Tag: newly married woman

  • ಬೇರೆ ಯುವತಿಯೊಂದಿಗೆ ಪತಿ ಲವ್ವಿಡವ್ವಿ – ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ

    ಬೇರೆ ಯುವತಿಯೊಂದಿಗೆ ಪತಿ ಲವ್ವಿಡವ್ವಿ – ಪ್ರೀತಿಸಿ ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ

    ತುಮಕೂರು: ಮದುವೆಯಾದರೂ ಬೇರೆ ಯುವತಿಯೊಂದಿಗೆ ಪತಿ ಸಲುಗೆಯಿಂದ ಇದ್ದಿದ್ದಕ್ಕೆ ಮನನೊಂದು ಮದುವೆಯಾದ ನಾಲ್ಕೇ ತಿಂಗಳಿಗೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿರಾದ (Sira) ಜ್ಯೋತಿನಗರದಲ್ಲಿ ನಡೆದಿದೆ.

    ಪೃಥ್ವಿರಾಣಿ (20) ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಎಂದು ಗುರುತಿಸಲಾಗಿದೆ. ಕಳೆದ ನಾಲ್ಕು ತಿಂಗಳ ಹಿಂದೆ ಶಿರಾ ತಾಲೂಕಿನ ಬುಕಾಪಟ್ಟದ ಪೃಥ್ವಿರಾಣಿ ಅದೇ ತಾಲೂಕಿನ ಪಕ್ಕದ ಊರಾದ ಕಿಲಾರ್ಧಹಳ್ಳಿಯ ಜೈಮಾರುತಿ ನಾಯಕ್ ಎಂಬಾತನನ್ನು ವಿವಾಹವಾಗಿದ್ದರು. ನಾಲ್ಕು ವರ್ಷದ ಪ್ರೀತಿಯ ಬಳಿಕ ನಾಲ್ಕು ತಿಂಗಳ ಹಿಂದೆ ಈ ಜೋಡಿ ಧರ್ಮಸ್ಥಳಕ್ಕೆ ಹೋಗಿ ಮದುವೆಯಾಗಿದ್ದರು. ಇದನ್ನೂ ಓದಿ: ಹಳೇ ಅಕ್ರಮ ಸಂಬಂಧಕ್ಕೆ ಶಿಕ್ಷೆ – ಹೆತ್ತ ತಾಯಿಯನ್ನೇ 2 ಬಾರಿ ಅತ್ಯಾಚಾರಗೈದ ಪಾಪಿ ಮಗ

    ಮದುವೆಯ ಬಳಿಕ ಶಿರಾ ಟೌನ್‌ನ ಜ್ಯೋತಿನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆದ್ರೆ ನನ್ನ ಪ್ರೀತಿಸಿ ಬೇರೊಬ್ಬಳ ಮದುವೆಯಾಗಿದ್ದೀಯಾ ಎಂದು ಜೈಮಾರುತಿಗೆ ಬೇರೊಂದು ಯುವತಿ ಬೆದರಿಕೆ ಹಾಕುತ್ತಿದ್ದಳು. ಬೆದರಿಕೆ ಹಾಕಿದ ಯುವತಿ ಬಗ್ಗೆ ಪೃಥ್ವಿರಾಣಿ ಪತಿಯನ್ನು ಪ್ರಶ್ನಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ಏರ್ಪಟ್ಟಿತ್ತು. ಈ ವೇಳೆ ಆಕೆ ಮೇಲೆ ಪತಿ ಹಲ್ಲೆ ಮಾಡಿದ್ದ ಆರೋಪ ಕೇಳಿಬಂದಿದೆ. ಇದೇ ವಿಚಾರವಾಗಿ ಪೃಥ್ವಿರಾಣಿ ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಳು ಎನ್ನಲಾಗಿದೆ. ಇದನ್ನೂ ಓದಿ: Video Viral | ಸ್ವಾತಂತ್ರ‍್ಯ ದಿನಾಚರಣೆಯಂದು ಅಂಚೆ ಕಚೇರಿಯಲ್ಲಿ ಭರ್ಜರಿ ಬಾಡೂಟ; ಕ್ರಮಕ್ಕೆ ಆಗ್ರಹ

