Tag: NIA

  • ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್; ಆರೋಪಿ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ NIA

    ಪ್ರವೀಣ್‌ ನೆಟ್ಟಾರು ಹತ್ಯೆ ಕೇಸ್; ಆರೋಪಿ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ಘೋಷಿಸಿದ NIA

    ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು (Praveen Nettaru) ಹತ್ಯೆ ಪ್ರಕರಣದ ನಂ.23ನೇ ಆರೋಪ ಸುಳಿವು ಕೊಟ್ಟವರಿಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಎನ್‌ಐಎ (NIA) ಘೋಷಿಸಿದೆ.

    ಈ ಸಂಬಂಧ ಎನ್‌ಐಎ ರಿವಾರ್ಡ್‌ ವಾಂಟೆಡ್‌ ನೋಟಿಸ್‌ ಅನ್ನು ಬಿಡುಗಡೆ ಮಾಡಿದೆ. ಆರೋಪಿ ನಂ.23 ನೌಷಾದ್‌ನ ಸುಳಿವಿಗೆ 2 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ತಿಳಿಸಿದೆ. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕೇಸ್‌ – ದಕ್ಷಿಣ ಕನ್ನಡ, ಕೊಡಗಿನಲ್ಲಿ PFI ಕಾರ್ಯಕರ್ತರ ಮನೆ ಮೇಲೆ NIA ದಾಳಿ

    ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಲೂಕಿನ ಪಡಂಗಡಿ ಗ್ರಾಮದ ಹಮೀದ್ ಮಗ ನೌಷಾದ್. ಈತ ನಿಷೇಧಿತ ಪಿಎಫ್ಐ ಸಂಘಟನೆಯ ಕಾರ್ಯಕರ್ತನಾಗಿದ್ದ ಎನ್ನಲಾಗಿದೆ. ಪ್ರಕರಣ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    ಏನಿದು ಪ್ರಕರಣ?
    ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರುವಾಜೆ ಕ್ರಾಸ್ ಬಳಿ ಅಕ್ಷಯ್ ಕೋಳಿ ಮಾಂಸದ ಅಂಗಡಿ ಹೊಂದಿದ್ದ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ಅವರು ಜುಲೈ 26 ರಂದು ರಾತ್ರಿ 8 ಗಂಟೆಗೆ ಅಂಗಡಿ ಮುಚ್ಚಿ ಮನೆ ಕಡೆ ಹೊರಟಿದ್ದರು. ಈ ವೇಳೆ ಬೈಕಿನಲ್ಲಿ ಬಂದಿದ್ದ ಮೂವರು ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ಪ್ರವೀಣ್‌ ನೆಟ್ಟಾರು ಕನಸು ನನಸು – ನೂತನ ಮನೆಯ ಗೃಹ ಪ್ರವೇಶ, ಸ್ಮಾರಕ ಲೋಕಾರ್ಪಣೆ

    ತಕ್ಷಣ ಪುತ್ತೂರು ಆಸ್ಪತ್ರೆಗೆ ಪ್ರವೀಣ್‌ ಅವರನ್ನು ದಾಖಲಿಸಿದರೂ ಕುತ್ತಿಗೆಯ ಭಾಗಕ್ಕೆ ತೀವ್ರ ಏಟು ಬಿದ್ದ ಕಾರಣ ಚಿಕಿತ್ಸೆ ಫಲಕರಿಯಾಗದೇ ಮೃತಪಟ್ಟಿದ್ದರು. ಪ್ರಕರಣ ಸಂಬಂಧ ಈವರೆಗೆ ಹಲವಾರು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡ್‍ನ ಆಸ್ತಿ ಜಪ್ತಿ

    ಖಲಿಸ್ತಾನಿ ಉಗ್ರ ಲಖ್ಬೀರ್ ಸಿಂಗ್ ರೋಡ್‍ನ ಆಸ್ತಿ ಜಪ್ತಿ

    ಚಂಡೀಗಢ: ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹಾಗೂ ಭಯೋತ್ಪಾದನಾ ನಿಗ್ರಹ ದಳದ ದಾಳಿಯ ನಂತರ ಖಲಿಸ್ತಾನಿ ಭಯೋತ್ಪಾದಕ (Khalistani Terrorist) ಲಖ್ಬೀರ್ ಸಿಂಗ್ ರೋಡ್‍ನ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.

    ನಿಷೇಧಿತ ಸಂಘಟನೆ ಇಂಟರ್‌ನ್ಯಾಶನಲ್ ಸಿಖ್ ಯೂತ್ ಫೆಡರೇಶನ್ (ಐಎಸ್‍ವೈಎಫ್) ಮುಖ್ಯಸ್ಥ ಲಖ್ಬೀರ್ ಸಿಂಗ್ ರೋಡ್‍ನನ್ನು ಕೇಂದ್ರ ಸರ್ಕಾರ ಭಯೋತ್ಪಾದಕರ ಪಟ್ಟಿಗೆ ಸೇರಿಸಿತ್ತು. ಆತನ ಪಂಜಾಬ್‍ನ‌ (Punjab) ಮೊಗಾದಲ್ಲಿರುವ ಮನೆ ಹಾಗೂ ಆಸ್ತಿಯನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆತನ ವಿರುದ್ಧ ಹಲವಾರು ಭಯೋತ್ಪಾದಕ ಕೃತ್ಯ ಎಸಗಿರುವ ಪ್ರಕರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಕಾಲಿಗೆ ಬಿದ್ದ ಶಾಸಕ ಮುನಿರತ್ನ

