Tag: NGOs

  • ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ಭಾರತದ ಎನ್‌ಜಿಒಗಳಿಗೆ ಜಾರ್ಜ್ ಸೊರೊಸ್ ನಿಧಿಯಿಂದ ಹಣ ವರ್ಗಾವಣೆ – ಪತ್ತೆ ಹಚ್ಚಿದ ಇಡಿ

    ನವದೆಹಲಿ: ಭಾರತದಲ್ಲಿನ ಕೆಲ ಎನ್‌ಜಿಒ ಸಂಸ್ಥೆಗಳಿಗೆ ಅಮೆರಿಕದ ಶತಕೋಟ್ಯಧಿಪತಿ ಜಾರ್ಜ್ ಸೊರೊಸ್‌ (George Soros) ನೇತೃತ್ವದ ಆರ್ಥಿಕ ಅಭಿವೃದ್ಧಿ ನಿಧಿಯಿಂದ ಹಣಕಾಸಿನ ನೆರವು ನೀಡಿರುವುದು ಜಾರಿ ನಿರ್ದೇಶನಾಲಯದ (ED) ತನಿಖೆಯಲ್ಲಿ ಬಹಿರಂಗವಾಗಿದೆ.

    ಹೌದು. ಸೊರೊಸ್ ಆರ್ಥಿಕ ಅಭಿವೃದ್ಧಿ ನಿಧಿ (SEDF) ಭಾರತದಲ್ಲಿ ಎನ್‌ಜಿಒ ವಲಯಕ್ಕೆ ಹಣಕಾಸಿನ ನೆರವು ನೀಡಿದೆ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಜಾರ್ಜ್ ಸೊರೊಸ್‌ಗೆ ಇಡಿ ಶಾಕ್‌ – ಓಪನ್ ಸೊಸೈಟಿ ಫೌಂಡೇಶನ್‌ ಕಚೇರಿ ಮೇಲೆ ದಾಳಿ

    ಇಡಿ ತನಿಖೆಯ ಪ್ರಕಾರ, ಸೊರೊಸ್‌ ಆರ್ಥಿಕ ಅಭಿ‌ವೃದ್ಧಿ ನಿಧಿಯು ರೂಟ್‌ಬ್ರಿಡ್ಜ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ (RSPL), ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್ (RAPL) ಮತ್ತು ಅಸರ್ ಸೋಶಿಯಲ್ ಇಂಪ್ಯಾಕ್ಟ್ ಅಡ್ವೈಸರ್ಸ್ ಪ್ರೈವೇಟ್ ಲಿಮಿಟೆಡ್ (ASAR) ಎಂಬ ಮೂರು ಭಾರತೀಯ ಕಂಪನಿಗಳಿಗೆ ವಿದೇಶಿ ನೇರ ಹೂಡಿಕೆ (FDI) ಮತ್ತು ಸಲಹಾ/ಸೇವಾ ಶುಲ್ಕದ ಹೆಸರಿನಲ್ಲಿ ಹಣದ ನೆರವು ನೀಡಿದೆ. ಈ ಕಂಪನಿಗಳು 2020-21 ರಿಂದ 2023-24ರ ನಡುವೆ ಸುಮಾರು 25 ಕೋಟಿ ರೂ.ಗಳ ನೆರವನ್ನು ಪಡೆದಿವೆ. ಆದ್ರೆ ಸೊರೊಸ್‌ನ ಓಪನ್ ಸೊಸೈಟಿ ಇನ್‌ಸ್ಟಿಟ್ಯೂಟ್ (OSI) ಅನ್ನು ಮೇ 2016 ರಿಂದ ಅನಪೇಕ್ಷಿತ ಚಟುವಟಿಕೆಗಳಿಗಾಗಿ ಗೃಹ ಸಚಿವಾಲಯವು ಕಣ್ಗಾವಲಿನಲ್ಲಿ ಇರಿಸಿದೆ ಎಂದು ತಿಳಿದುಬಂದಿದೆ.

