Tag: Newborn Child

  • ನವಜಾತ ಗಂಡು ಮಗುವನ್ನು ಬೀದಿಗೆ ಹಾಕಿದ ತಾಯಿ!

    ನವಜಾತ ಗಂಡು ಮಗುವನ್ನು ಬೀದಿಗೆ ಹಾಕಿದ ತಾಯಿ!

    ಹಾಸನ: ಹೆಣ್ಣು ಮಗು ಜನಿಸಿತು ಅಂತಾ ನವಜಾತ ಶಿಶುಗಳನ್ನು ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ ಹಾಸನ ಜಿಲ್ಲೆಯಲ್ಲಿ ಗಂಡು ಕಂದಮ್ಮನನ್ನು ಬೀದಿ ಪಾಲು ಮಾಡಿದ ಅಮಾನವೀಯ ಘಟನೆ ನಡೆದಿದೆ.

    ಕೆಲ ದುಷ್ಕರ್ಮಿಗಳು ಹಾಸನ ತಾಲೂಕು ಮಾವಿನಹಳ್ಳಿ ಬಳಿ ಇಂದು ಬೆಳಗ್ಗೆ ನವಜಾತ ಗಂಡು ಶಿಶುವನ್ನು ಬಿಟ್ಟು ಹೋಗಿದ್ದಾರೆ. ಮಗುವಿನ ಹೊಕ್ಕಳು ಬಳ್ಳಿಯನ್ನು ಕೂಡ ಕತ್ತರಿಸಿಲ್ಲ. ಆಗತಾನೆ ಜನಿಸಿದ ಕರುಳ ಕುಡಿಯನ್ನು ಅಮ್ಮ ಎಸೆದು ಹೋಗಿದ್ದಾಳೆ. ರಾತ್ರಿ ಮಗು ಚಳಿಯಲ್ಲಿ ನರಳಾಡಿ, ಅಳಲು ಆರಂಭಿಸಿದೆ.  ಇದನ್ನು ಓದಿ:  ನವಜಾತ ಶಿಶುವನ್ನು ಬ್ಯಾಗ್ ನಲ್ಲಿ ತುಂಬಿ ಬಾತ್‍ರೂಂನಲ್ಲೇ ಇಟ್ಟೋದ್ಳು!

    ಅದೃಷ್ಟವಶಾತ್ ಮಗು ನಾಯಿ ಬಾಯಿ ಸಿಕ್ಕಿಕೊಳ್ಳದೇ ಬದುಕುಳಿದಿದೆ. ಇತ್ತ ಮಗು ಅಳುತ್ತಿರುವ ಧ್ವನಿ ಕೇಳಿಸಿಕೊಂಡ ಕೆಲ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ, ಅನಾಥ ಶಿಶುವನ್ನು ಹಾಸನ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ. ಮಗುವಿಗೆ ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.

    ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೇ ಇಂತಹ ಹೀನ ಕೃತ್ಯ ಎಸಗಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮಗುವಿನ ಪರಿಸ್ಥಿತಿ ಕಂಡು ಗ್ರಾಮಸ್ಥರು ಮರುಕ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಚರಂಡಿಯಲ್ಲಿ ಸಿಕ್ಕ ನವಜಾತ ಶಿಶುವಿಗೆ ‘ಸ್ವಾತಂತ್ರ್ಯ’ ಅಂತ ನಾಮಕರಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಎಎಸ್ ಅಧಿಕಾರಿಯ ನವಜಾತ ಶಿಶುವಿಗೆ ಚಿತ್ರಹಿಂಸೆ ನೀಡಿದ ಖಾಸಗಿ ಆಸ್ಪತ್ರೆ

