Tag: new ministers

  • ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

    ಹೊಸ ಸಚಿವರಿಗೆ ನಯಾ ‘ಟೈಂ ಟೇಬಲ್’ ಕೊಟ್ಟ ಕಟೀಲ್

    ಬೆಂಗಳೂರು: ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ.

    ಈ ಟೈಂ ಟೇಬಲ್‍ನೊಂದಿಗೆ ಮೌಖಿಕ ಆದೇಶ ಹೊರಡಿಸಿರುವ ನಳಿನ್, ವಾರಕ್ಕೊಂದು ಬಾರಿ ಎರಡು ಗಂಟೆ ಟೈಂ ಪಕ್ಷದ ಕಚೇರಿಗೆ ಬರಲೇಬೇಕು. ಜೊತೆಗೆ ಕಾರ್ಯಕರ್ತರ ಸಮಸ್ಯೆ ಆಲಿಸಲೇಬೇಕು ಎಂದು ಹೊಸ ಸಚಿವರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.

    ಕಚೇರಿಗೆ ಬಂದು ಮುಕ್ತವಾಗಿ ಸಭೆಯಲ್ಲಿ ಭಾಗಿಯಾಗಬೇಕು. ವರಿಷ್ಠರ ಜೊತೆಗೆ ಹೊಸ ಸಚಿವರು ಸಹ ಕಾರ್ಯಕರ್ತರ ಸಮಸ್ಯೆ, ಅಹವಾಲು ಆಲಿಸಬೇಕು ಎಂದು ಆದೇಶ ಮಾಡಿದ್ದಾರಂತೆ. ಇಂದು ನಾರಾಯಣಗೌಡ ಕಚೇರಿಗೆ ಬರುತ್ತಿದ್ದ ಹಾಗೆ ಈ ಸೂಚನೆಯ ಬಗ್ಗೆ ಸಿಬ್ಬಂದಿ ಮಾಹಿತಿ ನೀಡಿದರು. ಇದಕ್ಕೆ ಒಪ್ಪಿಗೆ ಸೂಚಿಸಿದ ನಾರಾಯಣ ಗೌಡ, ಪಕ್ಷದ ವರಿಷ್ಠರು ಈ ಟೈಂ ಟೇಬಲ್ ಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ನಮಗೂ ಮೌಖಿಕ ಆದೇಶ ಬಂದಿದೆ. ಇದನ್ನು ಪಾಲನೆ ಮಾಡುತ್ತೇವೆ ಎಂದರು.

  • ನೂತನ ಸಚಿವರಿಗೆ ಒಳ್ಳೆಯದಾಗಲಿ, ಸಿಎಂಗೆ ಕೈಕಾಲು ಕಟ್ಟಿ ಹಾಕಿ ಕೀರಿಟ ಇಟ್ಟಿದ್ದಾರೆ: ಸಿದ್ದರಾಮಯ್ಯ

    ನೂತನ ಸಚಿವರಿಗೆ ಒಳ್ಳೆಯದಾಗಲಿ, ಸಿಎಂಗೆ ಕೈಕಾಲು ಕಟ್ಟಿ ಹಾಕಿ ಕೀರಿಟ ಇಟ್ಟಿದ್ದಾರೆ: ಸಿದ್ದರಾಮಯ್ಯ

    ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಸಚಿವ ಸಂಪುಟದ ವಿಸ್ತಾರಣೆ ಕಾರ್ಯ ಇಂದು ನಡೆಯಿತು. ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಶಾಸಕರ ಪೈಕಿ 10 ಜನರಿಗೆ ಮಂತ್ರಿಗಿರಿ ಸಿಕ್ಕಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮದೇ ದಾಟಿಯಲ್ಲಿ ಟ್ವೀಟ್ ಮಾಡಿದ್ದಾರೆ.

