Tag: New Year 2025

  • ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!

    ವರ್ಷದ ಮೊದಲ ದಿನ: 2 ಲಕ್ಷ ಜನರಿಂದ ಅಯೋಧ್ಯೆ ರಾಮನ ದರ್ಶನ!

    ಅಯೋಧ್ಯೆ: ಹೊಸ ವರ್ಷದ ಮೊದಲ ದಿನವೇ ಅಯೋಧ್ಯೆಯಲ್ಲಿ ಜನವೋ ಜನ. ಜನವರಿ 1ರ ಸಂಜೆ 5 ಗಂಟೆಯವರೆಗೆ ಸುಮಾರು 2 ಲಕ್ಷಕ್ಕೂ ಅಧಿಕ ಜನರು ಅಯೋಧ್ಯೆಯಲ್ಲಿ ವಿರಾಜಿತ ಬಾಲಕ ರಾಮನ ದರ್ಶನ ಪಡೆದಿದ್ದಾರೆ. ಅಯೋಧ್ಯೆಯ ತುಂಬಾ ರಾಮಭಕ್ತರ ದಂಡೇ ಕಾಣಿಸುತ್ತಿದ್ದು, ತಮ್ಮ ಇಷ್ಟದೇವರನ್ನು ಕಣ್ತುಂಬಿಕೊಳ್ಳಲು ಭಕ್ತರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದಾರೆ.

    ಜನವರಿ 1 ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀರಾಮ ಲಲ್ಲಾನ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಒಟ್ಟು 5 ಸರತಿ ಸಾಲುಗಳಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಲಾಗುತ್ತಿದೆ. 2 ಲಕ್ಷ ಭಕ್ತರು ರಾಮನ ದರ್ಶನ ಪಡೆದಿದ್ದಾರೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥಕ್ಷೇತ್ರದ ಟ್ರಸ್ಟ್‌ನ ಸಾಮಾಜಿಕ ಜಾಲತಾಣಗಳಲ್ಲಿ ಭಕ್ತರ ಫೋಟೋಗಳನ್ನು ಅಪ್ಲೋಡ್ ಮಾಡಲಾಗಿದೆ. ಇದನ್ನೂ ಓದಿ: ದೊಡ್ಡ ಜಯ| ಮುಂಬೈ ದಾಳಿಕೋರನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಕೋರ್ಟ್‌ ಆದೇಶ

    ಸಂಜೆ 5 ಗಂಟೆಯವರೆಗೆ 2 ಲಕ್ಷ ಭಕ್ತರು ಅಯೋಧ್ಯೆ ರಾಮನ ದರ್ಶನ ಪಡೆದಿದ್ದಾರೆ. ರಾತ್ರಿ 9 ಗಂಟೆಯವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಭಕ್ತರು ಈಗಲೂ ಬಾಲಕ ರಾಮನ ದರ್ಶನ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಲು ಸಿಎಂಗೆ ಧೈರ್ಯ ಇಲ್ಲ: ಛಲವಾದಿ ನಾರಾಯಣಸ್ವಾಮಿ

    ಚಳಿಗಾಲ ಮತ್ತು ರಜಾ ಸೀಸನ್ ಆಗಿರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ ಎಂದು ರಾಮ ಟೆಂಪಲ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಇದನ್ನೂ ಓದಿ: ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    ಕಳೆದ ವರ್ಷ ಜನವರಿ 22ರಂದು ರಾಮ ಮಂದಿರದಲ್ಲಿ ಬಾಲಕರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಲಾಗಿತ್ತು. ಕನ್ನಡಿಗರಾದ ಮೈಸೂರಿನ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಬಾಲಕ ರಾಮನ ಮೂರ್ತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದನ್ನೂ ಓದಿ: ಶಿವಮೊಗ್ಗ| ಪತಿಯ ಸಾವಿನ ಸುದ್ದಿ ತಿಳಿದು ಪತ್ನಿ ನೇಣಿಗೆ ಶರಣು

  • ಹೊಸ ವರ್ಷದ ಸಂಭ್ರಮಾಚರಣೆ – ಒಂದೇ ದಿನದಲ್ಲಿ ಬಿಎಂಟಿಸಿಗೆ ಬಂತು 5.48 ಕೋಟಿ ರೂ.

