲ್ ರದ್ದು: ಅಲೋಕ್ ಕುಮಾರ್
ಮುಸ್ತಫಾ ಪೈಚಾರ್, ಅಬುಬಕ್ಕರ್ ಸಿದ್ದಿಕ್, ಉಮ್ಮರ್ ಫಾರುಕ್, ತುಫೇಲ್, ಮಸೂದ್ ಅಗ್ನಾಡಿ ಸೇರಿದಂತೆ ಇನ್ನಿತರ ಪ್ರಮುಖ ಆರೋಪಿಗಳಿಗಾಗಿ ಎನ್‌ಐಎ ತಲಾಶ್ ಮಾಡುತ್ತಿದೆ.
ಏನಿದು ಪ್ರಕರಣ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣವನ್ನು ಅಂದಿನ ಬಿಜೆಪಿ ಸರ್ಕಾರ ಎನ್ಐಎಗೆ ವಹಿಸಿತ್ತು.
-

ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಖಲಿಸ್ತಾನಿ ಉಗ್ರ ಗುಂಡಿನ ದಾಳಿಗೆ ಬಲಿ
ಒಟ್ಟಾವಾ: ಕೆನಡಾದ ಸರ್ರೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಾರತಕ್ಕೆ ಮೋಸ್ಟ್ ವಾಂಟೆಡ್ ಆಗಿದ್ದ ಖಲಿಸ್ತಾನಿ ಉಗ್ರ (Khalistani Terrorist) ಹರ್ದೀಪ್ ಸಿಂಗ್ ನಿಜ್ಜರ್ (Hardeep Singh Nijjar) ಬಲಿಯಾಗಿದ್ದಾನೆ.
ಇತ್ತೀಚೆಗೆ ಭಾರತ ಸರ್ಕಾರ (Government Of India) ಬಿಡುಗಡೆ ಮಾಡಿದ 40 ಉಗ್ರರ ಪಟ್ಟಿಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಪ್ರಮುಖ ಉಗ್ರನಾಗಿದ್ದ.
2022 ರಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಪಂಜಾಬ್‌ನ ಜಲಂಧರ್‌ನಲ್ಲಿ ಹಿಂದೂ ಅರ್ಚಕನನ್ನು ಕೊಲ್ಲಲು ಸಂಚು ರೂಪಿಸಿದ ಆರೋಪದ ಮೇಲೆ ಬಂಧಿಸಲು ಸಕಲ ಪ್ರಯತ್ನ ನಡೆದಿತ್ತು. ಆದ್ರೆ ಆರೋಪಿ ಎಸ್ಕೇಪ್ ಆಗಿದ್ದರಿಂದ ನಿಜ್ಜರ್ ಬಗ್ಗೆ ಸುಳಿವು ಕೊಟ್ಟವರಿಗೆ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿತ್ತು. ಇದನ್ನೂ ಓದಿ: ಭಯಾನಕ ಅಣ್ವಸ್ತ್ರ ಹೊರತೆಗೆದ ರಷ್ಯಾ – ಕೀವ್‌ನಿಂದ 200 ಕಿಮೀ ದೂರದಲ್ಲಿರೋ ಬೆಲಾರಸ್‌ಗೆ ರವಾನೆ!

ಈ ಹಿಂದೆ ಭಾರತದ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನ ಎಸಗಿದ್ದ ಪ್ರಕರಣದಲಿ ನಿಜ್ಜರ್ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಕೂಡ ಸಲ್ಲಿಸಿತ್ತು. ಭಾರತದಿಂದ ಪರಾರಿಯಾಗಿದ್ದ ನಿಜ್ಜರ್ ಕೆನಡಾದಲ್ಲಿ ನೆಲೆಸಿದ್ದ, ಖಲಿಸ್ತಾನಿ ಟೈಗರ್ ಫೋರ್ಸ್ (ಕೆಟಿಎಫ್) ಮುಖ್ಯಸ್ಥನೂ ಆಗಿದ್ದ ಅನ್ನೋದು ತಿಳಿದುಬಂದಿದೆ. ಇದನ್ನೂ ಓದಿ: ಬ್ರಿಟನ್‌ನಲ್ಲಿ ತ್ರಿವರ್ಣ ಧ್ವಜ ತೆಗೆದಿದ್ದ ಖಲಿಸ್ತಾನಿ ಉಗ್ರ ಅವತಾರ್ ಸಿಂಗ್ ನಿಗೂಢ ಸಾವು
ಇತ್ತೀಚೆಗಷ್ಟೇ ಖಲಿಸ್ತಾನಿ ಉಗ್ರ ಅಮೃತಪಾಲ್ ಸಿಂಗ್ ಆಪ್ತ, ಬ್ರಿಟನ್ ಮೂಲದ ಖಲಿಸ್ತಾನ್ ಲಿಬರೇಷನ್ ಫೋರ್ಸ್ (KLF) ಮುಖ್ಯಸ್ಥ ಅವತಾರ್ ಸಿಂಗ್ ಖಂಡಾ ನಿಗೂಢವಾಗಿ ಸಾವನ್ನಪ್ಪಿದ್ದ. ಈತನನ್ನ ವಿಷ ಉಣಿಸಿ ಸಾಯಿಸಲಾಗಿದೆ ಎಂದು ಶಂಕೆ ವ್ಯಕ್ತವಾದರೂ ವೈದ್ಯಕೀಯ ದಾಖಲೆಗಳು ರಕ್ತ ಕ್ಯಾನ್ಸರ್ ಎಂದು ಹೇಳಿದ್ದವು.

