ಸ್ಕಾಟ್‌ಲ್ಯಾಂಡ್: ಸ್ಕಾಟ್‌ಲ್ಯಾಂಡ್‌ನ 22 ವರ್ಷದ ಮಹಿಳೆಯನ್ನು ವೆಬ್‌ಸೈಟ್ ಕಂಪನಿಯೊಂದು ಅಶ್ಲೀಲ ಚಿತ್ರ ವೀಕ್ಷಿಸಲು ನೇಮಿಸಿಕೊಂಡಿದೆ.
ಗಂಟೆಗೆ 1,500 ರೂ. ವೇತನ ನೀಡುವ ಮೂಲಕ ಗ್ರೀನಾಕ್‌ನಿಂದ ಬಂದಿರುವ ರೆಬೆಕಾ ಡಿಕ್ಸನ್ ಎನ್ನುವ ಯುವತಿಯನ್ನು ನೇಮಕ ಮಾಡಿಕೊಂಡಿದೆ. ಸಂಸ್ಥೆಯು ಅಶ್ಲೀಲ ಉದ್ಯಮದ ಬಗ್ಗೆ ಸಂಶೋಧನೆ ನಡೆಸಲು ಈಕೆಯನ್ನು ನೇಮಿಸಿಕೊಂಡಿದೆ. 90 ಸಾವಿರ ಅರ್ಜಿದಾರರು ಪೂರೈಕೆ ಸಂಸ್ಥೆ ರೆಬೆಕಾರನ್ನು ಆಯ್ಕೆ ಮಾಡಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಪಾಕಿಸ್ತಾನಿ ಎಲ್‍ಇಟಿ ಉಗ್ರ ಎನ್‍ಕೌಂಟರ್ – ಮೂವರು ಅರೆಸ್ಟ್
ಈ ಕುರಿತು ಮಾತನಾಡಿರುವ ಯುವತಿ, ನನ್ನನ್ನು ಈ ಕೆಲಸಕ್ಕೆ ನೇಮಿಸಿಕೊಂಡದ್ದು ನನಗೇ ಶಾಕ್ ಆಗಿದೆ. ಅಲ್ಲದೆ ಈ ಕೆಲಸ ನನಗೆ ಉತ್ತಮ ಅವಕಾಶ ನೀಡಿದೆ. ನಾನು ಇದನ್ನು ಒಂದು ಪ್ರಾಜೆಕ್ಟ್ ಆಗಿಯೇ ಪರಿಗಣಿಸುತ್ತೇನೆ ಎಂದು ಹೇಳಿದ್ದರೆ.
ಲಂಡನ್: ಆರೋಗ್ಯ ಕಾಳಜಿಗಾಗಿ ಜನ ದಿನಕ್ಕೊಂದು ವಿಧಾನ ಅನುಸರಿಸುತ್ತಾರೆ. ಕೆಲವರಂತೂ ತಮ್ಮ ಸೌಂದರ್ಯ ಹೆಚ್ಚುತ್ತದೆ ಅಂದ್ರೆ ಸಾಕು ಯಾರು ಸಲಹೆ ನೀಡಿದರೂ ಬೇಡ ಅನ್ನೋದೇ ಇಲ್ಲ. ಆದರೆ ಇಲ್ಲೊಬ್ಬ ಭೂಪ ವಿಲಕ್ಷಣ ವಿಧಾನವನ್ನು ಅನುಸರಿಸಿದ್ದಾನೆ. ಅವನ ಈ ನಡೆಯನ್ನು ಕಂಡು ನೆಟ್ಟಿಗರೇ ದಂಗಾಗಿದ್ದಾರೆ.
ಹೌದು. ಇಂಗ್ಲೆಂಡ್‌ನಲ್ಲಿರುವ 34 ವರ್ಷದ ವ್ಯಕ್ತಿಯೊಬ್ಬ ತನ್ನ ಮಾನಸಿಕ ಸಮಸ್ಯೆಗಳಿಂದ ಹೊರಬರಲು ಪ್ರತಿದಿನ ಮೂತ್ರ ಸೇವನೆ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದಾನೆ. ಇದರಿಂದಾಗಿ ತಾನು ಮಾನಸಿಕ ಸಮಸ್ಯೆಯಿಂದ ಹೊರಬಂದಿರುವುದು ಮಾತ್ರವಲ್ಲದೇ ಎಂದಿಗಿಂತ 10 ವರ್ಷ ಚಿಕ್ಕವನಾಗಿ ಯೌವ್ವನದ ಯುವಕನ ಹಾಗೆ ಕಾಣುವಂತೆ ಮಾಡಿದೆ ಎನ್ನಲಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ತನ್ನ ಮನೆಯ ಜೊತೆ ಮಾಜಿ ಪತಿಯನ್ನೂ ಮಾರಾಟಕ್ಕಿಟ್ಟಳು!
ವರದಿಗಳ ಪ್ರಕಾರ, ಹ್ಯಾಂಪ್‌ಶೈರ್‌ನ ಹ್ಯಾರಿ ಮೆಟಾಡೀನ್ ಎಂಬ ವ್ಯಕ್ತಿಯೊಬ್ಬರು 2016ರಿಂದ ತನ್ನ ಮೂತ್ರವನ್ನು ತಾನೇ ಸೇವಿಸಲು ಪ್ರಾರಂಭಿಸಿದ್ದಾನೆ. ಈತನಿಗೆ ಮಾನಸಿಕ ಸಮಸ್ಯೆಗಳಿದ್ದು, ಇದರಿಂದ ಹೊರಬರಲಾಗದೇ ಹತಾಶೆಗೆ ಒಳಗಾಗಿದ್ದಾನೆ. ಅವನು ಮೂತ್ರ ಚಿಕಿತ್ಸೆ ಪ್ರಾರಂಭಿಸಿದ ನಂತರ ಮನಸ್ಸಿಗೆ ಶಾಂತಿ ಸಿಕ್ಕಂತಾಗಿದೆ. ಅಲ್ಲದೆ ಶಾಂತ ರೀತಿಯ ನಿರ್ಣಯಗಳನ್ನೂ ತೆಗೆದುಕೊಳ್ಳುವಂತೆ ಮಾಡಿದೆ. ಹಾಗಾಗಿ ಪ್ರತಿದಿನ ಇದೇ ವಿಧಾನವನ್ನು ಮುಂದುವರಿಸಿದ್ದಾರೆ.
