Tag: NHSRCL

  • Gujarat| ನಿರ್ಮಾಣ ಹಂತದಲ್ಲಿದ್ದ ಬುಲೆಟ್ ರೈಲು ಸೇತುವೆ ಕುಸಿತ- ಮೂವರು ಕಾರ್ಮಿಕರು ಸಾವು

    Gujarat| ನಿರ್ಮಾಣ ಹಂತದಲ್ಲಿದ್ದ ಬುಲೆಟ್ ರೈಲು ಸೇತುವೆ ಕುಸಿತ- ಮೂವರು ಕಾರ್ಮಿಕರು ಸಾವು

    ಗಾಂಧಿನಗರ: ಗುಜರಾತ್‌ನ (Gujarat) ಆನಂದ್ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್‌ನ ನಿರ್ಮಾಣ ಸ್ಥಳದಲ್ಲಿ ತಾತ್ಕಾಲಿಕ ಸೇತುವೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದಾರೆ.

    ನಿರ್ಮಾಣ ಸ್ಥಳದಲ್ಲಿ ಬುಲೆಟ್ ರೈಲು ಯೋಜನೆಗಾಗಿ ಕೆಲಸ ನಡೆಯುತ್ತಿತ್ತು. ಈ ವೇಳೆ ಸ್ಥಳದಲ್ಲಿದ್ದ ಕಾಂಕ್ರೀಟ್ ಬ್ಲಾಕ್‌ಗಳು ಕುಸಿದು ನಾಲ್ವರು ಕಾರ್ಮಿಕರು ಸಿಲುಕಿದ್ದಾರೆ. ಈ ಪೈಕಿ ಮೂವರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಆನಂದ್ ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ಧಾವಿಸಿ ರಕ್ಷಣಾ ಕಾರ್ಯ ನಡೆಸಿದ್ದಾರೆ. ಇದನ್ನೂ ಓದಿ: Hassan| ಶಾಲೆಗೆಂದು ಮೀಸಲಿಟ್ಟಿದ್ದ ಜಾಗ ವಕ್ಫ್ ಹೆಸರಿಗೆ – ಹೆಚ್‌ಕೆ ಸುರೇಶ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗೆ ಕರೆ

    ನಿರ್ಮಾಣ ಹಂತದಲ್ಲಿರುವ ಬುಲೆಟ್ ರೈಲು (Bullet Train) ಮಾರ್ಗದಲ್ಲಿರುವ ವಸಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಜಸಾನಿ ತಿಳಿಸಿದ್ದಾರೆ. ಆರಂಭದಲ್ಲಿ ಪೊಲೀಸರು ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದಿದೆ ಎಂದು ವರದಿ ಮಾಡಿದ್ದರು. ಆದರೆ, ಅನಂತರ ಬುಲೆಟ್ ರೈಲು ಯೋಜನೆಯ ಮೇಲ್ವಿಚಾರಣೆ ನಡೆಸುತ್ತಿರುವ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೋರೇಶನ್ ಲಿಮಿಟೆಡ್ (NHSRCL) ವಡೋದರಾದ ಮಾಹಿ ನದಿ ಸಮೀಪ ನಿರ್ಮಿಸಲಾಗಿದ್ದ ತಾತ್ಕಾಲಿಕ ಸ್ಟೀಲ್ ಹಾಗೂ ಕಾಂಕ್ರೀಟ್ ಸೇತುವೆ ಕುಸಿಯಿತು ಎಂದು ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: Raichur | ಎಗ್ಗಿಲ್ಲದೆ ಕಲಬೆರಕೆ ಸೇಂದಿ ಮಾರಾಟ- ಅಧಿಕಾರಿಗಳ ದಾಳಿ ವೇಳೆ 500 ಗ್ರಾಂ ಸಿಎಚ್ ಪೌಡರ್ ಜಪ್ತಿ

    ಘಟನೆಯಲ್ಲಿ ನಾಲ್ವರು ಕಾರ್ಮಿಕರು ಕಾಂಕ್ರೀಟ್ ಬ್ಲಾಕ್ ಅಡಿಯಲ್ಲಿ ಸಿಲುಕಿಕೊಂಡರು. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಸಂದರ್ಭ ಸಾವನ್ನಪ್ಪಿದರು ಎಂದು ಆನಂದ್‌ನ ಅಗ್ನಿಶಾಮಕದ ದಳದ ಅಧಿಕಾರಿ ಧರ್ಮೇಶ್ ಗೋರ್ ತಿಳಿಸಿದ್ದಾರೆ. ಸ್ಥಳೀಯ ಸ್ವಯಂಸೇವಕರ ನೆರವಿನಿಂದ ರಕ್ಷಣಾ ತಂಡ ಕ್ರೇನ್ ಹಾಗೂ ಬುಲ್ಡೋಜರ್‌ಗಳನ್ನು ಬಳಸಿಕೊಂಡು ಅವಶೇಷಗಳನ್ನು ತೆರವುಗೊಳಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಲಾರಿ, ಕಾರು ನಡುವೆ ಅಪಘಾತ- ದಂಪತಿ ಸ್ಥಳದಲ್ಲೇ ಸಾವು

