Tag: newyear

  • ಬೀದರ್ ಐತಿಹಾಸಿಕ ತಾಣಗಳಿಗೆ ಹರಿದು ಬಂದ ಪ್ರವಾಸಿಗರ ದಂಡು

    ಬೀದರ್ ಐತಿಹಾಸಿಕ ತಾಣಗಳಿಗೆ ಹರಿದು ಬಂದ ಪ್ರವಾಸಿಗರ ದಂಡು

    ಬೀದರ್: ಹೊಸ ವರ್ಷಕ್ಕೆ ಕ್ಷಣಗಣನೆ ಶುರುವಾಗಿದ್ದು, ಬೀದರ್‌ನ (Bidar) ಐತಿಹಾಸಿಕ ಸ್ಮಾರಕಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ.ಇದನ್ನೂ ಓದಿ: ಹೊಸ ವರ್ಷಾಚರಣೆಗೆ ಕ್ಷಣಗಣನೆ – ಮೇಕೆದಾಟು, ಸಂಗಮಕ್ಕೆ ಪ್ರವಾಸಿಗರ ನಿರ್ಬಂಧ

    2024ಕ್ಕೆ ಬಾಯ್ ಹೇಳಿ, 2025ಕ್ಕೆ ಹಾಯ್ ಹೇಳಲು ಜನರು ತುದಿಗಾಲಲ್ಲಿ ನಿಂತಿದ್ದಾರೆ. ಹೀಗಾಗಿ ಹೊಸ ವರ್ಷವನ್ನು ಸ್ವಾಗತಿಸಲು ಗಡಿಜಿಲ್ಲೆ ಬೀದರ್‌ನ ಐತಿಹಾಸಿಕ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಐತಿಹಾಸಿಕ ಬೀದರ್ ಕೋಟೆ, ಅಷ್ಟೂರು ಗುಂಬಜ್ ಸೇರಿದಂತೆ ಹಲವು ತಾಣಗಳಿಗೆ ಪ್ರವಾಸಿಗರು ದಂಡು ದಂಡಾಗಿ ಬಂದು ಪೋಟೋ ಕ್ಲಿಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

    ಬೀದರ್ ಸೇರಿದಂತೆ ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದಲೂ ಪ್ರವಾಸಿಗರು ಐತಿಹಾಸಿಕ ಬಹುಮನಿ ಸುಲ್ತಾನರ ಕೋಟೆ ನೋಡಲು ಬಂದಿದ್ದಾರೆ.ಇದನ್ನೂ ಓದಿ: ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

  • ಪ್ರವಾಸಿಗರ ಸ್ವರ್ಗ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ

    ಪ್ರವಾಸಿಗರ ಸ್ವರ್ಗ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ಇಲ್ಲ

    ಬಳ್ಳಾರಿ: ವಿಶ್ವವಿಖ್ಯಾತ ಹಂಪಿಯಲ್ಲಿ ಹೊಸ ವರ್ಷದ ಆಚರಣೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಎಂದಿನಂತೆ ಪ್ರವಾಸಿಗರಿಗೆ ಹಂಪಿಗೆ (Hampi) ಮುಕ್ತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ರಾಜ್ಯದ ಹಲವೆಡೆ ಧಾರ್ಮಿಕ ಕ್ಷೇತ್ರಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ ಹಂಪಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ನಿರ್ಬಂಧವಿಲ್ಲದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.ಇದನ್ನೂ ಓದಿ: ಬೈಕ್, ಕೆಎಸ್‌ಆರ್‌ಟಿಸಿ ಬಸ್ ನಡುವೆ ಅಪಘಾತ – 3 ಮಂದಿ ಸಾವು