    ಜೈಮಾರುತಿ ಪತ್ನಿ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮ ಮಗಳು ಮಾತನಾಡುತ್ತಿಲ್ಲ ಎಂದು ಹೇಳಿದ್ದ. ಕುಟುಂಬಸ್ಥರು ಮನೆಗೆ ಬಂದು ನೋಡಿದಾಗ ಪೃಥ್ವಿರಾಣಿ ಮಂಚದ ಮೇಲೆ ಮಲಗಿದ್ದ ಸ್ಥಿತಿಯಲ್ಲೇ ಶವವಾಗಿ ಪತ್ತೆಯಾಗಿದ್ದಳು. ಕುತ್ತಿಗೆಯಲ್ಲಿ ಕಪ್ಪು ಗುರುತು, ಮೂಗಿನಲ್ಲಿ ರಕ್ತ ಕಂಡು ಅನುಮಾನಗೊಂಡು ಕುಟುಂಬಸ್ಥರು ಶಿರಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

    ಈ ಸಂಬಂಧ ಶಿರಾ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಾಥಮಿಕವಾಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ. ಇದೀಗ ಶಿರಾ ಪೊಲೀಸರು, ಪತಿಯ ಕಿರುಕುಳ ಆರೋಪ ಹಿನ್ನಲೆ ಜೈಮಾರುತಿಯನ್ನು ಬಂಧಿಸಿ ತನಿಖೆ ನಡೆಸತ್ತಿದ್ದಾರೆ.

  • 18 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದ ಸಾವು

    18 ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದ ಸಾವು

    ಆನೇಕಲ್: 18 ದಿನಗಳ ಹಿಂದೆ ಮದುವೆ ಆಗಿದ್ದ ಯುವತಿ (Newly Married Woman) ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಆನೇಕಲ್ (Anekal) ತಾಲೂಕಿನ ಸರ್ಜಾಪುರದಲ್ಲಿ (Sarjapura) ನಡೆದಿದೆ.

    ರಿಹಾನ (24) ಮೃತ ದುರ್ದೈವಿ. ಸರ್ಜಾಪುರ ಪಟ್ಟಣದಲ್ಲಿ ಘಟನೆ ನಡೆದಿದ್ದು, ನೇಣು ಬಿಗಿದ ಸ್ಥಿತಿಯಲ್ಲಿ ಯುವತಿಯ ಮೃತ ದೇಹ ಪತ್ತೆಯಾಗಿದೆ. ಡೆಂಕಣಿಕೋಟೆ ಸಮೀಪದ ಕಲಕಂಡರಹಳ್ಳಿಯ ನಿವಾಸಿ ರಿಹಾನ ಸರ್ಜಾಪುರದಲ್ಲಿ ಗಂಡ ಹಾಗೂ ಅತ್ತೆ ಜೊತೆ ವಾಸವಿದ್ದರು. ಇದನ್ನೂ ಓದಿ: ಮದ್ದೂರು ಶಾಸಕ ಉದಯ್‌ ಮನೆಯಲ್ಲೇ ಗನ್‌ಮ್ಯಾನ್‌ ಮೇಲೆ ಹಲ್ಲೆ ನಡೆಸಿತ್ತು ದರ್ಶನ್‌ ಗ್ಯಾಂಗ್‌!

    ರಿಹಾನ ಗಂಡ ಸಬಾಶ್ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಹೊರಿಸಲಾಗಿದೆ. ಮೃತ ರಿಹಾನ ಗಂಡ ಶಬಾಸ್ ಕೊಲೆ ಮಾಡಿ ನೇಣು ಹಾಕಿದ್ದಾನೆಂದು ಆರೋಪ ಮಾಡಲಾಗಿದೆ. ಈ ಕುರಿತು ಸರ್ಜಾಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ನೀಟ್‌ ಪರೀಕ್ಷೆ ಹಿಂದಿನ ದಿನ ನನಗೆ ಪ್ರಶ್ನೆ ಪತ್ರಿಕೆ ಸಿಕ್ಕಿತ್ತು: ಪೊಲೀಸರ ಬಳಿ ತಪ್ಪೊಪ್ಪಿಕೊಂಡ ಬಂಧಿತ ವಿದ್ಯಾರ್ಥಿ

  • ಡೆಂಗ್ಯೂ ಜ್ವರಕ್ಕೆ ನವವಿವಾಹಿತೆ ಬಲಿ

    ಡೆಂಗ್ಯೂ ಜ್ವರಕ್ಕೆ ನವವಿವಾಹಿತೆ ಬಲಿ

    ಶಿವಮೊಗ್ಗ: ಡೆಂಗ್ಯೂ ಜ್ವರಕ್ಕೆ (Dengue Fever) ನವವಿವಾಹಿತೆಯೊಬ್ಬರು (Newly Married Woman) ಬಲಿಯಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.