    ಆರ್‌ಡಿಎಕ್ಸ್ ಸೇರಿದಂತೆ ಶಸ್ತ್ರಾಸ್ತ್ರ ಮತ್ತು ಸ್ಫೋಟಕ ಕಳ್ಳಸಾಗಣಿಕೆಯಲ್ಲಿ ಆತನ ಪಾತ್ರವಿದೆ. ನವದೆಹಲಿಯ ಸರ್ಕಾರಿ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದ. ಅಲ್ಲದೇ ಪಂಜಾಬ್‍ನಲ್ಲಿ ದ್ವೇಷವನ್ನು ಹರಡುವುದರಲ್ಲಿ ಆತನ ಪ್ರಮುಖಪಾತ್ರವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎನ್‍ಐಎ ವಿಶೇಷ ನ್ಯಾಯಾಲಯದ ಆದೇಶದ ನಂತರ ಅಧಿಕಾರಿಗಳು ಆತನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದನ್ನೂ ಓದಿ: ನಾಂದೆಡ್ ಆಸ್ಪತ್ರೆಯಲ್ಲಿ 8 ದಿನಗಳಲ್ಲಿ 108 ಮಂದಿ ದುರ್ಮರಣ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಶಂಕಿತ ಐಸಿಸ್ ಉಗ್ರನ ಬಂಧನ

    ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿದ್ದ ಶಂಕಿತ ಐಸಿಸ್ ಉಗ್ರನ ಬಂಧನ

    ನವದೆಹಲಿ: ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿರುವ ಶಂಕಿತ ಐಸಿಸ್ (ISIS) ಉಗ್ರನನ್ನು (Suspected Terrorist) ಭಯೋತ್ಪಾದನಾ ನಿಗ್ರಹ ದಳ ಕಾರ್ಯಾಚರಣೆ ನಡೆಸಿ ದೆಹಲಿಯಲ್ಲಿ (New Delhi) ಬಂಧಿಸಿದೆ ಎಂದು ವರದಿಗಳು ತಿಳಿಸಿವೆ.

    ಶಹನವಾಜ್ ಅಲಿಯಾಸ್ ಶಫಿ ಉಜ್ಜಮಾ ಸೇರಿ ಮತ್ತಿಬ್ಬರು ಶಂಕಿತ ಭಯೋತ್ಪಾದಕರನ್ನು ದೆಹಲಿ ಪೊಲೀಸ್ ವಿಶೇಷ ದಳ ಸೋಮವಾರ ಬಂಧಿಸಿದೆ. ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಶಹನವಾಜ್ ಪುಣೆ ಮಾಡ್ಯೂಲ್ ಪ್ರಕರಣದ ಆರೋಪಿಯಾಗಿದ್ದ. ಈತ ಮೂಲತಃ ದೆಹಲಿಯವನು ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಈತನನ್ನು ಪುಣೆಯಲ್ಲಿ ಬಂದಿಸಲಾಗಿತ್ತು. ಆದರೆ ಈತ ಪೊಲೀಸರಿಂದ ತಪ್ಪಿಸಿಕೊಂಡು ದೆಹಲಿಯ ಅಡಗುತಾಣವೊಂದರಲ್ಲಿ ತಲೆಮರೆಸಿಕೊಂಡಿದ್ದ. ಇದೀಗ ಆತನನ್ನು ಬಂಧಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ದೆಹಲಿಯಲ್ಲಿ ಐಸಿಸ್ ಮಾಡ್ಯೂಲ್‌ನ ಸುಳಿವು ಸಿಕ್ಕಿದ ಬಳಿಕ ಈ ಶಂಕಿತ ಭಯೋತ್ಪಾದಕರನ್ನು ಬಂಧಿಸಲಾಗಿದೆ. ಈ ಶಂಕಿತರು ವಿದೇಶಿ ಮೂಲದ ಹ್ಯಾಂಡ್ಲರ್‌ಗಳ ಸೂಚನೆಗಳ ಆಧಾರದ ಮೇಲೆ ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಮಾಡ್ಯೂಲ್ ಯೋಜಿಸಿದ್ದರು. ಇದನ್ನೂ ಓದಿ: ಗಡಿಯಲ್ಲಿ ಚೀನಾ, ಪಾಕ್ ತಂಟೆಗೆ ಬ್ರೇಕ್ ಹಾಕಲು ಸೇನೆಗೆ `ಪ್ರಚಂಡ’ ಬಲ

    ಈ ಹಿಂದೆ ಶಹನವಾಜ್ ಮತ್ತು ಇತರ ಮೂವರು ಶಂಕಿತ ಉಗ್ರರಾದ ರಿಜ್ವಾನ್ ಅಬ್ದುಲ್ ಹಾಜಿ ಅಲಿ, ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಾಪರ್ವಾಲ ಮತ್ತು ತಲ್ಹಾ ಲಿಯಾಕತ್ ಖಾನ್ ಬಗ್ಗೆ ಮಾಹಿತಿ ನೀಡಿದವರಿಗೆ ತಲಾ 3 ಲಕ್ಷ ರೂ. ನಗದು ಬಹುಮಾನ ಕೊಡುವುದಾಗಿ ಎನ್‌ಐಎ ಘೋಷಿಸಿತ್ತು. ಇದನ್ನೂ ಓದಿ: ವಿಮಾನದಲ್ಲಿ ಮಗುವಿಗೆ ದಿಢೀರ್ ಉಸಿರಾಟ ಸ್ಥಗಿತ – ಮರುಜೀವ ನೀಡಿದ ವೈದ್ಯ, ಐಎಎಸ್ ಅಧಿಕಾರಿ

