Tag: Newlywed

  • 6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ರೈಲ್ವೆ ಟ್ರ‍್ಯಾಕ್‌ನಲ್ಲಿ ಶವವಾಗಿ ಪತ್ತೆ

    6 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆ ರೈಲ್ವೆ ಟ್ರ‍್ಯಾಕ್‌ನಲ್ಲಿ ಶವವಾಗಿ ಪತ್ತೆ

    ಹಾಸನ: ಮದುವೆಯಾದ ಆರು ತಿಂಗಳಲ್ಲೇ ನವವಿವಾಹಿತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

    ಮೃತಳನ್ನು ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ವಿದ್ಯಾ ಎನ್ನಲಾಗಿದ್ದು, ಸೋಮಲಾಪುರ ಗ್ರಾಮದ ಶಿವು ಎಂಬುವವರ ಜೊತೆ ವಿವಾಹವಾಗಿದ್ದರು. ಪತಿ ಶಿವು ಪೊಲೀಸ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಬ್ಬರು ಬೆಂಗಳೂರಿನ ಶಂಕರಪುರಂನಲ್ಲಿ ವಾಸವಾಗಿದ್ದರು.ಇದನ್ನೂ ಓದಿ: 5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ

    ಜೂ.30ರಂದು ವಿದ್ಯಾ ಕಾಣೆಯಾಗಿದ್ದರು. ಈ ಕುರಿತು ಶಂಕರಪುರಂ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಪ್ರಕರಣ ದಾಖಲಾಗಿತ್ತು. ಮಂಗಳವಾರ ಸಂಜೆ ಅರಸೀಕೆರೆ ರೈಲ್ವೆ (Arsikere Railway Station) ಟ್ರ‍್ಯಾಕ್ ಬಳಿ ವಿದ್ಯಾ ಶವವಾಗಿ ಪತ್ತೆಯಾಗಿದ್ದಾರೆ.

    ಮದುವೆಯಾದ ಆರಂಭದಿಂದಲೂ ಪತಿ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ಇದೀಗ ಮಗಳನ್ನು ಅವರೇ ಹತ್ಯೆ ಮಾಡಿದ್ದಾರೆ ಎಂದು ಮೃತ ವಿದ್ಯಾಳ ಕುಟುಂಬಸ್ಥರು ಆರೋಪಿಸಿದ್ದಾರೆ.

    ಸದ್ಯ ಅರಸೀಕೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ‘ಅಣ್ಣಾವ್ರು ಮನೆದೇವ್ರು… ಅಪ್ಪು ನಮ್ಮನೆ ಮಗ’ ಎಂದ ಯಶ್ ಅಮ್ಮ

  • ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ಮದುವೆಗೆ ಗಿಫ್ಟ್ ಬಂದಿದ್ದ ಮ್ಯೂಸಿಕ್ ಸಿಸ್ಟಮ್ ಬ್ಲಾಸ್ಟ್ – ನವವಿವಾಹಿತ ಸೇರಿ ಇಬ್ಬರು ಸಾವು

    ರಾಯ್ಪುರ: ಮದುವೆಯಲ್ಲಿ ಉಡುಗೊರೆಯಾಗಿ (Wedding Gift) ಪಡೆದಿದ್ದ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ (Music System) ಸ್ಫೋಟಗೊಂಡಿದ್ದು, ನವವಿವಾಹಿತ ಮತ್ತು ಆತನ ಹಿರಿಯ ಸಹೋದರ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ (Chhattisgarh) ಕಬೀರ್ಧಾಮ್ ಜಿಲ್ಲೆಯಲ್ಲಿ ನಡೆದಿದೆ.

    ಸೋಮವಾರ ಈ ಘಟನೆ ನಡೆದಿದ್ದು, ಸ್ಫೋಟಕ್ಕೆ (Blast) ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಸ್ಫೋಟದ ಪರಿಣಾಮ ಹೋಮ್ ಥಿಯೇಟರ್ ಸಿಸ್ಟಮ್ ಅನ್ನು ಇರಿಸಲಾಗಿದ್ದ ಕೋಣೆಯ ಮೇಲ್ಛಾವಣಿ ಹಾಗೂ ಗೋಡೆಗಳೇ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಇನ್ನೂ ನಾಲ್ವರು ಗಾಯಗೊಂಡಿದ್ದಾರೆ.

    ವರದಿಗಳ ಪ್ರಕಾರ ಮೃತ ನವವಿವಾಹಿತ ವ್ಯಕ್ತಿ ಹೇಮೇಂದ್ರ ಮೇರಾವಿ (22) ಏಪ್ರಿಲ್ 1 ರಂದು ವಿವಾಹವಾಗಿದ್ದರು. ಸೋಮವಾರ ಹೇಮೇಂದ್ರ ಹಾಗೂ ಕುಟುಂಬದ ಇತರ ಸದಸ್ಯರು ತಮ್ಮ ಮನೆ ಕೋಣೆಯೊಳಗೆ ಮದುವೆಗೆ ಬಂದಿದ್ದ ಉಡುಗೊರೆಗಳನ್ನು ಬಿಚ್ಚುತ್ತಿದ್ದರು ಎನ್ನಲಾಗಿದೆ.

