Tag: NGO

  • ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

    ಧರ್ಮಸ್ಥಳದ ವಿರುದ್ಧ ಪಿತೂರಿಗೆ ವಿದೇಶಿ ಫಂಡಿಂಗ್‌ – ತನಿಖೆಗೆ ಇಡಿ ಎಂಟ್ರಿ

    ನವದೆಹಲಿ: ಧರ್ಮಸ್ಥಳದ ವಿರುದ್ಧ ಪಿತೂರಿಗೆ (Dharmasthala Case) ವಿದೇಶಿ ಫಂಡಿಂಗ್‌ (Foreign Funding) ಆರೋಪ ಕೇಳಿಬಂದ ಹಿನ್ನೆಲೆ ಜಾರಿ ನಿರ್ದೇಶನಾಲಯ (Enforcement Directorate) ತನಿಖೆಗೆ ಎಂಟ್ರಿಯಾಗಿದೆ. ಎರಡು ಎನ್‌ಜಿಓಗಳು (NGO) ಕಾನೂನನ್ನು ಉಲ್ಲಂಘಿಸಿ ವಿದೇಶಿ ಹಣವನ್ನು ಪಡೆದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಇದನ್ನು ಧರ್ಮಸ್ಥಳದ ವಿರುದ್ಧದ ಪಿತೂರಿಗೆ ಬಳಸಿರುವ ಸಾಧ್ಯತೆ ಇದೆ. ಇಡಿ ಅವರ ಹಣಕಾಸಿನ ವ್ಯವಹಾರದ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.

    ಇಡಿ ಅಧಿಕಾರಿಗಳು ಪೊಲೀಸರಿಂದ ದಾಖಲೆಗಳನ್ನು ಪಡೆದಿದ್ದಾರೆ. ಅಲ್ಲದೇ ವಿದೇಶಿ ಫಂಡ್ ಉಲ್ಲಂಘನೆ ಆರೋಪದ ಮೇಲೆ ಎರಡು ಎನ್‌ಜಿಓಗಳ ಖಾತೆ ವಿವರಗಳು ಮತ್ತು ವಹಿವಾಟಿನ ದಾಖಲೆಗಳ ಬಗ್ಗೆ ಬ್ಯಾಂಕ್‌ಗಳಿಂದ ಮಾಹಿತಿ ಕೇಳಿದೆ. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಎರಡು ದೂರುಗಳ ಆಧಾರದ ಮೇಲೆ ಇಡಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

    ವಿಚಾರಣೆಯ ಭಾಗವಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮತ್ತು ಇತರ ಬ್ಯಾಂಕ್‌ಗಳಿಗೆ ಪತ್ರ ಬರೆಯಲಾಗಿದೆ. ಅವರ ಪ್ಯಾನ್ ವಿವರಗಳು, ಖಾತೆ ಮಾಹಿತಿ ಮತ್ತು NGO ಗಳಿಗೆ ಸಂಬಂಧಿಸಿದ ಐದು ವರ್ಷಗಳ ವಹಿವಾಟು ದಾಖಲೆಗಳನ್ನು ನೀಡುವಂತೆ ಮನವಿ ಮಾಡಿದೆ.

    ಸೆ.1 ರಂದು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕ್ಷೇತ್ರದ ವಿರುದ್ಧ ಪಿತೂರಿಗೆ ವಿದೇಶದಿಂದ ಫಂಡಿಂಗ್‌ ಆಗುತ್ತಿದೆ. ಇದೆಲ್ಲ ಹೊರಗೆ ಬರಬೇಕಾದ್ರೆ ಪ್ರಕರಣವನ್ನ ರಾಜ್ಯ ಸರ್ಕಾರ ಎನ್‍ಐಎ (NIA) ಅಥವಾ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದ್ದರು.

    ಧರ್ಮಸ್ಥಳದ ವಿಚಾರದಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಬೇರೆ ಬೇರೆ ಕಡೆಯಿಂದ ವಿದೇಶದಿಂದ ಫಂಡ್ ಬಂದಿದೆ. ಯೂಟ್ಯೂಬರ್‌ಗಳಿಗೆ ವಿವಿಧ ಕಡೆಯಿಂದ ಫಂಡ್ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಡಿ ತನಿಖೆ ಆಗಲಿ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಇತ್ತೀಚೆಗೆ ಪತ್ರ ಬರೆದಿದ್ದರು.

    ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಹೇಳಿಕೊಂಡಿರುವಂತೆ ಯಾವುದೇ ವಿದೇಶಿ ಫಂಡ್‌ ಬಗ್ಗೆ ತನಗೆ ತಿಳಿದಿಲ್ಲ. ತನಿಖೆಯಿಂದ ಅದು ಹೊರಬರಲಿ. ರ‍್ಯಾಲಿ ಮಾಡಲು ಬಿಜೆಪಿಗೆ ಹಣವಿದೆ. ಹಣ ಎಲ್ಲಿಂದ ಬರುತ್ತಿದೆ? ಅವರಿಗೆ ಯಾರು ಹಣ ನೀಡುತ್ತಿದ್ದಾರೆ? ಪ್ರತಿಯೊಂದು ವಿಷಯವನ್ನು ರಾಜಕೀಯವಾಗಿ ಬಳಸಬಾರದು ಎಂದಿದ್ದರು. ಇದನ್ನೂ ಓದಿ: ಧರ್ಮಸ್ಥಳ ಕೇಸ್-‌ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಎಸ್‌ಐಟಿ ಕಸ್ಟಡಿ ನಾಳೆಗೆ ಅಂತ್ಯ

  • ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಎಚ್ಚರಿಕೆ

    ಮಹಿಳೆಯರನ್ನು ಉದ್ಯೋಗದಿಂದ ಕೈಬಿಡಿ – ಎನ್‌ಜಿಒಗಳಿಗೆ ತಾಲಿಬಾನ್‌ ಎಚ್ಚರಿಕೆ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಮಹಿಳೆಯರ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತೊಂದು ಕಠೋರ ನಿಯಮಕ್ಕೆ ತಾಲಿಬಾನ್‌ ಸರ್ಕಾರ (Taliban) ಮುಂದಾಗಿದೆ. ದೇಶದಲ್ಲಿ ಎಲ್ಲಾ ರಾಷ್ಟ್ರೀಯ ಮತ್ತು ವಿದೇಶಿ ಸರ್ಕಾರೇತರ ಸಂಸ್ಥೆಗಳು ಹಾಗೂ ಎನ್‌ಜಿಒಗಳಿಂದ ಮಹಿಳಾ ಉದ್ಯೋಗಿಗಳನ್ನು ಕೈಬಿಡಲು ಆದೇಶಿಸಿದೆ. ಈ ಆದೇಶ ಉಲ್ಲಂಘಿಸಿ ಮಹಿಳೆಯರನ್ನು ನೇಮಿಸಿಕೊಂಡರೆ ಅಂತಹ ಸಂಸ್ಥೆಗಳನ್ನು ಮುಚ್ಚುವುದಾಗಿ ಹೇಳಿದೆ.

    ಅಫ್ಘಾನಿಸ್ತಾನದ ಆರ್ಥಿಕ ಸಚಿವಾಲಯ ಈ ಬಗ್ಗೆ ಎಕ್ಸ್‌ನಲ್ಲಿ ಆದೇಶ ಪ್ರತಿಯನ್ನು ಪ್ರಕಟಿಸಿದೆ. ಆದೇಶದ ಅನ್ವಯ ವಿದೇಶಿ ಸಂಸ್ಥೆಗಳಲ್ಲಿ ಮಹಿಳಾ ಉದ್ಯೋಗಿಗಳ ಕೆಲಸವನ್ನು ಕೂಡಲೇ ನಿಲ್ಲಿಸಲು ಸೂಚಿಸಲಾಗಿದೆ. ಈ ನಿಯಮ ಅನುಸರಿಸಲು ವಿಫಲವಾದರೆ NGO ಹಾಗೂ ಸಂಸ್ಥೆಗಳ ಪರವಾನಗಿಯನ್ನು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿದೆ.