    ತಾಲೂಕಿನ ರಿಪ್ಪನ್ ಪೇಟೆಯ ಶಬರೀಶನಗರದಲ್ಲಿ ಘಟನೆ ನಡೆದಿದ್ದು, ಮಧುರ (31) ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಈಕೆ ಕಳೆದ ಆರು ತಿಂಗಳ ಹಿಂದೆ ಮಂಜುನಾಥ್ ಎಂಬವರೊಂದಿಗೆ ವಿವಾಹವಾಗಿದ್ದರು. ಕಳೆದ ಒಂದು ವಾರದಿಂದ ಮಧುರ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರು. ಇದನ್ನೂ ಓದಿ: ಅತ್ತಿಬೆಲೆ ಪಟಾಕಿ ದುರಂತ- ಗೋದಾಮು ಮಾಲೀಕ ಅರೆಸ್ಟ್

    ಅನಾರೋಗ್ಯ ಹಿನ್ನೆಲೆ ಮಧುರ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹೆಚ್ಚಿನ ಚಿಕಿತ್ಸೆಗೆಂದು ಶಿವಮೊಗ್ಗಕ್ಕೆ ಕರೆ ತರುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾದ ಅಪ್ರಾಪ್ತ ಸಹೋದರಿಯರು

    ಡೆಂಗ್ಯೂ ಜ್ವರವು ಸೊಳ್ಳೆಯಿಂದ ಹರಡುವ ಕಾಯಿಲೆಯಾಗಿದ್ದು, ಇದು ಪ್ರಪಂಚದ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಇದರ ರೋಗ ಲಕ್ಷಣಗಳು ಈ ಕೆಳಗಿನಂತಿವೆ. ಇದನ್ನೂ ಓದಿ: ಹಾವೇರಿ, ಅತ್ತಿಬೆಲೆ ದುರಂತಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಲಿ: ಬೊಮ್ಮಾಯಿ

    ರೋಗಲಕ್ಷಣಗಳು:
    *ತಲೆನೋವು
    *ಸ್ನಾಯು, ಮೂಳೆ ಅಥವಾ ಕೀಲು ನೋವು
    *ವಾಕರಿಕೆ
    *ವಾಂತಿ
    *ಕಣ್ಣುಗಳ ಹಿಂದೆ ನೋವು
    *ಊದಿಕೊಂಡ ಗ್ರಂಥಿಗಳು
    *ತುರಿಕೆ

    ಈ ರೀತಿಯಾದ ಲಕ್ಷಣಗಳು ಕಂಡುಬಂದಲ್ಲಿ ತಡಮಾಡದೇ ವೈದರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೆ ಒಳ್ಳೆಯದು. ಇದನ್ನೂ ಓದಿ: ಶಿವಮೊಗ್ಗದಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೂರು ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ನವವಿವಾಹಿತೆ ಸಾವು

    ಮೂರು ತಿಂಗಳ ಹಿಂದಷ್ಟೇ ಮದ್ವೆಯಾಗಿದ್ದ ನವವಿವಾಹಿತೆ ಸಾವು

    ಬೆಂಗಳೂರು: ಕೇವಲ ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ.

    ಕೃಷ್ಣವೇಣಿ (26) ಸಾವನ್ನಪ್ಪಿರುವ ನವವಿವಾಹಿತೆ. ಮೂರು ತಿಂಗಳ ಹಿಂದಷ್ಟೆ ಕೃಷ್ಣವೇಣಿಯನ್ನ ಕೋಲಾರ (Kolar) ಮೂಲದ ಪೃಥ್ವಿರಾಜ್ (30)ಗೆ ವಿವಾಹ ಮಾಡಿಕೊಡಲಾಗಿತ್ತು. ಪೃಥ್ವಿರಾಜ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ.

