Tag: New Rules

  • ಕಬ್ಬನ್ ಪಾರ್ಕ್‌ಗೆ ಹೋಗ್ತೀರಾ – ಈ ರೂಲ್ಸ್ ತಿಳ್ಕೊಳ್ಳಿ

    ಕಬ್ಬನ್ ಪಾರ್ಕ್‌ಗೆ ಹೋಗ್ತೀರಾ – ಈ ರೂಲ್ಸ್ ತಿಳ್ಕೊಳ್ಳಿ

    ಬೆಂಗಳೂರು: ನಗರದ ಕಬ್ಬನ್ ಪಾರ್ಕ್‌ನಲ್ಲಿ (Cubbon Park) ಇದೀಗ ಹೊಸ ನಿಯಮಗಳನ್ನು ಜಾರಿ ಮಾಡಲಾಗಿದ್ದು, ರೀಲ್ಸ್, ಫೋಟೋಶೂಟ್‌ಗಳಿಗೆ ನಿಷೇಧ ಹೇರಲಾಗಿದೆ.ಇದನ್ನೂ ಓದಿ: ಸಿಐಡಿಗೆ ವರ್ಗಾವಣೆಯಾದ್ರೆ ಸಿಸಿಬಿ ಬಂಧಿಸಿದ್ದು ಹೇಗೆ? ಸಿಎಂ ಆದೇಶದಂತೆ ಸೋಸಲೆ ಬಂಧನ: ಹಲವು ಲೋಪಗಳನ್ನು ಉಲ್ಲೇಖಿಸಿ ವಾದ

    ಹೌದು, ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ರೀಲ್ಸ್, ಫೋಟೋಶೂಟ್, ಫಿಲ್ಮ್ ಶೂಟಿಂಗ್, ಊಟ-ತಿಂಡಿ ಸೇವನೆಯನ್ನು ನಿಷೇಧಿಸಲಾಗಿದೆ. ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರು, ಪ್ರವಾಸಿಗರು ಕ್ಯಾಮರಾಗಳನ್ನು ಬಳಸಬಹುದು. ಆದರೆ ಫೋಟೋಶೂಟ್, ಪ್ರೀ/ಪೋಸ್ಟ್ ವೆಡ್ಡಿಂಗ್ ಶೂಟ್ಸ್, ಬೇಬಿ, ಮಾಡಲಿಂಗ್ ಶೂಟ್ಸ್, ವೀಡಿಯೋ, ಕಿರುಚಿತ್ರ, ಚಲನಚಿತ್ರ ಚಿತ್ರೀಕರಣವನ್ನು ನಿಷೇಧಿಸಿದೆ.

    ಒಳ ರಸ್ತೆಗಳಲ್ಲಿ ಭಾರೀ ವಾಹನಗಳಾದ ಬಸ್, ಲಾರಿ, ಗೂಡ್ಸ್ ವಾಹನ, ಆಟೋಗೆ ನಿರ್ಬಂಧ ವಿಧಿಸಲಾಗಿದೆ. ಅಲ್ಲದೆ, ವಾಯು ವಿಹಾರದ ಸಮಯವನ್ನು ಬೆಳಿಗ್ಗೆ 5:30ರಿಂದ 9:00 ಗಂಟೆಯವರೆಗೆ ಹಾಗೂ ಸಂಜೆ 4:30 ರಿಂದ 6:30 ಗಂಟೆಯವರೆಗೆ ನಿಗದಿಪಡಿಸಲಾಗಿದೆ.ಇದನ್ನೂ ಓದಿ: `ಪಬ್ಲಿಕ್ ಟಿವಿ’ ಮನವಿಗೆ ಮಿಡಿದ ಹೃದಯ – ರುಂಡ ಕತ್ತರಿಸಿದ ಬಾಲಕಿ ಕುಟುಂಬಕ್ಕೆ ಹೊಸ ಮನೆ ಹಸ್ತಾಂತರಿಸಿದ ಮಂತರ್ ಗೌಡ

  • ಇಂದಿರಾನಗರ ಪಾರ್ಕ್‌ನಲ್ಲಿ ಹೊಸ ರೂಲ್ಸ್ – ಎದುರು ಬದುರು ವಾಕಿಂಗ್ ನಿಷೇಧ

    ಇಂದಿರಾನಗರ ಪಾರ್ಕ್‌ನಲ್ಲಿ ಹೊಸ ರೂಲ್ಸ್ – ಎದುರು ಬದುರು ವಾಕಿಂಗ್ ನಿಷೇಧ

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳನ್ನು ಚೂಡಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಇಂದಿರಾನಗರ ಪಾರ್ಕ್‌ನಲ್ಲಿ (Indiranagar Park) ಮಹಿಳೆಯರ ಹಾಗೂ ಹಿರಿಯರ ಸುರಕ್ಷತೆಗಾಗಿ ಹೊಸ ರೂಲ್ಸ್‌ಗಳನ್ನು ಜಾರಿ ಮಾಡಿದೆ.

