Tag: New Year 2024

  • ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    ಮಣಿಪುರದಲ್ಲಿ ಹೊಸವರ್ಷದ ಮೊದಲ ದಿನವೇ ಹಿಂಸಾಚಾರ – ಗುಂಡಿನ ದಾಳಿಗೆ ನಾಲ್ವರು ಬಲಿ

    – ದಾಳಿಯಲ್ಲಿ ಹಲವರಿಗೆ ಗಾಯ, ಮರ‍್ನಾಲ್ಕು ಜಿಲ್ಲೆಗಳಲ್ಲಿ ಕರ್ಫ್ಯೂ

    ಇಂಫಾಲ: ಮಣಿಪುರದಲ್ಲಿ 2024ರ ನೂತನ ವರ್ಷದ ಮೊದಲ ದಿನವೇ ಮತ್ತೆ ಹಿಂಸಾಚಾರ (Manipur Violence) ಭುಗಿಲೆದ್ದಿದೆ. ಘಟನೆಯಲ್ಲಿ ಗುಂಡು ಹಾರಿಸಿ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂಸಾಚಾರದಿಂದಾಗಿ ಕಣಿವೆ ಜಿಲ್ಲೆಗಳಲ್ಲಿ ಮತ್ತೆ ಕರ್ಫ್ಯೂ (Curfew) ಹೇರಿರುವುದಾಗಿ ಮೂಲಗಳು ತಿಳಿಸಿವೆ.

    ಹಿಂಸಾಚಾರದ ವೇಳೆ ಅಪರಿಚಿತರ ಗುಂಪೊಂದು ಸುಲಿಗೆಗಾಗಿ ಆಟೊಮೆಟಿಕ್ ವೆಪನ್ಸ್‌ಗಳೊಂದಿಗೆ (ಸ್ವಯಂಚಾಲಿತ ಶಸ್ತ್ರಾಸ್ತ್ರ) (Automatic Weapons) ದಾಳಿ ಮಾಡಿತು ಎಂದು ತೌಬಲ್ ಜಿಲ್ಲೆಯ ಸ್ಥಳೀಯರು ಹೇಳಿದ್ದಾರೆ. ಈ ಹಿಂಸಾಚಾರವನ್ನು ಸಿಎಂ ಎನ್.ಬಿರೇನ್ ಸಿಂಗ್ ಅವರು ಖಂಡಿಸಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಭೀಕರ ಹತ್ಯೆ ಪ್ರಕರಣ – ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

    ಅಮಾಯಕ ಜನರ ಹತ್ಯೆಯಿಂದ ಅಪಾರ ದುಃಖವಾಗಿದೆ. ನಾವು ಆರೋಪಿಗಳನ್ನು ಹಿಡಿಯಲು ವಿಶೇಷ ಪೊಲೀಸ್ ಪಡೆಗಳನ್ನ ಸಜ್ಜುಗೊಳಿಸಿದ್ದೇವೆ. ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾರ್ವಜನಿಕರು ಸಹ ಸಹಕಾರ ನೀಡಬೇಕೆಂದು ನಾನು ಕೈಮುಗಿದು ಬೇಡಿಕೊಳ್ಳುತ್ತೇನೆ. ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಲು ಸರ್ಕಾರ ಶಕ್ತಿ ಮೀರಿ ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿದ್ದಾರೆ.

    ಅಲ್ಲದೇ 2024ರ ಹೊಸ ವರ್ಷದ ಮೊದಲ ದಿನವೇ ನಡೆದಿರುವ ಹಿಂಸಾಚಾರವನ್ನು ಗಂಭೀರವಾಗಿ ಸರ್ಕಾರ ಪರಿಗಣಿಸಿದೆ. ಸೂಕ್ತ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ಆಡಳಿತ ಪಕ್ಷದ ಎಲ್ಲಾ ಸಚಿವರು ಹಾಗೂ ಶಾಸಕರ ತುರ್ತು ಸಭೆ ಕರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಭಾರತದ ವಿರುದ್ಧ ಯುದ್ಧ ರೂಪಿಸಲು 2 ರಾಷ್ಟ್ರಗಳ ಭಯೋತ್ಪಾದಕರೊಂದಿಗೆ ಸಂಚು; ಮಣಿಪುರದಲ್ಲಿ ಶಂಕಿತ ಅರೆಸ್ಟ್

    ಕೆಲ ಜಲ್ಲೆಗಳಲ್ಲಿ ಕರ್ಫ್ಯೂ: ಹೊಸ ಹಿಂಸಾಚಾರದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಮಣಿಪುರದ ಕಣಿವೆ ಪ್ರದೇಶಗಳಾದ ತೌಬಲ್, ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ, ಕಕ್ಚಿಂಗ್ ಮತ್ತು ಬಿಷ್ಣುಪುರ ಜಿಲ್ಲೆಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    2023ರ ವರ್ಷದಲ್ಲಿ ಮೇ 3ರಂದು ದೊಡ್ಡ ಪ್ರಮಾಣದಲ್ಲಿ ಜನಾಂಗೀಯ ಸಂಘರ್ಷ ಏರ್ಪಟ್ಟಿತ್ತು. ಈ ಘಟನೆ ಬಳಿಕ ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿತ್ತು. ಈ ಸಂಘರ್ಷದ ಪರಿಣಾಮ 180ಕ್ಕೂ ಹೆಚ್ಚು ಸಾವುಗಳು ಸಂಭವಿಸಿದವು. ಸುಮಾರು 60,000 ಜನ ನಿರಾಶ್ರಿತರಾದರು. ಇಷ್ಟಾದರೂ ಮಣಿಪುರದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ವರ್ಷಾರಂಭದ ಮೊದಲ ದಿನವೇ ನಾಲ್ವರು ಗುಂಡಿನ ದಾಳಿಗೆ ಬಲಿಯಾಗಿರುವುದು ಸ್ಥಳೀಯಲ್ಲಿ ಆತಂಕ ಹೆಚ್ಚಿಸಿದೆ.

  • ಹೊಸ ವರ್ಷಕ್ಕೆ ವಿಶೇಷವಾಗಿ ಶುಭಕೋರಿದ ಅಭಿಷೇಕ್ ಪತ್ನಿ ಅವಿವಾ

    ಹೊಸ ವರ್ಷಕ್ಕೆ ವಿಶೇಷವಾಗಿ ಶುಭಕೋರಿದ ಅಭಿಷೇಕ್ ಪತ್ನಿ ಅವಿವಾ

    ಸ್ಯಾಂಡಲ್‌ವುಡ್ ಹೀರೋ ಅಭಿಷೇಕ್ ಅಂಬರೀಶ್ (Abhishek Ambareesh) ಪತ್ನಿ ಅವಿವಾ (Aviva) ಸ್ಪೆಷಲ್ ಫೋಟೋವೊಂದನ್ನ ಶೇರ್ ಮಾಡಿ ಹೊಸ ವರ್ಷದ ಆರಂಭಕ್ಕೆ ಶುಭಕೋರಿದ್ದಾರೆ. ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡು ಅವಿವಾ ವಿಶೇಷವಾಗಿ ಶುಭಹಾರೈಸಿದ್ದಾರೆ.

