Tag: New Year 2020

  • ಹೊಸ ವರ್ಷದ ಹೊಸ್ತಿಲಲ್ಲೇ ಪ್ರತ್ಯೇಕ ಅಪಘಾತ- ರಾಯಚೂರಿನಲ್ಲಿ ಎರಡು ಸಾವು

    ಹೊಸ ವರ್ಷದ ಹೊಸ್ತಿಲಲ್ಲೇ ಪ್ರತ್ಯೇಕ ಅಪಘಾತ- ರಾಯಚೂರಿನಲ್ಲಿ ಎರಡು ಸಾವು

    ರಾಯಚೂರು: ರಾಯಚೂರಿನಲ್ಲಿ ಹೊಸ ವರ್ಷದ ಹೊಸ್ತಿಲಲ್ಲೇ ಪ್ರತ್ಯೇಕ ಭೀಕರ ಅಪಘಾತ ನಡೆದಿದ್ದು, ಇಬ್ಬರು ಮೃತಪಟ್ಟಿದ್ದಾರೆ.

    ಜಿಲ್ಲೆಯ ಕಟ್ಲಾಟ್ಕೂರು ಕ್ರಾಸ್ ಬಳಿ ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಶ್ರೀಕಾಂತ್ (24) ಮೃತ ದುರ್ದೈವಿ. ಘಟನೆಯಲ್ಲಿ ಮಲ್ಲೇಶ್, ಲಿಂಗಪ್ಪ ಮತ್ತು ರವಿ ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪ್ರತ್ಯೇಕ ಘಟನೆಯಲ್ಲಿ ಮತ್ತೊರ್ವ ಸಾವನ್ನಪ್ಪಿದ್ದು, ಡಿಸೆಂಬರ್ ಅಂತ್ಯ ಜಿಲ್ಲೆಯಲ್ಲಿ ಎರಡು ಬಲಿ ಪಡೆದಂತಾಗಿದೆ. ಮಾನ್ವಿ ಪಟ್ಟಣದ ಮಲ್ಲಿಕಾರ್ಜುನ ಚಿತ್ರಮಂದಿರ ಬಳಿ ಬೈಕ್‍ಗೆ ಲಾರಿ ಡಿಕ್ಕಿಹೊಡೆದು 45 ವರ್ಷದ ಅಮರೇಶ್ ರಾಜಲದಿನ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೃತ ಅಮರೇಶ್ ಮಾನ್ವಿಯಿಂದ ಸ್ವಗ್ರಾಮ ರಾಜಲದಿನ್ನಿಗೆ ಹೋಗುವಾಗ ಅಪಘಾತ ನಡೆದಿದೆ. ಈ ಸಂಬಂಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಹೊಸ ವರ್ಷಾಚರಣೆಯಲ್ಲಿ ಸಿನಿಮಾ ಹಾಡು ಹಾಡಿ ರಂಜಿಸಿದ ರಾಯಚೂರು ಎಸ್‍ಪಿ

    ಹೊಸ ವರ್ಷಾಚರಣೆಯಲ್ಲಿ ಸಿನಿಮಾ ಹಾಡು ಹಾಡಿ ರಂಜಿಸಿದ ರಾಯಚೂರು ಎಸ್‍ಪಿ

    ರಾಯಚೂರು: ಜಿಲ್ಲೆಯಲ್ಲಿ ನೂತನ ವರ್ಷದ ಸಂಭ್ರಮಾಚರಣೆಗಳು ಜೋರಾಗಿ ನಡೆಯಿತು. ನಗರದ ನೀಲನಕ್ಷತ್ರ ಲೇಔಟ್ ನಲ್ಲಿ ಫ್ಯಾಮಿಲಿ ಪಾರ್ಟಿ ಆಯೋಜಿಸಲಾಗಿತ್ತು. ಮಕ್ಕಳು, ಯುವಕರು ವಯಸ್ಸಿನ ಭೇದವಿಲ್ಲದೆ ಕುಣಿದು ಸಂಭ್ರಮಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ.ಬಿ.ವೇದಮೂರ್ತಿ ಸಿನಿಮಾ ಹಾಡುಗಳಿಗೆ ಧ್ವನಿಗೂಡಿಸಿ ನೆರೆದಿದ್ದವರನ್ನು ರಂಜಿಸಿದರು. ಮಕ್ಕಳು ಚಳಿಯನ್ನೂ ಲೆಕ್ಕಿಸದೇ ನೀರಿನಲ್ಲಿ ಕುಣಿದು ಖುಷಿಪಟ್ಟರು. ಭರ್ಜರಿ ಶೃಂಗಾರಗೊಂಡಿದ್ದ ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿ ಸಂಭ್ರಮಿಸಿದ್ದರು.

    ನಗರದ ಸಾಯಿಸೀನಾ ಅಪಾರ್ಟ್ ಮೆಂಟ್ ಸೇರಿದಂತೆ ನಗರದ ಹಲವೆಡೆ ಹೊಸ ವರ್ಷಾಚರಣೆಯ ಸಂಭ್ರಮ ಮನೆ ಮಾಡಿತ್ತು. ಯುವಕ ಯುವತಿಯರು ಡಿಜೆ ಹಾಡಿಗೆ ಸಖತ್ ಡ್ಯಾನ್ಸ್ ಮಾಡಿದರು. ಈ ಮೂಲಕ ಜಿಲ್ಲೆಯ ಜನತೆ ಹೊಸ ವರ್ಷವನ್ನು ಖುಷಿಯಿಂದ ಬರಮಾಡಿಕೊಂಡರು.