    ಹೊಸ ವರ್ಷದ ಸಂಭ್ರಮಾಚರಣೆ – ಒಂದೇ ದಿನದಲ್ಲಿ ಬಿಎಂಟಿಸಿಗೆ ಬಂತು 5.48 ಕೋಟಿ ರೂ.

    – 35.70 ಲಕ್ಷ ಪ್ರಯಾಣಿಕರು ಪ್ರಯಾಣ

    ಬೆಂಗಳೂರು: ಹೊಸ ವರ್ಷದ ಹಿನ್ನೆಲೆ ಒಂದೇ ದಿನದಲ್ಲಿ ಬಿಎಂಟಿಸಿಗೆ (BMTC) ಕೋಟಿ ಕೋಟಿ ಆದಾಯ ಹರಿದು ಬಂದಿದೆ.

    ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡಿದ್ದವು. ಬಿಎಂಟಿಸಿಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷದ ಮೊದಲ ರಾತ್ರಿ ದೇಶಾದ್ಯಂತ ಹೆಚ್ಚು ಸೇಲ್‌ ಆಗಿದ್ದು ಯಾವ ಫ್ಲೇವರ್‌ ಕಾಂಡೋಮ್‌?

    ಮಂಗಳವಾರ ಒಂದೇ ದಿನ 35 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಈ ಹಿನ್ನೆಲೆ ಬಿಎಂಟಿಸಿಗೆ 5 ಕೋಟಿ ಹಣ ಕಲೆಕ್ಷನ್ ಆಗಿದೆ. ಒಟ್ಟು 35,70,842 ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಇದರಿಂದ ಬಿಎಂಟಿಸಿಗೆ ಒಟ್ಟು 5.48 ಕೋಟಿ ರೂ. ಸಂಗ್ರಹ ಆಗಿದೆ. ಇದನ್ನೂ ಓದಿ: ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

  • ಸಚಿವ ಮುನಿಯಪ್ಪ ಭೇಟಿಗೆ ಬಂದ ಕುಂಭಕರ್ಣ!

    ಸಚಿವ ಮುನಿಯಪ್ಪ ಭೇಟಿಗೆ ಬಂದ ಕುಂಭಕರ್ಣ!

    ಚಿಕ್ಕಬಳ್ಳಾಪುರ: ಹೊಸ ವರ್ಷದಂದು ವಿನೂತನವಾಗಿ ಕುಂಭಕರ್ಣ (Kumbhakarna) ವೇಷ ಧರಿಸಿ ಶಾಸಕ ಹಾಗೂ ಸಚಿವರಿಗೆ ವಿನೂತನವಾಗಿ ಮನವಿ ಪತ್ರ ಸಲ್ಲಿಸುವ ಮೂಲಕ ಯುವ ಸಂಚಲನ ತಂಡದ ಸದಸ್ಯರು ಗಮನ ಸೆಳೆದಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

    ದೊಡ್ಡಬಳ್ಳಾಪುರ (Doddaballapura) ತಾಲೂಕಿನ ಹಲವು ಸಮಸ್ಯೆಗಳನ್ನ ಕಳೆದ 2 ವರ್ಷಗಳಿಂದ ಶಾಸಕರು, ಸಚಿವರು, ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಆದ್ರೆ ವಾಸ್ತವವಾಗಿ ಯಾವುದೇ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವಾಗಿಲ್ಲ. ನಮ್ಮ ಸಮಸ್ಯೆಗಳು ಮತ್ತೊಮ್ಮೆ ಹೊಸ ವರ್ಷದ ಮೊದಲ ದಿನ ಜನಪ್ರತಿನಿಧಿಗಳಿಗೆ ಗೊತ್ತಾಗಲಿ ಅಂತ ಯುವ ಸಂಚಲನ ಸಂಘಟನೆಯ ಸದಸ್ಯರು ಮನವಿ ಪತ್ರ ಸಲ್ಲಿಸಿದ್ದಾರೆ.

