ಸುಮಾರು 14 ಪ್ರಯಾಣಿಕರಿದ್ದ ಪಿಕಪ್ ವಾಹನ ಮಧ್ಯಾಹ್ನ 3:30ರ ಸುಮಾರಿಗೆ ಅಪಘಾತಕ್ಕೀಡಾಗಿದೆ. ನಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಸುಮಾರು 14 ಪ್ರಯಾಣಿಕರಿದ್ದ ಪಿಕಪ್ ಟ್ರಕ್ ತನಗೆ ಎದುರು ಬರುತ್ತಿದ್ದ ಟ್ರಕ್ ಮತ್ತು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಐವರು ಪುರುಷರು ಮತ್ತು ಮೂರು ಹೆಣ್ಣುಮಕ್ಕಳು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಗಾಯಗೊಂಡ ಒಂಭತ್ತು ಮಂದಿಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಸಿಕರ್ ಎಎಸ್‌ಪಿ ರತನ್ ಲಾಲ್ ಭಾರ್ಗವ ತಿಳಿಸಿದ್ದಾರೆ. ಇದನ್ನೂ ಓದಿ: ಭೀಕರ ಅಪಘಾತ- ಡಿಕ್ಕಿ ಹೊಡೆದು 12 ಕಿ.ಮೀ ಎಳೆದೊಯ್ದ ಕಾರು, ಯುವತಿ ದುರ್ಮರಣ
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಇದೊಂದು ದೊಡ್ಡ ದುರಂತ. ಗಾಯಗೊಂಡವರನ್ನು ಉಳಿಸುವ ಪ್ರಯತ್ನ ನಡೆಯುತ್ತಿದೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಕುಟುಂಬಗಳಿಗೆ ಪರಿಹಾರ ಸಿಗುವಂತೆ ಮಾಡುವುದು ನಮ್ಮ ಪ್ರಯತ್ನ ಎಂದು ಎಎಸ್‌ಪಿ ಮಾಹಿತಿ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]
ಕಾರವಾರ: ಅತಿ ವೇಗದ ಚಾಲನೆಯಿಂದ ನಿಯಂತ್ರಣ ತಪ್ಪಿದ ಕಾರೊಂದು (Car) ಕೆಎಸ್‌ಆರ್‌ಟಿಸಿ (KSRTC Bus) ಬಸ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಬಾಳೆಗುಳಿ ಕ್ರಾಸ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಹೊಸ ವರ್ಷಾಚರಣೆ (New Year) ಮುಗಿಸಿ ಗೋವಾದಿಂದ (Goa) ಕಾರಿನಲ್ಲಿ ಐವರು ವಾಪಸ್ಸಾಗುತ್ತಿದ್ದರು. ಅತಿ ವೇಗವಾಗಿ ಚಾಲನೆ ಮಾಡಿದ್ದರಿಂದ ಕಾರು ನಿಯಂತ್ರಣ ಕಳೆದುಕೊಂಡಿದೆ. ಈ ವೇಳೆ ತದಡಿಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿದ್ದ ಬಸ್‌ಗೆ ಗುಡ್ಡಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ.
ನ್ಯೂ ಇಯರ್ 2023ನ್ನು (New Year 2023) ಎಲ್ಲರೂ ಬಿಂದಾಸ್ ಆಗಿ ವೆಲ್‌ಕಮ್ ಮಾಡಿದ್ದಾರೆ. ಹೊಸ ಕನಸು, ಆಸೆ, ಗುರಿಗಳೊಂದಿಗೆ ಹೊಸ ವರ್ಷವನ್ನು ಸಂಭ್ರಮಿಸಿದ್ದಾರೆ. ಕುಟುಂಬದವರು, ಸ್ನೇಹಿತರೊಟ್ಟಿಗೆ ಪ್ರವಾಸ, ಮೋಜು-ಮಸ್ತಿ ಮಾಡುತ್ತಿದ್ದಾರೆ. ಇದು ನ್ಯೂ ಇಯರ್ ಆಚರಣೆಯ ಮೊದಲ ದಿನಕ್ಕಷ್ಟೇ ಸೀಮಿತವಾಗಿರುತ್ತೆ. ಮತ್ತೆ ಎಲ್ಲರೂ ಎಂದಿನಂತೆ ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ.
ಹೊಸ ವರ್ಷ ಸಂಭ್ರಮ ಕೇವಲ ಒಂದು ದಿನಕ್ಕಷ್ಟೇ ಸೀಮಿತ ಆಗಬಾರದು. ಸಂಭ್ರಮ, ಖುಷಿ, ಆನಂದವನ್ನು ವರ್ಷಪೂರ್ತಿ ಇರುವಂತೆ ನೋಡಿಕೊಳ್ಳಬೇಕು. ಹ್ಯಾಪಿಯಾಗಿ ಈ ವರ್ಷವನ್ನು ಕಳೆಯಲು ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಒಂದಷ್ಟು ನಿಯಮಗಳನ್ನು ಅಳವಡಿಸಿಕೊಳ್ಳಿ. ನಾವು ಒಂದಷ್ಟು ಟಿಪ್ಸ್ ಕೊಡ್ತೀವಿ. ಪ್ರತಿದಿನ ಹೀಗೆ ಮಾಡಿ ಸದಾ ಹ್ಯಾಪಿಯಾಗಿ ಜೀವನ ನಡೆಸಿ. ಇದನ್ನೂ ಓದಿ: ಹಾಯ್ 2023.. ಹೊಸ ವರ್ಷ ನಿನಗೆ ಸುಸ್ವಾಗತ
ನಿದ್ರೆ ಮತ್ತು ಏಳುವ ಸಮಯ ಸರಿ ಮಾಡ್ಕೊಳ್ಳಿ
ಇಲ್ಲಿಯವರೆಗೆ ನೀವು ಸೋಂಬೇರಿಯಂತೆ ಯಾವಾಗಲೋ ಮಲಗುವುದು, ಎಷ್ಟೊತ್ತಿಗೋ ಏಳುವುದು ಮಾಡುತ್ತಿದ್ದರೆ ಇನ್ಮುಂದೆ ಅದನ್ನು ಸರಿಪಡಿಸಿಕೊಳ್ಳಿ. ಹೊಸ ವರ್ಷದಲ್ಲಿ ನಾನು ದಿನಚರಿಯನ್ನು ಸರಿಯಾಗಿ ಮ್ಯಾನೇಜ್ ಮಾಡ್ತೀನಿ ಅಂತಾ ಸಂಕಲ್ಪ ಮಾಡಿ. ಆದಷ್ಟು ಬೇಗ ಅಂದರೆ ನಿಗದಿತ ಸಮಯಕ್ಕೆ ಮಲಗಿ ಮತ್ತು ಬೆಳಗ್ಗೆ ಬೇಗನೆ ಏಳುವ ಪ್ರವೃತ್ತಿ ಬೆಳೆಸಿಕೊಳ್ಳಿ. ಇದು ಒಂದು ದಿನಕ್ಕಷ್ಟೇ ಸೀಮಿತ ಆಗಬಾರದು. ನಿತ್ಯ ಇದನ್ನು ಚಾಚೂ ತಪ್ಪದೇ ಪಾಲಿಸಬೇಕು.
ಈ ದಿನ ಏನೇನು ಮಾಡ್ಬೇಕು ಅಂತಾ ಪ್ಲ್ಯಾನ್ ಮಾಡಿ
ಈ ದಿನ ನಾನು ಇಂತಿಂಥ ಕೆಲಸ ಮಾಡಬೇಕು ಅಂತಾ ಪ್ಲ್ಯಾನ್ ಮಾಡಿಕೊಳ್ಳಿ. ಇದನ್ನು ಕನಿಷ್ಠ 2 ವಾರಗಳವರೆಗೆ ತಪ್ಪದೇ ಪಾಲಿಸಿ. ಆಗ ನೀವೇ ಎಲ್ಲದಕ್ಕೂ ಹೊಂದಿಕೊಳ್ಳುತ್ತೀರಾ. ಆಗ ಪ್ರತಿ ಕೆಲಸವೂ ನಿಮಗೆ ಇನ್ನಷ್ಟು ಸುಲಭ ಹಾಗೂ ಕಡಿಮೆ ಸಮಯದಲ್ಲಿ ಆಗುತ್ತೆ. ಇನ್ಮುಂದೆ ನೀವು ಯಾವುದೇ ಕೆಲಸ ಮಾಡ್ಬೇಕಾದ್ರೂ ಅದಕ್ಕೊಂದು ಯೋಜನೆ ರೂಪಿಸಿಕೊಳ್ಳಿ. ಅದು ನಿಮ್ಮ ಯಶಸ್ಸಿಗೆ ದಾರಿದೀಪವಾಗುತ್ತೆ.
ಮನೆಯಲ್ಲೇ ಮಾಡಿದ ಆಹಾರ ಸೇವಿಸಿ
ಹೊಸ ವರ್ಷ ಕೇವಲ ಸಂಭ್ರಮಕ್ಕಷ್ಟೇ ಅಲ್ಲ. ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವ ವರ್ಷ ಆಗಬೇಕು. ಈ ವರ್ಷ ನಾನು ಮನೆಯಲ್ಲೇ ಮಾಡಿದ ಆಹಾರ ಸೇವಿಸುತ್ತೇನೆ. ಸ್ಟ್ರೀಟ್ ಫುಡ್, ಜಂಕ್ ಫುಡ್‌ನ್ನು ಆದಷ್ಟು ಕಡಿಮೆ ಮಾಡುತ್ತೇನೆ ಎಂದು ಶಪಥ ಮಾಡಿ. ಆರೋಗ್ಯದ ಕಡೆಗೂ ಹೆಚ್ಚಿನ ಆದ್ಯತೆ ಕೊಡಿ. ಇದನ್ನೂ ಓದಿ: ಸದಾ ಹ್ಯಾಪಿಯಾಗಿರುವವರ ಸೀಕ್ರೆಟ್ ಗುಣಗಳೇನು ಗೊತ್ತಾ?