    ಈ ನಾಲ್ವರೂ ಮಹಾರಾಷ್ಟ್ರದ ಪುಣೆಯಲ್ಲಿರುವ ಭಯೋತ್ಪಾದಕ ಸಂಘಟನೆ ಐಸಿಸ್‌ನ ಮಾಡ್ಯೂಲ್‌ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂದು ಶಂಕೆ ವ್ಯಕ್ತಪಡಿಸಲಾಗಿದೆ. ಪುಣೆಯಲ್ಲಿ ಐಸಿಸ್ ಸಂಬಂಧಿತ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪದ ಮೇಲೆ ಎನ್‌ಐಎ ಕಳೆದ ತಿಂಗಳು ಹಲವರನ್ನು ಬಂಧಿಸಿತ್ತು. ಐಸಿಸ್‌ನ ಪುಣೆ ಘಟಕವು ದೇಶದಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕದಡುವ ಯೋಜನೆಗಳನ್ನು ಹೊಂದಿತ್ತು ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: 350 ವರ್ಷಗಳ ಬಳಿಕ ಭಾರತಕ್ಕೆ ಮರಳಲಿದೆ ಶಿವಾಜಿ ಮಹಾರಾಜರ `ವ್ಯಾಘ್ರ ನಖ’

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಇಂಫಾಲ್: ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಮೂಲದ ಭಯೋತ್ಪಾದಕ ಸಂಘಟನೆಗಳು (Terrorist Group) ಮಣಿಪುರದಲ್ಲಿನ ಜನಾಂಗೀಯ ಹಿಂಸಾಚಾರ (Manipur Violence) ಬಳಸಿಕೊಂಡು ಭಾರತದ ವಿರುದ್ಧವೇ ಯುದ್ಧ ಮಾಡುವ ಸಂಚು ರೂಪಿಸಿದ್ದ ಪ್ರಕರಣದಲ್ಲಿ ಮಣಿಪುರದ ಬೆಟ್ಟದ ಜಿಲ್ಲೆ ಚುರಾಚಂದ್‌ಪುರದಲ್ಲಿ ಶಂಕಿತನನ್ನು ಭಯೋತ್ಪಾದನಾ ನಿಗ್ರಹ ದಳ ಬಂಧಿಸಿದೆ. ಶಂಕಿತ ಉಗ್ರನ ವಿಚಾರಣೆಗಾಗಿ ದೆಹಲಿಗೆ ಕರೆತರಲಾಗಿದೆ.

    ಮಣಿಪುರದಲ್ಲಿ ಜನಾಂಗೀಯ ದ್ವೇಷದಿಂದ ಉಂಟಾದ ಹಿಂಸಾಚಾರವನ್ನ ಬಳಸಿಕೊಂಡು ಭಾರತದ ವಿರುದ್ಧವೇ ಕೃತ್ಯ ಎಸಗಲು ಎರಡೂ ದೇಶಗಳ ಭಯೋತ್ಪಾದಕ ಸಂಘಟನೆಗಳು ಸಂಚು ರೂಪಿಸಿದ್ದವು ಎಂದು ರಾಷ್ಟ್ರೀಯ ತನಿಖಾ ದಳ (NIA) ತಿಳಿಸಿದೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಆಫ್ಸ್ಪಾ ಜಾರಿ – ಈ ಕಾಯ್ದೆಯ ವಿಶೇಷತೆ ಏನು?

    ಈ ಕುರಿತು ಟ್ವಿಟ್ಟರ್ (X) ಖಾತೆಯಲ್ಲಿ ಪತ್ರಿಕಾ ಪ್ರಕಟಣೆ ಹಂಚಿಕೊಂಡಿರುವ NIA, ಆರೋಪಿಯನ್ನು ಸೆಮಿನ್‌ಲುನ್ ಗ್ಯಾಂಗ್ಟೆ ಎಂದು ಹೆಸರಿಸಿದೆ. ಈತ ಮಣಿಪುರದಲ್ಲಿ ಅಶಾಂತಿ ಮತ್ತು ಜನಾಂಗೀಯ ದ್ವೇಷವನ್ನ ಬಳಸಿಕೊಂಡು ಭಾರತದ ವಿರುದ್ಧ ಯುದ್ಧ ರೂಪಿಸಲು ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆಗಳೊಂದಿಗೆ ಕೈಜೋಡಿಸಿದ್ದ. ಸಂಘಟನೆಗಳ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ತಿಳಿಸಿದೆ. ಇದನ್ನೂ ಓದಿ: ತಾಯಿ, ಸಹೋದರಿಯರಿಗೆ ಅವಮಾನ – ದೇಶವೇ ಮಣಿಪುರದೊಂದಿಗೆ ನಿಂತಿದೆ: ಮೋದಿ

    ಆರೋಪಿ ಸೆಮಿನ್‌ಲುನ್ ಗ್ಯಾಂಗ್ಟೆ (Seiminlun Gangte) ಕಳೆದ ಜೂನ್ 22 ರಂದು ಮಣಿಪುರದ ಕ್ವಾಕ್ಟಾದಲ್ಲಿ ಕಾರ್‌ಬಾಂಬ್ ಸ್ಫೋಟದಲ್ಲಿ ವ್ಯಕ್ತಿಯೊಬ್ಬನ ಹತ್ಯೆಗೆ ಕಾರಣವಾಗಿದ್ದ ಎಂಬುದು ಪೊಲೀಸರಿಂದ ತಿಳಿದುಬಂದಿದೆ. ಅಂದು ಸಣ್ಣ ಸೇತುವೆಯ ಮೇಲೆ ನಿಂತಿದ್ದ ಕಾರು ಸ್ಫೋಟಗೊಂಡ ನಂತರ ಮಣಿಪುರದಲ್ಲಿ ಹಿಂಸಾಚಾರ ಮತ್ತಷ್ಟು ತೀವ್ರಗೊಂಡಿತ್ತು. ಇದು ತರಬೇತಿ ಪಡೆದ ಭಯೋತ್ಪಾದಕ ಕೈಗಳಿಂದ ನಡೆದ ದಾಳಿಯಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿತ್ತು.

