Tag: newlyweds

  • ಅಂತರ್ಜಾತಿ ವಿವಾಹಕ್ಕೆ ಅಡ್ಡಿ – ರಕ್ಷಣೆಗೆ ಖಾಕಿ ಮೊರೆ ಹೋದ ಜೋಡಿ

    ಅಂತರ್ಜಾತಿ ವಿವಾಹಕ್ಕೆ ಅಡ್ಡಿ – ರಕ್ಷಣೆಗೆ ಖಾಕಿ ಮೊರೆ ಹೋದ ಜೋಡಿ

    ಚಿತ್ರದುರ್ಗ: ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಜೋಡಿಯೊಂದು ಕಳೆದ ವಾರವಷ್ಟೇ ವಿವಾಹವಾಗಿದ್ದು, ಈ ನವದಂಪತಿಗೆ ಇದೀಗ ಕಂಟಕ ಎದುರಾಗಿದೆ. ಜಾತಿ ಮರೆತು ಸಪ್ತಪದಿ ತುಳಿದ ಪ್ರೇಮಿಗಳಿಗೆ ಯುವತಿಯ ಪೋಷಕರು ವಿಲನ್‍ಗಳಾಗಿದ್ದಾರೆ.

    ಸಮಾಜ ಅದೆಷ್ಟೇ ಮುಂದುವರೆದರೂ ಕೂಡ ಜನ ಜಾತಿ-ಧರ್ಮ ಅಂತ ಕಿತ್ತಾಡುವುದನ್ನು ನಿಲ್ಲಿಸುವುದಿಲ್ಲ. ಅಂತರ್ಜಾತಿ ವಿವಾಹಕ್ಕೆ ಸರ್ಕಾರವೇ ಪ್ರೋತ್ಸಾಹ ನೀಡುತ್ತದೆ. ಆದರೂ ಕೂಡ ಇಂತಹ ತಾರತಮ್ಯದಿಂದ ಹೊರಬರಲು ಜನರಿಗೆ ಆಗುತ್ತಿಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದವಾರವಷ್ಟೇ ಮದುವೆಯಾದ ಚಿತ್ರದುರ್ಗದ ಪ್ರಕಾಶ್ ಮತ್ತು ಸಂಧ್ಯಾ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಹೌದು, ಕಳೆದ 2 ವರ್ಷಗಳಿಂದ ಪ್ರೀತಿಸಿ ಮೊನ್ನೆಯಷ್ಟೇ ಪೋಷಕರ ವಿರೋಧದ ನಡುವೆ ವಿವಾಹವಾಗಿದ್ದ ಪ್ರಕಾಶ್ ಹಾಗೂ ಸಂಧ್ಯಾಗೆ ಇದೀಗ ಅನ್ಯಜಾತಿ ಯುವಕನನ್ನು ಮದುವೆಯಾಗಿದ್ದಕ್ಕೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿ ಕೊಲೆ ಬೆದರಿಕೆಯಾಕಿದ್ದಾರೆ.