    ಪತಿ ಅಭಿಷೇಕ್ ತೊಡೆ ಮೇಲೆ ಕುಳಿತು ಮುದ್ದಾಗಿ ನಗು ಬೀರುತ್ತಿರೋ ಫೋಟೋವನ್ನ ಅವಿವಾ (Aviva) ಶೇರ್ ಮಾಡಿ ಸ್ವೀಟ್ ಆಗಿ ನ್ಯೂ ಇಯರ್‌ಗೆ ವಿಶ್ಸ್ ತಿಳಿಸಿದ್ದಾರೆ. ಇದನ್ನೂ ಓದಿ:ಬೇರೆ ರಾಜ್ಯದಲ್ಲೂ ದರ್ಶನ್ ಹವಾ: ದೇಶದ ಗಡಿದಾಟಲು ‘ಕಾಟೇರ’ ಸಜ್ಜು

     

    View this post on Instagram

     

    A post shared by Mrs. Abishek (@avivabidapa)

    ಕಳೆದ ವರ್ಷ ಜೂನ್ 5ಕ್ಕೆ ಅಭಿಷೇಕ್- ಅವಿವಾ ಜೋಡಿ ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದು, ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತುವ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದರು.

    ಇತ್ತೀಚೆಗೆ ‘ಬ್ಯಾಡ್ ಮ್ಯಾನರ್ಸ್’ (Bad Manners) ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡದಿತ್ತು. ಅವಿವಾ ಕೂಡ ಮಾಡೆಲ್, ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಮದುವೆಯ ಬಳಿಕವೂ ತಮ್ಮ ಕ್ಷೇತ್ರದಲ್ಲಿ ಅವಿವಾ ಆ್ಯಕ್ಟೀವ್ ಆಗಿದ್ದಾರೆ.

  • 2024ನೇ ವರ್ಷ ರಾಜ್ಯಕ್ಕೆ ಆಶಾದಾಯಕವಾಗಲಿದೆ – ಸಿದ್ದರಾಮಯ್ಯ

    2024ನೇ ವರ್ಷ ರಾಜ್ಯಕ್ಕೆ ಆಶಾದಾಯಕವಾಗಲಿದೆ – ಸಿದ್ದರಾಮಯ್ಯ

    – ಸರ್ಕಾರದ ಹಿರಿಯ ಕಾರ್ಯದರ್ಶಿಗಳಿಗೆ ಶುಭಾಶಯ ಕೋರಿದ ಸಿಎಂ
    – ಗ್ಯಾರಂಟಿ ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆ
    – ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕೆಂದು ಸಲಹೆ

    ಬೆಂಗಳೂರು: ರಾಜ್ಯ ಸರ್ಕಾರದ ಕಾರ್ಯದರ್ಶಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು 2024ನೇ ವರ್ಷಕ್ಕೆ ನಾವೆಲ್ಲರೂ ಕಾಲಿಡುತ್ತಿದ್ದು, ಈ ವರ್ಷ ರಾಜ್ಯಕ್ಕೆ ಆಶಾದಾಯಕವಾಗಲಿದೆ ಎಂದು ನುಡಿದರು.

    ರಾಜ್ಯದ ಮುಖ್ಯ ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ಸೋಮವಾರ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಹೊಸವರ್ಷದ (New Year 2024) ಶುಭಾಶಯ ಕೋರಿದ ಸಂದರ್ಭದಲ್ಲಿ ಅವರು ಮಾತನಾಡಿದರು. ಇದನ್ನೂ ಓದಿ: ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮ, ನಮ್ಮ ರಾಮ ಸಿದ್ದರಾಮಯ್ಯ: ಹೆಚ್‌. ಆಂಜನೇಯ

    ರಾಜ್ಯದಲ್ಲಿ 48 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 35,000 ಕೋಟಿ ರೂ.ನಷ್ಟು ಬೆಳೆ ನಷ್ಟವಾಗಿದೆ. ಪ್ರಕೃತಿ ಸಹಾಯವಿಲ್ಲದಿದ್ದರೇ, ಸರ್ಕಾರ ಏನು ಪರಿಹಾರ ಕೊಟ್ಟರು ಸಾಕಾಗುವುದಿಲ್ಲ. ಹವಾಮಾನ ಬದಲಾವಣೆಯಿಂದಾಗಿ ಈ ವೈಪರೀತ್ಯ ಕಾಣುತ್ತಿದ್ದೇವೆ. ಮುಂಗಾರಿನಲ್ಲಿ ಒಳ್ಳೆಯ ಮಳೆಯಾಗುವ (Rain) ನಿರೀಕ್ಷೆ ಇದೆ. 2024ರಲ್ಲಿ ಒಳ್ಳೆಯ ಮಳೆ-ಬೆಳೆ ಆಗಲಿ ಎಂದು ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು.

    ಗ್ಯಾರಂಟಿ ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆ:
    ಅಭಿವೃದ್ಧಿ ನಿರೀಕ್ಷಿತ ಫಲ ಕಾಣಲು ಸಮೃದ್ಧಿಯಾಗಿ ಮಳೆಯಾಗಲಿ. 60% ಗಿಂತ ಹೆಚ್ಚು ಜನ ವ್ಯವಸಾಯದ ಮೇಲೆ ಅವಲಂಬಿತರಾಗಿದ್ದಾರೆ. ಗ್ಯಾರಂಟಿಗಳನ್ನ ಕೊಟ್ಟಿದ್ದರಿಂದ ಬರದ ತೀವ್ರತೆ ಕಡಿಮೆಯಾಗಿದೆ. ಬಡವರ ಕುಟುಂಬಕ್ಕೆ ಹಣ ದೊರೆಯುತ್ತಿದ್ದು, ಕೊಳ್ಳುವ ಶಕ್ತಿ ಸಿಕ್ಕಿದೆ. ಬರಗಾಲವಿದ್ದರೂ ಸ್ವಲ್ಪ ಮಟ್ಟಿಗೆ ಅದರ ತೀವ್ರತೆ ಕಡಿಮೆಯಾಗಿದೆ. ಇಲ್ಲದಿದ್ದರೆ ಹಾಹಾಕಾರ ಶುರುವಾಗುತ್ತಿತ್ತು ಎಂದು ಎಚ್ಚರಿಸಿದರು. ಇದನ್ನೂ ಓದಿ: ಐಷಾರಾಮಿಯಷ್ಟೇ ದುಬಾರಿ ಅಯೋಧ್ಯಾ ಟೆಂಟ್‌ ಹೌಸ್ – ಒಂದು ದಿನಕ್ಕೆ ಎಷ್ಟು ಹಣ ಗೊತ್ತಾ?

    ಸಾರ್ವತ್ರಿಕ ಮೂಲ ಆದಾಯದ ತತ್ವದ ತಳಹದಿಯ ಮೇಲೆ ಜನರ ಆದಾಯ ಹೆಚ್ಚಿಸಿ ಆರ್ಥಿಕ ಚಟುವಟಿಕೆಗಳಿಗೆ ಇಂಬು ದೊರೆತಿದೆ. ರಾಜ್ಯದ ಜನರ ಅಭಿವೃದ್ಧಿಗಾಗಿ ಜನ ನಮ್ಮನ್ನು ಆಯ್ಕೆ ಮಾಡಿದ್ದಾರೆ. ಸರ್ಕಾರ ಆಡಳಿತ ವರ್ಗವನ್ನು ಆಯ್ಕೆಮಾಡಿದೆ. ಜನಪರ, ಸಮಾಜಮುಖಿ ಧೋರಣೆ ಇದ್ದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು, ಸಂವಿಧಾನದ ಆಶಯಗಳನ್ನ ಈಡೇರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

    ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕು:
    ಸಂವಿಧಾನ ಅರಿತು ಅದರಂತೆ ನಡೆಯಬೇಕು. ಜನರ ನಿರೀಕ್ಷೆ ಹುಸಿಯಾಗದ ರೀತಿ ಕೆಲಸ ಮಾಡಬೇಕು. ಈ ದಿಕ್ಕಿನಲ್ಲಿ ನಾವೆಲ್ಲರೂ ಪ್ರಯತ್ನ ಮಾಡೋಣ ಎಂದು ಹೇಳಿದರು. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ದಿನ ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಪತ್ರ: ಯಶ್‌ಪಾಲ್‌ ಸುವರ್ಣ

    ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ನಜೀರ್ ಅಹ್ಮದ್ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಉಪಸ್ಥಿತರಿದ್ದರು. ಇದೇ ವೇಳೆ ಸರ್ಕಾರದ ಅಭಿವೃದ್ಧಿ ಆಯುಕ್ತರು ಹಾಗೂ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಬರೆದಿರುವ ʻಸುಸ್ಥಿರ ಬದುಕಿನ ಸುತ್ತ ಆಶಾಕಿರಣʼ ಪುಸ್ತಕವನ್ನು ಸಿಎಂ ಬಿಡುಗಡೆ ಮಾಡಿದರು.

  • ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ- ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮ

    ಹೊಸ ವರ್ಷಕ್ಕೆ ಅದ್ದೂರಿ ಸ್ವಾಗತ- ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮ

    ಬೆಂಗಳೂರು: ದೇಶದ ಜನರು 2024 ವರ್ಷವನ್ನು (New Year 2024) ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ರಾಜ್ಯಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿತ್ತು.

    ಸಂಭ್ರಮದಿಂದ ಸಡಗರದಿಂದ ಹೊಸ ವರ್ಷವನ್ನ ವೆಲ್‍ಕಂ ಮಾಡಿಕೊಂಡ್ರು. ಅದರಲ್ಲೂ ಬೆಂಗಳೂರಿನಲ್ಲಿ ಹೊಸ ವರ್ಷ ಝಗಮಗಿಸಿತು. ಎಂ.ಜಿ. ರಸ್ತೆ (MG Road), ಬ್ರಿಗೇಡ್ ರಸ್ತೆ (Vrigade Road), ಚರ್ಚ್ ಸ್ಟ್ರೀಟ್ (Church Street) ಸೇರಿ ನಗರದ ಪ್ರಮುಖ ರಸ್ತೆಗಳಲ್ಲಿ ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸುವ ಮೂಲಕ ಯುವ ಜನರು ಸಂಭ್ರಮದಿಂದ ಹೊಸ ವರ್ಷವನ್ನು ಬರಮಾಡಿಕೊಂಡರು.

    ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್‍ನ ಪಬ್‍ಗಳು, ಹೋಟೆಲ್‍ಗಳು ತುಂಬಿ ತುಳುಕಿದವು. ಇನ್ನು ರಸ್ತೆಗಳಲ್ಲಿ ಯುವಕ-ಯುವತಿಯರು ರಾತ್ರಿಯಿಡೀ ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಾಚರಣೆ ನಡೆಸಿದರು. ಜನಸಂದಣಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ, ಪಾರ್ಕಿಂಗ್ ನಿಷೇಧ ಮಾಡಲಾಗಿತ್ತು. ಬ್ರಿಗೇಡ್ ರಸ್ತೆಯಲ್ಲಿ ತಳ್ಳಾಟ ನೂಕಾಟ ಹೆಚ್ಚಾಗಿದ್ದರಿಂದ ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು. ಇದನ್ನೂ ಓದಿ: ಕುಣಿದು ತೂರಾಡಿದ ಯುವತಿ – ಅಸಭ್ಯ ವರ್ತನೆ ತೋರಿದ್ದಕ್ಕೆ ಲವ್ವರ್‌ನಿಂದ ಯುವಕನಿಗೆ ಏಟು

  • ಹೊಸವರ್ಷಾಚರಣೆಗೆ ಕ್ಷಣಗಣನೆ – ಇಂದು ರಾತ್ರಿಯಿಂದಲೇ ಬೆಂಗ್ಳೂರಿನ ಪ್ರಮುಖ ಫ್ಲೈಓವರ್‌ಗಳು ಬಂದ್‌!

    ಹೊಸವರ್ಷಾಚರಣೆಗೆ ಕ್ಷಣಗಣನೆ – ಇಂದು ರಾತ್ರಿಯಿಂದಲೇ ಬೆಂಗ್ಳೂರಿನ ಪ್ರಮುಖ ಫ್ಲೈಓವರ್‌ಗಳು ಬಂದ್‌!

    – ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೆ ಸಂಚಾರ ನಿರ್ಬಂಧ

    ಬೆಂಗಳೂರು: 2024ರ ಹೊಷವರ್ಷ (New Year 2024) ಸಂಭ್ರಮಾಚರಣೆಗೆ ಕ್ಷಣಗಣನೆ ಬಾಕಿಯಿದೆ. ನೂತನ ವರ್ಷವನ್ನ ಬರಮಾಡಿಕೊಳ್ಳೋದಕ್ಕೆ ಜನರು ಕಾತುರದಿಂದ ಕಾಯ್ತಿದ್ದಾರೆ. ಅದೇ ರೀತಿ ಯಾವುದೇ ಅನಾಹುತ ಆಗದಂತೆ ಎಚ್ಚರಿಕೆ ವಹಿಸಲು ಪೊಲೀಸರು (Police) ಕೂಡ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

    ಹೊಸವರ್ಷದ ಖುಷಿಯಲ್ಲಿ ಯಾವುದೇ ಅನಾಹುತ ಆಗದಂತೆ ನೋಡಿಕೊಳ್ಳಲು ಪೊಲೀಸ್‌ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಹೊಸವರ್ಷದ ಸಂಭ್ರದ ವೇಳೆ ಕೆಲ ಪುಂಡರು ಕುಡಿದು ಫ್ಲೈಓವರ್‌ಗಳ ಮೇಲೆ ವ್ಹೀಲಿಂಗ್‌ ಮಾಡುವ ಹುಚ್ಚಾಟ ನಡೆಸುತ್ತಾರೆ, ಅತಿವೇಗವಾಗಿ ವಾಹನ ಚಲಾಯಿಸೋದು ಮಾಡ್ತಾರೆ. ಇದರಿಂದ ಸಾಕಷ್ಟು ಜನ ಜೀವ ಕಳೆದುಕೊಂಡಿದ್ದಾರೆ. ಇನ್ನೂ ಕೆಲವರು ಮಾಡದ ತಪ್ಪಿಗೆ ಆಸ್ಪತ್ರೆ ಸೇರುವಂತಾಗಿದೆ. ಇದೇ ಕಾರಣಕ್ಕೆ ನಗರದ ಪ್ರಮುಖ ಫ್ಲೈಓವರ್‌ಗಳನ್ನ ಡಿಸೆಂಬರ್‌ 31ರ ರಾತ್ರಿ ಬಂದ್‌ ಮಾಡಲಾಗಿದೆ.

    ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ನಗರದ ಪ್ರಮುಖ ಫ್ಲೈಓವರ್‌ಗಳನ್ನ ಪಟ್ಟಿ ಮಾಡಿದ್ದು, ಏರ್ಪೋರ್ಟ್ ಫ್ಲೈಓವರ್ ಹೊರತುಪಡಿಸಿ ಉಳಿದೆಲ್ಲ ಫ್ಲೈಓವರ್ ಬಂದ್ ಮಾಡಲು ತಯಾರಿ ನಡೆಸಿದ್ದಾರೆ. ಇದನ್ನೂ ಓದಿ: ವಿಕ್ರಂ ಸಿಂಹ ಬಂಧನದಿಂದ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ – ಕಾಂಗ್ರೆಸ್ ಟ್ವೀಟ್

    ಯಾವ್ಯಾವ ಫ್ಲೈಓವರ್‌ ಬಂದ್‌?
    ಹೆಣ್ಣೂರು ಫ್ಲೈಓವರ್‌, ಐಟಿಸಿ ಫ್ಲೈಓವರ್‌, ಬಾಣಸವಾಡಿ ಮುಖ್ಯರಸ್ತೆ ಫ್ಲೈಓವರ್‌, ಲಿಂಗರಾಜಪುರಂ ಫ್ಲೈಓವರ್‌, ಹೆಣ್ಣೂರು ಮುಖ್ಯರಸ್ತೆ ಫ್ಲೈಓವರ್‌, ಕಲ್ಪಳ್ಳಿ ರೈಲ್ವೆಗೇಟ್ ಫ್ಲೈಓವರ್‌, ದೊಮ್ಮಲೂರು ಫ್ಲೈಓವರ್‌, ನಾಗವಾರ ಫ್ಲೈಓವರ್‌, ಮೇಡಹಳ್ಳಿ ಫ್ಲೈಓವರ್‌, ಎನ್‌ಜೆಎ ರೋಡ್ ಫ್ಲೈಓವರ್‌, ದೇವರಬಿಸನಹಳ್ಳಿ ಫ್ಲೈಓವರ್‌, ಮಹದೇವಪುರ ಫ್ಲೈಓವರ್‌, ದೊಡ್ಡನಕ್ಕುಂದಿ ಫ್ಲೈಓವರ್‌, ಬನಶಂಕರಿ ರಾಣಿ ಚನ್ನಮ್ಮ ಫ್ಲೈಓವರ್‌, ಬನಶಂಕರಿ ಕೆಇಬಿ ಫ್ಲೈಓವರ್‌, ಬಸವನಗುಡಿ, ನ್ಯಾಷನಲ್ ಕಾಲೇಜು ಫ್ಲೈಓವರ್‌, ಜಯನಗರ, ದಾಮ್ಮಿಯಾ ಫ್ಲೈಓವರ್‌, ಮಡಿವಾಳ, ಅಗ್ರಹಾರ ಎಲಿವೇಟೆಡ್ ಫ್ಲೈಓವರ್‌, ಎಲೆಕ್ಟ್ರಾನಿಕ್ಸ್‌ ಸಿಟಿ ಎಲಿವೇಟೆಡ್ ಫ್ಲೈಓವರ್‌, ಮೈಕೋ ಲೇಔಟ್, ಡೈರಿ ಸರ್ಕಲ್ ಫ್ಲೈಓವರ್‌ಗಳು ಬಂದ್‌ ಆಗಿರಲಿವೆ.

    2023ರ ಡಿಸೆಂಬರ್‌ 31 ರಾತ್ರಿ 11 ಗಂಟೆಯಿಂದ 2024ರ ಜನವರಿ 1ರ ಬೆಳಗ್ಗಿನ ಜಾವ 6 ಗಂಟೆ ತನಕ ಬ್ಯಾರಿಕೇಡ್‌ಗಳನ್ನು ಹಾಕಿ ಯಾವುದೇ ವಾಹನ ಓಡಾಡದಂತೆ ನಿರ್ಬಂಧ ಮಾಡೋಕೆ ಸಿದ್ದತೆ ನಡೆಸಿದ್ದಾರೆ. ಜನಸಂದಣಿ ಜಾಸ್ತಿ ಇರುವ ಎಂಜಿ, ಬ್ರಿಗೇಡ್, ಕೋರಮಂಗಲ, ಮಹದೇವಪುರ ಗುರುತಿಸಲಾಗಿದೆ. ಸಾಕಷ್ಟು ಕಡೆ ಟ್ರಾಫಿಕ್ ಬದಲಾವಣೆಯನ್ನೂ ಸಹ ಪೊಲೀಸರು ಮಾಡಿದ್ದಾರೆ. ಇದನ್ನೂ ಓದಿ: ವಂದೇ ಭಾರತ್ ರೈಲಿಗೆ ಪ್ರಧಾನಿ ಮೋದಿ ಚಾಲನೆ – ಗೋವಾದಿಂದ ಮಂಗಳೂರಿಗೆ ದರವೆಷ್ಟು?

  • ಸಿಬ್ಬಂದಿಗೆ ಹೊಸವರ್ಷದ ಗಿಫ್ಟ್‌ ಕೊಟ್ಟ BMTC – 6,960 ಕೇಸ್‌ಗಳು ಖುಲಾಸೆ

    ಸಿಬ್ಬಂದಿಗೆ ಹೊಸವರ್ಷದ ಗಿಫ್ಟ್‌ ಕೊಟ್ಟ BMTC – 6,960 ಕೇಸ್‌ಗಳು ಖುಲಾಸೆ

    ಬೆಂಗಳೂರು: ಹೊಸವರ್ಷಕ್ಕೆ (New Year 2024) ಇನ್ನೆರಡು ದಿನ ಬಾಕಿಯಿದ್ದು, ಈ ಹೊತ್ತಿನಲ್ಲೇ ಸಿಬ್ಬಂದಿಗೆ ಬಿಎಂಟಿಸಿ (BMTC) ಗುಡ್‌ನ್ಯೂಸ್ ಕೊಟ್ಟಿದೆ. ಬಿಎಂಟಿಸಿ ಸಿಬ್ಬಂದಿ ಮೇಲೆ ನಿಗಮದಲ್ಲಿ ದಾಖಲಾದ ಎಲ್ಲಾ ಕೇಸ್‌ಗಳನ್ನು ಖುಲಾಸೆಗೊಳಿಸುವ ಮೂಲಕ ಸಿಬ್ಬಂದಿಗೆ ಹೊಸ ವರ್ಷದ ಉಡುಗೊರೆ ನೀಡಿದೆ.

    ಬಿಎಂಟಿಸಿಯಲ್ಲಿ ಬಹಳ ವರ್ಷಗಳಿಂದಲೂ ಡಿಪೋ ಮ್ಯಾನೇಜರ್‌ಗಳ ಕಿರುಕುಳ, ಸಣ್ಣಪುಟ್ಟ ಪ್ರಕರಣಗಳಿಗೂ ಕೇಸ್ ದಾಖಲಾಗುತ್ತದೆ ಎಂಬ ಆರೋಪ ಕೇಳಿಬರುತ್ತಿತ್ತು. ಈ ಬಾರಿ ಸಿಬ್ಬಂದಿ ಮೇಲೆ ದಾಖಲಾದ ಒಟ್ಟು 6,960 ಕೇಸ್‌ಗಳನ್ನು ಖುಲಾಸೆ ಮಾಡುತ್ತಿದೆ. ಬಸ್‌ಗಳ ಆಪರೇಷನ್ ಕಾರ್ಯಾಚರಣೆ, ಮಾನವ ಸಂಪನ್ಮೂಲಗಳ ಸದ್ಬಳಕೆಯಿಂದ ಹಾಗೂ ಕಾರ್ಮಿಕರ ಹಿತ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ತಿಳಿಸಿದೆ.

    ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ರೂಲ್-23ರಲ್ಲಿ ಬರೋ 26 ಗೈರು ಹಾಜರಿ ಪ್ರಕರಣ, 284 ಅಶಿಸ್ತು ಪ್ರಕರಣ ಸೇರಿ ಒಟ್ಟು 544 ಗಂಭೀರ ಶಿಕ್ಷಾರ್ಹ ಪ್ರಕರಣಗಳು ಖುಲಾಸೆಯಾಗುತ್ತಿವೆ. ಇದರಲ್ಲಿ ಸಸ್ಪೆಂಡ್ ಆಗಿ ರಿವೋಕ್ ಆದ ಪ್ರಕರಣಗಳೂ ಸೇರಿವೆ. ಹಾಗೆಯೇ ಡಿಪೋಗಳಲ್ಲಿ ದಾಖಲಾದ ಒಟ್ಟು 2,276 ಗೈರು ಹಾಜರಿ, 4,140 ಅಶಿಸ್ತು ಪ್ರಕರಣಗಳು ಸೇರಿ ಒಟ್ಟು 6,416 ಪ್ರಕರಣಗಳನ್ನು ಕೈ ಬಿಡಲಾಗುತ್ತಿದೆ. ಇದನ್ನೂ ಓದಿ: ಅಸ್ಥಿಪಂಜರ ಪತ್ತೆ ಕೇಸ್‌: ಮಾನಸಿಕ ಅಸ್ವಸ್ಥತೆಯಿಂದ ಆತ್ಮಹತ್ಯೆಗೆ ಶರಣಾಗಿತ್ತಾ ಇಡೀ ಕುಟುಂಬ? – ಪೊಲೀಸರ ತನಿಖೆ ಚುರುಕು

    ಒಟ್ಟಾರೆ 6,960 ಕೇಸ್‌ಗಳನ್ನು ಖುಲಾಸೆಯಾಗುತ್ತಿವೆ. ಈ ಕೇಸ್‌ಗಳಲ್ಲಿ ಟ್ರಾಫಿಕ್ ಸೆನ್ಸಾರ್ ಉಲ್ಲಂಘನೆ, ಎಲ್ಲೆಂದರಲ್ಲಿ ಬಸ್ ನಿಲುಗಡೆ, ಬಸ್ ಚಾಲನೆ ವೇಳೆ ಮೊಬೈಲ್ ಬಳಕೆ, ಕರ್ತವ್ಯದ ವೇಳೆ ಸಮವಸ್ತ್ರ ಧರಿಸದೇ ಇರೋದು ಹೀಗೆ ಹಲವು ಪ್ರಕರಣಗಳಿಗೆ ಲಘು ಹಾಗೂ ಏಕರೂಪದ ಶಿಕ್ಷೆ ಕೊಟ್ಟು ಖುಲಾಸೆಗೊಳಿಸಲಾಗಿದೆ ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸತ್ಯವತಿ ತಿಳಿಸಿದ್ದಾರೆ. ಇದನ್ನೂ ಓದಿ: ನಂದಗೊಂಡನಹಳ್ಳಿಯ 12 ಎಕರೆಯಲ್ಲಿ ಬೆಳೆದಿದ್ದ ಮರಗಳ ನಾಶ – ಐವರು ಅರಣ್ಯಾಧಿಕಾರಿಗಳ ಅಮಾನತು

  • ಹೊಸ ವರ್ಷದ ಆಚರಣೆಗೆ ಮಾರುಕಟ್ಟೆಗೆ ಬಂತು ಹೊಸ ಶೈಲಿಯ ಗೌನ್ಸ್

    ಹೊಸ ವರ್ಷದ ಆಚರಣೆಗೆ ಮಾರುಕಟ್ಟೆಗೆ ಬಂತು ಹೊಸ ಶೈಲಿಯ ಗೌನ್ಸ್

    ಹೊಸ ವರ್ಷ 2024ರ (New Year 2024) ಶುರುವಿಗೆ ಕೌಂಟ್‌ಡೌನ್ ಶುರುವಾಗಿದೆ. ಕೊರೋನಾ ಹಾವಳಿ ಮಧ್ಯೆ ಹೊಸ ವರ್ಷ ಸೆಲೆಬ್ರೇಟ್ ಮಾಡಲು ಯುವಕ-ಯವತಿಯರ ಸಖತ್ ಆಗಿ ಪ್ಲ್ಯಾನ್‌ ನಡೆಯುತ್ತಿದೆ. ಇದರ ನಡುವೆ ಹೊಸ ವರ್ಷಕ್ಕೆ ಸರಿದೂಗುವ ಪಾರ್ಟಿ ಗೌನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.

    ಹೌದು.. ಹೊಸ ವರ್ಷ ಸೆಲೆಬ್ರೇಷನ್‌ಗೆ ಸಾಥ್ ನೀಡುವ 3 ಶೈಲಿಯ ಪಾರ್ಟಿ ಗೌನ್‌ಗಳು ಫ್ಯಾಷನ್ ಲೋಕಕ್ಕೆ ಎಂಟ್ರಿ ನೀಡಿವೆ. ಅದರಲ್ಲೂ ಈ ಜನರೇಷನ್ ಯುವತಿಯರಿಗೆ ಇಷ್ಟವಾಗುವಂತಹ ಗೌನ್‌ಗಳು ವಿಭಿನ್ನ ವಿನ್ಯಾಸದಲ್ಲಿ ಲಗ್ಗೆ ಇಟ್ಟಿವೆ. ಇದನ್ನೂ ಓದಿ:‘ಡಂಕಿ’ ಬಾಕ್ಸಾಫೀಸಿನ ಲೆಕ್ಕಾಚಾರ: 7 ದಿನದಲ್ಲಿ ಗಳಿಸಿದ್ದೆಷ್ಟು?

    ಇನ್ನೇನೂ ಹೊಸ ವರ್ಷ ಆಗಮಿಸುತ್ತಿದೆ. ಸೆಲೆಬ್ರೇಷನ್ ಪಾರ್ಟಿಗೆ ಹೊಂದುವಂತೆ ಈಗಾಗಲೇ ನಾನಾ ಶೈಲಿಯ ಗೌನ್‌ಗಳು ಕಾಲಿಟ್ಟಿವೆ. ಅವುಗಳಲ್ಲಿ 3 ಶೈಲಿಯ ಮಾಡರ್ನ್ ವಿನ್ಯಾಸದ ಗೌನ್‌ಗಳು (Gowns) ಬೇಡಿಕೆ ಹೆಚ್ಚಿಸಿಕೊಂಡಿವೆ. ಅದರಲ್ಲೂ ಯಂಗ್ ಹುಡುಗಿಯರು ಹಾಗೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರ ಮನ ಸೆಳೆದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಅವರ ಪ್ರಕಾರ, ಇವು ಗ್ಲ್ಯಾಮರಸ್ ಟಚ್ ನೀಡುವುದರೊಂದಿಗೆ ಹಾಟ್ ಲುಕ್ ನೀಡುವ ಸ್ಯಾಟಿನ್ ಬಾಡಿಕಾನ್ ಗೌನ್ಸ್, ಶಿಮ್ಮರಿಂಗ್ ಸಾಫ್ಟ್ ಫ್ಯಾಬ್ರಿಕ್ ಗೌನ್ಸ್ ಹಾಗೂ ಶೈನಿಂಗ್ ಸಿಕ್ವೀನ್ಸ್ ಗೌನ್ಸ್ ನ್ಯೂ ಇಯರ್ ಪಾರ್ಟಿ ಗೌನ್ ಲಿಸ್ಟ್‌ನಲ್ಲಿ ಟಾಪ್ ಲಿಸ್ಟ್‌ ಸೇರಿವೆ ಎನ್ನುತ್ತಾರೆ.

