Tag: newly married couple

  • ಮದುವೆಯಾಗಿ ಕೊಠಡಿ ಸೇರಿದ ನವದಂಪತಿ ಶವವಾಗಿ ಪತ್ತೆ – ಇಬ್ಬರಿಗೂ ಹೃದಯಾಘಾತ!

    ಮದುವೆಯಾಗಿ ಕೊಠಡಿ ಸೇರಿದ ನವದಂಪತಿ ಶವವಾಗಿ ಪತ್ತೆ – ಇಬ್ಬರಿಗೂ ಹೃದಯಾಘಾತ!

    ಲಕ್ನೋ: ಮದುವೆಯಾಗಿ ಮೊದಲ ರಾತ್ರಿ ತಮ್ಮ ಕೊಠಡಿ ಸೇರಿದ್ದ ದಂಪತಿಯಿಬ್ಬರಿಗೂ (Newly married couple) ಹೃದಯಾಘಾತವಾಗಿ (Heart Attack) ಸಾವನ್ನಪ್ಪಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಬಹ್ರೈಚ್ (Bharaich) ಜಿಲ್ಲೆಯಲ್ಲಿ ನಡೆದಿದೆ.

    ಪ್ರತಾಪ್ ಯಾದವ್ (22) ಹಾಗೂ ಪುಷ್ಪಾ (20) ಸಾವನ್ನಪ್ಪಿರುವ ದಂಪತಿ. ಮದುವೆಯಾದ ಮೊದಲನೇ ರಾತ್ರಿ ತಮ್ಮ ಕೊಠಡಿ ಸೇರಿದ ಬಳಿಕ ಮರುದಿನ ಇಬ್ಬರೂ ನಿಗೂಢವಾಗಿ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.

    ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವರದಿಯಲ್ಲಿ ಪತಿ-ಪತ್ನಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್‌ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ಕಾಂಪೌಂಡ್ ಕುಸಿದುಬಿದ್ದು ಬಾಲಕ ಸಾವು

    ಪ್ರತಾಪ್ ಹಾಗೂ ಪುಷ್ಪಾ ಅಂತ್ಯಕ್ರಿಯೆಯನ್ನು ಬಳಿಕ ಪ್ರತಾಪ್ ಅವರ ಗ್ರಾಮದಲ್ಲಿ ಒಟ್ಟಿಗೆ ನೆರವೇರಿಸಲಾಗಿದೆ. ನವದಂಪತಿಯ ಸಾವಿನ ಸುದ್ದಿ ಕೇಳಿ ಸ್ಥಳಕ್ಕೆ ಅಪಾರ ಜನರು ಸೇರಿದ್ದರು. ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇದನ್ನೂ ಓದಿ: ಶಹಾಪುರದಲ್ಲಿ 20 ಟನ್ ಪಡಿತರ ಅಕ್ಕಿ ಕಳ್ಳತನ ಪ್ರಕರಣ – ಖಾಲಿ ಲಾರಿ ಬಿಟ್ಟು ಖದೀಮರು ಪರಾರಿ

  • ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ

    ಸಿನಿಮಾ ನೋಡಿಕೊಂಡು ಬರುತ್ತಿದ್ದಾಗ ಭೀಕರ ಅಪಘಾತ – ನವ ವಿವಾಹಿತೆ ಸ್ಥಳದಲ್ಲೇ ಸಾವು, ಪತಿ ಗಂಭೀರ

    ಬೆಂಗಳೂರು: ಸಿನಿಮಾ ನೋಡಿಕೊಂಡು ಬರುತ್ತಿದ್ದ ನವದಂಪತಿಯ ಆಕ್ಟೀವ್ ಹೋಂಡಾಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಕುಳಿತಿದ್ದ ಮಹಿಳೆ ಸಾವನ್ನಪ್ಪಿದ್ದು, ಆಕೆಯ ಪತಿ ಸ್ಥಿತಿ ಗಂಭಿರವಾಗಿದೆ.