    ಚಿತ್ರದುರ್ಗ ತಾಲೂಕಿನ ಸಜ್ಜನಕೆರೆಗ್ರಾಮದ ಪ್ರಕಾಶ್, ಖಾಸಗಿ ಬಸ್ ಚಾಲಕರಾಗಿದ್ದು, ಬಸ್‍ನಲ್ಲಿ ಪಾವಗಡಕ್ಕೆ ತೆರೆಳುತ್ತಿದ್ದರು. ಆಗ ಬಸ್‍ನಲ್ಲಿ ಕಾಲೇಜಿಗೆ ಹೋಗುತ್ತಿದ್ದ ವಿದ್ಯಾರ್ಥಿನಿ ಸಂಧ್ಯಾಗೆ ಪ್ರಕಾಶ್ ಪರಿಚಯವಾಗಿ ಇಬ್ಬರು ಪರಸ್ಪರ ಮೆಚ್ಚಿಕೊಂಡು ಪ್ರೀತಿಸುತ್ತಿದ್ದರು. ಕಳೆದ ಶುಕ್ರವಾರವಷ್ಟೇ ದೇವಸ್ಥಾನವೊಂದರಲ್ಲಿ ವಿವಾಹವಾಗಿದ್ದಾರೆ. ಹೀಗಾಗಿ ಈ ವಿಚಾರ ತಿಳಿದ ಸಂಧ್ಯಾಳ ಪೋಷಕರು, ಪಾವಗಡದಿಂದ ಚಿತ್ರದುರ್ಗಕ್ಕೆ ಧಾವಿಸಿ, ಈ ನವದಂಪತಿಗಳಿಗೆ ಕೊಲೆಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಪ್ರಕಾಶ್ ಹಾಗೂ ಸಂಧ್ಯಾ ನಮಗೆ ಸೂಕ್ತ ರಕ್ಷಣೆ ಬೇಕು ಅಂತ ಚಿತ್ರದುರ್ಗ ಎಸ್‍ಪಿ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಲಾಲ್‍ಬಾಗ್‍ನಲ್ಲಿ ಈಗ ಎಲ್ಲೆಲ್ಲೂ ಅಪ್ಪು – ನಗುವಿನ ಒಡೆಯನನ್ನು ನೋಡಲು ಮುಗಿಬಿದ್ದ ಜನ

    ಮತ್ತೊಂದೆಡೆ ಪ್ರೀತಿಸಿದ ಹುಡುಗನಿಂದ ತಾಳಿ ಕಟ್ಟಿಸಿಕೊಂಡಿರುವ ಸಂಧ್ಯಾ, ಇದ್ದರೆ ಪ್ರಕಾಶ್ ಜೊತೆಗೆ ಇರುತ್ತೇನೆ. ಇಲ್ಲ ಪ್ರಾಣ ಬಿಡುತ್ತೇನೆ ಹೊರೆತು ಅವರೊಂದಿಗೆ ಹೋಗಲ್ಲ ಎನ್ನುತ್ತಿದ್ದಾರೆ. ಇನ್ನು ಸಂಧ್ಯಾಳನ್ನು ಸೊಸೆ ಎಂದು ಆಸೆಯಿಂದ ಒಪ್ಪಿಕೊಂಡಿರುವ ಪ್ರಕಾಶ್‍ನ ತಾಯಿ ಪ್ರೀತಿಸಿ ಮದುವೆಯಾದ ಜೋಡಿಯನ್ನು ದೂರ  ಮಾಡಬೇಡಿ ಅಂತ ಅಂಗಲಾಚಿದ್ದಾರೆ. ಇದನ್ನೂ ಓದಿ: ಹನುಮನಿಂದ ಪ್ರಸಾದ ಪಡೆಯುವ ಅಲಾಯಿ ದೇವರು – ಕೊಪ್ಪಳದಲ್ಲಿ ವಿಶೇಷ ಆಚರಣೆ

    ಒಟ್ಟಾರೆ ಪ್ರೀತಿಸಿದ ಪ್ರೇಮಿಗಳು ಧೈರ್ಯಮಾಡಿ ಮದುವೆಯಾಗುವ ಮೂಲಕ ತಮ್ಮ ಪ್ರೀತಿಯನ್ನು ಉಳಿಸಿಕೊಂಡಿದ್ದಾರೆ. ಆದರೆ ಪೋಷಕರ ಬೆದರಿಕೆಗೆ ಬೆಚ್ಚಿರುವ ನವದಂಪತಿಗಳು ತಮ್ಮ ಜೀವ ರಕ್ಷಣೆಗಾಗಿ ಚಿತ್ರದುರ್ಗ ಪೊಲಿಸರ ಮೊರೆಗೆ ಧಾವಿಸಿದ್ದಾರೆ. ಸೂಕ್ತ ಭದ್ರತೆ ಒದಗಿಸಿ, ಅವರ ಹೊಸಬದುಕು ಅವಕಾಶ ಕಲ್ಪಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ನಿರ್ಮಾಣ ಹಂತದಲ್ಲಿರುವ ಶೋರೂಂನಲ್ಲಿ ನವವಿವಾಹಿತೆ ಶವ ಪತ್ತೆ

    ಚಂಡೀಗಢ: ಹೊಸದಾಗಿ ನಿರ್ಮಾಣವಾಗುತ್ತಿರುವ ಶೋರೂಂ ಒಂದರಲ್ಲಿ ನವವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿರುವ ಘಟನೆ ಸೋನಿಪತ್‍ನ ಗೋಕುಲ್ ನಗರದಲ್ಲಿ ನಡೆದಿದೆ.

