Tag: New Year

  • ಯುಗಾದಿ ಸಂಭ್ರಮ – ಬ್ಯಾಚುಲರ್‌ ಹುಡುಗರು, ದೂರವೇ ಉಳಿದವರ ಸಡಗರ

    ಯುಗಾದಿ ಸಂಭ್ರಮ – ಬ್ಯಾಚುಲರ್‌ ಹುಡುಗರು, ದೂರವೇ ಉಳಿದವರ ಸಡಗರ

    ಮನೆಮಂದಿಯೆಲ್ಲ ಒಂದಾಗಲು ಹಬ್ಬವೊಂದು ನೆಪ. ಓದು, ಉದ್ಯೋಗದ ಕಾರಣಕ್ಕೆ ದೂರವೇ ಉಳಿದವರನ್ನು ಹಬ್ಬ ಊರು ಅಥವಾ ಮನೆಗೆ ಕರೆಸಿಕೊಳ್ಳುತ್ತದೆ. ಆದ್ರೆ ಅನಿವಾರ್ಯ ಕಾರಣಕ್ಕೆ ಊರಿಗೆ ಹೋಗಲಾಗದಿದ್ದರೆ ಮಾತ್ರ ಜೊತೆಗಿರದ ಭಾವವೊಂದು ಪರಿಪರಿಯಾಗಿ ಕಾಡಿಬಿಡುತ್ತದೆ ಅಲ್ಲವೇ ಹಾಗೆಯೇ ಈ ಯುಗಾದಿ ಹಬ್ಬವೂ ಹಾಗೆಯೇ ಇರಬೇಕಲ್ಲವೇ.

    ಚೈತ್ರಮಾಸದ ಮೊದಲ ದಿನವೆಂದರೆ ಹಾಗೇ ಹೊಸ ಮಾಸದ ಘಮಲು, ಹೊಸ ಭರವಸೆಯ ಕನಸು. ಹಳೆಯದೆಲ್ಲವ ಅಳಿಸಿ, ಹೊಸತಾಗುವ ಈ ಹಬ್ಬ ವರ್ಷಾರಂಭದ ಸಂಕೇತ. ಇದು ಹಿಂದೂಗಳ ಹೊಸ ವರ್ಷವೆಂಬ ಯುಗಾದಿ ಹಬ್ಬದ ಹೆಗ್ಗುರುತು.

    ಬೇವು ಬೆಲ್ಲ, ಹೋಳಿಗೆ ತುಪ್ಪದ ಸಿಹಿ ಊಟದ ರುಚಿ, ಹಬ್ಬಕ್ಕೆ ಖರೀದಿಸಿದ ಹೊಸ ಬಟ್ಟೆ ಊರಿನ ಕಟ್ಟೆಯ ಮೇಲೆ ಕುಳಿತು ಮಾತನಾಡುತ್ತಿದ್ದ ಮಾತುಕತೆ, ಗೆಳೆಯರೆಲ್ಲ ಕೂಡಿದ ನೆನಪಿಗೆ ಹಳೆಯ ಆಟ, ಹೊಸದಾಗಿ ಮದುವೆ ಆದ ಸ್ನೇಹಿತನ ಕಾಲೆಳೆಯುವುದು, ಮದುವೆ ಫಿಕ್ಸ್ ಆದ ಕ್ಲಾಸ್‌ಮೇಟ್ ಹುಡುಗಿಯ ಶಾಲೆಯ ಕಥೆ ಎಲ್ಲಾ ಮಿಸ್ ಆದಂತಹ ಭಾವ. ಆದರೆ ಹಬ್ಬ ಅಂದ್ರೆ ಹಬ್ಬಾನೇ ಅಲ್ವಾ? ಹಬ್ಬಕ್ಕೆ ಊರಿಗೆ ಹೋಗಲಾಗದೇ, ಅಲ್ಲಿ ಮಾಡುತ್ತಿದ್ದ ಹಬ್ಬವನ್ನು ಇನ್ಯಾವುದೋ ಊರಲ್ಲಿ, ಪುಟ್ಟ ಕೊಣೆಯಲ್ಲಿ ಉಳಿದು ಮಾಡುವ ಆಸೆ ಮೂಡುವುದೇ ಇಲ್ಲ.

    ಆದ್ರೆ ಈ ಬೆಂಗಳೂರಿನಂತಹ ಮಹಾನಗರಗಳ ಅಪಾರ್ಟ್‌ಮೆಂಟ್‌ನಲ್ಲಿದ್ದರೆ ಅದೊಂದು ಪುಟ್ಟ ಊರು ಇದ್ದ ಹಾಗೆ. ಅಲ್ಲಿನ ಮನೆಗಳ ಕೆಲವರು ಊರಿಗೆ ಹೋಗಿದ್ದರೆ ಉಳಿದವರದ್ದೆಲ್ಲ ಸೇರಿ ಒಂದು ಹಬ್ಬ ಎಲ್ಲಿಂದಲೋ ಬಂದವರು ಒಂದು ಕಡೆ ನಿಂತವರು. ಒಂದೊಂದು ಊರಿನಲ್ಲಿ ಒಂದೊಂದು ಥರದ ಹಬ್ಬ ಆ ಎಲ್ಲಾ ಆಚರಣೆಗಳು ಸೇರಿದ ಹಬ್ಬ ಇವರದ್ದು. ಹಬ್ಬದ ಹಿಂದಿನ ರಾತ್ರಿ ಹೊತ್ತಿಗಾಗಲೇ ಊರಿಗೆ ಹೋದವರು, ಹೋಗದೇ ಉಳಿದವರ ಪಟ್ಟಿ ಸಿಕ್ಕಿಬಿಡುತ್ತದೆ.