    ಬೆಂಗಳೂರು ಗ್ರಾಮಾಂತರ ಜಿಲ್ಲಾಢಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್ ಮುನಿಯಪ್ಪನವರಿಗೆ ಸದಸ್ಯರು ಮನವಿ ಪತ್ರ ಸಲ್ಲಿಸಿದರು. ಇದನ್ನೂ ಓದಿ: ಸಚಿನ್ ಪಾಂಚಾಳ್ ಸಾವಿಗೆ ನೀವು ಹೊಣೆಯಾಗಬಹುದಲ್ಲವೇ: ಪ್ರಿಯಾಂಕ್ ಖರ್ಗೆಗೆ ಸಿ.ಟಿ ರವಿ ಪ್ರಶ್ನೆ

    ಕುಂಭಕರ್ಣ ನಿದ್ದೆಯಲ್ಲಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಜನರ ಸಮಸ್ಯೆ ಬಗೆಹರಿಸಲಿ ಅಂತ ಕುಂಭಕರ್ಣ ವೇಷ ಧರಿಸಿ ಮನವಿ ಸಲ್ಲಿಸಲಾಗಿದೆ ಅಂತ ತಂಡದ ಸದಸ್ಯ ಚಿದಾನಂದ್ ತಿಳಿಸಿದ್ದಾರೆ. ಇದನ್ನೂ ಓದಿ: ಕೋಲಾರ ಗಡಿಯಲ್ಲಿ ಮುಂದುವರೆದ ಕಾಡಾನೆ ಉಪಟಳ – ಅಪಾರ ಪ್ರಮಾಣದ ಬೆಳೆಗಳು ನಾಶ

  • Tumakuru| ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವು

    Tumakuru| ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವು

    ತುಮಕೂರು: ಹೊಸ ವರ್ಷಕ್ಕೆ ಕೇಕ್ (Cake) ತರಲು ಹೋದ ಯುವಕ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಮಂಗಳವಾರ ರಾತ್ರಿ ತುಮಕೂರು (Tumakuru) ಜಿಲ್ಲೆ ಕುಣಿಗಲ್ (Kunigal) ತಾಲೂಕಿನ ವಡ್ಡರಕುಪ್ಪೆ ಬಳಿ ನಡೆದಿದೆ.

    ಘಟನೆಯಲ್ಲಿ ಮಣಿಕುಪ್ಪೆ ಗ್ರಾಮದ 28 ವರ್ಷದ ಯುವಕ ಮಧು ಸಾವನಪ್ಪಿದ್ದಾನೆ. ಕೇಕ್ ಮತ್ತು ಬಿರಿಯಾನಿ ತೆಗೆದುಕೊಂಡು ಬೈಕಲ್ಲಿ ಬರುವಾಗ ಅಪರಿಚಿತ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಮುಂಬೈ | 232 ಕೆಜಿ ಮಾದಕ ವಸ್ತು ಕಳ್ಳಸಾಗಾಣಿಕೆ ಕೇಸ್‌ – 8 ಪಾಕ್‌ ಪ್ರಜೆಗಳಿಗೆ 20 ವರ್ಷ ಜೈಲು

    ಕೂಡಲೇ ಸ್ಥಳೀಯರು ಕುಣಿಗಲ್ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದಿ.ಮನಮೋಹನ್ ಸಿಂಗ್‌ಗೆ ಭಾರತ ರತ್ನ ನೀಡುವಂತೆ ಕಾಂಗ್ರೆಸ್ ಒತ್ತಡ

  • ಮುಂಜಾನೆ ಟೀ ಕುಡಿಯೋಕೆ ಬೆಂಗ್ಳೂರಿಂದ ಮಾಗಡಿಗೆ ಪಯಣ – ಇನ್ನೋವಾ ಪಲ್ಟಿಯಾಗಿ ಇಬ್ಬರು ದುರ್ಮರಣ

    ಮುಂಜಾನೆ ಟೀ ಕುಡಿಯೋಕೆ ಬೆಂಗ್ಳೂರಿಂದ ಮಾಗಡಿಗೆ ಪಯಣ – ಇನ್ನೋವಾ ಪಲ್ಟಿಯಾಗಿ ಇಬ್ಬರು ದುರ್ಮರಣ

    – ನಿಂತಿದ್ದ ಕ್ಯಾಂಟರ್‌ಗೆ ಕಾರು ಡಿಕ್ಕಿ ಇಬ್ಬರು ಸಾವು

    ರಾಮನಗರ: ಇನ್ನೋವಾ ಕಾರು ಪಲ್ಟಿಯಾಗಿ (Car Accident) ಇಬ್ಬರು ಸಾವಿಗೀಡಾದ ಘಟನೆ ಮಾಗಡಿಯ (Magadi) ತಾವರೆಕೆರೆ ರಸ್ತೆಯ ಜನತಾ ಕಾಲೋನಿ ಬಳಿ ನಡೆದಿದೆ.

