Tag: Newly married women

  • ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಸಾವು – ಮುಗಿಲು ಮುಟ್ಟಿದ ಆಕ್ರಂದನ

    ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಸಾವು – ಮುಗಿಲು ಮುಟ್ಟಿದ ಆಕ್ರಂದನ

    ಚಿಕ್ಕಬಳ್ಳಾಪುರ: ಮನೆಯಲ್ಲೇ ಅನುಮಾನಾಸ್ಪದ ರೀತಿಯಲ್ಲಿ ನವವಿವಾಹಿತೆ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ನಗರದ (Chikkaballapur City) ಕಾರ್ಖಾನೆ ಪೇಟೆಯಲ್ಲಿ ನಡೆದಿದೆ.

    ನವ ವಿವಾಹಿತೆ ತೇಜಸ್ವಿನಿ (20) ಮೃತಪಟ್ಟ ಗೃಹಿಣಿ. ಮನೆಯ ಕೊಠಡಿಯೊಂದರಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಪತಿ ಲೋಹಿತ್‌ ನಿಂದ ವರದಕ್ಷಿಣೆ (Dowry) ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಟೈಟಾನಿಕ್ ಹಡಗಿನ ಅವಶೇಷ ನೋಡಲು ತೆರಳಿದ್ದ ವಿಶ್ವದ ಐವರು ಶ್ರೀಮಂತರ ದಾರುಣ ಸಾವು

    ಘಟನಾ ಸ್ಥಳದಲ್ಲಿ ಮೃತ ತೇಜಸ್ವಿನಿ ತಂದೆ ಮಂಜುನಾಥ್ ಆಕ್ರಂದನ ಮುಗಿಲುಮುಟ್ಟಿದೆ. ಮಗಳನ್ನು ನೆನೆದು ತಂದೆ ಗೋಳಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಸಿಪಿಐ ರಾಜು ಹಾಗೂ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಲಕ್ಷ, ಕೋಟಿ ಆದಾಯವಿದ್ದರೂ ಟ್ಯಾಕ್ಸ್ ಕಟ್ಟದ ಯೂಟ್ಯೂಬರ್ಸ್ – ಕೇರಳದ ಹಲವೆಡೆ ಐಟಿ ದಾಳಿ

    FSAL ತಂಡದ ಸಿಬ್ಬಂದಿ ಸಹ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಂಡ ಲೋಹಿತ್ ಹಾಗೂ ಅವರ ಅಣ್ಣ ಗೋಪಿ ಚಿಕ್ಕಬಳ್ಳಾಪುರ ನಗರದಲ್ಲಿ ಚಂದ್ರು ಮಿಲ್ಟ್ರಿ ಹೋಟೆಲ್‌ ಮಾಲೀಕರಾಗಿದ್ದಾರೆ. ತೇಜಸ್ವಿನಿ ತಂದೆ ಮಂಜುನಾಥ್, ಲೋಹಿತ್ ಹಾಗೂ ಅವರ ಅಣ್ಣ ಗೋಪಿನಾಥ್ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪ ಹೊರಿಸಿದ್ದಾರೆ.

    ಸದ್ಯ ಪತಿ ಲೋಹಿತ್‌ನನ್ನ ಚಿಕ್ಕಬಳ್ಳಾಪುರ ನಗರ ಪೊಲೀಸರು (Chikkaballapur City Police) ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

  • ಒಲ್ಲದ ವಿವಾಹ – ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ

    ಒಲ್ಲದ ವಿವಾಹ – ವಿಷ ಸೇವಿಸಿ ನವ ವಿವಾಹಿತೆ ಆತ್ಮಹತ್ಯೆ

    ಮಂಗಳೂರು: ಇಷ್ಟವಿಲ್ಲದ ವಿವಾಹ ಮಾಡಿದ್ದಕ್ಕೆ ನವ ವಿವಾಹಿತೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಂಗಳೂರಿನ ಅಂಬ್ಲಮೊಗರಿನಲ್ಲಿ ನಡೆದಿದೆ.