    ಹೋದವರ ಸ್ಟೇಟಸ್‌ಗಳಲ್ಲಿ ಊರಿನ ಒಂದು ಚಿತ್ರ, ಯುಗಾದಿ ಹಬ್ಬಕ್ಕೆ ಶುಭಾಶಯ ಕೋರುವ ಮೆಸೇಜು ಈ ರೀತಿ ಇದ್ದರೆ, ಊರಿಗೆ ಹೋಗದವರ ಮೊಬೈಲ್‌ಗಳು ಕೂಡ ಬಿಝಿಯಾಗುತ್ತವೆ. ಒಬ್ಬೊಬ್ಬರೇ ಇರುವವರು ಒಂದು ಕಡೆ ಸೇರಲು ಪ್ಲ್ಯಾನ್‌ ರೆಡಿಯಾಗುತ್ತದೆ.

    ಇನ್ನೂ ಬ್ಯಾಚ್ಯುಲರ್‌ ಲೈಫು ನೋಡೋದಾದ್ರೆ ಅವರಿಗೆ ಸಿಗುವ ಹಬ್ಬದಡುಗೆಯ ರುಚಿಯೇ ಬೇರೆ. ಬಾಡಿಗೆ ಮನೆಯಲ್ಲಿ ಓನರ್‌ಗಳು ಕೊಡುವ ಬೇವು, ಬೆಲ್ಲದ ತಿಂದು ಸಂಜೆ ಹೊತ್ತಿಗೆ ಒಂದಿಷ್ಟು ಹೋಳಿಗೆ ಊಟ. ಹೇಗೋ ಅಕ್ಕಪಕ್ಕದ ಮನೆಯವರು ಕೊಟ್ಟಿದ್ದನ್ನೆಲ್ಲ ಸೇರಿಸಿ ಹಬ್ಬ ಮುಗಿಸುತ್ತಾರೆ. ಬೆಳಗ್ಗೆಯಿಂದ ಸಂಜೆವರೆಗೆ ಏನೆಲ್ಲಾ ಆಯ್ತು.. ಅಂತ ಒಂದು ಸುತ್ತು ನೆನೆಸಿಕೊಂಡು ಹಾಗೇ ಕ್ಲಿಕ್ಕಿಸಿಕೊಂಡ ಒಂದೆರಡು ಫೋಟೋಗಳನ್ನ ಸ್ಟೇಟಸ್‌ ಹಾಕಿ, ಮಾರನೆ ದಿನ ಬೆಳಗ್ಗೆ 7 ಗಂಟೆ ಶಿಫ್ಟ್‌ ಕೆಲಸಕ್ಕೆ ಹೋಗುವ ಧಾವಂತಕ್ಕೆ ಯುಗಾದಿ ಹಬ್ಬ ಮುಗಿದೇ ಹೋಗಿರುತ್ತದೆ.

  • ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಯುಗಾದಿ ಹಿಂದೂಗಳ ಹೊಸ ವರ್ಷ, ಹಸಿರಿಗೆ ಹೊಸ ಉಸಿರಿನ ಹಬ್ಬ

    ಯುಗಾದಿ.. ಇದು ಹಿಂದೂಗಳ ಹೊಸ ವರ್ಷ, ಚಂದ್ರಮಾನ ಪಂಚಾಂಗದ ಪ್ರಕಾರ ಹೊಸ ವರ್ಷ ಪ್ರಾರಂಭವಾಗಿದ್ದು ಈ ದಿನ. ಚೈತ್ರ ಮಾಸದ ಶುಕ್ಲ ಪಕ್ಷದ ಪ್ರತಿಪದ ದಿನವನ್ನು ಹಿಂದೂಗಳ ಪ್ರಕಾರ ಹೊಸ ವರ್ಷದ ಮೊದಲ ದಿನವೆಂದು ಆಚರಿಸಲಾಗುತ್ತದೆ.

    ಹಿಂದೂ ಪಂಚಾಂಗದಲ್ಲಿ ಚೈತ್ರ ಮಾಸದಿಂದಲೇ ವರ್ಷದ ಆರಂಭವಾಗುತ್ತದೆ. ಈ ಹಬ್ಬ ಚಂದ್ರಮಾನ ಪಂಚಾಂಗವನ್ನು ಅನುಸರಿಸುತ್ತದೆ. ಇನ್ನು ಬ್ರಹ್ಮ ಯುಗಾದಿಯ ದಿನ ಇಡೀ ಬ್ರಹ್ಮಾಂಡವನ್ನೇ ಸೃಷ್ಟಿಸಿದನು ಎನ್ನಲಾಗುತ್ತದೆ. ಹೀಗಾಗಿ ಯುಗಾದಿ ಹಬ್ಬವನ್ನು ಹೊಸ ವರ್ಷದ ಅಥವಾ ಹೊಸ ಪ್ರಾರಂಭದ ಸಂಕೇತವಾಗಿ ಆಚರಿಸಲಾಗುತ್ತದೆ.