    ಮೃತರನ್ನು ಬೆಂಗಳೂರು ಮೂಲದ ಮಂಜು (31) ಹಾಗೂ ಕಿರಣ್ (30) ಎಂದು ಗುರುತಿಸಲಾಗಿದೆ. ಕಾರಲ್ಲಿ 8 ಜನ ಸ್ನೇಹಿತರು ಹೊಸ ವರ್ಷದ ಪಾರ್ಟಿ ಮೂಡಲ್ಲಿ ಮುಂಜಾನೆ 3 ಗಂಟೆಗೆ ಟೀ ಕುಡಿಯೋಕೆ ಬೆಂಗಳೂರಿಂದ ಮಾಗಡಿಗೆ ಬಂದಿದ್ದರು. ಟೀ ಕುಡಿದು ವಾಪಾಸ್ ಆಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.

    ಕಾರಿನಲ್ಲಿದ್ದ 6 ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತದೇಹಗಳನ್ನ ಮಾಗಡಿ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಮಾಗಡಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

    ಮತ್ತೊಂದು ಅಪಘಾತದಲ್ಲಿ, ನಿಂತಿದ್ದ ಕ್ಯಾಂಟರ್‌ಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವುದು ಕನಕಪುರ ತಾಲೂಕಿನ ಸಾತನೂರು ಬಸ್ ನಿಲ್ದಾಣದ ಮುಂಭಾಗ ನಡೆದಿದೆ.

    ಮೃತರನ್ನು ನಿರಂಜನ್ (41) ಹಾಗೂ ವಿಶ್ವನಾಥ್ (43) ಎಂದು ಗುರುತಿಸಲಾಗಿದೆ. ಖಾಸಗಿ ರೆಸಾರ್ಟ್‍ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ವಾಪಾಸ್ ಬೆಂಗಳೂರು ಕಡೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ರಸ್ತೆ ಬದಿ ನಿಂತಿದ್ದ ಕ್ಯಾಂಟರ್‍ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಮತ್ತಿಬ್ಬರಿಗೆ ಗಂಭೀರವಾಗಿ ಗಾಯಗಳಾಗಿದ್ದು, ಗಾಯಾಳುಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷದಂದು ಪಬ್‌ಗೆ ಹೋಗಿದ್ದ ಯುವತಿಗೆ ಬ್ಯಾಡ್ ಟಚ್ ಆರೋಪ – ಎಫ್‌ಐಆರ್‌ ದಾಖಲು

    ಹೊಸ ವರ್ಷದಂದು ಪಬ್‌ಗೆ ಹೋಗಿದ್ದ ಯುವತಿಗೆ ಬ್ಯಾಡ್ ಟಚ್ ಆರೋಪ – ಎಫ್‌ಐಆರ್‌ ದಾಖಲು

    ಬೆಂಗಳೂರು: ಹೊಸ ವರ್ಷ (New Year 2025) ಸಂಭ್ರಮಾಚರಣೆಗಾಗಿ ಪಬ್‌ಗೆ ತೆರಳಿದ್ದ ಯುವತಿಗೆ ಅಪರಿಚಿತ ಯುವಕನೊಬ್ಬ ಬ್ಯಾಡ್‌ ಟಚ್‌ ಮಾಡಿರುವ ಆರೋಪ ಕೇಳಿಬಂದಿದೆ.

    ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್‌ನಲ್ಲಿ (kadubeesanahalli Social Pub) ಘಟನೆ ನಡೆದಿದೆ. ಯುವತಿ ನೀಡಿದ ದೂರಿನ ಮೇರೆಗೆ ಅಪರಿಚಿತ ಯುವಕನ ವಿರುದ್ಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ (Marathahalli Police Station) ಎಫ್‌ಐಆರ್‌ ದಾಖಲಾಗಿದೆ. ಇದನ್ನೂ ಓದಿ: 2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    ಏನಿದು ಘಟನೆ?
    ಹೊಸ ವರ್ಷ ಸಂಭ್ರಮಾಚರಣೆಗಾಗಿ ಮಂಗಳವಾರ ತಡರಾತ್ರಿ ಯುವತಿ ತನ್ನ ಸ್ನೇಹಿತನೊಂದಿಗೆ ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್‌ಗೆ ಬಂದಿದ್ದಳು. ಈ ವೇಳೆ ಅಪರಿಚಿತ ಯುವಕ ಬ್ಯಾಡ್‌ ಟಚ್‌ ಮಾಡಿದ್ದಾನೆ. ಈ ವೇಳೆ ಯುವತಿ ಪಬ್‌ನಲ್ಲೇ ಕಿರುಚಾಡಿದ್ದಾಳೆ, ಸರಿಯಾದ ಭದ್ರತೆ ಒದಗಿಸಿಲ್ಲ ಅಂತ ಪಬ್‌ ಸಿಬ್ಬಂದಿ ಮೇಲೂ ಕೂಗಾಡಿ ರಂಪಾಟ ಮಾಡಿದ್ದಾಳೆ. ಅಷ್ಟರಲ್ಲಿ ಯುವಕ ಸ್ಥಳದಿಂದ ಎಸ್ಕೇಪ್‌ ಆಗಿದ್ದ ಎಂದು ತಿಳಿದುಬಂದಿದೆ.