    ಇದೀಗ ಗ್ಯಾಂಗ್ಟೆಯನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಆದ್ರೆ ಈತ ಯಾವ ಭಯೋತ್ಪಾದಕ ಗುಂಪಿಗೆ ಸೇರಿದವನೆಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಎನ್‌ಐಎ ಹೇಳಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಯೋತ್ಪಾದಕ ಚಟುವಟಿಕೆ- 6 ರಾಜ್ಯಗಳ 51 ಸ್ಥಳಗಳಲ್ಲಿ NIA ದಾಳಿ

    ಭಯೋತ್ಪಾದಕ ಚಟುವಟಿಕೆ- 6 ರಾಜ್ಯಗಳ 51 ಸ್ಥಳಗಳಲ್ಲಿ NIA ದಾಳಿ

    ನವದೆಹಲಿ: ಭಯೋತ್ಪಾದಕರು ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡವರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ತೀವ್ರ ಕಾರ್ಯಾಚರಣೆ ನಡೆಸುತ್ತಿದೆ. ಉತ್ತರದ ರಾಜ್ಯಗಳಲ್ಲಿ ಕಾರ್ಯಚರಿಸುತ್ತಿರುವ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರು ರಾಜ್ಯಗಳಲ್ಲಿ ಇಂದು ಎನ್‌ಐಎ ಪ್ರಮುಖ ದಾಳಿ ನಡೆಸುತ್ತಿದೆ.

    ಲಾರೆನ್ಸ್ ಬಿಷ್ಣೋಯ್, ಬಾಂಬಿಹಾ ಮತ್ತು ಅರ್ಷದೀಪ್ ದಲ್ಲಾ ಗ್ಯಾಂಗ್‌ಗಳ ಸಹಚರರಿಗೆ ಸೇರಿದ 51 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಮಾರ್ಚ್‌ನಲ್ಲಿ ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಯಲ್ಲಿ ಕಾರ್ಯಾಚರಿಸುತ್ತಿರುವ ಗ್ಯಾಂಗ್‌ಸ್ಟರ್‌ಗಳಿಗೆ ಸೇರಿರುವ ಆಸ್ತಿಯನ್ನು ಎನ್‌ಐಎ ಮುಟ್ಟುಗೋಲು ಹಾಕಿಕೊಂಡಿತ್ತು. ಇದನ್ನೂ ಓದಿ: ಝಡ್ ಪ್ಲಸ್ ಭದ್ರತೆ ಇದ್ರೂ ಚಂದ್ರಬಾಬು ನಾಯ್ಡುಗೆ ಜೈಲಲ್ಲಿ ಸೊಳ್ಳೆ ಕಾಟ- ಡೆಂಗ್ಯೂ ಭೀತಿ

    ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಐಪಿಸಿ ಮತ್ತು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆ 1967ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆಗಸ್ಟ್ 2020ರಂದು ಎನ್‌ಐಎ ಸುಮೊಟೊ ಪ್ರಕರಣವನ್ನು ದಾಖಲಿಸಿದೆ. ಇದನ್ನೂ ಓದಿ: ಪಾಕಿಸ್ತಾನಕ್ಕೆ ಸೇನಾ ವಾಹನಗಳ ಮಾಹಿತಿ ರವಾನೆ – ಸೇನೆಯ ಮಾಜಿ ಸಿಬ್ಬಂದಿ ಅರೆಸ್ಟ್

    ದಾಲ ಕಳೆದ 3-4 ವರ್ಷಗಳಿಂದ ಕೆನಡಾದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪಂಜಾಬ್‌ನಲ್ಲಿ ಹಲವು ಹತ್ಯೆಗಳನ್ನು ನಡೆಸಿದ್ದಾನೆ. ಅಲ್ಲದೇ ಭಾರತದಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ದೊಡ್ಡ ಪ್ರಮಾಣದ ಸುಲಿಗೆಯನ್ನು ದಾಲ ಉತ್ತೇಜಿಸುತ್ತಿದ್ದಾನೆ. ಭಯೋತ್ಪಾದಕ ಗ್ಯಾಂಗ್‌ಸ್ಟರ್ ಸಂಚು ಪ್ರಕರಣದಲ್ಲಿ ಎನ್‌ಐಎ ಇದುವರೆಗೆ 16 ಜನರನ್ನು ಬಂಧಿಸಿದೆ. ಈ ಕುರಿತು ಹೆಚ್ಚಿನ ತನಿಖೆಗಳು ಮುಂದುವರಿಯುತ್ತಿವೆ. ಇದನ್ನೂ ಓದಿ: ನಡ್ಡಾ ಪ್ರಾರ್ಥನೆ ವೇಳೆ ಗಣೇಶ ಪೆಂಡಾಲ್‍ನಲ್ಲಿ ಅಗ್ನಿ ದುರಂತ – ಪವಾಡದಂತೆ ಸುರಿದ ಮಳೆಯಿಂದ ತಪ್ಪಿದ ಅನಾಹುತ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು

    ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟ ತಮಿಳುನಾಡು

    ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಯಲ್ಲಿ ತಮಿಳುನಾಡು (Tamil Nadu) ಬರೋಬ್ಬರಿ 83 ಟಿಎಂಸಿ ನೀರಿಗೆ ಬೇಡಿಕೆ ಇಟ್ಟಿದೆ.

