ಅಮರಾವತಿ: ಹೊಸ ವರ್ಷದ ದಿನದಂದು ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರಲ್ಲಿ ಪ್ರಾರ್ಥಿಸುತ್ತಿರುವ ಪೋಟೋವನ್ನು ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಎಲ್ಲರಿಗೂ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳಿಗೆ ನ್ಯೂ ಇಯರ್ ಶುಭಾಶಯ ಹೇಳಿದ ಬಾಲಿವುಡ್ ಮಂದಿ
ಜಗತ್ತಿನಲ್ಲಿ ಒಂದೇ ಒಂದು ರಾಹು ಕೇತು ದೇವಾಲಯ ಇದೆ. ತಿರುಪತಿಯ ಬಾಲಾಜಿ ದೇವಸ್ಥಾನಕ್ಕೆ ತುಂಬಾ ಹತ್ತಿರದಲ್ಲಿದೆ. ಅಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು ಎಂದು ಕಂಗನಾ ತಿಳಿಸಿದ್ದಾರೆ.
ನನ್ನ ಪ್ರೀತಿಯ ಶತ್ರುಗಳ ಕರುಣೆ ಹೊಂದಲು ನಾನು ದೇವಸ್ಥಾನಕ್ಕೆ ಹೋಗಿದ್ದೆ. ಈ ವರ್ಷ ನನ್ನ ಮೇಲೆ ಹೆಚ್ಚಿನ ನನ್ನ ಮೇಲೆ ಕಡಿಮೆ ಪೊಲೀಸ್ ದೂರುಗಳು ಮತ್ತು ಎಫ್‌ಐಆರ್‌ಗಳು ದಾಖಲಾಗಲಿ. ಹೆಚ್ಚಿನ ಪ್ರೇಮ ಪತ್ರಗಳು ಬರಲಿ. ಜೈ ರಾಹು ಕೇತು ಎಂದು ಕಂಗನಾ ಪೋಸ್ಟ್ ಹಾಕಿದ್ದಾರೆ. ಇದನ್ನೂ ಓದಿ: New Year 2022 – ಅಭಿಮಾನಿಗಳಿಗೆ ಸಂದೇಶ ನೀಡಿದ ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು
ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಹೆಚ್ಚು ಟೀಕೆಗೆ ಗುರಿಯಾಗಿರುವ ಕಂಗನಾ ಅವರು ಹೊಸ ವರ್ಷದಲ್ಲಿ ಶತ್ರುಗಳಿಗಾಗಿ ವಿಶೇಷ ಪ್ರಾರ್ಥನೆ ಮಾಡಿದ್ದಾರೆ.
ಮುಂಬೈ: 2022 ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಬಾಲಿವುಡ್ ನಟ-ನಟಿಯರು ತಮ್ಮ ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ನ್ಯೂ ಇಯರ್ ಶುಭಾಶಯಗಳನ್ನು ಕೋರಿದ್ದಾರೆ.
ಹೊಸ ವರ್ಷದ ನಿಮಿತ್ತ ಬಾಲಿವುಡ್ ಬಿ-ಟೌನ್ ಮಂದಿ ತಮ್ಮ ಪ್ರೀತಿ ಪಾತ್ರರೊಂದಿಗೆ ಹೇಗೆ ಹೊಸ ವರ್ಷವನ್ನು ಆಚರಿಸುತ್ತಿದ್ದಾರೆ ಎಂಬುದನ್ನು ಫೋಟೋ ವೀಡಿಯೋಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು
ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಈ ಬಾರಿ ದಕ್ಷಿಣ ಆಫ್ರಿಕಾದಲ್ಲಿ ತಮ್ಮ ಹೊಸ ವರ್ಷವನ್ನು ಆಚರಿಸುತ್ತಿದ್ದು, ತನ್ನ ಪತಿ ವಿರಾಟ್ ಕೊಹ್ಲಿ ಜೊತೆಗಿನ ಸುಂದರವಾದ ಒಂದು ಫೋಟೋವನ್ನು ಇನ್ಸ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಕಳೆದ ವರ್ಷ 2021 ನಮಗೆ ಅತ್ಯಂತ ಸಂತೋಷವನ್ನು ನೀಡಿದ ವರ್ಷವಾಗಿದ್ದು ಧನ್ಯವಾದಗಳೆಂದು ಬರೆದು ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಅನುಷ್ಕಾ ಆಫ್ರೀಕಾದ ಪ್ರತಿಷ್ಠಿತ ಹೊಟೆಲ್‍ವೊಂದರಲ್ಲಿ ಕೆಕ್ ಕತ್ತರಿಸುವ ಮೂಲಕ ನ್ಯೂ ಇಯರ್ ಸಂಭ್ರಮವನ್ನು ಆಚರಿಸಿದ ಸನ್ನಿವೇಶವನ್ನು ನೀವು ಕಾಣಬಹುದಾಗಿದೆ. ಇದನ್ನೂ ಓದಿ: ಬೋಲ್ಡ್ ಲುಕ್ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ದಿಶಾ ಪಟಾನಿ
ಮಲೈಕಾ ಅರೋರಾ ಈ ವರ್ಷ ನ್ಯೂ ಇಯರ್ ಸಂಭ್ರಮಾಚರಣೆಯನ್ನು ತನ್ನ ಬಾಯ್ ಫ್ರೆಂಡ್ ಆದ ಅರ್ಜುನ್ ಕಪೂರ್ ಜೊತೆಗೆ ಆಚರಿಸಿದ್ದು, ಅಭಿಮಾನಗಳಿಗೆ ಫೋಟೋದಲ್ಲಿ ಕಿಸ್ ಮಾಡುವ ಮೂಲಕ ಇನ್‍ಸ್ಟಾಗ್ರಾಮ್‍ನಲ್ಲಿ ಹೊಸ ವರ್ಷದ ಶುಭಾಶಯಗಳನ್ನು ಕೋರಿದ್ದಾರೆ.
