Tag: NIA

  • ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

    ಹರ್ಷ ಕೊಲೆ ಕೇಸ್‌ನ ಸಾಕ್ಷಿ ಅಮ್ಜದ್ ಹತ್ಯೆ – ಶಿವಮೊಗ್ಗಕ್ಕೆ ಮತ್ತೆ ಎಂಟ್ರಿ ಕೊಟ್ಟ ಎನ್‌ಐಎ

    ಶಿವಮೊಗ್ಗ: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದ ಹರ್ಷ ಕೊಲೆ ಪ್ರಕರಣದಲ್ಲಿ (Harsha Murder Case) ಸಾಕ್ಷಿಯಾಗಿದ್ದ ಅಮ್ಜದ್ ಹತ್ಯೆ ಕೇಸ್‌ಗೆ ಸಂಬಂಧಿಸಿದಂತೆ ಎನ್‌ಐಎ (NIA) ಅಧಿಕಾರಿಗಳು ನಗರಕ್ಕೆ (Shivamogga) ಭೇಟಿ ನೀಡಿದ್ದಾರೆ.

    ಎನ್‍ಐಎ ಎಸ್ಪಿ ನೇತೃತ್ವದ ಮೂರು ಅಧಿಕಾರಿಗಳ ತಂಡ ಶಿವಮೊಗ್ಗದಲ್ಲಿ ತನಿಖೆ ಆರಂಭಿಸಿದೆ. ಅಮ್ಜದ್ ಕೊಲೆಯಲ್ಲಿ ಹರ್ಷ ಕೊಲೆಯ ನಂಟಿನ ಸಾಧ್ಯತೆ ಹಿನ್ನೆಲೆ ತನಿಖೆ ನಡೆಯುತ್ತಿದೆ. ನಗರದ ಪೊಲೀಸರ ಸಹಾಯದೊಂದಿಗೆ ಎನ್‍ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಜೈಲಾಧಿಕಾರಿಗಳ ಜೊತೆ ಕಿರಿಕ್‌ – ಹರ್ಷ ಕೊಲೆ ಆರೋಪಿಗಳಿಗೆ ಜೈಲಿನಲ್ಲಿ ಕ್ಲಾಸ್‌

    ಅಮ್ಜದ್ ಕೊಲೆಯಲ್ಲಿ ಭಾಗಿಯಾದವರ ವಿಚಾರಣೆಗೂ ತಯಾರಿ ನಡೆಯುತ್ತಿದೆ. ಇತ್ತೀಚೆಗೆ ನಗರದಲ್ಲಿ ಹಲ್ಲೆಗೊಳಗಾಗಿ ಖಾಸಗಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಮ್ಜದ್, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದರು. ಪ್ರಕರಣ ಸಂಬಂಧ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿ ನಿತ್ಯ ಒಂದೊಂದು ಸೌಲಭ್ಯ ನೀಡುವಂತೆ ಹರ್ಷ ಕೊಲೆ ಆರೋಪಿಗಳು ಕಿರಿಕ್‌

  • ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್

    ಮೋದಿ ರಾಷ್ಟ್ರಧ್ವಜ ಹಾರಿಸೋದನ್ನ ತಡೆಯಲು ಬಹುಮಾನ ಘೋಷಿಸಿದ್ದ ಪನ್ನುನ್ ವಿರುದ್ಧ ಕೇಸ್

    ನವದೆಹಲಿ: ಸ್ವಾತಂತ್ರ‍್ಯ ದಿನದಿಂದು (Independence day) ಪ್ರಧಾನಿ ನರೇಂದ್ರ ಮೋದಿ (Narendra Modi) ರಾಷ್ಟ್ರಧ್ವಜ ಹಾರಿಸುವುದನ್ನ ತಡೆಯಲು ಬಹುಮಾನ ಘೋಷಿಸಿದ್ದ ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ (Gurpatwant Singh Pannun) ವಿರುದ್ಧ ಎನ್‌ಐಎ (NIA) ಪ್ರಕರಣ ದಾಖಲಿಸಿಕೊಂಡಿದೆ.

    ಆಗಸ್ಟ್ 10 ರಂದು ಲಾಹೋರ್‌ನ ಪ್ರೆಸ್ ಕ್ಲಬ್‌ನಲ್ಲಿ ನಡೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಪನ್ನುನ್ ಪ್ರಚೋದನಕಾರಿ ಘೋಷಣೆ ಮಾಡಿದ್ದ. ಆ.15 ಸ್ವಾತಂತ್ರ್ಯ ದಿನದಂದು ಕೆಂಪುಕೋಟೆ ಮೇಲೆ ಪ್ರಧಾನಿ ಮೋದಿ ತ್ರಿವರ್ಣ ಧ್ವಜ ಹಾರಿಸುವುದನ್ನು ತಡೆಯುವ ಸಿಖ್ಖ್ ಸೈನಿಕರಿಗೆ 11 ಕೋಟಿ ರೂ. ಬಹುಮಾನ ಘೋಷಣೆ ಮಾಡಿದ್ದ. ಇದನ್ನೂ ಓದಿ: ತನ್ನ ದೇಶದಲ್ಲೇ ಪಾಕ್‌ ಏರ್‌ಸ್ಟ್ರೈಕ್‌ಗೆ 30 ಮಂದಿ ಬಲಿ – UNHRC ಸಭೆಯಲ್ಲಿ ಭಾರತ ತೀವ್ರ ಖಂಡನೆ

    ಸದ್ಯ ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಭಾರತದ ವಿರುದ್ಧ ಸಿಖ್ಖರಲ್ಲಿ ಅಸಮಾಧಾನ ಹರಡಿದ್ದಕ್ಕಾಗಿ ಪನ್ನುನ್ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿದೆ.

    ಪನ್ನುನ್ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್‌ನ ಪ್ರಮುಖ ನಾಯಕನಾಗಿದ್ದು, ಈ ಹಿಂದೆ ಏರ್ ಇಂಡಿಯಾ ಪ್ರಯಾಣಿಕರಿಗೆ ಬೆದರಿಕೆ ಹಾಕುವ ವೀಡಿಯೋ ಸಂದೇಶಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ಎನ್‌ಐಎ ಪನ್ನುನ್ ವಿರುದ್ಧ ಪ್ರಕರಣ ದಾಖಲಿಸಿತ್ತು.