ವ್ಯಾಯಾಮ, ಧ್ಯಾನ ಮಾಡಿ
ವ್ಯಾಯಾಮ ಮಾಡಲು ಹಣ ಕೊಟ್ಟು ಜಿಮ್ ಕ್ಲಾಸ್‌ಗೆ ಹೋಗಬೇಕು ಅಂತೇನು ಇಲ್ಲ. ನಿಮ್ಮ ಮನೆಯಲ್ಲೇ ವ್ಯಾಯಾಮ ಮಾಡಿ. ವರ್ಕೌಟ್‌ಗೆ ಮನೆಯಲ್ಲೇ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಕಿರಿಕಿರಿ ಎನಿಸದ, ಪ್ರಶಾಂತವಾದ ಜಾಗ ಅದಾಗಿರಬೇಕು. ದೇಹವನ್ನು ದಂಡಿಸಿದರೆ ಆರೋಗ್ಯ ಚೆನ್ನಾಗಿರುತ್ತೆ. ಹಾಗೆ ಮನಸ್ಸು ಉಲ್ಲಾಸಭರಿತವಾಗಿರುತ್ತೆ. ಧ್ಯಾನ ಮಾಡಿದರೆ ಮನಸ್ಸು ಸದೃಢವಾಗುತ್ತದೆ. ನೀವು ಮಾಡುವ ಕೆಲಸಗಳ ಕಡೆ ಆಸಕ್ತಿ, ಶ್ರದ್ಧೆ ಮೂಡುತ್ತದೆ.
ಎನ್‌ಜಿಒ ಮೂಲಕ ಸಹಾಯ ಮಾಡಿ
ಜೀವನದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಮನೋಭಾವ ಪ್ರತಿಯೊಬ್ಬರಿಗೂ ಇರಬೇಕು. ಎನ್‌ಜಿಒ ಮೂಲಕ ಸ್ವಯಂಸೇವಕರಾಗಿ ಇತರರಿಗೆ ನೆರವಾಗಬೇಕು. ನಿಜಕ್ಕೂ ಅದು ನಮ್ಮ ಬದುಕಿನ ಸಾರ್ಥಕ ಕ್ಷಣವಾಗುತ್ತೆ.
ಚೆನ್ನಾಗಿ ನೀರು ಕುಡಿಯಿರಿ
ಈ ವರ್ಷ ನಿಮ್ಮ ದೇಹ ನಿರ್ಜಲೀಕರಣದಿಂದ ಅನಾರೋಗ್ಯ ಸಮಸ್ಯೆ ಎದುರಿಸಬಾರದು. ಇದರ ಬಗ್ಗೆಯೂ ನೀವು ಎಚ್ಚರ ವಹಿಸಬೇಕು. ಅದಕ್ಕಾಗಿ ನಿತ್ಯ ನಿಗದಿತ ಪ್ರಮಾಣದಲ್ಲಿ ನೀರನ್ನು ಸೇವಿಸಿ. ಸರಿಯಾಗಿ ನೀರನ್ನು ಸೇವಿಸದೇ ಆರೋಗ್ಯ ಹಾಳುಮಾಡಿಕೊಳ್ಳಬೇಡಿ.
ಪುಸ್ತಕ ಓದಿ
ಆಸಕ್ತಿ ಕ್ಷೇತ್ರದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಲು ಪುಸ್ತಕ ಓದುವುದು ಬಹಳ ಮುಖ್ಯ. ಎಷ್ಟೋ ಜನರಿಗೆ ಪುಸ್ತಕ ಓದಲು ಆಸಕ್ತಿಯೇ ಇರುವುದಿಲ್ಲ. ಅಂತಹವರು ನಿತ್ಯ ಒಂದು ಪುಟವನ್ನಷ್ಟೇ ಓದಿ. ಹಾಗೆಯೇ ನಿಧಾನವಾಗಿ ಪುಸ್ತಕ ಓದಿನ ಕಡೆಗೆ ಆಸಕ್ತಿ ಬೆಳೆಸಿಕೊಳ್ಳಿ. ಇದನ್ನೂ ಓದಿ: ಮಕ್ಕಳೊಂದಿಗೆ ಜಗಳವಾಡುವ ಮುನ್ನ ಪೋಷಕರು ಈ ಅಂಶಗಳನ್ನು ನೆನಪಿಡಿ..
ಮನೆ, ನಿಮ್ಮ ಕೊಠಡಿಯನ್ನು ಶುಚಿಯಾಗಿಡಿ
ಮನೆ ಯಾವಾಗಲು ಶುಚಿಯಾಗಿರಬೇಕು. ಆಗ ಮನಸ್ಸು ಪ್ರಫುಲ್ಲವಾಗಿರುತ್ತೆ. ಸಂಸಾರಿಗಳ ಮನೆ ಯಾವಾಗಲೂ ಅಚ್ಚುಕಟ್ಟಾಗಿರುತ್ತೆ. ಆದರೆ ಬ್ಯಾಚುಲರ್‌ಗಳ ಮನೆಯ ವಸ್ತುಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಅವುಗಳನ್ನು ನಿಗದಿತ ಸ್ಥಳಗಳಲ್ಲಿ ಇಡಿ. ಕೊಠಡಿಗಳನ್ನು ಶುಚಿಯಾಗಿಟ್ಟುಕೊಳ್ಳಿ.
ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಿ
ಕುಟುಂಬದ ಸದಸ್ಯರು, ಸ್ನೇಹಿತರನ್ನು ಭೇಟಿಯಾಗಿ ಅವರೊಟ್ಟಿಗೆ ಹೊಸ ವರ್ಷದ ಸಂಭ್ರಮ ಆಚರಿಸಿ. ಎಷ್ಟೋ ಮಂದಿ ಕೆಲಸದ ನಿಮಿತ್ತ ದೂರದ ಊರುಗಳಿಗೆ ಕೆಲಸಕ್ಕೆ ಹೋಗಿರುತ್ತಾರೆ. ಕುಟುಂಬದವರನ್ನು ಮಿಸ್ ಮಾಡಿಕೊಂಡಿರುವವರು ತಿಂಗಳಿಗೆ ಒಮ್ಮೆಯಾದರೂ ಭೇಟಿಯಾಗಿ. ಸ್ನೇಹಿತರೊಟ್ಟಿಗೆ ಕಾಲ ಕಳೆಯಿರಿ. ಈ ವರ್ಷವನ್ನು ಎಂಜಾಯ್ ಮಾಡಿ.
ಹೊರಗಡೆ ಸುತ್ತಾಡಿ
ನಿಮ್ಮ ದಿನಚರಿ ಮನೆಗಷ್ಟೇ ಸೀಮಿತ ಆಗಬಾರದು. ಹೊರಗಡೆ ಸುತ್ತಾಡಿ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ಬುಕ್‌ಸ್ಟಾಲ್‌ಗಳು ಭೇಟಿ ನೀಡಿ. ಥಿಯೇಟರ್‌ಗೆ ಹೋಗಿ ಒಳ್ಳೆಯ ಸಿನಿಮಾ ವೀಕ್ಷಿಸಿ. ಮ್ಯೂಸಿಯಂಗಳಿಗೆ ಹೋಗಿ. ಆ ದಿನವನ್ನು ಎಂಜಾಯ್ ಮಾಡಿ. ಇದನ್ನೂ ಓದಿ: ಪ್ರೀತಿ ಪ್ರಬುದ್ಧವಾಗಿರಬೇಕು.. ಅಪ್ರಬುದ್ಧರ ಪ್ರೀತಿ ಹೇಗಿರುತ್ತೆ ಗೊತ್ತಾ?
ನಿಮ್ಮನ್ನು ನೀವು ಪ್ರೀತಿ
ಯಾರು ತನ್ನನ್ನು ತಾನು ಹೆಚ್ಚು ಪ್ರೀತಿಸುತ್ತಾರೋ ಅವರು ಇತರರ ಬಗ್ಗೆಯೂ ಪ್ರೀತಿ ಮನೋಭಾವ ಬೆಳೆಸಿಕೊಳ್ಳಲು ಸಾಧ್ಯ. ಮೊದಲು ನಿಮ್ಮನ್ನು ನೀವು ಪ್ರೀತಿಸಿ. ನಿಮ್ಮ ಬಗ್ಗೆಯೇ ಕೇರ್ ಮಾಡಿ. ನಿಮ್ಮ ಬಗ್ಗೆ ನಿಮಗೆ ಪ್ರೀತಿ, ಕಾಳಜಿ ಇಲ್ಲ ಅನ್ನೋದಾದ್ರೆ ಬೇರೆಯವರ ಬಗ್ಗೆಯೂ ಅದೇ ಭಾವನೆ ಇರುತ್ತೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಹೊಸ ವರುಷ.. ಹೊಸ ಹರುಷ.. (Newyear) ಇಡೀ ಜಗತ್ತು 2022ರ ವರ್ಷಕ್ಕೆ ಗುಡ್‌ಬೈ ಹೇಳಿ 2023ಕ್ಕೆ ಹಾಯ್ ಹಾಯ್ ಹೇಳಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ನಮ್ಮ ಬೆಂಗಳೂರಿನಲ್ಲಂತೂ ಮಧ್ಯರಾತ್ರಿ 12 ಗಂಟೆ ಆಗ್ತಿದ್ದಂತೆ ನ್ಯೂ ಇಯರ್‌ಗೆ ಗ್ರ್ಯಾಂಡ್ ವೆಲ್‌ಕಂ ಸಿಕ್ಕಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಂತೂ ಜನಸಾಗರವೇ ಹರಿದುಬಂದಿತ್ತು.