    ಕರ್ನಾಟಕ ಮತ್ತು ತಮಿಳುನಾಡು ಪ್ರತಿನಿಧಿಗಳ ಜೊತೆ CWRC ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸುತ್ತಿದೆ. ಸೆ.13ರಂದು ಹದಿನೈದು ದಿನ ನಿತ್ಯ 5,000 ಕ್ಯೂಸೆಕ್ ಕಾವೇರು ನೀರು (Cauvery Water) ಹರಿಸುವಂತೆ ನೀಡಿದ ಆದೇಶ ಇಂದಿಗೆ ಅಂತ್ಯವಾಗುತ್ತಿರುವ ಹಿನ್ನೆಲೆ ಈ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.

    ಈ ಚರ್ಚೆಯ ವೇಳೆ ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ 123 ಟಿಎಂಸಿ ಹರಿಸಬೇಕಿತ್ತು. ಕರ್ನಾಟಕ (Karnataka) ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಹೀಗಾಗಿ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ವಾದ ಮಂಡಿಸಿದೆ.  ಇದನ್ನೂ ಓದಿ: Bengaluru Bandh: ಬಂದೋಬಸ್ತ್‌ನಲ್ಲಿದ್ದ ಪೊಲೀಸರಿಗೆ ಕೊಟ್ಟ ಟಿಫನ್‍ನಲ್ಲಿ ಇಲಿ!

    ಸಮಿತಿ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಾರದು. ಅಕ್ಟೋಬರ್‌ 22 ಟಿಎಂಸಿ ನೀರನ್ನು ಸಹ ಕರ್ನಾಟಕ ಹರಿಸಬೇಕು. ರಾಜ್ಯಕ್ಕೆ ಹರಿಸಬೇಕಾದ ನೀರನ್ನು ಸಮಿತಿ ಕೊಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಬೇಡಿಕೆ ಇಟ್ಟಿದೆ.  ಎರಡೂ ರಾಜ್ಯಗಳಲ್ಲಿ ರೈತರ ಹೋರಾಟ ತೀವ್ರವಾಗುತ್ತಿರುವ ಹೊತ್ತಲ್ಲಿ ಕಾವೇರಿ ನೀರು ನಿಯಂತ್ರಣ ಸಮಿತಿ ಹೈವೋಲ್ಟೇಜ್‌ ಸಭೆ ನಡೆಯುತ್ತಿದೆ.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿದೇಶದಲ್ಲಿರುವ ಖಲಿಸ್ತಾನ್‌ ಉಗ್ರರಿಗೆ ಶಾಕ್‌ – OCI Card ರದ್ದು

    ವಿದೇಶದಲ್ಲಿರುವ ಖಲಿಸ್ತಾನ್‌ ಉಗ್ರರಿಗೆ ಶಾಕ್‌ – OCI Card ರದ್ದು

    ನವದೆಹಲಿ: ವಿದೇಶದಲ್ಲಿದ್ದುಕೊಂಡು ಭಾರತದ ವಿರುದ್ಧ ಕಿತಾಪತಿ ಮಾಡುತ್ತಿರುವ ಖಲಿಸ್ತಾನ್‌ ಉಗ್ರರಿಗೆ (Khalistan Terrorist) ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಈಗ ಮುಂದಾಗಿದೆ.

    ಅಮೆರಿಕ, ಯುಕೆ, ಕೆನಡಾ, ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಎಲ್ಲಾ ಖಲಿಸ್ತಾನಿ ಉಗ್ರರನ್ನು ಪತ್ತೆ ಹಚ್ಚಿ ಅವರ ಒಸಿಐ ಕಾರ್ಡ್‌ (OCI Card) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗೆ ಸೂಚಿಸಿದೆ ಎಂದು ವರದಿಯಾಗಿದೆ.

    ಕೇಂದ್ರ ಸರ್ಕಾರ ಒಸಿಐ ಕಾರ್ಡ್‌ ರದ್ದುಗೊಳಿಸಿದರೆ ಅವರು ಮರಳಿ ಭಾರತಕ್ಕೆ ಬರಲು ಸಾಧ್ಯವಿಲ್ಲ. ಇದನ್ನೂ ಓದಿ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಬುರ್ಕಾ ಧರಿಸಿ ನೃತ್ಯ – ವ್ಯಕ್ತಿ ಬಂಧನ

     

    ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಉಗ್ರ ಗುರುಪತ್‌ವಂತ್‌ ಸಿಂಗ್‌ ಪನ್ನು (Gurpatwant Singh Pannu) ಭಾರತದಲ್ಲಿ ಹೊಂದಿದ್ದ ಆಸ್ತಿಯನ್ನು ರಾಷ್ಟ್ರೀಯ ತನಿಖಾ ದಳ (NIA) ಮುಟ್ಟುಗೋಲು ಹಾಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈಗ ವಿದೇಶದಲ್ಲಿ ನೆಲೆಸಿರುವ ಇತರೇ ಖಲಿಸ್ತಾನ್‌ ಉಗ್ರರ ಆಸ್ತಿ ಮುಟ್ಟುಗೋಲು ಹಾಕಲು ಸೂಚಿಸಿದೆ.

    ಚಂಡಿಗಢ ಮತ್ತು ಅಮೃತಸರದಲ್ಲಿ ಗುರುಪತ್‌ವಂತ್‌ ಸಿಂಗ್‌ ಪನ್ನು ಹೊಂದಿದ್ದ ಆಸ್ತಿಯನ್ನು ಎನ್‌ಐಎ ಮುಟ್ಟುಗೋಲು ಹಾಕಿದ ಬಳಿಕ  ಸರ್ಕಾರ ಈಗ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ.