ಸೋನಮ್ ಕಪೂರ್ ತನ್ನ ಪತಿ ಆನಂದ್ ಅಹುಜಾರೊಂದಿಗೆ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆ ಆಚರಿಸಿದ್ದು, ಈ ಸಂಭ್ರಮಾಚರಣೆಯ ಚಿತ್ರಗಳನ್ನು ಸೋನಮ್ ತಮ್ಮ ಇನ್ ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಅವರು ಆನಂದ್ ಅಹುಜಾರಿಗೆ ಚುಂಬಿಸುತ್ತಿದ್ದು, ಈ ದಂಪತಿ ಕಪ್ಪು ಬಣ್ಣದ ಉಡುಗೆಯನ್ನು ಧರಿಸಿದ್ದಾರೆ.
ಮಂಗಳೂರು ಬೆಡಗಿ ಶಿಲ್ಪಾ ಶೆಟ್ಟಿಯವರು ನ್ಯೂ ಇಯರ್ ಸಂಭ್ರಮಾಚರಣೆಯನ್ನು ಹೊಳೆಯುವ ಡ್ರೆಸ್‍ನಲ್ಲಿ ಜಿಗಿಯುವ ಚಮತ್ಕಾರಿ ವೀಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ಶಿಲ್ಪಾ ಅಭಿಮಾನಿಗಳಿಗೆ ಹೊಸ ವರ್ಷದ ಸಂದೇಶವನ್ನು ವಿಭಿನ್ನ ಶೈಲಿಯಲ್ಲಿ ಶುಭಾಶಯ ಕೋರಿದ್ದಾರೆ
ಬೆಂಗಳೂರು: ಸ್ಯಾಂಡಲ್‍ವುಡ್ ನಟ, ನಟಿಯರು ಹೊಸ ವರ್ಷವನ್ನು ಭರ್ಜರಿಯಾಗಿ ವೆಲ್ ಕಮ್ ಮಾಡಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಶ್ ಮಾಡಿ ಈ ವರ್ಷದ ಸಂದೇಶವನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಅಭಿಮಾನಿಗಳಿಗೆ ವಿಷೇಶವಾಗಿ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ. ಪ್ರತಿ ವರ್ಷ ಪ್ರತಿಯೊಬ್ಬರ ಜೀವನದಲ್ಲೂ ಒಳ್ಳೆಯ ಹಾಗೂ ಕೆಟ್ಟ ಘಳಿಗೆಗಳು ಬರುತ್ತವೆ. ಕೆಟ್ಟ ಕ್ಷಣಗಳನ್ನು ಮರೆತು ಹೊಸ ವರ್ಷದಲ್ಲಿ ಒಳ್ಳೆಯದನ್ನು ಬಯಸೋಣ. 2022ರ ಸುಂದರ ಸೂರ್ಯೋದಯವನ್ನು ನೋಡೋಣ. ಹೊಸ ವರ್ಷವನ್ನು ಅತ್ಯುತ್ತಮವಾಗಿ ಆಚರಿಸೋಣ. ಮನುಕುಲಕ್ಕೆ ನಮ್ಮಿಂದಾಗಬಹುದಾದ ಒಳ್ಳೆಯದನ್ನು ಮಾಡೋಣ. ಎಲ್ಲರಿಗೂ 2022ರ ಶುಭಾಶಯಗಳು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ವಿಕ್ರಾಂತ್ ರೋಣಾ ಸಿನಿಮಾದ ಪೋಸ್ಟರ್ ಶೇರ್ ಮಾಡಿಕೊಂಡಿದ್ದಾರೆ.
ಭರವಸೆಯೇ ಬದುಕು, ಒಳ್ಳೆಯದನ್ನೇ ನಿರೀಕ್ಷಿಸೋಣ, ಒಳ್ಳೆಯದನ್ನೇ ಬಯಸೋಣ. ಕಲಿತು ಬದುಕೋಣ, ಕಲೆತು ಬಾಳೋಣ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡ ನಿರ್ದೇಶಕ ತರುಣ್ ಸುದೀರ್ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಿರಗೂರಿನ ಗಯ್ಯಾಳಿಗಳು ಖ್ಯಾತಿಯ ಶ್ವೇತಾ ಶ್ರೀವಾತ್ಸವ್ ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿಕೊಟ್ಟಿದ್ದಾರೆ. ಈ ದಿನದಿಂದ, ಈ ಕ್ಷಣದಿಂದ ನಿಮ್ಮ ಕನಸುಗಳೆಲ್ಲ ನನಸಾಗಲಿ ಬದುಕು ಬಂಗಾರವಾಗಲಿ. ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು ಎಂದು ಬರೆದುಕೊಂಡಿದ್ದಾರೆ.