  • ಗುಜರಾತ್‍ನಲ್ಲಿ 8 ಬುಲೆಟ್ ಟ್ರೈನ್ ನಿಲ್ದಾಣಗಳ ಅಡಿಪಾಯ ಕಾಮಗಾರಿ ಪೂರ್ಣ

    ಗುಜರಾತ್‍ನಲ್ಲಿ 8 ಬುಲೆಟ್ ಟ್ರೈನ್ ನಿಲ್ದಾಣಗಳ ಅಡಿಪಾಯ ಕಾಮಗಾರಿ ಪೂರ್ಣ

    ಗಾಂಧಿನಗರ: ಗುಜರಾತ್‍ನಲ್ಲಿ (Gujarat) ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ (Bullet Train) ಯೋಜನೆಯ 8 ರೈಲು ನಿಲ್ದಾಣಗಳಿಗೆ ಅಡಿಪಾಯದ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ನರ್ಮದಾ ನದಿಯ ಮೇಲಿನ ಸೇತುವೆಯ ನಿರ್ಮಾಣ ಕೂಡ ಒಳಗೊಂಡಿದೆ ಎಂದು ಯೋಜನೆಯ ನಿರ್ದೇಶಕ ಪ್ರಮೋದ್ ಶರ್ಮಾ ತಿಳಿಸಿದ್ದಾರೆ.

    ಮೇಕ್ ಇನ್ ಇಂಡಿಯಾ ಉಪಕ್ರಮದ ಮೂಲಕ ಕಾಮಗಾರಿಗಳ ಪ್ರಯತ್ನಗಳು ಮುಂದುವರಿಯುತ್ತಿವೆ. ಮಹತ್ವಾಕಾಂಕ್ಷೆಯ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಯೋಜನೆಯನ್ನು ಮೇಲ್ವಿಚಾರಣೆ ಮಾಡುವ ರಾಷ್ಟ್ರೀಯ ಹೈ-ಸ್ಪೀಡ್ ರೈಲ್ ಕಾರ್ಪೋರೇಷನ್‌ ಲಿಮಿಟೆಡ್ (NHSRCL), ಕಾರಿಡಾರ್ ಉದ್ದಕ್ಕೂ ಶಬ್ದ ತಡೆಗಳನ್ನು ಅಳವಡಿಸುವ ಕೆಲಸ ನಡೆಸುತ್ತಿದೆ. ಇದನ್ನೂ ಓದಿ: 2040ಕ್ಕೆ ಮಾನವ ಸಹಿತ ಚಂದ್ರಯಾನ – 2,104 ಕೋಟಿ ಅನುದಾನಕ್ಕೆ ಕೇಂದ್ರ ಅಸ್ತು

    ಶಬ್ದ ತಡೆಗೋಡೆಗಳು 2 ಮೀಟರ್ ಎತ್ತರ ಮತ್ತು 1 ಮೀಟರ್ ಅಗಲದ ಕಾಂಕ್ರೀಟ್ ಪ್ಯಾನಲ್‍ಗಳಾಗಿವೆ. ಈ ಪ್ಯಾನಲ್‍ಗಳು ಪ್ರತಿಯೊಂದೂ 830-840 ಕೆ.ಜಿಯಷ್ಟು ತೂಗುತ್ತದೆ. ಈ ಶಬ್ದ ತಡೆಗೋಡೆಗಳು ರೈಲಿನ ಟ್ರ್ಯಾಕ್ ಮತ್ತು ಚಕ್ರದ ನಡುವಿನ ಘರ್ಷಣೆಯಿಂದ ಉಂಟಾಗುವ ಶಬ್ದಕ್ಕೆ ತಡೆ ಉಂಟುಮಾಡಿ ಚದುರಿಸುತ್ತದೆ ಎಂದು ತಿಳಿಸಿದ್ದಾರೆ.