    ಅಫ್ಘಾನ್ ಮಹಿಳೆಯರನ್ನು ಉದ್ಯೋಗದಿಂದ ಅಮಾನತುಗೊಳಿಸುವಂತೆ ತಾಲಿಬಾನ್ ಎನ್‌ಜಿಒಗಳಿಗೆ ಹೇಳಿದ ಎರಡು ವರ್ಷಗಳ ನಂತರ ಈ ಆದೇಶ ಬಂದಿದೆ. ಹಿಜಬ್ ಸರಿಯಾಗಿ ಧರಿಸದ ಕಾರಣ ಈ ನಿಯಮಗಳನ್ನು ಜಾರಿಗೆ ತರಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ತಾಲಿಬಾನ್‌ ಸರ್ಕಾರ ಈಗಾಗಲೇ ಅನೇಕ ಉದ್ಯೋಗ ಮತ್ತು ಬಹುತೇಕ ಸಾರ್ವಜನಿಕ ಸ್ಥಳಗಳಿಂದ ಮಹಿಳೆಯರನ್ನು ನಿರ್ಬಂಧಿಸಲಾಗಿದೆ. ಆರನೇ ತರಗತಿಯ ನಂತರದ ಶಿಕ್ಷಣದಿಂದಲೂ ಹೆಣ್ಣುಮಕ್ಕಳನ್ನು ಹೊರಗಿಡಲಾಗಿದೆ.

  • 5 ವರ್ಷದಲ್ಲಿ ಎನ್‍ಜಿಓಗಳಿಗೆ 89,000 ಕೋಟಿ ರೂ. ವಿದೇಶಿ ನಿಧಿ- ಕರ್ನಾಟಕಕ್ಕೆ 2ನೇ ಸ್ಥಾನ

    5 ವರ್ಷದಲ್ಲಿ ಎನ್‍ಜಿಓಗಳಿಗೆ 89,000 ಕೋಟಿ ರೂ. ವಿದೇಶಿ ನಿಧಿ- ಕರ್ನಾಟಕಕ್ಕೆ 2ನೇ ಸ್ಥಾನ

    ನವದೆಹಲಿ: ಕಳೆದ 5 ವರ್ಷಗಳಲ್ಲಿ ರಾಷ್ಟ್ರಾದ್ಯಂತ ಇರುವ ಸರ್ಕಾರೇತರ ಸಂಸ್ಥೆಗಳಿಗೆ (NGO) ಒಟ್ಟು 88,882 ಕೋಟಿ ರೂ. ವಿದೇಶದಿಂದ ದೇಣಿಗೆ ಹರಿದು ಬಂದಿದೆ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. ಅದರಲ್ಲೂ ಕಳೆದ ವರ್ಷ ಅತಿ ಹೆಚ್ಚು ವಿದೇಶಿ ದೇಣಿಗೆಯನ್ನು (Foreign Fund) ಪಡೆಯುವ ಎರಡನೇ ರಾಜ್ಯವಾಗಿ ಕರ್ನಾಟಕ (Karnataka) ಹೊರಹೊಮ್ಮಿದೆ.

    2018 ರಿಂದ 2022ರ ನಡುವೆ ಈ ದೇಣಿಗೆ ಬಂದಿದ್ದು, ಈ ಸಮಯದಲ್ಲಿ ಎನ್‍ಜಿಓಗಳು ವಿದೇಶಿ ದೇಣಿಗೆ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಅನೇಕ ಎನ್‍ಜಿಓಗಳ ಮೇಲೆ ದಾಳಿಗಳು ನಡೆದಿದ್ದವು. ಆಗ ಪತ್ತೆಯಾದ ಅಕ್ರಮಗಳನ್ವಯ ಹಲವಾರು ಎನ್‍ಜಿಓಗಳ ಪರವಾನಗಿಯನ್ನು ರದ್ದುಪಡಿಸಿತ್ತು. ಆದರೂ ವರ್ಷದಿಂದ ವರ್ಷಕ್ಕೆ ವಿದೇಶಿ ದೇಣಿಗೆಯ ಪ್ರಮಾಣ ಏರಿಕೆಯಾಗುತ್ತಲೇ ಇದೆ.

    ಈ ಬಗ್ಗೆ ಗೃಹ ಸಚಿವಾಲಯವು ಮಾಹಿತಿ ನೀಡಿದ್ದು, 2018ಯಿಂದ 2022ರ ನಡುವೆ ವಿದೇಶಿ ಕೊಡುಗೆಗಳ ಕಾಯ್ದೆಯಡಿಯಲ್ಲಿ ಒಟ್ಟು 1,827 ಎನ್‍ಜಿಒಗಳು ನೋಂದಣಿಯನ್ನು ರದ್ದುಗೊಳಿಸಿದ್ದರೂ ಸಹ ರಾಷ್ಟ್ರವ್ಯಾಪಿ ಎನ್‍ಜಿಒಗಳಿಗೆ ವಿದೇಶಿ ನಿಧಿಯು 2019-20ರಲ್ಲಿ 16,306 ಕೋಟಿ ರೂ., 2020-21ರಲ್ಲಿ 17,059 ಕೋಟಿ ರೂ., 2021-22ರಲ್ಲಿ 22,085ರೂ.ಗೆ ಏರಿದೆ ಎಂದು ಬಹಿರಂಗಪಡಿಸಿದೆ.

    2017ರಿಂದ 2021ರ ನಡುವೆ 6,677 ಎನ್‍ಜಿಓಗಳ ಲೈಸನ್ಸ್ ರದ್ದುಪಡಿಸಲಾಗಿದೆ. ಅಷ್ಟೇ ಅಲ್ಲದೇ ಸದ್ಯಕ್ಕೆ ದೇಶದಲ್ಲಿ ವಿದೇಶಿ ದೇಣಿಗೆ ಸ್ವೀಕರಿಸಲು 16,383 ಎನ್‍ಜಿಓಗಳಿಗೆ ಅರ್ಹತೆಯಿದೆ. ಇದನ್ನೂ ಓದಿ: ಮುಷ್ಕರ ವಾಪಸ್‌ – ಸಾರಿಗೆ ನೌಕರರ ಒಕ್ಕೂಟದಲ್ಲೇ ಭಿನ್ನಮತ ಸ್ಫೋಟ

    ಯಾವ್ಯಾವ ರಾಜ್ಯಗಳು ಎಷ್ಟನೇ ಸ್ಥಾನ: 2019-20, 2020-2021, 2021-22ರ 3 ಹಣಕಾಸು ವರ್ಷಗಳಲ್ಲಿ ರಾಜ್ಯವಾರು ವಿಭಜಿಸಿದಾಗ ದೆಹಲಿ ಮೂಲದ ಎನ್‍ಜಿಓಗಳು ಅತಿಹೆಚ್ಚು ವಿದೇಶಿ ಹಣವನ್ನು ಪಡೆಯುತ್ತಿವೆ. 2019-20 ಹಾಗೂ 2020-21ರಲ್ಲಿ ಅತಿ ಹೆಚ್ಚು ವಿದೇಶಿಗಳನ್ನು ಹೊಂದಿದ್ದ ತಮಿಳುನಾಡು ಹೊಂದಿತ್ತು. ಆದರೆ 2021 – 22ರಲ್ಲಿ ತಮಿಳುನಾಡನ್ನು ಕರ್ನಾಟಕ ಹಿಂದಿಕ್ಕಿ ಎರಡನೇ ಅತಿ ಹೆಚ್ಚು ವಿದೇಶಿ ಹಣವನ್ನು ಸ್ವೀಕರಿಸುವ ರಾಜ್ಯವಾಗಿ ಹೊರಹೊಮ್ಮಿದೆ. ಮಹಾರಾಷ್ಟ್ರ ನಿರಂತರವಾಗಿ ನಾಲ್ಕನೇ ಸ್ಥಾನದಲ್ಲಿದೆ. ಇದನ್ನೂ ಓದಿ: ಕೋಲಾರದಿಂದ ಸಿದ್ದು ಸ್ಪರ್ಧೆಗೆ ರೆಡ್ ಸಿಗ್ನಲ್ – ವರುಣಾದಿಂದಲೇ ಸ್ಪರ್ಧಿಸುವಂತೆ ಹೈಕಮಾಂಡ್ ಹೇಳಿದ್ದು ಯಾಕೆ?