    ಮೃತಳನ್ನು ರೇಣು ಎಂದು ಗುರುತಿಸಲಾಗಿದ್ದು, ವಿಕಾಸ್ ಅವರನ್ನು ಮದುವೆಯಾಗಿದ್ದರು. ಆದರೆ ವರದಕ್ಷಿಣೆಗಾಗಿ ಆಕೆಯ ಅತ್ತೆಯಂದಿರು ಕಿರುಕುಳ ನೀಡಿ ಆಕೆಯನ್ನು ಅತ್ತೆಯಂದಿರೇ ಕೊಂದಿರಬಹುದು ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಸಂಬಂಧ ಮಾಹಿತಿ ಪಡೆದ ಸೋನಿಪತ್ ನಗರ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಪತ್ನಿಯ ನಡವಳಿಕೆ ಮೇಲೆ ಸಂಶಯಗೊಂಡು ಚೂಪಾದ ಆಯುಧದಿಂದ ಚುಚ್ಚಿಕೊಂದ ವೃದ್ಧ

    POLICE JEEP

    ಈ ಬಗ್ಗೆ ಪ್ರತಿಕ್ರಿಯಿಸಿದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸಂಜಯ್ ಕುಮಾರ್, ಶೋ ರೂಂನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಸದ್ಯ ಆಕೆಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂಬ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಮಗನ ಕಾಯಿಲೆ ಗುಣಪಡಿಸ್ತೀನೆಂದು ಮಹಿಳೆ ಮೇಲೆ ಸ್ವಯಂಘೋಷಿತ ದೇವಮಾನವ ರೇಪ್

  • ಟಿಕ್‍ಟಾಕ್ ಹುಚ್ಚಿಗೆ ಬಲಿಯಾದ ನವವಿವಾಹಿತ – ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಅಪ್ಪಚ್ಚಿಯಾಯ್ತು ದೇಹ

    ಟಿಕ್‍ಟಾಕ್ ಹುಚ್ಚಿಗೆ ಬಲಿಯಾದ ನವವಿವಾಹಿತ – ಟ್ರ್ಯಾಕ್ಟರ್ ಸ್ಟಂಟ್ ಮಾಡಲು ಹೋಗಿ ಅಪ್ಪಚ್ಚಿಯಾಯ್ತು ದೇಹ

    – ಹೋಳಿ ಹಬ್ಬದಂದೇ ಹರಿದ ರಕ್ತದೋಕುಳಿ
    – ವಿಡಿಯೋ ಮಾಡುವಾಗ್ಲೆ ಸಂಭವಿಸಿದ ಅಪಘಾತ

    ಲಕ್ನೋ: ಇತ್ತೀಚೆಗೆ ಟಿಕ್‍ಟಾಕ್ ಯುವಪೀಳಿಗೆಗೆ ಮಾರಕವಾಗುತ್ತಿದ್ದು, ಟಿಕ್‍ಟಾಕ್ ವಿಡಿಯೋ ಮಾಡುವ ಹುಚ್ಚಿಗೆ ಬಿದ್ದ ಬಳಕೆದಾರರು ತಮ್ಮ ಜೀವಕ್ಕೆ ಕಂಟಕ ತಂದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಹೀಗೆ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನವವಿವಾಹಿತನೋರ್ವ ಜೀವ ಕಳೆದುಕೊಂಡ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.