    ಗ್ರಹಗತಿಗಳ ಪ್ರಕಾರ, ಯುಗಾದಿಯ ದಿನ ಸೂರ್ಯನು ಮೇಷ ರಾಶಿಗೆ ಪ್ರವೇಶಿಸುತ್ತಾನೆ. ಈ ಮೂಲಕ ಸೂರ್ಯ ಮತ್ತು ಚಂದ್ರರ ಹೊಸ ಚಕ್ರ ಪ್ರಾರಂಭಗೊಳ್ಳುತ್ತದೆ.

    ನೈಸರ್ಗಿಕವಾಗಿ ಯುಗಾದಿ ಹಬ್ಬವು ಹೊಸತನ ತಂದು ಕೊಡುತ್ತದೆ. ಚೈತ್ರ ಮಾಸದಲ್ಲಿ ವಸಂತ ಋತು ಪ್ರಾರಂಭವಾಗಿ, ನಿಸರ್ಗದಲ್ಲಿಯೂ ಹೊಸತನ ಹುಟ್ಟಿಕೊಳ್ಳುತ್ತದೆ. ಹೊಸ ಎಲೆಗಳು, ಚಿಗುರು ಹಾಗೂ ಇಡೀ ಪ್ರಕೃತಿ ಹಸಿರಿನಿಂದ ಕಂಗೊಳಿಸುತ್ತದೆ. ಹಸಿರಿಗೂ ಉಸಿರು ನೀಡುವ ಈ ಹಬ್ಬ ಯುಗಾದಿಯಾಗಿದೆ.

    ಯುಗಾದಿಯಂದು ಪಂಚಾಂಗ ಶ್ರವಣ, ಜ್ಯೋತಿಷಿಗಳು ಹೊಸ ವರ್ಷದ ಭವಿಷ್ಯವನ್ನು ಯುಗಾದಿ ಎಂದು ಪ್ರಾರಂಭಿಸುತ್ತಾರೆ. ಯುಗಾದಿಯನ್ನು ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರದಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಸಂತ ಕಾಲದ ಜೊತೆ ಜೊತೆಗೆ ಹೊಸ ಬೆಳೆಗಳಿಗೆ ನಾಂದಿ ಹಾಡುತ್ತದೆ.

    ಐತಿಹಾಸಿಕವಾಗಿ ಹೇಳುವುದಾದರೆ, ಶಾಲಿವಾಹನ ಇದೇ ದಿನದಂದು ವಿಜಯ ಸಾಧಿಸಿ ತನ್ನ ಆಡಳಿತವನ್ನು ಪ್ರಾರಂಭಿಸುತ್ತಾನೆ. ಹೀಗಾಗಿ ಯುಗಾದಿಯೆಂದು ಶಾಲಿವಾಹನ ಶಕೆ ಪ್ರಾರಂಭವಾಯಿತು. ಹೀಗೆ ಯುಗಾದಿ ಹಲವು ಹೊಸತನಗಳಿಗೆ ಹೊಸ ಹುರುಪನ್ನು ಹಾಗೂ ನವಚೇತನವನ್ನು ನೀಡುವ ಮೂಲಕ ಹೊಸ ವರ್ಷಕ್ಕೆ ಬುನಾದಿಯಾಗುತ್ತದೆ.

    ಎಲ್ಲರೂ ಸಂಭ್ರಮದಿಂದ ಆಚರಿಸುವ ಈ ಯುಗಾದಿ ಎಲ್ಲರಲ್ಲೂ ಹೊಸ ಆರಂಭಕ್ಕೆ ದಾರಿ ಮಾಡಿಕೊಡಲಿ, ಹಿಂದೂಗಳ ಹೊಸ ವರ್ಷ ಎಲ್ಲರ ಮನೆ-ಮನಗಳಲ್ಲಿ ಹೊಸತನ್ನು ತರಲಿ.

    ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು!

  • ಮದ್ಯ, ಆಹಾರ ನಿರಾಕರಿಸಿದ್ದಕ್ಕೆ ರೆಸಾರ್ಟ್ ಮ್ಯಾನೇಜರ್ ಹತ್ಯೆ – ಕಾನ್‌ಸ್ಟೇಬಲ್‌ಗಳು ಅರೆಸ್ಟ್

    ಮದ್ಯ, ಆಹಾರ ನಿರಾಕರಿಸಿದ್ದಕ್ಕೆ ರೆಸಾರ್ಟ್ ಮ್ಯಾನೇಜರ್ ಹತ್ಯೆ – ಕಾನ್‌ಸ್ಟೇಬಲ್‌ಗಳು ಅರೆಸ್ಟ್

    ಶಿಮ್ಲಾ: ಮದ್ಯ ಹಾಗೂ ಆಹಾರವನ್ನು ನಿರಾಕರಿಸಿದ್ದಕ್ಕೆ ಪೊಲೀಸ್ ಪೇದೆಗಳು ರೆಸಾರ್ಟ್ ಮ್ಯಾನೇಜರ್‌ನನ್ನು ಹತ್ಯೆಗೈದ ಘಟನೆ ಹಿಮಾಚಲ ಪ್ರದೇಶದ (Himachal Pradesh) ರೆಸಾರ್ಟ್‌ನಲ್ಲಿ ನಡೆದಿದೆ.

    ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಅನೂಪ್ ಮತ್ತು ಅಮಿತ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ:BBK 11: ನನ್ನ ಮಗಳು ಕಳಪೆಯಲ್ಲ: ಚೈತ್ರಾ ಪರ ನಿಂತ ತಾಯಿ

    ಹಿಮಾಚಲ ಪ್ರದೇಶದ ಡಾಲ್‌ಹೌಸಿ ಬಳಿಯ ಬನಿಖೇತ್‌ನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಈ ಘಟನೆ ನಡೆದಿದೆ. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ತಡರಾತ್ರಿ ಮೂವರು ಕಾನ್‌ಸ್ಟೇಬಲ್‌ಗಳು ರೆಸಾರ್ಟ್‌ಗೆ ತೆರಳಿ ಆಹಾರ ಹಾಗೂ ಮದ್ಯವನ್ನು ಕೇಳಿದ್ದಾರೆ. ತಡವಾಗಿರುವ ಕಾರಣ ಯಾರು ಸಿಬ್ಬಂದಿಗಳಿಲ್ಲ ಎಂದು ಸ್ವಾಗತಕಾರಿಣಿ ಹೇಳಿ ಆಹಾರ ಮತ್ತು ಮದ್ಯ ನೀಡಲು ನಿರಾಕರಿಸಿದ್ದರು. ಇದರಿಂದಾಗಿ ಸ್ವಾಗತಕಾರಿಣಿ ಹಾಗೂ ಪೇದೆಗಳ ಮಧ್ಯೆ ಗಲಾಟೆ ಶುರುವಾಗಿದೆ.

    ಗಲಾಟೆ ಕೇಳಿ ಸ್ಥಳಕ್ಕೆ ರೆಸಾರ್ಟ್‌ನ ಜನರಲ್ ಮ್ಯಾನೇಜರ್ ರಾಜಿಂದರ್ ಆಗಮಿಸಿದ್ದಾರೆ. ಈ ವೇಳೆ ಪೇದೆಗಳು ಅವರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದಾಗಿ ನೆಲಕ್ಕೆ ಕುಸಿದ ಮ್ಯಾನೇಜರ್ ಸಾವನ್ನಪ್ಪಿದರು. ಬಳಿಕ ಪೊಲೀಸರು ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ಬಂಧಿಸಲಾಗಿದ್ದು, ಕೊಲೆ ಆರೋಪದಡಿ ದೂರು ದಾಖಲಿಸಲಾಗಿದೆ.

    ಸ್ಥಳೀಯ ಅಧಿಕಾರಿಗಳು ಈ ಕುರಿತು ಮಾತನಾಡಿ, ಘಟನೆ ವೇಳೆ ಕಾನ್‌ಸ್ಟೇಬಲ್‌ಗಳು ಕುಡಿದ ಮತ್ತಿನಲ್ಲಿದ್ದಿರಬಹುದು ಎಂದು ಶಂಕಿಸಿದ್ದಾರೆ. ಸದ್ಯ ಕಾನ್‌ಸ್ಟೇಬಲ್‌ಗಳನ್ನು ಅಮಾನತುಗೊಳಿಸಲಾಗಿದ್ದು, ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದನ್ನೂ ಓದಿ: ಪಬ್ಲಿಕ್‌ ಟಿವಿಯ ರವೀಶ್‌ ಹೆಚ್‌ಎಸ್‌ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

  • ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    ಮೊದಲ ಕ್ಯಾಬಿನೆಟ್‌ ರೈತರಿಗೆ ಅರ್ಪಿಸಿದ ಮೋದಿ – ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ

    – ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ಬಜೆಟ್ 69,515 ಕೋಟಿ ರೂ.ಗೆ ಹೆಚ್ಚಳ
    – ಕೇವಲ ರೈತರಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕ್ಯಾಬಿನೆಟ್‌ ಅನುಮೋದನೆ

    ನವದೆಹಲಿ: ಹೊಸ ವರ್ಷದಂದು (New Year) ಕೇಂದ್ರ ಸರ್ಕಾರ ರೈತರಿಗೆ ಶುಭ ಸುದ್ದಿ ನೀಡಿದೆ. ಬುಧವಾರ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಡಿ-ಅಮೋನಿಯಂ ಫಾಸ್ಫೇಟ್ (DAP) ಮೇಲಿನ ವಿಶೇಷ ಸಬ್ಸಿಡಿ ಸೌಲಭ್ಯವನ್ನು ವಿಸ್ತರಿಸಲು ಒಪ್ಪಿಗೆ ನೀಡಿದೆ.

    ವರ್ಷದ ಮೊದಲ ಸಚಿವ ಸಂಪುಟ ಸಭೆಯನ್ನು (Cabinet) ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಸಮರ್ಪಿಸಿ ಕೇವಲ ರೈತರಿಗೆ ಸಂಬಂಧಿಸಿದ ನಿರ್ಧಾರಗಳಿಗೆ ಕ್ಯಾಬಿನೆಟ್‌ ಅನುಮೋದನೆ ನಿಡಿದೆ.