    ಟ್ರಾಫಿಕ್ ಜಂಜಾಟ, ರಣ ಬಿಸಿಲಿಗೆ ಬೆಂಗಳೂರಿಗರು ರೋಸಿ ಹೋಗಿದ್ದಾರೆ. ಜನರಿಗೆ ಆರೋಗ್ಯ ಸಮಸ್ಯೆ ಕಾಡ್ತಿದೆ. ಹೊಟ್ಟೆ ಬೊಜ್ಜು ಕರಗಿಸಲು ಜನರು ಬೆಳಗ್ಗೆ ಮತ್ತು ಸಂಜೆ ಪಾರ್ಕ್‌ನಲ್ಲಿ ಜಾಗಿಂಗ್ ಮಾಡೋದು ಸಾಮಾನ್ಯ. ಆದರೆ ಇಂದಿರಾನಗರದ ಬಿಬಿಎಂಪಿಯ ಪಾರ್ಕ್‌ನಲ್ಲಿ ಜಾಗಿಂಗ್ ನಿಷೇಧ ಹೇರಲಾಗಿದ್ದು, ವಾಕಿಂಗ್‌ಗೂ ರೂಲ್ಸ್ ಮಾಡಲಾಗಿದೆ. ಪಾರ್ಕ್‌ನಲ್ಲಿ `ಜಾಗಿಂಗ್, ಆಟ ಆಡುವುದು, ಪಾಶ್ಚಿಮಾತ್ಯ ಉಡುಪು, ಎದುರು ಬದುರು ಜಾಗಿಂಗ್ ನಿಷೇಧ’ ಎಂದು ಬೋರ್ಡ್ ಹಾಕಲಾಗಿದೆ. ಇದನ್ನೂ ಓದಿ: ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ

    ಇಂದಿರಾನಗರ ಪಾರ್ಕ್ನಲ್ಲಿ ಹೆಣ್ಣುಮಕ್ಕಳು ವಾಕ್ ಮಾಡುವಾಗ ಕೆಲ ಪುರುಷರು ಕೆಟ್ಟ ಉದ್ದೇಶದಿಂದಲೇ ವಿರುದ್ಧ ದಿಕ್ಕಿನಲ್ಲಿ ವಾಕ್ ಮಾಡುತ್ತಿದ್ದರು. ಹೆಣ್ಣುಮಕ್ಕಳು ಮುಖಕ್ಕೆ ನೇರವಾಗಿ ವಾಕಿಂಗ್ ಮಾಡುತ್ತಿದ್ದರು. ಇದರಿಂದ ಹೆಣ್ಣಮಕ್ಕಳಿಗೆ ಅಭದ್ರತೆ ಕಾಡುತ್ತಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಕೂಡ ಕೆಲವರು ಅಳಲು ತೋಡಿಕೊಂಡಿದ್ದರು. ಹಾಗಾಗಿ ಎದುರು ಬದುರಾಗಿ ವಾಕಿಂಗ್‌ಗೆ ನಿಷೇಧ ಹೇರಲಾಗಿದೆ. ಪಾರ್ಕ್‌ನಲ್ಲಿ ಕ್ಲಾಕ್ ವೈಸ್ ಡೈರೆಕ್ಷನ್‌ನಲ್ಲಿ ಮಾತ್ರ ವಾಕ್ ಮಾಡುವಂತೆ ನಿಯಮ ಮಾಡಲಾಗಿದೆ. ಜೊತೆಗೆ ವೆಸ್ಟರ್ನ್ ಡ್ರೆಸ್ ಸಹ ಹಾಕದಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಜಾತಿನಿಂದನೆ, ಲೈಂಗಿಕ ಕಿರುಕುಳ ಆರೋಪ – ಗ್ರಾಮ ಪಂಚಾಯತಿ ಸದಸ್ಯ ಅರೆಸ್ಟ್

    ಈ ಪಾರ್ಕ್‌ಗೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹಿರಿಯರು ವಾಕ್ ಮಾಡುವಾಗ, ಬೇರೆಯವರು ಜಾಗಿಂಗ್ ಮಾಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಜಾಗಿಂಗ್‌ಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಆಸ್ತಿ ಬರೆಸಿ ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಮಕ್ಕಳು!

