Tag: NIA

  • ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಹಿಂದೆ ಉಗ್ರ ಕತ್ಯದಲ್ಲಿ ದೋಷಿಯಾಗಿದ್ದ ಹುಬ್ಬಳ್ಳಿ ವ್ಯಕ್ತಿ ಮತ್ತೆ ಅರೆಸ್ಟ್‌

    ರಾಮೇಶ್ವರಂ ಕೆಫೆ ಸ್ಫೋಟ ಕೇಸ್‌- ಹಿಂದೆ ಉಗ್ರ ಕತ್ಯದಲ್ಲಿ ದೋಷಿಯಾಗಿದ್ದ ಹುಬ್ಬಳ್ಳಿ ವ್ಯಕ್ತಿ ಮತ್ತೆ ಅರೆಸ್ಟ್‌

    ನವದೆಹಲಿ: ದಿ ರಾಮೇಶ್ವರಂ ಕೆಫೆ (The Rameshwaram Cafe) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟೀಯ ತನಿಖಾ ದಳ (NIA) ಹುಬ್ಬಳ್ಳಿಯಲ್ಲಿ (Hubballi) ಮತ್ತೊಬ್ಬ ಆರೋಪಿಯನ್ನು ಬಂಧಿಸಿದೆ.

    ಹುಬ್ಬಳ್ಳಿ ನಗರದ ನಿವಾಸಿ 35 ವರ್ಷದ ಶೋಯೆಬ್ ಅಹ್ಮದ್ ಮಿರ್ಜಾ ಅಲಿಯಾಸ್‌ ಛೋಟು (Shoaib Ahmed Mirza @ Chhotu) ಬಂಧಿತ ಆರೋಪಿ. ಈ ಮೂಲಕ ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳ ಸಂಖ್ಯೆ  5ಕ್ಕೆ ಏರಿಕೆಯಾಗಿದೆ.

    ಹಿಂದೆ ಬೆಂಗಳೂರಿನನಲ್ಲಿ (Bengaluru) ನಡೆದ ಲಷ್ಕರ್‌ ತೊಯ್ಬಾ ಪಿತೂರಿ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲಿನಿಂದ ಹೊರ ಬಂದ ಬಳಿಕ ಈ ಪ್ರಕರಣದಲ್ಲಿ ಅರೆಸ್ಟ್‌ ಆಗಿದ್ದಾನೆ.

     

    ಈತನ ಪಾತ್ರ ಏನು?
    ಈತ 2018 ರಲ್ಲಿ ಆರೋಪಿ ಅಬ್ದುಲ್ ಮಥೀನ್ ತಾಹಾನ ಜೊತೆ ಸ್ನೇಹ ಬೆಳೆಸಿ ವಿದೇಶದಲ್ಲಿರುವ ಆನ್‌ಲೈನ್ ಹ್ಯಾಂಡ್ಲರ್‌ಗೆ ಪರಿಚಯಿಸಿದ್ದ. ಹ್ಯಾಂಡ್ಲರ್ ಮತ್ತು ಮತೀನ್ ತಾಹ ನಡುವೆ ಎನ್ಕ್ರಿಪ್ಟೆಡ್ ಮೇಲ್‌ ಮುಖಾಂತರ ಅಹ್ಮದ್ ಮಿರ್ಜಾ ಸಂಪರ್ಕ ಸಾಧಿಸುತ್ತಿದ್ದ. ಇದನ್ನೂ ಓದಿ: ನಿಮ್ಮ ಪುತ್ರರನ್ನ Tomorrow Land ಪಾರ್ಟಿಗೆ ನೀವೇ ಕಳಿಸಿ ಅವರ ಸಾವಿಗೆ ಕಾರಣರಾದಿರಿ ಎಂದು ಕೇಳಿದರೆ ಹೇಗೆ: ಸಿದ್ದು ವಿರುದ್ಧ ಹೆಚ್‌ಡಿಕೆ ಅಟ್ಯಾಕ್‌

    ಮಾರ್ಚ್ 1 ಎಂದು ರಂದು ನಡೆದ ನಡೆದ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯ ಚುರುಕಿನಿಂದ ನಡೆಯುತ್ತಿದೆ. ಇಲ್ಲಿಯವರೆಗೆ ದೇಶಾದ್ಯಂತ 29 ಸ್ಥಳಗಳಲ್ಲಿ ದಾಳಿ ನಡೆಸಿ ಎನ್‌ಐಎ ಶೋಧ ನಡೆಸಿದೆ.

     

  • ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ- ಐವರನ್ನು ಬಂಧಿಸಿದ NIA

    ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ- ಐವರನ್ನು ಬಂಧಿಸಿದ NIA

    ಬೆಂಗಳೂರು: ವೈಟ್‍ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆ (Rameshwaram Cafe) ಸ್ಪೋಟ ಪ್ರಕರಣ ಸಂಬಂಧ ಇದೀಗ ರಾಷ್ಟ್ರೀಯ ತನಿಖಾ ದಳ (NIA) ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ.