  • ಮದ್ದೂರು ಗಲಭೆ – ರಾಜ್ಯದಲ್ಲಿ ಹಿಂದೂಗಳೇ ಟಾರ್ಗೆಟ್; ಎನ್‌ಐಎ ತನಿಖೆಗೆ ಆಗ್ರಹಿಸುವಂತೆ ಮನವಿ

    ಮದ್ದೂರು ಗಲಭೆ – ರಾಜ್ಯದಲ್ಲಿ ಹಿಂದೂಗಳೇ ಟಾರ್ಗೆಟ್; ಎನ್‌ಐಎ ತನಿಖೆಗೆ ಆಗ್ರಹಿಸುವಂತೆ ಮನವಿ

    – ಅಮಿತ್ ಶಾಗೆ ಹಿಂದೂ ಮುಖಂಡರಿಂದ ಪತ್ರ

    ಬೆಂಗಳೂರು: ಮದ್ದೂರು (Maddur) ಗಣೇಶ ಮೆರವಣಿಗೆ ಗಲಾಟೆ ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗ್ತಿದೆ. ಅದರಲ್ಲೂ ಕಳೆದೊಂದು ವರ್ಷಗಳಿಂದ ಪದೇ ಪದೇ ಈ ಘಟನೆಗಳು ಮರುಕಳಿಸುತ್ತಿದ್ದು, ಈ ಬೆನ್ನಲ್ಲೇ ಹಿಂದೂ ಪರ ಸಂಘಟನೆಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಪತ್ರ ಬರೆದು, ಎನ್‌ಐಎ ತನಿಖೆಗೆ ಆಗ್ರಹಿಸುತ್ತಿದ್ದಾರೆ.

    ಮದ್ದೂರಿನಲ್ಲಿ ಗಣೇಶ ಮೆರವಣಿಗೆ ವೇಳೆ ನಡೆದ ಕಲ್ಲು ತೂರಾಟ (Stone Pelting) ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಹಿಂದೂ ಸಮಾಜದ ಕೆಂಗಣ್ಣಿಗೂ ಕೂಡ ಕಾರಣವಾಗಿದ್ದು, ಆಕ್ರೋಶ ಕೂಡ ಹೊರಹಾಕಲಾಗುತ್ತಿದೆ. ಈಗಾಗಲೇ ಘಟನೆ ಖಂಡಿಸಿ ಅನೇಕ ಹಿಂದೂ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದು, ಈ ನಡುವೆ ಹಿಂದೂ ಮುಖಂಡರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದು, ಹಿಂದೂಗಳ ರಕ್ಷಣೆಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದರಿದ್ರ ಕಾಂಗ್ರೆಸ್ ಆಡಳಿತದಲ್ಲಿ ಹಿಂದೂಗಳಿಗೆ ಅಪಮಾನ, ಹಿಂದೂ ಭಾವನೆಗೆ ಧಕ್ಕೆ: ಬಿ.ವೈ.ವಿಜಯೇಂದ್ರ

    ಬೆಂಗಳೂರಿನ (Bengaluru) ಹಿಂದೂ ಮುಖಂಡ ತೇಜಸ್ ಗೌಡ, ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದು, ರಾಜ್ಯದಲ್ಲಿ ಇತ್ತೀಚಿಗೆ ಆಗುತ್ತಿರುವ ಇಂತಹ ಘಟನೆಗಳ ಸಂಬಂಧ ಎನ್‌ಐಎ (NIA) ಮೂಲಕ ತನಿಖೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ರಾಜ್ಯದ ಹಳೇ ಮೈಸೂರು ಭಾಗದಲ್ಲಿ ಕಳೆದೊಂದು ವರ್ಷಗಳಿಂದ ಆಗುತ್ತಿರುವ ಅನ್ಯಧರ್ಮೀಯ ಗಲಭೆಗಳಿಂದ ಹಿಂದೂಗಳು ಭಯದಲ್ಲಿ ಬದುಕುವಂತಾಗಿದೆ ಎಂದಿದ್ದಾರೆ. ಇದನ್ನೂ ಓದಿ: ಸರ್ಕಾರಕ್ಕೆ ಮದ್ದೂರು ಗಲಭೆ ತಡೆಯೋ ಯೋಗ್ಯತೆಯೇ ಇಲ್ಲ: ಜೋಶಿ ತೀವ್ರ ಆಕ್ರೋಶ

    ಕಳೆದ ವರ್ಷ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ಮೆರವಣಿಗೆ ವೇಳೆ ಪೆಟ್ರೋಲ್ ಬಾಂಬ್ ಹಾಕಲಾಗಿತ್ತು. ನಂತರ ಮೈಸೂರಿನ ಉದಯಗಿರಿಯಲ್ಲೂ ಕ್ಷುಲ್ಲಕ ಕಾರಣಕ್ಕೆ ಪೊಲೀಸರ ಮೇಲೆಯೇ ದಾಳಿ ಮಾಡಲಾಗಿತ್ತು. ಈ ವರ್ಷವು ಮತ್ತೆ ಮಂಡ್ಯ ಜಿಲ್ಲೆಯ ಮದ್ದೂರು ನಗರದಲ್ಲಿ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಮಾಡಿ ಹಿಂದೂಗಳನ್ನ ಭಯಭೀತರನ್ನಾಗಿ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ದೇಶದಲ್ಲಿ ಈ ರೀತಿಯ ಭೀತಿಯಲ್ಲಿ ಬದುಕೋದು ಎಷ್ಟರ ಮಟ್ಟಿಗೆ ಸರಿ. ಈ ರೀತಿ ಘಟನೆಗಳ ಹಿಂದೆ ನಿಷೇಧಿತ ಇಸ್ಲಾಂ ಸಂಘಟನೆಗಳ ಗುಂಪಿರುವ ಅನುಮಾನ ಇದೆ. ಈ ಕೂಡಲೇ ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶ ಮಾಡಿ ಎನ್‌ಐಎ ತನಿಖೆ ಮಾಡಿಸಬೇಕೆಂದು ಪತ್ರ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಮನವಿ ಮಾಡಿದ್ದಾರೆ.

    ಇನ್ನೂ ಮದ್ದೂರು ಘಟನೆ ಸಂಬಂಧ ಸ್ಥಳೀಯ ಲೋಕಸಭಾ ಸದಸ್ಯ ಹಾಗೂ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿಗೂ ಎನ್‌ಐಎ ತನಿಖೆಗಾಗಿ ಕೇಂದ್ರ ಗೃಹ ಇಲಾಖೆ ಗಮನಕ್ಕೆ ತರುವಂತೆ ಮನವಿ ಮಾಡಲಾಗಿದೆ. ತಮ್ಮ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಿಂದ ಇದೇ ರೀತಿ ಕೃತ್ಯಗಳು ನಡೆಯುತ್ತಿದ್ದು, ಈ ಬಗ್ಗೆ ಗಮನಹರಿಸಿ, ಕೇಂದ್ರ ಗೃಹ ಇಲಾಖೆ ಮೂಲಕ ತನಿಖೆ ಮಾಡಿಸಬೇಕೆಂದು ಆಗ್ರಹಿಸಿದ್ದಾರೆ.

