Tag: newly married

  • ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!

    ಭೀಕರ ರಸ್ತೆ ಅಪಘಾತ; ಮದ್ವೆಯಾದ ಎರಡೇ ದಿನಕ್ಕೆ ನವ ವಿವಾಹಿತೆ ಸಾವು, ಪತಿ ಗಂಭೀರ!

    ಮಂಗಳೂರು: ಮದುವೆಯಾದ 2ನೇ ದಿನಗಳಲ್ಲಿ ಭೀಕರ ರಸ್ತೆ ಅಪಘಾತದಲ್ಲಿ (Road Accident) ನವವಿವಾಹಿತೆ (Newly Married Women) ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತಲಪಾಡಿ ಎಂಬಲ್ಲಿ ನಡೆದಿದೆ.

    ಭೀಕರ ಕಾರು ಅಪಘಾತದಲ್ಲಿ ನವ ವಿವಾಹಿತೆ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೆರ್ನೆ ಸಮೀಪದ ಒಡ್ಯದಗಯ ನಿವಾಸಿ ಅನಿಶ್ ಕೃಷ್ಣ ಎಂಬವರ ಪತ್ನಿ ಮಾನಸ ಮೃತ ನವವಿವಾಹಿತೆ. ಗಂಭೀರವಾಗಿ ಗಾಯಗೊಂಡಿರುವ ಅನಿಶ್ ಕೃಷ್ಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ‘ಹನುಮಾನ್’ ನಿರ್ದೇಶಕನ ಹೊಸ ಸಿನಿಮಾ: ಚಿತ್ರರಂಗಕ್ಕೆ ಬಾಲಯ್ಯ ಪುತ್ರನ ಗ್ರ್ಯಾಂಡ್ ಎಂಟ್ರಿ

    ನವದಂಪತಿ ಬಿ.ಸಿ ರಸ್ತೆ ಕಡೆಯಿಂದ ಮಂಗಳೂರು (Mangaluru) ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಆಲ್ಟೋ ಕಾರು ನಿಯಂತ್ರಣ ಕಳೆದುಕೊಂಡು, ಡಿವೈಡರ್‌ನಿಂದಾಚೆಗೆ ಹಾರಿ, ಎದುರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತ ಸಂಭವಿವಿಸಿದ ಬಳಿಕ ಹೆದ್ದಾರಿಯಲ್ಲಿ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

    ಅನಿಶ್ ಕೃಷ್ಣ – ಮಾನಸ ದಂಪತಿ ಕಳೆದ ಎರಡು ದಿನಗಳ ಹಿಂದಷ್ಟೇ ಅಂದ್ರೆ ಸೆಪ್ಟಂಬರ್‌ 5ರಂದು ದೇಂತಡ್ಕ ದೇವಸ್ಥಾನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಕಾರ್ಯಕ್ರಮದ ವಿಚಾರವಾಗಿ ಕೆಲವೊಂದು ಲೆಕ್ಕಾಚಾರ ಮಾಡಲು ದೇಂತಡ್ಕ ದೇವಸ್ಥಾನಕ್ಕೆ ಬಂದಿದ್ದರು. ವಾಪಸ್‌ ಮನೆಗೆ ತೆರಳುವ ವೇಳೆ ದುರ್ಘಟನೆ ನಡೆದಿದೆ.

    ದಂಪತಿಯಿಬ್ಬರೂ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬಳಿಕ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಗಣೇಶೋತ್ಸವದ ದಿನ ನಡೆಯಬೇಕಿದ್ದ ಈದ್ ಮಿಲಾದ್ ಮೆರವಣಿಗೆ ಮೂಂದೂಡಿಕೆ!

  • ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಧರ್ಮಸ್ಥಳದಲ್ಲಿ ಮದುವೆಯಾಗಿ ಹಾಸನಕ್ಕೆ ಬಂದು ಮತ ಚಲಾಯಿಸಿದ ವರ

    ಹಾಸನ: ವಿಧಾನಸಭಾ ಚುನಾವಣೆ (Assembly Election) ದಿನವೇ ತನ್ನ ಮದುವೆಯಿದ್ದರೂ ವರನೊಬ್ಬ (Groom) ಮದುವೆ ಮುಗಿಸಿಕೊಂಡು ಬಂದು ಮತ ಚಲಾಯಿಸಿ (Vote) ಮತಾಭಿಮಾನ ಮೆರೆದಿರುವ ಘಟನೆ ಹಾಸನ (Hassana) ಜಿಲ್ಲೆಯಲ್ಲಿ ನಡೆದಿದೆ.