    ಬೆಂಗಳೂರಿನಲ್ಲಿ ವೈದ್ಯ ಅಹಮದ್, ಹುಬ್ಬಳ್ಳಿಯಲ್ಲಿ ಶೋಯಿಬ್ ಮಿರ್ಜಾ, ಆತನ ಸಹೋದರ ಅಜೀಬ್ ಅಹಮದ್, ಆಂಧ್ರಪ್ರದೇಶದ ಅನಂತಪುರ ರಾಮದುರ್ಗದಲ್ಲಿ ಬೆಂಗಳೂರು ಮೂಲದ ಟೆಕ್ಕಿ ಸೋಹೆಲ್ ಬಂಧಿತರು. ಪ್ರಕರಣ ಸಂಬಂಧ ಈಗಾಗಲೇ ಬಂಧಿಸಲ್ಪಟ್ಟಿದ್ದ ಉಗ್ರ ಮುಸಾವೀರ್ ಹುಸೇನ್ ಶಾಜೀದ್, ಅಬ್ದುಲ್ ಮಥೀನ್ ತಾಹಾಗೆ ಈ ಐವರು ಹಣಕಾಸಿನ ನೆರವು, ಕೃತ್ಯಕ್ಕೆ ಸಹಾಯ ಮಾಡಿದ ಆರೋಪದಲ್ಲಿ ಬಂಧನ ಮಾಡಲಾಗಿದೆ.

    2012ರ ಬೆಂಗಳೂರು, ಹುಬ್ಬಳ್ಳಿ ವಿಧ್ವಂಸಕ ಸಂಚು ಪ್ರಕರಣ ಆರೋಪಿ ಸಬೀಲ್ ಅಹಮದ್, 2012 ಲಷ್ಕರ ಎ ತೋಯಾಬಾ ಸಂಘಟನೆಯೊಂದಿಗೆ ಸೇರಿ ಬೆಂಗಳೂರು, ಹುಬ್ಬಳ್ಳಿ ವಿಧ್ವಂಸಕ ಕೃತ್ಯ ಸಂಚು ನಡೆಸಿದ್ದ ಬಗ್ಗೆ ಮಾಹಿತಿ ದೊರೆತಿದೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಕೆಫೆ ಸ್ಫೋಟ – ಬೆಂಗಳೂರು ಟೆಕ್ಕಿಯ ಖಾತೆಗೆ ದಿಢೀರ್‌ ಭಾರೀ ಹಣ ಜಮೆ

    11 ಕಡೆ ಎನ್‌ಐಎ ದಾಳಿ: ಪ್ರಕರಣ ಸಂಬಂಧ ಮಂಗಳವಾರ ಎನ್‌ಐಎ ಅಧಿಕಾರಿಗಳು 4 ರಾಜ್ಯಗಳ 11 ಕಡೆ ದಾಳಿ ಮಾಡಿದ್ದಾರೆ. ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿ ಐದಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ಮತೀನ್, ಶಾಝೀಬ್ ನಾಲ್ಕು ವರ್ಷ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ನೆರವು ನೀಡಿದವರಿಗಾಗಿ ಎನ್‌ಐಎ ಈ ಕಾರ್ಯಾಚರಣೆ ಮಾಡಿದೆ.

    ತಮಿಳುನಾಡಿನ ಕೊಯಮತ್ತೂರಿನ (Tamilnadu Coimbatore) ಖಾಸಗಿ ಆಸ್ಪತ್ರೆಯೊಂದರ ಮೇಲೆ ರೇಡ್ ಮಾಡಿದ ಎನ್‌ಐಎ, ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಶಂಕೆ ಮೇರೆಗೆ ಕರ್ನಾಟಕ ಮೂಲದ ಇಬ್ಬರು ವೈದ್ಯರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಪಾತಕಿಗಳಿಗೆ ಹಣಕಾಸು ನೆರವು ನೀಡಿರುವ ಶಂಕೆ ವ್ಯಕ್ತವಾಗಿತ್ತು.

  • ರಾಮೇಶ್ವರಂ ಕೆಫೆ ಬಾಂಬ್‌ ಕೆಫೆ ಸ್ಫೋಟ – ಬೆಂಗಳೂರು ಟೆಕ್ಕಿಯ ಖಾತೆಗೆ ದಿಢೀರ್‌ ಭಾರೀ ಹಣ ಜಮೆ

    ರಾಮೇಶ್ವರಂ ಕೆಫೆ ಬಾಂಬ್‌ ಕೆಫೆ ಸ್ಫೋಟ – ಬೆಂಗಳೂರು ಟೆಕ್ಕಿಯ ಖಾತೆಗೆ ದಿಢೀರ್‌ ಭಾರೀ ಹಣ ಜಮೆ

    – ಬೆಂಗಳೂರು ಸೇರಿದಂತೆ 11 ಕಡೆ ಎನ್‌ಐಎ ದಾಳಿ
    – ಕರ್ನಾಟಕದ ಇಬ್ಬರು ವೈದ್ಯರು ವಶ

    ನವದೆಹಲಿ: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Bomb Blast) ಪ್ರಕರಣದ ತನಿಖೆ ತೀವ್ರಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (NIA) 4 ರಾಜ್ಯಗಳ 11 ಕಡೆ ರೇಡ್ ಮಾಡಿದೆ.

