Tag: New Year

  • 2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    ನವದೆಹಲಿ: 2025 ಎಲ್ಲರಿಗೂ ಹೊಸ ಅವಕಾಶ, ಯಶಸ್ಸನ್ನು ತರಲಿ ಎಂದು ಹೊಸ ವರ್ಷಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಭ ಹಾರೈಸಿದ್ದಾರೆ.ಇದನ್ನೂ ಓದಿ: ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ

    ಈ ಕುರಿತು ಟ್ವೀಟ್ ಹಂಚಿಕೊಂಡಿರುವ ಮೋದಿ 2025ಕ್ಕೆ ಎಲ್ಲರಿಗೂ ಶುಭಾಶಯಗಳು, ಈ ವರ್ಷ ಎಲ್ಲರಿಗೂ ಹೊಸ ಅವಕಾಶಗಳು, ಯಶಸ್ಸು ಮತ್ತು ಸಂತೋಷವನ್ನು ತರಲಿ. ಹೊಸ ವರ್ಷ ಎಲ್ಲರಿಗೂ ಆರೋಗ್ಯ ಮತ್ತು ಸಮೃದ್ಧಿಯೊಂದಿಗೆ ಆಶೀರ್ವದಿಸಲಿ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.

    ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅವರು ಹೊಸ ವರ್ಷದ ಶುಭಾಶಯಗಳನ್ನು ಹಂಚಿಕೊಂಡಿದ್ದು, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. 2025ರ ವರ್ಷವು ಎಲ್ಲರಿಗೂ ಸಂತೋಷ, ಸಾಮರಸ್ಯ ಮತ್ತು ಸಮೃದ್ಧಿಯನ್ನು ತರಲಿ. ಈ ಸಂದರ್ಭದಲ್ಲಿ, ಭಾರತ ಮತ್ತು ಜಗತ್ತಿಗೆ ಉಜ್ವಲ ಮತ್ತು ಸುಸ್ಥಿರ ಭವಿಷ್ಯವನ್ನು ರಚಿಸಲು ಒಟ್ಟಾಗಿ ಕೆಲಸ ಮಾಡುವ ನಮ್ಮ ಬದ್ಧತೆಯನ್ನು ನವೀಕರಿಸೋಣ ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.ಇದನ್ನೂ ಓದಿ: ವಂಚನೆ ಕೇಸಲ್ಲಿ ಐಶ್ವರ್ಯಗೌಡಗೆ ಜಾಮೀನು – ರಾತ್ರಿಯೇ ಜೈಲಿಂದ ರಿಲೀಸ್

  • ಹೊಸ ವರ್ಷದ ಸಂಭ್ರಮ – ದಕ್ಷಿಣ ಕಾಶಿ ಹಂಪಿಗೆ ಪ್ರವಾಸಿಗರ ದಂಡು

    ಹೊಸ ವರ್ಷದ ಸಂಭ್ರಮ – ದಕ್ಷಿಣ ಕಾಶಿ ಹಂಪಿಗೆ ಪ್ರವಾಸಿಗರ ದಂಡು

    ಬಳ್ಳಾರಿ: ಹೊಸ ವರ್ಷದ (New Year) ಮೊದಲ ದಿನದ ಹಿನ್ನೆಲೆ ಇಂದು ದಕ್ಷಿಣ ಕಾಶಿ ಹಂಪಿಗೆ (Hampi) ಪ್ರವಾಸಿಗರ ದಂಡು ಬರುತ್ತಿದೆ.ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

    ಹೊಸ ವರ್ಷ ಸಂಭ್ರಮಿಸಲು ಹಂಪಿಗೆ ಆಗಮಿಸ್ತಿರುವ ಪ್ರವಾಸಿಗರು ಬೆಳ್ಳಂಬೆಳಗ್ಗೆ ಹಂಪಿಯ ಮಾತಂಗ ಬೆಟ್ಟದಲ್ಲಿ ಜಮಾಯಿಸಿದ್ದಾರೆ. ಬೆಟ್ಟದ ತುತ್ತ ತುದಿ ಏರಿರುವ ಪ್ರವಾಸಿಗರು, ವರ್ಷದ ಮೊದಲ ಸೂರ್ಯೋದಯ ಕಣ್ತುಂಬಿಕೊಂಡರು. ರಾಜ್ಯ ಅಲ್ಲದೇ ದೇಶ-ವಿದೇಶಗಳಿಂದ ಬಂದಿದ್ದ ಪ್ರವಾಸಿಗರು ಸೂರ್ಯೋದಯ ವೀಕ್ಷಣೆ ಮಾಡಿ, ಬೆಟ್ಟದಲ್ಲೇ ದ್ಯಾನಕ್ಕೆ ಕುಳಿತರು.

    ಜಮಾಯಿಸಿದ್ದ ಪ್ರವಾಸಿಗರು ಬೆಟ್ಟದ ಮೇಲಿಂದ ಹಂಪಿಯ ಪ್ರಕೃತಿ ಸೌಂದರ್ಯ ಸವಿದರು. ಮತ್ತೊಂದೆಡೆ ತಂಡವಾಗಿ ಹಂಪಿಗೆ ಬರುತ್ತಿರುವ ಪ್ರವಾಸಿಗರು, ಸ್ಮಾರಕಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.ಇದನ್ನೂ ಓದಿ: ಇಂದು ಯೋಧ ದಿವೀನ್‌ ಅಂತ್ಯಕ್ರಿಯೆ – ಓದಿದ್ದ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ

  • ಬದಲಾವಣೆಗೇಕೆ ಹೊಸ ವರ್ಷ?

    ಬದಲಾವಣೆಗೇಕೆ ಹೊಸ ವರ್ಷ?