    ಮೊದಲ ಟ್ವೀಟ್‍ನಲ್ಲಿ ಸಿದ್ದರಾಮಯ್ಯ ಅವರು, ಸಂಪುಟ ವಿಸ್ತರಣೆ ಬಗ್ಗೆ ಸಂತೋಷ ಪಡುವುದೇನಿಲ್ಲ. ತಾಂತ್ರಿಕವಾಗಿ ಚುನಾವಣೆಯಲ್ಲಿ ಗೆದ್ದು ಶಾಸಕರಾದರೂ ನೈತಿಕವಾಗಿ ಸೋತಿರುವ ಅವರು ಈಗಲೂ ಅನರ್ಹರೇ ಆಗಿದ್ದಾರೆ. ನೂತನ ಸಚಿವರಿಗೆ ಒಳ್ಳೆಯದಾಗಲಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೈಕಾಲನ್ನು ಹೈಕಮಾಂಡ್ ಕಟ್ಟಿಹಾಕಿ ತಲೆಗೆ ಮಾತ್ರ ಕಿರೀಟ ಇಟ್ಟು ಕೂರಿಸಿದೆ. ಅವರ ಅಸಹಾಯಕತೆಯನ್ನು ನೋಡಿದರೆ ಅಯ್ಯೋ ಪಾಪ ಅನಿಸುತ್ತೆ. ಮಾಡಿದುಣ್ಣೋ ಮಹರಾಯ ಎಂದು ಟ್ವೀಟ್ ಮೂಲಕ ಕಟುಕಿದ್ದಾರೆ.

    ಇದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಚಿಕ್ಕಬಳ್ಳಾಪುರ ಭಾಗದ ನೀರಿನ ಸಮಸ್ಯೆ ಪರಿಹರಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ 44 ಕೆರೆಗಳಿಗೆ ನೀರು ತುಂಬಿಸುವ 900 ಕೋಟಿ ರೂ. ವೆಚ್ಚದ ಎನ್‍ಎಚ್ ವ್ಯಾಲಿ ಯೋಜನೆಯನ್ನು ರೂಪಿಸಿ, ಅನುಷ್ಠಾನಗೊಳಿಸಿದ್ದೆ. ಯೋಜನೆಯ ಕಾಮಗಾರಿ ಪೂರ್ಣಗೊಂಡು ಇಂದು ಕಂದವಾರ ಕೆರೆಗೆ ನೀರು ಹರಿಯುತ್ತಿರುವುದು ನನ್ನಲ್ಲಿ ಸಂತಸ ಮೂಡಿಸಿದೆ ಎಂದು ತಿಳಿಸಿದ್ದರು.

  • ಯಡಿಯೂರಪ್ಪನನ್ನು ನೋಡಿದ್ರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ: ಸಿದ್ದರಾಮಯ್ಯ

    ಯಡಿಯೂರಪ್ಪನನ್ನು ನೋಡಿದ್ರೆ ನನಗೆ ಅಯ್ಯೋ ಪಾಪ ಅನ್ನಿಸುತ್ತೆ: ಸಿದ್ದರಾಮಯ್ಯ

    ಮೈಸೂರು: ಪಕ್ಷ ದ್ರೋಹಿಗಳು ಮಂತ್ರಿಯಾಗಿದ್ದು ನನಗೆ ಖುಷಿ ಇಲ್ಲ. ಅವರು ಗೆದ್ದಿರಬಹುದು ಆದರೆ ಅವರು ಕಾನೂನಿನ ಪ್ರಕಾರ ಅನರ್ಹರೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

    ಮೈಸೂರಿನ ಹೆಚ್.ಡಿ.ಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಪೂರ್ತಿಯಾಗಿಲ್ಲ. ಇನ್ನು 6 ಖಾತೆ ಬಾಕಿ ಇದ್ದು, ಯಡಿಯೂರಪ್ಪ ಪಟ್ಟಿಗೆ ಹೈಕಮಾಂಡ್ ಅನುಮತಿ ನೀಡಿಲ್ಲ. ಯಡಿಯೂರಪ್ಪನನ್ನು ನೋಡಿದರೆ ನನಗೆ ಅಯ್ಯೋ ಪಾಪ ಅನ್ನಿಸುತ್ತದೆ ಎಂದರು.