ಹಾಡು, ಕುಣಿತ, ಮೋಜು ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡ್ರು. ಬಾರ್, ಪಬ್, ಕ್ಲಬ್‌ಗಳಲ್ಲಿ ಸೇರಿದ್ದ ಮದ್ಯ (Liquor) ಪ್ರಿಯರು ಪಾರ್ಟಿಗಳಲ್ಲಿ ಕುಡಿದು ತೂರಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಬಂದಿರುವ ಹೊಸ ವರ್ಷ ಹರುಷ ತರುವ ಜೊತೆಗೆ ಭರ್ಜರಿ ಆದಾಯವನ್ನೂ ತಂದುಕೊಟ್ಟಿದೆ. ಕಳೆದ 9 ದಿನಗಳಲ್ಲಿ ಅತ್ಯಧಿಕ ಮದ್ಯ ಸೇಲ್ ಆಗಿದ್ದು, ಅಬಕಾರಿ ಇಲಾಖೆಗೆ (Excise Department) 657 ಕೋಟಿ ರೂ. ಆದಾಯ ತಂದುಕೊಟ್ಟಿದೆ.
ಯಾವ ದಿನ ಎಷ್ಟು ಮಾರಾಟ?
ಡಿಸೆಂಬರ್ 27 – 3.57 ಲಕ್ಷ ಲೀಟರ್ ಐಎಂಎಫ್ಎಲ್ (ಇಂಡಿಯನ್ ಮೇಡ್ ಫಾರೀನ್ ಲಿಕ್ಕರ್), 2.41 ಲಕ್ಷ ಲೀಟರ್ ಬಿಯರ್
ಡಿಸೆಂಬರ್ 28 – 2.31 ಲಕ್ಷ ಲೀಟರ್ ಐಎಂಎಫ್ಎಲ್, 1.67 ಲಕ್ಷ ಲೀಟರ್ ಬಿಯರ್
ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಐಎಂಎಫ್ಎಲ್, 1.93 ಲಕ್ಷ ಲೀಟರ್ ಬಿಯರ್
ಡಿಸೆಂಬರ್ 30 ರಂದು 2.93 ಲಕ್ಷ ಲೀಟರ್ ಐಎಂಎಫ್ಎಲ್, 2.59 ಲಕ್ಷ ಲೀಟರ್ ಬಿಯರ್
ಡಿಸೆಂಬರ್ 31 ರಂದು 3.00 ಲಕ್ಷ ಲೀಟರ್ ಐಎಂಎಫ್ಎಲ್, 2.41 ಲಕ್ಷ ಲೀಟರ್ ಬಿಯರ್
ಸೆಂಬರ್ 31ರ ಒಂದೇ ದಿನ 3 ಲಕ್ಷ ಲೀಟರ್ ಐಎಂಎಫ್ಎಲ್, 2.41 ಲಕ್ಷ ಲೀಟರ್ ಬಿಯರ್
ಡಿ.23 ರಿಂದ 31ರ ವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಇದರಿಂದ ಡಿಸೆಂಬರ್ 31ರ ಒಂದೇ ದಿನ ಬರೋಬ್ಬರಿ 181 ಕೋಟಿ ರೂ. ಮದ್ಯ ಮಾರಾಟವಾಗಿದ್ದು, ಕಳೆದ 9 ದಿನಗಳಲ್ಲಿ ಅಂದ್ರೆ ಡಿ. 23 ರಿಂದ ಡಿ.31ರ ವರೆಗೆ 1,262 ಕೋಟಿ ಮೊತ್ತದ ಮದ್ಯ ಮಾರಾಟವಾಗಿದ್ದರಿಂದ ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ಆದಾಯ ಹರಿದುಬಂದಿದೆ.
Live Tv
[brid partner=56869869 player=32851 video=960834 autoplay=true]
ಹೋಯ್ತು ಹಳೆ ವರ್ಷ.. ಬಂತು ಹೊಸ ವರ್ಷ.. ಬನ್ನಿ ಎಂಜಾಯ್ ಮಾಡೋಣ. ʼನಿನ್ನೆ ನಿನ್ನೆಗೆ.. ನಾಳೆ ನಾಳೆಗೆ.. ಇಂದು ನಮ್ಮದೇ, ಚಿಂತೆ ಏತಕೆ..ʼ ಎಂಬ ಹಾಡು ಎಷ್ಟು ಸೊಗಸಾಗಿದೆ ಅಲ್ವಾ. ಸವಿನೆನಪುಗಳು ಮನದ ಚಿತ್ರಪಟ ಸೇರಲಿ. ಕಹಿ ನೆನಪುಗಳು ಹಳೆ ಕ್ಯಾಲೆಂಡರ್‌ನಂತೆ ಕಸದ ಬುಟ್ಟಿಗೆ ಹೋಗಲಿ. ಹೊಸ ಹುರುಪು, ಭರವಸೆ, ಆಸೆ, ಗುರಿಗಳೊಂದಿಗೆ ಹೆಜ್ಜೆ ಇಡೋಣ ಅಂತಾ ಸಂಕಲ್ಪ ಮಾಡುವ ಸಮಯವಿದು.
ಹೊಸ ವರ್ಷವನ್ನು (New Year 2023) ಖುಷಿ, ಸಂಭ್ರಮಾಚರಣೆ ಮೂಲಕ ಸ್ವಾಗತಿಸುವುದು ಸಾಮಾನ್ಯ. 2022ಕ್ಕೆ ಗುಡ್‌ಬೈ.. 2023 ಹಾಯ್ ಹಾಯ್ ಹೇಳೋದಕ್ಕೊಂದು ಜೋಶ್ ಅಂತು ಇದ್ದೇ ಇರುತ್ತೆ. ನ್ಯೂ ಇಯರ್ ಅನ್ನು ಆರಂಭದ ದಿನ ಎಲ್ಲರೂ ಖುಷಿಯಿಂದ ಬರಮಾಡಿಕೊಳ್ಳುತ್ತಾರೆ. ಮನೆ ಹಾಗೂ ಸುತ್ತಮುತ್ತಲ ವಾತಾವರಣ ಕಲರ್‌ಫುಲ್ ಆಗಿರುತ್ತೆ. ಕುಟುಂಬದವರು, ನೆರೆಹೊರೆಯವರಿಗೆ ಸಿಹಿ ಹಂಚಿ ಸಂಭ್ರಮಿಸುವುದು, ಪ್ರೀತಿ ಪಾತ್ರರಿಗೆ ಶುಭ ಸಂದೇಶ ಕಳುಹಿಸುವುದು, ಕ್ಲಬ್-ಪಬ್‌ನಲ್ಲಿ ಕುಣಿದು ಕುಪ್ಪಳಿಸುವುದು, ಬಿಯರ್ ಚಿಯರ್ಸ್ ಹೇಳುವುದು, ಇಷ್ಟದ ಪ್ರವಾಸಿ ತಾಣಗಳಿಗೆ ಭೇಟಿ ನೀಡುವುದು.. ಎಲ್ಲ ಕೂಡ ಪ್ರತಿ ವರ್ಷದಂತೆಯೇ. ಆದರೆ ವರ್ಷ ವರ್ಷ ಅದಕ್ಕೊಂದು ಹೊಸ ರೂಪ ಇರುತ್ತೆ. ಪ್ರವಾಸಿ ತಾಣಗಳು ಬದಲಾಗಿರುತ್ತವೆ, ಕೆಲವರಿಗೆ ಸ್ನೇಹಿತರು ಹಾಗೂ ಸಂಭ್ರಮದ ತಾಣಗಳಲ್ಲಿ ಚೇಂಜ್ ಆಗಿರುತ್ತೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಬಿಂದಾಸ್ ವೆಲ್‌ಕಮ್ – ಎಲ್ಲೆಲ್ಲೂ ಸಂಭ್ರಮ, ಸಡಗರ
ಒಂದೆಡೆ ನಮ್ಮಲ್ಲೇ ಚಿಂತನ-ಮಂಥನ ಕೂಡ ನಡೆಯುತ್ತೆ. ಹೊಸ ವರ್ಷದ ಹೊಸ್ತಿಲಲ್ಲಿ ಕುಳಿತು ನಾವು ಗಂಭೀರವಾಗಿ ಯೋಚಿಸುತ್ತೇವೆ. ವರ್ಷಗಳು ಎಷ್ಟು ಬೇಗ ಉರುಳುತ್ತಿವೆ? ಹೊಸ ವರ್ಷವನ್ನಂತು ಸಂಭ್ರಮದಿಂದಲೇ ಸ್ವಾಗತಿಸುತ್ತೇವೆ. ಆದರೆ ವರ್ಷಗಳು ಬದಲಾದಂತೆ ನಾವು ಕೂಡ ಬದಲಾಗಿದ್ದೀವಾ? ಹಿಂದೆ ಅಂದುಕೊಂಡಿದ್ದನ್ನು ಸಾಧಿಸಿದ್ದೀವಾ? ಇಟ್ಟಿದ್ದ ಗುರಿ ಮುಟ್ಟಿದ್ದೀವಾ ಎಂಬ ಪ್ರಶ್ನೆಗಳು ಎದುರಾಗುತ್ತವೆ. ಅದಕ್ಕೆ ಉತ್ತರವೂ ಸಿಕ್ಕಿರುತ್ತದೆ. ಒಂದು ವೇಳೆ ನಾವು ಅಂದುಕೊಂಡಿದ್ದು, ಇಟ್ಟಿದ್ದ ಗುರಿಯನ್ನು ಸಾಧಿಸಿಲ್ಲ ಎಂದಾದರೆ ಈ ಬಾರಿ ಅದು ಸಾಧ್ಯವಾಗಬೇಕು ಎಂಬ ಸಂಕಲ್ಪ ತೊಡಬೇಕು.