    ನವ ವಿವಾಹಿತ ರೋಹಿತ್ ಧರ್ಮಸ್ಥಳದಲ್ಲಿ ವಿವಾಹವಾಗಿ, ಬಳಿಕ ಹಾಸನ ಜಿಲ್ಲೆ, ಸಕಲೇಶಪುರ ಪಟ್ಟಣದ ಮತಗಟ್ಟೆ 85ರಲ್ಲಿ ಹಕ್ಕು ಚಲಾವಣೆ ಮಾಡಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಮಳೆ – ತುಂತುರು ಮಳೆಯಲ್ಲೇ ಮತಗಟ್ಟೆಗೆ ಬಂದ ಮತದಾರ

    ರೋಹಿತ್ ಸಕಲೇಶಪುರದ ಮಹೇಶ್ವರಿ ನಗರದ ನಿವಾಸಿ. ಬುಧವಾರ ನಂದಿನಿ ಜೊತೆ ವಿವಾಹವಾದ ರೋಹಿತ್ ತಕ್ಷಣವೇ ಸಕಲೇಶಪುರಕ್ಕೆ ವಾಪಸಾಗಿ ಮತ ಚಲಾಯಿಸಿದ್ದಾರೆ. ನವವಿವಾಹಿತನ ಮತಾಭಿಮಾನಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮತದಾನ ಕೇಂದ್ರದ ಆವರಣದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

  • 4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ!

    4 ತಿಂಗಳ ಹಿಂದಷ್ಟೆ ವಿವಾಹವಾಗಿದ್ದ ಯುವತಿ ಆತ್ಮಹತ್ಯೆ!

    ಕೋಲಾರ: ನವ ವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗಂಗರಸನಹಳ್ಳಿಯಲ್ಲಿ ನಡೆದಿದೆ.

    ಎಂ.ಸುಮಾ(21) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನವ ವಿವಾಹಿತೆ (Newly Married Woman). ಸದ್ಯ ಕುಟುಂಬಸ್ಥರಿಂದ ವರದಕ್ಷಿಣೆ ಕಿರುಕುಳ ಅರೋಪ ಕೇಳಿಬರುತ್ತಿದೆ. ಇದನ್ನೂ ಓದಿ: ಗರ್ಭಿಣಿ ಮೇಲೆಯೇ ವ್ಯಕ್ತಿ ರೇಪ್- ವೀಡಿಯೋ ಸೆರೆಹಿಡಿದ ಪತ್ನಿ!

    ಎಂ.ಹೊಸಹಳ್ಳಿ ನಿವಾಸಿ ಸುಮಾಳನ್ನ 4 ತಿಂಗಳ ಹಿಂದೆಯಷ್ಟೆ ಗಂಗರಸನಹಳ್ಳಿಯ ಸುರೇಶ್‍ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಎರಡು ದಿನದ ಹಿಂದೆ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾ ಇಂದು ಕೊನೆಯುಸಿರೆಳೆದಿದ್ದಾರೆ.

    ಈ ಘಟನೆ ಕೋಲಾರ ಗ್ರಾಮಾಂತರ ಪೊಲೀಸ್ (Kolar Rural Police Station) ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

     

  • ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ- ವರದಕ್ಷಿಣೆ ಕಿರುಕುಳ ಆರೋಪ

    ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆ ಶವ ಪತ್ತೆ- ವರದಕ್ಷಿಣೆ ಕಿರುಕುಳ ಆರೋಪ

    ದಾವಣಗೆರೆ: ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ನವ ವಿವಾಹಿತೆಯ ಮೃತದೇಹ ಪತ್ತೆಯಾಗಿದ್ದು, ಆಕೆಯ ಪತಿಯೇ ಕೊಲೆ ಮಾಡಿದ್ದಾನೆ ಎಂದು  ಯುವತಿಯ ಪೋಷಕರು ಆರೋಪ ಮಾಡಿದ್ದಾರೆ.