    ಯಡಿಯೂರಪ್ಪಗೆ ಹೈಕಮಾಂಡ್ ಅನ್ನು ಭೇಟಿ ಮಾಡಿ, ಬೇಕಾದವರನ್ನ ಮಂತ್ರಿ ಮಾಡುವ ಸ್ವಾತಂತ್ರ್ಯ ಇಲ್ಲ. ಪಾಪ ಅನ್ನಿಸುತ್ತದೆ ಯಡಿಯೂರಪ್ಪ ಅವರನ್ನು ನೋಡಿದರೆ ಎಂದು ಬಿಎಸ್‍ವೈ ಪರಿಸ್ಥಿತಿಗೆ ಮರುಕು ವ್ಯಕ್ತ ಪಡಿಸಿದರು. ಹೊಸ ಸಚಿವರು ಪಕ್ಷ ದ್ರೋಹಿಗಳು ಅವರು ಮಂತ್ರಿಯಾಗಿದ್ದು ಖುಷಿ ಇಲ್ಲ ಆದರೂ ಶುಭಕೋರುತ್ತೇನೆ. ಒಳ್ಳೆಯ ಕೆಲಸ ಮಾಡಲಿ ಎಂದು ತಿಳಿಸಿದರು.

  • ನಮ್ಮ ಕೈಲಿ ಆಗ್ಲಿಲ್ಲ, ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ – ಎಚ್‍ಡಿಕೆ ವ್ಯಂಗ್ಯ

    ನಮ್ಮ ಕೈಲಿ ಆಗ್ಲಿಲ್ಲ, ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ – ಎಚ್‍ಡಿಕೆ ವ್ಯಂಗ್ಯ

    ಮೈಸೂರು: ನಮ್ಮ ಕೈಲಿ ಆಗಲಿಲ್ಲ ಆ ಪುಣ್ಯಾತ್ಮ ಮಂಡ್ಯ ಅಭಿವೃದ್ಧಿ ಮಾಡಲಿ ಎಂದು ಹೇಳುವ ಮೂಲಕ ಮಾಜಿ ಸಿಎಂ ಕುಮಾರಸ್ವಾಮಿ ನಾರಾಯಣ ಗೌಡ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಎಚ್‍ಡಿ ಕೋಟೆಯಲ್ಲಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಮಾತನಾಡಿದ ಅವರು, ಈ ಸರ್ಕಾರದಲ್ಲಿ ಮಧ್ಯಾಹ್ನಕ್ಕೊಂದು ಸಂಜೆಗೊಂದು ತೀರ್ಮಾನ ಆಗುತ್ತಿದೆ. ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡೋಣ. ಯಡಿಯೂರಪ್ಪನವರು ಸರ್ಕಾರ ಹೇಗೆ ಉಳಿಸಿ ಕೊಳ್ಳಬೇಕೆಂಬುದರಲ್ಲಿ ತಜ್ಞರಿದ್ದಾರೆ. ಸರ್ಕಾರ ಬಿಳಿಸೋದು ಹಾಗೂ ಸರ್ಕಾರ ರಚಿಸೋದು ಅವರಿಗೆ ಕರಗತ ಆಗಿದೆ. ಆ ಅನುಭವದಲ್ಲಿ ಈ ಸರ್ಕಾರ ಉಳಿಸಿಕೊಳ್ಳುತ್ತಾರೆ ಎಂಬ ವಿಶ್ವಾಸ ನನಗೆ ಇದೆ ಎಂದು ಹೇಳಿದರು.

    ಸರ್ಕಾರ ಎಷ್ಟು ದಿನ ಇರುತ್ತೆ ಅಂತ ಹೇಳೋಕೆ ನಾನು ಭವಿಷ್ಯಕಾರನಲ್ಲ. ಆದರೆ ಇಂದಿನ ಕಾರ್ಯಕ್ರಮಕ್ಕೆ ನನಗೆ ಯಾವುದೇ ಆಹ್ವಾನ ಬಂದಿಲ್ಲ ಹಾಗಾಗಿ ಪೂರ್ವ ನಿಯೋಜಿತ ಕಾರ್ಯಕ್ರಮದಲ್ಲಿ ನಾನು ಭಾಗಿಯಾಗಿದ್ದೇನೆ. ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ಬಹಳ ಕಷ್ಟ ಪಟ್ಟು, ಆಸೆ ಹೊತ್ತು ಮಂತ್ರಿಗಳಾಗಿದ್ದಾರೆ. ಅವರಿಂದ ನಾನು ಒಳ್ಳೆಯ ಆಡಳಿತ ನಿರೀಕ್ಷೆ ಮಾಡುತ್ತೇನೆ ಎಂದು ತಿಳಿಸಿದರು.