    ಇದೀಗ ಕೃಷ್ಣವೇಣಿ ಕುಟುಂಬದವರು ಕತ್ತು ಹಿಸುಕಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಅಂತಾ ಆರೋಪಿಸುತ್ತಿದ್ದಾರೆ. ಮದುವೆಯಾದ ಎರಡು ತಿಂಗಳಿಗೆ ಕಿರಿಕ್ ಶುರುಮಾಡಿದ್ದ. ಮದುವೆಯಾದ ಮೂರು ತಿಂಗಳಿಗೆ ನಾಲ್ಕೈದು ಬಾರಿ ಜಗಳ ಮಾಡಿ ತವರಿಗೆ ಕಳುಹಿಸಿದ್ದ. ಗುರುವಾರವೂ ಕುಡಿದು ಬಂದು ಗಲಾಟೆ ಮಾಡಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡಿದ್ದ ವಕೀಲನ ಮೇಲೆ ಮಾಜಿ ಪತ್ನಿಯಿಂದ ಗಂಭೀರ ಆರೋಪ

    ಮೃತ ಕೃಷ್ಣವೇಣಿ ಎರಡು ತಿಂಗಳ ಗರ್ಭಿಣಿಯಾಗಿದ್ದರು. ಇದೀಗ ಆಕೆಯ ಪತಿ ಪೃಥ್ವಿರಾಜ್‍ನನ್ನು ಬಂಧಿಸುವಂತೆ ಕಾಡುಗೋಡಿ ಠಾಣೆ ಮುಂದೆ ಕೃಷ್ಣವೇಣಿ ಕುಟುಂಬದವರು ಜಮಾಯಿಸಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಗುಂಡಿನ ದಾಳಿ – ಇಬ್ಬರು ಸಾವು, 20ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

    ಪ್ರೀತಿಸಿ 4 ತಿಂಗಳ ಹಿಂದೆಯಷ್ಟೇ ಮದ್ವೆಯಾಗಿದ್ದ ಮಹಿಳಾ ಎಂಜಿನಿಯರ್ ಆತ್ಮಹತ್ಯೆ

    ಬೆಂಗಳೂರು: ನಾಲ್ಕು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮಹಿಳಾ ಎಂಜಿನಿಯರ್ ಒಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಸಿಲಿಕಾನ್ ಸಿಟಿಯ ಸುಬ್ರಹ್ಮನಗರದಲ್ಲಿ ನಡೆದಿದೆ.

    ಅಂಜು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಮೂಲತಃ ಚಿಕ್ಕಮಗಳೂರು ಜಿಲ್ಲೆ ಬೋಳನಹಳ್ಳಿ ನಿವಾಸಿಯಾಗಿರುವ ಈಕೆ ಖಾಸಗಿ ಕಂಪನಿಯಲ್ಲಿ ಎಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಅಂಜು ಅಂಜನ್ ಕಣಿಯಾರ್ (28) ನನ್ನು ಪ್ರೀತಿಸಿ 4 ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿರೋದಾಗಿ ಅಂಜು ಪತಿ ಮನೆಯವರು ತಿಳಿಸಿದ್ದಾರೆ.

    ಇತ್ತ ಗಂಡನ ಮನೆಯಲ್ಲಿ ಕಿರುಕುಳ ನೀಡುತ್ತಿದ್ದರು. ತನಗೆ ಪತಿ ಮನೆಯಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಅಂಜು 15 ದಿನಗಳ ಹಿಂದೆ ಹೇಳಿದ್ದಳು. ಹೀಗಾಗಿ ಇದು ಅತ್ಮಹತ್ಯೆಯಲ್ಲ ಕೊಲೆ ಎಂದು ಅಂಜು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ಮಕ್ಕಳಾಗ್ತಿಲ್ಲವೆಂದು ಸೊಸೆ ಕೋಣೆಗೆ ಇಬ್ಬರು ಪುತ್ರರನ್ನು ಬಿಟ್ಟ ಪಾಪಿ ಅತ್ತೆ!