  • ಸ್ಥಳೀಯ, ವಿದೇಶಿ ಎನ್‌ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್‌ ಆದೇಶ

    ಸ್ಥಳೀಯ, ವಿದೇಶಿ ಎನ್‌ಜಿಒಗಳಲ್ಲಿ ಮಹಿಳೆ ಉದ್ಯೋಗಿಗಳಿಗೆ ಅವಕಾಶ ಕೊಡ್ಬೇಡಿ – ತಾಲಿಬಾನ್‌ ಆದೇಶ

    ಕಾಬೂಲ್: ಅಫ್ಘಾನಿಸ್ತಾನದ (Afghanistan) ಎಲ್ಲಾ ಸ್ಥಳೀಯ ಹಾಗೂ ವಿದೇಶಿ ಸರ್ಕಾರೇತರ ಸಂಸ್ಥೆಗಳಿಗೆ (NGO) ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ತಾಲಿಬಾನ್ (Taliban) ಆದೇಶಿಸಿದೆ.

    ಮಹಿಳೆಯರಿಗೆ ಇಸ್ಲಾಮಿಕ್‌ ವಸ್ತ್ರ ಸಂಹಿತೆ ಪಾಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಈ ನಿಯಮವನ್ನು ಕೆಲವರು ಪಾಲಿಸದ ಕಾರಣ, ಮಹಿಳಾ ಉದ್ಯೋಗಿಗಳಿಗೆ (Women Employees) ಕಚೇರಿಗಳಲ್ಲಿ ಕೆಲಸ ಮಾಡಲು ಅವಕಾಶ ನೀಡಬಾರದು ಎಂದು ತಾಲಿಬಾನ್‌ ಸೂಚಿಸಿದೆ. ಇದನ್ನೂ ಓದಿ: `ನೀವು ತುಂಬಾ ದಪ್ಪ’ – ಮಹಿಳೆಗೆ ವಿಮಾನ ಹತ್ತಲು ನಿರಾಕರಿಸಿದ ಕತಾರ್‌ ಏರ್‌ವೇಸ್‌ಗೆ 3 ಲಕ್ಷ ದಂಡ

    ವಿಶ್ವವಿದ್ಯಾನಿಲಯಗಳಲ್ಲಿ ಮಹಿಳೆಯರಿಗೆ ಅವಕಾಶ ನೀಡಬಾರದು ಎಂದ ಬೆನ್ನಲ್ಲೇ ತಾಲಿಬಾನ್‌ ಮತ್ತೊಂದು ಆದೇಶ ಹೊರಡಿಸಿದೆ. ಇದರ ವಿರುದ್ಧ ಅಫ್ಘಾನಿಸ್ತಾನದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಲ್ಲದೇ ಜಾಗತಿಕವಾಗಿ ಖಂಡನೆ ಕೂಡ ವ್ಯಕ್ತವಾಗಿದೆ.

    ವಿಶ್ವವಿದ್ಯಾನಿಲಯ ಶಿಕ್ಷಣದ ಮೇಲಿನ ನಿಷೇಧವನ್ನು ಪ್ರತಿಭಟಿಸುವ ಮಹಿಳೆಯರನ್ನು ಚದುರಿಸಲು ತಾಲಿಬಾನ್ ಭದ್ರತಾ ಪಡೆಗಳು ನೀರಿನ ಫಿರಂಗಿಯನ್ನು ಬಳಸಿದವು ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ. ಅಫ್ಘಾನಿಸ್ತಾನದ ಮಹಿಳೆಯರು ನಿಷೇಧದ ವಿರುದ್ಧ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಚೀನಾದಲ್ಲಿ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು

    ವಿವಿಗಳಲ್ಲಿ ಮಹಿಳೆಯರಿಗೆ ಶಿಕ್ಷಣ ನಿಷೇಧಿಸಿದ ತಾಲಿಬಾನ್‌ ಆದೇಶಕ್ಕೆ ಸೌದಿ ಅರೇಬಿಯಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್‌ನಂತಹ ದೇಶಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಯಾವುದೇ ಹುಡ್ಗಿಯನ್ನ 14 ಸೆಕೆಂಡಿಗಿಂತ ಜಾಸ್ತಿ ಗುರಾಯಿಸಿದ್ರೆ, ನೋಡಿ ಕವಿತೆ ಹೇಳಿದ್ರೆ ಕೇಸ್

    ಯಾವುದೇ ಹುಡ್ಗಿಯನ್ನ 14 ಸೆಕೆಂಡಿಗಿಂತ ಜಾಸ್ತಿ ಗುರಾಯಿಸಿದ್ರೆ, ನೋಡಿ ಕವಿತೆ ಹೇಳಿದ್ರೆ ಕೇಸ್

    ನವದೆಹಲಿ: ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್‌ಗಿಂತ ಹೆಚ್ಚು ಕಾಲ ಗುರಾಯಿಸಿದ್ರೆ, ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳಿದ್ರೆ ಐಪಿಸಿ (IPL) ಸೆಕ್ಷನ್ ಅಡಿಯಲ್ಲಿ ಬಂಧಿಸಬಹುದಾಗಿದೆ ಎಂದು ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ (NCIB) ಹೆಸರಿನ ಸರ್ಕಾರೇತರ ಸಂಸ್ಥೆಯೊಂದು ತಿಳಿಸಿದೆ.

    ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ ಹೆಸರಿನ ಎನ್‌ಜಿಒ (NGO) ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್‌ಗಿಂತಲೂ ಹೆಚ್ಚುಕಾಲ ಗುರಾಯಿಸುವುದು, ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (A) ಮತ್ತು (B) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಪಠ್ಯ ಸಂದೇಶ ಕಳುಹಿಸುವ ಅಪರಾಧಕ್ಕೆ ಗರಿಷ್ಠ 3 ತಿಂಗಳ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ ಈ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಬಹುದು ಎಂದು ತಿಳಿಸಿದೆ.

    ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಇದನ್ನೂ ಓದಿ: ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ – ಚಿಕಿತ್ಸೆಗುಂಟು 1,100 ರೂ. ಪ್ರೋತ್ಸಾಹಧನ

    ಎನ್‌ಸಿಐಬಿ ಕೇಂದ್ರಕಚೇರಿ ಹೆಸರಿನಲ್ಲಿ ಖಾತೆ ಪರಿಶೀಲನೆ ಆಗಿದೆ. ಇದರ ಲೋಗೋ ಪೊಲೀಸ್ ಇಲಾಖೆಯ ಲೋಗೋವನ್ನೇ ಹೋಲುತ್ತದೆ. ಎನ್‌ಜಿಒ ಸಂಸ್ಥೆ ಎಂಬುದನ್ನು ತನ್ನ ಟೈಮ್‌ಲೈನ್‌ನಲ್ಲಿ ಹೇಳಿಕೊಂಡಿದೆ. ಹೀಗಾಗಿ ಇದು ಸರ್ಕಾರದ ಆದೇಶವೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಕಳುಹಿಸಿ ಮುಸ್ಲಿಮ್‌ ಯುವಕರ ತಲೆಕೆಡಿಸಿದ್ದ ಶಾರೀಕ್‌

    ಸೆಕ್ಷನ್ ಹೇಳೋದೇನು?
    ಯಾವುದೇ ಒಬ್ಬ ವ್ಯಕ್ತಿಯು ಮತ್ತೊಬ್ಬರಿಗೆ ಕಿರುಕುಳ ಉಂಟಾಗುವ ಹಾಗೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯವನ್ನು ಮಾಡಿದರೆ, ಅಥವಾ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಹಾಡುಗಳನ್ನು ಹಾಡಿದರೆ, ಕೇಳಿದರೆ ಅಥವಾ ಉಚ್ಚರಿಸಿದರೆ ಐಪಿಸಿ ಸೆಕ್ಷನ್ 294 ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೆಯೇ ಒಬ್ಬ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇವಿರುವ ಶಬ್ಧ, ಸಂಜ್ಞೆ ಅಥವಾ ಕೃತ್ಯಗಳು ಸೆಕ್ಷನ್ 509ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.

    Live Tv
    [brid partner=56869869 player=32851 video=960834 autoplay=true]

  • ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ – ಚಿಲುಮೆ ಸಂಸ್ಥೆಯ ನಾಲ್ವರು ಪೊಲೀಸರ ವಶಕ್ಕೆ

    ಮತದಾರರ ಪಟ್ಟಿಯಲ್ಲಿ ಗೋಲ್ಮಾಲ್ – ಚಿಲುಮೆ ಸಂಸ್ಥೆಯ ನಾಲ್ವರು ಪೊಲೀಸರ ವಶಕ್ಕೆ

    – ಸಂಸ್ಥೆ ಪ್ರಮುಖ ದಾಖಲೆಗಳು ಸೀಜ್
    – ಚಿಲುಮೆ ಎನ್‌ಜಿಓಗೆ ಬಿಜೆಪಿ ನಾಯಕರಿಂದ ಫಂಡಿಂಗ್

    ಬೆಂಗಳೂರು (Bengaluru): ಕಾನೂನುಬಾಹಿರವಾಗಿ ಮತದಾರರ ಗೌಪ್ಯ ಮಾಹಿತಿ ಸಂಗ್ರಹಿಸಿದ ಆರೋಪ ಎದುರಿಸ್ತಿರೋ ಚಿಲುಮೆ ಸಂಸ್ಥೆ (Chilume Social Service Society), ಮತದಾರರ ಪಟ್ಟಿ (Voters List) ಪರಿಷ್ಕರಣೆ ಪ್ರಕ್ರಿಯೆಯಲ್ಲೂ ಹಸ್ತಕ್ಷೇಪ ನಡೆಸಿರೋ ಅನುಮಾನಗಳು ವ್ಯಕ್ತವಾಗಿವೆ.

    ಹಗರಣದ ತನಿಖೆಯ ಸುಳಿವರಿತ ಬಿಬಿಎಂಪಿ (BBMP) ಚಿಲುಮೆಗೆ ನವೆಂಬರ್ 2ರಂದು ನೊಟೀಸ್ ನೀಡಿತ್ತು. ಇದಾದ 10 ದಿನಗಳಿಗೆ (ನ.13) ಕಚೇರಿಗಳ ಬಾಗಿಲು ಬಂದ್ ಮಾಡಿದೆ. 3 ತಿಂಗಳಿಗೆ ಅಗ್ರಿಮೆಂಟ್ ಇದ್ರು 2 ತಿಂಗಳಿಗೆ ಬಸವನಗುಡಿ ಕಚೇರಿಯನ್ನು ಖಾಲಿ ಮಾಡಿದೆ. ನಂತರ ಸರ್ಚ್ ವಾರೆಂಟ್ ಪಡೆದು ಪರಿಶೀಲನೆ ನಡೆಸಿರುವ ಹಲಸೂರು ಗೇಟ್ ಪೊಲೀಸರು (Halasuru Police Station), ಮಹತ್ವದ ದಾಖಲೆಗಳನ್ನು ಸೀಜ್ ಮಾಡಿದ್ದಾರೆ. ನಾಲ್ವರು ಸಿಬ್ಬಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದ್ರೆ, ಚಿಲುಮೆಯ ಮುಖ್ಯಸ್ಥರು ಇನ್ನೂ ಸಿಕ್ಕಿಬಿದ್ದಿಲ್ಲ. ಚಿಲುಮೆ ವಿರುದ್ಧ ದೂರು ದಾಖಲಾದ ಬೆನ್ನಲ್ಲೇ, ತನಿಖಾಧಿಕಾರಿಯನ್ನು ನೇಮಿಸಿರೋ ಮುಖ್ಯ ಚುನಾವಣಾಧಿಕಾರಿ, ವರದಿಗೆ ಸೂಚಿಸಿದ್ದಾರೆ. ಈ ಮಧ್ಯೆ, ಬಿಬಿಎಂಪಿ ಕೂಡ, ಮಹದೇವಪುರ ಕಂದಾಯಾಧಿಕಾರಿ ಚಂದ್ರಶೇಖರ್ ಅವರನ್ನ ಅಮಾನತು ಮಾಡಿದೆ.

    ಎಸ್ಸಿ, ಎಸ್ಟಿ, ಮುಸ್ಲಿಂ (SC, ST, Muslims) ಮತದಾರರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಿಸುವ ಕೆಲಸವನ್ನು ಚಿಲುಮೆ ಮಾಡ್ತಿದೆ ಎಂಬ ಆರೋಪವನ್ನು ನಿನ್ನೆಯಷ್ಟೇ ಕಾಂಗ್ರೆಸ್ ಮಾಡಿತ್ತು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ ಸಾವಿರಾರು ಮಂದಿ ಹೆಸರು ಡಿಲೀಟ್ ಆಗಿದೆ. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 21,968 ಮತದಾರರು, ಕೆ.ಆರ್.ಪುರಂ ಕ್ಷೇತ್ರದಿಂದ 39,763 ಮತದಾರರು, ಬ್ಯಾಟರಾಯನಪುರ ಕ್ಷೇತ್ರದಿಂದ 30,757 ಮತದಾರರ ಹೆಸರು ಡಿಲೀಟ್ ಆಗಿದೆ. ಇದನ್ನೂ ಓದಿ: ಚಿಲುಮೆ ಸಂಸ್ಥೆ ವಿರುದ್ಧ ಆರೋಪ ಬೆನ್ನಲ್ಲೇ ರಾಜ್ಯದಲ್ಲಿ 6 ಲಕ್ಷ ಮತದಾರರ ಹೆಸರು ಡಿಲೀಟ್‌

