Tag: new moon

  • ಅಮಾವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ

    ಅಮಾವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ

    ರಾಯಚೂರು: ಭೀಮನ ಅಮಾವಾಸ್ಯೆ ಹಾಗೂ ಶ್ರಾವಣ ಆರಂಭ ಹಿನ್ನೆಲೆ ರಾಯಚೂರಿನಲ್ಲಿ ಕೊರೊನಾ ಹರಡುವಿಕೆ ಭೀತಿ ಮರೆತು ಭಕ್ತರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ.

    ನಗರದ ಉರುಕುಂದಿ ಈರಣ್ಣ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಾಕ್‍ಡೌನ್ ಮಧ್ಯೆ ಅಮಾವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಇದರಿಂದ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲವನ್ನೂ ಮರೆತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ.

    ಮುನ್ನೆಚ್ಚರಿಕೆಯಾಗಿ ಕೆಲ ದೇವಾಲಯಗಳಿಗೆ ಬೀಗ ಹಾಕಲಾಗಿದೆ. ನಗರದ ಚಂದ್ರಮೌಳೇಶ್ವರ ದೇವಾಲಯ ಸೇರಿ ಕೆಲವಡೆ ಭಕ್ತರಿಗೆ ನಿರ್ಭಂದ ಹೇರಿದ್ದರೂ ಭಕ್ತರು ದೇವಾಲಯಕ್ಕೆ ಬಂದು ಹೋಗುತ್ತಿದ್ದಾರೆ. ಅಮಾವಾಸ್ಯೆ ನಿಮಿತ್ಯ ತೆಂಗಿನ ಕಾಯಿ, ಹೂ, ಹಣ್ಣು ಖರೀದಿಗೆ ಮಾರ್ಕೆಟ್‍ನಲ್ಲಿ ಜನ ಮುಗಿಬಿದ್ದಿದ್ದರು. ರಾಯಚೂರು, ಸಿಂಧನೂರು ನಗರಗಳಲ್ಲಿ ಜುಲೈ 22ರವರೆಗೆ ಲಾಕ್‍ಡೌನ್ ಇದ್ದರೂ ಜನರಿಗೆ ಯಾವುದೂ ಲೆಕ್ಕಕ್ಕಿಲ್ಲ ಎನ್ನುವಂತಾಗಿದೆ.

    ನಗರದ ತೀನ್ ಕಂದಿಲ್‍ನಿಂದ ಸರಫ್ ಬಜಾರ್ ವರೆಗೆ ವ್ಯಾಪರ ಜೋರಾಗಿ ನಡೆದಿತ್ತು. ಜನಸಂದಣಿ ಹೆಚ್ಚಾಗುತ್ತಿದ್ದಂತೆ ಪೊಲೀಸರು ಬಂದು ಜನರನ್ನು ಚದುರಿಸಿದ್ದಾರೆ. ಪೊಲೀಸರಿಗೆ ಹೆದರಿ ಕೆಲ ವ್ಯಾಪಾರಿಗಳು ಅಂಗಡಿಗಳನ್ನು ಹಾಗೇ ಬಿಟ್ಟು ಓಡಿಹೋಗಿದ್ದಾರೆ. ಉಳಿದವರು ವ್ಯಾಪಾರ ನಿಲ್ಲಿಸಿ ಅಂಗಡಿಗಳನ್ನು ಮುಚ್ಚಿದ್ದಾರೆ.

  • ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

    ಅಮಾವಾಸ್ಯೆಯ ಬಳಿಕ ಅಧಿಕಾರ ಸ್ವೀಕಾರ – ಶ್ರೀರಾಮುಲು

    ವಿಜಯಪುರ: ಅಮಾವಾಸ್ಯೆ ಕಳೆದ ಮೇಲೆ ಅಧಿಕಾರ ತೆಗೆದುಕೊಳ್ತೇನೆ. ಅಮಾವಾಸ್ಯೆ ಕಾರಣ ಆರೋಗ್ಯ ಸಚಿವ ಸ್ಥಾನದ ಚಾರ್ಜ್ ತೆಗೆದುಕೊಂಡಿಲ್ಲ ಎಂದು ನೂತನ ಆರೋಗ್ಯ ಸಚಿವ ಶ್ರೀರಾಮುಲು ವಿಜಯಪುರದಲ್ಲಿ ಹೇಳಿದರು.