    ಏನಿದು ಒಸಿಐ ಕಾರ್ಡ್‌?
    ಭಾರತೀಯ ಮೂಲದ ವಿದೇಶಿ ಪ್ರಜೆಗೆ ಭಾರತ ನೀಡಿದ ಕಾನೂನಿನ ಸ್ಥಾನಮಾನ ಓಸಿಐ. ಇದರಿಂದಾಗಿ ವ್ಯಕ್ತಿಗೆ ಭಾರತದ ಶಾಶ್ವತ ಪ್ರಜೆ ಎಂಬ ಸ್ಥಾನ ಸಿಗುವುದಾದರೂ ಪೌರತ್ವ ಸಿಗುವುದಿಲ್ಲ. ವೀಸಾ ಹೊಂದಿರುವವರಿಗಿಂತ ಓಸಿಐ ಕಾರ್ಡ್‌ ಹೆಚ್ಚಿನ ಪ್ರಯೋಜನ ನೀಡುತ್ತದೆ ಶಾಶ್ವತವಾಗಿ ಭಾರತದ ವೀಸಾ ಇವರಿಗೆ ಇರುತ್ತದೆ. ಎಷ್ಟು ಬಾರಿ ಬೇಕಾದರೂ ಇವರು ಭಾರತಕ್ಕೆ ಬರಬಹುದು. ಇಲ್ಲಿ ವಾಸ, ಕೆಲಸ ಹಾಗೂ ವ್ಯಾಪಾರವನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ಮುಂದುವರಿಸಬಹುದು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ISIS ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಯುವಕನಿಗೆ ಆರ್ಥಿಕ ಸಂಕಷ್ಟ

    ISIS ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಯುವಕನಿಗೆ ಆರ್ಥಿಕ ಸಂಕಷ್ಟ

    ಯಾದಗಿರಿ: ಉಗ್ರನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಯಾದಗಿರಿ (Yadgir) ಜಿಲ್ಲೆಯ ಶಹಾಪುರದ ವ್ಯಕ್ತಿಯೊಬ್ಬನನ್ನ ಜಾರ್ಖಂಡ್‌ನ ಎನ್‌ಐಎ (Jharkhand NIA Team) ತಂಡ ವಿಚಾರಣೆ ನಡೆಸಿತ್ತು. ರಾಂಚಿಯ ಇನ್ಸ್ಪೆಕ್ಟರ್ ಸಚ್ಚಿದಾನಂದ ಶರ್ಮಾ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಶಹಾಪುರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿತ್ತು. ಅಧಿಕಾರಿಗಳು ವಿಚಾರಣೆ ನಡೆಸಿ ತೆರಳಿದ ಬಳಿಕ ಆತ ಆರ್ಥಿಕ ಸಂಕಷ್ಟ ಎದುರಿಸುತ್ತಿರುವುದು ತಿಳಿದುಬಂದಿದೆ.

    ಉಗ್ರನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ರಂದು ರಾಂಚಿಯ NIA ಕಚೇರಿಗೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಯುವಕನಿಗೆ ನೋಟಿಸ್ ಕಳುಹಿಸಿದ್ದರು. ಆದ್ರೆ ಹಣಕಾಸಿನ ಸಮಸ್ಯೆಯಿಂದ ಯುವಕ ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನೂ ಓದಿ: 2 ತಿಂಗಳ ಹಿಂದೆಯೇ ಚೈತ್ರಾ ಕುಂದಾಪುರ ವಿಚಾರ ನನ್ನ ಗಮನಕ್ಕೆ ಬಂದಿತ್ತು: ಶರಣ್ ಪಂಪ್‍ವೆಲ್

    ನಮ್ಮ ಕುಟುಂಬ ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದೆ, ರಾಂಚಿಗೆ ಪ್ರಯಾಣ ಮಾಡಲು ನಮ್ಮ ಬಳಿ ಹಣ ಇಲ್ಲ. ಕುಟುಂಬದ ಸದಸ್ಯರು ಹಾಗೂ ಆತ್ಮೀಯರಿಗೆ ಹಣ ನೀಡುವಂತೆ ಮನವಿ ಮಾಡಿದರೂ ಯಾರೂ ಸಹಾಯ ಮಾಡುತ್ತಿಲ್ಲ ಎಂದು ಯುವಕನ ತಂದೆ ತಿಳಿಸಿದ್ದಾರೆ.

    ನಮ್ಮ ಸಮಸ್ಯೆ ಕುರಿತು ಅಧಿಕಾರಿಗಳಿಗೆ ಇ-ಮೇಲ್ ಮಾಡಲಾಗಿತ್ತು. ಬುಧವಾರ ಬೆಳಿಗ್ಗೆ ಸಹ ಅಧಿಕಾರಿಗಳಿಗೆ ಕರೆ ಮಾಡಿದ್ದೆವು. ಆದರೆ ಅವರು ಕರೆ ಸ್ವೀಕರಿಸಿಲ್ಲ. ನಮ್ಮ ಗ್ಯಾರೇಜ್ ಬಳಿಗೆ ಸ್ಥಳೀಯ ಪೊಲೀಸರು ಬೆಳಿಗ್ಗೆ ಬಂದು ಮಗ ಇರುವ ಬಗ್ಗೆ ಖಚಿತಪಡಿಸಿಕೊಂಡು ಹೋಗಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕಾವೇರಿ ಹೋರಾಟಕ್ಕೆ ಯಾವಾಗಲೂ ನಾನು ಸಿದ್ಧ : ನಟ ನಿಖಿಲ್ ಕುಮಾರ್