    ಹೊಸ ವರ್ಷಾಚರಣೆ ಹಿನ್ನೆಲೆ ಇಂದು (ಡಿ.31) ಹಾಗೂ ನಾಳೆ (ಜ.01) ಲಕ್ಷಾಂತರ ಪ್ರವಾಸಿಗರು ಹಂಪಿಗೆ ಭೇಟಿ ನೀಡುವ ನಿರೀಕ್ಷೆ ಇದೆ. ದೇಶ, ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಹಂಪಿ ಪ್ರವಾಸಕ್ಕೆ ಬರಲಿದ್ದಾರೆ ಎನ್ನಲಾಗಿದೆ. ಅಲ್ಲದೇ ರಾಜ್ಯದ ವಿವಿಧ ಜಿಲ್ಲೆಗಳಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರವಾಸಕ್ಕೆ ಬರುವ ಸಾಧ್ಯತೆ ಇದೆ. ಹಂಪಿ ಭೇಟಿಗೆ ಬರುವ ಪ್ರವಾಸಿಗರು, ತುಂಗಭದ್ರಾ ಜಲಾಶಯ ಹಾಗೂ ಅಂಜನಾದ್ರಿಗೂ ಭೇಟಿ ನೀಡಲಿದ್ದಾರೆ.

    ಹೊಸ ವರ್ಷಾಚರಣೆ ನೆಪದಲ್ಲಿ ಧಾರ್ಮಿಕ ಕ್ಷೇತ್ರ ಹಂಪಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವಿಜಯನಗರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಕಟ್ಟೆಚ್ಚರ ವಹಿಸಲಾಗಿದೆ.ಇದನ್ನೂ ಓದಿ: ತಮಿಳುನಾಡು | ಕನ್ಯಾಕುಮಾರಿಯಲ್ಲಿ ಭಾರತದ ಮೊದಲ ಗ್ಲಾಸ್‌ ಬ್ರಿಡ್ಜ್‌ ಉದ್ಘಾಟನೆ

  • ಹೊಸ ವರ್ಷಕ್ಕೆ ಬಿಂದಾಸ್‌ ವೆಲ್‌ಕಮ್‌ – ಎಲ್ಲೆಲ್ಲೂ ಸಂಭ್ರಮ, ಸಡಗರ

    ಹೊಸ ವರ್ಷಕ್ಕೆ ಬಿಂದಾಸ್‌ ವೆಲ್‌ಕಮ್‌ – ಎಲ್ಲೆಲ್ಲೂ ಸಂಭ್ರಮ, ಸಡಗರ

    ಬೆಂಗಳೂರು: ಹೊಸ ವರ್ಷವನ್ನು (New Year) ಇಡೀ ದೇಶವೇ ಸಂಭ್ರಮಿಸುತ್ತಿದೆ. ಅದರಲ್ಲೂ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಂತೂ (Bengaluru) ನ್ಯೂ ಇಯರ್‌ಗೆ ಗ್ರ್ಯಾಂಡ್ ವೆಲ್‍ಕಂ ಸಿಕ್ಕಿದೆ. ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದ ಮೈಸೂರು ಅರಮನೆಯಲ್ಲಿ ಪಟಾಕಿ ಸಿಡಿಸಿ ಹೊಸ ವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು.

    ಕೊರೊನಾದಿಂದಾಗಿ ಕಳೆದೆರಡು ವರ್ಷಗಳಿಂದ ಡಲ್ ಹೊಡೆದಿದ್ದ ಹೊಸ ವರ್ಷಾಚರಣೆ ಈ ಬಾರಿ ಗ್ರ್ಯಾಂಡ್ ಆಗಿ ಜರುಗಿದೆ. ಬೆಂಗಳೂರಿನ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಂತೂ ಜನಸಾಗರವೇ ಸೇರಿದೆ. ಹಾಡು, ಕುಣಿತ, ಡ್ಯಾನ್ಸ್, ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡರು. ಬಾರ್, ಪಬ್, ಕ್ಲಬ್‍ಗಳಲ್ಲಿ ಸೇರಿದ್ದ ಪಾರ್ಟಿ ಪ್ರಿಯರು ಸಖತ್ ಎಂಜಾಯ್ ಮಾಡಿದರು.