    ಹೊಸ ಶೈಲಿಯ ಗೌನ್‌ಗಳು ಈ ಬಾರಿ ನ್ಯೂ ಇಯರ್ ಸೆಲೆಬ್ರೇಷನ್‌ಗೆ ಮ್ಯಾಚ್ ಆಗುವಂತಹ ಡಿಸೈನ್‌ಗಳಲ್ಲಿ ಬಂದಿವೆ. ಕೋಲ್ಡ್ ಶೋಲ್ಡರ್, ಆಫ್ ಶೋಲ್ಡರ್ ಸ್ಯಾಟಿನ್ ಗೌನ್‌ಗಳು ಹೊಸ ವಿನ್ಯಾಸದಲ್ಲಿ ಆಗಮಿಸಿವೆ. ಹೊಸ ವರ್ಷಕ್ಕೆ ಮೆರುಗು ತುಂಬಲು ಹೊಂದುವಂತೆ ಶೈನಿಂಗ್ ಕಲರ್ ಶೇಡ್‌ಗಳಲ್ಲಿ, ಸ್ಲಿಟ್ ಡಿಸೈನ್‌ನಲ್ಲಿ ಎಂಟ್ರಿ ನೀಡಿವೆ. ಹೆಚ್ಚು ಹೆವ್ವಿ ವಿನ್ಯಾಸವಿಲ್ಲದ ಹುಡುಗಿಯರಿಗೆ ಇಷ್ಟವಾಗಲಿದೆ.

    ನೋಡಿದಾಕ್ಷಣ ಕಣ್ಣು ಕೊರೈಸುವ ಶಿಮ್ಮರಿಂಗ್ ಫ್ಯಾಬ್ರಿಕ್‌ನ ಸಿಲ್ವರ್, ಗೋಲ್ಡ್, ಮಜೆಂಟಾ ಸೇರಿದಂತೆ ನಾನಾ ಶೇಡ್‌ಗಳ ಶೈನಿಂಗ್ ಗೌನ್‌ಗಳು ಹೊಸ ವರ್ಷದ ಹರ್ಷವನ್ನು ಹೆಚ್ಚಿಸಲು ಬಂದಿವೆ. ಯುವತಿಯರಿಗೆ ಇಷ್ಟವಾಗುವಂತಹ ಸ್ಲೀವ್, ಬಾಡಿ ಫಿಟ್ ವಿನ್ಯಾಸದಲ್ಲಿ, ಕಟೌಟ್ ಡಿಸೈನ್‌ಗಳಲ್ಲಿ ಮಾರುಕಟ್ಟಿಗೆ ಎಂಟ್ರಿ ಕೊಟ್ಟಿದೆ.

    ಪಾರ್ಟಿಯಲ್ಲಿ ನೂರು ಜನರ ಮಧ್ಯೆಯೂ ಎದ್ದು ಕಾಣಬಹುದಾದ ಫ್ಯಾಬ್ರಿಕ್‌ನಲ್ಲಿ ಸಿದ್ಧಪಡಿಸಿರುವ ಸಿಕ್ವೀನ್ಸ್ ಗೌನ್‌ಗಳು ಈ ಬಾರಿ ಲೆಕ್ಕವಿಲ್ಲದಷ್ಟೂ ಮಿಕ್ಸ್ ಮ್ಯಾಚ್ ಶೇಡ್‌ಗಳಲ್ಲಿ ಬಂದಿವೆ. ನೋಡಲು ಸಿಂಪಲ್ ಡಿಸೈನ್‌ನಲ್ಲಿ ಆಗಮಿಸಿರುವ ಇವು ಈಗಾಗಲೇ ಬೇಡಿಕೆ ಹೆಚ್ಚಿಸಿಕೊಂಡಿವೆ.

  • ಬೆಂಗಳೂರಿಗರಿಗೆ ಹೊಸ ವರ್ಷದ ಗುಡ್ ನ್ಯೂಸ್; ಮಧ್ಯರಾತ್ರಿ 2:15 ರವರೆಗೆ ಮೆಟ್ರೋ ಸೇವೆ

    ಬೆಂಗಳೂರಿಗರಿಗೆ ಹೊಸ ವರ್ಷದ ಗುಡ್ ನ್ಯೂಸ್; ಮಧ್ಯರಾತ್ರಿ 2:15 ರವರೆಗೆ ಮೆಟ್ರೋ ಸೇವೆ

    ಬೆಂಗಳೂರು: ಹೊಸ ವರ್ಷದ (New Year 2024) ಪಾರ್ಟಿ ಮೂಡ್‌ನ ಬೆಂಗಳೂರಿಗೆ ‘ನಮ್ಮ ಮೆಟ್ರೋ’ (Namma Metro) ಗುಡ್‌ ನ್ಯೂಸ್‌ ಕೊಟ್ಟಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಡಿ.31 ರ ಮಧ್ಯರಾತ್ರಿಯಿಂದ ಜನವರಿ 1 ರ ಬೆಳಗಿನ ಜಾವ 2:15 ರವರೆಗೆ ಮೆಟ್ರೋ ಸೇವೆ ಅವಧಿ ವಿಸ್ತರಿಸಿ ಬೆಂಗಳೂರು ಮೆಟ್ರೋ ರೈಲು ನಿಗಮ ಪ್ರಕಟಣೆ ಹೊರಡಿಸಿದೆ.

    2024 ರ ಹೊಸ ವರ್ಷದ ಮುನ್ನಾದಿನ, ನಿಗಮವು ಮೆಟ್ರೋ ರೈಲು ಸೇವೆಗಳನ್ನು ನೇರಳೆ ಮತ್ತು ಹಸಿರು ಮಾರ್ಗದಲ್ಲಿ ವಿಸ್ತರಿಸುತ್ತಿದೆ. ಜ.1 ರ ಮಧ್ಯರಾತ್ರಿ 1:30 ಗಂಟೆಗೆ ಎಲ್ಲಾ ಟರ್ಮಿನಲ್‌ ನಿಲ್ದಾಣಗಳಿಂದ ಕೊನೆಯ ರೈಲು ಸೇವೆ ಇರಲಿದೆ. 15 ನಿಮಿಷದ ಅವಧಿಗೆ ಒಂದರಂತೆ ಮೆಟ್ರೋ ಸಂಚರಿಸಲಿವೆ. ಮೆಜೆಸ್ಟಿಕ್‌ನಿಂದ ಜ.1 ರ ಬೆಳಗಿನ ಜಾವ 2:15 ರ ವರೆಗೆ ಎಲ್ಲಾ ನಾಲ್ಕು ದಿಕ್ಕುಗಳಿಗೂ ಕೊನೆಯ ರೈಲು ಸೇವೆ ಇರಲಿದೆ. ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್ ಟರ್ಮಿನಲ್-2ರಲ್ಲಿ ಹೈಟೆಕ್ ಬಸ್ ನಿಲ್ದಾಣಕ್ಕೆ ಚಾಲನೆ

    ಸಾರ್ವಜನಿಕರ ಸುರಕ್ಷತೆ, ಭದ್ರತೆ ದೃಷ್ಟಿಯಿಂದ ಎಂ.ಜಿ. ರೋಡ್‌ ಮೆಟ್ರೋ ನಿಲ್ದಾಣವನ್ನು ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನಕ್ಕೆ ಡಿ.31 ರ ರಾತ್ರಿ 11 ಗಂಟೆಗೆ ಮುಚ್ಚಲಾಗುವುದು. ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಇರುವುದಿಲ್ಲ. ಮೆಟ್ರೋ ರೈಲುಗಳು ಪಕ್ಕದ ನಿಲ್ದಾಣಗಳಾದ ಟ್ರಿನಿಟಿ ಮತ್ತು ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣಗಳಲ್ಲಿ ಎಂದಿನಂತೆ ನಿಲ್ಲುತ್ತವೆ.