    ಬೆಂಗಳೂರಿನ (Bengaluru) ಕುಮಾರಸ್ವಾಮಿ ಲೇಔಟ್, ಬನಶಂಕರಿ ಸೇರಿ ಐದಕ್ಕೂ ಹೆಚ್ಚು ಕಡೆ ದಾಳಿ ನಡೆಸಿದೆ. ಮತೀನ್, ಶಾಝೀಬ್ ನಾಲ್ಕು ವರ್ಷ ತಲೆಮರೆಸಿಕೊಂಡಿದ್ದ ಅವಧಿಯಲ್ಲಿ ನೆರವು ನೀಡಿದವರಿಗಾಗಿ ಎನ್‌ಐಎ ಈ ಕಾರ್ಯಾಚರಣೆ ಮಾಡಿದೆ.

     

    ತಮಿಳುನಾಡಿನ ಕೊಯಮತ್ತೂರಿನ (Tamilnadu Coimbatore) ಖಾಸಗಿ ಆಸ್ಪತ್ರೆಯೊಂದರ ಮೇಲೆ ರೇಡ್ ಮಾಡಿದ ಎನ್‌ಐಎ, ಕೆಫೆ ಸ್ಫೋಟ ಪ್ರಕರಣದಲ್ಲಿ ಭಾಗಿಯಾದ ಶಂಕೆ ಮೇರೆಗೆ ಕರ್ನಾಟಕ ಮೂಲದ ಇಬ್ಬರು ವೈದ್ಯರನ್ನು ವಶಕ್ಕೆ ಪಡೆದಿದೆ. ಈ ಇಬ್ಬರು ಪಾತಕಿಗಳಿಗೆ ಹಣಕಾಸು ನೆರವು ನೀಡಿರುವ ಶಂಕೆ ವ್ಯಕ್ತವಾಗಿದೆ.

    ಮತ್ತೊಂದು ಕಡೆ ಆಂಧ್ರದ ರಾಯದುರ್ಗದಲ್ಲಿ ನಿವೃತ್ತ ಶಿಕ್ಷಕ ಅಬ್ದುಲ್ ಮನೆ ಮೇಲೆಯೂ ಎನ್‌ಐಎ ದಾಳಿ ನಡೆಸಿ, ಅವರ ಪುತ್ರ ಸೊಹೇಲ್‌ನನ್ನು ವಶಕ್ಕೆ ಪಡೆದಿದೆ. ಈತ ಬೆಂಗಳೂರಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ. ಸೊಹೇಲ್ ಬ್ಯಾಂಕ್ ಖಾತೆಗೆ ದಿಢೀರ್ ಎಂದು ಭಾರೀ ಮೊತ್ತದ ಹಣ ಜಮೆಯಾಗಿದ್ದ ಬಗ್ಗೆ ಅವರ ಕುಟುಂಬಸ್ಥರನ್ನು ಎನ್‌ಐಎ ಪ್ರಶ್ನಿಸಿದೆ. ತೆಲಂಗಾಣದಲ್ಲಿಯೂ ಎನ್‌ಐಎ ರೇಡ್ ಮಾಡಿದೆ. ಹಲವು ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದೆ. ಇದನ್ನೂ ಓದಿ: ಕಿಲ್ಲರ್ ಬಾಯ್‌ಗೆ ಪುಣೆ ಠಾಣೆಯಲ್ಲಿ ರಾಜಾತಿಥ್ಯ – ಪಿಜ್ಜಾ, ಬಿರಿಯಾನಿ ತಿನ್ನಿಸಿದ್ದ ಪೊಲೀಸರ ವಿರುದ್ಧ ಆಕ್ರೋಶ

     

  • ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸ್ಫೋಟಕ ತಿರುವು- ವೈದ್ಯರಿಬ್ಬರು ಭಾಗಿಯಾಗಿರೋ ಶಂಕೆ

    ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸ್ಫೋಟಕ ತಿರುವು- ವೈದ್ಯರಿಬ್ಬರು ಭಾಗಿಯಾಗಿರೋ ಶಂಕೆ

    ಬೆಂಗಳೂರು: ಸಿಲಿಕಾನ್ ಸಿಟಿಯ ವೈಟ್‍ಫೀಲ್ಡ್‍ನಲ್ಲಿ ನಡೆದಿದ್ದ ರಾಮೇಶ್ವರಂ ಬಾಂಬ್ ಸ್ಫೋಟಕ್ಕೆ ಇದೀಗ ಸ್ಫೋಟಕ ತಿರುವೊಂದು ಸಿಕ್ಕಿದೆ. ಪ್ರಕರಣದಲ್ಲಿ ಇಬ್ಬರು ಟ್ರೈನಿ ವೈದ್ಯರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

    ಕೊಯಮತ್ತೂರು ಖಾಸಗಿ ಆಸ್ಪತ್ರೆಯ ಮೇಲೆ ಇಂದು ಎನ್‍ಐಎ ದಾಳಿ ನಡೆಸಿದೆ. ಮತೀನ್ ಮತ್ತು ಶಾಜೀಬ್ ಗೆ ಹಣ ಸಹಾಯ ಮಾಡಿದ ಆರೋಪದ ಮೇಲೆ ದಾಳಿ ನಡೆದಿದೆ. ಕರ್ನಾಟಕ ಮೂಲದ ಇಬ್ಬರು ಡಾಕ್ಟರ್ ಗಳು ಬ್ಲಾಸ್ಟ್ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನ ಎದ್ದಿದೆ.