ಸಮುದ್ರದ ಅಲೆಯಂತೆ ಮನುಷ್ಯನ ಬದುಕಿನಲ್ಲೂ ಏರಿಳಿತ ಇರುತ್ತದೆ. ರುಚಿಯಂತೆ ಸಿಹಿ-ಕಹಿಯೂ ಇರುತ್ತದೆ. ಆದರೆ ಕಠಿಣ ಪರಿಶ್ರಮ, ಇಚ್ಛಾಶಕ್ತಿ ಮಾತ್ರ ನಾವು ಸಾಧನೆ ಶಿಖರವೇರಲು ಸಾಧ್ಯ ಎಂಬ ಭಾವನೆ ಬರಬೇಕು. ಆ ಸಂಕಲ್ಪದೊಂದಿಗೆ ಹೊಸ ವರ್ಷವನ್ನು ಎಲ್ಲರೂ ಸ್ವಾಗತಿಸಿದರೆ ಅದಕ್ಕೊಂದು ಅರ್ಥ, ಸಾರ್ಥಕತೆ ಇರುತ್ತೆ. ಹಿಂದಿನ ನನ್ನ ಸೋಲಿಗೆ ಕಾರಣವೇನು? ಯಶಸ್ಸಿಗೆ ಇನ್ನೆಷ್ಟು ಪರಿಶ್ರಮ ಹಾಕಬೇಕು ಅಂತಾ ನಮ್ಮನ್ನು ನಾವೇ ವಿಮರ್ಶೆಗೆ ಒಡ್ಡಿಕೊಳ್ಳುತ್ತಾ ಮುಂದೆ ಸಾಗುವುದು ಬುದ್ಧಿವಂತರ ಲಕ್ಷಣ. ಇದನ್ನೂ ಓದಿ: ಹೊಸ ವರ್ಷವನ್ನು ಯಾವ ದೇಶ ಮೊದಲು ಆಚರಿಸುತ್ತೆ ಗೊತ್ತಾ?
ಒಂದು ವರ್ಷದಲ್ಲಿ ಏನೆಲ್ಲಾ ಘಟಿಸಿ ಹೋಯಿತು? ಇಷ್ಟದವರನ್ನು ಕಳೆದುಕೊಂಡೆವು, ಅಂದುಕೊಂಡಿದ್ದು ಆಗಲಿಲ್ಲ ಎಂಬ ಚಿಂತೆ ಕೆಲವರಲ್ಲಿ ಬರಬಹುದು. ಅಬ್ಬಾ.. ಈ ವರ್ಷವನ್ನು ನಾನೆಂದೂ ಮರೆಯಲ್ಲ. ಗುರಿ ತಲುಪಿದೆ. ಇಷ್ಟಪಟ್ಟವರು ಸಿಕ್ಕರು. ಹೊಸ ವರ್ಷವೂ ಹೀಗೆ ಇರಲಿ ಅಂತಾ ಥ್ರಿಲ್ ಆಗುವವರೂ ಇರಬಹುದು. ಇಲ್ಲಿ ವ್ಯಕ್ತಿಗಳು, ಸನ್ನಿವೇಶಗಳು ಬೇರೆಯಾಗಿರಬಹುದು. ಆದರೆ ಈ ಎರಡೂ ಒಂದೇ ವರ್ಷ ಆಗಿದ್ದಲ್ಲವೇ. ಕಾಲಚಕ್ರ ಉರುತ್ತಿರುತ್ತದೆ. ಸೋತವರು ಮುಂದೆ ಗೆಲ್ಲಬಹುದು. ಗೆದ್ದವರು ಮತ್ತೆ ಸೋಲಬಹುದು. ಗೆದ್ದಾಗ ಹಿಗ್ಗದೇ, ಸೋತಾಗ ಕುಗ್ಗದೇ ಹೊಸತನಕ್ಕೆ ತುಡಿಯುವುದೇ ಜೀವನ ಅಲ್ಲವೇ?
ಹೊಸ ವರ್ಷಕ್ಕೆ ಕ್ಯಾಲೆಂಡರ್ ಬದಲಾಯಿಸಿದ್ದು ಆಯ್ತು. ಈಗ ಸಂಭ್ರಮಿಸುವ, ಕುಣಿದು ಕುಪ್ಪಳಿಸುವ ಘಳಿಗೆ. ಎಲ್ಲರೂ ಸಂಭ್ರಮಿಸೋಣ. ಆದರೆ ಮಾರಕ ಕೊರೊನಾ ವೈರಸ್ ಬಗ್ಗೆ ಜಾಗೃತರಾಗಿರೋಣ. ಮನುಕುಲವನ್ನು 2 ವರ್ಷ ಕೋವಿಡ್ ಕಾಡಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತು. ವೈರಸ್ ಬಗ್ಗೆ ಎಚ್ಚರಿಕೆಯಿಂದಿದ್ದು, ಸಂಭ್ರಮಾಚರಣೆ ಮಾಡುವುದು ಒಳಿತು. ಹೊಸ ವರ್ಷದಲ್ಲಿ ಹೊಸ ತುಡಿತವಿರಲಿ. ಪಾಸಿಟಿವ್ ಆಲೋಚನೆಗಳಿರಲಿ. ಯಶಸ್ಸು ಕಡೆಗೆ ದಿಟ್ಟ ನಿಲುವಿರಲಿ. ಎಲ್ಲರೊಟ್ಟಿಗೆ ಪ್ರೀತಿ-ವಿಶ್ವಾಸದಿಂದ ಸಾಗುವ ಭಾವನೆ ಇರಲಿ. ಧರ್ಮ, ಭಾಷೆ ಭೇದವನ್ನು ಮರೆತು ಎಲ್ಲರೂ ಒಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸೋಣ. ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು
Live Tv
[brid partner=56869869 player=32851 video=960834 autoplay=true]
ನವದೆಹಲಿ: ಹೊಸ ವರ್ಷ 2023 (New Year 2023) ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಹಳೆ ವರ್ಷದ ಸುಖ-ದುಃಖ, ನೋವು ನಲಿವನ್ನು ನೆನೆದು ಎಲ್ಲದಕ್ಕೂ ಗುಡ್‌ಬೈ ಹೇಳಿ, ಸಿಹಿ ಕನಸುಗಳನ್ನು ಹೊತ್ತು ನ್ಯೂ ಇಯರ್ ಸೆಲಬ್ರೇಟ್ ಮಾಡಲು ಎಲ್ಲರೂ ಕಾತರರಾಗಿದ್ದಾರೆ.
ಸ್ನೇಹಿತರು, ಕುಟುಂಬದವರು, ಪ್ರೀತಿ ಪಾತ್ರರೊಡನೆ ಮೋಜು-ಮಸ್ತಿ ಮಾಡುತ್ತಾ ಹೊಸ ವರ್ಷ ಸ್ವಾಗತಿಸುವುದು ವಾಡಿಕೆ. ಆದರೆ ಎಲ್ಲಾ ದೇಶಗಳಲ್ಲೂ ಒಂದೇ ಸಮಯದಲ್ಲಿ ಹೊಸ ವರ್ಷ ಆಚರಣೆ ಮಾಡುವುದಿಲ್ಲ. ದೇಶದಿಂದ ದೇಶಕ್ಕೆ ಕಾಲಮಾನದಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಕೆಲವು ದೇಶಗಳಲ್ಲಿ ನ್ಯೂ ಇಯರ್ ಸಂಭ್ರಮಾಚರಣೆ ಸಮಯ ಮೊದಲೇ ಬರುತ್ತೆ. ಕೆಲವು ದೇಶಗಳಿಗೆ ಕೊನೆಯಲ್ಲಿ ಬರುತ್ತೆ. ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು
ಅಷ್ಟೇ ಅಲ್ಲದೇ, ಇನ್ನೂ ಕೆಲವು ದೇಶಗಳು ವರ್ಷದ ಕೊನೆಯಲ್ಲಿ ಸಂಭ್ರಮಾಚರಣೆ ಮಾಡುವುದಿಲ್ಲ. ಬದಲಾಗಿ ತಮ್ಮ ದೇಶದ ಸಂಪ್ರದಾಯ, ಹಬ್ಬಗಳಿಗೆ ಅನುಸಾರವಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಉದಾಹರಣೆಗೆ ಭಾರತಕ್ಕೆ ಹೊಸ ವರ್ಷವೆಂದರೆ ಅದು ಯುಗಾದಿ ಸಂದರ್ಭ.