     

    ಮೃತ ನವವಧುವನ್ನು ಶ್ವೇತಾ (23) ಎಂದು ಗುರುತಿಸಲಾಗಿದ್ದು, ಪತಿ ಆನಂದ್ (28) ಸ್ಥಿತಿ ಗಂಭೀರವಾಗಿದೆ. ನಗರದ ಕಲ್ಯಾಣನಗರದ ಜಂಕ್ಷನ್ ಬಳಿ ಈ ಘಟನೆ ನಡೆದಿದೆ. ಇತ್ತೀಚೆಗಷ್ಟೇ ಮದುವೆಯಾಗಿದ್ದ ಈ ನವಜೋಡಿ, ತಡರಾತ್ರಿ ಸಿನಿಮಾ ನೋಡಲು ಹೋಗಿದ್ದರು. ಸಿನಿಮಾ ಮುಗಿದ ನಂತರ ಮನೆಗೆ ವಾಪಸ್ಸಾಗುವ ವೇಳೆ ಆಕ್ಟೀವ್ ಹೋಂಡಾಗೆ ಲಾರಿ ಡಿಕ್ಕಿ ಹೊಡೆದೆದ್ದು, ಬೈಕ್ ಹಿಂಬದಿ ಕುಳಿತಿದ್ದ ಶ್ವೇತಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.  ಇದನ್ನೂ ಓದಿ: ಹಿಂದೂ ದೇವರಿಗೆ ಜಾಹೀರಾತಿನಲ್ಲಿ ಅಪಮಾನ – Zomato ಬಾಯ್ಕಟ್‍ಗೆ ಕರೆ

    ಇದೀಗ ಶ್ವೇತಾಳ ಶವ ಅಂಬೇಡ್ಕರ್ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಹೆಚ್‍ಬಿಆರ್ ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಆನಂದ್‍ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.  ಇದನ್ನೂ ಓದಿ: ಸಂಸತ್ತಿನ ಒಳಗಡೆ ಫೋಟೋ ಇರುವಾಗ ಸರ್ಕಲ್‍ಗೆ ಸಾವರ್ಕರ್ ಹೆಸರು ಇಟ್ಟರೆ ತಪ್ಪೇನು – ಭರತ್ ಶೆಟ್ಟಿ ಪ್ರಶ್ನೆ

    Live Tv
    [brid partner=56869869 player=32851 video=960834 autoplay=true]

  • ಬಿರ್ಭೂಮ್ ಹತ್ಯಾ ಪ್ರಕರಣ – ನವದಂಪತಿ ಸಾವು

    ಬಿರ್ಭೂಮ್ ಹತ್ಯಾ ಪ್ರಕರಣ – ನವದಂಪತಿ ಸಾವು

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಂಪುರ್ ಹತ್ಯೆನಲ್ಲಿ ನಡೆದ ಹತ್ಯೆ ಪ್ರಕರಣದಲ್ಲಿ ನವ ವಿವಾಹಿತ ದಂಪತಿ ಮೃತಪಟ್ಟಿದ್ದಾರೆ.

    ಲಿಲಿ ಖಾತೂನ್ ಮತ್ತು ಖಾಜಿ ಸಾಜಿದುರ್ ಅವರು ಜನವರಿಯಲ್ಲಿ ವಿವಾಹವಾವಾಗಿದ್ದದರು. ಬಾಗ್ಟುಯಿ ಗ್ರಾಮದಲ್ಲಿರುವ ಲಿಲಿ ಖಾತೂನ್ ಅವರ ತಾಯಿಯ ಮನೆಗೆ ಭೇಟಿ ನೀಡುತ್ತಿದ್ದರು. ಈ ವೇಳೆ ಮಧ್ಯರಾತ್ರಿ ಸಾಜಿದುರ್ ಮತ್ತು ಅವರ ಪತ್ನಿ ಇರುವ ಮನೆಗೆ ಬೀಗ ಹಾಕಿದ್ದಾರೆ. ಇದನ್ನು ಕಂಡು ಗಾಬರಿಯಾದ ಸಾಜಿದುರ್ ತಮ್ಮ ಸ್ನೇಹಿತ ಮಜೀಮ್‍ಗೆ ಕರೆ ಮಾಡಿ ವಿಚಾರವನ್ನು ತಿಳಿಸಿ, ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ತಿಳಿಸಿದ್ದಾರೆ. ಇದನ್ನೂ ಓದಿ: ಮೋಹಿನಿಯಾಟ್ಟಂ ನೃತ್ಯಕ್ಕೆ ಅರ್ಧದಲ್ಲೇ ತಡೆ – ಕೇರಳ ಜಡ್ಜ್‌ ಪಾಷಾ ವಿರುದ್ಧ ಖ್ಯಾತ ಕಲಾವಿದೆ ಆಕ್ರೋಶ