    ಇತ್ತ ಬಾಂಬ್ ಬ್ಲಾಸ್ಟ್ ಪ್ರಕರಣ ಇಂದು ಬೆಂಗಳೂರಿನ ಕೆ ಎಸ್ ಲೇಔಟ್ ಮತ್ತು ಬನಶಂಕರಿ ಸೇರಿ 5ಕ್ಕೂ ಹೆಚ್ಚು ಕಡೆ ಎನ್‍ಐಎ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.  ಇದನ್ನೂ ಓದಿ: ತಣ್ಣಗಾಗದ ಧ್ವಜ ದಂಗಲ್- ಹೊಸ ಧ್ವಜ ಹಾರಿಸಿದ್ರೂ ಕೆರಗೋಡು ಗ್ರಾಮಸ್ಥರ ಅಸಮಾಧಾನ

    ಮಾರ್ಚ್ 1 ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್‍ಫೀಲ್ಡ್‍ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಘಟನೆ ನಡೆದ ಕೆಲ ದಿನಗಳ ಬಳಿಕ ಕೃತ್ಯ ಎಸಗಿದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಅನ್ನು ಎನ್‍ಐಎ ಅಧಿಕಾರಿಗಳು ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದರು. ಬಂಧಿತರ ವಿಚಾರಣೆ ನಡೆಸಿದ್ದು ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿತ್ತು.

  • ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

    ಉಗ್ರ ಕೃತ್ಯಕ್ಕೆ ಸಹಕಾರ – ನಾಪತ್ತೆಯಾಗಿದ್ದ ಆರೋಪಿ ಮೈಸೂರಿನಲ್ಲಿ ಅರೆಸ್ಟ್‌

    ಮೈಸೂರು: ಭಯೋತ್ಪಾಕ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದ ಆರೋಪದ ಅಡಿ ಮೈಸೂರಿನಲ್ಲಿ (Mysuru) ವ್ಯಕ್ತಿಯೊಬ್ಬನನ್ನು ರಾಷ್ಟ್ರೀಯ ತನಿಖಾ ದಳ (NIA) ಬಂಧಿಸಿದೆ.

    ಮೈಸೂರಿನ‌ ರಾಜೀವ್ ನಗರದಲ್ಲಿ ನೆಲೆಸಿದ್ದ ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಆರೋಪಿ. ದಾಳಿ ವೇಳೆ ಮನೆಯಲ್ಲಿದ್ದ ಆತನ ಮೊಬೈಲ್ ಫೋನ್, ಪೆನ್‌ಡ್ರೈವ್ ಸೇರಿದಂತೆ ಮೊದಲಾದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

    2014ರಲ್ಲಿ ಬೆಂಗಳೂರಿನ ಇಸ್ರೇಲ್ (Israel) ಹಾಗೂ ಚೆನ್ನೈನಲ್ಲಿರುವ ಅಮೆರಿಕ ಕಾನ್ಸುಲೇಟ್ ಕಚೇರಿಗಳ ಮೇಲೆ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪ ಈತನ ಮೇಲಿದೆ. ಇದನ್ನೂ ಓದಿ: ಕೇಜ್ರಿವಾಲ್‌ಗೆ ʼವಿಶೇಷ ಸೌಲಭ್ಯʼನೀಡಲಾಗಿದೆ ಅಂತ ಜನ ಮಾತನಾಡ್ತಿದ್ದಾರೆ: ಜಾಮೀನು ಬಗ್ಗೆ ಅಮಿತ್‌ ಶಾ ಮಾತು

     

    ಶ್ರೀಲಂಕಾ ಪ್ರಜೆ ಮೊಹಮ್ಮದ್ ಸಕೀರ್ ಹುಸೇನ್ ಹಾಗೂ ಕೊಲಂಬೋದಲ್ಲಿರುವ ಪಾಕಿಸ್ತಾನದ ರಾಜತಾಂತ್ರಿಕ ಕಚೇರಿ ನೌಕರ ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ದಿಕಿಯನ್ನು ಎನ್ಐಎ ಅಧಿಕಾರಿಗಳು 2014ರಲ್ಲಿ ಬಂಧಿಸಿದ್ದರು. ಇವರಿಗೆ ಭಾರತದ ನಕಲಿ ನೋಟು ಪೂರೈಸುವ ಮೂಲಕ ಭಯೋತ್ಪಾದಕ ಕೃತ್ಯಕ್ಕೆ ಸಹಕರಿಸಿದ ಆರೋಪದಲ್ಲಿ ನೂರುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿತ್ತು.