    ಐಎಎಸ್ ಅಧಿಕಾರಿಯ ನವಜಾತ ಶಿಶುವಿಗೆ ಚಿತ್ರಹಿಂಸೆ ನೀಡಿದ ಖಾಸಗಿ ಆಸ್ಪತ್ರೆ

    ಬೆಂಗಳೂರು: ಕೆಲವು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಅವ್ಯವಸ್ಥೆಯ ಬಗ್ಗೆ ಕೇಳಿರುತ್ತೇವೆ. ಅವ್ಯವಸ್ಥೆಯನ್ನು ಕಂಡ ಸಾರ್ವಜನಿಕರು ಪ್ರಶ್ನಿಸಲಾಗದೇ ಸುಮ್ಮನಾಗುವುದು ಸಹಜ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಎಎಸ್ ಅಧಿಕಾರಿಯೊಬ್ಬರ ನವಜಾತ ಶಿಶುವಿಗೆ ಹಿಂಸೆ ನೀಡಿದ್ದಾರೆ. ಇದ್ರಿಂದ ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ಆಸ್ಪತ್ರೆ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ದೂರು ನೀಡಿದ್ದಾರೆ.

    ಇಂದಿರಾ ನಗರದ ‘ಲೈಫ್ ಪ್ಲಸ್’ ಆಸ್ಪತ್ರೆಯ ವಿರುದ್ಧ ಪಲ್ಲವಿ ಆಕುರಾತಿ ದೂರು ನೀಡಿದ್ದಾರೆ. ಜುಲೈ 18 ರಂದು ಪಲ್ಲವಿ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ವೇಳೆ ಆಸ್ಪತ್ರೆಯ ವೈದ್ಯರು ಮತ್ತು ನರ್ಸ್ ಗಳಿಂದ ಚಿತ್ರಹಿಂಸೆ ನೀಡಲಾಗಿದೆ. ಇ-ಮೇಲ್ ಮೂಲಕ ಆಸ್ಪತ್ರೆಯ ನರಕಯಾತನೆಯನ್ನು ಬಿಚ್ಚಿಟ್ಟಿದ್ದಾರೆ.

    ಇಂದಿರಾ ನಗರದ “ಲೈಫ್ ಪ್ಲಸ್” ಆಸ್ಪತ್ರೆ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಆರೋಗ್ಯ ಅಧಿಕಾರಿಗೆ ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ನೀಡಿರುವ ದೂರು ಹಾಗೂ ತಾವು ಅನುಭವಿಸಿದ ನರಕಯಾತೆಯ ಇ-ಮೇಲ್‍ನ ಇಂಚಿಂಚು ಮಾಹಿತಿ ಹೀಗಿದೆ.
    * ಡಾಕ್ಟರ್ ಸಲಹೆ ಮೇರೆಗೆ ಸಿಜೇರಿಯನ್ ಮಾಡಿಸಿಕೊಂಡಿದ್ದೆ. ಆದರೆ, ಸಿಜೇರಿಯನ್‍ಗೆ ಸಲಹೆ ನೀಡುವ ಮುನ್ನ ಆಸ್ಪತ್ರೆ ವೈದ್ಯರು ಸ್ಕ್ಯಾನಿಂಗ್ ಮಾಡಿರಲಿಲ್ಲ.
    * ಕರ್ತವ್ಯದಲ್ಲಿದ್ದ ನರ್ಸ್ ಗಳಿಗೆ ಸರಿಯಾಗಿ ತರಬೇತಿ ಇರಲಿಲ್ಲ.
    * ನರ್ಸ್ ಗಳು ಅನಗತ್ಯವಾಗಿ ರೂಂಗೆ ಪ್ರತಿ 10 ನಿಮಿಷಕ್ಕೆ ಬಂದು ತೊಂದರೆ ಕೊಡುತ್ತಿದ್ದರು.
    * ನವಜಾತ ಶಿಶುವಿನ ಪೋಷಣೆಯಲ್ಲಿ ಅಜಾಗರೂಕತೆ, ಅಸಡ್ಡೆಯಿಂದ ನಡೆದುಕೊಂಡಿದ್ದಾರೆ.
    * ನವಜಾತ ಶಿಶುವಿನ ಮೇಲೆ ಫೋಟೋ ಥೆರಪಿ ಮಾಡಲು ವೈದ್ಯರು ಬಲವಂತ ಪಡಿಸುತ್ತಿದ್ದರು.
    * ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಎರಡು ದಿನಗಳ ನಂತರವು ಡಿಸ್ಚಾರ್ಜ್ ವರದಿ ನೀಡಿರಲಿಲ್ಲ.
    * ನಂತರ ನೀಡಿದ ವರದಿಯಲ್ಲಿ ತಪ್ಪುಗಳು ಇದ್ದವು.
    * ಆಸ್ಪತ್ರೆಯಲ್ಲಿ ಸಿಸಿಟಿವಿಯೂ ಇಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹುಟ್ಟಿದ 6 ನಿಮಿಷದಲ್ಲಿಯೇ ಆಧಾರ್ ನಂಬರ್ ಪಡೆದ ಮಗು