    ಮೃತ ವ್ಯಕ್ತಿಯನ್ನು ಖಿಂಡೀದಿಯಾ ಗ್ರಾಮದ ನಿವಾಸಿ ಕಪಿಲ್(23) ಎಂದು ಗುರುತಿಸಲಾಗಿದೆ. ಬುಧವಾರ ಹೋಳಿ ಹಬ್ಬದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮದಿಂದ ಬಣ್ಣದ ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಟಿಕ್‍ಟಾಕ್ ವಿಡಿಯೋ ಮಾಡಲು ಕಪಿಲ್ ಹಾಗೂ ಆತನ ಸ್ನೇಹಿತರು ಮುಂದಾದರು. ಟಿಕ್‍ಟಾಕ್ ವಿಡಿಯೋಗಾಗಿ ಟ್ರ್ಯಾಕ್ಟರ್ ನಲ್ಲಿ ಸ್ಟಂಟ್ ಮಾಡಿ ಹೆಚ್ಚು ಲೈಕ್ಸ್ ಪಡೆಯಲು ಹೋಗಿ ಕಪಿಲ್ ತನ್ನ ಜೀವವನ್ನೇ ಕಳೆದುಕೊಂಡಿದ್ದಾನೆ. ಸ್ಟಂಟ್ ಮಾಡುವಾಗ ಟ್ರ್ಯಾಕ್ಟರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಪಿಲ್ ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪತ್ನಿಯ ಟಿಕ್‍ಟಾಕ್ ವಿಚಾರ ಕೇಳಿ ವಿದೇಶದಿಂದ ಓಡಿ ಬಂದ ಪತಿ

    ಏಕಾಏಕಿ ವಾಹನ ಪಲ್ಟಿಯಾದ ಪರಿಣಾಮ ಕಪಿಲ್ ದೇಹ ಟ್ರ್ಯಾಕ್ಟರ್ ಅಡಿಕೆ ಸಿಲುಕಿ ಅಪ್ಪಚ್ಚಿಯಾಗಿದೆ. ಕಪಿಲ್ ಮಾಡುತ್ತಿದ್ದ ಸ್ಟಂಟ್‍ಗಳನ್ನು ವಿಡಿಯೋ ಮಾಡುತ್ತಿದ್ದ ಸ್ನೇಹಿತ ಆತನ ಸಹಾಯಕ್ಕೆ ಬರುವ ಮುನ್ನವೇ ಕಪಿಲ್ ಸಾವನ್ನಪ್ಪಿದ್ದನು. ಇದನ್ನೂ ಓದಿ: ಹೆಚ್ಚು ಲೈಕ್ಸಿಗೆ ಹುಚ್ಚು ಸಾಹಸ – ಸ್ನೇಹಿತರೆದುರೇ ಜೀವಬಿಟ್ಟ ಟಿಕ್‍ಟಾಕ್ ಸ್ಟಾರ್

    ಕಳೆದ ಎರಡು ತಿಂಗಳ ಹಿಂದೆಯಷ್ಟೇ ಕಪಿಲ್ ಮದುವೆಯಾಗಿತ್ತು. ಹೊಸ ಬಾಳನ್ನು ಆರಂಭಿಸಿದ ಕೆಲವೇ ದಿನಗಳಲ್ಲಿ ಕಪಿಲ್ ಟಿಕ್‍ಟಾಕ್ ಹುಚ್ಚಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾನೆ. ಟ್ರ್ಯಾಕ್ಟರ್ ಚಲಾಯಿಸುತ್ತಾ ಅದರ ಮುಂದಿನ ಎರಡು ಟೈರ್ ಗಳನ್ನು ಎತ್ತಿ ಸ್ಟಂಟ್ ಮಾಡಲು ಕಪಿಲ್ ಮುಂದಾದಾಗ ಈ ಅನಾಹುತ ಸಂಭವಿಸಿದೆ.

