Tag: NIA officers

  • ಟ್ಯಾನರಿಯೊಳಗೆ ನುಗ್ಗಿದ್ರೂ ಬಿಡ್ಲಿಲ್ಲ- ಒಂದು ಗಂಟೆ ಹೈಡ್ರಾಮಾ ಬಳಿಕ ಉಗ್ರ ಸೆರೆ

    ಟ್ಯಾನರಿಯೊಳಗೆ ನುಗ್ಗಿದ್ರೂ ಬಿಡ್ಲಿಲ್ಲ- ಒಂದು ಗಂಟೆ ಹೈಡ್ರಾಮಾ ಬಳಿಕ ಉಗ್ರ ಸೆರೆ

    ಬೆಂಗಳೂರು: ಸಿಲಿಕಾನ್ ಸಿಟಿ ಉಗ್ರರ ಅಡಗುತಾಣ ಆಗಿದೆ ಎಂದು ಪದೇ ಪದೇ ಸಾಬೀತಾಗುತ್ತಿದ್ದು, ಎನ್‍ಐಎ ಅಧಿಕಾರಿಗಳು ವಾರಕ್ಕೊಬ್ಬ ಆರೋಪಿಯನ್ನು ಬಂಧಿಸುತ್ತಿದ್ದಾರೆ.

    ಬುಧವಾರ ನಗರದ ಡಿಜೆ ಹಳ್ಳಿಯಲ್ಲಿ ಮತ್ತೊಬ್ಬ ಶಂಕಿತ ಉಗ್ರ ಫಝಿಯನ್ನು ಬಂಧಿಸಿದ್ದಾರೆ. ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿದ್ದ ಫಝಿ, ಪೊಲೀಸರು ಬಂಧಿಸಲು ತೆರಳಿದಾಗ ಹೈಡ್ರಾಮಾ ಮಾಡಿದ್ದಾನೆ.

    ಶಂಕಿತ ಉಗ್ರ ಮೊಹಬೂಬ್ ಪಾಷಾನ ಬಂಧನದ ನಂತರ ಎನ್‍ಐಎ ಅಧಿಕಾರಿಗಳು ಅವನ ಬಳಿ ಮಾಹಿತಿ ಕಲೆಹಾಕಿದ್ದರು. ಪಾಷಾ ನೀಡಿದ ಮಾಹಿತಿ ಮೇರೆಗೆ ಫಝಿಯನ್ನು ಬಂಧಿಸಲು ತೆರಳಿದ್ದಾರೆ. ಈ ವೇಳೆ ಶಂಕಿತ ಉಗ್ರ ಹೈಡ್ರಾಮಾ ಮಾಡಿದ್ದಾನೆ. ನನ್ನನ್ನು ಬಂಧನ ಮಾಡಲು ನೀವು ಯಾರು ಎಂದು ಹೇಳಿ ಓಡಿ ಹೋದವ ಟ್ಯಾನರಿ ಪ್ಯಾಕ್ಟರಿ ಒಳಗೆ ಸೇರಿಕೊಂಡಿದ್ದಾನೆ. (ಟ್ಯಾನರಿ ಅಂದರೆ ಪ್ರಾಣಿಗಳ ಚರ್ಮವನ್ನು ಕೊಳೆಸುವ ಜಾಗ) ಟ್ಯಾನರಿಯಲ್ಲಿ ದುರ್ವಾಸನೆ ಮತ್ತು ಕತ್ತಲು ಇದ್ದ ಜಾಗದಲ್ಲಿ ಬರೋಬರಿ ಒಂದೂವರೆ ಗಂಟೆಗಳ ಕಾಲ ಆಟವಾಡಿಸಿದ್ದಾನೆ. ಸತತ ಒಂದೂವರೆ ಗಂಟೆ ಆಟ ಆಡಿಸಿದರೂ ಎನ್‍ಐಎ ಮತ್ತು ಐಎಸ್‍ಡಿ ಅಧಿಕಾರಿಗಳು ಬಿಡದೇ ಆರೋಪಿ ಫಝಿಯನ್ನು ಬಂಧಿಸಿದ್ದಾರೆ.