    ಪ್ರಧಾನ ಮಂತ್ರಿ ಫಸಲು ಭೀಮಾ ಯೋಜನೆಯ ಬಜೆಟ್ 69,515 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. ಇದರ ಜೊತೆ ಡಿಎಪಿ ರಸಗೊಬ್ಬರಕ್ಕೆ 3,850 ಕೋಟಿ ರೂ. ವಿಶೇಷ ಪ್ಯಾಕೇಜ್ ಬಿಡುಗಡೆಗೆ ಒಪ್ಪಿಗೆ ಸೂಚಿಸಿದೆ.

    ಈ ನಿರ್ಧಾರದಿಂದ ರೈತರು 50 ಕೆಜಿ ತೂಕದ ಡಿಎಪಿ ರಸಗೊಬ್ಬರವನ್ನು 1,350 ರೂ. ಚಿಲ್ಲರೆ ದರದಲ್ಲಿ ಖರೀದಿಸಬಹುದು. ಈ ಸಬ್ಸಿಡಿ ಜನವರಿ 1ರಿಂದ ಜಾರಿಗೆ ಬರಲಿದ್ದು, ಮುಂದಿನ ಆದೇಶದವರೆಗೆ ಜಾರಿಯಲ್ಲಿ ಇರಲಿದೆ. ಇದನ್ನೂ ಓದಿ: ಹೊಸ ವರ್ಷಕ್ಕೆ ಸಿಹಿಸುದ್ದಿ; ವೈಜಾಗ್ ಸ್ಟೀಲ್ ಕಾರ್ಖಾನೆಗೆ ಮರುಜೀವ

    ಕಳೆದ ವರ್ಷ ಸರ್ಕಾರವು ಏಪ್ರಿಲ್‌ 1 ರಿಂದ ಡಿಸೆಂಬರ್‌ 31ಕ್ಕೆ ಅನ್ವಯವಾಗುವಂತೆ ಒಂದು ಟನ್‌ಗೆ 3,500 ರೂ. ವಿಶೇಷ ಸಬ್ಸಿಡಿಗೆ ಅನುಮತಿ ನೀಡಿತ್ತು. ಈ ಅವಧಿಯಲ್ಲಿ ಏರುತ್ತಿರುವ ವೆಚ್ಚ ಸರಿದೂಗಿಸಲು 2,625 ಕೋಟಿ ರೂ. ಪ್ಯಾಕೇಜ್‌ ಘೋಷಿಸಿತ್ತು.

    ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್‌, ರೈತರು 1,350 ರೂ.ಗೆ 50 ಕೆಜಿ ಡಿಎಪಿ ರಸಗೊಬ್ಬರ ಖರೀದಿ ಮಾಡುವುದನ್ನು ಮುಂದುವರಿಸಬಹುದು. ಬೇರೆ ದೇಶಗಳಲ್ಲಿ 50 ಕೆಜಿ ರಸಗೊಬ್ಬರಕ್ಕೆ 3 ಸಾವಿರ ರೂ.ಗೂ ಅಧಿಕ ವೆಚ್ಚವಾಗುತ್ತದೆ. 2014-24 ಅವಧಿಯಲ್ಲಿ ರೈತರಿಗಾಗಿ 11.9 ಲಕ್ಷ ಕೋಟಿ ರೂ. ಸಬ್ಸಿಡಿ ನೀಡಲಾಗಿದೆ. 2004-14ರ ಅವಧಿಗೆ ಹೋಲಿಸಿದರೆ ಸಬ್ಸಿಡಿ ಪ್ರಮಾಣ ದುಪ್ಪಟ್ಟಾಗಿದೆ ಎಂದು ತಿಳಿಸಿದರು.

    2024 ರಿಂದ ಕೋವಿಡ್ ಮತ್ತು ಯುದ್ಧ ಸಂಬಂಧಿತ ಅಡೆತಡೆಗಳಿಂದ ಉಂಟಾದ ಮಾರುಕಟ್ಟೆ ಏರಿಳಿತಗಳ ಭಾರವನ್ನು ರೈತರು ಭರಿಸಬೇಕಾಗಿಲ್ಲ. ಜಾಗತಿಕ ಬಿಕ್ಕಟ್ಟಿನಿಂದಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಎಪಿ ರಸಗೊಬ್ಬರ ಬೆಲೆ ಏಕಾಏಕಿ ಬದಲಾವಣೆಯಾಗುತ್ತಿದೆ. ಈ ಕಾರಣಕ್ಕೆ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ರೈತರಿಗೆ ಅನುಕೂಲ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

    ಯಾವ ಅವಧಿಯಲ್ಲಿ ರಸಗೊಬ್ಬರಕ್ಕೆ ಎಷ್ಟು ಕೋಟಿ ಸಬ್ಸಿಡಿ?
    2004 ರಿಂದ 2014 – 5.5 ಲಕ್ಷ ಕೋಟಿ ರೂ.
    2014 ರಿಂದ 2024 – 11.9 ಲಕ್ಷ ಕೋಟಿ ರೂ.