ಯಾರು ಅವತಾರ್ ಸಿಂಗ್?
2007ರಲ್ಲಿ ಶಿಕ್ಷಣ ವೀಸಾದಡಿ ಬ್ರಿಟನ್‌ಗೆ ತೆರಳಿದ್ದ ಅವತಾರ್ ಸಿಂಗ್ 2012ರಿಂದ ಅಲ್ಲಿಯೇ ನೆಲೆಸಿದ್ದ. ಬಾಂಬ್ ತಜ್ಞನಾಗಿದ್ದ ಖಂಡಾ, ಲಂಡನ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿಯ ಮೇಲೆ ಆಕ್ರಮಣ ಮಾಡಿಸಿದವರ ಪೈಕಿ ಈತ ಪ್ರಮುಖ ಆರೋಪಿಯಾಗಿದ್ದ. ದೂತವಾಸ ಕಚೇರಿ ಮೇಲಿದ್ದ ತ್ರಿವರ್ಣ ಧ್ವಜ ತೆಗೆದು ಖಲಿಸ್ತಾನ್ ಧ್ವಜ ಹಾರಿಸಿದ್ದ.ಪಂಜಾಬ್ ಪೊಲೀಸರು ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ಖಲಿಸ್ತಾನಿ ಮುಖಂಡ ಅಮೃತಪಾಲ್ ಸಿಂಗ್ ಬಂಧನಕ್ಕೆ ತೀವ್ರ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಆತ ತಲೆಮರೆಸಿಕೊಳ್ಳಲು ಅವತಾರ್ ಖಾಂಡಾ ನೆರವಾಗಿದ್ದ. ಅಮೃತಪಾಲ್‌ನನ್ನು ಪೊಲೀಸರು ಬೆನ್ನಟ್ಟಿದಾಗ ಆತ ಲಂಡನ್‌ನಲ್ಲಿದ್ದ ಅವತಾರ್ ಜತೆ ಸಂಪರ್ಕದಲ್ಲಿದ್ದ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿತ್ತು.
-

ಯುವಕರ ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತಿದ್ದ ಪಿಎಫ್‍ಐ ಮುಖಂಡ ಬಳ್ಳಾರಿಯಲ್ಲಿ ಅರೆಸ್ಟ್
ಬಳ್ಳಾರಿ: ಯುವಕರನ್ನು ಮೈಂಡ್‍ವಾಶ್ ಮಾಡಿ ಭಯೋತ್ಪಾದನೆಗೆ ನೂಕುತ್ತಿದ್ದ ಪಿಎಫ್‍ಐ (PFI) ಮುಖಂಡನನ್ನು ಎನ್‍ಐಎ (NIA) ಬಳ್ಳಾರಿಯ (Ballari) ಕೌಲ್ ಬಜಾರ್‌ನಲ್ಲಿ ಬುಧವಾರ ಬಂಧಿಸಿದೆ.
