Tag: New Minister

  • ಸಿದ್ದು, ಡಿಕೆಶಿ ಮೇಲೆ ನೂತನ ಸಚಿವರಿಗೆ ಲವ್!

    ಸಿದ್ದು, ಡಿಕೆಶಿ ಮೇಲೆ ನೂತನ ಸಚಿವರಿಗೆ ಲವ್!

    ಬೆಂಗಳೂರು: ವಿಧಾನಸಭೆಯಲ್ಲಿ ಇವತ್ತು ಒಂದು ಕುತೂಹಲ ಇತ್ತು. ನೂತನ ಸಚಿವರು ಸಿದ್ದರಾಮಯ್ಯ ಜತೆ ಹೇಗೆ ರಿಯಾಕ್ಟ್ ಮಾಡ್ತಾರೆ ಅನ್ನೋದ್ರ ಬಗ್ಗೆ ಎಲ್ಲರ ಗಮನ ಇತ್ತು. ರಾಜ್ಯಪಾಲರ ಭಾಷಣದ ಬಳಿಕ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆಯಿತು. ನೂತನ ಸಚಿವರ ಹತ್ರ ಕೆಲ ಕಾಂಗ್ರೆಸ್, ಜೆಡಿಎಸ್ ಶಾಸಕರು ಹೋಗಿ ವಿಶ್ ಮಾಡಿದರು. ಮತ್ತೆ ಕೆಲವು ನೂತನ ಸಚಿವರು ಕಾಂಗ್ರೆಸ್, ಜೆಡಿಎಸ್ ಶಾಸಕರ ಹತ್ತಿರ ಹೋಗಿ ಕೈ ಕುಲುಕಿ ಬಂದ್ರು. ಆದ್ರೆ ಹೆಚ್ಚು ಗಮನ ಸೆಳೆದಿದ್ದು ಸಿದ್ದರಾಮಯ್ಯರನ್ನ ಯಾರೆಲ್ಲ ವಿಶ್ ಮಾಡ್ತಾರೆ ಅನ್ನೋದು.

    ವಿಧಾನಸಭೆಯಲ್ಲಿ ಮೊದಲ ಸಾಲಿನ ಎರಡನೇ ಆಸನದಲ್ಲಿ ಸಿದ್ದರಾಮಯ್ಯ ಕುಳಿತಿದ್ದ ಕಡೆ ಮೊದಲು ಸಚಿವ ಬಿ.ಸಿ.ಪಾಟೀಲ್ ಬಂದರು. ಹೆಚ್‍ಡಿ ಕುಮಾರಸ್ವಾಮಿ, ಹೆಚ್.ಕೆ.ಪಾಟೀಲ್, ಡಿಕೆ ಶಿವಕುಮಾರ್ಚ ಮಾತನಾಡಿಸಿದ ಬಳಿಕ ನೇರವಾಗಿ ಸಿದ್ದರಾಮಯ್ಯ ಹತ್ತಿರ ಬಂದು ಬಿ.ಸಿ.ಪಾಟೀಲ್ ಕೈ ಕೊಟ್ಟರು. ಮಿನಿಸ್ಟರ್ ಆಗಿದೀವಿ ಅಂತಾ ಹಸಿರು ಶಾಲ್ ಮೇಲೆ ಕೈ ಹಾಕಿದ್ರು. ಇದಾದ ಬಳಿಕ ಉಳಿದ ಸಚಿವರು ಸ್ವಲ್ಪ ಹೊತ್ತು ಕಾಯುತ್ತಿದ್ದರು. ಹೆಚ್‍ಡಿ ಕುಮಾರಸ್ವಾಮಿ ಎದ್ದು ಹೋದ ಮೇಲೆ ನಾರಾಯಣಗೌಡ, ಗೋಪಾಲಯ್ಯ, ಶಿವರಾಂ ಹೆಬ್ಬಾರ್, ಬೈರತಿ ಬಸವರಾಜು ಸಿದ್ದರಾಮಯ್ಯ ಹತ್ತಿರ ಬಂದು ವಿಶ್ ಮಾಡಿ ಮಾತನಾಡಿದರು.

    ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಬಳಿ ಬಂದ ಬಂದ ಮಹೇಶ್ ಕುಮಟಹಳ್ಳಿ ಬೈಯ್ಕೊಂಡ್ರೆ ಬೈಯ್ಕೋಬಿಡಿ ಸರ್ ಅಂತಾ ಕೈ ಮುಗಿದ್ರು. ಆಗ ಸಿದ್ದರಾಮಯ್ಯ ರಿಯಾಕ್ಟ್ ಮಾಡಿ ಮಿನಿಸ್ಟರ್ ಆಗಪ್ಪಾ ಅಂತೇಳಿ ನಗುತ್ತಿದ್ದರು. ಹೀಗೆ ನೂತನ ಸಚಿವರು ಬಂದು ಸಿದ್ದರಾಮಯ್ಯ ಜತೆ ಮಾತನಾಡುತ್ತಿದ್ದರೆ, ಅವರ ಹಿಂದಿನ ಸಾಲಿನಲ್ಲಿ ಕುಳಿತಿದ್ದ ದಿನೇಶ್ ಗುಂಡೂರಾವ್, ಕೃಷ್ಣಭೈರೇಗೌಡ, ಬೈರತಿ ಸುರೇಶ್ ನೋಡಿ ನಗುತ್ತಿದ್ದರು. ಆ ದೃಶ್ಯಗಳನ್ನು ನೋಡಿದ್ಮೇಲೆ ಅಯ್ಯೋ ಹೊರಗೆ ಹೀಗೆ ಹಿಗ್ಗಾಮುಗ್ಗಾ ಬೈದಾಡಿಕೊಂಡವರು ಇವರೇನಾ ಅಂತಾ ಅನ್ನಿಸದೇ ಇರಲಾರದು.

  • ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಖಾತೆ ಫೈಟ್ ಆಯ್ತು – ಈಗ ಜಿಲ್ಲಾ ಉಸ್ತುವಾರಿ ಜಂಜಾಟ

    ಬೆಂಗಳೂರು: ಖಾತೆ ಹಂಚಿಕೆ ಮುಗಿದ ಬೆನ್ನಲ್ಲೇ ಈಗ ಜಿಲ್ಲಾ ಉಸ್ತುವಾರಿ ಜಂಜಾಟ ಶುರುವಾಗಿದೆ. ಸಿಎಂ ಯಡಿಯೂರಪ್ಪಗೆ ಈಗ ಜಿಲ್ಲಾ ಉಸ್ತುವಾರಿಗಳನ್ನು ಹಂಚುವ ಟೆನ್ಷನ್. ನೂತನ ಸಚಿವರ ಚಿತ್ತವೂ ಈಗ ಜಿಲ್ಲಾ ಉಸ್ತುವಾರಿ ಹುದ್ದೆಗಳ ಮೇಲೆ ಬಿದ್ದಿದೆ. ತಮ್ಮ ಜಿಲ್ಲೆಗೇ ಉಸ್ತುವಾರಿ ಸಚಿವರಾಗಲು ಮಿತ್ರಮಂಡಳಿ ಕಸರತ್ತು ಆರಂಭಿಸಿದ್ದಾರೆ.

    ಆದರೆ ಸಿಎಂ ಪ್ಲಾನೇ ಬೇರೆ ಇದೆ. ಜಿಲ್ಲಾ ಉಸ್ತುವಾರಿಗಳ ಮೂಲಕ ಮುಂದಿನ ಚುನಾವಣೆ ಲೆಕ್ಕಾಚಾರ ಹಾಕುತ್ತಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ ಜಿಲ್ಲಾ ಉಸ್ತುವಾರಿ ಹಂಚಲು ಸಿಎಂ ಪ್ಲಾನ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅದರಲ್ಲೂ ಒಕ್ಕಲಿಗರು ಹೆಚ್ಚಿರುವ ಜೆಡಿಎಸ್ ಭದ್ರಕೋಟೆ ಕ್ಷೇತ್ರಗಳ ಮೇಲೆಯೇ ಸಿಎಂಗೆ ಕಣ್ಣು ಬಿದ್ದಿದೆ. ಒಕ್ಕಲಿಗರ ಮತದಾರರು ಇರುವ ಜೆಡಿಎಸ್ ಕೋಟೆಗಳಿಗೆ ಒಕ್ಕಲಿಗ ಸಚಿವರನ್ನೇ ಹಾಕಲು ಸಿಎಂ ಮುಂದಾಲೋಚನೆ ಮಾಡಿದ್ದಾರೆ. ಮುಂದಿನ ಚುನಾವಣೆವರೆಗೆ ಜೆಡಿಎಸ್ ಕೋಟೆಗಳಲ್ಲಿ ಬಿಜೆಪಿ ಬಾವುಟ ಹಾರಿಸಲು ಸಿಎಂ ತಂತ್ರ ಕುತೂಹಲ ಹುಟ್ಟಿಸಿದೆ.