    ಯಾವುದೇ ಮೆಟ್ರೋ ನಿಲ್ದಾಣಗಳಿಂದ ಟ್ರಿನಿಟಿ ಮತ್ತು ಕಬ್ಬನ್‌ ಪಾರ್ಕ್‌ಗೆ ವಿಸ್ತರಿಸಿದ ಅವಧಿಯಲ್ಲಿ ಟೋಕನ್‌, ಸ್ಮಾರ್ಟ್‌ ಕಾರ್ಡ್‌, ಎನ್‌ಸಿಎಂಸಿ ಕಾರ್ಡ್‌ ಮತ್ತು ಕ್ಯೂಆರ್‌ ಟಿಕೆಟ್‌ಗಳ ಮೂಲಕ ಪ್ರಯಾಣ ಮಾಡಬಹುದಾಗಿದೆ. ಜನದಟ್ಟಣೆಯನ್ನು ತಪ್ಪಿಸಲು ಮತ್ತು ಸಹ ಪ್ರಯಾಣಿಕರಿಗೆ ಅನುಕೂಲವಾಗುವಂತೆ ವೈಟ್‌ಫೀಲ್ಡ್‌ (ಕಾಡುಗೋಡಿ) ಕಡೆಗೆ ಪ್ರಯಾಣಿಕರು ಟ್ರಿನಿಟಿ ಮೆಟ್ರೋ ನಿಲ್ದಾಣವನ್ನು ಬಳಸಬೇಕು. ಹಾಗೆಯೇ ಚಲ್ಲಘಟ್ಟ, ನಾಗಸಂದ್ರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ ಕಡೆಗೆ ಪ್ರಯಾಣಿಸುವವರು ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣವನ್ನು ಬಳಸಲು ಸೂಚಿಸಲಾಗಿದೆ. ಈ ಎರಡೂ ನಿಲ್ದಾಣಗಳು ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದಿಂದ ಸಮಾನ ಅಂತರದಲ್ಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ‘ಬಾಟಲ್ ತಾರೋ’ ಅಂತಿದ್ದಾರೆ ನೀನಾಸಂ ಸತೀಶ್

  • ಹೊಸ ವರ್ಷಕ್ಕೆ ಪಕ್ಕದ ರಾಜ್ಯಗಳಿಂದ ಮದ್ಯ ಸರಬರಾಜು – ಹದ್ದಿನ ಕಣ್ಣಿಟ್ಟ ಅಬಕಾರಿ ಇಲಾಖೆ

    ಹೊಸ ವರ್ಷಕ್ಕೆ ಪಕ್ಕದ ರಾಜ್ಯಗಳಿಂದ ಮದ್ಯ ಸರಬರಾಜು – ಹದ್ದಿನ ಕಣ್ಣಿಟ್ಟ ಅಬಕಾರಿ ಇಲಾಖೆ

    ಕಲಬುರಗಿ: ಈ ಬಾರಿ ಹೊಸ ವರ್ಷ ಸಂಭ್ರಮಕ್ಕೆ (New Year 2024) ರಾಜ್ಯದ ಅಬಕಾರಿ ಇಲಾಖೆಯಿಂದ ಕೋಟಿ ಕೋಟಿ ತೆರಿಗೆ ಹಣದ ನಿರೀಕ್ಷೆಯಲ್ಲಿದೆ. ಆದ್ರೆ, ರಾಜ್ಯದಲ್ಲಿ ಮಧ್ಯದ ದರ ಹೆಚ್ಚಾದ (Liquor Price Hike) ಹಿನ್ನೆಲೆಯಲ್ಲಿ ನೆರೆಯ ಗೋವಾ, ತೆಲಂಗಾಣ ಹಾಗೂ ಮಹಾರಾಷ್ಟ್ರಗಳಿಂದ ಮದ್ಯ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ರಾಜ್ಯ ಸರ್ಕಾರದ ಬೊಕಸಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ನಷ್ಟವಾಗುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.

    2024ರ ಹೊಸ ವರ್ಷದ ಸಂಭ್ರಮವನ್ನ ಕೊಂಡಾಡಲು ಇಡೀ ದೇಶವೇ ತುದಿಗಾಲಲ್ಲಿ ನಿಂತಿದೆ. ಈ ಸಂತಸದ ಕ್ಷಣವನ್ನ ಸಂಭ್ರಮಿಸಲು ಲೆಕ್ಕವಿಲ್ಲದಷ್ಟು ಮದ್ಯ (Liquor) ಮಾರಾಟವಾಗುತ್ತೆ. ಆದ್ರೆ ರಾಜ್ಯದಲ್ಲಿ ಮದ್ಯದ ದರ ಗಣನೀಯವಾಗಿ ಏರಿಕೆಯಾದ ಹಿನ್ನೆಲೆಯಲ್ಲಿ, ಎಲ್ಲರ ಕಣ್ಣು ಪಕ್ಕದಲ್ಲಿರೋ ಗೋವಾದತ್ತ ನೆಟ್ಟಿದೆ. ಕರ್ನಾಟಕದಲ್ಲಿ ಮದ್ಯದ ದರ ದುಪ್ಪಟ್ಟಾದ ಹಿನ್ನೆಲೆ ನೆರೆಯ ರಾಜ್ಯಗಳಿಂದ ಮದ್ಯ ಆಮದು ಮಾಡಿಕೊಳ್ಳುವ ತಯಾರಿ ನಡೆದಿದೆ. ಇದನ್ನೂ ಓದಿ: ರಾಜ್ಯಾದ್ಯಂತ ʻಕಾಟೇರʼ ದರ್ಶನ – ಮುಗಿಲು ಮುಟ್ಟಿದ ಡಿಬಾಸ್‌ ಅಭಿಮಾನಿಗಳ ಸಂಭ್ರಮ

    ಗೋವಾದಿಂದ ಅಕ್ರಮವಾಗಿ ಕಲಬುರಗಿಗೆ ಮದ್ಯ ಸಾಗಿಸುತ್ತಿದ್ದ ವೇಳೆ ಖಾಸಗಿ ಬಸ್ ಮೇಲೆ ಕಲಬುರಗಿ ಜಿಲ್ಲಾ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ 48 ಲೀಟರ್ ಮದ್ಯ ಸೀಜ್ ಮಾಡಿದ್ದಾರೆ. ಇದರೊಂದಿಗೆ 51 ಲಕ್ಷ ರೂ. ಮೌಲ್ಯದ ಒಂದು ಖಾಸಗಿ ಬಸ್ ಹಾಗೂ 2 ಬೈಕ್ ಸೀಜ್ ಮಾಡಿದ್ದಾರೆ. ಅಲ್ಲದೇ 6 ಜನರನ್ನ ಬಂಧಿಸಿದ್ದು, 2 ಬೈಕ್‌ಗಳನ್ನೂ ಸೀಜ್ ಮಾಡಲಾಗಿದೆ. ಪಣಜಿಯಿಂದ ಬರುತ್ತಿದ್ದ ಖಾಸಗಿ ಬಸ್‌ನ ವಿವಿಧೆಡೆ ಮದ್ಯದ ಬಾಟಲಿಗಳನ್ನ ಇಡಲಾಗಿತ್ತು. ಬಸ್ ಕಲಬುರಗಿ ಗಡಿಗೆ ಎಂಟ್ರಿ ಕೊಡುತ್ತಿದ್ದಂತೆ ಅಲರ್ಟ್ ಆದ ಕಲಬುರಗಿ ಅಬಕಾರಿ ಪೊಲೀಸರು, ಇಡೀ ಬಸ್ ಜಾಲಾಡಿದ್ದಾರೆ. ಈ ವೇಳೆ ನೂರಾರು ಬಾಟಲ್‌ಗಳು ಅಬಕಾರಿ ಪೊಲೀಸರ ಕೈಗೆ ಸಿಕ್ಕಿವೆ.

