Tag: Newly married man

  • ಸಂಕ್ರಾಂತಿ ಹಿನ್ನೆಲೆ ಪುಣ್ಯಸ್ನಾನಕ್ಕೆ ತೆರಳಿದ್ದ ನವವಿವಾಹಿತ ನೀರುಪಾಲು

    ಸಂಕ್ರಾಂತಿ ಹಿನ್ನೆಲೆ ಪುಣ್ಯಸ್ನಾನಕ್ಕೆ ತೆರಳಿದ್ದ ನವವಿವಾಹಿತ ನೀರುಪಾಲು

    ರಾಯಚೂರು: ಮಕರ ಸಂಕ್ರಾಂತಿ ಹಬ್ಬದ ಹಿನ್ನೆಲೆ ಪುಣ್ಯಸ್ನಾನಕ್ಕೆ ಕೃಷ್ಣಾ ನದಿಗೆ ತೆರಳಿದ್ದ ಓರ್ವ ನವವಿವಾಹಿ ನೀರುಪಾಲಾಗಿರುವ ಘಟನೆ ದೇವದುರ್ಗ ತಾಲೂಕಿನ ವೀರಗೋಟ ಗ್ರಾಮದ ಬಳಿ ನಡೆದಿದೆ.

    ದೇವದುರ್ಗ ತಾಲೂಕಿನ ಜಾಲಹಳ್ಳಿ ನಿವಾಸಿ ಪ್ರಕಾಶ್ ಬಡಿಗೇರ್ (24) ಮೃತ ದುರ್ದೈವಿ. ಮೂರು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಪ್ರಕಾಶ್ ಬಡಿಗೇರ್ ಸಂಕ್ರಮಣದ ಹಿನ್ನೆಲೆ ಪುಣ್ಯಸ್ನಾನ ಮಾಡಲು ಕೃಷ್ಣಾ ನದಿಗೆ ಹೋಗಿದ್ದರು. ನೀರಿನ ಸೆಳೆತಕ್ಕೆ ಸಿಲುಕಿದ ಅವರು ಸಾವನ್ನಪ್ಪಿದ್ದಾನೆ.

    ಸಂಕ್ರಾಂತಿ ಹಿನ್ನೆಲೆ ಜಿಲ್ಲೆಯಲ್ಲಿ ಇಂದು ಸಹ ನದಿಗಳಲ್ಲಿ ಜನ ಪುಣ್ಯ ಸ್ನಾನ ಮಾಡುತ್ತಾರೆ. ಆದರೆ ನೀರಿನ ಸೆಳೆತ ಹೆಚ್ಚಾಗಿದ್ದರಿಂದ ಪ್ರಕಾಶ್ ಕೊಚ್ಚಿಹೋಗಿದ್ದಾರೆ. ಮೃತದೇಹವನ್ನು ನದಿಯಿಂದ ಹೊರತರಲಾಗಿದ್ದು, ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.