    ಪಾರ್ಕ್‌ನಲ್ಲಿ ಬಂದು ಕಾರ್ಡ್ ಆಡ್ತಾರೆ ಎನ್ನುವ ಕಾರಣಕ್ಕೆ ಪಾರ್ಕಿಂಗ್‌ನಲ್ಲಿ ಗೇಮಿಂಗ್ ಆಕ್ಟಿವಿಟೀಸ್‌ಗೆ ನಿಷೇಧ ಹೇರಲಾಗಿದೆ. ಸದ್ಯ ಬಿಬಿಎಂಪಿ ಹಾಗೂ ಇಂದಿರಾನಗರದ ಸಾಮಾಜಿಕ ಸೌಲಭ್ಯಗಳ ಸಂಘ ಮಾತುಕತೆ ಮಾಡಿ ಈ ರೀತಿಯ ನಿಯಮ ಮಾಡಿದೆ. ಹೊಸ ರೂಲ್ಸ್‌ನಿಂದ ಪಾರ್ಕ್‌ನಲ್ಲಿ ನೆಮ್ಮದಿಯಾಗಿ ವಾಕ್ ಮಾಡಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  • ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ನ್ಯೂ ರೂಲ್ಸ್ – ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ

    ದಕ್ಷಿಣ ಕನ್ನಡದಲ್ಲಿ ನಾಳೆಯಿಂದ ನ್ಯೂ ರೂಲ್ಸ್ – ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗಿಲ್ಲ ಅವಕಾಶ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರದಿಂದ ಹೊಸ ನಿಯಮ ಜಾರಿಯಾಗಲಿದೆ. ದ್ವಿಚಕ್ರ ವಾಹನದಲ್ಲಿ ಹಿಂಬದಿ ಪುರುಷ ಸವಾರರಿಗೆ ಅವಕಾಶ ಇಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆಯಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ. 18 ವರ್ಷದ ಕೆಳಗಿನ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಓಡಾಡಬಹುದು. ಇಬ್ಬರು ಪುರುಷ ಸವಾರರಿಗೆ ಈ ರೂಲ್ಸ್ ಇದ್ದು, ಕೆಲವು ಬಾರಿ ಹಿಂಬದಿ ಸವಾರರು ದುಷ್ಕೃತ್ಯ ಮಾಡುತ್ತಾರೆ. ಈ ಹಿನ್ನೆಲೆಯಲ್ಲಿ ಈ ನಿಯಮ ಜಾರಿಯಾಗಲಿದೆ ಎಂದು ತಿಳಿಸಿದರು.

    ಒಂದು ವಾರ ಈ ನಿಯಮ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಲಿದೆ. ಬೇರೆ ರಾಜ್ಯದಲ್ಲೂ ಈ ನಿಯಮ ಜಾರಿಗೆ ಮಾಡಿದ್ದರು. ಆಗ ಎಲ್ಲಾ ಪುರಷ ಸವಾರರಿಗೆ ತಡೆ ಮಾಡಿದ್ದರು. ಇಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ಮಕ್ಕಳಿಗೆ ರಿಯಾಯಿತಿ ನೀಡಲಾಗಿದೆ ಎಂದರು. ಇದನ್ನೂ ಓದಿ: ಗಣೇಶ ಕೂರಿಸಲು ಅನುಮತಿ ತೆಗೆದುಕೊಳ್ಳಬೇಡಿ: ಪೊಲೀಸರು, ಸರ್ಕಾರಕ್ಕೆ ಮುತಾಲಿಕ್‌ ಸವಾಲು

    ಪ್ರಕರಣ ಪತ್ತೆ ಹಚ್ಚಲಾಗಿದೆ ಯಾರು ಮಾಡಿದ್ದಾರೆ ಗೊತ್ತಾಗಿದೆ. ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ಮೂರು ಜನರ ವಿಚಾರಣೆ ನಡೆಸಲಾಗುತ್ತಿದೆ. ಯಾರು ಹೊಡೆದಿದ್ದಾರೆ ಗೊತ್ತಿದೆ ಅವರು ಸಿಗಬೇಕು. ಪ್ರಮುಖ ಆರೋಪಿ ಬಂಧಿಸುವ ಈಗಲೂ ಪ್ರಯತ್ನ ನಡೆಯುತ್ತಿದೆ. ಎನ್‍ಐಎ ಕೇಸ್ ಹಸ್ತಾಂತರದ ಬಗ್ಗೆ ಚರ್ಚೆ ನಡೆಯುತ್ತದೆ. ಆರೋಪಿಗಳ ಹಿಡಿಯುವ ಕೆಲಸ ಬಿಡಲ್ಲ. ಮೈನ್ ಆರೋಪಿಯನ್ನು ಶೀಘ್ರ ಹಿಡಿಯುತ್ತೇವೆ ಎಂದು ಹೇಳಿದರು.