    ಯಶವಂತಪುರ 35,829, ಆರ್.ಆರ್. ನಗರ 33,009, ದಾಸರಹಳ್ಳಿ 35,086, ಮಹಾಲಕ್ಷ್ಮೀ ಲೇಔಟ್ 20,404, ಮಲ್ಲೇಶ್ವರಂ 11,788, ಹೆಬ್ಬಾಳ 20,039, ಪುಲಕೇಶಿ ನಗರ 22,196, ಸರ್ವಜ್ಞ ನಗರ 28,691, ಸಿವಿ ರಾಮನ್ ನಗರ 21,457, ಶಿವಾಜಿನಗರ 14,679, ಶಾಂತಿನಗರ 20,386, ಗಾಂಧಿನಗರ 16,465, ರಾಜಾಜಿನಗರ 12,757, ಗೋವಿಂದರಾಜ್ ನಗರ 20,067, ವಿಜಯನಗರ 28,562, ಚಾಮರಾಜಪೇಟೆ 19,304, ಚಿಕ್ಕಪೇಟೆ 16,231, ಬಸವನಗುಡಿ 18,838, ಪದ್ಮನಾಭ ನಗರ 17,435, ಬಿಟಿಎಂ ಲೇಔಟ್ 16,141, ಜಯನಗರ 13,061, ಮಹಾದೇವಪುರ 33,376, ಬೊಮ್ಮನಹಳ್ಳಿ 31,157, ಬೆಂಗಳೂರು ಸೌತ್ 45,927, ಆನೇಕಲ್ 24,279 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಜನರ ಸರ್ವೇ ಮಾಡಿಸಿ ಚುನಾವಣೆಗೆ ಬಳಸಿಕೊಂಡಿದೆ: ಬೊಮ್ಮಾಯಿ

    ಚಿಲುಮೆ ಎನ್‌ಜಿಓಗೆ ಬಿಜೆಪಿ ನಾಯಕರಿಂದ ಫಂಡಿಂಗ್:
    ಚಿಲುಮೆ ಎಂಬ ಸರ್ಕಾರೇತರ ಸಂಸ್ಥೆಗೆ ರಾಜಕಾರಣಿಗಳ ನಂಟು ಇರೋದು ಪಬ್ಲಿಕ್ ಟಿವಿ (Public TV) ತನಿಖೆಯಲ್ಲಿ ಬಟಾಬಯಲಾಗಿದೆ. ಚಿಲುಮೆಯ ಬೆನ್ನೇರಿದ ಪಬ್ಲಿಕ್ ಟಿವಿಗೆ ಸ್ಫೋಟಕ ದಾಖಲೆ ಲಭ್ಯವಾಗಿದೆ. ಚಿಲುಮೆಯ ಖಾತೆಗೆ ರಾಜಕಾರಣಿಗಳು ಫಂಡಿಂಗ್ ಮಾಡಿರೋದು ಬಟಾಬಯಲಾಗಿದೆ. ಬಿಜೆಪಿಯ (BJP) ಮಾಜಿ ಶಾಸಕರೊಬ್ಬರು ಚಿಲುಮೆಗೆ ದೇಣಿಗೆ ನೀಡಿದ್ದಾರೆ. ಬಿಜೆಪಿಯ ಆ ಮುಖಂಡ 2018ರ ಚುನಾವಣೆಯಲ್ಲಿ ಸ್ಪರ್ಧಿಸೋ ವೇಳೆ, ಚುನಾವಣಾ ಆಯೋಗಕ್ಕೆ ಸಲ್ಲಿಸಿರೋ ಅಫಿಡವಿಟ್‌ನಲ್ಲಿ ಚಿಲುಮೆ ಗ್ರೂಪ್‌ಗೆ ಒಮ್ಮೆ 17.50 ಲಕ್ಷ ರೂಪಾಯಿ, ಇನ್ನೊಮ್ಮೆ 50ಸಾವಿರ ರೂಪಾಯಿ ಫಂಡಿಂಗ್ ಮಾಡಿರೋ ಬಗ್ಗೆ ಉಲ್ಲೇಖಿಸಿದ್ದಾರೆ.

    ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಜಕೀಯ ನಾಯಕರಿಗೆ ಮತದಾರರ ಮಾಹಿತಿಯನ್ನು ಚಿಲುಮೆ ಮಾರಾಟ ಮಾಡ್ತಿತ್ತಾ? ಕೆಲವಡೆ ಅಧಿಕೃತವಾಗಿ ಕ್ಷೇತ್ರ ಸಮೀಕ್ಷೆ ನಡೆಸಿತ್ತಾ ಎಂಬ ಪ್ರಶ್ನೆಗಳು ಎದ್ದಿವೆ. ಈ ನಡುವೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿರೋ ಟ್ವೀಟ್ ಒಂದು ಚರ್ಚೆಗೆ ಗ್ರಾಸವಾಗಿದೆ. ಮತದಾರರ ಪಟ್ಟಿ (Voters List) ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್‌ನ ಸೇಡಿನ ಕತೆಯೂ ಅಲ್ಲ, ಕಾಂತಾರಾ ಚಿತ್ರದ ಗುಳಿಗ-ಪಂಜುರ್ಲಿಯ ದಂತ ಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ ಅದನ್ನೇ ಮಾಡಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

    ಗುಂಡು ಹಾಕುವ ಮಹಿಳೆಯರ ಸಂಖ್ಯೆ ಹೆಚ್ಚಳ- ಡ್ರಂಕನ್ ಡ್ರೈವ್ ಸಮೀಕ್ಷೆ

    ನವದೆಹಲಿ: ಕೋವಿಡ್ (Covid-19) ಸಾಂಕ್ರಾಮಿಕದ ನಂತರ ಮದ್ಯಸೇವನೆ (Drinking) ಮಾಡುವುದರಲ್ಲಿ ಮಹಿಳೆಯರ (Women) ಸಂಖ್ಯೆಯೇ ಹೆಚ್ಚಾಗಿದೆ ಎಂದು ಕಮ್ಯುನಿಟಿ ಅಗೇನ್ಸ್ಟ್‌ ಡ್ರಂಕನ್ ಡ್ರೈವಿಂಗ್ (CADD) ಸರ್ಕಾರೇತರ ಸಂಸ್ಥೆ ನಡೆಸಿದ ಸಮೀಕ್ಷೆ ತೋರಿಸಿದೆ.

    ಈ ವರ್ಷ ಆಗಸ್ಟ್‌ನಿಂದ ಅಕ್ಟೋಬರ್ ವರೆಗೆ 18 ರಿಂದ 68ನೇ ವಯಸ್ಸಿನ 5,000 ಮಹಿಳೆಯರ ಮೇಲೆ ನಡೆಸಿದ ಸಮೀಕ್ಷೆಯ ದತ್ತಾಂಶವು ಮಹಿಳೆಯರಲ್ಲಿ (Women’s) ಮದ್ಯ ಸೇವನೆ ಹೆಚ್ಚಾಗಿರುವುದನ್ನು ಸೂಚಿಸಿದೆ. ಮನೆಯಲ್ಲಿ ಹಾಗೂ ಮನೆಯ ಪಾರ್ಟಿಗಳಲ್ಲಿ (House Parties) ಕುಡಿಯುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲ ಮಹಿಳೆಯರು ಪಬ್‌ಗಳಿಗೆ (Pub) ಹೋಗಿ ಕುಡಿಯಲು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ಸೂಚಿಸಿದೆ. ಇದನ್ನೂ ಓದಿ: ಹೊಸ ಮನೆಗೆ ಕಾಲಿಟ್ಟ ಮಿಲನಾ- ಡಾರ್ಲಿಂಗ್ ಕೃಷ್ಣ ಜೋಡಿ