    ದಲಾವಣೆ ಜಗದ ನಿಯಮ. ಜಗತ್ತಿನಲ್ಲಿ ದಿನೇ ದಿನೇ ಒಂದಲ್ಲ ಒಂದು ರೀತಿಯಲ್ಲಿ ಪ್ರತಿಯೊಂದು ವಸ್ತು, ಜೀವಿ ಮುಂತಾದವು ಯಾವುದೋ ಒಂದು ರೀತಿಯಲ್ಲಿ ಬದಲಾವಣೆ ಆಗುತ್ತಲೇ ಇರುತ್ತದೆ.

    ಬದಲಾವಣೆಗಳಲ್ಲಿ ಕೆಲವೊಂದು ಕಣ್ಣಿಗೆ ಕಾಣಿಸುವ ಬದಲಾವಣೆ, ಕೆಲವೊಂದು ಕಣ್ಣಿಗೆ ಕಾಣಿಸದಿರುವ ಬದಲಾವಣೆ. ಆದರೆ ಎಲ್ಲದಕ್ಕೂ ತಾಳ್ಮೆಯಿಂದ ಕಾಯಬೇಕು ಅಷ್ಟೆ. ಆದರೆ ಮನುಷ್ಯನಲ್ಲಿ ತಾಳ್ಮೆ ಅನ್ನೋದೇ ಇಲ್ಲ. ಯಾವುದೋ ಒಂದು ರೀತಿಯ ನಿರ್ಧಾರದಿಂದ ಇಲ್ಲಸಲ್ಲದ ಅಚಾತುರ್ಯಗಳನ್ನು ಮಾಡಿಕೊಳ್ಳುತ್ತಾನೆ. ಇದು ಒಂದು ರೀತಿ ಮೊದಲಿನಿಂದಲೂ ನಡೆದುಕೊಂಡು ಬಂದ ಬಳುವಳಿಯಾಗಿದೆ. ಯಾರಿಗೂ ಒಂದುಕ್ಷಣ ಸುಮ್ಮನೇ ಕುಳಿತು ಯೋಚಿಸುವ ತಾಳ್ಮೆಯೇ ಇಲ್ಲ. ದೇವರು ಇದ್ದಾನೋ ಇಲ್ವೋ ಗೊತ್ತಿಲ್ಲ? ಹಣೆಬರಹ ಇದೆಯೋ ಇಲ್ವೋ ಗೊತ್ತಿಲ್ಲ? ದೇವರು ಏನಾದರೂ ಮಾಡಬಹುದು, ಹಣೆಬರಹದಲ್ಲಿ ಇದ್ದ ಹಾಗೆಯೇ ಆಗುತ್ತದೆ ಎಂದು ನಂಬಿ ಕುಳಿತುಕೊಳ್ಳುವವರೂ ಇದ್ದಾರೆ. ಆದರೆ ಅದನ್ನೆಲ್ಲಾ ನಂಬಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.

    ಮನುಷ್ಯ ಬದಲಾವಣೆಯನ್ನು ಬಯಸುತ್ತಾನೆ. ಆದರೆ ಅದಕ್ಕಾಗಿ ಕಾಯುವುದೂ ಇಲ್ಲ, ಅದಕ್ಕೆ ಬೇಕಾದ ಪರಿಶ್ರಮವನ್ನೂ ಪಡುವುದಿಲ್ಲ. ಮನುಷ್ಯ ಬಯಸುವುದು ದಿಡೀರ್ ಬದಲಾವಣೆ ಮತ್ತು ಪರಿಶ್ರಮ ರಹಿತ ಬದಲಾವಣೆ. ಇದು ಎಲ್ಲಾ ಸಮಯದಲ್ಲೂ ಸಾಧ್ಯವಿಲ್ಲ. ಜೀವನ ಎನ್ನುವುದು ಇಲ್ಲಿ ನಾವು ಏನು ಮಾಡುತ್ತೇವೆ? ಯಾಕೆ ಮಾಡುತ್ತೇವೆ? ಹೇಗೆ ಮಾಡುತ್ತೇವೆ? ಯಾರಿಗೋಸ್ಕರ ಮಾಡುತ್ತೇವೆ? ಎನ್ನುವುದರ ಮೇಲೆ ನಿಂತಿದೆ. ಒಂದು ಮಾತು ಮಾತ್ರ ಸತ್ಯ, ಇವತ್ತು ನಾವು ಮಾಡುವ ಪ್ರತಿಯೊಂದು ಕೆಲಸ ಕೂಡ ನಾಳಿನ ಭವಿಷ್ಯ ಆಗುತ್ತದೆ. ಏನೇ ಮಾಡಬೇಕು ಎಂದುಕೊಂಡಿದ್ದರೂ ಒಳ್ಳೆಯದನ್ನು ಮಾಡಿ, ಅದು ನಿಮ್ಮ ಭವಿಷ್ಯವನ್ನು ಒಳ್ಳೆಯದನ್ನಾಗಿ ಮಾಡುತ್ತದೆ. ಕೆಟ್ಟದ್ದನ್ನೇ ಮಾಡುವುದಾದರೆ ಮಾಡಿ, ಅದನ್ನು ಮುಂದೆ ನೀವು ಅನುಭವಿಸುತ್ತೀರಿ. ಅಷ್ಟೇ ಬೇರೆ ಯಾರಿಗೂ ಯಾವುದೇ ರೀತಿ ತೊಂದರೆಯಿಲ್ಲ. ಬೇರೆಯವರಿಗಾಗಿ ಒಳ್ಳೆಯದನ್ನು ಮಾಡಬೇಕಾ? ಬಿಡಬೇಕಾ? ನಿಮ್ಮ ಇಷ್ಟ. ಆದರೆ ಮಾಡಿದ ಮೇಲೆ ಅವರಿಂದ ಯಾವತ್ತೂ ಕೂಡ ಅದರ ಪ್ರತಿಫಲಕ್ಕಾಗಿ ಕಾಯಬೇಡಿ. ಸಿಗಬಹುದು, ಸಿಗದೇ ಇರಬಹುದು.