ನಟ ರಮೇಶ್ ಅರವಿಂದ್ ಅವರು, ಹೊಸ ವರ್ಷದ ಶುಭಾಶಯಗಳು. 2022 ಸಹಬಾಳ್ವೆಯನ್ನು ಸಂಭ್ರಮಿಸುವ ವರ್ಷವಾಗಲಿ. ನಿಮ್ಮ ಬದುಕು ಅಮೋಘವಾಗಿ ಸಾಗಲಿ. ಇನ್ನೊಬ್ಬರ ಬದುಕೂ ಸಲೀಸಾಗಿ ಸಾಗಲು ಸಹಕರಿಸಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡು ನ್ಯೂ ಇಯರ್ ವಿಶ್ ಮಾಡಿದ್ದಾರೆ. ಇದನ್ನೂ ಓದಿ: ಹೊಸ ವರ್ಷವನ್ನು ಅದ್ದೂರಿಯಾಗಿ ಆಚರಿಸಿದ ದಕ್ಷಿಣ ಭಾರತದ ಸಿನಿ ತಾರೆಯರು
ಶ್ರೀನಗರ: ಹೊಸ ವರ್ಷ ಎಲ್ಲರಿಗೂ ಹರುಷ, ಶುಭ ತರಲೆಂದು ಎಲ್ಲರೂ ಪ್ರಾರ್ಥಿಸುತ್ತಾರೆ. ಆದರೆ ಹೊಸ ವರ್ಷದ ಆರಂಭದ ಸಂದರ್ಭದಲ್ಲೇ ದುರಂತ ಘಟನೆಯೊಂದು ನಡೆದಿದೆ. ಜಮ್ಮು ಮತ್ತು ಕಾಶ್ಮೀರದ ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತದಿಂದಾಗಿ 12 ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ದೇವರ ದರ್ಶನಕ್ಕಾಗಿ ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರು. ಈ ವೇಳೆ ನೂಕಾಟ ಆಗಿ ಕೆಲವರು ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನ್ಯೂ ಇಯರ್ ಪಾರ್ಟಿ- ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಯುವಕರು
ವೈಷ್ಣೋ ದೇವಿ ಭವನಕ್ಕೆ ಅನುಮತಿ ಇಲ್ಲದೇ ಸಾವಿರಾರು ಭಕ್ತರ ದಂಡು ಆಗಮಿಸಿದೆ. ಈ ವೇಳೆ ನೂಕುನುಗ್ಗಲಿನಿಂದ ಹಲವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Extremely saddened by the loss of lives due to a stampede at Mata Vaishno Devi Bhawan. Condolences to the bereaved families. May the injured recover soon. Spoke to JK LG Shri @manojsinha_ Ji, Ministers Shri @DrJitendraSingh Ji, @nityanandraibjp Ji and took stock of the situation.
ದುರಂತಕ್ಕೆ ಪ್ರಧಾನಿ ಮೋದಿ ಅವರು ಸಂತಾಪ ಸೂಚಿಸಿದ್ದಾರೆ. ಮಾತಾ ವೈಷ್ಣೋ ದೇವಿ ಭವನದಲ್ಲಿ ನೂಕುನುಗ್ಗಲು ಉಂಟಾದ ಪರಿಣಾಮ ಪ್ರಾಣಹಾನಿಯಾಗಿರುವುದು ಅತೀವ ದುಃಖ ತಂದಿದೆ ಎಂದು ದುಃಖತಪ್ತ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಳೆದ ವರ್ಷದಂತೆ ಈ ಬಾರಿಯೂ ಸರಳವಾಗಿಯೇ ಹೊಸ ವರ್ಷ ಆಚರಣೆ
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನ ಮಂತ್ರಿ ವಿಪತ್ತು ಪರಿಹಾರ ನಿಧಿಯಿಂದಲೂ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಮತ್ತು ಗಾಯಾಳುಗಳಿಗೆ ತಲಾ 50,000 ರೂ. ಪರಿಹಾರ ಘೋಷಿಸಲಾಗಿದೆ.