    ಈ ಕುರಿತು ಸಿಎಡಿಡಿ (ACDD) ಸಂಸ್ಥಾಪಕ ಪ್ರಿನ್ಸ್ ಸಿಂಘಾಲ್ ಮಾತನಾಡಿದ್ದು, ಇತ್ತೀಚಿನ ಪ್ರವೃತ್ತಿಗಳು ಮಹಿಳೆಯರಲ್ಲಿ ಮದ್ಯ ಸೇವೆನೆ ಮಾಡುವುದನ್ನು ಹೆಚ್ಚಾಗಿಸಿದೆ. ಕಳೆದ 3 ವರ್ಷಗಳಲ್ಲಿ ಕುಡಿಯುವ ಮಾದರಿಗಳು ಬದಲಾಗಿದೆ. ಸಾಂಕ್ರಾಮಿಕದ ನಂತರ ಅದರ ಒತ್ತಡದಿಂದಾಗಿಯೇ ಹೆಚ್ಚು ಮದ್ಯ ಸೇವಿಸಲು ಆರಂಭಿಸಿದ್ದಾರೆ. ಸಾಂಕ್ರಾಮಿಕ ಸಮಯದಲ್ಲಿ ಮಹಿಳೆಯರು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುತ್ತಿದ್ದರು. ನಂತರ ಕನಿಷ್ಠ ಶೇ.30 ಮಹಿಳೆಯರು ತಮ್ಮ ಆಲ್ಕೋಹಾಲ್ (Alcohol) ಸೇವನೆಯನ್ನು ಶೇ.42.3ರಷ್ಟು ಹೆಚ್ಚಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

    ಶೇ.45.7 ರಷ್ಟು ಮಹಿಳೆಯರು ಒತ್ತಡದಿಂದ, ಶೇ.30.1 ರಷ್ಟು ಮಹಿಳೆಯರು ಬೇಸರ ಹಾಗೂ ಒಂಟಿ ತನದಿಂದ ಹಾಗೂ ಶೇ.34.4 ರಷ್ಟು ಮಹಿಳೆಯರು ಆಲ್ಕೋಹಾಲ್ ಲಭ್ಯವಾಗುತ್ತಿರುವುದರಿಂದ ಕುಡಿತದ ಸಂಖ್ಯೆ ಹೆಚ್ಚಾಗಿದೆ. ಮಹಿಳೆಯರು ಕುಟುಂಬ ನಿರ್ವಹಣೆ, ಮನೆಗೆಲಸ, ವೃತ್ತಿಪರ ಜೀವನ ನಿರ್ವಹಣೆ ನಿಭಾಯಿಸುವುದರಿಂದ ಪುರುಷರಿಗಿಂತ ಮೂರುಪಟ್ಟು ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿದ್ದಾರೆ. ಆದ್ದರಿಂದ ಮಹಿಳೆಯರಲ್ಲಿ ಮದ್ಯ ಸೇವನೆ ಮಾಡುವವರ ಸಂಖ್ಯೆ ಸಹಜವಾಗಿಯೇ ಹೆಚ್ಚಾಗಿದೆ ಎಂದು ಸಮೀಕ್ಷೆ ತೋರಿಸಿರುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸ್ವಚ್ಛತೆ ಬಗ್ಗೆ ಯೂತ್ ಫಾರ್ ಪರಿವರ್ತನ್ ಅರಿವು- ಬೆಂಗಳೂರು NGOಗೆ ಮೋದಿ ಶ್ಲಾಘನೆ

    ಸ್ವಚ್ಛತೆ ಬಗ್ಗೆ ಯೂತ್ ಫಾರ್ ಪರಿವರ್ತನ್ ಅರಿವು- ಬೆಂಗಳೂರು NGOಗೆ ಮೋದಿ ಶ್ಲಾಘನೆ

    ಬೆಂಗಳೂರು: ಸೇವೆ ಅನ್ನೊದು ಸಮಾಜಕ್ಕೆ ಪೂರಕವಾಗಿರಬೇಕು. ನಿಸ್ವಾರ್ಥ ಸೇವೆಯಲ್ಲಿ ತೊಡಗಿರುವ ಬೆಂಗಳೂರಿನ ಎನ್‌ಜಿಓ (NGO) ತಂಡವೊಂದರ ಸಮಾಜಮುಖಿ ಕಾರ್ಯವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮನ್ ಕೀ ಬಾತ್‌ನಲ್ಲಿ (Mann Ki Baat) ಪ್ರಶಂಸಿದ್ದಾರೆ.

    ಬೆಂಗಳೂರಿನ (Bengaluru) ಎನ್‌ಜಿಓ ಯೂತ್ ಫಾರ್ ಪರಿವರ್ತನ್ (Youth for Parivarthan) ನಗರದ ಬಹುತೇಕ ಕಡೆ ಸ್ವಚ್ಛತೆ ಮಾಡುವುದರ ಜೊತೆಗೆ ಅರಿವು ಮೂಡಿಸುತ್ತಿದ್ದಾರೆ. ಇನ್ನೂ ಇವರ ಕಾರ್ಯಕ್ಕೆ ಸ್ಥಳೀಯರ ಅಷ್ಟೇ ಅಲ್ಲ ಪ್ರಧಾನಿ ಮೋದಿ ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ನಿನ್ನೆ ನಡೆದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 1 ನಿಮಿಷಕ್ಕೂ ಹೆಚ್ಚು ಸಮಯ ಈ ಎನ್‌ಜಿಓ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಯುವಕರೇ ಸೇರಿ ನಗರ ಸೇರಿದಂತೆ ಹಲವೆಡೆ ಸ್ವಯಂಪ್ರೇರಿತವಾಗಿ ಸ್ವಚ್ಛತೆ ಮಾಡುವ ಮೂಲಕ ನಗರವನ್ನು ಸ್ವಚ್ಛಗೊಳಿಸುವುದರ ಜೊತೆಗೆ ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ಇದನ್ನೂ ಓದಿ: BBMP ಹೊಸ ಪ್ಲಾನ್ – ರಸ್ತೆ ಗುಂಡಿ ಮುಚ್ಚಲು ಆ್ಯಪ್ ಬಳಕೆ

    ಈ ಸ್ವಯಂ ಸೇವಾ ಸಂಘ 800ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಈಗಾಗಲೇ ಯೂತ್ ಫಾರ್ ಪರಿವರ್ತನ್ ನಗರದ 370ಕ್ಕೂ ಹೆಚ್ಚು ಸ್ಥಳಗಳಲ್ಲಿ ಗೋಡೆಗಳನ್ನು ಸ್ವಚ್ಛಗೊಳಿಸಿ, ಚಿತ್ರಗಳಿಂದ ಆಕರ್ಷಕವಾಗಿ ಅಲಂಕರಿಸಿದೆ. ಪ್ರತಿ ಭಾನುವಾರ ಈ ತಂಡ ಮುಂಚಿತವಾಗಿ ಗುರುತಿಸಿ ಜಾಗವನ್ನು ಶುಚಿಗೊಳಿಸುವ ಕೆಲಸ ಮಾಡುತ್ತಾರೆ. ಅಷ್ಟೇ ಅಲ್ಲದೇ ಸಾಕಷ್ಟು ಸರ್ಕಾರಿ ಶಾಲಾ ಮಕ್ಕಳಿಗೆ ಇತ್ತೀಚಿನ ಟೆಕ್ನಾಲಜಿ ಸೇರಿದಂತೆ ಉತ್ತಮ ಜೀವನ ಶೈಲಿಯ ಬಗೆಗಿನ ವಿಶೇಷ ಕಾರ್ಯಕ್ರಮಗಳನ್ನ ಸಹ ಮಾಡುತ್ತಿದ್ದಾರೆ. ಇದನ್ನೂ ಓದಿ: ರಾಜಸ್ಥಾನ ಕಾಂಗ್ರೆಸ್‍ನಲ್ಲಿ ರಾಜಕೀಯ ಬಿಕ್ಕಟ್ಟು – ಅಧಿಕಾರ ಹಿಡಿಯುತ್ತಾ ಬಿಜೆಪಿ?