    ಜೆಡಿಎಸ್ ಭದ್ರ ಕೋಟೆಗಳಾದ ಹಾಸನ, ರಾಮನಗರ ಮತ್ತು ಮಂಡ್ಯ ಜಿಲ್ಲೆಗಳನ್ನ ಬಿಜೆಪಿ ಟಾರ್ಗೆಟ್ ಮಾಡಿದೆ. ಹಾಗಾಗಿ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಒಕ್ಕಲಿಗ ಸಚಿವರನ್ನೇ ಉಸ್ತುವಾರಿ ಸಚಿವ ಮಾಡಲು ಸಿಎಂ ಮುಂದಾಗಿದ್ದಾರೆ. ಸದ್ಯಕ್ಕೆ ಸಿಎಂ ಅವರ ಈ ಜಾತಿ ಲೆಕ್ಕಾಚಾರದ ಪ್ಲಾನ್ ಬೆಳಗಾವಿ ಹೊರತುಪಡಿಸಿ ಉಳಿದ ಜಿಲ್ಲೆಗೆ ಅನ್ವಯಿಸಲಿದೆ. ಬೆಳಗಾವಿ ಉಸ್ತುವಾರಿ ಆಗಲು ಸಾಕಷ್ಟು ಪೈಪೋಟಿ ಇದ್ದು, ಅದನ್ನು ಬೇರೆ ರೀತಿಯಲ್ಲಿ ಡೀಲ್ ಮಾಡಲು ಸಿಎಂ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

    ಸಂಭಾವ್ಯ ಜಿಲ್ಲಾ ಉಸ್ತುವಾರಿ ಸಚಿವರು

    ಹಾಸನ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್ ಅಥವಾ ಎಸ್.ಟಿ.ಸೋಮಶೇಖರ್
    ರಾಮನಗರ- ಆರ್.ಅಶೋಕ್ ಅಥವಾ ಡಾ.ಅಶ್ವಥ್ ನಾರಾಯಣ್
    ಮಂಡ್ಯ- ನಾರಾಯಣ ಗೌಡ
    ರಾಯಚೂರು- ಎಸ್.ಟಿ.ಸೋಮಶೇಖರ್
    ಬಳ್ಳಾರಿ- ಆನಂದ್ ಸಿಂಗ್
    ಚಿಕ್ಕಬಳ್ಳಾಪುರ- ಡಾ.ಕೆ.ಸುಧಾಕರ್
    ಉತ್ತರ ಕನ್ನಡ- ಶಿವರಾಮ್ ಹೆಬ್ಬಾರ್
    ಮಡಿಕೇರಿ- ಕೆ.ಗೋಪಾಲಯ್ಯ
    ದಾವಣಗೆರೆ- ಬಿ.ಸಿ.ಪಾಟೀಲ್
    ಯಾದಗಿರಿ- ಶ್ರೀಮಂತ ಪಾಟೀಲ್
    ಕೊಪ್ಪಳ- ಬೈರತಿ ಬಸವರಾಜು

  • ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಕುತೂಹಲ ಹೆಚ್ಚಿಸಿದೆ ಜಿಲ್ಲಾ ಉಸ್ತುವಾರಿ ನೇಮಕ!

    ಬೆಂಗಳೂರು: ಸಂಪುಟ ವಿಸ್ತರಣೆ ಆಯ್ತು. 10 ಶಾಸಕರು ಮಿನಿಸ್ಟರ್ ಆದ್ರೂ ಅವರಿಗೆ ಈಗ ಎರಡು ಚಿಂತೆ. ಒಂದು ಖಾತೆ ಚಿಂತೆಯಾದರೆ, ಇನ್ನೊಂದು ಜಿಲ್ಲಾ ಉಸ್ತುವಾರಿ ಚಿಂತೆ. ನೂತನ ಸಚಿವರಲ್ಲಿ ಮೂರ್ನಾಲ್ಕು ಮಂದಿ ಉಸ್ತುವಾರಿಗೆ ಟವೆಲ್ ಹಾಕಿದ್ದಾರೆ. ಸಾಹುಕಾರ ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಖಾತೆ ನನಗೆ ಬೇಕು ಅಂತಾ ಬೇಡಿಕೆ ಇಟ್ಟಿರೋದರ ಜೊತೆಗೆ ಬೆಳಗಾವಿ ಜಿಲ್ಲೆ ಉಸ್ತುವಾರಿ ಬೇಕು ಎಂದು ಕೇಳಿದ್ದಾರೆ ಎನ್ನಲಾಗಿದೆ.