    ನಂತರ ಮಾಜೀಮ್ ಸಾಜಿದುರ್ ಅವರ ತಂದೆಗೆ ಕೂಡ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ಈ ವೇಳೆ ಸಾಜಿದುರ್ ಅವರನ್ನು ಸಂಪರ್ಕಿಸಲು ಅವರ ತಂದೆ ಪ್ರಯತ್ನಿಸಿದ್ದಾರೆ. ಆದರೆ ಎಲ್ಲ ಪ್ರಯತ್ನಗಳು ವಿಫಲವಾದವು. ಮರುದಿನ ಬೆಳಗ್ಗೆ ದಂಪತಿ ದೇಹ ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಟಿಎಂಸಿ ಮುಖಂಡನ ಹತ್ಯೆ – ಹಲವು ಮನೆಗಳಿಗೆ ಬೆಂಕಿ, 10 ಮಂದಿ ಸಜೀವ ದಹನ

    ಮಂಗಳವಾರ ಬಂಗಾಳದ ಬಿರ್ಭೂಮ್ ಜಿಲ್ಲೆಯ ರಾಮ್‍ಪುರಹತ್ ಗ್ರಾಮದಲ್ಲಿ ಸುಮಾರು 12ಕ್ಕೂ ಹೆಚ್ಚು ಮನೆಗಳಿಗೆ ಕಿಡಿಕೇಡಿಗಳು ಬೆಂಕಿ ಹಚ್ಚಿದ್ದು, ಇಬ್ಬರು ಮಕ್ಕಳು ಸೇರಿದಂತೆ ಸುಮಾರು ಎಂಟು ಮಂದಿ ಸಾವನ್ನಪ್ಪಿದ್ದಾರೆ. ಈ ಸಂಬಮಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಡಿಜಿ (ಸಿಐಡಿ) ಜ್ಞಾನವಂತ್ ಸಿಂಗ್ ನೇತೃತ್ವದಲ್ಲಿ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (ಎಸ್‍ಐಟಿ) ರಚಿಸಿದೆ. ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆ ಪಶ್ಚಿಮಬಂಗಾಳ ಸರ್ಕಾರಕ್ಕೆ ವರದಿ ಕೇಳಿದೆ. ಬಂಗಾಳ ಬಿಜೆಪಿ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಒತ್ತಾಯಿಸಿದೆ.