    ಯೋಜನೆಯಡಿ ಗುಜರಾತ್ ವಿಭಾಗದಲ್ಲಿ 21 ಕಿಮೀ ಸಮುದ್ರದ ಸುರಂಗ ಮತ್ತು 1.4 ಕಿಮೀ ನರ್ಮದಾ ನದಿಯ ಮೇಲೆ ಸೇತುವೆಯ ನಿರ್ಮಾಣದ ಕಾರ್ಯ ಪ್ರಾರಂಭವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕೊಲೆ‌ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು

  • ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ವಜಾ

    ಮೋದಿ ಕನಸಿನ ಬುಲೆಟ್ ಟ್ರೈನ್ ಯೋಜನೆ ಮುಖ್ಯಸ್ಥ ಸತೀಶ್ ಅಗ್ನಿಹೋತ್ರಿ ವಜಾ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸು ಬುಲೆಟ್ ಟ್ರೈನ್ ಯೋಜನೆಯ ಮುಖ್ಯಸ್ಥರಾಗಿದ್ದ ಸತೀಶ್ ಅಗ್ನಿಹೋತ್ರಿ ಅವರನ್ನು ಕೇಂದ್ರ ಸರ್ಕಾರ ವಜಾಗೊಳಿಸಿದೆ.

    NARENDRA MODI

    ರಾಷ್ಟ್ರೀಯ ಹೈಸ್ಪೀಡ್‌ ರೈಲ್ವೇ ಕಾರ್ಪೋರೇಶನ್‌ ಲಿಮಿಟೆಡ್‌ (NHSRCL) ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಮೇಲೆ ಅಧಿಕಾರ ದುರ್ಬಳಕೆ ಮತ್ತು ಯೋಜನೆ ಹಣವನ್ನು ವೈಯಕ್ತಿಕವಾಗಿ ಬಳಕೆ ಮಾಡಿರುವ ಮತ್ತು ಬೇರೆ ಕಂಪನಿಗೆ ಹೂಡಿಕೆ ಮಾಡಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆ ಕೇಂದ್ರ ಸರ್ಕಾರ ಇದೀಗ ವಜಾಗೊಳಿಸಿದೆ. ಇದನ್ನೂ ಓದಿ: ಈದ್‌ನಲ್ಲಿ 1 ದಿನ ಹಸು ತಿನ್ನದಿದ್ರೆ ನೀವು ಸಾಯಲ್ಲ; ಗೋಹತ್ಯೆ ಮಾಡದೇ ಬಕ್ರೀದ್‌ ಆಚರಿಸೋಣ – ಮುಸ್ಲಿಮರಿಗೆ ಅಜ್ಮಲ್‌ ಕರೆ

    ಸತೀಶ್ ಅಗ್ನಿಹೋತ್ರಿ ಬುಲೆಟ್ ಟ್ರೈನ್ ಮುಖ್ಯಸ್ಥ ಹುದ್ದೆಯನ್ನು ರದ್ದುಗೊಳಿಸಲು ಸಕ್ಷಮ ಪ್ರಾಧಿಕಾರವು ಅನುಮೋದನೆ ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಬಿಡುಗಡೆ ಮಾಡಲು ನಿರ್ದೇಶಿಸಲಾಗಿದೆ ಎಂದು NHSRCL ಕಂಪನಿ ಕಾರ್ಯದರ್ಶಿಗೆ ಜುಲೈ 7 ರಂದು ರೈಲ್ವೇ ಮಂಡಳಿ ಬರೆದ ಪತ್ರದಲ್ಲಿ ಸ್ಪಷ್ಟವಾಗಿದೆ. ಪ್ರಸ್ತುತ NHSRCLನಲ್ಲಿ ನಿರ್ದೇಶಕರಾಗಿ ಅಧಿಕಾರದಲ್ಲಿರುವ ರಾಜೇಂದ್ರ ಪ್ರಸಾದ್ ಅವರಿಗೆ ವ್ಯವಸ್ಥಾಪಕ ನಿರ್ದೇಶಕರಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಳ್ಳಲು ನಿರ್ದೇಶಿಸಲಾಗಿದೆ. ಇದನ್ನೂ ಓದಿ: 100ಕ್ಕೂ ಹೆಚ್ಚು ಟ್ವಿಟ್ಟರ್ ಎಚ್‌ಆರ್ ಉದ್ಯೋಗಿಗಳು ವಜಾ

    ಅಗ್ನಿಹೋತ್ರಿ ವಿರುದ್ಧ ಭ್ರಷ್ಟಾಚಾರ ತಡೆ ಕಾಯಿದೆ, 1988ರ ಅಡಿಯಲ್ಲಿ ತನಿಖೆ ನಡೆಸಿ ಆರು ತಿಂಗಳೊಳಗೆ ಅಥವಾ 2022ರ ಡಿಸೆಂಬರ್ 12 ರೊಳಗೆ ತನಿಖಾ ವರದಿಯನ್ನು ಲೋಕಪಾಲ್ ಕಚೇರಿಗೆ ಸಲ್ಲಿಸುವಂತೆ ಲೋಕಪಾಲ್ ನ್ಯಾಯಾಲಯವು ಸಿಬಿಐಗೆ ನಿರ್ದೇಶನ ನೀಡಿದೆ.

    Live Tv
    [brid partner=56869869 player=32851 video=960834 autoplay=true]