    ನಾಲ್ಕು ತಿಂಗಳ ಹಿಂದೆ ಮದುವೆ ಆಗಿತ್ತು. ಅವರಿಬ್ಬರು ಲವ್ ಮಾಡಿ ಮದುವೆ ಆಗಿದ್ದರು. ಮನೆಯಲ್ಲಿ ಅವರ ಅತ್ತೆ, ಗಂಡ ಕಿರುಕುಳ ನೀಡುತ್ತಿದ್ದರು. ಹಿಂದೆ ನಮ್ಮ ಮಗಳು ಕೂಡ ಈ ಬಗ್ಗೆ ನಮಗೆ ಹೇಳಿದ್ದಳು. ಮೊನ್ನೆ ರಾತ್ರಿ ಕಾಲ್ ಮಾಡಿ ಚೆನ್ನಾಗಿ ಇದ್ದೇನೆ ಅಂತಾ ಹೇಳಿದ್ದಳು. ನಿನ್ನೆ ಕಾಲ್ ಮಾಡಿದ್ರೆ ರಿಸೀವ್ ಮಾಡಲಿಲ್ಲ. ರಾತ್ರಿ 7 ಗಂಟೆಗೆ ಕಾಲ್ ಮಾಡಿ ಅಂಜು ನೇಣು ಹಾಕಿಕೊಂಡಿದ್ದಾಳೆ ಅಂತಾ ಹೇಳಿದ್ರು. ನನ್ನ ಮಗಳು ನೇಣು ಹಾಕಿಕೊಂಡಿಲ್ಲ. ಕಿರುಕುಳ ನೀಡಿ ಸಾಯಿಸಿದ್ದಾರೆ ಎಂದು ಅಂಜು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.

    ಸ್ಥಳಕ್ಕೆ ಸುಬ್ರಹ್ಮಣ್ಯ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

  • 3 ತಿಂಗಳ ಹಿಂದಷ್ಟೇ ಮದ್ವೆಯಾದ ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

    3 ತಿಂಗಳ ಹಿಂದಷ್ಟೇ ಮದ್ವೆಯಾದ ನವ ವಿವಾಹಿತೆ ಆತ್ಮಹತ್ಯೆಗೆ ಯತ್ನ

    ಶಿವಮೊಗ್ಗ: ನವ ವಿವಾಹಿತೆಯೋರ್ವಳು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಬಾರಂದೂರಿನಲ್ಲಿ ನಡೆದಿದೆ.

    ಕಳೆದ 3 ತಿಂಗಳ ಹಿಂದೆಯಷ್ಟೇ ಶಿವಮೊಗ್ಗದ ದುರ್ಗಿಗುಡಿ ನಿವಾಸಿ ಮಹಿಳೆ ಹಾಗೂ ಬಾರಂದೂರಿನ ಬಸವರಾಜ್ ಇಬ್ಬರು ವಿವಾಹವಾಗಿದ್ದರು. ವಿವಾಹಿತೆಯ ಹೆತ್ತವರು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರೂ ಗಂಡನ ಮನೆಯಲ್ಲಿ ಮಗಳು ಚೆನ್ನಾಗಿರಲಿ ಎಂಬ ಕಾರಣದಿಂದ ಚಿನ್ನ ಹಾಗೂ ಬೆಳ್ಳಿ ಆಭರಣವನ್ನು ವರದಕ್ಷಿಣೆ ನೀಡಿ ವಿವಾಹ ಮಾಡಿಕೊಟ್ಟಿದ್ದರು. ಆದರೆ ವಿವಾಹವಾದ ಒಂದೇ ವಾರಕ್ಕೆ ಗಂಡನ ಮನೆಯವರು ಈಕೆಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ ಎಂದು ಆರೋಪಿಸಲಾಗಿದೆ.

    ಈಕೆಯ ಗಂಡನ ತಾಯಿ ಮೈಗೆಲ್ಲಾ ಬೆಂಕಿಯಿಂದ ಬರೆ ಹಾಕಿದ್ದಾರಂತೆ. ನನ್ನ ಮಗನಿಗೆ ನೀನು ಬೇಡ 1 ಲಕ್ಷ ಪರಿಹಾರ ಕೊಡುತ್ತೇವೆ ವಿಚ್ಛೇದನ ಕೊಡುವಂತೆ ಒತ್ತಡ ಹಾಕುತ್ತಿದ್ದಾರೆ. ಜೊತೆಗೆ ಗಂಡ ಬಸವರಾಜ್ ಸಹ ಬೇರೊಬ್ಬಳ ಮದುವೆ ಆಗಲು ಸಿದ್ಧತೆ ನಡೆಸುತ್ತಿದ್ದಾನೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಪೊಲೀಸರು ನಾನು ಕೊಟ್ಟ ದೂರನ್ನು ಸ್ವೀಕರಿಸದೇ ನನಗೆ ಬೈಯ್ದು ಕಳುಹಿಸುತ್ತಾರೆ ಎಂದು ನವವಿವಾಹಿತೆ ಆರೋಪಿಸಿದ್ದಾಳೆ.