    ಜಿಲ್ಲೆಯ ಹೊಸ ಕುಂದವಾಡ ಗ್ರಾಮದ ನಿವಾಸಿ ರೂಪಾಗೆ (25) ಕಳೆದ ಡಿಸೆಂಬರ್ 10ರಂದು ದಾವಣಗೆರೆ ತಾಲೂಕಿನ ಹನುಮನಹಳ್ಳಿ ಗ್ರಾಮದ ಯುವಕ ಜಯಪ್ರಕಾಶ್ ಜೊತೆ ಮದುವೆಯಾಗಿತ್ತು. ಯುವತಿಯ ಕಡೆಯವರು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದು, ಹತ್ತು ತೊಲೆ ಬಂಗಾರದ ಒಡವೆ, ಲಕ್ಷಾಂತರ ರೂಪಾಯಿ ಹಣವನ್ನು ವರದಕ್ಷಿಣೆಯಾಗಿ ನೀಡಿ, ಮಗಳ ವಿವಾಹ ಮಾಡಿದ್ದರು. ಆದರೆ ಮದುವೆಯಾಗಿ 6 ತಿಂಗಳು ಕಳೆದಿಲ್ಲ, ಜಯಪ್ರಕಾಶ್ ಗೆ ರೂಪಾ ಮೇಲೆ ಅನುಮಾನ ಶುರುವಾಗಿದೆ.

    ಯಾರೋ ಪದೇ ಪದೇ ಫೋನ್ ಮಾಡುತ್ತಾರೆ. ಆತನಿಗೂ ನಿನಗೂ ಏನು ಸಂಬಂಧ ಎಂದು ಅನುಮಾನ ಪಟ್ಟಿದ್ದಾನೆ. ಅಲ್ಲದೆ ಆಕೆಯ ಬಳಿ ಇರುವ ಫೋನ್‍ನ್ನು ಒಡೆದು ಹಾಕಿ, ಮುದ್ದಾದ ಮಡದಿಯ ಮೇಲೆ ಅನುಮಾನ ಪಟ್ಟಿದ್ದಾನೆ. ಅಲ್ಲದೆ ಅಪ್ಪ, ಅಮ್ಮನಿಗೂ ಕರೆ ಮಾಡಬಾರದು ಎಂದು ಷರತ್ತು ವಿಧಿಸಿ, ಕಿರುಕುಳ ನೀಡುತ್ತಿದ್ದ. ಇದೀಗ ನಮ್ಮ ಮಗಳನ್ನು ಹೊಡೆದು, ಕೊಲೆ ಮಾಡಿದ್ದಾರೆ. ಆದರೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕಟ್ಟುತಿದ್ದಾರೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ.

    ರೂಪಾ ಪೋಷಕರಿಗೆ ಕರೆ ಮಾಡಿ, ಬೇರೊಬ್ಬನ ಜೊತೆ ಮಾತನಾಡುತ್ತಿದ್ದೀಯಾ ಎಂದು ನನ್ನ ಪತಿ ಆರೋಪ ಮಾಡುತ್ತಿದ್ದಾರೆ. ಅನುಮಾನ ಪಡುತ್ತಿದ್ದಾರೆ, ಆದರೆ ನಾನು ಯಾವುದೇ ಕಾರಣಕ್ಕೂ ಸಾಯುವುದಿಲ್ಲ. ಧೈರ್ಯವಾಗಿ ಎದುರಿಸಿ ನನ್ನ ಕಳಂಕವನ್ನು ನಾನೇ ತೊಳೆದುಹಾಕುತ್ತೇನೆ ಎಂದು ತಾಯಿ ನಿರ್ಮಾಲಾಗೆ ಕರೆ ಮಾಡಿ ರೂಪಾ ಹೇಳಿದ್ದಳಂತೆ. ಅಲ್ಲದೆ ಕಳೆದ ಸೋಮವಾರ ತಂದೆ ಮಂಜುನಾಥ್ ಕೂಡ ಮಗಳ ಮನೆಗೆ ಹೋಗಿ ನೋಡಿಕೊಂಡು ಬಂದಿದ್ದರಂತೆ. ಆಗ ಚನ್ನಾಗಿದ್ದ ಮಗಳು ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳುತ್ತಿದ್ದಾರೆ. ತವರು ಮನೆಗೂ ಕಳುಹಿಸದೆ, ಪದೇ ಪದೇ ಹಲ್ಲೆ ನಡೆಸುತ್ತಿದ್ದ. ಅಲ್ಲದೆ 2 ಎಕರೆಗೆ ಅಡಿಕೆ ಸಸಿ ನೆಡಬೇಕು, ಎರಡು ಲಕ್ಷ ರೂ. ತರುವಂತೆ ಪತಿ ಜಯಪ್ರಕಾಶ್ ಪೀಡಿಸುತ್ತಿದ್ದ ಎಂದು ತನ್ನ ತಾಯಿ ಬಳಿ ರೂಪಾ ಹೇಳಿಕೊಂಡಿದ್ದಳಂತೆ.