     

  • ಹೊಸ ವರ್ಷದ ಸಂಭ್ರಮಾಚರಣೆ – ಒಂದೇ ದಿನದಲ್ಲಿ ಬಿಎಂಟಿಸಿಗೆ ಬಂತು 5.48 ಕೋಟಿ ರೂ.

    ಹೊಸ ವರ್ಷದ ಸಂಭ್ರಮಾಚರಣೆ – ಒಂದೇ ದಿನದಲ್ಲಿ ಬಿಎಂಟಿಸಿಗೆ ಬಂತು 5.48 ಕೋಟಿ ರೂ.

    – 35.70 ಲಕ್ಷ ಪ್ರಯಾಣಿಕರು ಪ್ರಯಾಣ

    ಬೆಂಗಳೂರು: ಹೊಸ ವರ್ಷದ ಹಿನ್ನೆಲೆ ಒಂದೇ ದಿನದಲ್ಲಿ ಬಿಎಂಟಿಸಿಗೆ (BMTC) ಕೋಟಿ ಕೋಟಿ ಆದಾಯ ಹರಿದು ಬಂದಿದೆ.

    ಹೊಸ ವರ್ಷಾಚರಣೆ ಪ್ರಯುಕ್ತ ಡಿ.31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಬಿಎಂಟಿಸಿ ಬಸ್ಸುಗಳು ಸಂಚಾರ ಮಾಡಿದ್ದವು. ಬಿಎಂಟಿಸಿಯಿಂದ ನಗರದ ವಿವಿಧ ಭಾಗಗಳಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೊಸ ವರ್ಷದ ಮೊದಲ ರಾತ್ರಿ ದೇಶಾದ್ಯಂತ ಹೆಚ್ಚು ಸೇಲ್‌ ಆಗಿದ್ದು ಯಾವ ಫ್ಲೇವರ್‌ ಕಾಂಡೋಮ್‌?

    ಮಂಗಳವಾರ ಒಂದೇ ದಿನ 35 ಲಕ್ಷ ಪ್ರಯಾಣಿಕರು ಪ್ರಯಾಣ ಮಾಡಿದ್ದರು. ಈ ಹಿನ್ನೆಲೆ ಬಿಎಂಟಿಸಿಗೆ 5 ಕೋಟಿ ಹಣ ಕಲೆಕ್ಷನ್ ಆಗಿದೆ. ಒಟ್ಟು 35,70,842 ಪ್ರಯಾಣಿಕರು ಬಸ್ಸಿನಲ್ಲಿ ಪ್ರಯಾಣ ಮಾಡಿದ್ದರು. ಇದರಿಂದ ಬಿಎಂಟಿಸಿಗೆ ಒಟ್ಟು 5.48 ಕೋಟಿ ರೂ. ಸಂಗ್ರಹ ಆಗಿದೆ. ಇದನ್ನೂ ಓದಿ: ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

  • ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

    ಹೊಸ ವರ್ಷದಂದೇ ಮನೆಯಲ್ಲೇ ನೇಣು ಬಿಗಿದು ಯುವತಿ ಆತ್ಮಹತ್ಯೆ

    ಬೆಂಗಳೂರು: ಹೊಸ ವರ್ಷದಂದೇ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಬಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Bagalagunte Police Station) ನಡೆದಿದೆ.

    ರುಚಿತಾ(24) ಆತ್ಮಹತ್ಯೆಗೆ ಶರಣಾದ ಯುವತಿ. ಇಂದು (ಜ.1) ಮಧ್ಯಾಹ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಇದನ್ನೂ ಓದಿ: ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

    ಬೆಂಗಳೂರಿನಲ್ಲಿರುವ (Bengaluru) ಪ್ರಖ್ಯಾತ ಫಾರ್ಮಾ ಕಂಪನಿಯಲ್ಲಿ ರುಚಿತಾ ಕೆಲಸ ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಈಗ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

     

  • ಹೊಸ ವರ್ಷದ ಸಂಭ್ರಮ – ಮಂತ್ರಾಲಯ ರಾಯರ ಮಠಕ್ಕೆ ಭಕ್ತರ ದಂಡು

    ಹೊಸ ವರ್ಷದ ಸಂಭ್ರಮ – ಮಂತ್ರಾಲಯ ರಾಯರ ಮಠಕ್ಕೆ ಭಕ್ತರ ದಂಡು

    ರಾಯಚೂರು: ಹೊಸ ವರ್ಷಾಚರಣೆ ಹಿನ್ನೆಲೆ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ಭಕ್ತರ ದಂಡು ಹರಿದು ಬಂದಿದೆ. ಬೆಳಗಿನ ಜಾವದಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಇಲಿಯಾನಾ ಮತ್ತೆ ಪ್ರೆಗ್ನೆಂಟಾ?- ಹೊಸ ವರ್ಷದಂದು ಸುಳಿವು ಕೊಟ್ರಾ ನಟಿ?

    ಹೊಸ ವರ್ಷದ (New Year) ಆರಂಭದ ಹಿನ್ನೆಲೆ ರಾಯರ ದರ್ಶನಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ದೇಶದ ಮೂಲೆ ಮೂಲೆಯಿಂದ ಭಕ್ತರ ಸಾಗರ ಹರಿದು ಬಂದಿದೆ. ಮಂಚಾಲಮ್ಮ ದೇವಿ ಹಾಗೂ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.

    ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮಂತ್ರಾಲಯದಲ್ಲಿ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಭಕ್ತರು ಪರದಾಟವೂ ನಡೆಸಿದ್ದರು. ಸತತ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನಲೆ ಕಳೆದ ನಾಲ್ಕೈದು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಮಠದ ರೂಂಗಳ ಆನ್‌ಲೈನ್ ಬುಕ್ಕಿಂಗ್ ಬಂದ್ ಮಾಡಲಾಗಿದೆ. ಮಠದ ಆಡಳಿತ ಮಂಡಳಿ ಕೇವಲ ಆಫ್‌ಲೈನ್‌ನಲ್ಲಿ ರೂಂ ನೀಡುತ್ತಿದೆ.ಇದನ್ನೂ ಓದಿ: ತಾಯಿಗೆ ಮಕ್ಕಳಿಂದ ಪಾದಪೂಜೆ – ವಿನೂತನವಾಗಿ ಹೊಸ ವರ್ಷ ಆಚರಣೆ

  • ತಾಯಿಗೆ ಮಕ್ಕಳಿಂದ ಪಾದಪೂಜೆ – ವಿನೂತನವಾಗಿ ಹೊಸ ವರ್ಷ ಆಚರಣೆ

    ತಾಯಿಗೆ ಮಕ್ಕಳಿಂದ ಪಾದಪೂಜೆ – ವಿನೂತನವಾಗಿ ಹೊಸ ವರ್ಷ ಆಚರಣೆ

    ಬೆಂಗಳೂರು: ಬೆಂಗಳೂರು ಹೊರವಲಯ ನೆಲಮಂಗಲದ (Nelamangala) ದಾಸನಪುರದ ಅಡ್ವಾರ್ಡ್ ಶಾಲೆಯಲ್ಲಿ ವಿನೂತನವಾಗಿ ಹೊಸವರ್ಷ (New Year) ಆಚರಣೆ ಮಾಡಲಾಗಿದೆ.

    ಮಕ್ಕಳಿಂದ ಹೆತ್ತ ತಾಯಿಗೆ (Mother) ಪಾದ ಪೂಜೆ (Pada Pooja) ಮಾಡುವ ಮೂಲಕ 2025ರನ್ನು ಸ್ವಾಗತಿಸಲಾತಿತು.ಈ ವೇಳೆ ಗೋಮಾತೆ ಹಾಗೂ ಪುಟಾಣಿ ಮಕ್ಕಳಿಗೆ ಪಾದ ಪೂಜೆ ಮಾಡಿ ಫಲತಾಂಭೂಲ ನೀಡಲಾಯಿತು.

    ಶಾಲೆಯ ಸಂಸ್ಥಾಪಕ ರಾಜಣ್ಣ ಕುಟುಂಬದವರು ಮಕ್ಕಳ ಪಾದಪೂಜೆ ಮಾಡಿದರು. ಹಿಂದೂ ಧರ್ಮದ ಪ್ರಕಾರ ನಮ್ಮ ಭರತ ದೇಶದಲ್ಲಿ ಆಧ್ಯಾತ್ಮಿಕವಾಗಿದ್ದು ಪೂಜೆ ಪುರಸ್ಕಾರಕ್ಕೆ ಆಧ್ಯತೆ ನೀಡಿ ಸಂಭ್ರಮ ಮಾಡಲಾಗಿದೆ ಎಂದು ರಾಜಣ್ಣ ತಿಳಿಸಿದರು.

  • ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

    ಪಾರ್ಟಿ ಮೂಡಲ್ಲಿದ್ದ ಪ್ರಿಯತಮನಿಗೆ ಏಕಾಏಕಿ ಚಾಕು ಇರಿದ ಪ್ರೇಯಸಿ!

    ಹಾಸನ: ಪ್ರಿಯತಮೆಯೊಬ್ಬಳು ತನ್ನ ಪ್ರಿಯಕರನೊಂದಿಗೆ ಜಗಳ ಮಾಡಿ, ಏಕಾಏಕಿ ಚಾಕು ಇರಿದ ಘಟನೆ ನಗರದ (Hassan) ಬಿ.ಎಂ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ಬಳಿ ನಡೆದಿದೆ.

    ಚಾಕು ಇರಿತಕ್ಕೊಳಗಾದ ಯುವಕನನ್ನು ಎ.ಗುಡುಗನಹಳ್ಳಿ ಗ್ರಾಮದ ಮನುಕುಮಾರ್ (25) ಎಂದು ಗುರುತಿಸಲಾಗಿದೆ. ಚಾಕು ಇರಿದ ಯುವತಿಯನ್ನು ಭವಾನಿ ಎಂದು ಗುರುತಿಸಲಾಗಿದೆ. ಇಬ್ಬರೂ ಒಂದೇ ಗ್ರಾಮದವರಾಗಿದ್ದಾರೆ. ಮನುಕುಮಾರ್ ಹಾಗೂ ಭವಾನಿ ಜೊತೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದರು. ಪರಸ್ಪರ ಪ್ರೀತಿಸುತ್ತಿದ್ದರು, ಕೆಲ ದಿನಗಳಿಂದ ಇಬ್ಬರು ದೂರವಾಗಿದ್ದರು ಎಂದು ತಿಳಿದು ಬಂದಿದೆ.