ಮಾತಾ ವೈಷ್ಣೋ ದೇವಿ ದೇಗುಲದಲ್ಲಿ ಕಾಲ್ತುಳಿತದಿಂದ ಉಂಟಾದ ದುರಂತ ಪರಿಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ವೈಯಕ್ತಿಕವಾಗಿ ಮೇಲ್ವಿಚಾರಣೆ ನಡೆಸುತ್ತಿದ್ದು, ಸೂಕ್ತ ನಿಗಾ ವಹಿಸಲು ತಿಳಿಸಿದ್ದಾರೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಹೊಸ ವರ್ಷವನ್ನು ಬಹಳ ಸರಳವಾಗಿ ಬರಮಾಡಿಕೊಳ್ಳಲಾಯಿತು. ಮಹಾಮಾರಿ ಕೊರೊನಾ ವೈರಸ್, ಓಮಿಕ್ರಾನ್ ಆತಂಕದಿಂದ ಭಾರೀ ಸಡಗರಕ್ಕೆ ಕತ್ತರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಳವಾಗಿಯೇ ಹೊಸ ವರ್ಷವನ್ನು ಆಚರಣೆ ಮಾಡಿಕೊಳ್ಳಲಾಯಿತು. ಆದರೆ ವಿದೇಶಗಳಲ್ಲಿ ಭಾರೀ ಸಂಭ್ರಮ, ಸಡಗರದಿಂದಲೇ ನ್ಯೂ ಇಯರ್ ಅನ್ನು ವೆಲ್ ಕಮ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಳೆ ಸಿಂಚನವಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಮಳೆ ಬಂದ ಕಾರಣವೂ ಜನ ಬೇಗ ಮನೆ ಸೇರಿಕೊಂಡರು. ಪ್ರತಿ ವರ್ಷದ ಹೊಸ ವರ್ಷಕ್ಕೆ ಬೆಂಗಳೂರಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಿದೆ. ರಾತ್ರಿ 9 ಗಂಟೆ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಂಡೋಪತಂಡವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಜಮಾಯಿಸಿ, ರೋಡ್‍ಗಳನ್ನು ಬಂದ್ ಮಾಡಿದ್ರು.
ಹೊಸ ವರ್ಷ ಬಂತು ಅಂದ್ರೆ ಜನ ಬೆಂಗಳೂರಿನ ಈ ರೋಡ್‍ಗೆ ಬರೋದು ಮೋಜು ಮಸ್ತಿ ಮಾಡೋದು ಸಾಮಾನ್ಯ. ಆದರೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ಮತ್ತು ಮೂರನೇ ಅಲೆಯ ಭಯಕ್ಕೆ ಸರ್ಕಾರ ಸಾಕಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಹಾಗಾಗಿ ಬೆಂಗಳೂರಿನ ಬ್ರೀಗೆಡ್ ರೋಡ್ ಖಾಲಿಯಾಗಿದೆ.ಬ್ರಿಗೇಡ್ ರೋಡ್‍ನ ಪಬ್ ಅಂಡ್ ಬಾರ್ ರೆಸ್ಟೋರೆಂಟ್‍ಗಳು ನ್ಯೂ ಇಯರ್ ಸೆಲೆಬ್ರೇಷನ್ ಟೈಮ್ ನಲ್ಲಿ ಕಾಲಿಡಲು ಸಹ ಜಾಗವಿಲ್ಲದಂತೆ ತುಂಬಿ ತುಳುಕುತ್ತಿತ್ತು. ಆದರೇ ಈ ವರ್ಷ ಮೂರನೇ ಅಲೆಯ ಭೀತಿಗೆ ಸರ್ಕಾರ ಮಾಡಿರೋ ಟಫ್ ರೂಲ್ಸ್ ಕಾರಣದಿಂದ ಖಾಲಿ ಖಾಲಿಯಾಗಿದೆ. ಸಂಜೆ 6 ಗಂಟೆಗೇ ಈ ಪ್ರಮುಖ ರೋಡ್‍ಗಳ ಬಂದ್ ಮಾಡಿರೋದಕ್ಕೆ ಪಬ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಬಿ ಸಿಟಿಯ ರಸ್ತೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ರಂಗು ರಂಗಾಗಿರುತ್ತಿದ್ದ ಯುಬಿ ಸಿಟಿ ಇಂದು ಸಂಪೂರ್ಣ ಕಳೆಗುಂದಿದೆ. ಡಿಜೆ ಮೋಜು ಮಸ್ತಿ ಇಲ್ಲದ ರಸ್ತೆಯಲ್ಲಿ ಮನೆಗಳತ್ತ ಜನ ಮುಖ ಮಾಡಿದ್ದಾರೆ. ಪಬ್, ರೆಸ್ಟೋರೆಂಟ್‍ಗಳ ಮುಂದೆ ಜನರಿಗಿಂತ ಪೊಲೀಸರೇ ಹೆಚ್ಚಿದ್ದರು. ಕೋರಮಂಗಲದಲ್ಲಿ 80 ಅಡಿ ರಸ್ತೆಯಲ್ಲಿ ಮಳೆ ಮಧ್ಯೆಯೂ ಜನ ಪಬ್‍ಗಳಿಗೆ ಬೆರಳೆಣಿಕೆ ಜನ ಬಂದಿದ್ದರು. ರಾತ್ರಿ 9.30ರ ಒಳಗೆ ಊಟ ಮುಗಿಸಿಕೊಂಡರು. ಇನ್ನು ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಕ್ಲಬ್, ಪಬ್‍ಗೆಳಿಗೆ ಎಂಟ್ರಿ ಕೊಡೋ ರೋಡ್‍ಗಳ ಕಡೆ ಹೆಚ್ಚು ನಿಹಾ ವಹಿಸಿದ್ದರು. ಗಲಾಟೆ ಮಾಡುವವರನ್ನ ವಶಕ್ಕೆ ಪಡೆಯಲು ಬಿಎಂಟಿಸಿ ಮತ್ತು ಟಿಟಿ ವೆಹಿಕಲ್ ಕರೆಸಿಕೊಂಡಿದ್ದಾರೆ.
