ಮಂಗಳೂರು: ನಿಷೇಧಿತ ಪಿಎಫ್‍ಐ (PFI) ಸಂಘಟನೆಗೆ ವಿದೇಶದಿಂದ ಫಂಡಿಗ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ (Mangaluru) ಉಳ್ಳಾಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ 3 ಕಡೆ ಎನ್‍ಐಎ (NIA) ದಾಳಿ ನಡೆಸಿದೆ.
ಉಳ್ಳಾಲದ ಕಿನ್ಯಾ, ವಳಚ್ಚಿಲ್ ಪದವು ಮತ್ತು ಪಾಣೆಮಂಗಳೂರಿನಲ್ಲಿ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಬ್ರಾಹಿಂ ಎಂಬಾತನ ಮನೆಯಲ್ಲಿ ಎನ್‍ಐಎ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಕೇರಳದಲ್ಲಿ ಧಾರ್ಮಿಕ ಶಿಕ್ಷಕನಾಗಿದ್ದ ಇಬ್ರಾಹಿಂ, ಪಿಎಫ್‍ಐ ನಿಷೇಧದ ಬಳಿಕ ತಲೆಮರೆಸಿಕೊಂಡಿದ್ದ. ಆತನ ಮನೆಯಲ್ಲಿ ಪರಿಶೀಲನೆ ನಡೆಸಿರುವ ಅಧಿಕಾರಿಗಳು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಅಕ್ರಮವಾಗಿ 15 ಕೆಜಿ ಶ್ರೀಗಂಧ ಸಂಗ್ರಹ – ಆರೋಪಿ ಅರೆಸ್ಟ್
ಈ ಹಿಂದೆ ಪಿಎಫ್‍ಐ ಸಂಘಟನೆಯ ಫಂಡಿಂಗ್ ನೆಟ್‍ವರ್ಕ್ ಬೇಧಿಸಿದ್ದ ಎನ್‍ಐಎ ಅಧಿಕಾರಿಗಳು ಬಂಧಿತರನ್ನು ವಿಚಾರಣೆ ನಡೆಸಿದ್ದರು. ಈ ವೇಳೆ ಇಬ್ರಾಹಿಂ ಹೆಸರು ಪ್ರಸ್ತಾಪವಾಗಿತ್ತು. ಭಾರತದಲ್ಲಿ ಭಯೋತ್ಪಾದನೆಗೆ ಫಂಡಿಂಗ್ ಮಾಡುತ್ತಿದ್ದ ಹವಾಲಾ ನೆಟ್‍ವರ್ಕ್ ಜೊತೆ ಸಂಪರ್ಕ ಇರುವ ಸಾಧ್ಯತೆ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಇನ್ನೂ ಮಂಗಳೂರು ಹೊರವಲಯದ ವಳಚ್ಚಿಲ್ ಪದವು ಎಂಬಲ್ಲಿನ ಮುಸ್ತಾಕ್ ಎಂಬಾತನ ಮನೆ ಮೇಲೆ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಅಲ್ಲದೇ ಬಂಟ್ವಾಳದ ಮೆಲ್ಕಾರ್‍ನ ಇಬ್ರಾಹಿಂ ನಂದಾವರ ಎಂಬಾತನ ಮನೆಗೂ ಭೇಟಿ ನೀಡಿದ್ದ ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸಿ ತೆರಳಿದ್ದಾರೆ. ಇದನ್ನೂ ಓದಿ: ಹವಾಯಿಯಲ್ಲಿ ಕಾಡ್ಗಿಚ್ಚು – 93 ಕ್ಕೇರಿದ ಸಾವಿನ ಸಂಖ್ಯೆ
ಮಂಗಳೂರು: ಸರ್ಕಾರದ ಎಚ್ಚರಿಕೆ ನಡುವೆಯೂ ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್‍ಗಿರಿ (Moral Policing) ಪ್ರಕರಣಗಳು ಮೇಲಿಂದ ಮೇಲೆ ವರದಿ ಆಗುತ್ತಿವೆ. ಇದೀಗ ಪೊಲೀಸ್ (Police) ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿ ನೈತಿಕ ಪೊಲೀಸ್‍ಗಿರಿ ಮಾಡಿರುವ ಪ್ರಕರಣವೊಂದು ಬಂಟ್ವಾಳದ (Bantwal) ಬಿಸಿ ರೋಡ್‍ನಲ್ಲಿ ನಡೆದಿದೆ.
ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗ್ತಿದ್ದೀಯಾ? ಇಲ್ಲಿನ ವಿಚಾರ ನಿನಗೆ ಗೊತ್ತಲ್ಲ ಎನ್ನುತ್ತಾ ಪೊಲೀಸ್ ಸಿಬ್ಬಂದಿಗೆ ಹಲ್ಲೆ ಮಾಡಿದ ಗುಂಪೊಂದು, ಪೊಲೀಸ್ ಸಿಬ್ಬಂದಿಯ ಪತ್ನಿ ಮೇಲೆ ಮಾನಭಂಗಕ್ಕೂ ಯತ್ನಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಓದು ಎಂದು ಬುದ್ಧಿವಾದ ಹೇಳಿದ್ದಕ್ಕೆ ನದಿಗೆ ಹಾರಿ SSLC ವಿದ್ಯಾರ್ಥಿನಿ ಆತ್ಮಹತ್ಯೆ
ಮಾನಭಂಗ ಯತ್ನ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬೆನ್ನಲ್ಲೇ ಕಾರ್ಯಚರಣೆ ನಡೆಸಿದ ಪೊಲೀಸರು, ಆರೋಪಿಗಳಾದ ತುಂಬೆ ನಿವಾಸಿ ಮನೀಶ್ ಪುಜಾರಿ, ಮಂಜುನಾಥ್ ಆಚಾರ್ಯನನ್ನು ಬಂಧಿಸಿದ್ದಾರೆ.
