Tag: New Year Party

  • ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು

    ರೆಸ್ಟೋರೆಂಟ್ ಮಾಲೀಕನ ಪುತ್ರ, ಸಿಬ್ಬಂದಿಯಿಂದ ಹಲ್ಲೆ – ನ್ಯೂ ಇಯರ್‌ಗೆ ಗೋವಾಗೆ ತೆರಳಿದ್ದ ಆಂಧ್ರದ ಯುವಕ ಸಾವು

    – ಯುವತಿಯ ವಿಚಾರವಾಗಿ ಶುರುವಾದ ಜಗಳ ಸಾವಿನಲ್ಲಿ ಅಂತ್ಯ

    ಅಮರಾವತಿ: ನ್ಯೂ ಇಯರ್ ಪಾರ್ಟಿಗೆಂದು (New Year Party) ಗೋವಾಗೆ (Goa) ತೆರಳಿದ್ದ ಆಂಧ್ರ (Andhra Pradesh) ಮೂಲದ ಯುವಕನಿಗೆ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ಹಲ್ಲೆ ನಡೆಸಿದ ಪರಿಣಾಮ ಚಿಕಿತ್ಸೆ ಫಲಿಸದೇ ಯುವಕ ಸಾವನ್ನಪ್ಪಿದ್ದಾನೆ.

    ರವಿತೇಜ ಮೃತ ಯುವಕ. ರವಿತೇಜ ಸೇರಿದಂತೆ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಮ್‌ನ ಸ್ನೇಹಿತರ ಗುಂಪು ಹೊಸ ವರ್ಷದ ಸಂಭ್ರಮಾಚಾರಣೆಯ ಸಲುವಾಗಿ ಗೋವಾಗೆ ತೆರಳಿತ್ತು. ಸ್ನೇಹಿತರ ಗುಂಪಿನಲ್ಲಿದ್ದ ಮಹಿಳೆಯೊಬ್ಬರ ಜೊತೆ ರೆಸ್ಟೋರೆಂಟ್ ಮಾಲೀಕನ ಪುತ್ರ ಅನುಚಿತವಾಗಿ ವರ್ತಿಸಿದ್ದನ್ನು ರವಿತೇಜ ಪ್ರಶ್ನಿಸಿದ್ದಾನೆ. ಈ ವೇಳೆ ಜಗಳ ಶುರುವಾಗಿದೆ. ಬಳಿಕ ಜಗಳ ತಾರಕಕ್ಕೇರಿ ರೆಸ್ಟೋರೆಂಟ್ ಮಾಲೀಕನ ಪುತ್ರ ಹಾಗೂ ಸಿಬ್ಬಂದಿ ರವಿತೇಜನ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ವೇಳೆ ರವಿತೇಜಗೆ ಗಂಭೀರ ಗಾಯಗಳಾಗಿತ್ತು. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ರವಿತೇಜ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಕಾಂಗ್ರೆಸ್‌ನ ಪಾಪದ ಕೊಡ ತುಂಬಿದೆ, ದೇವರೇ ಶಿಕ್ಷೆ ಕೊಡ್ತಾನೆ: ಕುಮಾರಸ್ವಾಮಿ

    ಘಟನೆಯ ಬಳಿಕ ತಾಡೆಪಲ್ಲಿಗುಡೆಂ ಶಾಸಕ ಬೋಳಿಸೆಟ್ಟಿ ಶ್ರೀನಿವಾಸ್ ಗೋವಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಬಳಿಕ ವಿಶೇಷ ವಿಮಾನದ ಮೂಲಕ ಮೃತದೇಹವನ್ನು ಹುಟ್ಟೂರಿಗೆ ಸಾಗಿಸಲು ಅನುಕೂಲ ಮಾಡಿಕೊಟ್ಟರು. ತಾಡೆಪಲ್ಲಿಗುಡೆಂನಲ್ಲಿ ರವಿತೇಜ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಗಿದೆ.  ಇದನ್ನೂ ಓದಿ: ಡಿಕೆಶಿಗೂ ಶಾಕ್, ಪವರ್ ಶೇರ್ ಕುತೂಹಲಿಗಳಿಗೂ ಶಾಕ್ – ಸಿಎಂ ಡಿನ್ನರ್‌ ಸಭೆ ಇನ್‌ಸೈಡ್‌ ಸ್ಟೋರಿ