ಇಂದಿರಾನಗರದಲ್ಲೂ ನ್ಯೂ ಇಯರ್ ಸಂಭ್ರಮ ಕಳೆಗುಂದಿದೆ. ಇಂದಿರಾನಗರ ಸುತ್ತಮುತ್ತ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಂಭ್ರಮ ಇರಲಿಲ್ಲ. 80 ಅಡಿ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಿದರು. ಯುವತಿಯರು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಸೇಫ್ಟಿ ಐಲ್ಯಾಂಡ್ ಅನ್ನು ಪೊಲೀಸರೇ ನಿರ್ಮಿಸಿದ್ದಾರೆ. ನೈಟ್ ಕಫ್ರ್ಯೂಗೆ ಸಮಯ ಸಮೀಪಿಸುತ್ತಿದ್ದಂತೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಂತ ಹಂತವಾಗಿ ಶಾಪ್‍ಗಳು, ಮಳಿಗೆಗಳ ಮಾಲೀಕರು ಬಾಗಿಲು ಹಾಕಿದರು. 10 ಗಂಟೆಯೊಳಗೆ ಮನೆ ಸೇರಿಕೊಳ್ಳಲು ಹೊರಡಿದರು.
ಇತ್ತ ಹುಬ್ಬಳ್ಳಿಯಲ್ಲಿ ರಾತ್ರಿ 8ಗಂಟೆ ಹೊತ್ತಿಗೆ ಪಬ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಯುವಕ ಯುವತಿಯರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ರು. ರ್ಯಾಪರ್ ಚಂದನ್‍ಶೆಟ್ಟಿ ಪತ್ನಿ ನಿವೇದಿತಾ ಜೊತೆ ಉಡುಪಿಯ ಮಲ್ಪೆಯಲ್ಲಿ ಕಾಣಿಸಿಕೊಂಡಿದ್ರು. ಉಡುಪಿಯ ಮಲ್ಪೆ ಬೀಚ್‍ನಲ್ಲಿ ನೂರಾರು ಜನ ಮೀನಿನ ಖಾದ್ಯವನ್ನು ಸವಿಯುತ್ತ ಬೀಚ್ ಬದಿಯಲ್ಲಿ ಫ್ಯಾಮಿಲಿ ಸಮೇತ ಎಂಜಾಯ್ ಮಾಡುತ್ತಾ ಹೊಸವರ್ಷವನ್ನು ಆಚರಿಸಿದ್ರು. ಬೀಚ್ ರೆಸ್ಟೋರೆಂಟ್ ಫ್ರೆಶ್ ಫಿಶ್ ಫ್ರೈ ಹೋಟೆಲ್ ಗಳಲ್ಲಿ ಜನ ತಮ್ಮ ಇಷ್ಟದ ಆಹಾರವನ್ನು ಸೇವಿಸುತ್ತಾ ಹೊಸವರ್ಷವನ್ನು ಬರಮಾಡಿಕೊಂಡ್ರು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 8 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಆದ್ರೆ ಕಾರವಾರದ ಮಾರುತಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನಲೆಯಲ್ಲಿ ಎಂಟುಗಂಟೆ ಕಳೆದರೂ ಅಂಗಡಿಮುಂಗಟ್ಟುಗಳು ಬಂದ್ ಆಗದೇ ತೆರೆದಿದ್ದು ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಮನವಿ ಮಾಡಿದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಂಗಡಿಗಳಲ್ಲಿ ಖರೀದಿಯಲ್ಲಿ ನಿರತರಾದರು. ಬೆಳಗಾವಿಯ ಪಂಚತಾರಾ ಹೋಟೆಲ್‍ಗಳು ಖಾಲಿ ಖಾಲಿ ಆಗಿವೆ. ಸರ್ಕಾರದ ಮಾರ್ಗ ಸೂಚಿಯಂತೆ ರಾತ್ರಿ 10 ಗಂಟೆಗೆ ಹೊಟೇಲ್‍ಗಳು ಬಂದ್ ಆಗಿವೆ.
ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಹೊಸ ವರ್ಷವನ್ನು ಬಹಳ ಸರಳವಾಗಿ ಬರಮಾಡಿಕೊಳ್ಳಲಾಯಿತು. ಮಹಾಮಾರಿ ಕೊರೊನಾ ವೈರಸ್, ಓಮಿಕ್ರಾನ್ ಆತಂಕದಿಂದ ಭಾರೀ ಸಡಗರಕ್ಕೆ ಕತ್ತರಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸರಳವಾಗಿಯೇ ಹೊಸ ವರ್ಷವನ್ನು ಆಚರಣೆ ಮಾಡಿಕೊಳ್ಳಲಾಯಿತು. ಆದರೆ ವಿದೇಶಗಳಲ್ಲಿ ಭಾರೀ ಸಂಭ್ರಮ, ಸಡಗರದಿಂದಲೇ ನ್ಯೂ ಇಯರ್ ಅನ್ನು ವೆಲ್ ಕಮ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಳೆ ಸಿಂಚನವಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‍ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಸೇರಿದಂತೆ ಎಲ್ಲಾ ಕಡೆ ಮಳೆ ಬಂದ ಕಾರಣವೂ ಜನ ಬೇಗ ಮನೆ ಸೇರಿಕೊಂಡರು. ಪ್ರತಿ ವರ್ಷದ ಹೊಸ ವರ್ಷಕ್ಕೆ ಬೆಂಗಳೂರಿನ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್ ಸ್ತಬ್ಧವಾಗಿದೆ. ರಾತ್ರಿ 9 ಗಂಟೆ ಆಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ತಂಡೋಪತಂಡವಾಗಿ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಜಮಾಯಿಸಿ, ರೋಡ್‍ಗಳನ್ನು ಬಂದ್ ಮಾಡಿದ್ರು.
ಹೊಸ ವರ್ಷ ಬಂತು ಅಂದ್ರೆ ಜನ ಬೆಂಗಳೂರಿನ ಈ ರೋಡ್‍ಗೆ ಬರೋದು ಮೋಜು ಮಸ್ತಿ ಮಾಡೋದು ಸಾಮಾನ್ಯ. ಆದರೆ ಓಮಿಕ್ರಾನ್ ರೂಪಾಂತರಿ ವೈರಸ್ ಭೀತಿ ಮತ್ತು ಮೂರನೇ ಅಲೆಯ ಭಯಕ್ಕೆ ಸರ್ಕಾರ ಸಾಕಷ್ಟು ಟಫ್ ರೂಲ್ಸ್ ಜಾರಿಗೆ ತಂದಿದೆ. ಹಾಗಾಗಿ ಬೆಂಗಳೂರಿನ ಬ್ರೀಗೆಡ್ ರೋಡ್ ಖಾಲಿಯಾಗಿದೆ.ಬ್ರಿಗೇಡ್ ರೋಡ್‍ನ ಪಬ್ ಅಂಡ್ ಬಾರ್ ರೆಸ್ಟೋರೆಂಟ್‍ಗಳು ನ್ಯೂ ಇಯರ್ ಸೆಲೆಬ್ರೇಷನ್ ಟೈಮ್ ನಲ್ಲಿ ಕಾಲಿಡಲು ಸಹ ಜಾಗವಿಲ್ಲದಂತೆ ತುಂಬಿ ತುಳುಕುತ್ತಿತ್ತು. ಆದರೇ ಈ ವರ್ಷ ಮೂರನೇ ಅಲೆಯ ಭೀತಿಗೆ ಸರ್ಕಾರ ಮಾಡಿರೋ ಟಫ್ ರೂಲ್ಸ್ ಕಾರಣದಿಂದ ಖಾಲಿ ಖಾಲಿಯಾಗಿದೆ. ಸಂಜೆ 6 ಗಂಟೆಗೇ ಈ ಪ್ರಮುಖ ರೋಡ್‍ಗಳ ಬಂದ್ ಮಾಡಿರೋದಕ್ಕೆ ಪಬ್ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಬಿ ಸಿಟಿಯ ರಸ್ತೆಯಲ್ಲಿ ಖಾಕಿ ಪಡೆ ಅಲರ್ಟ್ ಆಗಿದೆ. ರಂಗು ರಂಗಾಗಿರುತ್ತಿದ್ದ ಯುಬಿ ಸಿಟಿ ಇಂದು ಸಂಪೂರ್ಣ ಕಳೆಗುಂದಿದೆ. ಡಿಜೆ ಮೋಜು ಮಸ್ತಿ ಇಲ್ಲದ ರಸ್ತೆಯಲ್ಲಿ ಮನೆಗಳತ್ತ ಜನ ಮುಖ ಮಾಡಿದ್ದಾರೆ. ಪಬ್, ರೆಸ್ಟೋರೆಂಟ್‍ಗಳ ಮುಂದೆ ಜನರಿಗಿಂತ ಪೊಲೀಸರೇ ಹೆಚ್ಚಿದ್ದರು. ಕೋರಮಂಗಲದಲ್ಲಿ 80 ಅಡಿ ರಸ್ತೆಯಲ್ಲಿ ಮಳೆ ಮಧ್ಯೆಯೂ ಜನ ಪಬ್‍ಗಳಿಗೆ ಬೆರಳೆಣಿಕೆ ಜನ ಬಂದಿದ್ದರು. ರಾತ್ರಿ 9.30ರ ಒಳಗೆ ಊಟ ಮುಗಿಸಿಕೊಂಡರು. ಇನ್ನು ಪೊಲೀಸರು ಫುಲ್ ಅಲರ್ಟ್ ಆಗಿದ್ದರು. ಕ್ಲಬ್, ಪಬ್‍ಗೆಳಿಗೆ ಎಂಟ್ರಿ ಕೊಡೋ ರೋಡ್‍ಗಳ ಕಡೆ ಹೆಚ್ಚು ನಿಹಾ ವಹಿಸಿದ್ದರು. ಗಲಾಟೆ ಮಾಡುವವರನ್ನ ವಶಕ್ಕೆ ಪಡೆಯಲು ಬಿಎಂಟಿಸಿ ಮತ್ತು ಟಿಟಿ ವೆಹಿಕಲ್ ಕರೆಸಿಕೊಂಡಿದ್ದಾರೆ.