    ನಾನು ಈತನನ್ನು ನಂಬಿ ನನ್ನ ಜೀವನ ಹಾಳು ಮಾಡಿಕೊಂಡಿದ್ದೇನೆ. ನಾನು ಏಕೆ ವಿಚ್ಛೇದನ ನೀಡಲಿ ನಾನು ಬದುಕಿದರೆ ಗಂಡನ ಜೊತೆಯೇ ಇಲ್ಲದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ ನವವಿವಾಹಿತೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ನನಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾಳೆ.

  • ಮದ್ವೆಯಾದ ಮರುದಿನವೇ ಕಿಡ್ನಾಪ್ ಆಗಿ ಗ್ಯಾಂಗ್ ರೇಪ್‍ಗೆ ಒಳಗಾದ ನವವಿವಾಹಿತೆ

    ಮದ್ವೆಯಾದ ಮರುದಿನವೇ ಕಿಡ್ನಾಪ್ ಆಗಿ ಗ್ಯಾಂಗ್ ರೇಪ್‍ಗೆ ಒಳಗಾದ ನವವಿವಾಹಿತೆ

    ಲಕ್ನೋ: ಮದುವೆಯಾದ ಮರುದಿನವೇ ನವವಿವಾಹಿತೆ ಕಿಡ್ನಾಪ್ ಆಗಿ ಗ್ಯಾಂಗ್ ರೇಪ್‍ಗೆ ಒಳಗಾದ ಘಟನೆ ಉತ್ತರ ಪ್ರದೇಶದ ಹಾಪುರ ಜಿಲ್ಲೆಯಲ್ಲಿ ನಡೆದಿದೆ.

    ಜನವರಿ 17ರಂದು ಸಂತ್ರಸ್ತೆಯ ಮದುವೆಯಾಗಿದ್ದು, ಮರುದಿನವೇ ಇಬ್ಬರು ಪುರುಷರು ಆಕೆಯನ್ನು ಆಕೆಯ ಪತಿಯ ಮನೆಯಿಂದ ಕಿಡ್ನಾಪ್ ಮಾಡಿ ಗ್ಯಾಂಗ್ ರೇಪ್ ಮಾಡಿದ್ದಾರೆ. ಭಾನುವಾರ ಹಾಪುರದ ಬ್ಯಾಂಕ್ ಬಳಿ ಮಹಿಳೆ ಪತ್ತೆಯಾಗಿದ್ದಳು.

    ಮಹಿಳೆ ನಾಪತ್ತೆಯಾಗುತ್ತಿದ್ದಂತೆ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆಯನ್ನು ಹಾಪುರದ ಬ್ಯಾಂಕ್ ಬಳಿ ಪತ್ತೆ ಮಾಡಿದ್ದಾರೆ. ಈ ಘಟನೆಯಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಇವರೆಗೂ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಸದ್ಯ ಮಹಿಳೆಯನ್ನು ವೈದ್ಯಕೀಯ ಪರೀಕ್ಷಗೆ ಕಳುಹಿಸಲಾಗಿದ್ದು, ಪೊಲೀಸರು ವೈದ್ಯಕೀಯ ವರದಿಗಾಗಿ ಕಾಯುತ್ತಿದ್ದಾರೆ.

    ಈ ಬಗ್ಗೆ ಡಿಎಸ್‍ಪಿ ರಾಜೇಶ್ ಸಿಂಗ್ ಪ್ರತಿಕ್ರಿಯಿಸಿ, ಜನವರಿ 17ರಂದು ಸಂತ್ರಸ್ತೆಯ ಮದುವೆಯಾಗಿದ್ದು, ಜ. 28ರಂದು ಬೆಳಗ್ಗೆಯಿಂದ ಕಾಣೆಯಾಗಿದ್ದಳು. ಮಹಿಳೆ ಕಾಣೆಯಾಗಿರುವುದನ್ನು ನೋಡಿ ಆಕೆಯ ಪತಿಯ ಮನೆಯವರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದರು. ಭಾನುವಾರ ಬೆಳಗ್ಗೆ ನಾವು ಮಹಿಳೆಯನ್ನು ಪತ್ತೆ ಮಾಡಿದ್ದೇವೆ. ಈ ಘಟನೆಯಿಂದ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಯಾವುದೇ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಕುಟುಂಬಸ್ಥರ ದೂರಿನ ಮೇರೆಗೆ ನಾವು ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.