ಬಂಧಿತ ಆರೋಪಿಯನ್ನು ಆಂಧ್ರ ಮೂಲದ ನಾಸ್ಸಮ್ ಮೊಹಮ್ಮದ್ ಯೂನಸ್ (33) ಎಂದು ತಿಳಿದು ಬಂದಿದೆ. ಈತ 4 ತಿಂಗಳಿಂದ ಪ್ಲಂಬರ್ ಆಗಿ ಕೆಲಸ ಮಾಡಿಕೊಂಡು ಬಳ್ಳಾರಿಯಲ್ಲಿ ತಲೆ ಮರೆಸಿಕೊಂಡಿದ್ದ. ನಿಜಾಮಾಬಾದ್ ಭಯೋತ್ಪಾದಕ ದಾಳಿ ಸಂಚು ಪ್ರಕರಣದಲ್ಲಿ ಆರೋಪಿ ಶಾಮೀಲಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅಭಿಪ್ರಾಯ ತಿಳಿಸಿ: ಸಾರ್ವಜನಿಕರಿಗೆ ಕೇಂದ್ರ ಕಾನೂನು ಆಯೋಗ ಮನವಿ
ಈತ ನಿಷೇಧಿತ ಸಂಘಟನೆ ಪಿಎಫ್‍ಐಯ ಪ್ರಮುಖ ಶಸ್ತ್ರಾಸ್ತ್ರ ತರಬೇತುದಾರನಾಗಿದ್ದ. ಆಂಧ್ರಪ್ರದೇಶದ ನಂದ್ಯಾಲ್‍ನವನಾದ ಯೂನುಸ್ ಸಹೋದರನ ಜೊತೆ ಇನ್‍ವರ್ಟರ್ ವ್ಯಾಪಾರದಲ್ಲಿ ತೊಡಗಿಕೊಂಡಿದ್ದನು. ಆದರೆ 2022ರ ಸೆಪ್ಟೆಂಬರ್‍ನಲ್ಲಿ ತನಿಖಾ ಸಂಸ್ಥೆ ಈತನ ಮನೆಯನ್ನು ಶೋಧಿಸಿದ ಬಳಿಕ ತಲೆಮರೆಸಿಕೊಂಡಿದ್ದ. ಬಳಿಕ ಈತ ಗುರುತನ್ನು ಮರೆಸಿಕೊಂಡು ಬಶೀರ್ ಎಂಬ ಹೆಸರಿನಲ್ಲಿ ಬಳ್ಳಾರಿಯ ಕೌಲ್ ಬಜಾರ್‌ನಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳ ಜೊತೆ ವಾಸಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತೆಲಂಗಾಣದಲ್ಲಿ ಪಿಎಫ್‍ಐ ಮುಖಂಡರು ಮತ್ತು ಕಾರ್ಯಕರ್ತ ಯುವಕರನ್ನು ಸಂಘಟನೆಗೆ ಸೇರಿಸಿಕೊಂಡು ಭಯೋತ್ಪಾದನಾ ಕೃತ್ಯಗಳನ್ನೆಸಗಲು ತರಬೇತಿ ನೀಡುತ್ತಿದ್ದ. ಅಲ್ಲದೇ ಆಂಧ್ರಪ್ರದೇಶ ಮತ್ತು ತೆಲಂಗಾಣ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ಯೋಜನೆ ರೂಪಿಸಿದ್ದ. ಈತ ಎರಡು ರಾಜ್ಯಗಳಿಗೆ ಪಿಎಫ್‍ಐಯ ದೈಹಿಕ ತರಬೇತಿಯ ರಾಜ್ಯ ಸಂಯೋಜಕನಾಗಿದ್ದ ಎಂದು ಎನ್‍ಐಎ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೆಚ್.ಡಿ.ದೇವೇಗೌಡರ ಭೇಟಿಯಾದ ತೇಜಸ್ವಿ ಸೂರ್ಯ
-

ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್
ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಯ ನಿಷೇಧಕ್ಕೆ ಸೇಡು ತೀರಿಸಿಕೊಳ್ಳಲು ಮತ್ತಷ್ಟು ಟೀಂಗಳು ತಯಾರಾಗುತ್ತಿರುವ ವಿಚಾರ ರಾಷ್ಟ್ರೀಯ ತನಿಖಾ ದಳದ (NIA) ತನಿಖೆಯಿಂದ ಬೆಳಕಿಗೆ ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ (Social Media) ಬೇರೆ ಬೇರೆ ಗುಂಪುಗಳನ್ನು ತೆರೆದು ಪಿಎಫ್‌ಐ ಕಾರ್ಯಕರ್ತರು ಸಕ್ರೀಯವಾಗಿರುವ ವಿಚಾರ ಈಗ ಗೊತ್ತಾಗಿದೆ. ಇದನ್ನೂ ಓದಿ: ಗುರುತಿನ ಪುರಾವೆಗಳಿಲ್ಲದೇ 2,000 ರೂ. ನೋಟುಗಳ ವಿನಿಮಯ – ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ
ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರವನ್ನು ತೀರಿಸಿಕೊಳ್ಳಲು ಪ್ಲ್ಯಾನಿಂಗ್ ಮಾಡಲಾಗಿತ್ತು. ಭಾರತದ ಹಲವು ಭಾಗಗಳಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದ್ದ ವಿಚಾರ ತನಿಖೆಯ ವೇಳೆ ಪತ್ತೆಯಾಗಿದೆ.