    ಇಡಿ ಪ್ರಕಾರ, ಎಸ್‌ಇಡಿಎಫ್‌ನಿಂದ ಆರ್‌ಎಸ್‌ಪಿಎಲ್ 18.64 ಕೋಟಿ ರೂ.ಗಳನ್ನು ಪರಿವರ್ತಿಸಬಹುದಾದ ಆದ್ಯತೆಯ ಷೇರುಗಳ (CCPS) ರೂಪದಲ್ಲಿ ಪಡೆದುಕೊಂಡಿದೆ. ಇದರ ಮೌಲ್ಯವು ಪ್ರತಿ ಷೇರಿಗೆ 2.5 ರಿಂದ 2.6 ಲಕ್ಷ ರೂ.ಗಳಷ್ಟಿದೆ. ಎಫ್‌ಸಿಆರ್‌ಎ ನಿಬಂಧನೆಗಳನ್ನು ತಪ್ಪಿಸಲು ಇದು ಅಡ್ಡಮಾರ್ಗ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಏಕೆಂದರೆ ಸರ್ಕಾರದ ಪೂರ್ವಾನುಮತಿಯಿಲ್ಲದೇ ಭಾರತೀಯ ಎನ್‌ಜಿಒಗಳಿಗೆ ನೇರವಾಗಿ ದೇಣಿಗೆ ನೀಡಲು SEDFಗೆ ಯಾವುದೇ ಅನುಮತಿ ಇಲ್ಲ ಎಂದು ಹೇಳಲಾಗಿದೆ. ಇನ್ನೂ ರೂಟ್‌ಬ್ರಿಡ್ಜ್ ಅಕಾಡೆಮಿ ಪ್ರೈವೇಟ್ ಲಿಮಿಟೆಡ್‌ಗೆ (RAPL) 2.70 ಕೋಟಿ ರೂ.ಗಳ ನೆರವನ್ನು ಪಡೆದುಕೊಂಡಿದೆ.  ಇದನ್ನೂ ಓದಿ: ಭಾರತ ವಿರೋಧಿ ಸೊರೊಸ್‌ ಸಂಸ್ಥೆಯ ಜೊತೆ ಸೋನಿಯಾಗೆ ನಂಟು – ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದ ಕಿರಣ್‌ ರಿಜಿಜು

    ಮಾರಿಷಸ್ ಸಂಪರ್ಕ
    ಮಾರಿಷಸ್ ಮೂಲದ ಆಸ್ಪಾದ ಇನ್ವೆಸ್ಟ್‌ಮೆಂಟ್ ಕಂಪನಿ (ಎಐಸಿ) ಮೂಲಕ ಒಎಸ್‌ಐಗೆ ಸಂಬಂಧಿಸಿದ ಹಣವನ್ನು ಭಾರತಕ್ಕೆ ಕಳುಹಿಸಲಾಗಿದೆ ಎಂದು ಇಡಿ ತನಿಖೆಯಿಂದ ತಿಳಿದುಬಂದಿದೆ. 2013 ರಲ್ಲಿ ಬೆಂಗಳೂರಿನಲ್ಲಿ ನೋಂದಾಯಿಸಲಾದ Aspada Investment Advisors Pvt Ltd (AIAPL), SEDFನ ಭಾರತೀಯ ಹೂಡಿಕೆಗಳನ್ನು ನಿರ್ವಹಿಸಿತು ಮತ್ತು ಸಲಹೆ ನೀಡಿತು ಎಂಬುದನ್ನು ಇಡಿ ತನಿಖೆ ಬಹಿರಂಗಪಡಿಸಿದೆ. ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ವೀಸಾ ಬಂದ್‌! ಪರಿಣಾಮವೇನು?