    ಬಾಳಿ ಬದುಕಬೇಕೆಂದು ಬೆಟ್ಟದಷ್ಟು ಕನಸು ಕಂಡವಳು ಈಗ ಬಾರದ ಲೋಕಕ್ಕೆ ಹೋಗಿದ್ದಾಳೆ. ವರದಕ್ಷಿಣೆ ಕಿರುಕುಳ ಹಾಗೂ ಅನುಮಾನದಿಂದ ಮಗಳು ಸಾವನ್ನಪ್ಪಿದ್ದಾಳೆ ಎಂದು ಪೋಷಕರು ಆರೋಪ ಮಾಡುತ್ತಿದ್ದಾರೆ. ತಹಶೀಲ್ದಾರ್ ಗಿರೀಶ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವತಿಯ ಪತಿ ಹಾಗೂ ಸಂಬಂಧಿಕರು ತಲೆಮರೆಸಿಕೊಂಡಿದ್ದು, ಮತ್ತಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ.

  • ವಿವಾಹವಾದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾದ ನವ ವಿವಾಹಿತೆ

    ವಿವಾಹವಾದ ನಾಲ್ಕೇ ದಿನಕ್ಕೆ ಕೊರೊನಾಗೆ ಬಲಿಯಾದ ನವ ವಿವಾಹಿತೆ

    ಶಿವಮೊಗ್ಗ: ವಿವಾಹವಾದ ನಾಲ್ಕೇ ದಿನಕ್ಕೆ ನವ ವಿವಾಹಿತೆ ಕೊರೊನಾ ಸೋಂಕಿಗೆ ಬಲಿಯಾದ ಹೃದಯವಿದ್ರಾವಕ ಘಟನೆ ಜಿಲ್ಲೆಯ ನಿದಿಗೆಯಲ್ಲಿ ನಡೆದಿದೆ.

    ಪೂಜಾ (24) ಕೊರೊನಾ ಸೋಂಕಿಗೆ ಬಲಿಯಾದ ನವ ವಿವಾಹಿತೆ. ಸಂಭ್ರಮವಿದ್ದ ಮನೆಯಲ್ಲಿ ಇದೀಗ ದುಃಖ ಮಡುಗಟ್ಟಿದೆ. ನಿದಿಗೆಯ ಪೂಜಾ ಹಾಗೂ ಹರಿಗೆಯ ಮಹೇಶ್ ಜೊತೆ ಸೋಮವಾರ ವಿವಾಹವಾಗಿತ್ತು. ಸೋಮವಾರ ವಿವಾಹವಾಗಿದ್ದು, ಗುರುವಾರ ಸಂಜೆ ಯುವತಿ ಸಾವನ್ನಪ್ಪಿದ್ದಾಳೆ. ವಿವಾಹವಾದ ಎರಡೇ ದಿನಕ್ಕೆ ಪೂಜಾಗೆ ಮೈಕೈ ನೋವು ಕಾಣಿಸಿಕೊಂಡಿದೆ. ನಿನ್ನೆ ಮಲವಗೊಪ್ಪದ ಖಾಸಗಿ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಗುಣಮುಖವಾಗಿಲ್ಲ, ಬಳಿಕ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪ್ರತಿ ಗ್ರಾಮ ಪಂಚಾಯ್ತಿಗೆ 50 ಸಾವಿರ ಅನುದಾನ: ಬಿಎಸ್‍ವೈ