    Live Tv
    [brid partner=56869869 player=32851 video=960834 autoplay=true]

  • ಉತ್ತರ ಪ್ರದೇಶದ ಜೈಲು ನಿಯಮಗಳಲ್ಲಿ ಬದಲಾವಣೆ – ಏನಿದೆ ಹೊಸ ರೂಲ್ಸ್?

    ಉತ್ತರ ಪ್ರದೇಶದ ಜೈಲು ನಿಯಮಗಳಲ್ಲಿ ಬದಲಾವಣೆ – ಏನಿದೆ ಹೊಸ ರೂಲ್ಸ್?

    ಲಕ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ ತನ್ನ ಜೈಲು ನಿಯಮಗಳಿಗೆ ತಿದ್ದುಪಡಿ ತಂದಿದ್ದು, 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜೀವಾವಧಿ ಕೈದಿಗಳ ಅವಧಿಪೂರ್ವ ಬಿಡುಗಡೆಯನ್ನು ಪರಿಗಣಿಸಲು ನಿರ್ಧರಿಸಿದೆ. ಹೊಸ ನೀತಿಯ ಪ್ರಕಾರ, ಕೊಲೆಯಂತಹ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಯನ್ನು 16 ವರ್ಷಗಳ ಜೈಲು ಶಿಕ್ಷೆಯು ವಿನಾಯಿತಿ ಇಲ್ಲದೇ ಅಥವಾ 20 ವರ್ಷಗಳ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಬಿಡುಗಡೆ ಮಾಡಲು ಅನುಮತಿ ನೀಡುತ್ತದೆ.

    ರಾಜ್ಯ ಸರ್ಕಾರದ ಹಿಂದಿನ ಜೈಲು ನಿಯಮದ ಪ್ರಕಾರ, ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಕೈದಿಗಳನ್ನು ಅವಧಿಪೂರ್ವ ಬಿಡುಗಡೆಗೆ ಪರಿಗಣಿಸುವ ಮೊದಲು ಅವರು 60 ವರ್ಷ ವಯಸ್ಸನ್ನು ತಲುಪಬೇಕು ಎಂದು ಶರತ್ತು ವಿಧಿಸಿತ್ತು, ಇದನ್ನು ಈಗ ಸರ್ಕಾರ ಬದಲಾಯಿಸಿದೆ. ಇದನ್ನೂ ಓದಿ: ಪ್ರವಾದಿಗೆ ಅವಹೇಳನಗೈದ ನೂಪುರ್ ಶರ್ಮಾರನ್ನು ಗಲ್ಲಿಗೇರಿಸಿ: ಎಐಎಂಐಎಂ

    ಪ್ರಸ್ತುತ, ಯುಪಿ ಜೈಲುಗಳಲ್ಲಿ ಸುಮಾರು 1.14 ಲಕ್ಷ ಕೈದಿಗಳಿದ್ದು, ಎಲ್ಲ ಜೈಲುಗಳ ಸಾಮರ್ಥ್ಯ ಒಟ್ಟು 70,000 ಆಗಿದೆ. ಸುಮಾರು 30,000 ಶಿಕ್ಷೆಗೊಳಗಾದ ಕೈದಿಗಳಿದ್ದು, ಅವರಲ್ಲಿ ಸುಮಾರು 12,000 ಜನರು ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿದ್ದಾರೆ. ಹೊಸ ನೀತಿಯು ಜೀವಾವಧಿ ಶಿಕ್ಷೆಯನ್ನು ಎದುರಿಸುತ್ತಿರುವ ಹೆಚ್ಚಿನ ಸಂಖ್ಯೆಯ ಅಪರಾಧಿಗಳಿಗೆ ಪ್ರಯೋಜನವನ್ನು ನೀಡುತ್ತದೆ ಮತ್ತು ಇದು ರಾಜ್ಯಾದ್ಯಂತ ಜನನಿಬಿಡ ಜೈಲುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಯುಪಿ ಡೈರೆಕ್ಟರ್ ಜನರಲ್ (ಕಾರಾಗೃಹ) ಆನಂದ್ ಕುಮಾರ್ ಹೇಳಿದ್ದಾರೆ.