ಇಂದಿರಾನಗರದಲ್ಲೂ ನ್ಯೂ ಇಯರ್ ಸಂಭ್ರಮ ಕಳೆಗುಂದಿದೆ. ಇಂದಿರಾನಗರ ಸುತ್ತಮುತ್ತ ಪಬ್, ರೆಸ್ಟೋರೆಂಟ್‍ಗಳಲ್ಲಿ ಸಂಭ್ರಮ ಇರಲಿಲ್ಲ. 80 ಅಡಿ ರಸ್ತೆಯ ಪ್ರಮುಖ ರಸ್ತೆಗಳಲ್ಲಿ ಸೇಫ್ಟಿ ಐಲ್ಯಾಂಡ್ ನಿರ್ಮಾಣ ಮಾಡಿದರು. ಯುವತಿಯರು, ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಸೇಫ್ಟಿ ಐಲ್ಯಾಂಡ್ ಅನ್ನು ಪೊಲೀಸರೇ ನಿರ್ಮಿಸಿದ್ದಾರೆ. ನೈಟ್ ಕರ್ಫ್ಯೂಗೆ ಸಮಯ ಸಮೀಪಿಸುತ್ತಿದ್ದಂತೆ ಕಮರ್ಷಿಯಲ್ ಸ್ಟ್ರೀಟ್‍ನಲ್ಲಿ ಹಂತ ಹಂತವಾಗಿ ಶಾಪ್‍ಗಳು, ಮಳಿಗೆಗಳ ಮಾಲೀಕರು ಬಾಗಿಲು ಹಾಕಿದರು. 10 ಗಂಟೆಯೊಳಗೆ ಮನೆ ಸೇರಿಕೊಳ್ಳಲು ಹೊರಡಿದರು.
ಇತ್ತ ಹುಬ್ಬಳ್ಳಿಯಲ್ಲಿ ರಾತ್ರಿ 8ಗಂಟೆ ಹೊತ್ತಿಗೆ ಪಬ್, ಬಾರ್ & ರೆಸ್ಟೋರೆಂಟ್‍ಗಳಲ್ಲಿ ಯುವಕ ಯುವತಿಯರು ಹೊಸ ವರ್ಷದ ಸಂಭ್ರಮಾಚರಣೆ ಮಾಡಿದ್ರು. ರ್ಯಾಪರ್ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಜೊತೆ ಉಡುಪಿಯ ಮಲ್ಪೆಯಲ್ಲಿ ಕಾಣಿಸಿಕೊಂಡಿದ್ರು. ಉಡುಪಿಯ ಮಲ್ಪೆ ಬೀಚ್‍ನಲ್ಲಿ ನೂರಾರು ಜನ ಮೀನಿನ ಖಾದ್ಯವನ್ನು ಸವಿಯುತ್ತ ಬೀಚ್ ಬದಿಯಲ್ಲಿ ಫ್ಯಾಮಿಲಿ ಸಮೇತ ಎಂಜಾಯ್ ಮಾಡುತ್ತಾ ಹೊಸವರ್ಷವನ್ನು ಆಚರಿಸಿದ್ರು. ಬೀಚ್ ರೆಸ್ಟೋರೆಂಟ್ ಫ್ರೆಶ್ ಫಿಶ್ ಫ್ರೈ ಹೋಟೆಲ್ ಗಳಲ್ಲಿ ಜನ ತಮ್ಮ ಇಷ್ಟದ ಆಹಾರವನ್ನು ಸೇವಿಸುತ್ತಾ ಹೊಸವರ್ಷವನ್ನು ಬರಮಾಡಿಕೊಂಡ್ರು.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ 8 ಗಂಟೆಯಿಂದ ಮುಂಜಾನೆ 5 ಗಂಟೆವರೆಗೆ ಕಫ್ರ್ಯೂ ಜಾರಿ ಮಾಡಲಾಗಿದೆ. ಆದ್ರೆ ಕಾರವಾರದ ಮಾರುತಿ ದೇವಸ್ಥಾನದಲ್ಲಿ ಜಾತ್ರೆ ಹಿನ್ನಲೆಯಲ್ಲಿ ಎಂಟುಗಂಟೆ ಕಳೆದರೂ ಅಂಗಡಿಮುಂಗಟ್ಟುಗಳು ಬಂದ್ ಆಗದೇ ತೆರೆದಿದ್ದು ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು. ಪೊಲೀಸರು ಮನವಿ ಮಾಡಿದರೂ ಜನರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಅಂಗಡಿಗಳಲ್ಲಿ ಖರೀದಿಯಲ್ಲಿ ನಿರತರಾದರು. ಬೆಳಗಾವಿಯ ಪಂಚತಾರಾ ಹೋಟೆಲ್‍ಗಳು ಖಾಲಿ ಖಾಲಿ ಆಗಿವೆ. ಸರ್ಕಾರದ ಮಾರ್ಗ ಸೂಚಿಯಂತೆ ರಾತ್ರಿ 10 ಗಂಟೆಗೆ ಹೊಟೇಲ್‍ಗಳು ಬಂದ್ ಆಗಿವೆ.