  • ಪಬ್‌ನಲ್ಲಿ ಡ್ರಿಂಕ್ಸ್ ಮಾಡುವಂತೆ ಒತ್ತಾಯಿಸಿ ಯುವತಿ ಜೊತೆ ಅಸಭ್ಯ ವರ್ತನೆ – ಕೇಸ್ ದಾಖಲು

    ಪಬ್‌ನಲ್ಲಿ ಡ್ರಿಂಕ್ಸ್ ಮಾಡುವಂತೆ ಒತ್ತಾಯಿಸಿ ಯುವತಿ ಜೊತೆ ಅಸಭ್ಯ ವರ್ತನೆ – ಕೇಸ್ ದಾಖಲು

    ಬೆಂಗಳೂರು: ನ್ಯೂ ಇಯರ್ ಪಾರ್ಟಿ ವೇಳೆ ಯುವತಿ ಜೊತೆ ಅಸಭ್ಯ ವರ್ತನೆ ಮಾಡಿದ ಘಟನೆ ಬೆಳ್ಳಂದೂರಿನ (Bellanduru) ಪಬ್‌ವೊಂದರಲ್ಲಿ ನಡೆದಿದೆ.ಇದನ್ನೂ ಓದಿ: ಕೌಟುಂಬಿಕ ಕಲಹ – ನದಿಗೆ ಹಾರಿ ಪ್ರಾಣ ಬಿಟ್ಟ ಇಂಜಿನಿಯರ್

    ಒಡಿಶಾ (Odisha) ಮೂಲದ ಯುವತಿ ಬಾಯ್‌ಫ್ರೆಂಡ್ ಜೊತೆ ನ್ಯೂ ಇಯರ್ ಪಾರ್ಟಿಗೆ ತೆರಳಿದ್ದರು. ಈ ವೇಳೆ ಪಾರ್ಟಿ ಮಾಡುತ್ತಿದ್ದಾಗ ಕಿಡಿಗೇಡಿಯೊಬ್ಬ ಮದ್ಯ ಸೇವಿಸುವಂತೆ ಆಫರ್ ಮಾಡಿದ್ದ. ಆದರೆ ಯುವತಿ ಮದ್ಯವನ್ನು ನಿರಾಕರಿಸಿದ್ದಳು. ಆಗ ಎಣ್ಣೆ ಸೇವಿಸಲೇಬೇಕೆಂದು ಒತ್ತಾಯ ಮಾಡಿ ಅಸಭ್ಯ ವರ್ತನೆ ಮಾಡಿದ್ದ.

    ರಿಜೆಕ್ಟ್ ಮಾಡಿದಾಗ ಮಾತಿಗೆ ಮಾತು ಬೆಳೆದ ಪರಿಣಾಮ ತಕ್ಷಣ ಪಬ್ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಸಿಬ್ಬಂದಿ ಬರುತ್ತಲೇ ಯುವಕ ಪಬ್‌ನಿಂದ ಎಸ್ಕೇಪ್ ಆಗಿದ್ದ. ಅಸಭ್ಯ ವರ್ತನೆ ಮತ್ತು ಲೈಂಗಿಕ ಕಿರುಕುಳ ಆರೋಪದಡಿ ಯುವತಿ ದೂರು ನೀಡಿದ್ದು, ಸದ್ಯ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ: ಹೊಸ ವರ್ಷದ ಎಣ್ಣೆ ಏಟಲ್ಲಿ ವಾಹನ ಚಾಲನೆ – ಒಂದೇ ರಾತ್ರಿ 513 ಕೇಸ್ ದಾಖಲು

  • ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

    ಕ್ಯಾಲಿಫೋರ್ನಿಯಾದಲ್ಲಿ ಚೀನೀಯರ ನ್ಯೂ ಇಯರ್‌ ಪಾರ್ಟಿ ವೇಳೆ ಶೂಟೌಟ್‌ – 10 ಮಂದಿ ಸಾವು

    ಕ್ಯಾಲಿಫೋರ್ನಿಯಾ: ದಕ್ಷಿಣ ಕ್ಯಾಲಿಫೋರ್ನಿಯಾದ (California) ಏಷ್ಯಾದ ನಗರದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ (Shooting) ಹತ್ತು ಜನರು ಮೃತಪಟ್ಟಿದ್ದು, ಕನಿಷ್ಠ 10 ಮಂದಿ ಗಾಯಗೊಂಡಿದ್ದಾರೆ.

    ಮಾಂಟೆರಿ ಪಾರ್ಕ್‌ನಲ್ಲಿ ಚೀನೀಯರು ಹೊಸ ವರ್ಷದ ಪಾರ್ಟಿಯಲ್ಲಿ ಸಂಭ್ರಮಿಸುತ್ತಿದ್ದಾಗ ಬಂದೂಕುಧಾರಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಂತರದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಶೂಟೌಟ್‌ನಲ್ಲಿ ಗಾಯಗೊಂಡವರನ್ನು ತುರ್ತು ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಅಂಬುಲೆನ್ಸ್‌ಗೆ ಹಾಕಿಕೊಂಡು ಕರೆದೊಯ್ಯುತ್ತಿರುವ ದೃಶ್ಯಗಳು ವೀಡಿಯೋಗಳಲ್ಲಿವೆ. ಇದನ್ನೂ ಓದಿ: ಅಮೆರಿಕ ಮಿಲಿಟರಿ ಪಡೆಯಿಂದ ವೈಮಾನಿಕ ದಾಳಿ – 30 ಉಗ್ರರ ಹತ್ಯೆ