    ಬೆಂಗಳೂರಿನ ಮುಖ್ಯ ರಸ್ತೆಗಳು ದೀಪಾಲಂಕಾರದಿಂದ ಮಿಂಚುತ್ತಿದೆ. ಕೆಲವರು ಕುಟುಂಬಸ್ಥರೊಂದಿಗೆ ಮನೆಯಲ್ಲಿ ಹೊಸ ವರ್ಷವನ್ನು ಸಂಭ್ರಮಿಸಿದರು. ಪ್ರೇಮಿಗಳು ಕೈ ಕೈ ಹಿಡಿದು ನಗರದ ಮುಖ್ಯ ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಒಂದೆರಡು ಕಡೆ ಸಣ್ಣಪುಟ್ಟ ಗಲಾಟೆಗಳು ಹೊರತುಪಡಿಸಿ, ಉಳಿದಂತೆ ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಯಶಸ್ವಿಯಾಗಿ ನಡೆದಿದೆ. 8,500ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ವಹಿಸಿದ್ದರು. ಗಾಂಜಾ ಮತ್ತಿನಲ್ಲಿ ಗಲಾಟೆ- ಕಿಡಿಗೇಡಿಗಳು ಪೊಲೀಸರ ವಶಕ್ಕೆ

    ಬೆಂಗಳೂರು ಮಾತ್ರವಲ್ಲ ಜಿಲ್ಲೆಗಳಲ್ಲೂ ಹೊಸ ವರ್ಷದ ಸಂಭ್ರಮಾಚರಣೆ ಅದ್ಧೂರಿಯಾಗಿದೆ. ಕಡಲನಗರಿ ಮಂಗಳೂರಿನಲ್ಲಿ ಡಿಜೆ ಸಾಂಗ್‍ಗಳ ಜೊತೆಗೆ ಯಕ್ಷಗಾನದ ಹಾಡುಗಳಿಗೆ ನೃತ್ಯ ಮಾಡಿ ಹೊಸ ವರ್ಷವನ್ನು ಜನ ಸ್ವಾಗತಿಸುತ್ತಿದ್ದಾರೆ. ಇದನ್ನೂ ಓದಿ: ಚರ್ಚ್ ಸ್ಟ್ರೀಟ್‌ನಲ್ಲಿ ಮಾರಾಮಾರಿ – ಲವರ್ ಮುಟ್ಟಿದ್ದಕ್ಕೆ ಬಿತ್ತು ಗೂಸಾ

    Live Tv
    [brid partner=56869869 player=32851 video=960834 autoplay=true]

  • ಹೊಸ ವರ್ಷದ ಶುಭಾಶಯದೊಂದಿಗೆ ಜನತೆಯಲ್ಲಿ ಬಿಎಸ್‍ವೈ ಮನವಿ

    ಹೊಸ ವರ್ಷದ ಶುಭಾಶಯದೊಂದಿಗೆ ಜನತೆಯಲ್ಲಿ ಬಿಎಸ್‍ವೈ ಮನವಿ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನಾಡಿನ ಜನತೆಗೆ ಹೊಸ ವರ್ಷದ ಶುಭಾಶಯದ ಜೊತೆಗೆ ಮನವಿ ಕೂಡ ಮಾಡಿಕೊಂಡಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಸಿಎಂ, ರಾಜ್ಯದ ಸಮಸ್ತ ಜನತೆಗೆ 2021ರ ನೂತನ ವರ್ಷದ ಹಾರ್ದಿಕ ಶುಭಾಶಯಗಳು. ಈ ಹೊಸ ವರ್ಷವು ಹೊಸ ಭರವಸೆ, ಉತ್ಸಾಹ, ಚೈತನ್ಯಗಳನ್ನು ಹೊತ್ತುತರಲಿ. ಸಾಂಕ್ರಾಮಿಕದ ಸಂಕಷ್ಟಗಳು ದೂರ ಸರಿಯಲಿ. ಆರೋಗ್ಯ, ಸಂತಸ, ಸಮೃದ್ಧಿಗಳಿಂದ ಎಲ್ಲರ ಬಾಳು ಹಸನಾಗಲಿ ಎಂದು ಹಾರೈಸುತ್ತೇನೆ. ಸಂಭ್ರಮಾಚರಣೆ ಹೆಸರಿನಲ್ಲಿ ಸಾಮಾಜಿಕ ಅಂತರ, ಸುರಕ್ಷತಾ ನಿಯಮಗಳ ಪಾಲನೆ ಮರೆಯದಿರಿ ಎಂದು ತಿಳಿಸಿದ್ದಾರೆ.