    ರಶ್ಮಿ (24) ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ. 15 ದಿನಗಳ ಹಿಂದೆ ರಶ್ಮಿ ಗಂಜಮಠ ಮೂಲದ ದುಬೈಯಲ್ಲಿ ಇಂಜಿನಿಯರ್ ಆಗಿರುವ ಸಂದೀಪ್ ಅವರನ್ನು ವಿವಾಹವಾಗಿದ್ದರು. ಆದರೆ ಸೆಪ್ಟೆಂಬರ್ 3 ರಂದು ಕೋಡಿಕಲ್‍ನ ತನ್ನ ಅಕ್ಕನ ಮನೆಗೆ ಬಂದಿದ್ದ ರಶ್ಮಿ ಇಲಿ ಪಾಷಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಅಸ್ವಸ್ಥಗೊಂಡಿದ್ದರು. ಇದನ್ನೂ ಓದಿ: ಸಿಇಟಿ ರ್‍ಯಾಂಕ್ ರದ್ದು- ಹೈಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧಾರ

    ನಂತರ ಗಂಭೀರ ಸ್ಥಿತಿಯಲ್ಲಿದ್ದ ರಶ್ಮಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ, ರಶ್ಮಿ ಮೃತಪಟ್ಟಿದ್ದಾರೆ. ಸದ್ಯ ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಂದೂಡಲಾಗಿದ್ದ ಜನೋತ್ಸವ ಕಾರ್ಯಕ್ರಮ ಇದೇ 8 ರಂದು ನಡೆಯಲಿದೆ: ವೇಣುಗೋಪಾಲ್

    Live Tv
    [brid partner=56869869 player=32851 video=960834 autoplay=true]

  • ಆರತಕ್ಷತೆಯ ಸಿದ್ಧತೆಯಲ್ಲಿದ್ದ ನವ ವಿವಾಹಿತೆಯ ಕಿಡ್ನಾಪ್

    ಆರತಕ್ಷತೆಯ ಸಿದ್ಧತೆಯಲ್ಲಿದ್ದ ನವ ವಿವಾಹಿತೆಯ ಕಿಡ್ನಾಪ್

    ಹುಬ್ಬಳ್ಳಿ: ಆರತಕ್ಷತೆಯ ಸಿದ್ಧತೆಯಲ್ಲಿದ್ದ ನವ ವಿವಾಹಿತೆಯನ್ನು ಕಿಡ್ನಾಪ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

    ಸಹನಾ ಅವರು ಮನೆಯವರ ವಿರೋಧದ ನಡುವೆ ತಾನು ಪ್ರೀತಿಸಿದ ನಿಖಿಲ್ ದಾಂಡೇಲಿ ಅವರನ್ನು ಮದುವೆಯಾಗಿದ್ದಳು. ಕಳೆದ ಏಳು ತಿಂಗಳ ಹಿಂದೇ ಮದುವೆ ನೊಂದಣಿ ಮಾಡಿಕೊಂಡಿದ್ದ ಈ ಜೋಡಿ, ಇದೇ ಜೂನ್ 26ರಂದು ಆರಕ್ಷತೆ ಕಾರ್ಯಕ್ರಮವನ್ನು ಸಹ ಇಟ್ಟುಕೊಂಡಿತ್ತು. ಈ ಹಿನ್ನೆಲೆ ವಿರೋಧವಿದ್ದರೂ ತಂದೆ-ತಾಯಿಯ ಆಶೀರ್ವಾದ ಪಡೆಯಲು ಸಹನಾ ತವರಿಗೆ ಹೋಗಿದ್ದಳು. ಹುಬ್ಬಳ್ಳಿಯ ಅಕ್ಷಯ್ ಪಾರ್ಕ್ ಬಳಿಯಿರುವ ಪೋಷಕರ ಮನೆಯಲ್ಲಿದ್ದ ಸಹನಾಳನ್ನು, ಕಾರ್ಪೋರೇಟರ್ ಕಂ ರೌಡಿ ಶೀಟರ್ ಚೇತನ್ ಹೀರೇಕೆರೂರು ಮತ್ತು ಯುವತಿ ತಂದೆ ಶಿವು ಹೀರೆಕೇರೂರ ಬೆದರಿಕೆ ಹಾಕಿ ಕಿಡ್ನಾಪ್ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಎರಡೇ ದಿನ: ಯಾತ್ರಾರ್ಥಿಗಳಿಗೆ ಆಧಾರ್, ಸರ್ಕಾರಿ ಗುರುತಿನ ಚೀಟಿ ಕಡ್ಡಾಯ