    ದಕ್ಷಿಣ ಕ್ಯಾಲಿಫೋರ್ನಿಯಾದ ಅತಿದೊಡ್ಡ ಹಬ್ಬಗಳಲ್ಲಿ ಒಂದಾದ ಎರಡು ದಿನಗಳ ʼಚಂದ್ರನ ಹೊಸ ವರ್ಷʼದ ಹಬ್ಬಕ್ಕಾಗಿ ಹತ್ತಾರು ಸಾವಿರ ಜನರು ಮುಂಜಾನೆಯೇ ಜಮಾಯಿಸಿದ್ದರು. ರಾತ್ರಿ ಪಾರ್ಟಿ ವೇಳೆ ಬಂದೂಕುಧಾರಿ ಗುಂಡು ಹಾರಿಸಿದ್ದು, ಹಲವರು ಸಾವಿಗೀಡಾಗಿದ್ದಾರೆ.

    “ಮಾಂಟೆರಿ ಪಾರ್ಕ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನಮ್ಮ ಸಂತಾಪಗಳು” ಎಂದು ಲಾಸ್ ಏಂಜಲೀಸ್ ಸಿಟಿ ಕಂಟ್ರೋಲರ್ ಕೆನ್ನೆತ್ ಮೆಜಿಯಾ ಟ್ವೀಟ್‌ನಲ್ಲಿ ಘಟನೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನಲ್ಲಿ ಸೀಟ್‌ಬೆಲ್ಟ್ ಹಾಕದ ರಿಷಿ ಸುನಾಕ್‌ಗೆ ದಂಡ

    ಅಮೆರಿಕದಲ್ಲಿ ಗನ್‌ ಹಿಂಸಾಚಾರವು ದೊಡ್ಡ ಸಮಸ್ಯೆಯಾಗಿದೆ. ಕಳೆದ ವರ್ಷ 647 ಸಾಮೂಹಿಕ ಗುಂಡಿನ ದಾಳಿಗಳು ನಡೆದಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪಾರ್ಟಿ ಮಾಡ್ತಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು

    ಪಾರ್ಟಿ ಮಾಡ್ತಿದ್ದವರಿಂದ ಪೊಲೀಸರ ಮೇಲೆ ಹಲ್ಲೆ ಪ್ರಕರಣ – ಆರೋಪಿಗಳಿಗೆ ಷರತ್ತು ಬದ್ದ ಜಾಮೀನು ಮಂಜೂರು

    ಚಿಕ್ಕಬಳ್ಳಾಪುರ: ನೈಟ್ ಕರ್ಫ್ಯೂ ಉಲ್ಲಂಘಿಸಿ ಪಾರ್ಟಿ ಮಾಡುತ್ತಿದ್ದ ಹೋಂ ಸ್ಟೇ ಮೇಲೆ ದಾಳಿ ಮಾಡಿದ್ದ ಪೊಲೀಸರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಬಂಧಿತರಾಗಿದ್ದ 8 ಮಂದಿ ಆರೋಪಿಗಳಿಗೂ ಚಿಕ್ಕಬಳ್ಳಾಪುರ ನ್ಯಾಯಾಲಯದಿಂದ ಷರತ್ತು ಬದ್ದ ಜಾಮೀನು ಮಂಜೂರಾಗಿದೆ.

    ಕಳೆದ ರಾತ್ರಿ ನೈಟ್ ಕರ್ಫ್ಯೂ ಉಲ್ಲಂಘಿಸಿ ಚಿಕ್ಕಬಳ್ಳಾಪುರ ತಾಲೂಕು ಅಗಲಗುರ್ಕಿ ಗ್ರಾಮದ ಬಳಿಯ ವೈಟ್ ನಿರ್ವಾಣ್ ಜೇಡ್ ಹೋಂ ಸ್ಟೇನಲ್ಲಿ ತಡರಾತ್ರಿ ಬೆಂಗಳೂರು ಮೂಲದ ಪ್ರತಿಷ್ಠಿತರ ಮಕ್ಕಳು ಪಾರ್ಟಿ ಮಾಡಿ ಮೋಜು ಮಸ್ತಿ ಮಾಡುತ್ತಿದ್ದರು. ಈ ವೇಳೆ ಚಿಕ್ಕಬಳ್ಳಾಪುರ ಸಿಪಿಐ ಹಾಗೂ ಸಿಬ್ಬಂದಿ ದಾಳಿ ಮಾಡಿ ಪಾರ್ಟಿ ಬಗ್ಗೆ ಪ್ರಶ್ನೆ ಮಾಡಿದ್ದರು. ಈ ಸಮಯದಲ್ಲಿ ಪಾನಮತ್ತರಾಗಿದ್ದ ಆರೋಪಿತರು ಪೊಲೀಸರ ಮೇಲೆಯೇ ದಬ್ಬಾಳಿಕೆ ನಡೆಸಿ ಹಲ್ಲೆ ನಡೆಸಿದ್ದರು. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು

    ಪರಸ್ಪರರು ತಳ್ಳಾಟ, ನೂಕಾಟ ನಡೆಸಿ ಪೊಲೀಸರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬೆಂಗಳೂರು ಮೂಲದ ರಘು ವಂಶ್ ಕನೂಜ್, ಅಕ್ಷಯ್ ಬಜಾಜ್, ತೇಜಸ್, ಆಕಾಶ್, ಆದಿತ್ಯ, ಚಿರಾಗ್, ಸೂರಜ್, ಅರ್ಜುನ್ ಆರೋಪಿತರಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷೆನ್ 353, 323, 504 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ-188, 269, 272 ಅಡಿ ಪ್ರಕರಣ ದಾಖಲಿಸಿದ್ದರು. ನಂದಿಗಿರಿಧಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ

  • ಹೊಸ ವರ್ಷದ ಪಾರ್ಟಿಯಲ್ಲಿ ಬಯಲಾಯ್ತು ಗೆಳೆಯನ ಅಸಲಿ ಬಣ್ಣ

    ಹೊಸ ವರ್ಷದ ಪಾರ್ಟಿಯಲ್ಲಿ ಬಯಲಾಯ್ತು ಗೆಳೆಯನ ಅಸಲಿ ಬಣ್ಣ

    – ರಾಡ್‍ನಿಂದ ಹೊಡೆದು ರಹಸ್ಯ ತಿಳಿದ ಯುವತಿಯ ಕೊಲೆ
    – ಯುವತಿಯ ಇನಿಯ ಸೇರಿ ಇಬ್ಬರ ಬಂಧನ

    ಮುಂಬೈ: ಹೊಸ ವರ್ಷದ ಪಾರ್ಟಿಗೆ ತೆರಳಿದ್ದ 19 ವರ್ಷದ ಯುವತಿಯ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ. ಡಿಸೆಂಬರ್ 31ರ ರಾತ್ರಿ ನಡೆದ ಪಾರ್ಟಿಯಲ್ಲಿ ಮೆಟ್ಟಿಲು ಬಳಿ ಯುವತಿಯ ಶವ ಪತ್ತೆಯಾಗಿತ್ತು.

    ಜಾಹ್ನವಿ ಕುಕರೇಜಾ ಕೊಲೆಯಾದ ಯುವತಿ. ಕೊರೊನಾ ಕರ್ಫ್ಯೂ ಹಿನ್ನೆಲೆ ಮುಂಬೈನ ಭಗವತಿ ಹೈಟ್ಸ್ ಕಟ್ಟಡದ ಮೇಲ್ಭಾಗದಲ್ಲಿ ನ್ಯೂ ಇಯರ್ ಪಾರ್ಟಿ ಆಯೋಜಿಸಲಾಗಿತ್ತು. ಜಾಹ್ನವಿ ಪಾರ್ಟಿಗೆ ಬಂದಾಗ ಆಕೆಯ ಗೆಳೆಯ ಜೋಗ್‍ಧನಕರ್ (22) ಮತ್ತು ದಿವ್ಯಾ ಪಡ್ನೇಕರ್ (19) ಜೊತೆಯಲ್ಲಿದ್ದರು. ತನ್ನ ಗೆಳೆಯ ಬೇರೆ ಯುವತಿ ಜೊತೆ ಇರೋದನ್ನ ಜಾಹ್ನವಿ ನೋಡಿದ್ದಾಳೆ.

    ಪಾರ್ಟಿ ನಡುವೆ ಮೂವರ ಮಧ್ಯೆ ದೊಡ್ಡ ಜಗಳವೇ ನಡೆದಿದೆ. ಕೋಪಗೊಂಡ ಜಾಹ್ನವಿ ಕೆಳಗೆ ಇಳಿಯುವಾಗಲೂ ಜಗಳ ಆಡುತ್ತಿರುವ ದೃಶ್ಯಗಳು ಮೆಟ್ಟಿಲ ಬಳಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವೇಳೆ ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ. ಕೊಲೆಯ ಬಳಿಕ ದಿವ್ಯಾ ಜೊತೆ ಜೋಗ್‍ಧನಕರ್ ಓಡಿ ಹೋಗಿದ್ದನು. ಕೊಲೆಯ ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು, ಸಿಸಿಟಿವಿ ದೃಶ್ಯಗಳು ಮತ್ತು ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಹೇಳಿಕೆಯನ್ನಾಧರಿಸಿ ಇಬ್ಬರನ್ನ ಬಂಧಿಸಿದ್ದಾರೆ.