    Live Tv
    [brid partner=56869869 player=32851 video=960834 autoplay=true]

  • ಇನ್ಮುಂದೆ ನಿರ್ಬಂಧ ಇಲ್ಲದೇ ಎನ್‌ಆರ್‌ಐಗಳು 10 ಲಕ್ಷ ಕಳುಹಿಸಬಹುದು: ಮೊದಲು FCRA ನಿಯಮ ಏನಿತ್ತು? ಏನು ಬದಲಾವಣೆಯಾಗಿದೆ?

    ಇನ್ಮುಂದೆ ನಿರ್ಬಂಧ ಇಲ್ಲದೇ ಎನ್‌ಆರ್‌ಐಗಳು 10 ಲಕ್ಷ ಕಳುಹಿಸಬಹುದು: ಮೊದಲು FCRA ನಿಯಮ ಏನಿತ್ತು? ಏನು ಬದಲಾವಣೆಯಾಗಿದೆ?

    ನವದೆಹಲಿ: ಇನ್ಮುಂದೆ ನಿರ್ಬಂಧ ಇಲ್ಲದೇ  ಅನಿವಾಸಿ ಭಾರತೀಯರು(ಎನ್‌ಆರ್‌ಐ) ವಾರ್ಷಿಕವಾಗಿ 10 ಲಕ್ಷ ರೂ. ಕಳುಹಿಸಬಹುದು.

    ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯ (FCRA) ಕೆಲವು ನಿಯಮಗಳಿಗೆ ಕೇಂದ್ರ ಗೃಹ ಸಚಿವಾಲಯ ತಿದ್ದುಪಡಿಗಳನ್ನು ಮಾಡಿದೆ. ದೇಣಿಗೆ ಮೊತ್ತ ಹೆಚ್ಚಳ ಮತ್ತು ಸ್ವೀಕಾರದ ಮಾಹಿತಿ ಸಲ್ಲಿಸುವ ಅವಧಿಯನ್ನು ಹೆಚ್ಚಿಸಲಾಗಿದೆ. ಈ ತಿದ್ದುಪಡಿಯಿಂದ ಸಂಬಂಧಿಕರಿಂದ ವಿದೇಶಿ ದೇಣಿಗೆ ಪಡೆಯುವ ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳಿಗೆ ಅನುಕೂಲವಾಗಲಿದೆ.

    ತಿದ್ದುಪಡಿ ಏನು?
    ಕೇಂದ್ರ ಗೃಹ ಸಚಿವಾಲಯ ಶುಕ್ರವಾರವೇ ಗೆಜೆಟ್‌ ಅಧಿಸೂಚನೆ ಪ್ರಕಟಿಸಿ 2022ರ ವಿದೇಶಿ ದೇಣಿಗೆ ನಿಯಂತ್ರಣ ತಿದ್ದುಪಡಿ ನಿಯಮಗಳನ್ನು ಜಾರಿಗೆ ತಂದಿದೆ. 2011ರ ವಿದೇಶಿ ದೇಣಿಗೆ ನಿಯಂತ್ರಣ ನಿಯಮಗಳ ಪ್ರಕಾರ ‘1 ಲಕ್ಷ ರೂಪಾಯಿ‘ ಪದವನ್ನು ‘10 ಲಕ್ಷ ರೂಪಾಯಿ‘ ಮತ್ತು ‘30 ದಿನಗಳು’ ಪದವನ್ನು ‘3 ತಿಂಗಳು‘ ಎಂದು ತಿದ್ದುಪಡಿ ಮಾಡಲಾಗಿದೆ.

    ಈ ಮೊದಲು ಹಣಕಾಸು ವರ್ಷವೊಂದರಲ್ಲಿ ಯಾವುದೇ ವ್ಯಕ್ತಿಯು 1 ಲಕ್ಷ ರೂ. ಅಥವಾ ಅದಕ್ಕಿಂತಲೂ ಹೆಚ್ಚಿನ ಮೊತ್ತದ ವಿದೇಶಿ ದೇಣಿಗೆಯನ್ನು ಸ್ವೀಕರಿಸಿದ್ದಲ್ಲಿ ದೇಣಿಗೆ ಪಡೆದ ದಿನದಿಂದ 30 ದಿನದ ಒಳಗೆ ಕೇಂದ್ರ ಸರಕಾರಕ್ಕೆ ಪೂರ್ಣ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿತ್ತು. ತಿದ್ದುಪಡಿಯಾದ ಬಳಿಕ ವಿದೇಶದಲ್ಲಿರುವ ಸಂಬಂಧಿಕರು ತಮ್ಮ ಕುಟುಂಬಸ್ಥರು ಅಥವಾ ಬೇರೆಯವರಿಗೆ ಕೇಂದ್ರದ ಗಮನಕ್ಕೆ ತರದೇ ಗರಿಷ್ಟ 10 ಲಕ್ಷ ರೂ.ವರೆಗೆ ದೇಣಿಗೆ ಕಳುಹಿಸಲು ಅನುಮತಿ ನೀಡಲಾಗಿದೆ. 10 ಲಕ್ಷ ರೂ.ಗಿಂತ ಹೆಚ್ಚಿನ ದೇಣಿಗೆ ಕಳಹಿಸಿದ್ದಲ್ಲಿ ದೇಣಿಗೆ ಸ್ವೀಕಾರದ ದಿನಾಂಕದಿಂದ 30 ದಿನಗಳ ಬದಲಿಗೆ 3 ತಿಂಗಳೊಳಗಾಗಿ ಕೇಂದ್ರಕ್ಕೆ ಮಾಹಿತಿಯನ್ನು ಸಲ್ಲಿಸಬೇಕಾಗುತ್ತದೆ.

    ದೇಣಿಗೆ ಸ್ವೀಕರಿಸಲು ‘ನೋಂದಣಿ’ ಮಾಹಿತಿ ಅಥವಾ ‘ಪೂರ್ವ ಅನುಮತಿ’ಗೆ ಸಂಬಂಧಿಸಿದಂತೆ ನಿಯಮ 9ಕ್ಕೆ ಕೂಡ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ದೇಣಿಗೆ ಪಡೆದ ಹಣದ ವಹಿವಾಟಿಗೆ ಬಳಸಲಾಗುವ ಬ್ಯಾಂಕ್‌ ಅಕೌಂಟ್‌ ಕುರಿತು 30 ದಿನದೊಳಗೆ ಕೇಂದ್ರಕ್ಕೆ ವಿವರ ಸಲ್ಲಿಸಬೇಕಿತ್ತು. ಈ ನಿಯಮವನ್ನು ಸಡಿಲಗೊಳಿಸಿದ್ದು, 45 ದಿನಗಳವರೆಗೆ ಹೆಚ್ಚಿಸಲಾಗಿದೆ.  ಇದನ್ನು ಓದಿ: 12 ಸಾವಿರ NGOಗಳ ವಿದೇಶಿ ದೇಣಿಗೆ ಸ್ವೀಕಾರ ಪರವಾನಿಗೆ ರದ್ದು

    ಹೊಸ ನಿಯಮಗಳಲ್ಲಿ ವಿದೇಶಿ ದೇಣಿಗೆ ಸ್ವೀಕರಿಸುವ ಸಂಸ್ಥೆಗಳು ಆ ಮೊತ್ತದಲ್ಲಿ ಶೇ. 20ಕ್ಕಿಂತಲೂ ಹೆಚ್ಚಿನ ಹಣವನ್ನು ಆಡಳಿತಾತ್ಮಕ ಕೆಲಸಗಳಿಗೆ ಬಳಸುವಂತಿಲ್ಲ ಎಂಬ ಷರತ್ತನ್ನು ಸೇರಿಸಲಾಗಿದೆ. ಈ ಮೊದಲು ಇದರ ಮಿತಿ ಶೇ. 50 ರಷ್ಟಿತ್ತು.