    ಯಾರು ಈ ಸೊರಸ್?
    94 ವರ್ಷದ ಸೊರಸ್ ವಿಶ್ವದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಯಹೂದಿ ಕುಟುಂಬದಲ್ಲಿ ಜನಿಸಿದ್ದ ಇವರು 17 ವರ್ಷದವರಿದ್ದಾಗ ನಾಝಿಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಹಂಗೇರಿಯನ್ನು ತೊರೆದು 1947ರಲ್ಲಿ ಲಂಡನ್ ಸೇರಿದ್ದರು. ನಂತರ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ತತ್ವಶಾಸ್ತ್ರ ಅಧ್ಯಯನ ಮಾಡಿದ್ದರು.

    ವಿದ್ಯಾಭ್ಯಾಸದ ನಂತರ ಲಂಡನ್ ಮರ್ಚೆಂಟ್ ಬ್ಯಾಂಕ್ ಸಿಂಗರ್ ಮತ್ತು ಫ್ರೈಡ್‍ಲ್ಯಾಂಡರ್‍ಗೆ ಸೇರಿದರು. 1956ರಲ್ಲಿ ನ್ಯೂಯಾರ್ಕ್‍ಗೆ ತೆರಳಿದ ಅವರು ಯುರೋಪಿಯನ್ ಸೆಕ್ಯುರಿಟಿ ವಿಶ್ಲೇಷಕರಾಗಿ ಸೇರಿಕೊಂಡರು. 1973ರಲ್ಲಿ ಹೂಡಿಕೆ ಸಂಸ್ಥೆಯನ್ನು ಸ್ಥಾಪಿಸಿ ವಿದೇಶದ ಕಂಪನಿಗಳಲ್ಲಿ ಹಣ ಹೂಡಿ ಅದರಲ್ಲಿ ಯಶಸ್ಸು ಕಂಡರು.  ಇದನ್ನೂ ಓದಿ: ಅದಾನಿ ಕಂಪನಿಗಳನ್ನು ಕಾಡಿದ್ದ ಹಿಂಡನ್‌ಬರ್ಗ್‌ಗೆ ಬೀಗ – ಬಂದ್‌ ಆಗಿದ್ದು ಯಾಕೆ?

    ಸದ್ಯ ಸೊರಸ್ 720 ಶತಕೋಟಿ ಡಾಲರ್ ಒಡೆಯರಾಗಿದ್ದಾರೆ. ಪ್ರಜಾಪ್ರಭುತ್ವ ಹಾಗೂ ವಾಕ್ ಸ್ವಾತಂತ್ರ್ಯವನ್ನು ಉತ್ತೇಜಿಸುವ ಸಂಘಟನೆಗಳು ಹಾಗೂ ವ್ಯಕ್ತಿಗಳಿಗೆ ಅನುದಾನ ನೀಡುವ ಓಪನ್ ಸೊಸೈಟಿ ಫೌಂಡೇಶನ್‍ಗಳನ್ನು ಅವರು ಸ್ಥಾಪಿಸಿದ್ದಾರೆ. ಭಾರತದ ಹಲವು ಮಾಧ್ಯಮ ಸಂಸ್ಥೆಗಳಿಗೆ ಓಪನ್ ಸೊಸೈಟಿ ಅನುದಾನ ನೀಡುತ್ತಿದೆ.