    ತವರಿಗೆ ಹೋದ ಮಡದಿ ವಾಪಸು ಬಾರದ ಹಿನ್ನೆಲೆ ಪತಿ ನಿಖಿಲ್ ಸಾಕಷ್ಟು ಬಾರಿ ಸಹನಾಳಿಗೆ ಕರೆ ಮಾಡಿದ್ದಾರೆ. ಪ್ರತಿ ಸಾರಿಯೂ ಪತ್ನಿಯ ಫೋನ್ ಸ್ವಿಚ್ ಆಫ್ ಬಂದಿದೆ. ಇದರಿಂದ ಗಾಬರಿಯಾದ ನಿಖಿಲ್, ಆಕೆಯ ತಂದೆಯ ಮನೆಗೆ ತೆರಳಿ ವಿಚಾರಿಸಿದ್ದಾನೆ. ಪಾಲಕರಿಂದ ಹಾರಿಕೆ ಉತ್ತರ ಬಂದಿದೆ. ಇದರ ನಡುವೆ ಸಹನಾಳ ಸಂಬಂಧಿ ಕಾರ್ಪೋರೇಟರ್ ಕಂ ರೌಡಿ ಶೀಟರ್ ಚೇತನ್ ಹೀರೇಕೆರೂರು ಮೊದಲಿನಿಂದಲೂ ಈ ಮದುವೆಗೆ ವಿರೋಧ ಮಾಡುತ್ತಿದ್ದ. ಇದರಿಂದ ಅನುಮಾನಗೊಂಡ ನಿಖಿಲ್ ಸಹನಾ ಕುಟುಂಬಸ್ಥರು ಮತ್ತು ಚೇತನ್ ಹೀರೆಕೇರೂರ ವಿರುದ್ಧ ಗೋಕುಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಸಹನಾ ಗೋವಾದಲ್ಲಿ ಇರುವುದನ್ನು ಪತ್ತೆಹಚ್ಚಿ, ಆಕೆಯನ್ನು ವಾಪಸ್ಸು ಕರೆತಂದಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆಗೆ ಕೆಲವೇ ದಿನ – ಗಡಿಯಲ್ಲಿ ಶೋಧ ಕಾರ್ಯ ಚುರುಕು