     

  • ನ್ಯೂ ಇಯರ್ ಪಾರ್ಟಿಯಲ್ಲಿ ಕಿರಿಕ್: ಸಪ್ಲೈಯರ್‌ಗೆ ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್

    ನ್ಯೂ ಇಯರ್ ಪಾರ್ಟಿಯಲ್ಲಿ ಕಿರಿಕ್: ಸಪ್ಲೈಯರ್‌ಗೆ ಚಾಕು ಇರಿದಿದ್ದ ಆರೋಪಿಗಳು ಅರೆಸ್ಟ್

    ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಸಪ್ಲೈಯರ್ ಮೇಲೆ ಹಲ್ಲೆ ಮಾಡಿ ಚಾಕು ಇರಿದಿದ್ದ ಎಂಟು ಜನ ಆರೋಪಿಗಳನ್ನು ಬೆಂಗಳೂರಿನ ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.

    ವೆಂಕಟೇಶ್‍ಪುರಂ ನಿವಾಸಿಗಳಾದ ಹರಿ (19), ಪ್ರಕಾಶ್ (19), ರಂಜೀತ್ ಕುಮಾರ್ (22), ಸಂತೋಷ್ (19), ಕರಣ್ (20), ವಿಜಯ್ (19) ಸೇರಿದಂತೆ ಎಂಟು ಜನ ಬಂಧಿತ ಆರೋಪಿಗಳು. ಬಾಣಸವಾಡಿಯ ಓಲಿವ್ ರೆಸಿಡೆನ್ಸಿ ಹೋಟೆಲ್‍ನಲ್ಲಿ ಹೊಸ ವರ್ಷಕ್ಕೆಂದು ಎಂಟು ಜನ ಯುವಕರು ಹೋಗಿದ್ದರು. ಪಾರ್ಟಿ ವೇಳೆ ಕುಡಿದು ಜೋರಾಗಿ ಕೂಗಾಡುತ್ತಿದ್ದರು. ಇದನ್ನು ನೋಡಿದ ಸಪ್ಲೈಯರ್ ಇಶಾಂತ್ ಜೋರಾಗಿ ಕೂಗಾಡಬೇಡಿ, ಇತರರಿಗೆ ತೊಂದರೆ ಆಗುತ್ತೆ ಎಂದು ಬುದ್ಧಿವಾದ ಹೇಳಿದ್ದ. ಇದರಿಂದ ಕೋಪಗೊಂಡ ಯುವಕರು ಸಪ್ಲೈಯರ್ ಇಶಾಂತ್‍ಗೆ ಹಿಗ್ಗಾಮುಗ್ಗಾ ಥಳಿಸಿ, ಚಾಕು ಇರಿದು ಪರಾರಿಯಾಗಿದ್ದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್: ನ್ಯೂ ಇಯರ್ ಸಂಭ್ರಮದಲ್ಲಿ ಕೀಟಲೆ ಮಾಡಿದ್ದ ನಾಲ್ವರ ಬಂಧನ

    ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ ದೃಶ್ಯವು ಹೋಟೆಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಣಸವಾಡಿ ಪೊಲೀಸರು ಆರೋಪಿಗಳಿಗೆ ಬಲೆ ಬೀಸಿದ್ದರು. ಆದರೆ ಆರೋಪಿಗಳು ಪತ್ತೆ ಸಾಧ್ಯವಾಗಿರಲಿಲ್ಲ. ಬಳಿಕ ತೀವ್ರ ಕಾರ್ಯಾಚರಣೆ ನಡೆಸಿ, ಭಾನುವಾರ ಎಲ್ಲ ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

  • ಪಾರ್ಟಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಪ್ರಶ್ನಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಪಾರ್ಟಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ – ಪ್ರಶ್ನಿಸಿದ ಯುವಕನಿಗೆ ಹಿಗ್ಗಾಮುಗ್ಗಾ ಥಳಿತ

    ಬೆಂಗಳೂರು: ಹೊಸ ವರ್ಷಾಚರಣೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಒಂದೊಂದೇ ಅವಘಡಗಳು ಬೆಳಕಿಗೆ ಬರುತ್ತಿದೆ. ನ್ಯೂ ಇಯರ್ ಪಾರ್ಟಿಯಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದನ್ನು ಪ್ರಶ್ನೆ ಮಾಡಿದ ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.

    ಕೋರಮಂಗಲದ ಐದನೇ ಹಂತದಲ್ಲಿರುವ ಮ್ಯಾಡ್ ಸೈನಟಿಸ್ಟ್ ಪಬ್ ನಲ್ಲಿ ಈ ಘಟನೆ ನಡೆದಿದ್ದು, ಕೇರಳ ಮೂಲದ ಎಂಜಿನಿಯರ್ ವಿದ್ಯಾರ್ಥಿ ಅರ್ಜುನ್ ಎಂಬುವವರಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆ ಮಾಡುವುದಕ್ಕೆ ಅರ್ಜುನ್ ಸೇರಿದಂತೆ ಇಬ್ಬರು ಯುವಕ ಯುವತಿಯರು ಪಬ್ ಗೆ ಹೋಗಿದ್ದಾರೆ.