    KILLING CRIME

    ಹಿಂದಿನ ನೀತಿಗಳಂತೆ, ಹೊಸ ನೀತಿಯಲ್ಲಿಯೂ ಕೊಲೆಗಾಗಿ ಅಪಹರಣ, ವ್ಯಕ್ತಿಯನ್ನು ಘೋರವಾದ ನೋವು ಮತ್ತು ಗುಲಾಮಗಿರಿಗೆ ಒಳಪಡಿಸುವ ಸಲುವಾಗಿ ಅಪಹರಣ, ಅಪ್ರಾಪ್ತ ಮತ್ತು ವಯಸ್ಕ ಮಹಿಳೆಯರ ಮಾರಾಟ ಮತ್ತು ಖರೀದಿಯಂತಹ ಅಪರಾಧಗಳಿಗಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಕೈದಿಗಳ ಬಿಡುಗಡೆಯನ್ನು ಪರಿಗಣಿಸಲು ಸರ್ಕಾರ ನಿರ್ಧರಿಸಿದೆ.

    jail

    ವೇಶ್ಯಾವಾಟಿಕೆ, ಅತ್ಯಾಚಾರ ಮತ್ತು ಇತರ ಅಪರಾಧಿಗಳು 20 ವರ್ಷಗಳವರೆಗೆ ವಿನಾಯಿತಿ ಇಲ್ಲದೆ ಮತ್ತು 25 ವರ್ಷಗಳವರೆಗೆ ಉಪಶಮನದೊಂದಿಗೆ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಮಾತ್ರ ಬಿಡುಗಡೆ ಮಾಡಲು ತೀರ್ಮಾನಿಸಿದೆ. ಸಾಮೂಹಿಕ ಹತ್ಯೆಯ ಆರೋಪಕ್ಕಾಗಿ ಜೀವಾವಧಿ ಶಿಕ್ಷೆಗೆ ಒಳಗಾದ ಅಪರಾಧಿಗಳು 25 ವರ್ಷಗಳವರೆಗೆ ವಿನಾಯಿತಿ ಇಲ್ಲದೆ ಮತ್ತು 30 ವರ್ಷಗಳವರೆಗೆ ಉಪಶಮನದೊಂದಿಗೆ ಜೈಲು ಶಿಕ್ಷೆಯನ್ನು ಅನುಭವಿಸಿದ ನಂತರ ಬಿಡುಗಡೆಯಾಗಲಿದ್ದಾರೆ. ಇದನ್ನೂ ಓದಿ: ಕಲ್ಲು ತೂರಿದವರಿಗೆ ಬುಲ್ಡೋಜರ್‌ ಶಾಕ್‌ ಕೊಟ್ಟ ಯೋಗಿ – ಅಕ್ರಮ ಕಟ್ಟಡಗಳು ಧ್ವಂಸ

    ಕೈದಿ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉಂಟು ಮಾಡುವ ಸಾಧ್ಯತೆಗಳು ಕಂಡು ಬಂದರೆ ಅಥವಾ ಭಯೋತ್ಪಾದನೆ, ದೇಶದ್ರೋಹದ ಆರೋಪಗಳಿದ್ದರೇ ಕೈದಿಗಳ ಬಿಡುಗಡೆಯನ್ನು ರದ್ದುಗೊಳಿಸಬಹುದು ಎಂದು ರಾಜ್ಯ ಸರ್ಕಾರ ಶರತ್ತು ಹಾಕಿದೆ.

  • ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್

    ರಾಜ್ಯ ಸರ್ಕಾರದಿಂದ ಸರ್ಕಾರಿ ನೌಕರರಿಗೆ ಹೊಸ ರೂಲ್ಸ್

    ಬೆಂಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗದ ಹಿನ್ನೆಲೆ ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

    ಯಾವಾಗ ಕೆಲಸಕ್ಕೆ ಹೋಗಬೇಕು? ಯಾವಾಗ ಹೋಗಬಾರದು? ಸರ್ಕಾರಿ ನೌಕರರು ವಾರಕ್ಕೆ ಎಷ್ಟು ದಿನ ಕೆಲಸ ಮಾಡಬೇಕು ಎಂಬ ನಿಯಮಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.