ಮುಂಬೈ: ನಾವಿ ಮುಂಬೈನಿಂದ ದಕ್ಷಿಣ ಮುಂಬೈಗೆ ಸಾರಿಗೆ ಸಂಪರ್ಕ ಕಲ್ಪಿಸುವ ಉದ್ದೇಶದ ವಾಟರ್ ಟ್ಯಾಕ್ಸಿಯು 2022ರ ಜನವರಿ ತಿಂಗಳಿಂದ ಮುಂಬೈನಲ್ಲಿ ಸೇವೆ ಆರಂಭವಾಗಲಿದೆ.
ವಾಟರ್ ಟ್ಯಾಕ್ಸಿ ಸೇವೆಯು ದಕ್ಷಿಣ ಮುಂಬೈ ಮತ್ತು ನಾವಿ ಮುಂಬೈ ನಡುವೆ, ಫೆರ್ರಿ ವಾರ್ಫ್‌ನಲ್ಲಿರುವ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ ಮತ್ತು ಬೆಲಾಪುರ್ ಹಾಗೂ ನೆರೂಲ್‌ನಲ್ಲಿರುವ ಟರ್ಮಿನಲ್‌ನಿಂದ ಸಾರಿಗೆ ಸೇವೆ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಇದನ್ನೂ ಓದಿ: ತೆರಿಗೆ ದಾಳಿ, 150 ಕೋಟಿ ನಗದು ವಶ – ಕಂತೆ ಕಂತೆ ನೋಟುಗಳ ಪತ್ತೆ
ವಾಟರ್ ಟ್ಯಾಕ್ಸಿ ಸೇವೆಗೆ ಅಂತಾರಾಷ್ಟ್ರೀಯ ಕ್ರೂಸ್ ಟರ್ಮಿನಲ್, ರೇವಾಸ್‌ನಿಂದ ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್ (ಡಿಸಿಟಿ), ಧರ್ಮತಾರ್, ಕರಂಜಾಡೆ, ಡೊಮೆಸ್ಟಿಕ್ ಕ್ರೂಸ್ ಟರ್ಮಿನಲ್, ನೆರೂಲ್, ಐರೋಲಿ, ವಾಶಿ, ಖಂಡೇರಿ, ದ್ವೀಪಗಳು ಮತ್ತು ಜವಾಹರ್‌ಲಾಲ್ ಸೇರಿದಂತೆ ವಿವಿಧ ಮಾರ್ಗಗಳನ್ನು ಸರ್ಕಾರ ನಿಗದಿಪಡಿಸಿದೆ. ಇದನ್ನೂ ಓದಿ: ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿದ ಹರ್ಭಜನ್ ಸಿಂಗ್
ಜನವರಿ ಮೊದಲ ವಾರದಿಂದಲೇ ವಾಟರ್ ಟ್ಯಾಕ್ಸಿ ಸೇವೆ ಆರಂಭವಾಗಲಿದೆ. ಸದ್ಯಕ್ಕೆ ಮೂರು ಆಪರೇಟರ್ ವ್ಯವಸ್ಥೆ ಮಾಡಲಾಗಿದೆ. 2-3 ತಿಂಗಳಲ್ಲಿ ನಾಲ್ಕನೇ ಆಪರೇಟರ್ ವ್ಯವಸ್ಥೆ ಮಾಡಲಾಗುವುದು.
ಡೊಮೆಸ್ಟಿಕ್ ಟರ್ಮಿನಲ್‌ನಿಂದ (ಡಿಸಿಟಿ) ನಾವಿ ಮುಂಬೈ ಪ್ರಯಾಣಕ್ಕೆ ಒಬ್ಬ ಪ್ರಯಾಣಿಕರಿಗೆ 1,200ರಿಂದ 15,000 ರೂ. ಟಿಕೆಟ್ ದರ ಇರಲಿದೆ. ಮುಂಬೈನ ಡಿಸಿಟಿಯಿಂದ ಜವಾಹರ್‌ಲಾಲ್ ನೆಹರೂ ಮತ್ತು ನಾವಿ ಮುಂಬೈಗೆ 800ರಿಂದ 1,100 ರೂ. ದರ ಇದೆ.