    ಮೃತಪಟ್ಟ ನಂತರ ವೈದ್ಯರು ಕೊರೊನಾ ಪರೀಕ್ಷೆ ನಡೆಸಿದ್ದು, ಈ ವೇಳೆ ನವವಿವಾಹಿತೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹೊಸ ಜೀವನದ ಕನಸು ಕಾಣುತ್ತಿದ್ದ ಯುವತಿಯನ್ನು ಮಹಾಮಾರಿ ಕೊರೊನಾ ಬಲಿ ಪಡೆದಿದೆ. ಈ ಮೂಲಕ ಸಂತಸದಿಂದ ತುಂಬಿ ತುಳುಕುತ್ತಿದ್ದ ಮನೆಯಲ್ಲಿ ದುಃಖ ಮಡುಗಟ್ಟಿದೆ.

  • ನವವಿವಾಹಿತೆ ನೇಣಿಗೆ ಶರಣು

    ನವವಿವಾಹಿತೆ ನೇಣಿಗೆ ಶರಣು

    ಮೈಸೂರು: ಮದುವೆಯಾದ ಆರು ತಿಂಗಳಲ್ಲೇ ನವವಿವಾಹಿತೆ ನೇಣಿಗೆ ಶರಣಾದ ಘಟನೆ ನಂಜನಗೂಡು ತಾಲೂಕಿನ ಕೆಂಪಿ ಸಿದ್ದನಹುಂಡಿ ಗ್ರಾಮದಲ್ಲಿ ನಡೆದಿದೆ.

    ಕೆಂಪಿ ಸಿದ್ದನಹುಂಡಿ ಗ್ರಾಮದ ಕುಮಾರ್ ಪತ್ನಿ ಅನ್ನಪೂರ್ಣ(21) ಮೃತ ದುರ್ದೈವಿ. 6 ತಿಂಗಳ ಹಿಂದೆ ಮೈಸೂರು ತಾಲೂಕಿನ ದೊಡ್ಡಹುಂಡಿ ಗ್ರಾಮದ ಹತ್ತಿರದ ಸಂಬಂಧಿ ಕುಮಾರ್ ಜೊತೆ ವಿವಾಹವಾಗಿತ್ತು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ನಂಜನಗೂಡಿನ ತಹಸೀಲ್ದಾರ್ ಮಹೇಶ್ ಕುಮಾರ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಸತೀಶ್ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

  • ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    ನವ ವಿವಾಹಿತೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

    – ಪತಿ, ಅತ್ತೆ ವಿರುದ್ಧ ಕೊಲೆ ಆರೋಪ

    ಬೆಂಗಳೂರು: ನವ ವಿವಾಹಿತೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

    ಬ್ಯಾಡರಹಳ್ಳಿಯ ನಿವಾಸಿ ವನಿತಾ (25) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನವ ವಿವಾಹಿತೆ. ಆರು ತಿಂಗಳ ಹಿಂದೆಯಷ್ಟೇ ವನಿತಾ ಅವರನ್ನು ಟೆಕ್ಕಿ ಕಿರಣ್ ಕುಮಾರ್ ಮದುವೆಯಾಗಿದ್ದ. ಆದರೆ ಮದುವೆಯಾದ ದಿನದಿಂದ ವರದಕ್ಷಿಣೆ ಹಣಕ್ಕಾಗಿ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ.