    ವಿದೇಶದಿಂದ ನೆರವು ಪಡೆದು ದೇಶದ ಒಳಗಡೆ ಉಗ್ರ ಚಟುವಟಿಕೆ, ರೈತರ ಪ್ರತಿಟಭನೆ, ಬಂದ್‌ ಇತ್ಯಾದಿ ಚಟುವಟಿಕೆಗಳಿಗೆ ಎನ್‍ಜಿಒಗಳ ಹಣ ಬಳಕೆಯಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ FCRA ಗೆ ತಿದ್ದುಪಡಿ ತಂದಿತ್ತು. ಎನ್‌ಜಿಒಗಳು ಯಾವುದೇ ರಾಜಕೀಯ ಪಕ್ಷಗಳ ಜೊತೆ ನೇರವಾದ ನಂಟು ಹೊಂದಿರಬಾರದು ಎಂದು ಸೂಚಿಸಲಾಗಿದೆ.

    ವಿದೇಶದಿಂದ ಹಣ ಪಡೆಯುವ ಎನ್‍ಜಿಒಗಳು ದೆಹಲಿಯ ಎಸ್‍ಬಿಐ ಕಚೇರಿಯಲ್ಲಿ ಖಾತೆ ತೆರೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಅಲ್ಲದೇ ಹಣದ ಲೆಕ್ಕಪತ್ರ ಸಂಬಂಧ ಹಲವು ಬಿಗಿ ನಿಯಮಗಳನ್ನು ಪಾಲನೆ ಮಾಡಬೇಕೆಂದು ಎನ್‍ಜಿಒಗಳಿಗೆ ಗೃಹ ಇಲಾಖೆ ಸೂಚಿಸಿದೆ.

    Live Tv

  • ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ‘ಆರ್‌ಎಸ್‌ಎಸ್’ ದೇಶದ ಶ್ರೀಮಂತ ಎನ್‍ಜಿಓ, ಅದಕ್ಕೆ ಹಣ ಎಲ್ಲಿಂದ ಬರುತ್ತೆ?: ಬಿ.ಕೆ ಹರಿಪ್ರಸಾದ್

    ಬೆಂಗಳೂರು: ಆರ್‌ಎಸ್‌ಎಸ್ ದೇಶದ ಶ್ರೀಮಂತ ಎನ್‍ಜಿಓ ಆಗಿದ್ದು, ಅದಕ್ಕೆ ಹಣ ಎಲ್ಲಿಂದ ಬರುತ್ತದೆ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಪ್ರಶ್ನಿಸಿದ್ದಾರೆ.

    ಮಲ್ಲೇಶ್ವರಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಪದರತಿಭಟನೆಯಲ್ಲಿ ಭಾಗವಹಿಸಿ ಸಚಿವರಾದ ಅಶ್ವತ್ಥನಾರಾಯಣ್ ಮೇಲೆ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರವಾಗಿದೆ. ಪ್ರತಿಯೊಂದು ಯೋಜನೆಯಲ್ಲಿ ಮಂತ್ರಿಗಳಿಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನಲ್ಲಿ ಪ್ರತಿಯೊಂದು ಕಾಮಗಾರಿಗಳಲ್ಲಿ ಅಶ್ವತ್ಥ ನಾರಾಯಣನಿಗೆ ಕಮಿಷನ್ ಹೋಗುತ್ತಿದೆ. ಮಲ್ಲೇಶ್ವರಂನ ಬಹುತೇಕ ಗುತ್ತಿಗೆದಾರರು ಸಚಿವರ ಸಂಬಂಧಿಗಳೇ ಇದ್ದಾರೆ. ಈಗ ಪಿಎಸ್‍ಐ ನೇಮಕಾತಿಯಲ್ಲಿ ಸಚಿವರ ಸಹೋದರನೇ ಭಾಗಿಯಾಗಿರುವ ಗಂಭೀರ ಆರೋಪ ಕೇಳಿ ಬಂದಿದೆ ಎಂದು ಆರೋಪ ವ್ಯಕ್ತಪಡಿಸಿದರು. ಇದನ್ನೂ ಓದಿ: 10 ದಿನಗಳ ಬಂಧನದ ಬಳಿಕ ರಾಣಾ ದಂಪತಿಗೆ ಜಾಮೀನು

    ಅಶ್ವತ್ಥ ನಾರಾಯಣ್ ಮಲ್ಲೇಶ್ವರಂನಲ್ಲಿ ಗುಳಂ ನಾರಾಯಣ ಎಂದು ಖ್ಯಾತಿ ಪಡೆದಿದ್ದಾರೆ. ಭ್ರಷ್ಟಾಚಾರಕ್ಕೆ ಆರ್‍ಎಸ್‍ಎಸ್‍ನ ಕುಮ್ಮಕ್ಕು ಇದೆ. ಅದರ ಹಣದಿಂದಲೇ ಶ್ರೀಮಂತ ಎನ್‍ಜಿಓ ಆಗಿ ಆರ್‍ಎಸ್‍ಎಸ್ ಬೆಳೆಯುತ್ತಿದೆ. ಪ್ರತಿಯೊಬ್ಬ ಸಚಿವರ ಬಳಿ ಆರ್‍ಎಸ್‍ಎಸ್‍ನ ಒಎಸ್‍ಡಿ ಇದ್ದಾರೆ. ಹಣ ಕಲೆಕ್ಷನ್ ಮಾಡುವುದೇ ಒಎಸ್‍ಡಿಗಳ ಪೂರ್ಣಾವಧಿಯ ಕೆಲಸವಾಗಿದೆ. ಹಾವಿನಪುರದಲ್ಲಿ ಕುಳಿತು ಅವರು ಹಣ ಕಲೆಕ್ಷನ್ ಮಾಡುತ್ತಾರೆ ಎಂದರು.

    ನಿನ್ನೆ ಅಮಿತ್ ಶಾ ಬಂದಿದ್ದರು ಸಹ ಬಿಜೆಪಿಯವರು ಯಾವುದೇ ಕ್ರಮ ಕೈಗೊಂಡಿಲ್ಲ. 40% ಕಮಿಷನ್ ಹಾಗೂ ಅಕ್ರಮ ಪಿಎಸ್‍ಐ ನೇಮಕಾತಿಯಲ್ಲಿ ಅಮಿತ್ ಶಾ ಪಾಲು ತೆಗೆದುಕೊಳ್ಳಲು ಬಂದಿದ್ದಾರೆ. ಶಾ ಆಗಮನದಿಂದ ರಾಜ್ಯದ ಜನರಿಗೆ ನಯಾಪೈಸೆ ಪ್ರಯೋಜನವಾಗಿಲ್ಲ. ಈ ಕೂಡಲೇ ಅಶ್ವಥ್ ನಾರಾಯಣ್ ರಾಜೀನಾಮೆ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿವಸೇನೆಗೆ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ: ಸಂಜಯ್ ರಾವತ್

    ಸ್ವ-ಇಲಾಖೆಯಲ್ಲಿ ಗಂಭೀರವಾದ ಆರೋಪ ಎದುರಿಸುತ್ತಿರುವ ಗೃಹ ಸಚಿವ ಆರಗ ಜ್ಞಾನೆಂದ್ರ ರಾಜೀನಾಮೆ ನೀಡಬೇಕು. ಸಂಪೂರ್ಣವಾಗಿ ತನಿಖೆಯಾಗಬೇಕು, ಗೃಹ ಸಚಿವರ ಮೇಲೆ ತನಿಖೆ ನಡೆಯಬೇಕು ಎಂದರು.