ಬಂಟ್ವಾಳ ಡಿವೈಎಸ್‍ಪಿ ಕಚೇರಿಯ ಸಿಬ್ಬಂದಿ ಪ್ರಸ್ತುತ ಎನ್‍ಐಎ (NIA) ವಿಭಾಗದಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಕುಮಾರ್ ಮೇಲೆ ಈ ಗುಂಪು ಹಲ್ಲೆ ನಡೆಸಿದೆ. ಜೊತೆಗೆ ಕುಮಾರ್ ಕುಟುಂಬದ ಮೇಲೆ ಮಾನಭಂಗ ಯತ್ನ ನಡೆದಿದೆ ಎಂದು ತಿಳಿದುಬಂದಿದೆ.
ಕುಮಾರ್ ಆರೋಪವೇನು?
ಗುರುವಾರ ರಾತ್ರಿ ಪತ್ನಿ ಮತ್ತು ಪತ್ನಿಯ ಸಹೋದರಿ ಜೊತೆ ಬಿಸಿ ರೋಡ್ ವಸತಿ ಗೃಹದಲ್ಲಿ ತಂಗಿದ್ದೆ. ರಾತ್ರಿ ಊಟಕ್ಕೆಂದು ಹೊಟೆಲ್‍ಗೆ ಹೋಗಿ ವಾಪಸ್ ಆಗುವಾಗ ಇಬ್ಬರು ಹಿಂಬಾಲಿಸಿ ಬಂದು ನಮ್ಮನ್ನು ತಡೆದು ನಿಲ್ಲಿಸಿ ಅವಾಚ್ಯವಾಗಿ ನಿಂದಿಸಿದರು. ಮುಸ್ಲಿಂ ಮತ್ತು ಹಿಂದೂ ಹುಡುಗಿಯರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದರು. ಇಲ್ಲಿನ ವಿಚಾರ ನಿನಗೆ ಗೊತ್ತಲ್ಲವೇ ಎಂದು ಬೆದರಿಕೆ ಹಾಕಿ ಹಲ್ಲೆಗೆ ಮುಂದಾದರು. ನನ್ನ ಪತ್ನಿಯ ವಿಡಿಯೋ ಚಿತ್ರೀಕರಣ ಮಾಡಿ ಮಾನಭಂಗಕ್ಕೂ ಯತ್ನಿಸಿದರು.
ನವದೆಹಲಿ: ಖ್ಯಾತ ಪಂಜಾಬಿ ಗಾಯಕ ಸಿಧು ಮೂಸೆವಾಲಾ (Sidhu Moose Wala) ಹತ್ಯೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಎನ್‍ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ) ಬಂಧಿಸಿದೆ. ದುಬೈನಿಂದ (Dubai) ದರೋಡೆಕೋರ ವಿಕ್ರಮ್ ಬ್ರಾರ್‌ನ್ನು ಹಸ್ತಾಂತರಿಸಲಾಗಿದ್ದು, ಆತನನ್ನು ಭಾರತಕ್ಕೆ ಕರೆತರಲು ಎನ್‍ಐಎ (NIA )ತಂಡ ದುಬೈಗೆ ತೆರಳಿತ್ತು.
ಆರೋಪಿ ವಿಕ್ರಮ್ ಬ್ರಾರ್ ನಟ ಸಲ್ಮಾನ್ ಖಾನ್‍ಗೆ ಸಹ ಬೆದರಿಕೆ ಒಡ್ಡಿದ್ದ. ಅಲ್ಲದೇ ಮೂಸೆವಾಲಾ ಹತ್ಯೆಯ ಪ್ರಮುಖ ಆರೋಪಿ ಎನ್ನಲಾಗಿದೆ. ಮೂಸೆವಾಲಾ ಹತ್ಯೆಯಲ್ಲಿ ವಿಕ್ರಮ್ ಬ್ರಾರ್‌ನ ಕೈವಾಡವಿದೆ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಅಲ್ಲದೇ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್, ಗೋಲ್ಡಿ ಬ್ರಾರ್ ಮತ್ತು ಇತರರ ಸಹಾಯದಿಂದ ಉದ್ಯಮಿಗಳ ಹತ್ಯೆಗಳಲ್ಲಿ ಭಾಗಿಯಾಗಿದ್ದ. ಶಸ್ತ್ರಾಸ್ತ್ರ ಕಳ್ಳಸಾಗಣೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ಆತ ಸಂಪರ್ಕ ಹೊಂದಿದ್ದ ಎಂಬುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರೋಪಿಗಳ ನಡುವೆ ಘರ್ಷಣೆ – ಜೈಲಿನಲ್ಲೇ ಇಬ್ಬರ ಸಾವು!