    ನೆರೆ ರಾಜ್ಯ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮದ್ಯ ಸಿಗುತ್ತೆ. ಹೀಗಾಗಿ ನ್ಯೂ ಇಯರ್ ಸೆಲಬ್ರೇಷನ್‌ಗಾಗಿ ಈ ಎರಡು ರಾಜ್ಯದ ಅಗ್ಗದ ಮದ್ಯಕ್ಕೆ ಸಾಕಷ್ಟು ಡಿಮ್ಯಾಂಡ್ ಇದೆ. ಅದಕ್ಕಾಗಿ ಅಕ್ರಮವಾಗಿ ಮದ್ಯ ಸಾಗಾಟ ಮಾಡಲಾಗುತಿದೆ ಎಂದು ಹೇಳಲಾಗಿದೆ. ಇನ್ನಷ್ಟು ಮದ್ಯ ರಾಜ್ಯಕ್ಕೆ ಆಮದಾಗುವ ಸಾಧ್ಯತೆಗಳಿದ್ದು, ರಾಜ್ಯ ಅಬಕಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಇದನ್ನೂ ಓದಿ: ಹೊಸ ವರ್ಷಕ್ಕೂ ಮುನ್ನವೇ ಪೆಟ್ರೋಲ್, ಡೀಸೆಲ್ ದರದಲ್ಲಿ 10 ರೂ. ಇಳಿಕೆ?

  • ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್‌: ಬೆಂಗ್ಳೂರು ಪೊಲೀಸ್‌

    ಹೊಸವರ್ಷ ಆಚರಣೆ – ಮಹಿಳೆಯರ ರಕ್ಷಣೆಗೆ ಮುಂದಿನ ವಾರದಲ್ಲಿ ಗೈಡ್‌ಲೈನ್ಸ್‌: ಬೆಂಗ್ಳೂರು ಪೊಲೀಸ್‌

    ಬೆಂಗಳೂರು: ಹೊಸ ವರ್ಷ ಸಂಭ್ರಮಾಚರಣೆಯಲ್ಲಿ (New Year 2024) ಭಾಗವಹಿಸುವ ಮಹಿಳೆಯರಿಗೆ ಯಾವುದೇ ತೊಂದರೆ ಮತ್ತು ಕಿರುಕುಳ ಆಗದಂತೆ ನೋಡಿಕೊಳ್ಳಲು ವಿಶೇಷ ಗೈಡ್‌ಲೈನ್ಸ್‌ ಬಿಡುಗಡೆ ಮಾಡುವುದಾಗಿ ಬೆಂಗಳೂರು ನಗರ ಪೊಲೀಸ್‌ ಆಯುಕ್ತ  (Bengaluru Police Commissioner) ಬಿ. ದಯಾನಂದ್‌ ತಿಳಿಸಿದ್ದಾರೆ.

    ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ವರ್ಷಾಚರಣೆ ವೇಳೆ ಮಹಿಳೆಯರಿಗೆ (Women) ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಂದಿನ ವಾರದಲ್ಲೇ ಅದಕ್ಕೆ ಸಂಬಂಧಿಸಿದಂತೆ ಸೂಕ್ತ ಮಾರ್ಗಸೂಚಿ (New Year Guidelines) ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಹೊಸ ವರ್ಷ ಸಂಭ್ರಮಾಚರಣೆ ಬಗ್ಗೆ ಬಿಬಿಎಂಪಿ, ಬೆಸ್ಕಾಂ, ಬಿಎಂಟಿಸಿ, ಮೆಟ್ರೋ ಹಾಗೂ ಅಬಕಾರಿ ಇಲಾಖೆಗಳ ಜೊತೆ ಎರಡು ಸುತ್ತಿನ ಸಭೆ ನಡೆಸಿ ಚರ್ಚಿಸಲಾಗಿದೆ. ಎಂ.ಜಿ ರಸ್ತೆ, ಬ್ರಿಗೆಡ್‌ ರೋಡ್‌ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸಂಭ್ರಮಾಚರಣೆ ನಡೆಯಲಿದೆ. ಇದರಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ, ಕುಡಿದು ಅತಿರೇಕವಾಗಿ ವರ್ತಿಸಿದ್ರೆ ಹಾಗೂ ಇತರೆ ದುರ್ಘಟನೆಗಳನ್ನ ತಡೆಗಟ್ಟಲು ಈ ಹಿಂದಿನ ಪ್ರಕರಣಗಳನ್ನು ಅವಲೋಕಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ದಾಳಿ; ಮೂವರು ನಾಗರಿಕರ ಹತ್ಯೆ – 2 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಸ್ಥಗಿತ

    ಠಾಣೆ ವಿವರ ಪಡೆಯಲು QR ಕೋಡ್‌:
    ಪೊಲೀಸ್‌ ಇಲಾಖೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿ ಮಾಡಲು ಸಾರ್ವಜನಿಕ ಸ್ಥಳಗಳಲ್ಲಿ ಕ್ಯೂಆರ್‌ಕೋಡ್‌ ಅಳವಡಿಸುವ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗುತ್ತಿದೆ. ಹೊಸ ವರ್ಷದ ಹೊರತಾಗಿಯೂ ಸಾರ್ವಜನಿಕ ಸ್ಥಳಗಳಲ್ಲಿ ದುರ್ಘಟನೆಗಳು ಸಂಭವಿಸಿದಾಗ ಸ್ಥಳ ಯಾವ ಠಾಣೆ ವ್ಯಾಪ್ತಿಗೆ ಬರಲಿದೆ? ಯಾರನ್ನು ಸಂಪರ್ಕಿಸಬೇಕು? ಇನ್ನೂ ಮುಂತಾದ ಗೊಂದಲಗಳಿದ್ದರೇ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಮಾಹಿತಿ ಪಡೆಯಬಹುದು ಎಂದು ವಿವರಿಸಿದ್ದಾರೆ.

    ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದ್ರೆ ಸಂಬಂಧಪಟ್ಟ ಪೊಲೀಸ್‌ ಠಾಣೆಯ ಸಂಪೂರ್ಣ ವಿವರ ಸಿಗಲಿದೆ. ಇದರಿಂದ ಸಾರ್ವಜನಿಕರು ನೀಡುವ ಮಾಹಿತಿ ಆಧರಿಸಿ ಪೊಲೀಸರು ಘಟನಾ ಸ್ಥಳಕ್ಕೆ ಬರಲು ಅನುಕೂಲವಾಗುತ್ತದೆ ಎಂದು ಆಯುಕ್ತರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೂ ಮುನ್ನ ಸಿಂಗಾರಗೊಳ್ಳಲಿದೆ ರಾಮನ ಮೆಟ್ಟಿಲು! – ಏನಿದರ ಮಹತ್ವ? ಈ ಹೆಸರು ಯಾಕೆ ಬಂತು?