Tag: newly wedbride

  • ಮದುವೆಯಾಗಿ 3 ತಿಂಗಳಿಗೇ ನವವಿವಾಹಿತೆ ಆತ್ಮಹತ್ಯೆ!

    ಮದುವೆಯಾಗಿ 3 ತಿಂಗಳಿಗೇ ನವವಿವಾಹಿತೆ ಆತ್ಮಹತ್ಯೆ!

    ರಾಯಚೂರು: ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಯಚೂರು ತಾಲೂಕಿನ ದೇವಸಗೂರಿನಲ್ಲಿ ನಡೆದಿದೆ.

    ಸವಿತಾ(23) ಗಂಡನ ಮನೆಯಲ್ಲೇ ನೇಣಿಗೆ ಶರಣಾದ ಗೃಹಿಣಿ. ಆದ್ರೆ ಪೋಷಕರು ವರದಕ್ಷಿಣೆಗಾಗಿ ಗಂಡನ ಮನೆಯವರು ಸವಿತಾಳನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಕೊಲೆ ಮಾಡಿ ನೇಣು ಹಾಕಿರುವುದಾಗಿ ಸವಿತಾ ಕುಟುಂಬದವರು ದೂರು ನೀಡಿದ್ದಾರೆ.

    ಸವಿತಾ ಹಾಗೂ ಬಾಲರಾಜ್ ಮದುವೆ 2018ರ ಮಾರ್ಚ್ 31ರಂದು ನಡೆದಿತ್ತು, ಮದುವೆಯಾಗಿ ಮೂರು ತಿಂಗಳೊಳಗೆ ನವ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಸವಿತಾ ಅವರ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.

    ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆ ಪ್ರಕರಣ ದಾಖಲಾಗಿದೆ.