    ಈ ವೇಳೆ ಪಾರ್ಟಿಯಲ್ಲಿ ಡಾನ್ಸ್ ಮಾಡುವ ವೇಳೆ ಯುವಕರ ಗುಂಪೊಂದು ಡಾನ್ಸ್ ಮಾಡುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದರು. ಇದನ್ನು ನೋಡಿದ ಅರ್ಜುನ್ ಯುವಕರನ್ನು ಪ್ರಶ್ನೆ ಮಾಡಿದ್ದ, ಇದರಿಂದ ಕೋಪಗೊಂಡ ಯುವಕರ ಗುಂಪು ಪಬ್ ಒಳಗಡೆಯೇ ವಿದ್ಯಾರ್ಥಿ ಅರ್ಜುನ್ ನನ್ನ ಹಿಗ್ಗಾಮುಗ್ಗಾ ಥಳಿಸಿದೆ. ಅರ್ಜುನ್ ಬಲಕಣ್ಣು, ಮುಖ ಸೇರಿದಂತೆ ದೇಹದ ಕೆಲ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನ್ಯೂ ಇಯರ್ ಪಾರ್ಟಿ ಕಿಕ್‍ಗೆ ಅಬಕಾರಿ ಇಲಾಖೆ ಕಿಲ ಕಿಲ

    ನ್ಯೂ ಇಯರ್ ಪಾರ್ಟಿ ಕಿಕ್‍ಗೆ ಅಬಕಾರಿ ಇಲಾಖೆ ಕಿಲ ಕಿಲ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆಯ ಕಿಕ್ ಗೆ ಅಬಕಾರಿ ಇಲಾಖೆ ಫುಲ್ ಖುಷಿಯಾಗಿದೆ.

    ಕಳೆದ ಕೆಲವು ದಿನಗಳಿಂದ (ತಿಂಗಳಾಂತ್ಯ) ವ್ಯಾಪಾರ ಇಲ್ಲದೇ ಗೊಣಗುತ್ತಿದ್ದ ಮದ್ಯದ ಅಂಗಡಿಯವರು ಹೊಸ ವರ್ಷಕ್ಕೆ ಫುಲ್ ಕಿಲ ಕಿಲ ಆಗಿದ್ದಾರೆ. ಹೊಸ ವರ್ಷಕ್ಕೆ ನಾವಿದ್ದೇವೆ ಎಂದು ಕುಡುಕರು ಅಬಕಾರಿ ಇಲಾಖೆ ಸಖತ್ ಆದಾಯ ತಂದುಕೊಟ್ಟಿದ್ದಾರೆ. ಈ ಬಾರಿ ಹೊಸ ವರ್ಷದ ಪಾರ್ಟಿ ಮೂಡ್ ಅಬಕಾರಿ ಇಲಾಖೆಯ ಹಳೆ ದಾಖಲೆಗಳನ್ನು ಪೀಸ್ ಪೀಸ್ ಮಾಡಿದೆ. ಖಜಾನೆಯ ಚಿಂತೆಯಲ್ಲಿದ್ದ ಅಬಕಾರಿ ಇಲಾಖೆಯ ಅಧಿಕಾರಿಗಳು ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

    ರಾಜ್ಯಾದ್ಯಂತ ಈ ವರ್ಷ ಭರ್ತಿ ಶೇ.10ರಷ್ಟು ಮದ್ಯ ಮಾರಾಟ ಹೆಚ್ಚಳವಾದರೆ, ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಶೇ.15ರಷ್ಟು ಮಾರಾಟವಾಗಿದೆ. ಕಳೆದ ವರ್ಷ (2019) ಡಿಸೆಂಬರ್ 21 ರಿಂದ ಜನವರಿ 31 ರ ಮಧ್ಯರಾತ್ರಿಯವರೆಗೆ 481 ಕೋಟಿ ಆದಾಯ ಬಂದಿತ್ತು. ಈ ವರ್ಷ ಅಂದ್ರೆ ಹೊಸ ವರ್ಷಾಚರಣೆಗೆ ಬರೋಬ್ಬರಿ 597 ಕೋಟಿ ಆದಾಯ ಅಬಕಾರಿ ಖಜಾನೆಗೆ ಸೇರಿದೆ.

    ಕಳೆದ ವರ್ಷ ಶೇ.21.75 ಕೇಸಸ್ ಮದ್ಯ ಮರಾಟಾವಾದರೆ ಈ ವರ್ಷ ಶೇ.23.72 ಮದ್ಯ ಮಾರಾಟವಾಗಿದೆ. ವ್ಯಾಪಾರ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಅಬಕಾರಿ ಅಧಿಕಾರಿಗಳು ಈ ಬಾರಿ ಆದಾಯ ಹೆಚ್ಚಳ ನೋಡಿ ದಿಲ್ ಖುಷ್ ಆಗಿದ್ದಾರೆ.

  • ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಹೊಸ ವರ್ಷಾಚರಣೆ – ರಕ್ಷಣೆಗೆ ಆರೋಗ್ಯ ಕವಚ ಅಂಬುಲೆನ್ಸ್ ಸನ್ನದ್ಧ

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ವೇಳೆ ರಸ್ತೆ ಅಪಘಾತ ಸೇರಿದಂತೆ ಇತರೆ ಅವಘಡಗಳು ಸಂಭವಿಸಬಹುದು ಎಂಬ ಉದ್ದೇಶದಿಂದ ಮುನ್ನಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ 108 ಸಿಬ್ಬಂದಿ ಸನ್ನದ್ಧರಾಗಿದ್ದಾರೆ.

    ಜಿಲ್ಲೆಯ 16 ಆರೋಗ್ಯ ಕವಚ ಅಂಬುಲೆನ್ಸ್ ಗಳು ಸೇವೆಗೆ ಸಿದ್ಧವಾಗಿದ್ದು, ಸಿಬ್ಬಂದಿ ಸಹ ಜನರ ಸೇವೆಗೆ ನಾವಿದ್ದೇವೆ ಅಂತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಉಳಿದ ದಿನಕ್ಕಿಂತ ಶೇ.30 ರಿಂದ 35 ರಷ್ಟು ಹೆಚ್ಚಿನ ಅಪಘಾತ ಸಂಭವಿಸುತ್ತವೆ ಎಂದು ಹಿಂದಿನ ಅಂಕಿ ಅಂಶಗಳಿಂದ ಋಜುವಾತಾಗಿದೆ. ಹೀಗಾಗಿ ಹೊಸ ವರ್ಷಾಚರಣೆ ವೇಳೆ ಸಂಭವಿಸುವ ರಸ್ತೆ ಅಪಘಾತಗಳಿಂದ ಉಂಟಾಗುವ ಪ್ರಾಣ ಹಾನಿಯನ್ನು ತಪ್ಪಿಸಲು 108 ಆರೋಗ್ಯ ಕವಚ ಸೇವೆ ಸನ್ನದ್ಧಗೊಂಡಿದೆ.

    ಹೊಸ ವರ್ಷಾಚರಣೆ ನಡೆಯುವ ಸ್ಥಳ ಹಾಗೂ ಪ್ರಮುಖವಾಗಿ ಆಕ್ಸಿಡೆಂಟಲ್ ಜೋನ್ ಸೇರಿದಂತೆ ಹೈವೇಗಳಲ್ಲಿ ಹೆಚ್ಚುವರಿ ಅಂಬುಲೆನ್ಸ್ ಗಳನ್ನು ನಿಯೋಜನೆ ಮಾಡಲಾಗುತ್ತದೆ. ಹೆಚ್ಚುವರಿ ಸೇವೆಗಾಗಿ 108 ಅಂಬುಲೆನ್ಸ್ ಸಿಬ್ಬಂದಿಗಳು ಹೆಚ್ಚಿನ ಕೆಲಸ ಮಾಡುವಂತೆ ಪ್ರೇರೇಪಿಸಿ, ಕಾಲ್ ಸೆಂಟರ್ ಹಾಗೂ ಇತರೆ ಸಿಬ್ಬಂದಿಯ ರಜೆಗಳನ್ನು ಸಹ ರದ್ದುಗೊಳಿಸಲಾಗಿದೆ. ಮುಂಜಾಗೃತಾ ಕ್ರಮವಾಗಿ ಜಿಲ್ಲೆಯ ನಂದಿ ಗಿರಿಧಾಮ ತಪ್ಪಲು ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳು ಹಾಗೂ ಅಪಘಾತ ನಡೆಯುಬಹುದಾದ ರಸ್ತೆಗಳ ಬಳಿ ಅಂಬುಲೆನ್ಸ್ ಗಳನ್ನ ನಿಯೋಜಿಸಲಾಗುವುದು. ಸಾರ್ವಜನಿಕರು ಯಾವುದೇ ತುರ್ತು ಸಂದರ್ಭಸಲ್ಲಿ ಟೋಲ್ ಫ್ರೀ ನಂಬರ್ 108 ಗೆ ಕರೆ ಮಾಡುವಂತೆ ಚಿಕ್ಕಬಳ್ಳಾಪುರ ಜಿಲ್ಲಾ ಆರೋಗ್ಯ ಕವಚ ಸೇವೆಯ 108 ಅಂಬುಲೆನ್ಸ್‍ಗಳ ಜಿಲ್ಲಾ ವ್ಯವಸ್ಥಾಪಕ ಕಪಿಲ್ ತಿಳಿಸಿದ್ದಾರೆ.