  • ಪುನೀತ್ ಹೆಸರಲ್ಲಿ ನೇತ್ರದಾನ ಮಾಡಿದ ನವ ವಿವಾಹಿತ ಜೋಡಿ

    ಪುನೀತ್ ಹೆಸರಲ್ಲಿ ನೇತ್ರದಾನ ಮಾಡಿದ ನವ ವಿವಾಹಿತ ಜೋಡಿ

    ಕಾರವಾರ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಿಧನದ ಬಳಿಕ ತಮ್ಮ ಕಣ್ಣುಗಳನ್ನು ದಾನ ಮಾಡಿ ಅಂದರ ಬಾಳಿಗೆ ಬೆಳಕಾಗಿದ್ದಾರೆ. ಈ ಸಮಾಜಮುಖಿ ಕಾರ್ಯದಿಂದ ಅಭಿಮಾನಿಗಳು ಅವರ ಹಾದಿಯಲ್ಲೇ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಾದರಿಯಾಗುತ್ತಿದ್ದಾರೆ. ಇದೀಗ ನವದಂಪತಿ ಪುನೀತ್ ಹೆಸರಿನಲ್ಲಿ ನೇತ್ರ ದಾನ ಮಾಡಿ ತಮ್ಮ ಅಭಿಮಾನ ವ್ಯಕ್ತಪಡಿಸಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಮಂಜಗುಣಿ ಗ್ರಾಮದಲ್ಲಿ ಪುನೀತ್ ಅಭಿಮಾನಿಗಳು ಅವರ ಪುತ್ಥಳಿ ನಿರ್ಮಿಸಿದ್ದು, 50ಕ್ಕೂ ಅಧಿಕ ಜನರು ನೇತ್ರದಾನ ಮಾಡಿದ್ದಾರೆ. ಅಭಿಮಾನಿಗಳಿಂದ ನಿರ್ಮಿಸಲಾಗಿರುವ ಪುತ್ಥಳಿಗೆ ನವದಂಪತಿ ಮಣಿಕಂಠ ನಾಯ್ಕ ಹಾಗೂ ಸಿಂಧು ಮಾಲಾರ್ಪಣೆ ಮಾಡಿ ನೇತ್ರದಾನ ಮಾಡಿದ್ದಾರೆ. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

    ಭಟ್ಕಳದಲ್ಲಿ ವಿವಾಹವಾಗಿದ್ದ ನವದಂಪತಿಗೆ ಪುನೀತ್ ಎಂದರೆ ಪಂಚಪ್ರಾಣ. ಹೀಗಾಗಿ ತಾವು ಹೊಸ ಜೀವನಕ್ಕೆ ಕಾಲಿಡುವಾಗ ಪುನೀತ್‍ರಂತೆ ಕಾರ್ಯ ಮಾಡಬೇಕು ಎಂಬ ಹಂಬಲದಿಂದ ನೇತ್ರದಾನ ಮಾಡಿ ಇತರರಿಗೂ ಮಾದರಿಯಾಗಿದ್ದಾರೆ. ಇದನ್ನೂ ಓದಿ: ಹಿಜಬ್ ಬಗ್ಗೆ ಕೊನೆಗೂ ಮೌನ ಮುರಿದ ಅಮಿತ್ ಶಾ

  • ಮದುವೆ ಮಂಟಪದಿಂದಲೇ ಮತದಾನಕ್ಕೆ ಬಂದ ಯುಪಿ ನವವಿವಾಹಿತ ದಂಪತಿ

    ಮದುವೆ ಮಂಟಪದಿಂದಲೇ ಮತದಾನಕ್ಕೆ ಬಂದ ಯುಪಿ ನವವಿವಾಹಿತ ದಂಪತಿ

    ಲಕ್ನೋ: ಯುಪಿಯಲ್ಲಿ ನವವಿವಾಹಿತ ದಂಪತಿಯು ಮದುವೆ ಮಂಟಪದಿಂದಲೇ ನೇರವಾಗಿ ಮತಗಟ್ಟೆಗೆ ಬಂದು ಮತದಾನ ಮಾಡಿ ಗಮನ ಸೆಳೆದಿದ್ದಾರೆ.