    ಒಟ್ಟಾರೆ ವಿಘ್ನವಿನಾಶಕ ಮೆರವಣಿಗೆ ಯಾವುದೇ ವಿಘ್ನಗಳಿಲ್ಲದೆ, ಸುಗಮವಾಗಿ ಆಗಬೇಕಿತ್ತು. ಆದರೆ ಕಿಡಿಗೇಡಿಗಳಿಂದ ಮದ್ದೂರು ಗಣೇಶ ಮೆರವಣಿಗೆ ರಾಜ್ಯದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ.

  • ಧರ್ಮಸ್ಥಳ ಕೇಸ್ NIAಗೆ ಇಲ್ಲ – ಸಿಎಂ ಪರೋಕ್ಷ ಹೇಳಿಕೆ

    ಧರ್ಮಸ್ಥಳ ಕೇಸ್ NIAಗೆ ಇಲ್ಲ – ಸಿಎಂ ಪರೋಕ್ಷ ಹೇಳಿಕೆ

    – ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಮಾಡೋ ಉದ್ದೇಶ ನಮ್ಮದು

    ಬೆಂಗಳೂರು: ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ(NIA) ಕೊಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಮತ್ತೊಮ್ಮೆ ಪರೋಕ್ಷವಾಗಿ ಸ್ಪಷ್ಟಪಡಿಸಿದ್ದಾರೆ.

    ಧರ್ಮಸ್ಥಳ  ಪ್ರಕರಣವನ್ನು  ಎನ್‌ಐಎಗೆ ಕೊಡುವಂತೆ ಸ್ವಾಮೀಜಿಗಳಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ (Amit Shah) ಮನವಿ ಮಾಡಿರುವ ವಿಚಾರಕ್ಕೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಧರ್ಮಸ್ಥಳ ಕೇಸ್ ನಲ್ಲಿ ನಾವು ಎಸ್‌ಐಟಿ (SIT) ರಚನೆ ಮಾಡಿದ್ದೇವೆ. ಎಸ್‌ಐಟಿ ಅವರು ಪೊಲೀಸರೇ ತಾನೆ. ಎನ್‌ಐಎನಲ್ಲಿ ಇರುವವರು ಯಾರು‌? ಅವರು ಪೋಲೀಸರೇ ಎನ್ನುವ ಮೂಲಕ ಎಸ್‌ಐಟಿ ತನಿಖೆಯೇ ಮುಂದುವರೆಯುತ್ತದೆ ಎಂದು ಪರೋಕ್ಷವಾಗಿ ಸ್ಪಷ್ಟಪಡಿಸಿದರು. ಇದನ್ನೂ ಓದಿ:  ನಮಗೆ ಬುರುಡೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ಮುಂದೆ ಜಯಂತ್‌ ಹೇಳಿಕೆ

     

    ಬ್ಯಾಲೆಟ್ ಪೇಪರ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ. ನಮ್ಮ ಅನುಭವದಿಂದ ಈ ತೀರ್ಮಾನ ಮಾಡಿದ್ದೇವೆ. ನಿನ್ನೆ ಕ್ಯಾಬಿನೆಟ್ ‌ನಲ್ಲಿ ನಿರ್ಧಾರ ಮಾಡಿದ್ದೇವೆ ಎಂದರು. ಇದನ್ನೂ ಓದಿ:  ʻಬುರುಡೆʼ ಕೇಸ್‌ | ಮತ್ತೊಂದು ರಹಸ್ಯ ಸ್ಫೋಟ – ಕೇರಳದ ಯೂಟ್ಯೂಬರ್ ಮನಾಫ್‌ಗೆ SIT ನೋಟಿಸ್

    ಅನೇಕ ದೇಶಗಳು ಇವಿಎಂಗೆ ಹೋಗಿ ಮತ್ತೆ ಬ್ಯಾಲೆಟ್ ಪೇಪರ್‌ಗೆ ಬಂದಿರೋ ನಿರ್ದೇಶನಗಳು ಇವೆ ಎಂದು ಹೇಳುವ ಮೂಲಕ ಬ್ಯಾಲೆಟ್ ಪೇಪರ್ ಚುನಾವಣೆಯನ್ನು ಸಮರ್ಥಿಸಿದರು.

  • ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

    ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಕಠಿಣ ಶಿಕ್ಷೆ ಅವಶ್ಯಕ, ಕೇಂದ್ರದ ತನಿಖೆ ಆಗಲಿ: ಡಾ.ಮಂಜುನಾಥ್

    ರಾಮನಗರ: ಧರ್ಮಸ್ಥಳ (Dharmasthala) ಸಂಸ್ಥೆಯ ಸಮಾಜಸೇವೆ ಜನರಿಗೆ ಗೊತ್ತಿದೆ. ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಈ ಪ್ರಕರಣದ ಪಾತ್ರದಾರಿಗಳು ಹಾಗೂ ಸೂತ್ರದಾರಿಗಳನ್ನ ಕಂಡುಹಿಡಿದು ಸೂಕ್ತ ಶಿಕ್ಷೆ ಕೊಡಿಸಬೇಕು ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್ (Dr Manjunath) ಹೇಳಿದ್ದಾರೆ.

    ಧರ್ಮಸ್ಥದಲ್ಲಿ ಬಿಜೆಪಿ-ಜೆಡಿಎಸ್ ಪ್ರತ್ಯೇಕ ಸಮಾವೇಶ ನಡೆಸಿದ ವಿಚಾರ ಕುರಿತು ರಾಮನಗರದಲ್ಲಿ (Ramanagara) ಮಾತನಾಡಿದ ಅವರು, ಎರಡೂ ಪಕ್ಷ ಒಂದೇ ದಿನ ಸಮಾವೇಶ ಮಾಡಿದ್ರೆ ತುಂಬಾ ಓವರ್ ಕ್ರೌಡ್ ಆಗುತ್ತೆ. ಸೋಮವಾರ ಕೂಡ 40 ಸಾವಿರ ಜನ ಬಂದಿದ್ದರು. ಆದರೆ ಇಬ್ಬರ ಉದ್ದೇಶ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ತಡೆಯಬೇಕು. ಧರ್ಮಸ್ಥಳದಲ್ಲಿ ಸರ್ವ ಧರ್ಮ ಸಮ್ಮೇಳನ ಕೂಡಾ ನಡೆಯುತ್ತೆ. ಈ ಅಪಪ್ರಚಾರವನ್ನ ಸರ್ವ ಧರ್ಮಗಳೂ ಖಂಡನೆ ಮಾಡಬೇಕು ಎಂದರು. ಇದನ್ನೂ ಓದಿ: ಪವನ್‌ ಖೇರಾ ಬಳಿ 2 ವೋಟರ್‌ ಐಡಿ – ಬಿಜೆಪಿ ಬಾಂಬ್‌, EC ನೋಟಿಸ್‌ ಜಾರಿ