  • ಡಿ.31ರಂದು ಮಧ್ಯರಾತ್ರಿ 2ರವರೆಗೂ ಮೆಟ್ರೋ ಸೇವೆ ವಿಸ್ತರಣೆ

    ಡಿ.31ರಂದು ಮಧ್ಯರಾತ್ರಿ 2ರವರೆಗೂ ಮೆಟ್ರೋ ಸೇವೆ ವಿಸ್ತರಣೆ

    – ಕುಡಿದು ಅಸಭ್ಯ ವರ್ತನೆ ಮಾಡಿದರೆ ಕಿಕ್ ಔಟ್

    ಬೆಂಗಳೂರು: ಹೊಸ ವರ್ಷ ಆಚರಣೆ ಹಿನ್ನೆಲೆ ಡಿ.31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸೇವೆ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.

    ಡಿಸೆಂಬರ್ 31ರಂದು ಮಧ್ಯರಾತ್ರಿ 2ಗಂಟೆ ವರೆಗೂ ಮೆಟ್ರೋ ಸಂಚರಿಸಲಿದ್ದು, 50 ರೂ. ಮೇಲ್ಪಟ್ಟು ಟಿಕೆಟ್ ಖರೀದಿಸಿದವರಿಗೆ ಬಂಪರ್ ಕೊಡುಗೆಯನ್ನು ಸಹ ನೀಡಿದೆ. ಆದರೆ ಕುಡಿದು ಪ್ರಯಾಣಿಸುವವರಿಗೆ ಎಚ್ಚರಿಕೆ ನೀಡಿದ್ದು, ಕುಡಿದು ಅಸಭ್ಯವಾಗಿ ವರ್ತಿಸಿದರೆ ಕಿಕ್ ಔಟ್ ಮಾಡುವುದಾಗಿ ಬಿಎಂಆರ್‌ಸಿಎಲ್ ತಿಳಿಸಿದೆ.

    ಹೊಸ ವರ್ಷದ ಹಿಂದಿನ ದಿನ ಮಧ್ಯರಾತ್ರಿ ಎಂ.ಜಿ ರಸ್ತೆ, ಬ್ರಿಗೇಟ್ ರಸ್ತೆ ಬಳಿ ಸಂಭ್ರಮಾಚರಣೆಗೆ ಸಾವಿರಾರು ಜನ ಸೇರುತ್ತಾರೆ. ಈ ಸಮಯದಲ್ಲಿ ಸಾಕಷ್ಟು ಜನ ಮೆಟ್ರೋದಲ್ಲೇ ಪ್ರಯಾಣಿಸುತ್ತಾರೆ. ಹೀಗಾಗಿ ಟ್ರಿನಿಟಿ ಮೆಟ್ರೋ ಸ್ಟೇಷನ್, ಎಂಜಿ ರಸ್ತೆ, ಕಬ್ಬನ್ ಪಾರ್ಕಿನಲ್ಲಿ ಜನಸಂದಣಿ ಹೆಚ್ಚಾಗಿರುವುದರಿಂದ ಈ ಮೂರು ಮೆಟ್ರೋ ನಿಲ್ದಾಣದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.

    ಅಲ್ಲದೆ ರಾತ್ರಿ ಪಾರ್ಟಿ ಮುಗಿಸಿ ಮನೆಗೆ ತೆರಳುವವರಿಗೆ ಟಿಕೆಟ್ ನೀಡಲು ಕಷ್ಟವಾಗುವುದರಿಂದ ಪೇಪರ್ ಟಿಕೆಟ್ ನೀಡಲು ಮೆಟ್ರೋ ನಿರ್ಧರಿಸಿದೆ. ಸಂಜೆ 4 ಗಂಟೆಗೆ ಎಲ್ಲಾ ಮೆಟ್ರೋ ಸ್ಟೇಷನ್ ನಲ್ಲಿ ಪೇಪರ್ ಟಿಕೆಟ್ ಕೊಡಲಾಗುತ್ತದೆ. ಅಲ್ಲದೆ 50 ರೂ.ಗಿಂತ ಹೆಚ್ಚು ಟಿಕೆಟ್ ಪಡೆದರೆ ಬೆಂಗಳೂರಿನ ಯಾವ ಮೆಟ್ರೋ ನಿಲ್ದಾಣದಲ್ಲಿ ಬೇಕಾದರೂ ಸಂಚರಿಸಬಹು ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

    ಮೆಟ್ರೋನಲ್ಲಿ ಡ್ರಿಂಗ್ಸ್ ಮಾಡುವವರು ಸಂಚರಿಸಬಹುದು. ಆದರೆ ಕುಡಿದ ಮತ್ತಿನಲ್ಲಿ ಅಸಭ್ಯ ವರ್ತನೆ ಮಾಡಿದರೆ ಅವರನ್ನು ಆ ಕ್ಷಣವೇ ಮೆಟ್ರೋಯಿಂದ ಕಿಕ್ ಔಟ್ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.