    ಈ ನಡುವೆ ಬೆಂಗಳೂರು ಉಸ್ತುವಾರಿಯನ್ನು ಯಾರಿಗೂ ಕೊಡದೇ ಮುಖ್ಯಮಂತ್ರಿ ಯಡಿಯೂರಪ್ಪನವರೇ ಇಟ್ಟುಕೊಂಡಿದ್ದಾರೆ. ಅಶೋಕ್, ಅಶ್ವಥ್ ನಾರಾಯಣ್ ಅವರ ಗುದ್ದಾಟ ಜೋರಾಗಬಹುದೆಂದು ಬೆಂಗಳೂರು ನಗರ ಉಸ್ತುವಾರಿ ಸಿಎಂ ಬಳಿಯೇ ಇದೆ. ಅಷ್ಟೇ ಅಲ್ಲ ಬೆಂಗಳೂರು ಅಭಿವೃದ್ಧಿ ಖಾತೆಯೂ ಸಿಎಂ ಯಡಿಯೂರಪ್ಪ ಬಳಿ ಇದೆ. ಹಾಗಾಗಿ ನೂತನ ಸಚಿವರಿಗೆ ಬೆಂಗಳೂರು ಉಸ್ತುವಾರಿ ಸಿಗುವುದು ಅನುಮಾನ ಅನ್ನೋ ಮಾತುಗಳು ಕೇಳಿಬಂದಿವೆ.

    ಈ ನಡುವೆ ಹಾಸನ ಉಸ್ತುವಾರಿ ಎಸ್.ಟಿ.ಸೋಮಶೇಖರ್‍ಗೋ? ಡಿಸಿಎಂ ಅಶ್ವಥ್ ನಾರಾಯಣ್‍ಗೋ? ಅನ್ನೋ ಚರ್ಚೆ ಶುರುವಾಗಿದ್ದು, ಒಕ್ಕಲಿಗ ಸಚಿವರನ್ನೇ ಹಾಸನ ಜಿಲ್ಲೆ ಉಸ್ತುವಾರಿಯನ್ನಾಗಿ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ರಾಮನಗರ, ಹಾಸನ ಎರಡು ಪಕ್ಷ ಸಂಘಟನೆಯಿಂದ ಬಿಜೆಪಿಗೆ ಮಹತ್ವದ್ದು, ಎರಡು ಕಡೆ ಒಕ್ಕಲಿಗರನ್ನೇ ಉಸ್ತುವಾರಿಯನ್ನಾಗಿ ನೇಮಿಸಲು ಪಕ್ಷ ತಂತ್ರ ಹೂಡಿದೆ ಎನ್ನಲಾಗಿದೆ. ಇನ್ನೊಂದೆಡೆ ಬಳ್ಳಾರಿಗೆ ಆನಂದ್ ಸಿಂಗ್‍ಗೆ ಉಸ್ತುವಾರಿ ಕೊಟ್ಟರೆ ರೆಡ್ಡಿ, ಶ್ರೀರಾಮುಲು ಟೀಂ ಕೆಂಡಾಮಂಡಲವಾಗುತ್ತಾರಾ ಅನ್ನೋ ಚರ್ಚೆಯೂ ನಡೆದಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುತೂಹಲ ಮೂಡಿಸಿದೆ.

    ಜಿಲ್ಲಾಉಸ್ತುವಾರಿಗಳ ಸಂಭವನೀಯ ಲಿಸ್ಟ್..!
    > ರಮೇಶ್ ಜಾರಕಿಹೊಳಿ – ಬೆಳಗಾವಿ
    > ಬಿ.ಸಿ.ಪಾಟೀಲ್ – ದಾವಣಗೆರೆ
    > ಎಸ್.ಟಿ.ಸೋಮಶೇಖರ್ – ಹಾಸನ
    > ಸುಧಾಕರ್ – ಚಿಕ್ಕಬಳ್ಳಾಪುರ
    > ನಾರಾಯಣಗೌಡ – ಮಂಡ್ಯ
    > ಆನಂದ್ ಸಿಂಗ್ – ಬಳ್ಳಾರಿ
    > ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
    > ಬೈರತಿ ಬಸವರಾಜು – ಬೆಂಗಳೂರು ಗ್ರಾಮಾಂತರ
    > ಗೋಪಾಲಯ್ಯ – ಕೊಡಗು
    > ಶ್ರೀಮಂತಗೌಡ ಪಾಟೀಲ್ – ಯಾದಗಿರಿ