ಹಾಗಾದರೆ ಡಿಸೆಂಬರ್ 31ರ ಮಧ್ಯರಾತ್ರಿ 12 ಗಂಟೆಯಲ್ಲಿ ಹೊಸ ವರ್ಷವನ್ನು ಮೊದಲು ಆಚರಿಸುವ ಅಥವಾ ಕೊನೆಯಲ್ಲಿ ಆಚರಿಸುವ ದೇಶಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ.
ಯಾವ ದೇಶ ಮೊದಲು ಹೊಸ ವರ್ಷ ಆಚರಿಸುತ್ತೆ?
ಓಷಿಯಾನಿಯಾವು ವಿಶ್ವದದಲ್ಲೇ ಹೊಸ ವರ್ಷಾಚರಣೆಯನ್ನು ಮೊದಲು ಆಚರಿಸುತ್ತದೆ. ಟೊಂಗಾ, ಕಿರಿಬಾಟಿ ಮತ್ತು ಸಮೋವಾಟಿನಿ ಪೆಸಿಫಿಕ್ ದ್ವೀಪ ರಾಷ್ಟ್ರಗಳು ಎಲ್ಲಾ ದೇಶಗಳಿಗಿಂತಲೂ ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಭಾರತೀಯ ಕಾಲಮಾನದ ಪ್ರಕಾರ ಡಿ.31ರಂದು ಬೆಳಗ್ಗೆ 10ಗಂಟೆಗೆ ಈ ದೇಶಗಳು ಹೊಸ ವರ್ಷವನ್ನು ಸಂಭ್ರಮಿಸುತ್ತವೆ (ಅಂದರೆ ಈಗಾಗಲೇ ಸಂಭ್ರಮಾಚರಣೆ ಮಾಡಿವೆ). ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ
Our New Year's Eve WorldPride moment saw the Sydney Harbour Bridge come alive with the colours of the Progress Pride flag. Sydney is proud to welcome WorldPride in 2023.#SydNYEpic.twitter.com/BJyGrmY21P
ಯಾವ ದೇಶ ಕೊನೆಯಲ್ಲಿ ನ್ಯೂ ಇಯರ್ ಆಚರಿಸುತ್ತೆ?
ಯುನೈಟೆಡ್ ಸ್ಟೇಟ್ಸ್ ಹತ್ತಿರದ ಜನವಸತಿಯಿಲ್ಲದ ದ್ವೀಪಗಳಾದ ಬೇಕರ್ ಐಲ್ಯಾಂಡ್ ಮತ್ತು ಹೌಲ್ಯಾಂಡ್‌ನಲ್ಲಿ ಕೊನೆಯಲ್ಲಿ ನ್ಯೂ ಇಯರ್ ಆಚರಿಸಲಾಗುತ್ತೆ. ಇಲ್ಲಿ ಭಾರತೀಯ ಕಾಲಮಾನದ ಪ್ರಕಾರ ಜನವರಿ 1 ರಂದು ಸಂಜೆ 5:30 ಕ್ಕೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.
ಯಾವ್ಯಾವ ದೇಶಗಳು ಯಾವ ಸಮಯದಲ್ಲಿ ನ್ಯೂ ಇಯರ್ ಆಚರಿಸುತ್ತವೆ? (ಡಿ.31)
ಭಾರತದಲ್ಲಿ ಡಿ.31ರಂದು ಸಾಯಂಕಾಲ 3:45 ಸಮಯವಾಗಿದ್ದಾಗ, ನ್ಯೂಜಿಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಹೀಗಾಗಿ ನ್ಯೂಜಿಲೆಂಡ್‌ನಲ್ಲಿ ಭಾರತೀಯ ಕಾಲಮಾನದಂತೆ ಡಿ.31ರ ಸಾಯಂಕಾಲ 3:45ಕ್ಕೆ ನ್ಯೂ ಇಯರ್ ಆಚರಿಸಲಾಗುತ್ತದೆ. ಅಂತೆಯೇ ಆಸ್ಟ್ರೇಲಿಯಾದಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 6:30ಕ್ಕೆ ಹೊಸ ವರ್ಷ ಸಂಭ್ರಮಿಸಲಾಗುತ್ತದೆ (ಅಂದರೆ ಈಗಾಗಲೇ ಸೆಲಬ್ರೇಷನ್ ಆಗಿದೆ). ಜಪಾನ್, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ನ್ಯೂ ಇಯರ್ ಸಂಭ್ರಮಿಸಲಿದ್ದಾರೆ.
#WATCH | People in New Zealand cheerfully welcome New Year 2023 amid fireworks & light show. Visuals from Auckland.#NewYear2023
ಚೀನಾ, ಫಿಲಿಪಿನ್ಸ್, ಸಿಂಗಾಪುರದಲ್ಲಿ ಭಾರತೀಯ ಕಾಲಮಾನದಂತೆ ರಾತ್ರಿ 9:30ಕ್ಕೆ ಸಂಭ್ರಮಾಚರಣೆ ಮಾಡಲಾಗುವುದು. ಬಾಂಗ್ಲದೇಶದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30ಕ್ಕೆ, ನೇಪಾಳದಲ್ಲಿ ಭಾರತೀಯ ಕಾಲಮಾನದಂತೆ ರಾತ್ರಿ 11:45ಕ್ಕೆ, ಪಾಕಿಸ್ತಾನದಲ್ಲಿ ಭಾರತೀಯ ಕಾಲಮಾನದಂತೆ ಮಧ್ಯರಾತ್ರಿ 12:30ಕ್ಕೆ ನ್ಯೂ ಇಯರ್ ಆಚರಿಸಲಾಗುವುದು. ಭಾರತ ಮತ್ತು ಶ್ರೀಲಂಕಾ ದೇಶಗಳ ಸಮಯ ಒಂದೇ ಆಗುರುತ್ತೆ. ಹೀಗಾಗಿ ಈ ಎರಡು ದೇಶಗಳಲ್ಲಿ ಒಂದೇ ಸಮಯಕ್ಕೆ ನ್ಯೂ ಇಯರ್ ಸಂಭ್ರಮಿಸಲಾಗುವುದು. ಇದನ್ನೂ ಓದಿ: ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಸ್ಯಾಂಡಲ್ ವುಡ್ ಕ್ವೀನ್
ಜನವರಿ 1
ಈ ಕೆಳಗೆ ಹೆಸರಿಸಲಾದ ದೇಶಗಳಲ್ಲಿ ಡಿ.31 ಮಧ್ಯರಾತ್ರಿ 12 ಗಂಟೆಯಾಗಿದ್ದರೆ, ಭಾರತದಲ್ಲಿ ಜನವರಿ 1 ಆಗಿರುತ್ತದೆ. ಹೀಗಾಗಿ ಈ ದೇಶಗಳಲ್ಲಿ ಮೇಲೆ ಹೆಸರಿಸಲಾದ ದೇಶಗಳಿಗಿಂತ ತುಂಬಾ ತಡವಾಗಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.
ಭಾರತೀಯ ಕಾಲಮಾನ ಜನವರಿ 1, ಬೆಳಗ್ಗೆ 7:30 ಆಗಿದ್ದರೆ, ಬ್ರೆಜಿಲ್‌ನಲ್ಲಿ ಡಿಸೆಂಬರ್ 31, ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಆದ್ದರಿಂದ ಭಾರತಕ್ಕಿಂತ ಒಂದು ದಿನ ತಡವಾಗಿ ಈ ದೇಶದಲ್ಲಿ ಸಂಭ್ರಮಾಚರಿಸಲಾಗುವುದು. ಅರ್ಜೆಂಟೀನಾ, ಚಿಲಿ, ಪೆರುಗ್ವೇ ದೇಶಗಳಲ್ಲಿ ಭಾರತೀಯ ಕಾಲಮಾನದಂತೆ ಜ.1ರ ಬೆಳಗ್ಗೆ 8:30ಕ್ಕೆ ನ್ಯೂ ಇಯರ್ ಆಚರಿಸಲಾಗುತ್ತದೆ.
ನ್ಯೂಯಾರ್ಕ್, ವಾಷಿಂಗ್ಟನ್ ದೇಶಗಳಲ್ಲಿ ಭಾರತೀಯ ಕಾಲಮಾನದಂತೆ ಜ.1ರ ಬೆಳಗ್ಗೆ 10:30ಕ್ಕೆ, ಚಿಕಾಗೋದಲ್ಲಿ ಬೆಳಗ್ಗೆ 11:30ಕ್ಕೆ, ಕೊಲೊರ‍್ಯಾಡೊ, ಅರಿಜೋನಾದಲ್ಲಿ ಮಧ್ಯಾಹ್ನ 12:30ಕ್ಕೆ, ನೆವಾಡದಲ್ಲಿ ಮಧ್ಯಾಹ್ನ 1:30ಕ್ಕೆ, ಅಲಸ್ಕಾದಲ್ಲಿ ಮಧ್ಯಾಹ್ನ 2:30ಕ್ಕೆ, ಹವಾಯಿಯಲ್ಲಿ ಮಧ್ಯಾಹ್ನ 3:30ಕ್ಕೆ, ಅಮೆರಿಕನ್ ಸಮೊವಾದಲ್ಲಿ ಸಾಯಂಕಾಲ 4:30ಕ್ಕೆ, ಹೌಲ್ಯಾಂಡ್ ಮತ್ತು ಬೇಕರ್ ಇಸ್‌ಲ್ಯಾಂಡ್‌ನಲ್ಲಿ ಭಾರತೀಯ ಕಾಲಮಾನದ ಜ.1ರ ಸಂಜೆ 5:30ಕ್ಕೆ ಹೊಸ ವರ್ಷವನ್ನು (ಅಂದರೆ ಕೊನೆಯದಾಗಿ) ಆಚರಿಸಲಾಗುತ್ತದೆ.