    ಉಡುಗೊರೆಗಳ ಪೈಕಿ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ಕೂಡಾ ಒಂದಾಗಿತ್ತು. ಅದರ ತಂತಿಯನ್ನು ಎಲೆಕ್ಟ್ರಿಕ್ ಬೋರ್ಡ್‌ಗೆ ಜೋಡಿಸಿ ಬಳಿಕ ಅದನ್ನು ಆನ್ ಮಾಡಿದಾಗ ಭಾರೀ ಸ್ಫೋಟ ಉಂಟಾಗಿದೆ. ಘಟನೆಯಲ್ಲಿ ಮೇರಾವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಬಾಯ್‍ಫ್ರೆಂಡ್ ಬಿಡುವಂತೆ ಹೇಳಿದ ತಾಯಿಯನ್ನು ಕೊಲೆಗೈದ 14ರ ಮಗಳು!

     

    ಮೇರಾವಿ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಕೌರಾದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ವೇಳೆ ಮೆರಾವಿ ಅವರ ಸಹೋದರ ಸಾವನ್ನಪ್ಪಿದ್ದಾರೆ. ಪ್ರಸ್ತುತ ಉಳಿದವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವಿಷಯ ತಿಳಿದ ತಕ್ಷಣ ವಿಧಿವಿಜ್ಞಾನ ತಜ್ಞರೊಂದಿಗೆ ಪೊಲೀಸ್ ತಂಡ ಸ್ಥಳಕ್ಕೆ ತೆರಳಿದೆ. ಕೊಠಡಿಯನ್ನು ಪರಿಶೀಲಿಸಿದಾಗ ಸ್ಫೋಟಕ್ಕೆ ಕಾರಣವಾಗಿರುವ ಯಾವುದೇ ವಸ್ತು ಪತ್ತೆಯಾಗಿಲ್ಲ. ಮ್ಯೂಸಿಕ್ ಸಿಸ್ಟಮ್ ಮಾತ್ರವೇ ಕೋಣೆಯಲ್ಲಿ ಸ್ಫೋಟಗೊಂಡಿದ್ದು ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ರೆಂಗಾಖರ್ ಪೊಲೀಸ್ ಠಾಣೆಯ ಠಾಣಾಧಿಕಾರಿ ದುರ್ಗೇಶ್ ರಾವ್ಟೆ ತಿಳಿಸಿದ್ದಾರೆ. ಇದನ್ನೂ ಓದಿ: ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ಪಡೆದ ಫೋಕ್ಸ್‌ವ್ಯಾಗನ್ ವರ್ಟಸ್, ಸ್ಕೋಡಾ ಸ್ಲಾವಿಯಾ

  • ಪತಿಯ ಮನೆಯವರಿಂದ ಕಿರುಕುಳ – ನವ ವಿವಾಹಿತೆ ನೇಣಿಗೆ ಶರಣು

    ಪತಿಯ ಮನೆಯವರಿಂದ ಕಿರುಕುಳ – ನವ ವಿವಾಹಿತೆ ನೇಣಿಗೆ ಶರಣು

    ಧಾರವಾಡ: ಪತಿ ಮನೆಯವರ ಕಿರುಕುಳದಿಂದ ಮನನೊಂದ ನವ ವಿವಾಹಿತೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧಾರವಾಡ ಜಿಲ್ಲೆಯ ಮುಮ್ಮಿಗಟ್ಟಿ ಗ್ರಾಮದಲ್ಲಿ ನಡೆದಿದೆ.

    ರಂಜಿತಾ ಹಂಚಿನಮನಿ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವಿಗೆ ಆಕೆಯ ಪತಿಯ ಮನೆಯವರೇ ಕಾರಣ ಎಂದು ರಂಜಿತ ಪೋಷಕರು ಆರೋಪ ಮಾಡುತ್ತಿದ್ದಾರೆ.

    ಕಳೆದ ಡಿಸೆಂಬರನಲ್ಲಿ ಧಾರವಾಡ ಜಿಲ್ಲೆಯ ತರ್ಲಘಟ್ಟ ಗ್ರಾಮದ ರಂಜಿತಾ ಮುಮ್ಮಿಗಟ್ಟಿ ಗ್ರಾಮದ ಮಂಜುನಾಥ ಜೊತೆ ಮದುವೆ ಮಾಡಲಾಗಿತ್ತು. ಆಗಿನಿಂದಲೇ ರಂಜಿತಾಗೆ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತಿದ್ದರು. ಗಂಡನ ಮನೆಯವರು ಆಕೆಯನ್ನು ನೇಣು ಹಾಕಿ ಕೊಲೆ ಮಾಡಿದ್ದಾರೆ ಎಂದು ರಂಜಿತಾ ಪೋಷಕರು ಆರೋಪಿಸಿದ್ದಾರೆ.

    ರಂಜಿತಾ ನಿನ್ನಯಷ್ಟೇ ಪೋಷಕರಿಗೆ ಕರೆ ಮಾಡಿ ಮನೆಗೆ ವಾಪಸ್ ಕರೆದುಕೊಂಡು ಹೋಗಲು ಹೇಳಿದ್ದಳು. ಆದರೆ ಪತಿ ಮಂಜುನಾಥ ರಂಜಿತಾಳನ್ನು ಕಳಿಸಿರಲಿಲ್ಲ. ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಂಜಿತಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಸದ್ಯ ಗರಗ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.