    ಮಂಡ್ಯದಲ್ಲಿ ನಾರಾಯಣಗೌಡ ಅಭಿವೃದ್ಧಿ ಮಾಡಿ ತೋರಿಸಲಿ. ನಮ್ ಕೈಯಲ್ಲಂತು ಆಗಲಿಲ್ಲ ಆ ಪುಣ್ಯಾತ್ಮ ಮಾಡಲಿ. ಹೊಸ ಸಚಿವರು ಟೀಕೆ ಮಾಡುತ್ತಾರೋ ಅಭಿವೃದ್ಧಿ ಮಾಡುತ್ತಾರೋ ಕಾದು ನೋಡೋಣ. ನಮ್ಮ ಪಕ್ಷಗಳಿಂದ ಹೊರ ಹೋದ ಶಾಸಕರಿಗೆ ತೃಪ್ತಿ ಆಗಿದೆ. ಅವರು ಇದೀಗಾ ಸಂಪತ್ಭರಿತರಾಗಿದ್ದಾರೆಂದು ನೂತನ ಸಚಿವರಿಗೆ ಎಚ್‍ಡಿಕೆ ವ್ಯಂಗ್ಯವಾಡಿ ಶುಭಾಶಯ ಕೋರಿದ್ದಾರೆ.

  • ‘ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ 6 ತಿಂಗಳು ಚಾನ್ಸ್’

    ‘ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ 6 ತಿಂಗಳು ಚಾನ್ಸ್’

    – ನೂತನ ಸಚಿವರಿಗೆ ಬಿಜೆಪಿ ಹೈಕಮಾಂಡ್‍ನಿಂದ ಖಡಕ್ ಸಂದೇಶ

    ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ 10 ಜನ ಅರ್ಹ ಶಾಸಕರು ಸಚಿವ ಸ್ಥಾನ ಪಡೆದು ಫುಲ್ ಖುಷ್ ಮೂಡ್‍ನಲ್ಲಿ ಇರುವಾಗಲೇ ಬಿಜೆಪಿ ಹೈಕಮಾಂಡ್ ಖಡಕ್ ಸಂದೇಶವೊಂದನ್ನು ರವಾನಿಸಿದೆ.

    ಹಲೋ ನ್ಯೂ ಮಿನಿಸ್ಟರ್ಸ್, ನೀವು ಪರ್ಮನೆಂಟ್ ಅಲ್ಲ. 6 ತಿಂಗಳು ಚಾನ್ಸ್ ಎಂದು ಬಿಜೆಪಿ ಹೈಕಮಾಂಡ್‍ನಿಂದ ನೂತನ ಸಚಿವರಿಗೆ ಸಂದೇಶ ರವಾನೆಯಾಗಿದೆ. ‘ಕೆಲಸ ಚೆನ್ನಾಗಿ ಮಾಡುವವರು. ಪಕ್ಷಕ್ಕೆ ಗೌರವ ಕೊಡುವವರು ಪೂರ್ಣ ಅವಧಿಯವರೆಗೆ ಇರುತ್ತಾರೆ. ಮಂತ್ರಿ ಮಾಡಬೇಕು ಮಾಡಿದ್ದೇವೆ. ಆದ್ರೆ ಎಷ್ಟು ವರ್ಷದವರೆಗೆ ಮಂತ್ರಿ ಆಗಿಯೇ ಇರುತ್ತೀರಿ ಎನ್ನುವ ಬಗ್ಗೆ ನಾವು ಈಗಲೇ ಗ್ಯಾರಂಟಿ ನೀಡುವುದಿಲ್ಲ ಎಂದು ಹೈಕಮಾಂಡ್ ಎಚ್ಚರಿಕೆ ನೀಡಿದೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.