    2023ರ ಆಗಸ್ಟ್‌ನಲ್ಲಿ ಜಾಮೀನಿನ (Bail) ಮೇಲೆ ಹೊರಬಂದಿದ್ದ ನೂರುದ್ದೀನ್ ಚೆನ್ನೈನ ಎನ್‌ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈ ಕಾರಣಕ್ಕೆ ನೂರುದ್ದೀನ್ ವಿರುದ್ಧ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಅಷ್ಟೇ ಅಲ್ಲದೇ ಆತನ ಸುಳಿವು ನೀಡಿದವರಿಗೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಎನ್‌ಐಎ ಘೋಷಿಸಿತ್ತು. ಖಚಿತ ಮಾಹಿತಿ ಆಧಾರಿಸಿ ಬುಧವಾರ  ದಾಳಿ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಎನ್‌ಐಎ ಯಶಸ್ವಿಯಾಗಿದೆ. ಇದನ್ನೂ ಓದಿ: ಪ್ರಜ್ವಲ್‌ ರೇವಣ್ಣ ಕಣ್ಣಾಮುಚ್ಚಾಲೆ ಆಟ – ವಿಮಾನ ನಿಲ್ದಾಣದಿಂದ ಬರಿಗೈಯಲ್ಲಿ ಪೊಲೀಸರು ವಾಪಸ್‌

  • ಕೇಜ್ರಿವಾಲ್ ವಿರುದ್ಧ ಎನ್‍ಐಎ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಶಿಫಾರಸು

    ಕೇಜ್ರಿವಾಲ್ ವಿರುದ್ಧ ಎನ್‍ಐಎ ತನಿಖೆಗೆ ಲೆಫ್ಟಿನೆಂಟ್ ಗವರ್ನರ್ ಶಿಫಾರಸು

    ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ (VK Saxena) ಅವರು ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಎನ್‍ಐಎ (NIA) ತನಿಖೆ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

    ಕೇಜ್ರಿವಾಲ್ ವಿರುದ್ಧ ನಿಷೇಧಿತ ಭಯೋತ್ಪಾದಕ ಸಂಘಟನೆ `ಸಿಖ್ಸ್ ಫಾರ್ ಜಸ್ಟೀಸ್’ನಿಂದ ದೇಣಿಗೆ ಪಡೆದ ಆರೋಪದ ಮೇಲೆ ಎನ್‍ಐಎ ತನಿಖೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ ಎಂದು ರಾಜಭವನ ಮೂಲಗಳು ತಿಳಿಸಿವೆ.

    ಈ ಸಂಬಂಧ ಸಕ್ಸೆನಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಕೇಜ್ರಿವಾಲ್ ನೇತೃತ್ವದ ಎಎಪಿಯು ದೇವೇಂದ್ರ ಪಾಲ್ ಭುಲ್ಲರ್ ಬಿಡುಗಡೆಗೆ ಅನುಕೂಲವಾಗುವಂತೆ ಉಗ್ರ ಖಲಿಸ್ತಾನಿ ಗುಂಪುಗಳಿಂದ ದೇಣಿಗೆ ಪಡೆದಿರುವ ಬಗ್ಗೆ ತಮಗೆ ದೂರು ಬಂದಿದೆ. ದೂರುದಾರರು ಕಳುಹಿಸಿರುವ ಸಾಕ್ಷ್ಯಗಳನ್ನು ವಿಧಿವಿಜ್ಞಾನ ಪರೀಕ್ಷೆ ಒಳಪಡಿಸುವುದು ಹಾಗೂ ಈ ಪ್ರಕರಣದ ತನಿಖೆ ಎನ್‍ಐಎಗೆ ವಹಿಸುವ ಅಗತ್ಯವಿದೆ ಎಂದು ಸಕ್ಸೆನಾ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಜ್ರಿವಾಲ್ ಅವರಿಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಮುಂದಾಗಿರುವ ಹೊತ್ತಲ್ಲೇ ಸಕ್ಸೆನಾ ಅವರ ಈ ಶಿಫಾರಸು ಕೇಜ್ರಿವಾಲ್ ಅವರಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.

    ಎನ್‍ಐಎ ತನಿಖೆ ಶಿಫಾರಸು ಬಿಜೆಪಿಯ (BJP )ಮತ್ತೊಂದು ಪಿತೂರಿ ಎಂದು ಆಪ್ (AAP) ಆರೋಪಿಸಿದೆ. ಕೇಜ್ರಿವಾಲ್ ಪ್ರಸ್ತುತ ನೂತನ ಮದ್ಯ ನೀತಿ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

  • ರಾಮೇಶ್ವರಂ ಕೆಫೆ ಅಲ್ಲ – ಐಟಿ ಕಂಪನಿ ಸ್ಫೋಟಿಸಲು ತಯಾರಿ ನಡೆಸಿದ್ದ ಉಗ್ರರು!

    ರಾಮೇಶ್ವರಂ ಕೆಫೆ ಅಲ್ಲ – ಐಟಿ ಕಂಪನಿ ಸ್ಫೋಟಿಸಲು ತಯಾರಿ ನಡೆಸಿದ್ದ ಉಗ್ರರು!