    ಹೊಸ ವರ್ಷ ಎಲ್ಲರಿಗೂ ಸುಖ ಸಮೃದ್ಧಿ ತರಲಿ. ಕಳೆದ ವರ್ಷದ ಸಾಲಿನಲ್ಲಿ ಕಳೆದಿದ್ದ ಕೋವಿಡ್ ಸಾಂಕ್ರಾಮಿಕ ರೋಗದ ಕಾರ್ಮೋಡ ಕಳೆದು ಈ ವರ್ಷ ಸಹಜ ಸ್ಥಿತಿಗೆ ಮರಳಲಿ. ಹೊಸ ವರ್ಷ ಸಂಭ್ರಮದಿಂದ ಕೂಡಿರಲಿ ಆಚರಣೆ ಸಹಜವಾಗಿರಲಿ. ಸಾಮಾಜಿಕ ಅಂತರ, ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ಸ್ಯಾನಿಟೈಸ್ ಮಾಡುವಂತೆ ಜನತೆಯಲ್ಲಿ ಸಿಎಂ ಮನವಿ ಮಾಡಿಕೊಂಡಿದ್ದಾರೆ.

    ಕೋವಿಡ್ ಎರಡನೇ ಅಲೆ ಹೊಸ ರೂಪದಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ. ಇದರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಸನ್ನದ್ಧವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗವನ್ನ ತಡೆಗಟ್ಟುವ ಕೆಸಲದಲ್ಲಿ ಸರ್ಕಾರದ ಜೊತೆ ಸಹಕರಿಸಬೇಕು ಎಂದು ರಾಜ್ಯದ ಜನತೆಯಲ್ಲಿ ಸಿಎಂ ಮತ್ತೊಮ್ಮೆ ಮನವಿ ಮಾಡಿಕೊಂಡರು.

  • ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ಹೊಸ ವರ್ಷಾಚರಣೆ 2020: ಖಾಕಿ ಸಮ್ಮುಖದಲ್ಲೇ ನಡೀತು ಲೈಂಗಿಕ ಕಿರುಕುಳ

    ಬೆಂಗಳೂರು: ನಗರದ ಎಂಜಿ ರೋಡ್, ಬ್ರಿಗೇಡ್ ರೋಡಲ್ಲಿ ಹೊಸ ವರ್ಷ ಬೇಕಾ ಅನ್ನೋವಷ್ಟರ ಮಟ್ಟಿಗೆ ಪೋಲಿಗಳ ಹಾವಳಿಯಿತ್ತು. ಈ ವರ್ಷ ಹೊಸವರ್ಷಾಚರಣೆಗೆ ಪೊಲೀಸರು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡರು ಕೂಡ ಯುವತಿಯರ ಮೇಲಿನ ಲೈಂಗಿಕ ದೌರ್ಜನ್ಯ ಮಾತ್ರ ನಿಂತಿಲ್ಲ.

    ಕಾಮುಕರ ಅಟ್ಟಹಾಸಕ್ಕೆ ನಲುಗಿದ ಯುವತಿಯರು ತಕ್ಷಣವೇ ಪ್ರತಿರೋಧ ತೋರಿದ್ದಾರೆ. ಬ್ರಿಗೇಡ್ ರಸ್ತೆಯಲ್ಲಿ ಎಗ್ಗಿಲ್ಲದೇ ಲೈಂಗಿಕ ದೌರ್ಜನ್ಯ ನಡೆಯಿತು.