ಪಂಜಾಬ್, ರಾಜಸ್ಥಾನ, ಹರಿಯಾಣ ಮತ್ತು ದೆಹಲಿ ಸೇರಿದಂತೆ ಹಲವು ರಾಜ್ಯಗಳ ಪೊಲೀಸರ ಮನವಿ ಮೇಲೆ ದರೋಡೆಕೋರ ವಿಕ್ರಮ್ ಬ್ರಾರ್ ವಿರುದ್ಧ 11 ಲುಕ್‍ಔಟ್ ನೋಟಿಸ್‍ಗಳನ್ನು ಹೊರಡಿಸಲಾಗಿತ್ತು. ಆತ ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಆಜ್ಞೆಯ ಮೇರೆಗೆ ಕ್ರಿಮಿನಲ್ ಚಟುವಟಿಕೆಗಳನ್ನು ನಡೆಸುತ್ತಿದ್ದ. ಅಲ್ಲದೇ ಗಣ್ಯ ವ್ಯಕ್ತಿಗಳಿಗೆ ಕರೆ ಮಾಡಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣ, ರಾಜಸ್ಥಾನ ಮತ್ತು ಪಂಜಾಬ್‍ನಲ್ಲಿ ನಡೆದ ಹಲವಾರು ಕೊಲೆ ಮತ್ತು ಸುಲಿಗೆ ಪ್ರಕರಣಗಳಲ್ಲಿ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್‍ಗೆ ವಿಕ್ರಮ್ ಬ್ರಾರ್ ಸಹಾಯ ಮಾಡಿದ್ದಾನೆ ಎಂದು ಎನ್‍ಐಎ ಹೇಳಿದೆ. ಬಿಷ್ಣೋಯ್ ಗ್ಯಾಂಗ್ ಸದಸ್ಯರಿಗೆ ಬಂದೂಕು ಸರಬರಾಜು ಮಾಡುವಲ್ಲಿಯೂ ಈತ ಭಾಗಿಯಾಗಿದ್ದ. ತಲೆ ಮರೆಸಿಕೊಂಡಿದ್ದ ವಿಕ್ರಮ್ ಬ್ರಾರ್‌ಗಾಗಿ ಬಹಳ ಸಮಯದಿಂದ ಹುಡುಕಾಟ ನಡೆಸಲಾಗಿತ್ತು. ಅಂತಿಮವಾಗಿ ಆತನನ್ನು ಬಂಧಿಸಿ ಭಾರತಕ್ಕೆ ಕರೆತರಲಾಗಿದೆ. ಇದನ್ನೂ ಓದಿ: ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಬಂಧನ
ಬೆಂಗಳೂರು: ಶಂಕಿತ ಉಗ್ರರ ಮಾಸ್ಟರ್ ಮೈಂಡ್ ಜುನೈದ್‍ನನ್ನು ಪತ್ತೆಹಚ್ಚಲು ಇಂಟರ್‌ಪೋಲ್ ಮೂಲಕ ಲುಕ್ ಔಟ್ ನೋಟಿಸ್‍ಗೆ (Look Out Circular) ಸಿಸಿಬಿ ಪೊಲೀಸರು (CCB Police) ತಯಾರಿ ನಡೆಸಿದ್ದಾರೆ. ಆರೋಪಿ ವಿದೇಶಕ್ಕೆ ತೆರಳಿರುವ ಶಂಕೆ ಇದ್ದು ಆತನನ್ನು ಬಂಧಿಸಲು ಸೂಕ್ತ ಕ್ರಮಕ್ಕೆ ಪೊಲೀಸರು ಈಗ ಮುಂದಾಗಿದ್ದಾರೆ.
ಅಪರಾಧ ಕ್ರತ್ಯಗಳಲ್ಲಿ ತೊಡಗಿಕೊಂಡಿದ್ದ ಜುನೈದ್ ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಹೊರಬಂದಿದ್ದ. ಬಳಿಕ ಜೈಲಿನಿಂದ ಹೊರ ಬಂದು ದುಬೈಗೆ ತೆರಳಿರುವ ಅನುಮಾನ ವ್ಯಕ್ತವಾಗಿದೆ. 2021ರಲ್ಲಿ ದುಬೈಗೆ ಪ್ರಯಾಣ ಮಾಡಿರುವ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ಬಗ್ಗೆ ರಾಷ್ಟ್ರೀಯ ತನಿಖಾ ದಳಕ್ಕೆ (NIA) ಮಾಹಿತಿ ನೀಡಿರುವ ಸಿಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿ ಶೀಘ್ರ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಸ್ಫೋಟಕ್ಕೆ ಸಂಚು – ಐವರು ಶಂಕಿತ ಉಗ್ರರು ಅರೆಸ್ಟ್
ಸಿಸಿಬಿ ಪೊಲೀಸರು ಇತ್ತೀಚೆಗೆ ಬಂಧಿಸಿದ್ದ ಶಂಕಿತ ಉಗ್ರರಿಗೆ ಜುನೈದ್ ಹಣ ಸಹಾಯ ಮಾಡುತ್ತಿದ್ದ. ಅಲ್ಲದೇ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ್ದ ಮಾಹಿತಿ ಇದೆ. ಇದೀಗ ಆರೋಪಿ ವಿದೇಶದಲ್ಲಿ ತಲೆಮರೆಸಿಕೊಂಡಿದ್ದರೂ ಆತನನ್ನು ಬಂಧಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ಪೊಲೀಸರು ಮಾಡಿಕೊಂಡಿದ್ದಾರೆ. ಇದರಿಂದಾಗಿ ಪ್ರಮುಖ ಆರೋಪಿ ಶೀಘ್ರದಲ್ಲೇ ಪೊಲೀಸರ ಬಲೆಗೆ ಬೀಳುವ ಸಾಧ್ಯತೆ ಇದೆ.