    ನಿಯಮಗಳೇನು?:
    ಸರ್ಕಾರಿ ನೌಕರರಿಗೆ ಇನ್ಮುಂದೆ ಐಟಿ-ಬಿಟಿ ಉದ್ಯೋಗಿಗಳ ರೀತಿ ಕೆಲಸ ನೀಡಲಾಗುತ್ತದೆ. ಅಂದ್ರೆ ವಾರಕ್ಕೆ 6 ದಿನ ಕೆಲಸ ಮಾಡಂಗಿಲ್ಲ, ವಾರಕ್ಕೆ ಬರೀ 5 ದಿನ ಮಾತ್ರ ಕೆಲಸ ಇರುತ್ತದೆ. ಸರ್ಕಾರಿ ನೌಕರರಿಗೆ ಶನಿವಾರ, ಭಾನುವಾರ ರಜೆ ಎರಡು ದಿನ ರಜೆ ಇರಲಿದೆ. ಜುಲೈ 10ರಿಂದ ತಿಂಗಳ ನಾಲ್ಕೂ ಶನಿವಾರಗಳೂ ಸರ್ಕಾರಿ ರಜೆ ಸಿಗಲಿದೆ. ಎಲ್ಲ ಶನಿವಾರ ರಜೆಯು ಸದ್ಯಕ್ಕೆ ಜುಲೈ ತಿಂಗಳಲ್ಲಿ ಅನ್ವಯವಾಲಿದೆ.

    ಸರ್ಕಾರಿ ನೌಕರರು ಆಯಾ ಏರಿಯಾಗಳಿಗೆ ಅನುಗುಣವಾಗಿ ಒಂದು ದಿನ ಬಿಟ್ಟು ಒಂದು ದಿನ ಕೆಲಸ ಮಾಡಬೇಕು. ಈ ನಿರ್ಧಾರವನ್ನು ಆಯಾ ಸ್ಥಳೀಯ ಕಚೇರಿಗಳ ಮುಖ್ಯಸ್ಥರೇ ತೆಗೆದುಕೊಳ್ಳಬಹುದು. ವಾರದ 5 ದಿನಗಳು ಕಚೇರಿ ಇರಬೇಕು. ಆದರೆ ನೌಕರರಿಗೆ ಒಂದು ದಿನ ಬಿಟ್ಟು ಒಂದು ದಿನ ಕೆಲಸ ನೀಡಬೇಕು.

    ವಿಶೇಷ ಸೂಚನೆ ನೀಡಿರುವ ರಾಜ್ಯ ಸರ್ಕಾರವು, ವಾರಕ್ಕೆ 2 ದಿನ ರಜೆ ಎಲ್ಲ ಸರ್ಕಾರಿ ಕಚೇರಿಗಳಿಗೆ ಅನ್ವಯವಾಗಲ್ಲ. ಸೋಂಕು ಹೆಚ್ಚಾದ ಪ್ರದೇಶಗಳಲ್ಲಿ ಆಯಾ ಸ್ಥಳೀಯ ಮುಖ್ಯಸ್ಥರು ಕ್ರಮ ಕೈಗೊಳ್ಳಬಹುದು. ದಿನಕ್ಕೆ ಶೇ.50ರಷ್ಟು ನೌಕರರು ಮಾತ್ರ ಕಾರ್ಯ ನಿರ್ವಹಿಸಬೇಕು. ಇವತ್ತು ಬಂದವರು, ನಾಳೆ ಬರುವಂತಿಲ್ಲ. ಒಂದು ದಿನ ಗ್ಯಾಪ್ ಮಾದರಿಯಲ್ಲಿ ಕೆಲಸ ನಿರ್ಹಹಿಸಬೇಕು ಎಂದು ತಿಳಿಸಲಾಗಿದೆ.

  • ಉಡುಪಿಯಲ್ಲಿ ಎಣ್ಣೆ ಪ್ರಿಯರಿಗೆ ಶಾಕ್ – ಹೊಸ ರೂಲ್ಸ್ ಜಾರಿ

    ಉಡುಪಿಯಲ್ಲಿ ಎಣ್ಣೆ ಪ್ರಿಯರಿಗೆ ಶಾಕ್ – ಹೊಸ ರೂಲ್ಸ್ ಜಾರಿ

    ಉಡುಪಿ: ಗ್ರೀನ್ ಝೋನ್‍ನಲ್ಲಿ ಉಡುಪಿ ಜಿಲ್ಲೆ ಇದ್ದರೂ ಮದ್ಯದಂಗಡಿಗೆ ಬ್ರೇಕ್ ಹಾಕಲಾಗಿದೆ. ಉಡುಪಿಯಲ್ಲಿ ಮದ್ಯಕ್ಕೂ ಮಧ್ಯಾಹ್ನದ ಲಗಾಮು ಹಾಕಲಾಗಿದೆ.

    ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿ ಓಪನ್ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ನಿಯಮದ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ ಏಳರವರೆಗೆ ಎಣ್ಣೆ ಶಾಪ್‍ಗಳು ತೆರೆದಿರಬೇಕು. ಆದರೆ ಉಡುಪಿಯಲ್ಲಿ ಮಧ್ಯಾಹ್ನ ಒಂದಕ್ಕೆ ಸೀಮಿತ ಮಾಡಲಾಗಿದೆ. ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಸುಳಿವು ನೀಡಿದ್ದಾರೆ.

    ನಮ್ಮ ಜಿಲ್ಲೆಯಲ್ಲಿ ಮದ್ಯವನ್ನು ಸಂಜೆಯ ತನಕ ಮಾರಾಟ ಮಾಡುವುದಿಲ್ಲ. ವೈನ್ ಶಾಪ್ ಎಂಎಸ್‍ಐಎಲ್‍ಗಳನ್ನು ಮಧ್ಯಾಹ್ನದವರೆಗೆ ಮಾತ್ರ ತೆರೆಯುತ್ತೇವೆ. ನಮ್ಮ ಜಿಲ್ಲೆಗೆ ವೈನ್ ಶಾಪ್ ಮದ್ಯದಂಗಡಿ ಮುಖ್ಯ ಅಲ್ಲ. ಜಿಲ್ಲೆಯ ಜನರ ಆರೋಗ್ಯ ನಮಗೆ ಮುಖ್ಯ. ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಗಳನ್ನು ಒಂದು ವಾರ ಓಪನ್ ಮಾಡುವುದಿಲ್ಲ. ಸಲೂನ್ ಪಾರ್ಲರ್ ತೆರೆಯಲು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿವೆ ಎಂದು ತಿಳಿಸಿದರು.

    ಕೇಂದ್ರದ ನಿರ್ದೇಶನ ಇದ್ದರೂ, ಜನರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಲಾಕ್‍ಡೌನ್ ಮುಗಿಯುವ ತನಕ ಜಿಲ್ಲೆಯಲ್ಲಿ ಯಾವುದೇ ಡೆಂಟಲ್ ಕ್ಲಿನಿಕ್ ತೆರೆಯಲ್ಲ. ರಾಜ್ಯ ಸರ್ಕಾರ ಹೇಳಿದರೂ ನಮ್ಮ ಜಿಲ್ಲೆಯಲ್ಲಿ ಒಂದು ಗಂಟೆಗೆ ಮದ್ಯದಂಗಡಿ ಬಂದ್ ಆಗುತ್ತದೆ ಎಂದು ರಘುಪತಿ ಭಟ್ ಹೇಳಿದರು.

    ಅಗತ್ಯ ವಸ್ತುಗಳಿಗೆ ಒಂದು ಗಂಟೆಯೊಳಗೆ ವಿನಾಯಿತಿ ಕೊಟ್ಟು ಮದ್ಯದಂಗಡಿಯನ್ನು ಸಂಜೆಯವರೆಗೆ ತೆರೆಯುವುದು ಸರಿಯಲ್ಲ ಎಂಬ ಚರ್ಚೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನ ಪ್ರತಿನಿಧಿ ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

  • ಗುರುವಾರದಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲ- ಏನಿದೆ, ಏನಿಲ್ಲ?

    ಗುರುವಾರದಿಂದ ಕರ್ನಾಟಕದಲ್ಲಿ ಲಾಕ್‍ಡೌನ್ ಭಾಗಶಃ ಸಡಿಲ- ಏನಿದೆ, ಏನಿಲ್ಲ?

    – ಮದ್ಯ ಪ್ರಿಯರಿಗೆ ಸಿಗಲ್ಲ ಎಣ್ಣೆ

    ಬೆಂಗಳೂರು: ಹೆಮ್ಮಾರಿ ಕೊರೊನಾ ವೈರಸ್‍ನಿಂದಾಗಿ ಹೇರಿದ್ದ ಲಾಕ್‍ಡೌನ್ ಗುರುವಾರದಿಂದ ಭಾಗಶಃ ಸಡಿಲಗೊಳ್ಳಲಿದೆ.

    ನಾಳೆಯಿಂದ ಕಟೈಂನ್‍ಮೆಂಟ್ ವಲಯ ಹೊರತು ಪಡಿಸಿ ಉಳಿದ ಕಡೆಯಲ್ಲಿ ಲಾಕ್‍ಡೌನ್ ನಿಯಮ ಸಡಿಲಗೊಳ್ಳಲಿದೆ. ಈ ಮೂಲಕ ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಕೈಗಾರಿಕೆ, ಕೆಲ ಸರ್ಕಾರಿ ಕಚೇರಿಗಳು ತೆರೆಯಲಿವೆ. ಆದರೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ. ಸಾರ್ವಜನಿಕ ಸ್ಥಳದಲ್ಲಿ 5ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂದು ಸರ್ಕಾರ ಸೂಚಿಸಿದೆ.