    ರಾಂಚಿಯಲ್ಲಿ ಬಂಧಿತ ಐಸಿಸ್ ಉಗ್ರ ಫೈಯಾಜ್ ಜೊತೆಗೆ ಸಂಪರ್ಕ ಹೊಂದಿದ ಶಂಕೆಯ ಹಿನ್ನೆಲೆಯಲ್ಲಿ ನಗರದ ಹಳೆಪೇಟೆಯಲ್ಲಿರುವ ಯುವಕನ ಮನೆ ಮೇಲೆ ಇತ್ತೀಚೆಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಸೆ.20ರಂದು ರಾಂಚಿಯ ಎನ್‌ಐಎ ಕಚೇರಿಗೆ ಬರುವಂತೆ ಎನ್‌ಐಎ ಶಾಖೆಯ ಇನ್‌ಸ್ಪೆಕ್ಟರ್ ಸಚ್ಚಿದಾನಂದ ನೋಟಿಸ್ ನೀಡಿ ವಾಪಸ್ ತೆರಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಸೂತ್ರಧಾರ ದೆಹಲಿಯಲ್ಲಿ ಅರೆಸ್ಟ್‌

    ನವದೆಹಲಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Mangaluru Cooker Bomb Explosion Case) ಸಂಚು ರೂಪಿಸಿದ್ದ ಐಸಿಸ್ ಉಗ್ರ ಸಂಘಟನೆಯ ಸಂಚುಕೋರ, ಕರ್ನಾಟಕದ ಶಿವಮೊಗ್ಗ (Shivamogga) ಮೂಲದ ಅರಾಫತ್ ಅಲಿಯನ್ನು (Arafath Ali ) ರಾಷ್ಟ್ರೀಯ ತನಿಖಾದ ಸಂಸ್ಥೆ(NIA) ಬಂಧಿಸಿದೆ.

    ಕೀನ್ಯಾ ರಾಜಧಾನಿ ನೈರೋಬಿಯಿಂದ ಆತ ದೆಹಲಿಗೆ (Delhi) ಬಂದಿಳಿಯುತ್ತಿದ್ದಂತೆ ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುತ್ತಿದೆ. ಅಲಿ 2020 ರಿಂದ ಐಸಿಸ್ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ. ಭಾರತದಲ್ಲಿ ನೆಲೆಸದೇ ಇದ್ದರೂ ಐಎಸ್‌ನ ಭಾರತ ವಿರೋಧಿ ಭಯೋತ್ಪಾದಕ ಅಜೆಂಡಾವನ್ನು ಉತ್ತೇಜಿಸಲು ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದ.  ಇದನ್ನೂ ಓದಿ: ಗಗನ್, ಧನಂಜಯ್, ಚೈತ್ರಾ ಕುಂದಾಪುರ ಪರಿಚಯವಾಗಿದ್ದು ಹೇಗೆ?: ಡೀಲ್ ಕೇಸ್‍ನ ಸಂಪೂರ್ಣ ಕಥೆ ಬಿಚ್ಚಿಟ್ಟ ಚನ್ನನಾಯ್ಕ್

    ಐಸಿಸ್ ಸಂಘಟನೆಗೆ ಮುಸ್ಲಿಂ (Muslim) ಯುವಕರನ್ನು ನೇಮಿಸುವ ಕೆಲಸ ಈತ ಮಾಡುತ್ತಿದ್ದ. ನಂತರ ವಿವಿಧ ವಿಚಾರಗಳನ್ನು ಅವರ ತಲೆಗೆ ತುಂಬಿ ತೀವ್ರವಾದಿಗಳನ್ನಾಗಿ ಮಾಡುತ್ತಿದ್ದ ವಿಚಾರ ತನಿಖೆಯತಿಂದ ಬೆಳಕಿಗೆ ಬಂದಿತ್ತು.

    ಶಿವಮೊಗ್ಗ ತುಂಗಾ ತೀರದಲ್ಲಿ ನಡೆದ ಟ್ರಯಲ್‌ ಬ್ಲಾಸ್ಟ್‌ ಪ್ರಕರಣ (Shivamogga Trial Blast Case) ಮತ್ತು ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟದ ಪ್ರಮುಖ ಸಂಚನ್ನು ಈತನೇ ರೂಪಿಸಿದ್ದ. ಮಂಗಳೂರು ಸ್ಪೋಟದಲ್ಲಿ ಬಂಧಿತನಾಗಿರುವ ಶಾರೀಕ್‌ ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಕುಕ್ಕರ್‌ ಬಾಂಬ್‌ ಇಡಲು ರಿಕ್ಷಾದಲ್ಲಿ ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಸ್ಫೋಟಗೊಂಡಿತ್ತು. ಅಲಿ ಈ ಎಲ್ಲ ಪ್ರಕರಣದ ಆರೋಪಿಗಳ ಜೊತೆ ನೇರ ಸಂಪರ್ಕದಲ್ಲಿದ್ದ. ಇದನ್ನೂ ಓದಿ: ವಿಶ್ವನಾಥ್ ಜೀ ಅಲಿಯಾಸ್ ಚನ್ನನಾಯ್ಕ್ ಪತ್ನಿಗೆ ಬೆದರಿಕೆ ಹಾಕಿದ್ದ ಚೈತ್ರಾ ಕುಂದಾಪುರ!