ವಿಧ್ವಂಸಕ ಕೃತ್ಯಕ್ಕೆ ಶಿವಮೊಗ್ಗ ಮತ್ತು ದಕ್ಷಿಣ ಕನ್ನಡದಲ್ಲೇ ಪ್ರಮುಖವಾಗಿ ತಯಾರಿ ನಡೆದಿತ್ತು. ಎನ್‌ಐಎ ದಾಳಿ ವೇಳೆ ವ್ಯಕ್ತಿಗಳ ಖಾತೆಗಳಿಗೆ ವಿದೇಶದಿಂದ ಹಣ ಜಮೆ ಆಗಿದ್ದಕ್ಕೆ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ.
-

ಕರ್ನಾಟಕ ಸೇರಿದಂತೆ 3 ರಾಜ್ಯಗಳ 25 ಕಡೆ ಎನ್‌ಐ ದಾಳಿ – 17.50 ಲಕ್ಷ ಜಪ್ತಿ
ನವದೆಹಲಿ: ಭಯೋತ್ಪಾದನೆ ಮತ್ತು ಹಿಂಸಾಚಾರದ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾ ದಳ (NIA) ಬುಧವಾರ ಮೂರು ರಾಜ್ಯಗಳ 25 ಸ್ಥಳಗಳಲ್ಲಿ ದಾಳಿ ನಡೆಸಿದೆ.
ನಿಷೇಧಿತ ಮೂಲಭೂತವಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ತನ್ನ ಕಾರ್ಯಕರ್ತರು ಮತ್ತು ಸದಸ್ಯರಿಗೆ ಮೂಲಭೂತವಾದ ಮತ್ತು ತರಬೇತಿ ನೀಡಿ ಪಿತೂರಿಗೆ ಯತ್ನಿಸಿದ ಆರೋಪದ ಮೇರೆಗೆ ಈ ದಾಳಿ ನಡೆಸಲಾಗಿದೆ ಎನ್‌ಐಎ ತಿಳಿಸಿದೆ. ಇದನ್ನೂ ಓದಿ: ಜ್ಞಾನವಾಪಿ ಕೇಸ್ – ಮುಸ್ಲಿಂ ಸಮಿತಿ ಸಲ್ಲಿಸಿದ್ದ ಅರ್ಜಿ ವಜಾ, ಐವರು ಹಿಂದೂ ಮಹಿಳೆಯರಿಗೆ ಗೆಲುವು
ಬಿಹಾರದ (Bihar) ಕತಿಹಾರ್ ಜಿಲ್ಲೆ, ಕರ್ನಾಟಕದ (Karnataka) ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆ, ಕೇರಳದ (Kerala) ಕಾಸರಗೋಡು, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಈ ದಾಳಿ ನಡೆದಿದೆ.
ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್, ಸಿಮ್ ಕಾರ್ಡ್‌ಗಳು, ಪೆನ್-ಡ್ರೈವ್‌ಗಳು, ಡೇಟಾ ಕಾರ್ಡ್‌ಗಳು, ಇತ್ಯಾದಿ ಸೇರಿದಂತೆ ಹಲವಾರು ಡಿಜಿಟಲ್ ಸಾಧನಗಳು, ನಿಷೇಧಿತ ಸಂಸ್ಥೆಗೆ ಸಂಬಂಧಿಸಿದ ದಾಖಲೆಗಳು ಮತ್ತು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಒಟ್ಟು 17.50 ಲಕ್ಷ ರೂ. ಹಣವನ್ನು ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: India GDP – ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಹೊರಹೊಮ್ಮಿದ ಭಾರತ
ಮಂಗಳೂರು ವರದಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಎನ್‍ಐಎ ರೇಡ್ ಮಾಡಿತ್ತು. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ವೇಣೂರು, ಉಪ್ಪಿನಂಗಡಿ, ಕುಂಬ್ರ, ತಾರಿಪಾಡ್ಪು ಸೇರಿ ಹಲವೆಡೆ ನಿಷೇಧಿತ ಪಿಎಫ್‍ಐ ಸಂಘಟನೆಯ ಸದಸ್ಯರ ಮನೆ, ಕಚೇರಿ, ಆಸ್ಪತ್ರೆಗಳಲ್ಲಿ ಶೋಧಕಾರ್ಯ ನಡೆಸಿದೆ. ಗಲ್ಫ್ ದೇಶಗಳಿಂದ ಹರಿದುಬರುವ ಹಣದಿಂದ ಪಿಎಫ್‍ಐ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುತ್ತಿತ್ತು ಎಂಬ ಆರೋಪವಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದಲ್ಲಿ ಪಿಎಫ್‍ಐ ಹವಾಲಾ ನೆಟ್‍ವರ್ಕ್ ಬ್ರೇಕ್ ಮಾಡಲು ಈ ದಾಳಿಗಳು ಅನುಕೂಲವಾಗಬಹುದು ಎಂದು ಎನ್‍ಐಎ ಭಾವಿಸಿದೆ.ಏನಿದು ಪ್ರಕರಣ?
ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಿನಲ್ಲಿ ಅಥರ್ ಪರ್ವೇಜ್ ಮನೆ ಮೇಲೆ ದಾಳಿ ನಡೆಸಲಾಗಿತ್ತು. ಪ್ರಕರಣ ಪತ್ತೆಯಾದ ಬಳಿಕ ಎನ್‌ಐಎ ಇಲ್ಲಿಯವರೆಗೆ 85 ಸ್ಥಳಗಳ ಮೇಲೆ ದಾಳಿ ನಡೆಸಿದೆ. ಈತ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು, ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಿ ಚಾರ್ಜ್‌ಶೀಟ್ ಸಲ್ಲಿಕೆ ಮಾಡಲಾಗಿದೆ. ಪಿಎಫ್‌ಐ 2047ರ ಹೊತ್ತಿಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸಲು ಪಣತೊಟ್ಟಿದ್ದ ಅಂಶ ತನಿಖೆಯ ವೇಳೆ ಬೆಳಕಿಗೆ ಬಂದಿತ್ತು. -

ಬಿಹಾರದಲ್ಲಿ ಮೋದಿ ದಾಳಿಗೆ ಸಂಚು ಪ್ರಕರಣ – ದಕ್ಷಿಣ ಕನ್ನಡ ಜಿಲ್ಲೆಯ 16 ಕಡೆ ಎನ್‌ಐಎ ದಾಳಿ
ಮಂಗಳೂರು: ಬಿಹಾರದಲ್ಲಿ (Bihar) ಪ್ರಧಾನಿ ಮೋದಿ (Narendra Modi) ದಾಳಿಗೆ ಸಂಚು ಪ್ರಕರಣದಲ್ಲಿ ಎನ್‌ಐಎ (NIA) ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ 16 ಕಡೆ ದಾಳಿ ನಡೆಸಿದ್ದಾರೆ.
ಭಯೋತ್ಪಾದಕ ಕೃತ್ಯಕ್ಕೆ ಗಲ್ಫ್ ರಾಷ್ಟ್ರಗಳಿಂದ ಹವಾಲ ಹಣ ಬಳಕೆ ಆರೋಪದ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಸಾಕಷ್ಟು ಮನೆ, ಕಚೇರಿ ಮತ್ತು ಒಂದು ಆಸ್ಪತ್ರೆಯನ್ನು ಪರಿಶೀಲಿಸಿದ್ದಾರೆ. ದಕ್ಷಿಣ ಭಾರತದ ಪಿಎಫ್‌ಐ (PFI) ಹವಾಲ ಹಣದ ಜಾಲವನ್ನು ಎನ್‌ಐಎ ಭೇದಿಸುತ್ತಿದೆ. ಅಲ್ಲದೇ ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ನೆಟ್ವರ್ಕ್ ಪತ್ತೆಯಾಗಿದೆ. ಈ ಬಗ್ಗೆ ಪತ್ತೆಹಚ್ಚುವ ಸಲುವಾಗಿ ಸ್ಥಳೀಯ ಪೊಲೀಸ್ ಅಧಿಕಾರಿಗಳ ನೆರವು ಪಡೆದು ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿ 16 ಕಡೆ ದಾಳಿ ನಡೆಸಲಾಗಿದೆ. ಇದನ್ನೂ ಓದಿ: ಮಹಿಳೆಯರಿಗೆ ಉಚಿತ ಬಸ್ ಸಂಚಾರ ಭಾಗ್ಯ ಫಿಕ್ಸ್ – ಸಾರಿಗೆ ಇಲಾಖೆ ಲೆಕ್ಕಾಚಾರ ಏನು?