Live Tv
[brid partner=56869869 player=32851 video=960834 autoplay=true]
ಹೈದರಾಬಾದ್: ಆಂಧ್ರಪ್ರದೇಶದ (Andhra Pradesh) ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ (Tirupati Tirumala Temple) ಮುಖ್ಯ ಗರ್ಭಗುಡಿಯನ್ನು (Sanctum) 2023ರ ಹೊಸ ವರ್ಷದಲ್ಲಿ ಕನಿಷ್ಠ 6 ರಿಂದ 8 ತಿಂಗಳು ಮುಚ್ಚುವ ಸಾಧ್ಯತೆಯಿದೆ.
ತಿರುಮಲದ ಮುಖ್ಯ ಗರ್ಭಗುಡಿ ಮೇಲೆ ಇರುವ ವಿಮಾನ ಆಕೃತಿಯ (ಮೂರು ಅಂತಸ್ತು) ಗೋಪುರ ಆನಂದ ನಿಲಯಕ್ಕೆ ಹೊದಿಸಲಾಗಿದ್ದ ಚಿನ್ನದ ಲೇಪನವನ್ನು (Gold Plating) ಬದಲಿಸಲು ತಿರುಮಲ ತಿರುಪತಿ ದೇವಸ್ಥಾನಂ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪಾಸಿಟಿವ್ ಬಂದ್ರೆ ಕ್ವಾರಂಟೈನ್
ನೂತನ ಚಿನ್ನದ ಲೇಪನ (Gold Plating) ಕಾರ್ಯ ಪೂರ್ಣಗೊಳ್ಳುವವರೆಗೆ ದೇವಸ್ಥಾನದ ಸಮೀಪ ತಾತ್ಕಾಲಿಕವಾಗಿ ವೆಂಕಟೇಶ್ವರ ವಿಗ್ರಹ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಫೆಬ್ರವರಿಯಲ್ಲಿ ಕೆಲಸ ಆರಂಭಗೊಳ್ಳಲಿದ್ದು, ಈ ಚಿನ್ನದ ಲೇಪನದ ಕಾರ್ಯ ಪೂರ್ಣಗೊಳ್ಳಲು 6 ತಿಂಗಳು ಬೇಕಾಗಬಹುದು ಎಂದು ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ವೈ.ವಿ.ಸುಬ್ಬ ರಾವ್ ತಿಳಿಸಿದ್ದಾರೆ.
ಈ ಸಮಯದಲ್ಲಿ ಭಕ್ತರು ತಿಮ್ಮಪ್ಪನ ದರ್ಶನ ಪಡೆಯೋದಕ್ಕಾಗಿ ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ. ಡಿಸೆಂಬರ್ ಮೊದಲ ವಾರದಲ್ಲಿ ಟ್ರಸ್ಟ್ನ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್- ಅಂಗಡಿಯಲ್ಲಿದ್ದ ವ್ಯಕ್ತಿಗೆ ಗಂಭೀರ ಗಾಯ
`ಆಗಮ ಶಾಸ್ತç’ ಸಲಹೆಗಾರರು (ಆಗಮ ಶಾಸ್ತ್ರವು ದೇವಾಲಯದ ನಿರ್ಮಾಣಗಳು ಮತ್ತು ಆಚರಣೆಗಳ ನಡವಳಿಕೆಯ ಬಗ್ಗೆ ವ್ಯವಹರಿಸುವ ಪುರಾತನ ಗ್ರಂಥವಾಗಿದೆ), ಪುರೋಹಿತರು, ಸಿವಿಲ್ ಎಂಜಿನಿಯರ್‌ಗಳು ಮತ್ತು ಇತರ ತಜ್ಞರೊಂದಿಗೆ ಸುದೀರ್ಘ ಚರ್ಚೆ ಮತ್ತು ಸಮಾಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಮೂಲ ದೇವಾಲಯವನ್ನು ಪುನಃಸ್ಥಾಪಿಸುವವರೆಗೆ, ಎಲ್ಲಾ ದೈನಂದಿನ ಆಚರಣೆಗಳನ್ನು ತಾತ್ಕಾಲಿಕ ದೇವಾಲಯದಲ್ಲಿ ಮಾಡಲಾಗುವುದು ಮತ್ತು ಭಕ್ತರಿಗೆ ದೇವರ ದರ್ಶನವನ್ನು ಇಲ್ಲೇ ಒದಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹೊಸ ವರ್ಷ ಸಮೀಪಿಸುತ್ತಿದೆ. ನ್ಯೂ ಇಯರ್ (New Year 2023) ಸಂಭ್ರಮಾಚರಣೆಗೆ ಎಲ್ಲರೂ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ಇದರ ಮಧ್ಯೆ ಹಳೇ ವೈರಸ್ ಭೀತಿ ಕೂಡ ಹುಟ್ಟುಕೊಂಡಿದೆ. ಚೀನಾದಲ್ಲಿ ಮತ್ತೆ ಕೋವಿಡ್ ಆರ್ಭಟ ಶುರುವಾಗಿದೆ. ಕೊರೊನಾ (Covid-19) ಭೀತಿಯಿಂದ ಹೊರಬಂದಿದ್ದ ವಿಶ್ವದ ಜನತೆಗೆ ಈಗ ಮತ್ತೆ ಆತಂಕ ಶುರುವಾಗಿದೆ. ಹೊಸ ವರ್ಷಕ್ಕೆ ಹಳೆ ವೈರಸ್ ಮತ್ತೆ ಕಂಟಕವಾಗಬಹುದೇ? ಹಾಗಾದ್ರೆ ಈಗ ಪರಿಸ್ಥಿತಿ ಹೇಗಿದೆ? ತಿಳಿಯೋಣ ಬನ್ನಿ.
ಚೀನಾದಲ್ಲಿ ಮತ್ತೆ ಕೊರೊನಾ ರಣಾರ್ಭಟ
ಕೊರೊನಾ ವೈರಸ್ ತವರು ಚೀನಾ (China). ಮಾರಣಾಂತಿಕ ವೈರಸ್ ಮೂಲಕ ವಿಶ್ವಾದ್ಯಂತ ಸಾವು-ನೋವು, ಆರ್ಥಿಕ ಕುಸಿತಕ್ಕೆ ಈ ಡ್ರ್ಯಾಗನ್ ರಾಷ್ಟ್ರವೇ ಕಾರಣ. ಆದರೆ ಆ ಜವಾಬ್ದಾರಿಯನ್ನೂ ಈವರೆಗೂ ಚೀನಾ ಹೊತ್ತುಕೊಂಡಿಲ್ಲ. ಕೋವಿಡ್-19, ಡೆಲ್ಟಾ, ಓಮಿಕ್ರಾನ್ (Omicron) ಹೀಗೆ ಮೂರು ಅಲೆಗಳ ಮೂಲಕ ಇಡೀ ಜಗತ್ತನ್ನು ವೈರಸ್ ಹಿಂಡಿ ಹಿಪ್ಪೆ ಮಾಡಿತ್ತು. ಅದಾದ ಬಳಿಕ ಸ್ವಲ್ಪ ಚೇತರಿಕೆ ಕಾಣಿಸಿಕೊಳ್ಳುವ ಹೊತ್ತಿನಲ್ಲೇ ಈಗ ಮತ್ತೆ 4ನೇ ಅಲೆಯ ಭೀತಿ ಶುರುವಾಗಿದೆ.
ಹೌದು, ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಜೋರಾಗಿದೆ. ಕೊರೊನಾ ಉಪತಳಿಯು ಬಹು ವೇಗವಾಗಿ ದೇಶಾದ್ಯಂತ ಹರಡುತ್ತಿರುವುದು ವಿಶ್ವಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಚೀನಾದಲ್ಲಿ ಲಕ್ಷಾಂತರ ಜನ ಸೋಂಕಿಗೆ ತುತ್ತಾಗುತ್ತಿದ್ದು, ಆಸ್ಪತ್ರೆಗಳು ಫುಲ್ ಆಗಿವೆ. ಸ್ಮಶಾನಗಳಲ್ಲಿ ಹೆಣಗಳ ರಾಶಿ ಕಾಣುತ್ತಿದೆ. ವೈದ್ಯರು ಸಹ ಚಿಕಿತ್ಸೆ ನೀಡುತ್ತಲೇ ಕುಸಿದು ಬೀಳುತ್ತಿದ್ದಾರೆ. ಈ ಭಯಾನಕ ದೃಶ್ಯಗಳು ಜಗತ್ತನ್ನು ಮತ್ತೆ ಕಂಗೆಡಿಸಿದೆ. ಇದನ್ನೂ ಓದಿ: ಆಸ್ಪತ್ರೆಗಳು ಭರ್ತಿ, ಸ್ಮಶಾನದಲ್ಲಿ ಶವಗಳ ರಾಶಿ – ಚೀನಾದಲ್ಲಿ ಕೋವಿಡ್ ಸುನಾಮಿಗೆ ಕಾರಣ ಏನು?