    ಷಡ್ಯಂತ್ರ ಮಾಡಿರುವವರು ತಮಿಳುನಾಡು, ಕೇರಳದವರಿದ್ದಾರೆ. ಹೊರಗಿನವರ ಪಾತ್ರ ಇರುವ ಸಾಧ್ಯತೆ ಕೂಡ ಇದೆ. ಹಾಗಾಗಿ ಇದನ್ನ ಕೇಂದ್ರದ ಒಂದು ಏಜೆನ್ಸಿ ತನಿಖೆ ಮಾಡಬೇಕಿದೆ. ಆ ಭಾಗದ ಸಂಸದರು ಈಗಾಗಲೇ ಕೇಂದ್ರ ಗೃಹ ಸಚಿವರ ಜೊತೆ ಚರ್ಚೆ ಮಾಡಿದ್ದಾರೆ. ಎಸ್‌ಐಟಿ ತನಿಖೆಯ ವರದಿಯೂ ಬರಲಿ, ಕೇಂದ್ರದ ತನಿಖೆಯೂ ಆಗಲಿ ಎಂದು ತಿಳಿಸಿದರು.  ಇದನ್ನೂ ಓದಿ: ಅಕ್ರಮ ಗಣಿಗಾರಿಕೆಯಲ್ಲಿ ಶಾಮೀಲು ಆರೋಪ – ಕಂದಾಯ ನಿರೀಕ್ಷಕ, ಗ್ರಾಮಾಡಳಿತ ಅಧಿಕಾರಿ ಸಸ್ಪೆಂಡ್

  • ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲ್ಲ, ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಏಕೆ: ಪರಮೇಶ್ವರ್

    ಧರ್ಮಸ್ಥಳ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲ್ಲ, ಎಸ್‌ಐಟಿ ತನಿಖೆಗೆ ಬಿಜೆಪಿ ಅಡ್ಡಿ ಏಕೆ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳ ಪ್ರಕರಣ (Dharmasthala Case) ಬಗ್ಗೆ ಎಸ್‌ಐಟಿ (SIT) ತನಿಖೆ ನಡೆಯುತ್ತಿದ್ದು, ಎನ್‌ಐಎ (NIA) ತನಿಖೆಗೆ ಕೊಡುವ ಅಗತ್ಯವಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಪುನರುಚ್ಚರಿಸಿದ್ದಾರೆ.

    ಬೆಂಗಳೂರಿನಲ್ಲಿ ಮಾತಾಡಿದ ಪರಮೇಶ್ವರ್, ಎನ್‌ಐಎ ತನಿಖೆಗೆ ಪ್ರಕರಣ ಕೊಡೋದಿಲ್ಲ, ಅದರ ಅಗತ್ಯವೂ ಇಲ್ಲ. ಎಸ್‌ಐಟಿ ತನಿಖೆ ಮುಗಿದು ವರದಿ ಬರೋವರೆಗೂ ಬೇರೆ ಯಾವುದೇ ತನಿಖೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಯಾದಗಿರಿ | ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನೂ ಹೃದಯಾಘಾತಕ್ಕೆ ಬಲಿ

    ಎಸ್‌ಐಟಿ ತನಿಖೆಯಲ್ಲಿ ತಪ್ಪೇನಾದ್ರೂ ಆಗಿದೆಯಾ? ತಪ್ಪಾಗಿದ್ರೆ ಬೇರೆ ಏಜೆನ್ಸಿಗೆ ಪ್ರಕರಣ ಕೊಡಬಹುದು. ಆದ್ರೆ ಎಸ್‌ಐಟಿ ತನಿಖೆಯಲ್ಲಿ ತಪ್ಪೇನೂ ಆಗಿಲ್ಲ, ತನಿಖೆ ಚೆನ್ನಾಗಿಯೇ ನಡೀತಿದೆ. ಬಿಜೆಪಿಯವರು ಎಸ್‌ಐಟಿ ತನಿಖೆಗೆ ತೊಂದರೆ ಮಾಡಬೇಕು ಅಂತ ಇದ್ದಾರಾ? ಬಿಜೆಪಿಯವರ ಉದ್ದೇಶ ಏನು ಅಂತ ಅವರು ಮೊದಲು ಸ್ಪಷ್ಟಪಡಿಸಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಇನ್ಮುಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗಲಿದೆ ಇಸ್ಕಾನ್‌ನ ರುಚಿಕರ, ಪೌಷ್ಟಿಕ ಆಹಾರ

    ಇನ್ನು, ಎನ್‌ಜಿಒಗಳಿಗೆ ವಿದೇಶಿ ಹಣ ಬಂದಿರುವ ಆರೋಪ ವಿಚಾರದಲ್ಲಿ ಇಡಿ ಎಂಟ್ರಿಯಾಗಿದೆ ಎಂಬ ಸುದ್ದಿಗೆ ಪ್ರತಿಕ್ರಿಯೆ ಕೊಟ್ಟಿದ್ದು, ಇ.ಡಿಯವರು ತನಿಖೆ ಮಾಡೋದಾದ್ರೆ ಮಾಡಿಕೊಳ್ಳಲಿ. ಇಡಿ ತನಿಖೆಗೆ ನಾವು ಬೇಡ ಅನ್ನಲ್ಲ. ಇಡಿಯವರು ಎಂಟ್ರಿಯಾಗಿದ್ದರೆ ಅದು ಹಣಕಾಸು ವಿಚಾರಕ್ಕೆ ಇರುತ್ತದೆ. ಅವರ ತನಿಖೆಗೂ ನಮ್ಮ ತನಿಖೆಗೂ ಸಂಬಂಧ ಇಲ್ಲ ಎಂದರು. ಇದನ್ನೂ ಓದಿ: ಅತ್ಯಾಚಾರ ಆರೋಪದಲ್ಲಿ ಬಂಧನ; ಪೊಲೀಸರ ಮೇಲೆ ಗುಂಡು ಹಾರಿಸಿ ಆಪ್ ಶಾಸಕ ಪರಾರಿ