ಬಿಹಾರದ ಪಾಟ್ನಾದಲ್ಲಿ 2022ರ ಜುಲೈ ತಿಂಗಳಿನಲ್ಲಿ ಪುಲ್ವಾರಿ ಶರೀಫ್ ಪ್ರಕರಣ ಪತ್ತೆಯಾಗಿತ್ತು. ಈತ ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದು, ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಲು ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪ್ರಕರಣದ ತನಿಖೆಯ ಜಾಡು ಹಿಡಿದು ಎನ್‌ಐಎ ಅಧಿಕಾರಿಗಳ ತಂಡವು ದಕ್ಷಿಣ ಕನ್ನಡದ ಪುತ್ತೂರು ಮತ್ತು ಬಂಟ್ವಾಳದಲ್ಲಿ ದಾಳಿ ನಡೆಸಿತ್ತು. ಇದನ್ನೂ ಓದಿ: ಕೆಜಿಎಫ್‌ನಲ್ಲಿ ಕೈಗಾರಿಕಾ ಕಾರಿಡಾರ್: ಉನ್ನತ ಪ್ರಾಧಿಕಾರಕ್ಕೆ ಸಚಿವ ಎಂ.ಬಿ ಪಾಟೀಲ್ ಕೋರಿಕೆ
ದಾಳಿ ನಡೆಸಿದ ಸಂದರ್ಭ ಬಂಟ್ವಾಳ ನಿವಾಸಿ ಮಹಮ್ಮದ್ ಸಿನಾನ್, ಸಜಿಪ ಮೂಡದ ಸರ್ಫ್ರಾಜ್ ನವಾಜ್, ಇಕ್ಬಾಲ್, ಪುತ್ತೂರಿನ ಅಬ್ದುಲ್ ರಫೀಕ್ ಎಂಬವರನ್ನು ಬಂಧಿಸಲಾಗಿತ್ತು. ಅಲ್ಲದೇ ಕೇರಳದ ಕಾಸರಗೋಡಿನ ಕುಂಜತ್ತೂರು ನಿವಾಸಿ ಅಬೀದ್ ಕೆ.ಎಂ. ಎಂಬಾತನನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದರು. ದಾಳಿ ಸಂದರ್ಭದಲ್ಲಿ ಹಲವು ಡಿಜಿಟಲ್ ಸಾಕ್ಷ್ಯಗಳು ಮತ್ತು ಕೋಟ್ಯಂತರ ರೂಪಾಯಿ ವಹಿವಾಟು ನಡೆಸಿದ್ದ ಬಗ್ಗೆ ಎನ್‌ಐಎ ತಂಡವು ದಾಖಲೆ ಪತ್ತೆಹಚ್ಚಿತ್ತು. ಇದನ್ನೂ ಓದಿ: ಕೂದಲು ಹಿಡಿದು ತಲಾಖ್ ಕೊಟ್ಟ, ಹೋಗಿ ಸಾಯಿ ಎಂದ: ಕಣ್ಣೀರಿಟ್ಟ ಮಂಗಳೂರಿನ ಮಹಿಳೆ
-

ಎನ್‍ಐಎಯಿಂದ ಮರಣದಂಡನೆಗೆ ಮನವಿ- ಯಾಸಿನ್ ಮಲಿಕ್‍ಗೆ ಹೈಕೋರ್ಟ್ ನೋಟಿಸ್
ನವದೆಹಲಿ: ಭಯೋತ್ಪಾದನೆಗೆ ಹಣಕಾಸು ನೆರವು (Terror Funding Case) ನೀಡಿದ್ದ ಪ್ರಕರಣದಲ್ಲಿ ಮರಣದಂಡನೆ (Death Penalty) ವಿಧಿಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಮಾಡಿದ ಮನವಿಯ ಮೇರೆಗೆ ದೆಹಲಿ ಹೈಕೋರ್ಟ್ (Delhi High Court) ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‍ಗೆ (Yasin Malik) ಸೋಮವಾರ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಸಿದ್ಧಾರ್ಥ್ ಮೃದುಲ್ ಮತ್ತು ತಲ್ವಂತ್ ಸಿಂಗ್ ಅವರ ಪೀಠವು ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಲಿಕ್‍ನನ್ನು ಆಗಸ್ಟ್ 9ರ ಒಳಗಾಗಿ ಕೋರ್ಟ್‍ಗೆ ಹಾಜರುಪಡಿಸುವಂತೆ ಆದೇಶದಲ್ಲಿ ತಿಳಿಸಿದೆ. ಎನ್‍ಐಎ (NIA) ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಆರೋಪಿಯು ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ. ಅಲ್ಲದೆ ಈ ಪ್ರಕರಣವನ್ನು ವಿಶೇಷವಾಗಿ ಪರಿಗಣಿಸಿ ಅಪರಾಧಿಗೆ ಮರಣದಂಡನೆ ನೀಡಬೇಕು ಎಂದು ವಾದಿಸಿದರು. ಇದನ್ನೂ ಓದಿ: ಹುಟ್ಟಿನಿಂದ ಸ್ತ್ರೀ, ಬಳಿಕ ಪುರುಷ- ದಾಖಲೆಯಲ್ಲಿ ಲಿಂಗ ಬದಲಾವಣೆ ಅರ್ಜಿಗೆ ಕೋರ್ಟ್ ಹೇಳಿದ್ದೇನು?