    ಬಳಿಕ ಮಾರತ್ತಹಳ್ಳಿ ಠಾಣೆಗೆ ಯುವತಿ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಪಬ್ ಡಿವಿಆರ್ ವಶಕ್ಕೆ ಪಡೆದು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: ಚುನಾವಣೆಯಲ್ಲಿ ʻಕೈʼ ಶಾಸಕ ನರೇಂದ್ರಸ್ವಾಮಿಗೆ ಐಶ್ವರ್ಯಗೌಡ ಹಣ ನೀಡಿದ್ದಾರೆ: ಅನ್ನದಾನಿ ಬಾಂಬ್‌

  • ಹೊಸ ವರ್ಷದ ಎಣ್ಣೆ ಏಟಲ್ಲಿ ವಾಹನ ಚಾಲನೆ – ಒಂದೇ ರಾತ್ರಿ 513 ಕೇಸ್ ದಾಖಲು

    ಹೊಸ ವರ್ಷದ ಎಣ್ಣೆ ಏಟಲ್ಲಿ ವಾಹನ ಚಾಲನೆ – ಒಂದೇ ರಾತ್ರಿ 513 ಕೇಸ್ ದಾಖಲು

    ಬೆಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿ ಎಣ್ಣೆ ಪಾರ್ಟಿ ಮಾಡಿ ವಾಹನ ಚಲಾಯಿಸಿದವರ ಮೇಲೆ, ಒಂದೇ ರಾತ್ರಿಯಲ್ಲಿ ಬರೋಬ್ಬರಿ 513 ಕೇಸ್ ಬಿದ್ದಿದೆ.

    ನ್ಯೂ ಇಯರ್ ರಾತ್ರಿ 513 ಡ್ರಂಕ್ & ಡ್ರೈವ್‌ (Drunk And Drive) ಪ್ರಕರಣಗಳು ದಾಖಲಾಗಿವೆ. ಈ ಸಂದರ್ಭದಲ್ಲಿ ಸಂಚಾರ ಪೊಲೀಸರು ಸುಮಾರು 28,127 ವಾಹನಗಳ ಪರಿಶೀಲನೆ ಮಾಡಿದ್ದರು. ಇದನ್ನೂ ಓದಿ: ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

    ಹೊಸ ವರ್ಷದ ಹಿನ್ನೆಲೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ ಸಂಭ್ರಮ ಮನೆ ಮಾಡಿತ್ತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌, ವೈಟ್‌ಫೀಲ್ಡ್ ಮೊದಲಾದ ಕಡೆ ಯುವಜನತೆ ನ್ಯೂ ಇಯರ್ ಸಂಭ್ರಮದಲ್ಲಿ ತೇಲಿದರು.

    ಯುವಕ-ಯುವತಿಯರು ಅನೇಕರು ಎಣ್ಣೆ ಕುಡಿದು ನಶೆಯಲ್ಲಿ ತೇಲಿದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಮತ್ತಿನಲ್ಲಿ ಕುಸಿದ ಬಿದ್ದ ಕೆಲ ಯುವತಿಯರನ್ನು ಅವರ ಗೆಳೆಯರು ಕರೆದೊಯ್ದ ಘಟನೆಗಳು ನಡೆದವು. ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

  • ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

    ನ್ಯೂ ಇಯರ್‌ ‘ಕಿಕ್‌’ – ರಾಜ್ಯದಲ್ಲಿ ಒಂದೇ ದಿನ ಬರೋಬ್ಬರಿ 308 ಕೋಟಿ ರೂ. ಮದ್ಯ ಸೇಲ್

    – ಅಬಕಾರಿ ಇಲಾಖೆಗೆ ಹರಿದು ಬಂತು ನೂರಾರು ಕೋಟಿ ರೂ. ಆದಾಯ

    ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಗೆ ನೂರಾರು ಕೋಟಿ ರೂಪಾಯಿ ಆದಾಯ ಹರಿದುಬಂದಿದೆ. ನಿನ್ನೆ ಒಂದೇ ದಿನದಲ್ಲಿ ಕೆಎಸ್‌ಬಿಸಿಎಲ್‌ನಿಂದ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟವಾಗಿದೆ.

    ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ 308 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ. ಅಬಕಾರಿ ಇಲಾಖೆ 250 ಕೋಟಿ ರೂ. ಮದ್ಯ ಮಾರಾಟದ ಟಾರ್ಗೆಟ್ ಇಟ್ಟುಕೊಂಡಿತ್ತು. ಇದನ್ನೂ ಓದಿ: ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

    ಕಳೆದ ವರ್ಷ 2023ರ ಡಿ.31 ರಂದು 193 ಕೋಟಿ ರೂಪಾಯಿ ಮದ್ಯ ಮಾರಾಟ ಆಗಿತ್ತು. ಈ ಬಾರಿ 2024 ಡಿ.31 ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ.

    ಐಎಂಎಲ್- 4,83,715 ಲಕ್ಷ ಬಾಕ್ಸ್ ಮಾರಾಟದಿಂದ 250.25 ಕೋಟಿ ಆದಾಯ ಬಂದಿದೆ. ಬಿಯರ್- 2,92,339 ಲಕ್ಷ ಬಾಕ್ಸ್ ಮಾರಾಟದಿಂದ 57,75 ಕೋಟಿ ಆದಾಯ ಹರಿದುಬಂದಿದೆ. ಒಟ್ಟಾರೆ 7,76,042 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಆದಾಯವಾಗಿದೆ. ಇದನ್ನೂ ಓದಿ: ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೆಎಸ್‌ಬಿಸಿಎಲ್‌ನಿಂದ ವ್ಯಾಪಾರ ಆಗಿರುವ ಮದ್ಯದ ಮಾಹಿತಿ ಇದಾಗಿದೆ. ಡಿ.27ರ ಶುಕ್ರವಾರದಂದು ಬರೋಬ್ಬರಿ 408.58 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. ಐಎಂಎಲ್- 6,22,062 ಲಕ್ಷ ಬಾಕ್ಸ್ ಮಾರಾಟದಿಂದ 327.50 ಕೋಟಿ ರೂ. ಆದಾಯ ಬಂದಿತ್ತು. ಬಿಯರ್- 4,04,998 ಲಕ್ಷ ಬಾಕ್ಸ್ ಮಾರಾಟದಿಂದ 80.58 ಕೋಟಿ ರೂ. ಆದಾಯ ಬಂದಿತ್ತು. ಐಎಂಎಲ್, ಬಿಯರ್ ಸೇರಿ ಒಟ್ಟು- 10,27,060 ಲಕ್ಷ ಬಾಕ್ಸ್ ಮದ್ಯ ಮಾರಾಟದಿಂದ 408.50 ಕೋಟಿ ರೂ. ಆದಾಯವಾಗಿತ್ತು.

  • ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

    ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ

    ದಾವಣಗೆರೆ: ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕನೊಬ್ಬ ಸಾವಿಗೀಡಾಗಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

    ದಾವಣಗೆರೆ ನಗರದ ನೂತನ್ ಕಾಲೇಜ್ ಮುಂಭಾಗ ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಬೈಕ್ ಅಪಘಾತ ಸಂಭವಿಸಿತು. ಅಪಘಾತದಲ್ಲಿ ಯುವಕ ಬಲಿಯಾಗಿದ್ದು, ಮತ್ತೊಬ್ಬ ಯುವಕ ಗಂಭೀರ ಗಾಯಗೊಂಡಿದ್ದಾನೆ. ನಿಟ್ಟುವಳ್ಳಿ ಹೊಸ ಬಡಾವಣೆಯ ಕಾರ್ತಿಕ್ (19) ಮೃತ ಯುವಕ.