    ಕಿರಣ್ ಕುಮಾರ್ ಪ್ರತಿದಿನವೂ ಪತ್ನಿ ವನಿತಾ ಅವರಿಗೆ ಕಿರುಕುಳ ಕೊಡುತ್ತಿದ್ದ. ಪತಿಯ ವರ್ತನೆಯಿಂದ ಬೇಸತ್ತ ವನಿತಾ ಮೂರು ಬಾರಿ ಸಹಾಯವಾಣಿಯಲ್ಲಿ ಕೌನ್ಸೆಲಿಂಗ್ ಮಾಡಿದ್ದರು. ಆದರೂ ಕಿರಣ್ ಕುಮಾರ್ ತನ್ನ ವರ್ತನೆ ನಿಲ್ಲಿಸಿರಲಿಲ್ಲ. ಇಂದು ವಿಕೃತಿ ಮೆರೆದ ಪತಿ ಹಾಗೂ ಅತ್ತೆ ವನಿತಾಳನ್ನು ಹೊಡೆದು ನೇಣು ಹಾಕಿದ್ದಾರೆ ಎಂದು ವನಿತಾ ಸಂಬಂಧಿಕರು ದೂರಿದ್ದಾರೆ.

    ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಕೊಲೆ ಹಾಗೂ ವರದಕ್ಷಿಣೆ ಕಿರುಕುಳ ಕೇಸ್ ಅಡಿ ಪ್ರಕರಣ ದಾಖಲಾಗಿದೆ. ವನಿತಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

  • ವಿಶ್ವವಿದ್ಯಾಲಯದ ಆವರಣದಲ್ಲಿ ನವವಿವಾಹಿತ ಜೋಡಿ ಶವವಾಗಿ ಪತ್ತೆ!

    ವಿಶ್ವವಿದ್ಯಾಲಯದ ಆವರಣದಲ್ಲಿ ನವವಿವಾಹಿತ ಜೋಡಿ ಶವವಾಗಿ ಪತ್ತೆ!

    – ಪ್ರಕರಣದ ಬಗ್ಗೆ ಭಾರೀ ಅನುಮಾನ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ ಭುಮ್ ಜಿಲ್ಲೆಯಲ್ಲಿರುವ ವಿಶ್ವಭಾರತೀ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ನವ-ವಿವಾಹಿತ ಜೋಡಿಯ ಶವ ಪತ್ತೆಯಾಗಿದ್ದು, ಭಾರೀ ಅನುಮಾನಕ್ಕೀಡುಮಾಡಿದೆ.

    ಮೃತರನ್ನು 18 ವರ್ಷದ ಸೊಮಂತ್ ಮಹಾತೋ ಹಾಗೂ 19 ವರ್ಷದ ಅಬಂತಿಕಾ ಎಂದು ಗುರುತಿಸಲಾಗಿದೆ ಅಂತ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಜೋಡಿಯ ಮೃತದೇಹ ಶನಿವಾರ ಕ್ಯಾಂಪಸ್ ಚೀನಾ ಭಾಷೆಯ ಅಧ್ಯಯನ ಕೇಂದ್ರದಲ್ಲಿ ದೊರೆತಿದ್ದು, ಇದೀಗ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಶುಕ್ರವಾರ ರಾತ್ರಿ ಈ ಜೋಡಿ ಆತ್ಮಹತ್ಯೆ ಶರಣಾಗಿದ್ದಾರೆ ಎನ್ನಲಾಗುತ್ತಿದ್ದು, ಆದರೆ ಮಧ್ಯರಾತ್ರಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ಹೇಗೆ ಬಂದರು ಎಂಬುದು ಭಾರೀ ಚರ್ಚೆಗೀಡಾಗಿದೆ.

    ಮೃತರಿಬ್ಬರು ಬೋಲ್ಪುರದ ಶ್ರೀನಂದಾ ಹೈಸ್ಕೂಲಿನ ವಿದ್ಯಾರ್ಥಿಗಳಾಗಿದ್ದಾರೆ. ಸೊಮಂತ್ ಪಿಯುಸಿ ಮುಗಿಸಿದ್ದರೆ, ಅಬಂತಿಕಾ 10 ನೇ ತರಗತಿ ಮುಗಿಸಿದ್ದಾಳೆ. ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆ ಬಳಿಕವಷ್ಟೇ ಇದು ಆತ್ಮಹತ್ಯೆಯೋ ಅಲ್ವೋ ಎಂಬುದು ಬೆಳಕಿಗೆ ಬರಬೇಕಿದೆ ಎಂದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಸೆಕ್ಯೂರಿಟಿಯವರು ಎಂದಿನಿಂತೆ ಚೀನಾ ಭವನದ ಕಡೆ ತೆರಳುತ್ತಿದ್ದ ಸಂದರ್ಭದಲ್ಲಿ ಇಬ್ಬರ ಮೃತದೇಹವಿರುವುದು ಕಂಡು ಬಂದಿದೆ. ಕೂಡಲೇ ಅವರು ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪ್ರಕರಣ ಸಂಬಂಧ ಅವರು ರಾತ್ರೋರಾತ್ರಿ ವಿಶ್ವವಿದ್ಯಾಲಯದ ಒಳಗೆ ಹೇಗೆ ಬಂದರು ಎಂಬುದರ ಬಗ್ಗೆ ಮೊದಲು ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

