Tag: New Year’s Eve

  • ಕಾಫಿನಾಡ ಸಿರಿ ಕನ್ಯೆ ಮುಂದೆ ಪ್ರವಾಸಿಗರ ಫೋಟೋ ಶೂಟ್

    ಕಾಫಿನಾಡ ಸಿರಿ ಕನ್ಯೆ ಮುಂದೆ ಪ್ರವಾಸಿಗರ ಫೋಟೋ ಶೂಟ್

    ಚಿಕ್ಕಮಗಳೂರು: ಹೊಸ ವರ್ಷ ಸ್ವಾಗತಿಸಲು ಪ್ರವಾಸಿಗರು ಕಾಫಿ ನಾಡಿಗೆ ಜಮಾಯಿಸಿದ್ದ ಪ್ರವಾಸಿಗರು ಕಾಫಿನಾಡ ಸಿರಿ ಕನ್ಯೆ ಮುಂದೆ ಫೋಟೋ ಶೂಟ್ ಮೂಲಕ ಎಂಜಾಯ್ ಮಾಡಿದ್ದಾರೆ.

    ದೂರದ ಊರುಗಳಿಂದ ಕುಟುಂಬ ಸಮೇತರಾಗಿ ಬಂದಿದ್ದ ಪ್ರವಾಸಿಗರು, ಮಕ್ಕಳ ಜೊತೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆದುಕೊಂಡು ಸಂತಸಪಟ್ಟರು. ಕಾಫಿನಾಡಿನ ಗಿರಿ ಭಾಗದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಹೋಗುವ ದಾರಿಯಲ್ಲಿ ಈ ಸಿರಿ ಕನ್ಯೆ ಸಿಗುತ್ತಾಳೆ. ದಾರಿ ಮಧ್ಯೆಯೇ ಸಿಗುವ ಈ ಕನ್ಯೆ ಬಳಿ ಫೋಟೋ ತೆಗೆಸಿಕೊಂಡು, ಕಾಫಿನಾಡಿನ ಕಾಫಿ ರುಚಿ ಸವಿದು ಪ್ರವಾಸಿಗರು ಮುಂದೆ ಸಾಗುತ್ತಾರೆ.

    ಚಿಕ್ಕಮಗಳೂರಿನಿಂದ ಐದು ಕಿ.ಮೀ. ದೂರದಲ್ಲಿರೋ ಈ ಸಿರಿ ಕಾಫಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ಮಹಿಳೆಯೊಬ್ಬರು ಮಲಗಿಕೊಂಡಿರುವ ಪ್ರತಿಮೆ ದಾರಿ ಹೋಕರನ್ನು ಮೂಕ ವಿಸ್ಮಿತರನ್ನಾಗಿಸುತ್ತಿದೆ. ಮಕ್ಕಳೊಂದಿಗೆ ಬಂದ ಪೋಷಕರು ಹಾಗೂ ಸ್ನೇಹಿತರು ಹೊಸ ವರ್ಷದ ಆಚರಣೆಗೂ ಮುನ್ನ ಈ ಕನ್ಯೆ ಬಳಿ ಸ್ವಲ್ಪ ಹೊತ್ತು ಕಾಲ ಕಳೆದು ಹೋದರು. ಮಕ್ಕಳನ್ನು ಆಡಲು ಬಿಟ್ಟು ಸಿರಿ ಕನ್ಯೆ ಮುಂದೆ ಫೋಟೋ ಶೂಟ್‍ಗೆ ನಡೆಸಿಕೊಂಡಿದ್ದಾರೆ.

    ಗಿರಿ ಭಾಗದ ಪ್ರವಾಸಿಗರಿಗೆ ಪೊಲೀಸ್ ಇಲಾಖೆ ಸಂಜೆ 6 ಗಂಟೆ ವರೆಗೆ ಮಾತ್ರ ಡೆಡ್ ಲೈನ್ ನೀಡಲಾಗಿತ್ತು. ಆರು ಗಂಟೆಯ ಬಳಿಕ ಯಾವುದೇ ಪ್ರವಾಸಿಗರನ್ನು ಗಿರಿಭಾಗಕ್ಕೆ ಬಿಡುವುದಿಲ್ಲ. ಹೀಗಾಗಿ ಬೆಳಗ್ಗೆಯಿಂದಲೇ ಪ್ರವಾಸಿಗರು ಹೊಸವರ್ಷದ ಆಚರಣೆಯಲ್ಲಿ ತೊಡಗಿದ್ದರು. ಸಂಜೆ ಈ ಸಿರಿ ಕನ್ಯೆ ಬಳಿ ಕಾಲ ಕಳೆದು, ಕಾಫಿ ಕುಡಿದು ಹಿಂದಿರುಗಿದ್ದರು.

  • ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ ಹೋಟೆಲ್, ಹೋಮ್ ಸ್ಟೇಗಳು

    ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ ಹೋಟೆಲ್, ಹೋಮ್ ಸ್ಟೇಗಳು

    ಮಡಿಕೇರಿ: ಹಳೆ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷ ಸ್ವಾಗತಿಸಲು ಇನ್ನೇನು ಕ್ಷಣಗಣನೆ ಆರಂಭಗೊಂಡಿದೆ. ಇದಕ್ಕೆ ಮಂಜಿನ ನಗರಿಯ ಹೋಟೆಲ್, ಹೋಮ್ ಸ್ಟೇ ಹಾಗೂ ರೆಸಾರ್ಟ್‍ಗಳು ಮಧುವಣಗಿತ್ತಿಯಂತೆ ಸಿಂಗಾರಗೊಂಡಿವೆ.

    ಇಯರ್ ಎಂಡ್ ಮತ್ತು ನ್ಯೂ ಇಯರ್ ಸೆಲೆಬ್ರೇಷನಿಗೆ ಪ್ರವಾಸಿಗರ ಸ್ವರ್ಗ, ಮಂಜಿನ ನಗರಿ ಮಡಿಕೇರಿಗೆ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ನಗರದ ಪ್ರವಾಸಿ ತಾಣಗಳೆಲ್ಲ ಪ್ರವಾಸಿಗರಿಂದ ತುಂಬಿ ತುಳುಕುತ್ತಿವೆ. ಹೋಮ್ಸ್ ಸ್ಟೇ ಗಳು ಭರ್ತಿಯಾಗಿವೆ, ಕೊಡಗಿನ ಹೋಟೆಲ್, ಹೋಮ್ಸ್ ಸ್ಟೇ, ರೆಸಾರ್ಟ್ ಗಳು ನ್ಯೂ ಇಯರ್ ವೆಲ್ ಕಮ್ ಮಾಡಿಕೊಳ್ಳಲು ಭರ್ಜರಿಯಾಗಿಯೇ ತಯಾರಾಗಿವೆ.

    ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಹೋಟೆಲ್, ಹೋಮ್ಸ್ ಸ್ಟೇ, ರೆಸಾರ್ಟ್ ಗಳು ಮಧುವಣಗಿತ್ತಿಯಂತೆ ಅಲಂಕಾರಗೊಂಡಿವೆ. ಸುಂದರ ಪ್ರಕೃತಿಯ ಮಡಿಲಲ್ಲಿ 2019ಕ್ಕೆ ಗುಡ್ ಬೈ ಹೇಳಿ, 2020ನ್ನು ಸ್ವಾಗತಿಸಲು ಜಿಲ್ಲೆಯ ಜನತೆ ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ ಪ್ರವಾಸಿಗರು ಕಾತುರದಿಂದ ಕಾಯುತ್ತಿದ್ದಾರೆ.