Tag: New Year Celebrations

  • ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ಹೊಸ ವರ್ಷಾಚರಣೆಗೆ ಎಂ.ಜಿ ರಸ್ತೆಯಿಂದ ಹೆಚ್ಚುವರಿ ಬಸ್‌ ಸಂಚಾರ – ಮುಂಜಾನೆ 2 ಗಂಟೆವರೆಗೂ ಸಾರಿಗೆ ಲಭ್ಯ

    ಬೆಂಗಳೂರು: ಹೊಸವರ್ಷಾಚರಣೆಗೆ ಕ್ಷಣಗಣನೆ ಶುರುವಾಗಿದ್ದು, ನಗರದಲ್ಲಿ ಹೆಚ್ಚುವರಿ ಬಿಎಂಟಿಸಿ (BMTC) ಬಸ್‌ಗಳು ಕಾರ್ಯನಿರ್ವಹಿಸಲಿವೆ.

    ಡಿ.31 ರಾತ್ರಿಯಿಂದ ಜ.1ರಂದು ಮುಂಜಾನೆ 2 ಗಂಟೆಯವರೆಗೂ ಎಂ.ಜಿ.ರಸ್ತೆಯಿಂದ (MG Road) ನಗರದ ವಿವಿಧ ಭಾಗಗಳಿಗೆ ಹೆಚ್ಚು ಬಸ್‌ಗಳು ಸಂಚರಿಸಲಿವೆ. ಹೊಸ ವರ್ಷಾಚರಣೆಯಲ್ಲಿ ಭಾಗವಹಿಸುವ ಜನರ ಅನುಕೂಲಕ್ಕಾಗಿ ಬಿಎಂಟಿಸಿ ಈ ಕ್ರಮ ಕೈಗೊಂಡಿದೆ.ಇದನ್ನೂ ಓದಿ: ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ವಂಚನೆ – ಐಶ್ವರ್ಯಗೌಡ, ಪತಿಗೆ 14 ದಿನ ಜೈಲು

    ಬಸ್ ಮಾರ್ಗ ಸಂಖ್ಯೆ                     ಎಲ್ಲಿಂದ                               ಎಲ್ಲಿಗೆ
    ಜಿ-3                                          ಬ್ರಿಗೇಡ್ ರಸ್ತೆ                 ಎಲೆಕ್ಟ್ರಾನಿಕ್ಸ್ ಸಿಟಿ
    ಜಿ-4 ಜಿಗಣಿ
    ಜಿ-2                                 ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣ       ಸರ್ಜಾಪುರ
    ಜಿ-6                                           ಕೆಂಗೇರಿ                        ಕೆ.ಹೆಚ್.ಬಿ. ಕ್ವಾರ್ಟ್ರ್ಸ್‌
    ಜಿ-7                                  ಜನಪ್ರಿಯ ಟೌನ್ ಶಿಪ್
    ಜಿ-8                                     ನೆಲಮಂಗಲ
    ಜಿ-9                            ಯಲಹಂಕ ಉಪನಗರ 5ನೇ ಹಂತ
    ಜಿ-10                                      ಯಲಹಂಕ
    ಜಿ-11                                       ಬಾಗಲೂರು
    317-ಜಿ                                   ಹೊಸಕೋಟೆ
    ಎಸ್‌ಬಿಎಸ್-13ಕೆ                       ಚನ್ನಸಂದ್ರ
    ಎಸ್‌ಬಿಎಸ್-1ಕೆ                       ಕಾಡುಗೋಡಿ
    13                                          ಬನಶಂಕರಿ

    ಜನದಟ್ಟಣೆ ಇರುವ ಪ್ರಮುಖ ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಿಂದಲೂ ಹೆಚ್ಚುವರಿ ಬಸ್ ಕಾರ್ಯನಿರ್ವಹಿಸಲಿವೆ. ಕೆಂಪೇಗೌಡ ಬಸ್ ನಿಲ್ದಾಣ, ಕೆ.ಆರ್ ಮಾರುಕಟ್ಟೆ, ಶಿವಾಜಿನಗರ, ಕೋರಮಂಗಲ, ಕಾಡುಗೋಡಿ, ಕೆಂಗೇರಿ, ಸುಮನಹಳ್ಳಿ, ಗೊರಗುಂಟೆಪಾಳ್ಯ, ಯಶವಂತಪುರ, ಯಲಹಂಕ, ಶಾಂತಿನಗರ, ಬನಶಂಕರಿ, ಹೆಬ್ಬಾಳ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ಗಳಿಂದ ಪ್ರಯಾಣಿಕರ ದಟ್ಟಣೆಗನುಸಾರ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.ಇದನ್ನೂ ಓದಿ: ಮನಮೋಹನ್ ಸಿಂಗ್ ಅಂತ್ಯಕ್ರಿಯೆ ವಿಚಾರದಲ್ಲಿ ಕೆಟ್ಟ ರಾಜಕೀಯ ಮಾಡ್ಬೇಡಿ – ರಾಹುಲ್‌ಗೆ ಬಿಜೆಪಿ ತಿರುಗೇಟು

  • ಶಿವನ ಸನ್ನಿಧಿಯಲ್ಲಿ ಲಕ್ಷಾಂತರ ಜನರ ಹೊಸವರ್ಷದ ಸಂಭ್ರಮಾಚರಣೆ

    ಶಿವನ ಸನ್ನಿಧಿಯಲ್ಲಿ ಲಕ್ಷಾಂತರ ಜನರ ಹೊಸವರ್ಷದ ಸಂಭ್ರಮಾಚರಣೆ

    ಕೋಲಾರ: 2018 ರ ಹೊಸ ವರ್ಷವನ್ನು ಸಾವಿರಾರು ಜನ ಭಕ್ತರು ಶಿವನ ಸನ್ನಿಧಿ ಕೋಟಿ ಶಿವಲಿಂಗ ಕ್ಷೇತ್ರದಲ್ಲಿ ಆಚರಣೆ ಮಾಡಿದ್ದಾರೆ.

    ಬೆಳಗ್ಗಿನಿಂದಲೇ ಜನರು ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ದಾರೆ. ಕೋಲಾರದ ಬಂಗಾರಪೇಟೆ ತಾಲೂಕಿನ ಕಮ್ಮಸಂದ್ರದ ಶ್ರೀ ಕೋಟಿ ಶಿವಲಿಂಗ ಕ್ಷೇತ್ರಕ್ಕೆ ಸಾವಿರಾರು ಜನ ಭಕ್ತರು ಹಾಗೂ ಪ್ರವಾಸಿಗರು ಆಗಮಿಸಿ ಹೊಸ ವರ್ಷವನ್ನ ಬರಮಾಡಿಕೊಂಡಿದ್ದಾರೆ.

    ವಿಶ್ವದಲ್ಲಿ ಕೋಟಿ ಶಿವಲಿಂಗಗಳನ್ನು ಏಕ ಕಾಲದಲ್ಲಿ ಕಣ್ತುಂಬಿಕೊಳ್ಳಬಹುದಾದ ಸ್ಥಳ ಕೋಟಿಶಿವಲಿಂಗ ಕ್ಷೇತ್ರ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಕಮ್ಮಸಂದ್ರದ ಕೋಟಿಲಿಂಗೇಶ್ವರ ಕ್ಷೇತ್ರ ಎಂದು ಪ್ರಸಿದ್ಧಿಯಾಗಿದೆ. ಇಂದು ಹೊಸ ವರ್ಷದ ಅಂಗವಾಗಿ ಕೋಟಿಲಿಂಗೇಶ್ವರದಲ್ಲಿ ವಿಶೇಷವಾಗಿ ಲಕ್ಷಾಂತರ ಜನರು ಮುಂಜಾನೆಯಿಂದಲೇ ಕ್ಷೇತ್ರಕ್ಕೆ ಬಂದು ದೇವರ ದರ್ಶನ ಪಡೆದರು.

    ಕೋಟಿ ಶಿವಲಿಂಗಗಳ ದರ್ಶನ ಪಡೆದು, ಶಿವನ ನೆನೆಯುತ್ತಾ ಹೊಸ ವರ್ಷ ಹರುಷ ತರಲಿ ಎಂದು ಬೇಡಿಕೊಂಡರು. ವಿಶೇಷ ಆಕರ್ಷಣೆ ಎಂಬಂತೆ 108 ಅಡಿಯ ಶಿವಲಿಂಗದ ದರ್ಶನ ಪಡೆದ ಭಕ್ತರು ಶಿವಲಿಂಗದ ಮುಂದೆ ನಿಂತು ಫೋಟೋಗಳನ್ನ ತೆಗೆಸಿಕೊಳ್ಳುತ್ತಿದ್ದರು. ಹೊಸ ವರ್ಷದ ಪ್ರಯುಕ್ತ ವಿಶೇಷವಾಗಿ ಶ್ರೀ ವೆಂಕಟೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವವನ್ನ ಹಮ್ಮಿಕೊಳ್ಳಲಾಗಿತ್ತು.

    ಸಾಕಷ್ಟು ವಿಶೇಷ ದಿನಗಳಲ್ಲಿ ಈ ಕ್ಷೇತ್ರಕ್ಕೆ ಬೆಂಗಳೂರು, ಕರ್ನಾಟಕ, ಆಂಧ್ರ, ತಮಿಳುನಾಡು, ಕೇರಳದಿಂದಲೂ ಸಾವಿರಾರು ಭಕ್ತರು ಸಾಗರೋಪಾದಿಯಲ್ಲಿ ಹರಿದು ಬರುತ್ತಾರೆ. ಏಕ ಕಾಲದಲ್ಲಿ ಶಿವಲಿಂಗಗಳ ದರ್ಶನ ಮಾಡುವ ಜನರಿಗಂತೂ ಭೂ ಕೈಲಾಸವೇ ಧರೆಗಿಳಿದ ಅನುಭವ ಆಗುತ್ತದೆ. ಜೊತೆಗೆ ಹೊಸ ವರ್ಷದಂದು ಇಂಥದ್ದೊಂದು ಪುಣ್ಯಕ್ಷೇತ್ರದಲ್ಲಿ ಹೊಸ ವರ್ಷವನ್ನು ಆರಂಭ ಮಾಡಿದ ತೃಪ್ತಿ ಭಕ್ತರಿಗೆ ಇರುತ್ತೆ. ಇನ್ನು ದೇವಸ್ಥಾನದ ವತಿಯಿಂದ ಕೋಟಿ ಶಿವಲಿಂಗಗಳಿಗೂ ಅದ್ಧೂರಿ ಹೂವಿನ ಅಲಂಕಾರ ಮಾಡಲಾಗಿತ್ತು. ಈ ವಿಶೇಷ ದಿನದಂದು ಸಾವಿರಾರು ಜನರು ಬಂದು ಕೋಟಿ ಶಿವಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದು ಶ್ರೀ ಸಾಂಬಶಿವಮೂರ್ತಿ ಸ್ವಾಮಿಗಳು ಹೇಳಿದರು.