    ಸಾಮಾನ್ಯವಾಗಿ ಚುನಾವಣೆಯಲ್ಲಿ ನವವಿವಾಹಿತರು ಮತದಾನ ಮಾಡಲು ಮತಗಟ್ಟೆಗಳಿಗೆ ಧಾವಿಸುವ ಚಿತ್ರಗಳು ಮತ್ತು ವೀಡಿಯೋಗಳು ಸಾಕಷ್ಟು ಬಾರಿ ಸುದ್ದಿಯಾಗಿವೆ. ಆದರೆ ಇಲ್ಲಿ ಕೇವಲ ನವವಿವಾಹಿತ ದಂಪತಿ ಮಾತ್ರ ಭಾನುವಾರ ಫಿರೋಜಾಬಾದ್ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ನವವಿವಾಹಿತ ವಧು, ಜೂಲಿ ತನ್ನ ಅತ್ತೆಯ ಮನೆಗೆ ಹೊರಡುವ ಮೊದಲು ಫಿರೋಜಾಬಾದ್ ಜಿಲ್ಲೆಯಲ್ಲಿ ವಧುವಿನ ಅವತಾರದಲ್ಲೇ ಮತ ಚಲಾಯಿಸಿದ್ದಾರೆ. ನಿನ್ನೆ ರಾತ್ರಿ ಮದುವೆಯಾಗಿರುವ ಅವರು ಇಂದು ಬೆಳಗ್ಗೆ ಅತ್ತೆಯ ಮನೆಗೆ ತೆರಳುತ್ತಿದ್ದರು. ಇದನ್ನೂ ಓದಿ:  ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‍ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‍ಪುರ್, ಹಮೀರ್‍ಪುರ್ ಮತ್ತು ಮಹೋಬಾದಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದ್ದು, ಸಂಜೆ 6ರವರೆಗೆ ನಡೆಯಲಿದೆ.

    2017ರ ಚುನಾವಣೆಯಲ್ಲಿ, ಬಿಜೆಪಿಯು ಈ 59 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ 9 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಆದರೆ ಬಹುಜನ ಸಮಾಜವಾದಿ ಪಕ್ಷವೂ ಈ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ.

  • ವಾಹನ ನಿಲ್ಲಿಸಿ ಪಂಜಾಬ್ ನೂತನ ಸಿಎಂನಿಂದ ನವ ಜೋಡಿಗೆ ವಿಶ್ – ವೀಡಿಯೋ ವೈರಲ್

    ವಾಹನ ನಿಲ್ಲಿಸಿ ಪಂಜಾಬ್ ನೂತನ ಸಿಎಂನಿಂದ ನವ ಜೋಡಿಗೆ ವಿಶ್ – ವೀಡಿಯೋ ವೈರಲ್

    ಚಂಡೀಗಢ: ಪಂಜಾಬ್ 16ನೇ ಮುಖ್ಯಮಂತ್ರಿಯಾಗಿ ನೇಮಕಗೊಂಡ ಚರಣಜಿತ್ ಸಿಂಗ್ ಚನ್ನಿ ಈಗಾಗಲೇ ಜನರ ಹೃದಯ ಗೆಲ್ಲಲು ಆರಂಭಿಸಿದ್ದಾರೆ. ಸದ್ಯ ಭಾನುವಾರ ಹೊಸದಾಗಿ ಮದುವೆಯಾಗಿ ತೆರಳುತ್ತಿದ್ದ ಜೋಡಿಗೆ ಸಿಎಂ ತಮ್ಮ ವಾಹನವನ್ನು ನಿಲ್ಲಿಸಿ ವಿಶ್ ಮಾಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    Charanjit Singh Channi

    ಪಂಜಾಬ್ ಸರ್ಕಾರ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಚರಣಜಿತ್ ಸಿಂಗ್ ಚನ್ನಿಯವರು ಭಟಿಂಡಾಗೆ ಭೇಟಿ ನೀಡಿದಾಗ ಹೊಸದಾಗಿ ಮದುವೆಯಾಗಿ ತೆರಳುತ್ತಿದ್ದ ನವ ದಂಪತಿಯನ್ನು ಮಂಡಿ ಕಲಾನ್ ಹಳ್ಳಿಯಲ್ಲಿ ಕಂಡು ಇದ್ದಕ್ಕಿಂತೆ ತಮ್ಮ ವಾಹನವನ್ನು ನಿಲ್ಲಿಸಿ ಶುಭಾಶಯ ತಿಳಿಸಿದ್ದಾರೆ.  ಇದನ್ನೂ ಓದಿ: ಗುಲಾಬ್ ಚಂಡಮಾರುತ ಎಫೆಕ್ಟ್- ಬೀದರ್‌ನಲ್ಲಿ ಮುಂದುವರಿದ ಮಳೆಯ ಅಬ್ಬರ