ಜುಲೈ 19 ರಂದು ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಶಂಕಿತರಿಂದ ಅಪಾರ ಪ್ರಮಾಣದ ಸ್ಫೋಟಕ ಸಾಮಾಗ್ರಿ ಹಾಗೂ ಪಿಸ್ತೂಲ್‍ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬೆಂಗಳೂರು ಸೇರಿದಂತೆ ಹಲವೆಡೆ ಆರೋಪಿಗಳು ಸ್ಫೋಟಕ್ಕೆ ಸಂಚು ರೂಪಿಸಿದ್ದರು ಎಂಬುದು ತನಿಖೆ ವೇಲೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: 2 ದಿನದೊಳಗೆ ದೊಡ್ಡ ಮಟ್ಟದ ಸ್ಪೋಟಕ್ಕೆ ನಡೆದಿತ್ತು ಸಿದ್ಧತೆ!
ನವದೆಹಲಿ: ನಿಷೇಧಿತ ಭಯೋತ್ಪಾದಕ ಐಎಸ್‍ಐಎಸ್‍ನೊಂದಿಗೆ (ISIS) ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಉತ್ತರ ಪ್ರದೇಶದ (Uttar Pradesh) ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ವಿದ್ಯಾರ್ಥಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಬಂಧಿತನನ್ನು ಫೈಜಾನ್ ಅನ್ಸಾರಿ ಅಲಿಯಾಸ್ ಫೈಜ್ (19) ಎಂದು ಗುರುತಿಸಲಾಗಿದೆ. ಈತನ ಮನೆಯನ್ನು ಶೋಧಿಸಿ ಸರಿಯಾದ ಪುರಾವೆಗಳು ಸಿಕ್ಕಿದ ನಂತರ ಬಂಧಿಸಲಾಗಿದೆ. ಫೈಜ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜೈಲಲ್ಲಿದ್ದುಕೊಂಡೇ ಹಿಂದೂಗಳ ಮತಾಂತರ- ನಜೀರ್ ವಿಚಾರಣೆ ವೇಳೆ ಸ್ಫೋಟಕ ಸತ್ಯ ಬಹಿರಂಗ
ಎರಡು ದಿನಗಳಿಂದ ಜಾಖರ್ಂಡ್‍ನ (Jharkhand) ಲೋಹರ್ಡಗಾ ಜಿಲ್ಲೆಯ ಫೈಜ್ ಮನೆ ಮತ್ತು ಉತ್ತರ ಪ್ರದೇಶದ ಅಲಿಗಢದಲ್ಲಿ ಬಾಡಿಗೆ ಕೊಠಡಿಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳು, ಅನುಮಾನಾಸ್ಪದ ವಸ್ತುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಬೆಂಬಲಿಸಲು ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಗ್ರೂಪ್ ರಚಿಸಿ ಮಾಹಿತಿ ಹಂಚುತ್ತಿದ್ದ. ಅಲ್ಲದೇ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಯೋಜಿಸಿದ್ದ. ತನಿಖೆ ವೇಳೆ ಆತನ ಜೊತೆ ಹಲವು ಸಹಚರರು ಐಸಿಸ್ ಜೊತೆ ಕೈ ಜೊಡಿಸಿರುವುದು ಬೆಳಕಿಗೆ ಬಂದಿದೆ.
ದಾವಣಗೆರೆ: ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನದ ಬೆನ್ನಲ್ಲೇ ದಾವಣಗೆರೆಯ (Davanagere) ವ್ಯಕ್ತಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು (Bengaluru CCB Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇಂದು ಬೆಳಿಗ್ಗೆ ದಾವಣಗೆರೆ ಆಗಮಿಸಿದ ಸಿಸಿಬಿ ಪೊಲೀಸರ ತಂಡ ಅಜಾದ್ ನಗರದ ನಿವಾಸಿ ಫಯಾಜ್ ವುಲ್ಲಾನನ್ನು ವಶಕ್ಕೆ ಪಡೆದಿದೆ.
ಬೆಂಗಳೂರಿನ ಮೂಲದ ಫಯಾಜ್ ಮೇಲೆ ಡ್ರಗ್ಸ್, ಆಯುಧ ಮಾರಾಟ ವಿಚಾರವಾಗಿ ಇತನ ಮೇಲೆ ಐದು ಪ್ರಕರಣ ಬೆಂಗಳೂರಿನಲ್ಲಿ ದಾಖಲಾಗಿತ್ತು. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಈತನನ್ನು ಮತ್ತೆ ವಶಕ್ಕೆ ಪಡೆದ ಸಿಸಿಬಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಪ್ರಸ್ತುತ ಎನ್‍ಐಎ ವಶದಲ್ಲಿರುವ ಶಂಕಿತರು 2017ರಲ್ಲಿ ನಡೆದಿದ್ದ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ, ಸೆರೆಮನೆಯಲ್ಲಿಯೇ ಉಗ್ರರ ಸಂಪರ್ಕ ಸಿಕ್ಕಿತ್ತು. ಅವರಿಂದಲೇ ಪ್ರಚೋದನೆ ಹೊಂದಿ ಅವರ ನೆರವಿನಿಂದಲೇ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯ ಎಸಗುವುದಕ್ಕೆ ತರಬೇತಿ ಪಡೆಯುತ್ತಿದ್ದರು.
ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ತರಬೇತಿಗೆಂದು ಎಲ್ಲರೂ ಒಂದೇ ಕಡೆ ಆರ್‌ಟಿ ನಗರದ ಮನೆಯಲ್ಲಿ ಸೇರಿದ್ದ ಸಂದರ್ಭದಲ್ಲಿ ಬಲೆ ಬೀಸಿ ಹೆಡೆಮುರಿ ಕಟ್ಟಿದ್ದರು.
ಬೆಂಗಳೂರು: ಉಗ್ರರ (Terrorist) ಜೊತೆ ಸಂಪರ್ಕ ಸಾಧಿಸಿ ಬೆಂಗಳೂರಿನಲ್ಲಿ (Bengaluru) ದೊಡ್ಡ ಮಟ್ಟದ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು (Suspected Terrorists) ಕೇಂದ್ರ ಗುಪ್ತಚರ ಇಲಾಖೆಯ (Central Intelligence Agency) ಮಾಹಿತಿಯ ಮೇರೆಗೆ ಸಿಸಿಬಿ (CCB) ಬಂಧಿಸಿದೆ.
ಸುಹೇಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್ ರಬ್ಬಾನಿಯನ್ನು ಬಂಧಿಸಲಾಗಿದ್ದು, ಈ ತಂಡದ ನಾಯಕ ಜುನೈದ್ ನಾಪತ್ತೆಯಾಗಿದ್ದಾನೆ. ಶಂಕಿತ ಉಗ್ರರೆಲ್ಲರೂ ಬೆಂಗಳೂರಿನ ನಿವಾಸಿಗಳಾಗಿದ್ದು ಜನಸಂದಣಿ ಇರುವ ಪ್ರದೇಶದಲ್ಲಿ ಬ್ಲ್ಯಾಸ್ಟ್ ನಡೆಸಲು ಇವರು ತಯಾರಿ ನಡೆಸಿದ್ದರು. ಇದನ್ನೂ ಓದಿ: 12 ಜಿಲ್ಲೆಗಳ ಫಲಾನುಭವಿಗಳಿಗೆ ಇನ್ನೂ ತಲುಪಿಲ್ಲ ಅನ್ನ ಭಾಗ್ಯದ ಹಣ
ಎನ್‌ಐಎ (NIA) ಮತ್ತು ಸಿಸಿಬಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಐವರನ್ನು ಬಂಧಿಸಿದೆ. ಶಂಕಿತರ ಮೇಲೆ ಹೆಬ್ಬಾಳ (Hebbala) ಠಾಣೆಯಲ್ಲಿ ಸಿಸಿಬಿ ಪ್ರಕರಣ ದಾಖಲಿಸಿದೆ. ವಶಕ್ಕೆ ಪಡೆದ ಶಂಕಿತರನ್ನು ಆಡುಗೋಡಿಯ ಟೆಕ್ನಿಕಲ್ ಸೆಲ್‌ನಲ್ಲಿ ವಿಚಾರಣೆ ನಡೆಸುತ್ತಿದೆ. ಇದನ್ನೂ ಓದಿ: ಎಕ್ಸ್‌ಪ್ರೆಸ್‌ವೇಯಲ್ಲಿ KSRTC ಚಾಲಕನ ಹುಚ್ಚಾಟ – ಒನ್‍ವೇ ಸಂಚಾರಕ್ಕೆ ಆಕ್ರೋಶ
ತಿರುವನಂತಪುರಂ: ಕೇರಳದ ಪ್ರೊಫೆಸರ್ ಅವರ ಕೈಯನ್ನು ಕತ್ತರಿಸಿದ ಪ್ರಕರಣಕ್ಕೆ (Kerala Professor’s Hand-Chopping Case) ಸಂಬಂಧಿಸಿದಂತೆ ಐವರ ವಿರುದ್ಧದ ಆರೋಪ ಸಾಬೀತಾಗಿದೆ.
ಕೊಚ್ಚಿಯಲ್ಲಿರುವ ರಾಷ್ಟ್ರೀಯ ತನಿಖಾ ದಳ (NIA) ಕೋರ್ಟ್ ಐವರನ್ನು ದೋಷಿಗಳೆಂದು ತೀರ್ಪು ನೀಡಿದೆ. ಉಳಿದ ಐವರು ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟ ಕೋರ್ಟ್ ಮುಂದೆ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸುವುದಾಗಿ ತಿಳಿಸಿತು.
ಈ ಮೊದಲು ಮೊದಲ ಹಂತದ ವಿಚಾರಣೆ ನಡೆಸಿದಾಗ 13 ಮಂದಿ ಮೇಲಿದ್ದ ಆರೋಪ ಸಾಬೀತಾಗಿತ್ತು. 18 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿತು. ತೀರ್ಪಿನ ನಂತರ 11 ಮಂದಿಯ ವಿರುದ್ಧ ಹೆಚ್ಚುವರಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿತ್ತು. ಆರೋಪಿಗಳೆಲ್ಲರೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (PFI) ಸದಸ್ಯರಾಗಿದ್ದರು.
ಏನಿದು ಪ್ರಕರಣ?