ವರದಿಗಳ ಪ್ರಕಾರ ಮೆಟಾಡೀನ್, ಪ್ರತಿದಿನ 200 ಮಿಲಿಯಷ್ಟು ತನ್ನದೇ ಮೂತ್ರವನ್ನು ಕುಡಿಯುತ್ತಾನೆ. ತಾಜಾ ಮೂತ್ರದೊಂದಿಗೆ ತಿಂಗಳ ಹಳೆಯ ಮೂತ್ರವನ್ನೂ ಮಿಶ್ರಣ ಮಾಡಿ ಕುಡಿಯುವ ಈತ ತನ್ನ ಮೂತ್ರವನ್ನು ಸೂಪರ್ ಕ್ಲೀನ್ ಮೂತ್ರವೆಂದು ಘೋಷಿಸಿಕೊಂಡಿದ್ದಾನೆ. ಅಲ್ಲದೆ ಹೆಚ್ಚುಕಾಲ ಸಂಗ್ರಹಿಸಿದ ಮೂತ್ರವು ದುರ್ವಾಸನೆಯಿಂದ ಕೂಡಿರುತ್ತದೆ. ಆದರೆ ಅದು ಹೆಚ್ಚು ರುಚಿಯಾಗಿರುತ್ತದೆ. ಇದನ್ನು ಆತ ಸಂತೋಷದಿಂದಲೇ ಸ್ವೀಕರಿಸುತ್ತಾನೆ ಎನ್ನಲಾಗಿದೆ. ಇದನ್ನೂ ಓದಿ: 24 ಗಂಟೆಯಲ್ಲಿ ಪಾಕ್ ನೂತನ ಪ್ರಧಾನಿಗೆ 2 ಬಾರಿ ಅಪಮಾನ- 17 ಕೆಲಸಗಾರರ ವಜಾ
ಕೆಲ ವರದಿಗಳು ಹೇಳುವಂತೆ ಮೆಟಾಡೀನ್, ಮೂತ್ರವನ್ನು ಸೇವಿಸುವುದಿಲ್ಲ. ಬದಲಾಗಿ ಅದನ್ನು ಮಾಯಿಶ್ಚರೈಸರ್ ಆಗಿ ಮುಖಕ್ಕೆ ಮಸಾಜ್ ಮಾಡುತ್ತಾರೆ. ಇದರಿಂದ ಅದು ತನ್ನನ್ನು 10 ವರ್ಷ ಚಿಕ್ಕವನಾಗಿ ಕಾಣುವಂತೆ ಮಾಡಿದೆ. ಜೊತೆಗೆ ಹೆಚ್ಚುಕಾಲ ಉಳಿಸಿದ ಮೂತ್ರವನ್ನು ಕುಡಿಯುವುದರಿಂದ ಅದು ತನ್ನ ಯೌವನವನ್ನು ಹಲವು ವರ್ಷಗಳಿಗೆ ಪುನರುಜ್ಜೀವನಗೊಳಿಸಿದೆ ಎಂದು ಬೀಗಿದ್ದಾನೆ. ಮತ್ತೊಂದು ಕಡೆ ಮೂತ್ರ ಚಿಕಿತ್ಸೆಯ ಎಲ್ಲ ಪರಿಣಾಮಗಳೂ ಸಕಾರಾತ್ಮಕವಲ್ಲ ಎಂಬುದನ್ನೂ ಉಲ್ಲೇಖಿಸಿದ್ದಾನೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ; ಚೀನಾದ 6 ಅಂತಸ್ತಿನ ಕಟ್ಟಡ ಕುಸಿತ – 39 ಜನ ನಾಪತ್ತೆ
ಈ ಕುರಿತು ಮಾತನಾಡಿರುವ ಮೆಟಾಡೀನ್, ನಾನು ಅದನ್ನು ಸೇವಿಸುವಾಗ ಅಷ್ಟು ಶಕ್ತಿಯುತ ಎಂಬುದು ನನ್ನ ಕಲ್ಪನೆಗೂ ಮೀರಿದ್ದಾಗಿತು. ಮೂತ್ರ ಸೇವನೆ ಆರಂಭಿಸಿದಾಗಿನಿಂದ ಅದು ನನ್ನ ಮೆದುಳನ್ನು ಚುರುಕುಗೊಳಿಸಿತು. ಖಿನ್ನತೆಯನ್ನು ತೆಗೆದುಹಾಕಿತು. ಇದರಿಂದಾಗಿ ಶಾಂತ ರೀತಿಯಲ್ಲಿ ವರ್ತಿಸುವ ಹಾಗೂ ನಿರ್ಣಯಗಳನ್ನು ಕೈಗೊಳ್ಳುವಂತವನಾದೆ ಎಂದು ಇದೀಗ ನಾನು ಸಂತೋಷದಿಂದ್ದೇನೆ ಎಂದು ಹೇಳಿಕೊಂಡಿದ್ದಾರೆ.