  • ಮದ್ವೆಯಾದ 4 ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದ ಸಾವು

    ಮದ್ವೆಯಾದ 4 ತಿಂಗಳಿಗೆ ನವವಿವಾಹಿತೆ ಅನುಮಾನಾಸ್ಪದ ಸಾವು

    ವಿಶಾಖಪಟ್ಟಣ: 19 ವರ್ಷದ ನವವಿವಾಹಿತೆಯೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ವಿಶಾಖಪಟ್ಟಣದಲ್ಲಿ ನಡೆದಿದೆ.

    ಗಂಡನೊಂದಿಗೆ ಜಗಳವಾಡಿದ ಕಾರಣ ಶನಿವಾರ ರಾತ್ರಿ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗಿದೆ. ಆದ್ರೆ ಗಂಡನೇ ಆಕೆಯನ್ನ ಕೊಲೆ ಮಾಡಿದ್ದಾನೆ ಎಂದು ಯುವತಿಯ ಪೋಷಕರು ಆರೋಪಿಸುತ್ತಿದ್ದಾರೆ.

    ಪೊಲೀಸರ ಪ್ರಕಾರ, ವಿಶಾಖಪಟ್ಟಣ ಬಳಿಯ ಎಲ್‍ಬಿ ಪುರಂನವರಾದ ಸಂಧ್ಯಾ ನಾಲ್ಕು ತಿಂಗಳ ಹಿಂದಷ್ಟೇ ವೈಜಾಗ್ ಸ್ಟೀಲ್ ಪ್ಲಾಂಟ್ ನೌಕರನಾದ ರಾಜು ಎಂಬವರೊಂದಿಗೆ ಮದುವೆಯಾಗಿದ್ದರು. ಗಜುವಾಕಾದ ಬಾಡಿಗೆ ಫ್ಲಾಟ್‍ನಲ್ಲಿ ದಂಪತಿ ವಾಸವಿದ್ದರು. ಶನಿವಾರದಂದು ಕುಟುಂಬದ ವಿಚಾರಕ್ಕೆ ಸಂಬಂಧಿಸಿದಂತೆ ದಂಪತಿ ಮಧ್ಯೆ ಜಗಳವಾಗಿತ್ತು. ವಾಗ್ವಾದದ ಬಳಿಕ ರಾಜು ಮನೆಯಿಂದ ಹೊರಹೋಗಿದ್ದು ರಾತ್ರಿ ಮನೆಗೆ ವಾಪಸ್ ಬಂದು ನೋಡಿದಾಗ ಸಂಧ್ಯಾ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.

    ಪತ್ನಿಯನ್ನ ಕೂಡಲೇ ರಾಜು ಆಸ್ಪತ್ರೆಗೆ ಕೊಂಡೊಯ್ದಿದ್ದು, ಅಲ್ಲಿಂದ ಕೆಜಿಹೆಚ್ ಆಸ್ಪತ್ರೆಗೆ ರವಾನಿಸಲು ವೈದ್ಯರು ಹೇಳಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿ ಸಂಧ್ಯಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

    ಮೃತದೇಹವನ್ನ ತವರೂರಿಗೆ ತೆಗೆದುಕೊಂಡು ಹೋಗಲಾಗಿದೆ. ಆದ್ರೆ ಮೃತದೇಹದ ಮೇಲೆ ಗಾಯದ ಗುರುತುಗಳಿದ್ದು, ಕೈ ಮುರಿದಿರುವುದನ್ನು ನೋಡಿ, ರಾಜು ಆಕೆಯ ಮೇಲೆ ದಾಳಿ ಮಾಡಿ ಕೊಂದಿದ್ದಾನೆ ಎಂದು ಸಂಧ್ಯಾ ಪೋಷಕರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜು ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

