Tag: Next Level

  • ಉಪೇಂದ್ರಾಗೆ ಮಾಲಾಶ್ರೀ ಮಗಳು ಆರಾಧನಾ ಜೋಡಿ

    ಉಪೇಂದ್ರಾಗೆ ಮಾಲಾಶ್ರೀ ಮಗಳು ಆರಾಧನಾ ಜೋಡಿ

    ಕಾಟೇರ (Kaatera) ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಮಾಲಾಶ್ರೀ (Malashree) ಪುತ್ರಿ ಆರಾಧನಾ (Aradhana) ಇದೀಗ ಬಹಳ ಗ್ಯಾಪ್ ಬಳಿಕ ಎರಡನೇ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಉಪೇಂದ್ರ ಅಭಿನಯದ ನೆಕ್ಸ್ಟ್‌ ಲೆವೆಲ್ (Next Level) ಚಿತ್ರಕ್ಕೆ ನಾಯಕಿಯಾಗಿ ಎಂಟ್ರಿಯಾಗಿದ್ದಾರೆ

    ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ ಬಿಗ್ ಬಜೆಟ್ ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರವನ್ನು ಅರವಿಂದ್ ಕೌಶಿಕ್ ನಿರ್ದೇಶಿಸುತ್ತಿದ್ದು ಶೀರ್ಷಿಕೆ, ಕಾಂಬಿನೇಷನ್ ಎಲ್ಲವೂ ಘೋಷಣೆಯಾದಾಗಲೇ ಹೊಸ ವೈಬ್ ಸೃಷ್ಟಿಸಿತ್ತು. ಇದೀಗ ನಾಯಕಿ ಆಯ್ಕೆಯಲ್ಲೂ ಆರಂಭದಲ್ಲೇ ಸಿನಿಮಾ ಟೀಮ್ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?

    ಉಪೇಂದ್ರಾಗೂ (Upendra) ಆರಾಧನಾಗೂ ವಯಸ್ಸಿನ ಭಾರೀ ಅಂತರವಿದ್ದು ಈ ಜೋಡಿ ತೆರೆ ಮೇಲೆ ಹೇಗೆ ಕಾಣಿಸಿಕೊಳ್ಳುತ್ತದೆ ಎನ್ನುವುದೇ ಕುತೂಹಲ. ಈ ಪ್ರಶ್ನೆಗೆ ಉತ್ತರಿಸಿದ ಚಿತ್ರತಂಡ, ಸಿನಿಮಾ ಕಥೆಯಲ್ಲಿ ಇಬ್ಬರ ವಯಸ್ಸಿಗೂ ನ್ಯಾಯ ಕೊಡುವ ಪಾತ್ರ ಹೆಣೆಯಲಾಗಿದ್ದು ಸಿನಿಮಾ ನೋಡಿದ ಬಳಿಕ ಅದರ ರಹಸ್ಯ ತಿಳಿಯಲಿದೆ ಎಂದಿದೆ.

    ನೆಕ್ಸ್ಟ್‌ ಲೆವೆಲ್ ಈ ಚಿತ್ರದ ಶೂಟಿಂಗ್‌ ಇದೇ ಬರುವ ನವೆಂಬರ್‌ನಿಂದ ಪ್ರಾರಂಭವಾಗಲಿದ್ದು ಸದ್ಯಕ್ಕೆ ಪ್ರೀಪ್ರೊಡಕ್ಷನ್ ತಯಾರಿ ನಡೆಯುತ್ತಿದೆ. ಕಾಟೇರ ಚಿತ್ರದ ಬಳಿಕ ಆ ಪಾತ್ರಕ್ಕಿಂತ ಭಿನ್ನ ಕ್ಯಾರೆಕ್ಟರ್ ಹುಡುಕುತ್ತಿದ್ದ ನಟಿ ಆರಾಧನಾ ಅಪ್ರೋಚ್ ಆಗಿದ್ದ ಬೇರೆಲ್ಲಾ ಆಫರ್‌ಗಳನ್ನ ಫಿಲ್ಟರ್ ಮಾಡಿ ನೆಕ್ಸ್ಟ್‌ ಲೆವೆಲ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

    ಇಲ್ಲಿ ಆರಾಧನಾ ಕಾಟೇರದ ನಾಯಕಿ ಪ್ರಭಾ ಪಾತ್ರದ ವಿರುದ್ಧ ಪಾತ್ರದಲ್ಲಿ ನಟಿಸುತ್ತಿದ್ದು ಗ್ಲ್ಯಾಮರ್‌ ಆಗಿ ಕಾಣಿಸಿಕೊಳ್ಳಲಿದ್ದಾರೆ. ಲುಕ್‌ಟೆಸ್ಟ್ ಫೋಟೋಶೂಟ್ ಕೂಡ ಮಾಡಿಸಲಾಗಿದ್ದು ಆರಾಧನಾ ಸಖತ್ ಆಗಿ ಮಿಂಚಿದ್ದಾರೆ.

  • ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ

    ಇನ್ಮುಂದೆ ಉಪ್ಪಿ ʻನೆಕ್ಸ್ಟ್‌ ಲೆವೆಲ್‌ʼ – ಸದ್ದಿಲ್ಲದೇ ಸೆಟ್ಟೇರುತ್ತಿದೆ ಹೊಸ ಸಿನಿಮಾ

    ಸೈಲೆಂಟಾಗೇ ರಿಯಲ್ ಸ್ಟಾರ್ ಉಪೇಂದ್ರ (Upendra) ಅವರ ಹೊಸ ಸಿನಿಮಾ ಪ್ಲ್ಯಾನ್‌ ಆಗಿದೆ, ಟೀಮ್ ಕೂಡ ರಿವೀಲ್ ಆಗಿದೆ. ಇನ್ನುಳಿದ ಮಾಹಿತಿಗಳು ಇನ್ನಷ್ಟೇ ಹೊರಬೀಳಬೇಕಿದ್ದು, ಉಪೇಂದ್ರಗೆ ಈ ಬಾರಿ ಅರವಿಂದ್ ಕೌಶಿಕ್ ನಿರ್ದೇಶನ ಮಾಡುತ್ತಿದ್ದಾರೆ.

    ಚಿತ್ರವನ್ನು ತರುಣ್ ಸ್ಡುಡಿಯೋಸ್ ಬ್ಯಾನರ್‌ನಲ್ಲಿ ತರುಣ್ ಶಿವಪ್ಪ (Tarun Shivappa) ನಿರ್ಮಿಸುತ್ತಿದ್ದಾರೆ. ಈ ನಯಾ ಕಾಂಬಿನೇಶನ್ ಆರಂಭದಲ್ಲೇ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ಭಾರೀ ಸರಕು ವಾಹನ ಪರವಾನಗಿಯುಳ್ಳ ಚಾಲಕರು ಪ್ರಯಾಣಿಕ ವಾಹನ ಚಾಲನೆ ಮಾಡಲು ಅರ್ಹರು: ಕಾಶ್ಮೀರ ಹೈಕೋರ್ಟ್

    ಸದ್ಯಕ್ಕೀಗ ಉಪೇಂದ್ರ, ಸೂರಪ್ಪ ಬಾಬು ನಿರ್ಮಾಣದ ನಾಗಣ್ಣ ನಿರ್ದೇಶನದಲ್ಲಿ ʻಭಾರ್ಗವʼ ಚಿತ್ರದಲ್ಲಿ ತೊಡಗಿದ್ದು ಇದರ ಶೂಟಿಂಗ್ ಮುಗಿದ ಬಳಿಕ ಹೊಸ ಸಿನಿಮಾ ಪ್ರಾರಂಭಿಸುವ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು

    ಹಲವು ದಿನಗಳಿಂದ ಅರವಿಂದ್ ಕೌಶಿಕ್ ನಿರ್ದೇಶನದಲ್ಲಿ ಉಪ್ಪಿ ನಟಿಸುವ ಸುದ್ದಿ ಇತ್ತು. ಇದೀಗ ನಿರ್ಮಾಣ ಸಂಸ್ಥೆಯಿಂದಲೇ ಅಧಿಕೃತ ಮಾಹಿತಿ ಸಿಕ್ಕಿದ್ದು ಚಿತ್ರಕ್ಕೆ ಶೀರ್ಷಿಕೆಯೇ ಮುಖ್ಯ ಆಕರ್ಷಣೆ ಆಗಿದೆ. ಚಿತ್ರಕ್ಕೆ ʻನೆಕ್ಸ್ಟ್‌ ಲೆವೆಲ್ʼ ಎಂದು ಶೀರ್ಷಿಕೆ ಇಡಲಾಗಿದೆ. ಇದರ ಇನ್ನಷ್ಟು ಸೀಕ್ರೆಟ್‌ಗಳನ್ನ ಹಂತಹಂತವಾಗಿ ರಿವ್ಹೀಲ್‌ ಮಾಡುವ ಸುದ್ದಿ ಕೊಟ್ಟಿದೆ ಚಿತ್ರತಂಡ. ಇದನ್ನೂ ಓದಿ: ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನ ದುರಂತ – ಪೈಲಟ್ ಸೇರಿ 16 ಜನ ಸಾವು