    ಮಂಗಳವಾರ ರಾತ್ರಿ ಹೊಸ ವರ್ಷಾಚರಣೆಗೆ ಸ್ನೇಹಿತರ ಜೊತೆ ಖಾಸಗಿ ಹೋಟೆಲ್‍ಗೆ ಮನುಕುಮಾರ್ ಬಂದಿದ್ದ. ಈ ವೇಳೆ ಯುವತಿ ಪದೇ ಪದೇ ಮನುಕುಮಾರ್‌ಗೆ ಕರೆ ಮಾಡಿದ್ದಾಳೆ. ಬಳಿಕ ತಡರಾತ್ರಿ 12:30ರ ವೇಳೆಗೆ ಹೋಟೆಲ್ ಬಳಿ ಬಂದ ಭವಾನಿ, ಅಲ್ಲೇ ಬಿದ್ದಿದ್ದ ಪಾಸ್ ಹಾಕಿಕೊಂಡು ಗೇಟ್ ಒಳಗೆ ಪ್ರವೇಶಿಸಿದ್ದಾಳೆ. ಅಷ್ಟರಲ್ಲಿ ಗೇಟ್ ಬಳಿ ಬಂದ ಮನುಕುಮಾರ್ ಬಂದಿದ್ದಾನೆ. ಆಗ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಸ್ನೇಹಿತರು ಜಗಳ ಬಿಡಿಸಲು ಮುಂದಾಗಿದ್ದಾರೆ. ಅಷ್ಟರಲ್ಲೇ ಯುವತಿ ಆತನಿಗೆ ಏಕಾಏಕಿ ಚಾಕು ಇರಿದಿದ್ದಾಳೆ.

    ಗಾಯಗೊಂಡಿರುವ ಯುವಕನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಕೆ.ಆರ್.ಪುರಂ ಪೆÇಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • ಬೈಕ್‌ಗೆ ಕಾರು ಡಿಕ್ಕಿ – ಹೊಸ ವರ್ಷದ ಮತ್ತಿನಲ್ಲಿದ್ದ ಓರ್ವ ಸಾವು

    ಬೈಕ್‌ಗೆ ಕಾರು ಡಿಕ್ಕಿ – ಹೊಸ ವರ್ಷದ ಮತ್ತಿನಲ್ಲಿದ್ದ ಓರ್ವ ಸಾವು

    ಶಿವಮೊಗ್ಗ: ಚೇಸ್ ಮಾಡಲು ಹೋಗಿ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದ (Shivamogga) ಸಿದ್ದಯ್ಯ ರೋಡ್ ಸರ್ಕಲ್ ಬಳಿ ನಡೆದಿದೆ.

    ಮೃತ ಬೈಕ್ ಸವಾರನ ಗುರುತು ಇನ್ನು ಪತ್ತೆಯಾಗಿಲ್ಲ.ಇದನ್ನೂ ಓದಿ:2025 ನಿಮಗೆ ಯಶಸ್ಸು, ಕೊನೆಯಿಲ್ಲದ ಸಂತೋಷ ತರಲಿ: ಜನತೆಗೆ ಹೊಸ ವರ್ಷದ ಶುಭಕೋರಿದ ಪ್ರಧಾನಿ ಮೋದಿ

    ಹೊಸ ವರ್ಷದ ಮತ್ತಿನಲ್ಲಿ ಕಾರಿಗೆ ಕಲ್ಲು ಹೊಡೆದು ಬೈಕ್ ಸವಾರ ಪರಾರಿಯಾಗುತ್ತಿದ್ದ. ಇದರಿಂದ ಸಿಟ್ಟಗೆದ್ದ ಕಾರು ಚಾಲಕ ಬೈಕ್ ಚೇಸ್ ಮಾಡಿಕೊಂಡು ಬಂದಿದ್ದ. ಈ ವೇಳೆ ಗಾಯತ್ರಿ ಶಾಲೆ ಬಳಿ ಹಂಪ್ ಕಾಣದೆ ಇಬ್ಬರು ಸವಾರರು ಕಾರು ಮತ್ತು ಬೈಕ್‌ನ್ನು ಹಾರಿಸಿದ್ದರು. ಈ ಹಿನ್ನೆಲೆ ಕಾರು ಪಲ್ಟಿಯಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ.

    ಘಟನೆಯಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಕಾರಿನಲ್ಲಿದ್ದ ಇಬ್ಬರು ಹುಡುಗಿಯರು ಪಾರಾಗಿದ್ದು, ಕಾರು ಚಾಲಕನನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದಾರೆ.

    ಸದ್ಯ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇದನ್ನೂ ಓದಿ:ದೇಗುಲದಲ್ಲಿ ಪುರುಷರು ಶರ್ಟ್ ತೆಗೆಯುವ ಪದ್ಧತಿ ಅನಿಷ್ಟ – ಶಿವಗಿರಿ ಶ್ರೀ