    ಎಸ್‌ಐಟಿಗೆ ಮಂಡ್ಯದ ಮಹಿಳೆ ದೂರು ವಿಚಾರ ಬಗ್ಗೆ ಮಾತನಾಡಿ, ಅದೆಲ್ಲ ಎಸ್‌ಐಟಿ ನೋಡಿಕೊಳ್ಳುತ್ತಾರೆ ಎಂದರು. ಪ್ರಣವ್ ಮೊಹಾಂತಿ ಭೇಟಿ ವಿಚಾರ ಬಗ್ಗೆ ಮಾತಾಡಿ, ಮೊಹಾಂತಿಯವರು ಬೇರೆ ವಿಚಾರಕ್ಕೆ ಬಂದಿದ್ದರು. ಅವರು ಧರ್ಮಸ್ಥಳ ವಿಚಾರಕ್ಕೆ ಮಾತ್ರ ಬರ್ತಾರಾ? ಬೇರೆ ವಿಚಾರಕ್ಕೆ ಬಂದು ಭೇಟಿ ಆಗಿದ್ದರು ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ: ನನ್ನಮ್ಮನಿಗೆ ಮಾತ್ರ ಅಲ್ಲ, ಭಾರತೀಯ ತಾಯಂದಿರಿಗೆ ಮಾಡಿದ ಅವಮಾನ – ಪ್ರತಿಪಕ್ಷಗಳಿಗೆ ಮೋದಿ ತಿರುಗೇಟು

  • ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

    ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ – ಎನ್‌ಐಎ ತನಿಖೆಗೆ ಬಿವೈವಿ ಒತ್ತಾಯ

    – ಭಗವಂತ ಕಾಂಗ್ರೆಸ್‌ನವರಿಗೆ ಸದ್ಬುದ್ಧಿ ಕೊಡಲಿ

    ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala) ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಇತಿಶ್ರೀ ಹಾಡುವುದಕ್ಕೆ ನಾವು ಯಾತ್ರೆ ಮಾಡುತ್ತಿದ್ದೇವೆ. ಕ್ಷೇತ್ರದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ ಆಗುತ್ತಿದೆ. ಇದೆಲ್ಲ ಹೊರಗೆ ಬರಬೇಕಾದ್ರೆ ಪ್ರಕರಣವನ್ನ ರಾಜ್ಯ ಸರ್ಕಾರ ಎನ್‍ಐಎ (NIA) ಅಥವಾ ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ಆಗ್ರಹಿಸಿದರು.

    ಧರ್ಮಸ್ಥಳದ ಚಲೋ ಯಾತ್ರೆಗೆ ತೆರಳಿರುವ ಬಿಜೆಪಿ ನಾಯಕರು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿವೈವಿ, ದರ್ಮಸ್ಥಳ ಪ್ರಕರಣದ ಹಿಂದೆ ಇರುವ ದುಷ್ಟ ಶಕ್ತಿಗಳು ಬಹಿರಂಗ ಆಗಬೇಕು. ಹಿಂದೂ ಸಮಾಜವನ್ನ ರಕ್ಷಣೆ ಮಾಡುವಂತಹ ಕೆಲಸ ಆಗಬೇಕು. ಈಗ ಎಸ್‍ಐಟಿಯವರು (SIT) ಬಂಧಿಸಿರುವುದು ಸಣ್ಣ ಪುಟ್ಟವರು. ಇದರ ಹಿಂದೆ ಬಲಾಢ್ಯರು ಇದ್ದಾರೆ. ಅವರನ್ನ ಹೊರೆಗೆ ತೆಗೆಯುವಂತಹ ಕೆಲಸ ಆಗಬೇಕು ಇದಕ್ಕೆ ಎನ್‌ಐಎ ತನಿಖೆ ಅಗತ್ಯ ಎಂದರು. ಇದನ್ನೂ ಓದಿ: ಮಂಜುನಾಥ-ಅಣ್ಣಪ್ಪ ಸ್ವಾಮಿಯಿಂದ ದುಷ್ಟರ ಸಂಹಾರ ಗ್ಯಾರಂಟಿ: ಗುಡುಗಿದ ನಿಖಿಲ್‌ ಕುಮಾರಸ್ವಾಮಿ

    ಕಾಂಗ್ರೆಸ್‌ನಿಂದ ಧರ್ಮಸ್ಥಳ ಚಲೋ ವಿಚಾರಕ್ಕೆ, ಆಡಳಿತ ಪಕ್ಷದವರು ಕೂಡ ಯಾತ್ರೆ, ಸಮಾವೇಶ ಮಾಡಿ ಮಂಜುನಾಥನ ದರ್ಶನ ಪಡೆಯಲಿ. ಆ ಸದ್ಬುದ್ಧಿಯನ್ನು ಭಗವಂತ ಅವರಿಗೆ ಕೊಡಲಿ ಎಂದಿದ್ದಾರೆ.

    ಈ ವೇಳೆ ಸಂಸದ ಬ್ರಿಜೇಶ್ ಚೌಟ, ಶಾಸಕ ಸುನೀಲ್ ಕುಮಾರ್, ಹರೀಶ್ ಪೂಂಜಾ, ವಿಪಕ್ಷ ನಾಯಕ ಆರ್‌. ಅಶೋಕ್‌ ಸೇರಿದಂತೆ ಹಲವು ಬಿಜೆಪಿ ನಾಯಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಅಧಿಕಾರಿ ಹೆಸರಲ್ಲಿ ಸುಳ್ಳು ಮಾಹಿತಿ ಆರೋಪ – ಮಟ್ಟಣ್ಣನವರ್‌, ತಿಮರೋಡಿ ಸೇರಿ ಮೂವರ ವಿರುದ್ಧ FIR

  • ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

    ನಾಳೆ ಎನ್‌ಐಎ ತನಿಖೆಗೆ ಆಗ್ರಹಿಸಿ ಬಿಜೆಪಿಯಿಂದ ಧರ್ಮಸ್ಥಳ ಚಲೋ, ಜಾಗೃತಿ ಸಮಾವೇಶ

    ಬೆಂಗಳೂರು: ಧರ್ಮಸ್ಥಳ(Dharmasthala) ವಿರುದ್ಧ ಷಡ್ಯಂತ್ರ ಖಂಡಿಸಿ ಬಿಜೆಪಿ (BJP) ಹೋರಾಟ ತೀವ್ರಗೊಳಿಸಿದೆ. ಪ್ರಕರಣ ಎನ್ಐಎ (NIA) ತನಿಖೆಗೆ ಕೊಡುವಂತೆ ಒತ್ತಾಯಿಸಿ ನಾಳೆ ಬೃಹತ್ ಧರ್ಮಸ್ಥಳ ಚಲೋ (Dharmasthala Chalo) ಹಾಗೂ ಧರ್ಮಜಾಗೃತಿ ಸಮಾವೇಶಕ್ಕೆ ಬಿಜೆಪಿ ಮುಂದಾಗಿದೆ.