ಯಾಸಿನ್ ಮಲಿಕ್ ಅಪರಾಧ ಒಪ್ಪಿಕೊಂಡ ಕಾರಣಕ್ಕೆ ಐಪಿಸಿ ಸೆಕ್ಷನ್ 121ರ ಅಡಿಯಲ್ಲಿ (121 IPC) ಮರಣ ದಂಡನೆಯ ಬದಲಾಗಿ ಜೀವಾವಧಿ ಶಿಕ್ಷೆಗೆ ಮಾರ್ಪಡಿಸಲಾಗಿದೆ ಎಂದು ಕೋರ್ಟ್ ಉಲ್ಲೇಖಿಸಿದೆ. 2022ರ ಮೇ 24 ರಂದು ನ್ಯಾಯಾಲಯವು ಮಲಿಕ್‍ಗೆ ದೇಶದ್ರೋಹ ಪ್ರಕರಣದಲ್ಲಿ ತಪ್ಪಿತಸ್ಥ ಎಂದು ತೀರ್ಪು ನೀಡಿತ್ತು.
ಮರಣದಂಡನೆ ನೀಡುವಂತೆ ಎನ್‍ಐಎ ಹೈಕೋರ್ಟ್‍ಗೆ ಸಲ್ಲಿಸಿದ ಮನವಿಯಲ್ಲಿ, ಉಗ್ರರಿಗೆ ತಪ್ಪೊಪ್ಪಿಕೊಂಡ ಕಾರಣಕ್ಕೆ ಮರಣದಂಡನೆಯನ್ನು ನೀಡದಿದ್ದರೆ ಅದರಿಂದ ತಪ್ಪಿಸಿಕೊಳ್ಳಲು ದಾರಿಯಾಗುತ್ತದೆ ಎಂದು ಉಲ್ಲೇಖಿಸಿತ್ತು. ಇದನ್ನೂ ಓದಿ: ಐಡಿ ಪ್ರೂಫ್ ಇಲ್ಲದೆ 2,000 ರೂ. ನೋಟು ವಿನಿಮಯ ವಿರುದ್ಧ ಮನವಿ- ದೆಹಲಿ ಹೈಕೋರ್ಟ್‌ನಿಂದ ಅರ್ಜಿ ವಜಾ
-

ಗಡ್ಕರಿಗೆ ಕೊಲೆ ಬೆದರಿಕೆ ಕೇಸ್- ಎನ್‌ಐಎಯಿಂದ ಎಫ್‌ಐಆರ್ ದಾಖಲು
ಬೆಳಗಾವಿ: ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಕೊಲೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ಆರೋಪಿ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ.
ಜಯೇಶ್ ಪೂಜಾರಿ ಎಂಬ ಆರೋಪಿ ಕೊಲೆ ಪ್ರಕರಣವೊಂದರಲ್ಲಿ ಬೆಳಗಾವಿಯ (Belagavi) ಹಿಂಡಲಗಾ (Hindalga) ಜೈಲು ಸೇರಿದ್ದ. ಈತ ಮಾ.21ರಂದು ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿರುವ ಸಚಿವರ ಕಚೇರಿಗೆ ಕರೆ ಮಾಡಿ ನಿತಿನ್ ಗಡ್ಕರಿಯವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೇ ಈ ಹಿಂದೆ ಜ.14ರಂದು ಸಚಿವರ ಕಚೇರಿಗೆ ಕರೆ ಮಾಡಿ ಜೀವ ಬೆದರಿಕೆ ಒಡ್ಡುವುದರ ಜೊತೆಗೆ 10 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಬೆಳಗಾವಿ ಜೈಲಿನ ಮಾಹಿತಿ ಬಹಿರಂಗ ಆಗಿತ್ತು. ಇದನ್ನೂ ಓದಿ: ತಿಹಾರ್ ಜೈಲಿನ ಶೌಚಾಲಯದಲ್ಲಿ ಕುಸಿದು ಬಿದ್ದ ಸತ್ಯೇಂದ್ರ ಜೈನ್ – 3 ದಿನದ ಬಳಿಕ ಮತ್ತೆ ಆಸ್ಪತ್ರೆ ದಾಖಲು
ಆರೋಪಿ ತಾನು ದಾವೂದ್ ಇಬ್ರಾಹಿಂ ಗ್ಯಾಂಗ್‌ನ ಸದಸ್ಯ ಎಂದು ನಿತಿನ್ ಗಡ್ಕರಿಯವರಿಗೆ ಕೊಲೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಈತನ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಪ್ರಾರಂಭಿಸಿದ್ದಾರೆ. ಅಲ್ಲದೇ ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಎಫ್‌ಐಆರ್ ಮಾಹಿತಿ ರವಾನಿಸಿದ್ದಾರೆ. ಇದನ್ನೂ ಓದಿ: ಮಂಗಳೂರಿನಲ್ಲಿ ಟೇಕಾಫ್‍ಗೆ ಸಿದ್ಧವಾಗಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ – ಸಮಯಪ್ರಜ್ಞೆ ಮೆರೆದ ಪೈಲೆಟ್
-

ಆರ್‌ಎಸ್‌ಎಸ್ ಮುಖಂಡನ ಹತ್ಯೆ ಪ್ರಕರಣ – ಪಿಎಫ್‍ಐ ಸದಸ್ಯ ಅರೆಸ್ಟ್
ತಿರುವನಂತನಪುರಂ: 2022ರ ಏಪ್ರಿಲ್‍ನಲ್ಲಿ ಕೇರಳದ (Kerala) ಪಾಲಕ್ಕಾಡ್ (Palakkad) ಜಿಲ್ಲೆಯಲ್ಲಿ ನಡೆದಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖಂಡ ಶ್ರೀನಿವಾಸನ್ ಅವರ ಹತ್ಯೆ ಪ್ರಕರಣದಲ್ಲಿ ಬೇಕಾಗಿದ್ದ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸದಸ್ಯನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ಬಂಧಿಸಿದೆ.