    –  ದೇಶದ ಆರ್ಥಿಕತೆಗೆ ಪೆಟ್ಟು ಕೊಡಲು ಪ್ಲ್ಯಾನ್‌
    – ಮಹಾದೇವಪುರ ವ್ಯಾಪ್ತಿಯಲ್ಲಿರುವ ಕಂಪನಿ ಸ್ಫೋಟಕ್ಕೆ ಸಂಚು

    ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದಲ್ಲಿ(Rameshwaram Cafe Blast) ಸೆರೆಯಾದ ಆರೋಪಿಗಳ ಟಾರ್ಗೆಟ್‌ ಬೇರೆಯದ್ದೇ ಆಗಿತ್ತು ಎಂಬ ಸ್ಫೋಟಕ ವಿಚಾರ ರಾಷ್ಟ್ರೀಯ ತನಿಖಾ ದಳದ(NIA) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

    ಹೌದು. ಆರೋಪಿಗಳು ರಾಜ್ಯದ ಆರ್ಥಿಕತೆಗೆ (Economy) ಪೆಟ್ಟು ಕೊಡಲು ಟಾರ್ಗೆಟ್ ಮಾಡಿದ್ದರು. ಆದರೆ ಈ ಗುರಿ ಕಷ್ಟವಾಗಿದ್ದ ಕಾರಣ ಕೊನೆಗೆ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.  ಇದನ್ನೂ ಓದಿ: ದ್ವಾರಕೀಶ್ ಮತ್ತು ವಿಷ್ಣುವರ್ಧನ್ ಸ್ನೇಹ: ಏಳು ಬೀಳಿನ ಗೆಳೆತನ

    ಕೋಲ್ಕತ್ತಾದಲ್ಲಿ ಸೆರೆಸಿಕ್ಕ ಅಬ್ದುಲ್ ಮತಿನ್ ತಾಹ ಹಾಗೂ ಮುಸಾವಿರ್ ಹುಸೇನ್‌ನ ವಿಚಾರಣೆ ವೇಳೆ ಒಂದೊಂದೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ಐಟಿ ಪಾರ್ಕ್‌ಗಳನ್ನು (IT Park) ಟಾರ್ಗೆಟ್‌ ಮಾಡಿದ್ದ ಆರೋಪಿಗಳು ದೊಡ್ಡ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಫೋಟ ಮಾಡಲು ಆರಂಭದಲ್ಲಿ ಪ್ಲ್ಯಾನ್‌ ಮಾಡಿದ್ದರು. ಇದನ್ನೂ ಓದಿ: ಬೆಂಗಳೂರಿನ ಪ್ರತ್ಯೇಕ ಕಡೆ ಭರ್ಜರಿ ಬೇಟೆ; 5.20 ಲಕ್ಷ ನಗದು, 302 ಕುಕ್ಕರ್‌ ವಶಕ್ಕೆ

    ಅದರಲ್ಲೂ ಮಹದೇವಪುರ ವಲಯದಲ್ಲಿ ಸಾಕಷ್ಟು ಐಟಿ ಕಂಪನಿಗಳಿದ್ದು ಯಾವುದಾದರೂ ಕಂಪನಿಯನ್ನು ಸ್ಫೋಟ ಮಾಡಿದರೆ ವಿದೇಶಿ ಬಂಡವಾಳ ಹೂಡಿಕೆದಾರರು (FDI) ಭಾರತಕ್ಕೆ (India) ಹೂಡಿಕೆ ಮಾಡಲು ಬರುವುದಿಲ್ಲ. ಇದರಿಂದಾಗಿ ದೇಶದ ಆರ್ಥಿಕತೆ ಕುಸಿಯುತ್ತದೆ ಎಂದು ಭಾವಿಸಿ ಐಟಿ ಕಂಪನಿ ಬಳಿ ಬಾಂಬ್‌ ಸ್ಫೋಟಿಸಲು ತಯಾರಿ ನಡೆಸಿದ್ದರು.

    ಐಟಿ ಕಂಪನಿಗಳ ಬಳಿ ಸ್ಫೋಟಕ್ಕೆ ಸಂಚು ರೂಪಿಸಿದಾಗ ಅಲ್ಲಿ ಸಿಸಿಟಿವಿಗಳು ಇದೆ. ಭದ್ರತಾ ಸಿಬ್ಬಂದಿ ಇರುತ್ತಾರೆ. ಪಾರ್ಕ್‌ ಒಳಗಡೆ ಹೋಗಲು ಅಷ್ಟು ಸುಲಭವಾಗಿ ಸಾಧ್ಯವಾಗುವುದಿಲ್ಲ ಎಂಬುದನ್ನು ಅತ ಅವರು ಈ ಪ್ಲ್ಯಾನ್‌ ಕೈ ಬಿಟ್ಟು ಟೆಕ್ಕಿಗಳು ಹೆಚ್ಚು ಸೇರುವ ಜಾಗವನ್ನು ಟಾರ್ಗೆಟ್‌ ಮಾಡಿದ್ದರು. ಅಂತಿಮವಾಗಿ ಇವರು ಬೆಂಗಳೂರಿನ ಕುಂದಲಹಳ್ಳಿಯ ಬ್ರೂಕ್‌ಫೀಲ್ಡ್‌  ಬಳಿ ಇರುವ ರಾಮೇಶ್ವರಂ ಕೆಫೆಯನ್ನು ಆಯ್ಕೆ ಮಾಡಿ ಬಾಂಬ್‌ ಸ್ಫೋಟ ಮಾಡಿದ್ದಾರೆ ಎಂಬ ವಿಚಾರ ಎನ್‌ಐಎ ಮೂಲಗಳಿಂದ ತಿಳಿದು ಬಂದಿದೆ.