    ಹೊಸ ವರ್ಷ ಸಂಭ್ರಮಾಚರಣೆಗೆ ಸ್ನೇಹಿತರ ಜೊತೆ ಯುವಕ ಆಗಮಿಸುತ್ತಿದ್ದ. ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾನೆ. ಗಂಭೀರ ಗಾಯಗೊಂಡಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

    ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿ ನಡೆದ ಘಟನೆ ನಡೆದಿದೆ.

  • ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

    ಹೊಸ ವರ್ಷ ಸಂಭ್ರಮ; ನಂದಿ ಬೆಟ್ಟಕ್ಕೆ ಪ್ರವಾಸಿಗರ ಲಗ್ಗೆ – ಟ್ರಾಫಿಕ್‌ ಜಾಮ್

    ಚಿಕ್ಕಬಳ್ಳಾಪುರ: ಹೊಸ ವರ್ಷ 2025ಕ್ಕೆ ಭರ್ಜರಿ ಸ್ವಾಗತ ಸಿಕ್ಕಿದೆ. ನ್ಯೂ ಇಯರ್ ಸಂಭ್ರಮಾಚರಣೆಗಾಗಿ ನಂದಿಗಿರಿಧಾಮಕ್ಕೆ (Nandi Hills) ಪ್ರವಾಸಿಗರು ಲಗ್ಗೆ ಇಟ್ಟಿದ್ದಾರೆ.

    ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ನಂದಿ ಬೆಟ್ಟಕ್ಕೆ ದಂಡು ದಂಡಾಗಿ ಪ್ರವಾಸಿಗರು ಆಗಮಿಸಿದರು. ಪರಿಣಾಮ ನಂದಿ ಬೆಟ್ಟದ ಕ್ರಾಸ್‌ನಲ್ಲೇ ಭಾರೀ ಟ್ರಾಫಿಕ್ ಜಾಮ್ ಉಂಟಾಯಿತು. ಇದನ್ನೂ ಓದಿ: ಬದಲಾವಣೆಗೇಕೆ ಹೊಸ ವರ್ಷ?

    ಕಾರು ಹಾಗೂ ಬೈಕ್‌ಗಳಲ್ಲಿ ನಂದಿ ಬೆಟ್ಟಕ್ಕೆ ಪ್ರವಾಸಿಗರು ಲಗ್ಗೆ ಇಟ್ಟರು. ಬೆಳಗ್ಗೆ 7 ಗಂಟೆಗೆ ಚೆಕ್‌ಪೋಸ್ಟ್ ತೆರೆದಿದ್ದೇ ತಡ ನಾ ಮುಂದು ತಾ ಮುಂದು ಅಂತ ಆಗಮಿಸಿದರು.

    ಎಲ್ಲೆಲ್ಲೂ ಹೊಸ ವರ್ಷದ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನಲ್ಲಿ ಮಧ್ಯರಾತ್ರಿ 12 ಗಂಟೆಗೆ ಗ್ರ್ಯಾಂಡ್‌ ವೆಲ್‌ಕಮ್ ಕೋರಲಾಯಿತು. ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌, ವೈಟ್‌ಫೀಲ್ಡ್ ಮೊದಲಾದ ಪ್ರಮುಖ ಭಾಗಗಳಲ್ಲಿ ಕಿಕ್ಕಿರಿದು ಯುವಜನತೆ ಸೇರಿದ್ದರು. ಇದನ್ನೂ ಓದಿ: ಕನಸಿಗೆ ಕತ್ತರಿ ಬಿದ್ದರೂ ಹುಲ್ಲಿನಂತೆ ಬೆಳೆಯಬೇಕು!

    ಅನೇಕರು ಮದ್ಯದ ಅಮಲಿನಲ್ಲಿ ಒಂದಷ್ಟು ಕಿರಿಕ್ ಮಾಡಿಕೊಂಡರು. ನಶೆಯಲ್ಲಿ ರಸ್ತೆಗೆ ಬಿದ್ದ ಯುವತಿಯನ್ನು ಸ್ನೇಹಿತ ಎತ್ತಿಕೊಂಡು ಹೋದ ಘಟನೆ ಕೂಡ ಸಿಲಿಕಾನ್ ಸಿಟಿಯಲ್ಲಿ ನಡೆಯಿತು. ಇನ್ನೂ ಅಮಲಿನಲ್ಲಿ ಕೂಗಾಡುತ್ತಿದ್ದ ಯುವಕನಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.