ಶೂನ್ಯ ಕೋವಿಡ್ ನಿಯಮಕ್ಕೆ ರೊಚ್ಚಿಗೆದ್ದ ಜನ
ಕೊರೊನಾ ನಿಯಂತ್ರಣಕ್ಕೆ ಜಾರಿಗೊಳಿಸಿದ್ದ ʼಶೂನ್ಯ ಕೋವಿಡ್ʼ (Zero Covid) ಕಠಿಣ ನಿಯಮಾವಳಿಗಳ ವಿರುದ್ಧ ಚೀನಾದ ಜನತೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರು. ಜನರು ಮನೆಯಲ್ಲೇ ಬಂಧಿಯಾಗಿರಬೇಕು, ಪ್ರಮುಖ ಆರ್ಥಿಕ ಕೇಂದ್ರವಾದ ಶಾಂಘೈನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡುವವರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ಮಾಡಿಸಬೇಕು ಎಂಬುದು ಸೇರಿದಂತೆ ಅನೇಕ ಕಠಿಣ ನಿಯಮಗಳನ್ನು ಚೀನಾದಲ್ಲಿ ಜಾರಿಗೊಳಿಸಲಾಗಿತ್ತು. ಇದರಿಂದ ತತ್ತರಿಸಿಹೋಗಿದ್ದ ಜನತೆ ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆ ಕಠಿಣ ನಿಯಮಗಳ ಪೈಕಿ ಕೆಲವು ನಿರ್ಬಂಧಗಳಿಗೆ ವಿನಾಯಿತಿ ನೀಡಲಾಯಿತು. ಈಗ ಮತ್ತೆ ದೇಶದಲ್ಲಿ ಕೊರೊನಾ ಆರ್ಭಟ ಮುಂದುವರಿಸಿದೆ.
ಏನಿದು ಬಿಎಫ್.7 ಉಪತಳಿ?
ವೈರಸ್‌ಗಳು ರೂಪಾಂತರಗೊಂಡಾಗ, ಉಪ ರೂಪಾಂತರಿಗಳನ್ನು ರಚಿಸುತ್ತವೆ. SARS-CoV-2 ನ ಮುಖ್ಯ ವೈರಸ್ ಮತ್ತು ಉಪ ವೈರಸ್‌ಗಳು ಮೊಳಕೆಯೊಡೆಯುತ್ತವೆ. BF.7, BA.5.2.1.7 ನಂತೆಯೇ ಇರುತ್ತದೆ. ಇದು ಒಮಿಕ್ರಾನ್ ಉಪ ರೂಪಾಂತರಿ BA.5 ನ ಉಪ ವಂಶವಾಗಿದೆ. ಕೊರೊನಾ ವೈರಸ್ ಸೋಂಕಿನ ಓಮಿಕ್ರಾನ್ ರೂಪಾಂತರದ BF.7 ಉಪ ತಳಿಯು BA.5ನ ವಂಶಾವಳಿಯಾಗಿದೆ. ಇದು ಕಡಿಮೆ ಅವಧಿಯಲ್ಲಿ ಹೆಚ್ಚು ಹರಡುವ ರೂಪಾಂತರವಾಗಿದೆ. ಇದು ಮರು-ಸೋಂಕನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ ಕೋವಿಡ್-19 ಲಸಿಕೆ ಪಡೆದುಕೊಂಡವರಲ್ಲಿಯೂ ಈ ಸೋಂಕು ಕಾಣಿಸಿಕೊಳ್ಳಬಹುದು.
‘ಸೆಲ್ ಹೋಸ್ಟ್ ಮತ್ತು ಮೈಕ್ರೋಬ್’ ಜರ್ನಲ್‌ನಲ್ಲಿ ಪ್ರಕಟವಾದ ವರದಿ ಪ್ರಕಾರ, BF.7 ರೂಪಾಂತರ ಉಪ-ತಳಿಯು ಮೂಲ ವುಹಾನ್ ವೈರಸ್‌ಗಿಂತ 4.4 ಪಟ್ಟು ಹೆಚ್ಚಿನ ತಟಸ್ಥೀಕರಣ ಪ್ರತಿರೋಧವನ್ನು ಹೊಂದಿದೆ. ಅಂದರೆ ಕೊರೊನಾ ವೈರಸ್ ಲಸಿಕೆಯ ಮೂಲಕ ಜನರು ಪಡೆದುಕೊಂಡಿರುವ ಪ್ರತಿರೋಧಕ ಶಕ್ತಿಗಿಂತಲೂ ಈ ರೋಗಾಣು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹೀಗಾಗಿಯೇ ಲಸಿಕೆ ಪಡೆದುಕೊಂಡವರು ಸಹಿತ ಈ ಸೋಂಕಿಗೆ ಒಳಗಾಗುವ ಅಪಾಯವಿರುತ್ತದೆ. ಇದನ್ನೂ ಓದಿ: ವೇಗವಾಗಿ ಹರಡುವ ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ – ರಾಜ್ಯಗಳಲ್ಲಿ ಹೈ ಅಲರ್ಟ್
ಬಿಎಫ್.7 ಉಪ ತಳಿ ಲಕ್ಷಣಗಳೇನು?
ಓಮಿಕ್ರಾನ್ ರೂಪಾಂತರದ BF.7 ಉಪ-ತಳಿ ಲಕ್ಷಣ ಕೊರೊನಾ ವೈರಸ್ ಸೋಂಕು ತಗುಲಿದ ವ್ಯಕ್ತಿಗಳಲ್ಲಿ ಸಾಮಾನ್ಯವಾಗಿ ಜ್ವರ, ಕೆಮ್ಮು, ಶ್ವಾಸಕೋಶ ಸಮಸ್ಯೆಗಳು ಪ್ರಾಥಮಿಕವಾಗಿ ಗೋಚರಿಸುತ್ತವೆ. ಅಂತೆಯೇ ಓಮಿಕ್ರಾನ್ ರೂಪಾಂತರದ ಬಿಎಫ್.7 ಉಪ-ತಳಿಯ ಲಕ್ಷಣಗಳೆಂದರೆ, ಜ್ವರ, ಗಂಟಲು ನೋವು, ಮೂಗು ಸ್ರವಿಸುವಿಕೆ, ಕೆಮ್ಮು, ಉಸಿರಾಟದ ಸಮಸ್ಯೆ.
ಮಧುಮೇಹಿಗಳಿಗೆ ಮಾಸ್ಕ್ ಕಡ್ಡಾಯ
‘ಕೋವಿಡ್–19 ಕುರಿತು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ. ಮಧುಮೇಹ, ಅಧಿಕ ರಕ್ತದೊತ್ತಡ ಇರುವವರು (ಕೋಮಾರ್ಬಿಡಿಟಿ), ವಯಸ್ಸಾದವರು ಜನಜಂಗುಳಿ ಇರುವ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂಬುದು ನೀತಿ ಆಯೋಗದ ಸದಸ್ಯ (ಆರೋಗ್ಯ) ಡಾ.ವಿ.ಕೆ.ಪೌಲ್ ಸಲಹೆಯಾಗಿದೆ. ಇದನ್ನೂ ಓದಿ: ಭಾರತದಲ್ಲಿ ಲಾಕ್‌ಡೌನ್ ಅಗತ್ಯವಿಲ್ಲ : IMA
ಭಾರತದಲ್ಲಿ ಭೀತಿ.. ಎಚ್ಚರಿಕೆ!
ನೆರೆಯ ಚೀನಾದಲ್ಲಿ ಕೊರೊನಾ ಸೋಂಕು ಭಾರೀ ಪ್ರಮಾಣದಲ್ಲಿ ಏರಿಕೆ ಆಗುತ್ತಿರುವುದು ಭಾರತದಲ್ಲಿ ಭೀತಿ ಉಂಟು ಮಾಡಿದೆ. ಕೂಡಲೇ ಎಚ್ಚೆತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೈ ಅಲರ್ಟ್ ಆಗಿವೆ. ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳುವ ಕುರಿತು ಸಭೆಗಳನ್ನು ನಡೆಸುತ್ತಿವೆ.
ಭಾರತದಲ್ಲಿ (India Covid) ಲಾಕ್‌ಡೌನ್ ಮಾಡುವ ಪರಿಸ್ಥಿತಿಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಡಾ ಗೋಯಲ್ ಹೇಳಿದ್ದಾರೆ. ಶೇ.95 ರಷ್ಟು ಜನರು ಈಗಾಗಲೇ ಲಸಿಕೆಯನ್ನು ಪಡೆದಿರುವ ಕಾರಣ ಲಾಕ್‌ಡೌನ್ ಮಾಡುವ ಪರಿಸ್ಥಿತಿ ಇಲ್ಲ. ಭಾರತೀಯರು ಚೀನಾದ ಜನರಿಗಿಂತ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದಾರೆ. ಭಾರತವು ಕೋವಿಡ್ ಮೂಲಭೂತ ಅಂಶಗಳಾದ ಪರೀಕ್ಷೆ, ಚಿಕಿತ್ಸೆ, ಪತ್ತೆಹಚ್ಚುವಿಕೆಗೆ ಮರಳಬೇಕು ಎಂದು ಅವರು ಹೇಳಿದ್ದಾರೆ.
ಭಾರತದಲ್ಲಿ ಹೇಗಿದೆ ಕೊರೊನಾ ಪರಿಸ್ಥಿತಿ?