     

  • ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು 10 ದಿನ ಎನ್‍ಐಎ ಕಸ್ಟಡಿಗೆ

    ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ – ಶಂಕಿತರು 10 ದಿನ ಎನ್‍ಐಎ ಕಸ್ಟಡಿಗೆ

    ಬೆಂಗಳೂರು: ನಗರದ (Bengaluru) ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ (Rameshwaram Cafe Blast Case) ಬಂಧನಕ್ಕೊಳಗಾದ ಇಬ್ಬರು ಆರೋಪಿಗಳನ್ನು ಎನ್‍ಐಎ (NIA) ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ (Court) ಆರೋಪಿಗಳನ್ನು 10 ದಿನಗಳ ಕಾಲ ಎನ್‍ಐಎ ಕಸ್ಟಡಿಗೆ ನೀಡಿದೆ.

    ಆರೋಪಿಗಳನ್ನು ನ್ಯಾಯಾಧೀಶರ ಮನೆಗೆ ಹಾಜರುಪಡಿಸಿದ ಹಿನ್ನೆಲೆ ನ್ಯಾಯಾಧೀಶರ ಮನೆಗೆ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎನ್‍ಐಎ ಪರವಾಗಿ ಎಸ್‍ಪಿಪಿ ಪ್ರಸನ್ನಕುಮಾರ್ ಹಾಜರಾಗಿದ್ದು, ವಾದ ಮಂಡಿಸಿದರು. ಈ ವೇಳೆ ಎನ್‍ಐಎ ಎಸ್ಪಿ ಶಿವವಿಕ್ರಮ್ ಕೂಡ ಹಾಜರಿದ್ದರು. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

    ಆರೋಪಿಗಳನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿತ್ತು. ಬಳಿಕ ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‍ನನ್ನು ಎನ್‍ಐಎ ಪೊಲೀಸರು ಕರೆತಂದಿದ್ದರು. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ.

    ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು. ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯಾರ್ಯಾರ ಪಾತ್ರ ಏನಿತ್ತು? ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ? ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು? ಬೇರೆ ಎಲ್ಲೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬ ಅಂಶಗಳು ಸೇರಿದಂತೆ ನಾನಾ ದೃಷ್ಟಿಕೋನದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: ನಾಳೆ ರಾಜ್ಯಕ್ಕೆ ಮೋದಿ ಆಗಮನ – ಪ್ರಧಾನಿ ಮುಂದೆ ಹಲವು ಪ್ರಶ್ನೆಗಳನ್ನಿಟ್ಟ ಕಾಂಗ್ರೆಸ್‌ ಅಭ್ಯರ್ಥಿ

  • ಲಾಡ್ಜ್‌ಗಳಲ್ಲಿ ತಂಗಲು ಕಲಬುರಗಿ ಯುವಕನ ಆಧಾರ್ ನಕಲು ಮಾಡಿದ್ದ ಬಾಂಬರ್; ಸ್ಫೋಟಕ ರಹಸ್ಯ ಬಯಲು

    ಲಾಡ್ಜ್‌ಗಳಲ್ಲಿ ತಂಗಲು ಕಲಬುರಗಿ ಯುವಕನ ಆಧಾರ್ ನಕಲು ಮಾಡಿದ್ದ ಬಾಂಬರ್; ಸ್ಫೋಟಕ ರಹಸ್ಯ ಬಯಲು

    ಕಲಬುರಗಿ: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ (Rameshwaram Cafe Blast Case) ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರನ ಬಗ್ಗೆ ಒಂದೊಂದೇ ರಹಸ್ಯಗಳು ಬಯಲಾಗುತ್ತಿವೆ.

    ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತ ಉಗ್ರರನ್ನ ಬೆಂಗಳೂರಿಗೆ (Bengaluru) ಕರೆತರಲಾಗಿದೆ. ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್ ಮತೀನ್ ತಾಹ, ಮುಸಾವಿರ್ ಹುಸೇನ್‌ನನ್ನು ಎನ್‌ಐಎ ಪೊಲೀಸರು ಕರೆತಂದ್ದಿದ್ದು, ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ನಡುವೆ ಶಂಕಿತ ಉಗ್ರ ತೀರ್ಥಹಳ್ಳಿಯ ಮುಸಾವೀರ್ ಲಾಡ್ಜ್‌ಗಳಲ್ಲಿ ತಂಗೋದಕ್ಕೆ ಕಲಬುರಗಿ ನಗರದ (Kalaburagi City) ಯುವಕನೊಬ್ಬನ ಆಧಾರ್ ಕಾರ್ಡ್ (Aadhar Card) ಅನ್ನು ನಕಲು ಮಾಡಿ ಬಳಸಿದ್ದಾನೆ ಅನ್ನೋ ಸಂಗತಿ ಬೆಳಕಿಗೆ ಬಂದಿದೆ.