    ಒಂದೂವರೆ ಗಂಟೆ ಹೈಡ್ರಾಮದ ಬಳಿಕ ಸಿಕ್ಕಿ ಬಿದ್ದಿದ್ದು, ಮತ್ತೆ ಜೀಪ್ ಹತ್ತಿಸುವಾಗಲೂ ಗಲಾಟೆ ಮಾಡಿದ್ದಾನೆ. ಸ್ಥಳೀಯರ ಸಹಾಯ ಬೇಡಿಕೊಂಡು ಕಿತ್ತಾಟ, ಚೀರಾಟ ಮಾಡಿದ್ದಾನೆ. ಈ ವೇಳೆ ಪೊಲೀಸರು ಸ್ಥಳೀಯರಿಗೆ ಬುದ್ಧಿವಾದ ಹೇಳಿ ಆರೋಪಿಯನ್ನು ಜೀಪಿಗೆ ಹತ್ತಿಸಿದ್ದಾರೆ.

  • ಮತ್ತೊಬ್ಬ ಉಗ್ರನನ್ನ ಬಂಧಿಸಿದ ಎನ್‍ಐಎ

    ಮತ್ತೊಬ್ಬ ಉಗ್ರನನ್ನ ಬಂಧಿಸಿದ ಎನ್‍ಐಎ

    ಬೆಂಗಳೂರು: ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಅಧಿಕಾರಿಗಳು ಮತ್ತೊಬ್ಬ ಉಗ್ರನನ್ನು ಬಂಧಿಸಿದ್ದು, ಬುಧವಾರ ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.

    ನಜೀರ್ ಶೇಖ್ ಬಂಧಿತ ಉಗ್ರ. ಎನ್‍ಐಎ ಅಧಿಕಾರಿಗಳು ಆಗಸ್ಟ್ 26ರಂದು ಅಗರ್ತಲಾದಲ್ಲಿ ಉಗ್ರ ನಜೀರ್ ಶೇಖ್‍ನನ್ನ ಬಂಧಿಸಿದ್ದರು. ಬಳಿಕ ವಿಚಾರಣೆಗೆ ಒಳಪಡಿಸಿದಾಗ ನಜೀರ್ ಶೇಖ್ ಜಮತ್ ಉಲ್ ಮುಜಾಹಿದ್ದೀನ್ ಸಂಘಟನೆ ಸದಸ್ಯ ಎಂದು ತಿಳಿದು ಬಂದಿದೆ. ಇದನ್ನು ಓದಿ: ರಾಮನಗರದ ರಾಜಕಾಲುವೆಯಲ್ಲಿ ಎರಡು ಸಜೀವ ಗ್ರೆನೇಡ್ ಪತ್ತೆ

    ಬೆಂಗಳೂರಿನ ಚಿಕ್ಕಬಾಣವಾರದಲ್ಲಿ ವಾಸಿಸುತ್ತಿದ್ದ ನಜೀರ್ ಶೇಖ್ ಸ್ಥಳೀಯರಿಂದ ಹಣ ಸಂಗ್ರಹಿಸಿ ಜಮತ್ ಉಲ್ ಮುಜಾಹಿದ್ದೀನ್ ಸಂಘಟನೆ ನೀಡುತ್ತಿದ್ದ. ಅಷ್ಟೇ ಅಲ್ಲದೆ ಸ್ಫೋಟಕ ವಸ್ತು ಸಂಗ್ರಹಣೆ ಹಾಗೂ ಉಗ್ರ ಸಂಘಟನೆ ಮಾಡುತ್ತಿದ್ದ. ಈ ಕುರಿತು ಮಾಹಿತಿ ಕಲೆಹಾಕಿದ್ದ ಎನ್‍ಐಎ ಅಧಿಕಾರಿಗಳು ನಜೀರ್ ನನ್ನು ಬಂಧಿಸಿದ್ದಾರೆ.

    ಈ ಹಿಂದೆ ಜಮತ್ ಉಲ್ ಮುಜಾಹಿದ್ದೀನ್ ಸಂಘಟನೆ ಸದಸ್ಯ ಹಬೀಬುಲ್ಲಾ ರೆಹಮಾನ್‍ನನ್ನು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು. ಹಬೀಬುಲ್ಲಾ ರೆಹಮಾನ್ ರಾಮನಗರದಲ್ಲಿ ಜೀವಂತ ಗ್ರೆನೇಡ್ ಇಟ್ಟಿದ್ದ.