    ಮಂತ್ರಿ ಪದವಿ ಸಿಕ್ಕಿದ ನಂತರ 6 ತಿಂಗಳ ಬಳಿಕ ಮೌಲ್ಯಮಾಪನ ನಡೆಯುತ್ತಿದೆ. ಈ ಮೌಲ್ಯಮಾಪನದಲ್ಲಿ ಫೇಲ್ ಆದವರು ಮನೆಗೆ ಹೋಗುವುದು ಪಕ್ಕಾ. ಸಂಪುಟ ಪುನಾರಚನೆ ವೇಳೆ ಕಳಪೆ ಸಾಧನೆ ತೋರಿದವರು ಮಂತ್ರಿಮಂಡಲದಲ್ಲಿ ಉಳಿದುಕೊಳ್ಳುವುದಿಲ್ಲ ಎಂದು ಬಿಜೆಪಿ ಹೈಕಮಾಂಡ್ ನಾಯಕರು ತಿಳಿಸಿದ್ದಾರೆ. ಇದರಿಂದಾಗಿ ನೂತನ ಸಚಿವರು ಸ್ವಲ್ಪ ಭಯಕ್ಕೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.

    ಇತ್ತ ಸಿಎಂ ಯಡಿಯೂರಪ್ಪ ಅವರು, ಪ್ರಮಾಣ ವಚನ ಸ್ವೀಕರಿಸಿದ ನೂತನ 10 ಮಂದಿ ಸಚಿವರಿಗೆ ಸಲಹೆಗಳನ್ನು ನೀಡಿದ್ದಾರೆ. ನೂತನ ಸಚಿವರ ಜೊತೆ ಸಂಪುಟ ಕೊಠಡಿಯಲ್ಲಿ ಸಭೆ ನಡೆಸಿದ್ದ ಸಿಎಂ, ಆರಂಭದಲ್ಲಿ ಅಭಿನಂದನೆ ತಿಳಿಸಿ ಸರ್ಕಾರ ಮತ್ತು ಪಕ್ಷದಲ್ಲಿ ಯಾವ ರೀತಿ ಇರಬೇಕೆಂಬ ಬಗ್ಗೆ ಪಾಠ ಮಾಡಿದ್ದರು.

    ನಿಮ್ಮನ್ನು ಮಂತ್ರಿ ಮಾಡುತ್ತೇನೆ ಎಂದು ಹೇಳಿದ ಭರವಸೆಯನ್ನು ಈಡೇರಿಸಿದ್ದೇನೆ. ಆದರೆ ಖಾತೆಗಾಗಿ ನೀವು ಸ್ವಲ್ಪ ಕಾಯಬೇಕು. ಖಾತೆಗಳ ಬಗ್ಗೆ ಮಾಧ್ಯಮಗಳ ಮುಂದೆ ಬೇಡಿಕೆ ಇಡಬೇಡಿ. ಹೈಕಮಾಂಡ್ ಜೊತೆ ಚರ್ಚಿಸಿ ಖಾತೆಗಳನ್ನು ಅಂತಿಮಗೊಳಿಸುತ್ತೇನೆ ಎಂದು ಹೇಳಿದ್ದರು.

  • ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ರಾಜ್ಯದಲ್ಲಿ ಪ್ರವಾಹ ಭೀತಿ- ಹೊಸ ಸಚಿವರಿಗೆ ದುಬಾರಿ ಕಾರಿನ ಶೋಕಿ

    ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ.

    ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. ಸದ್ಯ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ನೂತನ ಸಚಿವರುಗಳಿಗೆ ನೀಡಲಾಗಿದ್ದು, ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.

    ಅರ್ಧ ರಾಜ್ಯದ ಜನ ಸೂರಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಪ್ರಭಾವಿ ಮುಖಂಡರು ಕಾಸ್ಟ್ಲಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗೆ ಈವರೆಗೂ ಖಾತೆಯೇ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ಶೋಕಿ ಶುರು ಮಾಡಿಕೊಂಡಿರುವ ಪ್ರಭಾವಿ ಸಚಿವರುಗಳ ಕಾರು ಕ್ಯಾತೆಗೆ ಜನ ಕೆಂಡಾಮಂಡಲರಾಗಿದ್ದಾರೆ.