    ಎಲ್ಲೆಲ್ಲಿ ಏನೇನಾಯಿತು..?
    ನಗರದ ಒಪೆರಾ ಜಂಕ್ಷನ್ ಹೌಸ್ ನಲ್ಲಿ ಎದುರಿನಿಂದ ಬಂದ ಯುವಕ, ಯುವತಿಯ ಮೈಗೆ ಕೈ ಹಾಕಿದ್ದಾರೆ. ಆತ ಯಾರು ಎಂಬುದನ್ನು ಅರಿತುಕೊಂಡ ಯುವತಿ ಆ ಬೀದಿ ಕಾಮುಕನಿಗೆ ಸ್ಥಳದಲ್ಲೇ ಚಪ್ಪಲಿ ಸೇವೆ ಮಾಡಿದ್ದಾಳೆ. ಇತ್ತ ಸ್ನೇಹಿತನ ಜೊತೆ ತನ್ನ ಪಾಡಿಗೆ ತಾನು ಹೋಗುತ್ತಿದ್ದ ಯುವತಿಗೆ, ಎದುರಿನಿಂದ ಬಂದಾತ ಆಕೆಯ ಮೈ ಮುಟ್ಟಿದ್ದಾನೆ. ಆ ಯುವತಿ ತಿರುಗಿ ಆತನಿಗೆ ಹೊಡೆಯೋ ಪ್ರಯತ್ನ ಕೂಡ ಮಾಡಿದ್ದಾಳೆ. ಆದರೆ ಜೊತೆಯಲ್ಲಿದ್ದ ಸ್ನೇಹಿತ ಆಕೆಯನ್ನ ತಡೆದು ಕರೆದೊಯ್ದ ಪ್ರಸಂಗ ನಡೆದಿದೆ.

    ಇಷ್ಟು ಮಾತ್ರವಲ್ಲದೆ ಪಾನಮತ್ತಳಾಗಿದ್ದ ಯುವತಿ ಹಿಂಬದಿ ಮುಟ್ಟಿದ್ದ ಯುವಕನಿಗೂ ಸರಿಯಾಗಿ ಇಕ್ಕಿದ್ದಾರೆ. ತನ್ನ ಪಾಡಿಗೆ ತಾನು ಕುಣಿಯುತ್ತಾ ಹೋಗುತ್ತಿದ್ದಾಕೆಯನ್ನ ಮತ್ತಿಬ್ಬರು ಮುಟ್ಟಿದರು. ಅವರಿಗೂ ಯುವತಿ ಸಖತ್ ಗೂಸಾ ನೀಡಿದ್ದಾಳೆ. ಕೊನೆಗೆ ಆಕೆಯನ್ನ ಕೆಳಗೆ ತಳ್ಳಿ ಕಾಮುಕರು ಬೀಳಿಸಿದ್ದಾರೆ. ಇದನ್ನೂ ಓದಿ: ಜನ್ರ ಸಮ್ಮುಖದಲ್ಲೇ ಜೋಡಿ ಲಿಪ್‍ಲಾಕ್ – ಪೊಲೀಸ್ರು ನಿಯೋಜನೆ ಮಾಡಿದ್ದ ರಸ್ತೆಯಲ್ಲೇ ಪ್ರೇಮಿಗಳು ಅರೆಬೆತ್ತಲೆ

    ನಗರದ ಬ್ರಿಗೇಡ್ ರಸ್ತೆಯಲ್ಲಿ ಮನೆಗೆ ಹೋಗಲು ಹೊರಟು ನಿಂತಿದ್ದ ಯುವತಿಯನ್ನ ಮೂವರು ಕಾಮುಕರು ಚುಡಾಯಿಸ್ತಾ ನಿಂತಿದ್ದರು. ಹೂವು ಕೊಟ್ಟು ಆಕೆಯನ್ನ ಪ್ರಪೋಸ್ ಮಾಡುತ್ತಾ, ಮಾನಸಿಕ ಕಿರಿಕಿರಿ ನೀಡುತ್ತಿದ್ದರು. ಕ್ಯಾಮೆರಾ ಶೂಟ್ ಮಾಡುತ್ತಿದೆ ಎಂದು ಗೊತ್ತಾದ ಕೂಡಲೇ ಮತ್ತೊಬ್ಬಾತ ಕರೆದುಕೊಂಡು ಹೋದ ಪ್ರಸಂಗವೂ ನಡೆದಿದೆ.

    ಪೆಟ್ರೋಲ್ ಬಂಕ್ ಎದುರು ಮೂವರು ಯುವತಿಯರು ಹೋಗುವಾಗ ಬೀದಿ ಕಾಮಾಂಧರು ಕೈಯಿಂದ ಅವರ ದೇಹ ಸವರುವ ಕೆಲಸ ಮಾಡಿದ್ದಾರೆ. ಈ ವೇಳೆ ಯುವತಿಯರು ಅವರಿಂದ ಹೇಗೋ ತಪ್ಪಿಸಿಕೊಂಡು ಪೊಲೀಸರ ಬಳಿ ಹೋಗಿ ರಕ್ಷಿಸಿಕೊಂಡಿದ್ದಾರೆ.