    ವೀಡಿಯೋದಲ್ಲಿ ಚರಣಜಿತ್ ಸಿಂಗ್ ಚನ್ನಿ ವರನನ್ನು ತಬ್ಬಿ, ವಧುವಿಗೆ ಕಾಣಿಕೆ ಅರ್ಪಿಸಿ ವಿಶ್ ಮಾಡುವುದನ್ನು ಕಾಣಬಹುದಾಗಿದೆ. ಈ ವೇಳೆ ಸಿಎಂ ಸುತ್ತ ಪೊಲೀಸರು ಸುತ್ತುವರೆದಿರುತ್ತಾರೆ ಮತ್ತು ಇದೇ ವೇಳೆ ಚರಣಜಿತ್ ಸಿಂಗ್ ಚನ್ನಿ ಜೋಡಿಯ ಕುಟುಂಬದವರು ತಟ್ಟೆಯಲ್ಲಿಟ್ಟುಕೊಂಡಿದ್ದ ಸಿಹಿ ಖಾದ್ಯವನ್ನು ಸವಿದಿದ್ದಾರೆ.

    ಕೆಲವು ದಿನಗಳ ಹಿಂದೆ ಚರಣಜಿತ್ ಸಿಂಗ್ ಚನ್ನಿಯವರು ಪಂಜಾಬ್‍ನ ಜಾನಪದ ನೃತ್ಯ ಭಾಂಗ್ರಾವನ್ನು ಕಪುರ್ತಲಾದಲ್ಲಿ ನಡೆದ ಕಾರ್ಯಕ್ರದಲ್ಲಿ ಪ್ರದರ್ಶಿಸಿದ್ದರು.  ಇದನ್ನೂ ಓದಿ: ಕಿರುತೆರೆ ಖಡಕ್ ಖಳನಟ ಈಗ ಬೆಳ್ಳಿತೆರೆಯ ನಾಯಕನಟ – ‘ಬಹುಕೃತಂ ವೇಷಂ’ನಲ್ಲಿ ಶಶಿಕಾಂತ್ ಹೊಸ ಅವತಾರ

  • ಮದ್ವೆಯಾದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ನವದಂಪತಿ

    ಮದ್ವೆಯಾದ ಕೆಲವೇ ಕ್ಷಣದಲ್ಲಿ ಪ್ರಾಣಬಿಟ್ಟ ನವದಂಪತಿ

    -ನವಜೋಡಿಯ ಕನಸಿಗೆ ಕೊಳ್ಳಿಯಿಟ್ಟ ಅಪಘಾತ

    ವಾಷಿಂಗ್ಟನ್: ಆಗಷ್ಟೇ ಮದುವೆ ಮಾಡಿಕೊಂಡು ಚರ್ಚ್ ನಿಂದ ಹೊರ ಬರುತ್ತಿದ್ದ ನವದಂಪತಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ ದುರಂತ ಯುಎಸ್‍ನ ಟೆಕ್ಸಾಸ್‍ನಲ್ಲಿ ನಡೆದಿದೆ.

    ಹಾರ್ಲೇ(19) ಮತ್ತು ರಿಯಾನನ್ ಮೋರ್ಗನ್(20) ಮೃತ ದುರ್ದೈವಿಗಳು. ಹಾರ್ಲೇ ಹಾಗೂ ರಿಯಾನನ್ ಪ್ರೀತಿಸಿ ಮದುವೆಯಾಗಿದ್ದರು. ಟೆಕ್ಸಾಸ್‍ನ ಜಾಯ್ ಡುಬೋಸ್-ಸಿಮಂಟನ್ ಬಳಿಯ ಜಸ್ಟಿಸ್ ಆಫ್ ಪೀಸ್‍ನ ಚೆಂಬರ್ ಹತ್ತಿರ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕನ ಅಜಾಗರೂಕತೆಗೆ ಹೊಸ ಜೀವನ ಆರಂಭಿಸಬೇಕಿದ್ದ ದಂಪತಿ ಮಸಣ ಸೇರಿದ್ದಾರೆ.