ಕೇಂದ್ರ ಆರೋಗ್ಯ ಸಚಿವಾಲಯದ ಗುರುವಾರದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 185 ಹೊಸ ಪ್ರಕರಣಗಳು ದೃಢಪಟ್ಟರೆ ಸಕ್ರಿಯ ಪ್ರಕರಣಗಳ ಸಂಖ್ಯೆ 3,402 ಕ್ಕೆ ಇಳಿದಿದೆ. ದೇಶದಲ್ಲಿ ಇಲ್ಲಿಯವರೆಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4.46 ಕೋಟಿ (4,46,76,515) ದಾಖಲಾಗಿದೆ. ಒಟ್ಟು 5,30,681 ಮಂದಿ ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 4,41,42,432 ಕ್ಕೆ ಏರಿದೆ. ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನದ ಅಡಿಯಲ್ಲಿ ಇಲ್ಲಿಯವರೆಗೆ ದೇಶದಲ್ಲಿ 220.03 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಇದನ್ನೂ ಓದಿ: ಎಸಿ ಇರುವ ಒಳಾಂಗಣ ಪ್ರದೇಶದಲ್ಲಿ ಮಾಸ್ಕ್ ಕಡ್ಡಾಯಕ್ಕೆ ಸಲಹೆ : ಸುಧಾಕರ್
ಚೀನಾದ ಕೋವಿಡ್ ಹೊಸ ತಳಿ ಭಾರತದಲ್ಲಿ ಪತ್ತೆ
ಚೀನಾದ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್ ಓಮಿಕ್ರಾನ್‌ನ ಉಪತಳಿ ಬಿಎಫ್.7 ಸೋಂಕಿನ 4 ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಭಾರತದಲ್ಲಿ ಒಟ್ಟು ನಾಲ್ಕು ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಹಾಗೂ ಒಡಿಶಾ ರಾಜ್ಯಗಳಲ್ಲಿ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ಬಿಎಫ್.7 ಸೋಂಕಿನ ಮೊದಲ ಪ್ರಕರಣ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ಪತ್ತೆಯಾಯಿತು. ಗುಜರಾತ್ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರವು ಈ ಪ್ರಕರಣವನ್ನು ಪತ್ತೆ ಮಾಡಿತು. 2ನೇ ಪ್ರಕರಣವೂ ಗುಜರಾತ್‌ನಲ್ಲಿ ಪತ್ತೆಯಾಗಿದ್ದರೆ, ಉಳಿದೆರಡು ಪ್ರಕರಣಗಳು ಒಡಿಶಾದಲ್ಲಿ ವರದಿಯಾಗಿವೆ. ಯುಎಸ್, ಯುಕೆ, ಯುರೋಪಿಯನ್ ದೇಶಗಳಾದ ಬೆಲ್ಜಿಯಂ, ಜರ್ಮನಿ, ಜಪಾನ್, ಸೌತ್ ಕೊರಿಯಾ, ಬ್ರೆಜಿಲ್, ಫ್ರಾನ್ಸ್ ಹಾಗೂ ಡೆನ್ಮಾರ್ಕ್ ದೇಶಗಳಲ್ಲೂ ಬಿಫ್.7 ಉಪತಳಿ ಪತ್ತೆಯಾಗಿದ್ದು, ಆತಂಕ ಹೆಚ್ಚಿಸಿದೆ.
ನ್ಯೂ ಇಯರ್‌ಗೆ ನಿರ್ಬಂಧ?
ನ್ಯೂ ಇಯರ್ ಸಮೀಪಿಸುತ್ತಿರುವ ಹೊತ್ತಲ್ಲೇ ಕೊರೊನಾ ವೈರಸ್ ಭೀತಿ ಮತ್ತೆ ಶುರುವಾಗಿದೆ. ಇದರಿಂದ ನ್ಯೂ ಇಯರ್ ಸಂದರ್ಭದಲ್ಲಿ ಹಲವು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆ ಇದೆ. ಈಗಾಗಲೇ ಮಾಸ್ಕ್ ಕಡ್ಡಾಯಕ್ಕೆ ಆದೇಶ ಹೊರಡಿಸುವ ಸಂಬಂಧ ಸುಳಿವು ಸಿಕ್ಕಿದೆ. ನ್ಯೂ ಇಯರ್ ವಿಜೃಂಭಣೆ ಆಚರಣೆಗೆ ಬ್ರೇಕ್ ಹಾಕುವ ಸಾಧ್ಯತೆ ಇದೆ. ಅನೇಕ ನಿರ್ಬಂಧಗಳೊಂದಿಗೆ ಸಂಭ್ರಮಾಚರಣೆಗೆ ಈ ಬಾರಿ ಅವಕಾಶ ಕಲ್ಪಿಸಬಹುದು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ನ್ಯೂ ಇಯರ್ ವೆಲ್‌ಕಮ್‌ಗೆ (New Year Celebration) ಬೆಂಗಳೂರು ಪೊಲೀಸ್ (Bengaluru Police) ಸರ್ಪಗಾವಲಿನಲ್ಲಿ ಇರಲಿದೆ. ಈಗಾಗಲೇ ತಯಾರಿ ಶುರುವಾಗಿದ್ದು, ಕ್ಲಬ್ -ಪಬ್‌ಗಳೂ (Club, Pub) ಸಹ ತಯಾರಿ ನಡೆಸಿವೆ. ಹಾಗಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗಾಗಿ ಸ್ಪೆಷಲ್ ಪಿಂಕ್‌ಸ್ಕ್ವಾಡ್ (Police Pink Squad) ಫೀಲ್ಡಿಗಿಳಿದಿದೆ.
ಮಹಿಳಾ ಪೊಲೀಸರನ್ನು (Women Police) ವಿವಿಧ ತಂಡಗಳಾಗಿ ಮಾಡಿ ಫೀಲ್ಡ್‌ಗೆ ಇಳಿಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ. ಆ ಮೂಲಕ ನಗರದ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸರ ನಿಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಂದು ಸಾವಿರಕ್ಕೂ ಹೆಚ್ಚು ಮಹಿಳಾ ಪೊಲೀಸರನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿಗೆ ಹೋಗಲು ಅಪ್ರಾಪ್ತರಿಂದ ನಕಲಿ ಆಧಾರ್ ಕಾರ್ಡ್
ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಸಿಸಿಟಿವಿ, 50 ಬಾಡಿ ಕ್ಯಾಮೆರಾ (BodyCamera) ಹಾಕಲು ತೀರ್ಮಾನಿಸಲಾಗಿದೆ. ಕ್ಲಬ್ ಮತ್ತು ಪಬ್ ನಲ್ಲಿ ಮಹಿಳಾ ಸಿಬ್ಬಂದಿಯನ್ನು ಕಡ್ಡಾಯಗೊಳಿಸಲಾಗುತ್ತಿದೆ. ಸಂಬಂಧಪಟ್ಟ ಕ್ಲಬ್‌ನವರೇ ಲೇಡಿ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಪ್ರತಿಯೊಂದು ಕ್ಲಬ್ ಮತ್ತು ಪಬ್, ಹೋಟೆಲ್ ಗಳಲ್ಲಿ ಅಗತ್ಯಕ್ಕೆ ತಕ್ಕಂತೆ ಕ್ಲಬ್ ನವರೇ ಮಹಿಳಾ ಸಿಬ್ಬಂದಿ ನಿಯೋಜನೆ ಮಾಡಿಕೊಳ್ಳಬೇಕು. ಯಾವ ಕ್ಲಬ್ ಮತ್ತು ಪಬ್‌ನಲ್ಲಿ ಎಷ್ಟು ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಅನ್ನೋ ಮಾಹಿತಿಯನ್ನ ವ್ಯಾಪ್ತಿಯ ಪೊಲೀಸ್ ಠಾಣೆಗೆ ನೀಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ:ಬೆಂಗಳೂರಲ್ಲಿ ಹೆಚ್ಚಾಗ್ತಿದೆ ನಕಲಿ ವೈದ್ಯರ ಹಾವಳಿ – ಸಾವಿರಕ್ಕೂ ಹೆಚ್ಚು ಡೂಪ್ಲಿಕೇಟ್ ಡಾಕ್ಟರ್ಸ್!
ನ್ಯೂ ಇಯರ್ ಸೆಲೆಬ್ರೇಷನ್ ವೇಳೆ ಹೋಟೆಲ್ ಮತ್ತು ಪಬ್ ಗಳಲ್ಲಿ ಯಾವುದೇ ಅವಘಡ ಸಂಭವಿಸಿದ್ರೆ ಕ್ಲಬ್ ನವರೇ ಹೊಣೆಯಾಗ್ತಾರೆ. ಪಾರ್ಟಿ ವೇಳೆ ಡ್ರಗ್ಸ್ ಬಳಕೆ ಮಾಡಿರೋದು ಗೊತ್ತಾದರೆ ಕಠಿಣ ಕ್ರಮದ ಜೊತೆಗೆ ಲೈಸೆನ್ಸ್ (ಪರವಾನಗಿ) ರದ್ದು ಮಾಡಲಾಗುತ್ತದೆ. ಇನ್ನೂ 2-3 ದಿನಗಳಲ್ಲಿ ಈ ಸಂಬಂಧ ಕಂಪ್ಲೀಟ್ ಡಿಟೇಲ್ಸ್ಗಳನ್ನ ಪೊಲೀಸ್ ಇಲಾಖೆ ಬಿಡುಗಡೆ ಮಾಡಲಿದೆ ಎಂದು ಬೆಂಗಳೂರು ಪೊಲೀಸ್ ಮೂಲಗಳು ತಿಳಿಸಿವೆ.
Live Tv
[brid partner=56869869 player=32851 video=960834 autoplay=true]