  • ಸಿಂಗಾಪುರ್‌ನಲ್ಲಿ ಹೆಚ್‍ಡಿಕೆ ಹೊಸ ವರ್ಷಾಚರಣೆ

    ಸಿಂಗಾಪುರ್‌ನಲ್ಲಿ ಹೆಚ್‍ಡಿಕೆ ಹೊಸ ವರ್ಷಾಚರಣೆ

    ಬೆಂಗಳೂರು: ಫಾರಿನ್ ಟ್ರಿಪ್‍ಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿಗೂ ಸಿಕ್ಕಾಪಟ್ಟೆ ನಂಟು. ಅದರಲ್ಲೂ ಸಿಂಗಾಪುರ್ ಅಂದ್ರೆ ಹೆಚ್‍ಡಿಕೆಗೆ ಎಲ್ಲಿಲ್ಲದ ಪ್ರೀತಿ. ಸಮಯ ಸಿಕ್ಕಾಗಲೆಲ್ಲಾ ಸಿಂಗಾಪುರ್ ಗೆ ಹೋಗುತ್ತಲೇ ಇರುತ್ತಾರೆ. ಈಗ ಮತ್ತೆ ಕುಮಾರಸ್ವಾಮಿ ಸಿಂಗಾಪುರ್ ಗೆ ತೆರಳಿದ್ದಾರೆ. ಹೊಸ ವರ್ಷ ಸೆಲೆಬ್ರೆಷನ್ ಗಾಗಿ ಕುಮಾರಸ್ವಾಮಿ ಫ್ಯಾಮಿಲಿ ಸಮೇತ ಸಿಂಗಾಪುರ್ ಗೆ ಹಾರಿದ್ದಾರೆ.

    ಕಳೆದ ಎರಡು-ಮೂರು ವರ್ಷಗಳಿಂದ ಕುಮಾರಸ್ವಾಮಿ ಹೊಸ ವರ್ಷವನ್ನು ಸಿಂಗಾಪುರ್ ನಲ್ಲಿಯೇ ಆಚರಣೆ ಮಾಡುತ್ತಿದ್ದಾರೆ. ಕಳೆದ ವರ್ಷ ಸಿಎಂ ಆಗಿದ್ದಾಗಲೂ ಅವರು ಸಿಂಗಾಪುರ್ ಗೆ ಹೋಗಿದ್ರು. ಈಗ ಉಪ ಚುನಾವಣೆ ಸೋಲಿನ ಹಿನ್ನೆಲೆಯಲ್ಲಿ ಸ್ವಲ್ಪ ರಾಜಕೀಯ ಚಟುವಟಿಕೆಯಿಂದ ಹೆಚ್‍ಡಿಕೆ ದೂರ ಉಳಿದಿದ್ದಾರೆ. ಹೀಗಾಗಿ ಸಿಂಗಾಪುರ್ ಹಾರಿದ್ದಾರೆ.

    ಪತ್ನಿ ಅನಿತಾ, ಮಗ ನಿಖಲ್, ಕೆಲ ಆಪ್ತ ಜೆಡಿಎಸ್ ನಾಯಕರು ಕೂಡ ಹೆಚ್‍ಡಿಕೆ ಜೊತೆ ತೆರಳಿದ್ದಾರೆ ಅಂತ ಮೂಲಗಳು ತಿಳಿಸಿವೆ. ಇತ್ತೀಚೆಗಷ್ಟೆ ಕುಮಾರಸ್ವಾಮಿ ತಮ್ಮ ಹುಟ್ಟುಹಬ್ಬ ಆಚರಣೆಗೆ ಗೋವಾಕ್ಕೆ ಹೋಗಿದ್ರು. ಈಗ ಹೊಸ ವರ್ಷವನ್ನು ಸೆಲೆಬ್ರೇಷನ್ ಮಾಡೋಕೆ ಸಿಂಗಾಪುರ್ ಗೆ ಹೋಗಿದ್ದಾರೆ.