Tag: new zealand MP

  • ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

    ನ್ಯೂಜಿಲೆಂಡ್‌ ಸಂಸತ್‌ನಲ್ಲಿ ಹೈಡ್ರಾಮಾ – ಸಾಂಪ್ರದಾಯಿಕ ನೃತ್ಯ ಮಾಡಿ ವಿವಾದಿತ ಬಿಲ್‌ ಪ್ರತಿ ಹರಿದು ಹಾಕಿದ ಸಂಸದೆ

    ವೆಲ್ಲಿಂಗ್ಟನ್‌: ನ್ಯೂಜಿಲೆಂಡ್‌ ಮಾವೊರಿ ಸಮುದಾಯದ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜನಾಂಗೀಯ ವಿಭಜನೆಯನ್ನು ಪ್ರಚೋದಿಸುತ್ತದೆ ಎಂದು ಆರೋಪಿಸಲಾದ ವಿವಾದ್ಮಾತಕ ಬಿಲ್ ಮಂಡನೆ ವೇಳೆ ಸಂಸತ್‌ನಲ್ಲಿ ಹೈಡ್ರಾಮಾ ನಡೆದಿದೆ.

    ಕಿರಿಯ ಸಂಸದೆ, 22 ವರ್ಷದ ಹನಾ-ರಾವ್ಹಿತಿ ಮೈಪಿ-ಕ್ಲಾರ್ಕ್ ಅವರು ವಿವಾದಾತ್ಮಕ ಒಪ್ಪಂದದ ತತ್ವಗಳ ಮಸೂದೆಯ ಪ್ರತಿಯನ್ನು ಬಿಲ್ ಮಂಡನೆ ವೇಳೆಯೇ ಹರಿದು ಹಾಕುವ ಬಿಲ್ ಅನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಹನಾ-ರಾವ್ಹಿತಿ ಮೈಪಿ-ಕ್ಲಾರ್ಕ್ ಕೆಲಸವನ್ನು ಗ್ಯಾಲರಿಯಲ್ಲಿದ್ದ ಸಾರ್ವಜನಿಕರು ಬೆಂಬಲಿಸಿದರೆ, ಸದನದ ನಿಯಮಗಳ ಉಲ್ಲಂಘನೆ ಹಿನ್ನೆಲೆ ಅವರನ್ನು ಅಮಾನತು ಮಾಡಲಾಯಿತು. ಇದನ್ನೂ ಓದಿ: ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ – 12 ಬಲಿ

    ಕೋಲಾಹಲದ ನಡುವೆ ಅಂತಿಮವಾಗಿ ಮಸೂದೆಯನ್ನು ಅಂಗೀಕರಿಸಲಾಯಿತು. ಮಸೂದೆಯು 1840 ರಲ್ಲಿ ಸಹಿ ಮಾಡಿದ ವೈತಾಂಗಿ ಒಪ್ಪಂದದ ಮೇಲೆ ಕೇಂದ್ರೀಕರಿಸಿದೆ. ಒಪ್ಪಂದದ ತತ್ವಗಳು ಎಲ್ಲ ನ್ಯೂಜಿಲೆಂಡ್‌ನವರಿಗೆ ಸಮಾನವಾಗಿ ಅನ್ವಯಿಸುತ್ತದೆ ಎಂದು ವ್ಯಾಖ್ಯಾನಿಸಲು ಪ್ರಯತ್ನಿಸುತ್ತದೆ. ಈ ಕ್ರಮವು ತೀವ್ರ ಟೀಕೆಗೆ ಗುರಿಯಾಗಿದೆ. ಇದು ಮಾವೊರಿ ಹಕ್ಕುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಜನಾಂಗೀಯ ವಿಭಜನೆಯನ್ನು ಪ್ರಚೋದಿಸುತ್ತದೆ ಎಂದು ವಿರೋಧಿಗಳು ವಾದಿಸುತ್ತಾರೆ.