    ಶುಕ್ರವಾರದಂದು ಅದ್ಧೂರಿಯಾಗಿ ಕಾರ್ಲೇ ಮತ್ತು ರಿಯಾನನ್ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ದರು. ಆದರೆ ಈ ಖುಷಿ ಬಹಳ ಹೊತ್ತು ಉಳಿಯಲಿಲ್ಲ. ಕೋರ್ಟ್‌ಹೌಸ್‌ನಲ್ಲಿ ತಮ್ಮ ಮದುವೆ ಪರವಾನಗಿಯನ್ನು ಸಲ್ಲಿಸಲು ಹಾಗೂ ರಿಯಾನಾನ್‍ನ ಹೆಸರನ್ನು ಕಾನೂನಿನ ಪ್ರಕಾರ ಬದಲಾಯಿಸಲು ನವ ವಧು-ವರ ಕಾರಿನ ಬಳಿ ಬರುತ್ತಿದ್ದರು. ಜೊತೆಗೆ ಹೊರಗಡೆ ಮದುವೆಯ ಸಂತೋಷ ಕ್ಷಣದ ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳಲು ದಂಪತಿ ಸಜ್ಜಾಗಿದ್ದರು. ಆದರೆ ಈ ವೇಳೆ ರಸ್ತೆಯಲ್ಲಿ ವೇಗದಿಂದ ಬಂದ ಲಾರಿ ಅವರಿಬ್ಬರಿಗೂ ಡಿಕ್ಕಿ ಹೊಡೆದಿದೆ.

    ಪರಿಣಾಮ ಇಬ್ಬರೂ ತಮ್ಮ ದಾಂಪತ್ಯ ಜೀವನ ಆರಂಭಿಸುವ ಮೊದಲೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಎದುರಲ್ಲೇ ಈ ದುರ್ಘಟನೆ ಸಂಭವಿಸಿದರೂ ನವದಂಪತಿಯ ಜೀವ ಉಳಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮೋರ್ಗನ್ ತಾಯಿ ಪ್ರತಿಕ್ರಿಯಿಸಿ, ನಮ್ಮ ಕಣ್ಣೆದುರೇ ನಮ್ಮ ಮಕ್ಕಳು ಅಪಘಾತಕ್ಕೀಡಾದರು. ಆದರೆ ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ. ಅವರ ರಕ್ತದ ಕಲೆಗಳು ಇನ್ನೂ ನಮ್ಮ ಅಂಗೈ ಮೇಲಿದೆ. ಇಬ್ಬರೂ ಸಾಕಷ್ಟು ಕನಸು ಕಟ್ಟಿಕೊಂಡು ವಿವಾಹವಾಗಿದ್ದರು. ಆದರೆ ಅವರ ಖುಷಿಯ ಕ್ಷಣ ಈ ಅಪಘಾಯದಿಂದ ದುರಂತ ಕ್ಷಣವಾಯಿತು. ನಮ್ಮ ಮಕ್ಕಳ ಸಾವನ್ನು ನಾವೇ ನೋಡುವ ಸ್ಥಿತಿ ಬಂತು ಎಂದು ಕಣ್ಣೀರಿಟ್ಟಿದ್ದಾರೆ.

    ಸದ್ಯ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಆರೋಪಿ ಲಾರಿ ಚಾಲಕನನ್ನು ಪತ್ತೆ ಮಾಡುತ್ತೇವೆ, ಆದಷ್ಟು ಬೇಗ ಆತನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.