  • Gujarat Floods | ಸ್ಕೂಟಿ ಮೇಲೆ ಹೊತ್ತೊಯ್ದು ಮೊಸಳೆ ರಕ್ಷಣೆ – ವೀಡಿಯೋ ವೈರಲ್

    Gujarat Floods | ಸ್ಕೂಟಿ ಮೇಲೆ ಹೊತ್ತೊಯ್ದು ಮೊಸಳೆ ರಕ್ಷಣೆ – ವೀಡಿಯೋ ವೈರಲ್

    ಗಾಂಧಿನಗರ: ಗುಜರಾತ್‌ನಲ್ಲಿ ಪ್ರವಾಹದಿಂದಾಗಿ (Gujarat floods) ಬೀದಿಯಲ್ಲಿ ಬಿದ್ದಿದ್ದ ಮೊಸಳೆಗಳನ್ನು ರಕ್ಷಿಸುವ ಕೆಲಸಗಳು ಭರದಿಂದ ಸಾಗುತ್ತಿವೆ. ಅದರಲ್ಲೂ ವಡೋದರಾ ನಗರದಲ್ಲಿ ಯುವಕರಿಬ್ಬರು ಮೊಸಳೆಯೊಂದನ್ನು (Crocodile) ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ ಘಟನೆ ನಡೆದಿದೆ. ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಸಂದೀಪ್ ಠಾಕೂರ್ ಮತ್ತು ರಾಜ್ ಭಾವ್ಸಾರ್ ಎಂಬ ಯುವಕರಿಬ್ಬರು ಮೊಸಳೆಯನ್ನು ಸ್ಕೂಟಿ ಮೇಲೆ ಹೊತ್ತೊಯ್ದು ರಕ್ಷಿಸಿದ್ದಾರೆ. ಪ್ರವಾಹದಿಂದಾಗಿ ನೀರಿನಲ್ಲಿ ತೇಲಿಕೊಂಡು ಬಂದು ರಸ್ತೆಯಲ್ಲಿ ಬಿದ್ದಿದ್ದ ಮೊಸಳೆಯ ಬಾಯಿಗೆ ಪಟ್ಟಿ ಕಟ್ಟಿ, ಬಳಿಕ ಸ್ಕೂಟಿ ಮೇಲೆ ಅಡ್ಡಲಾಗಿ ಮಲಗಿಸಿಕೊಂಡು ಪ್ರಾಣಿ ರಕ್ಷಣಾ ಸ್ಥಳಕ್ಕೆ ಸಾಗಿಸಿದ್ದಾರೆ. ಇದನ್ನೂ ಓದಿ: ಗೌರಿ ಹಬ್ಬದಂದು ಮುಖ್ಯಮಂತ್ರಿಗಳಿಂದ ಎತ್ತಿನಹೊಳೆ ಯೋಜನೆಯ ಏತ ಕಾಮಗಾರಿ ಉದ್ಘಾಟನೆ – ಡಿಕೆಶಿ

    ಪ್ರವಾಹದಿಂದಾಗಿ ವಡೋದರಾದ (Vadodara) ವಿಶ್ವಾಮಿತ್ರಿ ನದಿಯಿಂದ ಮೊಸಳೆಗಳ ದಂಡೇ ಊರಿಗೆ ನುಗ್ಗಿವೆ. ಮೊಸಳೆ ಜೊತೆಗೆ ಇನ್ನೂ ಹಲವಾರು ಪ್ರಾಣಿಗಳು ಪ್ರವಾಹದಿಂದ ತೊಂದರೆಗೆ ಸಿಲುಕಿವೆ. ಇದರಿಂದಾಗಿ ಪ್ರಾಣಿಗಳ ರಕ್ಷಣೆಗೆ ವಡೋದರಾದಲ್ಲಿ ಕೆಲವು ವಸತಿ ಪ್ರದೇಶಗಳನ್ನು ನಿಗದಿಪಡಿಸಲಾಗಿದೆ.

    ಈವರೆಗೆ ನಗರದಲ್ಲಿ 40 ಮೊಸಳೆಗಳು ಕಂಡುಬಂದಿವೆ. ಈ ಪೈಕಿ 33 ಮೊಸಳೆಗಳನ್ನು ಸುರಕ್ಷಿತವಾಗಿ ನದಿಗೆ ಬಿಡಲಾಗಿದೆ. 5 ಮೊಸಳೆಗಳು ಪುನರ್ವಸತಿ ಕೇಂದ್ರದಲ್ಲಿವೆ. ಎರಡು ಮೊಸಳೆಗಳು ಅಪಘಾತದಲ್ಲಿ ಸಾವನ್ನಪ್ಪಿವೆ ಎಂದು ವಡೋದರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಞೇಶ್ವರ್ ವ್ಯಾಸ್ ಮಾಹಿತಿ ನೀಡಿದ್ದಾರೆ.