    ವಾಪಸ್ಸಾದ ಮೇಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಸಹನಾ ಮನೆಗೆ ತೆರಳಿದ್ದ ವೇಳೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುವ ನೆಪದಲ್ಲಿ ತಮ್ಮನ್ನು ಗೋವಾಕ್ಕೆ ಕರೆದೊಯ್ದು, ಮೊಬೈಲ್ ಸಹ ಕಿತ್ತುಕೊಳ್ಳಲಾಗಿದೆಯಂತೆ. ಇದೆಲ್ಲವನ್ನೂ ನೋಡಿದರೆ ಸ್ವತಃ ಯುವತಿಯ ತಂದೆಯೇ ವಿಲನ್ ಅಂತ ಅನಿಸಿದರೂ ಯುವತಿ ಮಾತ್ರ ತನ್ನ ತಂದೆ ಶಿವು ಹೇರೇಕೆರೂರ ನಿರಾಪರಾಧಿ. ಎಲ್ಲದಕ್ಕೂ ಪಾಲಿಕೆ ಸದಸ್ಯ ಚೇತನ್ ಹಿರೇಕೆರೂರು ಕಾರಣ ಅಂತ ನೇರ ಆರೋಪ ಮಾಡುತ್ತಿದ್ದಾಳೆ. ಅಲ್ಲದೇ ಈಗ ಎಲ್ಲ ಹಿರಿಯರೂ ಸೇರಿ ಅವರಿಬ್ಬರ ಮದುವೆಗೆ ಒಪ್ಪಿಗೆ ನೀಡಿದ್ದಾರೆ. ಆದರೆ ನಿಖಿಲ್ ದಾಂಡೇಲಿ ಜೊತೆ ಸಹನಾಳ ಮದುವೆ ಮಾಡಿಸುವುದು ಸಂಬಂಧಿ ಚೇತನ್ ಹೀರೆಕೇರೂರುಗೆ ಇಷ್ಟ ಇರಲಿಲ್ಲ. ಹೀಗಾಗಿ ಈ ರೀತಿ ಸೀನ್ ಕ್ರಿಯೇಟ್ ಮಾಡಿದ್ದಾರೆ ಎನ್ನುವ ಪಿಸುಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಈ ಚೇತನ್ ಮೇಲೆ ಕಿಡ್ನಾಪ್ ಕೇಸ್ ದಾಖಲು ಸಹ ಆಗಿದೆ. ಆದರೆ ಪೊಲೀಸರು ಮಾತ್ರ ಸಹನಾಳನ್ನು ಹುಡುಕಲು ತೆಗೆದುಕೊಂಡ ಆಸಕ್ತಿಯನ್ನು ಚೇತನ್ ಬಂಧಿಸಲು ತೋರುತ್ತಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

    Live Tv

  • ವಿವಾಹವಾದ ಎಂಟೇ ತಿಂಗಳಲ್ಲಿ ಗೃಹಿಣಿ ಸಾವು

    ವಿವಾಹವಾದ ಎಂಟೇ ತಿಂಗಳಲ್ಲಿ ಗೃಹಿಣಿ ಸಾವು

    ಮೈಸೂರು: ಪತಿ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹದ ಎಂಟೇ ತಿಂಗಳಲ್ಲಿ ನವ ವಿವಾಹಿತೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

    ಜಿಲ್ಲೆಯ ನಂಜನಗೂಡಿನ ನಿವಾಸಿಯಾಗಿದ್ದ ಹೆಚ್.ಆರ್ ಬಿಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಎಚ್.ಡಿ ಕೋಟೆ ಸರಗೂರು ತಾಲೂಕಿನ ಹಳೆಯೂರು ಗ್ರಾಮದ ಪತಿಯ ಮನೆಯಲ್ಲೇ ಬಿಂದು ಅನುಮಾನಾಸ್ಪದವಾಗಿ ನೇಣಿಗೆ ಶರಣಾಗಿದ್ದಾರೆ. ಆದರೆ ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಬಿಂದು ಪೋಷಕರು ಆರೋಪಿಸಿ, ಪತಿ ಹಾಗೂ ಆತನ ಕುಟುಂಬದ ವಿರುದ್ಧ ದೂರು ನೀಡಿದ್ದಾರೆ.

    ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಬಿಂದು ಪತಿ ಗುರುಸ್ವಾಮಿ, ಮಾವ ಚಂದ್ರ, ಅತ್ತೆ ತಾಯಮ್ಮನನ್ನು ಪೊಲೀಸರು ಬಂಧಿಸಿದ್ದಾರೆ. ಅಷ್ಟೇ ಅಲ್ಲದೆ ಪತಿಯ ಸಂಬಂಧಿಗಳಾದ ಪ್ರೇಮ, ರೇಖಾ, ಕಾವ್ಯ ಮತ್ತು ವಲುವ ಸೇರಿದಂತೆ ಏಳು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.