    ಧರ್ಮಸ್ಥಳ ವಿರುದ್ದ ನಡೆಯುತ್ತಿರುವ ಅಪಪ್ರಚಾರ ಹಾಗೂ ವ್ಯವಸ್ಥಿತ ಷಡ್ಯಂತ್ರ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (B. Y. Vijayendra) ನೇತೃತ್ವದಲ್ಲಿ ನಾಳೆ ಧರ್ಮಸ್ಥಳ ಚಲೋ ಅಭಿಯಾನಕ್ಕೆ ಬಿಜೆಪಿ ಮುಂದಾಗಿದೆ. ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ (NIA) ವಹಿಸಲು ಆಗ್ರಹ ಇಟ್ಟುಕೊಂಡು ಈ ಚಲೋ ನಡೆಯುತ್ತಿದೆ.

    ಹಿಂದೂಗಳ ಅಸ್ಮಿತೆ, ನಂಬಿಕೆ ಹಾಗೂ ಭಾವನೆಗಳಿಗೆ ಘಾಸಿ ಮಾಡುತ್ತಿರುವ ಧರ್ಮ ದ್ರೋಹಿಗಳಿಗೆ, ಹಿಂದೂ ವಿರೋಧಿಗಳಿಗೆ ಕಠಿಣ ಎಚ್ಚರಿಕೆ ನೀಡುವ ಜತೆಗೆ ಧಾರ್ಮಿಕ ಕ್ಷೇತ್ರಗಳ ರಕ್ಷಣೆಗೆ ಬದ್ಧತೆಯನ್ನು ತೋರುವುದು ಈ ಅಭಿಯಾನದ ಉದ್ದೇಶ. ಇದನ್ನೂ ಓದಿ: ಚಿನ್ನಯ್ಯನನ್ನು ಬಾಡಿಗಾರ್ಡ್‌ ಎಂದಿದ್ರು, ದೆಹಲಿಗೆ ಅವ್ರು ಕರೆದುಕೊಂಡು ಹೋಗಿದ್ರು: ಸುಜಾತ ಭಟ್‌

    ಎಲ್ಲಾ ವಿಧಾನಸಭಾ ಕ್ಷೇತ್ರಗಳಿಂದ ಪಕ್ಷದ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಧರ್ಮಸ್ಥಳ ಚಲೋದಲ್ಲಿ ಭಾಗವಹಿಸಲಿದ್ದಾರೆ. ನಾಳೆ ಬೆಳಗ್ಗೆ ಆಯಾಯಾ ಕ್ಷೇತ್ರಗಳಿಂದಲೇ ಪೂಜೆ ಮಾಡಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ಬರಲು ಸೂಚಿಸಲಾಗಿದೆ. ಇದನ್ನೂ ಓದಿ: ಧರ್ಮಸ್ಥಳ ಬಳಿಕ ಚಾಮುಂಡೇಶ್ವರಿ ಚಲೋ: ಅಶೋಕ್

    ನಾಳೆ ಬಿಜೆಪಿ ನಾಯಕರು ಮೊದಲು ಮಂಜುನಾಥನ ದರ್ಶನ ಹಾಗೂ ವೀರೇಂದ್ರ ಹೆಗ್ಗಡೆ ಭೇಟಿ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 2 ಕ್ಕೆ ಧರ್ಮಸ್ಥಳದಲ್ಲಿ ಬೃಹತ್ ಧರ್ಮ ಜಾಗೃತಿ ಸಮಾವೇಶ ನಡೆಯಲಿದೆ. ಧರ್ಮಸ್ಥಳ ವಿರುದ್ದ ಪಿತೂರಿ, ಸಂಚು ನಡೆಯುತ್ತಿದೆ. ಧರ್ಮಸ್ಥಳ ಹಾಗೂ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆ ವಿರುದ್ದ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಹಿಂದೂಗಳ ಭಾವನೆಗೆ ಧಕ್ಕೆ ತಂದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಆಗಬೇಕು. ಷಡ್ಯಂತ್ರ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು ಎಂದು ಸಮಾವೇಶದಲ್ಲಿ ಆಗ್ರಹಿಸಲಾಗುತ್ತದೆ. ಸಮಾವೇಶದಲ್ಲಿ ಕೇಂದ್ರ ಸಚಿವರು, ಸಂಸದರು, ಶಾಸಕರು ಭಾಗವಹಿಸಲಿದ್ದಾರೆ.

    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಪ್ರಕರಣವನ್ನು ಸರ್ಕಾರ ಎನ್‌ಐಎ ತನಿಖೆ ಕೊಡಲೇಬೇಕು ಎನ್ನುವುದು ಬಿಜೆಪಿ ಒತ್ತಾಯ. ಸರ್ಕಾರಕ್ಕೆ ಈ ಸಂಬಂಧ ಗಡುವು ನೀಡುವ ಸಾಧ್ಯತೆಯಿದ್ದು, ನಂತರ ಹೋರಾಟ ಮತ್ತಷ್ಟು ತೀವ್ರಗೊಳಿಸಲು ಬಿಜೆಪಿ ಮುಂದಾಗಿದೆ.

  • ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಧರ್ಮಸ್ಥಳ ಕೇಸ್‌ಲ್ಲಿ SIT ತನಿಖೆಗೆ ಸಮಯ ನಿಗದಿ ಮಾಡಿಲ್ಲ: ಪರಮೇಶ್ವರ್