    ಅರಣ್ಯ ಇಲಾಖೆಯ ಜೊತೆ ಎನ್‌ಜಿಒ ತಂಡಗಳು ಕೂಡ ಪ್ರಾಣಿಗಳ ರಕ್ಷಣೆಯಲ್ಲಿ ತೊಡಗಿವೆ. ಹಾಗೆಯೇ ಪ್ರಾಣಿಗಳ ರಕ್ಷಣೆಗೆ ಸಹಾಯವಾಣಿ ತೆರೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಓಡಿಸುತ್ತಿದ್ದ ಹಳೇ ಬೈಕ್‌ಗೆ ಹೊಸ ರೂಪ – 1981 ರ ಮಾಡೆಲ್ ಎಝಡಿ ರೋಡ್ ಕಿಂಗ್ ಬೈಕ್

  • 12 ಸಾವಿರ NGOಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು

    12 ಸಾವಿರ NGOಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು

    ನವದೆಹಲಿ: ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ(FCRA) ನಿಯಮವನ್ನು ಪಾಲನೆ ಮಾಡದ್ದಕ್ಕೆ ಐಐಟಿ ದೆಹಲಿ ಹಳೆ ವಿದ್ಯಾರ್ಥಿಗಳ ಸಂಘ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ ಸೇರಿದಂತೆ ದೇಶದ 12,000ಕ್ಕೂ ಹೆಚ್ಚು ಸರ್ಕಾರೇತರ ಸಂಸ್ಥೆ(NGO)ಗಳ ನೋಂದಣಿಯನ್ನು ರದ್ದು ಗೊಳಿಸಲು ಕೇಂದ್ರ ಗೃಹ ಸಚಿವಾಲಯ ತೀರ್ಮಾನಿಸಿದೆ.

    FCRA ಪರವಾನಿಗೆಯನ್ನು ನವೀಕರಣಗೊಳಿಸುವ ಸಂಬಂಧ 29 ಸೆಪ್ಟೆಂಬರ್ 2020 ರಿಂದ 31 ಡಿಸೆಂಬರ್ 2021ರ ಅವಧಿ ಒಳಗಡೆ 18,778 ಎನ್‍ಜಿಒಗಳು ಅರ್ಜಿ ಸಲ್ಲಿಸಿದ್ದವು. ಆದರೆ 6 ಸಾವಿರಕ್ಕೂ ಹೆಚ್ಚು ಎನ್‍ಜಿಒಗಳು ಅರ್ಜಿ ಸಲ್ಲಿಸಿರಲಿಲ್ಲ. ಇದನ್ನು ಹೊರತು ಪಡಿಸಿ ಉಳಿದಂತೆ ಈಗಾಗಲೇ 5,789 ಎನ್‍ಜಿಒ ಮತ್ತು ಸಂಘ ಸಂಸ್ಥೆಗಳ FCRA ನೋಂದಣಿ ಪರವಾನಿಗೆ ರದ್ದಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಬೆಲೆ ಏರಿಕೆಯ ಬಿಸಿ – ಯಾವ ವಸ್ತುಗಳು ಎಷ್ಟು ಏರಿಕೆ?

    ಐಐಟಿ ದೆಹಲಿ ಹಳೆ ವಿದ್ಯಾರ್ಥಿಗಳ ಸಂಘ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಭಾರತೀಯ ವೈದ್ಯಕೀಯ ಸಂಘ, ನೆಹರು ಮೆಮೊರಿಯಲ್ ಮ್ಯೂಸಿಯಮ್ ಹಾಗೂ ಗ್ರಂಥಾಲಯಗಳು, ಮದರ್ ತೆರೇಸಾ ಮಿಷನರೀಸ್ ಆಫ್ ಚಾರಿಟಿ ಸೇರಿ 12,000 ಸಂಸ್ಥೆಗಳ FCRA ನೋಂದಣಿ ಭದ್ರತೆ ಕಾರಣದಿಂದ ರದ್ದಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಜನವರಿ 1 ರಿಂದ ಜಿಎಸ್‍ಟಿ ನಿಯಮಗಳ ಬದಲಾವಣೆ – ಹೀಗಿದೆ ಮುಖ್ಯ ಬೆಲೆ ಏರಿಕೆಗಳ ಪಟ್ಟಿ