ಆರೋಪಿ ಸಹೀರ್ ಕೆವಿ ಕೃತ್ಯದ ನಂತರ ತಲೆಮರೆಸಿಕೊಂಡಿದ್ದ. ಅಲ್ಲದೆ ಹತ್ಯೆಯಲ್ಲಿ ಪಾಲ್ಗೊಂಡಿದ್ದ ಆರೋಪಿಗಳಿಗೆ ಆಶ್ರಯ ನೀಡಿದ್ದ. ಆತನ ಸುಳಿವು ನಿಡಿದವರಿಗೆ 4 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‍ಐಎ ಘೋಷಣೆ ಮಾಡಿತ್ತು. ಪಾಲಕ್ಕಾಡ್ ಸಂಬಂಧಿಕರ ಮನೆಯಲ್ಲಿ ಆತ ಅಡಗಿರುವುದನ್ನು ಪತ್ತೆಹಚ್ಚಿದ್ದ ಎನ್‍ಐಎ ಬಂಧಿಸಿದೆ. ಇದನ್ನೂ ಓದಿ: ಮಾಡೆಲ್ ಹೇರ್‌ಸ್ಟೈಲ್ ಹಾಳು ಮಾಡಿದ್ದಕ್ಕೆ 2 ಕೋಟಿ ಪರಿಹಾರ – ಆದೇಶಕ್ಕೆ ಸುಪ್ರೀಂ ತಡೆ
ಪಿಎಫ್‍ಐನ ಪಟ್ಟಾಂಬಿ ಏರಿಯಾ ಅಧ್ಯಕ್ಷನಾಗಿದ್ದ ಆರೋಪಿಯು ಸಮುದಾಯದ ಸದಸ್ಯರಲ್ಲಿ ಭಯೋತ್ಪಾದನೆಯ ವಿಚಾರಗಳನ್ನು ಬಿತ್ತುತ್ತಿದ್ದ. 2047ರ ಹೊತ್ತಿಗೆ ಇಸ್ಲಾಮಿಕ್ ಆಳ್ವಿಕೆಯನ್ನು ಸ್ಥಾಪಿಸುವ ಉದ್ದೇಶದಿಂದ ಸಂಘಟನೆಯ ಸದಸ್ಯರನ್ನು ತಯಾರಿ ಮಾಡುತ್ತಿದ್ದ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾ. 17ರಂದು ಪಿಎಫ್‍ಐ ಸದಸ್ಯರು ಸೇರಿದಂತೆ 59 ಆರೋಪಿಗಳ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಆರೋಪಿಗಳಲ್ಲಿ ಒಬ್ಬನಾದ ಅಬ್ದುಲ್ ನಾಸರ್ ಜ.2 ರಂದು ಸಾವನ್ನಪ್ಪಿದ್ದ. ತಲೆಮರೆಸಿಕೊಂಡಿರುವ ಉಳಿದ 11 ಆರೋಪಿಗಳನ್ನು ಪತ್ತೆಹಚ್ಚಲು ಎನ್‍ಐಎ ಬಲೆ ಬೀಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಿಂಗ್ ಮೇಕರ್ ಆಗುತ್ತೇನೆ ಎಂಬ ಅಹಂನಲ್ಲಿ ವಿದೇಶಕ್ಕೆ ಹಾರಿದ್ದ ಹೆಚ್‍ಡಿಕೆ : ಸಿಪಿ ಯೋಗೇಶ್ವರ್ ವ್ಯಂಗ್ಯ