    ಕಪಿಲ್ ಸಾವನ್ನಪ್ಪಿದ ಬಳಿಕ ಕುಟುಂಬಸ್ಥರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡದೆ ಆತನ ಅಂತ್ಯಸಂಸ್ಕಾರ ಮಾಡಿ ಮುಗಿಸಿದ್ದಾರೆ. ಹೀಗಾಗಿ ಈ ಬಗ್ಗೆ ಪೊಲೀಸರಿಗೆ ಕೇಳಿದರೆ ನಮಗೆ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿಕ್‍ಟಾಕ್‍ನಿಂದ ಪತಿಯ 2ನೇ ಮದುವೆ ರಹಸ್ಯ ಬಯಲು

    ಈ ಹಿಂದೆ ಫೆ. 18ರಂದು ಮೀರತ್‍ನಲ್ಲಿ ಇದೇ ರೀತಿ ಪ್ರಕರಣ ಬೆಳಕಿಗೆ ಬಂದಿತ್ತು. 18 ವರ್ಷದ ಯುವಕನೋರ್ವ ಕಾಲುವೆಯಲ್ಲಿ ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದನು.

  • ಮದ್ವೆಯಾದ 3 ದಿನಕ್ಕೆ ಪತಿಯ ಮನೆಗೆ ಹೋಗಿ ಬೆಂಕಿ ಹಚ್ಚಿಕೊಂಡ ನವವಿವಾಹಿತೆ

    ಮದ್ವೆಯಾದ 3 ದಿನಕ್ಕೆ ಪತಿಯ ಮನೆಗೆ ಹೋಗಿ ಬೆಂಕಿ ಹಚ್ಚಿಕೊಂಡ ನವವಿವಾಹಿತೆ

    ಹೈದರಾಬಾದ್: ಬಲವಂತದ ಮದುವೆಯಿಂದಾಗಿ 19 ವರ್ಷದ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ರಾಮ ಸಮುದ್ರಂನಲ್ಲಿ ನಡೆದಿದೆ.

    ಟಿ. ಸರಸ್ವತಿ (19) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಸರಸ್ವತಿ ಮೂರು ದಿನಗಳ ಹಿಂದೆಯಷ್ಟೆ ಜಗದೀಶ್ ಎಂಬವರ ಜೊತೆ ಮದುವೆಯಾಗಿತ್ತು. ಆದರೆ ಸರಸ್ವತಿಗೆ ಈ ಮದುವೆ ಇಷ್ಟವಿರಲಿಲ್ಲ. ಇದರಿಂದ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಏನಿದು ಪ್ರಕರಣ
    ಮೃತ ಸರಸ್ವತಿ ಶುಕ್ರವಾರ ಪತಿ ಜಗದೀಶ್ ಮನೆಗೆ ಹೋಗಿದ್ದಾಳೆ. ಅಂದು ಸುಮಾರು ರಾತ್ರಿ 8 ಗಂಟೆಗೆ ಮನೆಯವರೆಲ್ಲಾ ಮಾತನಾಡಿಕೊಂಡು ಕುಳಿತಿದ್ದರು. ಈ ವೇಳೆ ಸರಸ್ವತಿ ಶೌಚಾಲಯಕ್ಕೆ ಹೋಗಬೇಕು ಎಂದು ಹೋಗಿದ್ದಾಳೆ. ಆದರೆ ಅಲ್ಲಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ನಂತರ ಸರಸ್ವತಿ ಚೀರಾಡಿದ್ದಾಳೆ. ಇದನ್ನು ಕೇಳಿಸಿಕೊಂಡು ಕುಟುಂಬ ಸದಸ್ಯರು ತಕ್ಷಣ ಅವಳನ್ನು ರಕ್ಷಿಸಿ ಪುಂಗೂನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಹೆಚ್ಚಿನ ಚಿಕಿತ್ಸೆಗಾಗಿ ತಿರುಪತಿಗೆ ರವಾನಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸರಸ್ವತಿ ಮೃತಪಟ್ಟಿದ್ದಾಳೆ. ಬಳಿಕ ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಎಸ್‍ಐ ಶಿವ ಶಂಕರ್ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಸರಸ್ವತಿಗೆ ಇಷ್ಟವಿಲ್ಲದ ಮದುವೆ ಮಾಡಿಸಿದ್ದರು. ಆದ್ದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯರು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv