Tag: New Year 2025

  • ಹೊಸ ವರ್ಷ ಆಚರಣೆಗೆ ಶ್ರೀರಾಮಸೇನೆ ತ್ರೀವ ವಿರೋಧ!

    ಹೊಸ ವರ್ಷ ಆಚರಣೆಗೆ ಶ್ರೀರಾಮಸೇನೆ ತ್ರೀವ ವಿರೋಧ!

    ಹುಬ್ಬಳ್ಳಿ: ಇಡೀ ವಿಶ್ವವೇ ಹೊಸ ವರ್ಷ ಬರಮಾಡಿಕೊಳ್ಳಲು ತುದಿಗಾಲಿನಲ್ಲಿ ನಿಂತಿದೆ. ಆದರೆ ಈ ಸಂಭ್ರಮಕ್ಕೆ ಶ್ರೀರಾಮಸೇನೆ (Sri Ram Sena) ತ್ರೀವ ವಿರೋಧ ವ್ಯಕ್ತಪಡಿಸಿದೆ. ಪಾಶ್ಚಿಮಾತ್ಯರ ಹೊಸ ವರ್ಷವನ್ನು ಹೋಟೆಲ್ ಗಳಲ್ಲಿ ಅಸಭ್ಯವಾಗಿ ಆಚರಿಸಲು ಅವಕಾಶ ನೀಡಬಾರದು. ಹೊಸ ವರ್ಷ ಆಚರಣೆ ರದ್ದು ಮಾಡಬೇಕೆಂದು ಆಗ್ರಹಿಸಿದೆ.‌

    ಈ ನಿಟ್ಟಿನಲ್ಲಿ ಹೊಸ ವರ್ಷ‌ ಸಂಭ್ರಮಕ್ಕೆ (New Year Celebration) ಡಿಜೆ ಪಾರ್ಟಿ ಆಯೋಜನೆ ಮಾಡಿರುವ ಹುಬ್ಬಳ್ಳಿ ವಿವಿಧ ಐಷಾರಾಮಿ ಹೋಟೆಲ್ ಗಳಿಗೆ ತೆರಳಿ ಯಾವುದೇ ಕಾರಣಕ್ಕೂ ಹೊಸ ವರ್ಷ‌ ಆಚರಣೆ ನೆಪದಲ್ಲಿ ಭಾರತೀಯ ಸಂಸ್ಕೃತಿಗೆ ಅಗೌರವ ತೋರಬಾರದು. ಹೀಗಾಗಿ ಯಾವುದೇ ಪಾರ್ಟಿ ಆಯೋಜನೆ ಮಾಡಬಾರದು ಅಂತ ಶ್ರೀರಾಮಸೇನೆ ಕಾರ್ಯಕರ್ತರು, ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಿಲಿಂಡರ್‌ ಸ್ಫೋಟ ಕೇಸ್‌; ಮತ್ತೊಬ್ಬ ಅಯ್ಯಪ್ಪ ಮಾಲಾಧಾರಿ ಸಾವು – ಮೃತರ ಸಂಖ್ಯೆ 5 ಕ್ಕೆ ಏರಿಕೆ

    ಶ್ರೀರಾಮ ಸೇನಾ ರಾಜ್ಯಾಧ್ಯಕ್ಷ ಗಂಗಾಧರ್ ಜಿ ಕುಲಕರ್ಣಿಯವರ ನೇತೃತ್ವದಲ್ಲಿ ಅಭಿಯಾನ ಆರಂಭವಾಗಿದ್ದು, ಹುಬ್ಬಳ್ಳಿ ಪ್ರೆಸಿಡೆಂಟ್, ನವೀನ್, ರಾಯಲ್ ರಿಡ್ಜ್, ಡೆನಿಸೆನ್ಸ್, ಕ್ಯೂಬೆಕ್ಸ್, ಫಾರ್ಚೂನ್, ಹನ್ಸ್ ಹೋಟೆಲ್‌ಗೆ ತೆರಳಿ ಮನವಿ ಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾತನಾಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ, ಹೊಸ ವರ್ಷದ ಆಚರಣೆ ನೆಪದಲ್ಲಿ, ಕುಡಿತ, ಡ್ಯಾನ್ ಪಾರ್ಟಿ ಆಯೋಜನೆ ಮಾಡೋದು ನಮ್ಮ ಭಾರತೀಯ ಸಂಸ್ಕೃತಿ ಅಲ್ಲಾ, ಇದನ್ನು ನಾವು ಒಪ್ಪೊದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸಿಲಿಂಡರ್ ಸ್ಫೋಟ – ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು, ಸಾವಿನ ಸಂಖ್ಯೆ 6ಕ್ಕೇರಿಕೆ!

  • ನ್ಯೂ ಇಯರ್‌ಗೆ ಯಾವ ಡ್ರೆಸ್ ಬೆಸ್ಟ್?- ಇಲ್ಲಿದೆ ಟಿಪ್ಸ್

    ನ್ಯೂ ಇಯರ್‌ಗೆ ಯಾವ ಡ್ರೆಸ್ ಬೆಸ್ಟ್?- ಇಲ್ಲಿದೆ ಟಿಪ್ಸ್

    Jಹೊಸ ವರ್ಷಕ್ಕೆ (New Year 2025) ಮಾರುಕಟ್ಟೆಗೆ ಬಂದೇ ಬಿಡ್ತು. ನ್ಯೂ ಲುಕ್‌ನಲ್ಲಿ ಡಿಸೈನರ್‌ವೇರ್‌ನಲ್ಲಿ ಕಾಣಿಸಿಕೊಳ್ಳುವ ಆಸೆ ಯಾರಿಗಿಲ್ಲ ಹೇಳಿ ನೋಡೋಣ. ಇದಕ್ಕೆ ಪೂರಕ ಎಂಬಂತೆ, ಹೊಸ ವರ್ಷದ ಇವ್ ಪಾರ್ಟಿಯಲ್ಲಿ ಗ್ಲಾಮ್ ಡಾಲ್‌ನಂತೆ ಕಾಣಲು ನಾನಾ ಬಗೆಯ ವೈವಿಧ್ಯಮಯ ಫ್ಯಾಷನ್‌ವೇರ್‌ಗಳು ಫ್ಯಾಷನ್‌ಲೋಕಕ್ಕೆ ಲಗ್ಗೆ ಇಟ್ಟಿವೆ.

    ಈ ಸೀಸನ್‌ನಲ್ಲಿ ನ್ಯೂ ಇಯರ್‌ನಲ್ಲಿ ವೆಸ್ಟರ್ನ್ ಶೈಲಿಯ ಅತಿ ಹೆಚ್ಚು ಡಿಸೈನವೇರ್‌ಗಳು ಕಾಲಿಟ್ಟಿವೆ. ಜಗಮಗಿಸುವ ಶಿಮ್ಮರ್, ಶೈನಿಂಗ್ ಫ್ಯಾಬ್ರಿಕ್‌ನಿಂದಿಡಿದು, ಸಿಕ್ವೀನ್ಸ್ , ಮರ್ಸಲಾ ಹಾಗೂ ಮೆಟಾಲಿಕ್ ಶೇಡ್‌ಗಳ ಡಿಸೈನವೇರ್‌ಗಳು ಈಗಾಗಲೇ ಪಾಪ್ಯುಲರ್ ಆಗಿವೆ. ಇನ್ನು, ಎಂದಿನಂತೆ ರೆಡ್ ಶೇಡ್‌ನ ನಾನಾ ವರ್ಣಗಳು, ಮಿಕ್ಸ್ ಕಾಂಬಿನೇಷನ್ ಇರುವ ಡಿಸೈನವೇರ್‌ಗಳು ಕೂಡ ಪ್ರತಿ ವರ್ಷದಂತೆ ಈ ಬಾರಿಯೂ ಆಗಮಿಸಿವೆ.

    ಹೊಸ ವರ್ಷದ ಪಾರ್ಟಿಗೆ ಧರಿಸಬಹುದಾದ ವೈಬ್ರೆಂಟ್ ಶೇಡ್‌ನ ಬಗೆಬಗೆಯ ಡಿಸೈನ್ ಬಾಡಿಕಾನ್ ಶಾರ್ಟ್ ಡ್ರೆಸ್‌ಗಳು ಈ ಸೀಸನ್‌ನ ಹಾಟ್ ಟ್ರೆಂಡ್‌ನಲ್ಲಿ ಸೇರಿವೆ. ಇನ್ನು ಅವುಗಳಲ್ಲಿ ಕಾರ್ಸೆಟ್ ಬಾಡಿ ಫಿಟ್ ಡಿಸೈನ್‌ನವು, ನೆಟ್ಟೆಡ್ ಶೀರ್ ಫ್ಯಾಬ್ರಿಕ್‌ನವು, ಸಿಕ್ವಿನ್ಸ್, ಟೈಟ್ ಫಿಟ್ಟಿಂಗ್ ನೀಡುವ ಗ್ಲಾಮರಸ್ ಡಿಸೈನವೇರ್‌ಗಳು ಸೆಲೆಬ್ರೆಟಿ ಲುಕ್ ಬಯಸುವವರಿಗೆ ಬಂದಿವೆ.

    ಗೌನ್ ಪ್ರಿಯರಿಗಾಗಿ ಲೆಕ್ಕವಿಲ್ಲದಷ್ಟು ಬಗೆಯ ಗೌನ್‌ಗಳು ಕೂಡ ಎಂಟ್ರಿ ನೀಡಿವೆ. ಪಾಸ್ಟೆಲ್ ಶೇಡ್‌ನವು ಟೀನೇಜ್ ಹುಡುಗಿಯರಿಗೆ ಪ್ರಿಯವಾಗುವಂತಹ ಡಿಸೈನ್‌ನಲ್ಲಿ ಕಾಲಿಟ್ಟಿವೆ. ಬ್ಲ್ಯೂ, ನಿಯಾನ್, ಹೀಗೆ ನಾನಾ ಹೊಸ ಇಂಗ್ಲೀಷ್ ಶೇಡ್‌ಗಳ ಕೋಲ್ಡ್ ಶೋಲ್ಡರ್, ನೆಟ್ಟೆಡ್, ಕೇಪ್, ಸ್ಲಿವ್ಲೆಸ್ ಗೌನ್‌ಗಳು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಕೆಲವಂತೂ ಹೆವ್ವಿ ವೈಟ್‌ನವು ಹಾಗೂ ಲೇಯರ್ ಡಿಸೈನ್‌ನವು ಕೂಡ ಬೇಡಿಕೆ ಪಡೆದುಕೊಂಡಿವೆ. ಅವುಗಳಲ್ಲಿ, ಅತಿ ಹೆಚ್ಚಾಗಿ ಬಾಲ್ ಗೌನ್, ಕೇಪ್ ಗೌನ್, ಜಿಮ್ಮಿ ಚೂ ಫ್ಯಾಬ್ರಿಕ್‌ನ ಗೌನ್, ಬೀಡ್ಸ್, ಕ್ರಿಸ್ಟಲ್, ಪರ್ಲ್ ಹೀಗೆ ನಾನಾ ಹ್ಯಾಂಡ್‌ವರ್ಕ್ ಗೌನ್‌ಗಳು ಎಲ್ಲಾ ವಯಸ್ಸಿನ ನಾರಿ ಮಣಿಯರನ್ನು ಆಕರ್ಷಿಸುತ್ತಿವೆ.

    Satin Dress

    ಇನ್ನು, ನ್ಯೂ ಇಯರ್‌ನ ಫಾಲ್ ವಿಂಟರ್ ಇವನಿಂಗ್ ಪಾರ್ಟಿ ಡ್ರೆಸ್ ಕೆಟಗರಿಯಲ್ಲಿ ಶಾರ್ಟ್ ಫ್ರಾಕ್‌ಗಳು, ಸಿಂಡ್ರೆಲ್ಲಾ-ಅಂಬ್ರೆಲ್ಲಾ ಫ್ಲೇರ್ ಫ್ರಾಕ್‌ಗಳು ಹೆಚ್ಚು ಯುವತಿಯರನ್ನು ಸೆಳೆದಿವೆ. ಡಿಸ್ಕೋ, ಪಬ್ ಹಾಗೂ ಡಾನ್ಸ್ ಸ್ಟೇಜ್‌ಗಳಲ್ಲಿ ಕುಣಿದು ಕುಪ್ಪಳಿಸಲು ಬಯಸುವ ಡಾನ್ಸ್ ಪ್ರಿಯ ಹುಡುಗಿಯರಿಗೆಂದೇ ಜಗಮಗಿಸುವ ಲೈಟ್‌ವೇಟ್ ಗೌನ್ಸ್, ಫ್ರಾಕ್ಸ್ ಹಾಗೂ ಬಾಡಿಕಾನ್ ಔಟ್‌ಫಿಟ್‌ಗಳು ಲಗ್ಗೆ ಇಟ್ಟು ಹಂಗಾಮ ಎಬ್ಬಿಸಿವೆ. ಇದನ್ನೂ ಓದಿ:3 ತಿಂಗಳ ಬಳಿಕ ತಂಗಿ ಮದುವೆಯ ಫೋಟೋ ಹಂಚಿಕೊಂಡ ಸಾಯಿ ಪಲ್ಲವಿ

    Satin Dress

    ಫ್ಯಾಷನ್ ಟಿಪ್ಸ್:

    ಆದಷ್ಟೂ ಫ್ರೆಶ್ ಲುಕ್ ನೀಡುವಂತಹ ಡಿಸೈನವೇರ್‌ಗೆ ಮಾನ್ಯತೆ ನೀಡಿ.
    ವೈಬ್ರೆಂಟ್ ಶೇಡ್ಸ್ ಪಾರ್ಟಿಯ ರಂಗು ಹೆಚ್ಚಿಸುತ್ತವೆ.
    ಮೊದಲೇ ಟ್ರಯಲ್ ನೋಡಿ ಪಾರ್ಟಿ ಡ್ರೆಸ್ ಧರಿಸಿ.
    ಡಾನ್ಸ್ ಪ್ರಿಯರು, ತೀರಾ ಬಿಗಿಯಾದ ಔಟ್‌ಫಿಟ್ ಆಯ್ಕೆ ಮಾಡಬೇಡಿ.
    ಶಿಮ್ಮರಿಂಗ್ ಇರುವಂತಹ ಡ್ರೆಸ್‌ಗಳು ಆಕರ್ಷಕವಾಗಿ ಕಾಣಿಸುತ್ತವೆ.

  • ಹೊಸ ವರ್ಷ ಹಿನ್ನೆಲೆ – ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು

    ಹೊಸ ವರ್ಷ ಹಿನ್ನೆಲೆ – ಪ್ರವಾಸಿಗರಿಗೆ ಜೋಗ ಜಲಪಾತ ವೀಕ್ಷಣೆ ನಿರ್ಬಂಧ ತೆರವು

    ಶಿವಮೊಗ್ಗ: ಹೊಸ ವರ್ಷದ (New Year 2025) ಹಿನ್ನೆಲೆ ಅತಿ ಹೆಚ್ಚು ಪ್ರವಾಸಿಗರು ಬರುತ್ತಿರುವುದರಿಂದ ವಿಶ್ವ ವಿಖ್ಯಾತ ಜೋಗ ಜಲಪಾತ (Jog Falls) ವೀಕ್ಷಣೆಗೆ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ಜಿಲ್ಲಾಡಳಿತ ತೆರವುಗೊಳಿಸಿದೆ.

    ಜೋಗ ಜಲಪಾತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವುದರಿಂದ ಜ.1 ರಿಂದ ಮಾ.15 ರವರೆಗೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಇದೀಗ ಹೊಸವರ್ಷಾಚರಣೆ ಹಿನ್ನೆಲೆಯಲ್ಲಿ ವ್ಯಾಪಕವಾಗಿ ಪ್ರವಾಸಿಗರು ಜೋಗಕ್ಕೆ ಬರುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಜೋಗ ನಿರ್ವಹಣಾ ಪ್ರಾಧಿಕಾರದ ಪ್ರವೇಶ ದ್ವಾರ ಬಿಟ್ಟು ಉಳಿದ ಸ್ಥಳಗಳಿಂದ ಜೋಗ ಜಲಪಾತ ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗಿದೆ.

    ಮುಖ್ಯ ರಸ್ತೆಯ ವೀವ್ ಪಾಯಿಂಟ್, ಯಾತ್ರಿ ನಿವಾಸ, ರಾಣಿ ಫಾಲ್ಸ್, ಮುಂಬಯಿ ಬಂಗಲೆ, ಮುಂಗಾರು ಮಳೆ ಪಾಯಿಂಟ್ ಸೇರಿದಂತೆ ಇತರೆ ಸ್ಥಳಗಳಿಂದ ಪ್ರವಾಸಿಗರು ಜಲಪಾತದ ಸೊಬಗು ಕಣ್ತುಂಬಿಕೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

    ಜೋಗ ಜಲಪಾತದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಜಲಪಾತ ವೀಕ್ಷಿಸಲು ತೆರಳುವ ಮುಖ್ಯ ಪ್ರವೇಶ ದ್ವಾರದ ಗೋಪುರ ನಿರ್ಮಾಣ ಕಾಮಗಾರಿಯೂ ಪ್ರಗತಿಯಲ್ಲಿದೆ. ಇದರಿಂದಾಗಿ 3 ತಿಂಗಳ ಕಾಲ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ನಿಬರ್ಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

  • ಹೊಸ ವರ್ಷಾಚರಣೆಗೆ ಸಜ್ಜಾದ ಕಾಫಿನಾಡು – ಹೋಂ ಸ್ಟೇ, ರೆಸಾರ್ಟ್ 90% ಭರ್ತಿ

    ಹೊಸ ವರ್ಷಾಚರಣೆಗೆ ಸಜ್ಜಾದ ಕಾಫಿನಾಡು – ಹೋಂ ಸ್ಟೇ, ರೆಸಾರ್ಟ್ 90% ಭರ್ತಿ

    ಚಿಕ್ಕಮಗಳೂರು: ವೀಕ್ ಎಂಡ್ ಹಾಗೂ ಹೊಸ ವರ್ಷದ (New Year 2025) ಹಿನ್ನೆಲೆ ಕಾಫಿನಾಡಿಗೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇದರಿಂದ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಬಹುತೇಕ ಬುಕ್‌ ಆಗಿವೆ.

    ಚಿಕ್ಕಮಗಳೂರು (Chikkamagaluru), ಶೃಂಗೇರಿ (Sringeri), ಕೊಪ್ಪ ಎನ್ಆರ್ ಪುರ, ಮೂಡಿಗೆರೆ ಹಾಗೂ ಕಳಸ ತಾಲೂಕಿನಲ್ಲಿ ಅಧಿಕೃತ ಹಾಗೂ ಅನಧಿಕೃತ ಸೇರಿ ಒಟ್ಟು 1,200ಕ್ಕೂ ಅಧಿಕ ಹೋಂ ಸ್ಟೇಗಳಿವೆ. ಅಲ್ಲದೇ 20ಕ್ಕೂ ಹೆಚ್ಚು (Resort) ರೆಸಾರ್ಟ್‌ಗಳಿವೆ. ಆದರೆ, ವೀಕ್ ಎಂಡ್ ಹಾಗೂ ಹೊಸ ವರ್ಷ ಆಚರಣೆಯ ಹಿನ್ನೆಲೆ ಜಿಲ್ಲೆಯ ಬಹುತೇಕ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳು ಬುಕ್ ಆಗಿವೆ.

    ಪ್ರವಾಸಿಗರು ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರಿಗೆ ಫೋನ್ ಮಾಡಿ ಬುಕಿಂಗ್ ಕೇಳುತ್ತಿದ್ದಾರೆ. ಆದರೆ, ಹೊಸದಾಗಿ ಬುಕ್ ಮಾಡಲು ಪ್ರಯತ್ನಿಸುತ್ತಿರುವ ಪ್ರವಾಸಿಗರಿಗೆ ರೂಮ್ ಸಿಗುತ್ತಿಲ್ಲ. 15 ದಿನಗಳ ಮೊದಲೇ ರೂಮ್ ಬುಕಿಂಗ್ ಆರಂಭವಾಗಿದ್ದು, ಕೆಲವರು ತಿಂಗಳ ಹಿಂದೆಯೇ ಬುಕ್ ಮಾಡಿದ್ದಾರೆ. ಹಾಗಾಗಿ, ಡಿ.30 ಹಾಗೂ 31 ರಂದು ರೂಮ್ ಬುಕ್ ಮಾಡೋಣ ಎಂದುಕೊಂಡಿದ್ದ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ. ಹೋಂ ಸ್ಟೇ ಮಾಲೀಕರಿಗೆ ಫೋನ್ ಮಾಡುವ ಪ್ರವಾಸಿಗರು ಅಕ್ಕಪಕ್ಕದ ಹೋಂ ಸ್ಟೇಗಳಲ್ಲಿ ರೂಮ್ ಇದ್ದರೆ ಕೊಡಿಸಿ ಎಂದು ದುಂಬಾಲು ಬಿದ್ದಿದ್ದಾರೆ. ಆದರೆ, ಯಾವ ಹೋಂ ಸ್ಟೇಗಳಲ್ಲೂ ರೂಮ್ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಕೆಲ ಪ್ರವಾಸಿಗರು ಹೆಚ್ಚಿನ ಹಣ ಕೊಡ್ತೀವಿ ಎಂದರೂ ಕೂಡ ಕಾಫಿನಾಡ ಹೋಂ ಸ್ಟೇ, ರೆಸಾರ್ಟ್ ಹಾಗೂ ಲಾಡ್ಜ್‌ಗಳಲ್ಲಿ ರೂಮ್ ಇಲ್ಲದಂತಾಗಿದೆ. ‌

    ವೀಕೆಂಡ್ ಹಿನ್ನೆಲೆ ಚಿಕ್ಕಮಗಳೂರಿಗೆ ಬಂದಿರುವ ಪ್ರವಾಸಿಗರು ಮತ್ತೆರಡು ದಿನ ರೂಮ್ ಬುಕ್ ಮಾಡಿ ಹೊಸ ವರ್ಷವನ್ನು ಚಿಕ್ಕಮಗಳೂರಿನಲ್ಲಿ ಸ್ವಾಗತ ಕೋರೋದಕ್ಕೆ ಸಜ್ಜಾಗಿದ್ದಾರೆ. ಹೋಂ ಸ್ಟೇ ಮಾಲೀಕರು ಕೂಡ ಪ್ರವಾಸಿಗರನ್ನ ಆಕರ್ಷಿಸಲು ಹೋಂ ಸ್ಟೇಗಳಿಗೆ ನವಧುವಿನಂತೆ ಸಿಂಗಾರ ಮಾಡಿದ್ದಾರೆ. ಸುಣ್ಣ ಬಣ್ಣ ಬಳಿದು, ಬಣ್ಣ ಬಣ್ಣದ ದೀಪಾಲಂಕಾರ ಮಾಡಿದ್ದಾರೆ.

  • ಹೊಸ ವರ್ಷಾಚರಣೆಗೆ ಇನ್ನೆರಡು ದಿನ ಬಾಕಿ – ಬೆಂಗಳೂರಲ್ಲಿ ಸಿದ್ಧತೆ ಹೇಗಿದೆ?

    ಹೊಸ ವರ್ಷಾಚರಣೆಗೆ ಇನ್ನೆರಡು ದಿನ ಬಾಕಿ – ಬೆಂಗಳೂರಲ್ಲಿ ಸಿದ್ಧತೆ ಹೇಗಿದೆ?

    ಬೆಂಗಳೂರು: ಹೊಸ ವರ್ಷದ ಸೆಲೆಬ್ರೇಷನ್‌ಗೆ (New Year 2025) ಯುವ ಸಮೂಹ ಕಾತುರದಿಂದ ಕಾಯ್ತಿದ್ದು, ಈಗಾಗಲೆ ಪ್ರಮುಖ ಪಬ್-ಬಾರ್‌ & ರೆಸ್ಟೋರೆಂಟ್‌ಗಳಲ್ಲಿ ಸೀಟ್ ಬುಕ್ಕಿಂಗ್ ಆಗಿವೆ. ನ್ಯೂ ಇಯರ್ ಹಾಟ್ ಸ್ಪಾಟ್‌ಗಳಾದ ಬ್ರಿಗೇಡ್ ರೋಡ್, ಎಂಜಿ ರೋಡ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ಪಾರ್ಟಿ ಪ್ರಿಯರಿಗಾಗಿ ಸಿದ್ಧವಾಗುತ್ತಿವೆ.

    ಸಿಲಿಕಾನ್ ಸಿಟಿಯಲ್ಲಿ ನ್ಯೂ ಇಯರ್ ಸಂಭ್ರಮಾಚರಣೆಯ ಹಾಟ್ ಸ್ಪಾಟ್‌ಗಳಾದ ಬ್ರಿಗೇಡ್ ರೋಡ್, ಎಂ.ಜಿ. ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲದಲ್ಲಿ ಸಿದ್ಧತೆ ನಡೆಯುತ್ತಿದೆ. ಸಿಸಿಟಿವಿ ಹ್ಯಾಂಡಲ್ ಮಾಡಲು ತಾತ್ಕಾಲಿಕ ಕಂಟ್ರೋಲ್ ರೂಂ, ಎಕ್ಸ್ಟ್ರಾ ಲೈಟ್ಸ್, 12 ಐಲ್ಯಾಂಡ್‌ಗಳು, ವಾಚ್ ಟವರ್ಸ್‌ಗಳನ್ನ ಹಾಕುವ ಕೆಲಸ ನಡೀತಿದೆ. ಕುಡಿದು ಟೈಟ್ ಆದವರ ಆರೋಗ್ಯದಲ್ಲಿ ವ್ಯತ್ಯಾಸ ಆದರೆ ಅಂತಹವರನ್ನು ಆಸ್ಪತ್ರೆಗೆ ದಾಖಲಿಸಲು ಸೆಂಟ್‌ ಜಾನ್ ಆಸ್ಪತ್ರೆಯಲ್ಲಿ ಬೆಡ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಆಸ್ಪತ್ರೆಗೆ ಕರೆದೊಯ್ಯಲು ಅಂಬುಲೆನ್ಸ್‌ಗಳನ್ನ ಮೀಸಲಿರಿಸಲಾಗಿದೆ. ಹೆಣ್ಣುಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ರಾಣಿ ಚೆನ್ನಮ್ಮ ಪಡೆ ಕೂಡ ಕಾರ್ಯ ನಿರ್ವಹಿಸಿದ್ದು, ಭದ್ರತೆಗಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸುತ್ತಮುತ್ತ ಎರಡು ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ ಮಾಡಲಾಗಿದೆ. ಜನಸಂದಣಿ ಪ್ರದೇಶದಲ್ಲಿ ಡ್ರೋಣ್ ಕ್ಯಾಮೆರಾ, ಮಹಿಳೆಯರಿಗೆ, ವಯೋವೃದ್ಧರಿಗೆ ಪ್ರತ್ಯೇಕ್ ಲೇನ್ ಮಾಡಲಾಗುತ್ತೆ. ಇದನ್ನೂ ಓದಿ: ಹೋಟೆಲ್, ರೆಸಾರ್ಟ್‌ನವರು ನಿಯಮಗಳಿಗೆ ಅನುಸಾರ ಹೊಸ ವರ್ಷಾಚರಣೆ ಮಾಡಿ: ಡಿಕೆಶಿ‌ ವಾರ್ನಿಂಗ್‌

    ಕೋರಮಂಗಲ ಸುತ್ತಮುತ್ತಲೂ ಕೂಡ ಕಳೆದ ಬಾರಿಗಿಂತ ಈ ಬಾರಿ ಕ್ಯಾಮೆರಾ ಅಳವಡಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ಈಗಾಗಲೇ ಇರುವ ಕ್ಯಾಮೆರಾಗಳನ್ನ ಬಿಟ್ಟು, 180 ಕ್ಯಾಮೆರಾಗಳನ್ನ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಸಿಸಿಟಿವಿ ಮಾನಿಟರಿಂಗ್‌ಗೆ ಮಿನಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಬೀದಿ ದೀಪಗಳು ಕಡಿಮೆ ಇರುವುದರಿಂದ ಹೆಚ್ಚುವರಿಯಾಗಿ ಲೈಟ್ ಹಾಕಲಾಗ್ತಿದೆ. ಮಹಿಳೆಯರ ಸುರಕ್ಷತೆಗೆ 15 ಸೇಫ್ಟಿ ಐಲ್ಯಾಂಡ್, 15 ವಾಚ್ ಟವರ್ ಸ್ಥಾಪಿಸಲಾಗ್ತಿದೆ. ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ 10 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಮೂರು ಅಂಬುಲೆನ್ಸ್‌ ಜೊತೆ ಎರಡು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯವಸ್ಥೆ ಕಲ್ಪಿಸಲಾಗಿದೆ.
    500 ಕ್ಕಿಂತ‌ ಹೆಚ್ಚು ಹೋಂಗಾರ್ಡ್, 700 ಪೊಲೀಸ್ ಸಿಬ್ಬಂದಿ, ಅಧಿಕಾರಿಗಳನ್ನ ಭದ್ರತೆಗೆ ನಿಯೋಜಿಸಲಾಗಿದೆ.

    ನಿಯಮಗಳಿಗೆ ಅನುಸಾರ ಹೊಸ ವರ್ಷಾಚರಣೆ ಮಾಡಿ
    ಬೆಂಗಳೂರು ಉಸ್ತುವಾರಿ ಸಚಿವ ಡಿಸಿಎಂ ಡಿಕೆ ಶಿವಕುಮಾರ್, ನಿಯಮಗಳಿಗೆ ಒಳಪಟ್ಟು ಹೊಸ ವರ್ಷಾಚರಣೆ ಮಾಡುವಂತೆ ಆಯೋಜಕರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ರೂಪದ‌ ಮನವಿ ಮಾಡಿಕೊಂಡಿದ್ದಾರೆ. ಡಾ.ಮನಮೋಹನ್ ಸಿಂಗ್ ನಿಧನದ ಹಿನ್ನೆಲೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದೇವೆ.‌ ಇದು ಕೇವಲ ಸರ್ಕಾರದ ಕಾರ್ಯಕ್ರಮಗಳಿಗೆ‌ ಮಾತ್ರ ಅನ್ವಯ ಆಗುತ್ತದೆ. ಖಾಸಗಿ ಕಾರ್ಯಕ್ರಮಗಳನ್ನು ನಿಯಮಗಳಿಗೆ ಅನುಸಾರ ಮಾಡಿಕೊಳ್ಳಿ.‌ ಹೋಟೆಲ್ ರೆಸಾರ್ಟ್‌ನವರು ಸರ್ಕಾರದ ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ.‌ ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ.‌ ಬೆಂಗಳೂರಿನಾದ್ಯಂತ ಹತ್ತು ಸಾವಿರ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಎಚ್ಚರಿಕೆ ಅಂತನಾದ್ರೂ ತಿಳಿದುಕೊಳ್ಳಿ, ಮನವಿ ಅಂತನಾದ್ರೂ ತಿಳಿದುಕೊಳ್ಳಿ ಆದ್ರೆ ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಜೆಪಿ ಅವರು ಏನೇ ಮಾಡಿದ್ರು ನಾನು ರಾಜೀನಾಮೆ ಕೊಡೊಲ್ಲ: ಪ್ರಿಯಾಂಕ್ ಖರ್ಗೆ

  • ಹೋಟೆಲ್, ರೆಸಾರ್ಟ್‌ನವರು ನಿಯಮಗಳಿಗೆ ಅನುಸಾರ ಹೊಸ ವರ್ಷಾಚರಣೆ ಮಾಡಿ: ಡಿಕೆಶಿ‌ ವಾರ್ನಿಂಗ್‌

    ಹೋಟೆಲ್, ರೆಸಾರ್ಟ್‌ನವರು ನಿಯಮಗಳಿಗೆ ಅನುಸಾರ ಹೊಸ ವರ್ಷಾಚರಣೆ ಮಾಡಿ: ಡಿಕೆಶಿ‌ ವಾರ್ನಿಂಗ್‌

    ಬೆಂಗಳೂರು: ನಗರದಲ್ಲಿ ಹೊಸ ವರ್ಷಾಚರಣೆಗೆ (New Year 2025) ಪೊಲೀಸ್ ಇಲಾಖೆ ಈಗಾಗಲೇ ಎಲ್ಲ ಅಗತ್ಯ ಬಂದೋಬಸ್ತ್ ಮಾಡಿಕೊಂಡಿದೆ. ಈ ಬೆನ್ನಲ್ಲೇ ಬೆಂಗಳೂರಿನಲ್ಲಿ (Bengaluru) ಮಾತಾಡಿದ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಹ ನಿಯಮಗಳಿಗೆ ಒಳಪಟ್ಟು ಹೊಸ ವರ್ಷಾಚರಣೆ ಮಾಡುವಂತೆ ಆಯೋಜಕರಿಗೆ ಹಾಗೂ ಸಾರ್ವಜನಿಕರಿಗೆ ಎಚ್ಚರಿಕೆ ರೂಪದ ಮನವಿ ಮಾಡಿಕೊಂಡಿದ್ದಾರೆ.

    ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ (Dr. ManMohan Singh) ನಿಧನದ ಹಿನ್ನೆಲೆ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಿದ್ದೇವೆ. ಇದು ಕೇವಲ ಸರ್ಕಾರದ ಕಾರ್ಯಕ್ರಮ ಗಳಿಗೆಮಾತ್ರ ಅನ್ವಯ ಆಗುತ್ತದೆ. ಖಾಸಗಿ ಕಾರ್ಯಕ್ರಮಗಳನ್ನು ನಿಯಮಗಳಿಗೆ ಅನುಸಾರ ಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಐಸಿಸಿ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ – ರೇಸ್‌ನಲ್ಲಿರುವ ನಾಲ್ವರ ಪೈಕಿ ಭಾರತದ ಅರ್ಷ್‌ದೀಪ್‌ಗೆ ಸ್ಥಾನ!

    ಅಲ್ಲದೇ ಹೋಟೆಲ್, ರೆಸಾರ್ಟ್‌ನವರು ಸರ್ಕಾರದ ನಿಯಮಗಳಿಗೆ ಅನುಸಾರ ಹೊಸ ವರ್ಷದ ಆಚರಣೆ ಮಾಡಿ. ನಾವು ಬ್ಯುಸಿನೆಸ್ ಮಾಡುವವರಿಗೂ ಅಡ್ಡಿ ಪಡಿಸಲು ಆಗಲ್ಲ. ಬೆಂಗಳೂರಿನಾದ್ಯಂತ 10,000 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಇದನ್ನು ಎಚ್ಚರಿಕೆ ಅಂತನಾದ್ರೂ ತಿಳಿದುಕೊಳ್ಳಿ, ಮನವಿ ಅಂತನಾದ್ರೂ ತಿಳಿದುಕೊಳ್ಳಿ ಆದ್ರೆ ನಿಯಮಗಳಿಗೆ ಅನುಸಾರ, ಎಚ್ಚರಿಕೆಯಿಂದ ಹೊಸವರ್ಷದ ಆಚರಣೆ ಮಾಡಿ ಅಂತ ಹೇಳಿದ್ದಾರೆ. ಇದನ್ನೂ ಓದಿ: ಕೋಲಾರ, ವಿಜಯಪುರದಲ್ಲಿ KPSC ಗೆಜೆಟೆಡ್ ಪ್ರೊಬೇಷನರಿ ಪರೀಕ್ಷೆಯಲ್ಲಿ ಲೋಪ – ಪರೀಕ್ಷಾರ್ಥಿಗಳ ಆಕ್ರೋಶ

  • ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್‌ – ಡ್ರಂಕ್‌ & ಡ್ರೈವ್‌ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್‌ ರದ್ದು!

    ನ್ಯೂ ಇಯರ್ ಸೆಲೆಬ್ರೇಷನ್‌ಗೆ ಬಿತ್ತು ಕಂಡೀಷನ್‌ – ಡ್ರಂಕ್‌ & ಡ್ರೈವ್‌ ಮಾಡಿ ತಗ್ಲಾಕೊಂಡ್ರೆ ಲೈಸೆನ್ಸ್‌ ರದ್ದು!

    – ಮಧ್ಯರಾತ್ರಿ 1 ಗಂಟೆ ತನಕ ಹೊಸ ವರ್ಷಾಚರಣೆಗೆ ಅವಕಾಶ
    – ಡಿ.31ರ ರಾತ್ರಿ ನಗರ ಫ್ಲೈಓವರ್‌ಗಳು ಬಂದ್‌

    ಬೆಂಗಳೂರು: ಹೊಸವರ್ಷದ ಸಂಭ್ರಮದ (New Year Celebration) ನಡುವೆ ಯಾವುದೇ ಅವಘಢ ಸಂಭವಿಸಿದಂತೆ ಎಚ್ಚರ ವಹಿಸುವ ನಿಟ್ಟಿನಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ ಪೊಲೀಸರು ಆಯಾ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮಗಳೊಂದಿಗೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಅಂತ ನಗರ ಪೊಲೀಸ್ ಆಯುಕ್ತ (Bengaluru Police Commissioner) ದಯಾನಂದ್‌ ತಿಳಿಸಿದ್ದಾರೆ.

    ಬೆಂಗಳೂರಿನಲ್ಲಿಂದು (Bengaluru) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಗಾಗಲೇ ಸಂಬಂಧಪಟ್ಟ ಬಿಬಿಎಂಪಿ, ಅಗ್ನಿಶಾಮಕ ದಳ, ಬೆಸ್ಕಾಂ, ಬಿಎಂಟಿಸಿ, ನಮ್ಮ ಮೆಟ್ರೋ ಇಲಾಖೆಗಳೊಂದಿಗೆ 2-3 ಸುತ್ತಿನ ಸಭೆ ಮಾಡಲಾಗಿದೆ. ಇಂದಿರಾನಗರ, ಕೋರಮಂಗಲ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ, ಅತಿಹೆಚ್ಚು ಜನ ಸೇರುವ ಎಮ್‌.ಜಿ ರಸ್ತೆ, ಬಿಗ್ರೇಡ್ ರಸ್ತೆಯಲ್ಲಿ ಹೆಚ್ಚಿನ ಭದ್ರತೆ, ಮಹಿಳೆಯರಿಗೆ ಮಹಿಳಾ ಸೇಫ್ಟಿ, ಹೈ ಲ್ಯಾಂಡ್, ವಾಚ್ ಟವರ್, ಶ್ವಾನ ದಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಡಿ.ಕೆ ಸುರೇಶ್ ತಂಗಿ ಅಂತ ಹೇಳ್ಕೊಂಡು ವಂಚನೆ ಕೇಸ್ -ಆರೋಪಿ ಐಶ್ವರ್ಯ ಗೌಡ, ಪತಿ ಹರೀಶ್‌ ಅರೆಸ್ಟ್

    ಅಲ್ಲದೇ ಡ್ರೋನ್‌ ಕ್ಯಾಮೆರಾ ನಿಯೋಜಿಸಿದ್ದು, ಹೆಚ್ಚಿನ ಸಂಖ್ಯೆಯ ಸಿಸಿಟಿವಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ಬ್ರಿಗೇಡ್‌ ರೋಡ್‌ಗೆ ಕಾವೇರಿ ಎಪೋರಿಯಂನಿಂದ ಮಾತ್ರ ಎಂಟ್ರಿ ಇರಲಿದೆ. ಜೊತೆಗೆ ಬಾರ್‌ ಅಂಡ್ ರೆಸ್ಟೋರೆಂಟ್ ಮಾಲೀಕರ ಜೊತೆ ಸಭೆ ಮಾಡಿದ್ದು, ಮಧ್ಯರಾತ್ರಿ 1 ಗಂಟೆ ತನಕ ಹೊಸ ವರ್ಷ ಆಚರಣೆಗೆ ಸಮಯ ನಿಗದಿ ಮಾಡಲಾಗಿದೆ. ಇನ್ನೂ ನಗರದ ಹೊರವಲಯದ ರೇವ್ ಪಾರ್ಟಿಗಳ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಅನಧಿಕೃತ ವಾಗಿ ಪಾರ್ಟಿ ಆಯೋಜನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

    ಇತ್ತ 11 ಗಂಟೆ ನಂತರ ಎಮ್‌.ಜಿ ರಸ್ತೆ ಮೆಟ್ರೋ ಸ್ಟೇಷನ್ ಅನ್ನೂ ಮುಚ್ಚಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಹಿನ್ನಲೆ ಕೇವಲ ಬಂದು ಇಳಿಯುವುದಕ್ಕೆ ಮಾತ್ರ ಅವಕಾಶ ಇದ್ದು, ವಾಪಸ್ಸು ಹೋಗಲು ಟ್ರಿನಿಟಿ ಸರ್ಕಲ್ ಅಥವಾ ಕಬ್ಬನ್ ಪಾರ್ಕ್‌ಗೆ ಹೋಗಿಯೇ ಮೆಟ್ರೋ ಹತ್ತಬೇಕು. ಇನ್ನೂ ಅನುಚಿತ ವರ್ತನೆ ತೋರುವವರ ಬಗ್ಗೆ ಕೂಡ ಹೆಚ್ಚು ಗಮನ ಹರಿಸೋದಾಗಿ ಕಮಿಷನರ್ ಹೇಳಿದ್ದಾರೆ. ಬೈಕ್‌ಗಳಲ್ಲಿ ಪದೇ ಪದೇ ಓಡಾಟ.. ಹೊಸ ವರ್ಷ ವಿಶ್ ಮಾಡುವ ಬರದಲ್ಲಿ ಕೂಗಾಟ.. ಪೀಪಿಗಳನ್ನ ಊದುವುದು, ವಿಚಿತ್ರ ರೀತಿಯ ಮಾಸ್ಕ್ ಹಾಕಿಕೊಂಡು ತೊಂದರೆ ಮಾಡುವವರ ವಿರುದ್ಧ ಕ್ರಮದ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಶಿವಣ್ಣನ ಮನೆ ನಾಯಿ ʻನೀಮೋʼ ನಿಧನ – ಕರುಳು ಹಿಂಡುವ ಪತ್ರ ಬರೆದ ಗೀತಾ ಶಿವರಾಜ್‌ಕುಮಾರ್

    ಟ್ರಾಫಿಕ್‌ ನಿಯಂತ್ರಣಕ್ಕೆ ಮಾರ್ಗ ಬದಲಾವಣೆ:
    ಹೊಸವರ್ಷದ ದಿನ ಟ್ರಾಫಿಕ್ ನಿಯಂತ್ರಣಕ್ಕಾಗಿ ಕೆಲ ಮಾರ್ಗಗಳ ಬದಲಾವಣೆ ಕೂಡ ಮಾಡಲಾಗಿದೆ. ಎಮ್‌ಜಿ ರೋಡ್ ಬ್ರಿಗೆಡ್ ರೋಡ್ ಬಳಿ ಯಾವುದೇ ಪಾರ್ಕಿಂಗ್ ಇರೋದಿಲ್ಲ. ಎಮ್‌.ಜಿ ರಸ್ತೆ, ಬ್ರಿಗೇಡ್, ಇಂದಿರಾನಗರ, ಕೋರಮಂಗಲ ಬಳಿ ಪಾರ್ಕಿಂಗ್‌ಗೆ ಪ್ರತ್ಯೇಕವಾಗಿ ಸೂಚನೆ ನೀಡಲಾಗಿದೆ. ಎಲ್ಲಾ ರೀತಿಯ ಫ್ಲೈ ಓವರ್‌ಗಳು ಕ್ಲೋಸ್ ಇರಲಿವೆ. ನೋ ಪಾರ್ಕಿಂಗ್‌ಗಳಲ್ಲಿ ಪಾರ್ಕ್ ಮಾಡಿದ್ರೆ ಗಾಡಿಗಳನ್ನ ಟೋ ಮಾಡಲಾಗುತ್ತೆ. ಆ ದಿನ ರಾತ್ರಿಯಿಡೀ ಟೋಯಿಂಗ್ ವಾಹನಗಳು ಆಕ್ಟೀವ್ ಆಗಿ ಇರಲಿವೆ. ಅಲ್ಲಲ್ಲಿ ಡ್ರಾಪ್ ಪಿಕಪ್ ಬಗ್ಗೆ ಸೂಚನಾಫಲಕ ಹಾಕಲಾಗುತ್ತೆ.

    ಪೊಲೀಸ್ ಸಿಬ್ಬಂದಿ ಕೂಡ ಸ್ಥಳದಲ್ಲಿ ಮಾಹಿತಿ ನೀಡಲಿದ್ದಾರೆ. ಓಲಾ, ಉಬರ್‌ ಸಂಸ್ಥೆಗಳೊಂದಿಗೆ ಸಭೆ ನಡೆಸಿ ಅವರಿಗೂ ಡ್ರಾಪ್, ಪಿಕಪ್ ಪಾಯಿಂಟ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಇದರ ಮಧ್ಯೆ ಹೆಚ್ಚಿನ ಹಣ ಕೇಳುವ ಓಲಾ, ಉಬರ್‌ ಮೇಲೆ ಕ್ರಮ ಕೈಗೊಳ್ಳಲಾಗುತ್ತೆ. ಯಾರೂ ಕೂಡ ಕುಡಿದು ವಾಹನಗಳನ್ನ ಓಡಿಸಬಾರದು ಅಂತ ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಎಮ್.ಎನ್ ಅನುಚೇತ್ ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ ಕುಡಿದು ವಾಹನ ಚಲಾಯಿಸಿದ್ರೆ, ವಾಹನ ಪರವಾನಗಿಯನ್ನೇ ರದ್ದುಗೊಳಿಸಲಾಗುತ್ತದೆ ಎಂದೂ ಸಹ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ | ಮರಾಠಿ ನಟಿ ಉರ್ಮಿಳಾ ಕಾರು ಹರಿದು ಓರ್ವ ಕಾರ್ಮಿಕ ಸಾವು

  • ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ – ರಾತ್ರಿ 11 ಗಂಟೆ ಬಳಿಕ ಎಂ.ಜಿ ರಸ್ತೆಯಿಂದ ಸಂಚಾರ ಬಂದ್‌

    ಹೊಸ ವರ್ಷಾಚರಣೆಗೆ ಮೆಟ್ರೋ ರೈಲು ಸೇವೆ ವಿಸ್ತರಣೆ – ರಾತ್ರಿ 11 ಗಂಟೆ ಬಳಿಕ ಎಂ.ಜಿ ರಸ್ತೆಯಿಂದ ಸಂಚಾರ ಬಂದ್‌


    – ಎಲ್ಲಿ ಹತ್ತಿ, ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್‌

    ಬೆಂಗಳೂರು: ಹೊಸ ವರ್ಷಕ್ಕೆ ರಾಜಧಾನಿ ಬೆಂಗಳೂರು (Bengaluru) ರೆಡಿಯಾಗ್ತಿದ್ದು, ಡಿ.31ರ ರಾತ್ರಿ ನೇರಳೆ ಮತ್ತು ಹಸಿರು ಮಾರ್ಗ ಮೆಟ್ರೋ ರೈಲು ಸೇವೆಗಳ (Namma Metro Train Service) ವಿಸ್ತರಣೆ ಮಾಡಲಾಗಿದೆ. ಇದನ್ನೂ ಓದಿ:  ಅಂತ್ಯಕ್ರಿಯೆ ಸ್ಥಳದಲ್ಲೇ ತಲೆಯೆತ್ತಲಿದೆಯೇ ಸಿಂಗ್‌ ಸ್ಮಾರಕ? – ಪ್ರಧಾನಿ ಮೋದಿಗೆ ಕಾಂಗ್ರೆಸ್‌ ಪತ್ರ!

    ಜನವರಿ-1 ರಂದು ಮುಂಜಾನೆ 2 ಗಂಟೆಗೆ ಎಲ್ಲಾ ಟರ್ಮಿನಲ್‌ನಿಂದ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ 2.40 ಗಂಟೆಗೆ ಕೊನೆಯ ರೈಲು ಹೊರಡಲಿದೆ. 31 ಡಿಸೆಂಬರ್ ರಾತ್ರಿ 11 ರಿಂದ 10 ನಿಮಿಷಕ್ಕೊಮ್ಮೆ ಟ್ರೈನ್ ಸೇವೆ ಲಭ್ಯವಿರಲಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಕುನೋ ಪಾರ್ಕ್‌ನ ಚಿರತೆ ಶಿಯೋಪುರ್ ರಸ್ತೆಯಲ್ಲಿ ಪತ್ತೆ – ನಿವಾಸಿಗಳಲ್ಲಿ ಆತಂಕ

    ಡಿ. 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಎಲ್ಲಿ ಹತ್ತಿ ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್‌ ಇರಲಿದೆ. ಇದನ್ನೂ ಓದಿ: ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ

  • 2025ರ ಹೊಸ ವರ್ಷಾಚರಣೆಗೆ ದಿನಗಣನೆ – ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಟಫ್‌ ರೂಲ್ಸ್‌ ಜಾರಿ

    2025ರ ಹೊಸ ವರ್ಷಾಚರಣೆಗೆ ದಿನಗಣನೆ – ಬೆಂಗಳೂರಿನಲ್ಲಿ ಖಾಕಿ ಅಲರ್ಟ್, ಟಫ್‌ ರೂಲ್ಸ್‌ ಜಾರಿ

    ಬೆಂಗಳೂರು: 2025ರ ಹೊಸ ವರ್ಷ (New Year 2025) ಆಚರಣೆ ದಿನಗಣನೆ ಆರಂಭವಾಗಿದೆ. ಹಾಗಾಗಿ ಪೊಲೀಸರು ಈ ಬಾರಿ ಸಂಭ್ರಮಾಚರಣೆ ವೇಳೆ ಹದ್ದಿನ ಕಣ್ಣಿಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಂಡಿದ್ದರು ಸುಮಾರು 36 ಅಂಶಗಳನ್ನು ಒಳಗೊಂಡ ಗೈಡ್ ಲೈನ್ಸ್ ಅನ್ನು ಬೆಂಗಳೂರು ಪೊಲೀಸ್‌ ಆಯುಕ್ತರು (Bengaluru Police Commissioner) ಬಿಡುಗಡೆ ಮಾಡಿದ್ದಾರೆ.

    ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳಲು ಆಯಾ ಡಿಸಿಪಿಗಳಿಗೆ ಸೂಚನೆ ಕೊಡಲಾಗಿದೆ. ಪ್ರಮುಖವಾಗಿ ಇತ್ತೀಚಿಗೆ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಕೆಲವು ಸಮಾಜ ಘಾತುಕ ಚಟುವಟಿಕೆಗಳು ಶಾಂತಿಗೆ ಭಂಗವನ್ನುಂಡುಮಾಡುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.

    ಸಂಭ್ರಮಾಚರಣೆ ವೇಳೆ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆಯುವ ಸಾಧ್ಯತೆ ಇರುತ್ತೆ, ಅಂತವರ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರುವಂತೆ ಸೂಚನೆ ಕೊಡಲಾಗಿದೆ. ಹಾಗಾದರೆ ಬೆಂಗಳೂರು ಪೊಲೀಸರು ನ್ಯೂ ಇಯರ್ ಬಂದೋಬಸ್ತ್‌ಗೆ ಮಾಡಿಕೊಂಡಿರುವ ಬ್ಲೂ ಪ್ರೀಂಟ್ ಏನು ಎಂಬುದರ ಮಾಹಿತಿ ಇಲ್ಲಿದೆ.

    ಹೊಸ ವರ್ಷಾಚರಣೆಗೆ ಟಫ್‌ ರೂಲ್ಸ್

    1. ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ
    2. ವರ್ಷಾಚರಣೆ ವಿರೋಧಿಸುವ ಸಂಘಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹ
    3. ಸಂಘಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹ
    4. ಮಾಲ್ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು
    5. ಎಲ್ಲಾ ಅಧಿಕಾರಿಗಳು ಸರ್ವಿಸ್ ರಿವಾಲ್ವರ್ ಕಡ್ಡಾಯವಾಗಿ ಹೊಂದಿರಬೇಕು
    6. ಸಿಬ್ಬಂದಿ ಹೆಲ್ಮೆಟ್ ಮತ್ತು ಲಾಠಿಗಳನ್ನು ಹೊಂದಿರಬೇಕು
    7. ಹೆಣ್ಮಕ್ಕಳನ್ನು ಚುಡಾಯಿಸುವವರು, ದಾಂದಲೆ ಮಾಡುವವರನ್ನ ಕೂಡಲೇ ವಶಕ್ಕೆ ಪಡೆದು ಕ್ರಮ
    8. ಮದ್ಯ ಮಾರಾಟ ಜಾಗದಲ್ಲಿ ಗಲಾಟೆ, ದೊಂಬಿ ನಡೆದರೆ ಮಾಲೀಕರೇ ಹೊಣೆ
    9. ಜನ ಸೇರುವ ರಸ್ತೆ ಮತ್ತು ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ
    10. ಎಲ್ಲಾ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಆನ್ ಇರುವಂತೆ ನೋಡಿಕೊಳ್ಳುವುದು
    11. ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್‌, ಎಂ.ಜಿ ರಸ್ತೆ, ಇತರೆಡೆ ಜನರ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತ ಕ್ರಮ
    12. ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು
    13. ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
    14. ಪ್ರಮುಖ ಫ್ಲೈಓವರ್‌ಗಳ ಮೇಲೆ ವಾಹನ ಸಂಚಾರ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು
    15. ಠಾಣೆಯ ಹೊಯ್ಸಳ ಮತ್ತು ಚೀತಾಗಳು ಚುರುಕಾದ ಗಸ್ತು ನಿರ್ವಹಿಸುವುದು ಎಂದು ರೂಲ್ಸ್ ಮಾಡಲಾಗಿದೆ.
    16. ಹೊಸ ವರ್ಷ 2025, ಬೆಂಗಳೂರು, ಬೆಂಗಳೂರು ಪೊಲೀಸ್‌, ಹೊಸ ವರ್ಷ ಗೈಡ್‌ಲೈನ್ಸ್

  • Chikkaballapura | ನಂದಿಗಿರಿಧಾಮದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ – ಪ್ರವಾಸಿಗರಿಗೆ ಶಾಕ್‌

    Chikkaballapura | ನಂದಿಗಿರಿಧಾಮದಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್ – ಪ್ರವಾಸಿಗರಿಗೆ ಶಾಕ್‌

    ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆಗೂ ನಂದಿಬೆಟ್ಟಕ್ಕೂ ಅದೇನೊ ಒಂಥರ ನಂಟು.. ಪ್ರಕೃತಿ ಮಡಿಲಲ್ಲಿ ಕುಡಿದು ಕುಣಿದು ಕುಪ್ಪಳಿಸಿ ಹೊಸ ವರ್ಷ 2025ನ್ನು (New Year 2025) ಸ್ವಾಗತಿಸೋಣ ಅಂತ, ಕೆಲ ಪಾರ್ಟಿ ಪ್ರಿಯರು ಅಂದುಕೊಂಡಿದ್ರೆ… ಈಗಲೇ ನಿಮ್ಮ ಪ್ಲ್ಯಾನ್‌ ಬದಲಾಯಿಸಿಕೊಳ್ಳಿ, ಯಾಕಂದ್ರೆ ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲಾಡಳಿತ ಸಂಪೂರ್ಣ ನಿಷೇಧ ಏರಿದೆ.

    ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮ (Nandi Hills) ಅಂದ್ರೆ ತಂಪಾದ ಹವಾಗುಣ, ತುಂತುರು ಮಳೆ, ಗಿಡ, ಮರ, ಬಳ್ಳಿಗಳ ಸೊಬಗು, ನಕ್ಕು ನಲಿಯುವ ತರಹೆವಾರು ಹೂಗಳ ವಯ್ಯಾರ. ಮಿಗಿಲಾಗಿ ಸಮುದ್ರಮಟ್ಟದಿಂದ 1,478 ಮೀಟರ್ ಎತ್ತರದಲ್ಲಿ ನಿಂತು ಸೂರ್ಯೋದಯ ಹಾಗೂ ಸೂರ್ಯಾಸ್ತ ವಿಹಂಗಮ ನೋಟ ನೋಡುವುದಕ್ಕೆ ತುಂಬಾ ಫೇಮಸ್. ಇನ್ನೂ ನಂದಿಗಿರಿಧಾಮದಲ್ಲಿ ಕಾಣಸಿಗುವ ಬೆಳ್ಳಿ ಮೋಡ, ಇಬ್ಬನಿ, ಸುತ್ತಲೂ ಎತ್ತ ನೋಡಿದರೂ ಮುತ್ತಿಕ್ಕುವ ಮಂಜು, ಇಂಥ ಪ್ರಕೃತಿ ಸೊಬಗಿನಲ್ಲಿ ಕುಳಿತು ಹೊಸ ವರ್ಷ 2025ನ್ನು ಸ್ವಾಗತೀಸೋಣ ಅಂತ ಕೆಲವು ಪಾರ್ಟಿ ಪ್ರಿಯರು ಅಂದುಕೊಂಡಿದ್ರು. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಪಾರ್ಟಿ ಪ್ರಿಯರ ಕನಸಿಗೆ ತಣ್ಣೀರು ಎರಚಿದೆ. ಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ನಿರ್ಬಂಧ ವಿಧಿಸಿದೆ.

    ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ 2025 ಜನವರಿ 1 ರಂದು ಬೆಳಿಗ್ಗೆ 6 ಗಂಟೆವರೆಗೂ ಸಾರ್ವಜನಿಕ ಪ್ರವೇಶ ನಿರ್ಬಂಧಿಸಿದ್ದು, ಜೊತೆಗೆ ಅತಿಥಿ ಗೃಹಗಳಿಗೆ ಪ್ರವೇಶವನ್ನೂ ಬಂದ್ ಮಾಡಲಾಗಿದೆ. ಇದ್ರಿಂದ ಪ್ರವಾಸೋದ್ಯಮ ಇಲಾಖೆಗೂ ನಿರ್ಬಂಧದ ಬಿಸಿ ಮುಟ್ಟಿದೆ. ಇದನ್ನೂ ಓದಿ: ಕಬ್ಬನ್‌ ಪಾರ್ಕ್‌ – ಯಾವುದೇ ಗುಂಪು ಚಟುವಟಿಕೆಗೆ ಅನುಮತಿ ಕಡ್ಡಾಯ

    ಒಟ್ಟಾರೆ ಹೊಸ ವರ್ಷ ಆಚರಣೆಗೆ ಬೆಂಗಳೂರಿನ ಪಬ್ ರೆಸಾರ್ಟ್‌ಗಳ ಬದಲು ಪ್ರಕೃತಿಯ ಮಡಿಲಲ್ಲಿ ಹೊಸ ವರ್ಷಾಚರಣೆಯ ಕನಸ್ಸು ಕಂಡಿದ್ದ ಯುವ ಸಮುದಾಯಕ್ಕೆ ನಿರಾಸೆಯಾಗಿದೆ. ಇದನ್ನೂ ಓದಿ: ಅಮಿತ್ ಶಾ ಫೇಕ್ ಎನ್‍ಕೌಂಟರ್‌ಗೆ ಹೆಸರುವಾಸಿ: ಜೋಶಿ ವಿರುದ್ಧ ಹರಿಪ್ರಸಾದ್ ಕಿಡಿ