    ಭವಿಷ್ಯ ಎನ್ನುವುದು ಮಾತ್ರ ನಿಮ್ಮ ಇಂದಿನ ನಡೆವಳಿಕೆಯನ್ನು ಅವಲಂಬಿಸಿದೆ. ಭವಿಷ್ಯದಲ್ಲಿ ಉತ್ತಮ ರೀತಿಯಲ್ಲಿ, ಖುಷಿಯಿಂದ ಬದುಕಬೇಕು ಎಂದುಕೊಂಡಿದ್ದರೆ ಅದಕ್ಕೆ ಇಂದಿನಿಂದಲೇ ಪರಿಶ್ರಮ ಪಡಿ. ಏನೇ ಸಿಗುವುದಾದರೂ ಅದು ನಿಮಗೆ. ನೀವು ಪಟ್ಟ ಶ್ರಮಕ್ಕೆ ಪ್ರತಿಫಲ ಸಿಗದೇ ಇದ್ದರೆ, ಮುಂದುವರಿಯಿರಿ. ಒಂದಲ್ಲ ಒಂದಿನ ನಿಮ್ಮ ಭೂತಕಾಲದ ಪರಿಶ್ರಮ ಅವಶ್ಯವಾಗಿ ಭವಿಷ್ಯವಾಗುತ್ತದೆ. ಆದರೆ ತಾಳ್ಮೆಯಿಂದ ಕಾಯುತ್ತಲಿರಿ.

    ಯಾವುದಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದುಕೊಂಡಿದ್ದರೆ ನಾಳೆಗಾಗಿ ಕಾಯಬೇಡಿ. ರಾತ್ರಿ ಮಲಗಿದ ಮೇಲೆ ಬೆಳಿಗ್ಗೆ ಎದ್ದೇಳುತ್ತೆವಾ ಎಂದು ಗೊತ್ತಿಲ್ಲ. ಶುರು ಮಾಡಿ. ಕೆಲವೊಮ್ಮೆ ಯಾವುದೋ ಕೆಲಸ ಬಂದಾಗ ಇನ್ನೇನು 2 ತಿಂಗಳಲ್ಲಿ ವರ್ಷಾನೇ ಮುಗಿಯತ್ತದೆ ಎಂದು ಮುಂದಿನ ವರ್ಷ ಮಾಡಿದರೆ ಆಯಿತು ಎಂದು ಮುಂದಕ್ಕೆ ಹಾಕಬೇಡಿ. ಒಳ್ಳೆಯದನ್ನು ಮಾಡುವುದೇ ಆದರೆ ಯಾಕೆ ಮುಂದಕ್ಕೆ ತಳ್ಳಬೇಕು. ಈಗಲೇ ಬದಲಾಗಿ ನಾಳೆಗೋಸ್ಕರ ಕಾಯೋದು ಬೇಡ, ನಾಳೆನೇ ನಮಗೋಸ್ಕರ ಬೇಗ ಬರಲಿ ಎನ್ನುವ ಮನೋಭಾವ ಇರಬೇಕು. ಆಗುವುದೆಲ್ಲ ಒಳ್ಳೆಯ ಕಾರಣಕ್ಕೆ ಎಂದು ನಂಬಿ ತಾಳ್ಮೆಯಿಂದ ಕಾಯಿರಿ. ಅವಶ್ಯವಾಗಿ ನಿಮ್ಮಿಂದ ಯಾವುದೋ ರೀತಿಯಲ್ಲಿ ಒಂದು ಒಳ್ಳೆಯ ಬದಲಾವಣೆ ತರುವ ಕೆಲಸ ನಡೆಯುತ್ತದೆ. ನಿಮ್ಮ ಜೀವನದಲ್ಲಿ ಬದಲಾವಣೆ ಬಯಸುತ್ತಿದ್ದರೆ ತಡ ಮಾಡಬೇಡಿ, ಈಗಲೇ ಶುರು ಮಾಡಿ. ಕೆಲವೊಮ್ಮೆ ನಾಳೆ ಏನು ಆಗುತ್ತದೆ ಎಂದು ಗೊತ್ತಿರಲ್ಲ. ಇನ್ನೂ ಮುಂದಿನ ವರ್ಷದ ಬಗ್ಗೆ ಮಾತನಾಡುವುದು ಯಾಕೆ? ಈಗಿನ ಕ್ಷಣವನ್ನು ಅನುಭವಿಸಿ. ಖುಷಿಯಿಂದ ಇರಿ.

    ಬದಲಾವಣೆ ಎನ್ನುವುದು ಸುಲಭ ಕಾರ್ಯವಲ್ಲ. ಆದರೆ ಅದು ಯಾವಾಗಲೂ ಸಾಧ್ಯವಾಗುವಂತಹ ಸಂಗತಿ. ಅವಶ್ಯವಾಗಿ ಈಗಿನ ಬದಲಾವಣೆ ಭವಿಷ್ಯದ ಬದಲಾವಣೆಯನ್ನೆ ಮಾಡಬಹುದು ಯಾರಿಗೊತ್ತು? ಹೊಸ ವರ್ಷದಲ್ಲಿ ಮಾಡಬಹುದಾದ ವಿಷಯಗಳ ಕುರಿತು ಸಂಕಲ್ಪವಿರಲಿ. ಆದರೆ ತಡ ಬೇಡ. ಪ್ರತಿ ಕ್ಷಣವೂ ನಿಮ್ಮದು. ಅದೇ ನಿಮ್ಮ ಕೊನೆಕ್ಷಣ ಎಂದು ಅಂದುಕೊಂಡು ಮುಂದುವರೆಯಿರಿ.

    ಸರ್ವರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು!

  • ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    – ಬೆಳೆದೆ ಬೆಳೆಯುತ್ತೇನೆ ಎಂಬ ಛಲ ಇರಲಿ 

    2024 ಹೋಗಿ 2025 ಬಂದಿದೆ. ಹೊಸ ವರ್ಷದ (New Year) ಆರಂಭದಲ್ಲಿ ಹಲವು ಮಂದಿ ಈ ವರ್ಷ ನಾನು ಈ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಸಂಕಲ್ಪ ಕೈಗೊಳ್ಳುತ್ತಾರೆ. ನಾನಾ ರೀತಿಯ ರೆಸಲ್ಯೂಷನ್‌ ಹಾಕಿಕೊಳ್ಳುತ್ತಾರೆ. ಈ ವರ್ಷ ಕನಸಿನ ಯೋಜನೆಯನ್ನು (Dream Project) ಪೂರ್ಣಗೊಳಿಸುತ್ತೇನೆ, ಮತ್ತೊಂದು ಉದ್ಯಮವನ್ನ ಆರಂಭಿಸುತ್ತೇನೆ, ವೃತ್ತಿಗೆ ಬೇಕಾಗಿರುವ ಕೌಶಲ್ಯವನ್ನು ಆನ್‌ಲೈನ್‌ನಲ್ಲಿ ಕಲಿಯುತ್ತೇನೆ, ಹೊಸ ಸ್ಥಳಕ್ಕೆ ಭೇಟಿ ನೀಡುತ್ತೇನೆ. ವಾರದಲ್ಲಿ ಒಂದು ಪುಸ್ತಕವಾದರೂ ಓದುತ್ತೇನೆ. ಹೀಗೆ ಮಾಡಬೇಕಾದ ಹಲವು ಪಟ್ಟಿಗಳನ್ನು ಮಾಡುತ್ತಾರೆ.

    ಈ ರೀತಿ ಪಟ್ಟಿ ಮಾಡಿದವರ ಪೈಕಿ ಹಲವು ಮಂದಿಯ ಬಾಯಿಯಲ್ಲಿ ಜನವರಿ ಮೊದಲ ವಾರ ಮಾತ್ರ ಈ ಮಾಡಬೇಕಾದ ಕೆಲಸಗಳ ಪಟ್ಟಿ ಓಡಾಡುತ್ತಿರುತ್ತದೆ. ಎರಡನೇ ವಾರದಿಂದ, ದಿನಗಳು ಮುಂದೂಡಿಕೆ ಆಗುತ್ತಲೇ ಇರುತ್ತದೆ. ದಿನಗಳು ಮುಂದೂಡಿ ಮುಂದೂಡಿ ಕೊನೆಗೆ ವರ್ಷವೇ ಪೂರ್ಣಗೊಳ್ಳುತ್ತದೆ. ಮತ್ತೆ ಪುನ: ಮುಂದಿನ ವರ್ಷ ಈ ಸಂಕಲ್ಪಗಳ ಬಗ್ಗೆ ಮಾತು ಬರುತ್ತದೆ. ಈ ರೀತಿ ಸಂಕಲ್ಪಗಳನ್ನು ಮಾಡಿ ಯಾವುದೇ ಪ್ರಯೋಜನ ಇಲ್ಲ. ಈ ಕಾರಣಕ್ಕೆ ಈ ಬಾರಿ ಹಲವು ರೆಸಲ್ಯೂಷನ್‌ ಕೈಗೊಳ್ಳದೇ ಒಂದೋ ಎರಡು ಮಾಡಲು ಪ್ರಯತ್ನಿಸಿ. ಎಲ್ಲವನ್ನೂ ಒಟ್ಟಿಗೆ ಆರಂಭಿಸಿದರೆ ಅದು ವಿಫಲವಾಗುತ್ತದೆ. ಆದರ ಬದಲು ಒಂದೊಂದನ್ನೇ ಆರಂಭಿಸುತ್ತಾ ಹೋದರೆ ಆ ರೆಸಲ್ಯೂಷನ್‌ ಪೂರ್ಣಗೊಳಿಸುವುದು ಸುಲಭ.

    ಒಂದೊಂದು ಸಂಕಲ್ಪಗಳು ಪೂರ್ಣಗೊಂಡರೆ ಒಂದು ಸಣ್ಣ ಯುದ್ಧ ಗೆದ್ದಂತೆ. ಸಣ್ಣ ಸಣ್ಣ ಯುದ್ಧ ಗೆದ್ದ ಬಳಿಕವಷ್ಟೇ ರಾಜನಾದವನು ಮಹಾರಾಜನಾಗುತ್ತಾನೆ. ಈ ಸಾಧನೆ ಪೂರ್ಣಗೊಳ್ಳುವ ಸಂದರ್ಭದಲ್ಲಿ ಅನುಮಾನ, ಅವಮಾನವಾಗುವುದು ಸಹಜ. ಯಾರೇ ದೊಡ್ಡ ವ್ಯಕ್ತಿಯ ಆತ್ಮಚರಿತ್ರೆ ಓದಿದರೆ ಅದರಲ್ಲಿ ತನಾಗದ ಅವಮಾನ, ಅನುಮಾನದ ಬಗ್ಗೆ ಒಂದು ಅಧ್ಯಾಯ ಇರುತ್ತದೆ. ಈ ಕಾರಣಕ್ಕೆ ನಮ್ಮ ಸಾಧನೆ ಹೇಗಿರಬೇಕು ಅಂದರೆ ನಮ್ಮ ಯೋಗ್ಯತೆ ಬಗ್ಗೆ ಅನುಮಾನ ಪಟ್ಟವರೆಲ್ಲಾ ನಮ್ಮನ್ನು ಮಾತನಾಡಿಸುವ ಮೊದಲು ಅವರ ಯೋಗ್ಯತೆ ಬಗ್ಗೆ ಯೋಚಿಸುವಂತಿರಬೇಕಂತೆ. ಈ ರೀತಿ ಸಾಧನೆ ಮಾಡಬೇಕಾದರೆ ಕಠಿಣ ಪರಿಶ್ರಮ ಅಗತ್ಯ.