    ಹೌದು. ಮುಸಾವಿರ್‌ ಸಾಜೀದ್ ಹುಸೇನ್ ಕಲಬುರಗಿಯ ವರ್ಧನನಗರ ಬಡಾವಣೆಯ ಅನ್‌ಮೋಲ್ ಎಂಬ ಯುವಕನ ಆಧಾರ ಕಾರ್ಡ್ ಫೇಕ್ ಮಾಡಿಕೊಂಡು, ಈ ಕಾರ್ಡ್ ಬಳಸಿ ವಿವಿಧ ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡುತ್ತಿದ್ದ. ಎನ್‌ಐಎ ತಂಡ ಆಧಾರ್ ಕಾರ್ಡ್‌ನಲ್ಲಿದ್ದ ವಿಳಾಸವನ್ನು ಪರಿಶೀಲಿಸಿದ ಬಳಿಕವೇ ಅದು ಫೇಕ್ ಎಂದು ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

    ಸದ್ಯ ಶಂಕಿತ ಉಗ್ರ ಕಲಬುರಗಿ ಮೂಲದ ಯುವಕನ ಆಧಾರ್ ಕಾರ್ಡನ್ನೇ ನಕಲು ಮಾಡಿದ್ದೇಕೆ? ಶಂಕಿತ ಉಗ್ರನಿಗೆ ಆ ಯುವಕನ ಸಂಪರ್ಕ ಇತ್ತಾ ಅನ್ನೋ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

    ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು. ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯರ‍್ಯಾರ ಪಾತ್ರ ಏನಿತ್ತು? ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ? ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು? ಬೇರೆ ಎಲ್ಲೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬ ಅಂಶಗಳು ಸೇರಿದಂತೆ ನಾನಾ ದೃಷ್ಟಿಕೋನದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

    ಇಂದು ಬೆಳಗ್ಗೆ 10 ಗಂಟೆಗೆ ಎನ್‌ಐಎ ವಿಶೇಷ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಭದ್ರತಾ ದೃಷ್ಟಿಯಿಂದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿರುವ ಅಧಿಕಾರಿಗಳು, 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ – ವ್ಯಕ್ತಿ, ಆತನ ಇಬ್ಬರು ಸಹೋದರಿಯರು ದುರ್ಮರಣ

  • ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

    ಬೆಂಗಳೂರು ಕೆಫೆ ಬ್ಲಾಸ್ಟ್‌ ಪ್ರಕರಣ; ಶಂಕಿತ ಉಗ್ರರನ್ನು ಬೆಂಗಳೂರಿಗೆ ಕರೆತಂದ ಎನ್‌ಐಎ

    ಬೆಂಗಳೂರು: ರಾಜಧಾನಿಯ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಂಧಿತರಾಗಿರುವ ಶಂಕಿತರ ಉಗ್ರರನ್ನು ಎನ್‌ಐಎ ಅಧಿಕಾರಿಗಳು ಬೆಂಗಳೂರಿಗೆ ಕರೆತಂದಿದ್ದಾರೆ.

    ಕೋಲ್ಕತ್ತಾದಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಶಂಕಿತರಾದ ಅಬ್ದುಲ್‌ ಮತೀನ್‌ ತಾಹ, ಮುಸಾವಿರ್‌ ಹುಸೇನ್‌ನನ್ನು ಎನ್‌ಐಎ ಪೊಲೀಸರು ಕರೆತಂದರು. ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಲಿದ್ದಾರೆ. ಇದನ್ನೂ ಓದಿ: ಕೋಡ್‌ವರ್ಡ್‌ ಸಹಾಯದಿಂದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಆರೋಪಿಗಳು ಅರೆಸ್ಟ್‌!

    ಬಾಂಬ್ ಬ್ಲಾಸ್ಟ್ ಕೇಸಲ್ಲಿ ಬಂಧಿತರಾಗಿರುವ ಮುಜಾಮಿಲ್ ಶರೀಫ್‌, ಮಾಜ್ ಮಾನಿರ್ ಹೇಳಿಕೆ ಅಧರಿಸಿ ವಿಚಾರಣೆ ನಡೆಸಲಾಗುವುದು. ರಾಮೇಶ್ವರಂ ಬಾಂಬ್ ಸ್ಫೋಟ ಕೇಸಲ್ಲಿ ಯಾರ‍್ಯಾರ ಪಾತ್ರ ಏನಿತ್ತು? ಈ ಕೃತ್ಯದ ಹಿಂದೆ ಬೇರೆ ಯಾರೆಲ್ಲಾ ಇದ್ದಾರೆ? ರಾಮೇಶ್ವರಂ ಕೆಫೆಯಲ್ಲೇ ಬಾಂಬ್ ಬ್ಲಾಸ್ಟ್ ಮಾಡಿದ ಉದ್ದೇಶವೇನು? ಬೇರೆ ಎಲ್ಲೆಲ್ಲಿ ವಿಧ್ವಂಸಕ ಕೃತ್ಯವೆಸಗಲು ಪ್ಲಾನ್ ಮಾಡಲಾಗಿತ್ತು ಎಂಬ ಅಂಶಗಳು ಸೇರಿದಂತೆ ನಾನಾ ದೃಷ್ಟಿಕೋನದಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.

    ಇಂದು ಬೆಳಗ್ಗೆ 10 ಗಂಟೆಗೆ ಎನ್‌ಐಎ ವಿಶೇಷ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ. ಭದ್ರತಾ ದೃಷ್ಟಿಯಿಂದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಿರುವ ಅಧಿಕಾರಿಗಳು, 14 ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್ ಪಶ್ಚಿಮ ಬಂಗಾಳದಲ್ಲಿ ಅರೆಸ್ಟ್