    2020 ರ ಮಂಗಳೂರು ಗೋಡೆಯ ಮೇಲೆ ಬರಹ ಪ್ರಕರಣದಲ್ಲೂ ಆಲಿಯ ಪಾತ್ರವಿದೆ. ಆತನ ಸೂಚನೆಯ ಮೇರೆಗೆ ಆರೋಪಿಗಳಾದ ಮೊಹಮ್ಮದ್ ಶಾರಿಕ್ ಮತ್ತು ಮಾಜ್ ಮುನೀರ್ ಅಹ್ಮದ್ ಅವರುಗೋಡೆಯ ಗೀಚು ಬರಹ ಬರೆದಿದ್ದರು.

    “ಸಂಘಗಳು ಹಾಗೂ ಮನುವಾದಿಗಳನ್ನು ನಿಗ್ರಹಿಸಲು ಲಷ್ಕರ್‌-ಎ-ತೊಯ್ದಾ ಮತ್ತು ತಾಲಿಬಾನಿಗಳನ್ನು ಆಹ್ವಾನಿಸುವಂತೆ ಮಾಡಬೇಡಿ. ಲಷ್ಕರ್ ಜಿಂದಾಬಾದ್” ಎಂದು ಗೋಡೆಯಲ್ಲಿ ಬರೆಯಲಾಗಿತ್ತು.

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಸಿಸ್ ಉಗ್ರನೊಂದಿಗೆ ನಿರಂತರ ಸಂಪರ್ಕ – ಎನ್‍ಐಎಯಿಂದ ಯಾದಗಿರಿ ವ್ಯಕ್ತಿ ವಿಚಾರಣೆ

    ಐಸಿಸ್ ಉಗ್ರನೊಂದಿಗೆ ನಿರಂತರ ಸಂಪರ್ಕ – ಎನ್‍ಐಎಯಿಂದ ಯಾದಗಿರಿ ವ್ಯಕ್ತಿ ವಿಚಾರಣೆ

    ಯಾದಗಿರಿ: ಉಗ್ರನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಜಿಲ್ಲೆಯ (Yadgir) ಶಹಾಪುರ ವ್ಯಕ್ತಿಯೊಬ್ಬನನ್ನು ಜಾರ್ಖಂಡ್‍ನ (Jharkhand) ಎನ್‍ಐಎ (NIA) ತಂಡ ವಿಚಾರಣೆ ನಡೆಸಿದೆ.

    ರಾಂಚಿಯ ಇನ್ಸ್‌ಪೆಕ್ಟರ್ ಸಚ್ಚಿದಾನಂದ ಶರ್ಮಾ ನೇತೃತ್ವದ ನಾಲ್ವರು ಅಧಿಕಾರಿಗಳ ತಂಡ ಶಹಾಪುರಕ್ಕೆ ಭೇಟಿ ನೀಡಿದೆ. ಅಧಿಕಾರಿಗಳು ವಿಚಾರಣೆಗೊಳಪಡಿಸಿರುವ ವ್ಯಕ್ತಿ ಇನ್ಸ್ಟಾಗ್ರಾಮ್‍ನಲ್ಲಿ ಉಗ್ರನೊಂದಿಗೆ ನಿರಂತರ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಈತನನ್ನು ನಾಲ್ಕು ಗಂಟೆಗಳ ದೀರ್ಘಕಾಲ ವಿಚಾರಣೆಗೆ ಒಳಪಡಿಸಿ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಇದನ್ನೂ ಓದಿ: ಸುಲಭವಾಗಿ ಸಿಕ್ಕ 50 ಲಕ್ಷಕ್ಕೆ ಚೈತ್ರಾ ಫಿದಾ – 3.5 ಕೋಟಿಗೆ ಶುರುವಾದ ಪ್ಲಾನ್ 5 ಕೋಟಿಗೆ ಏರಿದ್ದೇ ರೋಚಕ

    ಕಳೆದ ಜುಲೈನಲ್ಲಿ ಐಸಿಸ್ (ISIS) ಉಗ್ರ ಸಂಘಟನೆಯ ಓರ್ವ ಉಗ್ರನನ್ನ ರಾಂಚಿಯಲ್ಲಿ ಅಧಿಕಾರಿಗಳು ಬಂಧಿಸಿದ್ದರು. ಬಂಧಿತ ಉಗ್ರನ ಜೊತೆ ಇನ್ಸ್ಟಾಗ್ರಾಮ್‍ನಲ್ಲಿ ಶಹಾಪುರದ ವ್ಯಕ್ತಿ ಸಂಪರ್ಕ ಹೊಂದಿದ್ದ. ಇದೇ ಕಾರಣದಿಂದ ಸಂಪರ್ಕಿತ ವ್ಯಕ್ತಿಯ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

    ಈ ಹಿಂದೆ ಸಹ ಶಹಾಪುರಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಇದೀಗ ಎರಡನೇ ಸಲ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಕಳೆದ ಜುಲೈನಲ್ಲಿ ಬೆಂಗಳೂರಿನಲ್ಲಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಐವರು ಉಗ್ರರನ್ನು ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ಸಿಸಿಬಿ ಬಂಧಿಸಿತ್ತು. ಬಂಧಿತರಿಂದ ಅಪಾರ ಪ್ರಮಾಣದ ಸ್ಫೋಟಕ ಹಾಗೂ ಸ್ಯಾಟ್‍ಲೈಟ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದರು. ಇದನ್ನೂ ಓದಿ: ಎಲ್ಲಾ ದೊಡ್ಡೋರ ಹೆಸರೆಲ್ಲ ಹೊರಗಡೆ ಬರುತ್ತೆ: ಚೈತ್ರಾ ಕುಂದಾಪುರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]