    ಕಠಿಣ ಪರಿಶ್ರಮದ ಜೊತೆ ನಾವು ಆಡುವ ಮಾತಿನ ಮೇಲೆ ಹಿಡಿತ ಇರಬೇಕು. ಕೇವಲ ಮಾತುಗಳು ಆಡಲು ಬಂದರೆ ಸಾಲದು. ಯಾರ ಜೊತೆ ಹೇಗೆ ಮಾತನಾಡಬೇಕೆಂಬ ಅರಿವಿರಬೇಕು. ಈ ಕಾರಣಕ್ಕೆ ನಾಲಿಗೆಗೆ ಜಗತ್ತಿನಲ್ಲಿ ವಿಷ ಮತ್ತು ಅಮೃತ ಇರುವ ಏಕೈಕ ಜಾಗ ಎಂಬ ಹೆಸರು ಬಂದಿದೆ. ಮಾತೇ ಬಂಡವಾಳ ಹೌದು. ಆದರೆ ಸ್ನೇಹಿತರು ಸರಿ ಇಲ್ಲದೇ ಇದ್ದರೆ ಸಂಗ್ರಹಗೊಂಡ ಬಂಡವಾಳ ಕ್ಷಣ ಮಾತ್ರದಲ್ಲಿ ಖಾಲಿಯಾದಿತು.

    ಕೊನೆಯದಾಗಿ ಜೀವನದಲ್ಲಿ ನಾವು ಭೂಮಿಯ ಮೇಲಿರುವ ಹುಲ್ಲಿನಂತೆ ಬೆಳೆಯಬೇಕು. ಯಾರು ಎಷ್ಟೇ ಹೀಯಾಳಿಸಿದರೂ ನಮ್ಮ ಆಸೆ ಕನಸುಗಳನ್ನು ಕತ್ತರಿಸಿದರೂ ಸಹ ಮತ್ತೆ ಬೆಳೆದೆ ಬೆಳೆಯುತ್ತೇನೆ ಎನ್ನುವ ಛಲ ಹೊಂದಿರಬೇಕು. ಈ ಛಲ ಎಲ್ಲರಿಗೂ ಬರಲಿ. ಹೊಸ ವರ್ಷ ಎಲ್ಲರಿಗೂ ಹರ್ಷ ತರಲಿ. 2025ರಲ್ಲಿ ಕನಸುಗಳು ನನಸಾಗಲಿ.

  • ಗುಡ್‍ಬೈ 2024, ವೆಲ್‍ಕಂ 2025 – ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದ ಜನ

    ಗುಡ್‍ಬೈ 2024, ವೆಲ್‍ಕಂ 2025 – ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿದ ಜನ

    ಗುಡ್‍ಬೈ 2024, ವೆಲ್‍ಕಂ 2025”. ಹೊಸ ವರ್ಷಕ್ಕೆ (New Year) ಭಾರತ ಕಾಲಿಟ್ಟಿದ್ದು, ಕರ್ನಾಟಕ ಜನತೆ 2025ನ್ನು ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿ ಸ್ವಾಗತಿಸಿದ್ದಾರೆ.

    ನಗರದಲ್ಲಿ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ (Bengaluru) ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಇದನ್ನೂ ಓದಿ: ಸರ್ಕಾರ ನಡೀತಿರೋದೆ ಮದ್ಯಪ್ರಿಯರಿಂದ, ಆದ್ರೂ ಏನ್‌ ಅನ್ಯಾಯ ಗುರು? – ಯುವಕನ ಮಾತು

    ಮೊಬೈಲ್‌ಗಳಂತೂ (Mobile) ಫುಲ್‌ ಬ್ಯೂಸಿಯಾಗಿದ್ದವು. ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ, ಕಿರಿಯರಿಗೆ ಹೊಸ ವರ್ಷದ ಶುಭಾಶಯದ ಸಂದೇಶಗಳನ್ನು ಕಳುಹಿಸುವುದರಲ್ಲಿ ಜನರು ತಲ್ಲಿನರಾಗಿದ್ದರು. ಪರಿಣಾಮ ಹಲವು ಸ್ಥಳಗಳಲ್ಲಿ ನೆಟ್‌ವರ್ಕ್‌ ಜಾಮ್‌ ಆಗಿತ್ತು. ನೆಟ್‌ವರ್ಕ್ ಒತ್ತಡದಿಂದ ಮೆಸೇಜ್‌ ತಡವಾಗಿ ತಲುಪುತ್ತಿದ್ದವು.

    ಬಾರ್, ಪಬ್‌ಗಳು ವಿಶೇಷ ಆಫರ್‌ ನೀಡಿದ್ದವು. ಪರಿಣಾಮ ಪಾನ ಪ್ರಿಯರು ರಾತ್ರಿಯಿಂದಲೇ ಪಾರ್ಟಿ ಮಾಡುತ್ತಾ ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದರು. ಇದರಿಂದ ಭರ್ಜರಿ ವ್ಯಾಪಾರವೂ ನಡೆಯಿತು. ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.

    ಬೇಕರಿಗಳಲ್ಲಿ ಹೊಸ ವರ್ಷದ ಕೇಕ್‌ಗಳಿಗೆ ಭಾರೀ ಬೇಡಿಕೆ ಇತ್ತು. ಬಡಾವಣೆಯ ಜನರು ರಾತ್ರಿ 12 ಗಂಟೆ ಆಗುತ್ತಿದ್ದಂತೆ ರಸ್ತೆಯಲ್ಲಿ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು.

     

    ಬೆಂಗಳೂರಿನಲ್ಲಿ ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.