    ಈ ಹೇಳಿಕೆಯಿಂದ ಸಚಿವ ಶ್ರೀರಾಮುಲುಗೆ ಅಮವಾಸ್ಯೆ ಭಯ ಕಾಡುತ್ತಿದಿಯಾ ಎಂಬ ಮಾತುಗಳು ಎಲ್ಲಡೆ ಈಗ ದಟ್ಟವಾಗಿದ್ದು, ಮೂಢ ನಂಬಿಕೆಗೆ ಶ್ರೀರಾಮುಲು ಮೊರೆ ಹೋದರಾ ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿಬರುತ್ತಿವೆ.

    ಇದೇ ವೇಳೆ ರಾಮುಲು 4 ಸಾವಿರ ಬೆಲೆಯ ರೋಟೋ ಔಷಧಿ ಇನ್ನು ಮುಂದೆ ಉಚಿತ ಎಂದು ಘೋಷಣೆ ಮಾಡಿದರು. ಹೆರಿಗೆ ನಂತ್ರ ಮಗುವಿಗೆ ನೀಡುವ ಓರಲ್ ಔಷಧಿ ರೋಟೊ ಆಗಿದ್ದು, ಇನ್ನು ಮುಂದೆ ಸರ್ಕಾರಿ ಆಸ್ಪತ್ರೆಯಲ್ಲಿ ರೋಟೋ ಉಚಿತವಾಗಿ ಹಾಕಲಾಗುತ್ತದೆ. ಸಾವಿರಾರು ಹಣ ಕೊಟ್ಟು ಖಾಸಗಿ ಆಸ್ಪತ್ರೆಯಲ್ಲಿ ರೋಟೋ ಔಷಧಿ ಹಾಕಿಸಬೇಡಿ ಎಂದು ಜನರಲ್ಲಿ ಮನವಿ ಮಾಡಿದರು.

  • ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಸ್ಮಶಾನಕ್ಕೆ ಹೋಗಿ ಪೂರ್ವಜರ ಅಸ್ಥಿಪಂಜರ ತಿಂತಾರೆ ಮಕ್ಕಳು, ಮೊಮ್ಮಕ್ಕಳು- ಕೋಲಾರದ ಗಡಿಯಲ್ಲಿ ವಿಚಿತ್ರ ಆಚರಣೆ

    ಕೋಲಾರ: ಇದು ಜನ ಮರಳೋ ಜಾತ್ರೆ ಮರಳೋ ಗೊತ್ತಿಲ್ಲ. ಮಕ್ಕಳು, ಮರಿ ಮಕ್ಕಳು ಸ್ಮಶಾನಕ್ಕೆ ತೆರಳಿ ಪೂರ್ವಜರ ಅಸ್ಥಿಪಂಜರ ತಿನ್ನುವ ವಿಚಿತ್ರ ಆಚರಣೆ ಕೋಲಾರ ಜಿಲ್ಲೆಯ ಗಡಿಯಲ್ಲಿ ನಡೀತಿದೆ.

    ಪ್ರತಿ ವರ್ಷ ಶಿವರಾತ್ರಿ ಅಮವಾಸ್ಯೆ ದಿನ ಗಡಿಯಲ್ಲಿ ಈ ಆಚರಣೆ ನಡೀತಿದೆ. ತಮಿಳುನಾಡು ಕೃಷ್ಣಗಿರಿ ಜಿಲ್ಲೆಯ ಕೊಲ್ಲಂ ಗ್ರಾಮದಲ್ಲಿ ಅಮವಾಸ್ಯೆ ದಿನ ಕುಟುಂಬಸ್ಥರೆಲ್ಲ ತೆರಳಿ ಪೂರ್ವಜರ ಸಮಾಧಿಗೆ ಪೂಜೆ ಸಲ್ಲಿಸಿ, ನಂತರ ಸಮಾಧಿಯಲ್ಲಿರುವ ಹಿರಿಯರ ಅಸ್ಥಿಪಂಜರ ತೆಗೆದು ಮೂಳೆ ಬುರಡೆ ತಿನ್ನುತ್ತಾರೆ.

    ಯಾವುದೇ ದುಷ್ಟ ಶಕ್ತಿಗಳು ಬರದಂತೆ ಹಾಗೂ ಹಿರಿಯರು ಸದಾ ಕಾಪಾಡುತ್ತಾರೆ ಎಂಬುದು ಇವರ ನಂಬಿಕೆಯಾಗಿದ್ದು, ಪ್ರತಿವರ್ಷ ನಡೆಯುವ ಒಂದು ವಿಶಿಷ್ಟ ಜಾತ್ರೆಯಲ್ಲಿ ಹೀಗೊಂದು ಆಚರಣೆ ಮಾಡ್ತಿದ್ದಾರೆ.