  • ಮದ್ವೆಯಾದ ಒಂದೇ ವಾರಕ್ಕೆ ಗಂಡ, ಅತ್ತೆ, ಮಾವನಿಂದಲೇ ನವವಿವಾಹಿತೆಯ ಕೊಲೆ

    ಮದ್ವೆಯಾದ ಒಂದೇ ವಾರಕ್ಕೆ ಗಂಡ, ಅತ್ತೆ, ಮಾವನಿಂದಲೇ ನವವಿವಾಹಿತೆಯ ಕೊಲೆ

    ಬೀದರ್: ಮದುವೆ ಮಾಡಿಕೊಂಡು ಗಂಡನ ಮನೆಯಲ್ಲಿ ಸುಖವಾಗಿ ಬಾಳುವ ಕನಸು ಕಂಡಿದ್ದ ನವ ವಧುವನ್ನು ಆಕೆಯ ಅತ್ತೆ, ಮಾವ, ಗಂಡ ಸೇರಿ ಕೊಲೆ ಮಾಡಿದ ಘಟನೆ ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಕಲ್ಲೂರ್ ತಾಂಡಾದಲ್ಲಿ ನಡೆದಿದೆ.

    19 ವರ್ಷದ ದೀಪಾ ಕೊಲೆಯಾದ ದುರ್ದೈವಿ. ಗಂಡ ದಿಲೀಪ್, ಅತ್ತೆ ಶೂಲಾಬಾಯಿ ಹಾಗೂ ಮಾವ ಸೋಮಲ್ಲಾ ಪವಾರ ಸೇರಿಕೊಂಡು ಹಾಡಹಗಲೇ ದೀಪಾಳನ್ನು ಹೊಡೆದು ಕೊಲೆ ಮಾಡಿ ಹೊಲದ ಬಾವಿಯಲ್ಲಿ ಬಿಸಾಕಿದ್ದಾರೆ.

    ಮೇ 29ರಂದು ಕಲ್ಲೂರ್ ತಾಂಡಾದಲ್ಲಿ ದೀಪಾ ಹಾಗೂ ದಿಲೀಪ್ ಮದುವೆಯಾಗಿತ್ತು. ಮೌಸಿ ಮಗನ ಜೊತೆ ಮಾತನಾಡುತ್ತಿದ್ದಕ್ಕೆ ಅನೈತಿಕ ಸಂಬಂಧ ಇದೆ ಎಂದು ಅನುಮಾನಿಸಿ ಕೊಲೆ ಮಾಡಲಾಗಿದೆ ಎಂದು ದೀಪಾ ಸಹೋದರ ಪ್ರವಿಣ್ ಜಾಧವ ದೂರಿನಲ್ಲಿ ತಿಳಿಸಿದ್ದಾರೆ.

    ಈ ಕುರಿತು ಚಿಟಗುಪ್ಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪತಿ ದಿಲೀಪ್ ಪವಾರ್‍ನನ್ನ ಪೊಲೀಸರು ಬಂಧಿಸಿದ್ದು, ಆತನ ತಂದೆ-ತಾಯಿ ಪರಾರಿಯಾಗಿದ್ದಾರೆ.

    ಮೃತ ದೀಪಾ ತಂದೆ ತಾಯಿ ಇಬ್ಬರೂ ಇತ್ತೀಚಿಗೆ ತೀರಿಕೊಂಡಿದ್ದರು. ಅಣ್ಣ ಪ್ರವಿಣ್ ಜಾಧವ್ 50 ಸಾವಿರ ರೂ, ಎರಡು ತೊಲೆ ಬಂಗಾರ, ಸ್ಪ್ಲೆಂಡರ್ ಬೈಕ್ ನೀಡಿ ತಂಗಿಯನ್ನ ದಿಲೀಪ್‍ಗೆ ಮದುವೆ ಮಾಡಿಕೊಟ್ಟಿದ್ರು.