    ಹುಟ್ಟಿದ 6 ನಿಮಿಷದಲ್ಲಿಯೇ ಆಧಾರ್ ನಂಬರ್ ಪಡೆದ ಮಗು

    ಉಸ್ಮನಾಬಾದ್: ಹುಟ್ಟಿದ ತಕ್ಷಣ ನಾವು ಸಿಹಿ ಹಂಚುವುದು, ಮಗುವಿಗೆ ಏನು ಹೆಸರು ಇಡಬೇಕು ಎಂದು ಯೋಚಿಸುತ್ತೇವೆ. ಆದರೆ ಮಹಾರಾಷ್ಟ್ರದ ಉಸ್ಮನಾಬಾದ್ ಜಿಲ್ಲೆಯಲ್ಲಿ ಆಗತಾನೆ ಜನಿಸಿದ ಹೆಣ್ಣು ಮಗುವಿಗೆ ತಮ್ಮ ಪೋಷಕರು ನಮ್ಮ ಪ್ರಮುಖ ಗುರುತಾದ ಆಧಾರ್ ಸಂಖ್ಯೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಭಾವನ ಸಂತೋಷ್ ಜಾಧವ್ ಆಧಾರ್ ನಂಬರ್ ಪಡೆದ ಹೆಣ್ಣು ಮಗು. ಜಿಲ್ಲೆಯ ಮಹಿಳಾ ಆಸ್ಪತ್ರೆಯಲ್ಲಿ ಭಾನುವಾರ ಮಗು ಜನಿಸಿದೆ. ತಕ್ಷಣ ಪೋಷಕರು 6 ನಿಮಿಷಗಳಲ್ಲಿ ತಮ್ಮ ಮಗುವಿಗೆ ಆಧಾರ್ ಮಾಡಿಸಿದ್ದಾರೆ.

    ಆಸ್ಪತ್ರೆಯಲ್ಲಿ ಸುಮಾರು 12.03 ಗಂಟೆಗೆ ಮಗು ಜನಿಸಿದೆ. ತಕ್ಷಣ ಪೋಷಕರು ಸುಮಾರು 12.09 ಕ್ಕೆ ಆನ್‍ಲೈನ್ ಮೂಲಕ ಜನನ ಪ್ರಮಾಣ ಪತ್ರ ಪಡೆದು ನಂತರ ಆಧಾರ್ ನಂಬರ್ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ರಾಧಾ ಕೃಷ್ಣ ಗೇಮ್ ಹೇಳಿದರು.

    ಇದು ಜಿಲ್ಲೆಯಲ್ಲಿಯೇ ಹೆಮ್ಮೆಯ ವಿಚಾರವಾಗಿದ್ದು, ಶೀಘ್ರವಾಗಿ ನಾವು ಎಲ್ಲಾ ಮಕ್ಕಳ ಆಧಾರ್ ನಂಬರ್ ನೊಂದಾಯಿಸಿಕೊಂಡು ಅವರ ಪೋಷಕರ ಆಧಾರ್ ಖಾತೆಗೆ ಲಿಂಕ್ ಮಾಡುತ್ತೇವೆ ಎಂದು ಹೇಳಿದರು.

    ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಾ ಮಹಿಳಾ ಆಸ್ಪತ್ರೆಯಲ್ಲಿ ಜನಿಸಿದ 1,300 ಮಕ್ಕಳೆಲ್ಲರೂ ಆಧಾರ್ ನಂಬರ್ ಪಡೆದಿದ್ದಾರೆ. ಸದ್ಯಕ್ಕೆ ತಾಯಿ ಮಗು ಮತ್ತು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯ ಡಾ. ಏಕ್ನಾಥ್ ಮಾಲ್ ತಿಳಿಸಿದರು.