    ಹೊಸ ವರ್ಷಕ್ಕೆ ಕ್ಯಾಲೆಂಡರ್‌ ಬದಲಾಯಿಸಿದ್ದು ಆಯ್ತು. ಈಗ ಸಂಭ್ರಮಿಸುವ, ಕುಣಿದು ಕುಪ್ಪಳಿಸುವ ಘಳಿಗೆ. ಹೊಸ ವರ್ಷದಲ್ಲಿ ಹೊಸ ತುಡಿತವಿರಲಿ. ಪಾಸಿಟಿವ್‌ ಆಲೋಚನೆಗಳಿರಲಿ. ಯಶಸ್ಸು ಕಡೆಗೆ ದಿಟ್ಟ ನಿಲುವಿರಲಿ. ಎಲ್ಲರೊಟ್ಟಿಗೆ ಪ್ರೀತಿ-ವಿಶ್ವಾಸದಿಂದ ಸಾಗುವ ಭಾವನೆ ಇರಲಿ. ಎಲ್ಲರೂ ಒಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸೋಣ.

     

  • ಹೊಸ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ

    ಹೊಸ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್‌, ಆಸ್ಟ್ರೇಲಿಯಾ

    ಭಾರತ (India) 2025ಕ್ಕೆ ವೆಲ್‌ಕಮ್ ಹೇಳಲು ಇನ್ನೂ ಸ್ವಲ್ಪ ಹೊತ್ತಿದೆ. ಆದರೆ ಜಗತ್ತಿನ ಹಲವು ದೇಶಗಳು ಈಗಾಗಲೇ ಹೊಸ ವರ್ಷವನ್ನು (New Year) ಸ್ವಾಗತಿಸಿವೆ.

    ಎಲ್ಲರಿಗಿಂತ ಮೊದಲು ಫೆಸಿಫಿಕ್ ಮಹಾಸಾಗರದ ಕಿರಿಬಾಟಿ ದ್ವೀಪ, ನಂತರ ನ್ಯೂಜಿಲೆಂಡ್ (New Zealand), ಆಸ್ಟ್ರೇಲಿಯಾ (Australia) ದೇಶಗಳು ಹೊಸ ವರ್ಷಕ್ಕೆ ಕಾಲಿಟ್ಟಿವೆ. ಜನ ಸಂಭ್ರಮದಿಂದ 2025ನ್ನು ಸ್ವಾಗತಿಸಿದ್ದಾರೆ.

    ಜಪಾನ್, ದಕ್ಷಿಣ ಕೊರಿಯಾ, ಉತ್ತರ ಕೊರಿಯಾ ಸಹ ಹೊಸ ವರ್ಷಕ್ಕೆ ಹೆಜ್ಜೆ ಇಟ್ಟಿವೆ. ಭೂತಾನ್, ನೇಪಾಳ, ಬಾಂಗ್ಲಾದೇಶಗಳು ನಮಗಿಂತ ಅರ್ಧಗಂಟೆ ಮೊದಲು 2024ಕ್ಕೆ ಗುಡ್‌ಬೈ ಹೇಳಲಿವೆ. ಭಾರತೀಯ ಕಾಲಮಾನದ ಪ್ರಕಾರ ಗುರುವಾರ ಬೆಳಗ್ಗೆ 10:30ಕ್ಕೆ ಅಮೆರಿಕದಲ್ಲಿ ಹೊಸ ವರ್ಷ ಮೊದಲಾಗಲಿದೆ. ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಬಂದೇ ಬಿಡ್ತು ಹೊಸ ವರ್ಷ – ಹೇಗಿದೆ ಯುವಜನರ ಜೋಶ್‌?

    ಜನವರಿ 1ನ್ನು ಚೀನಾ, ಸೌದಿ ಅರೇಬಿಯಾ, ಇಸ್ರೇಲ್, ವಿಯೆಟ್ನಾಂ ದೇಶಗಳು ಹೊಸ ವರ್ಷವೆಂದು ಪರಿಗಣಿಸುವುದಿಲ್ಲ.

     

  • ಹೊಸ ವರ್ಷಾಚರಣೆಗೆ ಕ್ಷಣಗಣನೆ – ಸುಪ್ರಸಿದ್ಧ ಗೋಲಗುಂಬಜ್‌ನಲ್ಲಿ ಜನವೋ ಜನ

    ಹೊಸ ವರ್ಷಾಚರಣೆಗೆ ಕ್ಷಣಗಣನೆ – ಸುಪ್ರಸಿದ್ಧ ಗೋಲಗುಂಬಜ್‌ನಲ್ಲಿ ಜನವೋ ಜನ

    ವಿಜಯಪುರ: ಹೊಸ ವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ಜಿಲ್ಲೆಯ ಸುಪ್ರಸಿದ್ಧ ಗೋಲಗುಂಬಜ್‌ನಲ್ಲಿ (Golgumbaz) ಪ್ರವಾಸಿಗರ ದಂಡು ಬರುತ್ತಿದೆ.ಇದನ್ನೂ ಓದಿ: New Year 2025: ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರ ಜಾತ್ರೆ – ಮಸಾಲೆ ಹಚ್ಚಿಕೊಂಡು ಕಾಯುತ್ತಿರುವ ತಾಜಾ ಮೀನು

    2025ನ್ನು ಸ್ವಾಗತಿಸಲು ಕಾತುರದಿಂದ ಕಾಯುತ್ತಿರುವ ಜನರು, ಕುಟುಂಬ ಸಮೇತರಾಗಿ ಬಂದು ಗೋಲಗುಂಬಜ್ ವೀಕ್ಷಿಸುತ್ತಿದ್ದಾರೆ.

    ಸ್ಥಳೀಯರು ಮಾತ್ರವಲ್ಲದೇ ಬೇರೆ ಬೇರೆ ಕಡೆಯಿಂದ ಜನರು ಆಗಮಿಸುತ್ತಿದ್ದಾರೆ. ಇನ್ನೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಕೆಲ ಶಾಲೆಗಳಿಂದ ಶೈಕ್ಷಣಿಕ ಪ್ರವಾಸಕ್ಕಾಗಿ ಗೋಲಗುಂಜ್ ವೀಕ್ಷಣೆಗೆ ಬರುತ್ತಿದ್ದಾರೆ.ಇದನ್ನೂ ಓದಿ: ಅಂಗನವಾಡಿಗೆ ತೆರಳಿದ್ದ 3ರ ಬಾಲಕಿಗೆ ಹಾವು ಕಚ್ಚಿ ಸಾವು

     

  • ಹೊಸ ವರ್ಷಾಚರಣೆಗೆ ನಂದಿಗಿರಿಧಾಮ ಬಂದ್ – ಗೆಸ್ಟ್‌ಹೌಸ್‌ ಬುಕ್ಕಿಂಗ್ ಸಹ ರದ್ದು!