    ಮಸೂದೆ ಮಂಡಿಸಿದ ACT ಪಕ್ಷದ ನಾಯಕ ಡೇವಿಡ್ ಸೆಮೌರ್, ತಮ್ಮ ಪ್ರಸ್ತಾವನೆಯು ಒಪ್ಪಂದದ ತತ್ವಗಳಿಗೆ ಸ್ಪಷ್ಟತೆಯನ್ನು ತರುವ ಗುರಿಯನ್ನು ಹೊಂದಿದೆ ಎಂದು ವಾದಿಸುತ್ತಾರೆ. ಇದನ್ನೂ ಓದಿ: 17,000 ಕೆಲಸ ಕಡಿತಗೊಳಿಸಲಿದೆ ಬೋಯಿಂಗ್ – ಕಂಪನಿಯ 10% ಉದ್ಯೋಗಿಗಳ ಕೆಲಸಕ್ಕೆ ಕುತ್ತು

  • ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಸಂಸದೆ

    ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿದ ನ್ಯೂಜಿಲೆಂಡ್‌ ಸಂಸದೆ

    ವಿಲ್ಲಿಂಗ್‌ಟನ್: ನ್ಯೂಜಿಲೆಂಡ್‌ನ ಸಂಸದೆ ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ.

    ಸಂಸದೆ ಜ್ಯೂಲಿ ಅನ್ನೆ ಜೆಂಟರ್‌ ಅವರಿಗೆ ಭಾನುವಾರ ನಸುಕಿನ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಸಂಸದೆ ಸ್ವತಃ ತಾವೇ ಸೈಕಲ್‌ ಚಲಾಯಿಸಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ತಲುಪಿದ 1 ಗಂಟೆಯ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ: ರಶೀದ್ ಖಾನ್ ಬೇಡಿಕೆ ಕಂಡು ದಂಗಾದ ಹೈದರಾಬಾದ್ ಫ್ರಾಂಚೈಸ್

    ಮಗುವಿಗೆ ಜನ್ಮ ನೀಡಿದ ನಂತರ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಖುಷಿಯನ್ನು ಹಂಚಿಕೊಂಡಿರುವ ಸಂಸದೆ, ಇಂದು ನಸುಕಿನ 3.04ರ ವೇಳೆಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸೈಕಲ್‌ನಲ್ಲಿ ಆಸ್ಪತ್ರೆಗೆ ಬರುವ ಯಾವುದೇ ಯೋಜನೆ ಇರಲಿಲ್ಲ. ಕೊನೆಗೆ ಸೈಕಲ್‌ನಲ್ಲೇ ಆಸ್ಪತ್ರೆಗೆ ಬರುವಂತಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ

    ಮಧ್ಯರಾತ್ರಿ 2ರ ಹೊತ್ತಿಗೆ ಆಸ್ಪತ್ರೆಗೆ ಹೊರಡುವಾಗ ಹೆರಿಗೆ ನೋವು ಅಷ್ಟಾಗಿ ಇರಲಿಲ್ಲ. 10 ನಿಮಿಷದಲ್ಲಿ ಆಸ್ಪತ್ರೆಗೆ ಸೇರಿದೆ. ಸುಲಲಿತವಾಗಿ ಹೆರಿಗೆಯಾಗಿದೆ. ನಾವು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದ್ದಾರೆ. ಜ್ಯೂಲಿ ಅವರ ಪೋಸ್ಟ್‌ಗೆ ಸಾವಿರಾರು ಪ್ರತಿಕ್ರಿಯೆ, ಅಭಿನಂದನೆಗಳು ವ್ಯಕ್ತವಾಗಿವೆ.

    ಸಂಸದೆ ಜ್ಯೂಲಿ ಅವರು 2018ರಲ್ಲಿ ಮೊದಲ ಹೆರಿಗೆ ಸಂದರ್ಭದಲ್ಲಿಯೂ ಇದೇ ರೀತಿ ಸೈಕಲ್‌ನಲ್ಲಿ ಆಸ್ಪತ್ರೆಗೆ ಬಂದಿದ್ದರು.