    ಏನಿರುತ್ತೆ?:
    ಸೇಫ್ ಝೋನ್‍ನಲ್ಲಿ ಕಟ್ಟಡ ನಿರ್ಮಾಣ, ರಸ್ತೆ ಕಾಮಗಾರಿಗೆ ಅನುಮತಿ ನೀಡಲಾಗಿದೆ. ಈ ನಿಟ್ಟಿನಲ್ಲಿ ಸಿಮೆಂಟ್, ಜೆಲ್ಲಿ, ಗೂಡ್ಸ್ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ವೈಯಕ್ತಿಕ ಪಾಸ್ ಇದ್ದರೆ ಮಾತ್ರ ಸಂಚಾರಕ್ಕೆ ಅನುಮತಿ ಇರುತ್ತದೆ. ಸ್ವ ಉದ್ಯೋಗ ಮಾಡುವ ವ್ಯಕ್ತಿಗಳಿಗೆ, ಎಲೆಕ್ಟ್ರೀಷಿಯನ್ಸ್, ಐಟಿ ರಿಪೇರಿ, ಪ್ಲಂಬರ್, ಮೋಟಾರ್ ಮೆಕಾನಿಕ್ಸ್, ಕಾರ್ಪೆಂಟರ್ಸ್ ಗಳಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಿಲಾಗಿದೆ.

    ಗೂಡ್ಸ್ ರೈಲುಗಳ ಮೂಲಕ ಅಗತ್ಯ ವಸ್ತು ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ತುರ್ತು ಅಗತ್ಯ ಸೇವೆಗಳ ಸಾಗಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಸೇವೆಗಳಿಗಾಗಿ ವಾಹನ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಕಾರಿನಲ್ಲಿ ಕೇವಲ ಇಬ್ಬರು ಮಾತ್ರ ಪ್ರಯಾಣಿಸಬೇಕು.

     

    ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆಗೆ ಅವಕಾಶ ನೀಡಲಾಗಿದೆ. ಅಗತ್ಯ ಸರ್ಕಾರಿ ಇಲಾಖೆಗಳನ್ನು ತೆರೆಯಬೇಕು. ಆದರೆ ಶೇ.33ರಷ್ಟು ಸಿಬ್ಬಂದಿ ಮಾತ್ರ ಕೆಲಸ ನಿರ್ವಹಿಸಬೇಕು. ಅಗತ್ಯವಸ್ತುಗಳನ್ನು ಆನ್‍ಲೈನ್‍ನಲ್ಲಿ ಖರೀದಿ ಮಾಡಬಹುದು.

    ಏನಿಲ್ಲ?:
    ಮೆಟ್ರೋ, ರೈಲು, ಬೈಕ್ ಸಂಚಾರ ಇರುವುದಿಲ್ಲ. ಮೇ 3ರವರೆಗೆ ಬಿಎಂಟಿಸಿ, ಕೆಎಸ್‍ಆರ್ ಟಿಸಿ ಬಸ್ ಸಂಚಾರ ಇರುವುದಿಲ್ಲ. ಮದ್ಯ ಪ್ರಿಯರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಮದ್ಯ ಮಾರಾಟ ಮೇ 3ರವರೆಗೂ ಇರುವುದಿಲ್ಲ. ಹೋಟೆಲ್, ರೆಸ್ಟೋರೆಂಟ್‍ಗಳನ್ನು ತೆರೆಯುವಂತಿಲ್ಲ. ಯಾವುದೇ ಸಭೆ, ಕಾರ್ಯಕ್ರಮ ನಡೆಸುವಂತಿಲ್ಲ. ಅಂತರ ಜಿಲ್ಲೆ ಸಂಚಾರ ಇರುವುದಿಲ್ಲ.

    ಈ ಮೊದಲು ಐಟಿ-ಬಿಟಿ ಕಂಪನಿ ತೆರೆಯಲು ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಹೊಸ ಪ್ರಕಟಣೆ ಹೊರಡಿಸಿರುವ ಸರ್ಕಾರವು ಕನಿಷ್ಠ ಸಿಬ್ಬಂದಿ ಆಧಾರದ ಮೇಲೆ  ಕಂಪನಿ ತೆರೆಯಬಹುದು ಎಂದು ತಿಳಿಸಿದೆ.