    ಬೆಂಗಳೂರು: ಧರ್ಮಸ್ಥಳ ಕೇಸ್‌ಲ್ಲಿ ಎಸ್‌ಐಟಿ (SIT) ತನಿಖೆ ಪೂರ್ಣ ಮಾಡಲು ಸಮಯ ನಿಗದಿ ಮಾಡಿಲ್ಲ. ಎಸ್‌ಐಟಿ ತನಿಖೆ ನಡೆಸುವಾಗಲೇ ಎನ್‌ಐಎ (NIA) ತನಿಖೆಯೂ ಸಾಧ್ಯವಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ (G Parameshwar) ಸ್ಪಷ್ಟಪಡಿಸಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ತನಿಖೆ ತ್ವರಿತವಾಗಿ ಆಗಬೇಕು ಎಂದು ಹೇಳಿದ್ರೆ ಎಸ್‌ಐಟಿ ಅವರಿಗೆ ಅವರದ್ದೇ ಆದ ತೀರ್ಮಾನ ಇರುತ್ತದೆ. ಎಸ್‌ಐಟಿ ಅವರು ತನಿಖೆ ಮಾಡುತ್ತಿದ್ದಾರೆ. ತನಿಖೆ ಮುಗಿಯೋವರೆಗೂ ಅವರು ಯಾವ ವಿಚಾರಗಳನ್ನು ಹೇಳುವ ಹಾಗೇ ಇಲ್ಲ. ನಾವು ಹೇಳೋ ಹಾಗೇ ಇಲ್ಲ. ತನಿಖೆ ತ್ವರಿತವಾಗಿ ಆಗಲಿ ಅಂತ ಹೇಳಬಹುದು. ಎಸ್‌ಐಟಿಗೆ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ ಅದನ್ನ ಮಾಡ್ತಾರೆ. ಅದರಲ್ಲಿ ಅವರಿಗೆ ಬೇರೆ ಬೇರೆ ಮಾಹಿತಿ ಸಿಗುವ ಹಾಗಿದ್ದರೆ ಅವರೇ ತನಿಖೆ ಮಾಡಿಕೊಳ್ತಾರೆ. ಅದಕ್ಕೆ ನಾವು ಯಾವುದೇ ಡೈರೆಕ್ಷನ್ಸ್ ಕೊಡೋದಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮೇಘಸ್ಫೋಟ; ಒಂದೇ ಕುಟುಂಬದ 7 ಮಂದಿ ಸೇರಿ 11 ಜನ ದುರ್ಮರಣ

    ಸೌಜನ್ಯ ತಾಯಿ ಕೊಟ್ಟಿರುವ ದೂರು ತನಿಖೆ ಆಗುತ್ತಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅದನ್ನ ಎಸ್‌ಐಟಿ ಅವರು ಡಿಸೈಡ್ ಮಾಡ್ತಾರೆ. ಇದಕ್ಕೂ ಅದಕ್ಕೂ ಲಿಂಕ್ ಇದೆಯಾ? ಇಲ್ಲವಾ? ಹಾಗೂ ತನಿಖೆ ಮಾಡಬೇಕಾ? ಬೇಡವಾ? ಅಂತ ಎಸ್‌ಐಟಿ ನಿರ್ಧರಿಸಿ ತನಿಖೆ ಮಾಡುತ್ತದೆ. ನಾವು ಅದನ್ನ ಹೇಳೋಕೆ ಸಾಧ್ಯವಿಲ್ಲ. ಧರ್ಮಸ್ಥಳ ಕೇಸ್ (Dharmasthala Case) ತನಿಖೆ ಇಷ್ಟೇ ದಿನದಲ್ಲಿ ಮಾಡಿ ಅಂತ ಹೇಳಿಲ್ಲ. ಆದಷ್ಟೂ ಬೇಗ ತನಿಖೆ ಮಾಡಿ ಅಂತ ಹೇಳಿದ್ದೇವೆ. ಸಮಯ ನಿಗದಿ ಮಾಡೋಕೆ ಆಗೋದೇ ಇಲ್ಲ. ತನಿಖೆ ಹೇಗೆ ಹೋಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ. ಬೇಗ ಮುಗಿದರೆ ಬೇಗ ವರದಿ ಕೊಡ್ತಾರೆ. ತನಿಖೆ ಪೂರ್ತಿ ಮುಗಿಯುವವರೆಗೂ ಅವರು ತನಿಖೆ ಮಾಡುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ.

    ಬಿಜೆಪಿ-ಜೆಡಿಎಸ್‌ನಿಂದ ಧರ್ಮಸ್ಥಳ ಯಾತ್ರೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆ ಹೀಗೆ ಆಗುತ್ತೆ, ಆಗಬೇಕು, ನಾಳೆ ತನಿಖೆ ಮುಗಿಸಿ ಕೊಡಿ ಎಂದು ಹೇಳೋಕೆ ಆಗಲ್ಲ. ಯಾವುದೇ ತನಿಖೆಯಾದರೂ ಕೂಡ ನಾವು ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ರಾಜಕೀಯಕ್ಕೆ ತಿರುಗಿದರೂ ಕೂಡ ನಾವು ಎಸ್‌ಐಟಿ ಅವರಿಗೆ ಮುಂದಿನ ವಾರ ಮುಗಿಸಿ, ವರದಿ ಕೊಡಿ ಎಂದು ಹೇಳೋಕಾಗಲ್ಲ ಎಂದಿದ್ದಾರೆ.

    ಎನ್‌ಐಎ ತನಿಖೆಗೆ ಕೊಡಿ ಎಂಬ ವಿಪಕ್ಷಗಳ ಆಗ್ರಹ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವುದೇ ತನಿಖೆಗೆ ಕೊಡಬೇಕಾದರೂ ಈಗ ಇಲ್ಲಿ ತನಿಖೆ ನಡೆಯುತ್ತಿದೆ. ತನಿಖೆ ನಡೆಯೋ ಬಗ್ಗೆ ಯಾರದ್ದು ತಕರಾರಿಲ್ಲ. ಎಸ್‌ಐಟಿ ತನಿಖೆ ಎಲ್ಲರೂ ಸ್ವಾಗತ ಮಾಡಿದ್ದಾರೆ. ಧರ್ಮಸ್ಥಳದ ಹೆಗ್ಗಡೆ ಅವರು ತನಿಖೆ ಸ್ವಾಗತ ಮಾಡಿದ್ದಾರೆ. ತನಿಖೆ ನಡೆಯುತ್ತಿದೆ ಈ ಸಮಯದಲ್ಲಿ ಬೇರೆ ಏಜೆನ್ಸಿಯಿಂದ ತನಿಖೆ ಆಗತ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಎನ್‌ಐಎ ತನಿಖೆಗೆ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.