ಕಾಲೇಜಿನಲ್ಲಿ ನಡೆದ ಆಂತರಿಕ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2010ರ ಜುಲೈ 4 ರಂದು ತೊಡುಪುಳದ ನ್ಯೂಮನ್ ಕಾಲೇಜಿನ ಪ್ರೊಫೆಸರ್ ಟಿಜೆ ಜೋಸೆಫ್ ( T J Joseph ) ಅವರ ಮೇಲೆ ದಾಳಿ ನಡೆದಿತ್ತು. ಶಸ್ತ್ರ ಸಜ್ಜಿತರಾಗಿಯೇ ಆಯುಧ ಮತ್ತು ಸ್ಫೋಟಕ ಸಾಮಗ್ರಿಗಳೊಂದಿಗೆ ಕಾರಿನಲ್ಲಿ ಬಂದಿದ್ದ ಪಿಎಫ್‌ಐ ಕಾರ್ಯಕರ್ತರು ಜೋಸೆಫ್ ಅವರ ಕಾರನ್ನು ತಡೆದು ನಿಲ್ಲಿಸಿದ್ದರು. ಬಳಿಕ ಕಾರಿನಿಂದ ಜೋಸೆಫ್ ಅವರನ್ನು ಹೊರಗಡೆ ಎಳೆದು ಕೊಡಲಿಯಿಂದ ಬಲಗೈಯನ್ನು ಕತ್ತರಿಸಿ ಹತ್ಯೆಗೆ ಯತ್ನಿಸಿ ಎಡಗೈಯನ್ನು ಕತ್ತರಿಸಿದ್ದರು.
ಈ ಸಂದರ್ಭದಲ್ಲಿ ಜೋಸೆಫ್ ಅವರ ಸಹೋದರಿ ಕೃತ್ಯವನ್ನು ತಡೆಯಲು ಮುಂದಾದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕಾರನ್ನು ಜಖಂಗೊಳಿಸಿ ಪರಾರಿಯಾಗಿದ್ದರು.
ನವದೆಹಲಿ: ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಐಸಿಸ್ (ISIS) ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) 9 ಜನರ ವಿರುದ್ಧ ಶುಕ್ರವಾರ ಮೊದಲ ಪೂರಕ ಚಾರ್ಜ್‌ಶೀಟ್ (Supplymentary ChargeSheet) ಸಲ್ಲಿಸಿದೆ.
ಆರೋಪಿಗಳು ಭವಿಷ್ಯದಲ್ಲಿ ಭಾರತದಲ್ಲಿಯೇ ಭಯೋತ್ಪಾದಕ ದಾಳಿಯನ್ನು ನಡೆಸುವ ಸಲುವಾಗಿ ರೋಬೊಟಿಕ್ಸ್ (Robotics) ಕೋರ್ಸ್‌ಗಳನ್ನು ಕಲಿಯಲು ಮುಂದಾಗಿದ್ದಾರೆ ಎಂದು ಎನ್‌ಐಎ ತಾನು ಸಲ್ಲಿಸಿರುವ ಪೂರಕ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ. ಎನ್‌ಐಎ ಪ್ರಕಾರ, ಆರೋಪಿಗಳು ಐಸಿಸ್ ಜೊತೆಗೂಡಿ ಶಿವಮೊಗ್ಗದಲ್ಲಿ (Shivamogga) ಐಇಡಿ ಟ್ರಯಲ್ ಬ್ಲಾಸ್ಟ್ (Trial Blast) ಮಾಡಿದ್ದರು. ಅಲ್ಲದೇ ಜನರಲ್ಲಿ ಭಯ ಮೂಡಿಸುವ ಸಲುವಾಗಿ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಇದನ್ನೂ ಓದಿ: ಚಲಿಸುತ್ತಿದ್ದ ಬಸ್ಸಿನಲ್ಲೇ ಮಹಿಳೆ ಜೊತೆ ಕಂಡಕ್ಟರ್ ಸೆಕ್ಸ್- ವೀಡಿಯೋ ವೈರಲ್
ಆರೋಪಿಗಳನ್ನು ಮೊಹಮ್ಮದ್ ಶಾರಿಖ್ (25), ಮಾಜ್ ಮುನೀರ್ ಅಹಮದ್ (23), ಸೈಯದ್ ಯಾಸಿನ್ (22), ರೀಶಾನ್ ತಾಜುದ್ದೀನ್ ಶೇಖ್ (22), ಹುಜೈರ್ ಫರ್ಹಾನ್ ಬೇಗ್ (22), ಮಜಿನ್ ಅಬ್ದುಲ್ ರಹಮಾನ್ (22), ನದೀಮ್ ಅಹಮದ್ ಕೆಎ (22), ಜಬೀವುಲ್ಲಾ (32) ಮತ್ತು ನದೀಮ್ ಫೈಝಲ್ ಎನ್ (27) ಎಂದು ಗುರುತಿಸಲಾಗಿದ್ದು, ಎಲ್ಲರೂ ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಆನ್‍ಲೈನ್ ಶಾಪಿಂಗ್‍ನಲ್ಲಿ ಬೆಂಗಳೂರಿಗರೇ ಮುಂದು – ಸರಾಸರಿ ಖರೀದಿಯಲ್ಲಿ ಮುಂಬೈ ಫಸ್ಟ್
ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ಕಾಯ್ದೆ, ಭಾರತೀಯ ದಂಡ ಸಂಹಿತೆ ಮತ್ತು ವಿನಾಶ ಮತ್ತು ಆಸ್ತಿ ನಷ್ಟ ತಡೆ 1981ರ ಕಾಯ್ದೆಯ ಅಡಿಯಲ್ಲಿ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಆರೋಪಿಗಳ ಪೈಕಿ ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ವಿರುದ್ಧ ಈ ವರ್ಷ ಮಾರ್ಚ್‌ನಲ್ಲಿ ಆರೋಪ ಪಟ್ಟಿ ಸಲ್ಲಿಸಿದ್ದು, ಈಗ ಇತರ ಆರೋಪಿಗಳ ಕುರಿತು ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತ – ಸಿಗ್ನಲಿಂಗ್, ಟ್ರಾಫಿಕ್ ಕಂಟ್ರೋಲ್ ವಿಭಾಗಗಳೇ ಹೊಣೆ
9 ಆರೋಪಿಗಳ ಪೈಕಿ ಮಾಜ್ ಮುನೀರ್ ಅಹಮದ್, ಸೈಯದ್ ಯಾಸಿನ್, ರೀಶಾನ್ ತಾಜುದ್ದೀನ್ ಶೇಖ್, ಮಜಿನ್ ಅಬ್ದುಲ್ ರಹಮಾನ್ ಮತ್ತು ನದೀಮ್ ಅಹಮದ್ ಕೆಎ ಮೆಕ್ಯಾನಿಕಲ್ (Mechanical) ಮತ್ತು ಎಲೆಕ್ಟ್ರಿಕಲ್ (Electrical) ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಭೀಕರ ಬಸ್ ದುರಂತ – 25 ಮಂದಿ ಸಜೀವ ದಹನ
ಆರೋಪಿಗಳು ರೋಬೊಟಿಕ್ಸ್ ಕಲಿತು ಭವಿಷ್ಯದಲ್ಲಿ ಭಾರತದಲ್ಲಿ ಐಸಿಸ್ ಅಜೆಂಡಾವನ್ನು ಮುಂದುವರಿಸುವ ಸಲುವಾಗಿ ಭಯೋತ್ಪಾದಕ ದಾಳಿಗಳನ್ನು ಮತ್ತು ಅದರ ಕೌಶಲ್ಯವನ್ನು ಕಲಿಯುವಂತೆ ವಿದೇಶಿ ಮೂಲದ ಐಸಿಸ್ ಹ್ಯಾಂಡ್ಲರ್‌ನಿಂದ ಟಾಸ್ಕ್ ನೀಡಲಾಗಿತ್ತು. ಅಲ್ಲದೇ ಮೊಹಮ್ಮದ್ ಶಾರಿಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಭಯೋತ್ಪಾದಕ ಸಂಘಟನೆಯಾದ ಐಎಸ್ ನಿರ್ದೇಶನದ ಮೇರೆಗೆ ಭಯೋತ್ಪಾದನೆ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ವಿದೇಶದಲ್ಲಿರುವ ಐಎಸ್ ಕಾರ್ಯಕರ್ತರೊಂದಿಗೆ ಶಾಮೀಲಾಗಿ ಕ್ರಿಮಿನಲ್ ಸಂಚುಗಳನ್ನು ರೂಪಿಸಿದ್ದರು ಎಂದು ಎನ್‌ಐಎ ತನಿಖೆಯಿಂದ ತಿಳಿದು ಬಂದಿದೆ. ಇದನ್ನೂ ಓದಿ: ಮಣಿಪುರ ಸಿಎಂ ಬಿರೇನ್ ಸಿಂಗ್ ರಾಜೀನಾಮೆ ಪತ್ರವನ್ನು ಹರಿದು ಹಾಕಿದ ಮಹಿಳೆ
ರಾಷ್ಟ್ರೀಯ ಭದ್ರತೆ, ಏಕತೆ ಮತ್ತು ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ಉದ್ದೇಶದಿಂದ ಮೂವರು ಆರೋಪಿಗಳು ಇತರೆ ಆರೋಪಿಗಳನ್ನು ನೇಮಕ ಮಾಡಿಕೊಂಡಿದ್ದರು. ಅವರ ಆನ್‌ಲೈನ್ ಹ್ಯಾಂಡ್ಲರ್ ಆರೋಪಿಗಳಿಗೆ ಕ್ರಿಪ್ಟೋ ಕರೆನ್ಸಿಗಳ (Crypto Currency) ಮೂಲಕ ಹಣವನ್ನು ನೀಡಲಾಗುತ್ತಿತ್ತು. ಈ ಟ್ರಯಲ್ ಬ್ಲಾಸ್ಟ್ ಕುರಿತು ಸೆಪ್ಟೆಂಬರ್ 19 2023ರಲ್ಲಿ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ನವೆಂಬರ್ 15ರಂದು ಈ ಪ್ರಕರಣವನ್ನು ಎನ್‌ಐಎ ತೆಗೆದುಕೊಂಡು ಕೇಸ್ ಅನ್ನು ಮರುದಾಖಲಿಸಿತ್ತು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅತೀಕ್ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿ ಬಡವರಿಗೆ ಹಂಚಿದ ಯೋಗಿ ಆದಿತ್ಯನಾಥ್
ಮಂಗಳೂರು: ಪ್ರವೀಣ್ ನೆಟ್ಟಾರ್ (Praveen Nettar) ಹತ್ಯೆ ಆರೋಪಿಗಳಿಗೆ ಶರಣಾಗಲು ಎನ್‌ಐಎ (NIA) ಕೊನೆಯ ವಾರ್ನಿಂಗ್ ನೀಡಿದ್ದು, ಆರೋಪಿಗಳು ಜೂನ್ 30ರ ಒಳಗೆ ಎನ್‌ಐಎ ನ್ಯಾಯಾಲಯಕ್ಕೆ ಶರಣಾಗಬೇಕು. ಇಲ್ಲವಾದಲ್ಲಿ ಆರೋಪಿಗಳ ಮನೆಯನ್ನು ಜಪ್ತಿ ಮಾಡಲಾಗುವುದು ಎಂದು ಖಡಕ್ ಆದೇಶ ಹೊರಡಿಸಿದೆ.
ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ (Bellare) ವಾಸವಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರ್ ಪೆರುವಾಜೆ ಕ್ರಾಸ್ ಬಳಿ ಕೋಳಿ ಮಾಂಸದ ಅಂಗಡಿ ನಡೆಸುತ್ತಿದ್ದರು. 2022ರ ಜುಲೈ 26ರಂದು ಅಂಗಡಿ ಮುಗಿಸಿ ಮನಗೆ ಹೊರಟ ವೇಳೆ ಬೈಕಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲ್ವಾರ್‌ನಿಂದ ಏಕಾಏಕಿ ಅವರ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ: ಅಕ್ಕಿ ಬದಲು ಹಣ ನೀಡುವ ಸರ್ಕಾರದ ನಿರ್ಧಾರಕ್ಕೆ ಕಟೀಲ್ ಖಂಡನೆ
ಇದರಿಂದ ತೀವ್ರ ಗಾಯಗೊಂಡಿದ್ದ ಪ್ರವೀಣ್ ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಕುತ್ತಿಗೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು. ಈ ಪ್ರಕರಣದ ತನಿಖೆಯನ್ನು ಅಂದಿನ ಬಿಜೆಪಿ ಸರ್ಕಾರ ಎನ್‌ಐಎಗೆ ಒಪ್ಪಿಸಿತ್ತು. ಈ ಹಿನ್ನೆಲೆ ತನಿಖೆ ಕೈಗೊಂಡಿರುವ ಎನ್‌ಐಎ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ. ಇದನ್ನೂ ಓದಿ: ಜುಲೈ 1 ರಿಂದ ಎಕ್ಸ್‌ಪ್ರೆಸ್ ವೇ 2ನೇ ಟೋಲ್ ಆರಂಭ, ಯಾವ ವಾಹನಗಳಿಗೆ ಎಷ್ಟು ಶುಲ್ಕ ?
ತನಿಖೆಯನ್ನು ಚುರುಕುಗೊಳಿಸಿರುವ ಎನ್‌ಐಎ ಸುಳ್ಯದಲ್ಲಿ ಮೈಕ್ ಘೋಷಣೆಯ ಮೂಲಕ ಆರೋಪಿಗಳಿಗೆ ಜೂನ್ 30ರ ಒಳಗೆ ಶರಣಾಗಲು ಡೆಡ್‌ಲೈನ್ ನೀಡಿದೆ. ಆರೋಪಿಗಳು ಶರಣಾಗದಿದ್ದರೆ ಅವರ ಮನೆಯನ್ನು ಜಪ್ತಿ (Seize) ಪಡಿಸುವುದಾಗಿ ಆದೇಶ ಹೊರಡಿಸಿದೆ. ಅಲ್ಲದೇ ಆರೋಪಿಗಳ ಸುಳಿವು ಕೊಟ್ಟಲ್ಲಿ ನಗದು ಬಹುಮಾನ ಕೊಡುವುದಾಗಿ ಘೋಷಿಸಿದೆ. ಇದನ್ನೂ ಓದಿ: 5 ಕೆ.ಜಿ ಅಕ್ಕಿ, ಉಳಿದ 5 ಕೆ.ಜಿ ಅಕ್ಕಿಯ ಹಣ ಕೊಡಲು ಸರ್ಕಾರ ನಿರ್ಧಾರ
ಇನ್ನು ಸುಳ್ಯದ ಕಲ್ಲುಮುಟ್ಟುವಿನಲ್ಲಿ ವಾಸವಿದ್ದ ಆರೋಪಿಗಳಾದ ಉಮ್ಮರ್ ಫಾರೂಕ್ ಮತ್ತು ಮುಸ್ತಫಾ ಮನೆಗೆ ಭೇಟಿ ನೀಡಿದ ಎನ್‌ಐಎ ಅಧಿಕಾರಿಗಳು ಅವರ ಮನೆಗೆ ಎನ್‌ಐಎ ನ್ಯಾಯಾಲಯದ ಆದೇಶ ಪ್ರತಿಯನ್ನು ಅಂಟಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಆರೋಪಿಗಳು ಶರಣಾಗುವಂತೆ ಎನ್‌ಐಎ ಸೂಚಿಸಿದ್ದು, ಇಲ್ಲವಾದಲ್ಲಿ ಅವರಿಗೆ ಸೇರಿದ ಸಕಲ ಆಸ್ತಿಗಳನ್ನು ಜಪ್ತಿ ಮಾಡುವುದಾಗಿ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಬಿಜೆಪಿ ಅವಧಿಯ ಅಕ್ರಮಗಳನ್ನು ವಿವಿಧ ತನಿಖಾ ಸಂಸ್ಥೆಗಳ ಮೂಲಕ ತನಿಖೆ: ಪ್ರಿಯಾಂಕ್ ಖರ್ಗೆ