    ಹೊಸ ವರ್ಷಾಚರಣೆಗೆ ನಂದಿಗಿರಿಧಾಮ ಬಂದ್ – ಗೆಸ್ಟ್‌ಹೌಸ್‌ ಬುಕ್ಕಿಂಗ್ ಸಹ ರದ್ದು!

    ಚಿಕ್ಕಬಳ್ಳಾಪುರ: ಹೊಸವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ವಿಶ್ವವಿಖ್ಯಾತ ನಂದಿಗಿರಿಧಾಮಕ್ಕೆ (Nandi Giridhama) ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸುವಂತೆ ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ಆದೇಶಿಸಿದ್ದಾರೆ.ಇದನ್ನೂ ಓದಿ: 179 ಮಂದಿ ಸಾವು ಪ್ರಕರಣ – ದೇಶದ ಎಲ್ಲಾ ಬೋಯಿಂಗ್ 737-800 ವಿಮಾನ ಪರೀಕ್ಷೆಗೆ ಮುಂದಾದ ದ. ಕೊರಿಯಾ

    ಚಿಕ್ಕಬಳ್ಳಾಪುರದ (Chikkaballapura) ವಿಶ್ವವಿಖ್ಯಾತ ನಂದಿಗಿರಿಧಾಮವನ್ನು ಹೊಸವರ್ಷಾಚರಣೆ ಹಿನ್ನೆಲೆ ಬಂದ್ ಮಾಡಲಾಗಿದ್ದು, ಡಿ.31 ರಂದು ಸಂಜೆ 6 ರಿಂದ ಜನವರಿ 1 ಬೆಳಿಗ್ಗೆ 7ರವರೆಗೆ ಪ್ರವಾಸಿಗರು, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

    ಜೊತೆಗೆ ನಂದಿಗಿರಿಧಾಮದ ಮೇಲಿನ ಅತಿಥಿ ಗೃಹಗಳ ಬುಕ್ಕಿಂಗ್ ಸಹ ರದ್ದು ಮಾಡಲಾಗಿದೆ. ಜ.01 ರಂದು ಬೆಳಿಗ್ಗೆ 07 ಗಂಟೆಯ ನಂತರ ಪ್ರವಾಸಿಗರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.ಇದನ್ನೂ ಓದಿ: ‘ಗೇಮ್ ಚೇಂಜರ್’ಗಾಗಿ ತಲೆ ಎತ್ತಿದ ರಾಮ್ ಚರಣ್ 256 ಅಡಿ ಎತ್ತರದ ಕಟೌಟ್

     

     

  • ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ನಗರದಲ್ಲಿ ಹೆಚ್ಚುವರಿ ಬಿಎಂಟಿಸಿ (BMTC) ಬಸ್‌ಗಳು ಕಾರ್ಯನಿರ್ವಹಿಸಲಿವೆ.

    ಡಿ.31 ರಾತ್ರಿಯಿಂದ ಜ.1ರಂದು ಮುಂಜಾನೆ 2 ಗಂಟೆಯವರೆಗೂ ಎಂ.ಜಿ.ರಸ್ತೆಯಿಂದ (MG Road) ನಗರದ ವಿವಿಧ ಭಾಗಗಳಿಗೆ ಹೆಚ್ಚು ಬಸ್‌ಗಳು ಸಂಚರಿಸಲಿವೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ.ಇದನ್ನೂ ಓದಿ: ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ವಂಚನೆ – ಐಶ್ವರ್ಯಗೌಡ, ಪತಿಗೆ 14 ದಿನ ಜೈಲು

    ಬಸ್ ಮಾರ್ಗ ಸಂಖ್ಯೆ                     ಎಲ್ಲಿಂದ                               ಎಲ್ಲಿಗೆ
    ಜಿ-3                                          ಬ್ರಿಗೇಡ್ ರಸ್ತೆ                 ಎಲೆಕ್ಟ್ರಾನಿಕ್ಸ್ ಸಿಟಿ
    ಜಿ-4 ಜಿಗಣಿ
    ಜಿ-2                                 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ       ಸರ್ಜಾಪುರ
    ಜಿ-6                                           ಕೆಂಗೇರಿ                        ಕೆ.ಹೆಚ್.ಬಿ. ಕ್ವಾರ್ಟ್ರ್ಸ್‌
    ಜಿ-7                                  ಜನಪ್ರಿಯ ಟೌನ್ ಶಿಪ್
    ಜಿ-8                                     ನೆಲಮಂಗಲ
    ಜಿ-9                            ಯಲಹಂಕ ಉಪನಗರ 5ನೇ ಹಂತ
    ಜಿ-10                                      ಯಲಹಂಕ
    ಜಿ-11                                       ಬಾಗಲೂರು
    317-ಜಿ                                   ಹೊಸಕೋಟೆ
    ಎಸ್‌ಬಿಎಸ್-13ಕೆ                       ಚನ್ನಸಂದ್ರ
    ಎಸ್‌ಬಿಎಸ್-1ಕೆ                       ಕಾಡುಗೋಡಿ
    13                                          ಬನಶಂಕರಿ

    ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಿಂದಲೂ ಹೆಚ್ಚುವರಿ ಬಸ್ ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆಗನುಸಾರ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.ಇದನ್ನೂ ಓದಿ: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು

  • ನಕಲಿ ಅಡ್ರೆಸ್ ಕೊಟ್ಟು ಮಾದಕ ವಸ್ತು ಕೊರಿಯರ್ – 2 ತಿಂಗಳಾದ್ರೂ ಪತ್ತೆಯಾಗಿಲ್ಲ ವಿಳಾಸ

    ನಕಲಿ ಅಡ್ರೆಸ್ ಕೊಟ್ಟು ಮಾದಕ ವಸ್ತು ಕೊರಿಯರ್ – 2 ತಿಂಗಳಾದ್ರೂ ಪತ್ತೆಯಾಗಿಲ್ಲ ವಿಳಾಸ

    ಬೆಂಗಳೂರು: ನ್ಯೂ ಇಯರ್ (New Year) ಹತ್ತಿರವಾಗುತ್ತಿದ್ದಂತೆ ಮಾದಕ ವಸ್ತುಗಳ ಮೂಲಗಳ ಬಗ್ಗೆ ಹಲವು ಕುತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ.

    ವಿದೇಶಗಳಿಂದ ವಿವಿಧ ಬಗೆಯ ಡ್ರಗ್ಸ್ ಬೆಂಗಳೂರಿಗೆ ಕೊರಿಯರ್‌ಗಳ ಮೂಲಕ ಬರುತ್ತಿವೆ ಎಂಬ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿದ ಸಿಸಿಬಿ ಪೊಲೀಸರು (CCB Police) ಕಳೆದ ಅಕ್ಟೋಬರ್ 20ರಂದು ಬೆಂಗಳೂರಿನ (Bengaluru) ಚಾಮರಾಜಪೇಟೆಯ (Chamarajpet) ಫಾರಿನ್ ಪೋಸ್ಟ್ ಆಫೀಸ್ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅನುಮಾನಾಸ್ಪದ 3,500 ಕೊರಿಯರ್‌ಗಳನ್ನು ಪರಿಶೀಲಿಸಿದ ವೇಳೆ 606 ಕೊರಿಯರ್‌ಗಳಲ್ಲಿ ಬರೋಬ್ಬರಿ 21 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿತ್ತು. ಇದನ್ನೂ ಓದಿ: ಸಿರಿಯಾದಲ್ಲಿ ಭಾರತೀಯ ಪ್ರಜೆಗಳು ಸೇಫ್‌ – ರಾಯಭಾರ ಕಚೇರಿಯಿಂದ ಮಾಹಿತಿ

    ಡ್ರಗ್ಸ್ ಪತ್ತೆಯಾದ 606 ಕೊರಿಯರ್‌ಗಳ ಬೆನ್ನತ್ತಿದ ಪೊಲೀಸರಿಗೆ ಶಾಕ್ ಕಾದಿತ್ತು. ಯಾಕಂದರೆ ಅಷ್ಟೂ ಕೊರಿಯರ್‌ಗಳ ಅಡ್ರೆಸ್‌ಗಳು ನಕಲಿಯಾಗಿದ್ದವು. ಕಳೆದ ಎರಡು ತಿಂಗಳಲ್ಲಿ ಒಂದೇ ಒಂದು ಅಡ್ರೆಸ್ ಕೂಡ ಪೊಲೀಸರಿಗೆ ಪತ್ತೆಯಾಗಿಲ್ಲ. ಈ ನಡುವೆ ನ್ಯೂ ಇಯರ್ ಕೂಡ ಹತ್ತಿರ ವಾಗುತ್ತಿದ್ದು, ಶನಿವಾರವಷ್ಟೇ ಪೋಸ್ಟ್ ಆಫೀಸ್‌ಗಳು, ಖಾಸಗಿ ಕೋರಿಯರ್ ಆಫೀಸ್‌ಗಳು, ಟ್ರಾವೆಲ್ ಏಜೆನ್ಸಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ.  ಇದನ್ನೂ ಓದಿ: ಸರ್ಕಾರದ ಬೊಕ್ಕಸ ಬರಿದಾಗಿ ಕಳಪೆ ಔಷಧ ಖರೀದಿ, ಬಾಣಂತಿಯರ ಸಾವಿಗೆ ಇದೇ ಕಾರಣ: ಜೋಶಿ

    ತಪ್ಪು ಅಡ್ರೆಸ್ ಇರುವ ಕೊರಿಯರ್‌ಗಳು ಅಡ್ರೆಸ್‌ಗೆ ಹೋಗಿ ವಾಪಸ್ ಬರುತ್ತವೆ. ನಂತರ ಕೊರಿಯರ್ ಆಫೀಸ್‌ಗಳಿಗೆ ಬಂದು ಬಳಕೆದಾರರು, ಅಥವಾ ಪೆಡ್ಲರ್‌ಗಳು ಡ್ರಗ್ಸ್ ಇರುವ ಕೋರಿಯರ್ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲ ಕಡೆಗಳಲ್ಲಿ ಅಲ್ಲಿನ ಸಿಬ್ಬಂದಿಗಳೇ ಈ ದಂಧೆಯಲ್ಲಿ ಭಾಗಿಯಾಗಿದ್ದು, ತಲುಪಿಸಬೇಕಾದ ಕಡೆಗೆ ತಲುಪಿಸುತ್ತಿದ್ದಾರೆ. ಸದ್ಯ ಇನ್ನೂ ತನಿಖೆ ಮುಂದುವರೆದಿದ್ದು, ಇನ್ನೂ ಯಾವೆಲ್ಲಾ ರೀತಿಯ ಪೆಡ್ಲಿಂಗ್ ನಡೆಯುತ್ತಿದೆ ಎಂಬುದು ತನಿಖೆ ನಂತರವೇ ಗೊತ್ತಾಗಬೇಕಿದೆ. ಇದನ್ನೂ ಓದಿ: ಬಳ್ಳಾರಿ ಬಳಿಕ ಬೆಳಗಾವಿಯಲ್ಲೂ ಬಾಣಂತಿಯರು, ಶಿಶುಗಳ ಸಾವು!