    ಈ ಸಂಸ್ಥೆಗಳು ಒಂದೋ FCRA ಪರವಾನಿಗೆ ನವೀಕರಣಗೊಳಿಸಲು ಅರ್ಜಿ ಸಲ್ಲಿಸದಿದ್ದ ಕಾರಣ ಅಥವಾ ಗೃಹಸಚಿವಾಲಯ ನಿಗದಿ ಪಡಿಸಿದ್ದ ಮಾನದಂಡಕ್ಕೆ ಅನುಗುಣವಾಗಿ ಮಾಹಿತಿ ನೀಡದ ಕಾರಣ ಅರ್ಜಿಗಳನ್ನು ತಿರಸ್ಕರಿಸಿದೆ.

    FCRA ಸಿಂಧುತ್ವ ಕಳೆದುಕೊಂಡಿರುವ ಪಟ್ಟಿಯಲ್ಲಿ ಆಕ್ಸ್ಫಾಮ್ ಇಂಡಿಯಾ ಸಂಸ್ಥೆಗಳು, ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್, ಲಾಲ್ ಬಹದ್ದೂರ್ ಶಾಸ್ತ್ರಿ ಮೆಮೊರಿಯಲ್ ಫೌಂಡೇಷನ್, ಲೇಡಿ ಶ್ರೀರಾಮ್ ಕಾಲೇಜು, ದೆಹಲಿ ಕಾಲೇಜ್ ಆಫ್ ಇಂಜಿನಿಯರಿಂಗ್ ಸೇರಿ ಹಲವು ಪ್ರತಿಷ್ಠಿತ ಸಂಘ ಸಂಸ್ಥೆ ಗಳಿವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಇದನ್ನೂ ಓದಿ: ಗುಡ್‍ನ್ಯೂಸ್ – ಜವಳಿ ಮೇಲಿನ ಜಿಎಸ್‍ಟಿ ಏರಿಕೆ ಇಲ್ಲ

    ಪ್ರಸ್ತುತ 16,829 ಎನ್‍ಜಿಒಗಳ FCRA ಪರವಾನಿಗೆ ಜಾಲ್ತಿಯಲ್ಲಿದ್ದು, ಈಗಾಗಲೇ 1,800 ಕ್ರಿಶ್ಚಿಯನ್, 250 ಹಿಂದೂ ಮತ್ತು 250 ಮುಸ್ಲಿಂ ಎನ್‍ಜಿಒಗಳ ಪರವಾನಿಗೆ ರದ್ದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

    ವಿದೇಶದಿಂದ ನೆರವು ಪಡೆದು ದೇಶದ ಒಳಗಡೆ ಉಗ್ರ ಚಟುವಟಿಕೆ ಸೇರಿದಂತೆ ದುಷ್ಟ ಚಟುವಟಿಕೆಗಳಿಗೆ ಎನ್‍ಜಿಒಗಳ ಹಣ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ FCRA ಗೆ ತಿದ್ದುಪಡಿ ತಂದಿತ್ತು. ವಿದೇಶದಿಂದ ಹಣ ಪಡೆಯುವ ಎನ್‍ಜಿಒಗಳು ಕಡ್ಡಾಯವಾಗಿ ದೆಹಲಿಯ ಎಸ್‍ಬಿಐ ಕಚೇರಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಿತ್ತು. ಅಲ್ಲದೇ ಹಣದ ಲೆಕ್ಕಪತ್ರ ಸಂಬಂಧ ಹಲವು ಬಿಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಎನ್‍ಜಿಒಗಳಿಗೆ ಸೂಚಿಸಿತ್ತು.