    ಈವರೆಗೂ ಪ್ರಕರಣದಲ್ಲಿ ಯಾರನ್ನು ಬಂಧಿಸದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತನಿಖೆಗಳು ನಾನು, ನೀವು, ಬೇರೆಯವರು ಹೇಳಿದ ಹಾಗೆ ನಡೆಯುವುದಿಲ್ಲ. ಎಸ್‌ಐಟಿ ಅವರಿಗೆ ಅವರದ್ದೇ ಆದ ತನಿಖೆಯ ಕ್ರಮಗಳಿವೆ. ಅದನ್ನ ಅವರು ಮಾಡಿಕೊಳ್ತಾರೆ. ಸ್ಯಾಂಪಲ್ ತಂದು ಎಫ್‌ಎಸ್‌ಎಲ್‌ಗೆ ಕೊಟ್ಟಿದ್ದಾರೆ. ಅದರ ಮಾಹಿತಿ ಪಡೆಯಬೇಕು. ಅದರ ರಿಪೋರ್ಟ್ ಬರಬೇಕು. ಅದರ ಮೇಲೆ ಏನೇನು ಇರುತ್ತದೆ ಗೊತ್ತಿಲ್ಲ ಎಂದರು. ಇನ್ನೂ ದ್ವಾರಕನಾಥ್ ಎನ್‌ಐಎ, ಸಿಬಿಐಗೆ ಕೊಟ್ಟರೆ ಕೇಸ್ ಮುಚ್ಚಿ ಹೋಗುತ್ತದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಎಲ್ಲರ ಹೇಳಿಕೆಗೆ ನಾನು ಪ್ರತಿಕ್ರಿಯೆ ಮಾಡುವುದಿಲ್ಲ ಎಂದಿದ್ದಾರೆ.ಇದನ್ನೂ ಓದಿ: ದೆಹಲಿಯ ಕಲ್ಕಾಜಿ ದೇಗುಲದಲ್ಲಿ ಪ್ರಸಾದ ವಿಚಾರಕ್ಕೆ ಗಲಾಟೆ – 15 ವರ್ಷಗಳಿಂದ ಸೇವಕನಾಗಿದ್ದ ವ್ಯಕ್ತಿಯ ಹತ್ಯೆ

  • ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ -‌ NIAಗೆ ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಳ್ಳೋಕೆ ಅವಕಾಶ ಇದೆ: ಡಿವಿಎಸ್‌

    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಆರೋಪ -‌ NIAಗೆ ಸ್ವಯಂಪ್ರೇರಿತ ಕೇಸ್‌ ದಾಖಲಿಸಿಕೊಳ್ಳೋಕೆ ಅವಕಾಶ ಇದೆ: ಡಿವಿಎಸ್‌

    – ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅಂತ ಆರೋಪ

    ಬೆಂಗಳೂರು: ಧರ್ಮಸ್ಥಳ ವಿರುದ್ಧ ನಡೆದಿರುವ ಷಡ್ಯಂತ್ರ ಪ್ರಕರಣವನ್ನು (Dharmasthala Case) ಎನ್ಐಎ ಸೂಮೋಟೋ‌ ಕೇಸ್ ದಾಖಲಿಸಿಕೊಂಡು ತ‌ನಿಖೆ ನಡೆಸಲು ಅವಕಾಶ ಇದೆ ಎಂದು ಮಾಜಿ ಸಿಎಂ ಡಿ.ವಿ ಸದಾನಂದ ಗೌಡ (DV Sadananda Gowda) ಹೇಳಿದ್ದಾರೆ.

    ಬೆಂಗಳೂರಿನಲ್ಲಿ (Bengaluru) ಮಾತಾಡಿದ ಸದಾನಂದ ಗೌಡ್ರು, ಧರ್ಮಸ್ಥಳ ವಿರುದ್ಧ ಭವಿಷ್ಯದಲ್ಲಿ ಇಂಥ ಅಪಪ್ರಚಾರ, ಪಿತೂರಿಗಳಿಗೆ ಫುಲ್ ಸ್ಟಾಪ್ ಹಾಕುವ ಅಗತ್ಯ ಇದೆ. ಇದು ಎಸ್ಐಟಿಯಿಂದ ಸಾಧ್ಯವಿಲ್ಲ, ಎನ್ಐಎ ತನಿಖೆ (NIA Investigation) ನಡೆದರೆ ಮಾತ್ರ ಸಾಧ್ಯ.‌ ಎನ್ಐಎಗೆ ಸೂಮೋಟೋ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇದೆ. ಎನ್ಐಎ ಸೂಮೋಟೋ ದಾಖಲಿಸಿಕೊಂಡು ಈ ಪ್ರಕರಣದ ತನಿಖೆ ಮಾಡಲಿ ಎಂದು ಒತ್ತಾಯಿಸಿದರು. ಇದನ್ನೂ ಓದಿ: SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    ಧರ್ಮಸ್ಥಳ ವಿರುದ್ಧದ ಪಿತೂರಿಯಲ್ಲಿ ಎಡಪಂಥೀಯರ ಕೈವಾಡ ಇದೆ ಅನ್ನೋ ಅನುಮಾನಗಳಿವೆ. ಎಡಪಂಥೀಯರು ಈಗ ಸ್ವಲ್ಪ ಮಟ್ಟಿಗೆ ಇರುವುದು ಕೇರಳದಲ್ಲಿ ಹಾಗಾಗಿ ಎನ್ಐಎ ಇದನ್ನು ತೆಗೆದುಕೊಳ್ಳಲು ಸೂಕ್ತ ಕಾರಣ ಇದೆ ಎಂದು ಡಿವಿಎಸ್ ಹೇಳಿದ್ರು.

    ಧರ್ಮಸ್ಥಳ ವಿರುದ್ಧ ಸುದೀರ್ಘ ಅವಧಿಯಿಂದ ಷಡ್ಯಂತ್ರ ನಡೆದಿದೆ. ಹೊಸ ಹೊಸ ಪಾತ್ರಧಾರಿಗಳು ಬಂದಿದ್ದಾರೆ. ಎಡಪಂಥೀಯರ ಹೆಗಲ ಮೇಲೆ ಕೋವಿ ಇಟ್ಟು ಗುಂಡು ಹಾರಿಸುವ ಕೆಲಸಗಳೂ ನಡೀತಿವೆ. ಇದೆಲ್ಲ ಸಮಗ್ರವಾಗಿ ತನಿಖೆ ನಡೆಸಬೇಕಾಗುತ್ತದೆ. ಹೀಗಾಗಿ ಈ ಪ್ರಕರಣ ಎನ್ಐಎಗೆ ಕೊಡಬೇಕು ಅನ್ನೋದು ನಮ್ಮ ಒತ್ತಾಯ ಅಂತ ಇದೇವೇಳೆ ಡಿವಿಎಸ್ ತಿಳಿಸಿದರು. ಇದನ್ನೂ ಓದಿ:  ಕಾಂಗ್ರೆಸ್ ಪಕ್ಷದ ‘ಮತಗಳ್ಳತನ’ ಬಯಲು ಮಾಡಿದ ಸಿದ್ದರಾಮಯ್ಯ; ರಾಜಣ್ಣನಂತೆ ವಜಾ ಮಾಡ್ತೀರಾ – ರಾಗಾಗೆ ಅಶೋಕ್ ಸವಾಲ್